Friday, May 1, 2009

ಧನ್ಯೋ ಗೃಹಸ್ಥಾಶ್ರಮಃ


ದಶಕದ ಹಿಂದೊಮ್ಮೆ ಅಸೀಮಾ ವಿವಾಹ ; ನಂದನವೋ? ಬಂಧನವೋ? ಎಂಬ ಸಂಚಿಕೆಯನ್ನು ಹೊರತಂದಿತ್ತು. ಅದಾಗ ತಾನೇ ಜಾಗತೀಕರಣ ಕಣ್ಣುಬಿಡುತ್ತಿದ್ದ ಸಮಯ. ಜನಜೀವನದಲ್ಲಿ ವಿವಾಹ ಸಂಸ್ಕಾರದ ಬಗ್ಗೆ ಗಮನಾರ್ಹ ಪರಿವರ್ತನೆಯಂತೂ ಆಗಿರದಿದ್ದರೂ ಒಂದು ಅಪಾಯದ ಮುನ್ಸೂಚನೆಯನ್ನು, ಮುಂಬರುವ ಪ್ರವಾಹದ ಎಚ್ಚರಿಕೆಯನ್ನು ಅಂದಿನ ಚಿಂತಕರು ಅರಿತಿದ್ದರು. ಅರಿತು ಪರಿಹಾರೋಪಾಯಗಳನ್ನು ಸೂಚಿಸಿದ್ದರು. ಭಾರತೀಯ ಪರಂಪರೆಯಲ್ಲಿ ಮದುವೆಗಿದ್ದ ಸ್ಥಾನಮಾನ, ಅದರ ಉನ್ನತ ಚಿಂತನೆ, ಮೌಲ್ಯಗಳು, ಸಮಾಜದ ಬೇರುಗಳು, ಕುಟುಂಬಗಳೆಂಬ ಬಿಳಲುಗಳು -ಮೊದಲಾದುವನ್ನು ಅರಿತು ಮದುವೆ ಬದಲಾಗಿಹೋಗುವ ಹಂತದಲ್ಲಿ ಬಂಧನವಾಗಿಬಿಡಬಹುದು ಮತ್ತು ಮದುವೆ ನಂದನವಾಗುಳಿಯದಿದ್ದರೆ ಸಮಾಜದ ನೆಲೆಯೇ ಅರ್ಥಪಲ್ಲಟವಾಗಿ ಮುಂಬರುವ ದಿನಗಳು ಗಂಭೀರ ಪರಿಸ್ಥಿತಿಯನ್ನು ಎದುರಿಸಬೇಕಾಗಿಬರಬಹುದು ಎಂಬ ಎಚ್ಚರಿಕೆಯನ್ನು ನೀಡಿದ್ದರು.ದಶಕದ ಹಿಂದಿನ ಆ ಎಚ್ಚರಿಕೆ ಅಂದು ನಮಗೆ ಗಂಭೀರವಾಗಿ ತಟ್ಟಿರಲಿಕ್ಕಿಲ್ಲ. ನೀರಷ್ಟೇ ಹರಿದು ಹೋಗಬಹುದು. ನದಿಯಲ್ಲ ಎಂಬ ಸಮಜಾಯಿಷಿಯನ್ನೂ ಕೊಟ್ಟುಕೊಂಡಿರಬಹುದು. ಏಕೆಂದರೆ ಬಹುತೇಕವಾಗಿ ಅಂದಂದಿನ ಯುಗಧರ್ಮಕ್ಕೆ ಅನುಗುಣವಾಗಿ ಅಂದಂದಿನ ಮನೋಧರ್ಮ! ಆದರೆ ಲೆಕ್ಕ ತಪ್ಪಿದೆ. ಹಾಗಾಗಿ ಅನಿವಾರ್ಯವಾಗಿ ವಿವಾಹದ ಬಗ್ಗೆ ಮತ್ತೊಂದು ಸಂಚಿಕೆಯನ್ನು ಹೊರತರಬೇಕಾಗಿದೆ. ಒಂದರ್ಥದಲ್ಲಿ ಹೇಳಬೇಕೆಂದರೆ ಇದು ವಿವಾಹ ವ್ಯವಸ್ಥೆಯ ಬಗೆಗಿನ ಸಂಚಿಕೆಯ ಎರಡನೇ ಭಾಗ ಎಂದೂ ಹೇಳಿಕೊಳ್ಳಬಹುದು. ಏಕೆಂದರೆ ಭಾರತೀಯ ಪರಂಪರೆ ಮದುವೆಯ ಬಗ್ಗೆ ಚಿಂತಿಸಿದಷ್ಟು ಬೇರಾರೂ ಚಿಂತಿಸಲಿಲ್ಲ. ಅದಕ್ಕೆ ಕೊಟ್ಟಷ್ಟು ಮಹತ್ತ್ವವನ್ನು ಯಾರೂ ಕೊಡಲಿಲ್ಲ. ಹಾಗಾಗಿ ಇಲ್ಲಿ ಮದುವೆ ಎಂಬುದು ಅಷ್ಟೊಂದು ಗಟ್ಟಿ. ಅದು ಗಟ್ಟಿಯಾದ ಕಾರಣ ಮದುವೆ ಎಂಬ ಸಂಸ್ಕಾರದ ಬಗ್ಗೆ ಯುಗಧರ್ಮಕ್ಕನುಗುಣವಾಗಿ ಚಿಂತಿಸಬೇಕಾದುದು ಅದರ ಸರಿಪಡಿಸುವಿಕೆಯ ಕಾರಣಕ್ಕಾಗಿಯೆಂದರೂ ಸರಿ ಮತ್ತು ಅದರಲ್ಲಿರುವ ಶ್ರೇಷ್ಠತೆಗಾಗಿ ಎಂದರೂ ಸರಿಯೇ. ಇರಲಿ.ಇಂದು ಮದುವೆ ಎಂಬುದು ಸಮಸ್ಯೆಗಳ ಗೂಡಾಗಿ ಏಕೆ ಕಾಣುತ್ತಿದೆ ಎಂದು ಚಿಂತಿಸುವ ಕಾಲ. ಅದಕ್ಕೆ ಉತ್ತರಗಳನ್ನು ಹುಡುಕಹೊರಟರೆ ಉತ್ತರ ಒಂದೇ. ಮದುವೆಗೆ ಪೀಳಿಗೆ ಅರ್ಹರಾಗಿಲ್ಲ. ಅಥವಾ ಪರಿಸರ ಪೀಳಿಗೆಯನ್ನು ಮದುವೆಗೆ ಅರ್ಹಗೊಳಿಸುತ್ತಿಲ್ಲ. ಏಕೆಂದರೆ ಇಂದು ಯಾರಲ್ಲಿಯೂ ಮದುವೆಯ ಬಗ್ಗೆ ನಿಶ್ಚಿತವಾದ ವ್ಯಾಖ್ಯಾನಗಳಿಲ್ಲ. ವ್ಯಾಖ್ಯಾನಗಳಿದ್ದರೂ ಪರಿಸರದೊಟ್ಟಿಗೆ ಅದನ್ನು ಸರಿದೂಗಿಸಿಕೊಳ್ಳಲು ಸಿದ್ಧರಿಲ್ಲ. ಪರಿಣಾಮ ಸಂಬಂಧಗಳು ನಿಲ್ಲುತ್ತಿಲ್ಲ. ಜನರ ಮನಸ್ಸು ಸಂಸ್ಕಾರನಿಷ್ಠವಾಗಿಲ್ಲದೆ ಅದನ್ನು ನಿರೀಕ್ಷೆ ಮಾಡುವಂತೆಯೂ ಇಲ್ಲ. ಹಾಗಾಗಿ ಮದುವೆಯ ಬಗ್ಗೆ ಚಿತ್ರ ವಿಚಿತ್ರದ ಕಲ್ಪನೆಗಳು ಮನೆಮಾಡುತ್ತಾ ಸಮಾಜದ ಆರೋಗ್ಯವನ್ನೇ ಘಾಸಿಗೊಳಿಸುತ್ತವೆ. ಮದುವೆಯ ಬಗ್ಗೆ ಒಂದು ಚಿಂತನೆ ಆಗುವವನಲ್ಲಿ, ಮಾಡುವವರಲ್ಲಿ ಉಂಟಾಗದೆ ಸಂಬಂಧಗಳು ಕ್ಷಣಿಕಗೊಳ್ಳುತ್ತಿವೆ. ಇಂದು ಮದುವೆ ಒಪ್ಪಂದವಾಗಿ ಬದಲಾಗಿರುವುದೇ ಅದಕ್ಕೆ ಸಾಕ್ಷಿ. ಒಪ್ಪಂದಗಳೊಂದು ತೀರಾ ವ್ಯಾವಹಾರಿಕ ಪ್ರಕ್ರಿಯೆ. ಅದರಲ್ಲಿ ಸಮಾಜಮುಖಿ ಚಿಂತನೆ ಇರಲೇಬೇಕೆಂದಿಲ್ಲ. ಚಿಂತನೆಗೆ ಅವಕಾಶವೇ ಇಲ್ಲದಂತೆ ವೈಭವೋಪೇತವಾಗಿ ನಡೆದುಹೋಗಿಬಿಡುತ್ತವೆ. ಒಪ್ಪಂದಗಳು ಏರ್ಪಡುವುದೇ ಅದನ್ನು ಮುರಿಯಬಲ್ಲ ಸಾಧ್ಯಾಸಾಧ್ಯತೆಗಳನ್ನು ಪರಾಮರ್ಶಿಸಿ. ಆದ್ದರಿಂದ ಒಪ್ಪಂದಗಳಂತೆ ಏರ್ಪಡುವ ಮದುವೆಗಳೂ ಅಷ್ಟೇ ಸುಲಭವಾಗಿ ಮುರಿದುಬೀಳುತ್ತವೆ. ಜೊತೆಗೆ ವಧೂವರರ ಅಪೇಕ್ಷೆಗಳು ಇಂದು ದುಬಾರಿಯಾಗಿವೆ. ಹಾಗಾಗಿ ಮದುವೆ ನಂದನವೇ ಬಂಧನವೇ ಎಂಬ ಪ್ರಶ್ನೆಗಿಂತಲೂ ಮದುವೆ ಎಂಬುದೇ ಒಂದು ಭೀಕರ ಶಬ್ದವಾಗಿ ಕಾಣುವಂತೆ ಪರಿಸ್ಥಿತಿಗಳು ಏರ್ಪಟ್ಟಿವೆ.ಮದುವೆ ಇಂಥ ಭೀಕರ ಸನ್ನಿವೇಶಗಳನ್ನು ಸೃಷ್ಟಿಸುತ್ತವೆ ಮತ್ತು ಮಧುರವಾಗಿಲ್ಲದ ಮೈತ್ರಿ ಸಮಾಜಕ್ಕೇ ಕಂಟಕ ಎಂಬುದನ್ನು ಅರಿತು ಭಾರತೀಯ ಪರಂಪರೆ ಮದುವೆಯ ಬಗ್ಗೆ ವಿಶೇಷ ಗಮನ ನೀಡಿತ್ತು ಅನಿಸುತ್ತದೆ. ಏಕೆಂದರೆ ಒಂದು ಸಮಾಜದ ಉನ್ನತಿ -ಅವನತಿ ಭದ್ರ ಕುಟುಂಬಗಳಲ್ಲಿ ನೆಲೆಸಿರುತ್ತವೆ. ಮದುವೆಯೆಂಬ ಸೂತ್ರವೇ ಅದಕ್ಕೆ ಕಾರಣ. ಸಂಸ್ಕೃತಿ ಬೆಳೆಯಲು, ಉಳಿಯಲೂ ಸಹ ಮದುವೆಯೇ ಕಾರಣ. ಹಾಗಾಗಿ ಮದುವೆ ಎಂಬುದು ಅಲೌಕಿಕವೂ ಹೌದು. ಅದಕ್ಕಾಗಿ ಮದುವೆ ತನಗಾಗಿ ಮಾತ್ರವಲ್ಲ ಎಂಬ ಚಿಂತನೆಯನ್ನು ದಾರ್ಶನಿಕರು ಪ್ರತಿಪಾದಿಸಿದ್ದರು. ಆದರೆ ಇಂದು ಮದುವೆ ಕೇವಲ ತನ್ನ ಸುಖಕ್ಕಾಗಿ ಎಂಬಂಥ ಭಾವನೆ ಬಲಿಯುತ್ತಿದೆ. ಅದು ಎಷ್ಟೊಂದು ಅಪಾಯಕಾರಿ ಸಂಗತಿಗೆ ಹೇತುವೆಂದರೆ ಹಿಂದೆ ಗಂಡನ ಮನೆಗೆ ಕಾಲಿಟ್ಟ ಹೆಣ್ಣು ಮಗಳು ಮನೆಮಗಳಾಗಿರುತ್ತಿದ್ದಳು. ಗಂಡನಿಗೆ ಹೆಂಡತಿಯಾಗಿ, ಅತ್ತೆ ಮಾವಂದಿರಿಗೆ ಮಗಳಾಗಿ, ಭಾವ ಮೈದುನರಿಗೆ ಅಕ್ಕ -ತಂಗಿಯಾಗಿ, ನಾದಿನಿಯರಿಗೆ ಗೆಳತಿಯಾಗಿ ತುಂಬು ಕುಟುಂಬಕ್ಕೆ ಕಣ್ಣಿನಂತೆ ಇರುತ್ತಿದ್ದಳು. ಆದರೆ ಇಂದು? Pಡಿivಚಿಛಿಥಿಯನ್ನು ಹುಡುಕುವ ಜಗತ್ತಿನಲ್ಲಿ ಆ ಹೆಣ್ಣುಮಗಳು ಗಂಡನಿಗೆ ಪ್ರೇಯಸಿಯಾಗಿಯಷ್ಟೇ ಇರುತ್ತಿದ್ದಾಳೆ. ಹಾಗಾಗಿ ಮದುವೆ ಎಂಬುದು ಅವಿಭಕ್ತತೆಯನ್ನು ಒಡೆಯುವ ಪ್ರಕ್ರಿಯೆಯಂತೆಯೂ ಕಾಣುತ್ತಿದೆ. ಮದುವೆಯ ಬಗ್ಗೆ ಅರಿಯದ ಮನಸ್ಸುಗಳು ಮದುವೆಯಾದರೆ ಅವರು ಸಮಾಜದ ಹಿತವನ್ನೂ ಅರಿಯಲಾರು ಎಂಬುದು ಇಂಥ ವಿವಾಹಗಳು ಜಾಸ್ತಿಯಾದಂತೆಲ್ಲಾ ಅರಿವಿಗೆ ಬರುತ್ತಿವೆ. ಆದರೆ ಅಂದು ಹಿರಿಯರು ಮದುವೆಯ ಬಗೆ ಅರ್ಹರಿಗೆ ಸರಿಯಾದ ಸಂಸ್ಕಾರವನ್ನು ಕೊಡುತ್ತಿದ್ದರು. ಮದುವೆಗೆ ಸಜ್ಜುಗೊಳಿಸುತ್ತಿದ್ದರು. ವಿವಾಹಿತ ಎಂದರೆ ವ್ಯಕ್ತಿಗೆ ಸ್ಥಾನಮಾನವನ್ನು ಕೊಡುವುದು ಎಂಬ ಭಾವ ಇತ್ತು. ಇಂದಿನಂತೆ ಜವಾಬ್ದಾರಿಯನ್ನು ಮುಗಿಸುವ ಪ್ರಕ್ರಿಯೆಯಾಗಿರಲಿಲ್ಲ.ಮನುಸ್ಮೃತಿಯಲ್ಲಿ ಒಂದು ಹೇಳಿಕೆಯಿದೆ. ಜೀವ ಜಂತುಗಳಿಗೆಲ್ಲ ಗಾಳಿಯೇ ಆಶ್ರಯವಾದಂತೆ ಜೀವನದ ವ್ಯವಸ್ಥೆಗಳೆಲ್ಲವೂ ಗೃಹಸ್ಥನನ್ನೇ ಆಶ್ರಯಿಸಿವೆಅಷ್ಟರ ಮಟ್ಟಿಗೆ ವಿವಾಹಿತನಿಗೆ ಸಮಾಜ ಗೌರವ ಕೊಡುತ್ತಿತ್ತು. ಅವಿವಾಹಿತ ಸಮಾಜದ ನಿರ್ಣಾಯಕ ಘಟ್ಟಗಳಲ್ಲಿ ತೀರ್ಮಾನಗಳನ್ನು ಕೊಡುವಷ್ಟಕ್ಕೆ ಬೆಳೆದಿರುತ್ತಿರಲಿಲ್ಲ. ಆತ ಇನ್ನೂ ಸಮಾಜವನ್ನು ಬೆರಗುಗಣ್ಣಿನಿಂದ ನೋಡುತ್ತಿರುವವ. ಬದುಕಿನ ಸೂಕ್ಷ್ಮವನ್ನು ಅವಿವಾಹಿತ ಅರಿತಿರಲಾರ. ಯಾಜ್ಞವಲ್ಕ್ಯ ಸ್ಮೃತಿಯಲ್ಲೂ ಅದನ್ನು ಸುಂದರವಾಗಿ ವರ್ಣಿಸಲಾಗಿದೆ.ಧರ್ಮ ಅರ್ಥ ಕಾಮಗಳಿಗೆಲ್ಲಾ ಹೆಂಡತಿಯೇ ಮೂಲವಾದುದರಿಂದ ಅವಿವಾಹಿತ ಗಂಡಸು ಯಾವ ವರ್ಣದವನೇ ಇರಲಿ, ಯಾವ ವರ್ಗದವನೇ ಇರಲಿ, ತನ್ನ ಕರ್ತವ್ಯ ನಿರ್ವಹಣೆಗೆ ಅನರ್ಹನಾಗುತ್ತಾನೆ, ಇದರ ಬಗ್ಗೆ ಏನೇ ಭಿನ್ನಾಭಿಪ್ರಾಯಗಳಿಗಿರಲಿ. ಆದರೆ ವಿವಾಹಿತನನ್ನು ಸದ್ಗೃಹಸ್ಥ ಎಂಬ ಸುಂದರವಾದ, ಮೇಲ್ಮಟ್ಟದ ಸ್ಥಾನಮಾನಗಳನ್ನು ಕೊಟ್ಟು ಗೌರವಿಸುತ್ತಿದ್ದ ಪರಂಪರೆ ಭಾರತದ್ದು. ಹೀಗೆ ಒಬ್ಬ ಪ್ರಾಪ್ತ ವಯಸ್ಕ ತನ್ನ ಹುಡುಗಾಟ, ಪುಂಡಾಟ, ಬೆರಗು, ಕುತೂಹಲದ ವಯೋಮಾನವನ್ನು ದಾಟಿ ಬದುಕಿನ ಮತ್ತೊಂದು ಘಟ್ಟವನ್ನು ಏರುವ ಪರ್ವಕ್ಕೆ ವಿವಾಹ ವೇದಿಕೆಯಾಗುತ್ತಿತ್ತು. ಇಂದು ಆ ಹಂತವನ್ನು ಅಪ್ರಾಪ್ತರಾಗಿರುವಾಗಲೇ ಪೀಳಿಗೆ ದಾಟಿರುತ್ತಾರೆ ಎಂಬುದು ಸಮಾಜ ಕುಲಗೆಟ್ಟಿರುವುದಕ್ಕೆ ಸಾಕ್ಷಿಯೂ ಹೌದು.ಇಂದಿನ ನೆಲೆಯಲ್ಲೇ ಮದುವೆಯನ್ನು ಚಿಂತಿಸಬೇಕಾದುದು ಇಂದಿನ ಅನಿವಾರ್ಯತೆ. ಕೆಲ ವರ್ಷಗಳ ಹಿಂದಿನವರೆಗೂ ಭಾರತೀಯ ಮದುವೆಗಳು ಸಮಾಜದ ಬೆಸುಗೆಗಳಾಗಿದ್ದವು. ಎಲ್ಲಿನದೋ ಆivoಡಿಛಿeಗಳಿಗೆ ಮನಸ್ಸು ಅಚ್ಚರಿಯನ್ನು ಸೂಚಿಸುತ್ತಿದ್ದವು. ಇಂದು ನಾವು ಅಂಥ ಪರಿಸ್ಥಿತಿಯನ್ನು ದಾಟಿ ಬಂದಿದ್ದೇವೆ ಅನಿಸುತ್ತಿದೆ. ಇಂದು ಜಾಗತಿಕ ತುಲನೆಯಲ್ಲಿ ಹೇಳಬೇಕೆಂದರೆ ಭಾರತದ ಆivoಡಿಛಿeಗೂ ಪಾಶ್ಚಾತ್ಯರ ಆivoಡಿಛಿeಗೂ ಯಾವುದೇ ವ್ಯತ್ಯಾಸವಿಲ್ಲ. ಅಲ್ಲಿನ ವೈವಾಹಿಕ ಸಂಬಂಧ ಮತ್ತು ಇಲ್ಲಿನ ವ್ಯವಸ್ಥೆಗಳಿಗೂ ವ್ಯತ್ಯಾಸಗಳಿಲ್ಲ. ಅಲ್ಲಿನ ವಿವಾಹೇತರ, ಮುಕ್ತ ಸಂಬಂಧಗಳು ಇಲ್ಲಿ ಅಪರೂಪವೂ ಅಲ್ಲ. ಮದುವೆ ಎಂಬುದು ಒಂದು ಉನ್ನತ ಆದರ್ಶಮಯ ಚಿಂತನೆ. ವ್ಯವಸ್ಥೆ ಎಂಬುದು ಕುಸಿದಾಗ, ಕುಸಿಯುವ ಹಂತದಲ್ಲೇ ಒಂದು ಹೊಸ ಪೀಳಿಗೆಯ ಉದಯವಾದಾಗ ಭಾರತವೂ ಒಂದೇ ಪಾಶ್ಚಾತ್ಯ ಜಗತ್ತೂ ಒಂದೇ ಎನ್ನುವ ವಾತಾವರಣ ಸೃಷ್ಟಿಯಾಗುತ್ತದೆ. ಭಾರತದ ಸಮಾಜ ವ್ಯವಸ್ಥೆಯಲ್ಲಿ ಏರುಪೇರಾಗುತ್ತಿದ್ದರೆ ಅದಕ್ಕೆ ಕಾರಣ ಕೂಡ ಇದೇ ಆಗಿದೆ. ಸಂಸ್ಕಾರಯುತ ಶಿಕ್ಷಣದ ಕೊರತೆಯನ್ನು ಇಂದಿನ ಮದುವೆಯ ಮೂಲಕ ನಾವು ನೋಡುತ್ತಿದ್ದೇವೆ.ಅಷ್ಟಕ್ಕೂ ಮದುವೆ ಎಂದರೆ ಹೊರನೋಟಕ್ಕೆ ಕಂಡಷ್ಟೇ ಅಲ್ಲ. ಮದುವೆಗೆ ಸಿದ್ಧವಾಗುವುದೆಂದರೆ ಬದುಕಲ್ಲಿ Seಣಣಟe ಆಗುವುದಲ್ಲ. ಒಂದು ಸಂಸ್ಕಾರಕ್ಕೆ ಒಳಪಡುವುದು, ತಾನು ಸಂಸ್ಕಾರಗೊಳ್ಳುವುದು, ತನ್ನನ್ನು ತಾನು ಅಣಿಗೊಳಿಸುವುದು, ಸಂಕಲ್ಪಕ್ಕೆ ಬದ್ಧರಾಗುವುದು, ಸಮಾಜದ ಒಂದು ಭಾಗವಾಗುವುದು ಮತ್ತು ಜೀವನ ಧರ್ಮದಲ್ಲಿ ನಿಂತ ನೀರಂತಾಗದಿರಲು ಗೃಹಸ್ಥನಾಗುವುದು. ಕಣ್ವ ಮಹರ್ಷಿಗಳು ಗಂಡನ ಮನೆಗೆ ಹೊರಟು ನಿಂತ ಶಕುಂತಲೆಯನ್ನು ಉದ್ದೇಶಿಸಿ ಹೀಗೆ ಹೇಳುತ್ತಾರೆ. ರಾಣಿಯಾಗಿ ಕರ್ತವ್ಯ ನಿರ್ವಹಿಸು, ದುಷ್ಯಂತನಿಗೆ ಮಗುವನ್ನು ಕೊಡು, ಪ್ರೌಢನಾದ ಮಗನಿಗೆ ಕುಟುಂಬವನ್ನೊಪ್ಪಿಸಿ ಪತಿಯೊಡನೆ ಇದೇ ಆಶ್ರಮ ವಾಸಕ್ಕಾಗಿ ಮರಳಿ ಬಾ ಕಣ್ವರ ಮಾತಲ್ಲಿ ಗಹನಾರ್ಥಗಳಿವೆ. ಜೀವನದ ಕರ್ತವ್ಯ ನಿರ್ವಹಣೆಗೆ ಲೋಕ ಕಲ್ಯಾಣದ ಕಾಳಜಿಗೆ ಉದ್ದೀಪಿಸುವ ಧ್ವನಿಯಿದೆ. ಮದುವೆ ಎಂದರೆ ಹಾಗೆಯೇ. ಅಲ್ಲಿ ಎಲ್ಲವೂ ಇರಬೇಕು. ಅದೊಂದು ಪಯಣದಂತೆ. ಹಲವು ಅಮೂಲ್ಯ ಪ್ರಶ್ನೆಗಳಿಗೆ ಹುಡುಕುವ ಉತ್ತರಗಳಂತೆ.

No comments: