ಕೆಲವರ್ಷಗಳ ಹಿಂದೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರು ಅಸ್ಸಾಂ ಚಲೋ ಚಳವಳಿಯನ್ನು ಸಂಘಟಿಸಿದ್ದರು. ಅಸ್ಸಾಂನಲ್ಲಿ ತೀವ್ರಗೊಂಡಿರುವ ಬಾಂಗ್ಲಾ ವಲಸಿಗರ ನುಸುಳುವಿಕೆಯ ಬಗ್ಗೆ ಜಾಗೃತಿ ಮೂಡಿಸಲು ರಾಷ್ಟ್ರಾದ್ಯಂತ ಕಾರ್ಯಕರ್ತರು ಚಿಕನ್ ನೆಕ್ ಪ್ರದೇಶದಲ್ಲಿ ರಾಲಿ ನಡೆಸಿದ್ದರು. ಕರ್ನಾಟಕದಿಂದಲೂ ಅಸ್ಸಾಂಗೆ ಕಾರ್ಯಕರ್ತರು ತೆರಳಿದ್ದರು. ಅಸ್ಸಾಂ-ಬಾಂಗ್ಲಾ ಗಡಿಯ ಚಿತ್ರಗಳನ್ನು ಅವರು ಸೆರೆಹಿಡಿದು ತಂದಿದ್ದರು.
ಚಿತ್ರಗಳನ್ನು ನೋಡಿದಾಗ ವ್ಯವಸ್ಥೆಯ ಕ್ರೋಧವೂ, ಅಸಹಾಯಕತೆಯೂ, ಭಯವೂ, ಅಪಾಯದ ಮುನ್ಸೂಚನೆಗಳೆಲ್ಲವೂ ಏಕಕಾಲಕ್ಕೆ ಉಂಟಾಗುತ್ತಿದ್ದವು. ಹಲವೆಡೆ ಬೃಹತ್ತಾದ ಮುಳ್ಳಿನ ಬೇಲಿಗಳು. ಆದರೆ ಅಲ್ಲಲ್ಲಿ ಮನುಷ್ಯರು ಸಲೀಸಾಗಿ ಹೋಗಬಲ್ಲಷ್ಟು ನಿರಾಯಾಸದ ದಾರಿಗಳು. ಇನ್ನು ಹಲವೆಡೆಗಳಲ್ಲಿ ಒಂದು ಕಾಲು ದಾರಿಯೇ ಅಂತಾರಾಷ್ಟ್ರೀಯ ಗಡಿ ರೇಖೆ. ಇನ್ನೊಂದೆಡೆ ಪುಟ್ಟ ನದಿ. ಸಲೀಸಾಗಿ ದೋಣಿಯಲ್ಲಿ ಸಾಗಿದರೆ ವಿದೇಶ ಮುಟ್ಟಬಹುದಿತ್ತು. ಇನ್ನು ಹಲವೆಡೆಯಂತೂ ಸರಿಯಾಗಿ ಗಡಿರೇಖೆಯ ಮಧ್ಯದಲ್ಲೇ ಮನೆಯೊಂದಿತ್ತು. ಅಡುಗೆ ಮನೆ ಭಾರತದಲ್ಲಿದ್ದರೆ, ಬಚ್ಚಲು ಮನೆ ಬಾಂಗ್ಲಾದಲ್ಲಿತ್ತು. ಆದರೂ ಇವರು ಬಾಂಗ್ಲಾವಾಸಿಗಳು. ಇನ್ನೊಂದು ಚಿತ್ರದಲ್ಲಿ ದಿಡ್ಡಿ ಬಾಗಿಲಿನಂತೆ ದೊಡ್ಡದೊಂದು ಬಾಗಿಲು. ಅದಾಗಲೇ ಆ ಬಾಗಿಲಿನಲ್ಲಿ ಒಂದನ್ನು ಮುರಿದು ಸೈಕಲ್‌ಗಳಲ್ಲಿ ನುಸುಳುತ್ತಿರುವ ಬಾಂಗ್ಲ್ಲಾವಾಸಿಗಳು. ಇನ್ನೊಂದು ಚಿತ್ರದಲ್ಲಿ ನೆಪಮಾತ್ರಕ್ಕೆ ಒಂದು ಚೆಕ್‌ಪೋಸ್ಟ್. ಅಲ್ಲಿ ಸೋಮಾರಿಯಂತೆ ಕುಳಿತಿರುವ ಒಬ್ಬ ಗಡಿಭದ್ರತಾಪಡೆಯ ಸಿಬ್ಬಂದಿ. ಅವನ ಸುತ್ತಲೂ ಆಚೆಗೂ ಈಚೆಗೂ ಸರಂಜಾಮುಗಳನ್ನು ಹೊತ್ತು ಗಡಿ ದಾಟುತ್ತಿರುವ ಜನರು.
ಆ ಚಿತ್ರಗಳು ಸ್ವತಂತ್ರ, ಸಾರ್ವಭೌಮ ಭಾರತದ ಮತ್ತೊಂದು ಮುಖವನ್ನು ತೋರಿಸುತ್ತಿದ್ದವು. ನಮ್ಮ ಪ್ರಜಾಪ್ರಭುತ್ವ ತನ್ನ ಗಡಿಗೆ ಕೊಟ್ಟಿರುವ ಮಹತ್ತ್ವವನ್ನು ಅವು ಮೂಕವಾಗಿ ಹೇಳುತ್ತಿದ್ದವು.
ಹಾಗಾಗಿ ಬಾಂಗ್ಲಾ ವಲಸಿಗರನ್ನು ದಾಳಿಕೋರರು ಎಂದು ಕರೆಯುವುದೇ ಲೇಸು ಎನಿಸುತ್ತದೆ. ಅವರಾರೂ ಅಂತಾರಾಷ್ಟ್ರೀಯ ಗಡಿಯನ್ನು ನುಸುಳಿ, ಹಾರಿ, ವ್ಯವಸ್ಥೆಗೆ ಮಣ್ಣೆರಚಿ ಬಂದವರಲ್ಲ. ಒಂದು ದಾಪುಗಾಲು ಹಾಕಿ ಅಂತಾರಾಷ್ಟ್ರೀಯ ಗಡಿಯನ್ನು ದಾಟಿ ಪರ ರಾಷ್ಟ್ರದಲ್ಲಿ ಸ್ವರಾಷ್ಟ್ರಕ್ಕಿಂತಲೂ ವೈಭವದ, ನೆಮ್ಮದಿಯ ಬದುಕು ಬದುಕುತ್ತಿರುವವರು.
ಬಾಂಗ್ಲಾದಿಂದ ಬಂದ ಈ ಒರಟು ಜನರ ಮುಖ್ಯ ಕಸುಬು ಕಳ್ಳಸಾಗಾಣಿಕೆ. ಮುಖ್ಯವಾಗಿ ಗಾಂಜಾ ಕೃಷಿ ಮತ್ತು ಸರಬರಾಜು. ಬ್ರಹ್ಮಪುತ್ರಾ ಮುಖಜ ಭೂಮಿಯಲ್ಲಿ ಗಾಂಜಾ ಕ್ರಷಿ ನಡೆಸುವವರು ಬಾಂಗ್ಲಾದಿಂದ ಬಂದು ಭಾರತದ ಆಯಕಟ್ಟಿನ ಜಾಗದಲ್ಲಿ ನೆಲೆಸಿರುವವರು. ಹೀಗೆ ಬೆಳೆದ ಗಾಂಜಾವನ್ನು ಬಾಂಗ್ಲಾಕ್ಕೆ , ಅನಂತರ ಬರ್ಮಾಕ್ಕೆ, ಅಲ್ಲಿಂದ ಥಾಯ್ಲಾಂಡ್, ಸಿಂಗಾಪುರ ಮೊದಲಾದೆಡೆ ಸಾಗಿಸಲು ಮತ್ತು ಸಮಸ್ತ ಭಾರತಕ್ಕೆ ಸಾಗಿಸಲು ವ್ಯವಸ್ಥಿತ ತಂಡವೇ ಕಾರ್ಯಚರಿಸುತ್ತಿದೆ. ಹಾಗಾದರೆ ಭಾರತ ಇಂತಹ ಘಾತಕರಿಗಿರುವ ಧರ್ಮಛತ್ರವೇ?ಇದೇ ರೀತಿ ಭಾರತದಿಂದ ನಾಣ್ಯಗಳ ಸಂಗ್ರಹ ಮತ್ತು ಖರೀದಿ ಬಾಂಗ್ಲಾ ಮುಸ್ಲಿಮರ ಮತ್ತೊಂದು ದಂಧೆ. ಭಾರತದಲ್ಲಿ ಇಂದು ನಾಣ್ಯಗಳ ಅಭಾವ ತಲೆದೋರಿರುವುದಕ್ಕೆ ಈ ಮುಸ್ಲಿಮರು ಕಾರಣರೇ ಹೊರತು ಖಂಡಿತಾ ಆರ್.ಬಿ.ಐ ಅಲ್ಲ. ಈ ನಾಣ್ಯಗಳನ್ನು ಬಾಂಗ್ಲಾಕ್ಕೆ ಕಳುಹಿಸಿ, ಕರಗಿಸಿ ಶೇವಿಂಗ್ ಬ್ಲೇಡುಗಳನ್ನು ತಯಾರಿಸುವುದು ಒಂದು ಉದ್ಯಮ. ಮಾರುಕಟ್ಟೆ ಭಾರತ. ಭಾರತ ಬಾಂಗ್ಲಾ ದೇಶಿಯರ ಪಾಲಿಗೆ ಪುಕ್ಕಟೆ ಮಾರುಕಟ್ಟೆಯಾಗಬೇಕೆ? ಹೀಗೆಯೇ ಬಾಂಗ್ಲಾ ಗಡಿಯಲ್ಲಿ ಭಾರತದ ವಿವಿಧ ಜಾತಿಗಳ ಗೋತಳಿಗಳು ಮೇಯುತ್ತಾ ಮೇಯುತ್ತಾ ಬಾಂಗ್ಲಾದ ಕಸಾಯಿಖಾನೆಗೆ ಸೇರುತ್ತವೆ. ಬಾಂಗ್ಲಾ ಗೋಮಾಂಸವನ್ನು ವಿದೇಶಗಳಿಗೆ ರಪ್ತು ಮಾಡುತ್ತದೆ. ಭಾರತವನ್ನು ಕದ್ದು ಬದುಕುವ ಬಾಂಗ್ಲಾ ಮುಸ್ಲಿಮರು ನುಸುಳುಕೋರರೇ? ದಾಳಿಕೋರರೇ?
ಸದ್ಯದ ವಿದ್ಯಮಾನಗಳು ಏಕಾ ಏಕಿ ನಡೆದುದಲ್ಲ ಎಂಬುದಕ್ಕೆ ಇವು ಕೆಲವು ಉದಾಹರಣೆಗಳು ಮಾತ್ರ. ಭಾರತದಲ್ಲೂ ಇವರ ‘ಸಹೋದರರು’ ಬಹಿರಂಗವಾದದ್ದು ಮಾತ್ರ ಹೊಸ ಬೆಳವಣಿಗೆ.