Sunday, April 29, 2012

ಜಾಗತೀಕರಣದ ಇಪ್ಪತ್ತು ವರ್ಷ: ಉಕ್ಕಿಸಿದ್ದೆಷ್ಟು? ಕರಗಿಸಿದ್ದೆಷ್ಟು?


ದಕ್ಷಿಣ ಕೊಡಗಿನ ಕಾನೂರು ಎಂಬ ಊರು. ಹೆಚ್ಚು ಕಮ್ಮಿ ಅದು ಕೊಡಗಿನ ಕೊನೆಯ ಊರು. ಆ ಊರಿನಿಂದ  ಮುಂಜಾನೆ ಬೆಳಕು ಮೂಡುವ ಮೊದಲೇ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವೋಲ್ವೋ ಐರಾವತ ಬಸ್ಸೊಂದು ನಿತ್ಯ ಬೆಂಗಳೂರಿಗೆ ಹೊರಡುತ್ತದೆ. ಮುಂಜಾನೆಯ ಆ ಹೊತ್ತಿನಲ್ಲೂ ಆ ಬಸ್ಸು ತುಂಬಿಕೊಂಡಿರುತ್ತದೆ. ದಿನಂಪ್ರತಿ ಬಸ್ಸು ಹೀಗೇ ಸಾಗುತ್ತದೆ. ಹೊರನೋಟಕ್ಕೆ ಈ ಬಸ್ಸು  ಇಂತಿಷ್ಟು ದರದೊಡನೆ ರಾಜಧಾನಿಗೆ ಸಾಗುತ್ತದೆ ಎನಿಸಿದರೂ ಆ ಐರಾವತ ಸುಮ್ಮನೇ ಸಾಗುವುದಿಲ್ಲ. ಕಾನೂರು ಸುತ್ತಮುತ್ತಲಿನ ಹಲವು ಕಥೆಗಳನ್ನು ಹೊತ್ತುಕೊಂಡು ಬಸ್ಸು ಓಡುತ್ತದೆ. ಪಾಳುಬಿದ್ದ ಭತ್ತದ ಗದ್ದೆಗಳ ಕಥೆಗಳನ್ನು, ಮನೆಯೊಂದನ್ನು ಬಿಟ್ಟು ಮಿಕ್ಕೆಲ್ಲವನ್ನೂ ಮಾರಿದವರ ಕಥೆಗಳನ್ನು , ತಮ್ಮ ಮಾತು ಲೆಕ್ಕಿಸದೆ ಇನ್ನೂ ಉತ್ತು ಬಿತ್ತುತಿರುವ ಅಪ್ಪ-ಅಮ್ಮಂದಿರ ಕಥೆಗಳನ್ನು, ಪಟಾಕಿಯ ಅಬ್ಬರದಲ್ಲಿ ಹೂತುಹೋದ ಹುತ್ತರಿಯ ಮಹತ್ತ್ವವನ್ನು, ಕಾವೇರಿ ತೀರ್ಥಕ್ಕೆ ಬೆಂಗಳೂರಿನಿಂದ ಬಂದ ಕಥೆಗಳನ್ನು ಹೊತ್ತುಕೊಂಡು ಸಾಗುತ್ತದೆ. ವರ್ಷಗಟ್ಟಲೆ ಸಿಗದ ಊರವರು ಈ ಬಸ್ಸಿನಲ್ಲಿ ಆಗಾಗ್ಗೆ ಸಿಗುತ್ತಾರೆ. ಒಟ್ಟು ಆ ಬಸ್ಸಿನಲ್ಲಿರುವುದು ಬೆಂಗಳೂರಿಗೆ "ಸಾಧನೆ" ಗೆ ಹೊರಟವರ  ಕಥೆಗಳು. ಒಂದೊಂದು ಮುಖಗಳದ್ದೂ  ಏನನ್ನೋ ಹೊತ್ತುಕೊಂಡ ಕಥೆ. ಹೀಗೆ ಕಥೆಗಳನ್ನು ರಾಜಧಾನಿಗೆ ಸಾಗಿಸಲೆಂದೇ ಕರ್ನಾಟಕಾದ್ಯಂತ ಕಾನೂರಿನಂಥ ಹಲವು ಮೂಲೆಯ ಊರುಗಳಿಗೆ ರಾಜಹಂಸಗಳೂ, ಐರಾವತಗಳೂ ಸಂಚರಿಸುತ್ತವೆ.
ಇಪ್ಪತ್ತು ವರ್ಷಗಳ ಹಿಂದೆ ಈ ಮಾರ್ಗವಾಗಿ  ಮಹಾನಗರಕ್ಕೆ ಒಂದೇ ಒಂದು ಬಸ್ಸಿತ್ತಂತೆ. ಬಹುತೇಕ ಅದು ಖಾಲಿಯಾಗಿಯೇ ಹೋಗುತ್ತಿತ್ತಂತೆ ಎಂಬುದು ಕೆಲವು ವಯಸ್ಸಾದವರ ನೆನಪು. ರಾಜ್ಯದ ಬಹುತೇಕ ಹಳ್ಳಿಗಳೆಲ್ಲವೂ ಇಪ್ಪತ್ತು ವರ್ಷದ ಹಿಂದೆ ಹೀಗೇ ಇದ್ದವು.ಆದರೆ ಇಂದು ಕಾಲಕ್ಕಿಂತಲೂ ವೇಗವಾಗಿ ಅವೆಲ್ಲವೂ "ಮುಂದುವರಿದಿವೆ". ಏಕಾಏಕಿ ಈ ಸ್ಥಿತ್ಯಂತರ ಉಂಟಾಗಲು ಕಾರಣವೇನು? ಜನರೇಕೆ ಈ ಪರಿಯಲ್ಲಿ ಪಟ್ಟಣ ಸೇರಲು  ಹಾತೊರೆಯುತ್ತಿದ್ದಾರೆ? ಹಳ್ಳಿಗಳೂ ಪಟ್ಟಣಗಳಾಗಬೇಕೆಂದು ಏಕೆ ಎಲ್ಲರೂ ಹಂಬಲಿಸುತ್ತಾರೆ?
ಅದಕ್ಕೆಲ್ಲಾ ಚಿಂತಕರು, ಪರಿಸ್ಥಿತಿಯನ್ನು ಅಧ್ಯಯನ ಮಾಡಿದವರು "ಜಾಗತೀಕರಣ" ಎಂದು ಹೆಸರಿಟ್ಟರು. ಹೊಸ ವ್ಯಾಪಾರ ನೀತಿ, ಆರ್ಥಿಕ ನಿಲುವು, ಸೀಮಿತದ ಎಲ್ಲೆ ದಾಟಿ ಬರುವ ಎಲ್ಲಾ ಸಂಗತಿಗಳು  ಸೇರಿ ಸಾಮಾನ್ಯನಿಗೂ ಆಕಾಶವನ್ನು ತೋರಿಸಿತ್ತು. ಇದು ಹೊಸ ಜೀವನ ವಿಧಾನವೊಂದನ್ನು ಸದ್ಯದಲ್ಲೇ ನಿರ್ಮಾಣ ಮಾಡುವುದಿತ್ತು.  ಆ ಹೊಸ ಜೀವನ ವಿಧಾನಕ್ಕೆ ಬೇಕಾದ ಎಲ್ಲಾ ಸರಕು-ಸರಂಜಾಮುಗಳೆಲ್ಲವೂ ಎಲ್ಲರಿಗೂ ಎಟುಕುವುದೆಂದೂ ಸರಕಾರದವರು ಹೇಳಿದರು. ಕೇಳಿಸಿಕೊಳ್ಳದವರಿಗೂ ಅವು ಅರ್ಥವಾದವು. ಏಕೆಂದರೆ ಏಕಾಏಕಿ ಅವಕಾಶಗಳು ತೆರೆದುಕೊಂಡವು. ಸಾಮಾನ್ಯರೂ ಒಳಗೊಳ್ಳುವಂತೆ ಮಾರುಕಟ್ಟೆಯನ್ನು ರೂಪಿಸಲಾಯಿತು. ಎಲ್ಲವೂ ಎಲ್ಲರಿಗೂ ದೊರಕಿದವು. ಅಮೆರಿಕಾದ ಪಿಜ್ಜಾವನ್ನು ತರಿಸಿದರು, ಎಲ್ಲರೂ ತಿನ್ನಬಹುದು ಎಂದರು. ಮನೆಯಲ್ಲಿ  ಕಾಫಿ ಕುಡಿಯದವರು ರೂ. ೨೦೦ ಕ್ಕೆ ಕಾಫಿ ಶಾಪ್‌ನಲ್ಲಿ ಕುಳಿತು ಹೀರುವಂತೆ ಮಾಡಲಾಯಿತು. ಎಲ್ಲಿನದ್ದೊ ಜನರಿಗೆ ಇಲ್ಲಿನ ನೆಲವನ್ನು ತೋರಿಸಲಾಯಿತು. ನೀವು ಬಂಡವಾಳ ಹೂಡಿ ಎಂದು ಕರೆಯಲಾಯಿತು. ಹೀಗೆ ಕಾರ್ಯಕ್ರಮಗಳು ನಡೆಯುತ್ತಿದ್ದಂತೆಯೇ ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಭೂಮಿ ಚಪ್ಪಟೆಯಾಯಿತು. ದೇಶಗಳು ಹತ್ತಿರವಾದವು. ಮೊದಲು ಕೆಟ್ಟು ಪಟ್ಟಣ ಸೇರಿದ ಹಳ್ಳಿಯ ಹೈದನೊಬ್ಬ ವಿದೇಶ ಸುತ್ತಿ ಬಂದ. ಮಹತ್ತ್ವಾಕಾಂಕ್ಷಿ ರೈತನೊಬ್ಬನ ಮಗ ಊರಿನ ಗದ್ದೆಯನ್ನು ಮಾರಿ ಸಿಟಿಯಲ್ಲಿ ಥರ್ಟಿ-ಫಾರ್ಟಿ ಸೈಟು ಕೊಂಡ. ಹಳ್ಳಿಯ ಯುವಕರು ಪಟ್ಟಣ ಸೇರಲು ಹಾತೊರೆದರು. ಸೇರಿದರು, ಹಿಂಡುಹಿಂಡಾಗಿ ಸಾಗಿದರು. ಸಾಗಿದವರು ಮತ್ತೆಂದೂ ಮರಳಿಬಾರದಂತೆ ಸಿಕ್ಕಿಹಾಕಿಕೊಂಡರು. ಯುವಕರಿಲ್ಲದ ಹಳ್ಳಿ ತನ್ನ ಒಡಲಿನ ಭಾವ ತೀವ್ರತೆಯನ್ನು , ಸೂಕ್ಷ್ಮ ಸಂವೇದನೆಯೊಂದನ್ನು ಕಳೆದುಕೊಳ್ಳುತ್ತಾ ಬಂತು. ಗಾಂಧಿಜಿ ಹೇಳಿದ್ದ "ಭಾರತದ ಆತ್ಮ"ಕ್ಕೆ ಜೀವವೇ ಇಲ್ಲದಾಯಿತು.
ಜಾಗತೀಕರಣಕ್ಕೀಗ ಇಪ್ಪತ್ತು ವರ್ಷಗಳು. ಈ ಇಪ್ಪತ್ತು ವರ್ಷಗಳಲ್ಲಿ ಎಲ್ಲೆಲ್ಲೂ ಸೂತಕದ ಛಾಯೆ. ಆದರೆ ಈ ಸೂತಕದ ಹೊತ್ತಲ್ಲೂ ಮೇರೆ ಮೀರಿದ ಹಬ್ಬ ಮಾಡುವ ಜಾಯಮಾನ. ೯೦ರ ದಶಕದ ಮೊದಲು ಹುಟ್ಟಿ  , ಈ ಇಪ್ಪತ್ತರೊಳಗೆ ಬಲಿಯಾಗದವರಿಗೆ ಈ ಸೂತಕದ ಅರಿವಾಗಬಹುದು. ಏನೇನಾಗಿಹೋಯಿತು ಈ ಇಪ್ಪತ್ತು ವರ್ಷಗಳಲ್ಲಿ...? ಹಳ್ಳಿಗರ ಮುಗ್ದತೆಯೇ ನಾಶವಾಯಿತು. ಮುಗ್ದತೆ ನಾಶವಾದರೂ ಮೋಸಹೋಗುವುದು ತಪ್ಪಿತೇ ಎಂದರೆ ಅದೂ ಇಲ್ಲ. ಪಟ್ಟಣಗಳ ಅಹಂಕಾರ ಹಳ್ಳಿಗೂ ನುಗ್ಗಿತು. ಶುದ್ಧ ವ್ಯವಹಾರಗಳು ಸಾಮಾನ್ಯವಾದುವು. ಮಾಡುತ್ತಿದ್ದ ವೃತ್ತಿಗಳು ಕೈಬಿಟ್ಟುಹೋಯಿತು. ಸಮಾಜದ ಎಲ್ಲಾ ವರ್ಗಗಳೂ ಎಲ್ಲಾ ವೃತ್ತಿಗಳನ್ನು ಮಾಡಿದರು. ಹಾಗಾದರೆ ಸಮಾನತೆ ಬಂದುಬಿಟ್ಟತೋ ಎಂದರೆ ಅದೂ ಕೂಡಾ ಆಗಲಿಲ್ಲ. ಜಾತಿ ವ್ಯವಸ್ಥೆಗೆ  ವೃತ್ತಿ ಒಂದು ಕಾರಣವೇ ಅಲ್ಲ ಎಂಬುದನ್ನು ಜಾಗತೀಕರಣ ತೋರಿಸಿಕೊಟ್ಟಿತು. ಇನ್ನು ಕಳೆದುಕೊಂಡಿದ್ದು, ಗಳಿಸಿಕೊಂಡಿದ್ದರ ಹೊರತಾಗಿ ಉಳಿದುಕೊಂಡಿದ್ದು ಎಂದರೆ ದ್ವಂದ್ವ, ಗೊಂದಲ, ಅಸಹನೆ, ಒತ್ತಡಗಳು ಮಾತ್ರ. ಜಾಗತೀಕರಣ ಸೃಷ್ಟಿಸಿದ ವಿಚಿತ್ರವಾದ ಅವಕಾಶ ಎಲ್ಲಾ ಕ್ಷೇತ್ರಗಳನ್ನು ಸ್ಪರ್ಶಮಾಡಿತ್ತು. ಕೃಷಿಯನ್ನು ಅದು ಎಂದೂ ನುಂಗಿ ನೀರು ಕುಡಿಯಲಿಲ್ಲ. ಆದರೆ ವಿಚಿತ್ರವಾಗಿ ಕೃಷಿ ಆರಂಭವಾಯಿತು. ವ್ಯಾಪಾರವನ್ನು ಕಣ್ಣಮುಂದಿಟ್ಟುಕೊಂಡು ಕೃಷಿ ನೀತಿಗಳು ಆರಂಭವಾದವು. ಪೈರುಗಳು ನಿಯಮಕ್ಕೆ ತಕ್ಕಂತೆ ತೆನೆದೂಗಿದವು. ಪುರಾತನ ತಳಿಗಳು ನಾಶವಾದವು. ಕೃಷಿಯನ್ನು ರೈತನೇ ಮಾಡಬೇಕೆಂದಿಲ್ಲ ಎಂಬಂತಾಯಿತು. ಇಂತಿಷ್ಟು ಗಂಟೆಯಿಂದ ಇಂತಿಷ್ಟು ಗಂಟೆಯವರೆಗೆ ದುಡಿಮೆ, ಇಂತಿಂಥ ಸಮಯದಲ್ಲಿ  ಇಷ್ಟಿಷ್ಟನ್ನು ಸುರಿಯುವುದು ಬೆಳೆ ತೆಗೆಯುವ ವಿಧಾನಗಳಾದವು. ಹೀಗೆ ಪ್ರೀತಿಯಿಲ್ಲದ ಕೃಷಿ ನೀತಿಯಿಲ್ಲದ ಆಹಾರವನ್ನು ಉತ್ಪಾದಿಸಿದವು. ಸಾಮಾನ್ಯ ರೈತ "ಕೃಷಿ ಕಾರ್ಮಿಕ" ಎಂಬ ಹೊಸ ಮತ್ತು ದುಬಾರಿ ಪೀಳಿಗೆಯೊಂದಕ್ಕೆ ಅವಲಂಭಿತನಾದ. ತಮ್ಮ ತಮ್ಮ ಕುಲಕಸುಬನ್ನು ಬಿಟ್ಟ ಈ ವರ್ಗ ಸಣ್ಣ ರೈತರನ್ನು ಎಷ್ಟೊಂದು ಗೋಳಾಡಿಸಿದರೆಂದರೆ  ಸ್ವತಃ ರೈತರೇ ತಮ್ಮ ಮಕ್ಕಳಿಗೆ ಮಣ್ಣಿನ ಹಂಗು ಬೇಡ ಎಂದರು. ಕೃಷಿ ಮಾಡಿಯೇ ಹೊಟ್ಟೆ ಹೊರೆಯಬೇಕೆಂಬ ಅನಿವಾರ್ಯತೆ ಇಂದಿಲ್ಲ ಎಂಬುದನ್ನೂ ಅವರು ಕಂಡುಕೊಂಡಿದ್ದಾರೆ. ಕೊನೆಗೆ ಜಮೀನನ್ನು ಮಾರುವ ವಿಫುಲ ಅವಕಾಶವನ್ನೂ ಆತ ಕಂಡುಕೊಂಡಿದ್ದಾನೆ.
ಜಾಗತಿಕ ಸ್ಥಿತಿಗತಿಗಳ ಖ್ಯಾತ ವಿಶ್ಲೇಷಕ ಹಂಟಿಂಗ್‌ಟನ್ " ನಾಗರಿಕತೆಗಳ ಸಂಘರ್ಷದಲ್ಲಿ ಉಂಟಾಗುವ ಸ್ಥಿತ್ಯಂತರಗಳು ಯಾವುದೂ ಶಾಸ್ವತವಲ್ಲ. ಅವು ಕ್ಷಣಿಕ" ಎನ್ನುತ್ತಾನೆ. ಆದರೆ ಈ ಇಪ್ಪತ್ತು ವರ್ಷಗಳ ಸ್ಥಿತ್ಯಂತರ, ಸ್ಥಿತಿಗಳನ್ನು ನೋಡಿದರೆ ಹಂಟಿಂಗ್‌ಟನ್ನನ ವಾದ ತಪ್ಪು ಎಂದೇ ಎನಿಸುತ್ತದೆ. ಏಕೆಂದರೆ ಈ ಇಪ್ಪತ್ತರ ಹೊತ್ತಲ್ಲಿ ನಡೆದಿದ್ದೆಲ್ಲವೂ ಮರಳಿ ಬಾರದಷ್ಟು ದೂರಕ್ಕೆ ಸಾಗಿದ ಸಂಗತಿಗಳೇ. ಒಮ್ಮೆ ಮಾರಿದ ಕೃಷಿ ಭೂಮಿಯಲ್ಲಿನ್ನು ಯಾವತ್ತೂ ರೈತ ಕೃಷಿ ಮಾಡಲಾರ. ಅದು ಯಾವುದೋ ಕಾಣದ ದಣಿಗಳ ಪಾಲಾಗಿದೆ. ರೈತ ಇನ್ನೆಂದೂ ಸ್ವಾಭಿಮಾನಿಯಾಗಿ ಬಾಳಲಾರ. ಏಕೆಂದರೆ ಭೂಮಿಯಿಲ್ಲದವನು ಎಷ್ಟಿದ್ದರೂ ಪರಾವಲಂಭಿ. ಕೋಲಾದ ರುಚಿ ಕಂಡ ಬಾಯಿಗೆ ಕಷಾಯ ಇಷ್ಟವಾಗುವುದೂ ಸಂಶಯವೇ.ಪಟ್ಟಣ ಸೇರಿದವರು ಮರಳಿ ಬಂದು ಸ್ವತಃ ನೊಗ ಕಟ್ಟುವರೆನ್ನುವುದು ತಮಾಷೆಯ ಮಾತು. ಹಾಗಾಗಿ ನಾಗರಿಕತೆಗಳ ಸಂಘರ್ಷದಲ್ಲಿ ಫಲಿತಾಂಶವೇ ಸಿಂಧು ಎಂಬುದು ಈ ಇಪ್ಪತ್ತು ವರ್ಷಗಳ ಅವಧಿ ತಿಳಿಸಿದೆ.
ಜಾಗತೀಕರಣ ಕೇವಲ ಕೃಷಿ, ವ್ಯಾಪಾರ, ಆರ್ಥಿಕತೆ,ತಂತ್ರಜ್ನಾನಗಳಿಗಷ್ಟೇ ಸೀಮಿತವೂ ಆಗಿಲ್ಲ ಎಂಬುದನ್ನು ಈ ಇಪ್ಪತ್ತು ವರ್ಷಗಳು ತೋರಿಸಿಕೊಟ್ಟಿವೆ. ಜನಜೀವನ, ಮೌಲ್ಯಗಳು ಸಾಂಸ್ಕೃತಿಕ ಅಧಃಪತನಗಳ ಅಬ್ಬರ ಕಂಡುಬರುತ್ತಿವೆ. ಅವಿಭಕ್ತ ಕುಟುಂಬಗಳು ಒಡೆದಿವೆ. ತಾನು ಎಂಬ ಭಾವ ಇನ್ನಿಲ್ಲದಂತೆ ಜಾಗೃತವಾಗಿವೆ. ನೆಂಟರಿಷ್ಟರು, ನೆರೆಹೊರೆ ಎಲ್ಲವೂ ಇಂದು ಅಳೆದೂ ತೂಗಿ  ವ್ಯವಹಾರಕ್ಕಿಳಿಯುತ್ತದೆ. ಅಣ್ಣನಿಂದ ಲಾಭವಿದ್ದರೆ ತಮ್ಮನಿಂದ ಪ್ರೀತಿ, ಭಾವನಿಂದ ಲಾಭವಿದ್ದರೆ ಮೈದುನನಿಂದ ಪ್ರೀತಿ. ಒಟ್ಟು ಪ್ರೀತಿ ಕೂಡಾ ಮಾರಾಟದ ಸರಕು! ಸಂಬಂಧಗಳಿಗೂ ಕೃತಕತೆಯ ಲೇಪ! ಕಂಸ-ಶಕುನಿಗಳಂಥ ಮಾನವರು, ಹೊಟ್ಟೆಕಿಚ್ಚಿನ ದಾಯಾದಿಗಳು ಪುರಾಣಕಾಲದಿಂದಲೂ ಇದ್ದಿರಬಹುದು. ಆದರೆ ಹೊಸ ವಿನ್ಯಾಸಗಳ ಮೂಲಕ ಇಂಥವರು ಇಂದು ಅಬ್ಬರಿಸುತ್ತಿದ್ದಾರೆ. ಎಲ್ಲವೂ ಇತ್ತಪ್ಪು ವರ್ಷಗಳ ಮಹಿಮೆ.
ಇನ್ನು ಆಡಳಿತದಲ್ಲಿ ಅಭಿವೃದ್ಧಿಯ ವ್ಯಾಖ್ಯಾನವೇ ಬದಲಾಗಿದೆ. ರಸ್ತೆ, ಸೇತುವೆ, ಸಾರಿಗೆ, ಬ್ಯಾಂಕುಗಳೆಲ್ಲವೂ ಮುಂದುವರಿದಿವೆ. ಕಾಡು ಕಡಿದು, ಹೊಳೆ ಮುಚ್ಚಿದರೂ ಸರಿ ರಸ್ತೆಯಾಗಲೇ ಬೇಕು. ವಿಧ್ಯುತ್ ಬರಲೇಬೇಕು. ಜನರ ಅಹಂ ಹೆಚ್ಚಿಸಲು, ಕೊಳ್ಳುಭಾಕತನವನ್ನು ಜಾಗೃತಗೊಳಿಸಲು ಏನೆಲ್ಲಾ ಬೇಕೋ ಅವೆಲ್ಲವನ್ನೂ ಅಭಿವೃದ್ಧಿಪಡಿಸಲಾಗಿದೆ. ಇದರೊಂದಿಗೆ ಲಂಚಕೋರತನವೂ ಅಭಿವೃದ್ಧಿಯಾಗಿದೆ. ಇದರಿಂದ ಜನರು ಮತ್ತಷ್ಟು ದುಷ್ಟರಾಗಿದ್ದಾರೆ., ಇವೆಲ್ಲಾ ಎಂಥ ಕುಲುಮೆಯಯ್ಯಾ ಎನ್ನುವಂತೆ ಲೋಕವಿದೆ. ಉತ್ತರ ಹೊಳೆಯುತ್ತಿಲ್ಲ. ಆದರೆ ಕಾರಣ ಮಾತ್ರ ಸಷ್ಟವಾಗಿದೆ.  ಇಪ್ಪತ್ತೇ ಇಪ್ಪತ್ತು ವರ್ಷ! ಇಂಥ ಸಂಗತಿಗಳ ನಡುವೆ ಬದುಕುವ ನಾವು ಉದ್ದಾರವಾಗಿದೆ ಎಂದುಕೊಳ್ಳುತ್ತಿದ್ದೇವೆ. ಅಂಗಡಿಯ ಮೆರುಗಿಗೆ ಮರುಳಾಗಿ ಮನೆ ತುಂಬಿಸಿಕೊಳ್ಳುತ್ತಿದ್ದೇವೆ. ಜನರ ಪರಿಸ್ಥಿತಿ ಹೀಗಿರುವಾಗ ದೇಶದ ಪರಿಸ್ಥಿತಿ ಇನ್ನು ಹೇಗಿರಲು ಸಾಧ್ಯ? ಈ ಇಪ್ಪತ್ತು ವರ್ಷಗಳಲ್ಲಿ ಚಳವಳಿಗಳು ನೆಲಕಚ್ಚಿದ ಕಾರಣವನ್ನು ಹುಡುಕಿದರೆ ಜಾಗತೀಕರಣದ ಜಾಡು ಕಾಣದೇ ಇರುವುದಿಲ್ಲ. ಅಂದು ಸ್ವಾತಂತ್ರ್ಯ ಹೋರಾಟದಲ್ಲಿ, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜನರು ಹಿಂಡುಹಿಂಡಾಗಿ ಜೈಲು ಸೇರಿದ್ದರು. ಆಗೊಂದು ಮೌಲ್ಯವಿತ್ತು, ತೀವ್ರತೆಯಿತ್ತು, ಕಾಳಜಿಯಿತ್ತು. ಇಂದು ದೇಶಕ್ಕಾಗಿ ಜೈಲು ಸೇರಬೇಕಾದ ಪ್ರಸಂಗ ಬಂದರೆ ಅವರ ಪ್ರಮಾಣ ಎಷ್ಟಿರಬಹುದು? ಅಣ್ಣಾ ಹಜಾರೆಯನ್ನು ಯುವಕರು ಬೆಂಬಲಿಸಿದ್ದರೂ ಅವರೆಲ್ಲಾ ಆ ಚಳವಳಿಯಲ್ಲಿನ "ಸುರಕ್ಷಿತ ವಲಯ" ವನ್ನು ಕಂಡೇ ಚಳವಳಿಗೆ ಬಂದವರು ಎಂಬುದನ್ನು ಮರೆಯಬಾರದು.
 ಕೊನೆಗೂ ಈ ಇಪ್ಪತ್ತು ವಷಗಳ ಅವಧಿ ಏನನ್ನೂ ಸ್ಪಷ್ಟ ಪಡಿಸುವುದಿಲ್ಲ.  ಆಧುನಿಕದಲ್ಲೂ ದೇವರ ಭಕ್ತಿ ಕಡಿಮೆಯಾಗಿಲ್ಲ ಎಂದುಕೊಂಡರೂ ಆ ಭಕ್ತಿಯಲ್ಲಿ ಭಾವದ ಲೇಪವಿಲ್ಲ. ಹೊಟ್ಟೆ ತುಂಬಿದಂತೆ ಕಂಡರೂ ನೆಮ್ಮದಿಯಿಲ್ಲ. ಗೆಲುವಿನಂತೆ ಕಂಡರೂ ಸಂತೋಷವಿಲ್ಲ. ಮನರಂಜನೆಗೆ ಅವಕಾಶವಿದ್ದರೂ ಮನಸ್ಸು ಅರಳುವಂಥದ್ದಿಲ್ಲ. ವಿದ್ಯೆ ಇದ್ದರೂ ಅದು ಬುದ್ದಿಗೆ ಕಾರಣವಾಗುತ್ತಿಲ್ಲ. ಮೇಕಪ್ ಇದ್ದರೂ ಸಿಡುಕು ಮುಖಗಳು ಎದ್ದುಕಾಣುತ್ತಿವೆ.
ವಿಪರ್ಯಾಸವೊಂದು ನೆನಪಾಗುತ್ತಿದೆ. ಆ ಮುಂಜಾನೆಯ ಐರಾವತ ಹೊರಡುವ  ಕಾನೂರು ಎಂಬ ಪಾಯಿಂಟಿನಲ್ಲಿ ಲಕ್ಷ್ಮಣತೀರ್ಥ ನದಿ ಹರಿಯುತ್ತದೆ. ಇಪ್ಪತ್ತು ವರ್ಷಕ್ಕೆ ಹಿಂದೆ ಆ ನದಿಯಲ್ಲಿ  ಹುಡುಗರು ಮೀಯುತ್ತಿದ್ದರು, ಹೊಳೆದಂಡೆಯ ಮರಳಿನಲ್ಲಿ ಕಪ್ಪೆ ಗೂಡು ಕಟ್ಟಿ ಆಡುತ್ತಿದ್ದರು. ಅದೇ ಮಕ್ಕಳು ಇಂದು ಅದೇ ಹೊಳೆಯ ನೀರನ್ನು ಮೋಟಾರು ಹಾಕಿ ಬತ್ತಿಸುತ್ತಿದ್ದಾರೆ, ಆಡುತ್ತಿದ್ದ ಅದೇ ಮರಳಿನ ಅಕ್ರಮ ದಂದೆಯಲ್ಲಿ ತೊಡಗಿದ್ದಾರೆ. ಇದು ಇಪ್ಪತ್ತು ವರ್ಷಗಳು ಮಾಡಿದ ಬದಲಾವಣೆ ! ಕೊಡಗಿನ ತೋಟಗಳಿಗೆ ಜೀಪುಗಳಲ್ಲಿ ಕಾಲೋನಿಗಳಿಂದ ಆಳುಗಳನ್ನು ತುಂಬಿಸಿಕೊಂಡು ಹೋಗಲಾಗುತ್ತದೆ. ಜೀಪಿನಲ್ಲಿ ಆಳುಗಳು ಮಾತಿಗೊಮ್ಮೆ "ಅವ್ವನ್" ಎನ್ನುತ್ತಲೇ ಕವಳವನ್ನು  ಉಗಿಯುತ್ತಿದ್ದಾರೆ. ತೋಟದ ಮಾಲಿಕನ ಮಗ ಮಹಾನಗರದ ಕ್ಯಾಬ್‌ಗಳಲ್ಲಿ, ಪಬ್‌ಗಳಲ್ಲಿ  ಅದೇ ಧಾಟಿಯಲ್ಲಿ " ಫ..." ಎನ್ನುತ್ತಿದ್ದಾನೆ. ಭಾಷೆಯಲ್ಲಿ ವ್ಯತ್ಯಾಸವಿಬಹುದು. ಪದದಲ್ಲಿ ವ್ಯತ್ಯಾಸವಿಲ್ಲ. 
ಅಬ್ಬಾ , ಈ ಇಪ್ಪತ್ತು ವರ್ಷ ಏನೇನೆಲ್ಲಾ ಉಕ್ಕಿಸಿದೆ!? ಕರಗಿಸಿದೆ !?

Monday, April 9, 2012

ವಾಯ್ಸ್ ಆಫ್ ಇಂಡಿಯಾ: ಸತ್ಯ ಹೇಳಿದ ಪುಟ್ಟ ಬಾಲಕ

ಒಂದು ಪುರಾತನವಾದ ಕಥೆ ಹೀಗಿದೆ.
ಒಂದೂರ ರಾಜನಿಗೆ ಉಡುಗೆ-ತೊಡುಗೆಗಳ ಬಗ್ಗೆ ವಿಪರೀತ ಹುಚ್ಚು. ಸದಾ ಶೋಕೀವಾಲ. ದಿನಾ ಹೊಸ ಹೊಸ ಧಿರಿಸು ಧರಿಸಿ ಮಿರಿಮಿರಿ ಮಿಂಚಬೇಕೆಂಬ ಅಭಿಲಾಷೆ. ಹೊಸ ಉಡುಪಿನಿಂದ ತಾನು ರಾಜಬೀದಿಯಲ್ಲಿ ತೆರಳಬೇಕು, ಜನ ನನ್ನನ್ನು ನೋಡಿ ಹೊಗಳಬೇಕು ಎಂಬ ಹಂಬಲ ಆ ರಾಜನಿಗೆ ಯಾವಾಗಲೂ ಇತ್ತು. ಜೊತೆಗೆ ಆತನ ಧಿರಿಸಿನ ಬಗ್ಗೆ ದಂತಕಥೆಗಳೇ ಹಬ್ಬಿದ್ದವು. ಹೀಗಿರಲೊಂದು ದಿನ ರಾಜನ ಆಸ್ಥಾನಕ್ಕೆ ಉಡುಪು ವಿನ್ಯಾಸಗಾರರು ಬಂದರು. ಬಂದವರೇ ತಾವು ಮಹಾಸ್ವಾಮಿಗಳಿಗೆ ವಿಶೇಷವಾದ ಪೀತಾಂಭರವೊಂದನ್ನು ತಯಾರಿಸುತ್ತೇವೆಂದೂ ಅಂಥ ಪೀತಾಂಭರವನ್ನು ಇದುವರೆಗೆ ಯಾರೂ ತಯಾರಿಸಿಯೇ ಇಲ್ಲವೆಂದೂ ಹಾಗಾಗಿ ಅಂಥದ್ದನ್ನು ಇನ್ನೂ ಯಾರೂ ಧರಿಸಿಯೇ ಇಲ್ಲವೆಂದೂ ಆಸ್ಥಾನವನ್ನು ನಂಬಿಸಿದರು. ಇನ್ನು ದೊರೆಗಳು ಸುಮ್ಮನಿರುವುದುಂಟೇ? ಉಬ್ಬಿಯೇ ಹೋದರು. ಪೀತಾಂಭರ ತಯಾರಕರಿಗೆ ಸಕಲ ಗೌರವಗಳು ಸಂದವು. ಪೀತಾಂಭರ ತಯಾರಿಕೆಗೆ ಎಲ್ಲಾ ಏರ್ಪಾಡುಗಳಾದವು.
ಬಹುದಿನಗಳು ಕಳೆಯಿತು. ಪೀತಾಂಭರ ತಯಾರಾದ ಸುದ್ಧಿಯಿಲ್ಲ. ರಾಜನಂತೆ ಪ್ರಜೆಗಳಿಗೂ ಅಂಥದ್ದೊಂದು ವಿಶೇಷವಾದ ಪೀತಾಂಭರವನ್ನು ನೊಡಬೇಕೆಂಬ ಕುತೂಹಲವೂ ಹೆಚ್ಚಾಗುತ್ತಿತ್ತು. ಒಂದು ದಿನ ರಾಜ ಸ್ವತಃ ಕೆಲಸವನ್ನು ಪರೀಕ್ಷಿಸಲು ಹೋದ. ನೇಯುವವರು ರಾಜನನ್ನು ಕಂಡೊಡನೆಯೇ ಬಟ್ಟೆ ನೇಯುವಂತೆ ನಟಿಸಲಾರಂಭಿಸಿದರು. "ತಯಾರಾಗುತ್ತಿರುವ ಪೀತಾಂಭರವೆಲ್ಲಿ?" ರಾಜ ಪ್ರಶ್ನಿಸಿದ. ನೇಯುವವರು " ಇದು ಅಂತಿಂಥ ಪೀತಾಂಭರವಲ್ಲ ಮಹಾಸ್ವಾಮಿ, ಎಲ್ಲಿ ತಾನೇ ಕಾಣುತ್ತದೆ"ಎಂದು ಉತ್ತರಿಸಿದರು. ಕೊನೆಗೂ ಒಂದು ದಿನ ರಾಜನಿಗೆ ಪೀತಾಂಭರವನ್ನು ತೊಡಿಸುವ ಕಾರ್ಯಕ್ರಮ ನಿಗದಿಯಾಯಿತು. ಉಡಿಸುವ ಮೊದಲು ವಿನ್ಯಾಸಗಾರನು ಆಸ್ಥಾನವನ್ನುದ್ದೇಶಿಸಿ ಹೀಗೆಂದು ಘೋಷಿಸಿದ " ಯಾರು ತಮ್ಮ ಅಪ್ಪನಿಗೆ ಹುಟ್ಟಿರುವರೋ ಅವರಿಗೆ ಮಾತ್ರ ಈ ವಿಶೇಷವಾದ ಪೀತಾಂಭರವು ಗೋಚರಿಸುತ್ತದೆ."
ರಾಜನ ಬಟ್ಟೆಯನ್ನು ಬಿಚ್ಚಿಸಲಾಯಿತು. ಆತನಿಗೆ ಏನನ್ನೋ ತೊಡಿಸಿದಂತೆ ನಟಿಸಲಾಯಿತು. ಎಲ್ಲರೂ ಕೈಚಪ್ಪಾಳೆ ತಟ್ಟಿದರು. ಎಲ್ಲರೂ ವಿನ್ಯಾಸಗಾರನ ಚಾಕಚಕ್ಯತೆಯನ್ನೂ ರಾಜನ ಸೌಂದರ್ಯವನ್ನೂ ಹೊಗಳಿದರು. ರಾಜ ಆತನಿಗೆ ಮತ್ತಷ್ಟು ಉಡುಗೋರೆಗಳನ್ನು ಕೊಟ್ಟು ಸನ್ಮಾನಿಸಿದ. ಆದರೆ ವಾಸ್ತವವಾಗಿ ರಾಜ ನಗ್ನನಾಗಿಯೇ ಇದ್ದ. ವಿನ್ಯಾಸಗಾರನ ಘೋಷಣೆಯಿಂದ ಆಸ್ಥಾನದಲ್ಲಿ ಸತ್ಯ ಮರೆಯಾಗಿತ್ತು. ಉಬ್ಬಿದ ರಾಜನಂತೂ ವಿಶೇಷ ಪೀತಾಂಭರವನ್ನು ತೊಟ್ಟು ತಾನು ಊರ ಬೀದಿಗಳಲ್ಲಿ ಸಂಚರಿಸುವೆ ಎಂದು ಘೋಷಿಸಿಯೇಬಿಟ್ಟ. ಊರಲ್ಲೆಲ್ಲಾ ಜನ ರಾಜನ ಉಡುಪನ್ನು ಹೊಗಳಿದರು. ನಗ್ನ ಸತ್ಯವನ್ನೂ ಜನ ಒಪ್ಪಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಎಲ್ಲರೂ ಸನ್ನಿಗೆ ಒಳಗಾದವರಂತೆ ನಡೆಯುತ್ತಿದ್ದರು. ಆದರೆ ಅಲ್ಲೇ ರಸ್ತೆ ಬದಿಯಲ್ಲಿ ತನ್ನಪ್ಪನೊಡನೆ ನಿಂತು ಮೆರವಣಿಗೆ ನೋಡುತ್ತಿದ್ದ ಪುಟ್ಟ ಬಾಲಕನೊಬ್ಬ " ರಾಜ ಬೆತ್ತಲಾಗಿದ್ದಾನೆ" ಎಂದುಬಿಟ್ಟ. ತಕ್ಷಣವೇ ಅಪ್ಪನ ಕೈ ಬಾಲಕನ ಬಾಯನ್ನು ಮುಚ್ಚಿತು. ಏಕೆಂದರೆ ಸತ್ಯವನ್ನು ಹೇಳುವಂತಿಲ್ಲ. ಎಲ್ಲರೂ ಹೇಳಿದ್ದನ್ನೇ ತಾನೂ ಹೇಳಬೇಕು. ಹೇಳಿದರೆ ಅಪವಾದದ ಆತಂಕ. ಹೇಳದಿದ್ದರೆ ಎಲ್ಲವೂ ನಿರಾತಂಕ! ಹಾಗಾಗಿ ಯಾರೂ ಕಣ್ಣೆದುರಿನ ಸತ್ಯವನ್ನು ಹೇಳಲಿಲ್ಲ. ಏಕೆಂದರೆ ಯಾರಿಗೂ ಭ್ರಮೆಯನ್ನು ಬಿಡಲಾಗಲಿಲ್ಲ. ಅಂಥ ಹೊತ್ತಲ್ಲಿ ಸತ್ಯವನ್ನು ಪುಟ್ಟ ಬಾಲಕನೊಬ್ಬ ಹೇಳಿದ್ದ. ಕುರಿಮಂದೆಯಂತೆ ಸಾಗುತ್ತಿದ್ದ ಮೆರವಣಿಗೆಯ ನಡುವೆಯೇ ಬಾಲಕ ಸ್ವರ ಹೊರಡಿಸಿದ್ದ.
ಯಾರೂ ಸತ್ಯವನ್ನು ಹೇಳುವ ಸ್ಥಿತಿಯಲ್ಲಿಲ್ಲದಾಗ ಸತ್ಯವನ್ನು ಹೇಳಿದ ಬಾಲಕನ ಕಥೆಯನ್ನು ಕೇಳುವಾಗ voice of india ಎಂಬ ಪ್ರಕಾಶನ ಸಂಸ್ಥೆಯ ಗಾಥೆ ನೆನಪಾಗುತ್ತದೆ. ಆ ಕಥೆ ಇಲ್ಲಿ ಪ್ರಸ್ತುತವಾದಂತೆನಿಸುತ್ತದೆ. ಯಾರೂ ಸತ್ಯವನ್ನು ಹೇಳುವ ಮನಸ್ಸು ಮಾಡದಿದ್ದಾಗ, ಭ್ರಮೆಯಿಂದ ಬಳಲುತ್ತಿದ್ದಾಗ, ಅನಾಚಾರಗಳನ್ನು ಅನುಭವಿಸುವುದು ಮತ್ತು ಆ ಭ್ರಮೆಗಳನ್ನೇ ಸುಖದ ಪರಮಾವ ಎಂದುಕೊಂಡಿರುವಾಗ ಆ ಪುಟ್ಟ ಬಾಲಕನಂತೆ ಸತ್ಯದ ಧ್ವನಿಯನ್ನು ಹೊರಡಿಸಿದ್ದು voice of india ಪುಸ್ತಕ ಮಾಲಿಕೆಗಳು. ಕಮ್ಯುನಿಸಮ್ಮಿನ ಅನಾಚಾರಗಳನ್ನು,ಇಸ್ಲಾಂ ಮತ್ತು ಕ್ರೈಸ್ತ ಕ್ರೌರ್ಯಗಳ ಬಗ್ಗೆ ಎದುರಾಡಲೇ ಬಾರದು ಎಂದು ದೇಶವೇ ಅಂದುಕೊಂಡ ಹೊತ್ತಿನಲ್ಲಿ voice of india ಹಲವು ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುವ ಪ್ರಯತ್ನವನ್ನು ಮಾಡಿತು. ದೇಶವೇಕೆ ಮತೀಯ ಆಧಾರದಲ್ಲಿ ತುಂಡಾಯಿತು? ಮಾರ್ಕ್ಸ್‌ವಾದಿ ಇತಿಹಾಸಕಾರರೇಕೆ ಇನ್ನೂ ಯಾರೂ ಕಾಣದ ಆರ್ಯ-ದ್ರಾವಿಡ ವಾದಕ್ಕೆ ಜೋತುಬೀಳುತ್ತಿದ್ದಾರೆ? ಮುಸ್ಲಿಂ ಅರಸರಿಗೆ ಹಿಂದೂ ದೇವಸ್ಥಾನವನ್ನು ಒಡೆದಾಗ ಏನು ನೆಮ್ಮದಿ ಸಿಗುತ್ತಿತ್ತು ಎನ್ನುವಲ್ಲಿಂದ ಹಿಡಿದು ಇಂದು ಭಾರತೀಯ ಮುಸಲ್ಮಾನರನೇಕರ ನಿಷ್ಠೆ ಎತ್ತಲಿದೆ ಎಂಬಂಥ ಪ್ರಶ್ನೆಗಳಿಗೆ ಉತ್ತರವನ್ನು ಧೈರ್ಯದಿಂದ ಶೋಧಿಸುವ ಮನಸ್ಸನ್ನು ಮಾಡಿತು. ಆ ಸಂಸ್ಥೆ ಇವೆಲ್ಲವನ್ನೂ ಮಾಡಿದ್ದು ಮುಸಲ್ಮಾನರ ಬಗ್ಗೆ ಯಾವ ಪ್ರಶ್ನೆಗಳನ್ನೂ ಎತ್ತಬಾರದು, ಮುಸಲ್ಮಾನರನ್ನು ಎದುರುಹಾಕಿಕೊಂಡರೆ ದೇಶಕ್ಕೆ ಉಳಿಗಾಲವಿಲ್ಲ ಎಂಬ ಭಾವನೆ ತೀವ್ರವಾಗಿದ್ದ ಸಮಯದಲ್ಲಿ. ಹಾಗಾಗಿ voice of india ಎಂದರೆ ನಗ್ನ ರಾಜನ ಕಥೆಯಲ್ಲಿ ಸತ್ಯವನ್ನು ಹೇಳಿದ ಬಾಲಕನಂತೆ. ಕೆಲವು ವಿಷಯಗಳನ್ನು ಭಾರತೀಯ ಮಾನಸಿಕತೆಯ ದೌರ್ಬಲ್ಯ ಎಂದು ಒಪ್ಪಿಕೊಳ್ಳಲೇ ಬೇಕು. ಹಿಂದುಗಳು ಆ ಕಥೆಯ ರಾಜನಂತೆ ಸುಲಭವಾಗಿ ಭ್ರಮೆಗೊಳಗಾಗುವ ಸ್ವಭಾವದವರೆನ್ನುವುದನ್ನೂ ಒಪ್ಪಿಕೊಳ್ಳಬೇಕು.ಭಾರತೀಯ ಪುರಾಣೇತಿಹಾಸಗಳಲ್ಲಿ ನ ಸಾಂಸ್ಕೃತಿಕ ಪ್ರಭಾವಳಿ ಎಷ್ಟೇ ತೀವ್ರವಾಗಿದ್ದರೂ, ಜನಜೀವನವನ್ನು ಅದು ಎಷ್ಟೇ ಪ್ರಭಾವಿಸಿದ್ದರೂ ಎಲ್ಲಿಂದಲೋ ಬರುತ್ತಿದ್ದ ಕ್ಷುಲ್ಲಕವಾದ ವಿಛಾರಧಾರೆಗಳು ಇಲ್ಲಿನ ಜನರ ಮುಗ್ದತೆಯಿಂದ ಬೇರಿಳಿಸಿಬಿಡುತ್ತಿದ್ದವು. ಏಕೆಂದರೆ ಹಿಂದೂ ವಿಚಾರಧಾರೆಯಲ್ಲಿ ತನ್ನ ದೇವರನ್ನು ಮಾರಾಟ ಮಾಡಬೇಕೆಂಬ ನಿಯಮವಿಲ್ಲ. ತನ್ನ ದೇವರಲ್ಲದವರನ್ನು ಕೊಲ್ಲುವುದು ಗೊತ್ತಿಲ್ಲ. ಹಾಗಾಗಿ ವಿದೇಶಿ ಮೂಲದ ಕೋಪಾವಿಷ್ಟ ಮುಖವನ್ನು ಹೊತ್ತ ವಿಚಾರಧಾರೆಗಳು ಭಾರತೀಯತೆಯ ಮೇಲೆ ಪ್ರಹಾರವನ್ನೂ ಮಾಡಿಬಿಡುತ್ತಿದ್ದವು. ಕ್ರಮೇಣ ಹಿಂದೂ ಚಿಂತನೆ ಈ ಪ್ರಹಾರಗಳಿಗೆ ತಕ್ಕ ಉತ್ತರವನ್ನು ಕೊಟ್ಟಿದ್ದರೂ ಅದಕ್ಕೆ ವೈಚಾರಿಕವಾದ ಉತ್ತರವನ್ನು ಕೊಟ್ಟಿದ್ದು ಇಲ್ಲವೇ ಇಲ್ಲವೆಂದು ಹೇಳಬೇಕು. ಆ ಕಾರಣಕ್ಕೆ ಸೆಮಿಟಿಕ್ ಮತಗಳು ಭಾರತದಲ್ಲಿ ಮತ್ತಷ್ಟು ಪಸರಿಸಲಾರಂಭಿಸಿದವು. ದಿನ ಕಳೆದಂತೆ ಅವು ಮತ್ತೊಂದು ಮಗ್ಗುಲಿಗೆ ಹೊರಳಿಕೊಂಡವು. ಇಸ್ಲಾಮಿನ ಆಚರಣೆಗಳಿಗೆ, ಸೆಕ್ಯುಲರಿಸಮ್ಮಿನ ವ್ಯಾಖ್ಯಾನಗಳಿಗೆ ಹೊಸ ಅರ್ಥಗಳು ಸೇರಿಕೊಂಡವು. ಇವೆಲ್ಲಾ ಮೆರವಣಿಗೆ ಹೊರಟ ರಾಜನನ್ನೂ ಅದನ್ನು ಹೊಗಳಿದ ಪ್ರಜಾವರ್ಗವನ್ನೂ ನೆನಪಿಗೆ ತಂದವು. ಅಂದರೆ ಹಿಮದುಗಳು ಅವರೆಲ್ಲರ ಅತಿರೇಕವನ್ನು ತಿಳಿದರೂ ಹೇಳದಂತಿದ್ದರು. ಆಗ ಹೊರಬಂದಿದ್ದೇ voice of india ಪುಸ್ತಕ ಮಾಲಿಕೆಗಳು. ಇಸ್ಲಾಂ-ಕ್ರೈಸ್ತ-ಮಾರ್ಕ್ಸ್ ವಾದದ ಹುಚ್ಚುತನಗಳಿಗೆ ಪ್ರತಿಕ್ರಯಿಸುವ , ಅವುಗಳ ಒಡಲಿನ ನೈಜತೆಯನ್ನು ಹೆಕ್ಕುವ ಸಾಹಸಕ್ಕೆ voice of india ಕೈಹಾಕಿತು. ಅಂಥ ವಿಚಾರಗಳಿಗೆ ಕಟುವಾದ ವಿಮರ್ಶೆಗಳೂ ಅಪ್ಪಟ ದೇಶಿ ಶೈಲಿಯ ವಿಚಾರ ಮಂಡನೆಯದ್ದೂ ಅಗತ್ಯವಿತ್ತು. ಅದುವರೆಗೆ ಇದ್ದ ಈ ಕೊರತೆಯನ್ನುvoice of india ನಿವಾರಿಸಿತು. ಭಾರತದ ಉದ್ದಗಲದ ಸಂಶೋಧನೆಯನ್ನು ಮಾಡಿತು. ಇಸ್ಲಾಮಿನ ಕ್ರೌರ್ಯಗಳ ಬಗ್ಗೆ ಸಾಕ್ಷ್ಯಗಳನ್ನು ಕಲೆಹಾಕಿತು. ರಾಷ್ಟ್ರದ ಖ್ಯಾತ ಸಂಶೋಧಕರಾದ ರಾಮ್ ಸ್ವರೂಪ್, ಸೀತಾರಾಮ್ ಗೋಯಲ್, ಕೊನ್ರಾಡ್ ಎಲ್ಟ್ಸ್, ಡೇವಿಡ್ ಫ್ರಾಲಿ, ಕೆ.ಎಸ್ ಲಾಲ್, ಎನ್.ಎಸ್. ರಾಜಾರಾಂ, ಅರುಣ್ ಶೌರಿ, ಹರ್ಷ ನಾರಾಯಣ್,ಸುಹಾಸ್ ಮಜುಂದಾರ್, ರಾಜೇಂದ್ರ ಸಿಂಗ್, ಸಂತ ಆರ್.ಎಸ್. ನಿರಾಲಾ, ಶ್ರೀಕಾಂತ ತಲಗೇರಿ, ಎ.ಕೆ. ಚಟರ್ಜಿ ಮುಂತಾದವರು voice of india ದ ವೇದಿಕೆಯಡಿಯಲ್ಲಿ ಸತ್ಯದ ಹುಡುಕಾಟವನ್ನು ಕೈಗೊಂಡರು. ಅವರಲ್ಲರೂ ಉದ್ದಾಮ ಪಂಡಿತರೇ. ಆದರೂ ಆರಂಭದಲ್ಲಿ ಅವರ ಪುಸ್ತಕಗಳನ್ನು ಯಾರೂ ಗಂಭೀರವಾಗಿ ಪರಿಗಣಿಸಲೇ ಇಲ್ಲ. ಮುಂದೆ ಪುಸ್ತಕದಲ್ಲಿ ಉಲ್ಲೇಖಿತ ಕಟು ಸತ್ಯಗಳೇ ಸಮಕಾಲೀನ ಇಸ್ಲಾಮಿನ ಅಜೆಂಡಾ ಆದಾಗ ಜನರಿಗೆ ಮೆಲ್ಲಮೆಲ್ಲನೆvoice of india ದ ಮಹತ್ತ್ವ ಗೊತ್ತಾಗಲಾರಂಭಿಸಿತು. ಈ ಸರಣಿ ಪುಸ್ತಕಗಳು ಭಾರತದ ಅನ್ಯಾನ್ಯ ಭಾಷೆಗಳಿಗೆ ಅನುವಾದಗೊಂಡವು. ಇದೀಗ voice of india ದ ಎಂಟು ಪುಸ್ತಕಗಳು ಕನ್ನಡದಲ್ಲಿ ಬಂದಿವೆ.
ಭಾರತದಲ್ಲಿ ಹಿಂದುತ್ವದ ಎರಡನೆಯ ಪ್ರಯೋಗಶಾಲೆ ಎಂಬ ಆಪಾದನೆಯನ್ನು ಹೊತ್ತಿರುವ ಕರ್ನಾಟಕದಲ್ಲಿ ಈ ಪುಸ್ತಕಗಳು ಹೊರಬರಬೇಕಾದ ಅನಿವಾರ್ಯತೆ ಇತ್ತು. ಏಕೆಂದರೆ ಸಮಕಾಲೀನ ಕರ್ನಾಟಕವನ್ನು ಕಾಡುತ್ತಿರುವ ಮತಾಂಧತೆಗೊಂದು ಅರ್ಥ ಸಾಧ್ಯತೆಯನ್ನು ಈ ಪುಸ್ತಕಗಳು ಕೊಡುತ್ತವೆ. "ಹದೀಸ್ ಚಿತ್ರಿಸುವ ಇಸ್ಲಾಂ: ಮತ ವಿಶ್ವಾಸವೋ? ಮತಾಂಧತೆಯೋ?", " ಇಸ್ಲಾಂ ಆಕ್ರಾಂತ ಹಿಂದೂ ದೇವಾಲಯಗಳು", "ಜಿಹಾದ್ - ಎಂದೂ ಮುಗಿಯದ ಇಸ್ಲಾಂ ಯುದ್ಧ ಸಿದ್ದಾಂತ", "ದಿಗ್ಧಂಧನದಲ್ಲಿ ಹಿಂದೂ ಸಮಾಜ", ಮುಸ್ಲಿಂ ಪ್ರತ್ಯೇಕಾವಾದದ ಕಾರಣ- ಪರಿಣಾಮ", "ಮಧ್ಯ ಯುಗೀನ ಭಾರತದಲ್ಲಿ ಪರಿಶಿಷ್ಟ ವರ್ಗ-ಜಾತಿಗಳ ವೃದ್ಧಿ", "ಭಾರತದ ಸೆಕ್ಯುಲರಿಸಂ","ಯಾರು ಈ ಭಾರತೀಯ ಮುಸಲ್ಮಾನರು" ಎಂಬ ಎಂಟು ಪುಸ್ತಕಗಳಲ್ಲಿ ಎದೆ ನಡುಗಿಸುವ ಸಂಗತಿಗಳಿವೆ, ಎದೆ ಹಿಂಡುವ ನೋವುಗಳಿವೆ.
" ಜಿಹಾದ್ ಎಂಬುದು ಮನಸ್ಸಿನ ವಿರುದ್ಧ ನಮ್ಮದೇ ಸಮರ" ಎಂಬ ಮಸ್ಲಿಮರ ಸಮರ್ಥನೆ ಎಷ್ಟು ಸರಿ ಎಂಬುದರಿಂದ ಹಿಡಿದು ಮಹಮ್ಮದರ ಎಲ್ಲಾ ಹೇಳಿಕೆಗಳು, ಅವರ ನಡೆ ನುಡಿಗಳನ್ನು ಮೂಲ ಸಾಹಿತ್ಯದಿಂದಲೇ ಶೋಸಿದ ಸಂಗತಿಗಳು ಈ ಪುಸ್ತಕಗಳಲ್ಲಿವೆ. ಮುಸ್ಲಿಮರೇಕೆ ತಮ್ಮ ನಮಾಜಿನ ಅನಂತರ ವಿಪರೀತ ವ್ಯಗ್ರತೆಯನ್ನು ತಾಳುತ್ತಾರೆ? ಇಂದಿಗೂ ಮುಸಲ್ಮಾನರಿಗೇಕೆ ಹಿಂದೂ ದೇವಾಲಯಗಳ ಮೇಲೆ ಕೋಪವಿದೆ?ಮೂರ್ತಿ ಪೂಜಕರನ್ನು ಶತಾಯಗತಾಯ ಮುಗಿಸಿಬಿಡಬೇಕೆಂಬ ಭಯೋತ್ಪಾದಕ ಮನಸುಗಳು ಇವತ್ತಿಗೂ ಇರುವುದೇಕೆ? ಅವರು ರೈಲಿನಲ್ಲೋ, ಮೈದಾನದಲ್ಲೋ ಜಾಗದ ಪರಿವೆಯೇ ಇಲ್ಲದೆ ಲ್ಲೆಂದರಲ್ಲಿ ಪ್ರಾರ್ಥನೆಗೆ ಕುಳಿತುಬಿಡುತ್ತಾರೇಕೆ? ಪ್ರಾರ್ಥನೆಯ ವೇಳೆ ವೊರೆಯಿಡುವಾಗ ತಮ್ಮ ಕಣ್ಣುಗಳನ್ನು ಆಕಾಶದತ್ತ ಎತ್ತುವುದನ್ನು ಏಕೆ ತಪ್ಪಿಸುತ್ತಾರೆ?(ಹದೀಸ್ ಹೇಳುವ ಇಸ್ಲಾಂ, ಪುಟ ೩೦) ಮತಾಂಧರೆಲ್ಲರೂ ಕಾಮಾಂಧರೇ ಆಗಿರುತ್ತಾರೆ ಏಕೆ? ಎಷ್ಟೇ ಬುದ್ಧಿವಂತನಾದರೂ, ಆಧುನಿಕ ವಿದ್ಯಾವಂತನಾದರೂ ಆತ ಹಿಂದೂ ಎಂದಾಗ ಮುಖ ಸಿಂಡರಿಸಿಕೊಳ್ಳುವುದೇಕೆ? ಎಂಬುದಕ್ಕೆಲ್ಲಾ ಇಸ್ಲಾಮಿನ ಮತಗ್ರಂಥಗಳಲ್ಲಿರುವ ಸಮರ್ಥನೆ, ಕಾರಣಗಳ ವಿವರ ಈ ಪುಸ್ತಕದಲ್ಲಿವೆ. ಎಲ್ಲಾ ಪುಸ್ತಕಗಳಲ್ಲೂ ಆಯಾಯ ಸಂಗತಿಗಳಿಗೆ ಸಂಬಂಧಪಟ್ಟ ಅಡಿಟಿಪ್ಪಣಿಗಳು, ಆದಾರಗಳು, ಅನುಬಂಧಗಳಿವೆ.
voice of india ದ ಈ ಎಂಟು ಪುಸ್ತಕಗಳನ್ನು ಓದಿದರೆ ನೀವು ಮುಂದೆಂದೂ ಇಸ್ಲಾಮಿನ ಕ್ರೌರ್ಯಗಳ ಬಗ್ಗೆ ಚಕಿತರಾಗದಿರುವಿರಿ. ಸ್ವತಃ ಹದೀಸಿನಲ್ಲೇ ಹೀಗೆ ಹೇಳಿದ ಮೇಲೆ ಬುಖಾರಿಯೋ, ಗೋಹಂತಕರೋ, ಲವ್ ಜಿಹಾದಿಯೋ ಹೀಗಿರುವುದು ಸಹಜವೇ ಬಿಡಿ ಎಂಬ ತೀರ್ಮಾನಕ್ಕೆ ಬರುವಿರಿ. ಈ ಎಂಟು ಪುಸ್ತಕವನ್ನೋದಿದರೆ ನೀವು ಕೋಮು ಸೌಹಾರ್ಧದ ಮುಖವಾಡ ಹೊದ್ದಿರುವ ಸಂತರ, ದರ್ಗಾಗಳ ನೈಜ ಇತಿಹಾಸವನ್ನು ಅರಿಯುವಿರಿ. ಈ ಎಂಟು ಪುಸ್ತಕವನ್ನೋದಿದರೆ ನೀವು "ಅಜಾನ್" ನ ಉದ್ದೇಶವನ್ನು ತಿಳಿಯುವಿರಿ, ಮೈಕಿನಿಂದ ಬರುವ " ಮುವಜ್ಜಿನ್" ನ ದನಿಯನ್ನು ಆಲಿಸಲು ತೊಡಗುವಿರಿ, ಈ ಎಂಟು ಪುಸ್ತಕವನ್ನೋದಿದರೆ ನೀವು ಅಯೋಧ್ಯೆ-ಮಥುರಾ-ಕಾಶಿಯ ಸ್ಥಿತಿಗೆ ಸ್ಪಷ್ಟ ಕಾರಣಗಳನ್ನು ಹುಡುಕುವಿರಿ, ಈ ಎಂಟು ಪುಸ್ತಕವನ್ನೋದಿದರೆ ನೀವು ದೇಶ ವಿಭಜನೆಗೆ ಜಿನ್ನಾ ಒಬ್ಬನನ್ನೇ ಹೊಣೆ ಮಾಡಲಾರಿರಿ, ಈ ಎಂಟು ಪುಸ್ತಕವನ್ನೋದಿದರೆ ನೀವು ಶತಮಾನಗಳ ಹಿಂದಿನ ವ್ಯಕ್ತಿತ್ವವೊಂದನ್ನು ಬಸ್ಸಿನಲ್ಲಿ, ಪೇಟೆಯಲ್ಲಿ , ಕಾಲೇಜಿನಲ್ಲಿ, ರಸ್ತೆಯಲ್ಲೆಲ್ಲಾ ಕಾಣುವಿರಿ. ಈ ಎಂಟು ಪುಸ್ತಕವನ್ನೋದಿದರೆ ನೀವು ನಗ್ನ ರಾಜನು ತೊಡದ ಪೀತಾಂಭರವನ್ನು ಹೊಗಳುವವರನ್ನು ಕಂಡು ವಿಷಾದವನ್ನು ವ್ಯಕ್ತಪಡಿಸುವಿರಿ.

Tuesday, April 3, 2012

ಕಾಡು ಮುಗಿಯಿತು, ಇನ್ನು ನಾಡಿನ ಅಧಿಕಾರ


ಜ್ನಾನಪೀಠ ಪ್ರಶಸ್ತಿ ವಿಜೇತ ಕಾದಂಬರಿಗಾರ್ತಿ ಮಹಾಶ್ವೇತಾದೇವಿಯವರ "ಅರಣ್ಯೇರ್ ಅಧಿಕಾರ್" ಎಂಬ ಬಂಗಾಳಿ ಕಾದಂಬರಿ ಪ್ರಸಕ್ತ ಕಾಡಿನ ಪರಿಸ್ಥಿತಿಗಳ ಎಡೆಯಲ್ಲಿ ಮತ್ತೆ ಮತ್ತೆ ನೆನಪಾಗುವಂಥದ್ದು. ಸ್ವಾತಂತ್ರ್ಯಪೂರ್ವದ ಘಟನೆಯನ್ನೆತ್ತಿಕೊಂಡು ಮಹಾಶ್ವೇತಾದೇವಿ ಅರಣ್ಯದ ಬುಡಕಟ್ಟು ಪಂಗಡಗಳ ಜೀವನ ಮತ್ತು ಹೋರಾಟವನ್ನು ಅದರಲ್ಲಿ ಬಿಂಬಿಸಿದ್ದರು. ಮಧ್ಯ ಭಾರತ ಮತ್ತು ಪೂರ್ವಾಂಚಲ ರಾಜ್ಯಗಳ ಕಾಡುಗಳ ವನವಾಸಿಗಳ ಬವಣೆಯನ್ನು ಅವರು ಅರಣ್ಯದ ಅಕಾರ ಉಳಿಸಿಕೊಳ್ಳುವ ಹೋರಾಟವನ್ನಾಗಿ ಚಿತ್ರಿಸಿದ್ದರು. ಕಾಡಿನ ದೇವರನ್ನು ಪೂಜಿಸುವ ಮುಗ್ದ ವನವಾಸಿಗಳು, ಕಾಡಿನೊಳಗೆ ಬಂದ ಶಾಲೆ, ಅಕ್ಷರ ಕಲಿಯಲೆಂಬ ಆಸೆಯಿದ್ದರೂ ಅಲ್ಲಿ ಕಾಡಿನ ದೇವರನ್ನು ಬಿಟ್ಟು ಬೇರೊಂದು ಹೊಸ ದೇವರನ್ನು ಪೂಜಿಸಬೇಕೆಂಬ ಷರತ್ತುಗಳು. ಹೊಸ ದೇವರನ್ನು ಪೂಜಿಸಿದರೂ ಕಾಡಿನ ದೇವರನ್ನು ಪೂಜಿಸಬಾರದೆಂಬ ಕಟ್ಟುನಿಟ್ಟುಗಳ ನಡುವೆಯೇ ಅಕ್ಷರ ಕಲಿಯಬೇಕೆಂದು ಉದ್ಭವಿಸುವ ಹಂಬಲ,ಹೊಸದೇವರನ್ನು ಎದುರುಹಾಕಿಕೊಂಡರೆ ಗುಡಿಸಲೊಳಗೆ ನುಗ್ಗಿ ಧರಧರನೆ ಎಳೆದೊಯ್ಯುವ ಪೊಲೀಸರು, ಇಷ್ಟೆಲ್ಲಾ ಆಗುತ್ತಿರುವಾಗಲೇ ಕೈಬಿಟ್ಟುಹೋದ ಅರಣ್ಯದ ಅಧಿಕಾರ. ನಿಂತುಹೋದ ಕಾಡಿನ ದೇವರ ಉತ್ಸವ,ಬಿಳಿಯಾದ ನಿಲುವಂಗಿ ತೊಟ್ಟವನ ಮುಖದ ಕ್ರೌರ್ಯ, ಶಾಲೆಯಲ್ಲಿ ಶಿಲುಭೆ ತೊಟ್ಟ ಶಿಕ್ಷಕರಿಂದ ಅನಾಗರಿಕರೆಂಬ ಕೀಳು ಮಾತುಗಳು, ಕಾಡಿನಲ್ಲಿ ಆಗಾಗ್ಗೆ ವಕ್ಕರಿಸುವ ಸಾಂಕ್ರಾಮಿಕ ರೋಗಗಳು, ಗೆಡ್ಡೆ ಜ್ವರಗಳು ಕಾಡಿನ ದೇವರನ್ನು ಮೆರೆತಿರುವುದಕ್ಕಾಗಿಯೇ ಬಂದಿದೆಯೆಂಬ ಆತಂಕ. ಈ ರೋಗಗಳ ನಿವಾರಣೆಗಾಗಿ ಹೊಸ ದೇವರ ಮದ್ದು, ಪ್ರಾರ್ಥನೆ. ಹೋರಾಟ-ಬಲಿದಾನ, ಬಿರ್ಸಾ- ಮುಂಡಾ ವೊದಲಾದ ಜನರ ನೋವುಗಳೆಲ್ಲವೂ ಕಾದಂಬರಿಯಲ್ಲಿ ಕೇವಲ ಪಾತ್ರಗಳಂತೆ ಕಾಣುವುದಿಲ್ಲ. ಅವು ಒಂದಾನೊಂದು ಕಾಲದ ಅರಣ್ಯದ ಮೂಕ ಚಿತ್ರಗಳಂತೆ ಕಾಣುತ್ತವೆ. ಮತ್ತು ಆ ಘಟನೆಗಳು ಭಾರತದ ಯಾವುದೋ ಮೂಲೆಯಲ್ಲಿ ನಡೆದವು ಎಂದೂ ಅನಿಸುವುದಿಲ್ಲ. "ಹೊಸದೇವರು" ನುಗ್ಗಿದ ಎಲ್ಲಾ ಕಾಡಿನ ಕಥೆಯಂತೆ ಯೇ ಕಾದಂಬರಿ ಕಾಣುತ್ತದೆ.
ಮಿಷನರಿಗಳು ಯಾವ ಕೆಲಸವನ್ನೂ ಸುಮ್ಮನೆ ಮಾಡುವುದಿಲ್ಲ. ಶಾಲೆಯನ್ನು ಕೇವಲ ಶಿಕ್ಷಣಕ್ಕಾಗಿ ತೆರೆಯುದೇ ಇಲ್ಲ. ಆಸ್ಪತ್ರೆಗಳನ್ನೂ ಸುಮ್ಮನೆ ಕಟ್ಟಿಬಿಡುವುದೂ ಇಲ್ಲ. ಸುಮ್ಮ ಸುಮ್ಮನೆ ಕಸಮುಸುರೆ ತೆಗೆಯುದೂ ಇಲ್ಲ. ಮಿಷನರಿಗಳು ಏನೇ ಮಾಡಿದರೂ ಅಲ್ಲಿ ಶಿಲುಭೆ ಮಾರಾಟದ ಸ್ಟಾಲುಗಳಿರುತ್ತವೆ. ಈಸ್ಟ್ ಇಂಡಿಯಾದ ಕಾಲದಿಂದ ಮಿಷನರಿ ಭಾರತದಲ್ಲಿ ಮಾಡಿದ್ದು ಅದನ್ನೇ. ಮತ್ತು ಇಂದೂ ಮಾಡುತ್ತಿರುವುದೂ ಅದನ್ನೇ. ಅಂದಿನ ಮಿಷನರಿಗಳು ಇಂದು ಎನ್‌ಜಿಒ ಗಳಾಗಿರುವುದನ್ನು ಬಿಟ್ಟರೆ ಅವರ ಪ್ರಾರ್ಥನೆ, ಮೋಡಿ, ನರಿಬುದ್ಧಿಗಳಲ್ಲಿ ಏನೂ ವ್ಯತ್ಯಾಸವಾಗಿಲ್ಲ. ಅವರ ಎಲ್ಲಾ "ಸೇವೆ"ಗಳೂ ಕ್ರೈಸ್ತನ ಮಾರಾಟಕ್ಕೊಂದು ನೆಪಗಳು ಮಾತ್ರ ಎಂಬುದು ಆಗಾಗ್ಗೆ ಬೆಳಕಿಗೆ ಬರುತ್ತಾ ಇರುತ್ತವೆ. ಸ್ವಾತಂತ್ರ್ಯ ಪೂರ್ವದಲ್ಲಂತೂ ಮಿಷನರಿಗಳು ಕಾಡುಗಳಲ್ಲಿ ತೆರೆದ ಶಾಲೆಗಳು ಮತ್ತು ಚರ್ಚುಗಳಿಗೆ ವ್ಯತ್ಯಾಸವೇ ಇರಲಿಲ್ಲ. ಶಾಲೆಗೆ ಬಂದವರು ಚರ್ಚಿಗೆ ಹೋಗಲೇಬೇಕು.ಚರ್ಚಿಗೆ ಬಂದವರು ಕಾಡಿನ ದೇವರನ್ನು ತ್ಯಜಿಸಲೇ ಬೇಕು. ಕಾಡಿನ ದೇವರನ್ನು ಬಿಟ್ಟವರು ಹೊಸದೇವರನ್ನು ಪೂಜಿಸಲೇಬೇಕು.ಇದು ವನವಾಸಿ ಕ್ಷೇತ್ರಗಳಲ್ಲಿ ಮಿಷನರಿಗಳು ನಡೆಸುತ್ತಿದ್ದ "ಸೇವಾ ಚಟುವಟಿಕೆ".
ವನವಾಸಿಗಳಂಥ ಮುಗ್ದರು ಪರಿಸ್ಥಿತಿಯ ಒತ್ತಡದಿಂದ ಹೊಸದೇವರನ್ನು ಪೂಜಿಸಬೇಕಾಯಿತು. ಒಮ್ಮೆ ಅವರು ಹೊಸದೇವರನ್ನು ಪೂಜಿಸಲಾರಂಭಿಸಿದರೋ ಮುಂದೆಂದೂ ಅವರು ಕಾಡಿನ ದೇವರನ್ನು ಕಣೆತ್ತಿಯೂ ನೋಡುವಂತಾಗಲಿಲ್ಲ. ಮಿಷನರಿಗಳ ಕಾರ್ಯ ಅಷ್ಟಕ್ಕೇ ಮುಗಿಯಲೂ ಇಲ್ಲ. ಸಂಪೂರ್ಣ ಅರಣ್ಯದ ಅಧಿಕಾರವಷ್ಟೇ ಅಲ್ಲ ಸಂಪೂರ್ಣ ದೇಶವೇ ತನ್ನ ಹಿಡಿತಕ್ಕೆ ಬರಬೇಕು. ಅದಕ್ಕಾಗಿ ಕಾಡಿನ ಮಕ್ಕಳೇ ಆಗಬೇಕು ಎಂಬ ಆಲೋಚನೆಯೋ ದೂರ್ತ ಪಾದ್ರಿಗಳ ತಲೆಯೊಳಗೆ ಹೊಕ್ಕಿತು.ಹೊಸ ದೇವರನ್ನು ಒಪ್ಪಿಕೊಂಡ ಕಾಡಿನ ಮಕ್ಕಳನ್ನು ದ್ವೇಷ ಕುಡಿಸಿ ಬೆಳೆಸಲಾಯಿತು. ಆ ಮಕ್ಕಳಿಂದ ಕಾಡಿನ ದೇವರ ಮಕ್ಕಳನ್ನು ಬೆದರಿಸಲಾಯಿತು. ಕೆಲವರ ಕೈಗೆ ಶಸ್ತ್ರವನ್ನು ಕೊಡಲಾಯಿತು. ಕೆಲವರ ಕೈಗೆ ಪೆನ್ನನ್ನು ಕೊಡಲಾಯಿತು. ಪೆನ್ನು ಹಿಡಿದವರೂ ಶಸ್ತ್ರವನ್ನು ಬೆಂಬಲಿಸಿದರು. ಏನೇ ಕೊಟ್ಟರೂ ಇನ್ನೊಂದು ಕೈಯಲ್ಲಿ ಬೈಬಲ್ ಇದ್ದೇ ಇತ್ತು.ಮಿಷನರಿಗಳ ಅಂದಿನ ದೂರ್ತ ದೂರಾಲೋಚನೆಯ ಕಾರಣದಿಂದ ಇಂದು ಉತ್ತರ ಭಾರತದ ಮಧ್ಯ ಮತ್ತು ಪೂರ್ವಾಂಚಲದ ರಾಜ್ಯಗಳು ದಿನ ನಿತ್ಯ ಸುದ್ಧಿಗೆ ಗ್ರಾಸವಾಗುತ್ತಿದೆ. ಹಲವು ರಾಜ್ಯಗಳು ಹೆಸರಿಗಷ್ಟೇ ಭಾರತದ ಭೂಪಟದಲ್ಲಿವೆ.
೨೦೦೧ರ ಜನಗಣತಿಯ ಆಧಾರದಲ್ಲಿ ದೇಶದಲ್ಲಿ ಒಟ್ಟು ೮೪ ದಶಲಕ್ಷ ಪರಿಶಿಷ್ಟ ಪಂಗಡದ ಜನಸಂಖ್ಯೆ ಇತ್ತು. ಇದು ಮಧ್ಯ ಭಾರತ ಎಂದು ಕರೆಯಲ್ಪಡುವ ಜಾರ್ಖಂಡ್, ಛತ್ತೀಸ್‌ಗಢ, ಓರಿಸ್ಸಾ ಮತ್ತು ಬಿಹಾರಗಳ, ಮಧ್ಯ ಪ್ರದೇಶ, ಮಹಾರಾಷ್ಟ್ರ ,ಆಂಧ್ರದ ಕೆಲವು ಜಿಲ್ಲೆಗಳನ್ನೊಳಗೊಂಡ ಒಟ್ಟು ಜನಸಂಖ್ಯೆಯ ಮೂರನೇ ಒಂದರಷ್ಟು. ಅಂದರೆ ಈ ಭಾಗ ದೇಶದ ಮೂಲ ಸಂಸ್ಕೃತಿ, ಮೂಲ ಪರಂಪರೆ, ಜನಪದ ಕಲೆ, ಶ್ರೀಮಂತ ಇತಿಹಾಸವನ್ನು ರೂಪಿಸಿದ ಜನಸಮುದಾಯವನ್ನು ಹೊಂದಿರುವ ಪ್ರದೇಶ. ಅದೇ ರೀತಿ ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ಕೇರಳ ಭಾಗಗಳಲ್ಲಿ ಒಟ್ಟು ೮ ದಶಲಕ್ಷ ಪರಿಶಿಷ್ಟ ಪಂಗಡದ ಜನರು ಮತ್ತು ಉತ್ತರದ ಜಮ್ಮು ಮತ್ತು ಕಾಶ್ಮೀರ , ಹಿಮಾಚಲ ಪ್ರದೇಶ, ಉತ್ತರ ಖಂಡ ಪ್ರದೇಶಗಳಲ್ಲಿ ೨ದಶಲಕ್ಷ ಸಂಖ್ಯೆಯಲ್ಲಿ ಪರಿಶಿಷ್ಟ ಪಂಗಡದ ಜನರಿದ್ದಾರೆ. ಪೂರ್ವ ಭಾಗದಲ್ಲಿ ೧೪ ದಶಲಕ್ಷ ಪರಿಶಿಷ್ಟರಿದ್ದಾರೆ. ಅಂದರೆ ದೇಶದ ಬಹುದೊಡ್ಡ ಪ್ರಮಾಣದ ಜನವರ್ಗ ಈ ಪರಿಶಿಷ್ಟ ಪಂಗಡ ಎಂದಾಯಿತು. ಇಂದು ಭಾರತದಲ್ಲಿ ಮೂಲಸಂಸ್ಕೃತಿ ಎಂದು ಯಾವುದನ್ನು ಹೇಳುತ್ತೇವೋ ಅದನ್ನು ಬೆಳೆಸಿ, ಉಳಿಸಿಕೊಂಡು ಬಂದವರು ಈ ಸಮುದಾಯದವರು. ಪ್ರಾಚೀನ ಋಷಿ ಮೂಲವನ್ನು ನೋಡಿದರೂ ಅಲ್ಲಿ ಕಾಣುವುದು ಆಧುನಿಕದಲ್ಲಿ ಪರಿಶಿಷ್ಟ ಪಂಗಡವೆಂದು ಕರೆಸಿಕೊಳ್ಳುವ ವರ್ಗಗಳೇ. ಹಲವೊಮ್ಮೆ ರಾಜರಾಗಿ, ಇನ್ನು ಕೆಲವೊಮ್ಮೆ ರಾಜರ ಬಂಟರಾಗಿ, ವ್ಯಾಪಾರಿಗಳಾಗಿ ಸಮಾಜದ ಅನ್ಯಾನ್ಯ ಜವಾಬ್ದಾರಿಗಳನ್ನು ನಿರ್ವಹಿಸಿದವರು ಇವರು. ಕೆಲವು ಪ್ರದೇಶಗಳಲ್ಲಿ ಇವರು ವನವಾಸಿಗಳು. ಇನ್ನು ಕೆಲವೆಡೆ ಕಾಲದ ಬದಲಾವಣೆಯಲ್ಲಿ ಸಮಾಜ ಸಾಗರದಲ್ಲಿ ಬೆರೆತುಹೋದವರು.ಇವರಲ್ಲಿ ಉತ್ತರ ಭಾರತದ ಪರಿಶಿಷ್ಟ ಪಂಗಡಗಳ ಇತಿಹಾಸವನ್ನು ಗಮನಿಸಿದರೆ ಸತತ ಹೊಡೆತಕ್ಕೊಳಗಾದ ಸಂಗತಿಗಳೇ ಎದ್ದು ಕಾಣುತ್ತದೆ. ಮಹಾಶ್ವೇತಾದೇವಿಯವರ "ಅರಣ್ಯೇರ್ ಅಧಿಕಾರ್" ನ ಪಾತ್ರಗಳು ರೂಪ ತಳೆದಿದ್ದು ಇಂಥದ್ದೇ ವನವಾಸಿ ಕ್ಷೇತ್ರಗಳಲ್ಲಿ.
ಅಂದು ಹೊಸ ದೇವರನ್ನು ತಂದು ಶಾಲೆಯಲ್ಲಿಟ್ಟು ಪಾಠ ಮಾಡಿದ ಪರಿಣಾಮವಾಗಿ ಇಂದು ಮಿಷನರಿಗಳು ಹುಲುಸಾದ ಬೆಳೆ ತೆಗೆದಿವೆ. ದೇಶದ ಒಟ್ಟು ೮೪ ದಶಲಕ್ಷ ಪರಿಶಿಷ್ಟ ಪಂಗಡಗಳಲ್ಲಿ ಇಂದು ೭೮ ದಶಲಕ್ಷ ಜನರು ಮಾತ್ರ ಹಿಂದೂ-ಬೌದ್ಧರು. ೧.೨ ದಶಲಕ್ಷ ಪರಿಶಿಷ್ಟ ಪಂಗಡ ಮುಸ್ಲಿಮರು ಮತ್ತು ೮ ದಶಲಕ್ಷ ಪರಿಶಿಷ್ಟ ಪಂಗಡದ ಜನರು ಕ್ರಿಶ್ಚಿಯನ್ನರು. ಎಲ್ಲವೂ ಸರಿ ಇದ್ದಿದ್ದರೆ ಇದು ಹೇಗೆ ಸಾಧ್ಯವಾಗುತ್ತಿತ್ತು? ಪರಿಶಿಷ್ಟ ಪಂಗಡ ಎಂದರೆ ಕೇವಲ ಕಾಗದ ಪತ್ರಗಳಿಗೆ ಬರುವಂಥ ಅರ್ಹತೆಯಲ್ಲ. ಹೇಗೆ ಜಾತಿ ಎನ್ನುವುದು ಹುಟ್ಟಿನಿಂದ ಬರುವಂಥ ಸಂಗತಿಯಲ್ಲವೋ ಹಾಗೆಯೇ ಕ್ರಿಶ್ಚಿಯನ್ ಪರಿಶಿಷ್ಟ ಪಂಗಡ, ಕ್ರಿಶ್ಚಿಯನ್ ಬುಡಕಟ್ಟು ಜನಾಂಗ ಎನ್ನುವುದೂ ಸಾಧ್ಯವಿಲ್ಲ. ಏಕೆಂದರೆ ಪರಿಶಿಷ್ಟ ಪಂಗಡ ಎನ್ನುವುದು ಒಂದು ವಿಶೇಷತೆ. ಅರ್ಹತೆ ಎಂದರೂ ಸರಿಯೇ.ಎಲ್ಲಿನದೋ ಶಿಲುಭೆಯನ್ನು ಕಾಡಿನ ದೇವರ ಸ್ಥಾನದಲ್ಲಿ ತಂದು ನೆಟ್ಟರೆ ಆ ಬುಡಕಟ್ಟು ಮೂಲಸಂಸ್ಕೃತಿಯನ್ನು ಉಳಿಸಿಕೊಂಡಿರುವುದಿಲ್ಲ. ಆದರೆ ಭಾರತದಲ್ಲಿ ಅಂಕೆಸಂಖ್ಯೆಗಳದ್ದೇ ಆಟ ನಡೆಯುದರಿಂದ ಎಲ್ಲವೂ ಸಂಭವಿಸುತ್ತವೆ. ಕಾಡಿನ ದೇವರ ಜಾಗದಲ್ಲಿ ಹೊಸ ದೇವರು ಬಂದರೂ ದಾಖಲೆಗಳ ಪ್ರಕಾರ ಪರಿಶಿಷ್ಟ ಪಂಗಡದ ಸ್ಥಾನ ಮಾನವನ್ನೇ ಉಳಿಸಿಕೊಳ್ಳುವ ಹುನ್ನಾರವನ್ನು ಮಿಷನರಿಗಳು ಮಾಡಿದ್ದಾರೆ. ಹಾಗಾಗಿ ದೇಶದಲ್ಲಿ ಆಗಬಾರದ್ದು ಆಗುತ್ತಿದೆ.
ಚೆನ್ನೈ ಮೂಲದ centre for policy studies-2011 ನ SCHEDULED TRIBES OF INDIA: RELIGIOUS DEMOGRAPHY AND REPRESENTATION ಎಂಬ ವರದಿಯನ್ನು ನೋಡಿದಾಗ ಇದು ಮಹಾಶ್ವೇತಾದೇವಿಯವರ ಕಾದಂಬರಿಯ ಮುಂದುವರಿದ ಭಾಗವೇನೋ ಎನಿಸುತ್ತದೆ.
ಆ ವರದಿ ಹೀಗೆ ಹೇಳುತ್ತದೆ:
ಅರುಣಾಚಲ ಪ್ರದೇಶದಲ್ಲಿ ೨೦೦೯ರಲ್ಲಿ ಸಿವಿಲ್ ಹುದ್ದೆಗಳಲ್ಲಿ ೧೬ ಜನರು ಆಯ್ಕೆಯಾದರು. ಇವರಲ್ಲಿ ೧೩ ಜನರು ಪರಿಶಿಷ್ಟ ಪಂಗಡ ದವರು.ಈ ೧೩ ಜನರಲ್ಲಿ ೭ ಜನರು ಕ್ರಿಶ್ಚಿಯನ್ನರು.ಇವರಲ್ಲಿ ೬ ಜನರನ್ನು ಕ್ರಿಶ್ಚಿಯನ್ನರು ಎಂಬ ಒಂದೇ ಕಾರಣಕ್ಕಾಗಿ ನೇರವಾಗಿ ನೇಮಕ ಮಾಡಿಕೊಳ್ಳಲಾಗಿತ್ತು. ಅಲ್ಲದೆ ೧೦ ಮಂದಿ ಐಎಸ್ ದರ್ಜೆಯ ಅಕಾರಿಗಳ ನೇಮಕವಾದಾಗಲೂ ಅವರಲ್ಲಿ ೫ ಮಂದಿ ಕ್ರಿಶ್ಚಿಯನ್ನರಿದ್ದರು. ಇವರೆಲ್ಲರ ನೇಮಕದಲ್ಲಿ ಕ್ರಿಶ್ಚಿಯನ್ನರಿಗೆ ಪ್ರಾಧಾನ್ಯವನ್ನು ನೀಡಲಾಗಿತ್ತು.
ನಾಗಾಲ್ಯಾಂಡ್‌ನಲ್ಲಿ ಸಿವಿಲ್ ಅಕಾರಿಗಳ ಹುದ್ದೆಗಳಿಗೆ ನೇಮಕವಾದ ೨೮ ಜನರಲ್ಲಿ ಎಲ್ಲರೂ ಕ್ರಿಶ್ಚಿಯನ್ನರಾಗಿದ್ದರು. ಐಎಸ್ ದರ್ಜೆಯ ೨೨ ಅಧಿಕಾರಿಗಳಲ್ಲಿ ಎಲ್ಲರೂ ಪರಿಶಿಷ್ಟ ಪಂಗಡದ ಕ್ರಿಶ್ಚಿಯನ್ನರೇ. ಮಣಿಪುರದಲ್ಲಿ ಸಿವಿಲ್ ಅಧಿಕಾರಿ ಹುದ್ದೆಗಳಿಗೆ ಆಯ್ಕೆಯಾದ ೪೮ ಜನರಲ್ಲಿ ೨೫ ಮಂದಿ ಪರಿಶಿಷ್ಟ ಪಂಗಡವರು. ವಿಚಿತ್ರವೆಂದರೆ ಅವರೆಲ್ಲರೂ ಕ್ರಿಶ್ಚಿಯನ್ನರು.
ಮಿಜೋರಾಂ ನಲ್ಲಿ ೨೦೦೯ರಲ್ಲಿ ೨೦ ಸಿವಿಲ್ ದರ್ಝೆಯ ಅಧಿಕಾಗಳು ನೇಮಕವಾದರು. ಅವರಲ್ಲಿ ೧೫ ಜನರನ್ನು ನೇರವಾಗಿ ನೇಮಕ ಮಾಡಿಕೊಳ್ಳಲಾಗಿತ್ತು. ಇವರೆಲ್ಲರೂ ಪರಿಶಿಷ್ಟ ಪಂಗಡದ ಕ್ರಿಶ್ಚಿಯನ್ನರು. ಮೇಘಾಲಯದಲ್ಲಿ ೧೮ ಮಂದಿ ಸಿವಿಲ್ ಅಧಿಕಾರಿಗಳಲ್ಲಿ ೧೬ ಜನರು ಕ್ರಿಶ್ಚಿಯನ್ನರು. ತ್ರಿಪುರಾದಲ್ಲಿ ೭ ಜನ ಐಎಸ್ ದರ್ಜೆಯ ಅಕಾರಿಗಳಲ್ಲಿ ಇಬ್ಬರು ಕ್ರಿಶ್ಚಿಯನ್ನರು.ಅಸ್ಸಾಮಿನ ೧೯ ಜನ ಉನ್ನತ ಅಕಾರಿಗಳು ಪರಿಶಿಷ್ಟ ಪಂಗಡದ ಅಧಿಕಾರಿಗಳಾಗಿದ್ದರು. ಅವರಲ್ಲಿ ೯ ಜನಪರಿಶಿಷ್ಟ ಪಂಗಡದ ಕ್ರೈಸ್ತರು. ಹೀಗೆ ಮಿಷನರಿಗಳ ಕಾಡಿನ ಹಾದಿ ಕಾಡಿಗಷ್ಟೇ ಸೀಮಿತವಾಗಿಲ್ಲ. ಅಂದು ಇವರ ಉದ್ದೇಶ ಕೇವಲ ಅರಣ್ಯದ ಅಧಿಕಾರ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಈ ಮಿಷನರಿಗಳ ಅಸಲು ಉದ್ದೇಶ ದೇಶದ ಅಕಾರವೇ ಎನ್ನುವುದು ಈ ವರದಿಯಿಂದ ಸ್ಪಷ್ಟವಾಗುತ್ತದೆ. ಇನ್ನೂ ಒಂದು ಎದೆ ನಡುಗಿಸುವ ಸಂಗತಿಯೆಂದರೆ ಪೂರ್ವಾಂಚಲದ ಏಳು ರಾಜ್ಯಗಳ ಜನಸಂಖ್ಯೆ( ೨೦೦೧ರ ಜನಗಣತಿಯ ಆಧಾರದಲ್ಲಿ) ೩೮೪ ಲಕ್ಷ . ಇದರಲ್ಲಿ ೧೦೫ ಲಕ್ಷ ಪರಿಶಿಷ್ಟ ಪಂಗಡಗಳದ್ದು. ಅಂದರೆ ಒಟ್ಟು ಜನಸಂಖ್ಯೆಯ ಶೇ. ೨೭ರಷ್ಟು ಪರಿಶಿಷ್ಟ ಪಂಗಡಗಳದ್ದು.ಈ ೧೦೫ ಲಕ್ಷ ಪರಿಶಿಷ್ಟ ಪಂಗಡದ ಸಂಖ್ಯೆಯಲ್ಲಿ ೫೫ ಲಕ್ಷ ಕ್ರೈಸ್ತರದ್ದು. ಇದೇ ಅಲ್ಲದೆ ಪರಿಶಿಷ್ಟ ಪಂಗಡ ಅಲ್ಲದ ಜನರೂ ಕ್ರಿಶ್ಚಿಯನ್ನರಾಗಿ ಹಲವು ರಾಜ್ಯಗಳು ಕ್ರೈಸ್ತಬಾಹುಳ್ಯದ ರಾಜ್ಯಗಳಾಗಿವೆ.ಇನ್ನು ಜಾರ್ಖಂಡ್ , ಛತ್ತೀಸ್‌ಗಢಗಳಲ್ಲಿ ಕೂಡ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಎಲ್ಲೆಲ್ಲಿ ಅರಣ್ಯಗಳಿವೆಯೋ, ಎಲ್ಲಲ್ಲಿ ಕಾಡಿನ ದೇವರನ್ನು ಕಿತ್ತುಹಾಕಲಾಗಿವೆಯೋಅಲ್ಲೆಲ್ಲಾ ಇಂದು ಕ್ರೈಸ್ತ ಸಾಮ್ರಾಜ್ಯ ಬೆಳೆದಿವೆ. ಇದನ್ನು ಕ್ರೈಸ್ತ ಸಾಮ್ರಾಜ್ಯವಾದ ಎಂದು ಕರೆಯಬೇಕಲ್ಲದೆ ಬೇರೇನೂ ಹೇಳಬೇಕಾಗಿಲ್ಲ. ಕೇರಳಕ್ಕೆ ಮೆಣಸು ವ್ಯಾಪಾರದ ನೆಪದಲ್ಲಿ ಬಂದವರು ಅನಂತರ "ಸಂತ"ರೆನಿಸಿಕೊಂಡದ್ದು ಕಾಡಿನ ದೇವರನ್ನು ಕಿತ್ತುಹಾಕಿಯೇ. ಭಾರತದದ ಮರ್ಮ ಎಲ್ಲಿದೆಯೆಂದು ಮಿಷನರಿಗಳು ಅಂದೇ ಕಂಡುಹಿಡಿದಿದ್ದರು. ಮರ್ಮಾಘಾತವೇ ಗೆಲುವಿನ ಹಾದಿ ಎಂಬುದನ್ನು ವಿಶ್ವಾದ್ಯಂತ ಪ್ರಯೋಗಿಸಿದ್ದ ಮಿಷನರಿಗಳು ಇಂದಿಗೂ ಭಾರತದಲ್ಲೂ ಹಲವು ವ್ಯಾಟಿಕನ್ನಿನ ನಿರ್ಮಾಣದಲ್ಲಿ ತೊಡಗಿದ್ದಾರೆ.
ಮತಾಂತರ ಪೂಜಾಪದ್ದತಿಯ ಬದಲಾವಣೆಗಷ್ಟೇ ಸೀಮಿತವಾಗುವುದಿಲ್ಲ ಎನ್ನುವುದು ಕಾಲಕಳೆದಂತೆ ಅರಿವಾಗುತ್ತಿರುವ ಸಂಗತಿ. ಇದೀಗ ಮತಾಂತದ ಅಕಾರಿಗಳನ್ನು ಸೃಷ್ಟಿಸುವ ವರೆಗೂ ಬೆಳೆದಿದೆ ಎಂದರೆ ...?
ಅಂದು ಕಾಡಿನ ದೇವರಿಗಾಗಿ ನೂರಾರು ವನವಾಸಿಗಳ ಬಲಿದಾನವಾಯಿತು. ಕಾಡಿನ ಅಕಾರ ಬಿಟ್ಟುಕೊಡೆ ಎಂದ ಲಕ್ಷ್ಮಣಾನಂದರ ಹತ್ಯೆಯಾಯಿತು. ಕಾಡಿನೊಳಗೆ ಪ್ರವೇಶವಿಲ್ಲ ಎಂದ ದಾರಾಸಿಂಗನಿಗೆ ಜೈಲಾಯಿತು. ವನವಾಸಿಗಳನ್ನು ಮರಳುಗೊಳಿಸಿ ಕಾಮಿಸುತ್ತಿದ್ದ ಆಸ್ಟ್ರೇಲಿಯನ್ ಪಾದ್ರಿ ಗ್ರಾಂ ಸ್ಟೈನನಿಗೆ ಮರಣೋತ್ತರ ಪದ್ಮ ಪ್ರಶಸ್ತಿಯಾಯಿತು. ಮರಗಳ ಸಂದಿಯಿಂದ ಶಿಲುಭೆಗಳು ಇಣುಕಿದವು. ಜಿಂಗಲ್‌ಬೆಲ್ ಪ್ರಾರ್ಥನೆಯಾಯಿತು. ಇದೀಗ ಮಿಷನರಿಗಳಿಗೆ ಅಧಿಕಾರಿಗಳನ್ನು ಹುಟ್ಟಿಸುವ ಹುಮ್ಮಸು ಬಂದಿದೆ.ಕಾಡು ನುಂಗಿದ ಮೇಲೆ ಕಾಡಿಂದಲೇ ಹೊರಟಿತು ಮಿಷನರಿ ಬೋನು.
ಕಾಡಿನ ದೇವರಿಗೆ ಬಲಿ ಬೀಳದೆ ಕಾಲವೆಷ್ಟಾಯಿತೋ.