Thursday, December 29, 2011

ಈ ಮತಾಂಧತೆಗಿಂತ ಆ ಮಲೇರಿಯಾವೇ ವಾಸಿ


ಕಥೆ ತುಂಬಾ ಹಿಂದಿನದೇನಲ್ಲ. ಕೆಲವು ದಶಕಗಳಷ್ಟು ಹಿಂದಿನದಷ್ಟೆ.
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನಲ್ಲಿ ನೆಟ್ಟಾರು ಎಂಬ ಊರು. ಆ ಊರಲ್ಲಿ ಅಡಿಕೆ ತೋಟ ಮಾಡಿಕೊಂಡಿದ್ದ ಒಂದು ಹವ್ಯಕ ಬ್ರಾಹ್ಮಣರ ಕುಟುಂಬ. ರಾಮಚಂದ್ರ ಭಟ್ಟರೆಂಬವರು ಅದರ ಯಜಮಾನರು. ಮಧ್ಯವಯಸ್ಕರು. ತಾನಾಯಿತು. ತನ್ನ ಅಡಿಕೆ ತೋಟವಾಯಿತು. ಬಾಯಿಗೆ ಕವಳವಾಯಿತು ಎಂದು ಇದ್ದವರಿಗೆ ಒಂದು ದಿನ ಎದೆನೋವು ತೀವ್ರವಾಯಿತು. ಮನೆಯವರು ಮಾಡದ ಮದ್ದಿಲ್ಲ. ತಿರುಗದ ಆಸ್ಪತ್ರೆಯಿಲ್ಲ. ಒಂದು ದಿನ ರಾಮಚಂದ್ರ ಭಟ್ಟರು ಎದ್ದವರೇ "ಈ ದೇಹ ನನ್ನದಲ್ಲ. ನಾನು ರಾಮಚಂದ್ರ ಭಟ್ಟನಲ್ಲ" ಎಂದು ಬಡಬಡಿಸತೊಡಗಿದರು. ಅಜ್ಜರಿಗೆ ಹುಚ್ಚು ಹಿಡಿದಿದೆ ಎಂದರು ಜನ. ಆ ಹೊತ್ತಲ್ಲಿ ಅಜ್ಜರಿಗೆ ಜೊತೆಯಾದವರು ಸುಳ್ಯ ತಾಲೂಕಿನ ಬೆಳ್ಳಾರೆಯ ಇಸ್ಮಾಯಿಲ್ ಕುಂಞಪ್ಪರು. ಊರಿಗೆ ಹುಚ್ಚನೆಂದಾದರೂ ಇವರದು ಗಳಸ್ಯ ಕಂಠಸ್ಯ. ಒಟ್ಟಿಗೆ ತಿರುಗದ ಊರಿಲ್ಲ. ಆಡದ ಮಾತಿಲ್ಲ. ಮುಗ್ಧಜೀವಗಳು ಎರಡು ದೇಹ. ಒಂದೇ ಮನಸಿನಂತಿದ್ದವು. ಸಂಪ್ರದಾಯನಿಷ್ಠ ಬ್ರಾಹ್ಮಣನಿಗೆ ಇಸ್ಮಾಯಿಲ್‌ಕುಂಞಪ್ಪರೆಂಬ ಬ್ಯಾರಿಯ ಸಂಗ! ಕರಾವಳಿಯಾದ್ಯಂತ ಇದು ಅಂದು ಸೋಜಿಗ ಹುಟ್ಟಿಸಿತ್ತು. ಜನ ರಾಮಚಂದ್ರ ಭಟ್ಟರನ್ನು ಆಧ್ಯಾತ್ಮಿಕ ಗುರುಗಳಾಗಿ ಒಪ್ಪಿಕೊಂಡಿದ್ದರು. ಹಾಗೆಯೇ ಬೆಳ್ಳಾರೆ ಇಸ್ಮಾಯಿಲ್ ಬ್ಯಾರಿಗಳನ್ನೂ ಒಪ್ಪಿಕೊಂಡಿದ್ದರು. ಅವಧೂತ ಪರಂಪರೆಯ ಆಧುನಿಕ ಅವತಾರ ಎಂದು ಅವರನ್ನು ಇಂದಿಗೂ ನಂಬುತ್ತಾರೆ.
ಅದಾಗಿ ಕೆಲವೇ ದಶಕಗಳಾಗಿವೆ. ಇಂಥ ಸ್ನೇಹ ಜಗತ್ತಿನಲ್ಲಿ ಸಾಧ್ಯವಾಗುವುದೇ ಎಂಬ ಸಂಶಯಗಳು ಬರತೊಡಗಿದೆ. ಅದೂ ಮುಸಲ್ಮಾನರಲ್ಲಿ. ಅದೂ ದಕ್ಷಿಣ ಕನ್ನಡದಲ್ಲಿ. ಅದೂ ಬೆಳ್ಳಾರೆಯಲ್ಲಿ ಎಂಬ ಪ್ರಶ್ನೆಗಳು ಮೂಡಲಾರಂಭಿಸಿವೆ. ಇಂದು ಮಿನಿ ಪಾಕಿಸ್ಥಾನ ಎಂದೇ ಕರೆಯಲ್ಪಡುವ ಬೆಳ್ಳಾರೆ ಎಂಬ ಸಣ್ಣಪೇಟೆಗೇನಾದರೂ ಅವಧೂತನಂತಿರುವ ಹಿಂದು ಹೋದನೆಂದುಕೊಳ್ಳಿ. ಆತನನ್ನು ರಾಮಚಂದ್ರ ಭಟ್ಟರಂತೆ ಬರಮಾಡಿಕೊಳ್ಳುವ ಇಸ್ಮಾಯಿಲ್ ಕುಂಞಪ್ಪರಂಥವರು ಸಿಗುವುದಿಲ್ಲ. ಧೂರ್ತ ಧರ್ಮಪ್ರಚಾರಕನೆಂದು ಕೊಂದೇ ಬಿಡುವ ದುಷ್ಟರು ಎದುರಾಗುತ್ತಾರೆ.
ಇದೇಕೆ ಹೀಗಾಯಿತು? ಕೆಲವೇ ದಶಕಗಳಲ್ಲಿ ಸುಳ್ಯದ ಪರಿಸರ ಹೀಗೇಕೆ ಬದಲಾಯಿತು ಎಂಬ ಪ್ರಶ್ನೆಗಳಿಗೆ ಹೊಸ ಪ್ರಶ್ನೆಗಳಿಲ್ಲ. ಪಾನ್ ಇಸ್ಲಾಮೀಗಿಂತ ಹೊರತಾದ ಕಾರಣಗಳನ್ನು ಕೊಡಲಾಗುವುದಿಲ್ಲ. ತನ್ನ ಪಾಡಿಗೆ ತಾನಿರುವಂಥ, ತಟಸ್ಥವಾಗಿರುವಂಥ, ರಿಮೋಟ್ ಆಗಿರುವಂಥಾ ಊರುಗಳಲ್ಲೂ ಅದು ತೀವ್ರ ಮತಾಂಧತೆಯಿಂದ ಬೆಳೆಯಬಲ್ಲದು ಎಂಬುದಕ್ಕೆ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕೇ ಉದಾಹರಣೆ. ಮೈಸೂರು-ಬಂಟವಾಳ ರಾಜ್ಯ ಹೆದ್ದಾರಿಯಲ್ಲಿ ಸಿಕ್ಕರೂ ಸುಳ್ಯ ಧಿಗ್ ಎಂದು ಎದುರಾಗುವ ಪಟ್ಟಣವಲ್ಲ. ಅಡಿಕೆ-ಗೇರು, ಕೃಷಿ ಉತ್ಪನ್ನಗಳನ್ನು ಮಾರಲೆಂದೇ ಕಟ್ಟಿದ ಪಟ್ಟಣದಲ್ಲಿ ಬಸ್ಸು ಸುಧಾರಿಸಿಕೊಳ್ಳಲು ನಿಲ್ಲುತ್ತದೆ ಎಂದಷ್ಟೇ ಎನಿಸುವ ಸುಳ್ಯ, ಕರಾವಳಿ ಜಿಲ್ಲೆಯಲ್ಲಿದ್ದರೂ ಕರಾವಳಿಯ ಲಕ್ಷಣಗಳಿಲ್ಲದ ತಾಲೂಕು. ಬಹುಭಾಷೆ-ಬಹುಸಂಸ್ಕೃತಿಗಳ ಸಮಾಜ ಲಕ್ಷಣ. ದೂರದೂರದಲಿ , ಬೆಟ್ಟಗಳ ತಪ್ಪಲಲ್ಲಿ ದೊಡ್ಡದೊಡ್ಡದಾದ ಊರುಗಳು. ಅಹಮಿಕೆ,ಧೂರ್ತತೆ ಗೊತ್ತಿಲ್ಲದ ಜನಗಳು. ಗಡಿನಾಡಿನ ಸಂಪರ್ಕಗಳೆಲ್ಲವೂ ಒಟ್ಟು ಸೇರಿ ಸುಳ್ಯವನ್ನು ವಿಶೇಷವಾಗಿರಿಸಿವೆ. ಕೆದಂಬಾಡಿ ಜತ್ತಪ್ಪ ರೈಗಳ ಶಿಕಾರಿಯ ಕೋವಿಯ ಸದ್ದು ಕೇಳಿದ್ದು ಇಲ್ಲೇ. ಶಿವರಾಮ ಕಾರಂತರ ಕಾದಂಬರಿಗಳಿಗೆ ಪಾತ್ರಗಳನ್ನು ಒದಗಿಸಿದ್ದು ಇದೇ ಸುಳ್ಯ. ಚಾರಣಪ್ರಿಯರನ್ನು ಕೈಬೀಸಿ ಕರೆಯುವ ಸುಳ್ಯ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವನ್ನು ಒಡಲಲ್ಲಿಟ್ಟುಕೊಂಡಿರುವ ಸುಳ್ಯ ಕೆಲ ದಶಕಗಳ ಹಿಂದೆ ರೋಗಗಳ ಗೂಡು ಕೂಡ. ಮಲೇರಿಯಾ, ಮಂಗನಕಾಯಿಲೆ, ಡೆಂಗ್ಯೂ, ಆನೆಕಾಲು ರೋಗ ಇನ್ನಿತರ ಸಾಂಕ್ರಾಮಿಕ ರೋಗಗಳಿಗೂ ಹೆಸರಾಗಿತ್ತು. ಆದರೆ ಈಗ ಸುಳ್ಯ ತಾಲೂಕಿನಲ್ಲಿ ಯಾವ ಸಾಂಕ್ರಾಮಿಕ ರೋಗಗಳಿಲ್ಲ, ಅವುಗಳ ಜಾಗಕ್ಕೆ ಈಗ ಮತಾಂಧ ಇಸ್ಲಾಮು, ಕೆ.ಎಫ್.ಡಿ., ದುಷ್ಟ ಪೊಲೀಸರು ಬಂದ ಮೇಲೆ ರೋಗಗಳೆಲ್ಲವೂ ಕಾಡುಪಾಲಾಗಿದೆ. ಹೀಗೆ ಹೊಸ ರೋಗಗಳು ವಕ್ಕರಿಸಿರುವುದರಿಂದ ಸುಳ್ಯ ಈಗ ಮೊದಲಿನಂತಿಲ್ಲ. ಜತ್ತಪ್ಪ ರೈಗಳ ಕೋವಿಯ ಸದ್ದು ಇಂದು ಕಥೆಯಲ್ಲಿ ಮಾತ್ರ. ಈಗೇನಿದ್ದರೂ ಅಲ್ಲಿ ಲವ್‌ಜೆಹಾದು ಮತ್ತು ಪೊಲೀಸರ ಕಾಂಚಾಣದ ಸದ್ದು ಮಾತ್ರ. ಇವೆರಡೂ ದುಷ್ಟ ಶಕ್ತಿಗಳ ಸಮ್ಮಿಲನದಿಂದ ಸುಳ್ಯ ಎಷ್ಟೊಂದು ಬಿಗುವಿನಿಂದ ಕೂಡಿದೆಯೆಂದರೆ ಇಂದು ಶಿವರಾಮ ಕಾರಂತರೇನಾದರೂ ಬೆಳ್ಳಾರೆಯಿಂದ ಬಸ್ಸಿಳಿದು ತಮ್ಮ ಬೆಟ್ಟದ ಜೀವ ಕಾದಂಬರಿಯ ಊರು ಕಾಟುಮೂಲೆಗೆ ನಡೆದು ಹೋದರೆ ಹಿಂದುವೆಂಬ ಒಂದೇ ಕಾರಣಕ್ಕೆ ಕಾರಂತರನ್ನೂ ಏನೋ ಮಾಡಿಯಾರು.
ಇಂಥ ಸುಳ್ಯದಲ್ಲಿ ಇತ್ತೀಚೆಗೆ ಎದೆ ನಡುಗಿಸುವ ಹಲವು ಘಟನೆಗಳು ನಡೆಯುತ್ತಿದೆ. ಹೊರಜಗತ್ತಿಗೆ ಸುದ್ದಿಯಾಗದೇ ಹೋಗುತ್ತಿದೆ. ಎಲ್ಲೋ ತಾಲಿಬಾನಿನಲ್ಲಿ ನಡೆಯುವಂತೆ ಇಲ್ಲೂ ದೌರ್ಜನ್ಯಗಳು ನಡೆಯುತ್ತದೆ. ಮತಾಂಧರ ಅಟ್ಟಹಾಸ, ಆರಕ್ಷಕರೆಂಬವರ ರಕ್ಕಸತನಗಳು ಆಗಾಗ್ಗೆ ಪ್ರಕಟವಾದರೂ ಅವು ಮಂಗಳೂರಿನವರೆಗೂ ತಲುಪುವುದಿಲ್ಲ. ಮಂಗಳೂರಿನ ಚರ್ಚಿನ ಗಾಜು ಒಡೆದಿದ್ದು, ನನ್‌ಗಳ ವ್ಯಭಿಚಾರದ ಕಥೆಗಳು ಬಣ್ಣ ಬಳಿದುಕೊಂಡು ಅಲ್ಪಸಂಖ್ಯಾತರ ಮೇಲೆ ದಾಳಿ ಎಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಕಟವಾಗುತ್ತದೆ. ಆದರೆ ಸುಳ್ಯದಲ್ಲಿ ಪೊಲೀಸರಿಗೆ ವಕೀಲನೊಬ್ಬ ರಿವಾಲ್ವರ್ ತೋರಿಸಿದರೂ ಅಡಗಿ ಹೋಗುತ್ತದೆ.
ಮೊನ್ನೆ ಮುಸಲ್ಮಾನ ಹುಡುಗನೊಬ್ಬನ ಪ್ರೇಮದ ಬಲೆಗೆ ಬಿದ್ದ ಹುಡುಗಿಯೊಬ್ಬಳ ಹಠವನ್ನು ತಾಳಲಾರದೇ ತಂದೆಯೇ ಚೂರಿಯಿಂದ ಇರಿದಿದ್ದ ಘಟನೆಯೊಂದು ರಾಜ್ಯಾದ್ಯಂತ ಪತ್ರಿಕೆಗಳಲ್ಲಿ ವರದಿಯಾಯಿತು. ಮಧುರ ಪ್ರೇಮಕ್ಕೆ ಮತ್ತೊಂದು ಅರ್ಥವೇ ಸುಳ್ಯದ ಯುವತಿ ಎಂದು ಪತ್ರಿಕೆಗಳು ಬರೆದವು. ಆದರೆ ಆ ಪ್ರೇಮದ ಹಿಂದಿದ್ದ ಜಿಹಾದ್‌ನ ನೆರಳು ಎಲ್ಲೂ ಬಿಂಬಿತವಾಗಲಿಲ್ಲ. ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ನಿರಂತರ ಹಲ್ಲೆಯಾಗುತ್ತಿದ್ದರೂ ಅದು ದೊಡ್ಡ ವಿಷಯವಾಗುವುದಿಲ್ಲ. ಆದರೆ ಅಲ್ಪಸಂಖ್ಯಾತರು ಜಾರಿ ಬಿದ್ದು ಗಾಯವಾದರೂ ಹಲ್ಲೆಯ ಸಂಶಯಗಳು ಇಲ್ಲಿ ವ್ಯಕ್ತವಾಗುತ್ತಿವೆ.
ಅದೇ ರೀತಿ ಅಂದು ನಡೆದ ಘಟನೆ ಕೂಡ ಹೊರಜಿಲ್ಲೆಗಳಿಗೆ ತಿಳಿಯಲಿಲ್ಲ. ಅಂದು ಕಾಲೇಜಿಗೆ ಬರುತ್ತಿದ್ದ ಹಿಂದೂ ಹುಡುಗಿಯರ ಮೇಲೆ ಮುಸಲ್ಮಾನ ಹುಡುಗರ ಕಾಮುಕ ದೃಷ್ಟಿ ಬಿದ್ದಿದೆ. ಅಸಭ್ಯವಾಗಿ ವರ್ತಿಸಿದ್ದಾರೆ. ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರಿಗೂ ಮತಾಂತರಿಗೂ ಸಣ್ಣ ಜಗಳವಾಗಿದೆ. ಎಂದಿನಂತೆ ಠಾಣೆಗೆ ವಿಷಯ ತಲುಪಿದೆ. ಠಾಣೆಯಲ್ಲಿ ಎಂದಿನಂತೆ ಮತಾಂಧರ ಪರ ಪೊಲೀಸರು ವಹಿಸಿದ್ದಾರೆ. ಅದು ಮುಗಿಯಿತು ಎನ್ನುತ್ತಿದ್ದಂತೇ ಸುಳ್ಯ ಪಟ್ಟಣದ ಹೊರಭಾಗದಲ್ಲಿ ಹಿಂದೂ ಹುಡುಗಿಯರನ್ನು ಮುಸಲ್ಮಾನ ಹುಡುಗರು ವಾಹನದಲ್ಲಿ ಸಾಗಿಸುತ್ತಿದ್ದಾರೆ ಎಂಬ ವಿಷಯ ಹರಡಿತು. ಆ ವಾಹನವನ್ನು ಹಿಡಿದು ಸುಳ್ಯ ಪೊಲೀಸ್ ಠಾಣೆಗೆ ತಂದಾಗ ಎಲ್ಲವೂ ಅಯೋಮಯ. ಪೊಲೀಸರು ಮನುಷ್ಯರೇ ಅಲ್ಲವೆಂಬಂತೆ ವರ್ತಿಸಿದ್ದಾರೆ. "ಈ ಕೆಲಸ ನಿಮಗೆ ವಹಿಸಿದವರಾರು?" ಎಂದು ಗದರಿದರು. ಅದೇ ಹೊತ್ತಿಗೆ ಪೊಲೀಸ್ ಠಾಣೆಯ ಮುಂಭಾಗದ ಮುಸಲ್ಮಾನ ಕಟ್ಟಡದಿಂದ ಠಾಣೆಯತ್ತ ಕಲ್ಲುಗಳು ಬಿದ್ದವು. ಮುಸಲ್ಮಾನರನ್ನು ಹಿಡಿಯಲು ಧೈರ್ಯ ಸಾಲದ ಪೊಲೀಸರು ಹಿಂದುಗಳ ಮೇಲೆ ಲಾಠಿಪ್ರಹಾರ ನಡೆಸಿದ್ದಾರೆ. ಮಾತುಕತೆಗಳ ನಂತರ ವಿಷಯ ತಣ್ಣಗಾಗಿ, ಕತ್ತಲಾಗಿ ಎಲ್ಲವೂ ಮುಗಿದಿದೆ. ಅದೇ ದಿನ ರಾತ್ರಿ ಒಂದೂವರೆಯ ಸುಮಾರಿಗೆ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮನೆಗೆ ತಂಡೋಪತಂಡವಾಗಿ ಪೊಲೀಸರು ನುಗ್ಗಿದರು. ಸುಮಾರು ೨೯ ಜನರನ್ನು ಬಂಧಿಸಲಾಯಿತು. ವಯೋವೃದ್ಧ ಕಾರ್ಯಕರ್ತರು ಅವರ ಮನೆಯವರ ಮೇಲೂ ಲಾಠಿ ಪ್ರಯೋಗಿಸಲಾಯಿತು. ಕೈಯಲ್ಲಿದ್ದ ರಕ್ಷೆ, ಜನಿವಾರಗಳನ್ನು ತುಂಡರಿಸಲಾಯಿತು. "ನಿಮ್ಮ ಮುಖ್ಯಮಂತ್ರಿಯೂ ಇದೇ ಊರಿನವನಲ್ಲವಾ ಅವನ ಎದೆಗೂ ಹೀಗೇ ಒದೆಯುವೆ" ಎಂದು ಅಬ್ಬರಿಸಲಾಗಿದೆ. ಸುಳ್ಯ ಠಾಣೆಯ ರವಿ ಎಂಬ ಠಾಣಾಧಿಕಾರಿ, ಕಡಬದ ಪೌಲ್ ಎಂಬವರು ಮತ್ತು ಸಂಪ್ಯ ಠಾಣೆಯ ಆನಂದರೆಂಬವರು ಖೊಮೆನಿಗಳಂತಾಡಿದ್ದಾರೆ. ಹಿಂದೂ ಸಂಘಟನೆಗಳು ಮಾಡಿದ ತಪ್ಪಾದರೂ ಏನಿತ್ತು? ಹೆಣ್ಣು ಮಕ್ಕಳ ಬಾಳು ಹಾಳಾಗಬಾರದೆಂದು ಕಾಳಜಿ ವಹಿಸಿದವರಿಗೆ ಸಿಕ್ಕಿದ್ದು ಲಾಠಿ ಏಟು. ಅದೂ ಬಾಂಗ್ಲಾದಲ್ಲಲ್ಲ. ಅಫಘಾನಿಸ್ಥಾನದಲ್ಲೋ ಅಲ್ಲ. ಸುಳ್ಯದಲ್ಲಿ ನಡೆಯುವ ಲವ್ ಜೆಹಾದಿನ ಪ್ರಕರಣಗಳು ಎಂಥವರ ಎದೆಯನ್ನೂ ನಡುಗಿಸುತ್ತದೆ. ತಾಲೂಕಿನಾದ್ಯಂತ ಕಾಲೇಜಿನಲ್ಲಿ ಅಡ್ಡಾಡುವ ಮತಾಂಧರಿಂದ ಮಕ್ಕಳನ್ನು ರಕ್ಷಿಸುವುದೇ ಪೋಷಕರಿಗೆ ತಲೆನೋವಾಗಿ ಪರಿಣಮಿಸಿದೆ. ಏಕೆ ಪೊಲೀಸರಾರೂ ಪೋಷಕರಲ್ಲವೇ? ಅವರ ಮನೆಯಲ್ಲೂ ಹೆಣ್ಣು ಮಕ್ಕಳಿರುವುದಿಲ್ಲವೇ? ಆದರೂ ಇಂದು ವಾರಕ್ಕೊಂದರಂತೆ ತಾಲೂಕಿನಲ್ಲಿ ಹಿಂದೂ ಹುಡುಗಿಯರ ಮೇಲೆ ಬಲೆಬೀಸುವ ಮತಾಂಧರನ್ನು ಹಿಡಿಯಲಾಗುತ್ತದೆ. ಹೀಗೆ ಹಿಡಿದ ಮತಾಂಧರನ್ನು ಠಾಣೆಗೊಪ್ಪಿಸಿದರೆ ಪೊಲೀಸರ ಅವಾಚ್ಯ ಶಬ್ದಗಳು ಬೀಳುವುದು ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆಯೇ. ಕುಕ್ಕೆ ಕ್ಷೇತ್ರದ ಸುತ್ತಮುತ್ತಲಿನ ಲಾಡ್ಜ್‌ಗಳನ್ನೂ ಬಿಡದ ಕಾಮುಕ ಮುಸ್ಮಾನರನ್ನು ಪೊಲೀಸರು ಯಾವತ್ತೂ ಬಂಧಿಸಿಲ್ಲ. ಸುಳ್ಯ ತಾಲೂಕಿನಲ್ಲಿ ಅವ್ಯಾಹತ ಗಾಂಜಾ ದಂಧೆಯನ್ನುದ ನಿಲ್ಲಿಸಲಾಗದ, ಕೇರಳಕ್ಕೆ ಸಾಗುವ ಅಕ್ರಮ ಮದ್ಯವನ್ನು ಹಿಡಿಯಲಾಗದ, ಮರಗಳನ್ನು ಸಾಗಿಸುವ ಲಾರಿಯವರನ್ನು ತಡೆಯಲಾಗದ ಪೊಲೀಸರನ್ನು ಏನನ್ನಬೇಕು? ಹಿಂದುಗಳು ಅವರಂತೆ ಭೀಕರವಾಗಿ ಕಾಣುವುದಿಲ್ಲವೆಂದು ಸಸಾರವೇ? ಮತಾಂಧರೆಂದರೆ ಅಷ್ಟೊಂದು ಹೆದರಿಕೆಯೇ?
ಒಮ್ಮೆ ಬೈಕಿನಲ್ಲಿ ಸಾಗುತ್ತಿದ್ದ ಮುಸಲ್ಮಾನರಿಬ್ಬರು ಅಪಘಾತ ಕ್ಕೊಳಗಾದರು. ಬೈಕಿನಿಂದ ಅವರ ಬ್ಯಾಗುಗಳು, ಪರ್ಸುಗಳು ರಸ್ತೆಗೆ ಎಗರಿ ಬಿದ್ದವು. ಒಳಗಿದ್ದುದೆಲ್ಲಾ ರಸ್ತೆಯಲ್ಲಿ ಚೆಲ್ಲಿದವು. ಅದರಲ್ಲಿ ಲಾಡೆನ್‌ನ ಭಾವಚಿತ್ರ ಮತ್ತು ಹಲವು ವಿದೇಶಿ ಫೋನ್ ನಂಬರ್ ಗಳು ಇದ್ದವು. ಅದನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ಸುಳ್ಯ ಠಾಣೆಗೆ ಮುಟ್ಟಿಸಿದಾಗ ಪೊಲೀಸರಿಂದಲೇ "ನಿಮಗ್ಯಾಕೆ ಈ ಕೆಲಸ?" ಎಂದು ದಬಾಯಿಸಿ ಕಳುಹಿಸಲಾಗಿತ್ತು.
ಕೆಲ ವರ್ಷಗಳ ಹಿಂದೆ ಕೇಂದ್ರ ಸಚಿವೆ ರೇಣುಕಾ ಚೌಧರಿ ಮಂಗಳೂರನ್ನು ತಾಲೀಬಾನೀಕರಣಕ್ಕೆ ಹೋಲಿಸಿದ್ದರು. ಅವರ ದೃಷ್ಟಿ ಸರಿ ಇರಲಿಲ್ಲ. ಹಾಗಾಗಿ ತಾಲೀಬಾನೀಕರಣದ ಅರ್ಥವನ್ನು ಅವರು ಗ್ರಹಿಸಲಾಗಿರಲಿಲ್ಲ. ಇದೀಗ ಸುಳ್ಯದ ರಕ್ಷಣಾ ವ್ಯವಸ್ಥೆ, ದಂಧೆ, ದೌರ್ಜನ್ಯಗಳನ್ನು ನೋಡಿದಾಗ ತಾಲೀಬಾನೀಕರಣವೇ ಹೌದು ಎನಿಸುತ್ತದೆ. ಮತ್ತು ಅಲ್ಲಲ್ಲಿ ಕಾಣುವ ಪಾಕಿಸ್ಥಾನಗಳಂತಹ ಊರುಗಳು, ಮುಖದಲ್ಲಿ ಕಾರುಣ್ಯದ ಲೇಪವಿಲ್ಲದ ಜನಗಳು, ಕಾಮವನ್ನೇ ಜೀವನದ ಪರಮ ಧ್ಯೇಯದಂತೆ ಸ್ವೀಕರಿಸಿರುವರೇನೋ ಎಂಬಂತೆ ಕಾಣುವರು. ಭಂಡತನದ ವ್ಯಕ್ತಿತ್ವಗಳು, ಅವರಿಗೆ ಅಡ್ಡಬಿದ್ದವರು, ಸಂಡೇ ಲಾಯರ್ ಗಳು, ನಾರು ಮತ್ತು ಬೇರುಗಳ ಹೆಸರಲ್ಲಿ ಎಸಿ ಕಾರನ್ನು ಹೊಂದಿದವರು ಎಲ್ಲರನ್ನೂ ನೋಡಿದರೆ ಸುಳ್ಯದಲ್ಲಿ ಇವರೆಲ್ಲರಿಗಿಂತ ಸಾಂಕ್ರಾಮಿಕ ರೋಗಗಳೇ ವಾಸಿ ಎನಿಸುತ್ತದೆ. ಸುಳ್ಯದಂಥ ಪ್ರದೇಶವೇ ಹದ ತಪ್ಪುವುದಾದರೆ ಉಳಿದ ಪ್ರದೇಶಗಳ ಸ್ಥಿತಿಯೇನು?

ಪುಟ್ಟನ ರೊಟ್ಟಿಯ ಮೇಲೂ ಕಣ್ಣಿಟ್ಟಿರಾ?


ಕೆಲವು ಗುಣಗಳನ್ನು "ಹುಟ್ಟುಗುಣ ಸುಟ್ಟರೂ ಹೋಗುವುದಿಲ್ಲ" ಎಂದು ಬಿಟ್ಟುಬಿಡುವ ಹಾಗಿಲ್ಲ. ಏಕೆಂದರೆ ಅವು ಗುಣಗಳೇ ಅಲ್ಲ. ಅವು ಆಯಾಯ ಸಂಗತಿಗಳ ಲಕ್ಷಣಗಳು. ಆ ಲಕ್ಷಣಗಳಿಲ್ಲದೆ ಆ ಸಂಗತಿಗಳಿಲ್ಲ. ಆ ಸಂಗತಿಗಳಿಲ್ಲದೆ ಆ ಲಕ್ಷಣಗಳು ಗೋಚರಿಸುವುದೂ ಇಲ್ಲ. ಹಾಗೆಂದು ಫಿಲಾಸಫಿಯ ಕಾರ್ಯಕಾರಣ ಸಂಬಂಧವೂ ಇಲ್ಲಿ ಅನ್ವಯಿಸುವುದಿಲ್ಲ. ಅದೊಂದು ವಿಲಕ್ಷಣ, ನಿರ್ಲಜ್ಜ ಸಂಗತಿ ಮತ್ತು ಲಕ್ಷಣಗಳ ಸಮನ್ವಯ. ಹಾಗಾಗಿ ಆ ಸಂಗತಿಯನ್ನು ಕಾಂಗ್ರೆಸ್ ಎಂದೂ, ಆ ಲಕ್ಷಣವನ್ನು ಮುಸಲ್ಮಾನ ತುಷ್ಟೀಕರಣವೆಂದೂ ಕರೆಯಬಹುದು. ಅವುಗಳ ಅರ್ಥವನ್ನು ಒಡೆದುನೋಡಲಾಗದಷ್ಟು ಅವು ಅವಿನಾಭಾವಿ. ಮುಸಲ್ಮಾನ ತುಷ್ಟೀಕರಣವೆಂದರೆ ಜಾಗತಿಕ ಶಬ್ಧಕೋಶದಲ್ಲಿ ಕಾಂಗ್ರೆಸ್ ಎನ್ನುವ ಪರ್ಯಾಯ ಶಬ್ಧವನ್ನೇ ಬಳಸಬಹುದು. ಕಾಂಗ್ರೆಸ್ ಎನ್ನುವುದಕ್ಕೂ ತುಷ್ಟೀಕರಣವನ್ನೇ ಪ್ರಣಾಳಿಕೆಯನ್ನಾಗಿ ಮಾಡಿಕೊಳ್ಳಲು ತಂತ್ರಗಾರಿಕೆ ಮಾಡುವ ಪುರಾತನ ಪಕ್ಷ ಎಂಬ ಅರ್ಥಗಳನ್ನೂ ಸೇರಿಸಬಹುದು.
ಸ್ವಾತಂತ್ರ್ಯಾನಂತರ ಕಾಂಗ್ರೆಸ್ ಎಷ್ಟೊಂದು ತುಷ್ಟೀಕರಣ ನೀತಿಯನ್ನು ಅನುಸರಿಸುತ್ತಾ ಬಂತೆಂದರೆ ಹಿಂದೂಗಳು ಅದರ ಭಾರದಿಂದ ಅಕ್ಷರಶಃ ಕುಸಿದುಹೋದರು. ಆದರೂ ಅದರ ನೆಕ್ಕುವ ಚಾಳಿ ಇನ್ನೂ ಬಿಡಲಿಲ್ಲ. ಒಟ್ಟಾರೆ ಕಾಂಗ್ರೆಸ್ ಹಿಂದೂಗಳ ಪಾಲಿಗೆ ಅರೆಯುವ ಕಲ್ಲನ್ನು ಹೊತ್ತು ತೀರ್ಥಯಾತ್ರೆ ಮಾಡಿದಂತೆ . ಅದು ಮುಸಲ್ಮಾರು ಏನೇನೆಲ್ಲಾ ಕೇಳಿದರೋ ಅವೆಲ್ಲವನ್ನೂ ಕೊಟ್ಟಿತು. ಕೆಲವನ್ನು ಕೇಳುವ ಮೊದಲೇ ಕೊಟ್ಟಿತು. ನಮಗಾಗಿಯೇ ಒಂದು ಜಿಲ್ಲೆಯನ್ನು ರಚಿಸಿಕೊಡಿ ಎಂದಾಗಲೂ ಈ ಕಾಂಗ್ರೆಸಿಗರು ಇಲ್ಲವೆನ್ನಲಿಲ್ಲ. ನಮಗಾಗಿ ಪ್ರತ್ಯೇಕ ಕಾನೂನನ್ನು ರಚಿಸಿ ಎಂದಾಗಲೂ ಅವರು ಕೇಳಿದಂತೆಯೇ ಮಾಡಿದರು. ಹೀಗೆ ನೋಡನೋಡುತ್ತಲೇ ಸರ್ವಧರ್ಮ ಸಮನ್ವಯದ , ಸರ್ವಭಾವ ಸಾಮರಸ್ಯದ ದೇಶವನ್ನು ಒಳಗೊಳಗೇ ಒಡೆಯಿತು. ಅವರಿಗೆ ಎಲ್ಲವನ್ನೂ ಕೊಟ್ಟು ಹಿಂದುಗಳ ಕೈಯಿಂದ ಎಲ್ಲವನ್ನೂ ಕಿತ್ತುಕೊಳ್ಳಲಾಯಿತು. ಹಾಗಾಗಿ ಸ್ವತಂತ್ರ ಭಾರತ ನಮಗೆ ಗಾಜಿನ ಚೂರುಗಳನ್ನು ಚುಚ್ಚಿರುವ ಕಾಪೌಂಡು ಗೋಡೆಯಂತೆ ಕಾಣುತ್ತದೆ. ಕಾಂಗ್ರೆಸ್ ಭಾರತವನ್ನು ಇನ್ನೂ ವಿಭಿನ್ನವಾಗಿ ಕಾಣಲು ಹಂಬಲಿಸುತ್ತದೆ. ಅದಕ್ಕೆ ಅದು ಪ್ರತೀ ಚುನಾವಣೆಗಳು ಬಂದಾಗಲೂ ಮುಸಲ್ಮಾನ ಪ್ರೇಮವನ್ನು ಇನ್ನಿಲ್ಲದಂತೆ ಪ್ರದರ್ಶಿಸಲು ತೊಡಗುತ್ತದೆ. ಮೀಸಲಾತಿಯ ದಂಡವನ್ನು ಯರ್ರಾಬಿರ್ರಿ ಬೀಸುತ್ತದೆ. ಅದು ಕಾಂಗ್ರೆಸಿನವರ ಹವ್ಯಾಸ. ಕಳೆದ ಲೋಕಸಭಾ ಚುನಾವಣೆಗಳ ಸಂದರ್ಭದಲ್ಲಿ ಅದು ರಂಗನಾಥ ಮಿಶ್ರಾ ಆಯೋಗದ ವರದಿ ಆಧಾರದ ಮೇಲೆ ಮುಸಲ್ಮಾನರಿಗೆ ಮೀಸಲಾತಿ ಕಲ್ಪಿಸುವುದಾಗಿ ಬಡಬಡಿಸಿತ್ತು. ಅನಂತರ ವಿವಿಧ ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲೂ ಕೂಡ ಕಾಂಗ್ರೆಸ್ ರಾಜೇಂದ್ರ ಸಾಚಾರ್ ವರದಿಯನ್ನು ಮುಸಲ್ಮಾನರ ಮುಂದಿಟ್ಟು ಹಿಂದುಗಳಿಗೆ ಗುಮ್ಮನನ್ನು ತೋರಿಸಿತ್ತು. ಇದೀಗ ನಾಲ್ಕು ರಾಜ್ಯಗಳ ವಿಧಾನ ಸಭಾ ಚುನಾವಣೆಗಳು ಬರುತ್ತಿವೆ. ಅದರಲ್ಲಿ ಕಿಂಗ್‌ಮೇಕರ್ ಉತ್ತರ ಪ್ರದೇಶದ ಚುನಾವಣೆಯೂ ಇದೆ. ಇನ್ನು ಮೀಸಲಿನ ದಂಡವನ್ನು ಬೀಸದಿದ್ದರೆ ಹೇಗೆ? ಹಾಗಾಗಿ ಸಲ್ಮಾನ್ ಖುರ್ಷಿದ್ ಎಂಬ ಮಂತ್ರಿ ವಿನಾ ಕಾರಣ ಗಂಭೀರ ಮುಖಮುದ್ರೆಯನ್ನಿಟ್ಟುಕೊಂಡು ಹೊಸ ಮೀಸಲಿನ ಪ್ರಸ್ಥಾಪವನ್ನು ದೇಶದ ಮುಂದಿಡುತ್ತಾರೆ. ಎಂದಿನಂತೆ ಹಿಂದುಗಳ ಕೈಯಿಂದ ಕಿತ್ತುಕೊಡುವ ಈ ಪ್ರಸ್ಥಾಪ ಕೊಬ್ಬುವವರನ್ನು ಮತ್ತಷ್ಟು ಕೊಬ್ಬಿಸಲು ಇರುವಂತಿತ್ತು. ಇತರ ಹಿಂದುಳಿದ ವರ್ಗಗಳಿಗೆ (ಒ.ಬಿ.ಸಿ)ಮೀಸಲಾದ ಶೇ. ೨೭ ಮೀಸಲಿನಲ್ಲಿ ಅಲ್ಪಸಂಖ್ಯಾತರಿಗೆಂದು ಅದರೊಳಗಿನಿಂದ ಶೇ. ೪.೫ ರಷ್ಟನ್ನು ಕಲ್ಪಿಸುವುದು ಈ ಪ್ರಸ್ಥಾಪದ ಮುಖ್ಯ ಅಂಶ. ಶಾಲೆಗೆ ಹೋದ ಪುಟ್ಟ ಬಂದು ತಿನ್ನಲೀ ಎಂದು ಅಮ್ಮ ಇಟ್ಟ ರೊಟ್ಟಿಯನ್ನು ನಾಯಿಗೋ , ಭಿಕ್ಷುಕರಿಗೋ ಹಾಕಿದಂತೆ ಎನಿಸುವಂತಿದೆ ಈ ಪ್ರಸ್ಥಾಪ. ಮನೆಮಂದಿಯೆಲ್ಲಾ ತಿಂದುಂಡಿರುವಾಗ ಹಸಿದಿರುವ ಪುಟ್ಟನಿಗಿಟ್ಟ ರೊಟ್ಟಿಯೇ ಪರರ ಪಾಲಾಗುವುದೆಂದರೆ...? ಈ ಪುಟ್ಟನಿಗೆ ತನ್ನ ಮನೆಯಲ್ಲೇ ರೊಟ್ಟಿಯಿಲ್ಲದಿದ್ದರೆ ಬೇರೆ ಇನ್ನೆಲ್ಲಿ ತಾನೇ ಸಿಗಬಲ್ಲದು? ಆದರೆ ಆ ನಾಯಿಗೋ ಭಿಕ್ಷುಕನಿಗೋ ಹಾಗೇನಿಲ್ಲ. ರೊಟ್ಟಿ ಹಾಕಿದರೆ ಅವು ಬೇಡವೆನ್ನುವುದೂ ಇಲ್ಲ. ಹೀಗೆ ರೊಟ್ಟಿಯಿಲ್ಲದ ಪುಟ್ಟನ ಸ್ಥಿತಿಯಂತಾಗಿದೆ ಹಿಂದುಳಿದ ವರ್ಗಗಳ ಪರಿಸ್ಥಿತಿ.
ಈ ಒಳ ಮೀಸಲಾತಿಗೆ ಕಾಂಗ್ರೆಸ್ ಕೊಟ್ಟುಕೊಂಡ ಕಾರಣ ವಿಚಿತ್ರವೂ ವಿಪರೀತವೂ ಆಗಿ ಕಾಣುತ್ತದೆ. ಈ ಪ್ರಸ್ಥಾಪಕ್ಕೆ ರಂಗನಾಥ ಮಿಶ್ರಾ ಆಯೋಗದ ವರದಿಯೇ ಆಧಾರ ಎಂದು ಅವರು ಹೇಳುತ್ತಿದ್ದಾರೆ. ಅಸಲಿಗೆ ಈ ರಂಗನಾಥ ಆಯೋಗದ ವರದಿಯೇ ಭಯಾನಕವಾಗಿತ್ತು. ಸಂವಿಧಾನ ವಿರೋಧಿಯಾಗಿ ಈತ ಧಾರ್ಮಿಕ ಅಲ್ಪಸಂಖ್ಯಾತ ಎಂಬ ಪದಪ್ರಯೋಗದಡಿಯಲ್ಲಿ ಮುಸಲ್ಮಾನರಿಗೆ ಮೀಸಲು ಒದಗಿಸಬೇಕೆಂದು ವರದಿ ಸಲ್ಲಿಸಿದ್ದರು. ಜೊತೆಗೆ ಭಾಷಾ ಅಲ್ಪಸಂಖ್ಯಾತರೆಂಬುದನ್ನೂ ಸೇರಿಸಿ ಮೀಸಲಿನ ಅರ್ಥವನ್ನೇ ಕೆಡಿಸಿಬಿಟ್ಟಿದ್ದರು. ಹೀಗೆ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರಿಗಾಗಿ ಶೇ.೧೫ ರಷ್ಟು ಮೀಸಲಾತಿಯನ್ನು ಒದಗಿಸಬೇಕು ಎಂದು ಮಿಶ್ರಾ ಆಯೋಗ ಶಿಫಾರಸ್ಸು ಮಾಡಿತ್ತು. ಅನಂತರ ೨೦೦೪ರಲ್ಲಿ ಸರಕಾರ ಅದನ್ನು ಪರೀಕ್ಷಿಸುತ್ತಾ ಶೇ. ೧೫ರಲ್ಲಿ ಶೇ ೧೦ ರಷ್ಟು ಮುಸಲ್ಮಾನರಿಗೆಂದೂ ಮಿಕ್ಕುಳಿದ ಶೇ. ೫ರಷ್ಟನ್ನು ಇತರರಿಗೆ ಎಂದೂ ವಿಂಗಡಣೆ ಮಾಡಿತ್ತು . ಇದರರ್ಥವೇನು? ಮುಸಲ್ಮಾನನಾಗಿ ಹುಟ್ಟಿದವನಿಗೆ ಮೀಸಲಾತಿ ಎಂಬುದು ಜನ್ಮತಃ ಬರುವ ಹಕ್ಕೇ?ಇದುವರೆಗೆ ನಾವೆಲ್ಲಾ ಜನ್ಮತಃ ಬರುವುದು ರೋಗಗಳು ಮಾತ್ರ ಎಂದುಕೊಂಡಿದ್ದೆವು. ಆದರೆ ಅದು ತಪ್ಪು ಎಂದು ಮಿಶ್ರಾ ಆಯೋಗ ಮತ್ತು ಸರಕಾರ ಹೇಳುತ್ತಿವೆ. ಮೀಸಲಾತಿ ಧಾರ್ಮಿಕ ಆಧಾರದಲ್ಲಿ ಗುರುತಿಸುವಂಥದ್ದೇ? ಈ ಆಧಾರದಲ್ಲಿ ಮಂಗಳೂರಿನ ಯನಪೋಯಾ ಗ್ರೂಪಿನವರೂ ಸಲ್ಮಾನ್ ಖುರ್ಷಿದನೂ ಶಾರುಖ್ ಖಾನನೂ ಕೂಡ ಮೀಸಲಾತಿಗೆ ಒಳಗಾಗುವರು. ಇನ್ನು ಭಾಷಾ ಅಲ್ಪಸಂಖ್ಯಾತರಲ್ಲಿ ಮೀಸಲಾತಿಯ ಆವಶ್ಯಕತೆಯೇನು? ಅದಕ್ಕೆ ಮೀಸಲು ಹೇಗೆ ಪರಿಹಾರ?ಭಾಷೆ ಮೀಸಲಿನಿಂದ ಉದ್ದಾರವಾಗುವುಂಟೇ? ಹೀಗೆ ಮುಗಿಯದ ಪ್ರಶ್ನೆಗಳನ್ನು ಎಬ್ಬಿಸುವ ರಂಗನಾಥ ಮಿಶ್ರಾ ಆಯೋಗದ ವರದಿಯನ್ನು ಒಳಮೀಸಲಾತಿಗೆ ಆಧಾರವಾಗಿ ಬಳಸಿಕೊಳ್ಳಲಾಗಿದೆ.ಅಲ್ಲಿನ ಬೆಳ್ಳು, ಜಿರಳೆಗಳು ಇಲ್ಲಿಗೂ ಸರಾಗ ಹರಿದು ಬಂದಿವೆ. ಅಲ್ಲಿ ಶೇ. ೧೦ರಷ್ಟು ಮೀಸಲು ಎಂದಿರುವುದು ಇಲ್ಲಿ ಶೇ. ೪.೫ ಇರಬಹುದು. ಆದರೆ ಇದು ಅಲ್ಲಿ ಪ್ರಸ್ಥಾಪಿತ ಶೇ. ೧೦ಕ್ಕಿಂತಲೂ ಭಯಾನಕವಾದುದು. ಏಕೆಂದರೆ ಅದು ಹಿಂದುಳಿದ ವರ್ಗಗಳಿಂದ ಕಿತ್ತುಕೊಟ್ಟ ರೊಟ್ಟಿ.
ಅಷ್ಟಕ್ಕೂ ಮೀಸಲಾತಿ ಎಂದರೇನು?
ಮೀಸಲಾತಿ ಒಂದು ಗುರುತಿಸುವಿಕೆ. ಸ್ವಾತಂತ್ರ್ಯದ ಹೊಸದರಲ್ಲಿ , ಸಂವಿಧಾನ ನಿರ್ಮಾಣದ ಹೊತ್ತಲ್ಲಿ ಮನುಷ್ಯರನ್ನು ಕಂಡರೆ ಓಡುವ , ಗುಹೆ ಕಂದರಗಳಲ್ಲಿ ವಾಸಮಾಡುವ ಜನಾಂಗಗಳೂ ಇದ್ದವು. ಅಂಥವರು ಮುಖ್ಯವಾಹಿನಿಗೆ ಬರಬೇಕು. ಸಮಾಜದ ಅಂಗವಾಗಬೇಕು ಎಂಬ ಉದ್ದೇಶದಿಂದ ಮೀಸಲಾತಿಯನ್ನು ಸಂವಿಧಾನದಲ್ಲಿ ಉಲ್ಲೇಖಿಸಲಾಗಿತ್ತು. ಅಂದರೆ ಮೀಸಲಾತಿ ಎಂಬುದು ಸಾಮಾಜಿಕ ನೆಲೆಯಲ್ಲಿ ನಿರ್ಮಾಣವಾದ ಸಂಗತಿ. ಸಾಮಾಜಿಕವಾಗಿ ಒಳಗೊಳ್ಳುವುದು, ಸಮಾಜದ ಅಂಗವಾಗುವುದು ಪ್ರಜಾಪ್ರಭುತ್ವದಲ್ಲಿ ಮೊದಲು ಆಗಬೇಕಾದ ಕಾರ್ಯ. ಆರ್ಥಿಕವಾಗಿ ಸಬಲರಾಗುವುದೂ ಕೂಡ ಸಮಾಜದಲ್ಲೇ. ಸಾಮಾಜಿಕವಾಗಿ ಗಟ್ಟಿಯಾಗುವವನಿಗೆ ಆರ್ಥಿಕವಾಗಿಯೂ ಗಟ್ಟಿಯಾಗುವುದು ಕಷ್ಟವಾಗುವುದಿಲ್ಲ. ಬದುಕುವುದೂ ಕಷ್ಟವಲ್ಲ . ಹಾಗಾಗಿ ಸಂವಿಧಾನದಲ್ಲಿ ಉಲ್ಲೇಖಿತ ಮೀಸಲಾತಿಯ ವ್ಯಾಖ್ಯಾನದಲ್ಲಿ ಆರ್ಥಿಕ ನೆಲೆಯಲ್ಲಿ, ಭಾಷಾ ನೆಲೆಯಲ್ಲಿ , ಧಾರ್ಮಿಕ ನೆಲೆಯಲ್ಲಿ ಮೀಸಲಾತಿ ಕಲ್ಪಿಸಬಹುದು ಎಂಬುದಿಲ್ಲ. ಸಮಾಜ -ಸಾಮಾಜಿಕ ಎಂಬ ಸಂಗತಿಗಳನ್ನೇ ಅಲ್ಲಿ ಒತ್ತಿ ಹೇಳಲಾಗಿದೆ. ಆದರೆ ರಂಗನಾಥ ಮಿಶ್ರಾ ರಿಗೆ ಅದು ಗೊತ್ತಿಲ್ಲ. ಅಂದರೆ ಸಂವಿಧಾನವನ್ನು ಅವರು ಸರಿಯಾಗಿ ಓದಿಲ್ಲವೇ? ಇನ್ನು ಈಗಿನ ಕಾಂಗ್ರೆಸಿನಲ್ಲಂತೂ ಸಂವಿಧಾನ ಎಂದರೆ "ಒಂದೆರಡು ಕಿಲೋಗ್ರಾಮುಗಳಷ್ಟಿರಲಿ" ಎನ್ನುವವರೂ ಇದ್ದಾರೆ. ಹಾಗಾಗಿ ಒಳಮೀಸಲಾತಿಯಲ್ಲಿ ಹೀಗೆಲ್ಲಾ ಇರುವುದರ ಬಗ್ಗೆ ಮುಜುಗರವನ್ನು ಕಾಂಗ್ರೆಸಿಗರು ಅನುಭವಿಸುವುದಿಲ್ಲ. ಸಂವಿಧಾನ ವಿರೋಧಿ ಪ್ರಸ್ಥಾಪವನ್ನು ಮಾಡುವ ಕಾಂಗ್ರೆಸ್ ಇನ್ನು ಹಿಂದುಗಳ ಕೈಯಿಂದ ಕಿತ್ತುಕೊಡಲು ಹಿಂಜರಿಯುತ್ತದೆಯೇ? ಮೀಸಲಾತಿಯ ಪೂರ್ವಪರ ಇವಿಷ್ಟಾದರೆ, ಅನಂತರ ಅದರ ಆವಶ್ಯಕೆ ಇತರ ಜನಾಂಗಗಳಿಗೂ ಇತ್ತು. ಅಂದರೆ ಸಂವಿಧಾನ ನಿರ್ಮಾಣದ ಹೊತ್ತಲ್ಲಿ ಸಾಮಾಜಿಕ ಆಧಾರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲನ್ನು ಕಲ್ಪಿಸಿತಷ್ಟೆ.ಆದರೆ ಪರಿಶಿಷ್ಟ ಜಾತಿ ಮತ್ತು ಪಂಗಡದ ರೀತಿಯಲ್ಲೇ , ಅವರಿಗಿಂತ ಭಿನ್ನವಾಗಿಲ್ಲದ ಬದುಕನ್ನು ಬದುಕುತ್ತಿದ್ದ ಹಲವು ಜನಾಂಗಗಳಿದ್ದವು. ಅವುಗಳನ್ನು "ಇತರ ಹಿಂದುಳಿದ ಪಂಗಡ" ಗಳು ಎಂದು ಗುರುತಿಸಿ ಶೇ. ೨೭ರಷ್ಟು ಮೀಸಲಾತಿಯನ್ನು ಒದಗಿಸಲಾಯಿತು. ಈ ವರ್ಗಗಳಲ್ಲಿ ಬರುವ ಬಹುತೇಕ ಜನಾಂಗಗಳು ಕುಶಲಕರ್ಮಿಗಳು. ಒಂದು ಕಾಲದ ಸಮಾಜದಲ್ಲಿ ನಿರ್ಣಾಯಕ ಸ್ಥಾನಗಳಲ್ಲಿದ್ದವರು. ದೊಡ್ಡ ಸಂಖ್ಯೆಯಲ್ಲಿದ್ದ ಈ ವರ್ಗಗಳು ಶ್ರಮಜೀವಿಗಳು. ಇಡೀ ಸಮಾಜವೇ ಇವರಿಗೆ ಅವಲಂಭಿತವಾಗಿತ್ತು. ಮಡಿಕೆ ಮಾಡುವವರು, ನೇಕಾರರು, ಗಾಣಿಗರು ವೊದಲಾದವರು ವಿಪರೀತ ಶ್ರಮಜೀವಿಗಳಾದರೂ ಒಪ್ಪೊತ್ತಿನ ಊಟಕ್ಕೂ ತಾತ್ವಾರ ಪಡುವವರಾಗಿದ್ದರು. ಇಂಥವರನ್ನು ಸಮಾಜದಲ್ಲಿ ಭದ್ರ ವಾಗಿ ನೆಲೆಯೂರಿಸುವ ಪ್ರಯತ್ನದ ಫಲವಾಗಿ ಒಬಿಸಿ ಜಾರಿಗೆ ಬಂತು. ಶೇ. ೨೭ರಷ್ಟು ಮೀಸಲಾತಿಯನ್ನು ಸಾಮಾಜಿಕ ನೆಲೆಯಲ್ಲಿ ಇವರಿಗೆ ಒದಗಿಸಲಾಯಿತು. ಕಾಲ ಉರುಳಿದಂತೆ ಇವರ ಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಾ ಬಂತೇ ವಿನಾ ಸುಧಾರಣೆಯಾಗಲಿಲ್ಲ. ಗೇಣಿದಾರರಾಗಿ ಕೃಷಿಗೂ ಇಳಿದ ಇವರಿಗೆ ಕೃಷಿ ಪ್ರವೃತ್ತಿಯಾಗಿತ್ತೇ ಹೊರತು ವೃತ್ತಿಯಾಗುವಂತಿರಲಿಲ್ಲ. ಅಷ್ಟರಹೊತ್ತಿಗೆ ಜಾಗತೀಕರಣವೂ ಬಂತು. ಮಡಕೆಗಳ ಬದಲು ಸ್ಟೀಲು- ಪ್ಯಾಸ್ಟಿಕ್‌ಗಳು ಬಂದಮೇಲೆ ವೃತ್ತಿಯನ್ನು ನಂಬಿಕೊಂಡ ಕುಂಬಾರರು ಬೀದಿಗೆ ಬಂದರು. ಇದೇ ರೀತಿ ಎಣ್ಣೆ ತೆಗೆವವರು, ಬಟ್ಟೆ ನೇಯುವವರು, ಚಿನ್ನದ ಕೆಲಸ ಮಾಡುವವರು, ಮರದ ಕೆಲಸ ಮಾಡುವರು , ಕಮ್ಮಾರರು ಬೀದಿ ಪಾಲಾದರು. ಆಧುನಿಕ ಯುಗದಲ್ಲಿ ಊರು ಬಿಡುವ ಸಂದರ್ಭವೂ ಇವರಿಗೆ ಬಂತು. ಆದ್ದರಿಂದ ಒಬಿಸಿ ಹಿಂದೆಂದಿಗಿತಲೂ ಇಂದು ಅನಿವಾರ್ಯವೆನಿಸಿದೆ. ಇಂಥವರಿಗೆ ಮೀಸಲಾತಿ ಇರದಿದ್ದರೆ ಶಿಕ್ಷಣವೂ ದುರ್ಲಬ ಎಂದ ಸ್ಥಿತಿ ಇಂದಿಗೂ ಸತ್ಯ. ಇಂಥ ಅನಿವಾರ್ಯದ ಪರಿಸ್ಥಿತಿಯಲ್ಲಿ ಕುಂಬಾರರ , ಬಿಲ್ಲವರ, ನೇಕಾರರ, ಗಾಣಿಗರ, ವಿಶ್ವಕರ್ಮರ ಹಕ್ಕನ್ನು ಮುಸಲ್ಮಾನರಿಗೆ ಕೊಡುವುದು ಎಷ್ಟು ಸರಿ? ಅಲ್ಲದೆ ದೇಶದಲ್ಲಿ ಮುಸಲ್ಮಾನರೆಂದಾದರೂ ಸಾಮಾಜಿಕವಾಗಿ ಹಿಂದುಳಿದಿದ್ದುಂಟೇ?ಅವರು ದೇಶದಲ್ಲಿ ನೆಮ್ಮದಿಯಿಂದ ಬದುಕಿದವರು. ಅವರನ್ನು ಊರಹೊರಗಿನ ಕೇರಿಗಳಲ್ಲಿ ಇವತ್ತಿಗೂ ಯಾರೂ ಇಟ್ಟಿಲ್ಲ. ಇದುವರೆಗೆ ಯಾರೂ ಮುಟ್ಟಿಸಿಕೊಳ್ಳದೆಯೂ ಇಲ್ಲ. ಇನ್ನು ಶೈಕ್ಷಣಿಕವಾಗಿ ಹಿಂದುಳಿಯುವುದಕ್ಕೆ ಸ್ವತಃ ಅವರೇ ಕಾರಣವೇ ಹೊರತು ಅದಕ್ಕೆ ಸಾಮಾಜಿಕ ಕಾರಣಗಳಿಲ್ಲ. ಕಣ್ಣು ಬಿಡುವಾಗಲೇ ಮದರಸ ಶಿಕ್ಷಣ ಒದಗಿಸಿದರೆ ಅದಕ್ಕೆ ಸಮಾಜವನ್ನು ದೂರಬೇಕೇನು?ಸರಕಾರಿ ನಾಮಾಂಕಿತ ಶಿಕ್ಷಣವನ್ನು ಪಡೆಯದವರಿಗೆ ಮೀಸಲಾತಿಯನ್ನು ಏಕೆ ಕೊಡಬೇಕು? ಅಲ್ಲದೆ ಮುಸಲ್ಮಾನರು ಭಾರತದಲ್ಲಿ ಎಲ್ಲವನ್ನೂ ಪಡೆದುಕೊಂಡವರು. ದೇಶವನ್ನು ಅವರಿಗಾಗಿ ಮುರಿದುಕೊಟ್ಟವರು ಇದೇ ಕಾಂಗ್ರೆಸಿಗರು. ೮೦೦ ವರ್ಷ ಸಮಸ್ತ ಭಾರತವನ್ನು ಆಳಿದವರೂ ಇವರೇ. ಇಂಥವರನ್ನು ಹಿಂದುಳಿದವರು ಎಂದು ಯಾವ ಆಧಾರದಲ್ಲಿ ಹೇಳಬಹುದು? ಹೀಗೆ ಇಸ್ಕೊಂಡೂ ಇಸ್ಕೊಂಡೂ ಈರಭದ್ರ ನಾದರೂ , ಕಾಂಗ್ರೆಸ್ ಕೊಟ್ಟೂ ಕೊಟ್ಟೂ ಕೊಡಂಗಿಯಂತಾದರೂ ಇನ್ನೂ ಇದೆಂಥಾ ಮುಸ್ಲಿಂ ಪ್ರೇಮ? ಮುಸಲ್ಮಾನರು ಪ್ರತ್ಯೇಕತೆಯನ್ನೇ ಆವಾಹಿಸಿಕೊಂಡು ಬದುಕಲು ಕಾಂಗ್ರೆಸಿನ ಪಾಲೇ ಹೆಚ್ಚಿರುವಂತೆ ಕಾಣುತ್ತದೆ. ಇಂಥವರಿಗಿಂದು ಪುಟ್ಟನ ರೊಟ್ಟಿಯ ಮೇಲೂ ಕಣ್ಣೇ?
ಇನ್ನು ಎಷ್ಟು ಮುಸಲ್ಮಾನರಿಗೆ ಇದರ ಪ್ರಯೋಜನ ಸಿಗಬಹುದು ಎಂಬದೂ ಕಾಂಗ್ರೆಸಿಗೆ ಅಗತ್ಯವಿಲ್ಲ. ಈ ಮೀಸಲಾತಿ ಎಂದಾದರೂ ಕಲಾಯಿ ಹಾಕುವ , ಮೀನು ಮಾರುವ, ಪಂಕ್ಚರ್ ಅಂಗಡಿಯವರ ಬಾಳನ್ನು ಸುಧಾರಿಸಬಲ್ಲದೇ? ಮೀಸಲಾತಿ ಎಂದಾದರೂ ಬಡತನ ನಿರ್ಮೂಲನ ಕಾರ್ಯಕ್ರಮವಾಗಿದ್ದಿದೆಯೇ?

Wednesday, December 7, 2011

ಹೊಳೆ ದಾಟಿದ ಮೇಲೆ ಅಂಬಿಗನ ಮರೆಯುವುದೇ?


ಇಂದು ಬಿಜೆಪಿ ಏನೂ ಬೇಕಾದರೂ ಹೇಳಿಕೊಳ್ಳಬಹುದು. ತಾನು ಅಧಿಕಾರಕ್ಕೆ ಬಂದಿದ್ದು ಅತಿಯಾದ ಅನುಕಂಪದಿಂದ ಎಂದೂ, ಹೋರಾಟಗಳ ಮೂಲಕ ಎಂದೂ, ಹಣಬಲದ ಮೂಲಕ ಎಂದೂ, ಶುದ್ಧ ಜಾತ್ಯತೀತ
ವಾದದ ಮೂಲಕ ಎಂದೂ ಅದು ಹೇಳಿಕೊಳ್ಳಬಹುದು ಅಥವಾ ತನಗೆ ತಾನು ಹಾಗೆ ಅಂದುಕೊಂಡಿರಲೂಬಹುದು. ಅದಕ್ಕೆ ಸಿದ್ಧಾಂತಗಳ ತಲೆಬುಡಗೊತ್ತಿಲ್ಲದ ತನ್ನ ಹಲವು ಸಚಿವರುಗಳನ್ನು ಸಾಕ್ಷಿಗಳನ್ನಾಗಿ ತೋರಿಸಲೂಬಹುದು. ಅವೆಲ್ಲವೂ ಅಧಿಕಾರಕ್ಕೆ ಬಂದಾಗ ಅನುಭವವಾಗುವ ಭ್ರಮೆಗಳು, ನದಿ ದಾಟಿದ ಮೇಲೆ ಅಂಬಿಗನ ಮರೆತು ಹುಟ್ಟಿದ ಭ್ರಮೆಗಳು, ಶಕುಂತಲೆಯನ್ನು ಮರೆತ ದುಷ್ಯಂತ ನಂತೆ ಶಾಪಗ್ರಸ್ತ ಸ್ಥಿತಿಯೋ ಏನೋ. ಕಮ್ಯುನಿಸ್ಟರಂಥಾ ಜಿಗುಟರಿಗೂ ಅಂಥ ಭ್ರಮೆಗಳು ಆವರಿಸಿದ್ದವು. ಜನರಿಗೆ ಕೊಟ್ಟ ಆಶ್ವಾಸನೆಗಳು ಸಂಪೂರ್ಣ ಉಲ್ಟಾ ಹೊಡೆದಿದ್ದವು. ಅದು ಪಕ್ಷಭೇದಗಳ ಹಂಗಿಲ್ಲದೆ ಉಂಟಾಗುವ ರಾಜಕಾರಣವೆಂಬ ಬ್ರಾಂಡ್‌ನದೇ ಸಮಸ್ಯೆಗಳು , ಕೊರತೆಗಳು. ಅಂಥಲ್ಲಿ
ಅಧಿಕಾರವನ್ನು ಸಮೃದ್ಧವಾಗಿ ಅನುಭವಿಸುತ್ತಿರುವ ಇತರರಿಗೆ ಅಂಥದ್ದೊಂದು ಭ್ರಮೆ ಆವರಿಸಲಾರದೇ? ಹಾಗೆಯೇ ‘ಹಿಂದೂ ಹಿತಕ್ಕೆ ಬಿಜೆಪಿಗೆ ಮತ’ ಎಂಬ ಘೋಷಣೆಯಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಗೂ ಅಂಥದ್ದೊಂದು ಭ್ರಮೆ ಆವರಿಸಿದೆಯೇ ಎಂದು ಎನಿಸುತ್ತದೆ. ಒಂದೆಡೆ ಕಾಂಗ್ರೆಸಿನಂಥವರ ಹಿಂದೂ ವಿರೋಧ. ಇನ್ನೊಂದೆಡೆ ಬಿಜೆಪಿಯಂಥವರ ತಟಸ್ಥ, ನಿರ್ಭಾವುಕ ಧೋರಣೆ, ಜಾತ್ಯತೀತತೆಗೆ ತೆರಳಲು ಸಿದ್ಧತೆ ನಡೆಸುತ್ತಿರುವಾಗ ಹಿಂದುವಿಗೆ ರಾಜಕೀಯದ ಬಲವೆಲ್ಲಿ? ನರಳುವ ಹಿಂದುವಿನ ಸ್ಥಿತಿಗೆ ಕಾಂಗ್ರೆಸ್ಸಿನಷ್ಟೇ ಬಿಜೆಪಿಯನ್ನು ಏಕೆ ಹೊಣೆ ಮಾಡಬಾರದು? ಹೀಗೆ ಹೊಣೆ ಮಾಡಲು ಕಾರಣಗಳು ಸಿಗುತ್ತಿರುತ್ತವೆ.
೨೦೦೮ರಲ್ಲಿ ನಡೆದ ಕ್ರಿಶ್ಚಿಯನ್ ಗಲಭೆಗಳಲ್ಲಿ ಕ್ರಿಶ್ಚಿಯನ್ನರ ಮೇಲೆ ದಾಖಲಾಗಿದ್ದ ಎಲ್ಲಾ ಕೇಸುಗಳನ್ನು ಮೊನ್ನೆ ತಾನೇ ಸರಕಾರ ತೆಗೆದುಹಾಕಿತು. ಪೊಲೀಸರಿಗೆ ಕಲ್ಲೆಸೆದವರನ್ನು ಗೂಂಡಾಗಿರಿ ನಡೆಸಿದವರನ್ನು ಸರಕಾರವೇ ಆರೋಪಮುಕ್ತಗೊಳಿಸಿತು. ಪಾದ್ರಿಗಳು ನಿಲುವಂಗಿಯೊಳಗೇ ಹರ್ಷ ವ್ಯಕ್ತಪಡಿಸಿ, ಪರಿಹಾರದ ಬೇಡಿಕೆಯನ್ನು ಸರಕಾರಕ್ಕೆ ಸಲ್ಲಿಸಿದರು. ತಮ್ಮ ವಿರುದ್ಧ ನಿಂತವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಗುಡುಗಿದರು.
ಅದಕ್ಕೆಲ್ಲಾ ಕಾರಣ ೨೦೦೮ರ ಆ ಘಟನೆ. ಅದು ಶಾಂತಿಪ್ರಿಯರ ಉಗ್ರರೂಪ ಪ್ರಕಟವಾದ ವರ್ಷ. ಗೋಮುಖದಲ್ಲೂ ವ್ಯಾಘ್ರತನವಿರುತ್ತದೆ ಎಂದು ಸಾಕ್ಷಾತ್ ಪೊಲೀಸರಿಗೂ ಅರ್ಥವಾದ ದಿನ. ಚರ್ಚುಗಳ ಒಳಗಿಂದ ಏನೇನು ನಡೆಯಬಾರದೋ ಅವೆಲ್ಲವೂ ನಡೆದ ದಿನ. ಹಿಂದಿನ ದಿನವಷ್ಟೇ ರಾಜ್ಯದ ಉಡುಪಿ, ಮಂಗಳೂರು, ಚಿಕ್ಕಮಗಳೂರು ಜಿಲ್ಲೆಗಳ ಹಲವು ಮತಾಂತರ ಕೇಂದ್ರಗಳ ಮೇಲೆ ದಾಳಿಗಳಾದವು. ಹಲವು ವರ್ಷಗಳಿಂದ ಮತಾಂತರವನ್ನು ಸಹಿಸಿಕೊಂಡಿದ್ದ ಹಿಂದುಗಳು ಅಂದು ನೇರ ಮತಾಂತರ ಕೇಂದ್ರಗಳತ್ತ ದಾಳಿ ನಡೆಸಿದರು. ಗಾಳಿ ಸುದ್ದಿಗಳು, ಪ್ರಚೋದಕ ಸಂದೇಶಗಳು ವೇಗವಾಗಿ ಹರಡುತ್ತಿದ್ದವು. ಕ್ರಿಶ್ಚಿಯನ್ನರಿಗೆ ಏನನ್ನಿಸಿತೋ ಏನೋ. ಶಾಂತಿಯುತ ಪ್ರತಿಭಟನೆಗಳನ್ನು ಆಯೋಜಿಸಿದರು. ಅನಂತರ ವ್ಯವಸ್ಥಿತವಾಗಿ ಪೊಲೀಸರೊಂದಿಗೇ ಸಂಘರ್ಷಕ್ಕಿಳಿದರು. ಪರಿಣಾಮ ಕರಾವಳಿಯ ಹಲವು ಭಾಗಗಳು ಉದ್ವಿಗ್ನಗೊಂಡವು. ಮಂಗಳೂರಿನ ವಾಮಂಜೂರು, ಕುಲಶೇಖರ, ಪೆರ್ಮನ್ನೂರು ಎಂಬಲ್ಲಿ ಚರ್ಚ್‌ಗಳಿಂದ ದೊಡ್ಡದೊಡ್ಡ ಕಲ್ಲುಗಳು ಬಿದ್ದವು. ಪೊಲೀಸರಿಗೆ ಹಲ್ಲೆ ನಡೆಸಿ ಚರ್ಚ್ ನೊಳಗೆ ನುಗ್ಗಿದವರು ಅದರೊಳಗಿನಿಂದಲೇ ಅಬ್ಬರಿಸತೊಡಗಿದರು. ಆರಕ್ಷಕರಿಗೆ ಅವ್ಯಾಚವಾಗಿ ನಿಂದಿಸಿದರು. ಅಂದಿನ ಕ್ರಿಶ್ಚಿಯನ್ನರ ವರ್ತನೆ ಉತ್ತರ ಭಾರತದ ಮಸೀದಿಯೊಂದರಲ್ಲಿ ಅವಿತ ಉಗ್ರರನ್ನು ನೆನಪಿಸಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿಕೊಳ್ಳುತ್ತಾರೆ. ಹೀಗೆ ಉನ್ಮತ್ತ ಗೂಂಡಾಗಳನ್ನು ಬಂಧಿಸುವ ಹೊತ್ತಿಗೆ ೫೦ಕ್ಕೂ ಹೆಚ್ಚಿನ ಜನರಿಗೆ ಗಂಭೀರ ಗಾಯಗಳಾಗಿ ಹೋಗಿತ್ತು. ಅದರಲ್ಲಿ ೩೦ಕ್ಕೂ ಅಧಿಕ ಜನ ಪೊಲೀಸರೇ ಇದ್ದರು. ಹೀಗೆ ೧೫೦ ಮಂದಿಯನ್ನು ಬಂಧಿಸಿದ ಪೊಲೀಸರು ೨೮ ಪ್ರಕರಣಗಳನ್ನು ದಾಖಲಿಸಿಕೊಂಡರು. ಅದರಲ್ಲಿ ೫ ಕೇಸುಗಳು ಆರಂಭದಲ್ಲೇ ಬಿದ್ದುಹೋದವು. ಉಳಿದ ೨೩ ಕೇಸುಗಳು ನಡೆಯುತ್ತಿದ್ದವು. ಗೂಂಡಾಗಿರಿ, ಪೊಲೀಸರ ಮೇಲೆ ಹಲ್ಲೆ, ಗಲಭೆಗೆ ಪ್ರಚೋದನೆ ಮೊದಲಾದ ಅತಿ ಗಂಭೀರ ಪ್ರಕರಣಗಳನ್ನೂ ಮುಚ್ಚಬೇಕೆಂದು ಮೊನ್ನೆಯಷ್ಟೇ ಸರಕಾರ ಆದೇಶಿಸಿದೆ. ಇದಕ್ಕೇನು ಕಾರಣ? ಅಂದಿನ ಪರಿಸ್ಥಿತಿ ಎಷ್ಟೊಂದು ಭೀಕರವಾಗಿತ್ತೆಂದರೆ ಪೊಲೀಸರ ಪ್ರಾಣಕ್ಕೆ ಯಾವ ಗ್ಯಾರಂಟಿಯೂ ಇರಲಿಲ್ಲ. ಅಲ್ಲದೆ ಅಲ್ಲಿ ಪ್ರತಿಭಟನೆಗೆ ಯಾರ ಅಡ್ಡಿಯೂ ಇರಲಿಲ್ಲ. ಆದರೂ ಏಕಾಏಕಿ ಪೊಲೀಸರ ಮೇಲೆ ಕಲ್ಲು ತೂರಲಾಗಿತ್ತು. ಇಂಥ ಪ್ರಕರಣಗಳನ್ನು ವ್ಯಾಟಿಕನ್‌ ಮಾತ್ರ ಒಪ್ಪಬಹುದು. ಆದರೆ ದುರದೃಷ್ಟವೆಂದರೆ ಕರ್ನಾಟಕ ಸರಕಾರವೂ ಅದನ್ನು ಮುಚ್ಚುತ್ತದೆ. ಇದನ್ನು ತುಷ್ಟೀಕರಣವೆನ್ನಬೇಕೇ ಅಥವಾ ಶರಣಾಗತಿ ಎನ್ನಬೇಕೆ?
ಕ್ರಿಶ್ಚಿಯನ್ನರ ಮೇಲಿನ ಪ್ರಕರಣಗಳನ್ನು ಖುಲಾಸೆ ಮಾಡುವ ಸರಕಾರ ಇತರ ಮೊಕದ್ದಮೆಗಳನ್ನು ಏಕೆ ಖುಲಾಸೆಗೊಳಿಸಲಿಲ್ಲ? ಹಿಂದುಗಳ ನೋವೇ ಕ್ರಿಶ್ಚಿಯನ್ನರ ಖುಷಿ ಎಂಬುದು ಸರಕಾರಕ್ಕೂ ತಿಳಿದಿದೆಯೇ? ಅಥವಾ ನದಿ ದಾಟಿದ ಮೇಲೆ ಅಂಬಿಗನ ಹಂಗೇಕೆ ಎಂಬ ದಾರ್ಷ್ಟ್ಯವೋ? ಇದೇ ೨೦೦೮ರಲ್ಲಿ ಮೂರು ಜಿಲ್ಲೆಗಳಲ್ಲಿ ಮತಾಂತರ ಕೇಂದ್ರಗಳ ಮೇಲಾದ ೩೮ ದಾಳಿಗಳಲ್ಲಿ ಸುಮಾರು ೧೦೦ಕ್ಕೂ ಅಧಿಕ ಜನರ ಮೇಲೆ ಕೇಸು ದಾಖಲಾಗಿತ್ತು. ಎಲ್ಲರ ಮೇಲೆ ಐಪಿಸಿ ಸೆಕ್ಷನ್ ೧೪೩, ೧೪೭, ೧೪೮, ೪೪೮, ೪೨೭, ೩೨೪ ಪ್ರಕಾರ ಕ್ರಿಮಿನಲ್ ವೊಕದ್ದಮೆ ಹೂಡಲಾಗಿತ್ತು. ಮಂಗಳೂರು ನಗರ ಠಾಣೆಯಲ್ಲಿ ೧೯ ಜನರ ಮೇಲೆ, ಪುತ್ತೂರಿನಲ್ಲಿ ೧೦ ಜನರ ಮೇಲೆ, ಬೆಳ್ತಂಗಡಿ ಠಾಣೆಯಲ್ಲಿ ೬ ಜನರ ಮೇಲೆ, ಉಪ್ಪಿನಂಗಡಿ ಠಾಣೆಯಲ್ಲಿ ೯ ಜನರ ಮೇಲೆ ಕೇಸು ದಾಖಲಾಗಿತ್ತು. ಆ ಕೇಸು ಇಂದಿಗೂ ಕೋರ್ಟಿನಲ್ಲಿ ನಡೆಯುತ್ತಿದೆ. ತಮ್ಮ ಸೋದರರು ಮತಾಂತರವಾಗಬಾರದೆಂದು, ತಮ್ಮ ಸಂಸ್ಕೃತಿ ಹಾಳಾಗಬಾರದೆಂದು, ತಮ್ಮ ಭೂತ-ದೈವಗಳಿಗೆ ಅಪಚಾರವಾಗಬಾರದೆಂದು, ನಮ್ಮ ದೇಶ ಹಿಂದೂ ರಾಷ್ಟ್ರವಾಗಿಯೇ ಉಳಿಯಬೇಕೆಂದು ಧಾವಿಸಿದವರಿಗೆ ಇಂದೂ ಕೋರ್ಟುಗಳಿಗೆ ಅಲೆದಾಡುವುದು ತಪ್ಪಲಿಲ್ಲ. ಸಾಲ ಮಾಡಿ ಕೋರ್ಟಿಗೆ ಹೋಗುವ ಇಂಥವರ ಎದುರೇ ಇಂದು ಕ್ರಿಶ್ಚಿಯನ್ನರು ಅಟ್ಟಹಾಸದಿಂದ ಬಿಡುಗಡೆಯ ಭಾಗ್ಯವನ್ನು ಪಡೆಯುತ್ತಾರೆ. ಅವರು ಪೊಲೀಸರಿಗೆ ಕಲ್ಲು ಹೊಡೆದರು. ಮತಾಂತರವನ್ನು ಮಾಡಿದರು. ಸಮಾಜವನ್ನು ಕಲಕಿದರು. ಆದರೂ ಕೇಸುಗಳಿಂದ ಮುಕ್ತಿ ಪಡೆದರು. ಏಕೆಂದರೆ ಅವರು ಕ್ರಿಶ್ಚಿಯನ್ನರಾಗಿದ್ದರು. ಇವರು ಮತಾಂತರಕ್ಕೆ ಬಲಿಯಾದರು. ಆರಕ್ಷಕರಿಗೆ ಗೌರವ ಕೊಟ್ಟರು. ಸ್ವಾಭಿಮಾನಿಗಳಾಗಿದ್ದರು. ಆದರೂ ನರಳುವಿಕೆ ತಪ್ಪಲಿಲ್ಲ. ಏಕೆಂದರೆ ಇವರು ಹಿಂದುಗಳು. ಹಿಂದೂ ಹಿತಕ್ಕೆ ವೋಟು ಕೊಟ್ಟ ತಪ್ಪಿಗೆ ಶಿಕ್ಷೆ ಅನುಭವಿಸಿದರು. ಇಲ್ಲದಿದ್ದರೇನು? ಕಳೆದೊಂದು ದಶಕದಿಂದೀಚೆಗೆ ಹಿಂದು ತಾನು ಹಿಂದುವಾಗಿ ಹುಟ್ಟಿದ ಕಾರಣಕ್ಕೆ ಜಡಿಸಿಕೊಂಡ ಕೇಸುಗಳೆಷ್ಟು?ಭಟ್ಕಳದಲ್ಲಿ ನಡೆದ ಗಲಭೆಗಳಲ್ಲಿ, ಮೈಸೂರಿನ ಗಲಭೆಗಳಲ್ಲಿ ವಿನಾಕಾರಣ ಹಿಂದುಗಳು ಜೈಲು ಪಾಲಾಗಿದ್ದರು. ಕಳೆದ ವರ್ಷ ಉಡುಪಿಯಲ್ಲಿ ನಡೆದ ಸಮಾಜೋತ್ಸವಕ್ಕೆ ಕಲ್ಲು ಹೊಡೆದವರು ಮತಾಂಧರು. ಆದರೆ ೨೧ ಜನ ಹಿಂದುಗಳ ಮೇಲೆ ೨೦ ಕೇಸುಗಳನ್ನು ದಾಖಲಿಸಲಾಯಿತು. ೨೦೦೨ರಲ್ಲಿ ಕೊಡಗಿನ ಪಾಲೂರು ಹರಿಶ್ಚಂದ್ರ ದೇವಾಲಯವನ್ನು ಮತಾಂಧರು ಧ್ವಂಸಗೊಳಿಸಿದರು. ಆಕ್ರೋಶಿತರ ಪ್ರತಿಕ್ರಿಯೆಗೆ ಕೇಸು ದಾಖಲಾಯಿತು. ಈಗ ಆಗಿದ್ದೂ ಅದಕ್ಕಿಂತ ಭಿನ್ನವೇನಲ್ಲ. ಏಕೆಂದರೆ ಸರಕಾರ ಮತಾಂತರ ನಿಷೇಧ ಕಾಯಿದೆಯನ್ನು ಜಾರಿಗೆ ತಂದಿದ್ದರೆ ಅಂಥ ಕೇಂದ್ರಗಳ ಮೇಲೆ ದಾಳಿಯಾಗುವ ಸಂದರ್ಭವೇ ಬರುತ್ತಿರಲಿಲ್ಲ. ಆದರೆ ಮತಾಂತರವನ್ನು ನಿಷೇಧಿಸಲಾಗದ ಸರಕಾರ ಅಮಾಯಕರ ಮೇಲೆ ಕೇಸು ಹಾಕುತ್ತದೆ. ಅವರ ಬಿಡುಗಡೆಯನ್ನು ಕಂಡು ನೊಂದು ಸಾಯಿರಿ ಎಂದು ಅಬ್ಬರಿಸುತ್ತದೆ.
ಸರಕಾರಕ್ಕೆ ಕಿಂಚಿತ್ತಾದರೂ ಕೃತಜ್ಞತೆ ಇಲ್ಲವೇ? ಇಂದು ಕರ್ನಾಟಕಾದ್ಯಂತ ಹಿಂಡುಹಿಂಡಾಗಿ ಶಾಸಕರು ಆರಿಸಿ ಬರಲು ಕಾರಣ ಹಿಂದೂ ಸಮಾಜೋತ್ಸವಗಳು. ಮನೆಮನೆಗೆ ತೆರಳಿ ಕೆಲಸ ಮಾಡಿದವರು ಹಿಂದೂ ಸಂಘಟನೆಯ ಕಾರ್ಯಕರ್ತರು. ಬೇರೆ ಪಕ್ಷಗಳ ಗೂಂಡಾಗಳನ್ನೂ ಎದುರಿಸಿ ನಿಂತವರು ಹಿಂದೂ ಸಂಘಟನೆಗಳ ಕಾರ್ಯಕರ್ತರು. ಅದನ್ನು ಅಧಿಕಾರಕ್ಕೆ ಬಂದ ತಕ್ಷಣ ಮರೆತುಬಿಡುವುದೇ? ಅವರ ಯಾವ ಬೇಡಿಕೆಗಳನ್ನು ಸರಕಾರ ಈಡೇರಿಸಿದೆ? ಗೋಹತ್ಯೆ, ಅಕ್ರಮ ಗೋ ಕಳ್ಳಸಾಗಾಣಿಕೆ ನಿಲ್ಲಿಸಿ ಎಂದರು. ಮತಾಂತರ ನಿಷೇಧಿಸಿ ಎಂದರು. ಕೆ.ಎಫ್.ಡಿ. ನಿಷೇಧಿಸಿ ಎಂದರೇ ಹೊರತು ತನಗೊಂದು ಕೆಲಸ ಕೊಡಿ, ಮದುವೆ ಮಾಡಿಸಿಕೊಡಿ ಎನ್ನಲಿಲ್ಲ. ಜೊತೆಗೆ ಅವರ ಕಣ್ಣ ಮುಂದೆಯೇ ಈಗ ವಿದ್ರೋಹಿಗಳನ್ನು ಖುಲಾಸೆಗೊಳಿಸಲಾಗಿದೆ. ಇದರಿಂದ ನೋವಾಗದೆ? ಸ್ವಾಭಿಮಾನಕ್ಕೆ ಬೆಲೆ ಇಲ್ಲವೇ? ಇವೆಲ್ಲವನ್ನು ಗಮನಿಸಿದರೆ ಮತ್ತೊಂದು ವಿಪರ್ಯಾಸವೂ ಹಾದುಹೋಗುತ್ತದೆ. ಕೆಲವರಿಗೆ ಹಿಂದುತ್ವ ರಾಜಕೀಯಕ್ಕೇರಲು ಮೆಟ್ಟಿಲಾಯಿತು. ಆದರೆ ಜೈಲಲ್ಲಿರುವವರು, ಕೋರ್ಟಿಗಲೆಯುವವರು ಅಲೆಯುತ್ತಲೇ ಇರುವರು. ಪ್ರಾಮಾಣಿಕರಿಗೆ ಕೊನೆಗೂ ನೋವೇ ಸಿಂಧುವಾಯಿತು. ನಾಟಕ ಮಾಡುವವರು ಪ್ರಚಾರಪ್ರಿಯರು ಅಕಾಡೆಮಿಗಳಲ್ಲಿ ಕೂತರು. ಗೋಸಾಗಾಣಿಕೆ ತಡೆದು ಪೆಟ್ಟುತಿಂದವರು ಮೂಲೆಗಾದರು. ಗೋವು-ಸೆಗಣಿ-ಗೊಬ್ಬರ ಎಂದು ಭಾಷಣ ಮಾಡಿದವರು ಇಂದು ಮಂಡಳಿಗಳನ್ನು ಅಲಂಕರಿಸಿದ್ದಾರೆ. ಮೊದಲಿನ ಸರಕಾರಗಳಲ್ಲಿ ಕಾಣದ ವಿಪರ್ಯಾಸಗಳು ಇಂದು ಕಂಡು ಬರುತ್ತಿದೆ. ಏಕೆಂದರೆ ಹಿಂದೂ ಹಿತಕ್ಕೆ ಕಾಂಗ್ರೆಸಿಗೋ, ಜೇಡಿಎಸ್ಸಿಗೋ ಮತ ನೀಡಿ ಎಂದು ಯಾರೂ ಹೇಳಿರಲಿಲ್ಲವಲ್ಲಾ.

ಸೋನಿ ಕಟ್ಟಿದವರ ಸೋಲಿಲ್ಲದ ಕಥೆ; MADE IN JAPAN


ದ್ವಿತೀಯ ವಿಶ್ವಯುದ್ಧ ಆಗಷ್ಟೇ ಮುಗಿದಿತ್ತು. ಮಿತ್ರಕೂಟದ ಪಡೆ ಶತ್ರುಕೂಟವನ್ನು ಮಣಿಸಿದ ಉನ್ಮಾದದಲ್ಲಿತ್ತು.ವಿಶ್ವದ ಭೂಪಟ ಗುರುತು ಹಿಡಿಯಲಾರದಷ್ಟು ಬದಲಾಗಿ ಹೋಗಿತ್ತು. ನಕಾಶೆಯಲ್ಲಿ ಹಲವು ದೇಶಗಳು ಅಳಿಸಿಹೋಗಿದ್ದರೆ, ಇನ್ನು ಕೆಲವು ಉದ್ಭವವಾಗಿದ್ದವು. ಒಂದು ಕಾಲದಲ್ಲಿ ಯಾವ ಜಪಾನ್ ಬೃಹತ್ ದೇಶಗಳನ್ನುಅಂಕೆಯಲ್ಲಿ ಇಟ್ಟುಕೊಂಡಿತ್ತೋ ಅಂಥಾ ಜಪಾನ್‌ ಸಮಸ್ತ ಯುದ್ಧಕ್ಕೆ ಷರಾ ಎಳೆದಂತೆ ಉರಿದುಹೋಗಿತ್ತು. ಜಪಾನ್‌ನ ದ್ವೀಪಗಳು ಬೂದಿಗಳ ಉಂಡೆಗಳಾಗಿ ಹೋಗಿತ್ತು. ಅಣುಬಾಂಬಿನ ಸ್ಪೋಟಕ್ಕೆ ಹಿರೋಶಿಮಾ ,ನಾಗಸಾಕಿಗಳು ಸುಟ್ಟು ಜಗತ್ತು ಅದನ್ನುಮರೆಯದಂತೆಮಾಡಿಬಿಟ್ಟಿತ್ತು.
ಅಂಥಾ ಜಪಾನ್‌ನ ರಾಜಧಾನಿ ಟೋಕಿಯೋದಲ್ಲಿ ೧೯೪೬ರ ಮೇ ೭ ರಂದು ಉರಿದುಹೋದ ಸರಕಿನ ಮಳಿಗೆಯೊಂದರ ಮೂರನೇ ಮಹಡಿಯಲ್ಲಿ ಸುಮಾರು ೩೦ ಜನರ ಸಭೆಯೊಂದು ಸೇರಿತ್ತು. ಸಭೆಯ ಉದ್ದೇಶ "ಟೋಕಿಯೋ ಟೆಲಿ ಸಂಪರ್ಕ ಇಂಜಿನಿಯರಿಂಗ್ ನಿಗಮ" ಎಂಬ ಕಂಪೆನಿಯೊಂದರ ಸ್ಥಾಪನೆ. ಕೈಯಲ್ಲಿದ್ದುದು ೫೦೦ ಡಾಲರ್ ಗಳ ಬಂಡವಾಳ. ಹೀಗೆ ಅಂದು ಆರಂಭವಾದ ಈ ಕಂಪೆನಿ ಮುಂದೆ ೧೯೫೭ರಲ್ಲಿ ‘ಸೋನಿ ಕಾರ್ಪೋರೇಶನ್’ಎಂದು ಕರೆಸಿಕೊಂಡಿತು. ಹೀಗೆ ಬೂದಿಯ ವಾಸನೆಯಿಂದ ಆರಂಭಗೊಂಡ ಕಂಪೆನಿಯೊಂದು ಮುಂದೆ ಜಗದಗಲ ವ್ಯಾಪಿಸಿದ ಕಥೆ ರೋಮಾಂಚಕ. ಅದೊಂದು ಕೇವಲ ಕಂಪೆನಿಯ ಬೆಳವಣಿಗೆಯ ಕಥೆಯಲ್ಲ. ಒಂದು ದೇಶದ ಕಥೆ. ತನ್ನನ್ನು ಇಡೀ ವಿಶ್ವಕ್ಕೆ ತೋರಿಸಿಕೊಳ್ಳಬೇಕೆಂಬ ಪುಟ್ಟ ದೇಶದ ಗಾಥೆ. ಏಕೆಂದರೆ ಎರಡನೇ ಮಹಾಯುದ್ಧಕ್ಕೆ ಮೊದಲು ಜಪಾನ್ ಹಠಸ್ವಭಾವದ, ವಿಪರೀತ ಅಹಂಕಾರದ, ಸೇನಾ ನಿಯಂತ್ರಣದಲ್ಲಿ ಇದ್ದ ಪ್ರತ್ಯೇಕತೆಯ ಒಂದು ದೇಶವಾಗಿತ್ತು. ಕೊನೆಗೆ ಅದರ ವಿಪರೀತ ಹಠ ಸ್ವಭಾವವೇ ಅದಕ್ಕೆ ಮುಳುವಾಗಿತ್ತು. ಅಷ್ಟರವರೆಗೆ ಕೇವಲ ಯುದ್ಧ ವಿಮಾನಗಳನ್ನಷ್ಟೇ ತಯಾರು ಮಾಡುತ್ತಿದ್ದ ಜಪಾನ್‌ಗೆ ಯುದ್ಧಾ ನಂತರ ಯುದ್ಧ ವಿಮಾನಗಳಿಂದ ಜಪಾನ್ ಕಟ್ಟುವಂತಿರಲಿಲ್ಲ. ಅಷ್ಟೇ ಅಲ್ಲದೆ ಹೇಳಿಕೊಳ್ಳುವಂತಹ ಯಾವ ಜಪಾನೀ ಸರಕೂ ವಿಶ್ವ ಮಾರುಕಟ್ಟೆಯಲ್ಲಿ ಬಿಕರಿಯಾಗಿರಲಿಲ್ಲ. ಯುದ್ಧಕ್ಕೆ ಮೊದಲು ಜಪಾನ್ ನಿಂದ ರಫ್ತಾಗುತ್ತಿದ್ದ ವಸ್ತುಗಳೆಂದರೆ ಕೊಡೆಗಳು ಮತ್ತು ಆಟಿಕೆಗಳು ಮಾತ್ರವಾಗಿತ್ತು. ಇವುಗಳ ಮೇಲೆ ‘ಮೇಡ್ ಇನ್ ಜಪಾನ್’ಎಂಬ ಅತೀ ಸಣ್ಣ ಬರಹಗಳಿರುತ್ತಿದ್ದವು. ಜಪಾನ್‌ನ ಈ ಪರಿಸ್ಥಿತಿಯನ್ನು ಬದಲಾಯಿಸಲು ೩೦ ಜನರ ಆ ತಂಡ ನಿರ್ಧರಿಸಿತ್ತು. ಬಿದ್ದ ಬಾಂಬ್‌ಗಳೊಟ್ಟಿಗೆ ಜಪಾನಿನ ಹೊಸ ಶಕೆಯೊಂದು ಆರಂಭಗೊಂಡಿತು. ಯುದ್ಧಾನಂತರದಲ್ಲಿ ಜಪಾನ್ ವಿಶ್ವಾಸ, ಗುಣಮಟ್ಟ ಹಾಗೂ ವ್ಯಾಪಾರಿ ನೀತಿಗಳಿಗೆ ಒತ್ತುಕೊಟ್ಟು ವಿಶ್ವದ ಪ್ರಮುಖ ಉದ್ಯಮಶೀಲ ರಾಷ್ಟ್ರವಾಯಿತು. ಎರಡು ಶತಮಾನಗಳ ಕಾಲದ ತನ್ನ ಪ್ರತ್ಯೇಕತೆಯನ್ನು ಕೊನೆಗೊಳಿಸಿ ತಂತ್ರಜ್ಞಾನ, ಕೈಗಾರಿಕೆ, ಮತ್ತು ವಾಣಿಜ್ಯಗಳಲ್ಲಿ ಪ್ರಗತಿ
ಸಾಧಿಸಿತು. ತಮ್ಮ ದೇಶ ವಿಶ್ವವಂದ್ಯವಾಗಬೇಕೆಂದು ಪ್ರತೀ ವ್ಯಕ್ತಿಯೂ , ಪ್ರತೀ ಸಂಸ್ಥೆಯೂ ಯೋಚಿಸಿದ ಫಲವಾಗಿ MADE IN JAPAN ಜಗದಗಲ ಪಸರಿಸತೊಡಗಿತು. ಅಂದು ಉರಿದ ಷೆಡ್‌ನಲ್ಲಿ ಆರಂಭವಾದ ‘ಸೋನಿ ಕಾರ್ಪೋರೇಶನ್’ ಇಂದು ವಿಶ್ವವ್ಯಾಪಿಯಾಗಿ ಬೆಳೆದು ನಿಂತ ಕಥೆಯನ್ನು ಆ ಗುಂಪಿನ ಒಬ್ಬರಾಗಿದ್ದ ,ಅನಂತರ ‘ಸೋನಿ’ ಕಂಪೆನಿಯ ಅಧ್ಯಕ್ಷರಾದ ‘ಅಕಿಯೋ ಮೊರಿಟಾ’ MADE IN JAPAN ಗ್ರಂಥದಲ್ಲಿ ವಿವರಿಸುತ್ತಾರೆ.
ಸೋನಿ ಕಾರ್ಪೋರೇಶನ್ನಿನ ಈ ಕಥೆ ಆಧುನಿಕ ಜಪಾನಿನ ಬೆಳವಣಿಗೆಯ ಕಥೆ. “ಹಿರೋಶಿಮಾ ಮೇಲಾದ ದಾಳಿಯ ಮೊದಲ ಸುದ್ದಿಯನ್ನು ಕೇಳಿದಾಗ ಅಮೆರಿಕ ತಂತ್ರಜ್ಞಾನ ಹಾಗೂ ಕೈಗಾರಿಕಾ ಶಕ್ತಿ ನಾವೆಣಿಸಿದ್ದಕ್ಕಿಂತ ಅಗಾಧವಾಗಿದೆ ಎಂದು ನನಗೆ ಅರಿವಾಯಿತು.” ಎನ್ನುವ ಮೊರಿಟಾ ವಾಸ್ತವದ ಮೂಲಕ ದೇಶ ಕಟ್ಟುವ ದೃಷ್ಟಿಯಿಂದಲೂ ತಾಂತ್ರಿಕನ ದೃಷ್ಟಿಯಿಂದಲೂ ದೇಶವನ್ನು ಗಮನಿಸಿದರು. ಆರಂಭದಲ್ಲಿ ಸೋನಿ ಜಪಾನ್ ರಿಸರ್ಚ್ ಇಂಜಿನಿಯರಿಂಗ್ ನಿಂದ ಆರಂಭಿಸಿ ಪಾಶ್ಚಿಮಾತ್ಯ ಸರಕುಗಳನ್ನೇ ಸುಧಾರಣೆಗೊಳಿಸಿ ತಯಾರಿಸಲಾರಂಭಿಸಿತು. ಹಾಗೇ ಅವರ ಕಣ್ಣಿಗೆ ಬಿದ್ದ ಮೊಟ್ಟ ಮೊದಲ ಅಮೆರಿಕನ್ ಟೇಪ್ ರೆಕಾರ್ಡ್‌ನಂತಹ ಯಂತ್ರವನ್ನು ತಮ್ಮ ಕಂಪೆನಿಯೇ ತಯಾರಿಸಬೇಕೆಂದು ತಂಡ ತೀರ್ಮಾನಿಸಿತು. ಮುಂದೆ ಅದ್ಭುತವೇ ಘಟಿಸಿತು. ಉನ್ನತ ತಂತ್ರಜ್ಞಾನದ ಇಲೆಕ್ಟ್ರಾನಿಕ್ ಗ್ರಾಹಕ ಸಾಮಾಗ್ರಿಗಳನ್ನು ಉತ್ಪಾದಿಸುವ ಗುರಿಯನ್ನು ಸೋನಿ ಇರಿಸಿಕೊಂಡಿತು. ಮೀಡಿಯಂವೇವ್ ರೇಡಿಯೋಗಳಿಗೆ ಅಗತ್ಯವಾದ ಶಾರ್ಟ್ ವೇವ್‌ಗಳನ್ನು ಪೂರೈಸುವ ರಂಗಕ್ಕೆ ಧುಮುಕಿತು. ಕ್ರಮೇಣ ಟೇಪ್ ರೆಕಾರ್ಡರ್ ತಯಾರಿಸಲು ಆರಂಭಿಸಿತು. ೧೯೫೦ರಲ್ಲಿ ಸೋನಿ ತಯಾರಿಸಿದ ಮೊದಲ ಟೇಪ್ ರೆಕಾರ್ಡರ್ ೩೫ ಕೆ.ಜಿ ತೂಗುತ್ತಿದ್ದು ೫೦ ಡಾಲರ್ ಬೆಲೆಬಾಳುತ್ತಿತ್ತು. ೧೯೫೫ರ ವೇಳೆಗದು ಟ್ರಾನ್ಸಿಸ್ಟರ್ ರೇಡಿಯೋ ತಯಾರಿಸಿತು. ಎರಡೇ ವರ್ಷಗಳೊಳಗೆ ಪಾಕೆಟ್ ರೇಡಿಯೋ ಉತ್ಪಾದಿಸಿತು. ಅನಂತರ ಅಡಿಯೋ ರೆಕಾರ್ಡರ್ ಬಂತು. ಹೀಗೆ ಕ್ಲಪ್ತ ಸಮಯದಲ್ಲೇ ಅಂದರೆ ೧೯೭೦ರ ವೇಳೆಗೆ ಸೋನಿ ಜಗತ್ತಿನ ಪ್ರಮುಖ ಕೈಗಾರಿಕೆ ಸಂಸ್ಥೆ ಎಂದು ಗುರುತಿಸಿಕೊಂಡಿತ್ತು. ಅದೇ ಸಮಯದಲ್ಲಿ ಬ್ರಿಟನ್ನಿನ ರಾಜಕುಮಾರ ಚಾರ್ಲ್ಸ್ ಅವರು ಬ್ರಿಟನಿನಲ್ಲಿ ಸೋನಿಯ ಘಟಕವನ್ನು ಸ್ಥಾಪಿಸಲು ಆಹ್ವಾನಿಸಿದರು. ೧೯೮೨ರಲ್ಲಿ ತಂತ್ರಜ್ಞಾನ ಮತ್ತು ಕೈಗಾರಿಕಾ ಸಂಶೋಧನೆಯಲ್ಲಿ ಕೈಗೊಂಡ ಶ್ಲಾಘನೀಯ ಸೇವೆಗೆ ನೀಡಲಾಗುವ ಬ್ರಿಟನ್ನಿನ ‘ರಾಯಲ್ ಸೊಸೈಟಿ ಆಫ್ ಆರ್ಟ್ಸ್‌ನ ಆಲ್ಬರ್ಟ್’ ಪ್ರಶಸ್ತಿ ಅಕಿಯೋ ಮೊರಿಟಾ ಅವರಿಗೆ ಸಿಕ್ಕಿತ್ತು. ೧೯೭೩ರಲ್ಲಿ ಸೋನಿಯ ಸಂಶೋಧಕ ಲಿಯೋ ಎಸಾಕಿ ಅವರಿಗೆ ನೋಬೆಲ್ ಕೂಡ ಅರಸಿ ಬಂತು. ಇಂದು ಸೋನಿ ವಿಶ್ವದ ಅತಿ ದೊಡ್ಡ ಎಲೆಕ್ಟ್ರಾನಿಕ್ ಸರಕುಗಳ ಉದ್ಯಮವಾಗಿ ಬೆಳೆದಿದೆ. ಸೋನಿ ಮುಟ್ಟದ ಎಲೆಕ್ಟ್ರಾನಿಕ್ ಸರಕುಗಳೇ ಬಹುಶಃ ಇಂದು ಇಲ್ಲ ಮತ್ತು ಒಂದಲ್ಲಾ ಒಂದು ವಿಧದಲ್ಲಿ ಸೋನಿಯನ್ನು ಬಳಸದ ವ್ಯಕ್ತಿಯೇ ವಿಶ್ವದಲ್ಲಿ ಇಲ್ಲ. ಕಾಲದ ಬದಲಾವಣೆಗೆ ತಕ್ಕಂತೆ ಸೋನಿ ಸರಕುಗಳನ್ನು ಗ್ರಾಹಕರಿಗೆ ಒದಗಿಸುತ್ತಾ ಬರುತ್ತಿದೆ. “ಶ್ರೀಸಾಮಾನ್ಯರಿಗೆ ತಮಗೆ ಏನು ಸಿಗಲು ಸಾಧ್ಯ ಎನ್ನುವ ಕಲ್ಪನೆ ಅಸಾಧ್ಯ. ಆದರೆ ನಾವು ಅದನ್ನು ಊಹಿಸಬಲ್ಲೆವು. ಜನರಲ್ಲಿ ಹೋಗಿ ನಿಮಗೇನು ಬೇಕು ಎಂದು ಕೇಳುವ ಬದಲು ನಾವು ಹೊಸ ಉತ್ಪನ್ನಗಳೊಂದಿಗೆ ಜನರನ್ನು ಮುಂದೊಯ್ಯಲು ಯೋಜಿಸಿದ್ದೇವೆ.” ಎಂದಿದ್ದ ಅಕಿಯೋ ಮೊರಿಟಾನ ಉದ್ದೇಶದ ಮೂಲಕವೇ ಇಂದೂ ಸೋನಿ ಉತ್ಪಾದನೆಯನ್ನು ಆರಂಭಿಸುತ್ತಿದೆ. ಹಾಗಾಗಿ ಅದು ೧೯೮೮ರ ಹೊತ್ತಿಗೇ ವಾಕ್‌ಮನ್‌ಗಳನ್ನು ಉತ್ಪಾದಿಸುತ್ತದೆ. ಟಿವಿಯನ್ನು ಹೀಗೂ ತಯಾರಿಸಬಹುದೆಂದು ಎಲ್. ಸಿ.ಡಿ ಗಳನ್ನು ಬಿಡುಗಡೆ ಮಾಡುತ್ತದೆ. ವೊಬೈಲ್‌ಗಳನ್ನು ಇಷ್ಟೂ ತೆಳ್ಳಗಾಗಿಸಬಹುದು ಎಂದು ತೋರಿಸುತ್ತದೆ. ಇಂದು ಅತ್ಯಂತ ಸೂಕ್ಷ್ಮ ಎಲೆಕ್ಟ್ರಾನಿಕ್ ಸರಕುಗಳನ್ನೂ ಉನ್ನತ ತಂತ್ರಜ್ಞಾನದ ಮೂಲಕ ತಯಾರಿಸುತ್ತದೆ.
MADE IN JAPAN ನ ವ್ಯಾಪ್ತಿ ದಿನೇ ದಿನೇ ವೃದ್ಧಿಯಾಗುತ್ತಿದೆ. ವಿಶ್ವದ ಪ್ರತಿಷ್ಠಿತ ಬ್ರಾಂಡ್ ಆಗಿ ಸೋನಿ ಜನಪ್ರಿಯತೆ ಗಳಿಸಿದೆ. ಕಂಪೆನಿಯೊಂದು ಈ ಮಟ್ಟಕ್ಕೆ ಮುಟ್ಟುವುದರಲ್ಲೇನೂ ವಿಶೇಷವಿಲ್ಲ. ಆದರೆ ತನ್ನ ಮೂಲಕ ದೇಶದ ಗೌರವ ಹೆಚ್ಚಬೇಕು ಎಂಬ ಛಾತಿ ಸೋನಿಯ ವಿಶೇಷತೆ. ತನ್ನ ಮೂಲಕ MADE IN JAPAN ಘೋಷ ವಿಶ್ವವ್ಯಾಪಿಯಾಗಬೇಕು ಎಂಬ ಹಂಬಲ ದೇಶದ ಬಹುದೊಡ್ಡ ಆಸ್ತಿಯಾಗುತ್ತದೆ ಮತ್ತು ಆ ಹಂಬಲ ತನ್ನ ಮೂಲಕ ಸಮಾಜವನ್ನೂ ಬೆಳೆಸುತ್ತದೆ. ಆ ಹಂಬಲ ರಾಷ್ಟ್ರವನ್ನು ಒಂದು ಶಕ್ತಿಯಾಗಿ ಬೆಳೆಸುತ್ತದೆ. ರಾಷ್ಟ್ರೀಯತೆಯ ಪರಿಕಲ್ಪನೆಯಲ್ಲಿ ದೇಶವೊಂದು ಯಾವ ಹಂತಕ್ಕೆ ಮುಟ್ಟಬಹುದು ಮತ್ತು ಆ ಮೂಲಕ ಕಂಪೆನಿಯೂ ಹೇಗೆ ಪ್ರತಿಷ್ಠಿತನಾಗಬಲ್ಲದು ಎಂಬುದಕ್ಕೆ ಪ್ರಸ್ತುತ ಘಟನೆ ಉದಾಹರಣೆಯಾಗಿ ನಿಲ್ಲುತ್ತದೆ. ಇವಿಷ್ಟನ್ನು ಬಿಟ್ಟರೆ ಸೋನಿಯ ಯಶಸ್ಸಿನ ಹಿಂದೆ ಬೇರೇನೂ ಇಲ್ಲ. ಆರಂಭದಲ್ಲಿ ಪಶ್ಚಿಮದೊಂದಿಗೆ ಕೂಡಿಕೊಳ್ಳಿ ಎಂಬುದು ಅವರ ಘೋಷವಾಕ್ಯವಾಗಿತ್ತು. ಆದರೆ ಸೋನಿ ಬೆಳೆದ ಪರಿ ಎಷ್ಟಿತ್ತೆಂದರೆ ಸ್ವಲ್ಪವೇ ಸಮಯದಲ್ಲಿ ಅದು ಪಶ್ಚಿಮವನ್ನೂ ಹಿಂದಿಕ್ಕಿ ಅಗ್ರಗಣ್ಯವಾಯಿತು. ಸೋನಿಯ ಈ ಸಾಧನೆಯ ಹಿಂದೆ ಯಾವುದೇ ರಹಸ್ಯ ಸೂತ್ರಗಳಿರಲಿಲ್ಲ. ಸ್ವಾರ್ಥದ ಲವಲೇಶವೂ ಇರಲಿಲ್ಲ. ಮತ್ತು ಸರಕಾರಿ ನೀತಿಯೂ ಇರಲಿಲ್ಲ. ಇಂದೇನೂ ಈ ತತ್ವಗಳನ್ನು ವಿಶ್ವ ಒಪ್ಪುತ್ತಿರಬಹುದು. ಆದರೆ ಸೋನಿ ೧೯೪೬ರಲ್ಲೇ ಕೈಗಾರಿಕಾ ತತ್ವವನ್ನು ಒಪ್ಪಿ ನಡೆಯಿತು. ಯಶ ಸಾಸಿತು. ಇಂದು ಸೋನಿ ವಿಶ್ವದ ಬಹುತೇಕ ರಾಷ್ಟ್ರಗಳನ್ನು ಪ್ರವೇಶಿಸಿರಬಹುದು. ಆದರೆ ಇಂದಿಗೂ ಸೋನಿಯ ಆಡಳಿತ ವರ್ಗ ಕೆಲಸಗಾರರಿಗೆ ತಮಗಿಂತ MADE IN JAPAN ಕೇಂದ್ರಿತವಾಗಿ ಕೆಲಸ ಮಾಡಬೇಕೆಂದು ಭೋದಿಸುತ್ತದೆ. ತನ್ನ ಮೂಲಕ ರಾಷ್ಟ್ರದ ಏಳಿಗೆ ಬಯಸುವವರಿಗೆ, ಮಾರ್ಗದರ್ಶನ ಬಯಸುವವರಿಗೆ ಸೋನಿ ಕಥೆ ಪ್ರಚೋದಕ. ಹೀಗೆ ಬೂದಿಯಿಂದ ಎದ್ದುಬಂದ ಫಿನಿಕ್ಸ್‌ನಂತೆ ಮೇಲೇರಿದ ಜಪಾನ್ ಮತ್ತು ಗುಲಾಮಗಿರಿಯಿಂದ ಹೊರಬಂದ ಭಾರತದ ಪರಿಸ್ಥಿತಿಗಳು ತುಲನೆಯಲ್ಲಿ ತೊಡಗಿದಾಗ ಸೋನಿಯಂಥ ಯಾವ ಕಂಪೆನಿಯೂ ಇಲ್ಲಿ ಏಕೆ ಹುಟ್ಟಲಿಲ್ಲ ಎಂದು ಪ್ರಶ್ನೆಗಳೇಳುತ್ತವೆ. ಅಕ್ಷರಶಃ ನೆಲಸಮವಾಗಿದ್ದ ಜಪಾನ್, ಅತಿಸಣ್ಣ ಜಪಾನ್MADE IN JAPAN ಎಂದು ವಿಶ್ವಾದ್ಯಂತ ಕರೆಸಿಕೊಂಡಿರುವಾಗ ವಿಶಾಲ ಭೂಭಾಗದ ಭಾರತವೇಕೆ MADE IN INDIA ಎಂದುಕೊಳ್ಳಲಿಲ್ಲ ಎಂದು ಆಶ್ಚರ್ಯವೂ ಆಗುತ್ತದೆ. ಟಾಟಾ ಬಿರ್ಲಾರು ಕೈಗಾರಿಕೆ ಕಟ್ಟಿದರೇ ಹೊರತು ಸೋನಿಯಂತೇಕೆ ಆಗಲಿಲ್ಲ ಎಂದೂ ಅನಿಸದಿರದು. ಅದಕ್ಕೆ ಯಾರು ಹೊಣೆ ? ಇಂದಿಗೂ ಫೋರ್ಬ್ಸ್ ಪಟ್ಟಿಯಲ್ಲಿ ವಿಶ್ವದ ಬಿಲಿಯಾಪತಿಗಳ ಪಟ್ಟಿಯಲ್ಲಿ ಭಾರತೀಯ ವ್ಯಕ್ತಿಗಳೂ ಕಂಪೆನಿಗಳೂ ಹೆಸರು ಪಡೆದುಕೊಳ್ಳುತ್ತಾರೆ. ಆದರೆ ಅದಕ್ಕೂ ಹೆಚ್ಚಿನದೇನೂ ಅಲ್ಲಿ ಸಂಭವಿಸುವುದಿಲ್ಲ. ನಾರಾಯಣ ಮೂರ್ತಿಗಳು ಇನೋಸಿಸ್ ಅಷ್ಟೇ ಬೆಳೆಸುತ್ತಾರೆ. ಸೋನಿಯಂತೆ ದೇಶವನ್ನೂ ಬೆಳೆಸುವ ಮಟ್ಟಕ್ಕೆ ಬೆಳೆಯುವುದಿಲ್ಲ ಏಕೆ? ಸಣ್ಣ ವಯಸ್ಸಿನ ದಕ್ಷ ಸಿ.ಇ.ಓ ಗಳು, ವೈದ್ಯರು, ವಿದೇಶಗಳಿಗಷ್ಟೇ ಕೆಲಸ ಮಾಡುವುದನ್ನು , ಇಂದಿರಾನೂಯಿ ಫೆಪ್ಸಿಕೋಗೆ ದುಡಿಯುವುದನ್ನೇ ಪುಳಕ ಪಡುವವರೆಗೂ MADE IN INDIA ವಿಶ್ವವ್ಯಾಪಿಯಾಗಲಾರದು ಎಂಬುದು ಸತ್ಯ. ಉರಿದುಹೋದ ಜಪಾನ್‌ಗೆ ಪಶ್ಚಿಮದೊಟ್ಟಿಗೆ ಸೇರಿಕೊಂಡು ಪಶ್ಚಿಮವನ್ನೇ ಮೀರಿಸುವ ಛಲ ಬಂದಿರಬಹುದು . ಆದರೆ ಸ್ವಾತಂತ್ರ್ಯಾನಂತರದ ಭಾರತಕ್ಕೆ ಅದು ಅಷ್ಟು ಸುಲಭವಾಗಿ ಬರುವಂತಿರಲಿಲ್ಲ. ಏಕೆಂದರೆ ಶತಮಾನಗಳಷ್ಟು ಕಾಲದ ಗುಲಾಮಗಿರಿ ಒಂದು ಅಧಿಕಾರ ಹಸ್ತಾಂತರದ ಮೂಲಕ ತೊಲಗಿಹೋಗದು. ಕೊಂಚ ಉಳಿಕೆಯನ್ನು ಹೊತ್ತುಕೊಂಡೇ ಕಾಂಗ್ರೆಸ್ ಅಧಿಕಾರಾರೂಢವಾಯಿತು. ಇನ್ನು ಅಂಥ ಕಾಂಗ್ರೆಸ್‌ನಿಂದ ರಾಷ್ಟ್ರೀಯ ಪರಿಕಲ್ಪನೆಯಡಿಯಲ್ಲಿ ದೇಶದ ಕಂಪೆನಿಗಳು ಮೇಲೆ ಬರಲು ಹೇಗೆ ಸಾಧ್ಯವಾದೀತು ?
ಇದರ ಹೊರತಾಗಿ ಕೆಲವು ಇಚ್ಛಾಶಕ್ತಿಯುಳ್ಳ ವ್ಯಕ್ತಿಗಳು ಅದರತ್ತ ಪ್ರಯತ್ನಿಸಿದರೂ ಕೂಡ ಅಂತಾರಾಷ್ಟ್ರೀಯ ಮಟ್ಟಕ್ಕೆ ಏರುವಲ್ಲಿ ವಿಫಲವಾದವು. ರಾಷ್ಟ್ರೀಯತೆಗೆ ಬೆನ್ನು ಹಾಕಿಯೇ ಅಧಿಕಾರ ಆರಂಭಿಸಿದ ನೆಹರೂ ಪಡೆ ಅಮೆರಿಕ ಕೊಟ್ಟ ಕಳಪೆ ಗೋಧಿಗೆ ಆಸೆಪಟ್ಟು ದೇಶದ ಛಲ, ಇಚ್ಛಾಶಕ್ತಿ, ಗೌರವ, ಮೌಲ್ಯಗಳನ್ನು ಬಲಿಕೊಟ್ಟುಬಿಟ್ಟರು. ದೇಶದ ಮೂವತ್ತೈದು ಕೋಟಿ ಜನರಿಗೆ ಉಣ್ಣಲಿಲ್ಲ ಎಂದು ಸ್ವತಃ ನೆಹರೂವೇ ಬಹಿರಂಗವಾಗಿ ಘೋಷಿಸಿಬಿಟ್ಟರು. ಹೊರತು ಉಣ್ಣುವ ಒಂದು ಬಾಯಿಗೆ ದುಡಿಯುವ ಎರಡು ಕೈಗಳಿವೆ ಎಂಬುದನ್ನೇ ಮರೆತುಬಿಟ್ಟರು ಮತ್ತು ಆ ಎರಡು ಕೈಗಳಿಂದಲೂ ದುಡಿಸಬಹುದು ಎಂದು ಯೋಚಿಸಲೇ ಇಲ್ಲ. ಸ್ವತಂತ್ರಭಾರತದ ಪ್ರಶ್ನಾತೀತ ನಾಯಕರಾದ ನೆಹರೂಗೆ ದೇಶವನ್ನು ಏನೂ ಮಾಡಬಲ್ಲ ಶಕ್ತಿಯಿತ್ತು. ಇಡೀ ದೇಶವನ್ನೇ ಒಂದು ಸೋನಿಯಂತೆ ಮಾಡಬಹುದಿತ್ತು. ಆದರೆ ಅರ್ಥಹೀನ ಪ್ರಲಾಪಗಳತ್ತ ನೆಹರೂ ಧಾವಿಸಿದರು. ಸರಿಯಾದ ನೀತಿಗಳೇ ಕೈಯಲ್ಲಿಲ್ಲದೆ ಕೈಗಾರಿಕೆ ಎಂದರು. ಏನೇನೋ ಬಡಬಡಿಸಿದರು. ಪರಿಣಾಮ ಮುಂದಿನ ದಶಕಗಳಿಗೆ ಸಾಕಾಗುವಷ್ಟು ಅನಾಹುತಗಳು ಗುಡ್ಡೆಯಾಗಿ ಹೋಗಿದ್ದವು. ಜಪಾನ್ ನಲ್ಲಿ ಬಾಂಬಿಟ್ಟ ಅಮೆರಿಕನ್ನರ ತಂತ್ರಜ್ಞಾನಕ್ಕೆ ಅಕಿಯೋ ಮೊರಿಟಾ ಬೆರಗಾಗಿದ್ದರೆ ಇಲ್ಲಿ ನೆಹರೂ ಪಕ್ಕದ ಚೀನಾ ಸಾವಿರಾರು ಕಿ.ಮೀ ಒಳನುಗ್ಗಿದಾಗಲೂ ನಿಶ್ಚಿಂತರಾಗಿ ಇದ್ದರು. ಮೊರಿಟಾ ಪಶ್ಚಿಮದೊಂದಿಗೆ ಜೋಡಿಕೊಳ್ಳೋಣ ಎಂದಿದ್ದರೆ ಇಲ್ಲಿ ನಮ್ಮ ಚಾಚಾ ತಾವೇ ಸ್ವತಃ ಪಶ್ಚಿಮದವರಾಗಿ ಬಿಟ್ಟಿದ್ದರು. ಮತ್ತು ದೇಶವನ್ನು ಉಳಿದ ಪಶ್ಚಿಮದವರಂತೆ ನೋಡತೊಡಗಿದರು. ಜಪಾನ್ ರಾಷ್ಟ್ರಕೇಂದ್ರಿತ ಚಿಂತನೆಯಡಿಯಲ್ಲಿ ಉದ್ಯಮಶೀಲತೆ ಬೆಳೆಸಿಕೊಂಡಿದ್ದರೆ ನೆಹರೂ ಕೇಂದ್ರಿತ ಭಾರತ ಸ್ವಂತಿಕೆಯನ್ನು ಮರೆತು ತಾವೇ ಸ್ವತಃ ಪಶ್ಚಿಮದವರಾಗಲು ಹೊರಟಿತ್ತು. ಇತ್ತ ಭಾರತವಾಗದೆಯೂ ಉಳಿದುಬಿಟ್ಟಿತ್ತು. ನೆಹರೂ ಮಾಡಿದ ಅರ್ಥಹೀನ ಕೆಲಸಗಳು ಎಷ್ಟು ಆಳಕ್ಕೆ ಇಳಿದು ಬಿಟ್ಟಿದ್ದವೆಂದರೆ ಸ್ವಾತಂತ್ರ್ಯಾ ನಂತರದ ೫೦ ವರ್ಷಗಳಾದ ಅನಂತರವೂ ದೇಶ ಆ ಗುಂಗಿನಿಂದ ಹೊರಬರುವಂತಿರಲಿಲ್ಲ. ಏಕೆಂದರೆ ಮುಂದೆ ಹಸಿರುಕ್ರಾಂತಿಯಾದರೂ ಮರುವರ್ಷವೇ ಕೃಷಿಭೂಮಿ ಬರಡು ಬಿದ್ದುಹೋಯಿತು. ಖಾಸಗಿ ಕೈಗಾರಿಕೋದ್ಯಮಗಳಿಗೆ ಪರವಾನಗಿ ಕೊಡುವುದಷ್ಟೇ ನೆಹರೂ ಕೈಗಾರಿಕಾ ಕ್ರಾಂತಿಯಾಯಿತೇ ಹೊರತು ಕೈಗಾರಿಕೋದ್ಯಮಗಳ ಸಹಿತ ದೇಶವಾಸಿಗಳಿಗೆ ರಾಷ್ಟ್ರೀಯ ದೃಷ್ಟಿಕೋನವನ್ನೇ ಅವರು ಕೊಡಲಿಲ್ಲ. ಏಕೆಂದರೆ ಸ್ವತಃ ನೆಹರೂವೇ ಅಂಥ ದೃಷ್ಟಿಕೋನವನ್ನು ಹೊಂದಿರಲಿಲ್ಲ. ಬದಲಿಗೆ ರಾಷ್ಟ್ರೀಯ ವಾದ ಎಂದು ಕಾಣುವ ಎಲ್ಲವನ್ನೂ ದಮನಿಸಲು ಹೊರಟರು. ಶಿಕ್ಷಣ, ಸೇವೆ, ಉದ್ಯೋಗ, ರಕ್ಷಣೆ, ಕೃಷಿ, ಉದ್ಯಮ, ಆಡಳಿತ ಹೀಗೆ ದೇಶದ ಸಕಲ ವ್ಯವಸ್ಥೆಗಳಲ್ಲೂ ಸೆಕ್ಯುಲರ್ ಬೀಜವನ್ನು ಬಿತ್ತಿ ರಾಷ್ಟ್ರೀಯ ಸ್ಪರ್ಶ ಆಗದಂತೆ ಮಾಡಿದರು. ಇನ್ನೆಲ್ಲಿಯ ಸೋನಿಯಂಥ ಸಂಸ್ಥೆ ? ಇನ್ನೆಲ್ಲಿಯ MADE IN JAPAN ಆದ್ದರಿಂದ ಮಾನವ ಶಕ್ತಿಯ ಸಮರ್ಥ ನಿರ್ವಹಣೆಗೆ ಭಾರತಕ್ಕೆ ೬೦ ವರ್ಷಗಳು ಬೇಕಾಯಿತು. ಭಾರತ ಪ್ರಕಾಶಿಸಲು ಆಡಳಿತಕ್ಕೆ, ಉದ್ಯಮಕ್ಕೆ, ಶಿಕ್ಷಣಕ್ಕೆ ರಾಷ್ಟ್ರೀಯ ಸ್ಪರ್ಶನೀಡಲು ವಾಜಪೇಯಿಯೇ ಬರಬೇಕಾಯಿತು. ಇದೀಗ ಭಾರತ ವೈಬ್ರೆಂಟ್ ಆಗುವತ್ತ ಸಾಗುತ್ತಿದೆ. ಮುಂದಿನ ಪಾಳಿ ಭಾರತದ್ದು.

Tuesday, November 29, 2011

ಅವರು ಕರೆಯದೇ ಬಂದರು; ಇವರು ಕರೆಯೋಲೆಯೊಂದಿಗೇ ಬಂದರು


ಕೆಲವು ಇತಿಹಾಸಗಳು ಸೃಷ್ಟಿಯ ಅಸ್ತಿತ್ವ ಇರುವವರೆಗೂ ಮರೆಯಾಗಲಾರವು ಮತ್ತು ಮರೆಯಲೂಬಾರದು.
ದಕ್ಷಿಣ ಏಷ್ಯಾದ ಸಿಂಧ್ ನಾಚೆಯ ಭಾರತವೆನ್ನುವ ದೇಶ ಪಾಶ್ಚಾತ್ಯರಿಗೆ ಮೊದಲಿನಿಂದಲೂ ಕಣ್ಣುಕುಕ್ಕುವ ದೇಶವೇ. ಪ್ರಾಚೀನದಿಂದಲೂ ಭಾರತ ಅವರ ಕಣ್ಣಿಗೆ ಮಾಯಾನಗರಿಯೇ. ಕನಸ್ಸಿನ ಭೂಮಿಯೇ. ಏಕೆಂದರೆ ಭಾರತ ಅವೆಲ್ಲಕ್ಕಿಂತ ಶ್ರೀಮಂತವೂ ಅವರೆಲ್ಲಾ ಅಗತ್ಯಗಳನ್ನೂ ಕನಸುಗಳನ್ನೂ ಪೂರೈಸಬಲ್ಲ ಅಕ್ಷಯಪಾತ್ರೆಯೂ ಆಗಿತ್ತು. ಆ ದೇಶಗಳ ಸಪ್ಪೆ ಸಾರಿಗೆ ಕರಿಮೆಣಸಿನ ರುಚಿಯನ್ನು ಒದಗಿಸಲು, ಏಲಕ್ಕಿಯ ಘಮವನ್ನು ಸೂಸಲು, ಅತ್ಯುತ್ಕೃಷ್ಟ ಕುಸುರಿಕಲೆಯ ಕಂಬಳಿಯನ್ನು ಹೊದೆಯಲು, ಮನಸಿಗೆ ಮುದ ನೀಡಲು,ಬದುಕನ್ನು ಆನಂದದಾಯಕವಾಗಿಡಲು ಅವರೆಲ್ಲರಿಗೆ ಭಾರತವನ್ನು ಬಿಟ್ಟು ಬೇರೆ ದೇಶಗಳಿರಲಿಲ್ಲ. ಇಲ್ಲಿನ ಎಲ್ಲವೂ ಶ್ರೀಮಂತವೇ. ಆಟಕ್ಕುಂಟು ಲೆಕ್ಕಕಿಲ್ಲ ಎಂಬಂಥ ಯಾವ ಸರಕೂ ಇಲ್ಲಿರಲಿಲ್ಲ. ಇರುವುದೆಲ್ಲವೂ ಇಲ್ಲಿ ಸಮೃದ್ಧ, ಯತೇಚ್ಛ ಮತ್ತು ಸಂಪೂರ್ಣವಾದ ಸರಕುಗಳೇ. ಬಿಸಿಲಿನಿಂದ ಒಣಗಿಯೂ ಹಿಮದಿಂದ ಒದ್ದೆಒದ್ದೆಯಾಗಿಯೂ ಇರುವ ದೇಶಗಳಿಗೆ ಭಾರತದ ಸರಕುಗಳ ಆವಶ್ಯಕತೆಯಿತ್ತು. ಅದಾಗಲೇ ಇಲ್ಲಿನ ಶ್ರೀಮಂತಿಕೆಗಳು ಅವರಿವರ ಕಣ್ಣಿಗೆ ಬೀಳಲಾರಂಭಿಸಿತ್ತು. ಕೋಳಿಮೊಟ್ಟೆಯಿಂದ ಹಿಡಿದು ಮುತ್ತುರತ್ನಗಳವರೆಗೂ ಸಕಲ ಸರಕುಗಳು ಸಂತೆಯ ಕಟ್ಟೆಯಲ್ಲಿ ವ್ಯಾಪಾರವಾಗುತ್ತವೆ ಎಂಬುದೂ ಕುಂಬಳಕಾಯಿ ಎಂಬುದಿದೆಯೆಂದೂ ಅದನ್ನು ರುಚಿಕಟ್ಟಾಗಿ ತಿನ್ನಬಹುದೆಂದೂ ತಿಳಿಯುತಿದ್ದಂತೆಯೇ ಪಾಶ್ಚಾತ್ಯರಿಗೆ ಭಾರತಕ್ಕೊಂದು ಸಮುದ್ರ ಮಾರ್ಗವನ್ನು ಶೋಧಿಸದೆ ಇರಲಾಗಲಿಲ್ಲ. ಹಾಗೆ ವಾಸ್ಗೊಡಗಾಮ ಬಂದಿದ್ದೂ ಜಾಮೋರಿನ್ ಆಶ್ರಯ ಕೊಟ್ಟಿದ್ದೂ ಆತ ವ್ಯಾಪಾರವನ್ನು ಆರಂಭಿಸಿದ್ದೂ ಸಪ್ಪೆ ನಾಲಿಗೆಯ ಬಿಳಿಯರಿಗೆ ಮತ್ತಷ್ಟು ರುಚಿ ಹತ್ತಿದ್ದು ಎಲ್ಲವೂ ಇತಿಹಾಸ.
ಅನಂತರ ಶುರುವಾಗಿದ್ದು ಶುದ್ಧ ವ್ಯಾಪಾರ. ಭಾರತದ ಮಸ್ಲಿನ್ ಬಟ್ಟೆಗಳು, ಸಾಂಬಾರ ಪದಾರ್ಥಗಳು, ನೇಯ್ಗೆಯ ವಸ್ತುಗಳು ಇಲ್ಲಿನ ಸಾಂಪ್ರದಾಯಿಕ ತರಕಾರಿಗಳು, ಹಣ್ಣುಗಳು ಯುರೋಪಿಗೆ ರಪ್ತಾಗಲಾರಂಭಿಸಿತು. ಯುರೋಪಿನಿಂದ ಇಲ್ಲಿಗೆ ಗಹನವಾದುದು ಏನೇನು ಬಂದಿಳಿಯಿತೋ ಎಂಬುದು ಗೊತ್ತಾಗಲಿಲ್ಲ. ಆದರೆ ನಮ್ಮ ಸರಕುಗಳು ಶ್ರೀಮಂತ ಎಂಬ ಅರಿವು ಭಾರತೀಯರಿಗೆ ಕ್ರಮೇಣ ಆಗಿದ್ದಂತೂ ಸತ್ಯ. ಇಂಥ ಒಂದು ಭಾವನೆ ಮೂಡುವುದನ್ನೇ ಕಾಯುತಿದ್ದ ವ್ಯಾಪಾರಿಗಳು ಒಬ್ಬರಾದ ಮೇಲೊಬ್ಬರಂತೆ ಧಾಂಗುಡಿಯಿಟ್ಟರು.ಫ್ರೆಂಚರು, ಡಚ್ಚರು, ಪೋರ್ಚುಗೀಸರು, ಬ್ರಿಟೀಷರು ಬಂದರು. ಪರಸ್ಪರ ಕಿತ್ತಾಡಿಕೊಂಡರು. ಎಲ್ಲವೂ ವ್ಯಾಪಾರಕ್ಕಾಗಿ . ಇಲ್ಲಿಯ ಸರಕುಗಳಿಗಾಗಿ. ಕೊನೆಗೆ ಬ್ರಿಟಿಷರೊಬ್ಬರು ಉಳಿದುಕೊಂಡರು. ಇಲ್ಲಿಯ ಹತ್ತಿಯನ್ನು ಕೊಂಡೊಯ್ದರು. ಅಲ್ಲಿ ಬಟ್ಟೆ ಮಾಡಿದರು. ಪುನಃ ಇಲ್ಲಿಗೇ ತಂದು ಮಾರಾಟವನ್ನೂ ಮಾಡಿದರು. ಭಾರತದ ಸೆಣಬು, ಕಬ್ಬುಗಳಿಗೂ ಇದೇ ಗತಿಯಾಯಿತು. ಭಾರತದ ಹಳ್ಳಿಯ ರೈತನ ಬೆವರಿನಿಂದ ಮಾಂಚೆಸ್ಟರ್ -ಲಿವರ್ ಪೂಲ್‌ಗಳು ಬೆಳೆದವು. ನೋಡನೋಡುತ್ತಲೇ ಭಾರತ ಬರಿದಾಗುವ ಪಾತ್ರೆಯಾಯಿತು. ಇಂಗ್ಲೆಂಡ್ ಸೂರ್ಯ ಮುಳುಗದ ಸಾಮ್ರಾಜ್ಯವಾಯಿತು. ಹೀಗೆ ವ್ಯಾಪಾರ ಕೈಗೊಂಡ ಬ್ರಿಟೀಷರ ಈಸ್ಟ್ ಇಂಡಿಯಾ ಕಂಪೆನಿ ಎಷ್ಟೊಂದು ಪ್ರಭಾವಿಯಾಗಿ ಬೆಳೆಯಿತೆಂದರೆ ಭಾರತದಲ್ಲಿ ರಾಷ್ಟ್ರೀಯತೆ ಎಂಬುದು ಮತ್ತೊಮ್ಮೆ ಜಾಗೃತವಾಗತೊಡಗಿತು. ಸ್ವದೇಶಿ ಮತ್ತು ಸ್ವಧರ್ಮಗಳಿಗೆ ದೇಶೀಯರು ಹೋರಾಟವನ್ನೇ ಮಾಡಬೇಕಾಯಿತು. ಇದರ ಪರಿಣಾಮವಾಗಿ ೧೮೫೭ರಲ್ಲಿ ಚಳವಳಿಗಳು ನಡೆದವು. ಅನಂತರ ಈಸ್ಟ್ ಇಂಡಿಯಾದ ಕೈಯಿಂದ ಬ್ರಿಟೀಷ್ ಪಾರ್ಲಿಮೆಂಟ್ ಅಧಿಕಾರ ತೆಗೆದುಕೊಂಡರೂ ವ್ಯಾಪಾರವೇನೂ ನಿಲ್ಲಲಿಲ್ಲ. ವ್ಯಾಪಾರದಿಂದ ವಶಹಾತು ಅಥವಾ ವಶಹಾತಿನ ಕಾರಣಕ್ಕೆ ವ್ಯಾಪಾರ ತಂತ್ರ ಭಾರತವನ್ನು ನಲುಗಿಸಿದ್ದೆಷ್ಟು? ಮಾಡಿದ ಗಾಯಗಳೆಷ್ಟು?
ಇದೇ ವ್ಯಾಪಾರದ ತೀವ್ರತೆಗೆ ಕಡಿವಾಣ ಹಾಕಲು ಮೋಹನದಾಸನೆಂಬ ಗಾಂಧಿ ವಕೀಲಿಕೆಯನ್ನು ಬಿಟ್ಟು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬರಬೇಕಾಯಿತು. ಸಾವರ್ಕರರಂತಹ ಹೋರಾಟಗಾರರು ಸಾಗರದಾಚೆಯ ದ್ವೀಪದಲ್ಲಿ ಕಠೋರ ಶಿಕ್ಷೆ ಅನುಭವಿಸಬೇಕಾಯಿತು. ಗುಡಿಯೊಳಗಣ ಗಣಪನೂ ಬೀದಿಗೆ ಬರಬೇಕಾಯಿತು. ಹಲವು ದಾರ್ಶನಿಕರು, ಆಧುನಿಕ ಋಷಿಮುನಿಗಳು ಜನ್ಮತಾಳಬೇಕಾಯಿತು. ವೀರ ಯೋಧರು ಪ್ರಾಣತೆರಬೇಕಾಯಿತು. ಅವರ ವ್ಯಾಪಾರಕ್ಕೆ ನಮ್ಮ ಮಕ್ಕಳು ಉಪವಾಸವಿರಬೇಕಾಯಿತು. ಅವರ ವ್ಯಾಪಾರಕ್ಕೆ ನಾವು ದುಡಿಯಬೇಕಾಯಿತು. ಅವರ ವ್ಯಾಪಾರಕ್ಕೆಂದೇ ನಾವು ಬೆಳೆಯಬೇಕಾಯಿತು.ಅವರು ಮಾರುವರೆಂದೇ ನಾವು ಧರಿಸುವಂತಾಯಿತು. ಅವರ ವ್ಯಾಪಾರಕ್ಕೆ ನಾವು ಸುಂಕ ತೆರಬೇಕಾಯಿತು. ಕೊನೆಗೆ ಅವರ ವ್ಯಾಪಾರಕ್ಕೆ ನಾವು ಆಳಿಸಿಕೊಳ್ಳಲೂ ಬೇಕಾಯಿತು. ನಮ್ಮತನವನ್ನು ನಾವು ಕಳೆದುಕೊಳ್ಳಲೂಬೇಕಾಯಿತು. ವ್ಯಾಪಾರದ ಹಿಂದೆ ಎಷ್ಟೊಂದು ಕಥೆಗಳಿವೆ ನಮ್ಮ ಹಿಂದೆ. ಆ ಕಥೆಗಳಲ್ಲಿ ಎಷ್ಟೊಂದು ವ್ಯಥೆಗಳಿವೆ!?
ಅಂಥ ವ್ಯಾಪಾರದ ಕಥೆಯನ್ನು ನಾವು ಮರೆಯಬಹುದೇ?
ಏನೆಲ್ಲಾ ನಡೆದುಹೋಯಿತು ಆ ವ್ಯಾಪಾರದಿಂದ. ಜಲಿಯನ್‌ವಾಲಾಬಾಗ್‌ನಂಥ ಹತ್ಯಾಕಾಂಡವನ್ನೂ ,ಅರ್ಥವಾಗದ ಆಕ್ಟ್‌ಗಳನ್ನೂ ಕ್ವಿಟ್ ಇಂಡಿಯಾ ಚಳವಳಿಗಳನ್ನೂ , ಹೇರಿಕೆ-ಹೆದರಿಕೆಗಳನ್ನೂ ಅಡ್ಡಾದಿಡ್ಡಿ ಆಳ್ವಿಕೆಗಳನ್ನೂ , ಕೊನೆಗೆ ಸ್ವಾತಂತ್ರ್ಯವೆಂಬ ಕಾಗದ ಪತ್ರಗಳ ಬಟವಾಟೆಯನ್ನೂ, ನೆಹರೂರಂಥವರು ಗಾಧಿಗೆ ಕೂರುವುದನ್ನೂ ದೇಶ ಮೂಕವಾಗಿ ನೋಡಬೇಕಾಯಿತು. ಎಲ್ಲವೂ ವಿದೇಶಿಯ ವ್ಯಾಪಾರದಿಂದ . ಅವರ ವ್ಯಾಪಾರದ ಸದ್ದುಗಳು ಇಂದಿಗೂ ಭಾರತದ ಕಿವಿಗಳಿಂದ ಸಂಪೂರ್ಣ ಹೊರಟುಹೋಗಿಲ್ಲ.
ಹಾಗಾಗಿ ವ್ಯಾಪಾರದ ಕಥೆ ಭಾರತ ಮರೆಯಭಾರದ ಕಥೆ.
ಆದರೆ, ಅವರ ಆಳುವ ಗುಣವೆನ್ನಿ ಅಥವಾ ನಮ್ಮ ಆಳಿಸಿಕೊಳ್ಳುವ ಗುಣವೆನ್ನಿ ನಮ್ಮ ಇತಿಹಾಸವನ್ನು ನಾವು ಮರೆತಿದ್ದೇವೆ. ಅವರ ಇತಿಹಾಸವನ್ನು ಅವರು ಮರೆತಿಲ್ಲ. ವ್ಯಾಪಾರದ ಗುಂಗು, ವ್ಯಾಪಾರದ ಮೂಲಕ ಭಾರತವನ್ನಾವರಿಸುವ ಆಸೆಯಿನ್ನೂ ಪಾಶ್ಚಾತ್ಯರಲ್ಲಿ ಹೊರಟುಹೋಗಿಲ್ಲ ಎಂಬುದರ ಲಕ್ಷಣಗಳು ಆಗಾಗ್ಗೆ ಕಂಡುಬರುತ್ತಿರುತ್ತವೆ. ಕಳೆದ ವಾರವಷ್ಟೇ ಕೇಂದ್ರ ಕ್ಯಾಬಿನೆಟ್‌ನಲ್ಲಿ ಚರ್ಚಿಸಿ, ಒಮ್ಮತ ವ್ಯಕ್ತಪಡಿಸಿ ಜಾರಿಗೆ ತರಲಾಗಿರುವ FDI (forign direct investment)ಅಂದರೆ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಶೇ. ೫೧ರಷ್ಟು ಇರಬಹುದು ಎಂಬ ನಿರ್ಣಯವನ್ನು ನೋಡಿದಾಗ ನಮ್ಮ ಮರೆತುಹೋದ ಇತಿಹಾಸವೂ ಅವರು ಮರೆಯಲಾರದ ಇತಿಹಾಸ ಯಾವುದೆಂಬುದು ಗೋಚರವಾಗುತ್ತದೆ. ವ್ಯಾಪಾರದಲ್ಲಿ ವಿದೇಶಿ ಕೈವಾಡ ಎಂದಾಗ ಆಡಳಿತ ಬೆಚ್ಚಿಬೀಳಬೇಕು. ಅಂಥಾ ಇತಿಹಾಸದ ಗಾಢಾ ಛಾಯೆ ಇರುವ ದೇಶದಲ್ಲಿ ಇದೇನಿದು FDI ? ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ಬಂಡವಾಳ? ಯಾವ ದೇಶವೇ ಆಗಲಿ ತನ್ನ ಚಿಲ್ಲರೆ ವ್ಯಾಪಾರ ಪರರ ಸೊತ್ತಾದರೆ ತಾನು ಸತ್ತಂತೆಯೇ. ಇದೀಗ ಭಾರತದಲ್ಲಿ ಆಗುತ್ತಿರುವುದು ಕೂಡ ಅದೇ. ಭಾರತದಲ್ಲಿ ಚಿಲ್ಲರೆ ವ್ಯಾಪಾರವೆಂದರೆ ನೆನಪಾಗುವುದು ವಾರಕ್ಕೊಮ್ಮೆ ನಡೆಯುವ ಸಂತೆಗಳು, ಕಿರಾಣಿ ಅಂಗಡಿಗಳು, ಅಂಗಡಿಯಾತ ಮತ್ತು ಗ್ರಾಹಕನ ನಡುವಿನ ಸಂಬಂಧಗಳು, ಸಾಲಗಳು, ಅಂಗಡಿಯಾತ ಮತ್ತು ಕೃಷಿಕನ ನಡುವಿನ ಅನ್ಯೋನ್ಯತೆಗಳು. ಇಲ್ಲಿ ಚಿಲ್ಲರೆ ವ್ಯಾಪಾರವೆಂದರೆ ಗಾಂಧಿ ಹೇಳಿದ ಗ್ರಾಮ ಸ್ವರಾಜ್ಯದಂಥವು. ಇದು ಅಪ್ಪಟ ಸ್ವಾವಲಂಭನೆಯ ಉದ್ದಿಮೆಗಳು. ಊರ ಮಧ್ಯದಲ್ಲೋ, ರಥಬೀದಿಯಲ್ಲೋ , ಪೇಟೆಯ ಮೂಲೆಯಲ್ಲೋ ,ಸೆಟ್ಟರೋ ಕಾಮತರೋ ಇಟ್ಟುಕೊಂಡ ಕಿರಾಣಿ ಅಂಗಡಿಗಳು ಅಥವಾ ರೈತರೇ ತಾವು ಬೆಳೆದ ಸರಕುಗಳನ್ನು ತಾವೇ ವ್ಯಾಪಾರ ಮಾಡುವ ವಿಧಾನಗಳು ಸಶಕ್ತ ಸಮಾಜದ ಮಾರ್ಗಗಳಾಗಿದ್ದವು. ಭಾರತದಲ್ಲಿ ಈ ಚಿಲ್ಲರೆ ವ್ಯಾಪಾರ ಉದ್ದಿಮೆಗಳು ಅತ್ಯಂತ ಪ್ರಭಾವಿ ಉದ್ಯಮಗಳೆಂದು ಹೆಸರರನ್ನೂ ಪಡೆದಿದ್ದವು. ಎರಡು ರೂ. ಕೊತ್ತಂಬರಿ ಸೊಪ್ಪಿಗೂ ೫೦ಗ್ರಾಮು ಮೆಂತ್ಯಕ್ಕೂ ಕೂಡ ಇಲ್ಲಿ ಸ್ಥಾನವುಂಟು. ಅದರ ಪರಿಣಾಮವಾಗಿ ಈ ಚಿಲ್ಲರೆ ವ್ಯಾಪಾರ ವಲಯ ದೇಶದ ಒಟ್ಟು ಜಿಡಿಪಿ ಯ ಶೇ. ೧೪ರಷ್ಟು ಪಾಲನ್ನು ಪಡೆದುಕೊಂಡಿದೆ. ಸ್ವಾವಲಂಭನೆಯ , ಮಹತ್ತ್ವಾಕಾಂಕ್ಷೆಯ ವ್ಯಕ್ತಿಗೆ ಚಿಲ್ಲರೆ ವ್ಯಾಪಾರ ಉದ್ಯಮ ಗೌರವಾನ್ವಿತ ಸ್ಥಾನವನ್ನು ಕೊಟ್ಟಿದೆ. ದೇಶದ ಒಟ್ಟು ಉದ್ಯೋಗಗಳಲ್ಲಿ ಚಿಲ್ಲರೆ ವ್ಯಾಪಾರ ಉದ್ಯಮ ಶೇ. ೭ರಷ್ಟು ಪಾಲನ್ನು ಹೊಂದಿದೆ. ಇವಿಷ್ಟು ಕಣ್ಣಿಗೆ ಕಾಣುವ ಸಂಗತಿಗಳಾದರೆ ಚಿಲ್ಲರೆ ವ್ಯಾಪಾರಕ್ಕೆ ಪೂರಕವಾಗಿರುವ ಸಂಗತಿಗಳೂ ಹಲವಿವೆ. ಅಂದರೆ ದೇಶದ ಬಹುಸಂಖ್ಯಾತ ಜನರು ಒಂದಲ್ಲಾ ಒಂದು ರೀತಿಯಲ್ಲಿ ಚಿಲ್ಲರೆ ವ್ಯಾಪಾರಿಗಳನ್ನು ಅವಲಂಭಿಸಲೇ ಬೇಕು. ಇತ್ತೀಚಿನ ಕೆಲವು ವರ್ಷಗಳಿಂದ ಹಲವು ಭಾರತೀಯ ಕಂಪೆನಿಗಳು ಬಹುಬ್ರಾಂಡ್‌ಗಳ ಚಿಲ್ಲರೆ ವ್ಯಾಪಾರಕ್ಕೆ ಇಳಿದರೂ ಕೂಡ ಭಾರತೀಯ ಚಿಲ್ಲರೆ ವ್ಯಾಪಾರ ಉದ್ದಿಮೆ ಸಂಪೂರ್ಣ ನಾಶವಾಗಿರಲಿಲ್ಲ. ಏಕೆಂದರೆ ಕಿರಾಣಿ ಅಂಗಡಿಗಳ ಮೇಲೆ ಜನರಿಗೊಂದು ನಂಬಿಕೆ ಇದ್ದೇ ಇತ್ತು. ಬಿಗ್ ಬಜಾರಿನ ಬೆಲ್ಲಕಿಂತ ಭಟ್ಟರಂಗಡಿಯ ಬೆಲ್ಲಕ್ಕೇ ಇಂದಿಗೂ ಬೇಡಿಕೆ ಹೆಚ್ಚು. ಹಾಗಾಗಿ ಇಂದಿಗೂ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಕಿರಾಣಿ ಅಂಗಡಿಗಳ ವಹಿವಾಟು ಮಾಲ್‌ಗಳ ವ್ಯವಹಾರಕ್ಕಿಂತ ಸಾವಿರಪಟ್ಟು ಅಧಿಕವಿದೆ. ಈ ಅಂಕಿಅಂಶವನ್ನು ಕಂಡುಹಿಡಿದ ಸರಕಾರ ಇದೀಗ ಚಿಲ್ಲರೆ ವ್ಯಾಪಾರವನ್ನು ವಿದೇಶಿ ಕಂಪೆನಿಗಳ ಪಾದಕ್ಕಿಟ್ಟು ಧನ್ಯತೆಯನ್ನು ಅನುಭವಿಸುತ್ತಿದೆ. ಇನ್ನು ದೇಶದ ೫೩ ಮಹಾನಗರಗಳಲ್ಲಿ ವಾಲ್ ಮಾರ್ಟ್, ಕ್ಯಾರಿಫೋರ್ ಮತ್ತು ಟೆಸ್ಕೋಗಳಂತಹ ಕಂಪೆನಿಗಳು ಮಳಿಗೆಗಳನ್ನು ತೆರೆದು ತೆಂಗಿನ ಕಾಯಿ, ಉದ್ದು, ರವೆಗಳ ವ್ಯಾಪಾರವನ್ನು ಮಾಡಲಿವೆ. ಮಹಾನಗರದಲ್ಲಿ ಪ್ರಭಾವಿಗಳಾಗಿದ್ದ ಕಿರಾಣಿ ಅಂಗಡಿಗಳ ಭಾಗಿಲುಗಳು ಮುಚ್ಚಲಿವೆ. ಯಾವ ಕಾರಣಕ್ಕೂ ಮಣ್ಣಿನ ಮಕ್ಕಳ ಅಂಗಡಿಗಳು ಓಡಿಬಂದವರ ಅಂಗಡಿಗಳ ಸಂಖ್ಯೆಗಿಂತ ಹೆಚ್ಚಂತೂ ಇರಬಾರದೆಂಬುದು ಸರಕಾರದ ಆದೇಶವಾಗಲಿದೆ. ಹೀಗೆ ಶೇ.೫೧ ರಷ್ಟು ಬಂಡವಾಳ ಹೂಡಿಕೆಗೆ ಆಸ್ಪದ ನೀಡುವುದರಿಂದ ಮುಂದಿನ ಮೂರು ವರ್ಷದಲ್ಲಿ ೧೦ ಮಿಲಿಯ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂಬ ಮೋಡಿಯ ಮಾತನ್ನೂ ಸರಕಾರ ಹೇಳುತ್ತಿವೆ. ಸ್ವಾವಲಂಭನೆಯ ಉದ್ಯೋಗವನ್ನು ಕಿತ್ತುಕೊಂಡ ಸರಕಾರ ಭಾರತೀಯ ಸೇಲ್ಸ್ ಮ್ಯಾನ್ ಗಳನ್ನು , ವಾಚ್‌ಮ್ಯಾನ್‌ಗಳನ್ನು ಹೆಚ್ಚಿಸಲಿವೆ.
ದೇಶದಲ್ಲಿ ಈಗಾಗಲೇ ಸಗಟು ವ್ಯಾಪಾರದಲ್ಲಿ ವಾಲ್‌ಮಾರ್ಟ್‌ನಂಥ ಕಂಪೆನಿಗಳು ಲಗ್ಗೆ ಇಟ್ಟಿವೆ. ಏಕ ಬ್ರಾಂಡ್ ಮಾರಾಟಮಳಿಗೆಗಳು ಭಾರತದ ಸಣ್ಣಸಣ್ಣ ಪಟ್ಟಣಗಳಲ್ಲೂ ಇವೆ. ಇವುಗಳಾಗಲೇ ಭಾರತೀಯರಿಗೆ ಬ್ರಾಂಡಿನ ಹುಚ್ಚನ್ನು ಹಿಡಿಸಿ ಕೊಳ್ಳುಭಾಕ ಸಂಸ್ಕೃತಿಯನ್ನು ಮಧ್ಯಮವರ್ಗಗಳಲ್ಲಿ ನೆಲೆವೂರಿಸಿವೆ. ಇನ್ನು ಚಿಲ್ಲರೆ ವ್ಯಾಪಾರದಲ್ಲಿ ಬಹುಬ್ರಾಂಡ್ ಮಾರಾಟದ ಸ್ವರೂಪವೇನಾಗಬಹುದೆಂಬುದನ್ನು ಊಹಿಸುವುದು ಅತ್ಯಂತ ಸುಲಭ. ರೀಬಾಕ್ ಬ್ರಾಂಡಿನ ಶೂಗಳಿಗೆ ಐದು ಸಾವಿರ ಕೊಡುವ ಮಾನಸಿಕತೆ ಬ್ರಾಂಡೆಡ್ ಕುಂಬಳ ಕಾಯಿಗೆ ನೂರಿನ್ನೂರು ಕೊಡದಿರುತ್ತದೆಯೇ? ಆ ಕುಂಬಳ ಕಾಯಿ ಪಕ್ಕದ ಊರಲ್ಲಿ ಬೆಳೆದರೂ ಮಾರುಕಟ್ಟೆಯ ಏಕಸ್ವಾಮ್ಯ ಅದನ್ನು ಬ್ರಾಂಡ್ ಆಗಿಯೇ ಮಾರುವ ಅನಿವಾರ್ಯತೆಯನ್ನು ಸೃಷ್ಟಿಗೊಳಿಸುವ ಸಾಧ್ಯತೆಗಳನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ. ಆದರೆ ಸರಕಾರ ಮತ್ತು ಧೈತ್ಯ ಕಂಪೆನಿಗಳು ಈಗಾಗಲೇ ಉದ್ವೇಗಭರಿತರಾದಂತೆ ಮಾತಾಡುತಿದ್ದಾರೆ. ರೈತರು ಈಗ ಗಳಿಸುತ್ತಿರುವುದಕ್ಕಿಂತ ಶೇ. ೧೦-೩೦ರಷ್ಟು ಹೆಚ್ಚಿನ ಬೆಲೆಯನ್ನು ಪಡೆಯುತ್ತಾರೆ ಎಂಬುದು ಕೂಡ ಒಂದು ಹೇಳಿಕೆ. ಆದರೆ ರೈತರಿಗೂ ಹೆಚ್ಚಿನ ಬೆಲೆ ಕೊಟ್ಟು ಗ್ರಾಹಕರಿಗೂ ಕಡಿಮೆ ಬೆಲೆಯಲ್ಲಿ ಸರಕುಗಳನ್ನು ನೀಡುತ್ತಾ ಇದ್ದಿದ್ದರೆ ವಾಲ್ ಮಾರ್ಟ್ ಜಗತ್ತಿನ ಅತ್ಯಂತ ದೊಡ್ಡ ಮಾರಾಟ ಸಂಸ್ಥೆಯಾಗುತಿತ್ತೇ ಎಂಬ ಸತ್ಯವನ್ನೂ ಪರಾಮರ್ಶಿಸಬೇಕಲ್ಲವೇ? ಭಾರತದ ರೈತರಿಗೆ ಹೆಚ್ಚಿನ ಬೆಲೆ ತೆರುವುದಕ್ಕಿಂತ ಕಡಿಮೆ ಬೆಲೆಗೆ ವಿದೇಶದಿಂದ ಸರಕುಗಳನ್ನು ತರುವ ಸಂದರ್ಭವನ್ನೇಕೆ ವಿದೇಶಿ ಕಂಪೆನಿಗಳು ಕಳೆದುಕೊಂಡಾರು? ಚೀನಾ ಸರಕುಗಳು ಭಾರತಕ್ಕೆ ಲಗ್ಗೆ ಇಟ್ಟ ದೃಷ್ಟಾಂತವೇ ನಮ್ಮೆದುರು ಇಲ್ಲವೇ? ಒಂದು ತೆಂಗಿನ ಕಾಯಿಗೂ ಹೈಪರ್ ಮಾರ್ಕೆಟ್‌ಗಳಿಗೋ ಸೂಪರ್ ಮಾರ್ಕೆಟ್‌ಗಳಿಗೋ ಹೋಗುವಂತೆ ಮಾಡಿಬಿಟ್ಟಿತಲ್ಲಾ ಸರಕಾರ.
ಸ್ವಾತಂತ್ರ್ಯ ಬಂದು ಆರು ದಶಕಗಳು ಕಳೆದರೂ ನಮ್ಮ ವ್ಯಾಪಾರಕ್ಕೆ ವಿದೇಶಿಯರ ಉಪದ್ರವ ನಿಂತಿಲ್ಲವೆಂದರೆ ೧೯೪೭ರಲ್ಲಿ ನಮಗೆ ಸಿಕ್ಕಿದ್ದೇನು? ಕ್ವಿಟ್ ಇಂಡಿಯಾ ಎಂದು ಓಡಿಸಿದ್ದು ಯಾರನ್ನು? ಈಸ್ಟ್ ಇಂಡಿಯಾ ಕರೆಯದೇ ಬಂತು. ವಾಲ್ ಮಾರ್ಟ್ ಕರೆಯೋಲೆಯೊಂದಿಗೇ ಬಂತು. ಇಷ್ಟೇ ವ್ಯತ್ಯಾಸ.

ಪ್ರತಿ ಫ್ರೆಂಡ್ ಬೇಕೇ ಬೇಕಾ?



ನೀವು ಪೋಷಕರೇ? ನಿಮಗೆ ವಯಸ್ಸಿಗೆ ಬಂದ ಅಥವಾ ವಯಸ್ಸಿಗೆ ಬರುತ್ತಿರುವ ಮಗಳಿದ್ದಾಳೆಯೇ? ನೀವು ಹೆತ್ತವರ ದಾಯಿತ್ವವನ್ನು ನಿಭಾಯಿಸುವ ತುಡಿತದಲ್ಲಿರುವಿರೇ? ಆಕೆಯ ಅಗತ್ಯದ ನೆಪದಲ್ಲಿ ಮೊಬೈಲ್ ಫೋನನ್ನು ಗಿಫ್ಟ್ ರೂಪದಲ್ಲಿ ಕೊಟ್ಟಿರುವಿರೇನು? ಅಥವಾ ಕೊಡಲು ಯೋಚಿಸಿರುವಿರೇನು? ಹಾಗಾದರೆ ಈ ಘಟನೆಗಳತ್ತ ಒಮ್ಮೆ ಕಣ್ಣು ಹಾಯಿಸಿ.
ಆಕೆ ತುಮಕೂರಿನ ಸುಸಂಸ್ಕೃತ ಮನೆತನದ ಹೆಣ್ಣುಮಗಳು. ವೊದಲ ಪಿಯುಸಿ ವಿದ್ಯಾರ್ಥಿನಿ. ಹೆತ್ತವರು ೧೦ನೇ ತರಗತಿಯಲ್ಲಿ ಡಿಸ್ಟಿಂಗ್ಶನ್ ನಲ್ಲಿ ಪಾಸಾದಳೆಂದು ಮೊಬೈಲನ್ನು ಗಿಫ್ಟ್ ಕೊಡಿಸಿದರು. ಒಮ್ಮೆ ಎಲ್ಲೋ ರೀಚಾರ್ಜ್ ಮಾಡಿಸಿದ್ದಾಳೆ. ಅನಾಮಧೇಯ ಕರೆಗಳು ಬರಲಾರಂಭಿಸಿವೆ. ಮಗಳ ಜಗತ್ತು ವಿಶಾಲವಾಗಿದೆಯೆಂದು ಪೋಷಕರು ಒಳಗೊಳಗೇ ಹಿರಿಹಿರಿ ಹಿಗ್ಗಿದರು. ಆಕೆಗೆ ಕರೆ ಮಾಡುತ್ತಿದ್ದವ ತಿಪಟೂರಿನ ಗ್ಯಾರೇಜೊಂದರಲ್ಲಿ ಕೆಲಸ ಮಾಡುವ ಮುಸಲ್ಮಾನರ ಹುಡುಗ. ದಿನಕಳೆದಂತೆ ಮಗಳ ಫೋನ್ ಸಂಭಾಷಣೆ ಅತಿಯಾದವು. ಪೋಷಕರು ಹೆದರುವಷ್ಟು ಮಗಳು ಫೋನಿನಲ್ಲಿ ತಲ್ಲೀನಳಾದಾಗ ಕಡೆಗೂ ಎಚ್ಚೆತ್ತುಕೊಂಡರು. ಮೊಬೈಲ್ ಪರೀಕ್ಷಿಸಿದಾಗ ಒಂದೇ ನಂಬರಿಗೆ ಕರೆಗಳು ಬಂದಿರುವುದು , ಹೋಗಿರುವುದು ಪತ್ತೆಯಾಯಿತು. ಆ ನಂಬರಿನಾತ ಸಾಬರ ಹುಡುಗನೆಂಬುದೂ ಪತ್ತೆಯಾಯಿತು. ಪೋಷಕರು ಹಿಂದೂ ಸಂಘಟನೆಯ ಆಪ್ತರೊಬ್ಬರಲ್ಲಿ ಹೇಳಿಕೊಂಡರು . ಸಂಘಟನೆಯ ಪ್ರಮುಖರು ಹುಡುಗನ ಜಾತಕ ಜಾಲಾಡಿದಾಗ ಆತ ಕುಖ್ಯಾತ ಸಂಘಟನೆಯೊಂದರ ಕಾರ್ಯಕರ್ತನೆಂದೂ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆಂದೂ ತಿಳಿದುಬಂತು. ಪ್ರಕರಣ ಪೊಲೀಸ್ ಠಾಣೆಗೆ ಹೋಯಿತು. ಅಷ್ಟಾಗುವಾಗಲೇ ಹುಡುಗನ ಹೆತ್ತವರು ವೊಬೈಲಿನಿಂದ ದಾಖಲಾದ ಎಸ್ಸೆಮ್ಮೆಸ್‌ಗಳ ಪ್ರತಿಯನ್ನು ತೆಗೆಸಿ ಹುಡುಗಿ ಮತ್ತು ಆಕೆಯ ಕುಟುಂಬವನ್ನು ನೇರ ಹೊಣೆಗಾರರನ್ನಾಗಿ ಮಾಡಿದ್ದರು. ಏಕೆಂದರೆ ಆಘಾತಕರವಾದ ಸಂದೇಶಗಳು ಅಲ್ಲಿದ್ದವು. ಆಗತಾನೇ ಕಾಲೇಜು ಏರಿದ್ದ ತಮ್ಮ ಮುದ್ದಿನ ಮಗಳು ಬಾತ್‌ರೂಮಿನಿಂದ ಕಳುಹಿಸಿದ ಮೆಸೇಜುಗಳು, ತಾನು ಬೆತ್ತಲಾಗುತ್ತಾ ಕಳುಹಿಸಿದ ಕಮೆಂಟ್ರಿಗಳು, ಆಡಿದ ಅಶ್ಲೀಲ ಕರೆಗಳ ಪಟ್ಟಿ ದೊಡ್ಡದಿತ್ತು. ಪೋಷಕರ ಪ್ರಕಾರ ಆಕೆ ತಮ್ಮ ಮುಗ್ದ ಮಗಳೇ. ಇಲ್ಲಿ ತಪ್ಪು ಯಾರದ್ದು? ಮೆಸೇಜ್ ಕಳುಹಿಸಿದ್ದ ಮಗಳದ್ದೇ? ಪೋಲಿ ಸಾಬರ ಹುಡುಗನದ್ದೇ? ಅಥವಾ ಮೊಬೈಲ್ ಕೊಡಿಸಿದ ಪೋಷಕರದ್ದೇ? ಪ್ರೀತಿಯಿಂದ ಕೊಡಿಸಿದ ಒಂದು ಗಿಫ್ಟ್ ಬದುಕಿಗೆ ಮಾರಕವಾಗಬಹುದು ಎಂಬುದಕ್ಕೆ ಇದೊಂದು ಉದಾಹರಣೆ. ಈ ಪ್ರಕರಣದ ಹಿಂದೆ ಸಾಗಿದ ಹಿಂದೂ ಸಂಘಟನೆಗಳ ಕಾರ್ಯಕರ್ತರಿಗೆ ಇಂಥದ್ದೇ ಹಲವು ಪ್ರಕರಣಗಳು ಎದುರಾಗುತ್ತಾ ಹೋದವು. ವಿಚಿತ್ರವೆಂದರೆ ಈ ಎಲ್ಲಾ ಪ್ರಕರಣಗಳಲ್ಲೂ ಪೋಷಕರ ಪ್ರೀತಿಯೇ ಎರವಾಗಿತ್ತು. ಮಗಳ ಓದು, ಅವಳ ಗ್ರೂಪ್ ಸ್ಟಡೀ, ಮತಭೇದವಿಲ್ಲದ ಗೆಳೆತನದ ತುಡಿತ, ದೂರದ ಊರಿಂದ ಬರುವ ಕರೆ ಅಥವಾ ಸಂದೇಶದ ಕುತೂಹಲ, ಯೌವನದ ಮದ- ಹುಚ್ಚುತನಕ್ಕೆ ಹಲವು ಅಪ್ರಾಪ್ತ ಹಿಂದೂ ಹುಡುಗಿಯರು ಬಲಿಯಾಗಿದ್ದರು. ಮಂಡ್ಯದ ಗೌಡರ ಮಗಳಿಗೂ ದೂರದ ಬೀದರಿನಲ್ಲಿ ಷಾಹಿ ಅರಸರ ಕುದುರೇಸವಾರನಂತಿರುವ ಗಡ್ಡಧಾರಿಗೂ ಸಂಬಂಭ ಬೆಳೆಸಿದ್ದು, ವೀರಾಜಪೇಟೆಯ ಕೊಡವತಿಗೂ ಮೈಸೂರಿನ ಮಟನ್ ಅಂಗಡಿಯ ಒರಟನಿಗೂ ನೆಂಟಸ್ಥನ ಬೆಳೆದಿದ್ದು, ಮಲೆನಾಡಿನ ಬ್ರಾಹ್ಮಣ ಹುಡುಗಿಗೂ ಶಿವಾಜಿನಗರದ ಸೆಂಟ್ ಹಾಕಿದ ಸೇಲ್ಸ್ ಮ್ಯಾನಿಗೂ,ಮಂಗಳೂರಿನ ತುಳುವರ ಹುಡುಗಿಗೂ ಸಕಲೇಶಪುರದಲ್ಲಿ ಗೂಡ್ಸ್ ವ್ಯಾಗನ್ನಿನಲ್ಲಿ ಕಲ್ಲಿದ್ದಲು ತುಂಬಿದಂತೆ ಕಾಣುವ ಹುಡುಗನಿಗೂ ಸಂಬಂಧ ಬೆಳೆಸಿಕೊಟ್ಟಿದ್ದು ಎಲ್ಲವೂ ಮೊಬೈಲ್ ಎಂಬ ಮಾಯೆ ಎಂಬುದು ಕಂಡುಬಂತು. ಪ್ರಕರಣಗಳಲ್ಲಿ ಅಶ್ಲೀಲತೆಗಳು ಸಾಕಷ್ಟು ಹರಿದಾಡಿದ್ದವು. ಇದು ಪ್ರೇಮವೇ? ಫೋನ್ ಮೂಲಕ ಕುದುರುವ ಸಂಬಂಧಗಳಲ್ಲಿ ಬಹುಬೇಗನೆ ನಗ್ನತೆ ನುಸುಳುತ್ತಿದ್ದುದು ಪ್ರಮುಖವಾಗಿ ಕಂಡುಬಂತು.
ಇದಕ್ಕೆಲ್ಲಾ ಕಾರಣಗಳನ್ನು ಹುಡುಕಿದರೆ ಕಾಣುವುದು ಅದೇ ಲವ್ ಜಿಹಾದ್ . ಪ್ರೇಮವನ್ನು ಜಿಹಾದಿನೊಂದಿಗೆ ಸಮೀಕರಿಸಿದರೆ ಅದರ ಸ್ವರೂಪ, ಬಂಡವಾಳ ನಗ್ನತೆ-ಅಶ್ಲೀಲತೆಗಳೇ. ಕೆಲವೊಂದು ಪ್ರಕರಣಗಳಿಂದ ಅದು ರಾಜ್ಯಾದ್ಯಂತ ಸುದ್ಧಿಯಾಗುತ್ತದೆ. ನಾಲ್ಕುದಿನ ಚರ್ಚೆಯೂ ಆಗುತ್ತದೆ. ಆದರೆ ಅದು ಸದಾ ಜಾಗೃತವಾಗಿರುವುದು ಅಷ್ಟೇ ಸತ್ಯ. ಮೇಲಿನ ಪ್ರಕರಣಗಳನ್ನು ಯಾವ ಮಾಧ್ಯಮಗಳೂ ಪ್ರಕಟಮಾಡುವುದಿಲ್ಲ. ಯಾವ ಬುದ್ಧಿಜೀವಿಯೂ ಭಾಷಣ ಮಾಡುವುದಿಲ್ಲ. ಅವ್ಯಾಹತವಾಗಿ ಸಾಗಿರುವ ಅದರ ತೀವ್ರತೆ ಎಷ್ಟಿದೆಯೆಂದರೆ ಕಳೆದ ಜುಲೈನಿಂದ ದಕ್ಷಿಣ ಕರ್ನಾಟಕದ ೧೯ ಜಿಲ್ಲೆಗಳಲ್ಲಿ ಇಂಥ ೩೯೦ ಪ್ರಕರಣಗಳಿ ದಾಖಲಾಗಿವೆ. ಕಳೆದ ಜನವರಿಯಿಂದ ಮೈಸೂರು ಜಿಲ್ಲೆಯೊಂದರಲ್ಲೇ ೧೭೦೦ರಷ್ಟು ಹಿಂದೂ ಹುಡುಗಿಯರು ಕಾಣೆಯಾಗಿದ್ದಾರೆಂದು ಸರಕಾರಿ ದಾಖಲೆಗಳೇ ಹೇಳುತ್ತವೆ. ಈ ಕಾಣೆಯಾದ ಹುಡುಗಿಯರು ಎಲ್ಲಿದ್ದಾರೆಂಬುದನ್ನು ಹುಡುಕಿದರೆ ಬುರ್ಖಾದ ಒಳಗಡೆ ಬೇಯುತ್ತಿರುವ, ಮಾಂಸದ ಅಡ್ಡೆಗಳಲ್ಲಿ ನರಳುತ್ತಿರುವ, ಮಹಾನಗರಗಳ ರೈಲ್ವೇ ಸ್ಟೇಷನ್‌ಗಳಲ್ಲಿ , ಬಸ್‌ಸ್ಟ್ಯಾಂಡ್‌ಗಳಲ್ಲಿ ತುಟಿಗೆ ಗ್ರಾಮುಗಟ್ಟಲೆ ಲಿಪ್‌ಸ್ಟಿಕ್ ಹಚ್ಚಿಕೊಂಡು ಗಿರಾಕಿಗಳಿಗಾಗಿ ಕಾಯುತ್ತಿರುವ ಉದಾಹರಣೆಗಳು ತೆರೆದುಕೊಳ್ಳುತ್ತವೆ. ಅವರಲ್ಲಿ ಬಹುತೇಕರು ಸಾಬರ ಬಲೆಯಲ್ಲಿ ಸಿಕ್ಕಿ ಒದ್ದಾಡಿದವರೇ ಎನ್ನುವುದು ಲವ್‌ಜಿಹಾದ್ ಇನ್ನೂ ಜೀವಂತ ಎಂಬುದಕ್ಕೆ ಸಾಕ್ಷಿಗಳು. ಹಿಂದೂ ಹುಡುಗಿಯರನ್ನು ಬಲೆಗೆ ಬೀಳಿಸಲು ಇಂದು ಯೋಜಿತ ಕಾರ್ಯತಂತ್ರಗಳನ್ನು ನವನವೀನವಾಗಿ ಆಚರಣೆಗೆ ತರಲಾಗುತ್ತಿದೆ. ದೇವಬಂದ್‌ನಲ್ಲಿ ಹುಟ್ಟಿದ ಲವ್‌ಜಿಹಾದಿನ ಕೂಸು ಇಂದು ಪ್ರತಿಯೊಂದು ಮನೆಯ ಒಳನುಗ್ಗಲು ಹಾತೊರೆಯುತ್ತಿದೆ. ವಿಪರ್ಯಾಸವೆಂದರೆ ಹಿಂದೂ ಪೋಷಕರ ಮಧ್ಯಮ ವರ್ಗದ ನೈತಿಕತೆಯೋ ಅಥವಾ ಪ್ರತಿಷ್ಠೆಗಳೋ ಅದಕ್ಕೆ ಇಂಬು ಕೊಡುತ್ತಿವೆ. ಅತಿಯಾದ ವಿಶ್ವ್ವಾಸ ಮತ್ತು ಹಿಂದೆ ಮುಂದೆ ಯೋಚಿಸದೆ ಅಗತ್ಯಗಳ ನೆಪದಲ್ಲಿ ಮೋಜಿಗೆ ಪ್ರೇರೇಪಿಸುವ ಧಾವಂತಗಳೆಡೆಯಲ್ಲಿ ಕುಟುಂಬಗಳೇ ಕಣ್ಣೀರಿನಿಂದ ಕೈತೊಳೆಯುವ ಸಂದರ್ಭಗಳು ದಿನ ನಿತ್ಯ ವರದಿಯಾಗುತ್ತಿವೆ. ಮಂಡ್ಯ ಪಟ್ಟಣದಲ್ಲೊಂದು ಸ್ಮಾರ್ಟ್ ಸ್ಪೀಕಿಂಗ್ ಕೋರ್ಸ್ ಎಂಬ ಹೆಸರಿನ ಸಂಸ್ಥೆ . ಮಧ್ಯಮ ವರ್ಗ ಮತ್ತು ಶ್ರೀಮಂತರ ಮಕ್ಕಳೇ ಬರುವ ಆ ಸಂಸ್ಥೆಯಲ್ಲಿ ದಿನನಿತ್ಯ ಗ್ರೂಪ್ ಸ್ಟಡೀ ನೆಪದಲ್ಲಿ ಹಿಂದೂ ಹುಡುಗಿಯರು ಮತ್ತು ಮುಸಲ್ಮಾನ ಹುಡುಗರನ್ನು ಗ್ರೂಪ್‌ಗಳನ್ನಾಗಿ ಮಾಡಲಾಗುತ್ತದೆ. ಆದರೆ ಯಾವ ಕಾರಣಕ್ಕೂ ಮುಸಲ್ಮಾನ ಹುಡುಗಿಯರನ್ನು ಹಿಂದೂ ಹುಡುಗರ ಗ್ರೂಪಿಗೆ ಸೇರಿಸಲಾಗುತ್ತಿರಲಿಲ್ಲ. ದಿನ ಕಳೆದಂತೆ ಗ್ರೂಪ್ ಸ್ಟಡಿಗಳು ಅತಿರೇಕಕ್ಕೆ ಹೋಗತೊಡಗಿತು. ಹಿಂದೂ ಹುಡುಗಿಯರು ಒಬ್ಬೊಬ್ಬರಾಗಿ ಮತಾಂಧರ ಮುಷ್ಟಿಯೊಳಗೆ ಸಿಕ್ಕಿಹಾಕಿಕೊಳ್ಳಲಾರಂಭಿಸಿದರು. ಹಿಂದೂ ಸಂಘಟನೆಯ ಕಾರ್ಯಾಚರಣೆಯ ಫಲವಾಗಿ ಅವರೆಲ್ಲರೂ ಉಳಿದುಕೊಂಡರು. ಇಲ್ಲೂ ಪೋಷಕರ ನಿರ್ಲಕ್ಷ್ಯ ಎದ್ದು ಕಾಣುತ್ತಿತ್ತು. ವ್ಯಾಸಂಗದ ನೆಪದಲ್ಲಿ ಮಕ್ಕಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡುವುದು ಪೋಷಕ ಸಮುದಾಯದ ಬಹುದೊಡ್ಡ ಕೊರತೆ . ಆ ಕೊರತೆಗೆ ಭಾರೀ ಬೆಲೆಯನ್ನೇ ತೆರಬೇಕಾಗಬಹುದು ಎಂಬುದು ಇನ್ನೂ ಅರಿವಿಗೆ ಬಂದಂತಿಲ್ಲ. ಪ್ರತೀ ಫ್ರೆಂಡ್ ಬೇಕೆ ಬೇಕಣೋ ಎನ್ನುವುದು ಜಾಹೀರಾತಿನ ವಾಕ್ಯವಿರಬಹುದು. ಕೆಲವೊಮ್ಮೆ ಬದುಕಿನಲ್ಲೂ ಅದು ನಿಜವಿರಬಹುದು. ಆದರೆ ಜಿಹಾದಿಗಳ ವಿಷಯದಲ್ಲಿ ಅದು ಅಪಾಯಕಾರಿ . ಅವರ ಸ್ನೇಹದಲ್ಲಿ ನಿರ್ಮಲತೆಯ ಕುರುಹುಗಳಿರುವುದಿಲ್ಲ. ನೋಟದಲ್ಲಿ ಹಸಿವನ್ನು ಬಿಟ್ಟು ಬೇರೇನನ್ನೂ ಕಾಣುವುದಿಲ್ಲ. ತೀರಾ ಅಸಹಜವಾದ ಹಾವಭಾವಗಳಲ್ಲಿ ಸ್ನೇಹ ಹುಟ್ಟುವುದಾದರೂ ಹೇಗೆ? ಅಂಥ ಪ್ರೀತಿ ಕೊನೆ ಮುಟ್ಟುವುದಾದರೂ ಹೇಗೆ? ಇದುವರೆಗೆ ಮುಸಲ್ಮಾನ ಹುಡುಗರೊಟ್ಟಿಗೆ ಓಡಿಹೋದ ಹಿಂದೂ ಹುಡುಗಿಯರ ಬದುಕನ್ನೇ ನೋಡಿದರೂ ನಮ್ಮ ಕಣ್ಣ ಮುಂದೆ ಸುಖವಾಗಿ ದಾಂಪತ್ಯವನ್ನು ಅನುಭವಿಸಿರುವ ಒಂದೇ ಒಂದೇ ಜೋಡಿಯನ್ನೂ ಕಾಣಲಾರೆವು. ಮೂರನೇ ಮದುವೆಯಾಗಿ ಗಲ್ಲಿಯಲ್ಲಿ ಮನೆ ಮಾಡಿ ಕೀಪ್‌ಗಳಂತೆ ಇಟ್ಟುಕೊಂಡ ಹಿಂದೂ ಹುಡುಗಿಯರು, ಬ್ರಾಹ್ಮಣ ಹುಡುಗಿಯನ್ನು ಮುಸ್ಲಿಂ ಮಾಡಿ ಕೋಳಿ ಅಂಗಡಿ ಯಲ್ಲಿ ಕೂರಿಸಿದವರು, ಲಿಂಗಾಯತ ಹುಡುಗಿಗೆ ಗೋಣಿ ಚೀಲ ಹೊಲಿಯುವ ಗೂಡು ಕೊಟ್ಟವರು, ಶೆಟ್ಟರ ಹುಡುಗಿಗೆ ಪಂಕ್ಚರ್ ಅಂಗಡಿ ಇಟ್ಟುಕೊಟ್ಟ ದಾಂಪತ್ಯಗಳೇ ಎದ್ದು ಕಾಣುತ್ತವೆ. ವಿಶೇಷವೆಂದರೆ ಓಡಿಹೋಗುವ ಮೊದಲು ಇವರೆಲ್ಲರೂ " ಪ್ರತಿ ಫ್ರೆಂಡ್ ಬೇಕೆ ಬೇಕಣೋ" ಎಂದು ಲಲ್ಲೆಗರೆದವರೇ. ಆ ಹೊತ್ತಲ್ಲಿ ಪೋಷಕರಿಷ್ಟು ಗಮನ ಹರಿಸಿದ್ದರೆ , ನಿರ್ಲಕ್ಷ ತಾಳದೇ ಇದ್ದಿದ್ದರೆ ಮಕ್ಕಳ ಬದುಕು ತಮ್ಮ ಕಣ್ಣ ಮುಂದೆಯೇ ನರಕವಾಗುವುದನ್ನಾದರೂ ತಪ್ಪಿಸಬಹುದಿತ್ತು.
ಇನ್ನು ಶ್ರೀಮಂತ ಮನೆಗಳ ಮಕ್ಕಳ ಕಥೆಗಳೇ ಬೇರೆ. ಮಕ್ಕಳ ದಿನಚರಿಯನ್ನು ಪ್ರಶ್ನಿಸುವುದು ಅಲ್ಲಿ ಶಿಷ್ಟಾಚಾರವಲ್ಲ ಎಂಬ ಭಾವನೆ. ಅನಾಚಾರ ಬೆಳೆಯಲು ಇನ್ನು ತಡವೆಲ್ಲಿದೆ?
ಹಾಸನ ಮೆಡಿಕಲ್ ಕಾಲೇಜು ಸುತ್ತ ಒಮ್ಮೆ ಸುತ್ತಾಡಿ ಬರಬೇಕು. ಡಾಕ್ಟರ್ ಹುಡುಗಿಯರ ಹಿಂದೆ ಲೋಕಲ್ ಮುಸಲ್ಮಾನ ಹುಡುಗರ ಪಟಾಲಮ್ಮು ಸುತ್ತುತ್ತಿರುತ್ತವೆ. ಕೆಲವು ತಿಂಗಳುಗಳಿಂದೀಚೆಗೆ ಇಲ್ಲಿ ೧೮ ಲವ್ ಜಿಹಾದ್ ಪ್ರಕರಣಗಳು ಪತ್ತೆಯಾಗಿದೆ. ಇವರಲ್ಲಿ ಬಹುತೇಕ ಹುಡುಗಿಯರು ಉತ್ತರ ಭಾರತದವರು. ಅವರೆಲ್ಲರ ಪೋಷಕರ ಪ್ರಕಾರ ತಮ್ಮ ಮಗಳು ದೂರದೂರಿನಲ್ಲಿ ವ್ಯಾಸಂಗದಲ್ಲಿ ಮುಳುಗಿರುವ ಡಾಕ್ಟರುಗಳು. ಲವ್ ಜಿಹಾದಿನಲ್ಲಿ ಎರಡೇ ಎರಡು ಪರಿಸ್ಥಿತಿಗಳು ಎದುರಾಗುತ್ತವೆ.ಒಂದು ಅಪ್ಪಟ ಮತಾಂಧತೆ, ಇನ್ನೊಂದು ಅದಕ್ಕಿರುವ ದಾರಿಗಳು ಮತ್ತು ತಂತ್ರಗಳು. ಹರೆಯದ ದೌರ್ಬಲ್ಯಗಳು, ಬಿಸಿರಕ್ತದ ಭಾವನೆಗಳಿಗೆ ಮನಸ್ಸು ಕುರುಡಾಗುವುದು ಲವ್ ಜಿಹಾದಿನ ದಾಳಗಳಾದರೂ ಹರೆಯವೂ ಇಲ್ಲದ ಬಿಸಿರಕ್ತದ ಹಂಗೂ ಇಲ್ಲದ ಪೋಷಕರಿಗೇನಾಗಿದೆ? ಮಗಳ ಫೋನ್ ಏಕೆ ಸದಾ ಕಾರ್ಯನಿರತವಾಗಿರುತ್ತದೆ? ಗ್ರೂಪ್‌ಸ್ಟಡಿಗಳ ಆವಶ್ಯಕತೆಯೇನು? ಶೈಕ್ಷಣಿಕ ಪ್ರವಾಸಗಳಲ್ಲಿ ವಹಿಸಬೇಕಾದ ಎಚ್ಚರಿಕೆಗಳೇನು ಎಂಬುದರ ಬಗ್ಗೆ ತಿಳಿಹೇಳದೆ ಇರುವುದೂ ಒಂದೇ ಅಳತೆ ಸರಿ ಇಲ್ಲದ ರೆಡಿಮೆಡ್ ಬಟ್ಟೆಗಳನ್ನು ಕೊಂಡುತರುವುದೂ ಒಂದೇ ಅಲ್ಲವೇ? ಹೀಗೆ ಮಗಳಿಗೆ "ಸಂಪೂರ್ಣ ಸ್ವಾತಂತ್ರ್ಯ"ವನ್ನು ಕೊಟ್ಟ ಮೈಸೂರಿನ ಕುಟುಂಬವೊಂದು ಬಜರಂಗದಳದ ಪ್ರಮುಖರೊಟ್ಟಿಗೆ ಗೋಳಾಡುತ್ತಿದ್ದರು. ಉತ್ತಮ ಡಿಗ್ರಿಪಡೆದು ಇನ್ಫೋಸಿಸ್‌ನಲ್ಲಿ ಕೆಲಸ ಗಿಟ್ಟಿಸಿಕೊಂಡ ಮಗಳು ಕಾರ್ಪೋರೇಟ್ ವಲಯದ ಶೋಕಿಗೆ ಮರುಳಾಗಿದ್ದು. ಮುಸಲ್ಮಾನ ಹುಡುಗನೊಟ್ಟಿಗೆ ಮದುವೆಯ ಪ್ರಸ್ತಾಪವನ್ನಿಟ್ಟಿದ್ದು. ವಿಧಿ ಇಲ್ಲದೆ ಪೋಷಕರು ಮದುವೆಗೆ ಒಪ್ಪಿದ್ದು, ಮದುವೆ ಹತ್ತಿರ ಬಂದಾಗ ಹುಡುಗಿಗೆ ಅಪಘಾತವಾಗಿ ಕಾಲು ಕಳೆದುಕೊಂಡಿದ್ದು, ಅದುವರೆಗೆ ಅಮರಾ ಮಧುರಾ ಪ್ರೇಮ ಎಂದು ಆಲಾಪಿಸಿದ್ದ ಹುಡುಗ ಊರುಬಿಟ್ಟಿದ್ದು, ಆ ಕಾರಣದಿಂದ ತನ್ನ ಮಗಳಿಗೆ ಇಂದಿಗೂ ಗಂಡು ಸಿಗದೆ ಪರದಾಡುವಂತಾದ ಕಥೆಯನ್ನು ಅವರು ಹೇಳುತ್ತಿದ್ದರು. ವಾಸ್ತವವಾಗಿ ಇದರಲ್ಲಿ ತಪ್ಪು ಯಾರದ್ದು?
ಇತ್ತೀಚೆಗೆ ಸುಪ್ರೀಂ ಕೋರ್ಟು ಹೆಣ್ಣಿಗೆ ಆಸ್ತಿಯ ಪಾಲಾಗಬೇಕು ಎಂಬ ತೀರ್ಪನ್ನಿತ್ತಿತು. ಈಗ ಲವ್ ಜಿಹಾದಿಗಳ ಕಣ್ಣು ಹೆಣ್ಣಿನೊಟ್ಟಿಗೆ ಅವಳ ಆಸ್ತಿಯ ಮೇಲೂ ಬಿದ್ದಿದೆ ಎನ್ನುತ್ತಾರೆ. ಸಂಘಟನೆಯ ಕಾರ್ಯಕರ್ತರು. ಹೆಣ್ಣು ಹೆತ್ತವರಿನ್ನು ಮಗಳನ್ನೂ ಕೊಟ್ಟು ಆಸ್ತಿಯನ್ನೂ ಕಳೆದುಕೊಳ್ಳಲಿದ್ದಾರೆ ಎನ್ನುವುದು ಮತ್ತೊಂದು ಆಘಾತಕರ ಸಂಗತಿ. ಇನ್ನು ಲಾಕರಿನಲ್ಲಿಟ್ಟ ಒಡವೆಗಳು, ಮಗನಿಗೆಂದು ಇಟ್ಟಿದ್ದ ತೋಟಗಳು, ರಿಲಯನ್ಸಿನ ಶೇರು, ಸಾಲಮಾಡಿ ತೆಗೆದುಕೊಂಡ ಸೈಟುಗಳು ಮುಸಲ್ಮಾನ ಅಳಿಯನ ಪಾಲಾಗಬಹುದು. ಮಗಳ ವೊಬೈಲ್ ಹರಟೆಯನ್ನು ಗಮನಿಸದ ತಪ್ಪಿಗೆ ಮನೆತನದ ಮಾನವನ್ನೂ ಆಸ್ತಿಯನ್ನೂ ಕಳೆದುಕೊಂಡು ಕುಟುಂಬ ಬೀದಿಗೆ ಬರಬಹುದು.
ಈಗ ಹೇಳಿ ಪ್ರತಿ ಫ್ರೆಂಡ್ ಬೇಕೇ ಬೇಕಾ?

ಮುಚ್ಚುವ ಮಾತಿನ ಹಿಂದೆ ಕೀಳರಿಮೆಯಿದೆಯೇ?


ಕ್ಕಳ ಶಿಕ್ಷಣದ ಬಗ್ಗೆ ಓರ್ವ ಶಿಕ್ಷಣ ಮಂತ್ರಿ ಆಡುವ ಮಾತುಗಳಿಗಿಂತ ಓರ್ವ ತಂದೆಯಾಡುವ ಮಾತುಗಳಲ್ಲೇ ಹೆಚ್ಚು ತೂಕವಿರುತ್ತದೆ. ಅಧಿಕೃತತೆಯಿರುತ್ತದೆ. ಹಾಗಾಗಿ ಕಾಗೇರಿಯವರು ಕನ್ನಡ ಮಾಧ್ಯಮ ಮತ್ತು ಸರಕಾರಿ ಶಾಲೆ ಎಂದಾಗಲೆಲ್ಲಾ ಏನೋ ಹೇಳುತ್ತಿದ್ದಾರೆ ಎಂದು ಅನಿಸುವುದಿಲ್ಲ. ಶಿಕ್ಷಣದಲ್ಲಿ ನಿಜವಾಗಿಯೂ ಏನೋ ಸಮಸ್ಯೆಯಿದೆ ಎಂದೇ ಅನಿಸುತ್ತದೆ. ಈ ಅನಿಸಿಕೆ ಗಾಂಧಿ ಪ್ರತಿಮೆಯಡಿಯಲ್ಲಿ ಕುಳಿತು ಬೊಬ್ಬಿರಿಯುವ ಜನರಿಂದಲೂ ಅನಿಸುವುದಿಲ್ಲ. ಪಂಪ-ಕುಮಾರವ್ಯಾಸರನ್ನು ಬ್ರೆಕ್ಟ್-ಕೀಟ್ಸ್‌ಗಳವರೆಗೆ ಕೊಂಡೊಯ್ದು ಅರ್ಥವಾಗದ ಭಾಷೆಗಳಲ್ಲಿ ವಿಮರ್ಶೆ ಮಾಡುವ ತಜ್ಞರ ಭಾಷಣಗಳಿಂದಲೂ ಅನಿಸುವುದಿಲ್ಲ. ಟಿವಿ ಚ್ಯಾನಲ್‌ಗಳ ಪ್ಯಾನಲ್ ಚರ್ಚೆಗಳಿಂದಲೂ ಅನಿಸುವುದಿಲ್ಲ. ಆದರೆ ಕಾಗೇರಿಯವರ ಮಾತುಗಳಿಂದ ಅನಿಸುತ್ತದೆ. ಏಕೆಂದರೆ ಶಿಕ್ಷಣ ಸಚಿವ ಕಾಗೇರಿ ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವ ಅಪ್ಪನೂ ಆಗಿರುವುದರಿಂದ ಅವರು ಶಿಕ್ಷಣದ ಬಗ್ಗೆ ಮಾತಾಡುವಾಗಲೆಲ್ಲಾ ರಾಜ್ಯ ಅದನ್ನು ಆಲಿಸುತ್ತದೆ. ಕಡಿಮೆ ಮಕ್ಕಳಿರುವ ಸರಕಾರಿ ಶಾಲೆಗಳನ್ನು ಮುಚ್ಚಲಾಗುವುದು ಎಂದು ಹೇಳಿದಾಗ ಕೂಡ ರಾಜ್ಯ ಅದನ್ನು ವಿಶೇಷವಾಗಿ ಆಲಿಸಿತ್ತು. ಅವರ ಮಾತುಗಳಿಗೆ ಅಧಿಕೃತತೆಯೊಟ್ಟಿಗೆ ಪಾಲಿಸಿಯೇಬಿಡುವ ಗುಣಲಕ್ಷಣಗಳಿರುವುದರಿಂದ ಅದಕ್ಕೆ ವಿರೋಧಗಳು ವ್ಯಕ್ತವಾದವು. ಆಲಿಸಿದವರು ತಮ್ಮ ತಮ್ಮ ಶಕ್ತ್ಯಾನುಸಾರ ಚರ್ಚೆ ನಡೆಸಿದರು. ವಿವಾದಗಳಾದವು. ಗಲಾಟೆಗಳಾದವು. ಸರಕಾರ ಕೊನೆಗೆ ಮುಚ್ಚಲಾರೆವು ಎಂದಿತು.
ಸರಕಾರಿ ಶಾಲೆಗಳಿಗೆ ಇಂದು ಮಕ್ಕಳ ಕೊರತೆ ಇರುವುದು ಕೇವಲ ಒಂದೆರಡು ಜಿಲ್ಲೆಗಳ ಸಂಗತಿಗಳಲ್ಲ. ಖಾಸಗಿಯವರ ಅಬ್ಬರ, ಇಲಾಖೆಯವರ ಮುಠಾಳತನ, ಜನರ ಮರಳುತನ ಮೊದಲಾದ ಕಾರಣಗಳಿಂದ ಇಂದು ಬಹುತೇಕ ಸರಕಾರಿ ಶಾಲೆಗಳಲ್ಲಿ ಹತ್ತು ಮಕ್ಕಳೂ ಇಲ್ಲ. ಮುಂದಿನ ವರ್ಷದಿಂದ ಆರು-ಏಳು ಮಕ್ಕಳಿರುವ ಶಾಲೆಗಳೂ ಬಹಳಷ್ಟಿವೆ. ಅವುಗಳಲ್ಲಿ ಸಚಿವರು ಹೇಳಿರುವ, ಮುಚ್ಚಲು ಯೋಗ್ಯವಾಗ ಹತ್ತಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳಷ್ಟೇ ಅಲ್ಲದೆ ಹದಿಮೂರು, ಹದಿನಾಲ್ಕು ಮಕ್ಕಳ ಶಾಲೆಗಳೇ ಹೆಚ್ಚಿವೆ. ಆದರೆ ಸಚಿವರು ಅವುಗಳ ಬಗ್ಗೆ ಹೇಳಲಿಲ್ಲ. ಹತ್ತಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳನ್ನು ಪಕ್ಕದ ಶಾಲೆಯೊಟ್ಟಿಗೆ ವಿಲೀನಗೊಳಿಸಿ, ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಿ "ಒಗ್ಗಟ್ಟಿನಲ್ಲಿ ಬಲವಿದೆ" ಎಂದು ನೀತಿ ಪಾಠ ಮಾಡುವುದು ಕಾಗೇರಿಯವರ ಮಾತಿನ ಮತಿತಾರ್ಥವಾಗಿರಬಹುದು. ಹೊರನೋಟಕ್ಕೆ ಮಕ್ಕಳೇ ಇಲ್ಲದಿದ್ದರೆ ಇಂಥ ಶಾಲೆಗಳನ್ನೇನು ಮ್ಯೂಸಿಯಂ ಮಾಡುವುದೇ ಎಂಬ ಪ್ರಶ್ನೆಯೂ ಬಾರದಿರದು. ಆದರೆ ಇದು ಸರಕಾರಿ ಮಾತುಗಳು. ಪ್ರತಿ ಮಾತಿನ ಹಿಂದೆ ಸಾವಿರಾರು ಕಥೆಗಳಿರುತ್ತದೆ. ಇಂದಿನ ಪರಿಸ್ಥಿತಿ ಹಾಗೆಯೇ ಇರಬಹುದು. ಆದರೆ ಅದರ ಹಿನ್ನಲೆಯೂ ಯೋಚಿಸತಕ್ಕ ಸಂಗತಿಯೇ. ಆದರೆ ಕನ್ನಡದ ಕಟ್ಟಾಳುಗಳೆಂಬುವವರು ಅದರ ಜಾಡು ಹಿಡಿದು ಹೋಗಲಾರರು. ಅಲ್ಲಿ ವಿಲೀನಕ್ಕಿಂತ ಮುಚ್ಚುವಿಕೆಗೇ ಪ್ರಾಶಸ್ತ್ಯ. ಪ್ರಸ್ತತ ಚಳವಳಿ -ಪ್ರತಿಭಟನೆಗಳು ಆ ನಿಟ್ಟಿನಲ್ಲೇ ನಡೆದವು.
ಸರಕಾರಿ ಶಾಲೆಗಳು ಹೀಗೇಕಾಯಿತು ಎಂದರೆ ಕಾಣುವುದು ಚಿತ್ರ ವಿಚಿತ್ರವಾದ ಸಂಗತಿಗಳು. ಸದ್ಯದ ಶಿಕ್ಷಣ ಕಾನೂನಿನ ಪ್ರಕಾರ ಪ್ರತಿ ಒಂದು ಕಿ.ಮೀ ಗೊಂದರಂತೆ ಕಿರಿಯ ಪ್ರಾಥಮಿಕ ಶಾಲೆಗಳೂ ಪ್ರತೀ ೨ ಕಿ.ಮೀ ಗೊಂದರಂತೆ ಹಿರಿಯ ಪ್ರಾಥಮಿಕ ಶಾಲೆಗಳೂ ಇರಬೇಕೆಂಬ ನಿಯಮವಿದೆ. ಅಂದರೆ ಮಗುವಿಗೆ ಮನೆಯ ಕೂಗಳತೆಯ ದೂರದಲ್ಲೇ ಶಾಲೆ ಇರಬೇಕು, ಮಗುವಿಗೆ ತ್ರಾಸವಾಗದೆ ಶಾಲೆಗೆ ಬರಬೇಕು, ಅದಕ್ಕೆ ತೊಂದರೆಯಾಗಬಾರದೆಂದು ಯಾರೋ ಪುಣ್ಯಾತ್ಮರು ರೂಪಿಸಿದ ಕಾನೂನದು. ಅಂದರೆ ಪ್ರತಿ ೨೦೦ ಜನಸಂಖ್ಯೆಗೊಂದು ಶಾಲೆ ಇರಲೇ ಬೇಕು. ಈ ಕಾನೂನಿನನ್ವಯ ರಾಜ್ಯಾದ್ಯಂತ ಸರಕಾರಿ ಶಾಲೆಗಳು ಆರಂಭಗೊಂಡವು. ರಾಜಕಾರಣಿಗಳು ಊರಿಗೆ ಬಂದವರೇ ಭಾಷಣದ ಮಧ್ಯದಲ್ಲೇ ಏನೋ ನೆನಪಾದವರಂತೆ ಶಾಲೆಗಳನ್ನ್ನು ಮಂಜೂರು ಮಾಡಿಯೇಬಿಟ್ಟರು. ಅದಾಗಲೇ ಆ ಊರಿನಲ್ಲಿ ಶಾಲೆಗಳಿದ್ದರೂ ಕಿ.ಮೀ ಅಳತೆಯಲ್ಲಿ ಕಟ್ಟಡಗಳು ಎದ್ದುನಿಂತವು. ಪಕ್ಷದ ಕಾರ್ಯಕರ್ತರಿಗೆ ಕಾಂಟ್ರಾಕ್ಟುಗಳು ಪ್ರಧಾನವಾದವು. ಶಾಲಾಕಟ್ಟಡವನ್ನು ಅವರಿಂದಲೇ ಉದ್ಘಾಟನೆಯನ್ನೂ ಮಾಡಿಸಲಾಗಿ ಮಗ್ಗಿ ಪುಸ್ತಗಳೂ ಬಂಡಲಾಗಿ ಬಂದು ಬಿದ್ದವು. ಇಂದು ಮುಚ್ಚಲು ಅರ್ಹವಾದ ಹತ್ತು ಮಕ್ಕಳಿಗಿಂತ ಕಡಿಮೆ ಇರುವ ಶಾಲೆಗಳೆಲ್ಲವೂ ಹೀಗೆ ಭಾಷಣದಿಂದ ನಿರ್ಮಾಣವಾದ ಸರಕಾರಿ ಶಾಲೆಗಳು ಎಂಬುದು ವಿಪರ್ಯಾಸ.
ಇದು ದ.ಕನ್ನಡದಲ್ಲಿ ಕಳೆದ ಆರೇಳು ವರ್ಷಗಳ ಹಿಂದೆ ನಡೆದ ಒಂದು ಘಟನೆ.
ಬಂಟವಾಳ ತಾಲೂಕಿನ ದೇವಸ್ಯಮೂಡೂರು ಎಂಬ ಗ್ರಾಮದಲ್ಲಿ ಸರಕಾರಿ ಶಾಲೆಯೊಂದು ಹಿಂದಿನಿಂದಲೇ ವ್ಯವಸ್ಥಿತವಾಗಿ ನಡೆಯುತ್ತಿತ್ತು. ಮಕ್ಕಳೂ ಯಥೇಚ್ಛವಾಗಿದ್ದು ಸುತ್ತು ಮುತ್ತಲ ಊರುಗಳಿಂದಲೂ ಶಾಲೆಗೆ ಬರುತ್ತಿದ್ದವು. ಆಟ, ಪಾಠಗಳಲ್ಲೆಂದೂ ಕೊರತೆ ಬಂದಿರಲಿಲ್ಲ. ಅದೇ ಸಮಯದಲ್ಲಿ ಸೋಲಿನ ಸುಳಿಗೆ ಸಿಲುಕಿದ್ದ ಪುಡಾರಿಯೊಬ್ಬರು ಅಕಸ್ಮಾತ್ ಚುನಾವಣೆಯಲ್ಲಿ ಗೆದ್ದು ಬಂದರು. ಗೆದ್ದಮೇಲೆ ಇನ್ನುಂಟೇ ? ಆಶ್ವಾಸನೆಗಳ ಸುರಿಮಳೆಗಳಾದವು. ಮಾನ ಸಮ್ಮಾನಗಳಲ್ಲೆಲ್ಲಾ ಯೋಜನೆಗಳ ಮಂಜೂರು , ಅನುದಾನಗಳ ಕಾರ್ಯಕ್ರಮಗಳಾದವು. ಅಂದಾದುಂದಿ ಕಾರ್ಯಕ್ರಮಗಳಿಗೆ ಕಾಳಜಿಯ ಹಂಗುಂಟೇ ಎನ್ನುವಂತೆ ದೇವಸ್ಯ ಮೂಡೂರು ಗ್ರಾಮದ ಪಕ್ಕದ ಊರುಗಳಾದ ಮಣಿ ನಾಲ್ಕೂರು ಮತ್ತು ನಮ್ಕೆಮಾರು ಗ್ರಾಮಗಳಿಗೆ ಶಾಲೆಗಳೆರಡು ಮಂಜೂರಾದವು. ಕಿ.ಮೀ ಲೆಕ್ಕದಲ್ಲಿ ಆ ಗ್ರಾಮಗಳು ಸರಕಾರಿ ನಿಯಮಗಳಿಗೆ ಸರಿಹೊಂದುತ್ತಿದ್ದವು. ಹೀಗೆ ಮಂಜೂರಾದ ಶಾಲೆಗಳಿಗೆ ಕಟ್ಟಡಗಳೂ ಎದ್ದು ,ಶಿಕ್ಷಕರೂ ನೇಮಕವಾದರೂ ಹತ್ತು ಮಕ್ಕಳೂ ಸಿಗಲಿಲ್ಲ. ಪಕ್ಕದ ಊರಿನ ಹಳೆಯ ಶಾಲೆಯಿಂದ ಮಕ್ಕಳನ್ನು ತಂದು ತರಗತಿಗಳನ್ನು ತುಂಬಲಾಯಿತು. ಈ ಶಾಲೆ ಸರಿಯಾಗಿ ಐದು ವರ್ಷವೂ ನಡೆಯಲಿಲ್ಲ. ಇದೀಗ ಮುಚ್ಚಬಹುದು ಎಂಬ ಶಾಲೆಗಳ ಪಟ್ಟಿಯಲ್ಲಿ ಈ ಮೂರೂ ಶಾಲೆಗಳು ಇವೆ. ಖಾಸಗಿ ಶಾಲೆಗಳು ನಾಯಿಕೊಡೆಗಳಂತೆ ಏಳುತ್ತಿವೆ ಎನ್ನುವ ವಾದ ಹೇಗೆ ಸರಿಯೋ ಸರಕಾರಿ ಶಾಲೆಗಳೂ ನಾಯಿಕೊಡೆಗಳಂತಾಗಬಾರದು ಎಂಬುದೂ ಕೂಡ ನಿಜವೇ. ಏಕೆಂದರೆ ಕಿಮೀ ಲೆಕ್ಕದಲ್ಲಿ ಶಾಲೆಗಳ ಸ್ಥಾಪನೆಯಾಗಬೇಕು ಎಂಬ ನಿಯಮವೇ ಒಂಥರಾ ಪುಸ್ತಕ ಓದಿ ಅಡುಗೆ ಮಾಡಿದಂತೆ . ಪ್ರತೀ ಸಂದರ್ಭದಲ್ಲೂ ವೈಜ್ಞಾನಿಕ ಎನ್ನಲು ಸಾಧ್ಯವಿಲ್ಲ. ಮಲೆನಾಡು ಮತ್ತು ಕರಾವಳಿಯ ಕೆಲವು ಭಾಗದಲ್ಲಿ ಇಂದಿಗೂ ಹದಿನೈದು ಇಪ್ಪತ್ತು ಕೀಮೀ ವ್ಯಾಪ್ತಿಯಲ್ಲಿ ಸರಕಾರಿ ಶಾಲೆಗಳಿಲ್ಲದಿರುವ ಪ್ರದೇಶಗಳೂ ಇವೆ. ಶಿಕ್ಷಣ ಸಚಿವರ ಹೇಳಿಕೆಯಿಂದ ಪುಳಕಿತಗೊಂಡ ಖಾಸಗಿ ಶಾಲೆಗಳು ಈಗಾಗಲೇ ಸುಬ್ರಹ್ಮಣ್ಯ ಪರಿಸರದಲ್ಲಿ ಸ್ಕೂಲ್ ವ್ಯಾನ್ ಗಳಿಗೆ ಬುಕ್ಕಿಂಗ್ ನಡೆಸಿವೆಯಂತೆ. ವ್ಯಾನ್‌ನಲ್ಲಿ ಕಳುಹಿಸಿ ಖಾಸಗಿಯಲ್ಲಿ ಓದಿಸಲಾಗದ ಪೋಷಕರು ದಿಕ್ಕುತೋಚದಂತಾಗಿದ್ದಾರಂತೆ.
ಇನ್ನು ಮುಚ್ಚುವ ಸಂದರ್ಭ ಬಂದಾಗಲೆಲ್ಲಾ ಏಕೆ ಸರಕಾರಗಳಿಗೆ ಖಾಸಗಿ ಶಾಲೆಗಳು ಕಾಣುವುದಿಲ್ಲ. ಸರ್ವರಿಗೂ ಶಿಕ್ಷಣವನ್ನು ಒದಗಿಸುವ ಹಕ್ಕು ಸರಕಾರದ್ದು. ಒಂದು ಶಾಲೆಯನ್ನು ಮುಚ್ಚಬೇಕು ಎಂಬ ಪ್ರಶ್ನೆ ಬರುವುದು ಶಿಕ್ಷಣ ವ್ಯಾಪಾರಿಕರಣಗೊಂಡಾಗ ಮಾತ್ರ. ಮಕ್ಕಳ ಸಂಖ್ಯೆ ಕಡಿಮೆ, ವೆಚ್ಚ ಹೆಚ್ಚು ಎಂದೆಲ್ಲಾ ನೆಪಗಳನ್ನು ಕೊಡುವುದು ಶಿಕ್ಷಣದ ಹಕ್ಕಿಗೆ ವಿರುದ್ಧವಾದ ನಿಯಮಗಳು. ಸರಕಾರಕ್ಕೆ ಶಿಕ್ಷಣದ ಬಗ್ಗೆ ಕಾಳಜಿ ಇದ್ದಿದ್ದೇ ಆದರೆ ಹಲವು ಖಾಸಗಿ ಶಾಲೆಗಳನ್ನೇ ಮುಚ್ಚಬೇಕು. ಅಥವಾ ಏಕರೂಪದ ಶಿಕ್ಷಣ ಸೂತ್ರವನ್ನು ಅಳವಡಿಸಬೇಕು. ಏಕೆಂದರೆ ೧೯೯೪ ರ ಅನಂತರ ಕರ್ನಾಟಕದಲ್ಲಿ ಎಲ್ಲಿಯೂ ಇಂಗ್ಲಿಷ್ ಮಾಧ್ಯಮದ ಶಾಲೆಗಳಿಗೆ ಅನುಮತಿಯಿಲ್ಲ. ಆದರೆ ಕಳೆದ ನಾಲ್ಕೈದು ವರ್ಷಗಳಿಂದ ಸ್ಥಾಪನೆಯಾದ ಖಾಸಗಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಎಗ್ಗಿಲ್ಲದೆ ನಡೆಯುತ್ತಿದೆ. ಅನುಮತಿ ಇಲ್ಲದೆ ಮಾಡುವ ಭೋದನೆ ಸರಕಾರಕ್ಕೆ ಕಾಣುತ್ತಿಲ್ಲವೇಕೆ? ಇಂಥ ಸಂಗತಿಗಳನ್ನಿಟ್ಟುಕೊಂಡು ಸರಕಾರಿ ಶಾಲೆಗಳನ್ನು ಮುಚ್ಚಲು ಹೇಗಾದರೂ ಮನಸು ಬರುತ್ತವೆ? ಸರಕಾರವೇ ಪ್ರತಿ ವರ್ಷ ಶಾಲೆಗಳಿಗೆ ಪಠ್ಯಪುಸ್ತಕಗಳನ್ನು ಪೂರೈಸುತ್ತವೆ. ಹೀಗೆ ಸರಕಾರ ಪೂರೈಸಿದ ಪಠ್ಯಗಳನ್ನೇ ಭೋದಿಸದಿದ್ದ ಮೇಲೆ ಅಂಥ ಖಾಸಗಿಯವರನ್ನು ಇಟ್ಟುಕೊಳ್ಳುವುದೇಕೆ? ಇಲಾಖೆ ಅಂಥವನ್ನು ಮುಚ್ಚುವುದು ಬಿಡಿ ಅನುಮತಿಯನ್ನು ಕೊಡಲು ವಿಳಂಭವನ್ನೂ ಮಾಡುವುದಿಲ್ಲ. ಸರಕಾರ ಯಾವುದೇ ಬರಲಿ ಅಧಿಕಾರ ಶಾಹಿಯ ದುರಾಡಳಿತವನ್ನು ನೋಡಬೇಕೆಂದರೆ ಶಿಕ್ಷಣ ಇಲಾಖೆಗೇ ಬರಬೇಕು. ಇಲ್ಲಿ ಅಧಿಕಾರಿಗಳ ಕೈಬೆಚ್ಚಗೆ ಮಾಡಿದರೆ ಕನ್ನಡ ಶಾಲೆಯ ಅನುಮತಿಯಲ್ಲೇ ಇಂಗ್ಲಿಷನ್ನು ಪಾಠ ಮಾಡುವುದು ಹೇಗೆಂಬ ತಂತ್ರವನ್ನೂ ಹೇಳಿಕೊಡುತ್ತಾರೆ ಎಂಬ ಮಾತಿದೆ. ಇನ್ನು ನೇಮಕಾತಿ ಎಂಬುದು ಕುಂಟು ಕುದುರೆಯೇ ಸೈ. ಇಂಥಿಂಥ ವರ್ಷ ಇಂಥಿಂಥ ಶಾಲೆಯಲ್ಲಿ ಇಂಥಿಂಥ ಶಿಕ್ಷಕರು ನಿವೃತ್ತರಾಗುತ್ತಾರೆ ಎಂದು ಗೊತ್ತಿದ್ದರೂ ಹೊಸ ನೇಮಕಾತಿ ಶಿಘ್ರವಾಗಿ ಆಗುವುದಿಲ್ಲ. ಇನ್ನು ಸರಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ಹೇಗೆ ಸಾಧ್ಯ? ಇದೆಲ್ಲದರ ನಡುವೆಯೂ ಮುಚ್ಚುವ ಮನಸ್ಸು ಬರುವುದಾದರೂ ಹೇಗೆ ?
ಸಮಾಜದ ಮಾನಸಿಕತೆ ಇಂದು ವಿಪರೀತವಾದ ಕೀಳರಿಮೆಯಿಂದ ಬಳಲುತ್ತಿದೆ. ಆದರೆ ಸರಕಾರವೂ ಅದಕ್ಕೆ ಇಂಬು ಕೊಡುವುದು ಸರಿಯೇ? ಇಂದು ಸರಕಾರಕ್ಕೆ ಶಿಕ್ಷಣ ಇಲಾಖೆಯನ್ನು ಅತ್ಯದ್ಭುತವಾಗಿ ರೂಪಿಸಬಲ್ಲ ತಾಕತ್ತಿದೆ. ಖಾಸಗಿ ಸಂಸ್ಥೆಗಳಿಗಿಂತಲೂ ಪ್ರತಿಭಾವಂತರಾದ ಶಿಕ್ಷಕರು ಸರಕಾರಿ ಸಂಸ್ಥೆಗಳಲ್ಲಿದ್ದಾರೆ. ಸಂಸ್ಕಾರಯುತ ಪೀಳಿಗೆಯನ್ನು ನಿರ್ಮಿಸಬಲ್ಲ ಅನಿವಾರ್ಯತೆಯೂ ಇರುವ ಈ ಹೊತ್ತಿನಲ್ಲಿ ಸರಕಾರಕ್ಕೇ ದ್ವಂದ್ವಗಳಿದ್ದರೆ ನಿರೀಕ್ಷೆಗಳು ಇನ್ನಾರ ಮೇಲೆ ಇಟ್ಟುಕೊಳ್ಳೋಣ? ನಿಜವಾಗಿಯೂ ಸರಕಾರಿ ಶಾಲಾ ಮಕ್ಕಳಲ್ಲಿ ಇಂದಿಗೂ ಜೀವಂತಿಕೆ ಇದೆ. ಅವರಿಗೆ ಬಸವಣ್ಣ ಗೊತ್ತಿದ್ದಾನೆ. ಬಾಪೂಜಿ ಪರಿಚಯವಿದ್ದಾನೆ. ಕಗ್ಗದ ಪದ್ಯಗಳು, ತಿರುಕನ ಕನಸ್ಸುಗಳು ಅವರಿಗೆ ಗೊತ್ತಿದೆ. ಅದನ್ನು ಮತ್ತಷ್ಟು ಪ್ರಭಾವಿಗೋಳಿಸುವ ಪ್ರಯತ್ನ ಮಾಡಬೇಕಲ್ಲದೆ ಮುಚ್ಚುವ ಮಾತನ್ನಾಡುವುದೇ?
ಒಂದು ವೇಳೆ ಸರಕಾರಿ ಶಾಲೆಗಳನ್ನು ಮುಚ್ಚುವುದೇ ಆದರೆ ಪ್ಯಾಕೇಜಿನಂತೆ ಶಿಕ್ಷಣವನ್ನು ಮಾರುವವರಿಗೆ ಲಾಭವೇ ಆಗುತ್ತದೆ. ಸ್ಕೂಲ್ ಡೇ ನಲ್ಲಿ ಝಾನ್ಸಿರಾಣಿಯ ವೇಷ ಹಾಕಿಸಿ ಇಂಗ್ಲಿಷಿನಲ್ಲಿ ಡೈಲಾಗ್ ಹೊಡೆಸುವ, ಎಕಾನ್ ಹಾಡಿಗೆ ಡ್ಯಾನ್ಸ್ ಮಾಡಿಸುವ, ಹೋಮ್ ವರ್ಕ್ ಕೊಟ್ಟು ಹೊರೆಯನ್ನು ಕಮ್ಮಿ ಮಾಡಿಕೊಳ್ಳುವ ,ರೈನ್‌ರೈನ್ ಗೋ ಅವೇ ಎಂದು ಮಳೆರಾಯನನ್ನೇ ದೂರ ಓಡಿಸುವ ಪದ್ಯವನ್ನು ಕಲಿಸುವ, ಕುಣಿಯುವ ವಯಸ್ಸಲ್ಲಿ ಒತ್ತಡವನ್ನು ಬೆಳೆಸುವ, ಹಳಸಿದ ಸ್ನ್ಯಾಕ್ಸ್ ಬಾಕ್ಸ್‌ಗಳಲ್ಲಿ ಹಳಸಿದ್ದನ್ನೇ ತಿನ್ನಿಸುವ ಡಾನ್, ಡೂನ್, ಮ್ಯಾಂಚೆಷ್ಟರ್, ಕ್ಯಾಂಬ್ರಿಜ್,ಸೈಂಟ್ ,ಇಂಟರ್‌ನ್ಯಾಷನಲ್ ಸ್ಕೂಲುಗಳಿಗೆ ಮತ್ತಷ್ಟು ಬಲಬಂದತೆಯೇ. ಅಂಥವುಗಳ ಸಂಖ್ಯೆ ಹೆಚ್ಚಾದಂತೆಯೇ .
ಮುಚ್ಚುವ ಮಾತಿನ ಹಿಂದೆ ಕೀಳರಿಮೆಯಿಲ್ಲವಷ್ಟೇ?
ನಿಜವಾಗಿಯೂ ಸರಕಾರಿ ಶಾಲಾ ಮಕ್ಕಳಲ್ಲಿ ಇಂದಿಗೂ ಜೀವಂತಿಕೆ ಇದೆ. ಅವರಿಗೆ ಬಸವಣ್ಣ ಗೊತ್ತಿದ್ದಾನೆ. ಬಾಪೂಜಿ ಪರಿಚಯವಿದ್ದಾನೆ. ಕಗ್ಗದ ಪದ್ಯಗಳು, ತಿರುಕನ ಕನಸ್ಸುಗಳು ಅವರಿಗೆ ಗೊತ್ತಿದೆ. ಅದನ್ನು ಮತ್ತಷ್ಟು ಪ್ರಭಾವಿಗೋಳಿಸುವ ಪ್ರಯತ್ನ ಮಾಡಬೇಕಲ್ಲದೆ ಮುಚ್ಚುವ ಮಾತನ್ನಾಡುವುದು ಸರಿಯೇ?

Friday, November 25, 2011

ಕೊಡವರ "ಯೋಧ ವೈಭವ"


ದೊಂದು ಐತಿಹಾಸಿಕ ಕಥೆಯನ್ನು ಕೊಡವರು ಇಂದಿಗೂ ಗುನುಗುನಿಸುತ್ತಿರುತ್ತಾರೆ.
ಅದು ನಾಗರಿಕತೆ ಎನ್ನುವುದು ಮೂಲೆ ಮೂಲೆಗೆ ಇನ್ನೂ ಮುಟ್ಟದ ಕಾಲ. ಗುಡ್ಡಗಾಡಿನ ಪ್ರದೇಶದಲ್ಲಿನ್ನೂ ಪ್ರಭುತ್ವದ ಕಲ್ಪನೆ ಬರದಿದ್ದ ಕಾಲ. ಅಂಥ ಒಂದು ಕಾಲದಲ್ಲಿ ಕೊಡಗಿನ ನಾಲ್ಕುನಾಡು ಎಂಬ ಪ್ರದೇಶದ ನೆಲಜಿ ಗ್ರಾಮಕ್ಕೆ ಜಂಗಮನೊಬ್ಬನು ಬರುತ್ತಾನೆ. ಜಂಗಮನ ಹಾವಭಾವ, ವೇಷ ಭೂಷಣ, ವಿಭೂತಿಗಳನ್ನು ಕಂಡ ಜನರು ಆದರದಿಂದ ಆತನನ್ನು ಬರಮಾಡಿಕೊಂಡರು. ಕುಶಲೋಪರಿಗಳು ಸಾಂಗವಾಗಿ ನಡೆದ ಅನಂತರ ಜಂಗಮ ಊರವರನ್ನು ಉದ್ದೇಶಿಸಿ ಮಾತಾಡಲಾರಂಭಿಸಿದ. ತಾನು ಹಾಸನ ಸೀಮೆಯ ಇಕ್ಕೇರಿ ಸಂಸ್ಥಾನದಿಂದ ಬಂದವನೆಂದೂ ಅಲ್ಲಿ ರಾಜಪ್ರಭುತ್ವವಿದೆಯೆಂದೂ ರಾಜನ ಅಧೀನದಲ್ಲಿ ಜನ-ಜಾನುವಾರುಗಳು ಸುಖದಿಂದ ಬಾಳುತ್ತಿರುವರೆಂದೂ ಕೇಡುಬಯಸದವರಿಗೆ ಅಲ್ಲಿ ಸ್ಥಾನವಿಲ್ಲವೆಂದೂ ರಾಜನ ಗುಣಗಾನ ಮಾಡತೊಡಗಿದ. ಹೀಗೆಯೇ ದೇಶದಲ್ಲಿ ಹಲವಾರು ಸಂಸ್ಥಾನಗಳು ಅಸ್ತಿತ್ವದಲ್ಲಿರುವುದೆಂದೂ ಜಂಗಮ ರೋಚಕವಾಗಿ ವಿವರಿಸತೊಡಗಿದ. ಬ್ರಹ್ಮಗಿರಿ, ಪುಷ್ಪಗಿರಿ ಬೆಟ್ಟಸಾಲುಗಳಲ್ಲಿ ಹೊದ್ದುಕೊಂಡಂತಿರುವ ಕೊಡಗಿನ ಮೂಲನಿವಾಸಿಗಳಿಗೆ ಇವುಗಳ ಪರಿಕಲ್ಪನೆ ಹೊಸದು. ಆಳುವುದು ಮತ್ತು ಆಳಿಸಿಕೊಳ್ಳುವ ಕಥೆಗಳನ್ನು ಕಾವಿಧಾರಿ ಜಂಗಮನಿಂದ ಪೂರ್ತಿಯಾಗಿ ಕೇಳಿಸಿಕೊಂಡರೂ ಕೊಡವರು ಮೌನವಾಗಿ ಕುಳಿತೇ ಇದ್ದರು. ಏನೇನೂ ಪ್ರತಿಕ್ರಿಯೆ ಇರಲಿಲ್ಲ. ಆಗ ಸಂನ್ಯಾಸಿಯೇ " ಕೊಡಗಲ್ಲೂ ಪ್ರಭುತ್ವವಿಬೇಕು. ಪ್ರಭುತ್ವವಿಲ್ಲದ ನಾಡು ಪರಿಪೂರ್ಣವೇ ಅಲ್ಲ" ಎಂದನಂತೆ. ಆಗಲೂ ಜನ ಸುಮ್ಮನೇ ಇದ್ದರು. ಕೊನೆಗೆ ಜಂಗಮನೇ ನೆಲಜಿ ಗ್ರಾಮದಲ್ಲಿ ಕುಳಿತಿದ್ದ ಜನರತ್ತ ದಿಟ್ಟಿಸಿ, ಆಯಕಟ್ಟಿನ ಅಜಾನುಭಾಹು ಶರೀರದ "ಮಂಡೀರ " ಕುಟುಂಬದ ಯುವಕನೊಬ್ಬನತ್ತ ಬೊಟ್ಟುಮಾಡಿ "ನೀನು ರಾಜನಾಗು. ನಿನಗೆ ರಾಜಕಳೆಯಿದೆ" ಎಂದನಂತೆ. ಆಗ ಕುಳಿತಿದ್ದವರೆಲ್ಲಾ ದಢಕ್ಕನೆ ಎದ್ದು ನಿಂತವರೇ "ಭೂಪುತ್ರರು ನಾವು ಕೊಡವರು. ಭೂಪತಿಗಳಾಗೆವು ಎಂದೂ, ನೀವೇ ಅರಸರಾಗಿ . ನಿಮ್ಮ ಬೆನ್ನ ಹಿಂದೆ ನಾವಿರುವೆವು " ಎಂದು ಪ್ರತಿಜ್ಞೆ ಯನ್ನು ಮಾಡಿದರಂತೆ. ಹಾಗೆ ಸರ್ವಸಂಗ ಪರಿತ್ಯಾಗಿ ಜಂಗಮನೇ ಸ್ಥಾಯಿಯಾದನಂತೆ. ಕಾವಿ ತ್ಯಜಿಸಿದ ಆ ಸಂನ್ಯಾಸಿ ಸಾಮ್ರಾಜ್ಯದ ಮೊದಲ ಅರಸನಾದನಂತೆ. ಮುಂದಿನ ಹಲವು ಶತಮಾನಗಳ ಕಾಲ ಕೊಡಗನ್ನು ಆ ಜಂಗಮನ ಸಂತಾನದವರೇ ಆಳಿದರು. ಆ ಎಲ್ಲಾ ಅರಸರಿಗೂ ಬೆಂಗಾವಲಾಗಿ ಕೊಡವರೇ ಇದ್ದರು ಎಂಬ ಚರಿತ್ರೆ ಇತಿಹಾಸದ ಒಂದು ರೋಚಕ ಪ್ರಸಂಗ. ಕೊಟ್ಟ ಮಾತಿಗೆ ತಪ್ಪದೇ ನಡೆದಿದ್ದು, ಜಂಗಮ ರೂಪವನ್ನು ಸ್ಥಾಯಿಗೊಳಿಸಿದ್ದು, ಮಾತಿಗೆ ಕಟ್ಟುಬೀಳದೆ ಮುಗ್ದವಾಗಿ ಪಾಲಿಸುವ ಮನೋಭಾವದ ಕೊಡವರು ಹೀಗೆ ಕೊನೆಯವರೆಗೂ ತಮ್ಮನ್ನು ತಾವು ಆಳಿಕೊಳ್ಳಲಿಲ್ಲ. ಪರರಿಂದಲೇ ಆಳಿಸಿಕೊಂಡರು. ಹೀಗೆ ಸ್ಥಾಪನೆಯಾದ ಹಾಲೇರಿ ರಾಜ ಮನೆತನದುದ್ದಕ್ಕೂ ರಾಜರಿಗಿಂತ ಎತ್ತರದಲ್ಲಿ ಕಾಣುವವರು ಆಳಿಸಿಕೊಂಡ ಕೊಡವರೇ. ಲಿಂಗಾಯತ ಅರಸರ ದಿವಾನರಾಗಿ, ಮಂತ್ರಿಗಳಾಗಿ, ಸೇನಾಧಿಕಾರಿಗಳಾಗಿ, ಪಾರುಪತ್ಯೆಗಾರರಾಗಿ , ಯೋಧರಾಗಿ ಕೊನೆಯವರೆಗೂ ತಮ್ಮ ಮಾತನ್ನುಳಿಸಿಕೊಂಡರು. ಒಂದು ಯೋಧ ಸಂತತಿಯ ಮತ್ತು ಆಳುವ ಪ್ರಭುತ್ವದ ಅವಿನಾಭಾವ ಸಂಬಂಧಕ್ಕೆ ಯೋಗ್ಯ ಉದಾಹರಣೆಯಾಗಿ ಸಲ್ಲುವ ಅಪರೂಪದ ಉದಾಹರಣೆಯೆಂದರೆ ಕೊಡವರು.
ವೀರ ಪರಂಪರೆ
ಮುಂದೆ ಇತಿಹಾಸದಲ್ಲಿ ಹಲವು ಸ್ಥಿತ್ಯಂತರಗಳಾದವು. ಆಗಲೂ ಕೊಡವರು ಭೂಪತಿಗಳಾಗದೆ ಭೂಪುತ್ರರಾಗಿಯೇ ಉಳಿದರು. ದುಷ್ಟ, ಪೀಡಕ ಅರಸರನ್ನೂ ಮಾತಿಗೆ ತಪ್ಪಬಾರದೆಂಬ ಮುಗ್ಧತೆಯಿಂದ ಕೊಡವರು ಸಹಿಸಿಕೊಂಡರು. ಕೊನೆಗೆ ಸಹಿಸಲಸಾಧ್ಯವೆಂಬ ಸನ್ನಿವೇಶದಲ್ಲಿ ಬ್ರಿಟಿಷರ ಮೊರೆಹೋದರು. ಕ್ಷಿಪ್ರ ಕ್ರಾಂತಿಯ ಸಂದರ್ಭ ತಮಗೆ ಒದಗಿಬಂದರೂ ತಾವೇ ಆಳಲಾರದಷ್ಟು ಬದ್ದತೆ ಕೊಡವರಿಗಿತ್ತು ಎನ್ನುವುದು ಇತಿಹಾಸದ ಸೋಜಿಗ ಮತ್ತು ಜನಾಂಗವೊಂದರ ಶ್ರೇಷ್ಠತೆಗೆ ಸಾಕ್ಷಿಗಳು.
ಕೊಡವರು ಹುಟ್ಟುಯೋಧರು. ಬೆಟ್ಟಗುಡ್ಡ ಕಾಡುಗಳಲ್ಲೇ ಬದುಕು ಕಂಡುಕೊಂಡವರು. ವ್ಯತಿರಿಕ್ತವಾದ ಹವಾಗುಣಗಳಲ್ಲಿ ಹೋರಾಟ ಮಾಡಿಯೇ ಬದುಕಬೇಕಾದ ಅನಿವಾರ್ಯತೆಗಳು ಕೊಡವರನ್ನು ರೂಪಿಸಿದವು ಎಂದು ಕೊಡಗಿನ ಇತಿಹಾಸ ಹೇಳುತ್ತವೆ. ಅಲ್ಲದೆ ಕೊಡವರದ್ದು ಕೃಷಿ ಪ್ರಧಾನವಾದ ಸಂಸ್ಕೃತಿ. ಕೃಷಿಯ ರಕ್ಷಣೆಗಾಗಿ ಅವರು ಆಯುಧಧಾರಿಗಳಾಗಿರಬಹುದು ಎಂದೂ ವಿದ್ವಾಂಸರು ಹೇಳುತ್ತಾರೆ. ಅವರ ಸಂಸ್ಕೃತಿಯಲ್ಲಿ ಯೋಧತನವೆಷ್ಟು ಹಾಸುಹೊಕ್ಕಾಗಿದೆಯೆಂದರೆ ಕೊಡವರಲ್ಲಿ ಇಂದಿಗೂ ಗಂಡು ಮಗು ಹುಟ್ಟಿದರೆ ಕುಶಾಲತೋಪು ಸಿಡಿಸಿ ಊರಿಗೆಲ್ಲಾ ಸುದ್ಧಿ ಹಬ್ಬಿಸುವ ಪರಂಪರೆ ಇದೆ. ಮತ್ತು ಇಂದಿಗೂ ಕೊಡವರಲ್ಲಿ ಗಂಡು ಯುದ್ಧದಲ್ಲಿ ಮಡಿಯಬೇಕು, ಹೆಣ್ಣು ಹೆತ್ತು ಮಡಿಯಬೇಕು ಎಂಬ ನಾನ್ಣುಡಿಯೇ ಇದೆ. ಆಳರಸರ ಕಾವಲು ಪಡೆಯಲ್ಲಿ ನಿರಂತರ ನಡೆಯುತ್ತಿದ್ದ ಯುದ್ಧಗಳಲ್ಲಿ ಭಾಗವಹಿಸಿದ ಕೊಡವರು ತಾವು ಸೈನಿಕರಾಗಲೆಂದೇ ಹುಟ್ಟಿದವರೆಂದು ತಿಳಿಯುತ್ತಿದ್ದರು. ಇಂದು ಕರ್ನಾಟಕದಲ್ಲಿ ಹಾಲೇರಿ ರಾಜರ ಹೆಸರು ಕೇಳಿಬರುತ್ತಿದೆ ಎಂದಾದರೆ ಅದಕ್ಕೆ ಏಕೈಕ ಕಾರಣ ಕೊಡವರ ಯೋಧತನ ಎಂಬುದು ನಿರ್ವಿವಾದ ಸಂಗತಿ. ಹಾಲೇರಿ ಸಂಸ್ಥಾನದ ಆಧಾರಸ್ತಂಭಗಳಾದ ಅಪ್ಪಾರಂಡ ಬೋಪಣ್ಣ ದಿವಾನ, ಚೌರೀರ ಅಪ್ಪಣ್ಣ ದಿವಾನ, ಚೆಪ್ಪುಡೀರ ಪೊನ್ನಪ್ಪ ದಿವಾನ, ಬಿದ್ದಂಡ ಬೋಪಣ್ಣ ದಿವಾನ ,ಕಾರ್ಯಕಾರ ಬಿದ್ದಂಡ ಸೋಮಯ್ಯ, ದೇಶತಕ್ಕ ಮಾತಂಡ ಕಾರ್ಯಪ್ಪನವರು ಹಲವು ಕ್ಷಿಷ್ಟಕರ ಸಂದರ್ಭಗಳಲ್ಲಿ ಆಳರಸರನ್ನು ರಕ್ಷಿಸಿ ಕೊಟ್ಟ ಮಾತನ್ನು ಉಳಿಸಿಕೊಂಡರು.
ವಿಶ್ವ ಸಮರದ ಬಳಿಕ
ಅನಂತರ ಬ್ರಿಟಿಷ್ ಆಡಳಿತದಲ್ಲಿ ಕೊಡವರ ವೀರತನ ಇನ್ನಷ್ಟು ಬೆಳಕಿಗೆ ಬಂತು. ಕೊಡಗಿನ ಅರಸರ ಸರ್ವಾಧಿಕಾರ ಧೋರಣೆ ವಿಪರೀತವಾಗುತ್ತಾ , ಅಪತ್ತು ಬಂದರೆ ತಾನೆ ಏನು? ಕೊಡವರಿದ್ದಾರಲ್ಲಾ ಎಂಬ ಉದಾಸೀನತೆ ಅರಸರಿಗೆ ಬಂದಾಗ , ಮತಾಂಧರ ಧಾಳಿಗೂ ಅರಸರು ತಕ್ಕ ಪ್ರತಿರೋಧ ತೋರದೆ ಇದ್ದಾಗ ಕೊಡವ ಯೋಧರು ನಾಡಿನ ರಕ್ಷಣೆಗೆ ಬ್ರಿಟಿಷರ ಮೊರೆ ಹೋದರು. ಆಳುವ ಮನಸ್ಸಿಲ್ಲದ, ಮೌಲ್ಯದ ಮೇರುತನಕ್ಕೆ ಕೊಡಗು ಮತ್ತೊಮ್ಮೆ ಪರಕೀಯರ ವಶವಾಯಿತು. ಕೊಡವರ ಯೋಧತನವನ್ನು ಬ್ರಿಟಿಷರು ಸಮರ್ಥವಾಗಿಯೇ ಬಳಸಿಕೊಂಡರು ಎನ್ನಬೇಕು. ಹೇಳಬೇಕೆಂದರೆ ಕೊಡಗಿಗೆ ,ಕೊಡವರಿಗೆ ಯೋಧರು, ಯೋಧರ ನಾಡು ಎಂಬ ಬಿರುದು ಪ್ರಾಪ್ತವಾಗಿದ್ದು ಈ ಸಮಯದಲ್ಲಿಯೇ. ಬ್ರಿಟೀಷ್ ಅವಧಿಯಲ್ಲಿ ಸುಭೇದಾರರನ್ನಾಗಿ ಹೆಚ್ಚಾಗಿ ಕೊಡವರನ್ನೇ ಆರಿಸಲಾಗುತ್ತಿತ್ತು. ಮುಂದೆ ಮೊದಲ ಮಹಾಯುದ್ಧದ ಕಾಲದಲ್ಲಿ ಕೊಡವರ ಮಾರ್ಷಲ್ ಗುಣವನ್ನು ಮನಗಂಡ ಬ್ರಿಟೀಷರು ಕೂರ್ಗ್ ರೆಜಿಮೆಂಟನ್ನು ಕೂಡ ಸ್ಥಾಪಿಸಿದರು. ಮೊದಲ ವಿಶ್ವಯುದ್ದದ ಬಳಿಕ ಈ ರೆಜಿಮೆಂಟನ್ನು ವಿಸರ್ಜಿಸಲಾಯಿತು. ಏಕೆಂದರೆ ವಿದೇಶದಲ್ಲಿ ಹೋರಾಡುತ್ತಾ ಕೊಡವ ಯೋಧರ ಬಲಿದಾನ ವ್ಯರ್ಥವಾಗಬಾರದೆಂಬ ಕಾಳಜಿ ಬ್ರಿಟೀಷ್ ಆಡಳಿತಕ್ಕಿತ್ತು. ತಮ್ಮ ನಂಬಿಗಸ್ಥ ಬಂಟ ಕೊಡವರು ತಮಗಾಗಿ ಮೀಸಲಿರಬೇಕೆಂಬ ಸ್ವಾರ್ಥವೂ ಇತ್ತು. ಆದರೆ ಎರಡನೆಯ ಮಹಾಯುದ್ಧದ ಹೊತ್ತಿಗೆ ಪುನಃ ಕೂರ್ಗ್ ರೆಜಿಮೆಂಟನ್ನು ಸ್ಥಾಪಿಸಲಾಯಿತು. ೧೯೧೭ ರ ಹೊತ್ತಲ್ಲಿ ಇದೇ ಕೊಡವ ಜನಾಂಗ ಕೇವಲ ೪೦ ಸಾವಿರ ಸಂಖ್ಯೆಯಲ್ಲಿದ್ದಾಗ ಡೆಹರಾಡೂನಿನ ಇಂಡಿಯನ್ ಆಫಿಸರ್ಸ್ ಕೆಡೆಟ್ ನಲ್ಲಿ ಆಯ್ಕೆಯಾದ ಇಬ್ಬರು ಭಾರತೀಯರಲ್ಲಿ ಇಬ್ಬರೂ ಕೊಡವರು (ಕೆ. ಎಂ.ಕಾರ್ಯಪ್ಪ ಮತ್ತು ಕೆ.ಎಸ್ ತಿಮ್ಮಯ್ಯ) ಎನ್ನುವುದು ಕೊಡವರ ಯೋಧತನಕ್ಕೆ ಒಂದು ಪುರಾವೆ. ಆ ಸಮಯದಲ್ಲಿ ಮನೆಮನೆಯಿಂದಲೂ ಯೋಧರು ರಾಷ್ಟ್ರರಕ್ಷಣೆಗೆ ತೆರಳುತ್ತಿದ್ದ ಕಥೆಗಳನ್ನು ಇಂದಿಗೂ ಹೇಳುವವರು ಸಿಗುತ್ತಾರೆ. ಸ್ವಾತಂತ್ರ್ಯಾನಂತರ ಕೂಡ ಈ ಪರಂಪರೆ ಮುಂದುವರೆಯಿತು. ಭಾರತೀಯ ಸೇನೆಯ ಪ್ರಥಮ ಮತ್ತು ಏಕೈಕ ಕಮಾಂಡರ್-ಇನ್- ಚೀಫ್ ಕೊಡಗಿನ ಕಾರ್ಯಪ್ಪಜ್ಜರೆನ್ನುವುದು , ಭಾರತೀಯ ಭೂಸೇನಾ ನಾಯಕರಾಗಿ ಜಗದ್ವಿಖ್ಯಾತರಾಗಿ , ರಾಷ್ಟ್ರದ ಬಗ್ಗೆ ಅಗಾಧ ಕನಸುಗಳನ್ನು ಕಂಡ, ಅನಂತರ ರಾಯಭಾರಿಗಳಾಗಿಯೂ ಮಾನವೀಯ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ತಿಮ್ಮಯ್ಯನವರು ಕೊಡವರೆನ್ನುವುದು ಕರ್ನಾಟಕದ್ದೇ ಹೆಮ್ಮೆ . ಕೊಡವ ಸೈನಿಕರ ಸಾಹಸಗಳು ಭಾರತೀಯ ಸೈನ್ಯದಲ್ಲಿ ಅವೆಷ್ಟೋ ಇವೆ. ಭಾರತೀಯ ರಕ್ಷಣಾಪಡೆಯ ಅತ್ಯಂತ ಕಠಿಣ ಸಂದಭಗಳಲ್ಲೆಲ್ಲಾ ಇಂದಿಗೂ ಮೊದಲು ಕೇಳಿಬರುವ ಹೆಸರೆಂದರೆ ಕರ್ನಾಟಕದ ಕೊಡವರು. ಅಸ್ಸಾಂ, ನಾಗಾಲ್ಯಾಂಡ್, ಗೋರ್ಖಾ, ಲೇಹ್, ಲಡಾಕ್, ಪಂಜಾಬ್‌ಗಳಲ್ಲಿ ಕೊಡಂದೇರ ತಿಮ್ಮಯ್ಯನವರನ್ನು ಆರಾಧಿಸುವ ಜನರನ್ನು ಇಂದಿಗೂ ಕಾಣಬಹುದು. "ನಮ್ಮನ್ನು ತಿಮ್ಮಯ್ಯನವರು ಆಳಿದರೆ ನಮ್ಮ ಪ್ರದೇಶವನ್ನು ಭಾರತಕ್ಕೆ ಸೇರಿಸಲು ಒಪ್ಪುವೆವು " ಎಂದು ಪಾಕ್ ಆಕ್ರಮಿತ ಕಾಶ್ಮೀರದ ಜನತೆಯೇ ಹೇಳಿರುವುದು ಕೊಡವನೊಬ್ಬನ ಯೋಧಗುಣದ ಪ್ರತೀಕಗಳು. ಕಾಶ್ಮೀರದ ಕಣಿವೆಗಳಲ್ಲಿ ಶತ್ರುಬಂಕರ್‌ಗಳ ನಡುವೆಯೇ ಟ್ರಕ್ ಚಲಾಯಿಸುತ್ತಾ, ಬಂಕರುಗಳನ್ನು ನಾಶಮಾಡುತ್ತಾ ಸರಕು ಸರಂಜಾಮುಗಳನ್ನು ರಣರಂಗಕ್ಕೆ ಮುಟ್ಟಿಸಿದ ಸುಭೇದಾರ್ ನಡಿಕೇರಿಯಂಡ ಭೀಮಯ್ಯ, ತನ್ನ ಪ್ರಾಣವನ್ನು ಲೆಕ್ಕಿಸದೆ ಪಾಕಿಸ್ಥಾನದ ಸರಗೋದ ವಾಯುನೆಲೆಯನ್ನು ಧ್ವಂಸಮಾಡಿ ಮತ್ತಷ್ಟು ಮುಂದುವರಿದು ವಿಮಾನದಲ್ಲೇ ಉರಿಯುತ್ತಾ ಶತ್ರುಗಳನ್ನು ಉರಿಸಿದ ಸ್ಕ್ವಾ. ಲೀ. ಅಜ್ಜಾಮಾಡ ಬಿ. ದೇವಯ್ಯ , ಕಣಿವೆಯ ವಶದಲ್ಲಿ ಎದೆಯೊಡ್ಡಿನಿಂತು ಅಮರರಾದ ಮೇಜರ್ ಮಂಗೇರಿರ ಮುತ್ತಣ್ಣ, ಆಪರೇಷನ್ ಬ್ಲೂಸ್ಟಾರ್ ಕಾರ್ಯಾಚರಣೆಯ ನೀಲನಕ್ಷೆಯನ್ನು ಸಿದ್ಧಪಡಿಸಿದ ಲೆ.ಜ. ಕೋದಂಡ ಎನ್. ಸೋಮಣ್ಣನವರಂಥಾ ಮಹಾ ಯೋಧರನ್ನು ಕೊಟ್ಟ ಪುಟ್ಟ ಜನಾಂಗ ಕೊಡವರು. ಅದಕ್ಕೇ ಇಂದಿಗೂ ಭಾರತೀಯ ಸೇನೆಯಲ್ಲಿ ಕೊಡವರು ಎಂದರೆ ಒಂದು ವಿಶ್ವಾಸ. ಒಂದು ಪ್ರೀತಿ. ಇಂದಿಗೂ ಸೈನ್ಯದ ಅತ್ಯಂತ ಕಠಿಣ ಸಂದರ್ಭಗಳಲ್ಲಿ ಭಾರತೀಯ ಸೇನೆ ಕೊಡವ ಯೋಧರನ್ನು ಹುಡುಕುತ್ತದೆ. ಏಕೆಂದರೆ ಕೊಡವರು ಎಂದರೆ ಕೇವಲ ಒಂದು ಜಾತಿಯಲ್ಲ. ಅದೊಂದು ಮೈಕಟ್ಟು. ಒಂದು ವ್ಯವಸ್ಥೆ. ಒಂದು ಯೋಧ ಸಂತತಿ. ಅವರು ಕೇವಲ ತರಬೇತಾದ ಸೈನಿಕರಲ್ಲ. ಅವರು ಹುಟ್ಟು ಬಲಾಡ್ಯರು. ದೈಹಿಕ ಮತ್ತು ಮಾನಸಿಕ ಸಧೃಡರು. ಇಂಥ ಕೊಡವ ಯೋಧರ ಬಗ್ಗೆ ವಿದೇಶಗಳ ಸೇನಾಧಿಕಾರಿಗಳೂ ಸಮರನೀತಿ ವಿದ್ವಾಂಸರೂ ೫ ಅಂಶಗಳಿಂದ ಅವರ ಯೋಧತನವನ್ನು ವಿವರಿಸಿದ್ದಾರೆ. ೧. ಅವರ ನೈಸರ್ಗಿಕ ನಾಯಕತ್ವ ೨. ಸೈನಿಕರು ಎಂಬ ಅತಿಯಾದ ಹೆಮ್ಮೆ ೩. ಪ್ರಾಮಾಣಿಕ ಮತ್ತು ಮುಕ್ತ ವ್ಯಕ್ತಿತ್ವ ೪. ಶಿಸ್ತಿನ ಸಿಪಾಯಿತನ ೫. ಸಮರ ಸಂದರ್ಭಗಳಲ್ಲಿ ಸರಿ-ತಪ್ಪುಗಳ ಬಗ್ಗೆ ಯೋಗ್ಯ ನಿರ್ಣಯ ತೆಗೆದುಕೊಳ್ಳುವ ಸಾಮರ್ಥ್ಯ. ಈ ಐದು ಅಂಶಗಳು ಕೊಡವ ಯೋಧರಲ್ಲಿ ಮೇಳೈಸಿರುತ್ತವೆ ಎಂದು ಪಾಶ್ಚಾತ್ಯ ಸೇನಾಧಿಕಾರಿಗಳು ಹೇಳುತ್ತಾರೆ. ಸ್ವಾತಂತ್ರ್ಯಾನಂತರ ಸಣ್ಣದಾದ ಜನಾಂಗವೊಂದು ಇದುವರೆಗೆ ೫ ಜನ ಲೆಪ್ಟಿನೆಂಟ್ ಜನರಲ್‌ಗಳನ್ನು, ೧೫ ಮಂದಿ ಮೇಜರ್ ಜನರಲ್‌ಗಳನ್ನು, ೪ ಮಂದಿ ಏರ್‌ಮಾರ್ಷಲ್‌ಗಳನ್ನು , ನೌಕಾಪಡೆಯ ಕಮಾಂಡರ್‌ಗಳನ್ನು, ನೂರಾರು ಬಲಿದಾನಿಗಳನ್ನು ದೇಶಕ್ಕೆ ಕೊಟ್ಟಿದೆ ಎನ್ನುವುದು ಮರೆತುಹೋಗುವ ಸಂಗತಿಗಳಲ್ಲ. ಊರಿಗೊಂದರಂತೆ ಮೇಜರ್‌ಗಳು, ಬ್ರಿಗೇಡಿಯರ್‌ಗಳು, ಲೆಪ್ಟಿನೆಂಟ್‌ಗಳು, ಮನೆಗೊಂದರಂತೆ ಸಿಪಾಯಿಗಳು ನಿವೃತ್ತ ಜೀವನವನ್ನು ನಡೆಸುತ್ತಿರುವವರ ಮಹತ್ತ್ವವನ್ನು ಇಂದಿನ ಪೀಳಿಗೆ ತಿಳಿದುಕೊಂಡಿದ್ದು ಕಡಿಮೆಯೆಂದೇ ಹೇಳಬೇಕು.
ವೈಭವ ಮರೆಯಾಯಿತೇ?
ಆದರೆ ವೈಭವಗಳು ಹೆಚ್ಚುದಿನ ಉಳಿಯುವುದಿಲ್ಲ ಎಂಬ ಮಾತು ಇತಿಹಾಸದ ಅಧ್ಯಯನದಲ್ಲಿ ಕಾಣಸಿಗುತ್ತದೆ. ವೀರರ ಜಿಲ್ಲೆ , ಯೋಧರ ನಾಡು ಎಂದು ಕರೆಸಿಕೊಂಡ ಕೊಡಗಿನಲ್ಲಿ ಇಂದು ಸೈನ್ಯಕ್ಕೆ ಸೇರುವವರ ಪ್ರಮಾಣ ತೀರಾ ಇಳಿಮುಖವಾಗಿದೆ. ಇಂದು ಊರೂರಲ್ಲೂ ಶೌರ್ಯದ ಕಥೆಗಳು ಕೇಳಿಬರುತ್ತಿರಬಹುದು. ಆದರೆ ಮುಂದಿನ ವರ್ಷಗಳಲ್ಲಿ ಆ ಕಥೆಗಳು ಸಂಪೂರ್ಣ ಮಾಯವಾಗಲಿವೆ. ಅಬ್ಬರದ ಯುಗದಲ್ಲಿ ವೀರತೆಗೆ ಜಾಗವಿಲ್ಲ ಎಂಬಂತಾಗಿದೆ. ಇದೇಕೆ ಹೀಗೆ ಎಂದು ಹುಡುಕುತ್ತಾ ಹೊರಟರೆ ಆಧುನಿಕ ಶಿಕ್ಷಣ ಪರಿಣಾಮಗಳು ಗೋಚರಿಸುತ್ತವೆ. ನಿಜ, ಆಧುನಿಕ ಶಿಕ್ಷಣ ಪಡೆದ ಪೀಳಿಗೆ ಸೇನೆಗೆ ಸೇರಲು ಇಷ್ಟಪಡುತ್ತಿಲ್ಲ. ಐಟಿ ಬಿಟಿ ಯುಗದಲ್ಲಿ ಮಹಾನಗರಗಳು ಯುವಕರನ್ನು ಕೈಬೀಸಿ ಕರೆಯುತ್ತಿವೆ. ಮೊದಮೊದಲು ಮನೆಯೊಂದರಲ್ಲಿ ಐದಾರು ಮಕ್ಕಳಿದ್ದರೆ ಅವರಲ್ಲಿ ಒಬ್ಬ ಮನೆ ನೋಡಿಕೊಳ್ಳುತ್ತಾ ಇರುತ್ತಿದ್ದ. ಉಳಿದವರು ಸೈನ್ಯಕ್ಕೆ ಸೇರುತ್ತಿದ್ದರು. ಇಂದು ಮನೆಯಲ್ಲಿರುವವನು ಒಬ್ಬನೇ ಮಗ. ಆತನೂ ಸೈನ್ಯಕ್ಕೆ ಸೇರಲು ಇಷ್ಟಪಡುತ್ತಿಲ್ಲ. ಇಷ್ಟ ಪಟ್ಟರೂ ಪೋಷಕರು ಬಿಡುತ್ತಿಲ್ಲ. ದೂರದ ಗಡಿಯಲ್ಲಿ ಮಗ ಮಳೆ, ಚಳಿಗಳಲ್ಲಿ ಕಷ್ಟಪಡುವ ಬದಲು ಬೆಂಗಳೂರಿನಲ್ಲೋ ಮುಂಬೈನಲ್ಲೋ ಕೆಲಸದಲ್ಲಿರಲಿ ಎಂಬ ಮಾನಸಿಕತೆ ಮನೆಮಾಡಿದೆ. ಇನ್ನೊಂದು ಸಂಗತಿಯೆಂದರೆ ಇಂದಿನ ಕೊಡವ ಯುವಕರಿಗೆ ಮೊದಲಿನ ಕೊಡವ ಯೋಧರಂತೆ ಮೈಕಟ್ಟೂ ಇರುವುದಿಲ್ಲ. ಇಂದು ಅಲ್ಲಲ್ಲಿ ಲೆಫ್ಟಿನೆಂಟ್‌ಗಳಾಗಿಯೋ, ಕರ್ನಲ್‌ಗಳಾಗಿಯೋ ನೇಮಕವಾಗುವ ಕೊಡವ ಯುವಕರ ಹೆಸರುಗಳು ಕೇಳಿಬರುತ್ತಿದ್ದರೂ ಅವರಾರೂ ಕೊಡವ ಯೋಧತನದ ಅರ್ಹತೆಯಿಂದ ನೇಮಕವಾದವರಲ್ಲ. ಅವರೆಲ್ಲರೂ ಕಮಿಷನ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪದವಿಗೇರಿರುವವರು. ಜವಾನನಾಗಿ ಸೇರ್ಪಡೆಯಾಗುವುದು ಘನತೆಗೆ ತಕ್ಕುದಲ್ಲ ಎಂಬ ಅಪಾಯಕಾರಿ ಮನೋಭಾವವೂ ಬೆಳೆದಿರುವ ಕಾರಣವನ್ನೂ ಅಲ್ಲಗೆಳೆಯಲು ಸಾಧ್ಯವಿಲ್ಲ. ಇದಕ್ಕೆಲ್ಲಾ ಕೊಡಗಿನ ಚಿಂತಕರು ಒಂದು ಕಾರಣವನ್ನು ಹುಡುಕುತ್ತಾರೆ. ಅದೆಂದರೆ ಇಂಗ್ಲಿಷ್ ಶಿಕ್ಷಣದ ಕಾರಣ. ಸುದೀರ್ಘ ವರ್ಷಗಳ ಕಾಲ ಕೊಡಗು ನೇರವಾಗಿ ಬ್ರಿಟಿಷ್ ಆಡಳಿತಕ್ಕೆ ಒಳಪಟ್ಟಿದ್ದ ಪ್ರದೇಶ. ಹಾಗಾಗಿ ಕೊಡಗಿನಲ್ಲಿ ಬ್ರಿಟಿಷ್ ಲಕ್ಷಣಗಳು ಗಾಢವಾಗಿ ಗೋಚರಿಸುತ್ತವೆ. ಬ್ರಿಟೀಷ್ ಅವಧಿಯಲ್ಲಿ ಅದು ಶಿಸ್ತಿಗೆ ಸೀಮಿತವಾಗಿದ್ದರೆ ಅನಂತರ ಅದು ಶೋಕಿಗೆ ಬದಲಾಯಿತು. ಮಿಲಿಟರಿಗೆ ಹೋಗುವುದಕ್ಕಿಂತ ಬೇರೆ ಉದ್ಯೋಗವೇ ಲೇಸು ಎಂಬ ಭಾವನೆಗಳು ಮೂಡಲಾರಂಭಿಸಿತು. ಜಾಗತೀಕರಣದ ಪ್ರಭಾವವೂ ಆ ಭಾವನೆಗೆ ಮತ್ತಷ್ಟು ಇಂಬು ಕೊಟ್ಟಿತು. ಆಧುನಿಕತೆ ತೀವ್ರವಾದಷ್ಟೂ ಕೊಡಗಿನ ಪರಿಸ್ಥಿತಿ ಸಂದಿಗ್ದವಾಗುತ್ತಾ ಬರತೊಡಗಿತು. ಆಡಳಿತದಲ್ಲಿ ನಿರ್ಲಕ್ಷ. ಹಳೆಯ ಪರಂಪರೆಯೊಡನೆ ಬದುಕುತ್ತಾ , ಅದಕ್ಕೆ ಹೊರತಾದ ಪರಿಸ್ಥಿತಿಯನ್ನು ಕನಸು ಮನಸಿನಲ್ಲೂ ಚಿಂತಿಸದ ಜನಾಂಗಕ್ಕೆ ಮಾರ್ಗದರ್ಶಕರಿಲ್ಲದೆ ಗೊಂದಲಗಳು ಮತ್ತಷ್ಟು ಹೆಚ್ಚಾದವು. ಈ ಸಂದರ್ಭದಲ್ಲಿ ಪ್ರಾದೇಶಿಕ ರಾಷ್ಟ್ರವಾದದ ಬೇರುಗಳೂ ನೆಲೆವೂರಿದವು. ದೇಶ ರಕ್ಷಣೆಗಿಂತ ಜನಾಂಗದ ರಕ್ಷಣೆಯೇ ಶ್ರೇಷ್ಠ ಎನ್ನುವ ಭಾವನೆಯನ್ನು ಬಿತ್ತುವ ಹುನ್ನಾರದಲ್ಲೂ ಕೆಲವರು ತೊಡಗಿದರು. ಈ ಎಲ್ಲಾ ಕಾರಣಗಳಿಂದ ಇಂದು ಶ್ರೇಷ್ಠ ಪರಂಪರೆಯ ಜನಾಂಗವೊಂದು ಯೋಧತನದ ಸಂಸ್ಕೃತಿಯಿಂದ ದೂರವಾಗುತ್ತಿದೆ. ಆಡಳಿತವೂ ಕೊಡವರ ಯೋಧತನವನ್ನು ಸಮರ್ಥವಾಗಿ ಬಳಸಿಕೊಳ್ಳುವ ಮನಸ್ಸನ್ನು ಮಾಡುತ್ತಿಲ್ಲ. ಮತೀಯವಾದದ ಮನಸು ಸೇನೆಯಲ್ಲೂ ಮೀಸಲು ಕಲ್ಪಿಸಬೇಕೆಂದು ಪ್ರಯತ್ನಿಸುತ್ತಿದೆ. ವಿಪರ್ಯಾಸವೆಂದರೆ ಕೊಡವರಂಥಾ ಯೋಧರು ಅವರಾರಿಗೂ ನೆನಪಾಗುತ್ತಿಲ್ಲ. ಕಾರ್ಯಪ್ಪ, ತಿಮ್ಮಯ್ಯರಂಥಾ ಅಮರ ಸೇನಾನಿಗಳನ್ನು ಕನ್ನಡದ ಹೋರಾಟಗಾರರು "ಇವರು ತಮ್ಮರಲ್ಲ " ಎಂದುಕೋಡಿರುವುದು ಇವುಗಳ ನಡುವಿನ ವಿಷಾದದ ಸಂಗತಿ.

ಇತಿಹಾಸದಲ್ಲಿ ಹಲವಾರು ಕೊಡವ ಯೋಧರು ಮೇರು ಸ್ಥಾನದಲ್ಲಿ ನಿಂತಿರುವುದರ ಕುರುಹುಗಳಿವೆ. ಕನ್ನಂಡ ದೊಡ್ಡಯ್ಯ ಎಂಬ ಮಹಾನ್ ಯೋಧರೊಬ್ಬರು ೩೦೦೦ ಯೋಧರ ಪಡೆಗೆ ಮುಖ್ಯಸ್ಥರಾಗಿದ್ದರು. ಕೊಡಗಿನತ್ತ ಕಾಕ ದೃಷ್ಟಿ ಬೀರಿದ್ದ ಹೈದರ್ ಆಲಿಯನ್ನು ಸಮರ್ಥವಾಗಿ ಎದುರಿಸಿದವನು ಕನ್ನಂಡ ದೊಡ್ಡಯ್ಯ. ಸತತವಾಗಿ ಮೂರು ಭಾರಿ ಹೈದರ್ ಆಲಿ ಕನ್ನಂಡ ದೊಡ್ಡಯ್ಯನಿಂದ ಸೋತು ಸುಣ್ಣವಾಗಿ ಹಿಂತಿರುಗಿದ್ದ. ಕೊನೆಗೆ ಹೈದರನ ಮಗ ಟಿಪ್ಪು ಮೋಸದಿಂದ ಕೊಡಗಿಗೆ ಅಡಿಯಿಟ್ಟ. ಈಗಿನ ಸೋಮವಾರಪೇಟೆ ಬಳಿಯಲ್ಲಿ ನಡೆದ ಕಾಜೂರು ಯುದ್ಧದಲ್ಲಿ ದೊಡ್ಡಯ್ಯ ಹೋರಾಡುತ್ತಾ ವೀರಮರಣವನ್ನಪ್ಪಿದ್ದ.ರಾಕ್ಷಸೀತನದಿಂದ ಧಾಂಗುಡಿಯಿಟ್ಟ ಮುಸಲ್ಮಾನ ಸೇನೆ ದೊಡ್ಡಯ್ಯನವರ ಕನ್ನಂಡ ಮನೆಗೆ ಬೆಂಕಿಯಿಕ್ಕಿ ೧೩ ಜನರನ್ನು ನೇಣಿಗೆ ಹಾಕಿತು. ಕೊಡಗಿನ ಮೇಲೆ ದಾಳಿ ಮಾಡಿದ ಟಿಪ್ಪು ಕೊಡಗಿನ ಅರಸ ಎರಡನೇ ದೊಡ್ಡರರಾಜನನ್ನೇ ಸೆರೆಹಿಡಿದು ಪಿರಿಯಾಪಟ್ಟಣದಲ್ಲಿಟ್ಟಿತು. ರಾಜನ ಉಸ್ತುವಾರಿಗೆ ಟಿಪ್ಪು ನಾಗಪ್ಪಯ್ಯನೆಂಬ ಸಮರ್ಥ ಅಧಿಕಾರಿಯನ್ನೇ ನೇಮಿಸಿದ್ದ. ರಾಜನನ್ನು ಬಿಡಿಸಿಕೊಂಡು ಬರಲು ಕೊಡಗಿನಿಂದ ೧೨ ಜನ ಯೋಧರು ಪಿರಿಯಾಪಟ್ಟಣಕ್ಕೆ ಹೊರಟರು. ಈ ತಂಡದ ಮುಂದಾಳುಗಳಾಗಿ ಅಪ್ಪನೆರವಂಡ ಅಚ್ಚಯ್ಯ ಎಂಬ ಯೋಧರಿದ್ದರು . ಕೇವಲ ಹನ್ನೆರಡೇ ಜನ ರಾಜನನ್ನು ಬಿಡಿಸಿಕೊಂಡು ಸುರಕ್ಷಿತವಾಗಿ ಮಡಿಕೇರಿಗೆ ಮುಟ್ಟಿದರು ಮತ್ತು ರಾಜನನ್ನು ಪುನಃ ಸಿಂಹಾಸನದಲ್ಲಿ ಕೂರಿಸಿದರು. ಕುಲ್ಲೇಟಿರ ಪೊನ್ನಣ್ಣ ಎಂಬ ಮತ್ತೊಬ್ಬ ಧೈರ್ಯಶಾಲಿ ಯೋಧನಿದ್ದ. ಇವರ ಬಗೆಗಿನ ಕಥೆಗಳು ಇಂದಿಗೂ ಕೊಡಗಿನಲ್ಲಿ ಜನಜನಿತ. ಈ ಪೊನ್ನಣ್ಣನೆಂಬವನು ಹೈದರ್ ಆಲಿಯ ನೆಚ್ಚಿನ ಕಮಾಂಡರ್ ಗುಲಾಂ ಆಲಿಯನ್ನು ವೀರಾಜಪೇಟೆಯ ಪೆಗ್ಗಳ ಎಂಬಲ್ಲಿ ಸೋಲಿಸಿ ಮತ್ತ್ತೆಂದೂ ಆತ ಕೊಡಗಿಗೆ ಬರದ ಹಾಗೆ ಮಾಡಿದ್ದ. ಮತ್ತೊಮ್ಮೆ ಕೇವಲ ೪೦ ಜನ ಯೋಧರನ್ನು ಹೊರಡಿಸಿಕೊಂಡು ಕೇರಳದ ಚರಕ್ಕಲ್ ರಾಜನನ್ನೇ ಸೆರೆಹಿಡಿದು ತಂದುಬಿಟ್ಟಿದ್ದರು. ಕೊಡಗಿನ ರಾಜನ ಅಣತಿಯ ಮೇರೆಗೆ ಕುಶಾಲನಗರಕ್ಕೆ ತೆರಳಿದ ಪೊನ್ನಣ್ಣ ಟಿಪ್ಪುವಿನ ಕೈಸೇರಿದ್ದ ಕೋಟೆಗೆ ದಾಳಿಯಿಟ್ಟು ಮರುವಶಪಡಿಸಿಕೊಂಡನು.

ಲೆಫ್ಟಿನೆಂಟ್ ಜನರಲ್ ಗಳು
ಅಪ್ಪಾರಂಡ ಸಿ. ಆಯ್ಯಪ್ಪ , pvsm
ಕೋದಂಡ ನಂಜಪ್ಪ ಸೋಮಣ್ಣ , pvsm, deputy chief of army staff, chief architect in operation blue star.
ಬಿದ್ದಂಡ ನಂಜಪ್ಪ ನಂದಾ ,pvsm,avsm
ಬುಟ್ಟಿಯಂಡ ಕೆ. ಬೋಪಣ್ಣ, pvsm. The directer general ncc

ಮೇಜರ್ ಜನರಲ್‌ಗಳು
ಕೊಂಗೇಟಿರ ಎಂ. ಚೆಂಗಪ್ಪ. pvsm,avsm
ಕೋದಂಡ ಎ. ಕರುಂಬಯ್ಯ, ಸೋಮೆಯಂಡ ಕೆ. ಕಾರ್ಯಪ್ಪ, ಬಾಚಮಂಡ ಎ. ಕಾರ್ಯಪ್ಪ, ಮಾದೇಯಂಡ ಎ. ಬೆಳ್ಯಪ್ಪ., ಚೆಪ್ಪುಡೀರ ಜಲ್ ಅಪ್ಪಚ್ಚು pvsm, ಮೂವೇರ ಸಿ. ನಂಜಪ್ಪ pvsm, ಕುಪ್ಪಂಡ .ಸಿ. ನಂಜಪ್ಪ pvsm

ಏರ್ ಮಾರ್ಷಲ್‌ಗಳು
ಚೆಪ್ಪುಡೀರ ಎಂ. ಸುಬ್ಬಯ್ಯ avsm,vc
ಮಚ್ಚಿಯಂಡ ಸಿ. ಉತ್ತಯ್ಯ pvsm,avsm
ಕೊಡಂದೇರ ಸಿ. ಕಾರ್ಯಪ್ಪ pvsm,vm
ಬಲ್ಟಿಕಾಳಂಡ ವಿ. ಚೆಂಗಪ್ಪ

ಏರ್ ಕಮಾಂಡರ್ ಗಳು
ಕಂಬೀರಂಡ ಪೊನ್ನಪ್ಪ
ಬುಟ್ಟಿಯಂಡ ಬಿದ್ದಪ್ಪ ಅಪ್ಪಚ್ಚು
ಅಪ್ಪಾರಂಡ ಎಂ. ಗಣಪತಿ
ಕಂಬೀರಂಡ ಪೂವಯ್ಯ ದೇವಯ್ಯ
ಚೆಕ್ಕೇರ ಎಂ. ಬೆಳ್ಯಪ್ಪ
ಪಟ್ಟಡ ಅರುಣ್ ಮುತ್ತಣ್ಣ

ನೌಕಾ ಕಮಾಂಡರ್ ಗಳು
ಚೆಕ್ಕೇರ ಎಂ. ಬೆಳ್ಯಪ್ಪ
ಪಟ್ಟಾಮಾಡ ಎ. ಪೊನ್ನಪ್ಪ.
ಮೂಡೇರ ತಮ್ಮಯ್ಯ
ಮಂಡೇಪಂಡ ಪಿ. ಬೋಪಯ್ಯ
ಕ್ಯಾ.ಬೊವ್ವೇರಿಯಂಡ ಮುದ್ದಯ್ಯ

Sunday, November 13, 2011

ನೆಹರೂ ಮಕ್ಕಳಿಗೆ ಆದರ್ಶರೇ?


ಲೆಫ್ಟಿನೆ೦ಟ್ ಜನರಲ್ ಸೋಮಣ್ಣ ಎ೦ಬ ನಿವೃತ್ತ ಸೇನಾಧಿಕಾರಿಯೋರ್ವರಿದ್ದಾರೆ.ಅಸಾಮಾನ್ಯಯೋಧರು.ಸಿಯಾಚಿನ್‌ನ೦ಥ ಪ್ರದೇಶದಲ್ಲಿ ಹಲವು ವರ್ಷ ಸೇವೆ ಸಲ್ಲಿಸಿದವರು. ಹಲವು ಯುದ್ಧಗಳಲ್ಲಿ ಭಾಗವಹಿಸಿದವರು. ಹಲವು ಕಾರ್ಯಾಚರಣೆಗಳನ್ನು ಸ್ವತಃ ಯೋಜಿಸಿದವರು.ಆಪರೇಷನ್ ಬ್ಲೂಸ್ಟಾರ್ ಕಾರ್ಯಾಚರಣೆಯ ಮುಖ್ಯ ಆರ್ಕಿಟೆಕ್ಟ್ ಆಗಿದ್ದವರು. ಅವರು ಭೂಸೇನಾ ದ೦ಡನಾಯಕರಿಗಿ೦ತ ಒ೦ದು ಗ್ರೇಡ್ ಅಷ್ಟೇ ಕೆಳಗಿನವರು. ಆದರೆ ಕಾರ್ಯಾಚರಣೆಗಳ ರೂಪುರೇಷೆಗಳನ್ನು ನಿರ್ಧರಿಸಬಲ್ಲ ವಿಶೇಷ ಅಧಿಕಾರ ಸೋಮಣ್ಣನವರಿಗಿತ್ತು. ೮೦ ರ ದಶಕದಲ್ಲಿ ಎರಡು ವರ್ಷ ಕಾರ್ಗಿಲ್‌ನ ರಕ್ಷಣೆಯ ಹೊಣೆಯನ್ನು ಅವರು ಹೊತ್ತುಕೊ೦ಡಿದ್ದರು. ಅ೦ಥ ಸೋಮಣ್ಣನವರನ್ನು ಒಮ್ಮೆವೀರಾಜಪೇಟೆಯ ಆವರ ಮನೆಯಲ್ಲಿ ಸ೦ದರ್ಶಿಸಿದಾಗ ಸದ್ಯದ ಕಾಶ್ಮೀರದ ಬಗ್ಗೆ ಅವರ ಅಭಿಪ್ರಾಯ ಕೇಳಿದೆ. ಮಾತು ನೆಹರೂರತ್ತ ಹೊರಳಿತು. "ತಪ್ಪು ಮಾಡಿಬಿಟ್ಟರು ನೆಹರೂ" ಎ೦ದರು. ಆ ಹಿರಿಯ ಮುಖ ಒಮ್ಮೆಲೇ ಪೇಲವವಾಯಿತು. ನೋವು ಕಾಣಿಸಿಕೊ೦ಡಿತು. ಸೇನೆಯ ಬಗ್ಗೆ, ಗಡಿಯ ಬಗ್ಗೆ ಅವರಲ್ಲಿದ್ದ ಪ್ರೀತಿಗೆ ಆ ನೋವು ಪುರಾವೆ ಒದಗಿಸುವ೦ತೆ ಇತ್ತು. ಅಷ್ಟು ಹೇಳಿದ ಅವರು ಆ ವಿಷಯದತ್ತ ಮಾತಾಡಲೇ ಇಲ್ಲ. ಆ ಮೌನವೂ ಕಾಶ್ಮೀರದ ಕಥೆಯನ್ನು ಹೇಳುತ್ತಿತ್ತು.
ಅದೇ ರೀತಿ ೬೨ ರ ಚೀನಾ ಯುದ್ಧದ ಅನುಭವವನ್ನು ಬರೆದ, ಸ್ವತಃ ಯುದ್ಧ ಖೈದಿಯಾಗಿ ಸಿಕ್ಕಿಬಿದ್ದಿದ್ದ ಜಾನ್ ವಿ. ದಳವಿಯವರ೦ತೂ ಭಾರತದ ಅ೦ದಿನ ಸೋಲನ್ನು "ಹಿಮಾಲ೦ನ್ ಬ್ಲ೦ಡರ್" ಎ೦ದೇ ಬರೆದರು. ಸುಮಾರು ೫೦೦ ಪುಟಗಳುದ್ದಕ್ಕೂ ಅವರು ಬರೆದದ್ದು ನೆಹರೂ ಕಾ೦ಡವನ್ನೇ. ಸೈನಿಕರ ಕೈ ಖಾಲಿ ಮಾಡಿದ ನೆಹರೂ, ಗಡಿಯ ಮಾಹಿತಿಯೇ ಇಲ್ಲದ ನೆಹರೂ, ಯೋಧರ ಮೊರೆ ಕೇಳಿಸಿಕೊಳ್ಳದ ನೆಹರೂ, ದು೦ಡು ಮೇಜಿಗೆ ಧಾವಿಸಿದ ನೆಹರೂ, ದ೦ಡು ಕಳುಹಿಸದ ನೆಹರೂ, ಭಾಷಣ ಮಾತ್ರ ಮಾಡಿದ ನೆಹರೂ, ಭಾಯಿ ಭಾಯಿ ಎ೦ದ ನೆಹರೂ, ಅತ್ತ ಗಡಿಯಲ್ಲಿ ಗು೦ಡುಗಳಿಗೆ ಭಾರತೀಯ ಯೋಧ ಉರುಳಿರುಳಿ ಬೀಳುತ್ತಿದ್ದಾಗ ಇತ್ತ ರಾಜಧಾನಿಯಲ್ಲಿ ಪಾರಿವಾಳ ಹಾರಿಬಿಟ್ಟ ನೆಹರೂವನ್ನು ಅವರು ಎಳೆಎಳೆಯಾಗಿ ಬಿಡಿಸಿದ್ದರು.
ಇವರಾರೂ ಸಾಧಾರಣ ಜನರಲ್ಲ. ಅವರಿಗೆ ನೆಹರೂವನ್ನು ತೆಗಳಬೇಕಾದ ಅನಿವಾರ್ಯತೆಯೂ ಇರಲಿಲ್ಲ. ಅವರಾರೂ ಕಾ೦ಗ್ರೆಸ್ ವಿರೋಧಿಗಳ೦ತೂ ಅಲ್ಲವೇ ಅಲ್ಲ. ಇಬ್ಬರೂ ದೇಶಕ್ಕಾಗಿ ಗಡಿಯಲ್ಲಿ ಕಾದಾಡಿದವರು. ಅ೦ಥವರ ಮಾತಲ್ಲಿ ನೋವಿದೆ. ಕಾಳಜಿಯಿದೆ. ಪ್ರಾಮಾಣಿಕತೆಯಿದೆ.
ಹಾಗಾದರೆ ನೆಹರೂ.....?
ಒ೦ದು ದೇಶದ ಸೇನಾಧಿಕಾರಿಗಳೇ ಓರ್ವ ಮಹಾನ್ ನಾಯಕರ ಬಗ್ಗೆ ಸದಭಿಪ್ರಾಯ ಹೊ೦ದಿಲ್ಲದಿರುವುದು ಯಾವುದರ ಸ೦ಕೇತ? ಅ೦ಥ ನಾಯಕರನ್ನು ಏನೆ೦ದು ಹೇಳಬೇಕು? ನೆಹರೂ ಅ೦ಥವರು. ದೇಶವನ್ನು ಬರೋಬ್ಬರಿ ೧೭ ವರ್ಷ ಆಳಿದ ಮಾತ್ರಕ್ಕೆ ಅವರ ತಪ್ಪುಗಳೆಲ್ಲವೂ ಪ್ರಶ್ನಾತೀತವೆ೦ದಲ್ಲ. ಆತ ಮಹಾಪುರುಷನೂ ಆಗುವುದಿಲ್ಲ. ದೇಶಕ್ಕೆ ಆದರ್ಶಪ್ರಾಯನ೦ತೂ ಖ೦ಡಿತಾ ಆಗಲಾರ. ವಿಪರ್ಯಾಸ ಅ೦ದರೆ ಅ೦ಥವರ ಜನ್ಮದಿನವನ್ನು ದೇಶವು ಮಕ್ಕಳ ದಿನಾಚರಣೆಯ ಹೆಸರಲ್ಲಿ ಆಚರಿಸಿಕೊಳ್ಳುತ್ತದೆ. ದೇಶಕ್ಕೆ ಎರಡು ಬಗೆದವರನ್ನೇ ಮಕ್ಕಳ ಹೆಸರಲ್ಲಿ ಆಚರಣೆ ಮಾಡಬೇಕಾದ ಅನಿವಾರ್ಯತೆಯಲ್ಲಿ ಇ೦ದು ದೇಶವಿದೆ. ವಿಡ೦ಬನೆ ಎನಿಸುವುದಿಲ್ಲವೇ? ನೆಹರೂಗೆ ಮಕ್ಕಳ ಮೇಲೆ ಪ್ರೀತಿ ಇತ್ತ೦ತೆ. ಅದಕ್ಕೆ ಅವರ ಜನ್ಮದಿನ ಮಕ್ಕಳ ದಿನಾಚರಣೆಯ೦ತೆ. ಮಕ್ಕಳ ಮೇಲೆ ಯಾರಿಗೆ ತಾನೇ ಪ್ರೀತಿ ಇರುವುದಿಲ್ಲ? ಹಿಟ್ಲರನಿಗೂ ಆಸೆ ಇತ್ತು. ಬಹುಶಃ ಮಾವೋನಿಗೂ ಇದ್ದಿರಬಹುದು. ಅಷ್ಟರಿ೦ದ ಅವರನ್ನು ಮಕ್ಕಳ ಪ್ರೇಮಿಗಳೆ೦ದು ಕರೆದುಬಿಡುವುದೆಷ್ಟು ಹಾಸ್ಯಾಸ್ಪದವೋ ನೆಹರೂ ಜನ್ಮದಿನದ ಆಚರಣೆಯೂ ಅಷ್ಟೇ ಹಾಸ್ಯಾಸ್ಪದ. ನೆಹರೂಗೆ ತನ್ನ ಜನ್ಮದಿನವನ್ನು ಆಚರಿಸಿಕೊಳ್ಳುವ ಮಹದಾಸೆ ಇತ್ತು. ಇನ್ನೇಕೆ ತಡ ಮಕ್ಕಳೇ ಸಿಕ್ಕಿದರು. ಅದರ ಆಚರಣೆಯನ್ನು ನಾವು ಮಾಡಿದೆವು.
ಮಕ್ಕಳ ನೆಪದಲ್ಲಿ ನೆಹರೂ ಗುಣಗಾನ ದೇಶದೆಲ್ಲೆಡೆ ನಡೆಯಿತು. ಏನೂ ಅರಿಯದ ಮಕ್ಕಳು ಚಾಚಾ ಚಿತ್ರಕ್ಕೆ ಹೂಮಾಲೆ ಹಾಕಿ, ಪಾರಿವಾಳ ಭುಜದಲ್ಲಿ ಕೂರಿಸಿಕೊ೦ಡ ನೆಹರೂಗೆ ಜೈಕಾರ ಹಾಕಿದರು. ಆದರೆ ಈ ಹೆಗ್ಗಳಿಕೆ ನ್ಯಾಯಯುತವಾದದ್ದೇ? ಅದೂ ಮಕ್ಕಳಿ೦ದ? ನೆಹರೂ ಆದರ್ಶವನ್ನು ಮಕ್ಕಳು ಪಾಲಿಸಲು ಕರೆಕೊಡಬಹುದೇ? ಒಳನುಗ್ಗಿದ ಚೀನಾ ಸೈನ್ಯವನ್ನು ಹಿಮ್ಮೆಟ್ಟುವ ಬದಲು ರಾಜೀ ಪ೦ಚಾತಿ ಮಾಡಿಕೊ೦ಡ ಘಟನೆ ಮಕ್ಕಳಿಗೆ ಯಾವ ಸ೦ದೇಶ ಕೊಟ್ಟೀತು? ತಾನೇ ದೇಶ ಎ೦ದು ನಿರ೦ತರ ೧೭ ವರ್ಷ ಆಳಿದವರು ಮಕ್ಕಳಿಗೆ ಅಧಿಕಾರ ಸ್ವಾರ್ಥವನ್ನು ಬಿಟ್ಟು ಮತ್ತೇನು ನೀತಿ ಕೊಟ್ಟಿತು? ಅಧಿಕಾರದ ಆಸೆಗಾಗಿ ಜಿನ್ನಾರೊಟ್ಟಿಗೆ ಕಚ್ಚಾಟ ಮಾಡಿದ್ದು, ದೇಶ ತು೦ಡಾದರೂ ಸರಿ ಅಧಿಕಾರದಲ್ಲಿ ಕೂರುವೆ ಎ೦ದು ನಡೆದುಕೊ೦ಡದ್ದು ಮಕ್ಕಳಲ್ಲಿ ಸಾತ್ವಿಕತೆಗೆ ಪ್ರೇರಕವೇ? ಭಾರತದ ಸ್ವಾತ೦ತ್ರ್ಯದ ಕೀರ್ತಿಯನ್ನು ಸ೦ಪೂರ್ಣ ನೆಹರೂಗೆ ಕೊಡುವುದೆ೦ದರೆ ಸುಭಾಷ್‌ರ೦ಥವರ ಬಗ್ಗೆ ಮಕ್ಕಳು ಯಾವ ಭಾವನೆಯನ್ನು ಬೆಳೆಸಿಕೊಳ್ಳಬೇಕು? ವ೦ಶವಾದದ ರಾಜಕಾರಣವನ್ನು ಪ್ರತಿಷ್ಠಾಪಿಸಿ ತನ್ನ ಅನ೦ತರ ಮಗಳನ್ನು ೧೬ ವರ್ಷ, ಮೊಮ್ಮಗನನ್ನು ೫ ವರ್ಷ.... ಇದೀಗ ಸೊಸೆ, ಮರಿಮಕ್ಕಳನ್ನೆಲ್ಲಾ ಅಧಿಕಾರಕ್ಕೆ ಕೂರಿಸುವ ಹುನ್ನಾರಕ್ಕೆ ನೆಹರೂವೇ ನೇರ ಹೊಣೆಗಾರ.
ಇನ್ನು ಮಕ್ಕಳು ಜನರಿ೦ದ ಜನರಿಗಾಗಿ ಎಂಬ ಬೋಧನೆಯ ಪ್ರಜಾಪ್ರಭುತ್ವದ ಬಗ್ಗೆ ಯಾವ ಧೋರಣೆಯನ್ನು ಬೆಳೆಸಿಕೊ೦ಡಾರು? ಅಮೆರಿಕಾದ ಮೊದಲ ಅಧ್ಯಕ್ಷರಾದ ಜಾರ್ಜ್ ವಾಷಿ೦ಗ್ಟನ್ ಎರಡು ವರ್ಷಗಳ ತರುವಾಯ ತಾವಾಗೇ ಸ್ಥಾನ ತ್ಯಜಿಸಿ ಅನ್ಯರಿಗೆ ಅವಕಾಶ ಮಾಡಿಕೊಟ್ಟರು. ಅದು ಪ್ರಜಾಪ್ರಭುತ್ವದ ಸ್ಫೂರ್ತಿ. ಅಮೆರಿಕಾದ ಬಹುತೇಕ ಅಧ್ಯಕ್ಷರು ಅದನ್ನು ಪಾಲಿಸುತ್ತಾರೆ. ಅಲ್ಲೇಕೆ ಹಾಗೆ ಇಲ್ಲೇಕೆ ಹೀಗೆ ಎ೦ದು ಮಕ್ಕಳು ಪ್ರಶ್ನಿಸಿದರೆ ಏನೆ೦ದು ಉತ್ತರ ಹೇಳಬಹುದು? ದೇಶ ವಿಭಜನೆ ಒ೦ದು ಹುಚ್ಚು ಕಲ್ಪನೆ ಎ೦ದಿದ್ದ ನೆಹರೂ ಅನ೦ತರ ಏಕೆ ಅದೇ ವಿಭಜಿತ ಭಾರತದಲ್ಲಿ ಅಳುಕಿಲ್ಲದೆ ಅಧಿಕಾರಕ್ಕೇರಿದರು? "ನೆಹರೂ ತಪ್ಪು ಮಾಡಿಬಿಟ್ಟರು" ಎ೦ದ ಸೇನಾಧಿಕಾರಿಗಳ ಮಾತಿನ ಅರ್ಥವನ್ನು ಮಕ್ಕಳು ಕೇಳಿದರೆ ಉತ್ತರಕ್ಕೆ ತಡವರಿಸಬೇಕೇ? ಅಥವಾ ಚಾಚಾ ನೆಹರೂ ಎ೦ದು ಎಲ್ಲವನ್ನೂ ಒಪ್ಪಿಕೊಳ್ಳಬೇಕೇ?
ಹೀಗೆ ಮಕ್ಕಳಿಗೆ ಆದರ್ಶವಾಗದ ನೆಹರೂ ಜನ್ಮದಿನ ಮಕ್ಕಳ ದಿನ. ಮಕ್ಕಳು ಕನಿಷ್ಠ ಕೇಳಿಸಿಕೊಳ್ಳಲೂ ಬಾರದ ಕೆಲವು ಘಟನೆಗಳಿಗೆ ಕಾರಣವಾದ ನೆಹರೂ ಸರಕಾರದ ಪ್ರಕಾರ ಚಿಣ್ಣರ ಗೆಳೆಯ. ೪೦ ವರ್ಷ ಆಳಿದ ಕಾ೦ಗ್ರೆಸ್‌ಗೆ ಮಕ್ಕಳ ನೆಪದಲ್ಲಿ ನೆಹರೂ ಗುಣಗಾನ ನಡೆಯಲಿ ಎ೦ಬ ಕುಟಿಲ ತ೦ತ್ರವಿತ್ತೇ? ಇಲ್ಲದಿದ್ದರೇನು? ಎಷ್ಟು ಚಿ೦ತಿಸಿದರೂ ಮಕ್ಕಳಿಗೂ ನೆಹರೂಗೂ ಇರುವ ಸ೦ಬ೦ಧ ಇಮಾ೦ ಸಾಬಿಗೂ ಗೋಕುಲಾಷ್ಟಗೂ ಸ೦ಬ೦ಧ ಹುಡುಕಿದಷ್ಟೇ ನಿಗೂಢವಾಗುತ್ತಾ ಸಾಗುತ್ತದೆ. ನೆಹರೂರ ಅನೈತಿಕ ಸ೦ಬ೦ಧಗಳು, ಸಿಗಾರ್ ಎಳೆಯುವ ಚಿತ್ರಗಳು, ಮೌ೦ಟ್ ಬ್ಯಾಟನ್‌ರ ಹೆ೦ಡತಿಯೊಟ್ಟಿಗಿನ ಅವರ ಅತಿಯಾದ ಗೆಳೆತನಗಳೆಲ್ಲಕ್ಕೂ ಮುಗ್ಧ, ಸ್ನಿಗ್ಧ, ಪ್ರಾ೦ಜಲ ಮನಸ್ಸಿನ ಮಕ್ಕಳಿಗೂ ಸ೦ಬ೦ಧ ಕಲ್ಪಿಸುವುದು, ದಿನಾಚರಣೆ ಮಾಡುವುದು ಮಕ್ಕಳ ನೈತಿಕ ಮಟ್ಟವನ್ನು ಕುಗ್ಗಿಸಿದ೦ತೆ. ಬುದ್ಧಿ ಬೆಳೆಯುವ ಹೊತ್ತಲ್ಲಿ ಸುಳ್ಳನ್ನು ನ೦ಬಿಸಿದ೦ತೆ. ಅವರ ಕೆಲವು ಸ೦ಗತಿಗಳ೦ತೂ ೧೮ ವರ್ಷ ಕೆಳಗಿನವರು ಕೇಳಲೂ ಬಾರದ೦ಥದ್ದು. ಒ೦ಥರಾ "ಎ" ಸರ್ಟಿಫಿಕೇಟ್ ಸಿನಿಮಾದ೦ತೆ. ಅ೦ಥದ್ದನ್ನೇ ನಾವು ಮಕ್ಕಳಿಗೆ ನಿಷಿದ್ಧ ಮಾಡಿದ್ದೇವೆ. ಇನ್ನು ನೆಹರೂರ ಬದುಕನ್ನು ಸ೦ಪೂರ್ಣ ತೆರೆದುಬಿಟ್ಟರೆ ಮಕ್ಕಳ ಪರಿಸ್ಥಿತಿ ಏನಾಗಬಹುದು?
ಒ೦ದು ದಿನಾಚರಣೆಗೂ ಒ೦ದು ಅರ್ಥವಿರಬೇಕು. ಅವು ಮಕ್ಕಳಾಟವಲ್ಲ. ಆ ದಿನ ಹಳೆಯದನ್ನು ಮೆಲುಕು ಹಾಕುವ೦ತಿರಬೇಕು. ಚಿ೦ತನೆಗಳು ಮೈದು೦ಬಿ ಬರಬೇಕು. ಅದೊ೦ದು ಮಹತ್ತ್ವವನ್ನು, ಆದರ್ಶವನ್ನು ಪ್ರತಿಪಾದಿಸುವ೦ತಿರಬೇಕು. ಕನಿಷ್ಠ ಅದಕ್ಕೊ೦ದು ಅರ್ಥವಾದರೂ ಇರಬೇಕು. ಸ್ವಾತ೦ತ್ರ್ಯ ದಿನ ಎ೦ದು ವಿಭಜನೆಯ ದಿನವನ್ನು ಆಚರಿಸಿದ೦ತಿರಬಾರದು. ಬ್ರಿಟಿಷರ ಕಾನೂನು ಪಾಸು ಮಾಡಿದ ದಿನವನ್ನೂ ಸ್ವಾತ೦ತ್ರ್ಯ ದಿನ ಎನ್ನುವ೦ತಿರಬಾರದು. ಒ೦ದು ದಿನಾಚರಣೆ ಎ೦ದರೆ ಅದನ್ನು ಎದೆತು೦ಬಿ ಆಚರಣೆ ಮಾಡುವ೦ತಾದರೂ ಇರಬೇಕು. ದೀಪಾವಳಿ, ಯುಗಾದಿ ಆಚರಿಸಿದ೦ತೆ.
ಶಿಕ್ಷಕರ ದಿನಾಚರಣೆಯನ್ನೇ ತೆಗೆದುಕೊಳ್ಳಬಹುದು. ಡಾ. ರಾಧಾಕೃಷ್ಣನ್ ಕೂಡಾ ಶಿಕ್ಷಕರೇ. ಶಿಕ್ಷಕ ವೃತ್ತಿಯೇ ಅವರಿಗೆ ಪ್ರೀತಿ. ಅದೇ ಅವರ ಉಸಿರು. ಮೇಲಾಗಿ ಆದರ್ಶ ಪುರುಷರು. ಶಿಕ್ಷಕರೆ೦ದರೆ ಹೀಗಿರಬೇಕು ಎ೦ದು ಬದುಕಿದವರು. ಹಾಗಾಗಿ ಆ ಶಿಕ್ಷಕರ ದಿನಕ್ಕೊ೦ದು ಅರ್ಥವಿದೆ. ಆದರೆ ಚಾಚಾ ವಿಷ೦ದಲ್ಲಿ ಹೀಗೆ ಹೇಳಬಹುದೇ? ಮಕ್ಕಳು ದೊಡ್ಡವರಾಗಿ ನೆಹರೂ ಹಾಗೆ ಆಗಬೇಕು ಎ೦ದು ಹೇಳಬಹುದೇ? ಅವರ ಚರಿತ್ರೆ ಗೊತ್ತಿರುವವರು ಯಾರಾದರೂ ಹೇಳಿಯಾರೇ? ದೇವೇ ಗೌಡರು ಇ೦ಜಿನಿಯರಿ೦ಗ್ ಓದಿದವರೆ೦ದು "ಕನ್ನಡ ಅಭಿಯ೦ತರರ ದಿನ" ಎ೦ದು ಘೋಷಿಸುವುದೆಷ್ಟು ಮೂರ್ಖತನವೋ ಮಕ್ಕಳ ದಿನಾಚರಣೆಯೂ ಅಷ್ಟೇ ಮೂರ್ಖತನದ ಆಚರಣೆ.
ಪ್ರತಿವರ್ಷ ಮಕ್ಕಳ ದಿನಾಚರಣೆ ಮುಗಿಯುತ್ತದೆ. ಮಕ್ಕಳು ಗುಲಾಬಿ ಹಿಡಿದು ಹೊರಟರೆ ಮನೆಯಲ್ಲಿ ಸ೦ಭ್ರಮ. ಇ೦ದು ಅವರ ದಿನವೆ೦ಬ ಹೆಗ್ಗಳಿಕೆ. ಆದರೆ ಇ೦ಥ ಸ೦ಭ್ರಮ ಒ೦ದು ನೈತಿಕ ಪತನ ಎ೦ಬುದು ಯಾರಿಗೂ ಅರಿವಾಗುತ್ತಿಲ್ಲ. ದೇಶದ ಬಗ್ಗೆ ಕಾಳಜಿ ಇರುವ ಯಾರೇ ಒಬ್ಬನಿಗೂ, ಸ್ವಾಭಿಮಾನದ ಲವಲೇಶವಿರುವ ಯಾರಿಗೆ ಆದರೂ ಅದರ ಆಚರಣೆ ಸ೦ಭ್ರಮ ತರಲಾರದು. ಮಕ್ಕಳ ದಿನಾಚರಣೆ ಆಚರಿಸುವ ಸರ್ಕಾರ ಕಾರ್ಗಿಲ್ ವಿಜಯ ದಿನವನ್ನು, ಸೈನಿಕ ದಿನವನ್ನು ಹೇಗೆ ಆಚರಿಸುತ್ತದೆ? ಅದೇ ಕಾರ್ಗಿಲ್ಲನ್ನು ಅ೦ದು ಸ್ವಚ್ಛಗೊಳಿಸುವ ಅವಕಾಶಗಳನ್ನು ಕೈಬಿಟ್ಟವರು ಇದೇ ನೆಹರು. ಪ್ರಕ್ಷುಬ್ಧ ಕಾಶ್ಮೀರಕ್ಕೂ ಕಾರಣ ಇದೇ ನೆಹರು. ದೇಶದೊಳಗೊ೦ದು ದೇಶ ಹುಟ್ಟಿಸಿದವರು ಇದೇ ನೆಹರು. ಕಾಶ್ಮೀರದಲ್ಲಿ ಪ್ರತ್ಯೇಕತೆಯ ಬೀಜಾ೦ಕುರ ಮಾಡಿದವರೂ ಇದೇ ನೆಹರು. ಅ೦ಥ ಕಾಶ್ಮೀರದ ರಕ್ಷಣೆಗಾಗಿ ಸಾವಿರಾರು ಯೋಧರ ಸಾವಿಗೂ ಕಾರಣ ಇದೇ ನೆಹರು. ಕಾರ್ಗಿಲ್‌ನಲ್ಲಿ ಘನಘೋರ ಕದನಕ್ಕೂ ಕಾರಣ ಇದೇ ನೆಹರು. ನಮ್ಮ ನೆಲದಲ್ಲಿ ನಮ್ಮವರು ಸಾಯುತ್ತಿರುವುದಕ್ಕೆ ಕಾರಣ ಇದೇ ನೆಹರು. ಆದರೂ ಅವರ ಜನ್ಮದಿನವನ್ನು ದೇಶಾದ್ಯ೦ತ ಕನಸು ಚಿಗುರುವ ಚಿಣ್ಣರ ದಿನವೆ೦ದು ಆಚರಣೆ!
ಇದೊ೦ಥರಾ ಅಕ್ಬರನ "ದೀನ - ಇಲಾಯಿ" ಮತ ಸ್ಥಾಪನೆ ಮಾಡಿದ೦ತೆ ಎನಿಸುತ್ತದೆ. ತನ್ನ ನೆನಪು ಶಾಶ್ವತ ಇರಲೆ೦ದು ಆತ ಅತ್ತ ಇಸ್ಲಾಮೂ ಅಲ್ಲದ ಇತ್ತ ಇನ್ನೊ೦ದೂ ಅಲ್ಲದ ಆಚರಣಾ ವಿಧಾನವೊ೦ದನ್ನು ಸ್ಥಾಪಿಸಿಕೊ೦ಡಿದ್ದ. ಅದರ ಕರ್ತೃ ತಾನಾಗಿ, ತನ್ನ ಕಾಲು ತೊಳೆದ ನೀರಿನ ಪ್ರೋಕ್ಷಣೆ, ಸೇವನೆಯೇ ಅದರೆ ಎಂಟ್ರಿ ವಿಧಾನ ಎ೦ದು ನಿಗದಿಪಡಿಸಿದ್ದ. ನೆಹರೂ ಮತ್ತು ಕಾ೦ಗ್ರೆಸ್ ಮಾಡಿದ್ದು ಹೀಗೆಯೇ. ಅದೂ ಮಕ್ಕಳ ಮೇಲೆ. ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಿದ೦ತೆ. ನೆಹರೂ ಅವಾ೦ತರಗಳ ಅರಿವಿಗೆ ಇ೦ದು ಭರವಿಲ್ಲ. ಈಗಾಗಲೇ ಅದು ಸಾರ್ವತ್ರಿಕವಾಗಿ ಎಲ್ಲರ ಗಮನಕ್ಕೂ ಬ೦ದಿದೆ. ಪ್ರಪ೦ಚ ಒಳಿತು ಕೆಡುಕುಗಳನ್ನು ನಿಷ್ಕರ್ಷೆ ಮಾಡಲು ಇ೦ದು ಮುಕ್ತವಾಗಿ ತೆರೆದಿಕೊ೦ಡಿದೆ. ಧೈರ್ಯ ಬೆಳೆಸಿಕೊ೦ಡಿದೆ. ಓರ್ವ ನೆಹರೂವೇ ದೇಶವೆ೦ಬ ಕಾಲದಲ್ಲಿ ಇ೦ದು ದೇಶವಾಸಿಗಳೂ ಇಲ್ಲ. ಆದರೆ ನಿಸ್ಸ೦ಶ೦ವಾಗಿ ಮಕ್ಕಳ ದಿನ ನಡೆಯಲಿ. ಇಷ್ಟು ವರ್ಷ ನಡೆದಿದೆ. ಮು೦ದೂ ನವ೦ಬರ್ ೧೪ ಕ್ಕೇ ನಡೆಯಲಿ. ಆದರೆ ನೆಹರೂ ಪರದೆ ಸರಿಯಲಿ.
ಅವಸರದ ಸ್ವಾತ೦ತ್ರ್ಯದೆಡೆಯಲ್ಲಿ ದೇಶ ಹಲವು ಹೇರಿಕೆಗಳನ್ನು ಅನುಭವಿಸಿದೆ. ಮೈದಾನ, ಪಾರ್ಕು, ಬಸ್‌ಸ್ಟ್ಯಾ೦ಡು, ಕಾಡು, ಮರ, ಗೊಬ್ಬರಗಳಿಗೆಲ್ಲಾ ನೆಹರೂ ಹೆಸರನ್ನು ಇಟ್ಟು ಅವೆಲ್ಲವನ್ನೂ "ಸಾರ್ಥಕ" ಗೊಳಿಸಲಾಗಿದೆ. ಆ ಹೆಸರು ಅವುಗಳಿಗೇ ಸರಿ. ಆದರೆ ಮಕ್ಕಳಿಗೆ ವರ್ಜ್ಯವಾದ ಪದ. ಒ೦ದು ಘಟನೆ ನೆನಪಾಗುತ್ತದೆ. ಅವರೊಬ್ಬರು ಖ್ಯಾತ ಗಾ೦ಧೀವಾದಿಗಳು, ಪ್ರಸಿದ್ಧ ಚಿ೦ತಕರು, ತತ್ವಶಾಸ್ತ್ರಜ್ಞರು. ಗಾ೦ಧಿ೦ "ಹಿ೦ದ್ ಸ್ವರಾಜ್" ನ ಬಗ್ಗೆ ಅವರು ಒ೦ದೆಡೆ ಮಾತಾಡುತ್ತಿದ್ದರು. ಅದರ ಬಗೆಗೆ ಸ೦ವಾದವೂ ಇತ್ತು. ಒಬ್ಬರು ಪ್ರಶ್ನೆಯನ್ನೆಸೆದರು. "ಯ೦ತ್ರಗಳನ್ನು ಅಷ್ಟೊ೦ದು ವಿರೋಧಿಸುತ್ತಿದ್ದ ಗಾ೦ಧೀಜಿ ವಿದೇಶಿಯನ೦ತಿದ್ದ ನೆಹರೂ ಕೈಗೆ ದೇಶವನ್ನು ಏಕೆ ಕೊಟ್ಟರು? ಚಿ೦ತಕರ ಉತ್ತರ ಹೀಗಿತ್ತು. "ದೇಶವನ್ನು ಈತನ ಕೈಗೆ ಕೊಟ್ಟರಾದರೂ ಆತ ಸುಧಾರಿಸಬಲ್ಲ, ದೇಶವನ್ನು ಅರ್ಥೈಸಿಕೊಳ್ಳಬಲ್ಲ ಎ೦ದು ಗಾ೦ಧಿಗೆ ಅನಿಸಿತ್ತು" ಎ೦ದರು.
ಇ೦ಥ ಉತ್ತರವನ್ನು ಮಕ್ಕಳಿಗೆ ಹೇಳಲು ಸಾಧ್ಯವೇ?

Friday, October 28, 2011

ದರ್ಶನಶಾಸ್ತ್ರ ಇತಿಹಾಸವಲ್ಲವೇನು?


ಇಂಗ್ಲಿಷಿನ ಪಿಲಾಸಫಿ ಇಂದು ಜಗತ್ತಿನಲ್ಲಿ ಅತ್ಯಂತ ಜನಪ್ರೀಯ ಶಾಸ್ತ್ರ. ವಿವಿಧ ಜನವರ್ಗಕ್ಕೆ ಪ್ರಿಯವಾದ ಪಿಲಾಸಫಿ ಇಂದು ಹಲವು ವಿಶ್ವವಿದ್ಯಾಲಯಗಳಲ್ಲಿ ಪಠ್ಯವಾಗಿ ಕಲಿಸಲ್ಪಡುತ್ತಿದೆ. ಅದರ ಜನಪ್ರಿಯತೆಗೆ ಕಾರಣವೇನೆಂದು ಚಿಂತಿಸಿದರೆ ಕಾಣುವುದು ಮನುಷ್ಯನೇ. ಆತನ ಮೂಲವೇ. ಏಕೆಂದರೆ ಮನುಷ್ಯ ಮೂಲತಃ ಕುತೂಹಲಿ. ತಾನಾರು? ತಾನು ಎಲ್ಲಿಂದ ಬಂದವನು ಎಂಬ ಪ್ರಶ್ನೆಗಳ ಸುಳಿಯೊಳಗೆ ಸಾಗುವುದೇ ಈ ಪಿಲಾಸಫಿ. ಭಾರತೀಯ ಪರಿಭಾಷೆಯಲ್ಲಿ ಈ ಪಿಲಾಸಫಿಯನ್ನು ವೇದಾಂತ ಎಂದು ಕುಹಕ ನುಡಿಯುವವರಿದ್ದಾರೆ. ಅಲ್ಲದೆ ಭಾರತೀಯ ತತ್ತ್ವಶಾಸ್ತ್ರಕ್ಕೂ ಪಾಶ್ಚಾತ್ಯ ಪಿಲಾಸಫಿಗೂ ವ್ಯತ್ಯಾಸಗಳಿವೆ. ಪಾಶ್ಚಾತ್ಯ ಪಿಲಾಸಫಿಯ ಉದ್ದೇಶ ಕುತೂಹಲವನ್ನು ತಣಿಸುವುದು ಮಾತ್ರವಾಗಿದ್ದರೆ ಭಾರತೀಯ ತತ್ತ್ವಶಾಸ್ತ್ರ ಚಿಂತನ ಪ್ರಧಾನವಾದದ್ದು. ಚಿಂತನೆಯಾಧಾರದಲ್ಲಿ ಅರಿವನ್ನು ಹುಡುಕುತ್ತಾ ಮಾನವತೆಯನ್ನು ಹುಡುಕುವುದು. ಚಿಂತನೆಯಲ್ಲೇ ಸಮಾಜವನ್ನು ಅರಿಯುವುದು. ಸಾಗುತ್ತಾ ಸಾಗುತ್ತಾ ಉತ್ತುಂಗವೆಂಬ "ಸ್ಥಿತಿ"ಯನ್ನು ಮುಟ್ಟುವುದು. ಆ "ಸ್ಥಿತಿ" ಎಂಬುದು ಪಡೆದವರಷ್ಟೇ ಅರಿತ ಅಂತಿಮ ಸತ್ಯ. ಆ "ಸ್ಥಿತಿ"ಪಾಶ್ಚಾತ್ಯದಂತೆ ಕತ್ತಲ ಕೋಣೆಯಲ್ಲಿ ಕರಿ ಬೆಕ್ಕನ್ನು ಹುಡುಕಿದಂತಲ್ಲ. ಹಾಗಾಗಿ ಭಾರತೀಯ "ದರ್ಶನ"ಗಳಿಗೂ ಪಾಶ್ಚಾತ್ಯ ಪಿಲಾಸಫಿಗೂ ವ್ಯತ್ಯಾಸವಿದೆ.
ಭಾರತದಲ್ಲಿ ಪಿಲಾಸಫಿ ಒಂದು ಶಾಸ್ತ್ರ, ಜ್ಞಾನ ಮೀಮಾಂಸೆ, ಅರಿವಿನ ಹುಡುಕಾಟ, ತನಗೆ ಇಂದ್ರಿಯಗಳು ಇರುವುದು ವಾಸ್ತವವೆಂದಾದರೆ ಅದು ತನ್ನೊಬ್ಬನಿಂದಲೇ ನಡೆಯತಕ್ಕದ್ದಲ್ಲ. ಹಾಗಾದರೆ ಅದೇನು ಎಂಬಲ್ಲಿಂದ ಪ್ರಾರಂಭಗೊಂಡು ಯಾವುದು ನಿಜ? ಯಾವುದು ಭ್ರಮೆ? ಎಲ್ಲಿದೆ ವ್ಯಾಪ್ತಿ? ಎಲ್ಲಿದೆ ಮಿತಿ? ಎಂಬ ತರ್ಕಗಳೆಡೆಗೆ ಸಾಗುವುದು ಭಾರತೀಯ ತತ್ತ್ವಶಾಸ್ತ್ರದ ಲಕ್ಷಣ. ಭಾರತೀಯ ತತ್ತ್ವಶಾಸ್ತ್ರಗಳು ಏಕಕಾಲಕ್ಕೆ ಇತಿಹಾಸವೂ ಹೌದು, ದರ್ಶನವೂ ಹೌದು. ಆದರೆ ಪಾಶ್ಚಾತ್ಯ ಚೌಕಟ್ಟಿನ ಕತ್ತಲೆ ಕೋಣೆಯಲ್ಲಿ ಕರಿಬೆಕ್ಕು ಹುಡುಕುವ ಪ್ರಕ್ರಿಯೆ ವಿಡಂಭನಾತ್ಮಕವಾಗಿ ಕಾಣುವುದಷ್ಟೇ ಅಲ್ಲದೆ ಭಾರತೀಯ ತತ್ತ್ವಗಳೆಡೆಯಲ್ಲಿ ಅವು ತೀರಾ ಕ್ಷಣಿಕವೆಂದು ಕಾಣುತ್ತವೆ. ಅಂಥಲ್ಲಿ ಅರಿವನ್ನು ಹುಡುಕುವವರಿಗೆ ವಿಷವಿಕ್ಕಿದ ಉದಾಹರಣೆಗಳೂ ಸಿಗಬಹುದೇ ಹೊರತು ಭಾರತೀಯ ದರ್ಶನ ಶಾಸ್ತ್ರಗಳಲ್ಲಿ ಅಂಥ ಸಂಗತಿಗಳು ಗೋಚರಿಸುವುದಿಲ್ಲ.
ಭಾರತದಲ್ಲಿ ಹುಟ್ಟಿಬೆಳೆದ ದರ್ಶನಗಳಲ್ಲಿ ಹಲವಾರು ಪ್ರಬೇಧಗಳು. ಅವು ಇತಿಹಾಸದ ಮೂಸೆಯಲ್ಲಿ ಅದ್ದಿ ತೆಗೆದವುಗಳಲ್ಲದೆ ಬೇರೇನೂ ಅಲ್ಲ. ಆಯಾಯ ಕಾಲಘಟ್ಟದಲ್ಲಿ ನಡೆದ ಸಾಮಾಜಿಕ ಸ್ಥಿತ್ಯಂತರಗಳ ಹಿಂದೆ ಭಾರತೀಯ ದರ್ಶನಗಳ ನೆರಳಿದೆ. ಸಮಾಜವನ್ನು ಆಯಾಯ ದರ್ಶನಗಳಿಂದಲೇ ಗುರುತಿಸುವಷ್ಟು ಪ್ರಬಲವಾಗಿದ್ದವೆಂದರೆ ದರ್ಶನಗಳು ಇತಿಹಾಸದ ಮಹಾಘಟ್ಟಗಳಲ್ಲದೆ ಮತ್ತೇನು? ಈ ಹಿನ್ನಲೆಯಲ್ಲಿ ಅಧ್ಯಯನದ ದೃಷ್ಟಿಯಿಂದ ಅವುಗಳನ್ನು ವಿಂಗಡಿಸುವುದೇ ಬಹು ಶ್ರಮದಾಯಕ ಕೆಲಸ ಎಂಬುದನ್ನು ವಿದ್ವಾಂಸರೇ ಅಭಿಪ್ರಾಯಪಟ್ಟಿದ್ದಾರೆ. ಆ ಶ್ರಮದಾಯಕ ಕೆಲಸ ದರ್ಶನಗಳನ್ನು ಇತಿಹಾಸವೆಂಬ ಪಟ್ಟದಿಂದ ದೂರವಾಗಿಸಿದೆಯೇ ಎಂಬ ಸಂದೇಹವೂ ಉಂಟಾಗುತ್ತದೆ. ಅಲ್ಲದೆ ಪಾಶ್ಚಾತ್ಯ ರಿವಾಜಿನಂತೆ ತತ್ತ್ವಶಾಸ್ತ್ರಗಳು ಇತಿಹಾಸಗಳಲ್ಲ. ಅದು ಬೇರೆಯೇ ಆದ ಶಾಸ್ತ್ರ. ಅಲ್ಲಿ ತತ್ತ್ವಶಾಸ್ತ್ರ ಮತ್ತು ಇತಿಹಾಸಗಳಿಗೆ ವಿಭಿನ್ನವಾದ ವ್ಯಾಖ್ಯಾನಗಳಿವೆ. ಆ ವ್ಯಾಖ್ಯಾನಗಳು ಅಲ್ಲಿಗೆ ಅನ್ವಯಿಸುವುದು ಸರಿಯಾಗಿರಬಹುದು. ಆದರೆ ತತ್ತ್ವಶಾಸ್ತ್ರಕ್ಕೂ ಇತಿಹಾಸಕ್ಕೂ ನೇರಾನೇರಾ ಸಂಬಂಧವಿರುವ ಭಾರತದಂತಹ ದೇಶದಲ್ಲಿ ದರ್ಶನಗಳನ್ನು ಇತಿಹಾಸಗಳೆಂದು ಏಕೆ ಪರಿಗಣಿಸುತ್ತಿಲ್ಲ?
ಪ್ರಸ್ತುತ ಇತಿಹಾಸವೆಂಬ ಶಾಸ್ತ್ರಕ್ಕೆ ಪ್ರಮಾಣಗಳು ಬೇಕಾಗಿವೆ. ಏಕೆಂದರೆ ಇದು ಪ್ರಬಲವಾಗಿ ಮಂಡಿಸತಕ್ಕ ಮತ್ತು ಸಕಲ ವೈಖರಿಯೊಡನೆ ವಾದಿಸತಕ್ಕ ವಿಷಯ. ಇಂಥ ವಿಷಯಕ್ಕೆ ಅನಿವಾರ್ಯವಾಗಿ ಸೀಮಿತತೆಯೊಂದು ತನ್ನಿಂದತಾನೇ ಸೃಷ್ಟಿಯಾಗಿಬಿಟ್ಟಿರುತ್ತದೆ. ಅದು ಅದರ ಕೊರತೆ. ಈ ಕೊರತೆಗೆ ತರ್ಕ, ಪ್ರಮಾಣಗಳಿರುವ ದರ್ಶನಗಳು ಮರೆಯಲ್ಲಿರಬೇಕು! ಭಾರತೀಯ ದರ್ಶನಗಳ ಅಧ್ಯಯನವೆಂದರೆ ಒಟ್ಟೊಟ್ಟಿಗೆ ಭಾರತೀಯ ಮಾನವೇತಿಹಾಸದ ಅಧ್ಯಯನ ಮತ್ತು ಹಿಂದುತ್ವದ್ದೂ ಅಧ್ಯಯನ. ಆದರೆ ತತ್ತ್ವಶಾಸ್ತ್ರಗಳನ್ನು ಇತಿಹಾಸದ ಚೌಕಟ್ಟಿನಿಂದ ಹೊರಗಿಟ್ಟ ಕಾರಣ ಇವೆರಡೂ ಅಧ್ಯಯನಗಳಿಗೆ ತೊಡಕಾಗಿವೆ. ದ್ವೈತ-ಅದ್ವೈತ-ಸಾಂಖ್ಯ-ಮೀಮಾಂಸ-ಚಾರ್ವಾಕ-ಜೈನ ಇತ್ಯಾದಿಗಳ ಸೆಲೆಗಳು ಇಂದು ಮೂಲೆಗುಂಪಾಗುತ್ತಿವೆ. ದರ್ಶನಗಳ ಸರಿಯಾದ ಜ್ಞಾನವಿಲ್ಲದೆ ಡಾಂಭಿಕತೆಯ ಧಾರ್ಮಿಕತೆಗಳು ನುಸುಳಲು, ಬುದ್ಧಿಜೀವಿಗಳಿಗೆ ತೆಗಳಲು ಸರಕೂ ಆಗಿ ನಮ್ಮೆದುರು ನಿಂತಿವೆ. ಉದಾಹರಣೆಗೆ ಇಂದು ಬೌದ್ಧ ಎಂಬುದು ಇತಿಹಾಸದಲ್ಲಿ ಕಂಡುಬರುವುದು ಅದನ್ನು ಅಳವಡಿಸಿಕೊಂಡ ರಾಜರ ಕಥೆಗಳಿಂದ ಮಾತ್ರ.
ಪಾಶ್ಚಾತ್ಯ ಪ್ರಣೀತ ಇತಿಹಾಸ, ಹಿಂದೂ ದಮನದ ಇತಿಹಾಸ ಮತ್ತು ಅಸತ್ಯವನ್ನೇ ಅಧ್ಯಯನ ಮಾಡಬೇಕಾದ ಅನಿವಾರ್ಯತೆಗಳ ಹಿಂದೆ ದರ್ಶನ ಶಾಸ್ತ್ರವೊಂದು ಉದಾಹರಣೆಯೆನಿಸುತ್ತದೆ. ಪ್ರಸ್ತುತ ಸಂಚಿಕೆಯಲ್ಲಿ ಇತಿಹಾಸದ ಸುತ್ತಮುತ್ತಲಿನ ಸಂಗತಿಗಳನ್ನೇ ಚರ್ಚಿಸಿದ್ದೇವೆ.

Tuesday, October 11, 2011

ಇಂಥ ಸುದ್ಧಿಗಳನ್ನು ಆಕಾಶವಾಣಿಯಿಂದಲೇ ಕೇಳುತ್ತಿದ್ದೀರಿ


ಒಂದು ಕಾಲವಿತ್ತು. ಆಕಾಶವಾಣಿಯೆಂದರೆ ಅದು ಜನರದ್ದೇ ವಾಣಿ ಎಂಬ ಪರಿಸ್ಥಿತಿಯಿತ್ತು.ವಿದ್ಯುತ್ ಇಲ್ಲದ ಕಾಲದಲ್ಲೂ ಹಳ್ಳಿಯಿಂದ ದಿಲ್ಲಿಯವರೆಗಿನ ಜನ ಈ ಅಶರೀರವಾಣಿಯನ್ನು ಎಷ್ಟು ಹಚ್ಚಿಕೊಂಡಿದ್ದರೆಂದರೆ ಅಕಾಶವಾಣಿಯಿಲ್ಲದ ಬದುಕು ಅವರಿಂದ ನಡೆಸಲಾಗುತ್ತಿರಲಿಲ್ಲ. ಅಕ್ಷರಜ್ಞಾನವಿಲ್ಲದ ಜನರು ಪ್ರಪಂಚ ಕಾಣುತ್ತಿದ್ದುದ್ದೇ ಈ ಆಕಾಶವಾಣಿಯಿಂದ. ಒಟ್ಟಾರೆ ಹೇಳಬೇಕೆಂದರೆ ದೇಶವನ್ನು ದೀರ್ಘ ಕಾಲದವರೆಗೆ ರೂಪಿಸಿದ್ದು ,ಅರಳಿಸಿದ್ದು, ಎಜುಕೇಟ್ ಮಾಡಿದ್ದು ಅಕಾಶವಾಣಿಯೇ.ಚೀನಾ ಭಾರತದ ಗಡಿ ನುಸುಳಿದ್ದನ್ನು ,ಗಾಂಧಿ ಗುಂಡಿಗೆ ಬಲಿಯಾಗಿದ್ದನ್ನು, ನೆಹರೂ ಸತ್ತದ್ದನ್ನು ,ಇಂದಿರಾಗಾಂಧಿ ತುರ್ತುಪರಿಸ್ಥಿತಿಯನ್ನು ಹೇರಿದ್ದನ್ನು ,ಕಪಿಲ್-ಗವಾಸ್ಕರರ ಆಟಗಳನ್ನು ,ಗೋರ್ಬಚೇವ್ ಅಧಿಕಾರದಿಂದ ಇಳಿದಿದ್ದನ್ನು ,ಸಿಲೋನಿನ ರಕ್ತಪಾತವನ್ನು ,ಅಮಿತಾಬ್ ಬಚ್ಚನ್ನಿನ ಸ್ವರವನ್ನು , ಡಾಬರ್ ಹಲ್ಲಿನ ಪುಡಿಯನ್ನು ಮನೆಮನೆಗೆ ಪರಿಚಯಿಸಿದ್ದು ಮಾಡಿದ್ದು ಆಕಾಶವಾಣಿಯೇ. ಪಾರ್ಲಿಮೆಂಟಿನ ನಿರ್ಣಯಗಳು, ಕೋರ್ಟುಗಳ ಸದ್ಧುಗಳು,ಚುನಾವಣೆಗಳು, ಫಲಿತಾಂಶಗಳು,ಭಾಷಣಗಳು,ಸ್ವಾತಂತ್ರ್ಯೊತ್ಸವಗಳು, ಗಣತಂತ್ರದ ಆಚರಣೆಗಳು ನಮಗೆಲ್ಲಾ ಗೊತ್ತಾಗಿದ್ದು ಆಕಾಶವಾಣಿಯಿಂದ. ಜನರು ಬ್ರೇಕಿಂಗ್ ನ್ಯೂಸ್ ಚಾನೆಲ್ ಭರಾಟೆಯಿಲ್ಲದ ಕಾಲದಲ್ಲೂ ಜನ ಲೋಕಾರೂಡಿ ಮಾತಾಡುವಂತೆ ಮಾಡಿದ್ದು ಕೂಡ ಇದೇ ಅಕಾಶವಾಣಿ. ಅಷ್ಟರಮಟ್ಟಿಗೆ ಆಕಾಶವಾಣಿ ಭಾರತದಲ್ಲಿ ಪ್ರಬಲ. ವಿಶ್ವದ ಹಲವು ರೇಡಿಯೋ ಸಂಸ್ಥೆಗಳಲ್ಲಿ ಎದ್ದು ಕಾಣುವುದು ಭಾರತದ ಈ ಆಕಾಶವಾಣಿ. ಇಂದಿಗೂ ದೇಶದ ಆಯಕಟ್ಟಿನ ಜಾಗಗಳಲ್ಲಿರುವವರು ದೇಶವನ್ನು ಉದ್ದೇಶಿಸಿ ಮಾತನಾಡಲು ಅಕಾಶವಾಣಿಯೇ ಮಾಧ್ಯಮ. ಏಕೆಂದರೆ ಆಕಾಶವಾಣಿ ಪ್ರಜಾಪ್ರಭುತ್ವದ ಮುಖವಾಣಿ. ಅದು ಎಂದೂ ಸರಕಾರದ ಮುಖವಾಣಿಯಲ್ಲ. ಹೀಗಾಗಿ ಆಕಾಶವಾಣಿಗೆ ದೇಶದಲ್ಲಿ ತನ್ನದೇ ಆದ ಘನತೆಯಿದೆ. ಗೌರವವಿದೆ.
ಆಧುನಿಕತೆಯ , ವೇಗದ ಈ ಯುಗದಲ್ಲಿ ಮಾಧ್ಯಮಲೋಕದ ಅಬ್ಬರ ಹೆಚ್ಚಿರಬಹುದು. ನೂರಾರು ನ್ಯೂಸ್ ಚಾನೆಲ್‌ಗಳು ಗಳಿಗೆ ಗಳಿಗೆಗೂ ಸುದ್ಧಿ ಬಿತ್ತರಿಸುತ್ತಿರಬಹುದು. ಮತ್ತು ಇಂದು ರೇಡಿಯೋ ಎಂದಾಗ ಎಫ್.ಎಂ.ಗಳೂ ನೆನಪಿಗೆ ಬರಬಹುದು. ಆದರೆ ಆಕಾಶವಾಣಿ ಅವೆಲ್ಲಕ್ಕಿಂತಲೂ ಒಂದು ಕೈ ಮುಂದಿರುವಂಥದ್ದು. ಇಂದಿಗೂ ರಾಷ್ಟ್ರಪತಿಯವರ ಸಾರ್ವಜನಿಕ ಕಾರ್ಯಕ್ರಮಗಳ ಅಧಿಕೃತ ದಾಖಲೆಯನ್ನು ರಾಷ್ಟ್ರಪತಿಭವನಕ್ಕೆ ತಲುಪಿಸುವ ಗುರುತರವಾದ ಜವಾಬ್ದಾರಿ ಆಕಾಶವಾಣಿಗಿದೆ. ದೇಶದಲ್ಲಿ ಎಲ್ಲೇ ಪ್ರಾಕೃತಿಕ ವಿಕೋಪಗಳಾಗಲೀ,ಅನಾಹುತಗಳಾಗಲೀ ಸಾವು ನೋವುಗಳು ಸಂಭವಿಸಿದಾಗ ಅದರ ಅಧಿಕೃತ ಅಂಕೆಸಂಖ್ಯೆಗಳಿಗಾಗಿ ಸರಕಾರಗಳು ಗಮನಿಸುವುದು ಆಕಾಶವಾಣಿಯನ್ನೇ. ಆಕಾಶವಾಣಿಯೆಂದರೆ ಅಷ್ಟೊಂದು ನಂಬಿಕೆ.ಅಷ್ಟೊಂದು ಗೌರವ.ಅಷ್ಟೊಂದು ಪ್ರೀತಿ. ಅಂಥ ಪ್ರೀತಿ ಗೌರವಗಳು ಜನರಲ್ಲಿ ಇದ್ದುದರಿಂದಲೇ ಮೊದಲೆಲ್ಲಾ ಯೋಧರು ತರುತ್ತಿದ್ದ ಟ್ರಾನ್ಸಿಸ್ಟರ್‌ಗಳನ್ನು ನೋಡಲು ಊರಿಗೆ ಊರೇ ಯೋಧನ ಮನೆಗೆ ಧಾವಿಸುತ್ತಿತ್ತು ಎನ್ನುವ ಕಥೆಗಳು ಹಲವು ಊರುಗಳಲ್ಲಿ ಇಂದಿಗೂ ಪ್ರಚಲಿತವಿದೆ.
ಹೊಸ ಸಹಸ್ರಮಾನದಿಂದೀಚೆಗೆ ಪತ್ರಿಕೆಗಳು ಮತ್ತು ವಿದ್ಯುನ್ಮಾನ ಮಾಧ್ಯಮಗಳು ತಮ್ಮ ವ್ಯಾಪ್ತಿಯನ್ನು ದಿಡೀರನೆ ಹೆಚ್ಚಿಸಿಕೊಂಡವು. ಅಹೋರಾತ್ರಿ ಕಾರ್ಯಕ್ರಮಗಳನ್ನು ಬಿತ್ತರಿಸುವ ಜಾಲಗಳೂ ಬಂದವು. ಬ್ರೇಕಿಂಗ್ ನ್ಯೂಸ್‌ಗಳು, ಶೀಘ್ರ ಸುದ್ಧಿ ಕೊಡಬೇಕಾದ ಧಾವಂತಗಳು ಮಾಧ್ಯಮಗಳಲ್ಲಿ ಏಕಾಏಕಿ ಕಂಡುಬಂತು. ಇವುಗಳೆಲ್ಲದರ ನಡುವೆ ಆಕಾಶವಾಣಿ ಸಂಪ್ರದಾಯಬದ್ದವಾಗಿ ನಿಧಾನವಾದರೂ ನಿಖರತೆಗೆ ಪ್ರಧಾನವಾದ ,ಧಾವಂತವಿಲ್ಲದ ,ಸ್ವಪ್ರತಿಷ್ಠತೆಯಿಲ್ಲದೆ ತನ್ನ ಪಾಡಿಗೆ ತಾನು ನಡೆಯುತ್ತಿತ್ತು. ದೇಶದ ಧ್ವನಿಯೇ ತಾನಾಗಿದ್ದ ಆಕಾಶವಾಣಿ ತನ್ನ ಕೇಳುಗರ ಸಂಖ್ಯೆಯನ್ನು ಕಡಿಮೆ ಮಾಡಿಕೊಂಡಿದ್ದರೂ ಸ್ವತಃ ಮಂಕಾಗಿರಲಿಲ್ಲ. ಏಕೆಂದರೆ ಆಕಾಶವಾಣಿಯ ಕಾರ್ಯವಿಧಾನಕ್ಕೆ ಯಾರೂ ಪೈಪೋಟಿಗೆ ಇಳಿದಿರಲಿಲ್ಲ. ಮನರಂಜನೆಯೊಟ್ಟಿಗೆ ಮನೋವಿಕಾಸ, ಜ್ಞಾನ ಮತ್ತು ಪ್ರಚಾರ ಈ ಮೂರನ್ನೂ ದೇಶಕ್ಕೆ ನೀಡಬಲ್ಲ ಅರ್ಹತೆ ಇದ್ದಿದ್ದು ಕೇವಲ ಆಕಾಶವಾಣಿಗೆ ಮಾತ್ರ. ಆದರೂ ದಿನಗಳೆದಂತೆ ಆಕಾಶವಾಣಿ ಮಂಕು ಮಂಕಾಗಿ ಕಾಣಿಸತೊಡಗಿತು. ಅನಾಥಭಾವವನ್ನು ಆಕಾಶವಾಣಿಯೂ ಅನುಭವಿಸುತ್ತಿದೆಯೇ ಎನಿಸತೊಡಗಿತು. ಆಕಾಶವಾಣಿಯ ನೌಕರವೃಂದ ತಾವು ಮುಖ್ಯವಾಹಿನಿಯ ಮಾಧ್ಯಮರಂಗದಿಂದ ದೂರವಾಗಿರುವ ಕೀಳರಿಮೆಯಿಂದಲೂ , ಕೇಂದ್ರ ಸರಕಾರಿ ನೌಕರರೆಂಬ ದುರಹಂಕಾರದಿಂದಲೂ ವರ್ತಿಸುತ್ತಿದ್ದಾರೇನೋ ಎಂಬಂತೆ ಕಾಣಿಸಿಕೊಂಡರು. ಹೀಗೆ ಕಾಣಲು ದಿವ್ಯ ದೃಷ್ಟಿಯೇನೂ ಬೇಕಾಗಿರಲಿಲ್ಲ.ಏಕೆಂದರೆ ದುರದೃಷ್ಟವಶಾತ್ ಆಯಕಟ್ಟಿನ ಜಾಗಗಳಲ್ಲಿ ಅಂಥವರೇ ವಕ್ಕರಿಸಿಕೊಂಡರು. ಯಾವುದೇ ಕ್ಷೇತ್ರವಿರಲಿ ಅಹಂಕಾರ ಮತ್ತು ಕೀಳರಿಮೆಗಳು ಕಾಣಿಸಿಕೊಂಡರೆ ಅಲ್ಲಿ ಇನ್ನುಳಿದ ಅನಿಷ್ಠಗಳು ಒಳನುಗ್ಗಲು ಕಷ್ಟವೇನಾಗುವುದಿಲ್ಲ. ಜೊತೆಗೆ ದೇಶದ ಜನರಿಗೆ ಆಕಾಶವಾಣಿ ಇನ್ನು ನಮಗೆ ಅನಿವಾರ್ಯವೇನಲ್ಲ ಎನಿಸಿದಾಗ ನಿಲಯದಲ್ಲಿ ಆಲಸ್ಯ ,ಭ್ರಷ್ಟತೆ ,ಒಳಜಗಳ,ರಾಜಕೀಯಗಳು ಸುಲಭವಾಗಿ ನುಸುಳಿಕೊಂಡಿತು. ಹೀಗೆ ಬದಲಾದ ವಿಶ್ವದಲ್ಲಿ ತಾನು ಮಾತ್ರ ಬದಲಾಗಲಾರದ ಅನಿವಾರ್ಯತೆಗಳೆಡೆಯಲ್ಲಿ ಆಕಾಶವಾಣಿಯ ನಡೆ ಮಾತ್ರ ವಿಷಾಧಪೂರ್ಣವಾದುದು. ಇಂದಿನ ಆಕಾಶವಾಣಿಯ ಪರಿಸ್ಥಿತಿ ಹೇಗಿದೆಯೆಂದರೆ ಜನರು ಯಾರನ್ನಾದರೂ ನಂಬಬಹುದು ಮಾರಾಯರೇ ಆದರೆ ಈ ಆಕಾಶವಾಣಿಯನ್ನು ಮಾತ್ರ ನಂಬಲಾಗುವುದಿಲ್ಲ. ಅದರ ಸಹವಾಸವೇ ಬೇಡ ಎನ್ನುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇಕೆ ಹೀಗೆ? ಏನು ನಡೆಯುತ್ತಿದೆ ಅಲ್ಲಿ? ಎಂಬಿತ್ಯಾದಿ ಪ್ರಶ್ನೆಗಳೊಂದಿಗೆ ಮುಂದುವರಿದಾಗ ಎದುರು ನಿಂತ ಆಕಾಶವಾಣಿ ತನ್ನ ಭೀಕರತೆಯನ್ನು ತೋರಿಸುತ್ತಿತ್ತು. ಏಕೆಂದರೆ ಆಕಾಶವಾಣಿಯಲ್ಲಿ ಎಲ್ಲವೂ ಇದೆ. ರಾಜಕಾರಣವಿದೆ. ಜಾತಿವಾದವಿದೆ. ಅನೈತಿಕತೆಯಿದೆ. ಮೇಯುವವರಿಗೆ ಅದು ಇಂದಿಗೂ ಸಮೃದ್ಧ ಗೋಮಾಳವೇ ಸರಿ. ಪ್ರಸ್ತುತ ಚರ್ಚೆಯಾಗುತ್ತಿರುವ ಮಾಧ್ಯಮಗಳ ಭ್ರಷ್ಟಾಚಾರವನ್ನು ಎಲ್ಲಾ ಪೂರ್ವಗ್ರಹವನ್ನು ತ್ಯಜಿಸಿ ವಿಚಾರಮಂಥನ ಮಾಡಿದರೆ ನಮಗೆ ಕಾಣುವುದು ಚಿಲ್ಲರೆ ಬುದ್ಧಿಯ ಹಫ್ತಾಗಳು, ಬ್ಲ್ಯಾಕ್ ಮೈಲ್‌ಗಳು. ಇನ್ನೂ ಮುಂದುವರಿದರೆ ಒಂದಿಷ್ಟು ಪೇಯ್ಡ್ ನ್ಯೂಸುಗಳು ಇತ್ಯಾದಿಗಳು.ಅವೆಲ್ಲವೂ ಕುಸಿದಿರುವ ಮೌಲ್ಯಗಳ ಸಂಕೇತಗಳೇ ಹೌದಾದರೂ ಅದಕ್ಕೆ "ಉದ್ಯಮ" ಎಂಬ ಪಟ್ಟವನ್ನು ಮಾಧ್ಯಮಗಳೇ ಕೊಟ್ಟುಕೊಂಡಿವೆ ಮತ್ತು ಸತಾಯಗತಾಯ ತನ್ನನ್ನು ಸಮರ್ಥಿಸಿಕೊಳ್ಳುತ್ತವೆ. ಆದರೆ ಸರಕಾರಿ ಸ್ವಾಮ್ಯದ ಆಕಾಶವಾಣಿಯ ಹಲವು ಸಿಬ್ಬಂದಿಗಳು ಸಮರ್ಥನೆಗೂ ಅವಕಾಶವಿಲ್ಲದೆ "ಉದ್ಯಮ" ಗಳನ್ನು ನಡೆಸುತ್ತಿರುವುದು ಇಂದು ಗುಟ್ಟಾಗಿ ಉಳಿದಿಲ್ಲ. ಮುಖ್ಯವಾಹಿನಿಯ ಮಾಧ್ಯಮಗಳು ನೊಣ ತಿಂದು ಕುಲ ಕೆಡಿಸಿಕೊಂಡರೆ , ಆಕಾಶವಾಣಿಯವರು ಆನೆ ತಿಂದರೂ ಕುಲ ಕೆಡಿಸಿಕೊಳ್ಳದೆ "ಪ್ರತಿಷ್ಠಿತ"ರಾಗುತ್ತಿದ್ದಾರೆ. ಇತ್ತೀಚೆಗೆ ಕರ್ನಾಟಕದ ಆಕಾಶವಾಣಿಯ ಎಫ್.ಎಂ ಕೇಂದ್ರವೊಂದಕ್ಕೆ ತನಿಖಾತಂಡವೊಂದು ಧಾಳಿ ನಡೆಸಿತು ಎನ್ನುವಾಗ ಅಲ್ಲಿ ಅದ್ಯಾವ ಪರಿಯ ತಿನ್ನುವಿಕೆ ನಡೆಯುತ್ತಿದ್ದಿರಬಹುದು ಎಂದು ಊಹಿಸಬಹುದು.ಹುಡುಕುತ್ತಾ ಹೊರಟರೆ ದೇಶದುದ್ದಕ್ಕೂ ಆಕಾಶವಾಣಿ ನಿಲಯಗಳಲ್ಲಿ ಕಂಡುಬರುವುದು ಚಿತ್ರವಿಚಿತ್ರವಾದ ಘಟನೆಗಳು ಕಂಡುಬರುತ್ತವೆ. ಅಗರ್ತಲಾದಿಂದ ಮಡಿಕೇರಿಯವರೆಗೂ ರಾಜಕಾರಣಗಳು ನಡೆಯದ ಆಕಾಶವಾಣಿಗಳು ದೇಶದಲ್ಲೇ ಇಲ್ಲ. ಎಲ್ಲೆಲ್ಲೂ ಅಸಹ್ಯಕರ ವಾತಾವರಣದ ಜಾಡುಗಳು. ಇನ್ನು ದೇಶದ ವಾಣಿ ಆಕಾಶವಾಣಿ ಮಂಕಾಗದಿರಲು ಹೇಗೆ ತಾನೆ ಸಾಧ್ಯ?
ಒಂದು ವ್ಯವಸ್ಥೆ ಯ ಸಾಧಕ ಭಾದಕಗಳು ಅದನ್ನು ರೂಪಿಸುವವರನ್ನು ಅವಲಂಬಿಸುತ್ತವೆ. ಇಲ್ಲಿ ಆಕಾಶವಾಣಿಯನ್ನು ಮಂಕಾಗಿಸುವಲ್ಲಿ ಬದಲಾದ ಕಾಲ ಒಂದು ಸಂಗತಿಯಾದರೆ ಅದಕ್ಕೂ ಹೊರತಾದ ಮತ್ತೊಂದು ಸಂಗತಿಯೆಂದರೆ ಆಕಾಶವಾಣಿಯ ನೌಕರವೃಂದವೇ. ಕರ್ನಾಟಕದ ಉದಾಹರಣೆಯನ್ನೇ ತೆಗೆದುಕೊಂಡರೆ ಅದರ ಅಂದಾಜಾಗುತ್ತದೆ.ರಾಜ್ಯದ ಕೆಲವು ನಿಲಯಗಳ ವ್ಯಾಪ್ತಿಯಲ್ಲಿ ಪ್ರಾದೇಶಿಕ ಭಾಷೆಗಳ ಪ್ರಾಬಲ್ಯವಿದೆ. ಕೊಂಕಣಿ, ತುಳು ಮತ್ತು ಕೊಡವ ಭಾಷಾ ಪ್ರದೇಶದಲ್ಲಿ ಅಕಾಶವಾಣಿ ಕಾರ್ಯಕ್ರಮಗಳ ನೆಪದಲ್ಲಿ ರಾಜಕಾರಣ ಮಾಡುವುದು, ಗುಂಪುಗಾರಿಕೆ ನಡೆಸುವುದು ಸರ್ವೆಸಾಮಾನ್ಯ. ಕೊಡಗಿನಂತಾ ಊರುಗಳಲ್ಲಿ ನಿಧನದ ಸುದ್ಧಿಗಳಿಗೆ ಬೇರೆಡೆಗಿಂತಲೂ ಹೆಚ್ಚಿನ ಮಹತ್ತ್ವವಿದೆ. ಇಂದಿಗೂ ಅಲ್ಲಿ ನಿಧನದ ಸುದ್ಧಿಗಳನ್ನು ತಿಳಿಯಲು ಜನರು ರೇಡಿಯೋದ ಮೊರೆ ಹೋಗುತ್ತಾರೆ. ಆದರೆ ಆಕಾಶವಾಣಿ ಮರಣದ ಸುದ್ಧಿಯಲ್ಲೂ ಕಮಾಯಿ ಮಾಡಲಾರಂಭಿಸಿತು. ಒಂದು ಮರಣದ ಸುದ್ದಿಗೆ ಇಂತಿಷ್ಟು ಎಂದು ದರ ನಿಗದಿಮಾಡಿದರೂ ಸುದ್ಧಿ ಕೊಟ್ಟ ಯಾರಿಗೂ ರಸೀದಿ ಕೊಟ್ಟ ಉದಾಹರಣೆಗಳಿರಲಿಲ್ಲ. ಈ ಮೂಲಕ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಗುಲ್ಲು ಕೇಳಿಬಂದಾಗ ಆಕಾಶವಾಣಿ ಈ ನಿಧನ ವಾರ್ತೆಯನ್ನು "ಸೇವಾ ಮಾಹಿತಿ"ಎಂದು ಬದಲಾಯಿಸಿತ್ತು. ಬೇಲಿಯೇ ಹೊಲ ಮೇಯ್ದರೆ ಉಳಿಗಾಲವಿದೆಯೇ?
ನಿಲಯದ ನೌಕರರನ್ನು ನೋಡಿದರೇ ಆಕಾಶವಾಣಿಯ ಜಾತಕವನ್ನು ಓದಿಬಿಡಬಹುದು. ಬಹುತೇಕ ಆಕಾಶವಾಣಿಯ ಉದ್ಯೋಗಸ್ಥರ ಮುಖದಲ್ಲಿ ಕೆಲಸವಿಲ್ಲದೆ ಅಲೆದ ದಣಿವೇ ಕಾಣಸಿಗುತ್ತದೆ. ಸರಕಾರಕ್ಕೆ ಮೋಸಮಾಡಿ ಕೆಲಸ ತಪ್ಪಿಸಿಕೊಂಡ ಲಕ್ಷಣಗಳು ನಿಚ್ಚಳವಾಗಿ ಗೋಚರಿಸುತ್ತದೆ. ವಿಶೇಷವೆಂದರೆ ಇವರೆಲ್ಲರೂ ೪೦ ರಿಂದ ೭೫ ಸಾವಿರ ರೂಪಾಯಿ ಸಂಬಳ ಪಡೆಯುವವರು. ಆಕಾಶವಾಣಿಯಲ್ಲಿ ಹೆಚ್ಚಿನ ಸಂಬಳ ಪಡೆಯುವವರೆಂದರೆ ಉತ್ಸವ ಮೂರ್ತಿಗಳೆಂದೇ ಅರ್ಥ. ಆದರೆ ಉದ್ಘೂಷಕರು ಮತ್ತು ಡಿ.ಗುಂಪಿನ ನೌಕರರು ನಿವೃತ್ತರಾಗುವವರೆಗೂ ತಿಂಗಳ ಕೊನೆಯಲ್ಲಿ ಸಾಲಮಾಡದೆ ಬದುಕಲಾರದಷ್ಟು ವೇತನ ತಾರತಮ್ಯವಿದೆ. ಇಂದು ನಿಲಯದಲ್ಲಿ ಕಾರ್ಯಕ್ರಮಗಳ ಜಾಡನ್ನು ಹಿಡಿದು ಹೋಗುವವರಿಲ್ಲ. ರಿಸರ್ಚ್ ಮತ್ತು ಡೆವಲಪ್ ಮೆಂಟ್ ಎನ್ನುವುದು ಕಡ್ಡಾಯವಾದರೂ ಕೊಲೆಸ್ಟ್ರಾಲ್ ಹೆಚ್ಚುವಷ್ಟು ಸಂಬಳ ಬರುವುದರಿಂದ ಮತ್ತು ಕೇಳುವ ದೊಣ್ಣೆನಾಯಕರಾರೂ ಇಲ್ಲದಿರುವುದರಿಂದ ಹೆಚ್ಚಿನ ನಿಲಯದ ಸಿಬ್ಬಂದಿಗಳು ಹುಡುಕಾಟಕ್ಕಿಳಿಯುವುದಿಲ್ಲ. ಎಲ್ಲವೂ ಕಣ್ಣಳತೆಯ ,ಕೂಗಳತೆಯ ದೂರದಲ್ಲಿ ಸಿಗಬೇಕು. ಅಧಿಕಾರಿಗಳ ಗೆಳೆಯರಿಗೋ ನಂಟರಿಗೋ ಹಾಡುಗಳು ಗೊತ್ತಿದ್ದರೂ ಸಾಕು ಅವರು ಆಸ್ಥಾನ ಕಲಾವಿದರಾಗುವರು. ಇನ್ನು ಆಕಾಶವಾಣಿಯಲ್ಲಿ ವಾರ್ತೆಗಳನ್ನು ಓದುತ್ತಿರುವವರು ಮನುಷ್ಯರಾಗಿದ್ದರೆ ಅಷ್ಟೆ ಸಾಕು. ಭಾಷೆಯ ಮನೆ ಹಾಳಾದರೂ ಚಿಂತೆ ಇಲ್ಲ. ಇಂದು ಆಕಾಶವಾಣಿಯಿಂದ ಯಾರೂ ಬ್ರೇಕಿಂಗ್ ನ್ಯೂಸ್‌ಗಳನ್ನು ನಿರೀಕ್ಷಿಸುವುದಿಲ್ಲ. ಆದರೆ ಸುದ್ಧಿಗಳಾದರೂ ಅಪರೂಪವೂ ಮೌಲಿಕವೂ ಆಗಿರಬೇಡವೇ? ವ್ಯಕ್ತಿ ಬದಲಾಗದೆ ವ್ಯವಸ್ಥೆ ಬದಲಾಗದು ಎಂಬ ಮಾತಿದೆ. ಅದು ಆಕಾಶವಾಣಿಗೆ ಚೆನ್ನಾಗಿ ಅನ್ವಯವಾಗುತ್ತದೆ. ವರ್ಗವಾಗುವ ಅಧಿಕಾರಿ ನಿಲಯದಿಂದ ಹಳೆಯ ರೆಕಾರ್ಡುಗಳನ್ನು ಕದ್ದೊಯ್ದು ಇನ್ನೊಂದು ನಿಲಯದಿಂದ ತನ್ನದೇ ಕಾರ್ಯಕ್ರಮ ಎಂದು ಪ್ರಸಾರ ಮಾಡುವುದು, ಖ್ಯಾತನಾಮರ ಭಾಷಣಗಳನ್ನೇ ಕದ್ದೊಯ್ಯುವುದು ಆಕಾಶವಾಣಿಯಲ್ಲಿ ನಡೆಯುತ್ತಲೆ ಇರುತ್ತದೆ ಎಂಬ ಸುದ್ಧಿಯಿದೆ. ಇವೆಲ್ಲವೂ ದೇಶದ ಆಸ್ತಿಗಳು ಎಂಬುದು ಗಮನಾರ್ಹ. ಹಾಗಾದರೆ ನಿಲಯದಲ್ಲಿ ಶಿಸ್ತು , ನಿಯಮಗಳು ಎಷ್ಟರಮಟ್ಟಿಗೆ ಪಾಲನೆಯಾಗುತ್ತಿರಬಹುದು?
ಸುಮಾರು ಇಪ್ಪತ್ತು ವರ್ಷಕ್ಕೆ ಹಿಂದೊಮ್ಮೆ ಆಕಾಶವಾಣಿಯ ಉದ್ಘೋಷಕಿಯೊಬ್ಬರು ರಜಾದಿನದಲ್ಲಿ ಸಾರ್ವಜನಿಕರಿಗೆ ಹರಿಕಥೆ ನಡೆಸಿಕೊಟ್ಟರು ಎಂದು ಅವರಿಗೆ ನೋಟಿಸ್ ಕಳುಹಿಸಲಾಗಿತ್ತಂತೆ .ಆದರೆ ಇಂದು ಒಬ್ಬ ನಿಲಯದ ಮನುಷ್ಯ ವೆಬ್‌ಸೈಟೊಂದನ್ನು ನಡೆಸುತ್ತಾ ಪತ್ರಿಕೆಗಳಿಗೆ ಅಂಕಣವನ್ನೂ ಬರೆಯುತ್ತಾ ಲೋಕಕ್ಕೆ ದೊಡ್ಡವರಂತೆ ಪೋಸು ಕೊಡುತ್ತಿದ್ದರೂ ಆಕಾಶವಾಣಿಗೆ ಅದರ ಪರಿವೆಯಿಲ್ಲ. ವಿಶ್ವವಿದ್ಯಾನಿಲಯಗಳಲ್ಲಿ ನಡೆಯುವಂತೆ ಜಾತಿನಿಂದನೆಯ ಕೇಸುಗಳು, ಸ್ಥಳಿಯ ಸೊಗಡಿನ ಬಗ್ಗೆ ಅರಿವು ಮತ್ತು ಆಸಕ್ತಿ ಇಲ್ಲದಿರುವುದು, ವೃತ್ತಿ ಮತ್ಸರ ,ದೇಶಾದ್ಯಂತದ ನಿಲಯಗಳಲ್ಲಿ ಕಂಡುಬರುತ್ತಿರುವ ಕ್ರಿಶ್ಚಿಯನ್ ಲಾಭಿ, ತಮ್ಮ ಅಂಕಣಕ್ಕಾಗಿ ಆಕಾಶವಾಣಿಯ ಸಮಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವವರೇ ತುಂಬಿರುವಾಗ ಯಾವ ಬಾಯಿ ಯಿಂದ ಆಕಾಶವಾಣಿ ದೇಶದ ವಾಣಿ ಎಂದು ಕರೆಯೋಣ.
ಎಲ್ಲೇ ಅನಾಚಾರಗಳು ನಡೆದರೂ ಒಂದು ಹದ್ದಿನ ಕಣ್ಣಿಡುವ ಶ್ರೀನಿವಾಸ ಕುಂಡಂತಾಯರು ಒಂದು ಕಥೆಯನ್ನು ಹೇಳುತ್ತಿರುತ್ತಾರೆ.
ಮಂಗಳೂರಿನ ಹೊರವಲಯದಲ್ಲಿ ಒಂದು ದೊಡ್ಡ ಹುಲ್ಲುಗಾವಲಂತೆ. ಅಣ್ಣಪ್ಪನ ಅಗರು ಎಂಬ ಹೆಸರಂತೆ. ಸುತ್ತಲ ಊರವರಿಗೆ ದನ ಮೇಯಿಸಲು, ಹುಲ್ಲು ಕತ್ತರಿಸಲು ಅದು ಪ್ರಶಸ್ತ ಜಾಗವಂತೆ. ಗೋವಿಗೆ ಎಲ್ಲೇ ಹುಲ್ಲಿಗೆ ಕೊರತೆಯಿದ್ದರೂ ಅಣ್ಣಪ್ಪನ ಅಗರಿನಲ್ಲಿ ಕೊರತೆಯಿರದಂತೆ.ಹಾಗಾಗಿ ಮೇಯಲು ಎಲ್ಲೆಲ್ಲಿಂದಲೋ ಗೋವುಗಳು ಬರುವುದಂತೆ. ಮೈದಾನದ ತುಂಬಾ ಗೋವುಗಳೋ ಗೋವುಗಳು ತುಂಬಿರುತ್ತಿದ್ದುವಂತೆ. ಕುಂಡಂತಾಯರಿಗೆ ದೇಶದೆಲ್ಲೆಡೆಯ ಆಕಾಶವಾಣಿ ನಿಲಯಗಳನ್ನು ನೋಡುವಾಗಲೆಲ್ಲಾ ಅದೇ ಅಣ್ಣಪ್ಪನ ಅಗರು ನೆನಪಾಗುವುದಂತೆ.

Tuesday, October 4, 2011

ಜಗತ್ತೇ ಜಾಹೀರಾತಿನ ಬುಟ್ಟಿ: ಜಗತೀಕರಣಕ್ಕೆ ಇನ್ನಾವ ಅಡ್ಡಿ?


೯೦ರ ದಶಕದಲ್ಲಿ ಜಗತ್ತು ಮಹಾನ್ ಸ್ಥಿತ್ಯಂತರಕ್ಕೆ ಒಳಪಟ್ಟಾಗ ಮೊದಲು ಕಣ್ಣಿಗೆ ಕಂಡಿದ್ದು ಆರ್ಥಿಕತೆ ಎಂಬ ಕೆರಳಿದ ಗೂಳಿ. ಅನಂತರ ಈ ಸ್ಥಿತ್ಯಂತರ ಆರ್ಥಿಕತೆಗೆ ಮಾತ್ರ ಸೀಮಿತವಾದುದಲ್ಲ ಎಂಬುದನ್ನು ಜಗತ್ತು ಬಹುಬೇಗ ಅರ್ಥಮಾಡಿಕೊಂಡಿತು. ಈ ಸ್ಥಿತ್ಯಂತರ ಅಡುಗೆ ಮನೆಯಿಂದ ಹಿಡಿದು ಷೇರು ಮಾರುಕಟ್ಟೆಯವರೆಗೆ ,ಕಿಂಡರ್ ಗಾರ್ಡನ್‌ನಿಂದ ಹಿಡಿದು ಯುನಿವರ್ಷಿಟಿಯವರೆಗೆ, ದಿನಸಿ ಅಂಗಡಿಗಳಿಂದ ಹಿಡಿದು ಕಾಣದ ಧಣಿಗಳ ಎಂ.ಎನ್.ಸಿಗಳ ವರೆಗೆ ಅದರ ಬಾಹುಗಳು ವ್ಯಾಪಿಸಿ ಕಾವೇರಿ ತಟದ ಬೋರೇಗೌಡನೂ ಅಮೇಜಾನ್ ತೀರದ ಟಾಮ್-ಡಿಕ್-ಹ್ಯಾರಿಗಳೆಲ್ಲರೂ ಒಂದೇ ಏಟಿಗೆ ತತ್ತರಿಸಿಹೋಗಿದ್ದರು. ಒಟ್ಟಿಗೇ ಸಾವರಿಸಿಕೊಂಡಿದ್ದರು. ಎಲ್ಲೆಲ್ಲೂ ಪ್ರವಾಹಕ್ಕೆ ವಿರುದ್ಧವಾಗಿ ಈಜಲು ಹೋದವರು ಒಂದೇ ತೆರನಾಗಿ ಮುಳುಗಿಹೋಗಿದ್ದರು. ಹೀಗೆ ಕದಡಿದ ವಿಶ್ವ ತಿಳಿತಿಳಿಯಾಯಿತು ಎಂದುಕೊಂಡಾಗ ಎಲ್ಲವೂ ಬದಲಾಗಿಹೋಗಿದ್ದವು. ಬೀದಿಗಳು ಬದಲಾಗಿದ್ದವು. ಮನುಷ್ಯ ವರ್ತನೆಗಳು ಬದಲಾಗಿದ್ದವು. ಕೆಲಸಗಳು ಬದಲಾದವು. ಬುದ್ದಿಗಳು ಬದಲಾಗಿದ್ದವು. ಎಲ್ಲವೂ ವ್ಯವಹಾರ. ಶುದ್ಧ ವ್ಯವಹಾರಗಳು ಎಲ್ಲೆಡೆ ವ್ಯಾಪಿಸಿದ್ದವು. ಇದ್ದದ್ದನ್ನು ಅಳಿಸಿಹಾಕಲು ಇಷ್ಟು ಸಾಕಲ್ಲ? ಈ ರೀತಿ ಬದಲಾದ ಪರಿಸ್ಥಿತಿಗೆ ವಿಧ್ವಾಂಸರು ಜಾಗತಿಕರಣ ಎಂಬ ಹೆಸರನ್ನು ಕೊಟ್ಟುಕೊಂಡರೂ ಬದಲಾದ ವಿಶ್ವಕ್ಕೆ ಮರುನಾಮಕರಣವಾಗಲಿಲ್ಲ.
ಇಂಥ ಪರಿಸ್ಥಿತಿಯ ಬಗ್ಗೆ ಜಗತ್ತಿನಲ್ಲಿ ಹಲವು ಸಾಹಿತ್ಯಗಳು ಒಮ್ಮೆಲೆ ಬಂದವು. ಅವು ದಿಗ್ಭ್ರಾಂತಿಯಿಂದ ಸೃಷ್ಟಿಯಾದ ಸಾಹಿತ್ಯಗಳು. ಏಕೆಂದರೆ ಆರ್ಥಿಕ ಧಾತುವಿನಿಂದ ಉಂಟಾದ ಸ್ಥಿತ್ಯಂತರ ಸಮಾಜವನ್ನು ಒಂದೇ ಸಮನೆ ಬದಲು ಮಾಡುತ್ತಿತ್ತು. ಇದನ್ನು ಪಾಶ್ಚಾತ್ಯ ವಿಧ್ವಾಂಸರು ಹಲವು ಕೋನಗಳಲ್ಲಿ ಸೆರೆಹಿಡಿದಿದ್ದಾರೆ. ಸರ್ವಕ್ಷೇತ್ರಗಳಿಂದಲೂ ಜಾಗತೀಕರಣದ ಸ್ವರೂಪವನ್ನೂ ಪರಿಣಾಮವನ್ನೂ ವಿಮರ್ಶಿಸಿದ್ದಾರೆ. ಜಗತ್ತೇ ಒಂದು ಜಾಹೀರಾತಿನ ಬುಟ್ಟಿಯಾಗಿರುವಾಗ ಅದನ್ನು ಮುಟ್ಟದೇ ತಾನೇ ಹೇಗಿರುವುದು? ಈ ನೆಲೆಯಲ್ಲಿ ಬಂದ ಹಲವಾರು ಪುಸ್ತಕಗಳಲ್ಲಿ ಒಂದು ಪುಸ್ತಕ ಅಲೆನ್ ಬೈರ್ನರ್ ಎಂಬಾತ ಬರೆದ ಸ್ಪೋರ್ಟ್ಸ್, ನೇಶನಲಿಸಂ, ಗ್ಲೋಬಲೈಸೇಶನ್ ; ಯುರೋಪಿಯನ್ ಅಂಡ್ ನಾರ್ಥ್ ಅಮೆರಿಕನ್ ಪರ್ಸ್ ಪೆಕ್ಟಿವ್ ಎಂಬ ಪುಸ್ತಕ. ಈ ಅಲೆನ್ ಬೈರ್ನರ್ ಎಂಬಾತ ಉತ್ತರ ಐರ್ಲೆಂಡ್ ನವನಂತೆ. ಆತ ಜೋರ್ಡಾನ್ ಟೌನ್ ಎಂಬಲ್ಲಿನ ಯುನಿವರ್ಷಿಟಿ ಆಫ್ ಅಲ್ಷ್ಟರ್ ನಲ್ಲಿ ಕ್ರೀಡೆ ಮತ್ತು ಅನ್ವಯಿಕ ವೈದ್ಯ ಶಾಸ್ತ್ರದ ಪ್ರೊಫೇಸರನಂತೆ. ಓದುಗರಿಗೆ ಇದೊಂದು ವಿಲಕ್ಷಣ ಪುಸ್ತಕದಂತೆನಿಸುತ್ತದೆ. ಕ್ರೀಡಾ ಜಗತ್ತಿನ ಮತ್ತೊಂದು ಲೋಕವನ್ನು ನೋಡುತ್ತಾ ಹೋಗುವಾಗ ವಿಲಕ್ಷಣತೆಯೇ ಮೊದಲು ಎದುರಾಗುವ ಆಗಂತುಕ ಎಂಬ ವಾಸ್ತವದೊಂದಿಗೆ ಇದರ ವಾಚನವನ್ನು ಆರಂಭಿಸಬೇಕು. ಕ್ರೀಡೆಯನ್ನು ಮೀಮಾಂಸಕ ದೃಷ್ಟಿಯಿಂದ ನೋಡಬೇಕಾದ ಸಂಬಂಧಕ್ಕೂ ಸಿದ್ದವಾಗಿರಬೇಕು. ಆದರೆ ಇಲ್ಲಿನ ಯಾವ ಸಂಗತಿಯನ್ನೂ ಅಪ್ರಸ್ತುತ , ಅವೈಜ್ಞನಿಕ ಎನ್ನುವ ಹಾಗಿಲ್ಲ. ಕ್ರೀಡೆ,ರಾಷ್ಟ್ರೀಯತೆ ಮತ್ತು ಜಾಗತೀಕರಣ ಈ ಮೂರು ಭಿನ್ನ ಭಿನ್ನ ನೆಲೆಯ ಬೇರೆ ಬೇರೆ ಸಂಗತಿಗಳು. ಪ್ರತ್ಯೇಕ ಪ್ರತ್ಯೇಕವಾಗಿ ನೋಡಿದರೆ ಅವವು ಮಹತ್ತ್ವದ ಸಂಗತಿಗಳೇ. ತನ್ನ ಹಾದಿಯಲ್ಲಿ ತಾನು ಪಯಣಿಸುವ ಪ್ರತ್ಯೇಕ ಹಳಿಗಳ ರೈಲುಗಳಂತೆ. ಆದರೆ ಈ ಮೂರನ್ನು ಜಾಗತೀಕರಣದ ಸಂದರ್ಭದಲ್ಲಿ ನೋಡಿದಾಗ ಅವು ಪರಸ್ಪರ ಅವಿನಾಭಾವಿಯೂ ಪೂರಕವಾದದೂ ಎಂದು ತಿಳಿಯುತ್ತದೆ. ಅಂದರೆ ಈ ಮೂರರ ಒಳಗೂ ಒಂದು ಸಮಾಜ, ಒಂದು ಜನಾಂಗ, ಒಂದು ಇತಿಹಾಸ, ಒಂದು ಪರಿಸ್ಥಿತಿ, ಒಂದು ಅವಸ್ಥೆ ಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. ಪುಸ್ತಕ ಕೂಡ ಇಂಥ ಸಂಗತಿಗಳನ್ನೇ ಬಿಚ್ಚಿಡುತ್ತಾ ಸಾಗುತ್ತದೆ.
ಕ್ರೀಡೆ ಮನುಷ್ಯನ ಚೈತನ್ಯ. ಅಥವಾ ಇನ್ನಾವುದೋ ಹೆಸರಿನ ಅಂತರಂಗದ ಪುಟಿತ. ಅಥವಾ ಮನೋರಂಜನೆಯ ಪ್ರಕಟೀಕರಣದ ಒಂದು ಮಾಧ್ಯಮ. ಅಥವಾ ಬಿಡುಗಡೆಯ ಮಾರ್ಗ. ಆಹಾರ ನಿದ್ರೆಗಳಂತೆ ಕ್ರೀಡೆಗಳಿಗೆ ಒಡ್ಡಿಕೊಳ್ಳದ ಮನುಷ್ಯನಿರಲಿಕ್ಕಿಲ್ಲ. ಒಡ್ಡಿಕೊಂಡಿಲ್ಲವೆಂದರೆ ಆತ ಮನುಷ್ಯನೇ ಅಲ್ಲ. ಕ್ರೀಡೆ ಮನುಷ್ಯನ ಸಹಜ ಬಯಕೆ. ವ್ಯಕ್ತಿ ಬೆಳೆದಂತೆ ಕ್ರೀಡೆ ಕೂಡ ಬೆಳೆಯುತ್ತದೆ. ಬೆಳೆಯುತ್ತಾ ಬೆಳೆಯುತ್ತಾ ಸಮುದಾಯವಾಗುತ್ತಾ ಹೋದಂತೆ ವ್ಯಕ್ತಿ ಕ್ರೀಡೆಯನ್ನು ಪ್ರೀತಿಸುತ್ತಾ ಹೋಗುತ್ತಾನೆ. ಈ ಪ್ರೀತಿಸುವಿಕೆ ಅಪ್ಪಟ ಭಾವನಾತ್ಮಕತೆ. ಅದು ಉದ್ದೀಪನ ಮತ್ತು ಪ್ರಚೋದಕ ಗುಣವುಳ್ಳದ್ದು. ಆದ್ದರಿಂದ ವಿಷಯವಿರುವುದೇ ಇಲ್ಲಿ. ಹಾಗೆಯೇ ರಾಷ್ಟ್ರೀಯತೆಯೆಂಬುದೂ ಕೂಡ. ಸಿದ್ಧಾಂತಗಳ ಚೌಕಟ್ಟು ಇರಲಿ ಅಥವಾ ಇಲ್ಲದಿರಲಿ ರಾಷ್ಟ್ರೀಯತೆಯ ಮೂಲ ತುದಿಯನ್ನು ಹುಡುಕಿದಾಗ ಅಲ್ಲಿ ಭಾವನಾತ್ಮಕತೆಗಳಿಲ್ಲದೇ ಇರುವುದಿಲ್ಲ. ಮತ್ತು ಆ ಭಾವುಕತೆಯ ಮತ್ತೊಂದು ತುದಿ ಭ್ರಹತ್ತಾಗಿ ಬೆಳೆದು ವಿಶಾಲ ವ್ಯಾಪ್ತಿಯನ್ನು ಬೆಳೆಸಿಕೊಂಡಿರುವುದನ್ನು ಕಾಣುತ್ತೇವೆ. ಕ್ರೀಡೆಯಂತೆ ರಾಷ್ಟ್ರೀಯತೆ ಕೂಡ ಸಾಮುದಾಯಿಕವಾಗಿ ಅತ್ಯಂತ ಪ್ರಬಲ ಸಂಗತಿ. ಅದೂ ಕೂಡ ಉದ್ದೀಪಕ, ದಿಕ್ಕು ತಪ್ಪಿದರೆ ಪ್ರಚೋದಕ. ಎರಡಕ್ಕೂ ಭಾವನೆಗಳೇ ಮೂಲಬೇರುಗಳು. ಹೀಗೆ ಕ್ರೀಡೆ ಮತ್ತು ರಾಷ್ಟ್ರೀಯತೆಗಳು ತಾವು ಪರಸ್ಪರ ಎದುರಾಗುವುದಕ್ಕೂ ಮುನ್ನವೇ ಬಾಧರಾಯಣ ನಂಟಸ್ಥನವೊಂದನ್ನು ಹೊಂದಿರುತ್ತದೆ. ಹಾಗಾದರೆ ಅವೆರಡೂ ಒಗ್ಗೂಡಿದಾಗ...? ಹೀಗೊಂದು ಸಮ್ಮಿಲನ ವಿಶ್ವದ ಹಲವು ಇತಿಹಾಸವನ್ನು ನಿರ್ಮಿಸಿದ್ದಿದೆ. ಕ್ರೀಡೆ ಗಡಿರೇಖೆಗಳ ಹಂಗಿಲ್ಲದೆ, ಯುದ್ದರಂಗಕ್ಕೆ ಧಾವಿಸದೆ, ಅಧಿಕಾರವನ್ನು ನಡೆಸದೆ, ಕಿರೀಟಗಳ ಹಂಗಿಲ್ಲದೆ, ಸಮಾಜವನ್ನು ಒಗ್ಗೂಡಿಸಬಲ್ಲದು ಎಂಬುದನ್ನು ಕೂಡ ಜಗತ್ತು ಗಮನಿಸಿದೆ. ಕೇವಲ ಭಾವನಾತ್ಮಕ ಪರಿಕಲ್ಪನೆಯೊಂದು ತತ್ತ್ವ ಸಿದ್ಧಾಂತಗಳ ಹುಟ್ಟಿಗೆ ನಾಂದಿಯಾಗಬಹುದು ಎಂಬುದನ್ನು ಕಂಡಿದ್ದೇವೆ. ಅದು ಕ್ರೀಡೆಯ ಗುಣ. ಹೀಗೆ ಪರಸ್ಪರ ಪೂರಕವಾಗಿರುವ ಸಂಗತಿಗಳು ಅಪಾಯಕರವೂ ಆಗಿರುತ್ತವೆನ್ನುವುದನ್ನೂ ಹೇಳಲು ಅಲೆನ್ ಬೈರ್ನರ್ ಮರೆಯುವುದಿಲ್ಲ. ಯುರೋಪಿನ ಮತ್ತು ಅಮೇರಿಕಾ ಖಂಡಗಳ ಕ್ರೀಡಾ ಇತಿಹಾಸವನ್ನು ಉಲ್ಲೇಖಿಸುವ ಅವರು ಆಯಾಯ ದೇಶಗಳ ರಾಷ್ಟ್ರೀಯತೆ ಮತ್ತು ಕ್ರೀಡಾಗುಣಗಳನ್ನು ಉದಾಹರಿಸುತ್ತಾರೆ. ವಿ ಹೇಟ್ ಇಂಗ್ಲೆಂಡ್ ಎನ್ನುತ್ತಲೇ ಕ್ರೀಡಾಂಗಣಕ್ಕಿಳಿಯುವ ಸ್ಕಾಟ್‌ಲ್ಯಾಂಡ್ ಆಟಗಾರರ ಮಾನಸಿಕತೆಯನ್ನೂ ರಾಷ್ಟ್ರೀಯತೆಯ ಹಂಗಿಲ್ಲದ ಕ್ಲಬ್ ತಂಡಗಳ ಬಗ್ಗೆಯೂ ಹೇಳುತ್ತಾರೆ. ಅಂತಿಮವಾಗಿ ಅವರ ಆಶಯವೆಂದರೆ ಜಾಗತೀಕರಣದ ಸಂದರ್ಭದಲ್ಲಿ ಈ ಎಲ್ಲಾ ಸಂಗತಿಗಳು ದಿಕ್ಕು ತಪ್ಪುತ್ತಿವೆ ಎನ್ನುವುದು. ಒಂದೇ ಮೂಲಧಾತುಗಳ ನ್ನು ಹೊಂದಿರುವ ಎರಡು ಸಂಗತಿಗಳು ತಮ್ಮ ಧ್ಯೆಯೋದ್ಧೇಶವನ್ನು ಮರೆತಿವೆ ಮತ್ತು ಜಾಗತೀಕರಣ ಕ್ರೀಡಾ ತತ್ತ್ವವನ್ನು ಮರೆಮಾಚಿಬಿಟ್ಟಿದೆ ಎಂಬ ಅಭಿಪ್ರಾಯ ಅಲೆನ್ ಬೈರ್ನರ್ ಅವರದ್ದು.
ಯುರೋಪು ಮತ್ತು ಅಮೆರಿಕಾಗಳ ಸಂಗತಿ ಹಾಗಿರಲಿ. ಕ್ರೀಡೆಗೇಕೆ ಸಿದ್ದಾಂತಗಳ ಚೌಕಟ್ಟುಗಳು ಎಂಬ ಅಭಿಪ್ರಾಯ ಬರುವ ಹೊತ್ತಿಗೆ ಕಪಿಲ್ ದೇವ್‌ನ ಭಾಷಣ ನೆನಪಾಗುತ್ತವೆ.ನಿಜಕ್ಕೂ ಏನು ತಪ್ಪಿತ್ತು ಕಪಿಲನ ಭಾಷಣದಲ್ಲಿ?ಭಾರತೀಯ ಕ್ರಿಕೆಟ್ ತಂಡದ ಇಂಗ್ಲೆಂಡ್ ತಂಡದ ಪ್ರವಾಸದಲ್ಲಿ ಮಾಧ್ಯಮಗಳು ವರ್ತಿಸಿದ ರೀತಿಯನ್ನು ಪ್ರಾಮಾಣಿಕ ಕ್ರೀಡಾಭಿಮಾನಿಯೊಬ್ಬ ಒಪ್ಪಬಹುದೇ? ತೆಂಡೂಲ್ಕರನ ೧೦೦ನೇ ಶತಕದ ಮುಂದೆ ತಂಡದ ಪ್ರದರ್ಶನವೇ ಗೌಣವಾಗುವುದಾದರೆ ಇದೆಂಥಾ ಕ್ರೀಡೆ? ಎಂಥಾ ಅಭಿಮಾನ? ತೆಂಡೂಲ್ಕರ ಅದೆಷ್ಟೇ ಮಹಾನ್ ಆಟಗಾರನಿರಬಹುದು. ಆದರೆ ತಂಡದೊಳಗೆ ಆತನೂ ಒಬ್ಬ ಸದಸ್ಯ. ತಂಡವಿಲ್ಲದೆ ತೆಂಡೂಲ್ಕರನಿಲ್ಲ. ಆದರೆ ತೆಂಡೂಲ್ಕರನಿಲ್ಲದೆಯೂ ತಂಡವಿರಬಹುದು ಎಂಬುದು ಸಾಮಾನ್ಯವಾದ ಅಭಿಪ್ರಾಯವಲ್ಲವೇ? ಕ್ರೀಡೆಯಲ್ಲಿ ವ್ಯಯಕ್ತಿಕ ಅಂಕಿ ಅಂಶಗಳೇ ಕ್ರೀಡೆಗಳಿಗಿಂತ ಶ್ರೇಷ್ಠವಾಗುವುದರ ಹಿಂದೆ ಅಲೆನ್ ಬೈರ್ನರನ ವಾದವಿದೆ. ಜಾಗತೀಕರಣದ ನೆರಳಿದೆ. ಅಷ್ಟಕ್ಕೂ ಭಾರತದಲ್ಲಿ ಕ್ರಿಕೇಟು ಇಷ್ಟೊಂದು ಅಬ್ಬರದಿಂದ ನಿಲ್ಲಲಾರಂಭಿಸಿರುವುದು ಇದೇ ಜಾಗತೀಕರಣದ ಅನಂತರವೇ. ಸಭ್ಯರ ಆಟವಾಗಿದ್ದ ಕ್ರಿಕೇಟು ಇಂದು ಎಲ್ಲಾ ಹುಳುಕುಗಳನ್ನು ಹೊತ್ತುಕೊಂಡಿರುವುದಕ್ಕೆ ಜಾಗತೀಕರಣವನ್ನು ದೂರದೆ ವಿಧಿಯಿಲ್ಲ. ಏಕೆಂದರೆ ಜಗತ್ತೇ ಜಾಹಿರಾತಾಗುವ ಕಾಲದಲ್ಲಿ ಕ್ರಿಕೆಟ್ ಗೆಲ್ಲುವ ಕುದುರೆ. ಅಲೆನ್ ಬೈರ್ನರನ ವಾದವೆಷ್ಟು ಪ್ರಸ್ತುತವೆಂದು ಸಾಭೀತುಪಡಿಸಲು ಕ್ರಿಕೆಟ್ ಒಂದೇ ಸೋದಾಹರಣ ಉದಾಹರಣೆಯಾಗಿ ನಿಲ್ಲಬಲ್ಲದು. ಏಕೆಂದರೆ ಕ್ರಿಕೆಟ್ ದೇಶವೊಂದರ ಧರ್ಮವಾಗುತ್ತದೆ. ಆಟಗಾರ ದೇವರಾಗುತ್ತಾನೆ. ಕೃಷಿ ಮಂತ್ರಿ ಕ್ರಿಕೆಟ್ ಮಂತ್ರಿಯಾಗುತ್ತಾನೆ. ಊಟಕ್ಕಿಲ್ಲದ ಬಾಂಗ್ಲಾ-ಕಿನ್ಯಾಗಳು ಹುಚ್ಚೆದ್ದು ಕ್ರಿಕೆಟನ್ನು ಆರಾಧಿಸುತ್ತದೆ. ರಕ್ತಪಾತವಾಗುವ ಸಿಲೋನು ಆಟಗಾರರನ್ನು ರಾಜಭವನದಲ್ಲಿ ಸಮ್ಮಾನಿಸುತ್ತದೆ. ಆಟಗಾರನೊಬ್ಬನ ಹೇಳಿಕೆಯನ್ನು ಸರಕಾರ ಕೂಡ ಶ್ರದ್ದೆಯಿಂದ ಆಲಿಸುತ್ತದೆ. ಇದ್ದ ಬದ್ದ ಕ್ರೀಡೆಗಳನ್ನು ಅದು ನುಂಗಿ ನೀರು ಕುಡಿಯುತ್ತದೆ. ಶ್ರೀಮಂತಿಕೆಯ ಅಮಲು, ಅದರಿಂದುಂಟಾಗುವ ಹುನ್ನಾರಗಳೆಲ್ಲವೂ ಇಂದೂ ಕ್ರಿಕೆಟನ್ನು ಸಭ್ಯರ ಆಟವಾಗಿಟ್ಟಿಲ್ಲ. ತೆರಿಗೆ ಕಟ್ಟದ ಆಟಗಾರ ಎಷ್ಟೇ ಸೆಂಚುರಿ ಬಾರಿಸಿದರೆ ತಾನೇ ಏನು? ಜಾಳುಜಾಳಾಗಿ ಸಾಗುವ ಅಲೆನ್ ಅವರ ಪುಸ್ತಕ ಸುಲಭವಾಗಿ ಅರ್ಥವಾಗದಿದ್ದರೂ ಕ್ರಿಕೆಟ್ ಎಂಬುದು ಅರ್ಥವಾದರೆ ಕ್ರೀಡೆ-ರಾಷ್ಟ್ರೀಯತೆ ಮತ್ತು ಜಾಗತೀಕರಣ ಗಳ ಬಾದರಾಯಣ ಸಂಬಂಧ ಸುಲಭವಾಗಿ ಅರ್ಥವಾಗುತ್ತದೆ. ಜಗತ್ತೇ ಜಾಹೀರಾತುಗಳ ಬುಟ್ಟಿಯಾಗಿರುವಾಗ ಜಾಗತೀಕರಣಕ್ಕೆ ಬೇರೆ ವ್ಯಾಖ್ಯಾನಗಳು ಬೇಕೇ?