Thursday, July 28, 2011

ಅಲ್ಪಾಯುಷಿಯಾದರೂ ಸತ್ಪ್ರಜೆಯಾದ ಮಗನೇ ಹುಟ್ಟಬೇಕು ಅಲ್ಲವೇ?

ಣಿ ವರದಿಯ ಧೂಳುಈ ಪರಿಯಲ್ಲಿ ಹರಡುವುದೆಂದು ದಶಕದ ಹಿಂದೆ ಎಂಥವರೂ ಅಂದಾಜಿಸಿರಲಿಲ್ಲ.ಧೂಳಿನ ಕಣಗಳು ರಾಜಕಾರಣದಲ್ಲಿ ಹರಡಿ,ಕೆಂಪಾಗಿ,ಕಲೆಯಾಗಿ, ಮತದಾರರನ್ನು ಉಸಿರುಗಟ್ಟಿಸುವ ಹಂತಕ್ಕೆ ತಲುಪಿದ್ದು ಸದ್ಯದ ರಾಜಕಾರಣದ ಚಿತ್ರಣ.ಈಗ ಎಲ್ಲರೂ .ವೋಟುಹಾಕಿದವರೂ ಗೆದ್ದವರೂ ಸೋತವರೂ ಎಲ್ಲರಿಗೂ ಈಗ ಕೆಮ್ಮಿನ ಕಾಯಿಲೆ.ಯಡಿಯೂರಪ್ಪವರಿಗೆ ತಲೆಹೋಗುವ ಹೆದರಿಕೆ.
ಗಣಿಧೂಳಿನದು ದಶಕಗಳ ಹಿಂದಿನ ಕಥೆ. ಮಣ್ಣು ಮಾರಿದರೆಮದು ತಲೆಕೆಡಿಸಿಕೊಳ್ಳದವರು ಬೆಟ್ಟವನ್ನೇ ಅಗೆಯತೊಡಗಿದಾಗ ,ಮಾಫಿಯಾ ಒಕ್ಕರಿಸಿದಾಗ ,ಗಣಿಯ ಧಣಿಗಳು ಆಳುವ ಹಂತಕ್ಕೂ ಬಂದಾಗಲೇ ಅದರ ತೀವ್ರತೆಯ ಅರಿವಾಗಿದ್ದು.ಅನಂತರದ್ದೆಲ್ಲಾ ಕಿವಿಯಲ್ಲಿ ಇನ್ನೂ ಗುನುಗುನಿಸುತ್ತಿರುವ ಸಂಗತಿಗಳು.ಗಣಿಗಾರಿಕೆ ಉಚಾ್ಛ್ರಯ ಸ್ಥಿತಿಯಲ್ಲಿದಾ್ದಗಲೇ ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಬಿಜೆಪಿ ಪಾಲಿಗೆ ವರವೂ ಹೌದು ಶಾಪವೂ ಹೌದು.ಏಕೆಂದರೆ ತುಕ್ಕು ಹಿಡಿದಿದ್ದ ಹಳೇ ಕಬ್ಬಿಣದಂಥಾ ಕಾಂಗ್ರೆಸನ್ನು ಮಣಿಸಲು ಕೊನೆಗೆ ಗಣಿಯೇ ಬರಬೇಕಾಯಿತು.ಬಳಾ್ಳರಿಯಂಥಾ ಕಾಂಗ್ರೆಸಿನ ಭದ್ರ ಕೋಟೆಯನ್ನು ಕಬ್ಬಿಣದ ಅದಿರುಗಳೇ ಚೂರು ಮಾಡಿದ್ದವು.ಹಲವು ಕಡೆಗಳಲ್ಲಂತೂ ಕಾಂಗ್ರೆಸ್‌ ಸುಲಭವಾಗಿ ಮೇಲೇಳಲಾಗದಂತೆ ಮಾಡುವಲ್ಲಿ ಗಣಿಯ ಪಾತ್ರ ದೊಡ್ಡದು.ಕೌರವರನ್ನು ಮಣಿಸಲು ಕುರುಕ್ಷೇತ್ರವೇ ನಡೆದಂತೆ.ಹೀಗೆ ರಾಜಕಾರಣದ ಗೆಲುವು ಸಾಂವಿಧಾನಿಕ ಮತ್ತು ಭೌಗೋಳಿಕ ವಾದ ಸಂಗತಿಗಳನ್ನು ದಮನಿಸಿ ಬಿಜೆಪಿ ಪಾಲಿಗೇನು ಸಮಸ್ತ ರಾಜ್ಯಕ್ಕೇ ಶಾಪವೂ ಆಯಿತು.ರಾಜಕಾರಣ ಯಾವತ್ತಿದ್ದರೂ ಬಂಡವಾಳಶಾಹಿ ಸ್ವರೂಪವನ್ನು ಪಡೆದುಕೊಳ್ಳುವ ಗುಣವುಳ್ಳದ್ದು. ಗಣಿ ಅದಕ್ಕೆ ಇಂಬು ನೀಡಿತು.ಇನ್ನೇಕೆ ತಡ ಎಂಬಂತೆ ರಾಜಕಾರಣ-ವಾ್ಯಪಾರ-ವಹಿವಾಟು-ಅಧಿಕಾರ ಎಲ್ಲವೂ ಸಮ್ಮಿಳಿತವಾಗಿ ಎಲ್ಲವೂ ಕೆಂಪಾದವು.ಬಿಜೆಪಿ ಕರ್ನಾಟಕದಲ್ಲಿ ಇವೆಲ್ಲದರ ನಡುವೆ ಬೆಳೆಯುತಾ್ತ ಬಂತು.ಒಂದನೊ್ನಂದು ವಿಭಜಿಸಲಾಗದಂತೆ ಒಟಾ್ಟಗಿಯೇ ಇರತೊಡಗಿತು.ಪರಿಣಾಮ ಗಣಿಗಾರಿಕೆ ಬಿಜೆಪಿ ಪಾಲಿಗೆ ಬೆದೆಜನಕವಾಯಿತು.ಏಕೆಂದರೆ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರ ವಹಿಸಿಕೊಂಡು ದ.ಭಾರತದ ಹೆಬ್ಬಾಗಿಲನ್ನು ತೆರೆಯಿತು.ಇಪ್ಪತ್ತರ ಆಟದಲ್ಲಿನ ಆಟದಲ್ಲಿನ ಮೋಸ,ಧಗಾಕೋರತನ,ಜನರ ಒತ್ತಾಸೆಯೂ ಬಿ.ಜೆ.ಪಿಯ ಬೆನ್ನ ಹಿಂದಿದ್ದವು.ತನ್ನ ತತ್ವ ಸಿದ್ದಾಂತಗಳನ್ನು ಅನುಷಾ್ಟನಕ್ಕೆ ತರಬಲ್ಲ ಎಲ್ಲಾ ಅವಕಾಶಗಳು ಬಿಜೆಪಿಗೆ ತಾನಾಗಿ ಬಂದಿತ್ತು.ಅಧಿಕಾರ ವಹಿಸಿಕೊಂಡ ಬಿಜೆಪಿ ತನ್ನ ಪಾಡಿಗೆ ತಾನಿದ್ದಿದ್ದರೂ ಜನರ ಶಾಸ್ವತ ಪ್ರೀತಿಗೆ ಅದು ಪಾತ್ರವಾಗುತ್ತಿತ್ತು.ಆದರೆ ಆತುರ ಆತುರವಾಗಿ ಬೇಳೆಯಲು ಗಣಿ ಂಬ ಬೆದೆಜನಕವನ್ನು ಅದು ಸೇವನೆ ಮಾಡಿತ್ತು.ತನ್ನ ಆಡಳಿತದುದ್ದಕ್ಕೂ ಅದು ಗಣಿ ಧೂಳನ್ನು ಬಡಲಾರದೇ ಹೋಯಿತು.ಸರಕಾರವೇ ಗಣಿಮಯವಾಯಿತು. ಅದರ ಪರಿಣಾಮಗಳನ್ನು ಹೆಚ್ಚು ಉಲ್ಲೇಖಿಸುವ ಅಗತ್ಯವಿಲ್ಲ.ಸದ್ಯದ ಸ್ಥಿತಿ ಅದರ ಮುಖ್ಯವಾದ ಒಂದು ಘಟ್ಟ ಎಂಬುದಂತೂ ಸತ್ಯ.ಬಿಜೆಪಿ ಸರಾಕಾರವನ್ನು ಬೆಂಬಲಿಸಿದ್ದ ಜನರಿಗೆ ಯಡಿಯೂರಪ್ಪ ಗಣ ಅವ್ಯವಹಾರದಲ್ಲಿ ಪಾಲೊ್ಗಂಡಿದ್ದರೋ ಇಲ್ಲವೋ ಎಂಬುದು ಖಂಡಿತವಾಗಿಯೂ ನಿಚ್ಚಳವಾಗಿರಲಿಲ್ಲ.ಅದು ಅರಿವಾಗಲು ಆಸ್ಪದವೂ ಇರಲಿಲ್ಲ. ಆದರೆ ಎಲ್ಲರೂ ಅವರನ್ನು ಸಂಶಯದಿಂದ ಕಾಣಲಾರಂಭಿಸಿದರು.ಏಕೆಂದರೆ ಸರಕಾರದಲ್ಲಿ ಜಿಡ್ಡು ಎಂದು ಗುರುತಿಸಬಹುದಾದ ಧೂಳಂತೂ ಇದ್ದೇ ಇತ್ತು.ಅತ್ತ ಜನರು ತತ್ವವೆಲ್ಲಿ ಸಿದ್ದಾಂತವೆಲ್ಲಿ ಎಂದು ಹುಡುಕಾಡಿದರು.ಇತ್ತ ವಿರೋಧ ಪಕ್ಷಗಳ ಅಬ್ಬರವೂ ತಾರಕಕ್ಕೇರಿತು.ರಾಜ್ಯಪಾಲರಂತಹ ಟ್ರೋಜನ್‌ ಕುದುರೆಯನ್ನೂ ರಾಜಕಾರಣಕ್ಕೆ ತರಲಾಯಿತು.ಒಟಾ್ಟರೆ ಗೊಂದಲ,ಗೋಜಲು ಗೋಜಲಾದ ರಾಜಕಾರಣಕ್ಕೆ ಗಣಿ ಕಾರಣವಾಯಿತು. ದಿನೇ ದಿನೇ ಬಿಜೆಪಿಯನ್ನು ಬೈಯುವ ವರ್ಗ ಹೆಚಾ್ಚಗತೊಡಗಿತು.ಶಿಸ್ತಿನ ಪಕ್ಷ್ಷದ ಶಿಸ್ತೆಲ್ಲಿ ಎಂದು ಜನ ಆಡಿಯೂಕೊಂಡರು.ಇದೀಗ ಯಡಿಯೂರಪ್ಪನವರ ರಾಜೀನಾಮೆಯನ್ನು ಕಾರ್ಯಕಾರಿಣಿ ಮಂಡಳಿ ಕೇಳಿದೆ.ಶಿಸ್ತಿನ ಪಕ್ಷ ಎಂಬ ಹೆಸರನ್ನು ಉಳಿಸಿಕೊಂಡಿದೆ.ಬಿಜೆಪಿ ಡಿಫರೆಂಟ್‌ ಅನಿಸಿಕೊಳ್ಳುವುದು ಅದಕ್ಕೆ .ಇದು ಯಾವದೋ ವ್ಯಕ್ತಿಯಿಂದಲ್ಲ,ಯಾವನೋ ವ್ಯಕ್ತಿಗೆ ಸೀಮಿತವೂ ಅಲ್ಲ.ಸಂಖಾ್ಯಬಲದ ಹಿಂದೋಡುವ ಜಾಯಮಾನದ ತತವವೂ ಇಲ್ಲಿಲ್ಲ.ಆದರೆ ವಿಪರ್ಯಾಸದಿಂದ ಇಲ್ಲಿ ಎಲ್ಲವೂ ನಡೆದವು.ಎಲ್ಲವೂ ಗಣಿಬಲದಿಂದಲೇ ನಡೆದವು.
1980ರ ದಶಕ.ಕೇಂ್ದರದಲ್ಲಿದ್ದವರು ಎರಡೇ ಎರಡು ಸಂಸತ್‌ ಸದಸ್ಯರು ಉಳಿದವೆಲಾ್ಲ ಕಾಂಗ್ರೆಸಿನಂತಹ ಒರಟು ಮತ್ತು ಕಮುನಿಷ್‌‌ಟನಂತಹ ಜಿಗುಟು,ಅಂಥವುಗಳ ಬಾಲಗಳು ...ಅಂಥ ಕಾಲದಲ್ಲೆ ಇಡೀ ಸಂಸತ್ತನ್ನೇ ನಡುಗಿಸಬಲ್ಲ ಶಕ್ತಿ ಆ ಇಬ್ಬರು ಸಂಸದರಿಗಿತ್ತು.ಅಥವಾ ಬಿಜೆಪಿಗಿತ್ತು. ಅಂಥಾ ಶಿಸ್ತಿನ ಪಕ್ಷ ಗಣಿ ಧೂಳಿನಲ್ಲಿ ಮುಚ್ಚಿಯೇ ಹೋಯಿತು ಎಂದೇ ಅಂದುಕೊಂಡಾಗ "ಹೈಕಮಾಂಡ್‌್" ನಿಂದ ಮುಖ್ಯಮಂತ್ರಿಗಳ ರಾಜಿನಾಮೆ ಕೇಳಿದ್ದು ಕೇವಲ ಬಿಜೇಪಿಯ ತತ್ವಸಿದ್ದಾಂತಕಷ್ಟೇ ಅಲ್ಲದೆ ಭಾರತೀಯ ರಾಜಕಾರಣದಲ್ಲೇ ಒಂದು ಸಂತಸದ ಗಳಿಗೆ. ಅಂದು ದೆಹಲಿಯಲ್ಲಿ ಮದನ್‌ ಲಾಲ್‌ ಖುರಾನಾರ ರಾಜಿನಾಮೆಯನ್ನು ಕೇಂದ್ರ ಬಿಜೆಪಿ ಕೇಳಿದಾಗ,ಛತ್ತಿಸ್‌ಗಢದಲ್ಲಿ ಮುಖ್ಯಮಂತ್ರಿಗಳ ರಾಜಿನಾಮೆಯನ್ನು ಕೇಳಿದಾಗ,ಉಮಾಭಾರತಿಯವರ ರಾಜಿನಾಮೆಯನ್ನು ಕೇಂದ್ರ ಕೇಳಿರುವಾಗ ಯಡಿಯೂರಪ್ಪನವರ ರಾಜಿನಾಮೆಯನ್ನು ಕೇಳಿದ್ದು ಬಿಜೆಪಿಯ ಸಿದಾ್ಧಂತನಿಷ್ಟೆಯ ಪ್ರತೀಕ.ಅಷ್ಟಕ್ಕೂ ಯಡಿಯೂರಪ್ಪನವರು ಇನ್ನೂ ತಪ್ಪಿತಸ್ಥರೆಂದು ಸಾಭೀತೂ ಆಗಿಲ್ಲ.ಒಂದು ವರದಿಯನ್ವಯ ಈ ಕ್ರಮ ಕೈಗೊಳ್ಳಲಾಗಿದೆ.ಭಾರತದಲ್ಲಿ ವರದಿಗಳಿಗೇನೂ ಕೊರತೆಯಿಲ್ಲ.ಒಂದು ವೇಳೆ ಗಣಿ ವರದಿಯಲ್ಲಿ ಯಡಿಯೂರಪ್ಪನವರೇ ಖಳನಾಯಕರು ಎಂದಂತೂ ಇರಲು ಸಾಧ್ಯವಿಲ್ಲ.ಗಣಿಗಾರಿಕೆಯ ಉತ್ತುಂಗದ ಕಾಲದಲ್ಲಿ ಅಧಿಕಾರ ವಹಿಸಿಕೊಂಡಿದ್ದೇ ಅವರಿಗೆ ಮುಳುವಾಗಿದೆ .
ಇದರ ನಡುವೆ ಕಾಂಗ್ರೆಸ್‌ ನೆನಪಾಗುತ್ತದೆ.ಏನೆಲಾ್ಲ ಮಾಡಿದ್ದರು.ಹೇಗೆಲಾ್ಲ ವರ್ತಿಸಿದ್ದರು.ಇವತ್ತಿಗೂ ಕೂಡಾ ಅವರ ಗಮನ ಸಮಸ್ತ ಬಿಜೆಪಿಯ ಮೇಲಿರುವುದು ಸಂಶಯಕ್ಕೆ ಕಾರಣವಾಗುತ್ತದೆ.ನಿಜವಾದ ಕಾಳಜಿ ಇದ್ದಿದ್ದರೆ ಕಾಂಗ್ರೆಸ್‌ ಕೇಂದ್ರ ಬಿಜೆಪಿಯ ನಿರ್ಧಾರವನ್ನು ಸಾ್ವಗತಿಸುತ್ತಿತ್ತು.ಆದರೆ ಅದು ಸರಕಾರದ ಪತನದ ಮೇಲೆ ಕಣ್ಣಿಟ್ಟಿದೆ.ಇದರರ್ಥವೇನು?ಒಂದಂತೂ ಸತ್ಯ ಬಹುಸಮಯದ ನಂತರ ಬಿಜೆಪಿ ತನ್ನ ತನವನ್ನು ತೋರಿಸಿದೆ.ಅಂಥಾ ಅಧ್ವಾನಿಯನ್ನೇ .ಜಸ್ವಂತ್‌ ಸಿಂಗರನ್ನೇ ತತ್ವಸಿದ್ದಾಂತಗಳಾಚೆ ಇಡದ ಬಿಜೆಪಿ ಗಣಿಧೂಳಿಗೆ ಇಷ್ಟೊಂದು ಮರುಳಾಗಿಬಿಡುವುದೇ ಎಂದು ಅಂದುಕೊಂಡವರಿಗೆ ಬಹುಸಮಯದ ನಂತರ ಉತ್ತರವೊಂದು ಸಿಕ್ಕಿದೆ.
ಬೆದೆಜನಕದಿಂದ ದಷ್ಟಪುಷ್ಟವಾಗಿಯೇನೋ ಬೆಳೆಯಬಹುದು.ಆದರೆ ಅದು ಸಹಜವಲ್ಲ.ಸಹಜ ಬೆಳವಣಿಗೆಯಂತೆ ಆರೋಗ್ಯಕರವೂ ಅಲ್ಲ.ಅಲ್ಪಾಯುಷಿಯಾದರೂ ಸತ್ಪ್ರಜೆಯಾದ ಮಗನೇ ಹುಟ್ಟಬೇಕು ಅಲ್ಲವೇ?

Monday, July 25, 2011

"ಆ ವಿಜಯದಲ್ಲಿ ಆದರ್ಶವಿದೆ" ಮೇ.ಜ(ನಿ.)ಮೂವೆರ ಸಿ.ನಂಜಪ್ಪ

1999ರ ಮೇ ತಿಂಗಳು. ನಾನಾಗ ಬೆಂಗಳೂರಿನ ರಿಕ್ರೂಟ್‌ಮೆಂಟ್‌ ವಿಭಾಗದಲ್ಲಿದ್ದೆ.ಕೇರಳ,ಕರ್ನಾಟಕ ಮತ್ತು ಗೋವಾವನ್ನೊಳಗೊಂಡ ಪ್ರದೇಶ ನನ್ನ ವ್ಯಾಪ್ತಿಗೆ ಬರುತ್ತಿತ್ತು.ಅದೇ ಸಮಯದಲ್ಲಿ ದೂರದ ಕಾರ್ಗಿಲ್‌ ನಲ್ಲಿ ಗಡಿ ನಿಯಮ ಉಲ್ಲಂಘಿಸಲಾಗಿದೆಯೆಂದೂ ತುರ್ತುಕಾರ್ಯಾಚರಣೆ ನಡೆಸಲಾಗುವುದು ಎಂದೂ ಸುದ್ಧಿಗಳು ಎಲಾ್ಲ ಕೇಂದ್ರಗಳಿಗೆ ರವಾನೆಯಾದವು.ಅದು ಸೈನ್ಯದಲ್ಲಿ ಬಿಗುವಿನಿಂದ ಕೂಡಿದ ಸಮಯ.ಮೊದಲು ಆ ಪ್ರದೇಶದಲ್ಲಿ ಕೆಲಸ ಮಾಡಿದ ಅನುಭವವಿದ್ದುದರಿಂದ ನನಗೆ ಅಲ್ಲಿನ ಪರಿಸ್ಥಿತಿ ಚೆನ್ನಾಗಿ ಅರ್ಥವಾಗುತ್ತಿತ್ತು.
ಕಾರ್ಗಿಲ್‌ ಒಂದು ಗುಡ್ಡಗಾಡು ಪ್ರದೇಶ.ಚಳಿಗಾಲ ಬಂತೆಂದರೆ ಆ ಪ್ರದೇಶ ಸಂಪೂರ್ಣ ಹಿಮಾವೃತವಾಗುತ್ತದೆ.ಎಲ್ಲೆಡೆ ಮಂಜುಗಡ್ಡೆಗಳು.ವಾಸಕ್ಕದು ಯೋಗ್ಯವಾಗುತ್ತಿರಲಿಲ್ಲ.ಅಂಥ ಪ್ರದೇಶದಲ್ಲಿ ಶ್ರೀನಗರದಿಂದ ಲೇಹ್‌ಗೆ ಸಾಗುವ ಹೈವೇ ಒಂದು ಹಾದುಹೋಗುತ್ತಿತ್ತು.ಆ ಹೆದ್ದಾರಿ ಭೌಗೋಲಿಕವಾಗಿ ಅತ್ಯಂತ ಮಹತ್ವದ ಪ್ರದೇಶವಾಗಿತ್ತು.ಚಳಿಗಾಲದಲ್ಲಿ ಆ ಹೈವೆಯೂ ಮಂಜಿನಿಂದಾವೃತವಾಗುತ್ತಿತ್ತು.ಅದರ ಪಕ್ಕದಲ್ಲೇ ಭಾರತೀಯ ಸೇನಾಪಡೆಗಳ ಕೇಂದ್ರಗಳೂ ಇದ್ದವು.ಗಡಿ ಪ್ರದೇಶದ ಹೆದ್ದಾರಿಗಳ ರಕ್ಷಣೆಯೆಂದರೆ ಗಡಿಗಳದ್ದೇ ರಕ್ಷಣೆ ಎಂಬ ಮಾತೊಂದಿದೆ.ಹಾಗಾಗಿ ಮೊದಲಿನಿಂದಲೂ ಗಡಿ ಮತ್ತು ಹೈವೆಯನ್ನು ರಕ್ಷಿಸಲು ನಿಗದಿತ ತುಕಡಿಗಳು ಅಲ್ಲಿದ್ದವು 1999ರಲ್ಲೂ ಕೂಡ ಸೇನೆಯ ಬಿಡಾರ ಅಲ್ಲಿದ್ದು ಗಡಿಯನ್ನು ಕಟ್ಟೆಚ್ಚರದಿಂದ ಕಾಯುತ್ತಿತ್ತು.ಆದರೆ ಚಳಿಗಾಲದ ಸಮಯದಲ್ಲಿ ಸೇನೆ ತನ್ನ ಬಿಡಾರವನ್ನು ಕೊಂಚ ಬದಲಿಸಿಕೊಳ್ಳುತ್ತದೆ.ಅತ್ತ ಪಾಕ್‌ ಕೂಡಾ ತನ್ನ ವಾಸ್ತವ್ಯವನ್ನು ಬದಲಿಸಿಕೊಳ್ಳುತ್ತದೆ.ಅದು ಮೊದಲಿನಿಂದಲೂ ಆಚರಣೆಯಲ್ಲಿದ್ದ ಒಂದು ಪದ್ದತಿ.
ಆದರೆ ಆ ವರ್ಷ ಹಾಗಾಗಲಿಲ್ಲ.ನಮ್ಮ ಸೈನ್ಯ ಚಳಿಗಾಲ ಮುಗಿದು ಏಪ್ರಿಲ್‌-ಮೇನಲ್ಲಿ ಹೋದಾಗ ಹೈವೇ ಪಕ್ಕದ ಬೆಟ್ಟಗಳಲೆಲ್ಲಾ ಪಾಕ್‌ ಅಡಗುತಾಣಗಳು ಸೃಷ್ಟಿಯಾಗಿದ್ದವು.ಕೆಳಗಿನ ಹೈವೇಯನ್ನು ಆ ಬೆಟ್ಟಗಳಿಂದಲೇ ನಿಯಂತ್ರಿಸಬಹುದಿತ್ತು.ಯಾವಾಗ ಮೇಲಿನ ಬೆಟ್ಟಗಳು ನಮ್ಮ ಕೈ ತಪ್ಪುತ್ತದೋ ಹೈವೇ ನಮ್ಮ ಹಿಡಿತದಲ್ಲಿರುವುದಿಲ್ಲ.ಹೈವೇ ಹಿಡಿತದಲ್ಲಿಲ್ಲವೆಂದರೆ ನಮ್ಮ ಅಸ್ತಿತ್ವ ಅಲ್ಲಿರುವುದಿಲ್ಲ.ಅಲ್ಲದೆ ಅದು ನಮ್ಮ ನೆಲ .ನಮ್ಮ ನೆಲಕ್ಕೆ ಪಾಕಿಗಳು ನುಗ್ಗಿದ್ದರು.ಅಂತಾರಾಷ್ಟ್ರೀಯ ಗಡಿ ನಿಯಮದ ಸ್ಪಷ್ಟ ಉಲ್ಲಂಘನೆ ಆಗಿತ್ತು.ಆಗಬಾರದ್ದು ಆಗಿತ್ತು.ಆರಂಭದಲ್ಲಿ ಪಾಕ್‌ ಗಡಿಯೊಳಕ್ಕೆ ನುಗ್ಗಿರುವುದು ನಮ್ಮ ಸೈನಿಕರಲ್ಲ.ಅವರು ಉಗ್ರಗಾಮಿಗಳಿರಬಹುದು ಎಂಬ ಸಬೂಬು ಹೇಳಿತು.ಆದರೆ ಒಳಗುಗ್ಗಿರುವವರು ಪಾಕ್‌ ಸೈನಿಕರೇ ಆಗಿದ್ದರು.ಈ ಹೈವೇ ಪಕ್ಕದ ಬೆಟ್ಟಗಳಲ್ಲಿ ಅಂದರೆ ಕಾರ್ಗಿಲ್‌ನಲ್ಲಿ ಆಡಗಿ ಕುಳಿತಿದ್ದ ಪಾಕ್‌ ಸೈನಿಕರನ್ನು ತೆರವುಗೊಳಿಸುವುದು ಕಷ್ಟದ ಕೆಲಸವಾಗಿತ್ತು.ಏಕೆಂದರೆ ಕಾರ್ಗಿಲ್‌ ನ ಭೂಮಿ ಸಾಮರಿಕ ದೃಷ್ಟಿಯಿಂದ ಅತ್ಯಂತ ಆಯಕಟ್ಟಿನ ಭೂಮಿಯಾಗಿತ್ತು.ಅಷ್ಟರವರೆಗೆ ಸಮೀಪದ ಕುಪಾ್ವರವೇ ತಲೆಬಿಸಿಯ ಪ್ರದೇಶ ಎಂದು ನಮ್ಮ ಅಭಿಪಾ್ರಯವಾಗಿತ್ತು.ಅಲ್ಲಿನ ತಂಗಾರ್‌ ಸೆಕ್ಟರ್‌,ಮಚ್ಚಲ್‌ ಸೆಕ್ಟರ್‌ಗಳ ಮೇಲೆ ಕೇಂದ್ರೀಕರಿಸಿಕೊಳ್ಳುತ್ತಿದ್ದ ಸೈನ್ಯ ಕಾರ್ಗಿಲ್‌ ಅನ್ನು ಸುಲಭವಾಗಿ ತೆರವು ಗೊಳಿಸುವಂತಿರಲಿಲ್ಲ.ಆದರೂ ಅದು ಮಾಡಬೇಕಾದ ಕಾರ್ಯ.ನಾವು ಅದನ್ನು ಯಶಸ್ವಿಯಾಗಿ ಮಾಡಿ ಮುಗಿಸಿದ್ದೆವು.ಸೈನ್ಯ ಅದಕ್ಕೆ ಬಾರಿ ಬೆಲೆಯನ್ನೇ ತೆರಬೇಕಾಯಿತು.ನಮ್ಮ ಅನೇಕ ಹುಡುಗರು ಬಲಿದಾನಿಗಳಾಗಬೇಕಾಯಿತು. ಯುದ್ಧದ ತೀವೃತೆಯ ದೃಷ್ಟಿಯಿಂದ ಹೇಳುವುದಾದರೆ ಕಾರ್ಗಿಲ್‌ ಯುದ್ಧ 1971ರ ಯುದ್ಧದಷ್ಟು ದೊಡ್ಡದೇನಾಗಿರಲಿಲ್ಲ.ಆದರೆ 1999ರಲ್ಲಾದ ಬಲಿದಾನ ದೊಡ್ಡದು.ಕ್ಲಿಷ್ಟ ಸಂದರ್ಭದಲ್ಲಿ ನಮ್ಮ ಸೈನ್ಯ ದ ಹೋರಾಟ ಇತಿಹಾಸದಲ್ಲಿ ನಿಲ್ಲುವಂಥದ್ದು.ಎದೆಯೊಡ್ಡಿ ದೇಶವನ್ನು ರಕ್ಷಿಸಿದ ನೂರಾರು ಹೀರೋಗಳು ಅಂದು ಉದಯಿಸಿದ್ದರು.ಹಾಗಾಗಿ ಕಾರ್ಗಿಲ್‌ ವಿಜಯವೆಂದರೆ ಬಲಿದಾನಿಗಳನ್ನು ನೆನೆಯುವ ಹೊತ್ತು.
ಕಾರ್ಗಿಲ್‌ ಕಾರ್ಯಾಚರಣೆಯ ಹೊತ್ತು ನಮ್ಮ ಸೈನ್ಯ ಹಲವು ಆದರ್ಶಗಳನ್ನು ಮೆರೆಯಿತು.ಮುಕ್ಯವಾಗಿ ಈ ಕಾರ್ಯಾಚರನೆ ನಡೆದಿದ್ದೇ ಗಿಡಿ ಅತಿಕ್ರಮಣದ ವಿರುದ್ಧ.ಆ ಕಾರ್ಯವನ್ನು ನಮ್ಮ ಪಡೆ ಸುಸೂತ್ರವಾಗಿ ಮುಗಿಸಿದ ಬಳಿಕವೂ ನಮ್ಮ ಸೇನೆ ಎಲ್‌.ಓ.ಸಿ.ದಾಟಲಿಲ್ಲ.ಗಡಿ ನಿಯಮ ಉಲ್ಲಂಘಿಸಲಿಲ್ಲ.ನಾವು ನಮ್ಮ ಭೂಮಿಯನ್ನು ಶತ್ರುಗಳಿಂದ ರಕ್ಷಿಸಿಕೊಂಡೆವು.ನಾವು ಮನಸ್ಸು ಮಾಡಿದ್ದರೆ ಯುದ್ಧದ ಸ್ವರೂಪವೇ ಬದಲಾಗಿಹೋಗುತ್ತಿತ್ತು.ಏಕೆಂದರೆ ನಮ್ಮ ಶಕ್ತಿ ಸಾಮರ್ಥ್ಯದ ಮುಂದೆ ಪಾಕ್‌ನ ಬಲ ಏನೇನೂ ಇರಲಿಲ್ಲ.ನಮಗೆ ಗಡಿ ದಾಟಬೇಕೆಂದರೆ ಕಷ್ಟವೂ ಇರಲಿಲ್ಲ.ಅಡೆತಡೆಗಳಂತೂ ಇರಲೇ ಇಲ್ಲ. ಅತ್ತ ಪಂಜಾಬ್‌ ಇತ್ತು ,ಇತ್ತ ಕಾಶ್ಮೀರದ ಉದ್ದಕ್ಕೂ ನಮಗೆ ದಾರಿ ಮುಕ್ತವಾಗಿತ್ತು.ಆದರೆ ನಾವು ಟೈಗರ್‌ ಹಿಲ್‌ ಅನ್ನು ವಶಪಡಿಸಿಕೊಂಡವರು ಮತ್ತೆ ಮುಂದುವರೆಯುವ ಯೋಚನೆಯನ್ನೇ ಮಾಡಲಿಲ್ಲ.ನಮ್ಮ ಸೈನಿಕರು ಅರ್ಥಪೂರ್ಣವಾಗಿ ದೇಶಕ್ಕೆ ಪಾ್ರಣವನ್ನು ಅರ್ಪಿಸಿದರು.ನಮ್ಮ ರಕ್ಷಣೆಗಾಗಿ,ನಮ್ಮ ಶಾಂತಿಗಾಗಿ ಅವರು ಬಲಿದಾನಿಗಳಾಗಿದ್ದರು.ದ್ವೇಷವನ್ನು ಹೊತ್ತುಕೊಂಡು,ಕಾನೂನನ್ನು ಮುರಿದು ಒಳನುಗ್ಗಿದ ಬಲಿದಾನಿಗಳನ್ನು ನಾವು ಕಾಣಲಿಲ್ಲ.ಇದು ನಮ್ಮ ಸಂಸ್ಕೃತಿ.ಆ ಬಗ್ಗೆ ಪ್ರತಿಯೊಬ್ಬ ನಾಗರಿಕನೂ ಹೆಮ್ಮೆಪಡಬೇಕು.
ಇಂದು ಕಾರ್ಗಿಲ್‌ ವಿಜಯದ ದಿನವಾಗಿ 12 ವರ್ಷಗಳಾಗಿವೆ.ಯುದ್ಧದ ಅನಂತರ ನನ್ನನ್ನು ಕಾರ್ಗಿಲ್‌ನ ಪಶ್ಚಿಮಕ್ಕಿರುವ ಕುಪಾ್ವರ ಡಿವಿಶನ್ನಿನ ಕಮಾಂಡರ್‌ ನನಾ್ನಗಿ ನೇಮಕ ಮಾಡಲಾಯಿತು.ಆಪರೇಷನ್‌ ವಿಜಯದ ಅನಂತರ ಕಾರ್ಗಿಲ್‌ ಶಾಂತಿಯಿಂದ ಇರುವುದನ್ನು ನಾನು ಹತ್ತಿರದಿಂದ ಗಮನಿಸಿದ್ದೇನೆ.ಆದರೆ ಇಂದು ಕಾಶ್ಮೀರವನ್ನು ಕೇಂದ್ರೀಕರಿಸಿಕೊಂಡು ಹಲವು ಸಂಗತಿಗಳನ್ನು ಕೇಳುತ್ತಿದ್ದೇವೆ.ಸೇನೆಯನ್ನು ಹಿಂಪಡೆಯಬೇಕು ಎಂಬ ಚರ್ಚೆಯೂ ನಡೆದಿತ್ತು.ಆದರೆ ಗಡಿಯ ರಕ್ಷಣೆ ಎಲ್ಲಕ್ಕಿಂತ ಮುಖ್ಯ.ಅಲ್ಲಿಗೆ ಅವಶ್ಯ ಇರುವಷ್ಟು ಪಡೆಗಳು ಅಲ್ಲಿಗೆ ಬೇಕೇ ಬೇಕು.ಅದರಲ್ಲಿ ರಾಜಿ ಮಾಡಿಕೊಳ್ಳುವುದು ಸಲ್ಲದು.ಅಲ್ಲದೆ ಗಡಿ ಪ್ರದೇಶಗಳಲ್ಲಿ ಸೈನ್ಯ ಮತ್ತು ಸ್ಥಳೀಯರ ಮಧ್ಯೆ ವೈಮನಸುಗಳಿವೆಯೆಂದೂ ,ಸೇನೆ ಸ್ಥಳೀಯರನ್ನು ಹಿಂಸಿಸುತ್ತಿದೆಯೆಂದೂ ಪ್ರಚಾರಗಳು ನಡೆಯುತ್ತಿವೆ.ಇದೇನೂ ಮೊದಲಲ್ಲ.ವಾಸ್ತವವಾಗಿ ಗಡಿಪ್ರದೇಶದಲ್ಲಿ ಸ್ಥಳೀಯರು ಸೈನ್ಯದೊಟ್ಟಿಗೆ ಸ್ನೇಹದಿಂದಿರುವಷ್ಟು ಬೇರೆ ಪ್ರದೇಶದ ಸ್ಥಳೀಯರು ಅಷ್ಟಾಗಿ ಸ್ನೇಹದಿಂದಿರುವುದಿಲ್ಲ.ಗಡಿ ಪ್ರದೇಶಗಳ ಜನರಿಗೆ ಸೈನ್ಯದ ಬಗ್ಗೆ ಗೌರವದ ಭಾವನೆಯಿರುವುದನ್ನು ನಾನು ಹಲವಾರು ಗಡಿಭಾಗಗಳಲ್ಲಿ ಕಂಡಿದ್ದೇನೆ.ಸೈನ್ಯ ಮತ್ತು ಸ್ಥಳಿಯರ ದ್ವೇಷ ಎಂಬುದು ಶುದ್ಧ ಅಪಪ್ರಚಾರ.ಗಡಿಯನ್ನು ಅಭದ್ರಗೊಳಿಸಲು ಹಂಬಲಿಸುವ ಶಕ್ತಿಗಳ ಹುನಾ್ನರ.
ಕಾರ್ಗಿಲ್‌ ವಿಜಯದ ಹಿಂದೆ ಬಲಿದಾನದ ಇತಿಹಾಸವಿದೆ.ಆದರ್ಶದ ಪ್ರೇರಣೆಯಿದೆ.ವೀರತ್ವದ ಸಂಕೇತವಿದೆ.ಮೈಮರೆವಿಗೆ ಪಾಠವಿದೆ.ಅಪಪ್ರಚಾರಕ್ಕೆ ಉತ್ತರವಿದೆ.1999ರ ಆ ವೀರರಿಗೆ ನಮಿಸೋಣ.

Saturday, July 23, 2011

ಅನಂತ ಮೂರ್ತಿ ಅನಾಥರಾಗುತ್ತಿದ್ದಾರಾ?


ಕುಮಾರಸ್ವಾಮಿಗಳ ಉಪವಾಸವನ್ನು ಅಂತ್ಯಗೊಳಿಸಲು ಅನಂತಮೂರ್ತಿಗಳು ಹಣ್ಣಿನ ರಸವನ್ನು ಕುಡಿಸಿದ್ದು,ಕುಡಿಸುತ್ತಾ ಅನಂತಮೂರ್ತಿಗಳ ಮುಖದಲ್ಲಿ ಧನ್ಯತೆಯ ಭಾವವೊಂದನ್ನು ಕಂಡಿದ್ದು,ಕುಡಿದ ಕುಮಾರ ಸ್ವಾಮಿಗಳ ಮುಖದಲ್ಲೂ ದಾವಾಕ್ಕಿಂತಲೂ ಬೇರೆನೋ ಒಂದು ಗೋಚರಿಸಿದ್ದು ಮೊದಲಾದ ಘಟನಾವಳಿಗಳ ಸಂದರ್ಭದಲ್ಲಿ ಹಳೆಯ ಘಟನೆಯೊಂದು ನೆನಪಾಗುತ್ತದೆ.
ಅದು ಇದೇ ಕುಮಾರಸ್ವಾಮಿಗಳು ಮುಖ್ಯಮಂತ್ರಿಗಳಾಗಿದ್ದ ಸಮಯ.ಯಾವುದೋ ವಿಷಯವನ್ನೆತ್ತಿಕೊಂಡು ಇದೇ ಅನಂತಮೂರ್ತಿಗಳು ಸಭೆ-ಸಮಾರಂಭ-ಶ್ರಾದ್ಧ-ಮಾಧ್ಯಮಗಳಲ್ಲೆಲ್ಲಾ ಸರಕಾರದ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದರು.ಹೀಗಿರಲೊಂದು ದಿನ ರೇಗಿಹೋದ ಮುಖ್ಯಮಂತ್ರಿ ಕುಮಾರಸ್ವಾಮಿಗಳು "ಯಾರ್ರೀ ಈ ಅನಂತಮೂರ್ತಿ?ಅವರಾರೆಂದೇ ನನಗೆ ಗೊತ್ತಿಲ್ಲ.ಹೆಸರಂತೂ ಕೇಳೇ ಇಲ್ಲ"ಎಂದುಬಿಟ್ಟಿದ್ದರು.ಒರ್ವ ಜ್ಞಾನಪೀಠ ಪಡೆದ ಸಾಹಿತಿಗೆ ಇದಕ್ಕಿಂತ ಬೇರೆ ಅವಮಾನವುಂಟೇ?ಸ್ವಾಭಿಮಾನಿಯೊಬ್ಬನಿಗೆ ಅದು ಜೀವನಪೂರ್ತಿ ಕೊರಗಲೆಂದೇ ಇರುವ ಮಾತಾಗಿ ಉಳಿದುಹೋಗುತ್ತದೆ.ಅನಂತಮೂರ್ತಿಗಳೂ ನೊಂದುಕೊಂಡರು."ನಾನು ಜ್ಞಾನಪೀಠ ಪಡೆದ ಸಾಹಿತಿ,ಮುಖ್ಯಮಂತ್ರಿಗಳಿಗೆ ನಾನಾರೆಂದು ಗೊತ್ತಿಲ್ಲದೇ ಇಲ್ಲ"ಎಂದು ನೋವಿನಿಂದ ಹೇಳಿಕೊಂಡಿದ್ದರು.ಈಗ ಅದೆಲ್ಲಾ ಆಗಿ ಸರಿಯಾಗಿ ನಾಲ್ಕು ವರ್ಷವೂ ಆಗಿಲ್ಲ.ಆಗಲೇ ಎಷ್ಟೆಲಾ್ಲ ಬದಲಾವಣೆಗಳು!"ಯಾರವನು?" ಎಂದವರಿಗೇ ಹಣ್ಣಿನ ರಸ ಕುಡಿಸಲು ಬಂದರಲ್ಲ ಅನಂತಮೂರ್ತಿಗಳು.ಅಂದು ಕುಮಾರಸ್ವಾಮಿಗಳು ಪಾತಾಳದಷ್ಟು ಕೀಳಾಗಿ ಮೂರ್ತಿಗಳನ್ನು ಅವಮಾನಿಸಿದ್ದು ಇಷ್ಟುಬೇಗ ಮರೆತುಹೋಯಿತೇ?ಎಲಾ ಜೀವವೇ!?ಸಾಹಿತಿಯ ಸಂವೇದನೆ ಅವಮಾನವನ್ನು ನಿರ್ಲಕ್ಷಿಸಿತು ಎಂದುಕೊಳ್ಳುವುದೇ?
ಅಂತೂ ಮೊನ್ನೆಯ ಘಟನೆ ಕೇವಲ ರಾಜಕೀಯದ ಒಂದು ಸಂಗತಿಯಾಗದೆ ಸಾಹಿತ್ಯಕ್ಕೆ ಸಂಬಂಧಪಟ್ಟ ಒಂದು ಸಂಗತಿಯೂ ಆಗಿ ದಾಖಲಾಯಿತು.ಏಕೆಂದರೆ ಕನ್ನಡದ ಮೊದಲಿನ ಸಾಹಿತಿಗಳಾರೂ ಅನಂತಮೂರ್ತಿಯ ಮಟ್ಟಕ್ಕೆ ಇಳಿದಿರಲಿಲ್ಲ.ಅಂಥದ್ದನ್ನು ಪರಮ ಅಸಹ್ಯ ಎಂದೇ ಬಹುತೇಕ ಸಾಹಿತಿಗಳು ಅಂದುಕೊಳ್ಳುತ್ತಿದ್ದರು.ಆದರೆ ಅನಂತಮೂರ್ತಿಗಳು ಮಾತ್ರ ವಿಭಿನ್ನವಾಗಿರಲು ಪ್ರಯತ್ನಿಸುತ್ತಾರೆ.ವಿಚಿತ್ರವಾಗಿ ತೋರುತ್ತಾರೆ.ಇದೊಂದೇ ಅಲ್ಲ .ಇನ್ನೊಮ್ಮೆಯೂ ಹಾಗೇ ಆಗಿತ್ತು.2009ರಲ್ಲಿ ಇದೇ ಅನಂತಮೂರ್ತಿಗಳು ಆರ್.ವಿ.ದೇಶಪಾಂಡೆಯವರೊಡಗೂಡಿ ಕೆ.ಪಿ.ಸಿ.ಸಿ ಕಛೇರಿಗೆ ಹೋಗಿ ಕಾಂಗ್ರೆಸ್‌ ಪಕ್ಷದ ವೆಬ್‌ಸೈಟ್‌ ಅನ್ನು ಅನಾವರಣಗೊಳಿಸಿದ್ದರು.ಸಾಹಿತಿಯೊಬ್ಬನಿಗೆ ಇದೆಲ್ಲದರ ಉಸಾಬರಿ ಯಾಕೆ?ವೆಬ್‌ಸೈಟ್‌ ಅನಾವರಣಗೊಳಿಸಿದ್ದೇ ಅಲ್ಲದೆ ಕಾಂಗ್ರೆಸನ್ನು ಮೆಚ್ಚಿಸಲು ಭಾಷಣವೊಂದನ್ನು ಮಾಡಿ "ಬಾಬರಿ ಮಸೀದಿ ಧ್ವಂಸ,ಮಂಗಳೂರಿನ ಕೋಮುಗಲಭೆಗಳು,ಗುಜರಾತಿನ ನರಮೇಧ ಇಂಥ ದುರಾಚಾರಗಳಿಂದ ದೇಶವನ್ನು ರಕ್ಷಿಸಬಲ್ಲ ಅಖಿಲಭಾರತ ಪಕ್ಷವೆಂದರೆ ಕಾಂಗ್ರೆಸ್‌ ಒಂದೇ "ಎನ್ನುತ್ತಾ ಮುಖವನ್ನು ಮೊರದಗಲ ಮಾಡಿಕೊಂಡಿದ್ದರು.ಅದಾದ ಕೆಲದಿನಗಳಲ್ಲಿ ರಾಜ್ಯಸಭೆಗೆ ಕಾಂಗ್ರೆಸಿನ ಅಭ್ಯರ್ಥಿ ಮೂರ್ತಿಗಳಂತೆ ಎಂಬ ಸುದ್ಧಿ ಹರಡಿತ್ತು.ಇವನ್ನೆಲ್ಲಾ ನೋಡಿದರೆ ಅನಂತಮೂರ್ತಿಗಳು ಯಾರು ಕರೆದರೂ ,ಎಲ್ಲಿಗೆ ಬೇಕಾದರೂ ಹೋಗುವ ಪುರುಸೋತ್ತಿನ ಸಾಹಿತಿ ಎನಿಸುವುದಿಲ್ಲವೇ?ಸಾಹಿತಿಗಳಿಗೆ ರಾಜಕೀಯ ಒಲವುಗಳಿರುವುದು ಸಹಜ.ಹಾಗೆ ಒಲವಿದ್ದವರಲ್ಲಿ ಅನಂತಮೂರ್ತಿಗಳು ಮೊದಲಿನವರೇನೂ ಅಲ್ಲ.ಆದರೆ ಸಾಹಿತ್ಯಕ್ಕಿಂತಲೂ ರಾಜಕೀಯವನ್ನೆ ತುಡಿದು,ಹಾತೊರೆದು,ಹಸಿದು ಕೂತವರಲ್ಲಿ ಮಾತ್ರ ಅನಂತಮೂರ್ತಿಗಳು ಮೊಟ್ಟಮೊದಲನೆಯವರು.ಅವರ ಎಲ್ಲ ಆಮಾತು,ವರ್ತನೆಗಳಲ್ಲಿ ಸೀಟಿನ ಜೊಲ್ಲು ಇರುವುದನ್ನು ಯಾರೂ ಅಲ್ಲಗಳೆಯಲಾಗುವುದಿಲ್ಲ. ಅನಂತಮೂರ್ತಿಗಳು "ಅವಸ್ಥೆ"ಎಂಬ ಕಾದಂಬರಿಯೊಂದನ್ನು ಬರೆದಿದ್ದಾರೆ.ರಾಜಕಾರಣದ ಒಳಸುಳಿಗಳನ್ನು ಚಿತ್ರಿಸಿದ ಅವಸ್ಥೆಯಲ್ಲಿ ಖ್ಯಾತ ಸಮಾಜವಾದಿ ನೇತಾರ ಶಾಂತವೇರಿ ಗೋಪಾಲಗೌಡರನ್ನು ಹೋಲುವ ಪಾತ್ರವೊಂದನ್ನು ಅವರು ಚಿತ್ರಿಸಿದ್ದರು.ಅಂದರೆ ಅಂದು ಅನಂತಮೂರ್ತಿಗಳು ಕಂಡುಕೊಂಡಿದ್ದ ಸಾಹಿತ್ಯಕ್ಕೆ , ಮಾತಿಗೆ ಒಂದು ಸಿದ್ಧಾಂತದ ಬಲವೂ ಇದೆಯೆಂದಾಯಿತು. ಅಂಥವರು ಯಾವ ರಾಜಕೀಯ ಸಿದ್ಧಾಂತದ ಆಧಾರದ ಮೇಲೆ ಕುಮಾರಸ್ವಾಮಿಗಳಿಗೆ ಗುಟುಕು ನೀಡಿದರು?"ಲೋಹಿಯಾ ನನ್ನವರು" ಎಂದು ಲೇಖನ ಬರೆಯುವ ಮೂರ್ತಿಗಳು ಉಪವಾಸಾಂತ್ಯಕ್ಕೆ ಜ್ಯೂಸುಕುಡಿಸುವಾಗ ಲೋಹಿಯಾರನ್ನು ಮರೆತೇಬಿಟ್ಟರು.ಹೀಗೆ ಬದುಕು ಮತ್ತು ಬರಹಗಳ ನಡುವೆ ವೈರುಧ್ಯಗಳೇ ಎದ್ದು ಕಾಣುವಾಗ ಅವರ ಸಾಹಿತ್ಯವನ್ನು ಗಟ್ಟಿ ಎಂದು ಒಪ್ಪಿಕೊಳ್ಳುವುದು ವಿಮರ್ಶಾ ಮನಸ್ಸುಗಳಿಗೆ ಕಷ್ಟವಾಗುತ್ತದೆ.ಕುಮಾರಸ್ವಾಮಿಗಳ ಉಪವಾಸವನ್ನು ಅಂತ್ಯಗೊಳಿಸಲು ಅನಂತಮೂರ್ತಿಗಳು ಹೋಗಿದ್ದರಲ್ಲಿ ತಪ್ಪಿಲ್ಲ ಎಂದುಕೊಂಡರೂ ಕೂಡ ಅನಂತಮೂರ್ತಿಗಳ ಘನತೆ ಹೆಚ್ಚುವುದೇ ಇಲ್ಲ.ಏಕೆಂದರೆ ಕೆಲವು ತಿಂಗಳ ಹಿಂದೆ ಅದೇ ಫ್ರೀಡಂ ಪಾರ್ಕಿನಲ್ಲಿ ಸಾವಿರಾರು ಜನರು ಅಣ್ಣಾಹಜಾರೆಗೆ ಬೆಂಬಲ ಸೂಚಿಸಿ ಉಪವಾಸ ಕೂತಾಗ ಅನಂತಮೂರ್ತಿಗಳು ಅತ್ತ ತಲೆಹಾಕಿ ಕೂಡ ಮಲಗಿರಲಿಲ್ಲ.ಆ ಉಪವಾಸ ಮುಖ್ಯವಾಗದಿದ್ದವರಿಗೆ ಈ ಉಪವಾಸ ಹೇಗೆ ಮುಖ್ಯವಾಯಿತು?ಕುಮಾರಸ್ವಾಮಿಗಳ ಆರೋಗ್ಯದ ಕಾಳಜಿ ವಹಿಸಿ ಧಾವಿಸಿ ಬಂದವರಿಗೆ ವಯೋವೃದ್ಧ ಅಣ್ಣಾಹಜಾರೆಯವರ ಆರೋಗ್ಯ ನೆನಪಿಗೆ ಬರಲಿಲ್ಲವೇ?ಕುಮಾರಸ್ವಾಮಿಗಳೇನಾದರೂ ಮೂರ್ತಿಗಳಿಗೆ ತೀರಿಸುವುದೋ ಒಪ್ಪಿಸುವುದೋ ಬಾಕಿಯಿತ್ತೆ?ಆನಂತಮೂರ್ತಿಗಳೆಂದರೆ ಹಾಗೆಯೇ .ಯಾವ ಉಪವಾಸ ಹೆಚ್ಚು ಬೆಲೆಬಾಳುತ್ತದೋ ಅತ್ತಲೇ ಅವರ ಸಹವಾಸ.ಇಲ್ಲದಿದ್ದರೆ ಅವರು ಅದೇ ಹೊತ್ತಲ್ಲಿ ಗದಗಿನ ಕೃಷಿಭೂಮಿಯನ್ನು ಪೋಸ್ಕೋ ಕಂಪೆನಿಗೆ ಕೊಡುವುದನ್ನು ವಿರೋಧಿಸಿ ಉಪವಾಸ ಕೂರುತ್ತಿದ್ದರು.ಚಳವಳಿ ಸಂಘಟಿಸುತ್ತಿದ್ದರು.ಮಂಗಳೂರಿನ ಎಂ.ಎಸ್‌.ಇ. ಝಡ್‌ ವಿರುದ್ಧ ಧ್ರವನಿ ಎತ್ತುತ್ತಿದ್ದರು.ಉಡುಪಿಯ ನಾಗಾರ್ಜುನ ವಿಧ್ಯುತ್‌ ಸ್ಥಾವರವನ್ನು ವಿರೋಧಿಸಿ ಹೇಳಿಕೆ ನೀಡುತ್ತಿದ್ದರು.ನದಿ ತಿರುವನ್ನು ವಿರೋಧಿಸಿ ಪಾದಾಯಾತ್ರೆಯನ್ನೇ ಮಾಡುತ್ತಿದ್ದರು.ಪ.ಘಟ್ಟವನ್ನು ಉಳಿಸಿ ಎಂದು ಹುಯಿಲೆಬ್ಬಿಸುತ್ತಿದ್ದರು.ಆದರೆ ಅನಂತಮೂರ್ತಿಗಳಿಗೆ ಅವಾವುವೂ ಮುಖ್ಯವಲ್ಲ .ಏಕೆಂದರೆ ಅವುಗಳಿಂದ ರಾಜಕೀಯವಾಗಿ ಲಾಭವಿಲ್ಲ.ಬದಲಿಗೆ ದೊಡ್ಡಮನುಷ್ಯರನ್ನು ಎದುರು ಹಾಕಿಕೊಳ್ಳಬೇಕು.ಹಾಗಾಗಿ ಇಪ್ಪತ್ತು ದಿನಗಳಿಂದ ಗ್ರೆಗರಿ ಪತ್ರಾವೋ ಎಂಬ ಮಂಗಳೂರಿನ ರೈತ ಮಾಡುವ ಉಪವಾಸಕ್ಕಿಂತ ಎರಡು ದಿನದಿಂದ ಶಾಮಿಯಾನದಡಿಯಲ್ಲಿ ಮಾಡಿದ ಉಪವಾಸವೇ ಅನಂತಮೂರ್ತಿಗಳಿಗೆ ಮುಖ್ಯವಾಗಿಬಿಡುತ್ತದೆ.ಅಷ್ಟಕ್ಕೂ ರಾಜ್ಯದ ಎಲ್ಲಾ ಚಳವಳಿಗಳಿಗೆ ಅನಂತಮೂರ್ತಿಗಳೇ ವಾರಿಸುದಾರರಾಗಬೇಕೆಂದೇನೂ ಇಲ್ಲ.ಆದರೆ ರಾಜಕೀಯ ಆರೋಪ-ಪ್ರತ್ಯಾರೋಪಗಳಲ್ಲಿ ಭಾಗವಹಿಸುವ ಜ್ಞಾನಪೀಠಿಗಳ ವರ್ತನೆಯ ಬಗ್ಗೆ ಪ್ರಶ್ನೆಗಳೇಳುತ್ತವೆ.ರಾಜಕೀಯ ಒಲವುಗಳಿದ್ದ ಸಾಹಿತಿಗಳ ಹೋರಾಟಗಳು ನೆನಪಿಗೆ ಬರುತ್ತವೆ.ಶಿವರಾಮ ಕಾರಂತರು ಮತ್ತು ಅಡಿಗರಲ್ಲಿದ್ದ ಹೋರಾಟದ ಕೆಚ್ಚನ್ನು ಜನ ಇಂದೂ ನೆನಪು ಮಾಡಿಕೊಳ್ಳುತ್ತಾರೆ.ಅದೇ ಹೊತ್ತಲ್ಲಿ ಹೋರಾಟಗಾರರಂತೆ ಕಾಣುವ ಅನಂತಮೂರ್ತಿಗಳು ಎಡೆಬಿಡಂಗಿಗಳಂತೆ ಕಂಡುಬರುತ್ತಾರೆ.
ಅನಂತ ಮೂರ್ತಿಗಳ ಒಂದು ಪ್ರಸಿದ್ದ ಹೇಳಿಕೆಯಿದೆ."ಕೆಟ್ಟ ಸಾಹಿತ್ಯ ಒಳ್ಳೆಯ ರಾಜಕೀಯವಾಗಲಾರದು"ಎಂದು.ಅವರು ಸಾಹಿತ್ಯವನ್ನು ರಾಜಕೀಯದಿಂದ ಬೇರ್ಪಡಿಸುವುದೇ ಇಲ್ಲ ಎಂಬುದಕ್ಕೆ ಇನ್ನೇನು ಉದಾಹರಣೆ ಬೇಕು?ಆದರೆ ಅವರು ಕೆಟ್ಟ ರಾಜಕೀಯ ಸಾಹಿತ್ಯಕ್ಕೆ ಪೂರಕ ಎಂದು ಅಂದುಕೋಂಡಿದ್ದರೋ ಏನೋ.ಹೀಗೆ ಏನೇನೋ ಹೇಳಿಬಿಡುವುದು ಅವರ ಜಾಯಮಾನ. "ನಾನು ಶಿಸ್ತಿನಲ್ಲಿ ಬೆಳೆದವನೇ ಅಲ್ಲ.ಹಿಂದೆ ಮೇಷ್ಟ್ರಾಗಿದ್ದಾಗ ಪಾಠಮಾಡಿದವನೂ ಅಲ್ಲ.ಸಭೆಗಳಲ್ಲಿ ತಯಾರಿ ಮಾಡಿ ಮಾತಾಡಿದವನೂ ಅಲ್ಲ.ನಿಂತ ಕಾಲಮೇಲೆ ಪುಣ್ಯವಶಾತ್‌ ಹೊಳೆಯುತ್ತಾ ಹೋಗುವುದನ್ನು ಹೇಳುವ ಸ್ವಭಾವ ನನ್ನದು.ಸತತ ನಾನಿರುವುದೇ ಹೀಗೆ.ಸತತ ನಾನು ತೊಡಗಿಸಿಕೊಂಡಿರುವಂತೆ ಮಾಡುವ ಸಂಗತಿಗಳೇ ಕೆಲವೊಮ್ಮೆ ನಾನು ಮಾಡಿದ ಪಾಠ."ಎನ್ನುವ ಅನಂತಮೂರ್ತಿಗಳ ಮಾತಿನಲ್ಲಿನ್ನು ಯಾವ ಅಧಿಕೃತತೆಯನ್ನು ನಿರೀಕ್ಷಿಸಬಹುದು?ಹಾಗೆಯೇ ನಿಂತಕಾಲಮೇಲೆ ಅವರು ಉಪವಾಸಾಂತ್ಯಕ್ಕೆ ಶರಭತ್ತು ಕುಡಿಸಿಬಿಟ್ಟರೇ ಎಂದು ಅವರನ್ನು ಯಾರೂ ಕೇಳಬಾರದು.ಕೇಳಿದರೆ ಅವರು ಕೋಮುವಾದಿಗಳಾಗುವರು.ನಕ್ಸಲ್‌ ಅನುಕಂಪ ಹೊಂದಿರುವುದು ಅನಂತಮೂರ್ತಿಗಳ ಹಲವು ಗುಣಗಳಲ್ಲಿ ಒಂದು ಗುಣ.ನಕ್ಸಲ್‌ ಎನ್‌ಕೌಂಟರ್‌ಗಳನ್ನು ಖಂಡಿಸುವವರು ಅನಂತಮೂರ್ತಿಗಳು.ಇಂಥವರು ಅದು ಹೇಗೆ ಕೋಟಿಗಟ್ಟಲೆ ಶೇಖರಿಸಿಟ್ಟುಕೊಂಡ ಕುಮಾರಸ್ವಾಮಿಗಳ ಬೆಂಬಲಕ್ಕೆ ನಿಂತುಬಿಡುತ್ತಾರೆ?ನಕ್ಸಲರನ್ನು ಬೆಂಬಲಿಸಿ ಬಂಡವಾಳಶಾಹಿಗಳನ್ನು ಸಾಯಬೇಡಿ ಎನ್ನುವುದು ಜಗತ್ತಿನ ಹೊಸದೊಂದು ಸಿದ್ದಾಂತವೇ ಸರಿ.ಅದರ ಕರ್ತೃ ಅನಂತಮೂರ್ತಿಗಳೇ.ತಮ್ಮ ಕವನದಲ್ಲಿ -ಕಥೆಯಲ್ಲಿ-ಕಾದಂಬರಿಯಲ್ಲಿ ಲೋಹಿಯಾ,ಗಾಂಧಿ ಮೊದಲಾದವರನ್ನು ಯತೇಚ್ಛ ತರುವ ಅನಂತಮೂರ್ತಿಗಳು ಪ್ರಾಮಾಣಿಕರೇ ಆಗಿದ್ದರೆ,ಸಮಾಜವಾದಿ ಸಿದ್ಧಾಂತಕ್ಕೆ ನಿಷ್ಠರೇ ಆಗಿದ್ದರೆ ಒಂದು ಚಳವಳಿಯನ್ನು ಕೈಯಾರೆ ಅಂತ್ಯ ಮಾಡುತ್ತಿರಲ್ಲಿಲ್ಲ.ವಾಸ್ತವವಾಗಿ ಕುಮಾರಸ್ವಾಮಿಗಳ ಆರೋಪದಲ್ಲಿ ಅನಂತಮೂರ್ತಿಗಳಿಗೆ ಸ್ಪಷ್ಟತೆ ಇದ್ದಿದ್ದೇ ಆಗಿದ್ದರೆ ಆ ಹೋರಾಟವನ್ನು ಒರ್ವ ಸಮಾಜವಾದಿ ಮತ್ತಷ್ಟು ಬೆಳೆಸುತ್ತಿದ್ದ.ಆದರೆ ಎಲ್ಲವೂ ಯಾರದ್ದೋ ಕೃಪಾಪೋಷಿತ ನಾಟಕಮಂಡಳಿಯಾಗಿರುವಾಗ ನಾಟಕ ಬರೆಯುವ ಇವರೇನು ಮಾಡಿಯಾರು? ಜ್ಞಾನಪೀಠಿಗಳೊಬ್ಬರು ಹೀಗೆಲ್ಲಾ ವರ್ತಿಸುವಾಗ ಸಾಹಿತ್ಯಾಸಕ್ತರಿಗಷ್ಟೆ ಅಲ್ಲ ಸಾಹಿತ್ಯದ ಗಂಧಗಾಳಿ ಇಲ್ಲದವರಿಗೂ ಹೇಸಿಗೆಯೆನಿಸುವುದು ಸುಳ್ಳಲ್ಲ.ಬಹುತೇಕ ಸಾಹಿತ್ಯಾಸಕ್ತರು ಈಗಾಗಲೇ ಅನಂತಮೂರ್ತಿಗಳತ್ತ ಭ್ರಮನಿರಸನವನ್ನು ಹೊಂದಿದ್ದಾರೆ.ಗೊಂದಲದ ,ಗೋಜಲುಗೋಜಲಾದ ಹೇಳಿಕೆಗಳು ಅವರನ್ನು ಜನರು ಮತ್ತು ಸಾಹಿತ್ಯದಿಂದ ಇನ್ನಷ್ಟು ದೂರ ಮಾಡುತ್ತಿದೆ. ಬರ್ಟೋಲ್‌ ಬ್ರೆಕ್ಟ್ ಎಂಬ ಜರ್ಮನ್‌ ನಾಟಕಕಾರ ನನಗೆ ಪ್ರೇರಣೆ ಎನ್ನುವ ಅನಂತಮೂರ್ತಿಗಳು ಆತ ರಿಲ್ಕ್ ಗೆ ಸಮನಾದವನು ಎನ್ನುವಾಗ ಕನ್ನಡಿಗರಿಗೆ ಏನೇನೂ ಅರ್ಥವಾಗುವುದಿಲ್ಲ.ಇನ್ನು ಇಂಗ್ಲಿಷ್‌ ಸಾಹಿತ್ಯಾಸಕ್ತರಿಗಂತೂ ಅದು ಬೇಕಾಗಿಯೂ ಇಲ್ಲ.ಆದರೆ ಕೆಲವು ಎಡೆಬಿಡಂಗಿಗಳಿಗೆ, ಅಪಾರ ಕೀಳರಿಮೆಯಿಂದ ಬಳಲುವವರಿಗೆ ಅನಂತ ಹೇಳಿಕೆಗಳು ಪವಿತ್ರನಾದದಂತೆ ಕೇಳುತ್ತವೆ.ಇಂಥ ಅನಂತಮೂರ್ತಿಗಳು ನೆಲದ ಸೊಗಡಿನ ಬಗ್ಗೆ ಮಾತಾಡಿದರೆ ಬೆಲೆಯೇನು ಬಂತು?ಅಲ್ಲದೆ ಮೂರ್ತಿಗಳೆಂದೂ ಜನರ ಅಂತರಂಗಕ್ಕೆ ಹತ್ತಿರವಾದವರೇ ಅಲ್ಲ."ಬೆಂಗಳೂರಿನ ನನ್ನ ಮನೆ ಇರುವ ಆರ್‌.ಎಂ.ವಿ ಬಡಾವನೆಯಲ್ಲಿ ನೈಕಿ ಶೂ ಧರಿಸಿ ವಾಕ್‌ ಹೋಗುತ್ತಾ ಇರುವಾಗ"ಎಂದೂ "ಡಬ್ಲ್ಯು.ಎಚ್‌.ಆಡನ್‌ ಎಂಬ ಕವಿ ಬರೆದ ಒಂದು ಕವನವನ್ನು ನಾನು ಓದಿ ಮೆಚ್ಚಿಕೊಂಡಾಗ"ಎಂದೂ "ಬಾಡ್‌ ಬರಿ ಪೈಪ್‌ ಸೇದುತಾ್ತ ತನ್ನ ಟೈಪ್‌ರೈಟರ್‌ ಎದುರು ಕೂತು ಹೇಳಿದ್ದು ನೆನಪಾಗುತ್ತದೆ"ಎಂದೂ ನಿರಂತರ ಹೇಳುವ ಅನಂತಮೂರ್ತಿಗಳು ಕನ್ನಡ ಸಾಹಿತ್ಯಾಸಕ್ತರನ್ನು ದಡ್ಡರೆಂದುಕೊಂಡಿದಾದರೋ ಏನೋ.ಇಂದು ನೈಕಿ ಶೂ ಧರಿಸುವುದು,ಇಂಗ್ಲಿಷ್‌ ಸಾಹಿತ್ಯವನ್ನು ಅನಂತಮೂರ್ತಿಗಳ ಮಾರ್ಗದರ್ಶನವಿಲ್ಲದೆ ಓದುವವರೂ ತುಂಬಾ ಇದ್ದಾರೆ.ಹೀಗೆ ಮಾತಿನಲ್ಲಿ ಅಹಂ,ಆದರೆ ಅದನ್ನು ಕಾಣಿಸಿಕೊಳ್ಳದೆ ಉಳಿಸಿಕೊಳ್ಳುವ ನಾಜೂಕುತನ ಮತ್ತು ಗೊತ್ತಿಲ್ಲದೇ ಹೊರಬಂದುಬಿಡುವ ದೌರ್ಬಲ್ಯ,ಪ್ರತಿಷ್ಠೆಯ ಬೆನ್ನುಹತ್ತುವ ,ನುಸುಳಲು ಮಾತಿನ ಮೊರೆಹೋಗುವ ,ಸಾಹಿತ್ಯದಲ್ಲಿ ಗೊಂದಲ ಹುಟ್ಟಿಸುವ ,ತನಗಾಗದವರನ್ನು ಹೀನಾಮಾನ ತೆಗಳುವ ಅನಂತ ಮೂರ್ತಿಗಳು ರಾಜಕೀಯದ ನಡುವೆ ಕಾಣಿಸಿಕೊಂಡೇ ಹಾಸ್ಯಾಸ್ಪದರಾಗಿಹೋದವರು.ಅವರೊಂದು ಕಡೆ ಬರೆದಿದ್ದು ನೆನಪಾಗುತ್ತದೆ,"ಕಟ್ಟಕಡೆಯ ಮರವನ್ನು ಕತ್ತರಿಸಿ ಹಾಕಿದ ನಂತರ,ಕಟ್ಟಕಡೆಯ ನದಿಗೆ ವಿಷ ಇಕ್ಕಿದ ನಂತರ,ಕಟ್ಟಕಡೆಯ ಮೀನನ್ನು ಹಿಡಿದ ನಂತರ ನಿನಗೆ ಗೊತಾ್ತಗುತ್ತದೆ,ಹಣವನ್ನು ತಿನ್ನಲಾಗುವುದಿಲ್ಲವೆಂದು"ಕುಮಾರಸ್ವಾಮಿಗಳ ಮುಂದೆ ಕೂತು ಬಂದವರಿನ್ನು ಇದನ್ನು ಯಾರಿಗೆ ಹೇಳಬಲ್ಲರು?"ಬಿಜೆಪಿಯಲ್ಲಿ ಸಾತ್ವಿಕವಾದ ವಾಜಪೇಯಿ ಮುಖ,ಕ್ರೂರವಾದ ಮೋದಿ ಮುಖ.ಇನ್ನೂ ಕ್ರೂರವಾದ ತೊಗಾಡಿಯಾ ಮುಖ ಇದೆ"ಎಂದು ಆರೋಪಿಸುವ ಮೂರ್ತಿಗಳು ಕಾಂಗ್ರೆಸಿನ,ಜೇಡಿಎಸ್ಸಿನ ಕರಾಳ ಮುಖಗಳ ,ನರಿಬುದ್ಧಿಗಳ ಬಗ್ಗೆ ಚಕಾರವೆತ್ತುವುದಿಲ್ಲ.ದಿನ ಹೋದಂತೆ ಅನಂತಮೂರ್ತಿಗಳು ವಿಚಿತ್ರವಾಗುತ್ತಿದ್ದಾರೆ.ಅನಾಥರಾಗುತ್ತಿದ್ದಾರೆಯೇ ಎಂಬ ಸಂಶಯವೂ ಬರುತ್ತಿದೆ.ತನ್ನ ಹಿಂದೆ ಯಾರೂ ಇಲ್ಲದಾಗ ಕಂಡಕಂಡವರ ಬೆನ್ನು ಹತ್ತುವ ಮಟ್ಟಕ್ಕಿಳಿದರಲ್ಲಾ ಎಂದು ಬೇಸರವಾಗುತ್ತಿದೆ.ಎಷ್ಟಾದರೂ ಸಾಹಿತಿಗಳಲ್ಲವೇ?ಇಂಗ್ಲಿಷಿನಿಂದ ಒಂದಿಷ್ಟನ್ನು ತಂದವರಲ್ಲವೇ?ಹೊಡಕೊಂಡಿದ್ದೋ ಪಡಕೊಡಿದ್ದೋ ಜ್ಞಾನಪೀಠವೇ ತಾನೇ?ಮೊದಲೆಲ್ಲಾ ಏನಾದರೂ ಒಂದನ್ನು ಬರೆಯುತ್ತಿದ್ದರು ಪಾಪ.

Tuesday, July 19, 2011

ಸರಕಾರಿ ತಾಲಿಬಾನಿಕರಣವೆಂದರೆ ಹೀಗಿರುತ್ತದೆ


ದೆಹಲಿ ದರ್ಬಾರಿನ ವಿಶೇಷತೆಯೆಂದರೆ ಅದು. ಏಕೆಂದರೆ ದೆಹಲಿಯ ಗಾದಿಯಲ್ಲಿ ಕೂತವರಿಗೆಲ್ಲರಿಗೂ ಕೆಲವು ವಿಷಯದಲ್ಲಿ ಸಾಮ್ಯತೆ ಕಂಡುಬರುತ್ತದೆ. ನಮ್ಮ ಕಣ್ಣಳತೆಗೆ ನಿಲುಕುವ ಇತಿಹಾಸವನ್ನೇ ನೋಡಿದರೂ ಅದರಲ್ಲಿ ಅತಿಶಯೋಕ್ತಿಗಳಿಲ್ಲ. ಅದಕ್ಕೇ ಏನೋ ತುಘಲಕನಂಥ ಹುಚ್ಚು ದೊರೆ ದೇವಗಿರಿಗೆ ಬಂದರೂ ಮತ್ತೆ ಹಳೇ ದಿಲ್ಲಿಯೇ ಆತನಿಗೆ ಕಾಡುತ್ತಿತ್ತು. ಔರಂಗಜೇಬನ ಅಪ್ಪ ಮಗನನ್ನು ಬಿಜಾಪುರ-ಗೋಲ್ಕೊಂಡಾಕ್ಕೆ ಕಳುಹಿಸಿದಾಗಲೂ ಮಗ ದಿಲ್ಲಿಗಾಗೇ ಹವಣಿಸಿದ್ದ. ಸೋದರಹತ್ಯೆಯನ್ನೂ ಮಾಡಿದ್ದ. ಮತ್ತೆ ಅಕ್ಬರ, ಕೊನೆಯ ಮೊಗಲ, ಮುದುಕ ಬಹಾದೂರ್ ಶಾ ಜಾಫರ ಎಲ್ಲರೂ ದಿಲ್ಲಿಗಾಗಿ ಹಾತೊರೆದವರೇ. ದಿಲ್ಲಿಯನ್ನು ಬಿಟ್ಟುಕೊಡದವರೇ. ಮಲ್ಲಿಕಾಫರನಿಂದ ಹಿಡಿದು ಅಂಟೋನಿಯೇ ಮೈನೋ ಸೋನಿಯಾವರೆಗೆ ದಿಲ್ಲಿಯ ಕಥೆ ರೋಚಕವಾಗಿ, ಭೀಕರವಾಗಿ, ಭೀಭತ್ಸವಾಗಿ ಮುಂದುವರಿಯುತ್ತದೆ. ದಿಲ್ಲಿಯ ಪಾಡು ಪರಿಪಾಟಲುಗಳನ್ನು ಬಿಟ್ಟು ಭಾರತವನ್ನು ವಿಮರ್ಶಿಸುವಂತೆಯೇ ಇಲ್ಲವೆನ್ನುವಷ್ಟರ ಮಟ್ಟಿಗೆ ರಾಜಧಾನಿ ಭಾರತದ ಪಾಲಿಗೆ ಅವಿನಾಭಾವಿ.
ಇಲ್ಲಿದಿದ್ದರೇನು? ಹಳೆ ದಿಲ್ಲಿಯಲ್ಲಿ ಕೂತೇ ಸಮಸ್ತ ಹಿಂದುಸ್ಥಾನವನ್ನು ಗುಲಾಮಿಗಳು, ತುಘಲಕರು, ಲೋಧಿಗಳು, ಮೊಗಲರು ಆಳಿದ್ದರು. ಉತ್ತರದ ಆ ತುದಿಯಲ್ಲಿ ಕೂತು ದಕ್ಷಿಣದ ತುತ್ತತುದಿಯಿಂದ ಜಜಿಯಾ ಸಂಗ್ರಹಿಸುತ್ತಾ,ಜನಾನಾವನ್ನು ತುಂಬಿಸಿಕೊಳ್ಳುತ್ತಾ ದೇಶವನ್ನು ಕಪಿಮುಷ್ಟಿಯಲ್ಲಿಟ್ಟುಕೊಂಡ ಮುಸಲ್ಮಾನ ದೊರೆಗಳು ತಮ್ಮ ಕ್ರೌರ್ಯದಿಂದಲೂ ಹುಚ್ಚುತನದಿಂದಲೂ ಭಯೋತ್ಪಾದನೆಯಿಂದಲೂ ಮಣ್ಣಿನ ಮಕ್ಕಳಾದ ಹಿಂದುಗಳನ್ನು ಅಕ್ಷರಶಃ ಕಾಡಿದರು. ಹೆದರಿಸಿದರು. ಅನಂತರ ಪಾಶ್ಚಾತ್ಯರು ಬಂದರು. ಅದರಲ್ಲೂ ಸಾವಿರಾರು ಮೈಲು ದೂರದ ಇಂಗ್ಲಿಷರು ಪುನಃ ಅದೇ ಹಳೆಯ ಮುಸ್ಲಿಂ ಪರಂಪರೆಯನ್ನು ಮುಂದುವರೆಸಿದರು. ಒಡೆದು ಆಳಿದರು. ಒಬ್ಬರಿಗೆ ಬೆಣ್ಣೆ ಕೊಟ್ಟರು. ಮತ್ತೊಬ್ಬರಿಗೆ ಸುಣ್ಣ ಕೊಟ್ಟರು. ಬೆಣ್ಣೆಯ ರುಚಿ ಆಗಲೇ ಮುಸಲ್ಮಾನರಿಗೆ ಹತ್ತಿತು. ಎಲ್ಲವೂ ಅವರ ಆಕಾಂಕ್ಷೆಗಳಿಗೆ ಅನುಗುಣವಾಗಿಯೇ ನಡೆದವು. ಎರಡೆರಡು ಹೊಸ ದೇಶಗಳು, ಕೋಟಿಕೋಟಿ ರೂಪಾಯಿಗಳು ಎಲ್ಲಾ ಸಿಕ್ಕವು. ಎಲ್ಲವನ್ನೂ ಹಿಂದೂವಿನ ಕೈಯಿಂದ ಕಿತ್ತೇ ಕೊಡಲಾಯಿತು. ಮದ್ಯಕಾಲದ ಮುಸಲ್ಮಾನ ಅರಸರು ತಮ್ಮವರಿಗೆ ಒದಗಿಸಿದ್ದನ್ನೆಲ್ಲಾ ಬ್ರಿಟಿಷರೂ ಒದಗಿಸಿದರು. ಕೊನೆಗೆ ಸ್ವಾತಂತ್ರ್ಯ ಬರುವ ಹೊತ್ತಿಗೆ ಹಿಂದು ಮಾತ್ರ ಪಂಜಾಬವೆಲ್ಲಿ? ಬಂಗಾಳವೆಲ್ಲಿ ? ಸಿಂಧ್ ಎಲ್ಲಿ ಎನ್ನುತ್ತಾ ಗೋಳಾಡುತ್ತಿದ್ದ.
ಅನಂತರ ದಿಲ್ಲಿಯ ಗಾದಿಗೆ ಕಾಂಗ್ರೆಸ್ ಬಂತು. ಅದು ಮಾಡಿದ್ದೂ ಅದೇ ಕೆಲಸ. ಮೊಗಲರಂತೆ, ಬ್ರಿಟಿಷರಂತೆ. ಅಂದು ಜಜಿಯಾ ಇದ್ದಂತೆ ಇಂದು ಹಿಂದೂ ದೇವರ ಹುಂಡಿಗೆ ಕೈಹಾಕಿ ಮುಸಲ್ಮಾನರ ತೀರ್ಥಯಾತ್ರೆ ಆಯೋಜಿಸಿತು. ನೆಹರೂನಂಥ ಪ್ರಧಾನಿಯೇ ಬಂದು ಕೂತರು. ಸೈನ್ಯದಲ್ಲಿ ಮುಸ್ಲಿಂ ಪ್ರಾತಿನಿಧ್ಯ ಹೆಚ್ಚಬೇಕೆಂದು ೧೯೫೩ರಲ್ಲಿ ನೆಹರೂ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸುತ್ತೋಲೆಯನ್ನೂ ಕಳುಹಿಸಿದ್ದರು. ಇದು ವೈಸರಾಯ್ ಆಳ್ವಿಕೆಗಿಂತ ಹೇಗೆ ಭಿನ್ನ? ಹೇಗೆ ಮಾಂಟೆಗ್ಯೂ-ಚೆಲ್ಮ್ಸ್ಸಫರ್ಡ್ ಅಲ್ಪಸಂಖ್ಯಾತರನ್ನು ಎತ್ತಿಹಿಡಿದು ಹಿಂದುವನ್ನು ತುಳಿದನೋ ಹಾಗೆಯೇ ಸಾಚಾರ್ ವರದಿಗಳು ಬಂದವು. ಅನಂತರ ಫೀರ್‌ಪುರ ವರದಿ, ಶರೀಫ್ ವರದಿ, ಕಮಟ್‌ಯಾರ್ ಜಂಗ್ ವರದಿ,ಫಜಲ್ ಹಕ್ ವರದಿಗಳು ಬಂದವು. ಎಲ್ಲಾ ಮುಸಲ್ಮಾನರನ್ನು ತೊಟ್ಟಿಲಲ್ಲಿ ಮಲಗಿಸಿ ತೂಗುವ ವರದಿಗಳೇ. ಲಾಲನೆ, ಪಾಲನೆಯ ಸವಿಮಾತುಗಳೇ. ಹೇಗೆ ೧೮೭೧ರಲ್ಲಿ ಹಂಟರನೆಂಬ ಬ್ರಿಟಿಷ “ಮುಸಲ್ಮಾನರ ಹಿಂದುಳಿದಿರುವಿಕೆಗೆ ಹಿಂದುಗಳೇ ಕಾರಣ"ಎಂದು ವರದಿ ಬರೆದನೋ ಹಾಗೆಯೇ ರಾಜೇಂದ್ರ ಸಾಚಾರ್ ಎಂಬ ಭಾರತೀಯ ಕೂಡ “ಭಾರತದಲ್ಲಿ ಶರಿಯತ್ ಜಾರಿಯಾಗಲಿ" ಎಂದು ವರದಿ ಬರೆದು ಒಪ್ಪಿಗೆಗಾಗಿ ಕಾಯುತ್ತಾರೆ. ರಂಗನಾಥ ಮಿಶ್ರಾ ಎಂಬವರೂ ಮುಸ್ಲಿಂ ಮೀಸಲಿಗೆ ಒಪ್ಪಿಗೆ ಕಾಯುತ್ತಾರೆ. ಇದು ಹಿಂದೂಗಳ ಅವಸ್ಥೆ. ಹಾಗಾದರೆ ಮಧ್ಯಯುಗಕ್ಕೂ ಜಾಗತೀಕರಣದ ಈ ಕಾಲಕ್ಕೂ ಹಿಂದುಗಳ ದಮನ ತಂತ್ರಗಳಲ್ಲಿ ವ್ಯತ್ಯಾಸವಾಗಿದೆಯೇ? ದಿಲ್ಲಿಯವರದ್ದು ಯಾವಾಗಲೂ ವಕ್ರದೃಷ್ಟಿಯೇ?
ಹೀಗೆ ಯೋಚಿಸುತ್ತಿರುವಾಗಲೇ ಅದೇ ದಿಲ್ಲಿಯಿಂದ ಮತ್ತೊಂದು ತಂತ್ರ ಸಿದ್ಧವಾಗುತ್ತಿದೆ. ಮತ್ತದೇ ಹಿಂದುಗಳನ್ನು ಮಣಿಸಲು ತಂತ್ರ. ಇದುವರೆಗೆ ಹಿಂಬಾಗಿಲು. ಇದೀಗ ಮುಂಬಾಗಿಲಲ್ಲೇ ಆಕ್ರಮಣ. ಅದು Pಜಿqಛ್ಞಿಠಿಜಿಟ್ಞ ಟ್ಛ ಟಞಞ್ಠ್ಞZ Zb ಠಿZಜಛಿಠಿಛಿb qಜಿಟ್ಝಛ್ಞ್ಚಿಛಿ (ಅಛಿoo ಠಿಟ oಠಿಜ್ಚಿಛಿ Zb ಛಿmZZಠಿಜಿಟ್ಞ)ಚಿಜ್ಝ್ಝಿ೨೦೧೧. ಅಂದರೆ ಕೋಮುಗಲಭೆ ನಿಯಂತ್ರಣ ಕಾಯ್ದೆ.ಹೆಸರೇನೋ ಚೆನ್ನಾಗಿದೆ. ಆದರೆ ರ್‍ಯಾಪರ್‌ನೊಳಗೆ ಚಾಕಲೇಟಿಲ್ಲ. ಚಾಕಲೇಟ್ ರ್‍ಯಾಪರಿನೊಳಗೆ ಸಯನೈಡ್ ಸುತ್ತಿ ಕೊಟ್ಟಂಥ ಕಾಯ್ದೆ ಈ ಕೋಮುಗಲಭೆ ನಿಷೇಧ ಕಾಯ್ದೆ. ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಇದು ಮಂಡನೆಯಾಗಲಿದೆ. ಯುಪಿಎ ಈ ಕಾಯ್ದೆಯ ಮೂಲಕ ಚಳಿ ಕಾಯಿಸಿಕೊಳ್ಳುತ್ತದೆ. ಬ್ರಿಟಿಷ್ ಕಾಲದ ಪುನರಾವರ್ತನೆ, ನೆನಕೆ ಮಾಡುವ ಈ ಕಾನೂನು ಮೊಗಲ್ ಆಳ್ವಿಕೆಗಿಂತ ಭಿನ್ನವಾಗಿಲ್ಲ ಎಂಬುದು ಕಾಯ್ದೆಯ ವಿಶೇಷತೆ. ಬರೋಬ್ಬರಿ ೯ ಅಧ್ಯಾಯಗಳು, ೧೩೮ ವಿಧಿಗಳು ಎಲ್ಲವೂ ಹಿಂದೂವಿನತ್ತಲೇ ಬೊಟ್ಟು ಮಾಡುತ್ತದೆ. ಹಿಂದುವೊಬ್ಬ ಮುಸಲ್ಮಾನೊಡನೆ ತಗ್ಗಿ ಬಗ್ಗಿ ನಡೆಯಬೇಕು. ಬಗ್ಗಬೇಕು. ಗುದ್ದಿದರೆ ಗುದ್ದಿಸಿಕೊಳ್ಳಬೇಕು. ಸಾಧ್ಯವಾದರೆ ತೆವಳಬೇಕು. ಹೊರಳಾಡಬೇಕು ಎಂಬ ಚಿಂತನೆಯ ಈ ಕಾಯ್ದೆ ಜಾರಿಗೆ ಬಂದದ್ದೇ ಆದಲ್ಲಿ ಇನ್ನು ಹಿಂದೂ ದಮನದ ಪ್ರಶ್ನೆಯೇ ಉದ್ಭವಿಸದು. ಏಕೆಂದರೆ ಕಾಯ್ದೆ ಹಿಂದುವನ್ನು ನಿರ್ವೀರ್‍ಯವನ್ನಾಗಿ ಮಾಡಿಬಿಟ್ಟಿರುತ್ತದೆ. ಕೋಮುಗಲಭೆಗೆ ಹಿಂದುವೇ ಮೂಲ ಕಾರಣ ಎಂಬ ತಳಹದಿಯಲ್ಲಿ ರಚನೆಯಾಗಿರುವ ಈ ಕಾನೂನು ಅದರ ಮುನ್ಸೂಚನೆಯನ್ನು ಹೀಗೆ ಮಾಡುತ್ತದೆ.
ಹಿಂದು ತನ್ನ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸುವಂತಿಲ್ಲ. ಅಖಂಡ ಭಾರತ ಎನ್ನುವಂತಿಲ್ಲ. ಎಂದರೆ ಅದು ಕೋಮುಸಾಮರಸ್ಯಕ್ಕೆ ದಾರಿ ಎಂದು ಕಾನೂನು ಹೇಳುತ್ತದೆ. ಗೋಹತ್ಯೆ ನಿಷೇಧದ ಸಭೆ ನಡೆಯುವುದಿಲ್ಲ್ಲ. ನಡೆದರೆ ಅದು ಮುಸಲ್ಮಾನರ ಆಹಾರದ ಹಕ್ಕನ್ನು ಕಿತ್ತುಕೊಂಡಂತೆ ಎಂಬ ಆರೋಪ. ಅಯೋಧ್ಯೆ ವಿಷಯದಲ್ಲಿ ಮಾತಾಡುವಂತಿಲ್ಲ. ಆಡಿದರೆ ದೇಶದ ಸಾರ್ವಭೌಮತೆಗೂ ಮುಸಲ್ಮಾನರ ಧಾರ್ಮಿಕ ನಂಬಿಕೆಗೂ ಅವಹೇಳನ ಮಾಡಿದಂತೆ ಎನ್ನುವ ಕಾನೂನು ಹಿಂದುವಿಗೆ ಶಿಕ್ಷೆ ವಿಧಿಸುತ್ತದೆ. ಅಲ್ಲದೆ ಜಾಮೀನುರಹಿತ ವಾರಂಟು ಹೊರಡಿಸುತ್ತದೆ. ನೀವು ಬಸ್ಸಲ್ಲಿ ಪ್ರಯಾಣಿಸುತ್ತಿದ್ದೀರಿ ಎಂದಿಟ್ಟುಕೊಳ್ಳಿ. ಜಂಗುಳಿಯ ನಡುವೆ ಒಬ್ಬನ ಕಾಲನ್ನು ತುಳಿಯುತ್ತೀರಿ ಎಂದಿಟ್ಟುಕೊಳ್ಳಿ. ಆತ ಮೊಕದ್ದಮೆ ದಾಖಲಿಸಿದರೆ ನೀವು ಅಪರಾಧಿಗಳಾಗುತ್ತೀರಿ. ಆದರೆ ನೀವು ಹಿಂದುವಾಗಿರಬೇಕು. ಆತ ಮುಸಲ್ಮಾನನಾಗಿರಬೇಕು. ನಿಮ್ಮ ಮನೆಯ ಗೋವು ಕಳವಾಯಿತು. ಕಳ್ಳನನ್ನು ಹಿಡಿದಿರುತ್ತೀರಿ. ಗದರಿಸಿಯೂ ಇರುತ್ತೀರಿ ಎಂದಿಟ್ಟುಕೊಳ್ಳಿ, ನಿಮಗೆ ಜಾಮೀನುರಹಿತ ವಾರಂಟು ಬೀಳಲು ಅಷ್ಟೇ ಸಾಕು. ಮನೆ ಮಗಳನ್ನು ಪೋಲಿ ಮುಸಲ್ಮಾನನೊಬ್ಬ ಚುಡಾಯಿಸಿರುತ್ತಾನೆ. ಆದರೆ ಏನೂ ಮಾಡುವಂತಿಲ್ಲ. ಏಕೆಂದರೆ ಕೇಂದ್ರ ಸರಕಾರದ ಕಾಯ್ದೆಯ ಬಲ ಆತನಿಗಿದೆ. ಊರ ದೇವಸ್ಥಾನದ ಬ್ರಹ್ಮಕಲಶವೋ ಮರವಣಿಗೆಯೋ ಜಾತ್ರೆಯೋ ರಥೋತ್ಸವವೋ ಭಂಡಾರ ಹೊರಡುವುದೋ ಆದರೆ ಅದು ಮುಸಲ್ಮಾನ ವಸತಿ ಪ್ರದೇಶದಲ್ಲಿ, ಮಸೀದಿ, ಮದರಸಗಳ ಪ್ರದೇಶದಲ್ಲಿ ಹೊರಡುವುದನ್ನೂ ಮುಸಲ್ಮಾನರು ಇನ್ನು ಕೇಸು ದಾಖಲಿಸಿ ಶಾಂತಿ ಭಂಗ ಎನ್ನಬಹುದು. ಏಕೆಂದರೆ ಕಾಯ್ದೆಯ ಬಲ. ಹೆದ್ದಾರಿಯಲ್ಲಿ ಗೋ ಕಳ್ಳಸಾಗಾಣಿಕೆಯಾಗುತ್ತಿದ್ದರೆ ತಡೆಯುವಂತಿಲ್ಲ. ಏಕೆಂದರೆ ಗೋಹತ್ಯಾ ನಿಷೇಧ ಕಾನೂನಿಲ್ಲ. ಗೋಪ್ರೇಮಿಗಳು ತಡೆದರೂ ಹೆಚ್ಚು ವಿಚಾರಿಸುವಂತಿಲ್ಲ. ಕಳ್ಳರೂ ಕೇಸು ದಾಖಲಸಿ ವ್ಯಾಪಾರಕ್ಕೆ ಅಡ್ಡಿ ಎಂದು ಮೊಕದ್ದಮೆ ಹೂಡಬಹುದು. ದುಷ್ಟ ಮನಸಿನ ವ್ಯಕ್ತಿಗಳು ವಿನಾಕಾರಣ ಕೆಣಕಿ ಆತನೇ ಕೇಸು ಹೂಡಬಹುದು. ಏಕೆಂದರೆ ಕಾಯಿದೆ ಆತನ ಪರ. ಒಟ್ಟಾರೆ ಹಿಂದುಗಳು ಮುಸಲ್ಮಾನರ ಮುಂದೆ ಮೈಬಗ್ಗಿಸಿ,ತಲೆತಗ್ಗಿಸಿ ನಡೆಯಬೇಕು. ಹಾಗೇ ಬದುಕಬೇಕು. ಮಾತಿನ ಧ್ವನಿ ಮೆದುವಾಗಿರಬೇಕು.
ಎಲ್ಲವೂ ಅಂದುಕೊಂಡಂತೆ ನಡೆದರೆ ಇವೆಲ್ಲಾ ಮುಂಬರುವ ಚಳಿಗಾಲದ ಅಧಿವೇಶನದ ನಂತರ ಜಾರಿಗೆ ಬರಲಿದೆ. ಎಂಥಾ ತಂತ್ರ ಹೆಣೆದಿದೆ ನೋಡಿ ಯುಪಿಎ!
ಏಳೆಂಟು ವರ್ಷಗಳ ಹಿಂದಿನ ಮಾತು. ಎನ್‌ಡಿಎ ಅಧಿಕಾರ ಕಳೆದುಕೊಂಡಿತ್ತು. ಯುಪಿಎ ಬಂದಿತ್ತು. ಅದುವರೆಗೆ ಅಬ್ಬರಿಸುತ್ತಿದ್ದವರೆಲ್ಲಾ ದಿಲ್ಲಿಯಲ್ಲಿ ಕೂತಿದ್ದರು. ಹಿಂದು ಎಂದರೆ ಅಕಟಕಟಾ ಎನ್ನುವವರು ಬಂದಾಗಲೇ ಜನ ಸೋನಿಯಾ ಗಾಂಧಿ ಹಿಂದು ಸಂಘಟನೆಗಳನ್ನು ಹಣಿಯದಿರಲಾರರು ಎಂದು ಆಡಿಕೊಂಡಿದ್ದರು. ಮುಖ್ಯವಾಗಿ ಸಂಘ ಪರಿವಾರದ ನಿಷೇಧಕ್ಕೆ ತಕ್ಕ ಗಳಿಗೆ, ತಕ್ಕ ಸಂದರ್ಭ ಕಾಯುತ್ತಿದ್ದಾರೆ ಎಂದು ಎಲ್ಲೆಡೆ ಮಾತು ಕೇಳಿಬರುತ್ತಿತ್ತು. ಆದರೆ ವರ್ಷಗಳು ಉರುಳುತ್ತಿದ್ದಂತೆ ನಿಷೇಧದ ಮಾತು ಸೋನಿಯಾಳಿಂದ ಬರಲೇ ಇಲ್ಲ. ಯಾವ ಕಾಂಗ್ರೆಸಿಗನ, ಕಮ್ಯೂನಿಸ್ಟನ, ಮುಸ್ಲಿಮನ, ಬುದ್ಧಿಜೀವಿಯ ಬಾಯಿಂದ ಕೂಡ ಆ ಮಾತು ಬರಲೇ ಇಲ್ಲ. ದಿಗ್ವಿಜಯ ಸಿಂಗನಂಥವನೂ ಕೂಡ ಕೇಸರಿ ಭಯೋತ್ಪಾದನೆ, ಹಿಂದೂ ಉಗ್ರವಾದ ಎಂದು ಬಾಯಿ ಬಡಕೊಂಡನೇ ಹೊರತು ಸಂಘ ಪರಿವಾರ ನಿಷೇಧವಾಗಬೇಕೆಂದು ಹೇಳಿಕೆ ನೀಡಿರಲಿಲ್ಲ. ದುಷ್ಟಕೂಟಗಳು ಒಗ್ಗೂಡಿದರೂ ಅದೊಂದು ಮಾತು ಯಾಕೆ ಕೇಳಿಬರಲಿಲ್ಲ ಎಂದು ಆಶ್ಚರ್ಯಪಟ್ಟವರು ತುಂಬಾ ಜನರಿದ್ದರು.ಹಾಗೆ ತಾನೇ ಹೇಳಿಯಾನು? ಕೊಲೆ ಮಾಡಿ ಪಾಪಿ ಎನಿಸಿಕೊಳ್ಳುವುದಕ್ಕಿಂತ ಸಂತಾನಹರಣ ಮಾಡಿಬಿಡುವುದೇ ಉತ್ತಮ ಎಂಬ ತಂತ್ರ ಹೊಳೆದಿರುವಾಗ ನಿಷೇಧದ ಮಾತು ಬರಲಾದರೂ ಹೇಗೆ ಸಾಧ್ಯ? ಏಕೆಂದರೆ ಕಾಯ್ದೆಯ ಎಲ್ಲಾ ಅಂಶಗಳು ಹಿಂದೂ ಸಂಘಟನೆಗಳನ್ನು ಹಣಿಯಲೆಂದೇ ಸೃಷ್ಟಿಯಾಗಿವೆ. ಅದರ ಎಲ್ಲಾ ಹಗ್ಗಗಳು ಹಿಂದೂ ಸಂಘಟನೆಯ ಕುತ್ತಿಗೆಗೆ ಸರಿಯಾಗಿಯೇ ನಿರ್ಮಾಣಗೊಂಡಿವೆ. ಏಕೆಂದರೆ ಸಂಘ ಪರಿವಾರದ ಜಾಗರಣ ಕಾರ್ಯಗಳೆಲ್ಲವೂ ತಳಮಟ್ಟದಲ್ಲಿ ಹಿಂದುವನ್ನು ಎಚ್ಚರಿಸುವ ಕೆಲಸ ಮಾಡುತ್ತವೆ ಎಂಬುದನ್ನು ಸರಕಾರ ತಿಳಿದುಕೊಂಡಿದೆ. ಅದಕ್ಕಾಗಿ ತಳಮಟ್ಟದಲ್ಲೇ ಹಿಂದುವನ್ನು ಕೆಡವಲು ತಂತ್ರ ಹೂಡಿದ್ದಾರೆ. ಈ ಕಾಯ್ದೆಯೇನಾದರೂ ಬಂದರೆ ಇನ್ನು ಮುಂದೆ ಸಂಘ ಪರಿವಾರ ಮಾಡುವ ಬೌದ್ಧಿಕ್‌ಗಳ ಮೇಲೂ ಕಾಯ್ದೆ ಕಣ್ಣಿಡಲಿದೆ. ‘ಹಿಂದೂ ರಾಷ್ಟ್ರ’, ‘ಅಖಂಡ ಭಾರತ’ ಎಂದೇನಾದರೂ ಬೌದ್ಧಿಕ್ ಮಾಡಿದರೋ ಬೌದ್ಧಿಕ್ ಮಾಡಿದಾತನ ಮೇಲೆ ವಾತಾವರಣವನ್ನು ಕಲುಷಿತಗೊಳಿಸುವ ಆಪಾದನೆಯ ಮೇಲೆ ಬಂಧಿಸಲಾಗುತ್ತದೆ. ಯುಗಾದಿ, ವಿಜಯದಶಮಿ , ಸಂಕ್ರಾಂತಿ ಹಬ್ಬಗಳನ್ನು ಆಚರಿಸುವ ಸಂಘ ಪರಿವಾರದಲ್ಲಿ ‘ರಾಷ್ಟ್ರಕ್ಕಾಗಿ ಸಂಕಲ್ಪಗೈಯೋಣ’ ಎಂದೇನಾದರೂ ಹೇಳಿದರೆ, ಮುಸಲ್ಮಾನನೊಬ್ಬ ಕೇಸು ದಾಖಲಿಸಿದರೆ, ಕಾಯ್ದೆ ಆ “ಸಂಕಲ್ಪವೇನು?" ಎಂದು ವಿವರಣೆ ಕೇಳಲಿದೆ. ಸಮಾಜೋತ್ಸವಗಳಂತೂ ಕನಸಿನ ಮಾತಾಗಲಿವೆ. ಸಂಘ, ನಡೆಸುವ ಪಥಸಂಚಲನ ಕೋಮುಭಾವನೆ ಬಿತ್ತುವ, ಸಮಾಜವನ್ನು ಕೆರಳಿಸುವ ಸಂಗತಿಗಳಾಗಲಿವೆ. ವಿಚಿತ್ರ ಎಂದರೆ ಅಲ್ಪಸಂಖ್ಯಾತರೆಂಬ ಮುಸಲ್ಮಾನರಿಗೆ ಇದು ಅನ್ವಯಿಸುವುದಿಲ್ಲ. ಅಲ್ಪಸಂಖ್ಯಾತರೇ ಬಹುಸಂಖ್ಯಾತರಾಗಿರುವ ಊರುಗಳಲ್ಲೂ ಇದು ಮುಸಲ್ಮಾನರಿಗೆ ಅನ್ವಯಿಸುವುದಿಲ್ಲ. ಹಿಂದುಗಳಾದವರು ಇನ್ನು ‘ಭಯೋತ್ಪಾದನೆ ಊರೂರಲ್ಲೂ ಬೆಳೆಯುತ್ತಿದೆ’ ಎಂದು ಬರೆಯಬಾರದು. ‘ಜಿಹಾದ್ ಮಾನಸಿಕತೆ’ ಎಂದು ತಪ್ಪಿಯೂ ಬಳಸಲಾರರು. ‘ಮಕ್ಕಳನ್ನು ಅಡವಿಟ್ಟವನು ಅರಸನೆ?’ ಎಂದು ಕೇಳಬಾರದು, ‘ಲವ್ ಜಿಹಾದ್’ ಎನ್ನಲೇಬಾರದು ಇನ್ನೇನಿದ್ದರೂ ‘ಲವ್’ ಮಾತ್ರ. ಹಿಂದೂ ಹುಡುಗಿ ಗರ್ಭಧರಿಸಿ, ಕೆರೆಗೆ ಬಿದ್ದು ಸಾಯಲಿ ಅದು ಮತಾಂಧ ಮಾನಸಿಕತೆ ಎನ್ನಲಂತೂ ಬಾರದು. ಕಾಶೀ ವಿಶ್ವನಾಥ, ದತ್ತಪೀಠಗಳೆಲ್ಲಾ ಇನ್ನು ಶೋಕಿಯ ಸೆಕ್ಯುಲರಿಸಮ್ಮಿಗೆ ಸಂಕೇತಗಳು. ಡೊಗ್ಗು ಸಲಾಮು, ಹಲ್ಲುಗಿಂಜಿ ಅಣ್ಣಾ ತಮ್ಮ ಸಂಬೋಧನೆಗಳ ನೆಂಟಸ್ತನ, ಸ್ವಾಭಿಮಾನದ ಕ್ಷಯ, ಭಂಡತನದ ಬದುಕಿನ ಆರಂಭ. ಒಂದು ವೇಳೆ ಹಿಂದೂ ಎನ್ನುವುದರ ವ್ಯಾಖ್ಯಾನ ಮಾಡಲಾರಂಭಿಸಬೇಕು ಎಂದರೆ ಜೈಲಿಗೆ ಹೋಗಲು ಸಿದ್ಧವಾಗಿರಬೇಕು. ಇಷ್ಟೆಲ್ಲಾ ತಂತ್ರ ಹೆಣೆದಿರುವಾಗ ಯಾರಾದರೂ ನಿಷೇಧದ ಮಾತು ಆಡುತ್ತಾರೆಯೇ?
ಅಷ್ಟಕ್ಕೂ ದೇಶದ ಎಲ್ಲಾ ಗಲಭೆಗಳಿಗೆ ಹಿಂದುವೇ ಕಾರಣ ಎಂಬುದೇನಾದರೂ ಇದ್ದಿದ್ದರೆ ಈ ಕಾಯ್ದೆಗೊಂದು ಅರ್ಥ ವಿರುತ್ತಿತ್ತು. ಇಷ್ಟರವರೆಗೂ ಹಿಂದುವಿನಿಂದ ಒಂದೇ ಒಂದು ಕೋಮುಗಲಭೆ ಉಂಟಾದ ಉದಾಹರಣೆ ದೇಶದ ಚರಿತ್ರೆಯಲ್ಲೇ ಇಲ್ಲ. ಹಿಂದು ಗೋಹತ್ಯೆ ಬೇಡ ಎಂದಾಗ, ಮತಾಂತರ ನಡೆಸದಿರಿ ಎಂದಾಗ ಕೆಣಕಿದವರು ಯಾರು? ಹಿಂದು ದೇವರ ಉತ್ಸವಕ್ಕೆ, ಸಮಾಜೋತ್ಸವಗಳಿಗೆ ಕಲ್ಲು ಹೊಡೆದವರು ಯಾರು? ಕರ್ನಾಟಕದ ಉದಾಹರಣೆಯನ್ನೇ ತೆಗೆದುಕೊಂಡರೆ ಅಲ್ಲಿ ಕಾಣುವುದೇನು? ಜನಾನುರಾಗಿ ಭಟ್ಕಳದ ಡಾ. ಚಿತ್ತರಂಜನ್‌ರನ್ನು ವಿನಾಕಾರಣ ಕೊಂದು ಗಲಭೆ ಎಬ್ಬಿಸಿದ್ದು, ೧೯೮೩ರಲ್ಲಿ ಬೆಳ್ತಂಗಡಿಯಲ್ಲಿ ಆನಂದ ಮತ್ತು ನೋಣಯ್ಯ ಎಂಬ ಇಬ್ಬರನ್ನು ಮತಾಂತರಿಸಿದಾಗ ಪ್ರಶ್ನೆ ಮಾಡಿದ ಹಿಂದುಗಳಿಗೆ ಹೊಡೆದು ಗಲಭೆ ಎಬ್ಬಿಸಿದ್ದು, ೨೦೦೯-೧೦ರಲ್ಲಿ ಕ್ಯಾತಮಾರನಹಳ್ಳಿಯ ಹಿಂದು ಮನೆಗಳಿಗೆ ಕಾರಣವಿಲ್ಲದೇ ನುಗ್ಗಿ ಹೊಡೆದಿದ್ದು, ೨೦೦೨ರಲ್ಲಿ ಕೊಡಗಿನ ಹರಿಶ್ಚಂದ್ರ ದೇವಾಲಯವನ್ನು ಒಡೆದು ಗಲಭೆ ಎಬ್ಬಿಸಿದ್ದು, ೨೦೦೮ರಲ್ಲಿ ಗೋಕಳ್ಳರು ಹಿಂದೂ ಹುಡುಗರನ್ನು ಹೊಡೆದು ಮೂರು ವಾಹನಗಳನ್ನು ಜಖಂಗೊಳಿಸುತ್ತಾ ಸಾಗಿದ್ದು, ೧೯೯೫ರಲ್ಲಿ ದ.ಕನ್ನಡದ ಖ್ಯಾತ ದೇಗುಲ ಪೊಳಲಿಗೆ ‘ಪಟ್ಟೆಸೀರೆ’ ಮೆರವಣಿಗೆ ಸಂದರ್ಭ ದಾಳಿ ಮಾಡಿದ್ದು, ಕಲ್ಲಡ್ಕದಲ್ಲಿ ವಿನಾಕಾರಣ ಹಿಂದೂ ಹಬ್ಬಗಳ ಮೇಲೆ ನಿರಂತರ ದಾಳಿಯಾಗಿದ್ದು, ಡೆನ್ಮಾರ್ಕ್ ಪತ್ರಿಕೆಯಲ್ಲಿ ಬಂದ ಒಂದು ಚಿತ್ರಕ್ಕೆ ಕರ್ನಾಟಕದಲ್ಲಿ ಬೆಂಕಿ ಎದ್ದಿದ್ದು, ಸದ್ದಾಂನ ಸಾವಿಗೆ ಬಿ.ಎಂ. ಟಿ.ಸಿ. ಬಸ್ಸುಗಳು ಬೆಂಕಿಗಾಹುತಿಯಾಗಿದ್ದು, ೨೦೧೦ರಲ್ಲಿ ಶಿವಮೊಗ್ಗದ ಸಂಘ ಕಾರ್ಯಾಲಯಕ್ಕೆ ದಾಳಿ ಮಾಡಿ ಗಲಭೆ ಎಬ್ಬಿಸಿದ್ದು - ಇವರೆಲ್ಲಾ ಯಾರು? ಇದನ್ನೆಲ್ಲಾ ಕೇವಲ ಕೋಮು ಗಲಭೆ ಎನ್ನಬೇಕೋ ಅಥವಾ ಭಯೋತ್ಪಾದನಾ ಕೃತ್ಯವೆನ್ನಬೇಕೋ? ಇಂಥವರನ್ನು ಬೆಂಬಲಿಸುವ ಕಾನೂನು ತಾಲೀಬಾನಿಕರಣಕ್ಕೆ ಆಸ್ಪದ ಕೊಡುತ್ತಿಲ್ಲವೇ? ಅದನ್ನು ಸರಕಾರೀ ತಾಲೀಬಾನೀಕರಣ ಎಂದೇ ಹೇಳಬೇಕಲ್ಲದೆ ಬೇರೆ ಪದಗಳು ಸಾಲವು. ಪೋಟಾ ಕಾಯ್ದೆ ಕಿತ್ತು ಹಾಕಿದವರು ಈಗ ಜಾರಿಗೊಳಿಸಲು ಹೊರಟಿರುವುದು ಇಂಥ ಕಾಯ್ದೆ. ಇದನ್ನು ಷಂಡತನವೆನ್ನಬೇಕೋ ಭಂಡತನವೆನ್ನಬೇಕೋ ಗೊಂದಲವಾಗುತ್ತದೆ.
ದಿಲ್ಲಿಯರಸರನ್ನು ಏನಾದರೂ ಒಂದು ಹೆಸರಿನಲ್ಲಿ ಕರೆಯಬೇಕಲ್ಲ?