Tuesday, March 27, 2012

ಹಡಗು ಪುರಾಣವೂ ಮಾರು ವೇಷದ ಖೂಳರೂ


"ಸ್ವದೇಶೋ ಭುವನತ್ರಯಂ" ಎಂಬ ಮತೊಂದಿದೆ. ಆಂದರೆ ಇಡಿಈ ವಿಶ್ವವೇ ನನ್ನ ಸ್ವದೇಶ. ಹಿಂದೂ ಶಾಸ್ತ್ರಗಳಲ್ಲಿ ಬರುವ ಈ ಮತು ಹಿಂದೂವಿಗೆಷ್ಟು ಅಪ್ತವೆಂದರೆ ಅತ ಗಡಿಯಾಚೆಗಿದ್ದರೂ ಈ ಶ್ಲೋಕದಂತೆ ಸುಖಿಯಾಗಿರಬಲ್ಲ. ಧರ್ಮ ಮೊದಲು. ಧರ್ಮವೇ ನನ್ನ ರಾಷ್ಟ್ರೀಯತೆ ಎಂದುಕೊಂಡು ನೆಮ್ಮದಿಯನ್ನು ಅತ ಕಾಣಬಲ್ಲ. ಹಾಗಾಗಿ ಹಿಂದೂವೊಬ್ಬ ಆಮೆರಿಕಾಕ್ಕೆ ಹೋದರೂ ಆಮೆರಿಕಾಕ್ಕೇನೂ ಕೇಡುಂಟಾಗುವುದಿಲ್ಲ. ಏಕೆಂದರೆ ಅಮೆರಿಕಾಕ್ಕೆ ಹೋದ ಭಾರತೀಯ ಹಿಂದೂ ಇಡಿ ಈ ಆಮೆರಿಕಾವನ್ನೇನೂ ಹಿಂದೂ ಮಾಡಿಬಿಡಬೇಕೆಂದು ಸಂಚು ಮಾಡುವುದಿಲ್ಲ. ಆತನಿಗೆಲ್ಲಿಯೂ ಕಮ್ಯುನಿಷ್ಟರಂತೆ, ಕ್ರಿಶ್ಚಿಯನ್ನರಂತೆ, ಮುಸಲ್ಮಾನರಂತೆ ಜನರನ್ನು ನರಿ ಬುದ್ದಿ ಬಳಸಿಯೋ ಹೆದರಿಸಿಯೋ ಹುಳುಕು ತುಂಬಿಯೋ ಮತಾಂತರ ಮಾಡಬೇಕೆಂದೂ ವ್ಯವಸ್ಥೆಯ ವಿರುದ್ಧ ಬಂಡೇಳಬೇಕೆಂದೂ ಅನಿಸುವುದಿಲ್ಲ. ಅದು ಹಿಂದೂ ತತ್ತ್ವ ಚಿಂತನೆಯ ಸಂಸ್ಕಾರ ಮತ್ತು ಹಿರಿಮೆ. ನಮ್ಮ ಹಿರಿಯರು ನಮಗೆ ಕಲಿಸಿಕೊಟ್ಟ ಜೀವನ ಪಾಠ. ಅದರೆ ಏನು ಮಾಡುವುದು ಪಾಪ. ಅವರೆಲ್ಲರ ಹಿರಿಯರು ಅವರಿಗೆ ಆಂಥ ಸಂಸ್ಕಾರವನ್ನು ಕಲಿಸಲಿಲ್ಲ.
ಆ ಕಾರಣಕ್ಕೆ ಕಮ್ಯುನಿಷ್ಟರು, ಮುಸಲ್ಮಾನರು, ಕ್ರಿಶ್ಚಿಯನ್ನರು ಸ್ವದೇಶೋ ಭುವನತ್ರಯಂ ಎಂದು ಅಂದುಕೊಂಡಿಲ್ಲ. ಹಾಗಂದುಕೊಳ್ಳದ ಕಾರಣಕ್ಕೆ ಇಂದು ಜಗತ್ತಿಡಿ ಈ ಕುದಿಯುವ ನೀರಿನ ಹಂಡೆಯಾಗಿದೆ. ಈ ಕಮ್ಯುನಿಷ್ಟರಿಗಾದರೋ ತಮ್ಮ ವಾದದ ಮೇಲೆ ವಿಪರೀತ ಭ್ರಮೆ. ಇನ್ನು ಮುಸಲ್ಮಾನ-ಕ್ರಿಶ್ಚಿಯನ್ನರಿಗೆ ತಮ್ಮ ಮತೀಯ ಸಂಗತಿಗಳೇ ಜೀವನದ ಸಕಲ ನಡೆಗೂ ಸರಕುಗಳು. ಭ್ರಮೆಗಳನ್ನು ಹೊತ್ತವರು ಯಾವುದಕ್ಕೂ ಸಿದ್ದರಾಗಿರುತ್ತಾರೆ. ವಿವೇಚನೆಯನ್ನು ಕಳೆದುಕೊಂಡಿರುತ್ತಾರೆ. "ಆರು ಬೆಟ್ಟವನು ನಾನು ಒಂದೇ ನೆಗೆತಕ್ಕೆ ಹಾರಬಲ್ಲೆ" ಎನ್ನುವಂಥಾ ವಿವೇಕ ಶೂನ್ಯತೆಯ ಸ್ಥಿತಿಗೆ ಮುಟ್ಟಿರುತ್ತಾರೆ. ಈ ಕಮ್ಯುನಿಷ್ಟರು, ಮುಸಲ್ಮಾನರು, ಕ್ರಿಶ್ಚಿಯನ್ನು ಎಲ್ಲರೂ ಅಂಥವರು. ಇಂಥ ಭ್ರಮೆಗಳಿಂದಲೇ ಅವರು ಜೀವ ಬಿಡುತ್ತಾರೆ, ಜೀವ ತೆಗೆಯುತ್ತಾರೆ. ಹಾಗಾಗಿ ಅವರು ಹೋದಲ್ಲೆಲ್ಲಾ ವಾತಾವರಣ ನಿರ್ಮಲವಾಗಿರುವುದಿಲ್ಲ. ಎಲ್ಲಿ ಹೋದರೂ ಅವರು ತಮ್ಮ ಮತ-ಸಿದ್ಧಾಂತಗಳ ತವರು ನೆಲದ ಗುಂಗಿನಲ್ಲಿಯೇ ಇರುತ್ತಾರೆ. ಭಾರತೀಯ ಮುಸಲ್ಮಾನರನ್ನು ಒಮ್ಮೆ ಅಭಿವೃದ್ಧಿಯ ಬಗ್ಗೆ ಮಾತಿಗೆಳೆದರೆ ಅವರೆಂದೂ ಗುಜರಾತಿನ ಅಭಿವೃದ್ಧಿಯನ್ನೋ ಪಂಜಾಬಿನ ಅಭಿವೃದ್ಧಿಯನ್ನೋ ಉಲ್ಲೇಖಿಸಲಾರರು. ದುಬೈನಲ್ಲಿ ರಸ್ತೆಗಳು, ಕಟ್ಟಡಗಳ ವರ್ಣನೆಯಲ್ಲಿ ತೊಡಗುತ್ತಾರೆ. ಮೇಲು ನೋಟಕ್ಕೆ ಇದು ಅರಬ್ ರಾಷ್ಟ್ರೀಯವಾದ ಎನಿಸದು. ಆದರೆ ಅವರೆಲ್ಲರ ಅರಬ್ ಪ್ರೇಮ ಬರೀ ರಸ್ತೆ, ಕಟ್ಟಡಗಳಿಗೆ ಸೀಮಿತವಾಗಿರುವುದಿಲ್ಲ. ಇನ್ನು ೧೯೬೨ರ ಭಾರತ-ಚೀನಾ ಯುದ್ಧದಲ್ಲಿ ಭಾರತೀಯ ಕಮ್ಯುನಿಸ್ಟರು ಚೀನಾವನ್ನು ಬೆಂಬಲಿಸಿದ್ದು, ೧೯೪೭ರಲ್ಲಿ ಭಾರತೀಯ ಮುಸಲ್ಮಾನರು ಮತೀಯತೆಯ ಆಧಾರದಲ್ಲಿ ಪ್ರತ್ಯೇಕ ದೇಶವನ್ನೇ ಕೇಳಿದ್ದು, ಅನಂತರ ಅವರ ಎಲ್ಲಾ ಬೇಡಿಕೆಗಳು ಮತೀಯತೆಯ ಅಡಿಯಲ್ಲಿಯೇ ಕೇಳಿಬಂದಿದ್ದು, ವಿದೇಶದ ಮುಸಲ್ಮಾನನೂ ಸ್ವದೇಶದ ಮುಸಲ್ಮಾನನೂ ಒಂದೇ ರೀತಿಯಲ್ಲಿ ಚಿಂತನೆ ನಡೆಸುವುದು, ಸ್ವಾತಂತ್ರ್ಯಪೂರ್ವದಲ್ಲಿ ಟರ್ಕಿಯ ಖಲೀಫನಿಗಾಗಿ ಭಾರತದಲ್ಲಿ ರಾದ್ದಾಂತ ನಡೆದಿದ್ದು, ಭಾರತದ ಕ್ರೈಸ್ತರು ಎಲ್ಲಿನದ್ದೋ ದೇಶದ ಮುಖಂಡ ಪೋಪನಿಗೆ ನಿಷ್ಟೆ ವ್ಯಕ್ತಪಡಿಸುವುದೆಲ್ಲವೂ ಈ ದೇಶದಲ್ಲದ, ಪರ ದೇಶನಿಷ್ಟೆಯ ಗುಂಗಿನ, ಸ್ವದೇಶೋ ಭುವನತ್ರಯಂ ಎನ್ನಲಾಗದ ಚಿಂತನೆಯ ಫಲಗಳು. ಅದು ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿಯೂ ಅತಿ ಗಂಭೀರವೂ ಅದಂತಹ ಸಂಗತಿಗಳು. ಈ ಹಿನ್ನೆಲೆಯಲ್ಲಿ ಭಾರತಕ್ಕೆ ಚೀನಾ, ಪಾಕಿಸ್ಥಾನದಷ್ಟೇ ಅಪಾಯಕಾರಿಯಾಗಿ ಕಂಡುಬರುವ ದೇಶ ದೂರದ ಇಟಲಿ. ಎಲ್ಲಾ ಸೆಮೆಟಿಕ್ ಮತಗಳ ಸಿನಿಕತನ, ಉಗ್ರತೆ, ಪಕ್ವವಾಗದ ಪೀಚುತನಗಳ ಅಚ್ಚಿನಲ್ಲಿ ತಯಾರಾದ ದೇಶವೊಂದು ಹೇಗೆ ವರ್ತಿಸುತ್ತದೆಯೋ ಇಟಲಿ ಕೂಡ ಹಾಗೆಯೇ ವರ್ತಿಸುತ್ತದೆ. ಭಾರತದಲ್ಲಿ ಇಟಲಿಯ ಜನರ ಕೈವಾಡ ಬಲವಾಗಿರುವುದರಿಂದ, ಇಟಲಿಯ ಜನರು ಸ್ವದೇಶೋ ಭುವತ್ರಯಂ ಎನ್ನದಿರುವುದರಿಂದ ಭಾರತದ ಪಾಲಿಗೆ ಇಟಲಿ ಭಯಂಕರ ಹಾಲಾಹಲ. ಅದನ್ನು ಪ್ರಾಮಾಣೀಕರಿಸಲು ಎಷ್ಟೊಂದು ಉದಾಹರಣೆಗಳಿವೆ.
ಎನ್.ಡಿ.ಎ ಅಕಾರಕ್ಕೆ ಬಂದಾಗ ಏಕಾಏಕಿಯಾಗಿ ಇಟಲಿಯ ಸೋನಿಯಾ ಗಾಂ ಕಾಂಗ್ರೆಸಿನ ಅಧ್ಯಕ್ಷರಾದರು. ಎನ್.ಡಿ.ಎ ಅಕಾರ ಪತನಾನಂತರ ನೇರವಾಗಿ ಆಡಳಿತ ಯಂತ್ರದ ಚುಕ್ಕಾಣಿಯನ್ನೇ ಹಿಡಿದರು. ಅದುವರೆಗೆ ಕಾಂಗ್ರೆಸ್ ವಿರುದ್ಧ ಕೇಳಿಬರುತ್ತಿದ್ದ ಸದ್ದುಗಳನ್ನೆಲ್ಲಾ ಅಡಗಿಸುವ ಪ್ರಯತ್ನ ಮಾಡತೊಡಗಿದರು. ಇದಕ್ಕೆ ಸಾಥ್ ಕೊಡುವಂತೆ ಹಳೆಯ ಕಾಂಗ್ರೆಸ್ ನಾಯಕರೂ ಕೂಡ ಸೋನಿಯಾ ಕಾಲಿಗೆ ಅಡ್ಡಬಿದ್ದರು. ಸೋನಿಯಾ ಮತ್ತಷ್ಟು ಪ್ರಬಲರಾಗತೊಡಗಿದರು. ಭೋಫೋರ್ಸ್ ಹಗರಣದ ದಿಕ್ಕು ತಪ್ಪಿಸತೊಡಗಿದರು. ಸಿಬಿಐ ಯನ್ನು ಕೈಗೊಂಬೆ ಮಾಡಿಕೊಂಡರು. ಅವರ ಎಲ್ಲಾ ಚಟುವಟಿಕೆಗಳಲ್ಲಿ ಅವರಿಗೆ ಭಾರತ ಮುಖ್ಯವಾಗಿರಲಿಲ್ಲ. ಏಕೆಂದರೆ ಅವೆಲ್ಲವೂ ಭಾರತ ವಿರೋಧಿಯಾಗಿದ್ದವು. ಅದಕ್ಕೂ ಮೊದಲು ಒಟ್ಟಾವಿಯೋ ಕ್ವಾಟ್ರೋಚಿ ಎಂಬ ಇಟಲಿಯವನನ್ನು ತನ್ನ ಅಂತರಂಗಕ್ಕೆ ಸೇರಿಸಿಕೊಂಡರು. ದೇಶದ ಭ್ರಹತ್ ಯೋಜನೆಗಳನ್ನು ಆತ ಗುತ್ತಿಗೆಗೆ ಪಡೆದ ಮತ್ತು ಹಲವು ವ್ಯಾಪಾರಗಳಲ್ಲಿ ದಳ್ಳಾಳಿಯಾಗಿದ್ದ. ಶಸ್ತ್ರಾಸ್ತ್ರಗಳ ಬಗ್ಗೆ ಆತ ತಜ್ಞನಲ್ಲದಿದ್ದರೂ ಬಹುಕೋಟಿ ರೂಪಾಯಿಗಳ ಬೋಫೋರ್ಸ್ ಪಿರಂಗಿ ಕೋವಿಗಳ ಡೀಲಿನಲ್ಲಿ ತೊಡಗಿದ ಮತ್ತು ಬಹುಕೋಟಿ ರೂಪಾಯಿ ಕಮಿಷನ್ ಹೊಡೆದ. ಈ ಪ್ರಕರಣದಲ್ಲಿ ಕ್ವಾಟ್ರೋಚಿ ಮತ್ತು ಸೋನಿಯಾ ಸಂಬಂಧ ನಿಚ್ಚಳವಾಗಿತ್ತು. ಆದರೆ ಸೋನಿಯಾ ತನಿಖೆಯನ್ನೇ ಹಳ್ಳ ಹಿಡಿಯುವಂತೆ ಮಾಡಿದರು.
ಹಾಗಾದರೆ ಸೋನಿಯಾಳ ನಿಷ್ಠೆಯನ್ನು ಭಾರತ ಪರ ಎಂದು ಹೇಳಬಹುದೇ?
ಇದೊಂದೇ ಅಲ್ಲ. ಇನ್ನೊಮ್ಮೆ ಸೋನಿಯಾ ತನಗೆ ಇಟಾಲಿಯನ್ ಅಂಗರಕ್ಷಕರು ಬೇಕು ಎಂಬ ಪ್ರಸ್ತಾವವನ್ನಿಟ್ಟಿದ್ದರು. ಇದೆಂಥಾ ತವರಿನ ವ್ಯಾಮೋಹ ! ಇಂಥಲ್ಲಿ ರಾಷ್ಟ್ರನಿಷ್ಠೆಯನ್ನು ಎಲ್ಲೆಂದು ಹುಡುಕೋಣ? ಸೋನಿಯಾರ ಜಾತಕವನ್ನು ಇನ್ನಷ್ಟು ಕೆದಕುತ್ತಾಹೋದರೆ ಇನ್ನೂ ಭಯಾನಕವಾದ ಸಂಗತಿಗಳು ಅನಾವರಣವಾಗುತ್ತಾ ಹೋಗುತ್ತವೆ. ೧೯೭೧ರಲ್ಲಿ ಭಾರತ- ಪಾಕ್ ಯುದ್ಧ ನಡೆಯಿತು. ಆಗ ದೇಶದ ಎಲ್ಲಾ ವಿಮಾನ ಚಾಲಕರೂ ತಮ್ಮ ರಜೆಯನ್ನು ರದ್ದುಗೊಳಿಸಬೇಕೆಂದೂ, ಸೈನ್ಯದಲ್ಲಿ ಅವರೆಲ್ಲರೂ ಕಾರ್ಯನಿರ್ವಹಿಸಬೇಕೆಂದೂ ಸರಕಾರ ಆದೇಶ ಹೊರಡಿಸಿತು. ಆದರೆ ಸೋನಿಯಾ ರಾಜೀವ್ ಸ್ವತಃ ವಿಮಾನ ಚಾಲಕರಾದರೂ ಯುದ್ಧ ಭೀತಿಯಿಂದ ಭಾರತ ಬಿಟ್ಟು ಇಟಲಿಗೆ ಪಲಾಯನ ಮಾಡಿದ್ದರು. ಇಂಥ ಸೋನಿಯಾ ಗಾಂ ಕಾಂಗ್ರೆಸ್ ಅಧ್ಯಕ್ಷರಾಗಿ ರಾತ್ರೋರಾತ್ರಿ ರಾಷ್ಟ್ರನಿಷ್ಠರಾಗಿಬಿಟ್ಟರು ಎಂದು ಹೇಳುವುದೂ ಒಂದೇ ದೇಶ ವಿಭಜನೆಯನ್ನು ಬೆಂಬಲಿಸಿ ಪಾಕಿಸ್ಥಾನಕ್ಕೂ ತೆರಳದ ಮುಸಲ್ಮಾನರೂ ರಾಷ್ಟ್ರ ನಿಷ್ಠರು ಎನ್ನುವುದೂ ಒಂದೇ. ಇಂಥದ್ದನೆಲ್ಲಾ ಗಮನಿಸಿಯೇ ಅಂದು ಸೋನಿಯಾರ ವಿದೇಶಿ ಮೂಲವನ್ನು ಹಿಡಿದು ಹಲವರು ಹೋರಾಟ ಮಾಡಿದ್ದರು. ಆ ಹೋರಾಟದಿಂದ ಸೋನಿಯಾ ಕನಿಷ್ಟ ಪ್ರಧಾನಿಯಾಗುವುದಾದರೂ ತಪ್ಪಿತು ಎಂದರೂ ಮಾನಸಿಕತೆ ಮತ್ತು ಪರಿಸ್ಥಿತಿಯ ಗಂಭೀರತೆಯಿಂದ ಪಾರಾಗಲಿಲ್ಲ ಎನ್ನುವುದು ಸತ್ಯ.
ಕಳೆದ ಫೆಬ್ರವರಿ ೧೫ರಂದು ಇಬ್ಬರು ಕೇರಳದ ಮೀನುಗಾರರನ್ನು ಇಟಲಿಯ ಹಡಗಿನ ಸಿಬ್ಬಂದಿಗಳು ಗುಂಡಿಕ್ಕಿ ಕೊಂದರು. ಇಟಲಿಯ ಹಡಗಿನಲ್ಲಿದ್ದವರಿಗೆ ಭಾರತೀಯ ಮೀನುಗಾರರು ಕಡಲುಗಳ್ಳರಂತೆ ಕಂಡರಂತೆ , ಹಾಗಾಗಿ ಗುಂಡಿಕ್ಕಿದರಂತೆ. ಈ ಸಮಜಾಯಿಷಿಯೇನೂ ಕೊಲೆಯ ಅಪರಾಧವನ್ನು ಕಡಿಮೆ ಮಾಡುವುದಿಲ್ಲ. ಆದರೆ ಈ ಪ್ರಕರಣವನ್ನು ಮುಚ್ಚಿಹಾಕಲು ಉನ್ನತ ಮಟ್ಟದಲ್ಲಿ ಸಂಚುಗಳು ನಡೆಯುತ್ತಿವೆ. ಈ ಸಂಚಿನಲ್ಲಿ ಇಟಲಿ ಸಂಜಾತೆ ಸೋನಿಯಾರ ಕೈವಾಡವಿರುವ ಬಗ್ಗೆ ಹಲವರು ಈಗಾಗಲೇ ಸಂಶಯ ವ್ಯಕ್ತಪಡಿಸಿದ್ದಾರೆ. ಈ ಸಂಶಯಗಳಲ್ಲಿ ಹುರುಳಿಲ್ಲದೇ ಇಲ್ಲ. ಏಕೆಂದರೆ ಇಬ್ಬರು ಯಕಶ್ಚಿತ್ ಕೊಲೆಗಾರರನ್ನು ರಕ್ಷಿಸಲು ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆಗಳು ನಡೆಯಲು,ಇಟಲಿಯ ವಿದೇಶಾಂಗ ಸಚಿವರೇ ಭಾರತಕ್ಕೆ ದೌಢಾಯಿಸಿ ಬರಲು ಸೋನಿಯಾಳ ಕೈವಾಡ ಇಲ್ಲದಿರಲಾರದು. ಏಕೆಂದರೆ ಆಸ್ಟ್ರೇಲಿಯನ್ ದೂರ್ತ ಪಾದ್ರಿಗೆ ಮರಣೋತ್ತರ ಪದ್ಮ ಪ್ರಶಸ್ತಿಯನ್ನು ಕೊಡಿಸಿದವರು ಇದೇ ಸೋನಿಯಾ ಗಾಂಧಿ. ಅಲ್ಲದೆ ಬಂತ ಇಟಲಿಯವರಾದ ಲಾಟೋರ್ ಮಸ್ಸಿಮಿಲಿಯಾನೋ ಮತ್ತು ಸಲ್ವಡೋರ್ ಗಿರೋನ್ ರ ಮೇಲೆ ಅಂಟೋನಿಯೋ ಮೈನೋ ಅನುಕಂಪ ವ್ಯಕ್ತಪಡಿಸಿದ್ದಾರೆ ಎಂದು ಇಟಲಿಯ ಪತ್ರಿಕೆಗಳೇ ಬರೆದಿವೆ. ಇನ್ನು ಅಂಗೈ ಹುಣ್ಣಿಗೆ ಕನ್ನಡಿ ಯಾಕೆ?ತಿಂಗಳ ಹಿಂದೆ ಇಟಲಿಯ ತೈಲ ಟ್ಯಾಂಕರ್ ಹಡಗು ಎನ್ಸಿ ಕಾಲೆಕ್ಸಿ ಯಿಂದ ಹಾರಿಬಂದ ಗುಂಡುಗಳು ಕೇರಳ ಕರಾವಳಿಯ ಮೀನುಗಾರರನ್ನು ಬಲಿತೆಗೆದುಕೊಂಡಿತ್ತು. ಅನಂತರ ಇಟಲಿಯವರನ್ನು ಬಂಧಿಸಲಾಗಿತ್ತು. ಬಂಧಿಸಲ್ಪಟ್ಟ ಕೊಲೆಗಾರರು ತಮ್ಮನ್ನು ಜೈಲಿನಲ್ಲಿಡಬಾರದೆಂದೂ , ಜೈಲಿನ ಸಮವಸ್ತ್ರವನ್ನು ನೀಡಬಾರದೆಂದೂ ತಮ್ಮನ್ನು ಕೊಲ್ಲಂ ಪೊಲೀಸ್ ಕ್ಲಬ್ಬಿನಲ್ಲಿ ಅಥವಾ ಗೆಸ್ಟ್ ಹೌಸಿನಲ್ಲಿಡಬೇಕೆಂದೂ ಪ್ರತಿಭಟಿಸಿದ್ದರು. ವಿದೇಶಿ ಕೊಲೆಗಾರರಿಗೆ ಈ ಧೈರ್ಯ ಬರಲು ಕಾರಣವೇನು? ವಿದೇಶಾಂಗ ಸಚಿವ ಎಸ್. ಎಂ. ಕೃಷ್ಣ ಕೂಡ " ಇದು ಭಾರತ- ಇಟಲಿ ಸಂಬಂಧ ಸುಧಾರಣೆಗೊಂದು ಅವಕಾಶ" ಎಂದು ಬಡಬಡಿಸುತ್ತಾರೆ. ಭಾರತ-ಇಟಲಿ ಸಂಬಂಧ ಸುಧಾರಣೆ...? ಏನು ಸಂಬಂಧ ಭಾರತಕ್ಕೂ ಇಟಲಿಗೂ.ಇರತಕ್ಕದು ಗಡಿಯೂ ಅಲ್ಲ. ಸಮೀಪವೂ ಅಲ್ಲ. ಪ್ರಮುಖ ವ್ಯಾಪಾರ ಸಂಬಂತ ರಾಷ್ಟ್ರವೂ ಅಲ್ಲ. ಭಾರತೀಯರಿಗೆ ವಿಶ್ವದ ಭೂಪಟದಲ್ಲಿ ಇಟಲಿಯನ್ನು ಹುಡುಕಬೇಕಾದ ಪ್ರಮೇಯವೇ ಬರುವುದಿಲ್ಲ. ಅಂಥಲ್ಲಿ ವಿದೇಶಾಂಗ ಸಚಿವರು ಸಂಬಂಧ ಸುಧಾರಣೆಯ ಮಾತಾಡಿದರೆ ಬೆನ್ನ ಹಿಂದೆ ಸೋನಿಯಾ ಅಲ್ಲದೆ ಇನ್ನಾರು ತಾನೆ ಕಾಣುವರು ? ಇದುವರೆಗೆ ಭಾರತ- ನೇಪಾಳ, ಭಾರತ- ಭೂತಾನ್, ಭಾರತ- ಶ್ರಿಲಂಕಾ, ಭಾರತ- ಮಯನ್ಮಾರ್ ನಂತಹ ಅಗತ್ಯವಿರುವ ಸಂಬಂಧವನ್ನು ಅಪ್ಪಿ ತಪ್ಪಿಯೂ ಮಾತಾಡದ ವಿದೇಶಾಂಗ ಸಚಿವರು ಇಟಲಿಯ ಬಗ್ಗೆ ಮಾತಾಡುವಾಗ ದೇಶದ ಭದ್ರತೆಯ ಅಪಾಯದ ಆಳದ ಅರಿವಾಗುತ್ತದೆ. ವಿದೇಶಿ ಕೊಲೆಗಾರರಿಗೆ ಆತಿಥ್ಯ ನೀಡುತ್ತಾ ಬರುತ್ತಿರುವ ಕೇಂದ್ರ ಸರಕಾರದ ಮುಂದಿನ ಕಾರ್ಯಕ್ರಮ ಇಟಾಲಿಯನ್ನರ ಬೂಟು ನೆಕ್ಕುವ ಕಾರ್ಯಕ್ರಮವೇ?ಸರಕಾರದ ವಿಷ್ಠೆ ಎಲ್ಲಿಗೆ? ಕ್ರಿಶ್ಚಿಯನ್ ಸಂಘಟನೆಗಳು ಮಾತ್ರ ತಮ್ಮ ನಿಷ್ಠೆ ಇಟಲಿಗೇ ಎಂದು ನೇರಾನೇರಾ ಹೇಳಿದ್ದಾರೆ. ಎಪಿಸ್ಕೋಪಲ್ ಕಾನರೆನ್ಸ್ ಎಂಬ ಕ್ರೈಸ್ತ ಸಂಘಟನೆಯ ವಕ್ತಾರ ಫಾ.ಬಾಬು ಜೋಸೆಫ್ ಕರಕೊಂಬಿಲ್ ಎಂಬಾತ "ಇದನ್ನು ಕೋರ್ಟಿನ ಹೊರಗೇ ತೀರ್ಮಾನಿಸಬಹುದಿತ್ತು.ಆದರೂ ಕೇರಳ ಹೈಕೋರ್ಟು ಪಾರದರ್ಶಕವಾಗಿ ಪ್ರಕರಣವನ್ನು ಇತ್ಯರ್ಥ ಮಾಡುತ್ತದೆ ಎಂಬ ವಿಶ್ವಾಸವಿದೆ"ಎಂದು ಹೇಳುತ್ತಾನೆ.ಕಾರ್ಡಿನಲ್ ಜಾರ್ಜ್ ಅಲೆನ್‌ಚೇರಿಯವರು "ಇದನ್ನು ಕೊರ್ಟಿನ ಹೊರಗೇ ತೀರ್ಮಾನಿಸಿಕೊಲ್ಳಬೇಕು" ಎನ್ನುತ್ತಾನೆ. ಚರ್ಚಿನ ಪಾದ್ರಿಗಳಿಗೆ ಈ ಉಸಾಬರಿಯೇಕೆ? ಇದುವರೆಗೆ ದೇಶದ ಆಗುಹೋಗುಗಳ ಬಗ್ಗೆ ಒಂದೇ ಒಂದು ಮಾತಾಡದ ಇವರೆಲ್ಲರೂ ಇಟಲಿಯ ವಿಷಯಕ್ಕೇಕೆ ಇಷ್ಟೊಂದು ಕಾಳಜಿ? ಚರ್ಚುಗಳೆ ಕೋರ್ಟು ಆಗಿದ್ದ ಮಧ್ಯ ಕಾಲೀನ ಯುರೋಪನ್ನು ಪುನಸ್ಥಾಪಿಸಲು ಭಾರತವೊಂದು ಉತ್ತಮ ದೇಶ ಎಂದು ಚರ್ಚು ಭಾವಿಸಿದೆಯೋ ಏನೊ. ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ಬ್ರಿಟಿಷ್ ಪೊಲೀಸ್ ಅಧಿಕಾರಿಗಳನ್ನು ಕೊಂದ ಕ್ರಾಂತಿಕಾರಿಗಳನ್ನು ಚರ್ಚು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳುತ್ತಿತ್ತು. ಬಾರಿಸಾಲ್ ಸ್ಪೋಟ ಪ್ರಕರಣದಲ್ಲಿ, ಸಿಲಿಗುರಿಯ ಕ್ರಾಂತಿಗಳಲ್ಲಿ ಚರ್ಚು ತಾನೇ ಬ್ರಿಟೀಷರ ವಕ್ತಾರನಂತೆ ವರ್ತಿಸಿತ್ತು. ಆಗೆಲ್ಲಾ ಅವರ ಹಿಂದೆ ವೈಸರಾಯರಿದ್ದರು ಎಂದುಕೊಳ್ಳೋಣ. ಈಗ ಅದೇ ವರ್ತನೆ ಮರುಕಳಿಸುತ್ತಿದೆ. ವೈಸರಾಯರ ಜಾಗದಲ್ಲಿ ಇಂದು ಇರುವವರು ಯಾರು?
ಉತ್ತರದ ಗಡಿಯಲ್ಲಿ ಶತ್ರು ಬರುವನು ಎಂದು ಕಾಯುತ್ತಾ ಕುಳಿತಾಗ ಕೇರಳದ ಕಡಲಲ್ಲಿ ಹಡಗಲ್ಲಿ ಬಂದರಲ್ಲಾ. ನಿಲುವಂಗಿ ತೊಟ್ಟವರು, ಶಿಲುಬೆಯನ್ನು ನೆಟ್ಟವರು , ರಾಯಭಾರ ಮಾಡುವವರು, ಎಲ್ಲೆಲ್ಲೋ ಹುಟ್ಟಿದವರು ದೇಶವನ್ನು ಇನ್ನೇನು ಮಾಡುವರೋ. ಇತ್ತ ಕಾಲೇಜುಗಳನ್ನು ತೆರೆದು, ಡೊನೆಷನ್ನುಗಳನ್ನು ಪಡೆದು, ಮೆಲುದನಿಯಲ್ಲಿ ಮಾತಾಡಿ, ಮಂತ್ರಾಕ್ಷತೆ ಕೊಡುವವರು ದೇಶವನ್ನು ನೋಡಲಾರದೇ ಹೋದರಲ್ಲಾ. ಕೇವಲ ವಾದಗಳಿಂದ ಬೀಗುವವರ ಮುಂದೆ ಶಾಸ್ತ್ರಗಳನ್ನು ಅರಿತವರು ಮಂಡಿಯೂರಿದಂತೆ ಕಾಣುವರಲ್ಲಾ.

ಜೈಲೊಳಗೂ ಕುಯಿಲು ಮತಾಂತರದ ಹುಯಿಲು

ಸಾಮ್ರಾಜ್ಯಶಾಹಿ ಧೋರಣೆಯ ಇನ್ನೊಂದು ಮುಖವೇ ಕುಟಿಲತೆ, ರಕ್ತಪಾತಗಳು. ಅಲ್ಲಿ ಎದುರಾಳಿಗಳನ್ನು ಶತಾಯಗತಾಯ ಸೋಲಿಸಲೇ ಬೇಕೆಂದ ಧಾವಂತ,ತನಗೊಬ್ಬನಿಗೇ ಬದುಕುವ ಹಕ್ಕು ಎಂಬ ವಿಪರೀತವಾದಗಳ ಸಂತೆ ನೆರೆದಿರುತ್ತದೆ. ಈ ಸಾಮ್ರಾಜ್ಯಶಾಹಿ ಗುಣಗಳು ಸಾಮ್ರಾಜ್ಯವನ್ನು ವಿಸ್ತರಿಸಬೇಕೆಂಬ ಮನೋಭಾವದೊಟ್ಟಿಗೆ ಕ್ರೌರ್ಯ, ರಕ್ತಪಾತದ ಚರಿತ್ರೆಯನ್ನೂ ವಾದ ವಿಸ್ತರಣೆಯ ಹಂಬಲವನ್ನೂ ಹೊದ್ದುಕೊಂಡಿರುತ್ತವೆ.
ಪುರಾತನದಿಂದಲೂ ಈ ಸಾಮ್ರಾಜ್ಯಶಾಹಿ ಮನೋಭಾವ ಹಲವು ಮಜಲುಗಳಿಂದ ಮುನ್ನಡೆದು ಬಂದಿರುವುದು ವಿಶ್ವ ಇತಿಹಾಸದ ಒಂದು ಅವಿಭಾಜ್ಯ ಅಂಗವಾಗಿದೆ. ಪ್ರಾಚೀನ ಯುರೋಪಿನಲ್ಲಿ ಅದು ಮತೀಯವಾದದೊಂದಿಗೇ ಆರಂಭವಾಗಿತ್ತು ಎಂಬ ಸಂಗತಿ ಇಂದು ಎಲ್ಲೂ ಕೇಳದ ಸಂಗತಿಯೇನಲ್ಲ. ಅಲ್ಲಿ ಚರ್ಚು ಬೇರೆ ಅಲ್ಲ. ಪ್ರಭುತ್ವ ಬೇರೆ ಅಲ್ಲ ಎಂಬುದು ಜಗತ್ತು ಕಂಡು ಕೇಳರಿಯದ ಅಜಾಗರೂಕತೆಗೆ ಕಾರಣವಾಗಿತ್ತು. ಏಕದೇವೋಪಾಸನೆಯ, ಸಂದೇಶವನ್ನು ಹೊತ್ತು ತಂದ ಪ್ರವಾದಿಯ ಪೀಳಿಗೆಯ ಸೆಮೆಟಿಕ್ ಮತಗಳು ನಡೆಸಿದ ದೌರ್ಜನ್ಯ ಇದೇ ಸಾಮ್ರಾಜ್ಯಶಾಹಿಯ ಮನೋಭಾವವನ್ನು ಹೊಂದಿದ್ದವುಗಳೇ. ಹೀಗೆ ಸಾಮ್ರಾಜ್ಯಶಾಹಿ ಧೋರಣೆಗಳು ಒಬ್ಬ ಅರಸ ಮತ್ತು ಒಂದು ಪ್ರದೇಶಕ್ಕೆ ಸೀಮಿತವೆಂದುಕೊಂಡವರಿಗೆ ಕ್ರಿಶ್ಚಿಯನ್ ಮತ್ತು ಇಸ್ಲಾಂ ಮತಗಳು ದಿಗ್ಭ್ರಮೆ ಹುಟ್ಟಿಸಿದವು. ತನ್ನದಲ್ಲದರ ಬಗ್ಗೆ ಅಸಹನೆ ಮತ್ತು ವಿನಾಕಾರಣ ದ್ವೇಷವನ್ನು ಹೊಂದಿದ ಅವು ಮುಂದೆ ಉಗ್ರ ಸ್ವರೂಪದಿಂದ, ನಾನಾ ಮುಖಗಳನ್ನು ಹೊತ್ತು ಜಗತ್ತಿನಾದ್ಯಂತ ನುಗ್ಗಲು ಅಣಿಯಾಗುತ್ತಿತ್ತು. ಭಾರತಕ್ಕೆ ಮಧ್ಯ ಏಷಿಯಾದ ದರೋಡೆಕೋರರಿಂದ ನುಗ್ಗಿದ ಇಸ್ಲಾಂ ಖಡ್ಗದ ಬಲದಿಂದಲೇ ನೆಲೆಯೂರಲು ಪ್ರಯತ್ನ ಪಟ್ಟಿತಾದರೂ ಇಲ್ಲಿನ ನಿರಂತರ ಪ್ರತಿಕ್ರಿಯೆಗಳಿಂದ ಅವು ಸಾಧ್ಯವಾಗಲಿಲ್ಲ. ಆದರೆ ಕ್ಷಣಿಕ ವಿಜಯದಿಂದ ಇಸ್ಲಾಂ ತನ್ನ ಉದ್ದೇಶವನ್ನು ಸಫಲಗೊಳಿಸುವ ಮಾರ್ಗವನ್ನು ಕಂಡುಕೊಂಡಿತು. ಹೀಗೆ ಘಜನಿ, ಘೋರಿಗಳು ಸೋತು ಪಲಾಯನ ಮಾಡಿದರೂ ಅವರ ಗುಲಾಮರಾಗಿದ್ದವರು, ಕೆಲಸದಾಳುಗಳು, ಕತ್ತಿಯ ಭಯಕ್ಕೆ ಮತಾಂತರಗೊಂಡವರು ಅರಬ್ ದೇಶದ ಪ್ರವಾದಿಯ ಸಂದೇಶವನ್ನು ನಂಬಿ ನಡೆಯಲಾರಂಭಿಸಿದರು. ಅನಂತರ ಕೂಡ ಇಸ್ಲಾಮಿನಿಂದ ರಕ್ತಪಾತದ ಚರಿತ್ರೆ ನಿರ್ಮಾಣವಾಯಿತು.
ಇನ್ನು ಶಾಂತಿಯ ಹೆಸರಲ್ಲಿ ಕ್ರಿಸ್ತನ ಸಂದೇಶವನ್ನು ಹೊತ್ತವರು ಬೇರೊಂದು ರೀತಿಯಲ್ಲಿ ಅನ್ಯಾನ್ಯ ದೇಶಗಳಿಗೆ ನುಗ್ಗಿ ಸಾಮ್ರಾಜ್ಯಶಾಹಿಯ ವಿಭಿನ್ನ ಆಯಾಮವೊಂದನ್ನು ಪರಿಚಯಿಸಿದರು. ಕೆಲವು ದೇಶಗಳಿಗೆ ಬರೆ ಬೈಬಲ್ ಕೊಂಡೊಯ್ದರು. ಮೂಲನಿವಾಸಿಗಳು ಬೈಬಲ್ ಓದುವ ಹೊತ್ತಿಗೆ ಅವರ ನೆಲ ದೂರ್ತ ಪಾದ್ರಿಗಳ ಸ್ವತ್ತಾಗಿತ್ತು. ಹೀಗೆ ಭಾರತದ ಕೇರಳದ ಕರಾವಳಿಗೆ ಥಾಮಸ್ ಎಂಬ ಮೆಣಸು ವ್ಯಾಪಾರಿ ಬಿಳಿಯಾದ ನಿಲುವಂಗಿ ತೊಟ್ಟು ಬಂದ. ಕೇರಳದಲ್ಲಿ ಹುಲುಸಾದ ಬೆಳೆ ತೆಗೆದು ಕ್ರಿಸ್ತನ ಮಾರಾಟ ನಡೆಯಿತು. ಮುಂದೆ ಆತನನ್ನು ಸಂತನಂತೆ ಬಿಂಬಿಸಲಾಯಿತು. ಏಸುವಿನ ನೇರ ಶಿಷ್ಯ ಎನ್ನಲಾಯಿತು. ಮೆಣಸು ವ್ಯಾಪಾರಿಯನ್ನೂ ಸಂತನನ್ನಾಗಿ ಕರೆಯುವ ಆವಶ್ಯಕತೆ ಈ ಮತಕ್ಕಿದೆ. ಸೇವೆಯ ನೆಪದಲ್ಲಿ ಹಲವಾರು ದೂರ್ತರನ್ನು ಸಂತರಂತೆ ಬಿಂಬಿಸಿದ ಜನರ ಪಟ್ಟಿಯೇ ಈ ಕ್ರಿಶ್ಚಿಯನ್ ಮತದಲ್ಲಿದೆ.
ಉತ್ತರದ ವನವಾಸಿ ಕ್ಷೇತ್ರಗಳಲ್ಲಿ ,ಪಟ್ಟಣದ ಕೊಳೆಗೇರಿಗಳಲ್ಲಿ, ಕೂಲಿಯಾಳುಗಳ ಕಾಲೋನಿಗಳಲ್ಲಿ ಎಲ್ಲೇಲ್ಲೂ ಸೇವೆಯ ಹೆಸರಲ್ಲಿ ಕ್ರಿಸ್ತನ ಮಾರಾಟ, ಹುಲುಸಾದ ಶಿಲುಬೆಯ ಬೆಳೆಯನ್ನು ಕ್ರೈಸ್ತರು ಬೆಳೆದರು. ಅದರೂ ಕ್ರೈಸ್ತ ಸಾಮ್ರಾಜ್ಯವಾದದ ಬಯಕೆ ಪೂರ್ಣವಾಗಲೇ ಇಲ್ಲ . ಏಕೆಂದರೆ ಹಿಂದು ಎಂಬ ಅಕ್ಷಯ ಪಾತ್ರೆ ಎಲ್ಲಾ ಮತೀಯ ಸಾಮ್ರಾಜ್ಯವಾದಕ್ಕೆ ಮೊದಲ ಅಡ್ಡಿಯಾಗಿದೆ. ಹಾಗಾಗಿ ಕ್ರಿಶ್ಚಿಯನ್ನರದು ಯಾವಾಗಲೂ ವಿಭಿನ್ನ ತಂತ್ರ, ನವ ನವೀನ ಮಾದರಿಯ ಕ್ರಿಸ್ತನ ಮಾರಾಟ. ಈ ಮಾರಾಟಕ್ಕೆ ಮೆಗಾ ಅಫರ್ ಗಳು. ಈ ಮೆಗಾ ಆಫರ್ ಮೂಲಕ ಕ್ರಿಸ್ತನ ಮಾರಾಟಗಾರರು ಇತ್ತೀಚೆಗೆ ಕಟ್ಟಿಕೊಂಡಿದ್ದೇ ಪ್ರಿಸನ್ ಮಿನಿಸ್ಟ್ರೀ ಇಂಡಿಯಾ ಎಂಬ ಎನ್.ಜಿ.ಓ ಒಂದನ್ನು.
ಕಾನ್ವೆಂಟ್‌ಗಳಾದವು, ಅಸ್ಪತ್ರೆಗಳಾದವು, ಕಾಡಾಯಿತು, ಸ್ಲಮ್ಮುಗಳಾಯಿತು, ಪ್ಲೇಗು- ಕುಷ್ಠ ರೋಗಗಳಾದವು. ಏಡ್ಸ್, ಕ್ಯಾನ್ಸರಿನ ಹೆಸರಲ್ಲೂ ಮಿಷನರಿಗಳು ಜನರನ್ನು ವಂಚಿಸಿದವು. ರೋಗಕ್ಕೆ ಪ್ರಾರ್ಥಿಸಲು ಹೇಳಿ ಕೊರಳಿಗೆ ಶಿಲುಭೆಯನ್ನು ನೇತು ಹಾಕಿಯೇಬಿಟ್ಟರು. ಮೂಲ ಧರ್ಮವನ್ನು ತೆಗಳುತ್ತಲೇ ಹಿಂದೂವಿನ ಶತ್ರುವನ್ನು ಹೆಚ್ಚಿಸಲಾರಂಭಿಸಿದರು. ಇದೀಗ ಕ್ರಿಸ್ತನ ಮಾರಾಟಕ್ಕೆ ಜೈಲನ್ನು ಆರಿಸಿಕೊಂಡಿದ್ದಾರೆ. ಹೀಗೆ ಜೈಲು ಹಕ್ಕಿಗಳನ್ನು ಮತಾಂತರ ಮಾಡಲೆಂದೇ ಇರುವ ಸಂಘಟನೆ ಈ ಪ್ರಿಸನ್ ಮಿನಿಸ್ಟ್ರಿಇಂಡಿಯಾ. ಹೆಸರು ಕೇಳಿದರೆ ಕೇಂದ್ರ ಸರಕಾರದ ಒಂದು ಇಲಾಖೆಯೆಂದೋ, ಸೋನಿಯಾ ಗಾಂಧಿಯೋ ಅಂಬಿಕಾ ಸೋನಿಯೋ, ಕಪಿಲ್ ಸಿಬಲನೋ ಉಸ್ತುವಾರಿ ವಹಿಸಿಕೊಂಡ ಕೇಂದ್ರ ಸಚಿವಾಲಯವೋ ಎನಿಸುವ ಈ ಅಪ್ಪಟ ಕ್ರೈಸ್ತ ಸಂಘಟನೆ. ಇದು ದೇಶದ ಬಹುದೊಡ್ಡ ಎನ್.ಜಿ.ಓ ಗಳಲ್ಲಿ ಒಂದು. ಕ್ರಿಸ್ತನ ಮಾರಾಟಕ್ಕೆ ಜೈಲಿನಷ್ಟು ಪ್ರಶಸ್ತವಾದ ಜಾಗ ಮತ್ತೊಂದಿಲ್ಲ ಎಂದು ಕಂಡುಕೊಂಡ ಸಂಘಟನೆ. ಭಾರತದ ಜೈಲುಗಳಾದ್ಯಂತ ಇದರ ಕಾರ್ಯ ಚಟುವಟಿಕೆ ವ್ಯಾಪಿಸಿದೆ. ಪ್ರತೀ ಜಿಲ್ಲಾ ಕಾರಾಗೃಹಗಳಲ್ಲಿ ಪ್ರಿಸನ್ ಮಿನಿಸ್ಟ್ರೀ ಇಂಡಿಯಾದ ಸಂನ್ಯಾಸಿನಿಯರು. ಪ್ರಾದಿಗಳು ಪ್ರವೇಶಿಸಿದ್ದಾರೆ. ಅವರ ಕುಟಿಲತೆಗೆ ಜೈಲಿನಷ್ಟು ಸುರಕ್ಷಿತ ಜಾಗ ಮತ್ತೊಂದಿಲ್ಲ. ಏಕೆಂದರೆ ಇವರ ಯಾವ ದೂರ್ತತೆಗಳೂ ಗೋಡೆಯಾಚೆಗೆ ಸುದ್ಧಿಯಾಗುವುದಿಲ್ಲ. ಜೈಲು ಅಧಿಕಾರಿಗಳನ್ನು ಮರುಳುಗೊಳಿಸಿದರೆ ಇನ್ನುಳಿದ ಕಾರ್ಯವೆಲ್ಲಾ ಸರಳ ಮತ್ತು ಸಲೀಸು. ಕೈದಿಗಳ ಮನಸ್ಸನ್ನು ದುರ್ಬಳಕೆ ಮಾಡಿಕೊಳ್ಳುವುದು, ಆಗಿಹೋದ ಅಪರಾಧದ ಬಗ್ಗೆ ತಿಳಿವಳಿಕೆ ನೀಡುವುದು, ತಪ್ಪು ಮತ್ತು ಪ್ರಾಯಶ್ಚಿತದ ಬಗ್ಗೆ ತಿಳಿಹೇಳುವುದು, ಉದ್ಯೋಗದ ಮಾರ್ಗದರ್ಶನ ಮಾಡುವುದು, ಹವ್ಯಾಸಗಳನ್ನು ಬೆಳೆಸುವುದರ ಮೂಲಕ ಜೈಲು ಹಕ್ಕಿಗಳಿಗೆ ಸ್ಥೈರ್ಯವನ್ನು ಬೆಳೆಸುವುದು ತಮ್ಮ ಕಾರ್ಯವೆಂದು ಪ್ರಿಸನ್ ಮಿನಿಸ್ಟ್ರಿ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಳ್ಳುತ್ತದೆ. ಕ್ರೈಸ್ತ ಸಂಘಟನೆಗಳೆಲ್ಲದರ ಪ್ರಣಾಳಿಕೆಗಳೆಲ್ಲವೂ ಭರ್ಜರಿಯಾಗಿಯೇ ಇರುತ್ತದೆ. ಆದರೆ ಮತಾಂತರದ ಕುಯಿಲು ಮತ್ತು ಹಿಂದೂ ವಿರೋಧದ ಕುಟಿಲತೆಯಲ್ಲಿ ಯಾವ ರಾಜಿಯನ್ನೂ ಅವು ಮಾಡಿಕೊಳ್ಳುವುದಿಲ್ಲ. ಲೋಕದಿಂದ ತಿರಸ್ಕೃತರಾಗಿ ಜೈಲುಪಾಲಾದವರಿಗೆ ಪ್ರೀತಿ ತೋರಿಸಿದರೆ ಕೈದಿಗಳು ಮರುಳಾಗುವರು ಎಂಬ ತಂತ್ರವನ್ನು ಅರಿಯದಷ್ಟು ಮುಠ್ಠಾಳರಲ್ಲ್ಲ ಈ ಪಿಸನ್ ಮಿನಿಸ್ಟ್ರಿ ಇಂಡಿಯಾದವರು. ಜೈಲಿನಲ್ಲಿ ಕೈದಿಗಳಿಗೆ ವಿದ್ಯಾಭ್ಯಾಸಕ್ಕೆ ಪ್ರೋತ್ರಾಹಿಸುವುದು, ಕ್ರೈಸ್ತ ಸಾಹಿತ್ಯವನ್ನು ಒದಗಿಸುವುದು ಇವರ ಕಾರ್ಯದ ಮೊದಲ ಹಂತ. ಕ್ರೈಸ್ತನ ಪ್ರಾರ್ಥನೆಯನ್ನು ಹೇಳಿಕೊಡುವುದು ಎರಡನೆಯ ಹಂತ. ಪಾಪಾಪದ ಲೋಕ ದಿಂದ ಮುಕ್ತಿಯನ್ನು ನೀಡುವುದು ಕೋನೆಯ ಹಂತ.
ಕಳೆದವಾರ ಈ ಪ್ರಿಸನ್ ಮಿನಿಸ್ಟ್ರಿ ಇಂಡಿಯಾದವರು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮಹಿಳಾ ದಿನಾಚರಣೆಯನ್ನು ಆಯೋಜಿಸಿದ್ದರು. ಸುಮಾರು ಹದಿನೈದಿಪ್ಪತ್ತು ಕ್ರೈಸ್ತ ಸಂನ್ಯಾಸಿನಿಯರು ಮತ್ತು ಇಬ್ಬರು ಪಾದ್ರಿಗಳು ಭಾಗವಹಿಸಿದ್ದರು . ಕೈದಿಗಳು ಕೈಗೆ ಕ್ಯಾಂಡಲನ್ನು ಕೋಟ್ಟು ಉರಿಸಿದ್ದರು, ಕ್ರೈಸ್ತ ಗೀತೆಗಳನ್ನು ಹಾಡಿಸಿದರು. ಜೈಲಿನಲ್ಲಿ ಅಧಿಕಾರಿಗಳ ಸಮ್ಮುಖದಲ್ಲೇ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದುದ್ದಕ್ಕೂ ಇಡೀ ಜೈಲೇ ಕ್ರೈಸ್ತರ ಕೊಡುಗೆಯೇನೋ ಎಂಬಂತೆ ಇಡೀ ಸಂಘಟನೆಯವರು ವರ್ತಿಸಿದರು. ಜೈಲು ಅಧಿಕಾರಿಗಳೇ ಹೊರಗಿನಿಂದ ಬಂದ ಅತಿಥಿಗಳಂತೆ ಕಂಡರು. ಮಹಿಳಾ ಕೈದಿಗಳಿಗೆ ಕ್ರಿಶ್ಚಿಯನ್ನರು ಕಲಿಸಿದ ನೃತ್ಯ, ಹಾಡು, ನಾಟಕಗಳು ಪ್ರದರ್ಶಿತವಾದವು. ಗೆದ್ದವರಿಗೆ ಪ್ರಿಸನ್ ಮಿನಿಸ್ಟ್ರೀ ಇಂಡಿಯಾ ಬಹುಮಾನವನ್ನೂ ಕೊಟ್ಟರು. ಕ್ರೈಸ್ತರೇ ಕರೆಸಿದ ಮೂವರು ಮಹಿಳಾ ಅತಿಥಿಗಳು ಉಡುಗೋರೆಗಳನ್ನು ನೀಡಿದರು. ಒಬ್ಬರಿಂದ ಮಹಿಳಾ ಕೈದಿಗಳಿಗೆ ಬಟ್ಟೆಯನ್ನು ದೇಣಿಗೆ ಪಡೆದಿದ್ದರು. ವಿಚಿತ್ರವೆಂದರೆ ಅವರೆಲ್ಲರೂ ಹಿಂದೂಗಳೇ ಆಗಿದ್ದರು. ಕಾರ್ಯಕ್ರಮದ ಅಂತ್ಯದಲ್ಲಿ ಕ್ರೈಸ್ತ ಸಂನ್ಯಾಸಿನಿಯರು ಕೈದಿಗಳನ್ನು ಅಪ್ಪಿಕೊಂಡರು, ಮುತ್ತಿಕ್ಕಿದರು, ದೇವರು ಒಳ್ಳೆಯದು ಮಾಡುತ್ತಾನೆ ಎಂದರು. ಏಕಾಂತದಿಂದ ಬಳಲುತಿದ್ದ ಮಹಿಳಾ ಕೈದಿಗಳನೇಕರು ಭಾವುಕರಾಗಿ ಸಿಸ್ಟರ್ ಸಿಸ್ಟರ್ ಎನ್ನುತ್ತಾ ಸಂನ್ಯಾಸಿನಿಯರೊಂದಿಗೆ ಬಿಕ್ಕಿದರು. ಹೀಗೆ ಬಿಕ್ಕುತ್ತಾ , ತಬ್ಬುತ್ತಾ ಇರುವ ಹೊತ್ತಿನಲ್ಲೇ ಏಸು ಕ್ರೈಸ್ತ ಮಾರಾಟವಾಗಿ ಹೋಗಿದ್ದ.
ಅನಂತರ ಕಂಡು ಬಂದ ಮತ್ತೊಂದು ಸಂಗತಿಯೆಂದರೆ ಜೈಲಿನಿಂದ ಶಿಕ್ಷೆ ಮುಗಿಸಿ ಹೊರಹೋಗುವ ಕೈದಿಗಳಿಗಾಗಿ ಈ ಸಂಘಟನೆ ಜೀವೋದಯ ಆಶ್ರಮ ಎಂಬ ಅಶ್ರಮವನ್ನು ಕೂಡ ಸ್ಥಾಪಿಸಿದೆ. ಈಗಾಗಲೇ ಆ ಆಶ್ರಮದಲ್ಲಿ ೫೧೧ ಮಹಿಳೆಯರನ್ನು ಸೇರಿಸಿಕೊಳ್ಳಲಾಗಿದೆ. ಅವರ ಪುನರ್ವಸತಿ, ಮದುವೆ ಮೊದಲಾದವನ್ನು ಆಶ್ರಮವೇ ನೋಡಿಕೊಳ್ಳುತ್ತದಂತೆ. ಮಾನವ ದೌರ್ಬಲ್ಯವನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳುವ ಚಾಳಿಯನ್ನು ಕ್ರೈಸ್ತರು ಸತತವಾಗಿ ಅನುಸರಿಸುತ್ತಾ ಬರುತ್ತಿರುವುದು ಗೊತ್ತಿರುವ ಸಂಗತಿಯೇ. ಶತಮಾನದಿಂದ ಅವರ ಸೇವೆಯ ನೆಪದಲ್ಲಿ ಮತಾಂತರ, ತಣ್ಣಗಿನ ಕ್ರೌರ್ಯಗಳಿಗೆ ಅವರು ಜೈಲಿನಲ್ಲೇ ಇರಬೇಕಾದುದು ಧರ್ಮ. ಆದರೆ ಜೈಲೊಳಗೆ ನುಗ್ಗಿ ಬೆಳೆ ತೆಗೆಯುವ ಚಾಣಾಕ್ಷರಾಗಿದ್ದಾರೆ.
ಸಾಮ್ರಾಜ್ಯಶಾಹಿಯ ಅದಮ್ಯ ಹಂಬಲ ಶಾಲೆ, ಆಸ್ಪತ್ರೆ, ಕಾನ್ವೆಂಟ್ ಗಳಿಗಷ್ಟೇ ಮುಗಿಯುವುದಿಲ್ಲ. ಜೈಲೊಳಗೂ ವ್ಯಾಪಿಸುತ್ತದೆ. ಮುಂದೆ ಇನ್ನೆಲ್ಲಿಗೋ...

ತಾಜ್‌ಮಹಲನ್ನು ಒರೆಸಬಹುದು ಗಂಗೆಯನ್ನು ಸೋಸಲಾಗುವುದೇ?


ಕೊಡವರ ಮನೆಯ ಮದುವೆಯಲ್ಲಿ ಇಂದಿಗೂ ಒಂದು ಪದ್ದತಿಯಿದೆ.
ಮೂಹೂರ್ತ ಮುಗಿದು ಹೆಣ್ಣಿನ ಕಡೆಯವರು ಗಂಡಿಗೆ ಹೆಣ್ಣನ್ನು ಒಪ್ಪಿಸಿದ ಅನಂತರ ಗಂಡು ಆಕೆಯನ್ನು ತನ್ನ ಮನೆಗೆ ಕೊಂಡೊಯ್ಯುತ್ತಾನೆ. ಮೊಟ್ಟ ಮೊದಲು ಗಂಡನ ಮನೆಹತ್ತುವ ಹೆಣ್ಣು ಮೊದಲು ತನ್ನ ಮನೆಯ ಬಾವಿಗೆ ಪೂಜೆ ಮಾಡಬೇಕು. ಪೂಜಿಸಿದ ಬಾವಿಯಿಂದ ನೀರನ್ನು ತಾನೇ ಸೇದಿ ಮನೆಗೆ ತರಬೇಕು. ಅದಕ್ಕೆ ಹೆಸರೇ "ಗಂಗಾಪೂಜೆ". ಪದ್ದತಿ ಏನೇ ಇರಲಿ. ಆದರೆ ಹೆಸರೇ ಸೋಜಿಗ ! ಎಲ್ಲಿಯ ಬಾವಿ? ಎಲ್ಲಿಯ ಗಂಗೆ? ಅದಲ್ಲದೆ ಇವರು ಕಾವೇರಿಯನ್ನೇ ಕುಲದೇವಿ ಎಂದುಕೊಳ್ಳುವವರು. ಆದರೂ ನೀರು ಎಂದರೆ ಇವರಿಗೆಲ್ಲಾ ಗಂಗೆಯೇ.ಇನ್ನೇನು ಪ್ರಾಣ ಹೋಗುವುದರಲ್ಲಿದೆ ಎಂಬಲ್ಲಿ ಕೂಡ ಕೊಡವರು ಬಾಯಿಗೆ ನೀರು ಬಿಡಲು ಕಾವೇರಿ ತೀರ್ಥವನ್ನು ಇಟ್ಟುಕೊಂಡರೂ "ಗಂಗೆಯನ್ನು ಬಾಯಲ್ಲಿ ಬಿಡಿ" ಎಂಬ ಗಡಿಬಿಡಿಯನ್ನು ಶುರುಮಾಡುತ್ತಾರೆ. ಇನ್ನು ಮಲೆನಾಡಿನ ಹಳ್ಳಿಗಳಿಗೆ ಹೋದರಂತೂ "ಲೇ , ಇವಳೇ ಬಂದವರಿಗೆ ಗಂಗೋದಕ ತಾ" ಎಂದು ಹೇಳುವುದು ಮಾಮೂಲಿನ ಸಂಗತಿ. ಹಾಗೆ ತರುವ ಗಂಗೋದಕವೇನೂ ಗಂಗೆಯ ನೀರಲ್ಲ. ಒಮ್ಮೊಮ್ಮೆ ಅದು ಮಿನರಲ್ ನೀರು ಬಿಸಿಲೇರಿಯೂ ಆಗಿದ್ದದರೂ ಆತಿಥ್ಯದ ನೀರೆಂದೂ ಗಂಗೆಯೇ. ಇದು ಕೇವಲ ಒಂದೆರಡು ಪ್ರದೇಶಗಳ ಕಥೆಯಲ್ಲ. ದೇಶಾದ್ಯಂತ ನೀರು ಎಂದರೆ ಗಂಗೆ. ಗದ್ದೆಗೆ ಹರಿಸುವ ನೀರಿನಿಂದ ಹಿಡಿದು ಅರ್ಚಕರು ಉದ್ದರಣೆಯಿಂದ ಕೊಡುವ ತೀರ್ಥವೆಲ್ಲವೂ ಗಂಗೆಯೇ. ನೀರಿಗೆ ಪಾಪನಾಶಿನಿ ಎಂಬ ಹೆಸರು ಬಂದಿದ್ದೇ ಈ ಗಂಗೆಯಿಂದ ಎನ್ನಬಹುದು. ಅದು ಭಾರತದ ಜನರು ನೀರಿಗೆ ಕೊಟ್ಟ ಬೆಲೆ. ಗಂಗೆಯ ಮೇಲಿನ ಭಕ್ತಿಯೂ ಹೌದು. ಹೀಗೆ ನೀರು ಮತ್ತು ಗಂಗೆಯ ಮೀಮಾಂಸೆಯನ್ನು ಮಾಡುತ್ತಾ ಹೋಗಬಹುದು. ಭಾರತದ ನೀರುಗಳೆಲ್ಲವೂ ಗಂಗಾಮಯವಾಗಿದ್ದು. ಗಂಗೆ ಸರ್ವಾಂತರ್ಯಾಮಿಯಾಗಿದ್ದು, ಪುಣ್ಯವತಿಯಾಗಿದ್ದು,ದೇಶದ ಪಾಲಿನ ಜೀವನ್ಮಾತೆಯಾಗಿದ್ದು, ಆಸ್ತಿಕರ ಮುಕ್ತಿದಾತೆಯಾಗಿದ್ದು, ಸಮಸ್ತ ಹಿಂದುಗಳ ಪಾಲಿನ ಶ್ರದ್ದಾಮಾತೆಯಾಗಿದ್ದರ ಹಿಂದೆ ಗಂಗೆ ಎಂಬ ದೇವಿಯಿದ್ದಾಳೆ.
ಗಂಗೆ ಆಸ್ತಿಕರ ಪಾಲಿನ ಅಮ್ಮ. ಆಕೆಯನ್ನು ನಿರಾಕಾರಮಯೀ ಎಂದರೂ ವೇದಗಳಲ್ಲಿ, ಪುರಾಣಗಳಲ್ಲಿ ಆಕೆ ರೂಪ ತಳೆದ ದೇವತೆ. ಗಂಗಾದೇವಿಯ ಅಪ್ಪ ಮೇರು. ಆತ ಸಾಕ್ಷಾತ್ ಹಿಮಾಲಯದ ರಾಜನಂತೆ. ಗಂಗೆ ಚೆಲುವಿಯಂತೆ. ಒಮ್ಮೆ ಆಕೆಯ ಬಾಲ್ಯದಲ್ಲಿ ದೇವರಾಜ ಇಂದ್ರ ತಣ್ಣನೆಯ ನೀರಿನಿಂದ ದೇವಲೋಕವನ್ನು ತಣಿಸಲು ಗಂಗೆಯನ್ನು ಬೇಡಿಕೊಂಡಿದ್ದನಂತೆ ಎಂಬ ಕಥೆಯೊಂದಿದೆ. ಇಂಥದ್ದೇ ಕಥೆಗಳು ರಾಮಾಯಣದ ಬಾಲಕಾಂಡದಲ್ಲಿ , ಮಹಾಭಾರತದ ಅರಣ್ಯಕಾಂಡದಲ್ಲಿ ಕಂಡುಬರುತ್ತವೆ. ಭಾರತದ ಯಾವುದೇ ಕಾಲವನ್ನು ನೋಡಿದರೂ ಗಂಗೆಯ ಉಲ್ಲೇಖವಿಲ್ಲದೆ ಇರುವುದಿಲ್ಲ. ಗಂಗೆ ಇಲ್ಲದೆ ಲೋಕವೇ ಇಲ್ಲ. ಗಂಗೆ ಇಲ್ಲದೆ ನಾಗರಿಕತೆಯೇ ಇಲ್ಲ. ವರಕವಿ ಬೇಂದ್ರೆಯನ್ನೇ ಗಂಗೆ ಕಾಡದೇ ಇರಲಿಲ್ಲ. ಇಂಥ ಗಂಗೆ ವಿಶ್ವದ ಶ್ರೇಷ್ಠವೂ ಶ್ರೀಮಂತವೂ ಆದಂಥ ಜನಾಂಗವೊಂದಕ್ಕೆ ನೀರುಣಿಸಿದಾಕೆ. ಸಾಕಿ ಸಲಹಿದಾಕೆ. ಸನಾತನ ಪರಂಪರೆಯನ್ನು ಪೋಷಿಸಿದಾಕೆ. ಹಿಂದೂ ಧರ್ಮದ ಶಾಖೆಗಳಾದ ಎಲ್ಲಾ ವಿದ್ಯೆಗಳೂ ಗಂಗಾತಟದಲ್ಲೇ ಹರಳುಗಟ್ಟಿದವು. ನೂರಾರು ಸಂತರು ಗಂಗಾತೀರದಲ್ಲಿ ಬೀಡುಬಿಟ್ಟು ಲೋಕಕಲ್ಯಾಣದ ವೃತವನ್ನು ಕೈಗೊಂಡಿದ್ದರು. ಹಾಗಾಗಿ ಒರ್ವ ಹಿಂದು ಭಾರತದ ಭೌಗೋಳಿಕ ಭೂಪಟದಲ್ಲಿ ಕಾಣುವ ಭಾಗಿರಥಿ ಎಂಬ ಹೊನಲನ್ನೂ ಮುಂದೆ ಸಿಗುವ ಅಲಕನಂದಾವನ್ನೂ ನೋಡಿ ಗಂಗಾ ಎಂದೇ ಪುಳಕಗೊಳ್ಳುತ್ತಾನೆ. ಗೋಮುಖ-ಗಂಗೋತ್ರಿ-ಉತ್ತರಕಾಶಿ ಹೆಸರುಗಳನ್ನು ಕೇಳಿದಾಗ ಆತನಿಗೆ ಪಾವನಗಂಗೆಯೇ ನೆನಪಿಗೆ ಬರುತ್ತದೆ.ಇಂದು ಹಿಂದೂ ತನ್ನ ಜೀವಮಾನದ ಆದಮ್ಯ ಬಯಕೆ ಕಾಶಿ ಯಾತ್ರೆ ಮಾಡಬೇಕೆಂದಿದ್ದರೆ ಅದಕ್ಕೆ ಗಂಗೆಯೇ ಮೂಲ ಕಾರಣ. ಗಂಗೆಯ ಅಸ್ತಿತ್ವದಿಂದಲೇ ವಿಶ್ವನಾಥ. ಗಂಗೆಯಿಂದಲೇ ಹರಿದ್ವಾರ. ಹಿಂದೂ ಸಂಸ್ಕೃತಿ ಬೆಳೆಯುತ್ತಾ, ಸಂಸ್ಕೃರಣೆಗೆ ಒಳಪಡುತ್ತಾ ಬಂದಲ್ಲೆಲ್ಲಾ ಗಂಗೆಯ ಪದಚಿಹ್ನೆಗಳು ಗೋಚರವಾಗುತ್ತವೆ.
ಇನ್ನು ಭಾರತಕ್ಕೆ ಬಂದ ಪ್ರವಾಸಿಗರ ಕಥನವನ್ನು ನೋಡಿದರಂತೂ ಗಂಗೆಯನ್ನು ಉಲ್ಲೇಖಿಸದವರು ತೀರಾ ಕಡಿಮೆ.ಮೆಗಾಸ್ತನೀಸನು " ಈ ಗಂಗಾ ನದಿ ಮೂಲದಲ್ಲಿ ಮೂವತ್ತು ಮಜಲು (?) ಅಗಲವಾಗಿದೆ. ಉತ್ತರದಿಂದ ದಕ್ಷಿಣಕ್ಕೆ ಹರಿದು ಇದು "ಗಂಗರಿದೀ" ಎಂಬ ನಾಡಿನ ಬಳಿ ಸಮುದ್ರವನ್ನು ಸೇರುತ್ತದೆ. ಇದು ಜಲಪ್ರಯಾಣಕ್ಕೆ ಯೋಗ್ಯವಾಗಿದೆ. ಇಲ್ಲಿ ವರ್ಷಕ್ಕೆ ಎರಡು ಬೆಳೆ ತೆಗೆಯುತ್ತಾರೆ. ಈ ಗಂಗರಿದೀ ಎಂಬ ನಾಡಿನಲ್ಲಿ ಅತ್ಯಂತ ಭಾರಿಯಾದ ಆನೆಗಳ ಸೈನ್ಯವಿದೆ.ಈ ಕಾರಣದಿಂದ ಯಾವ ರಾಜನೂ ಈ ರಾಜ್ಯವನ್ನು ಗೆಲ್ಲಲು ಸಾಧ್ಯವಾಗಿಲ್ಲ. ಅಲೆಕ್ಸಾಂಡರನು ಇಡೀ ಏಷ್ಯಾ ದೇಶವನ್ನು ಗೆದ್ದರೂ ಗಂಗರಿದಿಯ ಮೇಲೆ ಯುದ್ಧಕ್ಕೆ ಹೋಗಲಿಲ್ಲ. ಏಕೆಂದರೆ ಅವನು ಗಂಗರಿದಿಯ ಲ್ಲಿ ನಾಲ್ಕು ಸಾವಿರ ಆನೆಗಳಿವೆ ಎಂದು ಕೇಳಿ ಮುಂದಕ್ಕೆ ಹೋಗುವ ಆಲೋಚನೆಯನ್ನೇ ಕೈಬಿಟ್ಟನು" ಎಂದು ಬರೆಯುತ್ತಾನೆ. ಇಲ್ಲಿ ಮೆಗಸ್ತಾನೀಸನು ಹೇಳಿರುವ ಗಂಗರಿದೀ ಎಂಬ ನಾಡು ನಂದಸಂತತಿಯವರು ಕ್ರಿ.ಪೂ. ೩೬೪ ರಿಂದ ೩೨೪ ರವರೆಗೆ ಆಳುತ್ತಿದ್ದ ನಾಡೆಂದೂ ಅಲೆಕ್ಸಾಂಡರನು ದಂಡಯಾತ್ರೆ ಬಂದಿದ್ದಾಗ. ಆ ಸಂತತಿಯ ಕೊನೆಯ ಅರಸನು ರಾಜ್ಯವಾಳುತ್ತಿದ್ದನೆಂದೂ ಅವನು ಶೇಖರಿಸಿದ ಅಪಾರ ನಿಧಿಯ ಕಾರಣದಿಂದ ಆತನಿಗೆ "ಧನ ನಂದ" ಎಂಬ ಹೆಸರು ಬಂದಿತ್ತೆಂದೂ ವಿದ್ವಾಂಸರು ಅಭಿಪ್ರಾಯಪಡುತ್ತಾರೆ.
ಹೀಗೆ ಗಂಗೆಯ ಹಿಂದೋಡಿದರೆ ಪುರಾಣಗಳು ಮಾತ್ರವಲ್ಲ ಇತಿಹಾಸದ ಹೊಸಬೆಳಕೊಂದು ಗೋಚರವಾಗುತ್ತಾ ಹೋಗುತ್ತವೆ. ನದಿಯೊಂದು ಸಮಾಜದ ಮೇಲೆ ಬೀರಿರುವ ಪರಿಣಾಮಕ್ಕೆ ಗಂಗೆ ಸೋದಾಹರಣ ಉದಾಹರಣೆಯಂತೆ ಭಾಸವಾಗುತ್ತವೆ. ಇಬನ್ ಬಟುಟಾ ಎಂಬ ಮೊರಾಕ್ಕೋದ ಪ್ರವಾಸಿ ಹೀಗೆ ಬರೆಯುತ್ತಾನೆ "ಗಂಗಾನದಿಯ ಸರಾಸರಿ ಅಗಲ ನೂರು ಮಜಲು(?) ಸರಾಸರಿ ಆಳ ೨೦ ಆಳು. ಈ ನದಿಯೂ ಇನ್ನೊಂದು ನದಿಯೂ ಸೇರುವ ಸ್ಥಳದಲ್ಲಿ ಪಾಟಲೀಪುತ್ರ ಎಂಬ ನಗರವಿದೆ" . ಸುಮಾರು ೧೩ನೇಶತಮಾನದಲ್ಲಿ ಭಾರತಕ್ಕೆ ಬಂದ ಈತ ಗಂಗಾನದಿಗೆ ಹಿಂದೂಗಳು ತೀರ್ಥಯಾತ್ರೆ ಹೋಗುತ್ತಾರೆ. ಅದನ್ನು ಪುಣ್ಯದದ ನದಿಯೆಂದು ಭಾವಿಸುತ್ತಾರೆ ಎನ್ನಲು ಮರೆಯುವುದಿಲ್ಲ. ನಿಕೋಲೋ ಡಿಕೋಟಿ ಎಂಬ ಇನ್ನೊಬ್ಬ ವಿದೇಶ ಪ್ರವಾಸಿ "ಗಂಗಾ ನದಿ ಎಷ್ಟೊಂದು ದೊಡ್ಡದೆಂದರೆ ಅದರ ಮಧ್ಯದಲ್ಲಿ ನಿಂತುಕೊಂಡರೆ ದಡವೇ ಕಾಣುವುದಿಲ್ಲ. ಕೆಲವು ಕಡೆ ಇದು ೧೫ ಮೈಲಿ ಅಗಲವಿದೆ" ಎಂದು ಬರೆಯುತ್ತಾನೆ. ವಿದೇಶಿ ಪ್ರವಾಸಿಗರ ಈ ಎಲ್ಲಾ ಉಲ್ಲೇಖವನ್ನು ನೋಡಿದರೆ ಭಾರತವನ್ನು ಪರಿಚಯಿಸುವ ಪ್ರಮುಖ ಲ್ಯಾಂಡ್ ಮಾರ್ಕ್ ಗಂಗೆಯೇ ಎನ್ನುವುದು ತಿಳಿಯುತ್ತದೆ. ಒಬ್ಬ ಪಾಶ್ಚಾತ್ಯ ಇತಿಹಾಸಕಾರ ಫ್ರಾನ್ಸಿನ ನೆಪೋಲಿಯನ್ನನ ಗುಣಗಾನ ಮಾಡುತ್ತಾ " ಗಂಗಾದಿಂದ ನೈಲ್‌ವರೆಗೂ ಇವನ ಹೆಸರು ಹರಡಿತ್ತು" ಎಂದು ಬಣ್ಣಿಸುತ್ತಾನೆ. ಹಾಗಾದರೆ ಪಾಶ್ಚಾತ್ಯರಿಗೆ ಭಾರತವೆಂದರೆ ಗಂಗೆಯೇ ಎಂಬುದಕ್ಕೆ ಇನ್ನೇನು ಪುರಾವೆಗಳ ಅಗತ್ಯವಿದೆ. ಗಂಗೆ ಇಲ್ಲದ ಭಾರತ ನಾಗರಿಕತೆಗಳ ತೊಟ್ಟಿಲಾಗುತ್ತಿರಲಿಲ್ಲ. ಗಂಗೆ ಇಲ್ಲದೆ ಭಾರತ ವಿಶ್ವಕ್ಕೆ ಬೆಳಕು ನೀಡುತ್ತಿರಲಿಲ್ಲ. ಗಂಗೆ ಇಲ್ಲದ ಭಾರತ ವಿಶ್ವವನ್ನು ತನ್ನತ್ತ ಸೆಳೆಯುತ್ತಿರಲಿಲ್ಲ. ಇದು ಜೀನದಿಯಷ್ಟೇ ಅಲ್ಲ. ದೇಶದ ರಾಷ್ಟ್ರೀಯ ನದಿ.
ಇಂಥ ಗಂಗೆ ಭಗೀರಥ ಭುವಿಗೆ ತಂದಲ್ಲಿಂದ ದೇಶಕ್ಕೆ ನೀರುಡಿಸುತ್ತಾ ಪೂಜಿಸಿಕೊಳ್ಳುತ್ತಾ ಹರಿಯುತ್ತಿದ್ದಳು. ತನ್ನ ತಟದ ರಾಜಕೀಯ ಸ್ಥಿತ್ಯಂತರಗಳಿಗೆ ಗಂಗೆ ಸಾಕ್ಷಿಯಾಗುತ್ತಾ ಹರಿದಳು. ಮೌನವಾಗಿ ಆಲಿಸಿದಳು, ತಣಿಸಿದಳು, ಹರಸಿದಳು, ಲೋಕನಿಯಮಕ್ಕೆ ಬದ್ದವಾಗಿ ಕೊನೆಗೆ ಸಾಗರ ಸೇರಿದಳು.ಸ್ವಾತಂತ್ರ್ಯ ಪೂರ್ವದವರೆಗೂ ಹೀಗೆ ಹರಿಯುತ್ತಾ ಬಂದ ಗಂಗೆ ಸ್ವಾತಂತ್ರ್ಯ ಬಂದ ತಕ್ಷಣ ಭೀತಳಾದಳು. ಸಗರನ ಮಕ್ಕಳಿಗೆ ಸದ್ಗತಿ ಒದಗಿಸಿದ ಗಂಗೆ, ಶರಶೈಯೆಯ ಭೀಷ್ಮನಿಗೆ ಕೊನೆ ಗುಟುಕು ನೀಡಿದ ಗಂಗೆ ಭೀತಳಾಗಲು ಕಾರಣರಾರು?
ಇನ್ನಾರು ಇರಲು ಸಾಧ್ಯ?ಅದೇ ಓಲ್ಡ್ ಕಾಂಗ್ರೆಸ್. ರಾಷ್ಟ್ರದ ಸಕಲ ಭೀತಿಗೂ ಏಕೈಕ ಕಾರಣವಾದ ಓನ್ಲಿ ಒನ್ ಕಾಂಗ್ರೆಸ್. ಅದೇ ನೆಹರೂ, ಅದೇ ವಂಶಾವಳಿ, ಅದೇ ಹಾದರ, ಅದೇ ಎಡವಟ್ಟು ಗಳು ಗಂಗೆಗೂ ಅದರ ಬಿಸಿ ತಟ್ಟಿತು. ಸ್ವಾತಂತ್ರ್ಯ ಬಂದಾಗಿತ್ತು. ಕುಳಿತ ಕುರ್ಚಿಯಲ್ಲಿ ಏನೋ ಒಂದನ್ನು ಮಾಡಬೇಕಿತ್ತು. ಅದಕ್ಕಾಗಿ ನೆಹರೂ ಸಮಾಜವಾದ ಎಂದರು. ರಷ್ಯಾಪ್ರಣೀತ ಆರ್ಥಿಕತೆ ಎಂದು ಸಿಗರೇಟಿನ ಹೊಗೆಯಲ್ಲೇ ನಕ್ಷೆ ರಚಿಸಿಬಿಟ್ಟರು. ಅದುವರೆಗೆ ಗಂಗಾತಟದಲ್ಲಿ ಭಾರತದ ಸುಮಾರು ಶೇ. ೫೦ರಷ್ಟು ಪ್ರಮಾಣದ ರೈತರು ಹಸಿರು ಬೆಳೆಯುತ್ತಿದ್ದರು. ನೆಹರೂ ಅವರನ್ನೆಲ್ಲಾ ಒಕ್ಕಲೆಬ್ಬಿಸಿದರು. ಕಾರ್ಖಾನೆಗಳಿಗೆ ಪ್ರಾಶಸ್ತ್ಯ ಕೊಡಲಾಯಿತು. ಗಂಗಾತಟದ ಬಯಲು, ಸಮೃದ್ಧ ನೀರು ನೋಡಿದ ಯೋಜಕರು ಇದು ತಕ್ಕ ಸ್ಥಳ ಎಂದೇ ನಿರ್ಧರಿಸಿಬಿಟ್ಟರು. ಇನ್ನುಳಿದುದೆಲ್ಲಾ ಹೊಗೆ, ತ್ಯಾಜ್ಯ, ಕಸ-ಕಡ್ಡಿ ಮಾತ್ರ. ನೆಹರೂ ಅಷ್ಟಕ್ಕೇ ನಿಲ್ಲಲಿಲ್ಲ.ಗಂಗೆಯಿಂದ ದೇಶ ಬೆಳಗಿಸಬೇಕಿತ್ತು. ಉತ್ತರದಲ್ಲಿ ಗಂಗಾಮೂಲದ ಸಮೀಪದಲ್ಲೇ ಅಣೆಕಟ್ಟುಗಳನ್ನು ಕಟ್ಟಿದರು. ಗಂಗೆ ರಭಸದಿಂದ ಹರಿಯುವ ಮನೇರಿ ಎಂಬಲ್ಲಿ ಮತ್ತು ಅದರ ಅನಂತರ ಸಿಗುವ ತೇಹ್ರೀ ಎಂಬಲ್ಲಿ ನದಿಯನ್ನು ಕೊಂಚ ತಿರುಗಿಸಿ ಧುಮುಕಿಸಿ ಬೆಳಕು ಸೃಷ್ಟಿಸಲಾಯಿತು. ಗಂಗೆಯೇನೋ ಇಳಿದುಬಂದಳು. ಆದರೆ ಮುಂದೆಂದೂ ಆಕೆ ಆ ಪ್ರದೇಶಗಳ ಚರಾಚರಗಳನ್ನು ತಣಿಸಲಿಲ್ಲ. ಕಾಂಗ್ರೆಸಿಗರು ಆ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆಯಲ್ಲಿ ತೊಡಗಿದರು. ಸೂಕ್ಷ್ಮ ಗಂಗೆಯಲ್ಲಿ ಸ್ಪೋಟಗಳಾದವು. ಇಂದು ನೆಹರೂ ಇಲ್ಲ. ಅವರಿಗೆ ಸಗರನ ಮಕ್ಕಳಂತೆ ಸದ್ಗತಿ ಸಿಕ್ಕಿರುವುದೂ ಸಂಶಯವೇ. ಆದರೆ ಮುಂದೆ ವೊಮ್ಮಗ ರಾಜೀವ್ ಗಾಂಧಿ ಕೊಳಕು ಗಂಗೆಯನ್ನು ಮತ್ತೆ ಶುಭ್ರ ಸಲಿಲ ಮಾಡುವೆ ಎಂಬಂತೆ ಪೋಸುಕೊಟ್ಟರು.ಏಕೆಂದರೆ ಗಂಗೆ ಇವಳೇ ಏನು ಎಂಬಷ್ಟು ಬದಲಾಗಿಹೋಗಿದ್ದಳು. ಎಲ್ಲವೂ ರಾಜೀವ್ ಅಜ್ಜನ ಫಲ. ೧೯೮೪ ರಲ್ಲಿ ಇದೇ ರಾಜೀವ್ ಗಾಂಧಿ ಗಂಗಾ ಕಾರ್ಯಪಡೆ ಯನ್ನು ಸ್ಥಾಪಿಸಿದರು. ಕೋಟಿಗಟ್ಟಲೆ ಹಣವನ್ನು ಸುರಿದರು. ವಿಪರ್ಯಾಸ ಎಂದರೆ ಈ ಕಾರ್ಯಪಡೆಗೆ ತನ್ನ ಕಾರ್ಯದ ಬಗೆಯೇ ತಿಳುವಳಿಕೆ ಇರಲಿಲ್ಲ. ಎಡವಟ್ಟು ಮಂತ್ರಿಗಳು " ಗಂಗೆಯ ಮಾಲಿನ್ಯಕ್ಕೆ ಅವ್ಯವಸ್ಥಿತ ಘಾಟಿಗಳೇ ಮೂಲ ಕಾರಣ" ಎಂದು ಘೋಷಿಸಿ ಘಾಟಿಗಳ ಆಧುನೀಕರಣ ಮಾಡಲಾಯಿತು. ಹಲವು ಘಾಟ್‌ಗಳು ಸ್ವರೂಪ ಬದಲಿಸಿಕೊಂಡವು. ಇದಕ್ಕೆಂದೇ ವಾರಣಾಸಿ ಯೋಜನೆಯನ್ನು ಜಾರಿಗೆ ತರಲಾಯಿತು. ಗಂಗೆ ಮತ್ತಷ್ಟು ಕೊಳಕಾಗಿ ಹರಿದಳು.ಬರೋಬ್ಬರಿ ಸಾವಿರ ಕೋಟಿ ರೂಪಾಯಿ ಮಾತ್ರ ಪೋಲಾಯಿತು. ಈ ಸಾವಿರ ಕೋಟಿಗೆ " ಗಂಗೆಗೆ ಮಾಡುವ ಅವಮಾನ , ಅನೈರ್ಮಲ್ಯ ರಾಷ್ಟ್ರಕ್ಕೆ ಮಾಡುವ ಅವಮಾನ"ಎಂದು ಘೋಷಿಸಲು ಸಾಧ್ಯವಾಗಲಿಲ್ಲ.ಹೀಗೆ ರಾಜೀವ್ ಗಾಂಧಿಗೂ ಕೂಡ ಅಜ್ಜನಿಗೆ ಸದ್ಗತಿ ಒದಗಿಸಲು ಸಾಧ್ಯವಾಗಲಿಲ್ಲ.
ಗಂಗಾ ಮಾಲಿನ್ಯದ ಬಗ್ಗೆ ಕೆಲವು ವರದಿಗಳನ್ನು ನೋಡಿದರೆ ಧಿಗ್ಭ್ರಮೆಯಾಗುತ್ತದೆ. ೧೯೯೮ರ ಮಾನವಾಭಿವೃದ್ಧಿ ವರದಿಯ ಪ್ರಕಾರ ೨೯ ನಗರಗಳು, ೭೦ ಪಟ್ಟಣಗಳು ಮತ್ತು ಸಾವಿರಾರು ಗ್ರಾಮಗಳು ಗಂಗಾತೀರದಲ್ಲಿವೆ. ಇವುಗಳಿಂದ ಪ್ರತೀವರ್ಷ ಗಂಗೆಗೆ ೧೩ಬಿಲಿಯನ್ ಲೀಟರ್‌ನಷ್ಟು ಕೊಳಚೆ ನೇರವಾಗಿ ಗಂಗೆಗೆ ಸೇರುತ್ತಿದೆ. ಇದಲ್ಲದೆ ೨೬೦ ಮಿಲಿಯನ್ ಲೀಟರ್‌ನಷ್ಟು ಕಾರ್ಖಾನೆಗಳ ಗಟ್ಟಿಯಾದ ತ್ಯಾಜ್ಯ ಗಂಗೆಯನ್ನು ತುಂಬಿಸುತ್ತಿದೆ. ಅವುಗಳಲ್ಲಿ ೬ಮಿಲಿಯನ್ ಟನ್ನುಗಳಷ್ಟು ರಾಸಾಯನಿಕಗಳು ಮತ್ತು ೯೦೦೦ ಟನ್ನುಗಳಷ್ಟು ಕೀಟನಾಶಕಗಳಿವೆ. ೨೦೦೭ರಲ್ಲಿ ವರ್ಲ್ಡ್ ವೈಲ್ಡ್ ಲೈಫ್ ಫೌಂಡೇಶನ್ ನ ಅಧ್ಯಯನ ವರದಿಯ ಪ್ರಕಾರ ವಿಶ್ವದ ಮೊದಲ ಹತ್ತು ಮಾಲಿನ್ಯಕಾರಕ ಮತ್ತು ಅಪಾಯಕಾರಕ ವಾತಾವರಣದ ನದಿಗಳಲ್ಲಿ ಗಂಗೆ ಮೊದಲ ಸ್ಥಾನದಲ್ಲಿದೆ.ಸದ್ಯಕ್ಕಂತೂ ಗಂಗೆ ಶುದ್ಧವಾಗುವ ಯೋಜನೆಗಳು ಕಾಣುತ್ತಿಲ್ಲ. ಈಗ ಭಾರತ ಸರಕಾರದ ಅಧೀನದಲ್ಲಿರುವ National Ganga river basin authority(NGRBA) ಎಂಬ ಮಂಡಳಿಯೊಂದಿದೆ.ಇದರಲ್ಲಿ ಅಧಿಕಾರಿಗಳದ್ದೇ ಆಟಾಟೋಪ. ಸರಕಾರಕ್ಕೆ ಇದು ಇದೆಯೋ ಸತ್ತಿದೆಯೋ ಎಂಬುದು ಗೊತ್ತಿಲ್ಲ. ಇನ್ನು ಅಧಿಕಾರಿಗಳು ಒಂದಿಷ್ಟು ವಿದ್ಯಾರ್ಥಿಗಳಿಂದ ಸರ್ವೆ ಮಾಡಿಸಿ "ಗಂಗಾ ತಟದ ಅಭಿವೃದ್ಧಿಗೆ ಪರಿಸರ ಸ್ನೇಹಿ ಮಾರ್ಗಗಳು" ಎಂಬ ವರದಿಯನ್ನಷ್ಟೇ ಸಿದ್ಧಪಡಿಸಬಹುದು. ಗಂಗೆ ನಾರುತ್ತಲೇ ಇರಬೇಕು. ಸ್ವಾಮಿ ನಿಗಮಾನಂದರಂತಹವರು ಬಲಿದಾನಮಾಡುತ್ತಲೇ ಇರಬೇಕು.
ಒಂದು ವೇಳೆ ಭಗೀರಥನ ಜಾಗದಲ್ಲಿ ಘೋರಿಯೋ ಘಜನಿಯೋ, ಬಾಬರನೋ ಇದ್ದಿದ್ದರೆ, ಗಂಗೆ ಅರೇಬಿಯಾದಲ್ಲೇನಾದರೂ ಹುಟ್ಟಿ ಇತ್ತ ಹರಿದು ಬರುವಂತಿದ್ದರೆ ಸರಕಾರಗಳು ನದಿಪಾತ್ರದುದ್ದಕ್ಕೂ ಉದ್ಯಾನವನ್ನೇ ನಿರ್ಮಿಸಿಬಿಡುತ್ತಿದ್ದರು.ಕೆಲವರ್ಷಗಳ ಹಿಂದೆ ತಾಜ್‌ಮಹಲಿನ ಬಿಳುಪಿಗೆ ಧಕ್ಕೆಯಾಗುವುದೆಂದು ಯಮುನಾತಟದ ಕಾರ್ಖಾನೆಗಳನ್ನು ಮುಚ್ಚಿಸಲಾಗಿತ್ತು.
ತಾಜ್‌ಮಹಲನ್ನು ಒರೆಸಬಹುದು. ಆದರೆ ಗಂಗೆಯನ್ನು ಸೋಸಲಾಗುವುದಿಲ್ಲವಲ್ಲ.

Tuesday, March 6, 2012

Gujarat’s Gandhian Model of Inclusive, all-round development

Sometime back, a Kannada newspaper carried a special issue commemorating a festival. And in connection with the same, a story writing competition was organized. A fiction that featured in the issue won the top slot for ‘best narration’.
The narrative of the story begins by depicting a white pigeon, which lay wounded on the tombstone of Tipu Sultan, Shreerangapatana, a remote town in Karanataka. It knew that death was imminent and hovered around for a safe place to breathe its last. However, a feeling of deep unrest prevailed in its heart with each spot it selected. Finally it resolved to fly to Gujarat, ‘the land of Gandhi’ in search of peace. But the pigeon was in for a rude shock when it alighted in Gujarat. Strewn everywhere was nothing but blood stains. Shocked and disheartened, the bird decided that the Arabian Sea was a better place to welcome its death and soars towards the ocean.

With the storyline cast thus, the plot is filled with epithets like star on Shwethambara, messenger of peace etc when it came to describing the pigeon. But it was dismal to see a plot with an extremely, dry storyline chosen for accolades. Worst of all, panelists used the very terms that were highlighted, to praise Tipu Sultan and Mahatma Gandhi though out. In sharp contrast, the panelists were quick to point to Sangh Parivar as ‘those being communal in Karnataka’ and Chief Minister of Gujarat, Narendra Modi as ‘Merchant of Death’.

Thus we see a tale fabricated for the deliberate wafting of a devious message. It almost had the appearance of an advertisement issued by the Congress Party. No wonder it grabbed the first slot. Detractors were quick in grabbing the story. It was used as ample fodder to tarnish the man named Narendra Modi. Using the metaphor of a pigeon, Modi was slandered: Modi, who happens to be a shadow of Gandhi. When the intent is to kill, even the shadow is not spared. Did the detractors ever pause to think how they had vilified the Father of our Nation, Mohandas Karamchand Gandhi in the process?

In reality, Narendra Modi, whom a certain section of people revel in demonizing, happens to be a mere shadow of Mahatma Gandhi. Those who search for the fruition of Gandhi’s dream, Ramarajya, will find the same in Gujarat, the state administered by Narendra Modi. Incidentally, Modi happens to be a progeny of a large family, which has the label killers of Gandhi. But then, he has been industriously working to execute each dream of Gandhi, turning them into reality, one by one. Gandhi’s visions, thoughts and dreams are limited to texts and speeches. But to see them being implemented, one needs to be in Gujarat, to see them being implemented under Modi. So, for the detractors who resorted to ‘star on shwetambara’ to demonize Modi, isn’t the bird, in reality, suffering from incurable prejudice?

Gandhi was a practical dreamer- a visionary, who had clear concepts about society. He would be persistently eloquent about being ‘self – reliant within one’s range’. Without exception, the entire nation supported his views. One of the many concepts Gandhi outlined regarding real independence was that of gram swaraj. He had envisaged an economical system that was based on the study of society at ground level.

According to Gandhi’s vision, the proper way to national progress happens only by elevating the down trodden. And for this, education of every single person and empowering of women are vital. Idealism, adhering to truth, abstaining from alcohol, grooming cultured families, simple living together with exalted thinking, encouraging small scale industries, maintaining clan environment are some of aspects stressed on by Gandhi. But unfortunately, everything that the ‘Father of the Nation’ stood for vanished into thin air, following transfer of power from Britain.

Sporting the cap donned by Nehru, the famous ‘Gandhi Topi’, the Congress party began their drama of playing politics in his name and beguiling an entire nation. They never implemented a single design carved by Gandhi for his country. The slogan Garibi Hatao continues to echo everywhere, pointlessly. Ramarajya remained a distant dream.

But if Gandhi were to visit Gujarat today, he will experience nothing less than sheer joy. Gandhi was someone who never lived to see his dreams take shape. During his lifetime, he would not even have fathomed that his visions would assume practical wings. But if he were to visit Gujarat today, he would be proud to see each of his visions having sprouted to tall, sturdy, rooted trees.

When Gandhi said about the soul of India resting in villages, he was aware that amidst villagers existed the concepts of Swabhiman and Swavalamb. This was why he made a clarion call for a return of humanity to villages. However, with passage of time, society witnessed a contrary sequence- people leaving villages and flocking to cities. Gujarat was no exception either. The visions of the grand man lay in slumber in his own land.

But with the gathering of the state’s reins by Narendra Modi, the perceptions were revived and rekindled. Modi initiated a series of rural development projects. And as witnessed never before in India, people started making an exodus towards villages. Today, 60% of the entire population of Gujarat lives in villages.

Gujarat’s villages are self contained today. With uninterrupted power supply 24 hours a day, ways of earning a profitable living are undoubtedly numerous. People working in textile mills, diamond factories in cities etc have started their own industries in villages. Funds were allocated judiciously for the setting up of cottage industries.

Under Narendra Modi’s rule, “What are you planning to do, by moving over to villages?” is a question which will never spring. Judging by the current scenario, any stream of work you wish to embark yourself into can be initiated from the villages of Gujarat itself.

Not many women in Gujarat while away their time. Many of them have involved themselves in cottage industries of embroidery, painting and drawing, art with stone, bamboo and other natural products, dairy farming etc. Gujarat projects a face to the entire nation: women are the real strength and clout of the state. When Gandhi uttered the words, “happiness resides where woman are empowered”, little would he have thought that the dreams would be fledged in Gujarat, his own state.

Why is this happening? Reasons are numerous: in Gujarat womenfolk are comparatively at peace. They don’t have husbands who walk in drunk or reeking in alcohol, her sons are cultured, her family is self contained. With all these, there is no room for apprehension. No liquor, no darkness!! Where else can we point to rightly and befittingly as Ramarajya?

Ahmadabad and Surat- two places in Gujarat, which can rightly be stated to be the backbones of the international textile industry!! Get to the root of the industry and you will find ladies wielding the wand.

Both government organizations and NGOs firmly support the competition spinning in these home based enterprises. When it comes to industries like incense sticks, diamonds, etc, ladies play a major role. Gujarati women are known world over for their penchant and innate creativity in producing gold, silver and artificial jewelry. The international market is abuzz with demand for masterpieces- both simple and grand, finely crafted by the hands of none other than Gujarati Bhens. Aren’t these enough and more to showcase the fruition of Gandhi’s dream on empowerment of women?

Creativity is the mantra that would have breathed life into the model of economy conceived of by Gandhi. Coupled with creativity, innovations and simplicity form its soul. The same stands supremely evident in each development work undertaken by Narendra Modi. Let’s take into account, the transport industry of Gujarat, as a classic example. In the four lane roads of Gandhinagar and Ahmedabad, you can see an unusual phenomenon when it comes to roads. In the midst of sprawling roads, there runs an inner section of roads, exclusively for buses. They ply separately, without getting knotted in the general stream of traffic.

The bus service that plies in Gujarat is the BRTS (Bus rapid transit System). The service covers around 58km of the city. The most modern technology is implemented to ensure free flow of traffic and meticulous service. When BRTC was introduced, a large slice of those from the middle class and upper middle class bid farewell to cars and immersed themselves into the convenience of bus journeys. A similar lifestyle was spoken of by Gandhi. Modi gave it life. He envisaged a plan and implemented it too.

Uninterrupted supply of electricity is the factor that makes Gujarat supreme. 24 hours of 3-phase power supply throughout the state. Gujarat has 18,028 villages that are now ‘Jyoti Grams’. Another project Jyoti Kuteer, provides electricity to the areas inhabited by tribal folks. The means and methods implemented by Modi for production of electricity are extensions of the innovative and sustainable development model – exactly the way Gandhi wanted it to be.

Solar power cells on Narmada canal: Clean energy resource, Need of land is reduced, Evaporation of lakhs of litres of water is prevented since the canal will be covered.
Gujarat has longest coastline in the country. But the energy that is meant to be harnessed from there is amply being done so. No one blames coastal erosion. Travel along the coastal area and you will find windmills at work. Oceans wave are being harnessed to produce electricity. And when there is a shortage in the supply of water, those copious take care of the same. Solar lamps illuminate areas that witness scanty rain fall. Gujarat is a place that has varied climatic conditions, which means there could be ample wastage of natural resources if not harnessed the right way. But under Modi, Gandhi can assure himself, that no such exhaustion of resources occurs.

Kitchens are provided with solar stoves, villages have sufficient supply of gas, rural areas blessed with broadband internet connection, Panchayats resorting to e-systems: these are some of the numerous specialties you witness in Gujarat. Gandhi wanted ‘knowledge revolution’ in villages: the villages in Gujarat are no way behind in reaping the benefits of internet. Gandhi spoke of the need for higher thinking and global knowledge those days, he dreamed of it. Modi has turned the same into reality.

Solar power cells on Narmada canal to light up rural homes.
Gujarat is heads India in terms of irrigation facilities as well. Dams and lakes take care of the watering of around 1 lakh hectare of agricultural land. It almost looks as though the project, so meaningfully named Sujalam Suphalam was embarked upon, with orders implemented by Gandhi.

When the nation struggled for independence, Gandhi stressed, time and again, that no Indian should ever give up their right on salt. He even sat on a Dharna for the same. The very salt with which the foreign imperialists shook the nation’s pride, the very salt that made the nation stand united, is now being exported to Britain from Narendra Modi’s state. Gujarat has given a befitting, yet humble reply to history by being the producer of 75% of India’s salt.

Gandhi made a clarion call called for the use of cotton dress, a million times. However, the political party Congress spins the Charka, apparently with no yarn in them. Little did they care to breathe life into his dreams and visions. But look at Gujarat: the state leads the nation in the production of cotton fabric. Gujarat produces ample cotton, more than required, to drape the entire nation of England- the same nation that referred to Gandhi as ‘half naked fakir’. Modi respectfully put at peace, the soul of Gandhi that remained hurt by the antics of Congress.

Development has not deterred Gujarat from the path of clean environment. The place continues to remain fresh, maintain its original charm, absolutely free of pollution. The river Sabarmati continues to flow through Gujarat with discipline. And these river banks have also not been spared by Modi: he has used the same for development. In Gujarat, anyone can witness river banks bustling with tourism; there by with business. Not just these spheres; Gujarat has moved in leaps and bounds in the realm of engineering, hotel industry, higher education, pipes, clocks, chemicals, fertilizers: the list is endless.

The few days in spent in Gujarat, I realized that Gandhi was more visible than Modi. There was a liveliness that was evident on the faces of people there. Contrary to the popular hate propaganda that has made a swift journey across places, I saw content faces of Muslims- faces that showed deep and genuine respect, without any mask. Yousuf, who runs a paan shop, told me, “I am proud to be a Gujrathi”. Cab driver Imran said, “Modi bhai sabhi goondagarbhi katham kar diya (Modi Bhai put an end to all instances of goondaism)”. My cab driver Nooruddhin, was nonstop. “Kisne Kaha ke Musalman log CM saab ke saath nahi? Hamare area mein pani bilqul nahi tha. Subah subah ek truck aathe the, ilake ke sabhi aurat usmei baitkar paani lane ke liye meelon chalthe the. Lekin jab CM saab aya, ghar ke saamne tap hai, pani ki koi dikkat nahi……….(Who said that the Muslims do not support our CM Sir? There was acute shortage of water in our area. A truck would come to our area early in the morning. My mother and sister had to travel a long way to bring water. But after he took over, there is a tap right in front of our house and there is water 24 hours)” He went on endlessly about how life is comfortable for his mother and sister, who are into small time embroidery business from home. All these would be music to Gandhi’s ears. I wished he could hear it all.

Somewhere, the fragrance of soap emanates all over. Somebody remarks, “Someone is bathing there.” But then, in reality the perfume wafted from a soap factory in the area. The soap factory was, in reality, the source of fragrance, not the person taking bath. The governance of Modi flows on clear visible lines of Gandhi. But foul, blaming mouths never remain shut. They revel in their closet mindset, refusing to discern and gauge the difference between fragrance and stench.

Gandhi said, “Infinite striving to be the best is man’s duty; it is its own reward.” His shadow named Narendra Modi stands nothing short of a living example- tireless and steadfast.

ಬುದ್ಧಿಜೀವಿಗಳಿಗೆ ಗೊತ್ತಿಲ್ಲ, ಮಕ್ಕಳಿಗಾದರೂ ಗೊತ್ತಿರಲಿ


ದು ವಿಚಿತ್ರವಾದರೂ ಸತ್ಯ.
ಕೊಡಗಿನ ಪೊನ್ನಂಪೇಟೆಯ ತಿಮ್ಮಯ್ಯ ಎಂಬ ಮಧ್ಯವಯಸ್ಕರು ತಮ್ಮಲ್ಲಿಂದ ಮೂವತ್ತು ಕಿ.ಮೀ ದೂರದ ನಾಗರಹೊಳೆಯನ್ನು ಇನ್ನೂ ನೋಡಿಲ್ಲ. ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರ ತಾಲೂಕಿನ ಬಿದ್ರಕಾನಿನ ಸುಬ್ರಾಯ ಹೆಗಡೆಯವರು ತಮಗೆ ಅತಿ ಸಮೀಪವಿರುವ ಜೋಗಕ್ಕೆಂದೂ ಹೋದವರಲ್ಲ. ಮಂಗಳೂರಿನ ಓರ್ವ ನಾರಾಯಣ ಶೆಟ್ಟರಿಗೆ ವೇಣೂರಿನ ಬಗ್ಗೆ ಆಸಕ್ತಿಯೇನೂ ಇರಲಿಲ್ಲ. ಕುಂದಾಪುರದ ನರಸಿಂಹ ಪೈಗಳು ಬಾರ್ಕೂರಿನಲ್ಲೇನಿದೆ ಹೋಗಲಿಕ್ಕೆ ಎನ್ನುತ್ತಾರೆ. ಅದು ಅವರೆಲ್ಲರಿಗೂ ಸಮೀಪದ ಊರುಗಳು. ಆದರೂ ಅವುಗಳ ಬಗ್ಗೆ ಅವರಿಗೇನೂ ಕುತೂಹಲವಿಲ್ಲ. ಅಲ್ಲಿಗೆಲ್ಲಾ ದೂರದೂರಿನಿಂದ ಜನ ಬರುವರಾದರೂ ಇವರೆಲ್ಲರಿಗೆ ಒಮ್ಮೆ ನೋಡಬೇಕು ಎನಿಸಿಲ್ಲ. ಇವರೇನೂ ಆಸೆ ಇಂಗಿಹೋದ ಮನುಷ್ಯರೇನೂ ಅಲ್ಲ. ಜೋಗ ನೋಡದ ಸುಬ್ರಾಯ ಹೆಗಡೆಯವರು ನಯಾಗರದ ಬಗ್ಗೆ ಮಾತಾಡುತ್ತಾರೆ. ಪೊನ್ನಂಪೇಟೆಯ ತಿಮ್ಮಯ್ಯನವರು ಡಿಸ್ಕವರಿ ಚಾನೆಲ್ಲಿನಲ್ಲಿ ಅಮೆಜಾನಿನ ಕಾಡುಗಳನ್ನು ನೋಡುತ್ತಿರುತ್ತಾರೆ. ಆದರೆ ಪಕ್ಕದೂರಿನ ಬಗ್ಗೆ ಅಷ್ಟೇ ತಾತ್ಸಾರವಿದೆ. ಇನ್ನೂ ಒಂದು ವಿಚಿತ್ರವೆಂದರೆ ಅವರೆಂದೂ ಶಾಲೆಯಲ್ಲಾಗಲೀ, ಕಾಲೇಜಿನಲ್ಲಾಗಲೀ ನಾಗರಹೊಳೆಯ ಬಗ್ಗೆ ಓದಿಲ್ಲವಂತೆ. ಹೆಚ್ಚೂ ಕಮ್ಮಿ ಸುಬ್ರಾಯ ಹೆಗಡೆಯವರದ್ದು, ನಾರಾಯಣ ಶೆಟ್ಟರದ್ದು, ನರಸಿಂಹ ಪೈಗಳದ್ದು ಎಲ್ಲರದ್ದೂ ಇದೇ ತರ್ಕ.
ಇದು ಕೆಲವು ಜನರದ್ದಷ್ಟೇ ಕಥೆಯಲ್ಲ. ಇಂದಿಗೂ ಬಹುತೇಕ ಜನರ ಕಥೆಯೂ ಇದಕ್ಕಿಂತ ಭಿನ್ನವೇನಲ್ಲ. ಇಂದು ಶಾಲೆಗೆ ಹೋಗುತ್ತಿರುವ ಮಕ್ಕಳ ಬುದ್ದಿಮಟ್ಟ ಕೂಡ ಹೀಗೆಯೇ. ಆ ಮಗುವಿಗೆ ಜಪಾನ್ , ಮ್ಯಾಂಚೆಸ್ಟರ್ ಗಳು ಗೊತ್ತಿವೆ. ಆದರೆ ಪಕ್ಕದೂರಿನ ದೇವಸ್ಥಾನಗಳ ಬಗ್ಗೆ ಗೊತ್ತೇ ಇಲ್ಲ. ಆ ಮಗುವಿಗೆ ವೆನಿಸ್ ನ ವರ್ತಕ ಗೊತ್ತಿದ್ದಾನೆ. ಆದರೆ ತನ್ನ ಬಸ್ ಸ್ಟಾಪಿನ ಪಕ್ಕದ ದಿನಸಿ ಅಂಗಡಿಯಾತನೇ ಗೊತ್ತಿಲ್ಲ. ಅಲೆಕ್ಸಾಂಡರ್ ಗೊತ್ತಿದ್ದಾನೆ.ಆದರೆ ಮನೆದೇವರು, ಪೂರ್ವಿಜರ ಇತಿಹಾಸವೇ ಗೊತ್ತಿಲ್ಲ. ತನ್ನ ಅಜ್ಜನ ಅಪ್ಪನ ಹೆಸರೇ ತಿಳಿದಿಲ್ಲ. ಇದು ಬಹುತೇಕ ಎಲ್ಲರ ಮನೆಯ ಕಥೆ. ಹೀಗೆ ಗೊತ್ತಿಲ್ಲದಿರುವ ಪಟ್ಟಿ ಬೆಳೆಯುತ್ತದೆ. ಜತೆಗೆ ಗೊತ್ತಾಗದಿರುವ ಕಾರಣವೂ ತಿಳಿಯುತ್ತದೆ. ಮೂರನೇ ಕ್ಲಾಸಿನ ಪುಸ್ತಕದಲ್ಲಿ ದಕ್ಷಿಣ ಆಫ್ರಿಕಾದ ಭೌಗೋಳಿಕ ಪರಿಚಯ ಎಂದು ಓದುವ ಮಕ್ಕಳಿಗೆ ಇವೆಲ್ಲಾ ಹೇಗೆ ತಾನೇ ತಿಳಿಯುತ್ತದೆ? ಪಕ್ಕದ ನಾಗರಹೊಳೆಯ ಬಗ್ಗೆ ಆಸಕ್ತಿ ಹೇಗೆ ತಾನೇ ಉಂಟಾಗುತ್ತದೆ? ಬೆತ್ಲೆಹೇಮಿನ ಸಂತನನ್ನೇ ಓದುವ ಅನಿವಾರ್ಯತೆಯಿರುವಾಗ ಮಗುವಿನ ಬೌದ್ಧಿಕ ಮಟ್ಟ ಸಹಜವಾಗಿ ಅರಳುವುದು ಹೇಗೆ? ಹೀಗೆ ಬೆಳೆದ ಮಗುವೇ ಮುಂದೆ ತಿಮ್ಮಯ್ಯನವರಂತೆ, ಸುಬ್ರಾಯ ಹೆಗಡೆಯವರಂತೆ, ನಾರಾಯಣ ಶೆಟ್ಟರಂತೆ, ನರಸಿಂಹ ಪೈಗಳಂತೆ ಬೆಳೆಯುತ್ತದೆ. ಕಳೆದ ೫೦ ವರ್ಷಗಳಲ್ಲಿ ಕಾಂಗ್ರೆಸ್ ಆಡಳಿತ ಮತ್ತು ಕಮ್ಯುನಿಷ್ಟ್ ಬುದ್ದಿಜೀವಿಗಳು ಬೆಳೆಸಿದ್ದು ಇಂಥಾ ಪೀಳಿಗೆಯನ್ನೆ. ಪಠ್ಯಪುಸ್ತಕಗಳು ಸ್ಥಳೀಯತೆಯಿಂದ ದೂರವಾಗಿರುವ ಕಾರಣ ಅವರೆಲ್ಲರೂ ಒಳಗಿದ್ದೂ ಹೊರಗಿನವರಂತೆ, ಹತ್ತಿರದಲ್ಲಿದ್ದರೂ ದೂರದವರಂತೆ ಕಾಣುತ್ತಾರೆ.
ರಾತ್ರೋರಾತ್ರಿ ವಿಪರೀತ ಬುದ್ದಿವಂತ ಪ್ರಜೆಗಳನ್ನು ನಿರ್ಮಾಣ ಮಾಡಿಬಿಡುತ್ತೇವೆ ಎಂಬ ಭ್ರಮೆ, ಪಠ್ಯಗಳೆಂದರೆ ಒಂಥರಾ ಅಗೋಚರ, ಅಲೌಕಿಕ ವಿಷಯಸಂಗ್ರಹಗಳು ಎಂಬ ಅಜ್ಞಾನ, ಸತ್ಯದ ತಲೆಗೆ ಹೊಡೆದಾದರೂ ಸರಿ ಸಮಾನತೆಯ ಸಂದೇಶ ಹೊರಡಿಸಬೇಕು ಎಂಬ ವಿಕೃತಿಗಳೆಲ್ಲವೂ ಒಟ್ಟು ಸೇರಿ ರಚನೆಯಾಗುತ್ತಿದ್ದ ಪಠ್ಯ ಪುಸ್ತಕಗಳು ಕಳೆದ ೫೦ ವರ್ಷಗಳಿಂದ ಕಾಂಗ್ರೆಸ್ ಮತ್ತು ಕಮ್ಯುನಿಷ್ಟರ ಉದ್ದೇಶವನ್ನು ಈಡೇರಿಸುತ್ತಿದ್ದವು. ಸ್ವಾತಂತ್ರ್ಯಪೂರ್ವದಲ್ಲಿ ಮೆಕಾಲೆ ಅಂದಾಜಿಸಿದ್ದೂ ಇದನ್ನೇ. ಸ್ಥಳೀಯತೆಯ ಸೊಗಡು ತಿಳಿಯದ, ಆದರೂ ಅವಿದ್ಯಾವಂತರೆಂಬ ಪಟ್ಟವಿಲ್ಲದ ಅಹಂಕಾರಿ ಸಮಾಜವನ್ನೇ. ವಿಪರ್ಯಾಸವೆಂದರೆ ಬ್ರಿಟೀಷ್ ಸಾಮ್ರಾಜ್ಯದ ಈ ಕನಸ್ಸನ್ನು ಸ್ವತಂತ್ರ ಭಾರತ ಚಾಚೂ ತಪ್ಪದೆ ಪಾಲಿಸಿತು. ಮೊದಲಿನ ಎಲ್ಲಾ ವಿಕೃತಿ, ಅಜ್ಞಾನ, ಮಿಥ್ಯೆಗಳೇ ವಿಜೃಂಭಿಸಿದವು. ಪಠ್ಯಪುಸ್ತಕ ರಚನಾ ಸಮಿತಿಗಳಲ್ಲಿ ಕಮ್ಯುನಿಷ್ಟ್ ಚಿಂತಕರು ನುಗ್ಗಿದರು. ಪರಿಣಾಮ ಎಲ್ಲವೂ ಕೆಂಪಾಯಿತು. ಸ್ಥಳೀಯ ಸತ್ಯಗಳೆಲ್ಲವೂ ದೂರವಾಯಿತು. ಕರ್ನಾಟಕದ ಪಠ್ಯಪುಸ್ತಕವೂ ಅದಕ್ಕೆ ಹೊರತಾಗಲಿಲ್ಲ.
ಇದೀಗ ಆ ೫೦ ವರ್ಷಗಳ ವಿಸ್ಮೃತಿಯಿಂದ ಹೊರಬರುವ, ಸತ್ಯವನ್ನು ಪ್ರತಿಪಾಧಿಸುವ ಸಮಯ ಬಂದಿದೆ. ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣದಲ್ಲಿ ಪಠ್ಯಗಳ ಪರಿಷ್ಕರಣೆ ಮತ್ತು ಹೊಸ ಪಠ್ಯಗಳ ತಯಾರಿ ನಡೆಯುತ್ತಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಅವು ಹೊರಬರುತ್ತವೆ. ಅವು ಹೊರಬರುವ ಮೊದಲೇ ವಿವಾದ, ಅಪಪ್ರಚಾರದ ಕಿಚ್ಚುಹೊತ್ತಿಸುವ ಹುನ್ನಾರ ನಡೆಯಲಾರಂಭವಾಗಿಬಿಟ್ಟಿದೆ. ಅವರ ಆರೋಪ ಮತ್ತು ಬಯ್ಗಳದ ಸ್ವರೂಪವಾದರೋ ನಗೆಹಬ್ಬವನ್ನು ನೆನಪಿಗೆ ತರುವಷ್ಟು ಬಾಲಿಶವೂ ಕ್ಷುಲ್ಲಕವೂ ಆಗಿದೆ. ಕೇಂದ್ರ ಸರಕಾರದ ಪಠ್ಯಪುಸ್ತಕ ರಚನೆಯ ಕೈಪಿಡಿಯನ್ನು ತಯಾರಿಸುವ ಎನ್.ಸಿ.ಇ.ಆರ್.ಟಿ ಯ ಆಧಾರದಲ್ಲೇ ಪ್ರಸ್ತತ ಪಠ್ಯಪುಸ್ತಕಗಳು ರಚನೆಯಾಗುತ್ತಿದ್ದರೂ ನಿಂದನೆ ನಡೆಯುತ್ತಿದೆ. ಹೊಸ ಪುಸ್ತಕದ ಒಂದು ಪುಟವನ್ನೂ ಕಾಣದವರೂ ಕೂಡ ಕೋಮುವಾದವಾಗಿಬಿಟ್ಟಿತು, ಕೇಸರೀಕರಣವಾಗಿಹೋಯಿತು ಎನ್ನುತ್ತಿದ್ದಾರೆ. ಹೀಗೆ ಪೂರ್ವಗ್ರಪೀಡಿತರಾಗಲು ಮುಖ್ಯ ಕಾರಣವೇನೆಂದರೆ ಪಠ್ಯ ಪುಸ್ತಕ ರಚನೆಯಲ್ಲಿ ಇದುವರೆಗಿದ್ದ ಜಡ್ಡುಹಿಡಿಯುವಂತಿದ್ದ ಚೌಕಟ್ಟನ್ನು ತ್ಯಜಿಸಿದ್ದು. ಅಂದರೆ ಒಂದನೇ ತರಗತಿಯಿಂದ ೫ನೇ ತರಗತಿಯವರೆಗಿನ ಪಠ್ಯಗಳಲ್ಲಿ ಕೇವಲ ಆಯಾಯ ಜಿಲ್ಲೆ ಮತ್ತು ತಾಲೂಕುಗಳ ಪರಿಸರ, ಸಂಸ್ಕೃತಿ, ಆರ್ಥಿಕತೆ ಮೊದಲಾದುವನ್ನು ಕೊಡಲಾಗುತ್ತದೆ ಎಂದು ಪಠ್ಯಪುಸ್ತಕ ಸಮಿತಿ ಘೋಷಿಸಿದೆ. ಅಲ್ಲದೆ ಇಡೀ ರಾಜ್ಯವನ್ನು ಬೆಂಗಳೂರು, ಮಂಗಳೂರು, ಗುಲ್ಬರ್ಗಾ ಮತ್ತು ಬೆಳಗಾವಿ ಎಂದು ನಾಲ್ಕು ವಿಭಾಗಗಳನ್ನಾಗಿ ಮಾಡಲಾಗಿದೆ. ಬುದ್ದಿಜೀವಿಗಳ ಕೋಪದ ಮೊದಲ ಕಾರಣವಿದು. ಆರೆಸ್ಸೆಸ್ ಈ ರೀತಿ ವಿಭಾಗಗಳನ್ನಾಗಿ ಮಾಡಿ ಕೆಲಸ ಮಾಡುತ್ತದೆ. ಇದು ಅವರದ್ದೇ ಹುನ್ನಾರ ಎಂಬುದು ಅವರ ಆರೋಪ. ಮತ್ತು ೬ನೇ ಮತ್ತು ೭ನೇ ತರಗತಿಯ ವಿದ್ಯಾರ್ಥಿಗಳು ಈ ವಿಭಾಗಗಳನ್ನು ಪರಸ್ಪರ ಕಲಿಯುತ್ತಾರೆ. ಅಂದರೆ ಈ ತರಗತಿಯ ಮಕ್ಕಳು ಇಡೀ ರಾಜ್ಯದ ವಿಷಯವನ್ನು ಅಧ್ಯಯನ ಮಾಡುತ್ತಾರೆ. ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯಕ್ಕನುಗುಣವಾಗಿ ಪ್ರೌಡ ಶಾಲೆಯಿಂದ ದೇಶ ಮತ್ತು ವಿದೇಶದ ವಿಷಯವನ್ನು ಕಲಿಯಬೇಕು ಎಂಬ ದೂರಾಲೋಚನೆಯಿಂದ ಪಠ್ಯಪುಸ್ತಕ ಸಮಿತಿ ಯೋಜನೆಯನ್ನು ಹಮ್ಮಿಕೊಂಡಿದೆ. ಇದರಲ್ಲಿ ತಪ್ಪೇನಿದೆ? ಮಂಗಳೂರಿನ ಮೂರನೇ ತರಗತಿಯ ಮಗು ದಕ್ಷಿಣ ಆಫ್ರಿಕಾದ ಭೌಗೋಳಿಕ ಪರಿಚಯವನ್ನು ಮಾಡಿಕೊಳ್ಳುವುದಕ್ಕಿಂತ ಮೊದಲು ಮಂಗಳೂರಿನ ಕರಾವಳಿ ತೀರದ ಪರಿಚಯವನ್ನು ಮಾಡಿಕೊಳ್ಳಬೇಕಲ್ಲವೇ? ರೂಪಿಸಿ ನಾಲ್ಕು ವಿಭಾಗಗಳಿಂದ ಮಗು ತನ್ನ ಜಿಲ್ಲೆ, ಪಕ್ಕದ ಜಿಲ್ಲೆಗಳ ಬಗ್ಗೆ ತಿಳಿದುಕೊಳ್ಳುತ್ತದೆ. ವ್ಯಕ್ತಿತ್ವದ ಸಮರ್ಥ ರೂಪಣೆಗೆ ಇಲ್ಲಿ ಎಲ್ಲಾ ಅವಕಾಶಗಳೂ ಇವೆ. ಮಂಗಳೂರಿನ ಪ್ರಾಥಮಿಕ ಶಾಲೆಯ ಮಗು ಮೊದಲು ಗೋವಿಂದ ಪೈಗಳನ್ನೂ , ಕೈಯಾರ ಕಿಂಜಣ್ಣ ರೈಗಳನ್ನೂ ಕುಂಬ್ಳೆ ಸುಂದರ ರಾಯರನ್ನೂ ತಿಳಿದುಕೊಳ್ಳಬೇಕೆ ಹೊರತು ಔರಂಗಜೇಬನನ್ನಲ್ಲ. ಹಾಗೆಯೇ ಬೆಳಗಾವಿಯ ಮಗು ಸಂಗೊಳ್ಳಿ ರಾಯಣ್ಣನನ್ನೂ ಕಿತ್ತೂರು ಚೆನ್ನಮ್ಮನನ್ನೂ ತಿಳಿಯಬೇಕೆ ಹೊರತು ಟಿಪ್ಪುವನ್ನೋ ಹೈದರಾಲಿಯನ್ನಲ್ಲ. ಪ್ರಸ್ತುತ ಪಠ್ಯಪುಸ್ತಕ ಮಂಡಲಿಯೂ ಇದನ್ನೇ ಹೇಳಿದೆಯಲ್ಲದೆ ಮುಸಲ್ಮಾನರನ್ನೆಲ್ಲಾ ಪಾಕಿಸ್ಥಾನಕ್ಕೆ ಓಡಿಸಿ ಎಂದು ಹೇಳಿಲ್ಲ. ಪಠ್ಯದ ಎಲ್ಲೂ ಪಕ್ಷಪಾತವನ್ನು ಮಾಡಿಲ್ಲ ಎಂದುದನ್ನು ತಿಳಿಯಲು ೫ನೇ ತರಗತಿ ಮತ್ತು ೮ನೇ ತರಗತಿಯ ಪುಸ್ತಕವನ್ನೊಮ್ಮೆ ಓದಬೇಕು. ೫ನೇ ತರಗತಿಯ ಸಮಾಜ ವಿಜ್ನಾನ ಪಠ್ಯದ ೫೨, ೫೩ ಮತ್ತು ೫೬ನೇ ಪುಟಗಳಲ್ಲಿ ಕೇವಲ ದೇವಸ್ಥಾನಗಳನ್ನೇ ತುರುಕಲಾಗಿದೆ ಎಂಬ ವ್ಯರ್ಥಾಲಾಪವನ್ನು ಕಮ್ಯುನಿಷ್ಟರು ಮಾಡುತ್ತಿದ್ದಾರೆ. ಏಕೆ ಸಮಾಜ ಪಾಠದಲ್ಲಿ ದೇವಸ್ಥಾನಗಳನ್ನು ತರಬಾರದೇ? ಬೆಂಗಳೂರು ವಿಭಾಗದ ಪಠ್ಯದಲ್ಲಿ ದೊಡ್ಡ ಗಣಪತಿ ದೇವಸ್ಥಾನದ ಉಲ್ಲೇಖವಿರುವಂತೆ ಶಿವಾಜಿ ನಗರದ ಬೆಸಲಿಕಾ ಇಗರ್ಜಿಯೂ ಇದೆ. ಜುಮ್ಮಾ ಮಸೀದಿಯೂ ಇದೆ. ಮುಳಭಾಗಿಲಿನ ಹಜರತ್ ವಲಿ ದರ್ಗಾವೂ ಇದೆ. ಬೆಳಗಾವಿ ವಿಭಾಗದಲ್ಲಿ ಕನಕದಾಸರಿದ್ದಾರೆ. ಮಂಗಳೂರು ವಿಭಾಗದ ಪಠ್ಯದಲ್ಲಿ ಮಧ್ವಾಚಾರ್ಯರಿದ್ದಾರೆ. ಮೈಸೂರು ವಿಭಾಗದ ಪುಸ್ತಕದಲ್ಲಿ ಟಿಪ್ಪುವಿನ ದರಿಯಾ ದೌಲತ್ ಇರುವಂತೆಯೇ ಮಂಗಳೂರಿನ ಕದ್ರಿ ಮಂಜುನಾಥೇಶ್ವರ ದೇವಸ್ಥಾನದ ಸಚಿತ್ರ ವಿವರಣೆಯೂ ಇದೆ. ಅಲ್ಲದೆ ಅಲೋಷಿಯಸ್ ಚರ್ಚು, ಮಿಲಾಗ್ರಿಸ್ ಚರ್ಚು,ಉಲ್ಲಾಳದ ಜುಮ್ಮಾ ಮಸೀದಿಗಳಿರುವಾಗ ದೇವಸ್ಥಾನಗಳು ಇರಬಾರದೆಂದರೆ ಇದು ಯಾವ ತರ್ಕ? ೫ನೇ ತರಗತಿಯ ಸಮಾಜ ವಿಜ್ನಾನ ಪುಸ್ತಕದಲ್ಲಿ "ಭಾರತದ ಸಾಂಸ್ಕೃತಿಕ ಭೂಪಟ" ಎಂಬ ಭೂಪಟವನ್ನು ಅಚ್ಚುಹಾಕಲಾಗಿದೆ. ಈ ಭೂಪಟ ಆರೆಸೆಸ್ಸಿನವರದ್ದೆಂದೂ ರಾಷ್ಟ್ರೋತ್ಥಾನ ಸಂಸ್ಥೆಯವರ ಭೂಪಟವೆಂದೂ ಬೊಬ್ಬೆಗಳು ಕೇಳಿಬರುತ್ತಿವೆ. ಅಖಂಡ ಸಾಂಸ್ಕೃತಿಕ ಭಾರತವನ್ನು ರಾಷ್ಟ್ರೋತ್ಥಾನದವರು ಭೋಗ್ಯಕ್ಕೋ ಕ್ರಯಕ್ಕೋ ತೆಗೆದುಕೊಂಡಿದ್ದಾರೆ ಎಂದು ಕರ್ನಾಟಕದ ಯಾವ ರಿಜಿಸ್ಟರ್ಡ್ ಕಛೇರಿಯಲ್ಲೂ ನೊಂದಣಿಯಾಗಿಲ್ಲ. ಆದರೆ ನಿಂದಕರಿಗೆ ಅದೂ ಒಂದು ಆರೋಪದ ವಸ್ತುವೆ.
೮ನೇ ತರಗತಿಯ ಸಮಾಜ ವಿಜ್ನಾನದ ಪುಸ್ತಕದಲ್ಲಿ " ಪ್ರಾಚೀನ ಭಾರತದ ನಾಗರಿಕತೆ" ಎಂಬ ಪಾಠವೊಂದಿದೆ. ಈ ಪಾಠದಲ್ಲಿ "ವೇದ ಕಾಲದಲ್ಲಿ ದ್ರಾವಿಡರನ್ನು ಬಿಡಲಾಗಿದೆ" ಮತ್ತು "ಆರ್ಯ-ದ್ರಾವಿಡ ಸಂಘರ್ಷವೇ ಇಲ್ಲ" ಎಂಬ ಆರೋಪವನ್ನು ಮಾಡಲಾಗಿದೆ.ಈ ದ್ರಾವಿಡರನ್ನು ಎಲ್ಲಿಂದ ತರೋಣ? ವೇದವನ್ನೂ ಇತಿಹಾಸವನ್ನೂ ಸರಿಯಾಗಿ ತಿಳಿಯದೆ ತಮ್ಮ ಮೂಗಿ ನೇರಕ್ಕೆ ಮಾತಾಡುವ ಈ ಬುದ್ಧಿಜೀವಿಗಳಿಗೆ ಆರ್ಯ-ದ್ರಾವಿಡ ಕುಸಿದುಹೋದ ವಾದ ಎಂಬುದು ಸಿದ್ದವಾದಾಗ ಏಕೆ ಕೈಕಟ್ಟಿಕೊಂಡು ಕುಳಿತಿದ್ದರು. ಸಮರ್ಥನೆಗೆ ದಾರಿಯೇ ಕಾಣಲಿಲ್ಲ ಏಕೆ? "ಹೊಸ ಮತಗಳ ಉದಯ" ಎಂಬ ಇನ್ನೊಂದು ಪಾಠದಲ್ಲಿ ಬುದ್ದನನ್ನು ಏಕವಚನದಲ್ಲಿ ಸಂಬೋಧಿಸಲಾಗಿದೆ ಎಂದೂ ಬುದ್ದಿಜೀವಿಗಳು ಮೊಸರಲ್ಲಿ ಕಲ್ಲುಹುಡುಕಿದ್ದಾರೆ. ಇದಕ್ಕೇನನ್ನಬೇಕು? " ಬುದ್ದರಿಗೆ ಬೋಧಿ ವೃಕ್ಷದಡಿಯಲ್ಲಿ ಜ್ನಾನೋದಯವಾಯಿತು" ಎಂದು ಉಲ್ಲೇಖಿಸಬೇಕಿತ್ತಂತೆ! ಬುದ್ದನನ್ನು ಏಕವಚನ ಮತ್ತು ಬಹುವಚನದಲ್ಲಿ ಸಂಭೋದಿಸುವ ವ್ಯಾಕರಣವನ್ನು ಎಲ್ಲಿ ಕಲಿಯೋಣ? ಇನ್ನು ೫ನೇ ತರಗತಿಯಲ್ಲಿ ಬಸವಣ್ಣವೇ ಇಲ್ಲ, ಹೈದರಾಲಿಯನ್ನು "ಸೋತ" ಎನ್ನಲಾಗಿದೆ ಎಂಬು ಹುಚ್ಚು ಆರೋಪಗಳೂ ಇವೆ. ಹೈದರಾಲಿ ಮರಾಠರಿಂದ ಸೋತಿದ್ದು ಪಠ್ಯಪುಸ್ತಕ ಸಮಿತಿಯವರ ತಪ್ಪೇ? " ಗುಪ್ತರ ಕಾಲದ ಸ್ತಂಭವನ್ನು ಸ್ತೂಪ ಎನ್ನಲಾಗಿದ್ದು, ಮೊಗಲರ ಕಾಲದ ಸ್ತಂಭವನ್ನು ಕಬ್ಬಿಣದ ಕಂಬ ಎನ್ನಲಾಗಿದೆ" ಎಂದು ಆರೋಪಿಸುವ ಪ್ರಚಾರಪ್ರೀಯರು ಬಿಳಿಯಾದ ಹಾಲನ್ನೇ ಕೊಟ್ಟರೂ ಹಸು, ಎಮ್ಮೆ ಮತ್ತು ನಂದಿನಿ ಹಾಲಿನ ಪುಡಿ ಮೂರೂ ಬೇರೆ ಬೇರೆ ಎಂದು ಅಂದಾಜು ಮಾಡದಷ್ಟು ದಡ್ಡರು ಎಂದೇ ಹೇಳಬೇಕು. ಸ್ತೂಪವೇ ಬೇರೆ ಕಂಬವೇ ಬೇರೆ ಎಂದು ಅರಿವಿಲ್ಲದಿರುವವರು ಇತಿಹಾಸವನ್ನೇ ಬರೆದುಬಿಡುತ್ತಾರಲ್ಲಾ? ಪ್ರೌಡ ಶಾಲೆಯ ಮಕ್ಕಳ ಪುಸ್ತಕದಲ್ಲಿ ಕಾಳಿದಾಸನ ಪಾಠವಿದೆ. ಅಲ್ಲಿ ಶಾಕುಂತಲೆಯ ಕಥೆ ಅನಿವಾರ್ಯವೇ ಹೊರತು ಮರ್ಲಿನ್ ಮನ್ರೋದ್ದಲ್ಲ. ಪೌರನೀತಿಯಲ್ಲಿ ಪ್ರಜಾಪ್ರಭುತ್ವವನ್ನು ವ್ಯಾಖ್ಯಾನಿಸಲು ಅಬ್ರಹಾಂ ಲಿಂಕನ್ ಉಲ್ಲೇಖನೀಯವೇ ವಿನಾ ಜಾನ್ ಅಬ್ರಹಾಂ ನಲ್ಲ. ಹಾಗೆಯೇ ಧರ್ಮ ಮತ್ತು ರಿಲೀಜಿಯನ್ ನ ವ್ಯತ್ಯಾಸವನ್ನು ಮಕ್ಕಳಿಗೆ ಅರಿಕೆ ಮಾಡಿಕೊಡುವುದು ಸಮಾಜ ಪಠ್ಯದ ಉದ್ದೇಶವೇ ವಿನಾ ಇಸವಿಗಳನ್ನು ತುಂಬಿಸುವುದಲ್ಲ.
ಬರುತ್ತಿರುವ ಪಠ್ಯಪುಸ್ತಕಗಳಿಂದ ನಿರೀಕ್ಷೆಗಳನ್ನು ಇಟ್ಟುಕೊಳ್ಳಬಹುದೆನ್ನಿಸುತ್ತದೆ. ಅಲ್ಲಿ ರಾಮಾಯಣ- ಮಹಾಭಾರತದ ನೀತಿಕಥೆಗಳಿವೆ. ಕೊಪರ್ನಿಕಸ್ -ಪೈತಾಗರೋಸನೊಟ್ಟಿಗೆ ಚರಕ ಸುಶ್ರುತರಿದ್ದಾರೆ. " ತಮಸೋಮಾ..." ಪ್ರಾರ್ಥನೆಯಿದೆ. ನಳಂದ ವಿ.ವಿಯ ದುರಂತ ಅಂತ್ಯದ ಕಾರಣಗಳಿವೆ. ಮಕ್ಕಳ ಭವಿಷ್ಯದಲ್ಲಿ ಜೀವಕಳೆ ತುಂಬಲು ಏನೇನಿರಬೇಕೋ ಅವೆಲ್ಲವೂ ಇವೆ. ವಿಪರ್ಯಾಸವೆಂದರೆ ಎ.ಕೆ. ಸುಬ್ಬಯ್ಯನವರಂಥಾ ಬುದ್ದಿಜೀವಿಗಳೂ ಇದೀಗ ಹೇಳಿಕೆಗಳ ಮೇಲೆ ಹೇಳಿಕೆಗಳನ್ನು ಕೊಡಲಾರಂಭಿಸಿದ್ದಾರೆ.ಹೀಗೆ ಹೇಳಿಕೆ ನೀಡುವವರಿಗೆಲ್ಲಾ ವೊಮ್ಮಕ್ಕಳಿದ್ದಾರೆ. ಅವರು ತಮ್ಮಂಥಾಗಿಬಿಡಬಾರದು ಎಂಬ ಸಣ್ಣ ಯೋಚನೆಯೂ ಈ ಬುದ್ದಿಜೀವಿಗಳಿಗೆ ಬರಬಾರದೇ?

ಟ್ವೀಟಿನ ಪೆಟ್ಟಿನ ಬಾಸುಂಡೆ


ಸ್ವಾತಂತ್ರ್ಯಪೂರ್ವದಲ್ಲೇನೋ ಸರ್ವಾಧಿಕಾರವಿತ್ತು. ಜನರ ದನಿ ಉಡುಗಿತ್ತು. ಅಕಾರಶಾಹಿ ವಿಜೃಂಭಿಸಿತ್ತು, ಅದಕ್ಕಾಗೇ ಚಳವಳಿಗಳು ನಡೆಯಿತು,ಸ್ವಾತಂತ್ರ್ಯ ಪ್ರಾಪ್ತವಾಯಿತು ಎಂಬೆಲ್ಲಾ ಕಥೆಗಳನ್ನು ಕೇಳಿ, ಓದಿ, ಕಲಿತು ದೇಶ ಕಟ್ಟಿದ್ದೂ ಆಯಿತು. ಆದರೆ ಸ್ವಾತಂತ್ರ್ಯ ಬಂದ ಮೇಲಾದರೂ ಆಗಿದ್ದೇನು? ಪ್ರಜಾಪ್ರಭುತ್ವದಲ್ಲಿ ಕಂಡಿದ್ದೇನು? ಮಹಾಮಹಾ ಗಡಿತಂಟೆಗಳೇ ಜನರ ಅರಿವಿಗೆ ಬಾರದೆ ನಾಲ್ಕು ಗೋಡೆಗಳ ಮಧ್ಯದಲ್ಲಿ ನಿಶ್ಚಯವಾಗಿ ಬಿಡುತ್ತಿದ್ದವು. ಹಗರಣಗಳಂತೂ ದೇಶಕ್ಕೆ ಬಹಿರಂಗವಾಗುವ ಸಂದರ್ಭವಂತೂ ಬರುತ್ತಲೇ ಇರಲಿಲ್ಲ. ಕೊನೆಗೊಮ್ಮೆ ಅದು ಬಹಿರಂಗವಾದರೂ ಜನರು ಏನೂ ಮಾಡುವಂತಿರಲಿಲ್ಲ. ಹಾಗಾಗಿ ಪ್ರಜಾಪ್ರಭುತ್ವವೂ ಒಂಥರಾ ಸರ್ವಾಧಿಕಾರದ ನೆರಳಲ್ಲೇ ಬಸವನ ಹುಳದಂತೆ ತೆವಳುತ್ತಿತ್ತು. ಆದ್ದರಿಂದ ಪಿರಂಗಿ ಕೋವಿ ಕೊಂಡುಕೊಳ್ಳುವ ನೆಪದಲ್ಲಿ ಹಣ ತಿಂದಾಗ, ವಿದೇಶಿ ರಾಷ್ಟ್ರ ಸಾವಿರಾರು ಚ. ಕಿ.ಮೀ ನೆಲವನ್ನು ನುಂಗಿದಾಗ, ಪ್ರಧಾನ ಮಂತ್ರಿಗಳೇ ಸಂಶಯಾಸ್ಪದವಾಗಿ ಸತ್ತಾಗಲೆಲ್ಲಾ ನಾಗರಿಕ ದನಿ ಹೊರಡಿಸಲಾಗದೇ ಇದ್ದುಬಿಟ್ಟರು. ನೆಹರೂ ರಂಥವರು ರಾಷ್ಟ್ರ ನಾಯಕರೂ ಆಗಿಬಿಟ್ಟರು. ಇಂಥ ಸಂದರ್ಭಗಳಲೆಲ್ಲಾ ನಮಗೆ ರಾಷ್ಟ್ರ ನಾಯಕರ ಪೌರುಷಗಳು ಕಾರಣ ಎನಿಸುವುದಿಲ್ಲ. ನಾಗರಿಕರ ದೌರ್ಬಲ್ಯ ಎಂದೂ ಎನಿಸುವುದಿಲ್ಲ. ಅಸಹಾಯಕತೆ ಮತ್ತು ಅವಕಾಶಗಳ ಕೊರತೆ ಮಾತ್ರ ಕಾಣುತ್ತದೆ. ಹಾಗಾಗಿ ಯಾವುದೋ ರಾಷ್ಟ್ರದ, ಯಾವನೋ ಒಬ್ಬನ ಹೆಸರು ಭೋಪಾಲ್ ಅನಿಲ ದುರಂತದೊಟ್ಟಿಗೆ ಕೇಳಿಬಂದಾಗ, ಯಾವನೋ ಮಂತ್ರಿ ರಾಷ್ಟ್ರ ಪುರುಷ ಕ್ರಾಂತಿಕಾರಿಗಳ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದಾಗ, ಇನ್ನಾವುದೋ ಪತ್ರಿಕೆ ದುಷ್ಟಕೂಟದ ಪಾದಪೂಜೆ ಮಾಡಿದಾಗ, ಯಾವುದೋ ಮಂತ್ರಿ ಸುಳ್ಳುಸುಳ್ಳೇ ಮಾತಾಡಿದಾಗ ಇದೇ ಪ್ರಜಾಪ್ರಭುತ್ವ ದೇಶದ ನಾಗರಿಕ ಸುಮ್ಮನೇ ಇರುತ್ತಿದ್ದ. ಮಿಸುಕಾಡಲೇ ಇಲ್ಲ. ತೆಪ್ಪಗಿರುವುದೇ ಮೂಲಭೂತ ಕರ್ತವ್ಯ ಎಂಬಂತೆಯೇ ಇದ್ದ. ಹಾಗಿದ್ದ ನಾಗರಿಕನಲ್ಲಿ ಕನಸುಗಳಿಲ್ಲದೇ ಇರಲಿಲ್ಲ. ಆಕ್ರೋಶಗಳಿಲ್ಲದೇ ಇರಲಿಲ್ಲ.
ಹೇಗೆ ತಾನೇ ಅವಕಾಶವಿತ್ತು?ನಾಗರಿಕ ದನಿಯಾಗಲು ಕೆಂಬಾವುಟವೊಂದೇ ಸಂಕೇತ ಎನ್ನುವವರೇ ಇರುವಾಗ, ರಾಷ್ಟ್ರೀಯವಾದಿಗಳ ದಮನ ನಿರಂತರ ನಡೆಯುತ್ತಿರುವಾಗ ಹೇಗೆ ತಾನೇ ಚಳವಳಿಗಳು ಸುಲಭವಾಗಿ ಚಲಿಸುತ್ತಿದ್ದವು? ಸುದೈವವೆಂದರೆ ಕೆಲವೇ ವರ್ಷಗಳಲ್ಲಿ ಕೆಂಬಾವುಟ ಹರಿದೇ ಹೋಯಿತು. ಈ ನಡುವೆ ರಾಷ್ಟ್ರೀಯತೆಯ ವೇದಿಕೆಯಲ್ಲಿ ಹಲವು ಸಂಘಟನೆಗಳು ಜನರ ದನಿಯಾದರೂ ಆ ಸಂಘಟನೆಗಳನ್ನು ನಿಂದಿಸುವ, ಅಪಪ್ರಚಾರದ ಸುಳಿಯೊಳಗೆ ಹಾಕಿ ಕಲಕುವ ಮಾರ್ಗವನ್ನು ದುರ್ಮಾರ್ಗಿಗಳು ನಡೆಸಲಾರಂಭಿಸಿದರು. ಮಾಧ್ಯಮರಂಗದಲ್ಲಿ , ವಿಶ್ವವಿದ್ವಾಲಯಗಳಲ್ಲಿ, ಉನ್ನತ ಅಕಾರಿ ಸ್ತರಗಳಲ್ಲಿ ಅಂಥವರೇ ತುಂಬಿದರು. ಬುದ್ಧಿಜೀವಿಗಳು ತಯಾರಾದರು. ಅವರಿಗೆ ಎದುರಾಡುವವರೇ ಇಲ್ಲದಾದರು. ಇದ್ದರೂ ಅವರನ್ನು ಲೆಕ್ಕಿಸದೆ , ಪಲಾಯನದ ತಂತ್ರಗಾರಿಕೆ ಮತ್ತು ನುಣುಚಿಕೊಳ್ಳುವ ಗುಣದಿಂದ ಬುದ್ಧಿಜೀವಿಗಳು ಬಚಾವಾಗುತ್ತಿದ್ದರು.
ಆದರೆ ಎಷ್ಟು ದಿನ ಈ ಪಲಾಯನ? ಇದೀಗ ಬುದ್ಧಿಜೀವಿಗಳೂ ಸೋಲುತ್ತಿದ್ದಾರೆ.ಅಷ್ಟೇ ಅಲ್ಲದೆ ಕ್ಷಮೆಯನ್ನೂ ಕೇಳುತ್ತಿದ್ದಾರೆ. ಹೆದರುತ್ತಲೂ ಇದ್ದಾರೆ. ಮತಿ ಇಲ್ಲದವರಿಗೆ ಬಹುತೇಕ ಗತಿಯೂ ಇರುವುದಿಲ್ಲ. ಅದನ್ನು ಹೊಸಪೀಳಿಗೆ ಅರ್ಥಮಾಡಿಕೊಂಡಿದೆ. ಅವರು ತಮ್ಮ ದನಿಯನ್ನು ಇಂದು ಎತ್ತುತ್ತಿದ್ದಾರೆ. ಅದಕ್ಕಾಗಿ ತಂತ್ರಜ್ನಾನವನ್ನು ಬಳಸಿಕೊಂಡಿದ್ದಾರೆ. ಇದುವರೆಗೆ ಕೋಮುವಾದಿಗಳು ಎಂದು ಜರೆದು ದನಿಯನ್ನು ಲೆಕ್ಕಿಸದೆ ಅಡಿಯಿಡುತ್ತಿದ್ದ ಉದ್ದಟರೂ ಮೈ ಎಲ್ಲಾ ಕಣ್ಣಾಗಿ ಎಚ್ಚರದಿಂದ ಇರುವಂತಾಗಿದೆ. ಹೀಗೆ ಯುವಜನರ ದನಿಯಾಗಿ, ಖೂಳರ ಭಯವಾಗಿ, ಹಲವು ಆಧುನಿಕ ಚಳವಳಿಗಳಿಗೆ ದಿಕ್ಕಾಗಿ ನಿಂತಿರುವುದು ನವಮಾಧ್ಯಮವೆಂದೇ ಪರಿಗಣಿಸಲಾಗುತ್ತಿರುವ ಟ್ವಿಟ್ಟರ್ ಎಂಬ ಚಿಲಿಪಿಲಿ.
ಟ್ವಿಟ್ಟರ್ ಅರ್ಧ ಶತಮಾನದ ಜನರ ಬೇಗುದಿಗೆ ದನಿಯಾಗಿ ನಿಂತಿದೆ ಎಂದರೆ ತಪ್ಪಿಲ್ಲ. ಮೊದಲೆಲ್ಲಾ ಸಾಮಾಜಿಕ ಚಳವಳಿಗಳನ್ನು ಗಂಭೀರವಾಗಿ ಪರಿಗಣಿಸದೆ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುತ್ತಿದ್ದ ಭಾರತದ ಮಾಧ್ಯಮರಂಗ, ಅಧಿಕಾರ ವರ್ಗಗಳು ಟ್ವಿಟ್ಟರ್ ನ ಕಾರಣದಿಂದ ಅನಿವಾರ್ಯವಾಗಿಯಾದರೂ ಚಳವಳಿಗಳನ್ನು ಬೆಂಬಲಿಸುವಂತಾಗಿದೆ. ಇಂಟರ್ ನೆಟ್ಟಿನ ಚರ್ಚಾತಾಣವೆಂದೂ ಅಭಿಪ್ರಾಯ ಹಂಚಿಕೆಯ ಜಾಗವೆಂದೂ ಮುಕ್ತ ಅಭಿವ್ಯಕ್ತಿಯ ಮಾಧ್ಯಮವೆಂದೂ ಹೇಳಬಹುದಾದ ಈ ಟ್ವಿಟ್ಟರ್ ದೇಶದಲ್ಲಿ ಮೌನವಾಗಿ ಮಾಡಿದ ಕಾರ್ಯ ನಿಜವಾಗಿಯೂ ಪ್ರಜಾಪ್ರಭುತ್ವವನ್ನು ಉಳಿಸುವ ಕೆಲಸವೇ. ಅಧುನಿಕ, ಇಂಗ್ಲಿಷ್ ಬಲ್ಲ, ದೊಡ್ಡ ಉದ್ಯೋಗದ ಜನರೂ ರಾಷ್ಟ್ರ ಕಾರ್ಯದಲ್ಲಿ ಪಾಲುದಾರರಾಗಬಹುದು ಎಂಬುದನ್ನು ಟ್ವಿಟ್ಟರ್ ಪ್ರಮಾಣೀಕರಿಸಿತು. ಮಾಧ್ಯಮ ಲೋಕದಲ್ಲಿ ಟ್ವಿಟ್ಟರ್ ಎಷ್ಟೊಂದು ಪ್ರಭಾವಿ ಎಂದರೆ ಭಾರತದ ವಿವಿಧ ಕ್ಷೇತ್ರಗಳ ಆಗುಹೋಗುಗಳ ಬಗ್ಗೆ ಟ್ವಿಟ್ಟರ್ ಕಾವಲು ಕಾಯುತ್ತದೆ. ದೇಶದ ಯಾವುದೇ ಸಂಗತಿಯೂ ಅಲ್ಲಿ ಚರ್ಚೆಯಾಗುತ್ತದೆ. ಚರ್ಚಿತ ಎಲ್ಲಾ ವಿಷಯವೂ ಹೊಸ ಹೊಳಪಿನಿಂದ ಟ್ರೆಂಡ್ ಒಂದನ್ನು ಹುಟ್ಟುಹಾಕುತ್ತವೆ. ಟ್ವಿಟ್ಟರ್ ಯಾವ ದೊಣ್ಣೆನಾಯಕನನ್ನೂ ತರಾಟೆಗೆ ತೆಗೆದುಕೊಳ್ಳದೆ ಬಿಡದು. ಒಂದು ವೇಳೆ ಭಾರತದಲ್ಲಿ ಟ್ವಿಟ್ಟರ್ ಅಷ್ಟೊಂದು ಬಳಕೆಯಲ್ಲಿಲ್ಲದ ಐದಾರು ವರ್ಷಗಳ ಹಿಂದೆ ೩ಜಿ ಹಗರಣವೋ ಕಾಮನ್‌ವೆಲ್ತ್ ಹಗರಣವೋ ಬೆಳಕಿಗೆ ಬಂದಿರುತ್ತಿದ್ದರೆ ಸುರೇಶ್ ಕಲ್ಮಾಡಿಯೂ ರಾಜಾ, ಕನಿಮೋಳಿಗಳು ಜೈಲುಪಾಲಾಗುವುದೂ ಸಂಶಯವಿತ್ತು ಎನ್ನಬಹುದು. ಟ್ವಿಟ್ಟರ್ ಇಂದು ಸುದ್ಧಿಮೂಲವಾಗಿ , ಜ್ನಾನದ ಮೂಲವೂ ಆಗಿ ಇತರ ಮಾಧ್ಯಮಗಳಿಗಿಂತ ದಿನೇ ದಿನೇ ಜನಪ್ರೀಯವಾಗುತ್ತಿದೆ. ಇತರ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳೂ ಕೂಡ ಟ್ವಿಟ್ಟರನ್ನು ಹೊರಗಿಟ್ಟು ನಡೆಯಲಾರದಂಥ ವಾತಾವರಣ ಇಂದು ಸೃಷ್ಟಿಯಾಗಿದೆ. ಜನರ ದನಿಯ ತಾಕತ್ತು ನಿಧಾನವಾಗಿಯಾದರೂ ಪ್ರಧಾನವಾಗುತ್ತಿದೆ. ಜನರ ದನಿಯಾಗಲು ಕೇವಲ ೧೪೦ ಅಕ್ಷರಗಳು ಸಾಕಾಗಬಲ್ಲವು ಎಂಬುದಕ್ಕೆ ಉದಾಹರಣೆಗಳೆಷ್ಟಿವೆ.
ಕಳೆದ ನವೆಂಬರ್ ೯ರಂದು ಸಿಎನ್‌ಎನ್-ಐಬಿಎನ್ ಚಾನಲ್ಲಿನಲ್ಲಿ ಸಾಗರಿಕಾ ಘೋಷ್ ನಡೆಸಿಕೊಡುವ "ಫೇಸಿಗ್ ದಿ ನೇಷನ್" ಕಾರ್ಯಕ್ರಮ ಪ್ರಸಾರವಾಯಿತು. ಇದೊಂದು ನೇರಪ್ರಸಾರವೆಂದೂ ಅತಿಥಿಗಳು ಸಾಕ್ಷಾತ್ ದೇಶವನ್ನೇ ಎದುರಿಸುತ್ತಾರೆಂದೂ ಆ ಕಾರ್ಯಕ್ರಮದ ಬಗ್ಗೆ ಇಂದಿಗೂ ಅಂತೆಕಂತೆಗಳಿವೆ. ಅಂದೂ ಕೂಡ ಎಂದಿನ ಅಂಥ ಅಂತೆಕಂತೆಗಳನ್ನು ಹೊತ್ತುಕೊಂಡೇ ಕಾರ್ಯಕ್ರಮ ಪ್ರಸಾರವಾಯಿತು."ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ಧಾರ್ಮಿಕ ನಾಯಕರ ಪಾತ್ರ" ಕುರಿತು ಸಾಗರಿಕಾ ಮೂರ್ನಾಲ್ಕು ಜನರನ್ನು ಸ್ಟುಡಿಯೋಕ್ಕೆ ಕರೆಸಿ ಪ್ಯಾನೆಲ್ಲಿನಲ್ಲಿ ಕೂರಿಸಿದ್ದಳು. ಶ್ರೀ ಶ್ರೀ ರವಿಶಂಕರ ರನ್ನೂ ಕ್ಯಾಮರಾದಲ್ಲಿ ತೋರಿಸಿ ನೇರಸಂಪರ್ಕದಲ್ಲಿದ್ದಾರೆ ಎಂದು ಘೋಷಿಸಿದಳು. ಅಲ್ಲಿಂದ ಸಾಗರಿಕಾ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಸಿಡಿಸತೊಡಗಿದಳು. ಸಾಗರಿಕಾಳ ಪ್ರಶ್ನೆಗಳಿಗೆ ರವಿಶಂಕರರ ಉತ್ತರದಲ್ಲೇನೋ ಎಡವಟ್ಟಿದೆ ಎಂದು ಸೂಕ್ಷ್ಮ ವೀಕ್ಷಕರಿಗೆ ಅನಿಸಲಾರಂಭಿಸಿತು. ಆದರೆ ಕೆಲವು ವಿಮರ್ಶಕರು ಮಾತ್ರ "ಅಬ್ಬಾ ಸಾಗರಿಕಾ" ಎಂದರು. ಆದಾದ ಕೆಲವೇ ಹೊತ್ತಿನಲ್ಲಿ ಟ್ವಿಟ್ಟರಿನಲ್ಲಿ ಸಂದೇಶವೊಂದು ಪ್ರಕಟವಾಯಿತು. ರವಿಶಂಕರರ ಅನುಯಾಯಿಯೊಬ್ಬರು "ಈ ಹೊತ್ತಿನಲ್ಲಿ ರವಿಶಂಕರರು ನೇರಪ್ರಸಾರದಲ್ಲಿಲ್ಲ. ಇದು ರೆಕಾರ್ಡು ಸಂದರ್ಶನ " ಎಂದು ಟ್ವೀಟ್ ಮಾಡಿದರು. ಅದನ್ನು ಸಾಗರಿಕಾ ಮತ್ತು ಚಾನಲ್ ಖಂಡತುಂಡವಾಗಿ ನಿರಾಕರಿಸಿತು. ಪಟ್ಟುಬಿಟದ ಟ್ವೀಟ್ ಮಾಡುವ ಯುವಕರು ಬೆಂಬಿಡದೆ ಬಾಣ ಹೂಡಿದರು. ಕೊನೆಗೆ ಸಾಗರಿಕಾ ಕ್ಷಮೆಯಾಚಿಸಲೇ ಬೇಕಾಯಿತು. ಆದರೂ ಬೆಂಬಿಡದ ಟ್ವಿಟ್ಟರ್ ಚಾನಲಿನಲ್ಲೇ ಕ್ಷಮೆ ಯಾಚಿಸಬೇಕೆಂದು ಹಠ ಹಿಡಿದವು. ಗತ್ಯಂತರವಿಲ್ಲದೆ ಚಾನಲ್ ಕ್ಷಮೆ ಯಾಚನೆ ಮಾಡಿತು. ಇಂಥ ಸಾಧನೆ ಸಾಧ್ಯವಾಗಿದ್ದು ಕೇವಲ ಟ್ವಿಟ್ಟರ್ ನಿಂದ. ದಶಕಗಳಷ್ಟು ಕಾಲ ಆನೆ ನಡೆದಿದ್ದೇ ದಾರಿ ಎಂಬಂತಾಡುತ್ತಿದ್ದವರು ಹಳ್ಳಕ್ಕೆ ಬಿದ್ದಿದ್ದರು. ಕಾರಣ ಟ್ವಿಟ್ಟರ್. ಇಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ಏನೆಂದರೆ ಏನನ್ನೂ ಪ್ರಸಾರಮಾಡಿ ಶೋಕಿ ಮಾಡಲಾಗುವುದಿಲ್ಲ. ಕಾರಣ ಟ್ವಿಟ್ಟರ್. ಟ್ವಿಟ್ಟರ್ ಗಳ ಪ್ರವಾಹದಿಂದ ಮಾಧ್ಯಮಗಳು ನಿಜಕ್ಕೂ ಹೆದರುತ್ತಿವೆ. ಬರ್ಖಾ ದತ್ ಳಂತವಳೇ ಮೈಯೆಲ್ಲಾ ಕಣ್ಣಾಗಿರುತ್ತಾಳೆ. ಒಮ್ಮೆ ದಿಗ್ವಿಜಯ ಸಿಂಗರನ್ನು streetfighting rajput ಎಂದು ಹೊಗಳಿದ ಸಾಗರಿಕಾ ಘೋಷ್ ಮತ್ತು ಅವಳ ಪತಿ ರಾಜದೀಪ್ ಸರದೇಸಾಯಿ ಯನ್ನು ಟ್ವಿಟ್ಟರ್ ಗಳು ಅಟ್ಟಾಡಿಸಿಕೊಂಡು ತಪ್ಪೊಪ್ಪಿಕೊಳ್ಳುವಂತೆ ಮಾಡಿದ್ದವು. ಟ್ವಿಟ್ಟರ್ ಗಳ ಈ ದಾಳಿಯಿಂದ ಹೈರಾಣಾದ ಸಾಗರಿಕಾ " internet hindus are like swarms of bees. They come swarming after you at any mention of Modi, muslims or Pakistan " ಎಂದು ನುಡಿದಿದ್ದಳು. ಇಂದು ಬುದ್ದಿಜೀವಿ ತಂತ್ರಗಳು ಅಮಾಯಕರ ಮೇಲೆ ನಡೆಯಬಹುದೇ ಹೊರತು ವಿದ್ಯಾವಂತರ ಮೇಲೆ ನಡೆಯಲಾರವು ಎಂಬುದನ್ನು ಟ್ವಿಟ್ಟರ್ ತೋರಿಸಿಕೊಟ್ಟಿದೆ. ಮಾರ್ಕ್ಸ್‌ವಾದಿಗಳ ಆಟಾಟೋಪ ಭಾರತದಲ್ಲಿನ್ನು ಕಿಂಚಿತ್ತೂ ನಡೆಯದು ಎಂಬ ಎಚ್ಚರಿಕೆಯನ್ನು ಟ್ವಿಟ್ಟರ್ ನೀಡಿದೆ. ರಾಷ್ಟ್ರೀಯವಾದದ ಸ್ಪಷ್ಟ ಧ್ವನಿಯಾಗಿ ಟ್ವಿಟ್ಟರ್ ಉಲಿಯುತ್ತಿದೆ. ಮಾಧ್ಯಮವನ್ನೂ , ಪ್ರಧಾನಮಂತ್ರಿಗಳನ್ನೂ ಪ್ರಶ್ನಿಸಬಹುದು ಎಂಬುದನ್ನು ಟ್ವಿಟ್ಟರ್ ತೋರಿಸಿಕೊಟ್ಟದೆ. ರಾಡಿಯಾ ಟೇಪ್ ಹಗರಣ ರಾಷ್ಟ್ರಾದ್ಯಂತ ಚರ್ಚೆಯಾಗಲು ಕಾರಣವಾಗಿದ್ದು ಇದೇ ಟ್ವಿಟ್ಟರ್ ಎಂದರೆ ಜನರ ದನಿಗಿರುವ ಶಕ್ತಿಯನ್ನು ಅಂದಾಜಿಸಬಹುದು. ಜನಲೋಕ ಪಾಲ ಮತ್ತು ಅಣ್ಣಾಹಜಾರೆ ಚಳವಳಿಗಳಿಗೆ ಕಾವು ಕೊಟ್ಟಿದ್ದು ಇದೇ ಟ್ವಿಟ್ಟರ್. ಅಷ್ಟೇ ಅಲ್ಲದೆ ನ್ಯಾಯಾಂಗವೂ ಕೂಡ ಟ್ವಿಟ್ಟರನ್ನು ಗಂಭೀರವಾಗಿ ಪರಿಗಣಿಸುತ್ತದೆ. ದೇಶಾದ್ಯಂತ ಒಂದು ಟ್ರೆಂಡ್ ಅನ್ನು ಸೃಷ್ಟಿಮಾಡುವ ಟ್ವಿಟ್ಟರನ್ನು ಲಘುವಾಗಿ ಪರಿಗಣಿಸಲಾಗದು ಎಂದು ಕಾನೂನು ತಜ್ನರೇ ಹೇಳುತ್ತಿದ್ದಾರೆ. ಕರ್ನಾಟಕದಲ್ಲಿ ಲೋಕಾಯುಕ್ತ ವರದಿ ಸೋರಿಕೆಯಾದಾಗ ಅದರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನವರ ಉಲ್ಲೇಖವಿಲ್ಲದೇ ಇದ್ದಾಗ ಅದನ್ನು ಗುರುತಿಸಿ ಸುದ್ಧಿಯಾಗಿಸಿದ್ದು ಯಾವುದೋ ನಂಬರ್ ವನ್ ಚಾನಲ್ ನವರಲ್ಲ. ಬರೀ ಒಂದು ಟ್ವೀಟ್ ಎನ್ನುವುದನ್ನು ಮರೆಯಬಾರದು. ಸುದ್ಧಿ ಮೂಲವಾಗಿಯೂ ಟ್ವಿಟ್ಟರ್ ಮಾಧ್ಯಮ.
ಐಶ್ವರ್ಯ ರೈಗರ್ಭಿಣಿಯಾಗಿದ್ದಾಳೆ ಎಂದು ಅಮಿತಾಬ್ ಬಚ್ಚನ್ ಕೂಡ ಪತ್ರಿಕಾಗೋಷ್ಟಿ ಮಾಡಲಸಾರ. ಊರೆಲ್ಲಾ ತಿಳಿಯಬೇಕು ಎಂದುಕೊಳ್ಳುವುದೂ ಸರಿಯಾಗದು. ಇಂಥ ಸಮಯದಲ್ಲಿ ಅಮಿತಾಬ್ ನಾನು ತಾತನಾಗುತ್ತಿದ್ದಾನೆ ಎಂಬ ಖುಷಿಯನ್ನು ಹೇಳಲು ವೇದಿಕೆಯಾಗಿದ್ದು ಟ್ವಿಟ್ಟರ್ ನಿಂದ. ಕಳೆದ ವರ್ಷ ಮುಂಬೈಯಲ್ಲಿ ಸ್ಪೋಟ ಸಂಭವಿಸಿದಾಗ ಕೇವಲ ಟ್ವಿಟ್ಟರ್ ಮಾಹಿತಿಯಿಂದಲೇ ಯುವಕರು ಆಸ್ಪತ್ರೆಗಳಿಗೆ ಧಾವಿಸಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದನ್ನು ಮರೆಯಲು ಹೇಗೆ ಸಾಧ್ಯ.ಇನ್ನು ಎಲ್ಲೂ ಸಿಗದ ಸುದ್ದಿಗಳು ಟ್ವಿಟ್ಟರ್ ನಲ್ಲಿ ಸಿಗುತ್ತವೆ. ಮುಖ್ಯವಾಹಿನಿಗಳ ಕೋಳಿಗಳಿಂದಲೇ ಬೆಳಗಾಗುತ್ತವೆ ಎಂಬ ಭ್ರಮೆಯನ್ನು ಇಂದು ಯಾರೂ ಹೊತ್ತುಕೊಂಡಿಲ್ಲ. ಉತ್ತರಪ್ರದೇಶದಲ್ಲಿ ನಕಲಿ ಮತಯಂತ್ರಗಳು ಪತ್ತೆಯಾಗಿದ್ದು, ಓರಿಸ್ಸಾದಲ್ಲಿ ನೂರಾರು ಜನ ಹಿಂದುಗಳು ಮರಳಿ ಮಾತ್ರಧರ್ಮಕ್ಕೆ ಬಂದಿದ್ದು, ಗಿಲ್ಗಿಟ್-ಬಾಲ್ಟಿಸ್ಥಾನದ ಆಗುಹೋಗುಗಳು, ಲವ್ ಜಿಹಾದಿನ ಕರಾಳ ಹಸ್ತಗಳು ಟ್ವಿಟ್ಟರ್ ನಲ್ಲಿ ಕಾಣಸಿಗುತ್ತವೆ. ಜೊತೆಗೆ ಕೆಲವು ಪ್ರಶ್ನೆಗಳಿಗೆ ಉತ್ತರವನ್ನೂ ಟ್ವಿಟ್ಟರ್ ಕೊಡುತ್ತವೆ. ಬಟ್ಟೆ ಅಂಗಡಿಯಲ್ಲಿ ಹೊಸಬಟ್ಟೆ ತೊಡಿಸಿ ನಿಲ್ಲಿಸಿರುವ ಫೈಬರ್ ಗೊಂಬೆಯಂತೆ ಕಾಣುವ ಶಾರುಕ್ ಖಾನನು ವಿಡಿಯೋ ಗೇಮಿನಂತೆ ಕಾಣುವ ಸಿನಿಮಾವನ್ನು ನಿರ್ಮಿಸಿದಾಗ ಚಾನೆಲ್‌ಗಳೇಕೆ ಆತನನ್ನು ಕರೆಸಿ ಗಂಟೆಗಟ್ಟಲೆ ಮಾತಾಡಿಸುತ್ತವೆ? ಬಾಲಿವುಡ್ಡಿನ ಹಿಂದೂ ನಟರೆಲ್ಲಾ ಗೆಲ್ಲಲು ಕಷ್ಟಪಡುತ್ತಾರೆ ಏಕೆ? ಕುನಾಲ್ ಕೇಮು ಎಂಬ ಅದ್ಬುತ ಯುವನಟ ಏನಾದ? ರಣ್ ಸಿನಿಮಾವನ್ನು ಯಾವ ಮಾಧ್ಯಮಗಳೂ ಏಕೆ ಚರ್ಚೆಗೆ ಒಳಪಡಿಸುವುದಿಲ್ಲ? ಮುಂತಾದ ಕುತೂಹಲವನ್ನು ತಣಿಸುತ್ತದೆ. ಜೀನ್ಸ್ ಹಾಕಿದ ಹುಡುಗಿಯೂ ಇಲ್ಲಿ ಅಖಂಡ ಭಾರತದ ಬಗ್ಗೆ ಧೈರ್ಯವಾಗಿ ಮಾತಾಡುತ್ತಾಳೆ. ತೀಕ್ಷ್ಣವಾದ, ಕೆಲವೊಮ್ಮೆ ಒರಟಾದ, ಕುಹಕದ, ಕೌತುಕದ ಟ್ವೀಟ್‌ಗಳು ಮುಟ್ಟುವಲ್ಲಿಗೆ ಮುಟ್ಟಿರುತ್ತವೆ. ಟ್ವೀಟ್ ಎಂಬ ಪೆಟ್ಟು ಬೀಳುವಲ್ಲಿಗೆ ಬೀಳುತ್ತದೆ. ಟ್ವೀಟ್ ನ ಪೆಟ್ಟಿಗೆ ಬಾಸುಂಡೆ ಬರಿಸಿಕೊಂಡವರು ಉಜ್ಜಿಕೊಳ್ಳುತ್ತಿದ್ದಾರೆ.

ಇದು ಭಾರತೀಯ ಹಾಕಿಯ ನರ್ಸರಿ ಶಾಲೆ ಏಕೆಂದರೆ...


ದು ಸ್ವಾತಂತ್ರ್ಯ ಪೂರ್ವದ ಒಂದು ಘಟನೆ.
ಅಮರ ಸೇನಾನಿ ಜನರಲ್ ತಿಮ್ಮಯ್ಯನವರು ಆಗ ಇನ್ನೂ ಬ್ರಿಗೇಡಿಯರ್. ಆಗಷ್ಟೇ ಅವರಿಗೆ ಅಲಹಾಬಾದಿನಿಂದ ಸಾಂಡಿಮಾನ್ ಎಂಬಲ್ಲಿಗೆ ವರ್ಗವಾಗಿತ್ತು. ಅಲ್ಲಿ ಭಾರತೀಯ ಸೇನೆಯ ಪ್ರತಿಷ್ಠಿತ ಹಾಕಿ ಪಂದ್ಯಾವಳಿಯೊಂದು ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗುವುದರಲ್ಲಿತ್ತು. ತಿಮ್ಮಯ್ಯನವರ ಉಸ್ತುವಾರಿಯಲ್ಲಿದ್ದದ್ದು ೧೯ನೇ ಹೈದರಾಬಾದಿನ ದುರ್ಬಲ ತಂಡ. ಎಲ್ಲಾ ತಂಡದವರು ಹೈದರಾಬಾದ್ ತಂಡವನ್ನು ಗೇಲಿ ಮಾಡಿಕೊಂಡು ನಗಾಡುತ್ತಿದ್ದರು. " ಟ್ಯಾಂಕರುಗಳನ್ನು ತಂದುಬಿಡಿ , ಗೋಲು ತುಂಬಿಸಿಕೊಂಡು ಹೋಗಬಹುದು" ಎಂದು ತಮಾಷೆ ಮಾಡುತ್ತಿದ್ದರು. ಇನ್ನೂ ಒಂದು ತಲೆಬಿಸಿಯೆಂದರೆ ಹೈದರಾಬಾದು ತಂಡಕ್ಕೆ ಮೊದಲ ಎದುರಾಳಿಯೇ ಆಗಿನ ಕಾಲಕ್ಕೆ ಅತ್ಯಂತ ಪ್ರಬಲ ತಂಡವೆಂದೂ, ಹುಲಿಗಳು ಎಂದೂ ಹೆಸರುವಾಸಿಯಾಗಿದ್ದ ಪಂಜಾಬಿನ ಸಿಕ್ಖ್ ರೆಜಿಮೆಂಟಿನ ತಂಡ. ಹೈದರಾಬಾದ್ ತಂಡಕ್ಕೆ ಕೋಚ್ ಆಗಿದ್ದ ತಿಮ್ಮಯ್ಯನವರಿಗೆ ಪೀಕಲಾಟಕ್ಕಿಟ್ಟುಕೊಂಡಿತು. ಇನ್ನೇನು ಕೆಲವೇ ದಿನ. ಸಿಕ್ಖ್ ರೆಜಿಮೆಂಟಿನವರಂತೂ ೨೦ ರಿಂದ ೩೦ ಗೋಲುಗಳ ಅಂತರದ ಗೆಲುವಿನ ಲೆಕ್ಕಾಚಾರದಲ್ಲಿ ಅದಾಗಲೇ ತೊಡಗಿಬಿಟ್ಟಿದ್ದರು. ಆದರೆ ತಿಮ್ಮಯ್ಯನವರು ಸಾಕ್ಷಾತ್ ಯುದ್ದರಂಗಕ್ಕೆ ಹೊರಟ ಸ್ಥೈರ್ಯದೊಂದಿಗೆ ಚಿಂತನೆಯಲ್ಲಿ ತೊಡಗಿದರು. ಅಚಾನಕ್ಕಾಗಿ ಕೊಡವ ಯೋಧರ ಪಟ್ಟಿಯನ್ನು ಮಾಡಲಾರಂಭಿಸಿದರು. ಎಲ್ಲರನ್ನೂ ಒಟ್ಟು ಸೇರಿಸಿದರು. ಸ್ವತಃ ಮೈದಾನಕ್ಕಿಳಿದು ತರಬೇತುಗೊಳಿಸಿದರು. ಪಂದ್ಯದ ಮುನ್ನಾದಿನದ ಸಂಜೆ ತಂಡದ ಆಟಗಾರರಿಗೆ " ನಿಂಗಳ ಗೆದ್ದಿತ್ ಕಾಂಬಿ" ( ಗೆದ್ದ ಮೇಲೆ ನಿಮ್ಮನ್ನು ಕಾಣುತ್ತೇನೆ) ಎಂದು ತೆರಳಿದರು. ೧೯ ನೇ ಹೈದರಾಬಾದಿನ ತಂಡ ತಿಮ್ಮಯ್ಯನವರ ನಿರೀಕ್ಷೆಯಂತೆಯೇ ೩-೨ ಗೋಲುಗಳಿಂದ ಹುಲಿಗಳನ್ನು ಮಣಿಸಿತ್ತು. ಸಿಕ್ಖರಂಥಾ ದೃಢಕಾಯದ , ಅತ್ಯಂತ ಆಟಗಾರರೇ ಪಂದ್ಯದ ಅನಂತರ " ತಿಮ್ಮಯ್ಯಸಾಬ್ , ಆಪ್ ನೇ ಕ್ಯಾ ಕಿಯಾ?" ಎಂದು ಪ್ರಶ್ನಿಸಿದರು. ಆಗ ತಿಮ್ಮಯ್ಯನವರು " ವೋ ಕುರ್ಗೀಸ್ ಹೈ. ಲಡನೇ ಕೇಲಿಯೇ ವೋ ಪೈದಾ ಹೋಗಯಾ ಹೈ" ಎಂದು ಉತ್ತರಿಸಿದ್ದರು. ಏಕೆಂದರೆ ತಿಮ್ಮಯ್ಯನವರಿಗೆ ಕೊಡವರ ಯೋಧತನದ ಮತ್ತು ಕೊಡವರ ಹಾಕಿಯ ಮೇಲಿನ ಭಕ್ತಿಯ ಬಗ್ಗೆ ವಿಶ್ವಾಸವಿತ್ತು. ಸ್ವತಃ ತಿಮ್ಮಯ್ಯನವರಿಗೆ ಮಡಿಕೇರಿಯ ಸೆಂಟ್ರಲ್ ಸ್ಕೂಲಿನಲ್ಲಿ ತಾವು ಪಡೆದ ಹಾಕಿ ತರಬೇತಿ ಮತ್ತು ಬ್ರಿಟೀಷ್ ತರಬೇತುದಾರರೇ ಕೊಡಗಿನ ಆಟಗಾರರತ್ತ ಇಟ್ಟಿದ್ದ ಧೈರ್ಯದ ನೆನಪು ಇನ್ನೂ ಮರೆತಿರಲಿಲ್ಲ.
ಹಾಕಿಯನ್ನು ಕೊಡಗಿನ ಜನ ಆರಾಸಿಕೊಂಡು ಬಂದ ಮತ್ತು ಅದನ್ನು ತಮ್ಮ ಜನಜೀವನದಲ್ಲಿ ಅಳವಡಿಸಿಕೊಂಡು ಬಂದ ಇಂಥ ಪ್ರೇರಣಾದಾಯಿ ಉದಾಹರಣೆಗಳೆಷ್ಟೋ ಸಿಗುತ್ತವೆ. ಕೊಡಗಿನಲ್ಲಿ ಹಾಕಿ ಜನಜೀವನದಲ್ಲಿ ಎಷ್ಟೊಂದು ಹಾಸುಹೊಕ್ಕಾದ ಸಂಗತಿಯೆಂದರೆ ಹಾಕಿಯನ್ನು ಅರ್ಥೈಸಿಕೊಳ್ಳದೆ ಕೊಡಗನ್ನು ಅರ್ಥೈಸಿಕೊಳ್ಳಲಾಗದು. ಕೊಡಗಿನ ದಮನಿಯನ್ನು ತಿಳಿಯಬೇಕೆಂದರೆ ಹಾಕಿ ಎಂಬ ಕ್ರೀಡೆಯ ಹಿಂದೋಡಲೇ ಬೇಕು. ಕೊಡಗಿನ ಇತಿಹಾಸ, ಅದರ ಏರಿಳಿತ, ಜನರ ಸಂಸ್ಕೃತಿ, ಅವರ ಮಾನಸಿಕತೆ, ಕೊಡವರ ಯೋಧತನದ ಹಿಂದೆ ಕಂಡೂ ಕಾಣದಂತೆ ಹಾಕಿಯ ಕಥೆ ಬೆರೆತುಕೊಂಡಿದೆ. ಒಂದು ಪುಟ್ಟ ಜಿಲ್ಲೆ, ಒಂದು ಸಣ್ಣ ಸಮುದಾಯ ಕ್ರೀಡೆಯೊಂದನ್ನು ಈ ಪರಿಯಲ್ಲಿ ಹಚ್ಚಿಕೊಳ್ಳಬಹುದೇ ಎಂಬ ಅಚ್ಚರಿಗೂ ಕೊಡಗು ಸಾಕ್ಷಿಯಾಗಿ ನಿಲ್ಲುತ್ತದೆ. ಕೊಡಗಿನ ಜನ ಹಾಕಿಯನ್ನು ಕೇವಲ ಆಸ್ವಾದಿಸಿಕೊಂಡು ಕೂರಲಿಲ್ಲ. ಭಾರತೀಯ ಹಾಕಿಗೆ ತಮ್ಮ ಲ್ಲಿಂದ ಅಮೂಲ್ಯ ರತ್ನಗಳನ್ನು ಕೊಟ್ಟಿತು. ಅದೂ ಬಹು ದೀರ್ಘ ಸಮಯದವರೆಗೆ. ಅದರಲ್ಲೂ ಮುಖ್ಯವಾಗಿ ಕೊಡವರಂತೂ ಹಾಕಿಯೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳಲಿಲ್ಲ. ಕಾವೇರಿಯಲ್ಲಿ ನೀರು ಸಾಕಷ್ಟು ಹರಿದರೂ, ಜನಜೀವನ ಗುರುತು ಹಿಡಿಯಲಾರದಷ್ಟು ಬದಿಗೆ ಮಗ್ಗುಲು ಬದಲಿಸಿದರೂ ಕೊಡವರಲ್ಲಿ ಬದಲಾಗದೆ ನಿಂತ ಒಂದೇ ಒಂದು ಸಂಗತಿ ಎಂದರೆ ಹಾಕಿ. ಬ್ರಿಟಿಷ್ ಅವಯಲ್ಲೂ ಕೊಡಗು ಭಾರತೀಯ ಹಾಕಿಯ ನರ್ಸರಿ ಶಾಲೆಯೇ. ೨೦೧೨ರಲ್ಲೂ ಅದು ಭಾರತೀಯ ಹಾಕಿಯ ನರ್ಸರಿ ಶಾಲೆಯೇ.
೧೮೬೧ರಲ್ಲಿ ಯುರೋಪಿನಲ್ಲಿ ಪ್ರಾರಂಭವಾದ ಹಾಕಿಯನ್ನು ಬ್ರಿಟೀಷರು ತಮ್ಮ ವಸಹಾತುಗಳಿಗೆಲ್ಲಾ ಕೊಂಡೊಯ್ದರು. ಕೆಲವೆಡೆ ಜನ ಅದನ್ನು ಸ್ವೀಕರಿಸಲಿಲ್ಲ. ಆದರೆ ಭಾರತದಲ್ಲಿ ಅದು ತುಂಬಾ ಜನಪ್ರಿಯವಾಯಿತು. ಬ್ರಿಟಿಷರ ನೆಚ್ಚಿನ ರಾಜ್ಯಗಳಲ್ಲಿ ಅದು ಪ್ರಬಲ ಕ್ರೀಡೆಯಾಗಿಯೂ ಬೆಳೆಯಿತು. ಮುಖ್ಯವಾಗಿ ಬ್ರಿಟಿಷರು ಹಾಕಿಯನ್ನು ತಮ್ಮ ಸೇನೆಯಲ್ಲಿ ಅಳವಡಿಸಿದರು. ಸೈನ್ಯದಲ್ಲಿ ಹಾಕಿ ಕ್ಲಬ್‌ಗಳು ಸ್ಥಾಪನೆಯಾದವು. ಆರಂಭದಲ್ಲಿ ಕಲ್ಕತ್ತಾ, ಪಂಜಾಬ್, ಮುಂಬೈಗಳಲ್ಲಿ ಹಾಕಿ ಬೇರೂರುತ್ತಾ ಬಂದರೂ ಹಾಕಿ ಭಾರತದಲ್ಲಿ ಬಲವಾಗಿ ಬೇರೂರಲು ಸಾಧ್ಯವಾಗಿದ್ದು ಕೊಡಗಿನಲ್ಲಿ. ಬ್ರಿಟಿಷರ ನೆಚ್ಚಿನ ಟೈನಿ ಮಾಡಲ್ ಸ್ಟೇಟ್ ಎಂಬ ಕೊಡಗಿನ ಮಡಿಕೇರಿಗೆ ಹಾಕಿ ೧೮೮೫-೮೬ರ ಹೊತ್ತಿನಲ್ಲಿ ಕಾಲಿಟ್ಟಿತು. ಯುರೋಪಿನಿಂದ ತರಿಸಿದ ಚೆಂಡು ಮತ್ತು ಸ್ಟಿಕ್‌ಗಳು ಇಲ್ಲಿ ಈ ಪರಿಯಲ್ಲಿ ಮೋಡಿ ಮಾಡುತ್ತವೆ ಎಂದು ಯಾವ ಬ್ರಿಟೀಷ್ ಅಕಾರಿಯೂ ಅಂದುಕೊಂಡಿರಲಿಲ್ಲ. ಆದರೆ ನೋಡ ನೋಡುತ್ತಲೇ ಹಾಕಿಯ ಕಲರವ ಮಡಿಕೇರಿಯಿಡೀ ತುಂಬಿಹೋಯಿತು. ಅನಂತರ ಅದು ದಕ್ಷಿಣಕ್ಕೂ ಇಳಿಯಿತು. ಸಣ್ಣ ಪಟ್ಟಣಗಳು, ದೂರದ ಊರುಗಳಲ್ಲೂ ಹಾಕಿಯೋ ಹಾಕಿ. ದನಗಾಹಿ ಬಾಲಕರೂ ಹಾಕಿ ಆಡತೊಡಗಿದರು. ಮನೆಯ ಅಂಗಳವೂ ಮಕ್ಕಳ ಆಟದ ಮೈದಾನವಾಯಿತು. ಬಿದಿರಿನ ಬೊಡ್ಡೆಗಳು, ಸೀಬೇಕಾಯಿ ಮರದ ಕೊಕ್ಕೆಗಳು, ಮರದ ಚೆಂಡುಗಳು , ಉರುಟಿನ ಕಾಯಿಗಳೆಲ್ಲವೂ ಬಾಲು ಸ್ಟಿಕ್ಕುಗಳಾದವು. ಇನ್ನೊಂದೆಡೆ ಕೊಡಗಿನ ಯುವಕರು ಸೈನ್ಯಕ್ಕೆ ಸೇರತೊಡಗಿದರು. ಈ ಮೂಲಕ ಆಧುನಿಕ ಹಾಕಿಯ ಪಟ್ಟುಗಳು ಊರೊಳಗೆ ಬರತೊಡಗಿದವು. ಟ್ರಾನ್ಸಿಸ್ಟರುಗಳು ಹಾಕಿಯನ್ನು ಅಪ್‌ಡೇಟ್ ಮಾಡಿದವು. ದೊಡ್ಡವರು ಪುಟ್ಟ ಮಗುವಿನ ಕೈಗೆ ಪುಟ್ಟ ಸ್ಟಿಕ್ಕನ್ನು ಕೊಟ್ಟರು. ಹೀಗೆ ಗೊತ್ತಾಗದಂತೆಯೇ ಹಾಕಿಯನ್ನು ಕೊಡವ ಪದ್ದತಿಯ ಒಂದು ಅಂಗವೆಂದೇ ಜನ ಭಾವಿಸತೊಡಗಿದರು. ಹಾಕಿ ಆಡಲು ಭಾರದವ ಕೊಡವನೇ ಅಲ್ಲ ಎಂದು ಜನ ಆಡಲು ಭಾರದವನನ್ನು ಹಂಗಿಸಿದರು. ಇಂದಿಗೂ ಕೊಡವರಿಗೆ ಹಾಕಿಯ ಪರಂಪರೆಯ ಬಗ್ಗೆ ಎಷ್ಟೊಂದು ಕಾಳಜಿಯೆಂದರೆ ಬಹುತೇಕ ಕೊಡವರ ಮನೆಗಳಲ್ಲಿ ಇದು ತಂದೆಯವರು ಆಡುತ್ತಿದ್ದ ಸ್ಪ್ರಿಂಗ್ ಸ್ಟಿಕ್ ಎಂದೋ ,ಇದು ತಾತನವರು ಆಡುತ್ತಿದ್ದ ವುಡನ್ ಸ್ಟಿಕ್ ಎಂದೋ ತೋರಿಸುತ್ತಾರೆ. ಕಾರ್ಯಪ್ಪಜ್ಜನವರೇ ಹಾಕಿಗೆ ಮರಳಾಗಿದ್ದರು. ನಮ್ಮಪ್ಪ ಕಾರ್ಯಪ್ಪಜ್ಜನ ಹಾಕಿ ಆಟವನ್ನು ಕಣ್ಣಾರೆ ಕಂಡಿದ್ದರು ಎಂದು ಹೇಳುವ ಅಯ್ಯನವರು ಇಂದೂ ಅಲ್ಲಲ್ಲಿ ಸಿಗುತ್ತಾರೆ. ಅಂದಿನ ಸೆಂಟ್ರಲ್ ಸ್ಕೂಲಿನಲ್ಲಿ ಹೆಡ್ ಮಾಷ್ಟರಾಗಿದ್ದ ಹ್ಯಾರಿಸ್ ಎಂಬವರು ಕಾರ್ಯಪ್ಪಜ್ಜನವರಿಗೆ ಒಂದು ಹಾಕಿ ಸ್ಟಿಕ್ಕನ್ನು ಕಾರ್ಯಪ್ಪಜ್ಜನಿಗೆ ಕೊಟ್ಟಿದ್ದರಂತೆ. ಮುಂದೆ ಕಾರ್ಯಪ್ಪಜ್ಜ ದೇಶದ ಮಹಾದಂಡನಾಯಕರಾದ ಮೇಲೂ ಆ ಸ್ಟಿಕ್ಕನ್ನು ಅಪ್ಯಾಯಮಾನದಿಂದ ಇಟ್ಟುಕೊಂಡಿದ್ದರಂತೆ, ಆ ಸ್ಟಿಕ್ಕಿನಲ್ಲಿ ಅವರು ಹೆಚ್ಚು ಆಟವಾಡುತ್ತಿರಲಿಲ್ಲವಂತೆ, ಹ್ಯಾರಿಸ್ ಕೊಟ್ಟ ಸ್ಟಿಕ್ಕನ್ನು ಮುಟ್ಟಿ ಹೊಸ ಸ್ಟಿಕ್ಕು ಹಿಡಿದು ಮೈದಾನಕ್ಕಿಳಿಯುತ್ತಿದ್ದರಂತೆ ಎಂದೆಲ್ಲಾ ಮಾತಾಡುವವರು ಕೊಡಗಿನಲ್ಲಿ ಕಾಣಸಿಗುತ್ತಾರೆ. ಮ್ಯಾನ್ ಎಂಬ ಬ್ರಿಟೀಷರ ಕಾಫಿ ಪ್ಲಾಂಟರನೊಬ್ಬ ಹಾಕಿಯ ಹುಚ್ಚಿನಿಂದ ಏಕರೆಗಟ್ಟಲೆ ಕಾಫಿ ತೋಟವನ್ನು ಬೋಳು ಮಾಡಿ ಮೈದಾನವನ್ನೇ ಮಾಡಿಬಿಟ್ಟಿದ್ದ. ಇಂದಿಗೂ ಆ ಮೈದಾನ ಮಡಿಕೇರಿಲ್ಲಿ ಮ್ಯಾನ್ಸ್ ಕಾಂಪೌಂಡ್ ಹೆಸರಿನಲ್ಲಿ ಸಾವಿರಾರು ಹಾಕಿಯ ಪ್ರತಿಭೆಗಳನ್ನು ತಯಾರು ಮಾಡುತ್ತಿದೆ. ಮ್ಯಾನ್ ಎಂಬ ಬ್ರಿಟೀಷನ ಕನಸ್ಸು ದಿನೇ ದಿನೇ ನನಸಾಗುತ್ತಲೇ ಇದೆ. ಬ್ರಿಟೀಷ್ ಕಾಲಾವಧಿಯಲ್ಲಿ ಪ್ರತೀ ರವಿವಾರ ಈ ಮ್ಯಾನ್ಸ್ ಕಾಂಪೌಂಡಿನಲ್ಲಿ ಪಂದ್ಯಾವಳಿಗಳು ನಡೆಯುತ್ತಿದ್ದವಂತೆ. ಕೊಡವರನ್ನು ಕರೆಸಿಕೊಂಡು ಬ್ರಿಟೀಷರು ತಂಡಗಳನ್ನು ಕಟ್ಟುತ್ತಿದ್ದರಂತೆ. ಎಸ್ಟೇಟ್ ಮಾಲಿಕರೂ , ದೂರದ ಪ್ರಾಂತಗಳ ಅಧಿಕಾರಿಗಳೂ ಹಾಕಿ ನೋಡಲು ಮಡಿಕೇರಿಗೆ ಬರುತ್ತಿದ್ದರಂತೆ. ಬ್ರಿಟೀಷ್ ಆಡಳಿತ ಮುಗಿಯುತ್ತಾ ಬಂದಂತೆ ಹಾಕಿ ಕೊಡಗಿನಲ್ಲಿ ಮತ್ತಷ್ಟು ಬಲವಾಗತೊಡಗಿತು. ಅದಾಗಲೇ ಭಾರತೀಯ ತಂಡದಲ್ಲಿ ಹಲವು ಕೊಡಗಿನ ಯುವಕರು ಪ್ರತಿನಿಧಿಸಿ ಹೆಸರು ಗಳಿಸಿದ್ದರು. ೧೯ ನೇ ಶತಮಾನದ ಕೊನೆಯ ಭಾಗದಲ್ಲಿ ಪಟ್ಟಡ ಸೋಮಯ್ಯ ಎಂಬ ಮಹಾನ್ ಆಟಗಾರರೊಬ್ಬರು ಎತ್ತಿನ ಗಾಡಿಯಲ್ಲಿ ತಂಡವನ್ನು ಕಟ್ಟಿಕೊಂಡು ಬೆಂಗಳೂರಿನ ದಂಡು ಪ್ರದೇಶದ ತಂಡದೆದುರು ಆಡಲು ಹೋಗುತ್ತಿದ್ದರು ಎಂದು ಖ್ಯಾತ ಸಂಶೋಧಕರಾದ ಬಾಚರಣಿಯಂಡ ಅಪ್ಪಣ್ಣ ನವರು ಹೇಳುತ್ತಾರೆ. ಕೂರ್ಗ್ ಹಾಕಿ ಅಸೋಷಿಯೇಶನ್ನಿನ ಮಾಜಿ ಅಧ್ಯಕ್ಷರಾದ ಕಲಿಯಂಡ ನಾಣಯ್ಯನವರು " ನಾನು ೪೦ ವರ್ಷ ಸತತವಾಗಿ ಹಾಕಿ ಆಡಿದ್ದೇನೆ. ಭಾರತೀಯ ಹಾಕಿ ತಂಡದ ನಾಯಕರಾಗಿದ್ದ ಗೋವಿಂದ, ಖ್ಯಾತ ಫಾವರ್ಡ್ ಆಟಗಾರ ಅಮ್ಮಂಡ ವಾಸು ಅವರೊಂದಿಗೆ ನಾನು ಕಡಂಗಮರೂರು ಯೂತ್ ಕ್ಲಬ್ ತಂಡಕ್ಕೆ ಆಡಿದ್ದೇನೆ" ಎಂದು ಹೇಳುತ್ತಾ ಪುಳಕಗೊಳ್ಳುತ್ತಾರೆ.
೧೯೦೮ರಲ್ಲಿ ಹಾಕಿ ಒಲಂಪಿಕ್ಸ್‌ಗೆ ಸೇರ್ಪಡೆಯಾದ ಮೇಲಂತೂ ಹಾಕಿ ಜನಪ್ರಿಯತೆಯ ಉತ್ತುಂಗಕ್ಕೇರಿತು. ಪದಕಗಳ ಮೇಲೆ ಪದಕಗಳು, ಕಪ್‌ಗಳ ಮೇಲೆ ಕಪ್‌ಗಳನ್ನು ಗೆಲ್ಲತೊಡಗಿದಂತೆ ಕೊಡಗಿನಲ್ಲೂ ಕ್ಲಬ್ ಟೀಮುಗಳು ಶುರುವಾದವು. ೧೯೫೦ರ ದಶಕದಲ್ಲಿ ಸ್ಥಾಪನೆಯಾದ ವಾಂಡರರ್ಸ್, ಯಂಗ್‌ಸ್ಟಾರ್ಸ್ ಮಡಿಕೇರಿ, ಸ್ಪೋರ್ಟಿಂಗ್ ಮಡಿಕೇರಿ, ಟೀಚರ್ಸ್ ಟೀಮ್ ಗಳು ದೇಶದ ಖ್ಯಾತ ಹಾಕಿ ತಂಡಗಳೆನಿಸಿದ್ದವು. ಕೂರ್ಗ್ ಟೀಚರ್ಸ್ ತಂಡವಂತೂ ಕೊಡಗಿನ ಉಪಾದ್ಯಾಯರೇ ಕಟ್ಟಿಕೊಂಡ, ಅತಿರಥ ಮಹಾರಥರ ಒಂದು ಪ್ರಬಲ ತಂಡ. ಈ ತಂಡದ ಕಪ್ತಾನ ನಾಯಡ ವಾಸು ನಂಜಪ್ಪನವರ ಕಂಚಿನ ಕಂಠ ಮತ್ತು ಮೀಸೆಯನ್ನು ನೋಡಿಯೇ ಎದುರಾಳಿ ತಂಡ ಅರ್ಧ ಸೋತುಹೋಗುತ್ತಿತ್ತು ಎಂಬ ದಂತೆಕಥೆಗಳು ಇಂದಿಗೂ ಪ್ರಚಲಿತವಿದೆ. ಟೀಚರ್ಸ್ ಟೀಮಿನ ಒರ್ವ ಪ್ರಮುಖ ಆಟಗಾರ ೮೫ ವರ್ಷದ ಬಾಚರಣಿಯಂಡ ನಾಣಯ್ಯನವರು " ಮದರಾಸಿನಲ್ಲಿ ಶ್ರೀಲಂಕಾ ವಿರುದ್ಧ ೧೨ ಗೋಲು ಭಾರಿಸಿದ್ದೆ" ಎಂದು ಪಕಪಕನೆ ನಗುತ್ತಾರೆ.
ಕೊಡಗಿನ ಹಾಕಿಯ ವೈಭವವೆಂದರೆ ಭಾರತೀಯ ಹಾಕಿಯದ್ದೇ ವೈಭವದ ವರ್ಣನೆಗಳು. ಆದರೆ ಭಾರತೀಯ ಹಾಕಿ ಅನಂತರದ ವರ್ಷಗಳಲ್ಲಿ ಹಲವು ಏಳುಬೀಳುಗಳನ್ನು ಕಂಡಿತು. ಆದರೆ ಕೊಡಗಿನಲ್ಲಿ ವೈಭವ ಮರೆಯಾಗಲೇ ಇಲ್ಲ. ಕೌಟುಂಬಿಕ ಹಾಕಿ ಉತ್ಸವವಂತೂ ಮಹಿಳೆಯರನ್ನೂ ಮೈದಾನಕ್ಕಿಳಿಸಿತು. ಹಾಕಿಯನ್ನು ಮತ್ತಷ್ಟು ಹತ್ತಿರಕ್ಕೆ ತಂದಿತು. ಮನೆಮನೆಯಲ್ಲೂ ಐದಾರು ಆಟಗಾರರು ಹುಟ್ಟಿದರು. ಇಂದಿಗೂ ಕೊಡವರ ಐದು ಮನೆಗೊಂದರಂತೆ ಕನಿಷ್ಟ ಒಬ್ಬರಾದರೂ ವೃತ್ತಿಪರ ಆಟಗಾರರು ಸಿಗುತ್ತಾರೆ. ಹಾಕಿಯ ಆರಾಧನಾ ಪರಂಪರೆ ಇತರ ಜನಾಂಗಗಳಿಗೂ ಹರಡಿದೆ. ಮುಂಬರುವ ಲಂಡನ್ ಒಲಂಪಿಕ್‌ನ ಸಂಭವನೀಯರ ಪಟ್ಟಿಯಲ್ಲಿ ೮ ಜನ ಕೊಡಗಿನ ಆಟಗಾರರೇ ಆಗಿರುವುದು ವೈಭವದ ಉಳಿಕೆಗೆ ಸಾಕ್ಷಿಯಲ್ಲದೆ ಮತ್ತೇನು? " ಮಾಳೆಯಂಡ ಮುತ್ತಪ್ಪನವರಿಂದ ಸಣ್ಣುವಂಡ ಉತ್ತಪ್ಪ ನವರವರೆಗೆ ಭಾರತೀಯ ತಂಡದಲ್ಲಿ ಆಡಿದ ಕೊಡಗಿನವರೆಷ್ಟು ಮಂದಿ ನಾಣಯ್ಯನವರೇ" ಎಂದು ಹಾಕಿ ತಜ್ಞ ಕಲಿಯಂಡ ನಾಣಯ್ಯನವರನ್ನು ಕೇಳಿದರೆ " ಲೆಕ್ಕ ಸಿಗಲಾರದು. ಅಂದಾಜು ಕೂಡ ಮಾಡಲಾಗದು " ಎನ್ನುತ್ತಾರೆ.
ಹಾಕಿ ನಾಡು ಕೌತುಕದ ಬುಟ್ಟಿಯಲ್ಲವೇ?