ಇದು ವಿಚಿತ್ರವಾದರೂ ಸತ್ಯ.
ಕೊಡಗಿನ ಪೊನ್ನಂಪೇಟೆಯ ತಿಮ್ಮಯ್ಯ ಎಂಬ ಮಧ್ಯವಯಸ್ಕರು ತಮ್ಮಲ್ಲಿಂದ ಮೂವತ್ತು ಕಿ.ಮೀ ದೂರದ ನಾಗರಹೊಳೆಯನ್ನು ಇನ್ನೂ ನೋಡಿಲ್ಲ. ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರ ತಾಲೂಕಿನ ಬಿದ್ರಕಾನಿನ ಸುಬ್ರಾಯ ಹೆಗಡೆಯವರು ತಮಗೆ ಅತಿ ಸಮೀಪವಿರುವ ಜೋಗಕ್ಕೆಂದೂ ಹೋದವರಲ್ಲ. ಮಂಗಳೂರಿನ ಓರ್ವ ನಾರಾಯಣ ಶೆಟ್ಟರಿಗೆ ವೇಣೂರಿನ ಬಗ್ಗೆ ಆಸಕ್ತಿಯೇನೂ ಇರಲಿಲ್ಲ. ಕುಂದಾಪುರದ ನರಸಿಂಹ ಪೈಗಳು ಬಾರ್ಕೂರಿನಲ್ಲೇನಿದೆ ಹೋಗಲಿಕ್ಕೆ ಎನ್ನುತ್ತಾರೆ. ಅದು ಅವರೆಲ್ಲರಿಗೂ ಸಮೀಪದ ಊರುಗಳು. ಆದರೂ ಅವುಗಳ ಬಗ್ಗೆ ಅವರಿಗೇನೂ ಕುತೂಹಲವಿಲ್ಲ. ಅಲ್ಲಿಗೆಲ್ಲಾ ದೂರದೂರಿನಿಂದ ಜನ ಬರುವರಾದರೂ ಇವರೆಲ್ಲರಿಗೆ ಒಮ್ಮೆ ನೋಡಬೇಕು ಎನಿಸಿಲ್ಲ. ಇವರೇನೂ ಆಸೆ ಇಂಗಿಹೋದ ಮನುಷ್ಯರೇನೂ ಅಲ್ಲ. ಜೋಗ ನೋಡದ ಸುಬ್ರಾಯ ಹೆಗಡೆಯವರು ನಯಾಗರದ ಬಗ್ಗೆ ಮಾತಾಡುತ್ತಾರೆ. ಪೊನ್ನಂಪೇಟೆಯ ತಿಮ್ಮಯ್ಯನವರು ಡಿಸ್ಕವರಿ ಚಾನೆಲ್ಲಿನಲ್ಲಿ ಅಮೆಜಾನಿನ ಕಾಡುಗಳನ್ನು ನೋಡುತ್ತಿರುತ್ತಾರೆ. ಆದರೆ ಪಕ್ಕದೂರಿನ ಬಗ್ಗೆ ಅಷ್ಟೇ ತಾತ್ಸಾರವಿದೆ. ಇನ್ನೂ ಒಂದು ವಿಚಿತ್ರವೆಂದರೆ ಅವರೆಂದೂ ಶಾಲೆಯಲ್ಲಾಗಲೀ, ಕಾಲೇಜಿನಲ್ಲಾಗಲೀ ನಾಗರಹೊಳೆಯ ಬಗ್ಗೆ ಓದಿಲ್ಲವಂತೆ. ಹೆಚ್ಚೂ ಕಮ್ಮಿ ಸುಬ್ರಾಯ ಹೆಗಡೆಯವರದ್ದು, ನಾರಾಯಣ ಶೆಟ್ಟರದ್ದು, ನರಸಿಂಹ ಪೈಗಳದ್ದು ಎಲ್ಲರದ್ದೂ ಇದೇ ತರ್ಕ.
ಇದು ಕೆಲವು ಜನರದ್ದಷ್ಟೇ ಕಥೆಯಲ್ಲ. ಇಂದಿಗೂ ಬಹುತೇಕ ಜನರ ಕಥೆಯೂ ಇದಕ್ಕಿಂತ ಭಿನ್ನವೇನಲ್ಲ. ಇಂದು ಶಾಲೆಗೆ ಹೋಗುತ್ತಿರುವ ಮಕ್ಕಳ ಬುದ್ದಿಮಟ್ಟ ಕೂಡ ಹೀಗೆಯೇ. ಆ ಮಗುವಿಗೆ ಜಪಾನ್ , ಮ್ಯಾಂಚೆಸ್ಟರ್ ಗಳು ಗೊತ್ತಿವೆ. ಆದರೆ ಪಕ್ಕದೂರಿನ ದೇವಸ್ಥಾನಗಳ ಬಗ್ಗೆ ಗೊತ್ತೇ ಇಲ್ಲ. ಆ ಮಗುವಿಗೆ ವೆನಿಸ್ ನ ವರ್ತಕ ಗೊತ್ತಿದ್ದಾನೆ. ಆದರೆ ತನ್ನ ಬಸ್ ಸ್ಟಾಪಿನ ಪಕ್ಕದ ದಿನಸಿ ಅಂಗಡಿಯಾತನೇ ಗೊತ್ತಿಲ್ಲ. ಅಲೆಕ್ಸಾಂಡರ್ ಗೊತ್ತಿದ್ದಾನೆ.ಆದರೆ ಮನೆದೇವರು, ಪೂರ್ವಿಜರ ಇತಿಹಾಸವೇ ಗೊತ್ತಿಲ್ಲ. ತನ್ನ ಅಜ್ಜನ ಅಪ್ಪನ ಹೆಸರೇ ತಿಳಿದಿಲ್ಲ. ಇದು ಬಹುತೇಕ ಎಲ್ಲರ ಮನೆಯ ಕಥೆ. ಹೀಗೆ ಗೊತ್ತಿಲ್ಲದಿರುವ ಪಟ್ಟಿ ಬೆಳೆಯುತ್ತದೆ. ಜತೆಗೆ ಗೊತ್ತಾಗದಿರುವ ಕಾರಣವೂ ತಿಳಿಯುತ್ತದೆ. ಮೂರನೇ ಕ್ಲಾಸಿನ ಪುಸ್ತಕದಲ್ಲಿ ದಕ್ಷಿಣ ಆಫ್ರಿಕಾದ ಭೌಗೋಳಿಕ ಪರಿಚಯ ಎಂದು ಓದುವ ಮಕ್ಕಳಿಗೆ ಇವೆಲ್ಲಾ ಹೇಗೆ ತಾನೇ ತಿಳಿಯುತ್ತದೆ? ಪಕ್ಕದ ನಾಗರಹೊಳೆಯ ಬಗ್ಗೆ ಆಸಕ್ತಿ ಹೇಗೆ ತಾನೇ ಉಂಟಾಗುತ್ತದೆ? ಬೆತ್ಲೆಹೇಮಿನ ಸಂತನನ್ನೇ ಓದುವ ಅನಿವಾರ್ಯತೆಯಿರುವಾಗ ಮಗುವಿನ ಬೌದ್ಧಿಕ ಮಟ್ಟ ಸಹಜವಾಗಿ ಅರಳುವುದು ಹೇಗೆ? ಹೀಗೆ ಬೆಳೆದ ಮಗುವೇ ಮುಂದೆ ತಿಮ್ಮಯ್ಯನವರಂತೆ, ಸುಬ್ರಾಯ ಹೆಗಡೆಯವರಂತೆ, ನಾರಾಯಣ ಶೆಟ್ಟರಂತೆ, ನರಸಿಂಹ ಪೈಗಳಂತೆ ಬೆಳೆಯುತ್ತದೆ. ಕಳೆದ ೫೦ ವರ್ಷಗಳಲ್ಲಿ ಕಾಂಗ್ರೆಸ್ ಆಡಳಿತ ಮತ್ತು ಕಮ್ಯುನಿಷ್ಟ್ ಬುದ್ದಿಜೀವಿಗಳು ಬೆಳೆಸಿದ್ದು ಇಂಥಾ ಪೀಳಿಗೆಯನ್ನೆ. ಪಠ್ಯಪುಸ್ತಕಗಳು ಸ್ಥಳೀಯತೆಯಿಂದ ದೂರವಾಗಿರುವ ಕಾರಣ ಅವರೆಲ್ಲರೂ ಒಳಗಿದ್ದೂ ಹೊರಗಿನವರಂತೆ, ಹತ್ತಿರದಲ್ಲಿದ್ದರೂ ದೂರದವರಂತೆ ಕಾಣುತ್ತಾರೆ.
ರಾತ್ರೋರಾತ್ರಿ ವಿಪರೀತ ಬುದ್ದಿವಂತ ಪ್ರಜೆಗಳನ್ನು ನಿರ್ಮಾಣ ಮಾಡಿಬಿಡುತ್ತೇವೆ ಎಂಬ ಭ್ರಮೆ, ಪಠ್ಯಗಳೆಂದರೆ ಒಂಥರಾ ಅಗೋಚರ, ಅಲೌಕಿಕ ವಿಷಯಸಂಗ್ರಹಗಳು ಎಂಬ ಅಜ್ಞಾನ, ಸತ್ಯದ ತಲೆಗೆ ಹೊಡೆದಾದರೂ ಸರಿ ಸಮಾನತೆಯ ಸಂದೇಶ ಹೊರಡಿಸಬೇಕು ಎಂಬ ವಿಕೃತಿಗಳೆಲ್ಲವೂ ಒಟ್ಟು ಸೇರಿ ರಚನೆಯಾಗುತ್ತಿದ್ದ ಪಠ್ಯ ಪುಸ್ತಕಗಳು ಕಳೆದ ೫೦ ವರ್ಷಗಳಿಂದ ಕಾಂಗ್ರೆಸ್ ಮತ್ತು ಕಮ್ಯುನಿಷ್ಟರ ಉದ್ದೇಶವನ್ನು ಈಡೇರಿಸುತ್ತಿದ್ದವು. ಸ್ವಾತಂತ್ರ್ಯಪೂರ್ವದಲ್ಲಿ ಮೆಕಾಲೆ ಅಂದಾಜಿಸಿದ್ದೂ ಇದನ್ನೇ. ಸ್ಥಳೀಯತೆಯ ಸೊಗಡು ತಿಳಿಯದ, ಆದರೂ ಅವಿದ್ಯಾವಂತರೆಂಬ ಪಟ್ಟವಿಲ್ಲದ ಅಹಂಕಾರಿ ಸಮಾಜವನ್ನೇ. ವಿಪರ್ಯಾಸವೆಂದರೆ ಬ್ರಿಟೀಷ್ ಸಾಮ್ರಾಜ್ಯದ ಈ ಕನಸ್ಸನ್ನು ಸ್ವತಂತ್ರ ಭಾರತ ಚಾಚೂ ತಪ್ಪದೆ ಪಾಲಿಸಿತು. ಮೊದಲಿನ ಎಲ್ಲಾ ವಿಕೃತಿ, ಅಜ್ಞಾನ, ಮಿಥ್ಯೆಗಳೇ ವಿಜೃಂಭಿಸಿದವು. ಪಠ್ಯಪುಸ್ತಕ ರಚನಾ ಸಮಿತಿಗಳಲ್ಲಿ ಕಮ್ಯುನಿಷ್ಟ್ ಚಿಂತಕರು ನುಗ್ಗಿದರು. ಪರಿಣಾಮ ಎಲ್ಲವೂ ಕೆಂಪಾಯಿತು. ಸ್ಥಳೀಯ ಸತ್ಯಗಳೆಲ್ಲವೂ ದೂರವಾಯಿತು. ಕರ್ನಾಟಕದ ಪಠ್ಯಪುಸ್ತಕವೂ ಅದಕ್ಕೆ ಹೊರತಾಗಲಿಲ್ಲ.
ಇದೀಗ ಆ ೫೦ ವರ್ಷಗಳ ವಿಸ್ಮೃತಿಯಿಂದ ಹೊರಬರುವ, ಸತ್ಯವನ್ನು ಪ್ರತಿಪಾಧಿಸುವ ಸಮಯ ಬಂದಿದೆ. ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣದಲ್ಲಿ ಪಠ್ಯಗಳ ಪರಿಷ್ಕರಣೆ ಮತ್ತು ಹೊಸ ಪಠ್ಯಗಳ ತಯಾರಿ ನಡೆಯುತ್ತಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಅವು ಹೊರಬರುತ್ತವೆ. ಅವು ಹೊರಬರುವ ಮೊದಲೇ ವಿವಾದ, ಅಪಪ್ರಚಾರದ ಕಿಚ್ಚುಹೊತ್ತಿಸುವ ಹುನ್ನಾರ ನಡೆಯಲಾರಂಭವಾಗಿಬಿಟ್ಟಿದೆ. ಅವರ ಆರೋಪ ಮತ್ತು ಬಯ್ಗಳದ ಸ್ವರೂಪವಾದರೋ ನಗೆಹಬ್ಬವನ್ನು ನೆನಪಿಗೆ ತರುವಷ್ಟು ಬಾಲಿಶವೂ ಕ್ಷುಲ್ಲಕವೂ ಆಗಿದೆ. ಕೇಂದ್ರ ಸರಕಾರದ ಪಠ್ಯಪುಸ್ತಕ ರಚನೆಯ ಕೈಪಿಡಿಯನ್ನು ತಯಾರಿಸುವ ಎನ್.ಸಿ.ಇ.ಆರ್.ಟಿ ಯ ಆಧಾರದಲ್ಲೇ ಪ್ರಸ್ತತ ಪಠ್ಯಪುಸ್ತಕಗಳು ರಚನೆಯಾಗುತ್ತಿದ್ದರೂ ನಿಂದನೆ ನಡೆಯುತ್ತಿದೆ. ಹೊಸ ಪುಸ್ತಕದ ಒಂದು ಪುಟವನ್ನೂ ಕಾಣದವರೂ ಕೂಡ ಕೋಮುವಾದವಾಗಿಬಿಟ್ಟಿತು, ಕೇಸರೀಕರಣವಾಗಿಹೋಯಿತು ಎನ್ನುತ್ತಿದ್ದಾರೆ. ಹೀಗೆ ಪೂರ್ವಗ್ರಪೀಡಿತರಾಗಲು ಮುಖ್ಯ ಕಾರಣವೇನೆಂದರೆ ಪಠ್ಯ ಪುಸ್ತಕ ರಚನೆಯಲ್ಲಿ ಇದುವರೆಗಿದ್ದ ಜಡ್ಡುಹಿಡಿಯುವಂತಿದ್ದ ಚೌಕಟ್ಟನ್ನು ತ್ಯಜಿಸಿದ್ದು. ಅಂದರೆ ಒಂದನೇ ತರಗತಿಯಿಂದ ೫ನೇ ತರಗತಿಯವರೆಗಿನ ಪಠ್ಯಗಳಲ್ಲಿ ಕೇವಲ ಆಯಾಯ ಜಿಲ್ಲೆ ಮತ್ತು ತಾಲೂಕುಗಳ ಪರಿಸರ, ಸಂಸ್ಕೃತಿ, ಆರ್ಥಿಕತೆ ಮೊದಲಾದುವನ್ನು ಕೊಡಲಾಗುತ್ತದೆ ಎಂದು ಪಠ್ಯಪುಸ್ತಕ ಸಮಿತಿ ಘೋಷಿಸಿದೆ. ಅಲ್ಲದೆ ಇಡೀ ರಾಜ್ಯವನ್ನು ಬೆಂಗಳೂರು, ಮಂಗಳೂರು, ಗುಲ್ಬರ್ಗಾ ಮತ್ತು ಬೆಳಗಾವಿ ಎಂದು ನಾಲ್ಕು ವಿಭಾಗಗಳನ್ನಾಗಿ ಮಾಡಲಾಗಿದೆ. ಬುದ್ದಿಜೀವಿಗಳ ಕೋಪದ ಮೊದಲ ಕಾರಣವಿದು. ಆರೆಸ್ಸೆಸ್ ಈ ರೀತಿ ವಿಭಾಗಗಳನ್ನಾಗಿ ಮಾಡಿ ಕೆಲಸ ಮಾಡುತ್ತದೆ. ಇದು ಅವರದ್ದೇ ಹುನ್ನಾರ ಎಂಬುದು ಅವರ ಆರೋಪ. ಮತ್ತು ೬ನೇ ಮತ್ತು ೭ನೇ ತರಗತಿಯ ವಿದ್ಯಾರ್ಥಿಗಳು ಈ ವಿಭಾಗಗಳನ್ನು ಪರಸ್ಪರ ಕಲಿಯುತ್ತಾರೆ. ಅಂದರೆ ಈ ತರಗತಿಯ ಮಕ್ಕಳು ಇಡೀ ರಾಜ್ಯದ ವಿಷಯವನ್ನು ಅಧ್ಯಯನ ಮಾಡುತ್ತಾರೆ. ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯಕ್ಕನುಗುಣವಾಗಿ ಪ್ರೌಡ ಶಾಲೆಯಿಂದ ದೇಶ ಮತ್ತು ವಿದೇಶದ ವಿಷಯವನ್ನು ಕಲಿಯಬೇಕು ಎಂಬ ದೂರಾಲೋಚನೆಯಿಂದ ಪಠ್ಯಪುಸ್ತಕ ಸಮಿತಿ ಯೋಜನೆಯನ್ನು ಹಮ್ಮಿಕೊಂಡಿದೆ. ಇದರಲ್ಲಿ ತಪ್ಪೇನಿದೆ? ಮಂಗಳೂರಿನ ಮೂರನೇ ತರಗತಿಯ ಮಗು ದಕ್ಷಿಣ ಆಫ್ರಿಕಾದ ಭೌಗೋಳಿಕ ಪರಿಚಯವನ್ನು ಮಾಡಿಕೊಳ್ಳುವುದಕ್ಕಿಂತ ಮೊದಲು ಮಂಗಳೂರಿನ ಕರಾವಳಿ ತೀರದ ಪರಿಚಯವನ್ನು ಮಾಡಿಕೊಳ್ಳಬೇಕಲ್ಲವೇ? ರೂಪಿಸಿ ನಾಲ್ಕು ವಿಭಾಗಗಳಿಂದ ಮಗು ತನ್ನ ಜಿಲ್ಲೆ, ಪಕ್ಕದ ಜಿಲ್ಲೆಗಳ ಬಗ್ಗೆ ತಿಳಿದುಕೊಳ್ಳುತ್ತದೆ. ವ್ಯಕ್ತಿತ್ವದ ಸಮರ್ಥ ರೂಪಣೆಗೆ ಇಲ್ಲಿ ಎಲ್ಲಾ ಅವಕಾಶಗಳೂ ಇವೆ. ಮಂಗಳೂರಿನ ಪ್ರಾಥಮಿಕ ಶಾಲೆಯ ಮಗು ಮೊದಲು ಗೋವಿಂದ ಪೈಗಳನ್ನೂ , ಕೈಯಾರ ಕಿಂಜಣ್ಣ ರೈಗಳನ್ನೂ ಕುಂಬ್ಳೆ ಸುಂದರ ರಾಯರನ್ನೂ ತಿಳಿದುಕೊಳ್ಳಬೇಕೆ ಹೊರತು ಔರಂಗಜೇಬನನ್ನಲ್ಲ. ಹಾಗೆಯೇ ಬೆಳಗಾವಿಯ ಮಗು ಸಂಗೊಳ್ಳಿ ರಾಯಣ್ಣನನ್ನೂ ಕಿತ್ತೂರು ಚೆನ್ನಮ್ಮನನ್ನೂ ತಿಳಿಯಬೇಕೆ ಹೊರತು ಟಿಪ್ಪುವನ್ನೋ ಹೈದರಾಲಿಯನ್ನಲ್ಲ. ಪ್ರಸ್ತುತ ಪಠ್ಯಪುಸ್ತಕ ಮಂಡಲಿಯೂ ಇದನ್ನೇ ಹೇಳಿದೆಯಲ್ಲದೆ ಮುಸಲ್ಮಾನರನ್ನೆಲ್ಲಾ ಪಾಕಿಸ್ಥಾನಕ್ಕೆ ಓಡಿಸಿ ಎಂದು ಹೇಳಿಲ್ಲ. ಪಠ್ಯದ ಎಲ್ಲೂ ಪಕ್ಷಪಾತವನ್ನು ಮಾಡಿಲ್ಲ ಎಂದುದನ್ನು ತಿಳಿಯಲು ೫ನೇ ತರಗತಿ ಮತ್ತು ೮ನೇ ತರಗತಿಯ ಪುಸ್ತಕವನ್ನೊಮ್ಮೆ ಓದಬೇಕು. ೫ನೇ ತರಗತಿಯ ಸಮಾಜ ವಿಜ್ನಾನ ಪಠ್ಯದ ೫೨, ೫೩ ಮತ್ತು ೫೬ನೇ ಪುಟಗಳಲ್ಲಿ ಕೇವಲ ದೇವಸ್ಥಾನಗಳನ್ನೇ ತುರುಕಲಾಗಿದೆ ಎಂಬ ವ್ಯರ್ಥಾಲಾಪವನ್ನು ಕಮ್ಯುನಿಷ್ಟರು ಮಾಡುತ್ತಿದ್ದಾರೆ. ಏಕೆ ಸಮಾಜ ಪಾಠದಲ್ಲಿ ದೇವಸ್ಥಾನಗಳನ್ನು ತರಬಾರದೇ? ಬೆಂಗಳೂರು ವಿಭಾಗದ ಪಠ್ಯದಲ್ಲಿ ದೊಡ್ಡ ಗಣಪತಿ ದೇವಸ್ಥಾನದ ಉಲ್ಲೇಖವಿರುವಂತೆ ಶಿವಾಜಿ ನಗರದ ಬೆಸಲಿಕಾ ಇಗರ್ಜಿಯೂ ಇದೆ. ಜುಮ್ಮಾ ಮಸೀದಿಯೂ ಇದೆ. ಮುಳಭಾಗಿಲಿನ ಹಜರತ್ ವಲಿ ದರ್ಗಾವೂ ಇದೆ. ಬೆಳಗಾವಿ ವಿಭಾಗದಲ್ಲಿ ಕನಕದಾಸರಿದ್ದಾರೆ. ಮಂಗಳೂರು ವಿಭಾಗದ ಪಠ್ಯದಲ್ಲಿ ಮಧ್ವಾಚಾರ್ಯರಿದ್ದಾರೆ. ಮೈಸೂರು ವಿಭಾಗದ ಪುಸ್ತಕದಲ್ಲಿ ಟಿಪ್ಪುವಿನ ದರಿಯಾ ದೌಲತ್ ಇರುವಂತೆಯೇ ಮಂಗಳೂರಿನ ಕದ್ರಿ ಮಂಜುನಾಥೇಶ್ವರ ದೇವಸ್ಥಾನದ ಸಚಿತ್ರ ವಿವರಣೆಯೂ ಇದೆ. ಅಲ್ಲದೆ ಅಲೋಷಿಯಸ್ ಚರ್ಚು, ಮಿಲಾಗ್ರಿಸ್ ಚರ್ಚು,ಉಲ್ಲಾಳದ ಜುಮ್ಮಾ ಮಸೀದಿಗಳಿರುವಾಗ ದೇವಸ್ಥಾನಗಳು ಇರಬಾರದೆಂದರೆ ಇದು ಯಾವ ತರ್ಕ? ೫ನೇ ತರಗತಿಯ ಸಮಾಜ ವಿಜ್ನಾನ ಪುಸ್ತಕದಲ್ಲಿ "ಭಾರತದ ಸಾಂಸ್ಕೃತಿಕ ಭೂಪಟ" ಎಂಬ ಭೂಪಟವನ್ನು ಅಚ್ಚುಹಾಕಲಾಗಿದೆ. ಈ ಭೂಪಟ ಆರೆಸೆಸ್ಸಿನವರದ್ದೆಂದೂ ರಾಷ್ಟ್ರೋತ್ಥಾನ ಸಂಸ್ಥೆಯವರ ಭೂಪಟವೆಂದೂ ಬೊಬ್ಬೆಗಳು ಕೇಳಿಬರುತ್ತಿವೆ. ಅಖಂಡ ಸಾಂಸ್ಕೃತಿಕ ಭಾರತವನ್ನು ರಾಷ್ಟ್ರೋತ್ಥಾನದವರು ಭೋಗ್ಯಕ್ಕೋ ಕ್ರಯಕ್ಕೋ ತೆಗೆದುಕೊಂಡಿದ್ದಾರೆ ಎಂದು ಕರ್ನಾಟಕದ ಯಾವ ರಿಜಿಸ್ಟರ್ಡ್ ಕಛೇರಿಯಲ್ಲೂ ನೊಂದಣಿಯಾಗಿಲ್ಲ. ಆದರೆ ನಿಂದಕರಿಗೆ ಅದೂ ಒಂದು ಆರೋಪದ ವಸ್ತುವೆ.
೮ನೇ ತರಗತಿಯ ಸಮಾಜ ವಿಜ್ನಾನದ ಪುಸ್ತಕದಲ್ಲಿ " ಪ್ರಾಚೀನ ಭಾರತದ ನಾಗರಿಕತೆ" ಎಂಬ ಪಾಠವೊಂದಿದೆ. ಈ ಪಾಠದಲ್ಲಿ "ವೇದ ಕಾಲದಲ್ಲಿ ದ್ರಾವಿಡರನ್ನು ಬಿಡಲಾಗಿದೆ" ಮತ್ತು "ಆರ್ಯ-ದ್ರಾವಿಡ ಸಂಘರ್ಷವೇ ಇಲ್ಲ" ಎಂಬ ಆರೋಪವನ್ನು ಮಾಡಲಾಗಿದೆ.ಈ ದ್ರಾವಿಡರನ್ನು ಎಲ್ಲಿಂದ ತರೋಣ? ವೇದವನ್ನೂ ಇತಿಹಾಸವನ್ನೂ ಸರಿಯಾಗಿ ತಿಳಿಯದೆ ತಮ್ಮ ಮೂಗಿ ನೇರಕ್ಕೆ ಮಾತಾಡುವ ಈ ಬುದ್ಧಿಜೀವಿಗಳಿಗೆ ಆರ್ಯ-ದ್ರಾವಿಡ ಕುಸಿದುಹೋದ ವಾದ ಎಂಬುದು ಸಿದ್ದವಾದಾಗ ಏಕೆ ಕೈಕಟ್ಟಿಕೊಂಡು ಕುಳಿತಿದ್ದರು. ಸಮರ್ಥನೆಗೆ ದಾರಿಯೇ ಕಾಣಲಿಲ್ಲ ಏಕೆ? "ಹೊಸ ಮತಗಳ ಉದಯ" ಎಂಬ ಇನ್ನೊಂದು ಪಾಠದಲ್ಲಿ ಬುದ್ದನನ್ನು ಏಕವಚನದಲ್ಲಿ ಸಂಬೋಧಿಸಲಾಗಿದೆ ಎಂದೂ ಬುದ್ದಿಜೀವಿಗಳು ಮೊಸರಲ್ಲಿ ಕಲ್ಲುಹುಡುಕಿದ್ದಾರೆ. ಇದಕ್ಕೇನನ್ನಬೇಕು? " ಬುದ್ದರಿಗೆ ಬೋಧಿ ವೃಕ್ಷದಡಿಯಲ್ಲಿ ಜ್ನಾನೋದಯವಾಯಿತು" ಎಂದು ಉಲ್ಲೇಖಿಸಬೇಕಿತ್ತಂತೆ! ಬುದ್ದನನ್ನು ಏಕವಚನ ಮತ್ತು ಬಹುವಚನದಲ್ಲಿ ಸಂಭೋದಿಸುವ ವ್ಯಾಕರಣವನ್ನು ಎಲ್ಲಿ ಕಲಿಯೋಣ? ಇನ್ನು ೫ನೇ ತರಗತಿಯಲ್ಲಿ ಬಸವಣ್ಣವೇ ಇಲ್ಲ, ಹೈದರಾಲಿಯನ್ನು "ಸೋತ" ಎನ್ನಲಾಗಿದೆ ಎಂಬು ಹುಚ್ಚು ಆರೋಪಗಳೂ ಇವೆ. ಹೈದರಾಲಿ ಮರಾಠರಿಂದ ಸೋತಿದ್ದು ಪಠ್ಯಪುಸ್ತಕ ಸಮಿತಿಯವರ ತಪ್ಪೇ? " ಗುಪ್ತರ ಕಾಲದ ಸ್ತಂಭವನ್ನು ಸ್ತೂಪ ಎನ್ನಲಾಗಿದ್ದು, ಮೊಗಲರ ಕಾಲದ ಸ್ತಂಭವನ್ನು ಕಬ್ಬಿಣದ ಕಂಬ ಎನ್ನಲಾಗಿದೆ" ಎಂದು ಆರೋಪಿಸುವ ಪ್ರಚಾರಪ್ರೀಯರು ಬಿಳಿಯಾದ ಹಾಲನ್ನೇ ಕೊಟ್ಟರೂ ಹಸು, ಎಮ್ಮೆ ಮತ್ತು ನಂದಿನಿ ಹಾಲಿನ ಪುಡಿ ಮೂರೂ ಬೇರೆ ಬೇರೆ ಎಂದು ಅಂದಾಜು ಮಾಡದಷ್ಟು ದಡ್ಡರು ಎಂದೇ ಹೇಳಬೇಕು. ಸ್ತೂಪವೇ ಬೇರೆ ಕಂಬವೇ ಬೇರೆ ಎಂದು ಅರಿವಿಲ್ಲದಿರುವವರು ಇತಿಹಾಸವನ್ನೇ ಬರೆದುಬಿಡುತ್ತಾರಲ್ಲಾ? ಪ್ರೌಡ ಶಾಲೆಯ ಮಕ್ಕಳ ಪುಸ್ತಕದಲ್ಲಿ ಕಾಳಿದಾಸನ ಪಾಠವಿದೆ. ಅಲ್ಲಿ ಶಾಕುಂತಲೆಯ ಕಥೆ ಅನಿವಾರ್ಯವೇ ಹೊರತು ಮರ್ಲಿನ್ ಮನ್ರೋದ್ದಲ್ಲ. ಪೌರನೀತಿಯಲ್ಲಿ ಪ್ರಜಾಪ್ರಭುತ್ವವನ್ನು ವ್ಯಾಖ್ಯಾನಿಸಲು ಅಬ್ರಹಾಂ ಲಿಂಕನ್ ಉಲ್ಲೇಖನೀಯವೇ ವಿನಾ ಜಾನ್ ಅಬ್ರಹಾಂ ನಲ್ಲ. ಹಾಗೆಯೇ ಧರ್ಮ ಮತ್ತು ರಿಲೀಜಿಯನ್ ನ ವ್ಯತ್ಯಾಸವನ್ನು ಮಕ್ಕಳಿಗೆ ಅರಿಕೆ ಮಾಡಿಕೊಡುವುದು ಸಮಾಜ ಪಠ್ಯದ ಉದ್ದೇಶವೇ ವಿನಾ ಇಸವಿಗಳನ್ನು ತುಂಬಿಸುವುದಲ್ಲ.
ಬರುತ್ತಿರುವ ಪಠ್ಯಪುಸ್ತಕಗಳಿಂದ ನಿರೀಕ್ಷೆಗಳನ್ನು ಇಟ್ಟುಕೊಳ್ಳಬಹುದೆನ್ನಿಸುತ್ತದೆ. ಅಲ್ಲಿ ರಾಮಾಯಣ- ಮಹಾಭಾರತದ ನೀತಿಕಥೆಗಳಿವೆ. ಕೊಪರ್ನಿಕಸ್ -ಪೈತಾಗರೋಸನೊಟ್ಟಿಗೆ ಚರಕ ಸುಶ್ರುತರಿದ್ದಾರೆ. " ತಮಸೋಮಾ..." ಪ್ರಾರ್ಥನೆಯಿದೆ. ನಳಂದ ವಿ.ವಿಯ ದುರಂತ ಅಂತ್ಯದ ಕಾರಣಗಳಿವೆ. ಮಕ್ಕಳ ಭವಿಷ್ಯದಲ್ಲಿ ಜೀವಕಳೆ ತುಂಬಲು ಏನೇನಿರಬೇಕೋ ಅವೆಲ್ಲವೂ ಇವೆ. ವಿಪರ್ಯಾಸವೆಂದರೆ ಎ.ಕೆ. ಸುಬ್ಬಯ್ಯನವರಂಥಾ ಬುದ್ದಿಜೀವಿಗಳೂ ಇದೀಗ ಹೇಳಿಕೆಗಳ ಮೇಲೆ ಹೇಳಿಕೆಗಳನ್ನು ಕೊಡಲಾರಂಭಿಸಿದ್ದಾರೆ.ಹೀಗೆ ಹೇಳಿಕೆ ನೀಡುವವರಿಗೆಲ್ಲಾ ವೊಮ್ಮಕ್ಕಳಿದ್ದಾರೆ. ಅವರು ತಮ್ಮಂಥಾಗಿಬಿಡಬಾರದು ಎಂಬ ಸಣ್ಣ ಯೋಚನೆಯೂ ಈ ಬುದ್ದಿಜೀವಿಗಳಿಗೆ ಬರಬಾರದೇ?

No comments:
Post a Comment