Wednesday, June 8, 2011

ಸಂನ್ಯಾಸವೇ ಭಾರತೀಯತ್ವದ ತಾಯಿ ಬೇರು

ಭಾರತೀಯ ಪರಂಪರೆಯ ಹಿರಿಮೆ ಮತ್ತು ವೈeನಿಕತೆಗೆ ಎಷ್ಟೊಂದು ಸಾಕ್ಷಿಗಳೆಂದರೆ ಅವು ಕಾಲದ ನಡೆಯಲ್ಲಿ ವಿರಮಿಸಲೇ ಇಲ್ಲ.ಕಾಲ ವಿರಮಿಸದಿದ್ದರೆ ಜಗತ್ತಿನ ಇತರ ಸರಕುಗಳೂ ವಿಶ್ರಮಿಸಿಬಿಟ್ಟರೆ ಹೇಗೆ ಎನ್ನುವಂತೆ ಭಾರತೀಯತ್ವದ ಪರಂಪರೆ ಬೆಳೆಯುತ್ತದೆ.ಮೌಲ್ಯಗಳನ್ನು ,ಆದರ್ಶಗಳನ್ನು ಕೊಡುತ್ತಾ ಸಾಗುತ್ತದೆ.ಬದುಕಿನ ಪಯಣವೂ ಸಾಗುವುದು ಕೂಡಾ ಹೀಗೆಯೇ.ಮನುಷ್ಯ ಜೀವನವೆಂದರೆ ಭಾರತೀಯತ್ವದಲ್ಲಿ ಸುಮ್ಮನೆ ಬದುಕುವುದಲ್ಲ.ಒಂದು ಪರಂಪರೆಯನ್ನು ಬೆಳೆಸುವುದು.ಸಂಪ್ರದಾಯವೊಂದರಲ್ಲಿ ಜೋಡಿಕೊಳ್ಳುವುದು ಮತ್ತು ಅದರ ಆದರ್ಶದಲ್ಲಿ ತಾನೂ ಭಾಗಿಯಾಗುವುದು.ಅದಕ್ಕಾಗಿ ಬಂದುದೇ ನಾಲ್ಕು ಪುರುಷಾರ್ಥಗಳು.ಒಂದಕ್ಕೊಂದು ಪೂರಕವಾಗಿ.ಒಂದರ ಅನಂತರ ಇನ್ನೊಂದಾಗಿ. ಅದುಬದುಕುಸಾರ್ಥಕ್ಯದತ್ತ ಸಾಗುವ ನಡೆ.ಮತ್ತೊಂದು ನಾಲ್ಕು ಆಶ್ರಮಗಳು.ಬ್ರಹ್ಮಚರ್ಯ,ಗ್ರಹಸ್ಥ,ವಾನಪ್ರಸ್ಥ,ಸಂನ್ಯಾಸ-ಇವು ಕೂಡಾ ಬದುಕನ್ನು ಮೌಲ್ಯಗಳ ಪರಂಪರೆಗೆ ಒಡ್ಡಿಕೊಂಡು ಖಾಸಗೀ ಜೀವನವನ್ನು ಸಾಮಾಜಿಕಗೊಳಿಸುವ ಒಂದು ವೈeನಿಕ ಸೂತ್ರ,ಬಂಧ.
ಸಂನ್ಯಾಸವೆಂದರೆ ಅದಕ್ಕೂ ಒಂದು ಕಾಲ,ಅದಕ್ಕೂ ಒಂದು ಯೋಗ್ಯತೆ,ಪಕ್ವತೆ.ಅದು ಅಂತಿಮ ಸ್ಥಿತಿ.ಅದಕ್ಕೆ ಆದರದ್ದೇ ಆದ ಕಟ್ಟುನಿಟ್ಟುಗಳು,ಕಟ್ಟಳೆಗಳು,ಕಟ್ಟುಪಾಡುಗಳು.ಎಲ್ಲೆಂದರಲ್ಲಿ,ಹೇಗೆಂದರೆ ಹೇಗೆ ಆದನ್ನು ಸ್ವೀಕರಿಸುವಂತಿಲ್ಲ.ಏಕೆಂದರೆ ಸಂನ್ಯಾಸ ಅಂತಿಮ ಆಶ್ರಮ.ಕಾಲದ ನಡೆಯಲ್ಲಿ ಅದರೊಟ್ಟಿಗೆ ಸಾಗುವ ಬದುಕಿನ ವಿನ್ಯಾಸ.ಬದುಕು ಸಾರ್ವಜನಿಕಗೊಳ್ಳುವ ಅವಧಿ.
ಸಂನ್ಯಾಸವೆಂದರೆ ಆದುವರೆಗಿನ ಎಲ್ಲವನ್ನೂ ತ್ಯಜಿಸುವುದು.ಮನೆ ಇಲ್ಲದಿರುವುದು.ಆಕಾಂಕ್ಷೆಗಳ ಹಂಗಿಲ್ಲದೆ,ತನ್ನವರೆಂಬ ಕಟ್ಟುಪಾಡುಗಳಿಲ್ಲದೆ,ಜಗವೇ ತನ್ನದೆಂಬಂತೆ ತಿರುಗುವುದು. ಹೇಳಬೇಕೆಂದರೆ ತಿರುಗಾಟವೇ ಸಂನ್ಯಾಸ.ಪಕ್ವವಾದವನು ಸ್ಥಾವರವಾದರೆ ಮೌಲ್ಯಗಳ ಪ್ರಚಾರ,ಹಂಚಿಕೆ ಹೇಗೆ ಸಾಧ್ಯ?ಜಂಗಮವೇ ಸಂನ್ಯಾಸಕ್ಕೆ ಹೇಳಿ ಮಾಡಿಸಿದ ವಿಧಾನ.ಎಲ್ಲಿಯೂ ನಿಲ್ಲದೆ,ಎಲ್ಲಿಗೂ ಅಂಟಿಕೊಳ್ಳದೆ ಅನಿಕೇತನವಷ್ಟೇ ಅಲ್ಲದೆ ಚೇತನವೂ ಆಗುವ ಪ್ರಭಾವಳಿ ಸಂನ್ಯಾಸಿಯದ್ದು.ಸಂನ್ಯಾಸದ್ದು.ಬೇಡಿ ತಿನ್ನುವ ಸಂನ್ಯಾಸಿ ಜಂಗಮನೇ ಆಗಬೇಕೆ ಹೊರತು ಸ್ಥಾವರವಾಗಿಬಿಡಬಾರದು.ಸಂನ್ಯಾಸದ ಮೂಲೋದ್ದೇಶಕ್ಕೆ ವ್ಯತಿರಿಕ್ತವಾಗಬಾರದು.
ಸಂನ್ಯಾಸ ಮತ್ತು ಸಂನ್ಯಾಸದ ಗುಂಪು ಎಂದು ಕರೆಯಲಾಗುವ ಮಠಗಳ ಬಗ್ಗೆ ಬೌದ್ಧರ ಕಾಲದಿಂದ ವಿವರಗಳು ಸಿಗುತ್ತವಾದರೂ ಅದಕ್ಕೂ ಹಿಂದೆ ಅಂದರೆ ಪುರಾಣ ಕಾಲದಲ್ಲೂ ಸಂನ್ಯಾಸದ ಕುರುಹುಗಳು ಕಾಣಸಿಗುತ್ತವೆ.ರಾಜಾಡಳಿತದಲ್ಲಿ ರಾಜಧರ್ಮವನ್ನು ಬೋಧಿಸುತ್ತಿದ್ದವರು,ಆಮಾತ್ಯರಾಗಿದ್ದವರು,ಸಾಮ್ರಾಜ್ಯಕ್ಕೆ ಮೂಲ ಸೆಲೆಯಾಗಿದ್ದವರು,ವರ ಕೊಟ್ಟವರು,ಶಾಪ ಕೊಟ್ಟವರೆಲ್ಲರೂ ಸಂನ್ಯಾಸಿಗಳೇ.ಅಂದಿಗೆ ಅವರೇ ಗುರುಗಳು,ಆಚಾರ್‍ಯರು,ಋಷಿಗಳು.ಅವರಿಲ್ಲದೆ ಸಮಾಜದಲ್ಲಿ ಯಾವುದೂ ನಡೆಯುತ್ತಿರಲ್ಲಿಲ್ಲ ಎಂಬಷ್ಟರಮಟ್ಟಿಗೆ ಅವರು ಪ್ರಭಾವಿಗಳೂ ಆಗಿದ್ದರು.ಪ್ರತಿ ಯಶಸ್ವೀ ಮನುಷ್ಯನ ಹಿಂದೆ ಸಂನ್ಯಾಸಿ ಇರುತಿದ್ದ.ಹಕ್ಕಬುಕ್ಕರ ಹಿಂದೊಬ್ಬ ವಿದ್ಯಾರಣ್ಯ,ಚಂದ್ರಗುಪ್ತ ಮೌರ್ಯರ ಹಿಂದೊಬ್ಬ ಚಾಣಕ್ಯ-ಹೀಗೆ ಪುರಾಣೇತಿಹಾಸಗಳು ಸಂಪೂರ್ಣ ಸಂನ್ಯಾಸಮಯವೇ.ಪರಿತ್ಯಕ್ತ,ಪರಿವ್ರಾಜಕ ಮನುಷ್ಯರಿಂದ ಬ್ರಹತ್ ಸಾಮ್ರಾಜ್ಯಗಳು,ಸಾಮ್ರಾಟರುಗಳು ನಿರ್ಮಾಣವಾಗುತ್ತಿದ್ದರು.ಇದೊಂದು ವಿಚಿತ್ರ ಮತ್ತು ಆಶ್ಚರ್ಯ.ಇದರೆಡೆಯಲ್ಲೇ ಸಮಾಜ ಎನ್ನುವ ಜನಸಮುದಾಯ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದವು.ಇದೇ ಸಂನ್ಯಾಸದ ಕೊಡುಗೆ.
ಪ್ರಸ್ತುತ ಸಂಚಿಕೆಯಲ್ಲಿ ಸಂಶೋಧನಾ ಲೇಖನವೊಂದನ್ನು ಪ್ರಕಟಿಸಿದ್ದೇವೆ.ಬೌದ್ಧರ ಕಾಲದ ಅನಂತರ ಸಂನ್ಯಾಸ ಬೆಳೆದುಬಂದ ಪರಿಯನ್ನು ಚರ್ಚಿಸಿದ್ದೇವೆ.ಬದ್ದನ ಅನಂತರದ ಅನುಯಾಯಿಗಳ ಪಂಗಡಗಳೇನೇ ಇರಲಿ ಭಾರತೀಯ ಸಂನ್ಯಾಸಕ್ಕೆ ಒಂದು ಚೌಕಟ್ಟನ್ನು ವಿಧಿಸಿದವರು ಬೌದ್ಧರೇ ಎಂಬುದರಲ್ಲಿ ಎರಡು ಮಾತಿಲ್ಲ.ಮುಂದಿನ ಎಲ್ಲಾ ಭಾರತೀಯ ಪಂಥಗಳು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬೌದ್ಧ ಸಂನ್ಯಾಸ ಚಿಂತನೆಯನ್ನು ತನ್ನದಾಗಿಸಿಕೊಂಡಿರಬಹುದು.ಹೀಗೆ ಭಾರತದ ಧಾರ್ಮಿಕ-ಸಾಂಸ್ಕೃತಿಕ-ಆಧ್ಯಾತ್ಮಿಕ ಲೋಕದ ತಾಯಿಬೇರಾಗಿ ಸಂನ್ಯಾಸವನ್ನು ಇಂದು ಗುರುತಿಸಬಹುದು.
ಕಾಲದ ನಡೆ ಬದಲಾವಣೆಯನ್ನು ಬಲವಂತದಿಂದಲಾದರೂ ಮಾಡುತ್ತದೆ ಎಂಬುವುದಕ್ಕೆ ಮಠಮಂದಿರಗಳು,ಸಂನ್ಯಾಸಿಗಳೂ ಮುಂದೆ ಸಾಕ್ಷಿಯಾದರು.ಒಂದು ಕಾಲದಲ್ಲಿ ಪರಿತ್ಯಕ್ತ ಜೀವನ ನಡೆಸಿದ ಸಂನ್ಯಾಸಿಗಳೆಂಬ ಪರಿವ್ರಾಜಕರು ಕ್ರಮೇಣ ಸ್ಥಾವರವಾಗತೊಡಗಿದರು.ಕಾವಿ ಉಡುವುದೊಂದೇ ಸಂನ್ಯಾಸದ ಅರ್ಹತೆ ಎಂಬ ಭಾವ ತಿಳಿದವರು ಇಂದೂ ಇದ್ದಾರೆ.ಮನೆ ಇಲ್ಲದಿರುವಿಕೆಯ ಪರಿತ್ಯಕ್ತರಾದ ಸಂನ್ಯಾಸಿಗಳು ಮಠವನ್ನೆ ಮನೆಯಾಗಿ ಮಾರ್ಪಡಿಸಿಕೊಂಡಿದ್ದು ಇಂದು ಅಪರೂಪದ ಸಂಗತಿಯಾಗಿ ಉಳಿದಿಲ್ಲ.ಏನೇ ಇದ್ದರೂ ಅಂಥವುಗಳು ಇಂದೂ ಸಮಾಜಕ್ಕೆ ಗುರುವಾಗುವ ಅರ್ಹತೆಯನ್ನು ,ಛಾಪನ್ನು ಇಟ್ಟುಕೊಂಡಿದೆ.

ನವನಿರ್ಮಾಣದ ಹೊಳಹುಗಳು ಮತ್ತು ಸ್ವಾತಂತ್ರ್ಯೋತ್ತರ ಭಾರತ

ಗುಲಾಮನು ತನಗೆ ತೊಡಿಸಿದ ಬೇಡಿಗಳ ಬಗ್ಗೆ ಅಭಿಮಾನ ಪಟ್ಟುಕೊಂಡು ಅದನ್ನು ಅಪ್ಪಿಕೊಂಡಾಗ ಆತನ ಯಜಮಾನನ ವಿಜಯ ಪೂರ್ಣಗೊಂಡಂತೆ ಎನ್ನುವ ಮಾತೊಂದಿದೆ. ಎಷ್ಟೊಂದು ಅರ್ಥಪೂರ್ಣ. ಕೆಲವೆಡೆ ಅದೆಷ್ಟು ಅನ್ವರ್ಥಕ. ಪಂಜರದೊಳಗಿರುವ ಗಿಳಿಯೇ ಪಂಜರವನ್ನು ಇಷ್ಟಪಟ್ಟರೆ ಬಂಧನವೇ ಪ್ರಿಯವಾಗುವಂತೆ, ಪಂಜರದ ಉದ್ದೇಶ ಈಡೇರಿದಂತೆ ಆ ಮಾತು ಅರ್ಥಪೂರ್ಣ. ಲೋಕವನ್ನೇ ಗಮನಿಸಿ. ಈ ಗುಲಾಮಗಿರಿಯಿಂದ ಏನೇನೆಲ್ಲಾ ಆಗಿ ಹೋಗಿದೆ. ಆಧುನಿಕ ಜಗತ್ತಿನ ನಕಾಶೆಗಳೇ ಬದಲಾದದ್ದಿದೆ. ಬಣ್ಣ - ರೂಪ -ಬುದಿಟಛಿಗಳಲ್ಲಿ ಹಲವರಲ್ಲಿ ಹೋಲಿಕೆ, ಸಾಮ್ಯತೆ ಕಂಡುಬಂದದ್ದಿದೆ. ಗುಲಾಮರೆಲ್ಲಾ ಒಂದೇ ತಾನೇ. ಈ ಗುಲಾಮಗಿರಿ ಒಂದು ದೇಶದ ಮಾನಸಿಕತೆಯನ್ನೇ ಬದಲಿಸಿದ್ದಿದೆ, ರೂಪಿಸಿದ್ದಿದೆ. ಸಿದಾಟಛಿಂತಗಳನ್ನು ಹರಡಿದ್ದಿದೆ. ಪ್ರಜ್ಞೆಯನ್ನು ಮಂಕುಗೊಳಿಸಿದ್ದಿದೆ.ಸಂಪ್ರದಾಯಗಳನ್ನು ಗುಡಿಸಿಹಾಕಿದ್ದಿದೆ. ಈ ಗುಲಾಮಗಿರಿ ಅಹಂ ಅನ್ನು ಸೃಷ್ಟಿಸಿ , ಶೋಕಿಯಾಗಿ ಬದಲಾಗಿ ತನ್ನ ದೇಹದ ಮೂಳೆಯನ್ನೇ ಚಪ್ಪರಿಸಿದ ನಾಯಿಯಂತೆ ವ್ಯಕ್ತಿಯನ್ನು ಬದಲಿಸಿದ್ದಿದೆ. ಈ ಗುಲಾಮಗಿರಿ ವ್ಯಕ್ತಿಯಲ್ಲಿರುವ ಏನೋ ಒಂದನ್ನು ಕಂಡೂ ಕಾಣದಂತಿರುವ ಸಂವೇದನೆಯೊಂದನ್ನು ಮಸುಕು ಮಸುಕು ಮಾಡಿದ್ದಿದೆ. ಒಟ್ಟಾರೆ ಈ ಗುಲಾಮಗಿರಿ ಶಕುಂತಲೆಯ ಉಂಗುರ ಮರೆತು, ಶಕುಂತಲೆಯನ್ನೇ ಮರೆತ ದುಶ್ಯಂತನ ಸ್ಥಿತಿಯಂಥಾದ್ದು. ಮರೆಯುವಿಕೆ ಮತ್ತು ಧಿಕ್ಕರಿಸುವಿಕೆ ಈ ಗುಲಾಮಗಿರಿಯ ಎರಡು ಕೂಸುಗಳು. ಗುಲಾಮಿತನ ಹೆಚ್ಚುತ್ತಾ ಹೋದಂತೆ ಇವೆರಡೂ ಗಾಢವಾಗುತ್ತಾ ಹೋಗುತ್ತವೆ. ಆದ್ದರಿಂದ ಗುಲಾಮಿತನದ ಗಾಢವಾಗುವಿಕೆಯೆಂದರೆ ಯಜಮಾನನ ವಿಜಯವೆಂದೇ ಅರ್ಥ. ತೊಡಿಸಿದ ಬೇಡಿಗಳೇ ಆಭರಣಗಳಂತೆ ಕಂಡಮೇಲೆ ವಿಜಯ ಇನ್ನಾರದಿರಲು ಸಾಧ್ಯ? ಕೆಲವು ಉದಾಹರಣೆಗಳು ನೆನಪಾಗುತ್ತವೆ. ೧೩ನೇ ಶತಮಾನದಲ್ಲಿ ಯುರೋಪಿನಲ್ಲಿ ನಡೆದ ಯುದಟಛಿವೊಂದರಲ್ಲಿ ಫ್ರಾನ್ಸ್‌ನ ?ಲಿಪ್ ಎಂಬ ರಾಜ ಇಂಗ್ಲೆಂಡ್ ಮತ್ತು ಜರ್ಮನಿಯ ಸಂಯುಕ್ತ ಸೇನೆಗಳನ್ನು ಸೋಲಿಸಿದ. ಈ ವಿಜಯದ ಅನಂತರ ಫ್ರೆಂಚ್ ರಾಷ್ಟ್ರಭಾವದ ಉದಯವಾಯಿತು. ಇದು ಐತಿಹಾಸಿಕ ಸತ್ಯ. ಈ ಯುದಟಛಿವಾದ ಒಂದು ಶತಮಾನಗಳ ಅನಂತರ ರಾಬರ್ಟ್ ಬ್ರೂಸ್ ಎಂಬಾತನ ನೇತೃತ್ವದಲ್ಲಿ ಇಂಗ್ಲೆಂಡ್ ವಿರುದಟಛಿ ಯುದಟಛಿ ಸಾರಿದ. ಸ್ಕಾಟ್ಲೆಂಡ್ ವಿಜಯಗಳಿಸಿತು. ಈ ವಿಜಯದಿಂದ ಸ್ಕಾಟ್ಲೆಂಡ್‌ನಲ್ಲಿ ರಾಷ್ಟ್ರಭಾವದ ಉದಯವಾಯಿತು. ಅದೂ ಐತಿಹಾಸಿಕ ಸತ್ಯ. ೧೫ನೇ ಶತಮಾನದಲ್ಲಿ ನಡೆದ ಆಂತರಿಕ ಕ್ರಾಂತಿಯ ತರುವಾಯ ಸ್ಪೇನ್‌ನಲ್ಲಿ ರಾಷ್ಟ್ರಭಾವದ ಉದಯವಾದದ್ದು ಸತ್ಯವೇ. ೧೬ನೇ ಶತಮಾನದಲ್ಲಿ ಪ್ರಭುತ್ವದ ವಿರುದಟಛಿ ಬಂಡೆದ್ದ ಹಾಲೆಂಡ್‌ನಲ್ಲಿ, ೧೯ನೇ ಶತಮಾನದಲ್ಲಿ, ಜರ್ಮನಿ ಮತ್ತು ಇಟಲಿಯಲ್ಲಿ, ಅಮೆರಿಕಾದಲ್ಲಿ ೧೫ನೇ ಶತಮಾನದಲ್ಲಿ ಇಂಗ್ಲೆಂಡಿನಲ್ಲಿ ೯ನೇ ಶತಮಾನದಲ್ಲೇ ರಾಷ್ಟ್ರಭಾವದ ಉದಯವಾಗಿ ಮನುಷ್ಯರು ಎಂದುಕೊಂಡು ಬದುಕುವ ಸ್ಥಿತಿಗೆ ಬಂದಿದ್ದು ಎಲ್ಲವೂ ಐತಿಹಾಸಿಕ ಸತ್ಯಗಳೇ. ಅವೆಲ್ಲವೂ ಆಯಾಯ ದೇಶಗಳ ಹುಟ್ಟು, ಸಂಸ್ಕಾರ ಮತ್ತು ಜನ ಮಾನಸಿಕತೆಯ ಆಧಾರದಲ್ಲಾದ ಘಟನಾವಳಿಗಳಿಗೆ ಸಾಕ್ಷಿಗಳು.
ಆದರೆ ಭಾರತ? ಇಲ್ಲಿ ರಾಷ್ಟ್ರಭಾವದ ಉದಯ ಯಾವಾಗ ಆಯಿತು? ಅಲೆಕ್ಸಾಂಡರ್ ವಿರುದಟಛಿದ ಹೋರಾಟದಲ್ಲೆ? ಪಾಣಿಪತ್ ಕದನಗಳಲ್ಲೆ? ದೆಹಲಿಯೆಂಬ ರಾಜಧಾನಿಯ ನಿರ್ಮಾಣವಾದ ಮೇಲೆಯೆ? ಉಹುಂ. ಹುಡುಕಿದರೂ ಅದರ ಬೇರುಗಳು ಸಿಗಲಾರವು. ಒಂದು ಸಾಂಸ್ಕೃತಿಕ ಚೌಕಟ್ಟಿನ ವಿಶಿಷ್ಟವಾದ ಭೂಭಾಗವಾದ ಭಾರತ ಸೋಜಿಗಗಳ ಗೂಡು. ಅಲ್ಲಿ ಹುಡುಕಿದರೆ ಹಲವು ವಿಸ್ಮಯಗಳು ಕಂಡುಬರಬಹುದು. ನಿರಂತರ ದಾಳಿಗಳ ಕುರುಹುಗಳು ಸಿಗಬಹುದು. ಭೂಭಾಗಗಳು ನಾನಾ ಅರಸರ, ನಾನಾ ಪಾಳೇಪಟ್ಟುಗಳ ಒಡೆತನದಲ್ಲಿದ್ದದ್ದೂ ಕಂಡುಬರಬಹುದು. ಪರಸ್ಪರ ಅವು ಕಚ್ಚಾಡಿಕೊಂಡಿದ್ದ ಸಂಗತಿಗಳೂ ಗೋಚರಿಸಬಹುದು. ಆದರೆ ರಾಷ್ಟ್ರಭಾವದ ಉದಯ ಯಾವಾಗ ಆಯಿತು ಎಂಬುದು ಒಂದು ಅಗೋಚರ ಸಂಗತಿ ಮತ್ತು ಪಾಶ್ಚಾತ್ಯರ ವ್ಯಾಖ್ಯಾನದ ‘ನೇಷನಲಿಸಂ’ಗಿಂತ ಮಹತ್ವದ್ದಾದ ಒಂದು ಅಸ್ಮಿತೆ ಇಲ್ಲಿರುವುದು. ಅದೇ ಭಾರತ ಪಾಶ್ಚಾತ್ಯಕ್ಕಿಂತ ಭಿನ್ನವಾಗಿರುವುದಕ್ಕೆ ಕಾರಣವಾಗಿರುವುದು ಕಂಡುಬರುತ್ತದೆ. ಅದು ಹಿಂದೂ ಎಂಬ ಅಸ್ಮಿತೆ. ಅದೇ ಒಂದು ರಾಷ್ಟ್ರೀಯತೆ. ಅದೇ ಒಂದು ಮೌಲ್ಯ. ಅದು ನಿರ್ಮಾಣವಾದುದಲ್ಲ. ಅದು ರಾಷ್ಟ್ರಕ್ಕೆ ಮಾತ್ರ ಸೀಮಿತವೂ ಅಲ್ಲ. ಅದು ಸಕಲ ರಂಗಗಳಿಗೂ ಜೋಡಿ ಕೊಂಡು ವಿಶಾಲ ಭೂಭಾಗವನ್ನು ಸರಪಳಿಯಂತೆ ಬೆಸೆದಿರುವಾಗ ಪಾಶ್ಚಾತ್ಯ ಶೈಲಿಯಲ್ಲಿ ‘ಭಾರತದ ರಾಷ್ಟ್ರೀಯತೆಯ ಉಗಮ
ಯಾವಾಗವಾಯಿತು’ ಎನ್ನುವುದರಲ್ಲಿ ಅರ್ಥವೇನಿದೆ? ದಿನಾಂಕಗಳನ್ನು ಸಂವತ್ಸರಗಳ್ನು ಹುಡುಕುವುದಕ್ಕೇನಿದೆ?
ಯಾವುದೋ ರಜಪೂತ ಅರಸನ ಸಾಮ್ರಾಜ್ಯದಲ್ಲಿರುತ್ತಿದ್ದ ಕಾಶಿ, ಮಥುರಾಗಳಿಗೆ ದಕ್ಷಿಣದ ಚೋಳ, ಪಾಂಡ್ಯ ಅರಸರೂ ನಡೆದು
ಕೊಳ್ಳುತ್ತಿದ್ದರೆಂದರೆ ಅದಕ್ಕೆ ಕಾರಣ ಹಿಂದೂ ಅಲ್ಲದೆ ಬೇರೇನಿದ್ದೀತು? ಶಂಕರರ ನಾಲ್ಕು ಪೀಠಗಳು ನಾನಾ ರಾಜ್ಯಗಳಲ್ಲಿದ್ದವು. ನಾನಾ ರಾಜಕೀಯ, ನಾನಾ ಅರಸರ ಕೈಗಳಲ್ಲಿದ್ದವು. ಆದರೂ ಆ ಪೀಠಗಳು ಬೆಸೆದಿರುವ ಭಾವ ಹಿಂದೂ ಅಲ್ಲದೆ ಬೇರೇನು? ಅದು
ರಾಷ್ಟ್ರೀಯತೆ ಅಲ್ಲದೆ ಬೇರೇನು? ಆದರೆ ನಮ್ಮ ಸಮಾಜ ಪುಸ್ತಕಗಳೋ ರಾಷ್ಟ್ರೀಯತೆಯ ಉದಯ ಗಾಂಧಿಗಿಂತ ಕೊಂಚ ಹಿಂದೆ ತಿಲಕರಿಗಿಂತ ಸ್ವಲ್ಪವೇ ಮುಂದೆ ಆರಂಭವಾಯಿತು ಎಂದು ಹೇಳುತ್ತದೆ. ಒಂದು ವೇಳೆ ಟಿಪ್ಪುವೇನಾದರೂ ಬ್ರಿಟಿಷರ ಅವಧಿಯಲ್ಲಿ ಇಲ್ಲದೆ ಹಿಂದೂ ರಾಜರೊಟ್ಟಿಗೆ ಮಾತ್ರ ಕಚ್ಚಾಡುತ್ತಿದ್ದಿದ್ದರೆ ಟಿಪ್ಪುವನ್ನೇ ಭಾರತದ ರಾಷ್ಟ್ರೀಯತೆಯ ವಾರೀಸುದಾರನನ್ನಾಗಿ ನಮ್ಮ ಇತಿಹಾಸ ಪುಸ್ತಕಗಳು ಮಾಡಿಬಿಡುತ್ತಿದ್ದವು. ‘ಭಾರತ ಒಂದು ರಾಷ್ಟ್ರವಲ್ಲ. ನೂರಾರು ಭಾಷೆ, ಸಂಸ್ಕೃತಿ, ಆಹಾರ, ಪರಂಪರೆಗಳಿರುವ ದೇಶ ಇದು’ ಎಂಬ ಬ್ರಿಟಿಷರು ಹೇಳಿಕೊಟ್ಟ ಗಿಳಿಪಾಠವನ್ನು ಉಚ್ಚರಿಸುತ್ತಲೇ ನಮ್ಮ ನಾಯಕರು ಬ್ರಿಟಿಷರ ವಿರುದಟಛಿ ಚಳವಳಿ ಮಾಡಿದರು. ಇದೊಂದು ರಾಷ್ಟ್ರೀಯ ದುರಂತ. ಅದರ ಆಧಾರದಲ್ಲೇ ಇಂದು ಭಾರತೀಯ ರಾಷ್ಟ್ರೀಯತೆಗೆ ದಿನಾಂಕಗಳನ್ನು ಗುರುತಿಸಿರುವುದು ದುರಂತದ ಸರಮಾಲೆಯ ಒಂದು ಕಂತು. ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ಬೀದಿಗಿಳಿದ ಬೊಬ್ಬಿರಿದ ನಾಯಕರೆಲ್ಲರೂ ಹೇಳಿದ್ದು ಕೂಡ ಇದನ್ನೇ. ಬ್ರಿಟಿಷ್ ತಂತ್ರಕ್ಕೆ ಪ್ರತಿತಂತ್ರ ಕೂಡ ಅದೇ ಆಯಿತು. ಬ್ರಿಟಿಷರು ‘ನೀವು ರಾಷ್ಟ್ರವಲ್ಲ’ ಎಂದಾಗ ಭಾರತೀಯರು ‘ನಾವು ನಿರ್ಮಾಣ ಮಾಡುತ್ತೇವೆ’ ಎಂದುಬಿಟ್ಟರೇ ಹೊರತು ನಮ್ಮದು ರಾಷ್ಟ್ರ ಎಂದು ಪ್ರತಿ ಹೋರಾಟ ಮಾಡಲಿಲ್ಲ. ‘Uಛಿ Zಛಿ Z Zಠಿಜಿಟ್ಞ ಜ್ಞಿ ಠಿeಛಿ ಞZhಜ್ಞಿಜ’ ಎಂದರು. ಸ್ವಾತಂತ್ರ್ಯಕ್ಕೆ ಕಾಲ ಕೂಡಿಬಂದಿರಲಿಲ್ಲವೇನೋ ಅನಿಸುತ್ತದೆ. ಬ್ರಿಟಿಷರು ಹಾಕಿದ್ದ ಬೇಡಿಯನ್ನು ಭಾರತೀಯರು ಆಭರಣವೆಂಬಂತೆ ಭಾವಿಸಿದ್ದರು. ಅದನ್ನೇ ಚುಂಬಿಸಿದರು. ಇನ್ನು ಯಜಮಾನನ ವಿಜಯ ಅಂತಿಮವಾಗದೆ ಏನಾದೀತು? ಆದ್ದರಿಂದ ನಮ್ಮ ಸಮಾಜ ಪುಸ್ತಕದ ಪುಟಗಳಲ್ಲಿ ಹಾಗೆಯೇ ಇದೆ. ಇಂಥಿಂಥಾ ದಿನ, ಇಂಥಿಂಥಾ ಹೊತ್ತು ಇಂಥಿಂಥವರಿಗೆ ರಾಷ್ಟ್ರಭಾವದ ಉದಯವಾಯಿತು ಎಂದು ಸಾಕ್ಷಾತ್ ಬುದಟಛಿನಿಗೆ ಬೋಧಿವೃಕ್ಷದ ಕೆಳಗೆ ಆದಂಥ ಧಾಟಿಯಲ್ಲಿ ವರ್ಣನೆಗಳಿವೆ. ಅದರ ಪರಿಣಾಮ ಇಂದಿನ ಪೀಳಿಗೆಗೆ ಭಾರತವಿನ್ನೂ ರಾಷ್ಟ್ರೀಯತ್ವದತ್ತ ಪಕ್ವವಾಗುತ್ತಿರುವ ರಾಷ್ಟ್ರ. ಭಾರತವೆಂದರೆ ತೀರಾ ಎಳಸು. ಅನುಭವವಿಲ್ಲ. ಸಾರವಿಲ್ಲ, ಸತ್ತ್ವವಿಲ್ಲ. ಬಹುತೇಕ
ಸಂದರ್ಭದಲ್ಲಿ ವಿ ಆರ್ ಬ್ಲಡೀ ಇಂಡಿಯನ್ಸ್. ಧೋನಿ ಪಡೆ ಏನಾದರೂ ವಿಶ್ವಕಪ್ ಗೆಲ್ಲದೆ ಇರುತ್ತಿದ್ದರಂತೂ ನಾವು ವಿಶ್ವದಲ್ಲಿ
ತಲೆ ಎತ್ತಿ ನಡೆಯುವಂತೆಯೂ ಇರಲಿಲ್ಲ ಎಂಬಂಥ ಭಾವನೆ. ಬಹುತೇಕರಿಗೆ ಈ ಅಭಿಪ್ರಾಯವಿರುವುದು ಸುಳ್ಳಲ್ಲ. ಯಾಕೆಂದರೆ ಕ್ರಿಕೆಟ್ ಧರ್ಮವಲ್ಲವೇ? ಆಟಗಾರರು ದೇವರಲ್ಲವೇ? ಇದೆಲ್ಲದರ ಹಿಂದೆ ಬ್ರಿಟಿಷರಿಂದ ರಾಷ್ಟ್ರೀಯರಲ್ಲ ಎಂಬ ಹುಸಿ ತರ್ಕದ ತಿರುಳಿದೆ. ಅವರ ಹುನ್ನಾರ ಇಂದೂ ಜಾಗೃತವಾಗಿರುವ ಕುರುಹುಗಳಿಗೆ ಇಂದೇನಾದರೂ ಭಾರತದ ವಿಶಿಷ್ಟ ಆಧ್ಯಾತ್ಮಿಕ ಸಾಂಸ್ಕೃತಿಕ ಬೇರುಗಳೇ ರಾಷ್ಟ್ರೀಯತೆ ಎಂದು ಪ್ರತಿಪಾದಿಸಿದರೆ ಅದು ಕೋಮುವಾದ ಎಂದಲ್ಲದೇ ಬೇರೆ ಪ್ರತಿಕ್ರಿಯೆಗಳು ಹೊರಬರದು. ದೇಶಕ್ಕಿಂದು ಫ್ಯಾಶನೇಟ್ ಆದ ವ್ಯಾಖ್ಯಾನಗಳು ಬೇಕಿವೆ. ಅದು ಬೇಡಿಯನ್ನು ಆಭರಣವೆಂದು ಚುಂಬಿಸಿದ ಫಲ. ಹೀಗೆ ಸ್ವಾತಂತ್ರ್ಯೋತ್ತರ ಭಾರತದಲ್ಲಿ ‘ರಾಷ್ಟ್ರ ನಿರ್ಮಾಣದ’ ಕಾರ್ಯ ಮಾಡುವ ಧಾವಂತದಲ್ಲಿ ಮತ್ತೇನನ್ನೋ ನಿರ್ಮಾಣ ಮಾಡಿಬಿಟ್ಟರು. ಅದರ ಪರಿಣಾಮ ಹೇಗಿತ್ತೆಂದರೆ ವಸಹತುಶಾಹಿತ್ವ ಕೊನೆಗೊಂಡರೂ ವಸಾಹತೀಕರಣದ ಉಳಿಕೆ ಎಲ್ಲರ ಮನಸ್ಸಲ್ಲೂ ಉಳಿದುಹೋಯಿತು. ಆದ್ದರಿಂದ ಭಾರತದ ಸಾಂಸ್ಕೃತಿಕ - ಆರ್ಥಿಕ - ರಾಜಕೀಯ ವ್ಯವಸ್ಥೆಗಳು ಬ್ರಿಟಿಷ್ ಅವಧಿಗಿಂತ ಹದಗೆಟ್ಟವು. ಅದರ ಪರಿಣಾಮ ಇಂದು ಗಾಢವಾಗಿ ಆ ಮೂರು ಕ್ಷೇತ್ರಗಳೂ ವಿಕೃತಿಗೊಂಡಿವೆ. ಪತನದ ಹಾದಿ ಹಿಡಿದಿವೆ. ಅದನ್ನು ಎಳೆಎಳೆಯಾಗಿ ತೆರೆದಿಟ್ಟವರು ಇತ್ತೀಚೆಗೆ ನಿಧನರಾದ ಡಾ. ಉಪೇಂದ್ರ ಶೆಣೈರವರು. ‘ಸ್ವಾತಂತ್ರ್ಯೋತ್ತರ ಭಾರತ. ನವನಿರ್ಮಾಣದ ಹೊಳಹುಗಳು’ ಎಂಬ ಅವರ ಕೃತಿ ಈ ಸಂಗತಿಗಳ ಪಂಚನಾಮೆಯನ್ನು ನಡೆಸುತ್ತದೆ. ನಮಗೆ ಸ್ವಾತಂತ್ರ್ಯ ದೊರಕಿ ಅರ್ಧ ಶತಮಾನವಾದರೂ ನಾವಿನ್ನೂ ದಿಕ್ಕೆಟ್ಟ ಸ್ಥಿತಿಯಲ್ಲೇ ಯಾಕಿದ್ದೇವೆ ಎಂಬ ಪ್ರಶ್ನೆಗಳಿಗೆ ಅಲ್ಲಿ ಉತ್ತರವಿದೆ. ವೈಚಾರಿಕ ಗೊಂದಲ, ವ್ಯಾಪಕ ತಪ್ಪು ಗ್ರಹಿಕೆಗಳಿಗೆ ಕಾರಣ ಮತ್ತು ಸುದೀರ್ಘ ಕಾಲದ ಗುಲಾಮಗಿರಿಯ ಲಕ್ಷಣಗಳ ಕಾರಣಗಳನ್ನು ಅವರು ಬಿಚ್ಚಿಟ್ಟಿದ್ದಾರೆ. ಭಾರತದ ಇಂದಿನ ದೌರ್ಬಲ್ಯದ ಕಾರಣ ಅದರ ವೈಶಿಷ್ಟ್ಯವೇ ಎಂಬಲ್ಲಿಂದ ಹಿಡಿದು ಪತನದ ದಾರಿ, ದಾಸ್ಯದ ದುಷ್ಪರಿಣಾಮಗಳನ್ನು ಹುಡುಕಿದ್ದಾರೆ. ಧರ್ಮ, ಅರ್ಥ, ರಾಷ್ಟ್ರಗಳು ಪದ ವಿಕಾರಗೊಂಡಿರುವ ಕಾರಣ ಪರಿಣಾಮಗಳನ್ನೂ ಚರ್ಚಿಸಿದ್ದಾರೆ. ಡಾ. ಉಪೇಂದ್ರ ಶೆಣೈ ಅವರು. ಮೂರು ದಶಕಗಳಿಗೂ ಹೆಚ್ಚು ಕಾಲದ ಅವರ ಶೋಧ ಅನುಭವಗಳ ಒಟ್ಟು ರೂಪ ಅವರ ಈ ಕೃತಿಯಲ್ಲಿ ಅಡಕವಾಗಿದೆ ಎನ್ನಬಹುದು. ಡಾ. ಉಪೇಂದ್ರ ಶೆಣೈ ಅವರು ಅಧ್ಯಯನವಿಲ್ಲದೆ ಒಂದಕ್ಷರವನ್ನೂ ಬರೆಯಲಾರರು. ಅಂಥ ಪರಿಶ್ರಮಕ್ಕೆ ಸಾಕ್ಷಿಯಾಗಿ ಈ ಕೃತಿ ಇತ್ತೀಚೆಗೆ ಬಿಡುಗಡೆಯಾಗಿದೆ. ಪತ್ರಿಕೆಯೊಂದರ ಪುಟ್ಟ ತುಣುಕನ್ನೂ ಬಿಡದೆ ಅಧ್ಯಯನ ಮಾಡಿ ಸಂಗ್ರಹಿಸುವ ಅವರ ಶೈಲಿ ಈ ಕೃತಿಯಲ್ಲಿ ಮಹತ್‌ರೂಪ ಪಡೆದಿದೆ. ಸ್ವಾತಂತ್ರ್ಯಾನಂತರದ ಘಟನಾವಳಿಗಳ ಸೂಕ್ಷ್ಮ ವಿವರವನ್ನೂ ಬಿಡದೆ ಶೋಧಿಸಿರುವ ಶೆಣೈ ಅವರು ಇಂದಿಲ್ಲ. ಆದರೆ ಅವರ ಅಗಾಧ ಪರಿಶ್ರಮ ಮತ್ತು ಸಂಗ್ರಹಿಸಿದ ಪತ್ರಿಕೆ, ಪುಸ್ತಕಗಳು ಇತಿಹಾಸಕ್ಕೆ ಸಾಕ್ಷಿಯಾಗಿ ಉಳಿದಿವೆ. ಒಂದರ್ಥದಲ್ಲಿ ಇವರೊಂದು ಪೇಪರ್ ಗೂಗಲ್ ಎಂದರೂ ಸರಿ ಮತ್ತು ಅದಕ್ಕಿಂತಲೂ ಹೆಚ್ಚೆ. ಏಕೆಂದರೆ ಮಾಹಿತಿಗಳ ಶೇಖರಣೆಯಷ್ಟೇ ಇಲ್ಲಿ ಗುರಿಯಲ್ಲ. ರಾಷ್ಟ್ರದ ವಿಚಾರದ ಚಿಂತನೆಗೆ ದಾರಿಯಾದ ಒಂದು ಮಾರ್ಗ ಅದಷ್ಟೇ. ಅಂದು ‘ಚಿಂತನಾಗಂಗಾ’ ಎಂಬ ಗುಚ್ಛದಲ್ಲಿ ಶ್ರೀ ಗುರೂಜಿ ಗೋಳವಲಕರರು ಯಾವುದನ್ನು ಅಪಾಯವೆಂದೂ, ಯಾವುದು ಆಗಬಾರದಿತ್ತೆಂದೂ, ಯಾವುದು ಸಹ್ಯವೆಂದೂ, ಯಾವುದು ಅಸಹ್ಯವೆಂದೂ, ಹೇಳಿದ್ದರೋ ಅದರ ಪರಿಣಾಮಗಳನ್ನು ಡಾ. ಉಪೇಂದ್ರ ಶೆಣೈ ‘ಸ್ವಾತಂತ್ರ್ಯೋತ್ತರ ಭಾರತ : ನವನಿರ್ಮಾಣದ ಹೊಳಹುಗಳು’ನಲ್ಲಿ ಚರ್ಚಿಸಿದ್ದಾರೆ. ಗುರೂಜಿಯವರ ಚಿಂತನೆಗಂಗೆಯೇ ಸರಿ ಎಂದು ಶೆಣೈ ಅವರ ಗ್ರಂಥವನ್ನು ನೋಡಿದರೆ ಅರಿವಾಗದಿರದು.

ಟಿಪ್ಪುವೇ ಸಂತನಾದರೆ ಸಂತರಲ್ಲದವರು ಯಾರು?


ಟಿಪ್ಪುಎಂಬಸುಲ್ತಾನಈಗಕೇವಲಮೈಸೂರು,ಶ್ರೀರಂಗಪಟ್ಟಣ,ಗಂಜಾಂಗಳಿಗೆಮಾತ್ರಸೀಮಿತವಾಗಿಲ್ಲ.ಮೈಸೂರುಕದನಗಳಿಂದಆತನಬದುಕುಮುಗಿದೂಹೋಗಿಲ್ಲ.ಇತಿಹಾಸದಪುಟಗಳಲ್ಲಿಮಲಗಿ,ಕಿರುತೆರೆಗೆಹಾರಿ,ಹೊಸವೇಷಧರಿಸಿಕೊಂಡುಆಗಾಗ್ಗೆಟಿಪ್ಪುಸುದ್ದಿಯಾಗುತ್ತಾನೆ.ಒಬ್ಬಯೋಗ್ಯವ್ಯಕ್ತಿಯೂ ಟಿಪ್ಪುಶ್ರೇಷ್ಟಅರಸನಾಗಿಸುದ್ದಿಯಾಗುತ್ತಾನೆ.ಹೊಗಳಲ್ಪಡುತ್ತಾನೆ.ವಿವಾದಗಳಾಗುತ್ತವೆ. ಏನೇನೋ ಬೇಡಿಕೆಗಳಾಗುತ್ತವೆ. ಇತ್ತೀಚಿನಕೆಲ ವರ್ಷಗಳಿಂದಂತೂ ಹೊಗಳಿಕೆ ತಾರಕಕ್ಕೇರಿ ರಾಜಕಾರಣಿಗಳು,ಪತ್ರಕರ್ತರು, ಚಿಂತಕರೆಂದೂ ಕರೆಯಲ್ಪಡುವವರೆಲ್ಲರೂ ಟಿಪ್ಪುಗುಣಗಾನಕ್ಕೆ ನಿಂತುಬಿಟ್ಟಿದ್ದಾರೆ.
ಮೊನ್ನೆ ತಾನೇ ಆ ಪಾಳಿಯಲ್ಲಿ ನಿಂತವರು ಪ್ರೊ ಮುಮ್ತಾಜ್ಆಲಿ ಖಾನ್. ಅಲ್ಪಸಂಖ್ಯಾತ ಮತ್ತು ವಕ್ಫ್ ಖಾತೆಯ ಸಚಿವರು. ಸಜ್ಜನ ಮುಸಲ್ಮಾನ ಸದ್ಗೃಹಸ್ಥರು.ಚಿಂತಕರು.ಬಹುಭಾಷಾ ಬರಹಗಾರರು. ಮುಸಲ್ಮಾನರಾದರೂ ಸಂವೇದನಾಶೀಲರು.ಭಯೋತ್ಪಾದನೆ, ಹೆಚ್ಚುತ್ತಿರುವ ಮುಸಲ್ಮಾನರ ಕ್ರೌರ್ಯಗಳನ್ನು ಧೈರ್ಯದಿಂದ ಟೀಕಿಸಿದವರು. ಹೆಮ್ಮಕ್ಕಳ ಶಿಕ್ಷಣ ಮತ್ತು ಮುಸಲ್ಮಾನರ ವಿದ್ಯಾಭ್ಯಾಸಕ್ಕೆ ಒತ್ತು ನೀಡಿದವರು.ಶಿಕ್ಷಣ ತಜ್ಞರು. ಅಂಥ ಮುಮ್ತಾಜ್ ಆಲಿ ಖಾನ್ ಸಾಹೇಬರು ಮೊನ್ನೆ ಮಡಿಕೇರಿಯಲ್ಲೇ ಟಿಪ್ಪು ಗುಣಗಾನ ಮಾಡಿದ್ದರು.ಅದೂ ಭಯಾನಕವಾಗಿ. “ಟಿಪ್ಪು ಒರ್ವ ಅರಸನಷ್ಟೇ ಅಲ್ಲ .ಆತನೊಬ್ಬ ಸಂತ ಕೂಡ. ಆತನ ಜನ್ಮದಿನಾಚರಣೆಯನ್ನು ಸರಕಾರ ಆಚರಿಸಬೇಕು. ನಾನು ಮಾನ್ಯ ಮುಖ್ಯಮಂತ್ರಿಗಳಿಗೆ ಈ ಬಗ್ಗೆ ಮನವಿ ಮಾಡುತ್ತೇನೆ."ಎಂದಿದ್ದರು. ಅಷ್ಟರವರೆಗೆ ಮುಮ್ತಾಜ್ ಆಲಿ ಖಾನರೆಂದರೆ ಅಂಥವರು, ಇಂಥವರು, ದೊಡ್ಡವರು ಎಂದುಕೊಂಡವರಿಗೂ ಒಮ್ಮೆ ಸಾಹೇಬರು ಹಾಗಂದರಾ ಎನಿಸಿದ್ದು ಸುಳ್ಳಲ್ಲ. ಓರ್ವ ಕಾಂಗ್ರೆಸಿಗನೋ ಕಮ್ಯುನಿಷ್ಟನೋ
ಮತಾಂಧನೋ ಮಾತ್ರ ಹೇಳಬಹುದಾದ ಮಾತನ್ನು ಮುಮ್ತಾಜ್ ಆಲಿ ಖಾನರಂಥವರು ಹೇಳುವುದೆಂದರೆ ಏನನ್ನಬೇಕು? ಯಾವ
ಟಿಪ್ಪುವನ್ನು ಕೊಡಗಿನ ಜನತೆ ಮರೆಯಬೇಕೆಂದಿದ್ದರೋ, ಯಾವ ಟಿಪ್ಪುವಿನ ಹೆಸರನ್ನು ತಮ್ಮ ಮನೆಯ ನಾಯಿಗೆ ಇಟ್ಟಿದ್ದರೋ,
ಯಾವ ಟಿಪ್ಪುವಿನ ಕ್ರೌರ್ಯದ ಕುರುಹುಗಳು ಇಂದೂ ಕೊಡಗಿನ ಊರೂರುಗಳಲ್ಲಿದೆಯೋ, ಯಾವ ಟಿಪ್ಪು ಕೊಡಗಿನ ಪಾಲಿನ
ರಕ್ಕಸನೋ ಅಂಥಾ ಟಿಪ್ಪುವನ್ನು ಸಂತನ ಪಟ್ಟಕ್ಕೇರಿಸಿ , ಆತ ಹುಟ್ಟಿದ ದಿನದಂದು ಧ್ಯಜ ಹಾರಿಸಿ, ಮಕ್ಕಳಿಂದ ಭಾಷಣ ಮಾಡಿಸುವ
ಉದ್ದೇಶ ತಾಲಿಬಾನ್ ಆಳ್ವಿಕೆಗಿಂತ ಭಿನ್ನವೇನಲ್ಲ. ಜಗತ್ತಿನಲ್ಲಿ ಹಿಟ್ಲರನನ್ನು, ಲಾಡೆನ್ನನನ್ನು, ಇದಿ ಅಮೀನನನ್ನು ರಕ್ಕಸರೆನ್ನಲು
ಕಾರಣಗಳು ಸಿಗಬೇಕಾದರೆ ಅದರಪ್ಪನಂತಹ ಟಿಪ್ಪುವನ್ನು ಕಿರಾತಕನೆನ್ನಲು ಕಾರಣಗಳು ಕೊಡಗಿನಲ್ಲೇ ಸಿಗುತ್ತವೆ.
೪೦ ಸಾವಿರ ಕೊಡವರನ್ನು ತರಿದ ಸಾಕ್ಷಿಗಳು, ಅಷ್ಟೇ ಸಂಖ್ಯೆಯ ಕೊಡವರನ್ನು ಮತಾಂತರಿಸಿ ತನ್ನ ‘ಅಹಮದಿ’
ಸೈನ್ಯಕ್ಕೆ ಸೇರಿಸಿಕೊಂಡ ಸಾಕ್ಷಿಗಳು, ನೂರಾರು ದೇವಸ್ಥಾನಗಳನ್ನು ಕೆಡವಿದ ಸಾಕ್ಷಿಗಳು ಕೊಡಗಿನ ಊರೂರಲ್ಲೂ ಇದೆ. ತಮ್ಮ
ಪೂರ್ವಜರನ್ನು ಮುಗಿಸಿದ ದುಷ್ಟನನ್ನು ಕೊಡವರು ಆರಾಧಿಸಬೇಕೇ? ಒಂದು ಬರಹಕ್ಕೆ ಸಂಶೋಧನೆ ಮಾಡುವ ಸಚಿವರು
ಟಿಪ್ಪು ಬಗ್ಗೆ ತಿಳಿದುಕೊಳ್ಳಲಾರದೇ ಹೋದದ್ದು ದುರದೃಷ್ಟಕರವೇ ಸರಿ. ಟಿವಿ ಸೀರಿಯಲ್‌ಗಳು, ಕಮ್ಯುನಿಸ್ಟ್ ಪುಸ್ತಕಗಳು, ಕಾಂಗ್ರೆಸ್
ಭಾಷಣಗಳು ಏನೇ ಹೇಳಿದರೂ ವಾಸ್ತವ ವಾಸ್ತವವೇ. ಅದು ಬದಲಾಗದು. ಅದು ಮರೆಯಾಗಿರಬಹುದಷ್ಟೆ ಹೊರತು,
ಸಂಪೂರ್ಣ ನಶಿಸಿಹೋಗದು. ಟಿಪ್ಪು ಚರಿತ್ರೆ ಅಂತದ್ದರಲ್ಲಿ ಒಂದಷ್ಟೆ. ಭಾಷೆಯ ಮೊರೆಹೋಗಿಯೋ , ಕಥನದ ಶೈಲಿ ಅನುಸರಿಸಿಯೋ ಟಿಪ್ಪುವನ್ನು ಹೀರೋ ಮಾಡಬಹುದು. ಆದರೆ ಆತನ ಯುದಟಛಿಗಳ ಪರಿಣಾಮ ಮತ್ತು ಆಕ್ರಮಣ-ಲೂಟಿಗಳ ಪರಿಣಾಮಗಳು ನೈಜ ಟಿಪ್ಪುವನ್ನು ತೆರೆದಿಡುತ್ತವೆ. ಆದರೂ ಹಲವರಿಗೆ ಆತ ‘ಸಂತ’ ನಂತೆ ಕಂಡುಬರುತ್ತಾನೆ.
ಸಂತ! ಅದೂ ಟಿಪ್ಪು! ಯುದಟಛಿ ನಿಲ್ಲಿಸಿದ್ದಕ್ಕೇನು? ಬೈರಾಗಿಯಾಗಿದ್ದಕ್ಕೇನು? ತಜ್ಞನಾಗಿದ್ದಕ್ಕೇನು? ಅಥವಾ ಜ್ಞಾನಿ,ಸರ್ವಸಂಗ ಪರಿತ್ಯಾಗಿಯಾಗಿದ್ದಕ್ಕೇನು? ಯಾವ ಗುಣವನ್ನು ಕಂಡು ಸಚಿವರು ಆತನಿಗೆ ಇಂತದ್ದೊಂದು ಪಟ್ಟ ಕಟ್ಟಿದರು? ಟಿಪ್ಪುವನ್ನು ಸಂತ
ಎನ್ನುವುದಾದರೆ, ಲಾಡೆನ್‌ನನ್ನು ಸಂತ ಎನ್ನಲೇಬೇಕು. ಟಿಪ್ಪುವನ್ನು ಸಂತ ಎನ್ನುವುದಾದರೆ ಸಂತತ್ವದ ವ್ಯಾಖ್ಯಾನವೇ ಬದಲಾಗಬೇಕು.ಟಿಪ್ಪುವನ್ನು ಸಂತ ಎನ್ನುವುದಾದರೆ ಈಗಿರುವ ಸಂತರೆಲ್ಲರೂ ದುಷ್ಟರಾಗಲೇಬೇಕು. ಟಿಪ್ಪುವನ್ನು ಸಂತ ಎನ್ನುವುದಾದರೆ ಸಂತರಲ್ಲದವರು ಯಾರೂ ಜಗದಲ್ಲಿರಲಿಕ್ಕಿಲ್ಲ. ಅಷ್ಟಕ್ಕೂ ಹೇಗೆ ತಾನೆ ಟಿಪ್ಪು ಸಂತನಾಗಬಲ್ಲ? ಟಿಪ್ಪು ಮತ್ತು ಆತನ ತಂದೆ ಹೈದರಾಲಿಯ ಇತಿಹಾಸ ದಾಖಲೆಗಳೇ ಸರ್ಕಾರದ ಬಳಿ ಹೆಚ್ಚಳವಾಗಿವೆ. ಅನ್ನೂ ಸಚಿವರು ಅಧ್ಯಯನ ಮಾಡಬಹುದಲ್ಲವೆ? ಅಧ್ಯಯನವಿಲ್ಲದೆ ಮಾತನಾಡುವುದು ಅವರ ಬಿರುದಾವಳಿಗಳಿಗೆ ಶೋಭೆಯೇ?
ಟಿಪ್ಪು ದಕ್ಷಿಣ ಭಾರತಾದ್ಯಂತ ಅಂದರೆ ಮಂಗಳೂರು,ಕೊಡಗು, ವೈನಾಡು, ಕಣ್ಣಾನೂರು, ಕೊಚ್ಚಿ, ತಿರುವಾಂಕೂರು,ತಂಜಾವೂರು, ಕೊಯಮತ್ತೂರು, ಹೊನ್ನಾರವ ವ್ಯಾಪ್ತಿಯಲ್ಲಿ ನಾಶ ಮಾಡಿದ ದೇವಸ್ಥಾನಗಳ ಸಂಖ್ಯೆ ಕೇವಲ ಎಂಟು ಸಾವಿರ! ಇದನ್ನು ಶೋಧಿಸಿದವರು ಯಾರೋ ಆರೆಸ್ಸೆಸ್‌ನವರಲ್ಲ. ಚಿದಾನಂದಮೂರ್ತಿಗಳಂತೂ ಅಲ್ಲವೇ ಅಲ್ಲ. ಅದು ‘ಮೈಸೂರು
ಗೆಜೆಟಿಯರ್’ನಲ್ಲಿ ದಾಖಲಾದ ಅಧಿಕೃತ ದಾಖಲೆ. ಅದನ್ನು ದಾಖಲಿಸಿದವರು ಲೂಯಿಸ್ ರೈಸ್‌ರಂತ ವಿದ್ವಾಂಸರು.೧೭೮೯ರಲ್ಲಿ ತನ್ನ ವಶದಲ್ಲಿದ್ದ ಅಸಂಖ್ಯ ಯುದಟಛಿ ಖೈದಿಗಳನ್ನು ಟಿಪ್ಪುಬಲಾತ್ಕಾರವಾಗಿ ಮತಾಂತರಿಸಿದ. ಅದರಲ್ಲಿ ೪೦ ಸಾವಿರದಷ್ಟು ಕೊಡವರೇ ಇದ್ದರು. ಇದನ್ನು ದಾಖಲಿಸಿದವರು ಬುಖಾನನ್ ಎಂಬ ಆಂಗ್ಲ.
ಕೊಡಗನ್ನು ದಾಟಿ ಮಲಾಬಾರ್ ಪ್ರವೇಶಿಸಿದ ಟಿಪ್ಪು ಒಂದು ಫರ್ಮಾನನ್ನು ಹೊರಡಿಸಿದ. “ಪ್ರತಿಯೊಬ್ಬರೂ ಇಸ್ಲಾಂ ಅನ್ನು ಕಡ್ಡಾಯವಾಗಿ ಪಾಲಿಸಬೇಕು...ಇದಕ್ಕೆ ವಿರುದ್ದವಾದವರನ್ನು ಸುಡಲಾಗುವುದು. ತಪ್ಪಿಸಿಕೊಂಡವರನ್ನು ಹುಡುಕಿ ಹುಡುಕಿ
ಶಿಕ್ಷಿಸಲಾಗುವುದು." ಅದರ ಉಲ್ಲೇಖ ‘ಮಲಾಬಾರ್ ಮ್ಯಾನುಯಲ್’ನ ಪುಟ ಸಂಖ್ಯೆ ೧೦ರಲ್ಲಿ ಇಂದು ಇದೆ. ಇದೆಲ್ಲ
ಏನನ್ನು ಸೂಚಿಸುತ್ತದೆ? ಇದೇ ಏನು ಟಿಪ್ಪುವಿನ ಸಂತ ಗುಣ? ಖಡ್ಗ ಹಿಡಿದು ಹೆದರಿಸಿ, ತನ್ನ ಮತದ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಟಿಪ್ಪು ಇಸ್ಲಾಮಿನ ಪ್ರಕಾರ ‘ಸಂತ’ ಎನಿಸಿಕೊಳ್ಳುವವನೇ? ಹಾಗಾದರೆ ಹೀಗೆ ಮಾಡಿದವರೆಲ್ಲರೂ ಇಸ್ಲಾಮಿನಲ್ಲಿ ಸಂತರೇ? ಇಸ್ಲಾಂ ಸಂತರೆಲ್ಲರೂ ಇಂತಹವರೇ? ಇಷ್ಟನ್ನು ಕೇಳಿಕೊಂಡಿದ್ದರೂ ಪ್ರೊ. ಮುಮ್ತಾಜ್ ಆಲಿಖಾನ್‌ರಿಗೆ ಸಾಕಿತ್ತು.
ಇವು ದಾಖಲೆಗಳ ಮಾತಾದವು. ಇನ್ನು ಕೆಲವು ಊರುಗಳಿಗೆಹೋದರಂತೂ ಟಿಪ್ಪುವಿನ ‘ಘನಾಂಧಾರಿ ಕೆಲಸ’ ಅಲ್ಲಲ್ಲಿ
ಕಂಡುಬರುತ್ತವೆ. ಅದೊಂದು ಪವಿತ್ರ ದಿನವಾಗಿತ್ತು. ನರಕಚತುರ್ಥಿಯ ಸಿದಟಛಿತೆ ಅಲ್ಲಿ ನಡೆದಿತ್ತು. ಶ್ರೀರಂಗಪಟ್ಟಣಕ್ಕೆ ಹಬ್ಬದ ಕಳೆ ಎಂದರೆ ಹಾಗೆಯೆ. ರಂಗನಾಥನಿಗೆ ಪೂಜೆ, ಕಾವೇರಿಯ ಜಳಕ, ಅನಂತರ ತೀರ್ಥಪ್ರಸಾದಗಳು ಅಲ್ಲಿಂದ ಮೈಸೂರು ಅರಮನೆಗೆ ಗಾಡಿಗಳಲ್ಲಿ ಹೋಗುತ್ತಿದ್ದವು. ಅಂಥ ಒಂದು ದಿನ ದಂಡಿನ ಸಮೇತ ಬಂದ ಟಿಪ್ಪು ಮೈಸೂರು ಅರಸರ ಬಂಧುಗಳಾಗಿದ್ದರೆಂಬ ಒಂದೇ ಒಂದು ಕಾರಣಕ್ಕೆ ತಿರುಮಲರಾವ್, ನಾರಾಯಣರಾವ್, ಸುಬ್ಬರಾಜೇ ಅರಸರವರ ಬೃಹತ್ ಸಂಖ್ಯೆಯ ಅವಿಭಕ್ತ ಕುಟುಂಬಗಳ ಒಟ್ಟು
೭೦೦ ಮಂದಿಯನ್ನು ರಂಗನಾಥ ದೇವಾಲಯದ ಎದುರಿನ ಹುಣಸೇ ತೋಪಿನಲ್ಲಿ ಮರಗಳಿಗೆ ನೇತುಹಾಕಿಸಿದ್ದ. ನೇಣುಹಾಕುವ
ಹಗ್ಗಗಳನ್ನು ಟಿಪ್ಪು ಎತ್ತಿನ ಗಾಡಿಯಲ್ಲೇ ತಂದಿದ್ದ. ಇಂಥವನು ಸಂತನೆನಿಸಿಕೊಳ್ಳಲರ್ಹನೇ? ಅಂದು ಟಿಪ್ಪು ನಡೆಸಿದ ಈ ದಾಳಿಯಿಂದ
ಹಬ್ಬದ ಸಡಗರ ಸ್ಮಶಾನವಾಯಿತು. ಅದರ ಕಾರಣವಾಗಿ ಇಂದೂ ಆ ಬಂಧುಗಳ ಪರಿವಾರದವರು ನರಕಚತುರ್ಥಿ,
ದೀಪಾವಳಿಗಳನ್ನು ಆಚರಿಸಿಕೊಳ್ಳುತ್ತಿಲ್ಲ. ಇಂಥವ ಸಂತನೇ? ಹೀಗೆ ಹಬ್ಬದ ಮನೆಯನ್ನು ಸಾವಿನ ಮನೆಯಾಗಿ ಮಾಡಿದವನಿಗೆ
ದಿನಾಚರಣೆ ಮಾಡಿ ಗೌರವ ಸೂಚಿಸಬೇಕು ಎಂದಾದರೆ,ವೀರಪ್ಪನ್‌ಗೂ ದಾವೂದ್‌ಗೂ ಸನ್ಮಾನ ಮಾಡಬೇಕು,
ದಿನಾಚರಣೆಯನ್ನು ಮಾಡಬೇಕು. ಏಕೆಂದರೆ ಕ್ರೌರ್ಯಕ್ಕೆ ಬೇರೆ ಅರ್ಥಗಳಿಲ್ಲ. ಅದರಲ್ಲಿ ವ್ಯತ್ಯಾಸಗಳಿಲ್ಲ. ಅಲ್ಲಿ ವಾಹಕರಿಗಿಂತ
ಕ್ರೌರ್ಯವೇ ಸದಾ ವಿಜೃಂಭಿಸುತ್ತದೆ. ಕೊಡಗಿನಲ್ಲಂತೂ ಟಿಪ್ಪು ಮಾಡಿದ ದಾಳಿ ಉತ್ತರದ ಮೊಗಲರನ್ನು
ನೆನಪಿಸುತ್ತದೆ. ದೇವಸ್ಥಾನಗಳ ಧ್ವಂಸದ ತೀವ್ರತೆ ಎಷ್ಟಿತ್ತೆಂದರೆ,ದೇಗುಲದ ಅರ್ಚಕರೇ ಖಾಲಿಯಾಗಿ ಹೋದರು. ಕೆಲವು
ದೇವಸ್ಥಾನಗಳು ಬಾಗಿಲು ಮುಚ್ಚಿದವು. ಅಂತಹ ಸಂದರ್ಭದಲ್ಲಿ ಮದ್ಯಮಾಂಸ ಸೇವಕರಾದ ಕೊಡವರೇ ಅವುಗಳನ್ನು ತ್ಯಜಿಸಿ
ದೇವಸ್ಥಾನದಲ್ಲಿ ಪೂಜೆಗೆ ನಿಂತ ಉದಾಹರಣೆಗಳು ಹಲವಿವೆ. ಅವುಗಳ ಕುರುಹುಗಳು, ಕಥೆಗಳಿವೆ. ಹೀಗೆ ಒಂದುದಿನ ಕೊಡಗಿಗೆ
ಬಂದ ಟಿಪ್ಪು ಮಧ್ಯ ಕೊಡಗಿನ ದೇವಸ್ಥಾನವೊಂದರ ಪ್ರಾಂಗಣಕ್ಕಿಳಿದ.ಹೆಂಚಿಗೆ ಕೈ ಇಕ್ಕಿದ್ದೇ ತಡ ಹೆಜ್ಜೇನುಗಳ ದಾಳಿಯಾಯಿತು. ಟಿಪ್ಪುಮತ್ತು ಆತನ ಸೈನ್ಯ ಆಯುಧಗಳನ್ನು ಬಿಸಾಡಿ ‘ಕಡಿಯತ್ತ ನಾಡೇ’(ಕಚ್ಚುವ ಊರು) ಎಂದು ಬೊಬ್ಬೆಹಾಕುತ್ತಾ ಪಲಾಯನ ಮಾಡಿದರಂತೆ.ನಿಜ, ಇಂದು ಅದನ್ನು ಕಂಡವರು ಬದುಕಿಲ್ಲ. ಆದರೆ ಅಂದು ಹೆಜ್ಜೇನುಗಳ ದಾಳಿಯಿಂದ ತತ್ತರಿಸಿದ ಸೈನಿಕರು ಬಿಸಾಡಿದ ಕತ್ತಿ-ಗುರಾಣಿ-ಈಟಿಗಳು ಇಂದು ಆ ದೇವಸ್ಥಾನದಲ್ಲಿವೆ. ಆ ಊರು ಇಂದು ‘ಕಡಿಯತ್ತ ನಾಡು’ ಎಂದೇ ಕರೆಸಿಕೊಳ್ಳುತ್ತಿವೆ.
ಇದು ಸಂತನೊಬ್ಬನ ತಾಮಸ ಗುಣಕ್ಕೆ ಒಂದು ಉದಾಹರಣೆ ಮಾತ್ರ. ಅಲ್ಲದೆ ಮಂಗಳೂರಿನ ಕೆಲವು ಭಾಗಗಳ ಮುಸಲ್ಮಾನರು
ತಾವು ಟಿಪ್ಪು ಕಾಲದಲ್ಲಿ ಮತಾಂತರವಾದ ನಾಯರ್‌ಗಳು ಎಂದು ಹೇಳಿಕೊಳ್ಳುತ್ತಾರೆ. ಅಂತಹವರು ಇಂದೂ ಕಾಣ ಸಿಗುತ್ತಾರೆ. ವಿಚಿತ್ರವೆಂದರೆ ಟಿಪ್ಪು ಎಲ್ಲಾ ಮತಾಂಧ ಕೆಲಸಗಳನ್ನು‘ಬಾದಶಹ’ನಾಗಿಯೇ ಮಾಡಿದ್ದ. ಅದನ್ನು ನಮ್ಮ ಸರಕಾರದ
ಸಚಿವರು ‘ಸಂತ’ ಎಂದುಬಿಡುತ್ತಾರೆ.
೨೦೦೧ರಲ್ಲಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಹೈದರ್ ಮತ್ತು ಟಿಪ್ಪು ಬಗ್ಗೆ
ಪ್ರಶಂಸೆಯ ಭಾಷಣ, ವಿಚಾರಸಂಕಿರಣಗಳು ನಡೆದುವು.ಜಾಹೀರಾತುಗಳಲ್ಲಿ ಟಿಪ್ಪು ವಿರಾಜಮಾನನಾದ. ಏಕೆಂದರೆ
ಸರ್ಕಾರವೇ ಖುದ್ದು ಟಿಪ್ಪುವಿನ ಮರಣದ ದ್ವಿಶತಮಾನೋತ್ಸವವನ್ನು ಆಚರಿಸಲು ಮನಸ್ಸು ಮಾಡಿತ್ತು. ಆಗಲೂ ವಿರೋಧ ವ್ಯಕ್ತವಾಗಿತ್ತು. ದೇವನಹಳ್ಳಿಯಲ್ಲಿ ಹುಟ್ಟಿದನೆಂಬ ಕಾರಣಕ್ಕೆ ವಿಮಾನ ನಿಲ್ದಾಣಕ್ಕೂ ಆತನ ಹೆಸರಿಡಬೇಕೆಂದು ಉಗ್ರ ಭಾಷಣಗಳಾದಾಗಲೂ ವಿರೋಧ ವ್ಯಕ್ತವಾಗಿತ್ತು. ಟಿಪ್ಪುವಿನ ಕನ್ನಡ ಪ್ರೇಮದ ಬಗ್ಗೆಯೂಶೋಧಗಳಾದವು. ಹುಸಿ ಎಂದು ಸಾಬೀತಾದವು. ಆದರೂಆತನನ್ನು ಏಕಾಏಕಿ ಸಂತ ಎಂದು ಬಣ್ಣಿಸುವ ಉಮೇದೇಕೆ? ಹಾಗಂದ ಸಚಿವರಿಗೆ ಮಡಿಕೇರಿಯಲ್ಲಿ ಸಿಪಾಯಿಗಳುಕಾಣಲಿಲ್ಲವೇ? ಬಲಿದಾನಿಗಳು ಜ್ಞಾಪಕಕ್ಕೆ ಬರಲಿಲ್ಲವೆ? ಇನ್ನೂ ಮುರಿದ ಸ್ಥಿತಿಯಲ್ಲೇ ಇರುವ ದೇವಸ್ಥಾನಗಳು, ನಿರ್ವಂಶವಾಗಿರುವ ಕೊಡವ ಕುಟುಂಬಗಳು ಕಾಣಲಿಲ್ಲವೇ? ನಾಡಿನ ಹಬ್ಬ ‘ಹುತ್ತರಿ’ಗೆ ರಜೆ ಕೊಡದ ಸರ್ಕಾರಗಳಿಗೆ ಟಿಪ್ಪು ಜನ್ಮದಿನವನ್ನು ಆಚರಿಸುವ ಮನಸ್ಸು ಬಂದುಬಿಡುತ್ತದಲ್ಲ.ಜನರಲ್ ತಿಮ್ಮಯ್ಯ, ?ಫೀಲ್ಡ್ ಮಾರ್ಶಲ್ ಕಾರ್ಯಪ್ಪನವರ ಜನ್ಮಶತಮಾನೋತ್ಸವವೇ ನೆನಪಾಗದ ಸರ್ಕಾರಗಳಿಗೆ ಮನೆಹಾಳ ಟಿಪ್ಪು ನೆನಪಿಗೆ ಬರುತ್ತಾನೆಂದರೆ ಇದಕ್ಕೇನನ್ನಬೇಕು?
ಮಾನ್ಯ ಸಚಿವರೇ ಖಂಡಿತ ಟಿಪ್ಪು ಜನ್ಮದಿನವನ್ನು ಆಚರಿಸೋಣ. ಅದಕ್ಕೂ ಮೊದಲು ಮಡಿಕೇರಿಗೆ ಟಿಪ್ಪು ಇಟ್ಟ ಹೆಸರು
‘ಜಾಫರಾಬಾದ್’ ಅನ್ನೇ ಮರುನೇಮಕ ಮಾಡೋಣ. ಲಾಡೆನ್ನನ್ನೂ ಸಂತನೆಂದು ಘೋಷಿಸೋಣ. ಸತ್ಯಮಂಗಲ ಅರಣ್ಯಕ್ಕೂವೀರಪ್ಪನ್ ರಾಷ್ಟ್ರೀಯ ಉದ್ಯಾನವನ ಎಂದೂ ನಾಮಕರಣ ಮಾಡೋಣ.
ಸಂವೇದನಾಶೀಲರನ್ನು ಕಟುವಾಗಿ ವಿರೋಧಿಸಬಾರದಲ್ಲಾ.?