ಟಿಪ್ಪುಎಂಬಸುಲ್ತಾನಈಗಕೇವಲಮೈಸೂರು,ಶ್ರೀರಂಗಪಟ್ಟಣ,ಗಂಜಾಂಗಳಿಗೆಮಾತ್ರಸೀಮಿತವಾಗಿಲ್ಲ.ಮೈಸೂರುಕದನಗಳಿಂದಆತನಬದುಕುಮುಗಿದೂಹೋಗಿಲ್ಲ.ಇತಿಹಾಸದಪುಟಗಳಲ್ಲಿಮಲಗಿ,ಕಿರುತೆರೆಗೆಹಾರಿ,ಹೊಸವೇಷಧರಿಸಿಕೊಂಡುಆಗಾಗ್ಗೆಟಿಪ್ಪುಸುದ್ದಿಯಾಗುತ್ತಾನೆ.ಒಬ್ಬಯೋಗ್ಯವ್ಯಕ್ತಿಯೂ ಟಿಪ್ಪುಶ್ರೇಷ್ಟಅರಸನಾಗಿಸುದ್ದಿಯಾಗುತ್ತಾನೆ.ಹೊಗಳಲ್ಪಡುತ್ತಾನೆ.ವಿವಾದಗಳಾಗುತ್ತವೆ. ಏನೇನೋ ಬೇಡಿಕೆಗಳಾಗುತ್ತವೆ. ಇತ್ತೀಚಿನಕೆಲ ವರ್ಷಗಳಿಂದಂತೂ ಹೊಗಳಿಕೆ ತಾರಕಕ್ಕೇರಿ ರಾಜಕಾರಣಿಗಳು,ಪತ್ರಕರ್ತರು, ಚಿಂತಕರೆಂದೂ ಕರೆಯಲ್ಪಡುವವರೆಲ್ಲರೂ ಟಿಪ್ಪುಗುಣಗಾನಕ್ಕೆ ನಿಂತುಬಿಟ್ಟಿದ್ದಾರೆ.
ಮೊನ್ನೆ ತಾನೇ ಆ ಪಾಳಿಯಲ್ಲಿ ನಿಂತವರು ಪ್ರೊ ಮುಮ್ತಾಜ್ಆಲಿ ಖಾನ್. ಅಲ್ಪಸಂಖ್ಯಾತ ಮತ್ತು ವಕ್ಫ್ ಖಾತೆಯ ಸಚಿವರು. ಸಜ್ಜನ ಮುಸಲ್ಮಾನ ಸದ್ಗೃಹಸ್ಥರು.ಚಿಂತಕರು.ಬಹುಭಾಷಾ ಬರಹಗಾರರು. ಮುಸಲ್ಮಾನರಾದರೂ ಸಂವೇದನಾಶೀಲರು.ಭಯೋತ್ಪಾದನೆ, ಹೆಚ್ಚುತ್ತಿರುವ ಮುಸಲ್ಮಾನರ ಕ್ರೌರ್ಯಗಳನ್ನು ಧೈರ್ಯದಿಂದ ಟೀಕಿಸಿದವರು. ಹೆಮ್ಮಕ್ಕಳ ಶಿಕ್ಷಣ ಮತ್ತು ಮುಸಲ್ಮಾನರ ವಿದ್ಯಾಭ್ಯಾಸಕ್ಕೆ ಒತ್ತು ನೀಡಿದವರು.ಶಿಕ್ಷಣ ತಜ್ಞರು. ಅಂಥ ಮುಮ್ತಾಜ್ ಆಲಿ ಖಾನ್ ಸಾಹೇಬರು ಮೊನ್ನೆ ಮಡಿಕೇರಿಯಲ್ಲೇ ಟಿಪ್ಪು ಗುಣಗಾನ ಮಾಡಿದ್ದರು.ಅದೂ ಭಯಾನಕವಾಗಿ. “ಟಿಪ್ಪು ಒರ್ವ ಅರಸನಷ್ಟೇ ಅಲ್ಲ .ಆತನೊಬ್ಬ ಸಂತ ಕೂಡ. ಆತನ ಜನ್ಮದಿನಾಚರಣೆಯನ್ನು ಸರಕಾರ ಆಚರಿಸಬೇಕು. ನಾನು ಮಾನ್ಯ ಮುಖ್ಯಮಂತ್ರಿಗಳಿಗೆ ಈ ಬಗ್ಗೆ ಮನವಿ ಮಾಡುತ್ತೇನೆ."ಎಂದಿದ್ದರು. ಅಷ್ಟರವರೆಗೆ ಮುಮ್ತಾಜ್ ಆಲಿ ಖಾನರೆಂದರೆ ಅಂಥವರು, ಇಂಥವರು, ದೊಡ್ಡವರು ಎಂದುಕೊಂಡವರಿಗೂ ಒಮ್ಮೆ ಸಾಹೇಬರು ಹಾಗಂದರಾ ಎನಿಸಿದ್ದು ಸುಳ್ಳಲ್ಲ. ಓರ್ವ ಕಾಂಗ್ರೆಸಿಗನೋ ಕಮ್ಯುನಿಷ್ಟನೋ
ಮತಾಂಧನೋ ಮಾತ್ರ ಹೇಳಬಹುದಾದ ಮಾತನ್ನು ಮುಮ್ತಾಜ್ ಆಲಿ ಖಾನರಂಥವರು ಹೇಳುವುದೆಂದರೆ ಏನನ್ನಬೇಕು? ಯಾವ
ಟಿಪ್ಪುವನ್ನು ಕೊಡಗಿನ ಜನತೆ ಮರೆಯಬೇಕೆಂದಿದ್ದರೋ, ಯಾವ ಟಿಪ್ಪುವಿನ ಹೆಸರನ್ನು ತಮ್ಮ ಮನೆಯ ನಾಯಿಗೆ ಇಟ್ಟಿದ್ದರೋ,
ಯಾವ ಟಿಪ್ಪುವಿನ ಕ್ರೌರ್ಯದ ಕುರುಹುಗಳು ಇಂದೂ ಕೊಡಗಿನ ಊರೂರುಗಳಲ್ಲಿದೆಯೋ, ಯಾವ ಟಿಪ್ಪು ಕೊಡಗಿನ ಪಾಲಿನ
ರಕ್ಕಸನೋ ಅಂಥಾ ಟಿಪ್ಪುವನ್ನು ಸಂತನ ಪಟ್ಟಕ್ಕೇರಿಸಿ , ಆತ ಹುಟ್ಟಿದ ದಿನದಂದು ಧ್ಯಜ ಹಾರಿಸಿ, ಮಕ್ಕಳಿಂದ ಭಾಷಣ ಮಾಡಿಸುವ
ಉದ್ದೇಶ ತಾಲಿಬಾನ್ ಆಳ್ವಿಕೆಗಿಂತ ಭಿನ್ನವೇನಲ್ಲ. ಜಗತ್ತಿನಲ್ಲಿ ಹಿಟ್ಲರನನ್ನು, ಲಾಡೆನ್ನನನ್ನು, ಇದಿ ಅಮೀನನನ್ನು ರಕ್ಕಸರೆನ್ನಲು
ಕಾರಣಗಳು ಸಿಗಬೇಕಾದರೆ ಅದರಪ್ಪನಂತಹ ಟಿಪ್ಪುವನ್ನು ಕಿರಾತಕನೆನ್ನಲು ಕಾರಣಗಳು ಕೊಡಗಿನಲ್ಲೇ ಸಿಗುತ್ತವೆ.
೪೦ ಸಾವಿರ ಕೊಡವರನ್ನು ತರಿದ ಸಾಕ್ಷಿಗಳು, ಅಷ್ಟೇ ಸಂಖ್ಯೆಯ ಕೊಡವರನ್ನು ಮತಾಂತರಿಸಿ ತನ್ನ ‘ಅಹಮದಿ’
ಸೈನ್ಯಕ್ಕೆ ಸೇರಿಸಿಕೊಂಡ ಸಾಕ್ಷಿಗಳು, ನೂರಾರು ದೇವಸ್ಥಾನಗಳನ್ನು ಕೆಡವಿದ ಸಾಕ್ಷಿಗಳು ಕೊಡಗಿನ ಊರೂರಲ್ಲೂ ಇದೆ. ತಮ್ಮ
ಪೂರ್ವಜರನ್ನು ಮುಗಿಸಿದ ದುಷ್ಟನನ್ನು ಕೊಡವರು ಆರಾಧಿಸಬೇಕೇ? ಒಂದು ಬರಹಕ್ಕೆ ಸಂಶೋಧನೆ ಮಾಡುವ ಸಚಿವರು
ಟಿಪ್ಪು ಬಗ್ಗೆ ತಿಳಿದುಕೊಳ್ಳಲಾರದೇ ಹೋದದ್ದು ದುರದೃಷ್ಟಕರವೇ ಸರಿ. ಟಿವಿ ಸೀರಿಯಲ್ಗಳು, ಕಮ್ಯುನಿಸ್ಟ್ ಪುಸ್ತಕಗಳು, ಕಾಂಗ್ರೆಸ್
ಭಾಷಣಗಳು ಏನೇ ಹೇಳಿದರೂ ವಾಸ್ತವ ವಾಸ್ತವವೇ. ಅದು ಬದಲಾಗದು. ಅದು ಮರೆಯಾಗಿರಬಹುದಷ್ಟೆ ಹೊರತು,
ಸಂಪೂರ್ಣ ನಶಿಸಿಹೋಗದು. ಟಿಪ್ಪು ಚರಿತ್ರೆ ಅಂತದ್ದರಲ್ಲಿ ಒಂದಷ್ಟೆ. ಭಾಷೆಯ ಮೊರೆಹೋಗಿಯೋ , ಕಥನದ ಶೈಲಿ ಅನುಸರಿಸಿಯೋ ಟಿಪ್ಪುವನ್ನು ಹೀರೋ ಮಾಡಬಹುದು. ಆದರೆ ಆತನ ಯುದಟಛಿಗಳ ಪರಿಣಾಮ ಮತ್ತು ಆಕ್ರಮಣ-ಲೂಟಿಗಳ ಪರಿಣಾಮಗಳು ನೈಜ ಟಿಪ್ಪುವನ್ನು ತೆರೆದಿಡುತ್ತವೆ. ಆದರೂ ಹಲವರಿಗೆ ಆತ ‘ಸಂತ’ ನಂತೆ ಕಂಡುಬರುತ್ತಾನೆ.
ಸಂತ! ಅದೂ ಟಿಪ್ಪು! ಯುದಟಛಿ ನಿಲ್ಲಿಸಿದ್ದಕ್ಕೇನು? ಬೈರಾಗಿಯಾಗಿದ್ದಕ್ಕೇನು? ತಜ್ಞನಾಗಿದ್ದಕ್ಕೇನು? ಅಥವಾ ಜ್ಞಾನಿ,ಸರ್ವಸಂಗ ಪರಿತ್ಯಾಗಿಯಾಗಿದ್ದಕ್ಕೇನು? ಯಾವ ಗುಣವನ್ನು ಕಂಡು ಸಚಿವರು ಆತನಿಗೆ ಇಂತದ್ದೊಂದು ಪಟ್ಟ ಕಟ್ಟಿದರು? ಟಿಪ್ಪುವನ್ನು ಸಂತ
ಎನ್ನುವುದಾದರೆ, ಲಾಡೆನ್ನನ್ನು ಸಂತ ಎನ್ನಲೇಬೇಕು. ಟಿಪ್ಪುವನ್ನು ಸಂತ ಎನ್ನುವುದಾದರೆ ಸಂತತ್ವದ ವ್ಯಾಖ್ಯಾನವೇ ಬದಲಾಗಬೇಕು.ಟಿಪ್ಪುವನ್ನು ಸಂತ ಎನ್ನುವುದಾದರೆ ಈಗಿರುವ ಸಂತರೆಲ್ಲರೂ ದುಷ್ಟರಾಗಲೇಬೇಕು. ಟಿಪ್ಪುವನ್ನು ಸಂತ ಎನ್ನುವುದಾದರೆ ಸಂತರಲ್ಲದವರು ಯಾರೂ ಜಗದಲ್ಲಿರಲಿಕ್ಕಿಲ್ಲ. ಅಷ್ಟಕ್ಕೂ ಹೇಗೆ ತಾನೆ ಟಿಪ್ಪು ಸಂತನಾಗಬಲ್ಲ? ಟಿಪ್ಪು ಮತ್ತು ಆತನ ತಂದೆ ಹೈದರಾಲಿಯ ಇತಿಹಾಸ ದಾಖಲೆಗಳೇ ಸರ್ಕಾರದ ಬಳಿ ಹೆಚ್ಚಳವಾಗಿವೆ. ಅನ್ನೂ ಸಚಿವರು ಅಧ್ಯಯನ ಮಾಡಬಹುದಲ್ಲವೆ? ಅಧ್ಯಯನವಿಲ್ಲದೆ ಮಾತನಾಡುವುದು ಅವರ ಬಿರುದಾವಳಿಗಳಿಗೆ ಶೋಭೆಯೇ?
ಟಿಪ್ಪು ದಕ್ಷಿಣ ಭಾರತಾದ್ಯಂತ ಅಂದರೆ ಮಂಗಳೂರು,ಕೊಡಗು, ವೈನಾಡು, ಕಣ್ಣಾನೂರು, ಕೊಚ್ಚಿ, ತಿರುವಾಂಕೂರು,ತಂಜಾವೂರು, ಕೊಯಮತ್ತೂರು, ಹೊನ್ನಾರವ ವ್ಯಾಪ್ತಿಯಲ್ಲಿ ನಾಶ ಮಾಡಿದ ದೇವಸ್ಥಾನಗಳ ಸಂಖ್ಯೆ ಕೇವಲ ಎಂಟು ಸಾವಿರ! ಇದನ್ನು ಶೋಧಿಸಿದವರು ಯಾರೋ ಆರೆಸ್ಸೆಸ್ನವರಲ್ಲ. ಚಿದಾನಂದಮೂರ್ತಿಗಳಂತೂ ಅಲ್ಲವೇ ಅಲ್ಲ. ಅದು ‘ಮೈಸೂರು
ಗೆಜೆಟಿಯರ್’ನಲ್ಲಿ ದಾಖಲಾದ ಅಧಿಕೃತ ದಾಖಲೆ. ಅದನ್ನು ದಾಖಲಿಸಿದವರು ಲೂಯಿಸ್ ರೈಸ್ರಂತ ವಿದ್ವಾಂಸರು.೧೭೮೯ರಲ್ಲಿ ತನ್ನ ವಶದಲ್ಲಿದ್ದ ಅಸಂಖ್ಯ ಯುದಟಛಿ ಖೈದಿಗಳನ್ನು ಟಿಪ್ಪುಬಲಾತ್ಕಾರವಾಗಿ ಮತಾಂತರಿಸಿದ. ಅದರಲ್ಲಿ ೪೦ ಸಾವಿರದಷ್ಟು ಕೊಡವರೇ ಇದ್ದರು. ಇದನ್ನು ದಾಖಲಿಸಿದವರು ಬುಖಾನನ್ ಎಂಬ ಆಂಗ್ಲ.
ಕೊಡಗನ್ನು ದಾಟಿ ಮಲಾಬಾರ್ ಪ್ರವೇಶಿಸಿದ ಟಿಪ್ಪು ಒಂದು ಫರ್ಮಾನನ್ನು ಹೊರಡಿಸಿದ. “ಪ್ರತಿಯೊಬ್ಬರೂ ಇಸ್ಲಾಂ ಅನ್ನು ಕಡ್ಡಾಯವಾಗಿ ಪಾಲಿಸಬೇಕು...ಇದಕ್ಕೆ ವಿರುದ್ದವಾದವರನ್ನು ಸುಡಲಾಗುವುದು. ತಪ್ಪಿಸಿಕೊಂಡವರನ್ನು ಹುಡುಕಿ ಹುಡುಕಿ
ಶಿಕ್ಷಿಸಲಾಗುವುದು." ಅದರ ಉಲ್ಲೇಖ ‘ಮಲಾಬಾರ್ ಮ್ಯಾನುಯಲ್’ನ ಪುಟ ಸಂಖ್ಯೆ ೧೦ರಲ್ಲಿ ಇಂದು ಇದೆ. ಇದೆಲ್ಲ
ಏನನ್ನು ಸೂಚಿಸುತ್ತದೆ? ಇದೇ ಏನು ಟಿಪ್ಪುವಿನ ಸಂತ ಗುಣ? ಖಡ್ಗ ಹಿಡಿದು ಹೆದರಿಸಿ, ತನ್ನ ಮತದ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಟಿಪ್ಪು ಇಸ್ಲಾಮಿನ ಪ್ರಕಾರ ‘ಸಂತ’ ಎನಿಸಿಕೊಳ್ಳುವವನೇ? ಹಾಗಾದರೆ ಹೀಗೆ ಮಾಡಿದವರೆಲ್ಲರೂ ಇಸ್ಲಾಮಿನಲ್ಲಿ ಸಂತರೇ? ಇಸ್ಲಾಂ ಸಂತರೆಲ್ಲರೂ ಇಂತಹವರೇ? ಇಷ್ಟನ್ನು ಕೇಳಿಕೊಂಡಿದ್ದರೂ ಪ್ರೊ. ಮುಮ್ತಾಜ್ ಆಲಿಖಾನ್ರಿಗೆ ಸಾಕಿತ್ತು.
ಇವು ದಾಖಲೆಗಳ ಮಾತಾದವು. ಇನ್ನು ಕೆಲವು ಊರುಗಳಿಗೆಹೋದರಂತೂ ಟಿಪ್ಪುವಿನ ‘ಘನಾಂಧಾರಿ ಕೆಲಸ’ ಅಲ್ಲಲ್ಲಿ
ಕಂಡುಬರುತ್ತವೆ. ಅದೊಂದು ಪವಿತ್ರ ದಿನವಾಗಿತ್ತು. ನರಕಚತುರ್ಥಿಯ ಸಿದಟಛಿತೆ ಅಲ್ಲಿ ನಡೆದಿತ್ತು. ಶ್ರೀರಂಗಪಟ್ಟಣಕ್ಕೆ ಹಬ್ಬದ ಕಳೆ ಎಂದರೆ ಹಾಗೆಯೆ. ರಂಗನಾಥನಿಗೆ ಪೂಜೆ, ಕಾವೇರಿಯ ಜಳಕ, ಅನಂತರ ತೀರ್ಥಪ್ರಸಾದಗಳು ಅಲ್ಲಿಂದ ಮೈಸೂರು ಅರಮನೆಗೆ ಗಾಡಿಗಳಲ್ಲಿ ಹೋಗುತ್ತಿದ್ದವು. ಅಂಥ ಒಂದು ದಿನ ದಂಡಿನ ಸಮೇತ ಬಂದ ಟಿಪ್ಪು ಮೈಸೂರು ಅರಸರ ಬಂಧುಗಳಾಗಿದ್ದರೆಂಬ ಒಂದೇ ಒಂದು ಕಾರಣಕ್ಕೆ ತಿರುಮಲರಾವ್, ನಾರಾಯಣರಾವ್, ಸುಬ್ಬರಾಜೇ ಅರಸರವರ ಬೃಹತ್ ಸಂಖ್ಯೆಯ ಅವಿಭಕ್ತ ಕುಟುಂಬಗಳ ಒಟ್ಟು
೭೦೦ ಮಂದಿಯನ್ನು ರಂಗನಾಥ ದೇವಾಲಯದ ಎದುರಿನ ಹುಣಸೇ ತೋಪಿನಲ್ಲಿ ಮರಗಳಿಗೆ ನೇತುಹಾಕಿಸಿದ್ದ. ನೇಣುಹಾಕುವ
ಹಗ್ಗಗಳನ್ನು ಟಿಪ್ಪು ಎತ್ತಿನ ಗಾಡಿಯಲ್ಲೇ ತಂದಿದ್ದ. ಇಂಥವನು ಸಂತನೆನಿಸಿಕೊಳ್ಳಲರ್ಹನೇ? ಅಂದು ಟಿಪ್ಪು ನಡೆಸಿದ ಈ ದಾಳಿಯಿಂದ
ಹಬ್ಬದ ಸಡಗರ ಸ್ಮಶಾನವಾಯಿತು. ಅದರ ಕಾರಣವಾಗಿ ಇಂದೂ ಆ ಬಂಧುಗಳ ಪರಿವಾರದವರು ನರಕಚತುರ್ಥಿ,
ದೀಪಾವಳಿಗಳನ್ನು ಆಚರಿಸಿಕೊಳ್ಳುತ್ತಿಲ್ಲ. ಇಂಥವ ಸಂತನೇ? ಹೀಗೆ ಹಬ್ಬದ ಮನೆಯನ್ನು ಸಾವಿನ ಮನೆಯಾಗಿ ಮಾಡಿದವನಿಗೆ
ದಿನಾಚರಣೆ ಮಾಡಿ ಗೌರವ ಸೂಚಿಸಬೇಕು ಎಂದಾದರೆ,ವೀರಪ್ಪನ್ಗೂ ದಾವೂದ್ಗೂ ಸನ್ಮಾನ ಮಾಡಬೇಕು,
ದಿನಾಚರಣೆಯನ್ನು ಮಾಡಬೇಕು. ಏಕೆಂದರೆ ಕ್ರೌರ್ಯಕ್ಕೆ ಬೇರೆ ಅರ್ಥಗಳಿಲ್ಲ. ಅದರಲ್ಲಿ ವ್ಯತ್ಯಾಸಗಳಿಲ್ಲ. ಅಲ್ಲಿ ವಾಹಕರಿಗಿಂತ
ಕ್ರೌರ್ಯವೇ ಸದಾ ವಿಜೃಂಭಿಸುತ್ತದೆ. ಕೊಡಗಿನಲ್ಲಂತೂ ಟಿಪ್ಪು ಮಾಡಿದ ದಾಳಿ ಉತ್ತರದ ಮೊಗಲರನ್ನು
ನೆನಪಿಸುತ್ತದೆ. ದೇವಸ್ಥಾನಗಳ ಧ್ವಂಸದ ತೀವ್ರತೆ ಎಷ್ಟಿತ್ತೆಂದರೆ,ದೇಗುಲದ ಅರ್ಚಕರೇ ಖಾಲಿಯಾಗಿ ಹೋದರು. ಕೆಲವು
ದೇವಸ್ಥಾನಗಳು ಬಾಗಿಲು ಮುಚ್ಚಿದವು. ಅಂತಹ ಸಂದರ್ಭದಲ್ಲಿ ಮದ್ಯಮಾಂಸ ಸೇವಕರಾದ ಕೊಡವರೇ ಅವುಗಳನ್ನು ತ್ಯಜಿಸಿ
ದೇವಸ್ಥಾನದಲ್ಲಿ ಪೂಜೆಗೆ ನಿಂತ ಉದಾಹರಣೆಗಳು ಹಲವಿವೆ. ಅವುಗಳ ಕುರುಹುಗಳು, ಕಥೆಗಳಿವೆ. ಹೀಗೆ ಒಂದುದಿನ ಕೊಡಗಿಗೆ
ಬಂದ ಟಿಪ್ಪು ಮಧ್ಯ ಕೊಡಗಿನ ದೇವಸ್ಥಾನವೊಂದರ ಪ್ರಾಂಗಣಕ್ಕಿಳಿದ.ಹೆಂಚಿಗೆ ಕೈ ಇಕ್ಕಿದ್ದೇ ತಡ ಹೆಜ್ಜೇನುಗಳ ದಾಳಿಯಾಯಿತು. ಟಿಪ್ಪುಮತ್ತು ಆತನ ಸೈನ್ಯ ಆಯುಧಗಳನ್ನು ಬಿಸಾಡಿ ‘ಕಡಿಯತ್ತ ನಾಡೇ’(ಕಚ್ಚುವ ಊರು) ಎಂದು ಬೊಬ್ಬೆಹಾಕುತ್ತಾ ಪಲಾಯನ ಮಾಡಿದರಂತೆ.ನಿಜ, ಇಂದು ಅದನ್ನು ಕಂಡವರು ಬದುಕಿಲ್ಲ. ಆದರೆ ಅಂದು ಹೆಜ್ಜೇನುಗಳ ದಾಳಿಯಿಂದ ತತ್ತರಿಸಿದ ಸೈನಿಕರು ಬಿಸಾಡಿದ ಕತ್ತಿ-ಗುರಾಣಿ-ಈಟಿಗಳು ಇಂದು ಆ ದೇವಸ್ಥಾನದಲ್ಲಿವೆ. ಆ ಊರು ಇಂದು ‘ಕಡಿಯತ್ತ ನಾಡು’ ಎಂದೇ ಕರೆಸಿಕೊಳ್ಳುತ್ತಿವೆ.
ಇದು ಸಂತನೊಬ್ಬನ ತಾಮಸ ಗುಣಕ್ಕೆ ಒಂದು ಉದಾಹರಣೆ ಮಾತ್ರ. ಅಲ್ಲದೆ ಮಂಗಳೂರಿನ ಕೆಲವು ಭಾಗಗಳ ಮುಸಲ್ಮಾನರು
ತಾವು ಟಿಪ್ಪು ಕಾಲದಲ್ಲಿ ಮತಾಂತರವಾದ ನಾಯರ್ಗಳು ಎಂದು ಹೇಳಿಕೊಳ್ಳುತ್ತಾರೆ. ಅಂತಹವರು ಇಂದೂ ಕಾಣ ಸಿಗುತ್ತಾರೆ. ವಿಚಿತ್ರವೆಂದರೆ ಟಿಪ್ಪು ಎಲ್ಲಾ ಮತಾಂಧ ಕೆಲಸಗಳನ್ನು‘ಬಾದಶಹ’ನಾಗಿಯೇ ಮಾಡಿದ್ದ. ಅದನ್ನು ನಮ್ಮ ಸರಕಾರದ
ಸಚಿವರು ‘ಸಂತ’ ಎಂದುಬಿಡುತ್ತಾರೆ.
೨೦೦೧ರಲ್ಲಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಹೈದರ್ ಮತ್ತು ಟಿಪ್ಪು ಬಗ್ಗೆ
ಪ್ರಶಂಸೆಯ ಭಾಷಣ, ವಿಚಾರಸಂಕಿರಣಗಳು ನಡೆದುವು.ಜಾಹೀರಾತುಗಳಲ್ಲಿ ಟಿಪ್ಪು ವಿರಾಜಮಾನನಾದ. ಏಕೆಂದರೆ
ಸರ್ಕಾರವೇ ಖುದ್ದು ಟಿಪ್ಪುವಿನ ಮರಣದ ದ್ವಿಶತಮಾನೋತ್ಸವವನ್ನು ಆಚರಿಸಲು ಮನಸ್ಸು ಮಾಡಿತ್ತು. ಆಗಲೂ ವಿರೋಧ ವ್ಯಕ್ತವಾಗಿತ್ತು. ದೇವನಹಳ್ಳಿಯಲ್ಲಿ ಹುಟ್ಟಿದನೆಂಬ ಕಾರಣಕ್ಕೆ ವಿಮಾನ ನಿಲ್ದಾಣಕ್ಕೂ ಆತನ ಹೆಸರಿಡಬೇಕೆಂದು ಉಗ್ರ ಭಾಷಣಗಳಾದಾಗಲೂ ವಿರೋಧ ವ್ಯಕ್ತವಾಗಿತ್ತು. ಟಿಪ್ಪುವಿನ ಕನ್ನಡ ಪ್ರೇಮದ ಬಗ್ಗೆಯೂಶೋಧಗಳಾದವು. ಹುಸಿ ಎಂದು ಸಾಬೀತಾದವು. ಆದರೂಆತನನ್ನು ಏಕಾಏಕಿ ಸಂತ ಎಂದು ಬಣ್ಣಿಸುವ ಉಮೇದೇಕೆ? ಹಾಗಂದ ಸಚಿವರಿಗೆ ಮಡಿಕೇರಿಯಲ್ಲಿ ಸಿಪಾಯಿಗಳುಕಾಣಲಿಲ್ಲವೇ? ಬಲಿದಾನಿಗಳು ಜ್ಞಾಪಕಕ್ಕೆ ಬರಲಿಲ್ಲವೆ? ಇನ್ನೂ ಮುರಿದ ಸ್ಥಿತಿಯಲ್ಲೇ ಇರುವ ದೇವಸ್ಥಾನಗಳು, ನಿರ್ವಂಶವಾಗಿರುವ ಕೊಡವ ಕುಟುಂಬಗಳು ಕಾಣಲಿಲ್ಲವೇ? ನಾಡಿನ ಹಬ್ಬ ‘ಹುತ್ತರಿ’ಗೆ ರಜೆ ಕೊಡದ ಸರ್ಕಾರಗಳಿಗೆ ಟಿಪ್ಪು ಜನ್ಮದಿನವನ್ನು ಆಚರಿಸುವ ಮನಸ್ಸು ಬಂದುಬಿಡುತ್ತದಲ್ಲ.ಜನರಲ್ ತಿಮ್ಮಯ್ಯ, ?ಫೀಲ್ಡ್ ಮಾರ್ಶಲ್ ಕಾರ್ಯಪ್ಪನವರ ಜನ್ಮಶತಮಾನೋತ್ಸವವೇ ನೆನಪಾಗದ ಸರ್ಕಾರಗಳಿಗೆ ಮನೆಹಾಳ ಟಿಪ್ಪು ನೆನಪಿಗೆ ಬರುತ್ತಾನೆಂದರೆ ಇದಕ್ಕೇನನ್ನಬೇಕು?
ಮಾನ್ಯ ಸಚಿವರೇ ಖಂಡಿತ ಟಿಪ್ಪು ಜನ್ಮದಿನವನ್ನು ಆಚರಿಸೋಣ. ಅದಕ್ಕೂ ಮೊದಲು ಮಡಿಕೇರಿಗೆ ಟಿಪ್ಪು ಇಟ್ಟ ಹೆಸರು
‘ಜಾಫರಾಬಾದ್’ ಅನ್ನೇ ಮರುನೇಮಕ ಮಾಡೋಣ. ಲಾಡೆನ್ನನ್ನೂ ಸಂತನೆಂದು ಘೋಷಿಸೋಣ. ಸತ್ಯಮಂಗಲ ಅರಣ್ಯಕ್ಕೂವೀರಪ್ಪನ್ ರಾಷ್ಟ್ರೀಯ ಉದ್ಯಾನವನ ಎಂದೂ ನಾಮಕರಣ ಮಾಡೋಣ.
ಸಂವೇದನಾಶೀಲರನ್ನು ಕಟುವಾಗಿ ವಿರೋಧಿಸಬಾರದಲ್ಲಾ.?

2 comments:
Hai Brother, we are Prasad & Sunil, from Gonikoppal.
you wrote the out standing article about Tippu Ideot(Not Sulthan). We proud of you . Keep rocking.
gud luck...
ಇತಿಹಾಸದ ಪುಟಗಳ ಮಾಹಿತಿಯನ್ನು ಆದಾಹಾರ ಸಹಿತ ಮಂಡಿಸಿದ್ದೀರಿ, ಲೆವಿಸ್ ರೈಸ್ , ಹಯವದನ ರಾವ್, ಬುಕನನ್ ಮುಂತಾದವರ ಗೆಜೆತೇರ್ ನನ್ನ ಬಳಿಯೂ ಇವೆ, ನಿಮ್ಮ ಮಾಹಿತಿ ತಾಳೆಯಾಗುತ್ತದೆ. ಆದರೆ ೭೦೦ ಮಂದಿಯನ್ನು ರಂಗನಾಥ ದೇವಾಲಯದ ಎದುರಿನ ಹುಣಸೇ ತೋಪಿನಲ್ಲಿ ಮರಗಳಿಗೆ ನೇತುಹಾಕಿಸಿದ್ದ. ನೇಣುಹಾಕುವ
ಹಗ್ಗಗಳನ್ನು ಟಿಪ್ಪು ಎತ್ತಿನ ಗಾಡಿಯಲ್ಲೇ ತಂದಿದ್ದ. ಇಂಥವನು ಸಂತನೆನಿಸಿಕೊಳ್ಳಲರ್ಹನೇ? ಅಂದು ಟಿಪ್ಪು ನಡೆಸಿದ ಈ ದಾಳಿಯಿಂದ
ಹಬ್ಬದ ಸಡಗರ ಸ್ಮಶಾನವಾಯಿತು. ಅದರ ಕಾರಣವಾಗಿ ಇಂದೂ ಆ ಬಂಧುಗಳ ಪರಿವಾರದವರು ನರಕಚತುರ್ಥಿ,
ದೀಪಾವಳಿಗಳನ್ನು ಆಚರಿಸಿಕೊಳ್ಳುತ್ತಿಲ್ಲ ಈ ಮಾಹಿತಿ ಸರಿಯಲ್ಲ ವೆಂದು ನನ್ನ ಅನಿಸಿಕೆ. ಇದಕ್ಕೆ ಯಾವುದೇ ಆಧಾರವಿಲ್ಲ. ಇವತ್ತಿಗೂ ಶ್ರೀ ರಂಗಪಟ್ಟಣ ದಲ್ಲಿ ದೀಪಾವಳಿ ಆಚರಣೆ ನಿಂತಿಲ್ಲ, ಎಲ್ಲಾ ಕೂಮಿನವರೂ ದೀಪಾವಳಿ ಆಚರಣೆ ಮಾಡುತ್ತಿದ್ದಾರೆ. ಇನ್ನು 700 ಜನರನು ನಯುಹಾಕಿದ್ದು ಸಹ ಆದಾರವಿಲ್ಲದ ಮಾಹಿತಿ, ಶ್ರೀ ರಂಗ ನಾಥನ ದೇವಾಲಯದ ಬಳಿ ಹುಣಸೆ ಮರಗಳ ತೋಪು ಇರಲಿಲ್ಲ. ಸನಿಹದಲ್ಲಿ ಮೈಸೂರ ಅರಸರ ಹಳೆ ಅರಮನೆ ಇತ್ತು. ನನ್ನ ಸಂಬಂದಿಕರೂ ಸಹ ಹಲವಾರು ತಲೆಮಾರುಗಳಿಂದ ಅಲ್ಲೇ ವಾಸವಾಗಿದ್ದಾರೆ. ಆ ಕುಟುಂಬಗಳಿಗೆ ಸುಮಾರು ಇನ್ನೂರು ವರ್ಷಗಳಿಗೂ ಮೇಲ್ಪಟ್ಟ ಇತಿಹಾಸವಿದೆ. ಉಳಿದಂತೆ ನಿಮ್ಮ ಲೇಖನದ ಮತಾಂತರದ ವಿಚಾರದಲ್ಲಿ ಹಲವು ದಾಖಲೆಗಳು ಇರುವುದು ಸತ್ಯ.
.
Post a Comment