Tuesday, September 27, 2011

ಸೆಟ್ಲಾಗಬೇಕು ಎನ್ನುವವರ ನಡುವೆ ಎದೆಯೊಡ್ಡುವವರಿದ್ದಾರೆ


ಕಥೆಯನ್ನು ಬಹುಶಃ ಎಲ್ಲರೂ ಕೇಳಿರಬಹುದು. ಬಾಲಕ ಭಗತ್‌ಸಿಂಗ್ ಅಪ್ಪನೊಟ್ಟಿಗೆ ಹೊಲಗದ್ದೆಗಳಲ್ಲಿ ಹೆಜ್ಜೆ ಹಾಕುತ್ತಿದ್ದ. ಆತನದು ಕಂಡದ್ದಕ್ಕೆಲ್ಲಾ ಪ್ರಶ್ನಿಸುವ ಜಾಯಮಾನ. ಕೆಲವೊಮ್ಮೆ ತುಂಟತನದ, ಇನ್ನು ಕೆಲವೊಮ್ಮೆ ಅರ್ಥಗರ್ಭಿತ ಪ್ರಶ್ನೆಗಳು ಆತನಿಂದ ಪುಂಖಾನುಪುಂಖವಾಗಿ ಬರುತ್ತಿದ್ದವು. ಮಕ್ಕಳ ಪ್ರಶ್ನೆಗಳಿಗೆ ಗದರಬಾರದೆಂಬ ಸಂಸ್ಕಾರಯುತ ಕುಟುಂಬ ಭಗತ್‌ಸಿಂಗನದು. ಹಾಗಾಗಿ ಆತನ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳು ಸಿದ್ಧವಾಗಿಯೇ ಇರುತ್ತಿದ್ದವು. ಹಾಗೆ ಸಾಗುತ್ತಾ ಗದ್ದೆಯ ಗೋಧಿ ಪೈರುಗಳತ್ತ ಭಗತ್ ಕೈ ತೋರಿಸಿ, ‘ಇದೇನಿದು?’ ಎಂದು ಕೇಳಿದ. ಅಪ್ಪ ಗೋಧಿಯ ಬೀಜ, ಬೀಜದಿಂದ ಪೈರು ಮತ್ತೆ ಬೀಜವಾಗುವ ನಿಯಮವನ್ನು ವಿವರಿಸಿದ. ಎಲ್ಲಾ ವಿವರಿಸಿ ಹಿಂದೆ ನೋಡಿದಾಗ ಬಾಲಕನಿರಲಿಲ್ಲ. ಆತ ಮನೆಯಲ್ಲಿ ಬಂದೂಕೆಂದು ಆಟವಾಡುತ್ತಿದ್ದ ಕೋಲನ್ನು ಮಣ್ಣಿನಲ್ಲಿ ಹೂಳುತ್ತಿದ್ದ. ಆಗ ಅಪ್ಪ “ಏನು ಮಾಡುತ್ತಿರುವಿ?” ಎಂದು ಪ್ರಶ್ನಿಸಿದ. “ನಾನು ಬಂದೂಕು ಬೆಳೆಯುತ್ತಿದ್ದೇನೆ. ಇದೇ ಬಂದೂಕಿನಿಂದ ಬ್ರಿಟಿಷರನ್ನು ಓಡಿಸುತ್ತೇನೆ” ಎಂದು ಭಗತ್ ನುಡಿದಾಗ ಅಪ್ಪನಲ್ಲಿ ಉತ್ತರಗಳಿರಲಿಲ್ಲ. ಮುಂದೆ ಭಗತ್ ಸಿಂಗ್‌ನ ಬದುಕು ದೇಶಕ್ಕೆ ಮುಡಿಪಾಯಿತು.
ಬ್ರಿಟಿಷ್ ಪಾರ್ಲಿಮೆಂಟಿನಲ್ಲಿ ಇದೇ ಭಗತ್‌ಸಿಂಗ್ ಮುಂದೊಂದು ದಿನ ಬಾಂಬ್‌ಹಾಕಿದ್ದ. ಕ್ರಾಂತಿಕಾರಿಗಳ ತಂಡ ಹುಟ್ಟುಹಾಕಿದ್ದ. ಎಷ್ಟೋ ಹೋರಾಟಗಾರಿಗೆ ಮಾರ್ಗದರ್ಶಕನಾದ. ಬಾಂಬ್ ಸೋಟಿಸಿ ತಪ್ಪಿಸಿಕೊಳ್ಳುವ ಅವಕಾಶವಿದ್ದರೂ ನೇಣಿಗೇರಲೇಬೇಕೆಂಬ ತುಡಿತದಿಂದ ಬಂಧಿತನಾದ. ಚಿಕ್ಕವಯಸ್ಸಿನಲ್ಲೇ ಹುತಾತ್ಮ ನಾದ, ಮಹಾತ್ಮನಾದ. ಇಂಥ ಭಗತ್ ಸಿಂಗ್‌ನನ್ನು ನೇಣಿಗೇರಿಸಿ ಆಗಷ್ಟೇ ಒಂದು ವಾರವಾಗಿತ್ತು. ಲಾಹೋರಿನ ಕಾಂಗ್ರೇಸ್ ಅವೇಶನ ವಿಜೃಂಭಣೆಯಿಂದ ನಡೆಯುತ್ತಿತ್ತು. ಭಗತ್‌ಸಿಂಗ್ ಅಭಿಮಾನಿಗಳು ಕಪ್ಪು ಬಟ್ಟೆ ಪ್ರದರ್ಶಿಸಿದರು. ಲಾಹೋರಿಗರು ‘ಗಾಂಧಿ ಗೋಬ್ಯಾಕ್’ ಎಂದು ಘೋಷಣೆ ಕೂಗುತ್ತಿದ್ದರು. ‘ಶಾಂತಿಪ್ರಿಯ’ ಕಾಂಗ್ರೇಸಿಗರು ಭಗತ್ ಅಭಿಮಾನಿಗಳ ಮೇಲೆ ಬಿದ್ದರು. ಕೆಲವರಿಗೆ ಪೆಟ್ಟಾಯಿತು. ಆಗ ಗಾಂಧಿ “ದಿಕ್ಕು ತಪ್ಪಿದ ಆತನ ಹಿಂಬಾಲಕರನ್ನು ಕ್ಷಮಿಸಿ” ಎಂದು ಸಮಾರಂಭದಲ್ಲಿ ಕರೆನೀಡಿದರು. ಕಾಂಗ್ರೇಸಿಗರು ‘ಕ್ಷಮಿಸಿ’ದರು. ಆದರೆ ಭಗತ್‌ಸಿಂಗ್‌ರಂತಹ ಕ್ರಾಂತಿಕಾರಿಯ ಮೇಲೆ ಆಪಾದನೆಯೊಂದನ್ನು ಗಾಂಧಿ ಮತ್ತು ಅನುಯಾಯಿಗಳು ಹೊರಿಸಿ ಬಿಟ್ಟಿದ್ದರು.
ಚಂದ್ರಶೇಖರ್ ಅಜಾದ್‌ರ ಬದುಕಿನಲ್ಲೂ ಹಾಗೆ. ಸತತ ಚಳ್ಳೆ ಹಣ್ಣು ತಿನ್ನಿಸುತ್ತಾ ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಳ್ಳುತ್ತಿದ್ದ ಅಜಾದ್ ಜೀವಂತವಾಗಿ ಪೊಲೀಸರಿಗೆ ಬಂಧಿಯಾಗಲಾರೆ ಎಂದು ಪ್ರತಿಜ್ಞೆ ಗೈದಿದ್ದವರು. ಕೊನೆಗೆ ಬ್ರಿಟಿಷರಿಗೆ ಆಜಾದ್ ಶವವಾಗಿ ಸಿಕ್ಕಿದ್ದು ಇತಿಹಾಸ. ಅಜಾದರ ಶವವನ್ನು ಪಡೆದುಕೊಳ್ಳಲು ಸಂಬಂಧಿಕರೋರ್ವರು ಬಂದಿದ್ದರು. ಬಂದಿದ್ದವರ ಮೇಲೆ ಹಿರಿಯ ಪೊಲೀಸ್ ಅಕಾರಿಯೊರ್ವ “ಇಷ್ಟು ವರ್ಷ ಹುಡುಗ ಪೋಲಿ ಅಲೆಯುತ್ತಿದ್ದನಲ್ಲಾ ನಿಮಗೆ ಗೊತ್ತಿರಲಿಲ್ಲವೆ? ಕರೆದು ಬುದ್ಧಿ ಹೇಳಲಾಗುತ್ತಿರಲಿಲ್ಲವೇ?” ಎಂದು ಗದರಿದ್ದ. ಹೆಚ್ಚು ಕಮ್ಮಿ ಅದೇ ಸಮಯದಲ್ಲಿ ನಡೆದ ಕಾಕೋರಿ ರೈಲು ದರೋಡೆಯನ್ನು ಕ್ರಾಂತಿಕಾರಿಗಳು ನಡೆಸಿದಾಗ ಇದೇ ಕಾಂಗ್ರೇಸಿಗರು ದರೋಡೆಕೋರರ ಕೃತ್ಯ ಎಂದು ಅಪ್ಪಟ ಬ್ರಿಟಿಷ್ ಶೈಲಿಯಲ್ಲಿ ಬಣ್ಣಿಸಿದ್ದರು. ಮುಂದೆ ವಿನಾಯಕ ಸಾವರ್ಕರರು ಅಂಡಮಾನಿನಲ್ಲಿ ಕಾಲಾಪಾನಿ ಶಿಕ್ಷೆ ಅನುಭವಿಸುತ್ತಿದ್ದಾಗ ಅವರ ಬಿಡುಗಡೆಗೆ ಭಾರತದಲ್ಲಿ ಚಳುವಳಿಗಳು ನಡೆದಾಗ ಹಂಗಿಸಿದ ಕಾಂಗ್ರೇಸಿಗರೆಷ್ಟೋ ಜನ. ಇವೆಲ್ಲವನ್ನೂ ಇಂದು ಇತಿಹಾಸವೆಂದು ಮರೆತು ಬಿಡುವಂತಿಲ್ಲ. ಮರೆಯಲೂ ಬಾರದು. ಏಕೆಂದರೆ ಆ ಕ್ರಾಂತಿಕಾರಿಗಳಾರೂ ತಮಗಾಗಿ ಏನನ್ನೂ ಮಾಡಿಕೊಂಡವರಲ್ಲ. ತಮ್ಮ ಬದುಕನ್ನು ಕುಟುಂಬಕ್ಕಾಗಿ ಮೀಸಲಿಟ್ಟವರೂ ಅಲ್ಲ. ಆದರೂ ಅವರನ್ನು ಜನ ಹಂಗಿಸಿದರು. ಮೂದಲಿಸಿದರು. ಅವರ ಕಾರ್ಯಕ್ಕೆ ಸ್ವಜನರೇ ಅಡ್ಡಿಯಾಗುತ್ತಲೂ ಇದ್ದರು. ಈ ಉದಾಹರಣೆಗಳನ್ನು ಕೇಳುವಾಗ ವರ್ತಮಾನದ ಹಲವು ಸಂಗತಿಗಳು ಪ್ರಸ್ತುತವಾದಂತೆ ಭಾಸವಾಗುತ್ತದೆ.
ಇಂದೂ ರಾಜ್ಯದ ನಾನಾ ಕಡೆಗಳಲ್ಲಿ ಅಂಥ ಆದರ್ಶಕ್ಕಾಗಿ ಹೋರಾಟ ಮಾಡುತ್ತಿರುವ ಯುವಕರ ಪರಿಸ್ಥಿತಿ ಅದಕ್ಕಿಂತಲೂ ಭಿನ್ನವಾಗಿಯೇನೂ ಇಲ್ಲ. ಕ್ರಾಂತಿಯ ಕಾಲ ಬ್ರಿಟಿಷ್ ಅವಧಿಯಲ್ಲಿ ಒಂದು ರೀತಿಯಲ್ಲಿ ಇದ್ದಿರಬಹುದು. ಆದರೆ ಇಂದು ಇನ್ನೊಂದು ರೀತಿಯಲ್ಲಿ ಅನಿವಾರ್ಯವೆನಿಸಿದೆ. ಅಂದು ಪರಕೀಯರ ವಿರುದ್ಧ ಹೋರಾಟ. ಇಂದು ನಮ್ಮತನದ ರಕ್ಷಣೆಗಾಗಿ ಟೊಂಕ ಕಟ್ಟಿದ ಹಲವು ಘಟನೆಗಳು ನಮ್ಮ ಮುಂದಿವೆ. ಕಳೆದ ತಿಂಗಳು ಮಂಗಳೂರಿನ ಉಳ್ಳಾಲದಲ್ಲಿ ನಡೆದ ರೇವ್ ಪಾರ್ಟಿಯೊಂದು ಇದಕ್ಕೆ ಪುಷ್ಟಿ ನೀಡುತ್ತದೆ. ಕಳೆದ ಒಂದು ವರ್ಷದಿಂದೀಚೆಗೆ ಮಂಗಳೂರು ಮಾದಕ ವಸ್ತುಗಳ ತಾಣವಾಗುತ್ತಿರುವ ಬಗ್ಗೆ ಇಲ್ಲಿನ ಪೊಲೀಸರಿಗೆ, ಮಾಧ್ಯಮಗಳಿಗೆ ಯಾವುದೇ ಸಂದೇಹವಿರಲಿಲ್ಲ. ವಾರಂಪ್ರತಿ ರೇವ್ ಪಾರ್ಟಿಗಳು ನಡೆಯುತ್ತಿದ್ದ ಮಾಹಿತಿಗಳೂ ಗೊತ್ತಿಲ್ಲದೇ ಇರಲಿಲ್ಲ. ಈ ಸಂಬಂಧ ಮಂಗಳೂರು ಭಜರಂಗದಳದ ಕಾರ್ಯಕರ್ತರು ಪ್ರತಿಬಾರಿ ಪೊಲೀಸರ ಗಮನಕ್ಕೆ ತಂದರೂ ರೇವ್ ಪಾರ್ಟಿಗಳಿಗೆ ಯಾವುದೇ ತೊಂದರೆಯಾಗಿರಲಿಲ್ಲ. ಮಾದಕ ವಸ್ತಗಳ ಸರಬರಾಜು, ಡೀಲಿಂಗುಗಳು ಎಗ್ಗಿಲ್ಲದೆ ನಡೆಯುತ್ತಿದ್ದವು. ಪ್ರತೀ ತಿಂಗಳೂ ಕಂಪ್ಲೇಂಟುಗಳೂ ಸಲ್ಲಿಕೆಯಾಗುತ್ತಿದ್ದರೂ ಪರಿಸ್ಥಿತಿ ಬದಲಾಗಿರಲಿಲ್ಲ. ಆದರೆ ಒಂದು ದಿನ ಭಜರಂಗದಳದ ಕಾರ್ಯಕರ್ತರು ರೇವ್ ಪಾರ್ಟಿಗೇ ನೇರ ದಾಳಿ ಮಾಡಿದರು. ಯುವಕ ಯುವತಿಯರು ಸಿಕ್ಕಿ ಬಿದ್ದರು. ಪೊಲೀಸರಿಗೆ ಒಪ್ಪಿಸಿದರು. ಆದರೆ ಭಜರಂಗದಳದ ಕಾರ್ಯಕರ್ತರ ಮೇಲೆಯೇ ದುಂಡಾವರ್ತನೆ, ಅಕ್ರಮ ಪ್ರವೇಶ, ಹಲ್ಲೆ, ಕೊಲೆಗೆ ಯತ್ನ, ಕಳ್ಳತನದ ಕೇಸುಗಳು ಬಿದ್ದವು. ಅಷ್ಟಾಗುವ ಹೊತ್ತಿಗೆ ಬುದ್ದಿಜೀವಿಗಳು ಬಾಯಿ ಸರಿಪಡಿಸಿಕೊಂಡು ಕೂಗಲಾರಂಭಿಸಿದರು. ಮೋರಲ್ ಪೊಲೀಸ್ ಎಂದರು. ಪುಂಡರು, ಪೋಲಿಗಳು ಎಂದು ಜರೆದರು. ತಾಲೀಬಾನೀಕರಣದ ಉಳಿಕೆ ಎಂದರು. ವಿಚಿತ್ರವೆಂದರೆ ಸಮಾಜ ಸ್ವಸ್ಥವಾಗಿರಬೇಕೆಂದು ಶ್ರಮಿಸಿದ ೨೦ ಮಂದಿ ಭಜರಂಗದಳದ ಯುವಕರ ಮೇಲೆ ಕೇಸು ಬಿತ್ತು. ಎಲ್ಲರನ್ನು ಬಂಧಿಸಲಾಯಿತು. ಭಗತ್ ಸಿಂಗರಂತೆ, ಅಜಾದ್‌ರಂತೆ, ಸಾವರ್ಕರರಂತೆ ಇವರಾರೂ ತಮ್ಮ ಮನೆಯ ಒಲೆ ಉರಿಸಲೆಂದು ಹೋದವರಲ್ಲ. ಅಲ್ಲಿ ಮಾದಕ ವಸ್ತುಗಳ ದಾಸರಾಗಿರುವವರು ಯಾರೂ ಇವರ ಸಂಬಂಧಿಕರಾಗಿಯೂ ಇರಲಿಲ್ಲ್ಲ. ಆದರೂ ಅವರು ಬಂಧಿಸಲ್ಪಟ್ಟರು. ಅನುಭವಿಸಿದರು. ಮಂಗಳೂರಿನ ಭಜರಂಗದಳದ ನಾಯಕರೊಬ್ಬರಾದ ಶಿವಾನಂದ ಮೆಂಡನ್‌ರವರು “ಕಳೆದ ಎರಡು ವರ್ಷಗಳಿಂದ ನಮ್ಮ ೭೦ಕ್ಕೂ ಅಧಿಕ ಕಾರ್ಯಕರ್ತರ ಮೇಲೆ ವಿನಾಕಾರಣ ಕೇಸು ಜಡಿಯಲಾಗಿದೆ” ಎನ್ನುತ್ತಾರೆ. ಅವರು ಮಾಡಿದ ಒಂದೇ ಒಂದು ತಪ್ಪೆಂದರೆ ಭಗತ್, ಅಜಾದ್, ಸಾವರ್ಕರ್,ಶಿವಾಜಿಯರನ್ನು ಆದರ್ಶವನ್ನಾಗಿ ಸ್ವೀಕರಿಸಿದ್ದು.
ಉದಯ್‌ಕುಮಾರ್ ದೇವಾಡಿಗ ೩೫ವರ್ಷದ ಧರ್ಮಸ್ಥಳದ ಯುವಕ. ಎಸ್. ಎಸ್. ಎಲ್. ಸಿ ಮುಗಿಸಿ ಮುಂಬೈಗೆ ಹೋದರು. ಯೋಗ್ಯ ಉದ್ಯೋದಲ್ಲಿದ್ದುಕೊಂಡು ಹಿಂದೂ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದರು. ವೈಯಕ್ತಿಕ ಕಾರಣಗಳಿಂದ ಊರಿಗೆ ಮರಳಬೇಕಾದ ಸಂದರ್ಭ ಬಂತು. ಊರಿಗೆ ಬಂದಾಗ ಏನೋ ಒಂದು ನಡೆಯುತ್ತಿದ್ದಂತೆ ಸಂಶಯವೂ ಬಂತು. ಊರವರೇ ಕೆಲವು ಮುಸಲ್ಮಾನರೊಟ್ಟಿಗೆ ಸೇರಿ ಗೋ ಸಾಗಾಣಿಕೆ ದಂಧೆಯಲ್ಲಿ ತೊಡಗಿದ್ದರು. ಒಂದು ದಿನ ಗೋವಾಹನವನ್ನು ತಡೆದಿದ್ದೇ ಇವರಿಗೆ ಮುಳುವಾಯಿತು. ಹಿಂದುಗಳೇ ಹಿಡಿದು ಬಡಿದರು. ಊರಲ್ಲಿ ರೌಡಿ ಎಂಬ ಪಟ್ಟವನ್ನೂ ಅವರೇ ಕಟ್ಟಿದರು. ನಂತರ ಉದಯ ಮಂಗಳೂರಿನಲ್ಲಿ ಉದ್ಯೋಗ ಕಂಡುಕೊಂಡರು. ಮಹಾಪುರುಷರ ಆದರ್ಶಗಳನ್ನು ಮೈತುಂಬಿಕೊಂಡರು. ಮಹಾಪುರುಷರ ಆದರ್ಶಗಳನ್ನು ಮೈತುಂಬಿಕೊಂಡ ಬಿಸಿರಕ್ತದ ಯುವಕ ಉದಯ ಸಿಟಿ ಬಸ್ಸಿನಲ್ಲಿ ಕೆಲಸಕ್ಕೆ ಬಂದುಹೋಗುತ್ತಿದ್ದರು. ದಿನಂಪ್ರತಿ ಬರುವ ಬಸ್ಸಿನಲ್ಲಿ ಹಿಂದೂ ಹುಡುಗಿಯರಿಗೆ ನೆಮ್ಮದಿಯಿಲ್ಲ ಎಂಬುದನ್ನು ಕಂಡರು. ಮುಸಲ್ಮಾನ ಹುಡುಗರ ಕೀಟಲೆಗಳು ಶಿವಾಜಿ ಕಥೆ ಓದಿದವರಿಗೆ ಸಹಿಸಲು ಎಂದಾದರೂ ಸಾಧ್ಯವೇ? ಒಂದು ದಿನ ಹುಡುಗರಿಗೆ ಎಚ್ಚರಿಕೆ ನೀಡಿದರು. ಮರುದಿನ ತಂಡವೊಂದು ಇವರ ಮೇಲೆ ಹಲ್ಲೆ ನಡೆಸಿತು. ವಿಚಿತ್ರವೆಂದರೆ ಉದಯರನ್ನೇ ಶಾಂತಿಭಂಗದ ಆರೋಪ ಹೊರಿಸಿ ಬಂಧಿಸಲಾಯಿತು. ೧೪ದಿನ ಲಾಕಪ್ಪಿನಲ್ಲಿ ಉದಯರನ್ನು ಕ್ರಿಮಿನಲ್ ಥರ ನಡೆಸಿಕೊಳ್ಳಲಾಯಿತು. ಊರಲ್ಲಿ ಪೋಲಿ ಪಟ್ಟ. ಧರ್ಮದ ಸೆಳೆತ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು?
ಬೆಳ್ತಂಗಡಿಯ ಜಯರಾಮ ಶೆಟ್ಟರು ಸಂಘ ಪರಿವಾರದ ಸಕ್ರಿಯ ಸದಸ್ಯರು ೨೦೦೭ರಲ್ಲಿ ಜಿಲ್ಲಾದ್ಯಂತ ಬಂದ್ ನಡೆದಾಗ ಶಾಂತಿಯುತವಾಗಿ ಯುವಕರನ್ನು ನಿಭಾಯಿಸಿದ ಸಂಸಾರಸ್ಥರು. ಊರೆಲ್ಲಾ ಬಂದ್ ಆಗಿದ್ದಾಗ ಪುಂಜಾಲಕಟ್ಟೆ ಎಂಬಲ್ಲಿ ಒಂದು ಮುಸಲ್ಮಾನ ಅಂಗಡಿ ಮಾತ್ರ ತೆರೆದಿತ್ತು. ಶಾಂತಿಯಿಂದಲೇ ಬಂದ್‌ನ ಹಿನ್ನಲೆಯನ್ನು ಇವರು ವಿವರಿಸಬಾರದಿತ್ತು ಎಂಬಂತೆ ಇವರ ಮೇಲೆ ಕಲ್ಲುಗಳು ಬಿದ್ದವು. ನಿಭಾಯಿಸಿಕೊಳ್ಳುವಷ್ಟರಲ್ಲಿ ಪೊಲೀಸರು ಬಂದು ಹಿಡಿದುಕೊಂಡು ಹೋದರು. ೧೨ ಜನರ ಮೇಲೆ ಬೆಳ್ತಂಗಡಿ ನ್ಯಾಯಾಲಯದಲ್ಲಿ ಕೇಸು ದಾಖಲಾದವು. ಪುನಃ ಒಂದು ವಾರದಲ್ಲಿ ಬಂಟವಾಳದಲ್ಲೂ ಇದೇ ೧೨ ಜನರ ಮೇಲೆ ಮತ್ತೆ ಕೇಸುಗಳಾದವು. ಇಂದಿಗೂ ಇವರು ನ್ಯಾಯಾಲಯಕ್ಕೆ ಅಲೆದಾಡುವುದು ತಪ್ಪಿಲ್ಲ. ಇವರೆಲ್ಲರಿಗೂ ಹೆಂಡತಿಯರಿದ್ದಾರೆ. ಮಕ್ಕಳು, ತಂದೆ ತಾಯಿಗಳು ಎಲ್ಲರೂ ಇದ್ದಾರೆ. ಧರ್ಮಕ್ಕಾಗಿ, ದೇಶಕ್ಕಾಗಿ, ಅಳಿಲು ಸೇವೆಗೆ ಇಳಿದವರ ಸ್ಥಿತಿ ಇದು. ಇಂಥ ಪರಿಸ್ಥಿತಿ ಕೇವಲ ದಕ್ಷಿಣ ಕನ್ನಡದಲ್ಲಿ ಮಾತ್ರವಲ್ಲ. ಇಡೀ ರಾಜ್ಯದಲ್ಲಿ ಇಂಥ ಉದಾಹರಣೆಗಳು ಸಾಕಷ್ಟು ಸಿಗುತ್ತದೆ. ಭಜರಂಗದಳದ ಸಮೀಕ್ಷೆಯ ಪ್ರಕಾರ ಕರ್ನಾಟಕದ ದಕ್ಷಿಣ ಭಾಗದ ೧೪ ಜಿಲ್ಲೆಗಳಲ್ಲಿ ೪೦೦ರಷ್ಟು ಅಮಾಯಕ ಧರ್ಮ ಕಾರ್ಯಕ್ಕಾಗಿ ಇಳಿದ ಯುವಕರ ಮೇಲೆ ಕೇಸುಗಳಿವೆ. ಅಂದು ಹೇಗೆ ಭಗತ್ ಸಿಂಗ್‌ರನ್ನು, ಅಜಾದರನ್ನು, ಸಾವರ್ಕರರನ್ನು ‘ದಾರಿತಪ್ಪಿದವರು’ ಎನ್ನುತ್ತಿದ್ದಾರೋ ಹಾಗೆಯೇ ಇವರನ್ನೂ ದಾರಿತಪ್ಪಿದವರು ಎನ್ನುತ್ತಿದ್ದಾರೆ. ನಮ್ಮ ತಂಗಿಯರು, ನಮ್ಮ ಮಡದಿಯರು, ನಮ್ಮ ಊರು, ನಮ್ಮ ಧರ್ಮದ ಉಸಿರು ಇಂದು ಉಳಿದಿರುವುದು ಇಂಥ ಆದರ್ಶಗಳಿಂದಲೇ ಎನ್ನುವುದು ಸಮಾಜದ ಅರಿವಿಗೆ ಬಾರದೇ ಹೋಗುತ್ತಿದೆ. ಒಮ್ಮೆ ಅಜಾದ್‌ರಿಗೆ ಛಡೀ ಏಟಿನ ಶಿಕ್ಷೆ ವಿಸಲಾಗಿತ್ತು. ೧೭ ಛಡೀ ಏಟುಗಳು. ಒಂದೊಂದು ಏಟಿಗೂ ಬಾಲಕ ವಂದೇ ಮಾತರಂ ಎಂದು ಘೋಷಿಸುತ್ತಿದ್ದ. ವೊನ್ನೆ ೧೪ ದಿನ ಲಾಕಪ್ಪಿನಲ್ಲಿದ್ದ ಉದಯ ದೇವಾಡಿಗರನ್ನು ಲಾಕಪ್ಪಿನಲ್ಲಿ ಬೆತ್ತಲೆಗೊಳಿಸಿ ಹೊಡೆಯುತ್ತಿದ್ದಾಗ ಆತ ಕೂಡ ‘ಜೈಶ್ರೀರಾಮ್’ ಎಂದು ಘೋಷಿಸುತ್ತಿದ್ದ(ಮತ್ತೊಂದು ಕೇಸಿಗೆ ಠಾಣೆಗೆ ಹೋದವರೊಬ್ಬರ ಪ್ರತ್ಯಕ್ಷ ಅನುಭವಾಧಾರಿತ ಮಾಹಿತಿ. ಜುಲೈ ೧೯, ಮಂಗಳವಾರ). ಉದಯ ದೇವಾಡಿಗ ಹೆಚ್ಚು ವಿದ್ಯಾವಂತನಲ್ಲದಿರಬಹುದು. ಅಜಾದರ ಘಟನೆಯೂ ತಿಳಿದಿಲ್ಲದಿರಬಹುದು. ಏಟು ಬೀಳುವಾಗ ಹೃದಯದಿಂದ ಬಂದ ‘ಜೈಶ್ರೀರಾಮ್’ ಘೋಷಕ್ಕೆ ಏನು ಬೆಲೆ ಕಟ್ಟೋಣ?ಕ್ರಾಂತಿಕಾರಿಗಳ ಘಟನೆಗಳಿಗೆ ಪುಳಕಗೊಂಡರೆ ಅಷ್ಟೇ ಸಾಕೆ? ಭಗತ್‌ಸಿಂಗ್ ಅಜಾದರ ಬಗ್ಗೆ ನಮ್ಮ ಮಕ್ಕಳು ಭಾಷಣ ಮಾಡಬೇಕು. ಪ್ರಬಂಧ ಬರೆಯಬೇಕು. ಆದರೆ ಅವರಂತಾಗುವುದು ಬೇಡವೆಂದರೆ? ಸಾವರ್ಕರೆಂದ ಸದ್ಗುಣ ವಿಕೃತಿ ಇದೇ ತಾನೇ?
ಈ ಯುವಕರಲ್ಲಿ ಬಹುತೇಕರಿಗೆ ಪ್ರವಚನ ಶೈಲಿಯ ಸೇಫರ್ ಜೋನಿನಲ್ಲಿ ಹೋರಾಟ ಮಾಡಬಹುದಾದ ಎಲ್ಲಾ ಅವಕಾಶಗಳು. ಅರ್ಹತೆಗಳೂ ಇದ್ದವು. ಆದರೆ ಅವರೆಲ್ಲರೂ ಕ್ರಾಂತಿಕಾರಿಗಳನ್ನು ನಂಬಿದರು. ಶಿವಾಜಿ, ಪ್ರತಾಪರನ್ನು ಅರ್ಚಿಸಿದರು. ಜಾರುವ ಕಾನೂನಿನ ಜಾಡು ಹಿಡಿದರು. ದುಷ್ಟರ ಮೇಲೊಂದು ನಿಗಾ ಇಟ್ಟರು. ಕೇಸು ಜಡಿಸಿಕೊಂಡರು. ಲೈಪು ಸೆಟ್ಲ್ ಮಾಡುವ ಭರದಲ್ಲಿ ಇಂಥವರು ಎಲ್ಲಿ ಸಿಗುತ್ತಾರೆ ಸ್ವಾಮಿ?

Wednesday, September 7, 2011

ಆಲೀರ ಮನೆಯಲ್ಲಿ ಅವಿತುಕೊಂಡ ಚರಿತ್ರೆ


ಡಿಕೇರಿ-ನಾಗರಹೊಳೆ ಹೆದ್ದಾರಿಯಲ್ಲಿ ೬೦ ಕಿಮೀ ದೂರ ಸಾಗಿದರೆ ಪೊನ್ನಂಪೇಟೆ ಎಂಬ ಪುಟ್ಟ ಪಟ್ಟಣವೊಂದು ಎದುರಾಗುತ್ತದೆ.ಅಲ್ಲಿಂದ ಮೂರೇಮೂರು ಕಿ.ಮೀ ದೂರದಲ್ಲಿ ತನ್ನ ಪಾಡಿಗೆ ತಾನು ಹೊದ್ದುಕೊಂಡಂತಿರುವ ಒಂದು ಪುಟ್ಟ ಊರು ಚೇನಿವಾಡ. ಅದರ ಒಂದು ಭಾಗ ಮಾಪಿಳ್ಳೆತೋಡು. ಮಾಪಿಳ್ಳೆಗಳೇ ವಾಸವಿರುವ ಆ ಮಾಪಿಳ್ಳೆತೋಡಿನಿಂದ ತೊರೆಯೊಂದು ಹುಟ್ಟುತ್ತದೆ. ಹರಿಯುತ್ತ ಹರಿಯುತ್ತಾ ವಿಶಾಲವಾಗುತ್ತಾ ಲಕ್ಷ್ಮಣತೀರ್ಥವನ್ನು ಸೇರುತ್ತದೆ. ಲಕ್ಷ್ಮಣತೀರ್ಥ ಕಾವೇರಿಯನ್ನು ಸೇರಿ,ಕಾವೇರಿ ಬಂಗಾಳಕೊಲ್ಲಿಯನ್ನು ಸೇರಿ ಲೋಕಪಾವನೆಯೆಂಬ ಹೆಸರನ್ನು ಅನ್ವರ್ಥಮಾಡುತ್ತದೆ.ಹಾಗಾಗಿ ಮಾಪಿಳ್ಳೆತೋಡಿನ ಈ ಸಣ್ಣ ತೊರೆಯಾಗಿ ಮುಂದೆ ವಿಶಾಲವಾಗುವ ಅಚ್ಚರಿ ಸದಾ ಕುತೂಹಲವನ್ನುಂಟುಮಾಡುತ್ತದೆ.ಏನೋ ನಿಗೂಢತೆಯನ್ನು ಜಲಮೂಲ ಹೊತ್ತುಕೊಂಡಿವೆಯಲ್ಲಾ ಎಂದೂ ಅನಿಸುತ್ತದೆ.
ಆ ತೊರೆಯಷ್ಟೇ ನಿಗೂಢವಾದ ಮತ್ತೊಂದು ಸಂಗತಿಯೂ ಆ ಮಾಪಿಳ್ಳೆತೋಡಿನಲ್ಲಿದೆ.ಅದು ಕೇವಲ ೩೦ ಮನೆಗಳಿರುವ ಸಣ್ಣ ಊರು ಅಥವಾ ಕೇರಿ.ಅವರ ನಿಗೂಢತೆಗೆ ಕಾರಣವೇನೆಂದರೆ ಅವರೆಲ್ಲರೂ ಕೊಡವ ಮಾಪಿಳ್ಳೆಗಳು. ಕೊಡವರಲ್ಲದ ಕೊಡವರು. ಅಲ್ಲಿನ ತೋಡು,ಭೃಹತ್ತಾದ ಮಸೀದಿಗಳ ಹೊರತಾಗಿಯೂ ಮಾಪಿಳ್ಳೆತೋಡು ಮತ್ತೆನನ್ನೋ ಬಚ್ಚಿಟ್ಟುಕೊಂಡಿದೆಯೆಂದೇ ಅನಿಸುತ್ತದೆ.ಅದಕ್ಕೆ ಇತಿಹಾಸದ ಭಾರ ಎಂದುಕೊಂಡರೂ ಸತ್ಯದ ಮೇಲಿನ ಪೊರೆ ಎಂದುಕೊಂಡರೂ ಬೇರ್ಪಡುತ್ತಿರುವ ತೀವ್ರತೆ ಎಂದುಕೊಂಡರೂ ಎಲ್ಲವೂ ಸರಿಯೇ.
ಅಂಥ ಮಾಪಿಳ್ಳೆತೋಡಿನಲ್ಲಿ ಕಲ್ಲಾಯಿ ಮಸೀದಿ ಹೆಸರಿನ ದೊಡ್ಡ ಮಸೀದಿಯೆದುರು ಸಿಕ್ಕಿದವರು ಆಲೀರ ಸಾದಲಿಯವರು.೫೦ ದಾಟಿದೆ ಎನ್ನಬಹುದಾದ ಶರೀರ.ವಿದ್ಯಾವಂತನ ಚೆಹರೆ.ಒಟ್ಟಾರೆ ಕಾಳಜಿಪರ ಮನುಷ್ಯ. ಕಣ್ಣು, ಮೂಗು, ಭುಜ, ಹಣೆಗಳನ್ನು ನೋಡುವಾಗಲೇ ಇಲ್ಲಿ ಏನೋ ತಪ್ಪಿದೆ ಎನಿಸುವ ಮುಖಲಕ್ಷಣದ ಸಾದಲಿಯವರನ್ನು ನೋಡಿದರೆ ಎರಡೂವರೆ ಶತಮಾನಗಳ ಇತಿಹಾಸಗಳು ಕಣ್ಣಮುಂದೆ ಸುಳಿಯದಿರದು. ಆದರೆ ಸಾದಲಿಯವರ ಮಾತುಗಳು ಮಾತ್ರ ಇತಿಹಾಸವನ್ನು ಮತ್ತಷ್ಟು ಮುಚ್ಚಿಬಿಡುತ್ತವೆ. "ಇದೇನಿದು ಸಾದಲಿಯವರೇ ನಿಮಗೆ ಕೊಡವರಂತೆ ಮನೆಹೆಸರುಗಳು? ನಿಮ್ಮ ಪೂರ್ವಪರವೇನು? ವಂಶವೃಕ್ಷವೇನು?" ಎಂದು ಅವರನ್ನು ಕೇಳಿದರೆ ಅವರ ಕಥೆಗಳು ಮಾಪಿಳ್ಳೆತೋಡಿನ ತೊರೆಯಂತೆ ಎಲ್ಲೆಲ್ಲಿಗೋ ಹರಿಯುತ್ತದೆ.ಅವರು ಹೇಳುವ ಕಥೆಗಳು ಕೇರಳಕ್ಕೆ ಮುಟ್ಟಿ. ಅನಂತರ ಅರಬ್ ಗೆ ಸಾಗಿ ಹೊಸದೊಂದು ಇತಿಹಾಸ ಕ್ಷಣಮಾತ್ರದಲ್ಲಿ ಸೃಷ್ಟಿಯಾಗುತ್ತದೆ.
ಸುಮಾರು ೪೦೦ ವರ್ಷಗಳ ಹಿಂದೆ ಕಲ್ಲಾಯಿ ಎಂಬ ಕೇರಳದ ಊರಿನಿಂದ ಯಾತ್ರಿಕರ ತಂಡವೊಂದು ಈ ಮಾರ್ಗದಲ್ಲಿ ಬಂದಿತ್ತಂತೆ. ಮಾಪಿಳ್ಳೆತೋಡಿನ ಜಾಗವನ್ನು ನೋಡಿ ಎಷ್ಟೊಂದು ಸುಂದರ ಎಂದು ಖುಷಿ ಪಟ್ಟರಂತೆ. ಒಂದು ಒಣಕಡ್ಡಿಯನ್ನು ನೆಲದಲ್ಲಿ ಚುಚ್ಚಿ ಹೊರಟುಹೋದರಂತೆ. ಯಾತ್ರೆ ಮುಗಿಸಿ ಮರಳುವಾಗ ಆ ಕಡ್ಡಿ ಚಿಗುರಿತ್ತಂತೆ. ಆ ಯಾತ್ರಿಕರು ಅಲ್ಲೊಂದು ಮಸೀದಿಯನ್ನು ಕಟ್ಟಿದರಂತೆ. ಅದೇ ಈ ಕಲ್ಲಾಯಿ ಮಸೀದಿ ಎಂದು ಸಾದಲಿಯವರು ತೋರಿಸಿದರು. ಮಾಪಿಳ್ಳೆತೋಡಿನ ಮಾಪಿಳ್ಳೆಗಳ ಬಗ್ಗೆ ಮತ್ತೊಂದು ವಾದವೂ ಉಂಟಂತೆ. ಇವರ ಪೂರ್ವಜರು ಕೇರಳದಿಂದ ವ್ಯಾಪಾರ ಮಾಡುತ್ತ ಬಂದರಂತೆ ಆಥವಾ ಮಂಗಳೂರಿನ ಮೂಲಕ ವ್ಯಾಪಾರಕ್ಕಾಗಿ ಬಂದವರಂತೆ. ಆದರೆ ಈ ಎಲ್ಲಾ ವಾದಗಳಿಗೆ ಆಧಾರಗಳೇನಿಲ್ಲ. ಒಟ್ಟಾರೆ ಮಾಪಿಳ್ಳೆ ತೋಡಿನ ಮುಸಲ್ಮಾನರು ಒಂದಾನೊಂದು ಕಾಲದ ಹಿಂದುಗಳಾಗಿದ್ದ ಕೊಡವರಂತೂ ಅಲ್ಲವೇ ಅಲ್ಲ ಎಂದು ಬಿಂಬಿಸಲು ತುಂಬಾ ಪ್ರಾಯಾಸಪಟ್ಟಂತೆ ಸಾದಲಿಯವರು ಹೇಳುತ್ತಲೇ ಇದ್ದರು.ಇದು ಒಬ್ಬ ಸಾದಲಿಯವರ ವಾದವಲ್ಲ ಇತ್ತೀಚಿನ ಕೆಲ ವರ್ಷಗಳಿಂದ ಕೊಡಗಿನ ಸಮಸ್ತ ಕೊಡವ ಮಾಪಿಳ್ಳೆಗಳೆಲ್ಲರ ವಾದವೆಲ್ಲವೂ "ತಾವು ಟಿಪ್ಪು ಕಾಲದಲ್ಲಿ ಮತಾಂತರಗೊಂಡ ಕೊಡವರಲ್ಲ" ಎಂದೇ.ಈ ಮಾಪಿಳ್ಳೆತೋಡು ಗ್ರಾಮದಲ್ಲಿ ಇಂದು ಸುಮಾರು ೨೦೦ರಷ್ಟು ಸಂಖ್ಯೆಯಲ್ಲಿ ಆಲೀರ(ಆಲಿಯವರ) ಹೆಸರಿನ ಮನೆತನದ ಸದಸ್ಯರಿದ್ದಾರೆ. ಅವರೆಲ್ಲರೂ ಆಸ್ತಿವಂತ ಪ್ಲಾಂಟರುಗಳು. ಕೊಡವ ಜಮ್ಮಾ ಹಕ್ಕನ್ನು (ವಂಶಪಾರಂಪರ‍್ಯದ ಆಸ್ತಿ ಮತ್ತು ಆಯುಧದ ಹಕ್ಕು, ತೆರಿಗೆ ವಿನಾಯಿತಿಯ ಹಕ್ಕು, ವಿಶೇಷ ಭೂ ಒಡೆತನದ ಹಕ್ಕು.ತಮ್ಮ ಶೌರ್ಯಕ್ಕೆ ಪ್ರತಿಯಾಗಿ ಕೊಡಗಿನ ಮೂಲನಿವಾಸಿಗಳಿಗೆ ಅರಸರು ಮತ್ತು ಬ್ರಿಟಿಷ್ ಆಡಳಿತ ಕೊಡಮಾಡಿದ ವಿಶೇಷ ಹಕ್ಕು)ಹೊಂದಿರುವ ಇವರ ಮನೆಹೆಸರಿನ ಹಿಂದೆ ಇವರೇ ಹೆಣೆದ ಒಂದು ಕಥೆಯನ್ನೂ ಹೇಳುತ್ತಾರೆ:ಕೊಡಗಿನ ರಾಜನ ಆಸ್ಥಾನದಲ್ಲಿ ಆಲಿ ಎಂಬ ಕಾರ್ಯಕಾರನಿದ್ದನಂತೆ. ಉತ್ತಮ ಆಡಳಿತ ತಜ್ಞನಾದ ಈತ ನಿವೃತ್ತಿಯಾದ ಅನಂತರ "ಪೆನ್ಷನ್ದಾರ ಆಲಿ" ಎಂದೇ ಆತ ಖ್ಯಾತನಾದನಂತೆ. ಮುಂದೆ ಜನ ಆತನ ವಂಶದವರನ್ನು ಆಲೀರಎಂದೇ ಕರೆಯಲಾರಂಬಿಸಿದರಂತೆ. ಇಷ್ಟು ಹೇಳುವಾಗ ಟಿಪ್ಪುವಿನ ಇತಿಹಾಸ ಹತ್ತಿದಲ್ಲೆಲ್ಲೂ ಸುಳಿಯುವುದಿಲ್ಲ. ಈ ವಾದವೆಷ್ಟು ಹುಸಿಯೆಂದರೆ ಕೊಡವ ಮಾಪಿಳ್ಳೆಗಳಲ್ಲಿ ಆಲೀರ ಅಲ್ಲದೆ ಇನ್ನಿತರ ಹತ್ತರಿಂದ ಹನ್ನೆರಡರಷ್ಟು ಮನೆಹೆಸರಿನ ಕುಟುಂಬಳಿವೆ.ಹಲವು ಕುಟುಂಬಗಳ ಹೆಸರುಗಳು ಈಗಲೂ ಇರುವ ಕೊಡವ ಕುಟುಂಬಗಳ ಹೆಸರುಗಳೇ. ಕೊಡಗಿನ ಇತಿಹಾಸವನ್ನು ತಡಕಾಡಿದರೆ ಸಿಗುವ ಅಳಿದುಹೋದ ಕೆಲವು ಕೊಡವ ಮನೆತನಗಳು ಈಗಲೂ ಕೊಡವ ಮಾಪಿಳ್ಳೆಗಳಲ್ಲಿ ಬಳಕೆಯಲ್ಲಿರುವುದು ಗೋಚರವಾಗುತ್ತವೆ. ಆಲೀರ ಮನೆತನವೇನೋ ಕೇರಳ ಮತ್ತು ಮಂಗಳೂರಿನ ಜಾಡನ್ನು ಹಿಡಿದು ಕಥೆ ಕಟ್ಟಬಹುದು ಆದರೆ ಇನ್ನಿತರ ಕುಟುಂಬಗಳ ಮನೆಹೆಸರುಗಳಾವುವೂ ಮುಸಲ್ಮಾನ ಹೆಸರುಗಳಲ್ಲ. ಅವು ಅಪ್ಪಟ ಕೊಡವ ಶಬ್ದಗಳು ಎಂಬುದು ಇತಿಹಾಸದ ನಿಚ್ಚಳತೆಗೆ ಸಾಕ್ಷಿಗಳು. ಆಲೀರ ಸಾದಲಿಯವರು ಹೇಳುವ ಕಥೆಗಳನ್ನು ಇಷ್ಟು ಕೇಳುವಾಗಲೇ ಸಂಶಯಗಳು ಹುಟ್ಟಲು ಆರಂಭವಾಗುತ್ತದೆ. ಏಕೆಂದರೆ ಕೇರಳದ ಕಲ್ಲಾಯಿಯಿಂದ ಬಂದ ಯಾತ್ರಿಕರು ಹೊರಟಿದ್ದದರೂ ಎಲ್ಲಿಗೆ? ಯಕಶ್ಚಿತ್ ಯಾತ್ರಿಕರು ಒಣಕಡ್ಡಿಯ ಮೇಲೆ ಭರವಸೆಯಿಡಲು ಕಾರಣವೇನು? ಮಂಗಳೂರಿನಿಂದ ವ್ಯಾಪಾರಾರ್ಥವಾಗಿ ಬಂದವರಾಗಿದ್ದರೆ ಮಂಗಳೂರಿನ ಮುಸಲ್ಮಾನರೇಕೆ ಬ್ಯಾರಿಗಳು? ಇವರೇಕೆ ಕೊಡವ ಮಾಪಿಳ್ಳೆಗಳು? ಇವರಿಗೇಕೆ ಕೊಡವರಂತೆ ಐನ್ ಮನೆಗಳಿವೆ? ಅಲ್ಲಿ ಕೊಡವ ಮನೆಗಳಿಗಿರುವಂತೆ ಪೂಜನೀಯ ಹಿನ್ನಲೆಯ ಕನ್ನಿಕಂಭಗಳು,ಐಮರಗಳು ಇದೆ? ಅಲ್ಲದೆ ಸಾದಲಿಯವರು ಹೇಳುವ ಪೆನ್ಷನ್ದಾರ ಆಲಿ ಯ ಕಥೆ ಏಕೆ ಕೊಡಗಿನ ಇತಿಹಾಸದಲ್ಲೇ ಕಾಣುವುದಿಲ್ಲ? ಇತಿಹಾಸವನ್ನು ಮತ್ತಷ್ಟು ತಡಕಾಡಿದರೆ ಒಂದು ವ್ಯವಸ್ಥಿತ ಸತ್ಯದ ಅಪಭ್ರಂಶದ ಚಿನ್ಹೆಗಳು ಕಾಣುತ್ತವೆ. ಅಬ್ಬ್ಬಾಸ್ ಆಲಿ ಎಂಬ ಮುಸಲ್ಮಾನನೊಬ್ಬ ಕೆಲಕಾಲ ಕೊಡಗು ಅರಸರ ಆಸ್ಥಾನದಲ್ಲಿ ಕಾರ್ಯಕಾರನಾಗಿದ್ದ. ಈತನ ಬಗ್ಗೆ ಹೆಚ್ಚಿನ ವಿವರಗಳು ಸಿಗದಿದ್ದರೂ ಈತನೂ ಟಿಪ್ಪುವಿನ ಕ್ರೌರ್ಯಕ್ಕೆ ಬಲಿಯಾಗಿ ಮತಾಂತರವಾದವನು ಎಂಬ ಉಲ್ಲೇಖವೊಂದನ್ನು ಬ್ರಿಟಿಷ್ ಇತಿಹಾಸಕಾರರು ಮಾಡುತ್ತಾರೆ. ಈತನ ಸೇವೆಯನ್ನು ಪರಿಗಣಿಸಿ ಅರಸರು ಈಗಿನ ಚೇನಿವಾಡ ಗ್ರಾಮದಲ್ಲಿ ೪೫ ಏಕರೆ ಭತ್ತದ ಗದ್ದೆಯನ್ನೂ ಅದಕ್ಕೆ ಸಂಬಂಧಿಸಿದ ಭೂಮಿಯನ್ನೂ ಜಮ್ಮಾವಾಗಿ ಉಡುಗೋರೆ ನೀಡಿರಬಹುದು ಎಂದು ಹಲವರು ಸಂಶಯ ವ್ಯಕ್ತಪಡಿಸುತ್ತಾರೆ. ಇಂಥ ನಿಚ್ಚಳ ಇತಿಹಾಸವಿದ್ದರೂ ಇಂದು ಕೊಡವ ಮಾಪಿಳ್ಳೆಗಳು ಹ್ಯಾರಿಪಾಟರ್ ನಂತಹ ಕಥೆಗಳನ್ನು ಹೇಳುತ್ತಾರೆ.ಮಾರ್ಕ್ಸ ವಿಲ್ಕ್ಸ್ ಬರೆದ ಹಿಸ್ಟ್ರಿ ಆಫ್ ಮೈಸೂರ್ ನಲ್ಲಿ ಕೂಡ ಕೊಡವ ಮಾಪಿಳ್ಳೆಗಳ ಬಗ್ಗೆ ಉಲ್ಲೇಖಗಳಿವೆ. "೧೭೮೪ರ ಅಕ್ಟೋಬರ್ ನಲ್ಲಿ ಕೊಡಗಿನ ಮೇಲೆ ಧಾಳಿ ನಡೆಸಿದ ಟಿಪ್ಪು ಬೆಂಕಿಯಿಡುತ್ತಾ ಸಾಗಿ ಅಲ್ಪ ಜನಸಂಖ್ಯೆಯ ಕೊಡವರನ್ನು ಮತಾಂತರಿಸಿದ" ಎಂದು ವಿಲ್ಕ್ಸ್ ಬರೆಯುತ್ತಾನೆ. "ಹೀಗೆ ಮತಾಂತರವಾದವರು ಇಂದು ಕೊಡವ ಮಾಪಿಳ್ಳೆಗಳೆಂದು ಕರೆಸಿಕೊಳ್ಳುತ್ತಿದ್ದಾರೆ" ಎಂದು ಹೇಳುವುದಕ್ಕೂ ವಿಲ್ಕ್ಸ್ ಮರೆಯುವುದಿಲ್ಲ.
ಆದರೆ ಪಾನ್ ಇಸ್ಲಾಮೆನ್ನುವುದು ಅದನ್ನೆಲ್ಲ ಉಲ್ಲೇಖಿಸುವುದಿಲ್ಲ.ಉಲ್ಲೇಖಿಸದಿರುವುದು ಮಾತ್ರವಲ್ಲ ಅಂಥದ್ದನ್ನು ವಿರೋಧಿಸಬೇಕೆನ್ನುವುದು ಅದರ ನಿಲುವು. ಮುಸ್ಲಿಂ ಬ್ರದರ್ ಹುಡ್ ಎಂಬುದು ಮಾಪಿಳ್ಳೆತೋಡಿಗೂ ಕಾಲಿಟ್ಟಮೇಲೆ ಇನ್ನು ಪರಂಪರೆಯನ್ನು ಅವರು ಧಿಕ್ಕರಿಸದಿರುವರೇ? ಹಾಗಾಗಿ ಇಂದು ಮಾಪಿಳ್ಳೆತೋಡು ಮಾತ್ರವಲ್ಲ ಕೊಡವಮಾಪಿಳ್ಳೆಗಳೆಲ್ಲರೂ ಪಿಳ್ಳೆ ನೆಪವನ್ನೊಡ್ಡಿ ಅರಬ್ ರಾಷ್ಟ್ರವಾದದ ಹಿಂದೋಡುತ್ತಿದ್ದಾರೆ. ಆದರೆ ಸತ್ಯಕ್ಕೆ ಸಾವಿಲ್ಲ,ನಿದರ್ಶನಗಳು ಸುಳ್ಳು ಹೇಳುವುದಿಲ್ಲ.ಟಿಪ್ಪುವಿನ ಕಾಲಾವಧಿ ಹೆಚ್ಚಂತೂ ಅಲ್ಲ. ಹಾಗಾಗಿ ಕಟ್ಟುಕಥೆಗಳ ನಡುವೆಯೂ ಸತ್ಯ ಗೋಚರವಾಗುತ್ತವೆ. ಈಗ್ಗೆ ಐದಾರು ವರ್ಷಗಳ ಹಿಂದಿನ ವರೆಗೂ ಕೊಡವ ಮಾಪಿಳ್ಳೆಗಳು ಕೊಡವರಂತೆ ಹುತ್ತರಿ ಆಚರಿಸುತ್ತಿದ್ದದು, ಕಾವೇರಿ ತೀರ್ಥೋದ್ಭವವನ್ನು ಆಚರಣೆ ಮಾಡುತಿದ್ದದು, ಪಂಚಾಂಗ ನೋಡಿ ಹೊಸಕ್ಕಿ ಊಟ ಮಾಡುತ್ತಿದ್ದದು ಗೊತ್ತಿರದ ಸಂಗತಿಯೇನಲ್ಲ. ಮಾಪಿಳ್ಳೆ ಹೆಂಗಳೆಯರು ಕೊಡವತಿಯರಂತೆ ಆಭರಣ ಧರಿಸುತ್ತಿದ್ದದನ್ನು ಮರೆತುಹೋದವರು ಇಂದಿಲ್ಲ. ಮಾಪಿಳ್ಳೆಗಳ ಮನೆಯ ಅಟ್ಟದಲ್ಲಿ ದುಡಿಗಳು , ಕತ್ತಿಗಳು ಇರುವುದನ್ನು ಇಂದೂ ಕೆಲವರು ತೋರಿಸುತ್ತಾರೆ. ಸಾದಲಿಯವರೂ ತೋರಿಸಿದರು. ಆದರೆ ಸತ್ಯವನ್ನು ಒಪ್ಪಿಕೊಳ್ಳುವುದಕ್ಕೆ ಮಾತ್ರ ಹಿಂಜರಿಯುತ್ತಾರೆ. ಇದಕ್ಕೆಲ್ಲಾ ಯಾವ ಮೋಹನ ಮುರಳಿ ಕರೆಯಿತೋ ಎಂದು ಸಂಶಯ ಪಡುವಂತಿಲ್ಲ. ಏಕೆಂದರೆ ಜಗತ್ತಿನಾದ್ಯಂತ ತಾನೊಂದೇ ಸತ್ಯಂ ಎಂದು ಭಯಂಕರವಾಗಿ ಮುನ್ನುಗ್ಗಲು ಹಾತೊರೆಯುತ್ತಿರುವುದು,ತನ್ನದಲ್ಲದರ ಅಸಹನೆ ಹೊಂದಿರುವುದರ ಬಗ್ಗೆ ಸಂಶಯಗಳು ಇಲ್ಲವಲ್ಲ.

ವೈಸರಾಯಿ ಸ್ವರೂಪಿ ಭೂಸ್ವಾಧೀನ ಕಾಯ್ದೆ-೨೦೧೧


ಕೇಂದ್ರ ಸರಕಾರದಲ್ಲೀಗ "ಬಿಲ್ಲು"ಗಳದ್ದೇ ಭರಾಟೆ.ಈಗ ಕೇಂದ್ರ ಮಂತ್ರಿಮಂಡಳದಲ್ಲಿ ಎಲ್ಲರೂ ಧನುರ್ದಾರಿಗಳೇ.ಜನಲೋಕಪಾಲವಾತು.ಅದೂ ತನ್ನ ಮೂಗಿನ ನೇರಕ್ಕೆ.ಅನಂತರ ಕೋಮುಗಲಭೆ ನಿಷೇಧ ಕಾಯ್ದೆ ಆಯಿತು.ಅದೂ ತನ್ನ ಮೂಗಿನ ನೇರಕ್ಕೆ."ಹೀಗೆ ತನ್ನ ಮೂಗಿನ ನೇರಕ್ಕೆ ಕಾನೂನುಗಳನ್ನು ಮಾಡುವುದು,ಅದನ್ನು ಮತ್ತೊಬ್ಬರ ಕುತ್ತಿಗೆಗೆ ಕುಣಿಕೆಯಾಗಿ ಮಾಡುವುದು ಹೇಗೆಂದು ಯುಪಿಎಗೆ ಚೆನ್ನಾಗಿ ಗೊತ್ತಿದೆ.ಸಂಸ್ಕತದಲ್ಲಿ ಯುಪಿಏ ಗೆ ವಧಸ್ತಂಭ ಎಂಬ ಹೆಸರೇನೋ ಇದೆಯಂತಲ್ಲ. ಅದು ಕಾಯ್ದೆಗಳ ಕಾರಣಕ್ಕೆ ಅನ್ವರ್ಥವೆನಿಸುತ್ತದೆ.
ಇದೀಗ ಅಂಥದ್ದೊಂದು ಕಾಯಿದೆ ಮತ್ತೊಂದು ಬಂದಿದೆ.ಅದು ಭೂಸ್ವಾಧೀನ ಮತ್ತು ಪುನರ್ವಸತಿ ಕಾದೆ-೨೦೧೧. ಅಂದರೆ national land acquirition and rehabitation and resettlement bill-2011ಈ ಭೂಸ್ವಾಧೀನ ಎಂಬ ಪದವೇ ಯಾಕೋ ದುರ್ಯೋಧನನನ್ನೇ ನೆನಪಿಸುತ್ತವೆ.ಪ್ರಸಕ್ತ ಕಾಯ್ದೆಯನ್ನು ನೋಡುವಾಗಲೂ ಕೂಡ ಆತನೇ ನೆನಪಾಗುತ್ತಾನೆ.ಕೊನೆಗೆ ಜಯರಾಮ ರಮೇಶ್ ಎಂದಾಗಲೂ ಕೂಡ ದುರ್ಯೋಧನನೇ ನೆನಪಾಗುತ್ತಾನೆ.ಕಳೆದ ಜುಲೈ ೨೭ರಂದು ಈ ಕಾಯ್ದೆಯ ಕರಡು ಸಿದ್ಧವಾಗಿದೆ. "ಭೂಮಿ ರಾಜ್ಯಗಳಿಗೆ ಸಂಬಂಧಪಟ್ಟ ಸಂಗತಿಯಾದರೂ ಅದನ್ನು ಅನ್ಯಾನ್ಯ ಉದ್ದೇಶಗಳಿಗೆ ಬಳಸಿಕೊಳ್ಳುವುದು ಮತ್ತು ಸ್ವಾಧೀನಪಡಿಸಿಕೊಳ್ಳುವುದರಲ್ಲಿ ಕೇಂದ್ರದ ಪಾತ್ರವಿದೆ.ಭೂಸ್ವಾಧೀನದ ಬಗೆಗಿನ ಕಾನೂನುಗಳನ್ನು ಏಕರೂಪಗೊಳಿಸುವ ಹಕ್ಕು ಕೇಂದ್ರದ್ದು" ಎಂದೆಲ್ಲ ಬರೆದಿದ್ದ ಆ ಕಾಯ್ದೆಯ ಕರಡಿಗೆ ಜುಲೈ ೨೯ರಂದು ಜಯರಾಮ ರಮೇಶ್ ಸಹಿಯನ್ನೂ ಹಾಕಿ ಕಾಯ್ದೆಯ ಬಗ್ಗೆ ಏನೇ ತಕರಾರುಗಳಿದ್ದರೂ ಆಗಸ್ಟ್ ೩೧ರೊಳಗೆ ಸಲ್ಲಿಸತಕ್ಕದ್ದು ಎಂದು ಹೇಳಿದ್ದಾರೆ.ಏಕೆಂದರೆ ಮುಂಗಾರು ಅಧಿವೇಶನದಲ್ಲಿ ಈ"ಬಿಲ್ಲನ್ನು"ಹೆದೆಯೇರಿಸಲಾಗುವುದಂತೆ.ಹಾಗಾಗಿ ತಂಟೆ ತಕರಾರುಗಳು ಶೀಘ್ರಾತಿಶೀಘ್ರ ಕೇಂದ್ರಕ್ಕೆ ಮುಟ್ಟಬೇಕು. ಜನಲೋಕಪಾಲದ ಅಲೆಯೇನಿದ್ದರೂ ಅದಕ್ಕೆ ಕೇಂದ್ರ ಹೊಣೆಯಲ್ಲ.ತಕರಾರುಗಳು ನಿರ್ದಿಷ್ಟ ಕಾಲಾವಧಿಯಲ್ಲಿ ಮುಟ್ಟದಿದ್ದರೆ ಆಕ್ಷೇಪಣೆಗಳೇನಿಲ್ಲ,ದೇಶದ ಸಮಸ್ತ ಜನಕ್ಕೆ ಕಾನೂನು ಪ್ರಿಯವಾಗಿದೆ ಎಂದು ಮುಲಾಜಿಲ್ಲದೆ ಜಾರಿಗೊಳಿಸಲಾಗುತ್ತದೆ. ಆದರೆ ತಂಟೆ ತಕರಾರುಗಳು ಹೇಗೆ ತಾನೇ ಮುಟ್ಟೀತು?ಕೇವಲ ಒಂದು ತಿಂಗಳ ಅವಧಿಯಲ್ಲಿ ಸಾರ್ವಜನಿಕ ಚರ್ಚೆಯಾಗಿ ,ಅಭಿಪ್ರಾಯಗಳು ಕ್ರೋಡೀಕರಣವಾಗುವುದು ಹೇಗೆ ಸಾಧ್ಯ?ಸಚಿವರ ಅಂಕಿತ ಬಿದ್ದು ತಿಂಗಳಾದರೂ ಇನ್ನೂ ಬಡ ಬೋರೇಗೌಡನಿಗೆ ಇಂಥದ್ದೊಂದು ಕಾಯಿದೆ ಬರುತ್ತಿರುವ ಬಗ್ಗೆ ಇನ್ನೂ ಗೊತ್ತಿಲ್ಲ. ಗೊತ್ತಾಗುವಂತಿದ್ದರೂ ಅದನ್ನು ಓದಿ ಅರ್ಥೈಸಲಾಗುತ್ತಿರಲಿಲ್ಲ.ಅರ್ಥೈಸಿಕೋಡಿದ್ದರೂ ಏನೂ ಮಾಡುವಂತಿರಲಿಲ್ಲವೇನೋ.ಏಕೆಂದರೆ ಕಾಯ್ದೆಯ ಕರಡು ಸಂಪೂರ್ಣ ಇಂಗ್ಲಿನಲ್ಲಿದೆ .ಯಾವ ಭಾರತೀಯ ಭಾಷೆಗೂ ಅದು ಅನುವಾದಗೊಂಡಿಲ್ಲ.ಹಾಗಾದರೆ ಸರಕಾರ ಯಾರಿಗಾಗಿ ಮಾಡಿತು ಇದನ್ನು?ಕಂಪೆನಿಗಳ ಸಿಇಒಗಳು ಮತ್ತು ಲೀಗಲ್ ಅಡ್ವೈಸರುಗಳಷ್ಟೇ ಅರಗಿಸಿಕೊಳ್ಳಬಹುದಾದ ಈ ಕಾದೆ,ಇದುವರೆಗಿನ ಎಲ್ಲಾ ಕಾಂಗ್ರೆಸ್‌ಪ್ರಣೀತ ಕಾದೆಗಳಂತೆ ಗೊಂದಲ,ಗೋಜಲುತನಗಳನ್ನು ಒಳಗೊಂಡಿದೆ.ಉದಾಹರಣೆಗೆ ,ಇಲ್ಲಿ ಭೂಮಿ ಕಳಕೊಳ್ಳುವುದು ಒಬ್ಬ.ಆದರೆ ಅದರ ನಿಯಮಾವಳಿಗಳನ್ನೇ ಆತ ತಿಳಿಯಲು ಅಸಮರ್ಥನೆಂದರೆ ಇದರ ಹಿಂದಿನ ಹುನ್ನಾರವೇನು?ತುರಾತುರಿಯಲ್ಲಿ ಅದನ್ನು ಪಾಸು ಮಾಡಲು ಯೋಜಿಸಿದ್ದೇಕೆ?ದೇಶಕ್ಕೆ ದೇಶವೇ ಅಣ್ಣಾಅಣ್ಣಾ ಎಂದು ಎದ್ದಿರುವಾಗ ಅವುಗಳ ಎಡೆಯಲ್ಲಿ ಇದನ್ನು ನುಸುಳಿ ಪಾಸು ಮಾಡುವುದು ಹಲವು ಸಂಶಯಗಳನ್ನು ಹುಟ್ಟಿಸುತ್ತವೆ.ಭೂಮಸೂದೆಗಳೆಂದರೆ ಭಾರತದಲ್ಲಿ ಸದಾ ಸಂಶಯವೇ.ಏಕೆಂದರೆ ಭಾರತದಲ್ಲಿ ಭೂಸ್ವಾಧೀನವೆಂದರೆ ಅದು ಮನೆಹಾಳು ಕೆಲಸವೆಂದೇ ಅರ್ಥ.ದೇಶದ ಯಾವುದೇ ಮೂಲೆಯ ಉದಾಹರಣೆಗಳನ್ನು ತೆಗೆದುಕೊಂಡರೂ ಅದು ಮಾಡಿದ್ದು ಅದನ್ನೇ.ಹೀಗಿರುವಾಗ ಪ್ರಸ್ತುತ ಕಾಯಿದೆ ಯ ತುರಾತುರಿಯ ಮಂಡನೆ ಸಾಮೂಹಿಕ ಮನೆಹಾಳು ಕಾಯೃಕ್ರಮಕ್ಕೆ ಆಡಿಗಲ್ಲಂತೆ ತೋರುತ್ತದೆ.
ಕಾಯ್ದೆ ಹೀಗೆ ಹೇಳುತ್ತದೆ:
"ಇದುವರೆಗೆ ಭಾರತದಲ್ಲಿದ್ದುದು outdated ಕಾನೂನು.೧೮೯೪ರ ಭೂಸ್ವಾಧೀನ ಕಾಯ್ದೆಯನ್ವಯ ಇಲ್ಲಿ ಭೂಸ್ವಾಧೀನ ಪ್ರಕ್ರಿಯೆಗಳು ನಡೆಯುತ್ತಿದ್ದವು.ಆದ್ದರಿಂದ ಅದನ್ನು ಹೋಗಲಾಡಿಸಲು ಹೊಸ ಕಾಯ್ದೆಯೊಂದರ ಜರೂರತ್ತು ಇದೆ" ಹಾಗಾದರೆ ಮಂಗಳೂರಿನ ಕೃಷಿ ಭೂಮಿಯನ್ನು ನುಂಗಿದ್ದು,ಒರಿಸ್ಸಾದಲ್ಲಿ,ಬಂಗಾಳದಲ್ಲಿ ,ವಿಶಾಖಪಟ್ಟಣದಲ್ಲಿ ಭೂಮಿಯನ್ನು ನುಂಗಿಹಾಗಿ ರೈತರ ಬಾಳನ್ನು ಮೂರಾಬಟ್ಟೆ ಮಾಡಿದ್ದು ವೈಸರಾಯಿಗಳು ನಿರ್ಮಿಸಿದ್ದ ಕಾನೂನುಗಳು ಎಂದು ಆಶ್ಚರ್ಯಪಡಬೇಕಿಲ್ಲ.ಏಕೆಂದರೆ ಸ್ವಾತಂತ್ರ್ಯ ಬಂದು ಆರು ದಶಕಗಳೂ ಕಳೆದರೂ ನಮ್ಮ ಕೆಐಎಡಿಬಿ ಕಾನೂನುಗಳ ಸಹಿತ ದೇಶದ ಎಲ್ಲಾ ಭೂಸ್ವಾಧೀನ ಪ್ರಕ್ರಿಯೆಯ ನಿಯಮಗಳು ಇಂದಿಗೂ ನಡೆಯುತ್ತಿರುವುದು ವೈಸರಾಯಿಗಳು ಮಾಡಿದ್ದ ಕಾನೂನುಗಳಿಂದಲೇ .ಆದರೆ ಭಾರತಕ್ಕೆ ಮಾತ್ರ ಸರ್ವತಂತ್ರ ಸಾರ್ವಭೌಮ ಗಣತಂತ್ರವೆಂಬ ಪುಗಸಟ್ಟೆ ಪಟ್ಟ.೧೮೫೭ರ ಕ್ರಾಂತಿಯ ಅನಂತರ ಈಸ್ಟ್ ಇಂಡಿಯಾದ ಆಡಳಿತ ಕೊನೆಗೊಂಡವು. ಮತ್ತು ಆವರೆಗೆ ಇದ್ದ ಕಾನೂನುಗಳನ್ನು ಅಲ್ಪಸ್ವಲ್ಪ ಬದಲು ಮಾಡಿ ಆಚರಣೆಗೆ ತರಲಾಯಿತು.ಅವುಗಳಲ್ಲಿ ಡಾಲ್ಹೌಸಿ ಮತ್ತು ವೆಲ್ಲೆಸ್ಲಿಯವರು ಜಾರಿಗೆ ತಂದ ಭೂಸ್ವಾಧೀನ ಕಾನೂನುಗಳೂ ಇದ್ದವು!ಅಂದರೆ ಇಂದು ನಡೆಯುತ್ತಿರುವುದು ಕೂಡ ಅಂಥವರು ನೆಟ್ಟುಬೆಳೆಸಿದ ಕಾನೂನುಗಳ ಚಿಗುರುಗಳೇ. ಹಾಗಾದರೆ ಸಹಾಯಕ ಸೈನ್ಯಪದ್ದತಿಯ ಕುರುಹುಗಳು ಸಂಪೂರ್ಣ ಮಾಸಿಲ್ಲ ಎಂದಾಗಿಲ್ಲವೇ?ಆದ್ದರಿಂದ ನಾವು ವಿನಾ ಕಾರಣ ನೆಹರೂ ,ಇಂದಿರಾ ,ರಾಜೀವ್,ಮನಮೋಹನರನ್ನು ಟೀಕಿಸಬಾರದು! ವೈಸರಾಯಿಗಳ ತಪ್ಪಲ್ಲವೇ!?ಇವುಗಳ ಆಧಾರದಲ್ಲೇ ಭಾರತದಲ್ಲಿ ೧೮ ಭೂಸ್ವಾಧೀನ ಕಾನೂನುಗಳೂ ಜಾರಿಗೆ ಬಂದವು.ಅವುಗಳೆಲ್ಲದರ ಮೂಲಬೇರು ೧೮೯೪ರ ಬಿಳಿಯರು ಮಾಡಿದ ಕಾನೂನೇ.ಹಾಗಾಗಿ ರೈತರ ನರಮೇಧ ನಡೆಯುವಾಗ ಸಾವಿರಾರು ಏಕರೆ ಕೃಷಿ ಭೂಮಿಯನ್ನು ಬಲವಂತದಿಂದ ವಶಪಡಿಸಿಕೊಳ್ಳುವಾಗ,ಮನೆಮಂದಿಯನ್ನು ಅಧಿಕಾರಿಗಳು ಹೊರದಬ್ಬುವಾಗ ಅಲ್ಲಿ ಭಾರತೀಯ ಮನಸ್ಸುಗಳಿರುವುದಿಲ್ಲ.ಈಗ ಮಂಡನೆಯಾಗುತ್ತಿರುವ LARR (national land acquirition and rehabitation and resettlement bill-2011) ಕಾಯಿದೆ ಕೂಡ ಅದೇ ಪುರಾತನ ವಾಸನೆಯನ್ನು ಹೊಂದಿರುವಂತಹ ಕಾನೂನು.ಕಾದೆಯ ಆರಂಭದಲ್ಲೇ ಅದನ್ನು "ಸುಧಾರಿತ"ಎಂದು ಕರೆಯಲಾಗಿದೆ.ಅಂದು ಬ್ರಿಟಿಷರು ಹೇಗೆ ಭೂಸ್ವಾಧೀನ ಮಾಡುತ್ತಿದ್ದರೋ ಹಾಗೇ ಈ ಕಾಯ್ದೆಯೂ ಭೂಸ್ವಾಧೀನವನ್ನು ಮಾಡುತ್ತದೆ. ಹಳೆಯ ಕಾನೂನುಗಳಿಗಿಂತ ಕೊಂಚ ಹೆಚ್ಚಿಗೆ ಪರಿಹಾರವನ್ನು ಕೊಡುವುದು ಇದೆ ವಿಶೇಷತೆ.ಪುನರ್ವಸತಿ ಮತ್ತು ಪುನರ್ ಚೈತನ್ಯ ಎಂಬ ಭಾಗಗಳಲ್ಲಿ ಒಂದಿಷ್ಟು ಸೇರ್ಪಡೆಗಳನ್ನು ಮಾಡಲಾಗಿದೆ.ಆದರೆ ರೈತ ಭೂ"ಯನ್ನೇ ಕಳಕೊಂಡಮೇಲೆ ಇನ್ನು ಚೈತನ್ಯವೆಲ್ಲಿ ಉಳಿದೀತು?
"ಕೈಗಾರಿಕೀಕರಣ ಮತ್ತು ಬೆಳೆಯುತ್ತಿರುವ ನಗರೀಕರಣಕ್ಕೆಂದೇ ಈ ಕರಡು ಸಿದ್ದಗೊಂಡಿದೆ"ಎಂದು ಕಾಯ್ದೆಯ ಪರಿಚಯ ಹೇಳುತ್ತದೆ.ಜೊತೆಗೆ "ಕಾಯ್ದೆ ರೈತರ ಹಿತಾಸಕ್ತಿಯನ್ನು ಕಾಪಾಡುತ್ತದೆ" ಎಂದೂ ಧ್ವನಿಗೂಡಿಸುತ್ತದೆ.ಇದು ಹೇಗೆ ಸಾಧ್ಯ?ರೈತರ ಬಾಳಿನ ಮೇಲೆ ಮತ್ತು ಕೃಷಿ ಭೂಮಿಯ ಮೇಲೆ ಸಮಾಧಿ ಕಟ್ಟಿ ಏಳುವ ಕೈಗಾರಿಕೆಗಳು ,ನಗರಗಳು ಇಂಥ ಹಸೀ ಸುಳ್ಳನ್ನು ಕಾಯ್ದೆಯಲ್ಲಿ ಹೇಳುತ್ತವೆ.ಇದುವರೆಗಿನ ವಿವಿಧ ಭೂಸ್ವಾಧೀನ ಪ್ರಕ್ರಿಯೆಗಳ ಉದ್ದೇಶ ಕೂಡ ನಗರೀಕರಣ ಮತ್ತು ಕೈಗಾರಿಕೀಕರಣವಾಗಿತ್ತು.ಮತ್ತು ಅದಕ್ಕಾಗಿ ಸ್ವಾಧೀನಗೊಂಡ ಭೂಮಿಯೆಲ್ಲವೂ ಕೃಷಿ ಭೂಮಿಗಳೇ ಆಗಿದ್ದವು. ಅಲ್ಲದೆ ಕೈಗಾರಿಕೆಗಳು ಅಪೇಕ್ಷೆ ಪಡುವುದೇ ಕೃಭೂಮಿಗಳನ್ನು ಅಲ್ಲಿ ರೈತನೊಬ್ಬನನ್ನು ಹುಟ್ಟಡಗಿಸಿದರೆ ಉಳಿದೆಲ್ಲವೂ ಸಂಪದ್ಭರಿತವಾಗಿಯೇ ಇರುತ್ತದೆ.ಭಾರತದಲ್ಲಿ ಬಹುರಾಷ್ಟ್ರೀಯ ಕಂಪೆನಿಗಳು ಕೊಬ್ಬಿದ್ದೇ ಹೀಗೆ.ಇಲ್ಲದಿದ್ದರೆ ಮಂಗಳೂರಿನ MRPL ಗೆ "ಬಾಳ"ದಂತಹ ಭೂಮಿಯೇ ಏಕೆ ಬೇಕಿತ್ತು? ಬಿತ್ತುವ ಭೂಮಿಯ ಮೇಲೆಯೇ ಏಕೆ ಪೋಸ್ಕೋಗೆ ಕಣ್ಣು?ದೇಶದ ಸಮಸ್ತ SEZ ಗಳೆಲ್ಲಾ ಏಕೆ ರೈತರ ಮಣ್ಣಿಗೇ ಕನ್ಣು ಹಾಕುತ್ತವೆ? ಇನ್ನು ಇಂಥ ಹುನ್ನಾರಗಳಿಗೆಲ್ಲಾ ಹೊಸ ಕಾನೂನು ದಿಕ್ಕು ತೋರಿಸುತ್ತದೆ. ರೈತನಿಗೆ ಅರಿ"ಲ್ಲದಂತೆ ಮಂಡಿಸಲಾಗುತ್ತಿರುವ ಈ ಕಾಯ್ದೆ ಮುಂದಿನ ವರ್ಷಗಳಲ್ಲಿ ಎಷ್ಟೋ ರೈತರ ಭೂಮಿಯನ್ನು ಹೊಂಚುಹಾಕಲು ಕುಳಿತಿರುವ ಸುಪ್ತ ಜ್ವಾಲಾಮುಖಿಯಂತೆ ಭಾಸವಾಗುತ್ತದೆ.ಇದು ಹಿಂದಿನ ಕಾನೂನುಗಳ ಪರಿಷ್ಕರಣೆಯಾದರೆ ಪುನರ್ವಸತಿಯ ಬಗ್ಗೆಯೇ ಗಮನ ಕೇಂದ್ರೀಕರಿಸಿರುವುದು ಮುಂದಿನ ಅಪಾಯವನ್ನು ಸೂಚಿಸುತ್ತವೆ.ಏಕೆಂದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಸರಕಾರಗಳು ಸಾಕಷ್ಟು ಏಟುತಿಂದವು. ಇವುಗಳನ್ನು ನಿವಾರಿಸಿಕೊಳ್ಳಲು ಅರ್ಥಾತ್ ಆಮಿಷದ ಮೂಲಕ ಭೂಮಿಯನ್ನು ವಶಪಡಿಸಿಕೊಳ್ಳಲೆಂದೇ ಇದನ್ನು ನಿರ್ಮಿಸಿದಂತಿದೆ.ಮೊದಲಿನಂತೆ ಗಿರಿಜನರನ್ನು ಒಕ್ಕಲೆಬ್ಬಿಸುವುದು ಇಲ್ಲೂ ನಡೆಯುತ್ತದೆ.ಭೂಮಿಯನ್ನು ವಶಪಡಿಸಿಕೊಲ್ಳುವ ಪ್ರಕ್ರಿಯೆಗಳೂ ಕೂಡ ಮೊದಲಿನಂತೆಯೇ.ಅಂದರೆ ಮೊದಲು ಕಂಪೆನಿಗಳು ಆಯಕಟ್ಟಿನ ನೆಲವನ್ನು ತನಗೆ ಬೇಕೆಂದು ಕೇಳುತ್ತದೆ.ಅಲ್ಲಿಂದ ಸರಕಾರಗಳು ಈ ಕಾಯ್ದೆಯ ಬಲದಿಂದ ಭೂಮಿಯನ್ನು ನೋಟಿಫೈ ಮಾಡುತ್ತದೆ.ಅನಂತರ ಅಹವಾಲು ಸ್ವೀಕರಿಸುತ್ತದೆ.ಆದರೆ ಯಾವುದೇ ಕಾರಣಕ್ಕೆ ಭೂಸ್ವಾಧೀನದಿಂದ ಹಿಂದೆ ಸರಿಯುವುದಿಲ್ಲ.ಏಕೆಂದರೆ ಸದ್ಯದ ಕಾನೂನಿನ ಮುಖ್ಯ ವ್ಯಾಖ್ಯಾನದಲ್ಲಿ "ಭೂಸ್ವಾಧೀನ ಮತ್ತು ಪುನರ್ವಸತಿಗಳು ಒಂದೇ ನಾಣ್ಯದ ಎರಡು ಮುಖಗಳು" ಎಂದು ಹೇಳುತ್ತದೆ.ಅಂದರೆ ಭೂಸ್ವಾಧೀನವನ್ನು ಶತಾಯಗತಾಯ ಸಮರ್ಥಿಸಿಕೊಳ್ಳುತ್ತದೆ.ಹೀಗೆ ಆರಂಭವಾಗುವ ಕಾನೂನು ಸಾರ್ವಜನಿಕ ತಕರಾರುಗಳನ್ನು ಆಲಿಸಿದ ಅನಂತರ ನೇರವಾಗಿ ಡೀಲಿಗಿಳಿಯುತ್ತದೆ.ಅದನ್ನು ಕಾಯ್ದೆಯ ಮುಖ್ಯ ಅಂಗ R&R(rehabitation and resettlement) ನಲ್ಲಿ ಉಲ್ಲೇಖಿಸಲಾಗಿದೆ.ಬದಲಿ ಭೂಮಿ ಅಥವಾ ಪರಿಹಾರರೂಪವಾಗಿ ಹಣ ಅಥವಾ ಅವೆರಡನ್ನೂ ಅನುಪಾತಾಧಾರದಲ್ಲಿ ಕೊಡುವ ವ್ಯವಸ್ಥೆಯನ್ನು ಇದು ತಿಳಿಸುತ್ತದೆ.ಸ್ವಾಧೀನವಾಗುವ ಜಮೀನಿನಲ್ಲಿರುವ ಗಿಡ,ಬಳ್ಳಿ,ಮರ,ಆಕಳು,ಕೊಟ್ಟಿಗೆಗಳಿಗೂ ಇಂಥಿಷ್ಟು ಎಂದು ದರ ನಿಗದಿ ಮಾಡುತ್ತದೆ.ಎಲ್ಲಾ ಹಳೆಯ ವಿಧಾನವನ್ನೇ ಅನುಸರಿಸಲಾಗುತ್ತದೆ.ಆದರೂ ಹೊಸರೂಪದಲ್ಲಿ ,ಹೊಸ ಮೇಕಪ್ ಧರಿಸಿ ಮತ್ತಷ್ಟು ಹಸಿವಿನಿಂದ ಕಾನೂನು ಬರುತ್ತಿದೆ.ಎಲ್ಲದಕ್ಕೂ ಬೆಲೆ ಕಟ್ಟಬಹುದು,ಬೆಲೆ ಕೊಡಬಹುದು.ಆದರೆ ಗಂಟು ಮೂಟೆ ಕಟ್ಟಿ ಹೊರಡುವಾಗ ರೈತನ ಕಡೆಯ ಉಸಿರಿಗೆ,ಕಟ್ಟಕಡೆಯ ಹೆಜ್ಜೆಯ ಭಾರಕ್ಕೆ ಈ ಕಾನೂನು ಯಾವ ದರವನ್ನೂ ನಿಗದಿಪಡಿಸುವುದಿಲ್ಲ.ಈ ಕಾನೂನು ರೈತನಲ್ಲದ ಭೂಮಿಯತ್ತ ಕಣ್ಣೆತ್ತಿಯೂ ನೋಡುವುದಿಲ್ಲ. ರೈತನಿಗಿಂತ ಕೈಗಾರಿಕೆಗಳು ಮತ್ತು ನಗರೀಕರಣವೇ ಮುಖ್ಯ ಎನ್ನುವುದಾದರೆ ದೇಶದ ಬಹುಸಂಖ್ಯಾತ ಸಮುದಾಯ ರೈತರು ಎಲ್ಲಿಗೆ ಹೋಗಬೇಕು?
ಸರಕಾರಕ್ಕೊಂದು ಅವಕಾಶವಿತ್ತು. ಹಳೆಯ ಬಿಳಿಯರು ಮಾಡಿದ ಕಾನೂನನ್ನು ಗುಂಡಿಗೆ ಹಾಕಿ ಭಾರತೀಯ ರೈತನಿಗೆ ನೆಮ್ಮದಿ ನೀಡುವ ಕಾನೂನನ್ನು ಜಾರಿಗೊಳಿಸಬಲ್ಲ ಎಲ್ಲಾ ಅವಕಾಶಗಳೂ ಇದ್ದವು. ಆದರೆ ಕಾಂಗ್ರೆಸಿನ ಬಿಲ್ಲುಗಳೆಲ್ಲವೂ ಗುಬ್ಬಿಯನ್ನು ಉರುಳಿಸಲೆಂದೇ ನಿರ್ಮಾಣವಾಗಿರುತ್ತವೆ. ಇನ್ನಷ್ಟು SEZ ಗಳ ನಿರ್ಮಾಣದ ಹುನ್ನಾರ ಇದರಿಂದಲೇ ಗೋಚರವಾಗುತ್ತವೆ. ರೈತರು ಸತ್ತರೆ ಸರಕಾರಕ್ಕೆ ತಾನೇ ಏನು? ಐಪಿಎಲ್ ಗೆ ತೊಂದರೆಯೇ ಅಥವಾ ಸೋನಿಯಾಳಿಗೆ ಆಪತ್ತೇ?

ಇದು ಕಾಂಗ್ರೆಸ್ ಗಣಪತಿ ಮಾರಾಯ್ರೆ

ಗುಡಿಯಲ್ಲಿದ್ದ ಗಣಪ ಬೀದಿಗೆ ಬಂದಿದ್ದ .ಅಂದಿನ ಕಾಲಕ್ಕೆ ಆ ಕಲ್ಪನೆಯೇ "ಚಿತ್ರ ಮತ್ತು ಭಯಾನಕವಾಗಿತ್ತು.ಗರ್ಭಗುಡಿಯಲ್ಲಿ ಮಡಿವಂತಿಕೆಂದ ಪೂಜಿಸಿಕೊಳ್ಳುವ ಗಣಪನನ್ನು ಬೀದಿಗೆ ತರುವುದೆಂದರೇನು?ಕೊನೆಗೆ ಆತನನ್ನು "ಸರ್ಜಿಸಿಬಿಡುವುದೇ?ಭಗವಂತನಲ್ಲವೇ?ಮುಂತಾದ ಸವಾಲುಗಳು ಆಂದು ಕೊಂಚ ಹೆಚ್ಚೇ ಇದ್ದವು.ಆ ಸವಾಲುಗಳನ್ನು ಎದುರಿಸಿ ಗಣಪನನ್ನು ಬೀದಿಗೆ ತರಲು ಅಧಮ್ಯ ಧೈರ್ಯಶಾಲಿಯೂ ಮಹಾನ್ ಬುದ್ಧಿಶಾಲಿಯೂ ಆದ ವ್ಯಕಿಂದ ಮಾತ್ರ ಸಾಧ್ಯ"ತ್ತು.ಆ ಕಾರ್ಯವನ್ನು ಬ್ರಿಟಿಷ್ ಸರಕಾರ "ಬಾಲ್"ಎಂಬ ಒಂದು ಹೆಸರಿನಿಂದ ಹೆದರುತ್ತಿದ್ದ ವ್ಯಕ್ತಿ ಮಾಡಿ ಮುಗಿಸಿದ್ದ.ಗುಡಿಯ ಗಣಪತಿ ಬೀದಿಗೆ ಬಂದ .ಜೊತೆಗೆ ಜನರೆಲ್ಲರನ್ನೂ ಕರೆತಂದ. ತನ್ನ ನೆಪದಲ್ಲಿ ಜನರನ್ನು ಕುಣಿಸುತ್ತಾ ,ಉತ್ಸಾಹವನ್ನು ಕೊಡುತ್ತಾ ಸಮಸ್ತ ರಾಷ್ಟ್ರಕ್ಕೆ ಚಪ್ಪರವೂ ಆಗಿಹೋದ ಈ ಗಣಪ.ಗಣಪ ಜನರಿಗೆ ಹತ್ತಿರವಾದ.ಬೇರಾವ ದೇವನೂ ಹತ್ತಿರವಾಗದಷ್ಟು ಜನರ ಸ"ಪಕ್ಕೆ ಬಂದ.ಕೊನೆಕೊನೆಗೆ ಜನ ಗಣಪನನ್ನೇ ರಾಷ್ಟ್ರವೆಂದರು.ಸ್ವದೇಶಿಯ ಪ್ರತೀಕವೆಂದರು.ಹೋರಾಟದ ನಾಯಕನೆಂದರು.ದೇಶದಲ್ಲಿ ರಾಷ್ಟ್ರಭಾವದ ಉದಯ ಬುದ್ಧಿಜೀ" ವರ್ಗಗಳಲ್ಲಿ ಅಗಿರಬಹುದು.ಆದರೆ ಅದನ್ನು ಜನಸಾಮಾನ್ಯರಿಗೆ ಮುಟ್ಟಿಸಿದವನು ಈ ಸೊಂಡಿಲು ಮುಖದ ಗಣಪನೇ.ಗಣಪನೆದುರಲ್ಲಿ ಆದನ್ನು ಬೀದಿಗೆ ತಂದ ಬಾಲಗಂಗಾಧರ ತಿಲಕರೇ ಮಂಕಾಗಿಹೋದರು. ತಿಲಕರು ಮುಟ್ಟದೆಡೆಯಲ್ಲೆಲ್ಲಾ ಗಣಪ ಬೀದಿಗಿಳಿದ.
ಸಾರ್ವಜನಿಕ ಗಣೇಶೋತ್ಸವದ "ಂದೆ "ಗೊಂದು ಮಹಾನ್ ಅದರ್ಶ"ದೆ.ದೊಡ್ಡವರು ತೋರಿಸಿದ ಮೌಲ್ಯಗಳಿವೆ.ಇಂದಿಗೂ ಸಾರ್ವಜನಿಕ ಗಣೇಶೋತ್ಸವಗಳು ದೇಶದೆಲ್ಲೆಡೆ ನಡೆಯುತ್ತಿರುವುದು ತಿಲಕರ ಆಂದಿನ ಯೋಜನೆಯ ಮಹತ್ತ್ವಕ್ಕೆ ಸಾಕ್ಷಿ.ಇಂದಿಗೂ ಜನ ಗಣಪನ ನೆಪದಲ್ಲಿ ದೇಶದ ಬಗ್ಗೆ ಮಾತಾಡುತ್ತಾರೆ.ಸಾಂಸ್ಕತಿಕತೆ ಎಂಬುದು ಗಣಪನೊಟ್ಟಿಗೆ ಜೋಡಿಕೊಳ್ಳುತ್ತದೆ.ಅಂದರೆ ಸ್ವಾತಂತ್ರ್ಯ ಬಂದು ಆರು ದಶಕಗಳು ಕಳೆದರೂ ಗಣೇಶೋತ್ಸವದ ಮಹತ್ತ್ವ"ನ್ನೂ ಕಡಿಮೆಯಾಗಿಲ್ಲ.ಅದಕ್ಕೆ ಉದಾಹರಣೆಯಾಗಿ ಕಾಣುವ ಹಲವು ಗಣಪರು ನಮ್ಮ ಕರ್ನಾಟಕದಲ್ಲಿವೆ.ಅಂಥ ಒಂದು ಗಣಪ ಮಂಗಳೂರಿನ ಸಂಘನಿಕೇತನ ಗಣಪ.ಇದೀಗ ಅ ಗಣಪನಿಗೆ ೬೫ ವರ್ಷಗಳು.ಸ್ವಾತಂತ್ರ್ಯ ಬಂದ ಹೊಸತರಲ್ಲಿ ರ‍್ಟ್ರಾಯ ಭಾವನೆಯನ್ನು ಮತ್ತಷ್ಟು ಉಜ್ಜುಗಿಸುವ ಅಗತ್ಯ"ದೆ ಎಂದು ಸಾರಿದವನು ಈ ಗಣಪ. ಇಲ್ಲಿ ಮತ್ತೊಂದು "ಶೇಷವೆಣದರೆ ಗಣಪನೊಟ್ಟಿಗೆ ತಿಲಕರ ಫೋಟೋವನ್ನೂ ಭಗವಧ್ವಜವನ್ನೂ ಇಡಲಾಗುತ್ತದೆ.ವ್ಯ್ಠ-ಸಮಸ್ಠಿ-ಪರಮ್ಠೇಗಳು ಮೇಳ"ಸಿದ ಈ ಗಣಪ ರ‍್ಟ್ರಾಯ ಜಾಗರಣೆಯನ್ನೂ ಇತಿಹಾಸದ ಪಾಠವನ್ನೂ ಒಟ್ಟೊಟ್ಟಿಗೆ ಸಾರುತ್ತಾನೆ.ಹಾಗಾಗಿ ಸಂಘನಿಕೇತನದ ಈ ಗಣಪ ಕರಾವಳಿಯಲ್ಲಿ ಅತ್ಯಂತ ಜನಪ್ರೀಯ ಗಣಪ.ಇಲ್ಲಿನ "ಸರ್ಜನೆಗೆ "ದೇಶದಿಂದಲೂ ಭಕ್ತರು ಭಾಗವ"ಸುವುದು ಅದರ ಮಹತ್ತ್ವಕ್ಕೆ ಸಾಕ್ಷಿ.ಅಂದು ತುರ್ತುಪರಿಸ್ಥಿತಿಯ ಕಾಲದಲ್ಲಿ ನಿಷೇಧದ ನಡುವೆಯೂ ಸಾ"ರಾರು ಜನರನ್ನು ಸೇರಿಸಿ,ತಿಂಗಳುಗಳ ಕಾಲ ಪೂಜಿಸಿಕೊಂಡಿದ್ದ ಎಂಬ ರೋಮಾಂಚನಕಾರಿ ಇತಿಹಾಸ"ದೆ.ಪೊಲೀಸ್ ಕಾವಲಿನ ಮದ್ಯೆಯೇ ಸಾಹಸದಿಂದ ಗಣಪನನ್ನು ಪ್ರತಿಷ್ಠಾಪಿಸಿದ ಕಥೆಯನ್ನು ಹೇಳುವವರು ಇಂದಿಗೂ ಮಂಗಳೂರಿನಲ್ಲಿ ಸಿಗುತ್ತಾರೆ.ಆ ಸಮಯದಲ್ಲಿ ಜನರಂತೂ ಗಣಪ ಇದ್ದಕ್ಕಿಂದತೆ ಉದ್ಭವವಾದವನು ಎಂದೇ ಆಡಿಕೊಂಡಿದ್ದರಂತೆ.ತುರ್ತುಪರಿಸ್ಥಿತಿ "ರೋಧಿ ಅಲೆಗಳು ಮತ್ತಷ್ಟು ಹೆಚ್ಚಾವಂತೆ.ಇದು ಎರಡನೆ ಸ್ವಾತಂತ್ರ್ಯ ಸಮರ ಎಂದು ಕರೆಯಲ್ಪಟ್ಟ ಸಮಯದಲ್ಲಿ ಗಣಪ ಉಂಟು ಮಾಡಿದ ರ‍್ಟ್ರಾಯ ಅಲೆ.ಹಾಗಾದರೆ ಗಣಪನೆಂದರೆ ಜಾಗರಣದ ನಿರಂತರ ಸಾಧನವಲ್ಲವೇನು?
ಕರ್ನಾಟಕದ ಇತರೆಡೆಗೆ ಹೋಲಿಸಿದರೆ ದ.ಕನ್ನಡದ ಸಾರ್ವಜನಿಕ ಗಣೇಶೋತ್ಸವಗಳ ಸ್ಥಾನ ಮಹತ್ತ್ವದೆಂದು ಹೇಳಬೇಕು.ಏಕೆಂದರೆ ಆದರ್ಶದ ಆಶಯವನ್ನು ಹೊತ್ತುಕೊಂಡ ಹಲವು ಗಣಪರು ಇಲ್ಲಿನ ಊರುಗಳಲ್ಲಿದ್ದಾರೆ.ತಿಲಕರ ಪಟ"ಟ್ಟು ಅರ್ಚನೆಗೊಳ್ಳುವ ಗಣಪರು,ಸಿನಿಮಾ ಹಾಡುಗಳು,ಪಾಶ್ಚಾತ್ಯ ಡ್ಯಾನ್ಸುಗಳು ಇಲ್ಲದ ಸಾರ್ವಜನಿಕ ಗಣೇಶೋತ್ಸವವನ್ನು ನೋಡಬೇಕೆಂದರೆ ಕರಾವಳಿಗೇ ಬರಬೇಕು.ಅದು ಜಾಗೃತ ಮತ್ತು ಚೈತನ್ಯಯುಕ್ತ ಸಮಾಜವೊಂದರ ಲಕ್ಷಣ.ಸ್ಥಳೀಯ ಜನಪದದ ಸೊಗಡು,ಯಕ್ಷಗಾಗಗಳು,ಭಜನೆಗಳು ಇಲ್ಲಿನ "ಸರ್ಜನೆಯ ಸಂದರ್ಭದಲ್ಲಿ "ಶಿಷ್ಟ ಅನುಭೂತಿಯನ್ನು ಉಂಟುಮಾಡುತ್ತದೆ.
ಇದೀಗ ಕರಾವಳಿಯ ಸಾರ್ವಜನಿಕ ಗಣೇಶೋತ್ಸವಗಳಲ್ಲಿ ಅಲ್ಲಲ್ಲಿ ಅಪಸ್ವರಗಳು ಏಳುತ್ತಿವೆ.ಮೂವತ್ತು,ನಲವತ್ತು,ಐವತ್ತು ವರ್ಷದ ಗಣಪನ ಉತ್ಸವಗಳ ಸ"ತಿಗಳೂ ಒಡೆಯುತ್ತಿವೆ.ಯಾವ ಗಣಪ ಸಮಾಜವನ್ನು ಒಂದುಗೂಡಿಸುತ್ತಿದ್ದನೋ,ಒಂದುಗೂಡಿಸಬೇಕಿತ್ತೋ ಅದೇ ಗಣಪ ಇಂದು ಊರು ಒಡೆಯುತ್ತಿದ್ದಾನೆ.ಸಮಾಜದ ಚಪ್ಪರವಾಗಬೇಕಿದ್ದ ಗಣಪ ಇಂದು ಕೆಲವು ಧೂರ್ತ ಜನರ ಕೈಯಲ್ಲಿ ಸಿಲುಕಿ "ಪ್ಲವಕಾರಿಯಾಗಿದ್ದಾನೆ.ನಿಜ.ಅದಕ್ಕೆಲ್ಲಾ ಕಾರಣ ಅದೇ ಕಾಂಗ್ರೆಸ್.ಅದೇ, ಅಂದು ದೇಶ ಒಡೆತಲ್ಲಾ ಆ ಕಾಂಗ್ರೆಸ್.ಅಂದು ತಿಲಕರು ಪ್ರತಿಷ್ಠಾಪಿಸಿದ ಗಣಪನಿಂದ ಜನರನ್ನು ತಮ್ಮ ಚಳವಳಿಗೆ ಬಳಸಿಕೊಂಡರಲ್ಲಾ ಅದೇ ಕಾಂಗ್ರೆಸ್.ಇದೇ ಮಂಗಳೂರಿನಲ್ಲಿ ಪಬ್ ಸಂಸ್ಕತಿಯ ಬಗ್ಗೆ ಮಾತಾಡಿದರಲ್ಲಾ ಅದೇ ಕಾಂಗ್ರೆಸ್.ಗಣಶೋತ್ಸವದ ಮೂಲ ಇಂದು ಬೇರೆಯೇ ಗಣಪತಿ ಬೇಕಂತೆ.ಊರಿಗೆ ಊರೇ ಸೇರುತ್ತಿದ್ದ ಗಣಪರೆಲ್ಲಾ ಕೋಮು ಆಂತೆ.ಶುದ್ಧ ಜಾತ್ಯತೀತವಾದ ,ಕೇಸರಿಯ ಹಂಗಿಲ್ಲದ ಗಣಪತಿ ಪ್ರತಿಷ್ಠಾಪನೆ ಅವರಿಗೆ ಬೇಕಂತೆ.ಪುರಾತನ "ನ್ನಲೆರುವ ಉತ್ಸವಗಳಿಂದ ಬೇರ್ಪಟ್ಟು ಹೊರಗೆ ಹೋಗಿರುವ ಹಲವು ಉದಾಹರಣೆಗಳು ಇಂದು ಕರಾವಳಿಯಲ್ಲಿ ಕಂಡುಬರುತ್ತಿವೆ.ಬಂಟ್ವಾಳದಲ್ಲಿ ಮೌಲ್ಯಯುತವಾಗಿ ನಡೆಯುತ್ತಿದ್ದ ಉತ್ಸವ ಮಾಜಿ ಕಾಂಗ್ರೆಸ್ ಸಚಿವರೊಬ್ಬರಿಂದ ಒಡೆತು.ನಿರಂತರ ಸೋಲಿನ ಸುಳಿಗೆ ಸಿಲುಕಿ ಅವರು ಗೆಲ್ಲಲು ಆರಿಸಿಕೊಂಡಿದ್ದು ಗಣಪನನ್ನು."ಗೆ ಸ್ವಾರ್ಥ ರಾಜಕಾರಣದಿಂದ ಊರಿನಲ್ಲಿ ಎರಡು ಬಣಗಳಾಗಿವೆ.ಒಂದೇ ಊರಿನಲ್ಲಿ ಕಳೆದ ಮೂರು ವರ್ಷಗಳಿಂದ ಎರಡು ಗಣಪರು.ಅದರಲ್ಲೇನೂ ತಪ್ಪಿಲ್ಲ ಎಂದುಕೊಳ್ಳುವ ಹಾಗೂ ಇಲ್ಲ. ಏಕೆಂದರೆ ಇದು ಕಾಂಗ್ರೆಸ್ ಗಣಪತಿ ಮಾರಾಯ್ರೆ.ತಿಲಕರ ಪಟ"ಟ್ಟು ಮಾಡುವ ಉತ್ಸಕ್ಕಿಂತ,ಜಾತಿಯತೆಯನ್ನು ತೊಲಗಿಸಿ ಸಾಮರಸ್ಯ ಮೂಡಿಸುವ ಉತ್ಸವಕ್ಕಿಂತ,ಊರಿನ ಮಕ್ಕಳಲ್ಲಿ ಉತ್ಸಾಹ ಉದ್ದೇಶ ಭಿನ್ನವಾದ ಉತ್ಸವವನ್ನು ಮಾಡಲು ಕಾಂಗ್ರೆಸಿಗರು ಹೊರಟಿದ್ದಾರೆ.ಇದನ್ನು ಸಮ್ಮತ ಎನ್ನಲು ಹೇಗೆ ಸಾಧ್ಯ?ನಿಜವಾಗಿ ಇವರಿಗೆ ಗಣಪನ ಮೇಲಿನ ಭಕ್ತ್ತಿಯೋ ತಿಲಕರ ಮೇಲಿನ ಗೌರವವೋ ಇದ್ದಿದ್ದರೆ "ಗೆ ಮಾಡಲು ಹೇಗೆ ಸಾಧ್ಯವಾಗುತ್ತಿತ್ತು?ಇದೀಗ ಬಂಟ್ವಾಳದ ಪ್ರೇರಣೆಯನ್ನು ಪಡೆದು ಕರಾವಳಿಯ ಹಲವು ಕಡೆಗಳಲ್ಲಿ ಕಾಂಗ್ರೆಸ್ ಗಣಪರು ಪ್ರತಿಷ್ಠಾಪನೆಗೆ ಸಿದ್ಧವಾಗುತ್ತಿದ್ದಾರೆ.ಅದೇ ತಾಲೂಕಿನ ಸಿದ್ಧಕಟ್ಟೆ ಎಂಬಲ್ಲಿ,ಫರಂUಪೇಟೆ ಎಂಬಲ್ಲಿ ಭಿನ್ನಾಭಿಪ್ರಾಯಗಳು ಈಗಾಗಲೇ ಶುರುವಾಗಿವೆ.ಹೆಸರುವಾಸಿ ಬೆಳ್ತಂಗಡಿಯ ಗಣೇಶನಿಗೆ ಇದು ೫೦ರ ಸಂಭ್ರಮ.ಅದರೆ ಐವತ್ತರ ಹೊತ್ತಲ್ಲೇ ಕಾಂಗ್ರೆಸಿಗರು ಬೇರೊಂದು ಗಣೇಶೋತ್ಸವಕ್ಕೆ ಅಡಿಟ್ಟಿದ್ದಾರೆ.ಅದೂ ಬಾರ್ ಒಂದರ ಮುಂಬಾಗದಲ್ಲಿ! ಪಬ್ ಸಂಸ್ಕತಿಯನ್ನು ಸಮರ್ಥಿಸುವವರು ಬಾರ್‌ನ ಮುಂದೆ ಗಣಪತಿ ಕೂರಿಸುತ್ತಾರೆ.ಇದು ಕೂಡ ಕಾಂಗ್ರೆಸ್ ಗಣಪತಿ ಮಾರಾಯ್ರೆ.ಇದುವರೆಗೆ ಈ ಎಲ್ಲಾ ಕಡೆ ಗಣೇಶೋತ್ಸವಗಳೆಂದರೆ ಧಾ"ಕ ಕಾರ್ಯಕ್ರಮಗಳು ಮೊದಲಾದ ಅರ್ಥಪೂರ್ಣ ಕಾರ್ಯಕ್ರಮಗಳಿರುತ್ತಿದ್ದವು.ಅದರೆ ಕಾಂಗ್ರೆಸ್ ಗಣಪನ ಉತ್ಸವದಲ್ಲಿ ಏನೇನೆಲ್ಲಾ ಇರಬಹುದು ಎಂದು ಜನ ಮಾತಾಡಿಕೊಳ್ಳುತ್ತ್ತಿದ್ದಾರೆ.ಏಕೆಂದರೆ ಚುನಾವಣಾ ಪ್ರಚಾರಕ್ಕೆ ಕ್ಯಾಬರೆಯನ್ನೇ ಏರ್ಪಡಿಸಿದವರಲ್ವೇ ಈ ಕಾಂಗ್ರೆಸ್‌ನವರು?ಹಾಗಾಗಿ ಜನರ ಸಂಶಯದಲ್ಲೂ ಹುರುಳಿದೆ.
ಕರಾವಳಿಯಲ್ಲಿ ಧಾ"ಕತೆಯನ್ನು ಬಳಸಿ ಊರು ಒಡೆಯುವ ತಂತ್ರಗಾರಿಕೆ ಇದೇನೂ ಮೊದಲಲ್ಲ.ಹೇಳಿಕೇಳಿ ಕರಾವಳಿ "ಂದುತ್ವದ ಭದ್ರ ಕೋಟೆ.ಇಲ್ಲಿನ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳು ಕೇಸರಿಯ ಅಲಂಕಾರ"ಲ್ಲದೆ ನಡೆಯುವುದಿಲ್ಲ."ಂದೂ ಎನ್ನದೆ ಯಾವ ಭಾಷಣವೂ ಕೊನೆಗೊಳ್ಳುವುದಿಲ್ಲ.ಅಂಥಲ್ಲಿ ಇದೇ ಕೇಸರಿ ರಾಜಕೀಯವಾಗಿ ಬಲಗೊಳ್ಳುವಾಗ ಕಾಂಗ್ರೆಸ್ ಎಂದಾದರೂ ಸುಮ್ಮನಿರುವುದೇ?ಹಾಗಾಗಿ ಅದು ದಶಕಗಳ "ಂದಿನಿಂದ ಸದಾ ಹೊಂಚುಹಾಕುತ್ತಲೇ ಬಂದಿದೆ.ಜಾತಿಂದ ಸಮಾಜವನ್ನು ಒಡೆಯಲು ನೋಡಿದ್ದಿದೆ.ಅದರೆ ಕರಾವಳಿಯಲ್ಲಿ ಜನರು ಬಡವ ಬಲ್ಲಿದರೆನ್ನದೆ ಒಕ್ಕೊರಲಿಂದ "ಂದೂ ಎಂದರೇ ಹೊರತು ಜಾತ್ಯಾಂಧರಾಗಲಿಲ್ಲ. ಬಹುಸಂಸ್ಕತಿಯ ಕರಾವಳಿಯಲ್ಲಿ ಕಾಂಗ್ರೆಸಿನ ಯಾವ ಬೇಳೆಯೂ ಬೆಳೆಯಲಿಲ್ಲ.ಅದರೆ ಕಾಂಗ್ರೆಸ್ ತನ್ನ"ಫಲ ಪ್ರಯತ್ನವನ್ನು ಬಿಡಲಿಲ್ಲ.ಅಂದು ಜಿಲ್ಲೆಗೆ ಜಿಲ್ಲೆಯೇ ಶಿರಾಮ ಮಂದಿರ ನಿರ್ಮಾಣದ ದೀಕ್ಷೆಯಲ್ಲಿ ತೊಡಗಿದಾಗಲಂತೂ ಕಾಂಗ್ರೆಸ್ ಈ ಜನ್ಮದಲ್ಲಿ ತಾನಿನ್ನು ಕರಾವಳಿಯಲ್ಲಿ ಬೇರುಬಿಡಲು ಅಸಾಧ್ಯ ಎಂದೇ ಚಡಪಡಿಸಿತು.ಆಗ ಜನಾರ್ದನ ಪೂಜಾರಿ ಎಂಬ ಕಾಂಗ್ರೆಸ್ ಮುಖಂಡ ಕೈಗೆತ್ತಿಕೊಂಡಿದ್ದೇ ಕುದ್ರೋಳಿ ಶಿ ಗೋಕರ್ಣನಾಥ ದೇಗುಲದ ನ"ಕರಣವನ್ನು.ಯಾವ ಗುಡಿಯು ಸರಳವಾಗಿರಬೇಕೆಂದೂ ಯಾವ ಗುಡಿಯು ವೈದಿಕ ಪದ್ದತಿಗಿಂತ ಭಿನ್ನೌಆಗಿಬೇಕೆಂದು ಬ್ರರ್ಹ್ಮ ನಾರಾಯಣಗುರುಗಳು ಅಪೇಕ್ಷೆ ಪಟ್ಟಿದ್ದರೋ ,ಎಂಥ ಗುಡಿಯನ್ನು ಅವರು ನಿ"ಸಿದ್ದರೋ ಅದಕ್ಕೆ ವ್ಯತಿರಿಕ್ತವಾದ ದೇಗುಲವನ್ನು ಪೂಜಾರಿಗಳು ನಿ"ಸಿಬಿಟ್ಟರು.ಬಹುಮಹಡಿ ಮಾಲ್ ನಂತೆ ಕಾಣುವ ವೈದಿಕ ರೀತಿಗಿಂತ ಭಿನ್ನವಾಗಿಲ್ಲದ ವೈಭವದ ಪೂಜೆ ,ಮೆರವಣಿಗೆಗಳ ಏರ್ಪಾಡನ್ನೂ ಮಾಡಿದರು. ಕರಾವಳಿಯಲ್ಲಿ ಪ್ರಭಾ" ಜನಾಂಗ ಬಿಲ್ಲವರನ್ನು ತೆಕ್ಕೆಗೆ ತೆಗೆದುಕೊಳ್ಳುವ ಪೂಜಾರಿಗಳ ಪ್ರಯತ್ನ ಯಶ ಕಾಣಲಿಲ್ಲ.ಎಷ್ಟೆಂದರೂ ಪೂಜಾರಿಗಳು ಬಿಲ್ಲವರ ನಾಯಕನೆನಿಸಿಕೊಳ್ಳಲಿಲ್ಲ.ಅವರ ಅಲ್ಪಸಂಖ್ಯಾತರ ತ್ಟುಕರಣ,ದೇಗುಲದ ಪೂಜೆಯ ಸಮಯದಲ್ಲಿ ಪಕ್ಕದ ಮಸೀದಿಯ ಬಾಂಗ್ ಗೆ ಪೂಜಾರಿಗಳು ಎದ್ದುನಿಂತು ಗೌರವ ಕೊಡುವುದನ್ನು ಪ್ರತ್ಯಕ್ಷ ಕಂಡ ಜನ ಅವರನ್ನು ಮತ್ತೆಂದೂ ಚುನಾವಣೆಯಲ್ಲಿ ಗೆಲ್ಲದಂತೆ ಮಾಡಿಬಿಟ್ಟರು.ಇನ್ನು ಗಣೇಶೋತ್ಸವದಿಂದ ಇವರು ಕೋಟೆ ಕಟ್ಟುವುದು ಅಷ್ಟರಲ್ಲೇ ಇದೆ.ಅದರೆ "ಷಯ"ರುವುದು ಕಾಂಗ್ರೆಸಿನ ರಣತಂತ್ರದಲ್ಲಿ.ತನ್ನ ಸ್ವಾರ್ಥಕ್ಕಾಗಿ ಅದು ಏನೇನೆಲ್ಲಾ ಮಾಡುತ್ತದೆ ಎಂಬುದಕ್ಕೆ ಗಣಪನೇ ಒಂದು ಸಾಕ್ಷಿ.
ಬಹಳ ಜನ ಕಾಂಗ್ರೆಸಿನವರಿಗೆ ಗಾಂಧಿ ಅರ್ಥವಾಗುತ್ತಿಲ್ಲ ಎಂದು ಜನ ಮಾತಾಡಿಕೊಳ್ಳುತ್ತಿರುತ್ತಾರೆ. ಕಾಂಗ್ರೆಸ್ ಗಣಪರನ್ನು ನೋಡಿದರೆ ಇವರಿಗೆ ತಿಲಕರೂ ಗೊತ್ತಿಲ್ಲ ಎಂದು ಎನಿಸುತ್ತದೆ.