
ಈ ಕಥೆಯನ್ನು ಬಹುಶಃ ಎಲ್ಲರೂ ಕೇಳಿರಬಹುದು. ಬಾಲಕ ಭಗತ್‌ಸಿಂಗ್ ಅಪ್ಪನೊಟ್ಟಿಗೆ ಹೊಲಗದ್ದೆಗಳಲ್ಲಿ ಹೆಜ್ಜೆ ಹಾಕುತ್ತಿದ್ದ. ಆತನದು ಕಂಡದ್ದಕ್ಕೆಲ್ಲಾ ಪ್ರಶ್ನಿಸುವ ಜಾಯಮಾನ. ಕೆಲವೊಮ್ಮೆ ತುಂಟತನದ, ಇನ್ನು ಕೆಲವೊಮ್ಮೆ ಅರ್ಥಗರ್ಭಿತ ಪ್ರಶ್ನೆಗಳು ಆತನಿಂದ ಪುಂಖಾನುಪುಂಖವಾಗಿ ಬರುತ್ತಿದ್ದವು. ಮಕ್ಕಳ ಪ್ರಶ್ನೆಗಳಿಗೆ ಗದರಬಾರದೆಂಬ ಸಂಸ್ಕಾರಯುತ ಕುಟುಂಬ ಭಗತ್‌ಸಿಂಗನದು. ಹಾಗಾಗಿ ಆತನ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳು ಸಿದ್ಧವಾಗಿಯೇ ಇರುತ್ತಿದ್ದವು. ಹಾಗೆ ಸಾಗುತ್ತಾ ಗದ್ದೆಯ ಗೋಧಿ ಪೈರುಗಳತ್ತ ಭಗತ್ ಕೈ ತೋರಿಸಿ, ‘ಇದೇನಿದು?’ ಎಂದು ಕೇಳಿದ. ಅಪ್ಪ ಗೋಧಿಯ ಬೀಜ, ಬೀಜದಿಂದ ಪೈರು ಮತ್ತೆ ಬೀಜವಾಗುವ ನಿಯಮವನ್ನು ವಿವರಿಸಿದ. ಎಲ್ಲಾ ವಿವರಿಸಿ ಹಿಂದೆ ನೋಡಿದಾಗ ಬಾಲಕನಿರಲಿಲ್ಲ. ಆತ ಮನೆಯಲ್ಲಿ ಬಂದೂಕೆಂದು ಆಟವಾಡುತ್ತಿದ್ದ ಕೋಲನ್ನು ಮಣ್ಣಿನಲ್ಲಿ ಹೂಳುತ್ತಿದ್ದ. ಆಗ ಅಪ್ಪ “ಏನು ಮಾಡುತ್ತಿರುವಿ?” ಎಂದು ಪ್ರಶ್ನಿಸಿದ. “ನಾನು ಬಂದೂಕು ಬೆಳೆಯುತ್ತಿದ್ದೇನೆ. ಇದೇ ಬಂದೂಕಿನಿಂದ ಬ್ರಿಟಿಷರನ್ನು ಓಡಿಸುತ್ತೇನೆ” ಎಂದು ಭಗತ್ ನುಡಿದಾಗ ಅಪ್ಪನಲ್ಲಿ ಉತ್ತರಗಳಿರಲಿಲ್ಲ. ಮುಂದೆ ಭಗತ್ ಸಿಂಗ್‌ನ ಬದುಕು ದೇಶಕ್ಕೆ ಮುಡಿಪಾಯಿತು.
ಬ್ರಿಟಿಷ್ ಪಾರ್ಲಿಮೆಂಟಿನಲ್ಲಿ ಇದೇ ಭಗತ್‌ಸಿಂಗ್ ಮುಂದೊಂದು ದಿನ ಬಾಂಬ್‌ಹಾಕಿದ್ದ. ಕ್ರಾಂತಿಕಾರಿಗಳ ತಂಡ ಹುಟ್ಟುಹಾಕಿದ್ದ. ಎಷ್ಟೋ ಹೋರಾಟಗಾರಿಗೆ ಮಾರ್ಗದರ್ಶಕನಾದ. ಬಾಂಬ್ ಸೋಟಿಸಿ ತಪ್ಪಿಸಿಕೊಳ್ಳುವ ಅವಕಾಶವಿದ್ದರೂ ನೇಣಿಗೇರಲೇಬೇಕೆಂಬ ತುಡಿತದಿಂದ ಬಂಧಿತನಾದ. ಚಿಕ್ಕವಯಸ್ಸಿನಲ್ಲೇ ಹುತಾತ್ಮ ನಾದ, ಮಹಾತ್ಮನಾದ. ಇಂಥ ಭಗತ್ ಸಿಂಗ್‌ನನ್ನು ನೇಣಿಗೇರಿಸಿ ಆಗಷ್ಟೇ ಒಂದು ವಾರವಾಗಿತ್ತು. ಲಾಹೋರಿನ ಕಾಂಗ್ರೇಸ್ ಅವೇಶನ ವಿಜೃಂಭಣೆಯಿಂದ ನಡೆಯುತ್ತಿತ್ತು. ಭಗತ್‌ಸಿಂಗ್ ಅಭಿಮಾನಿಗಳು ಕಪ್ಪು ಬಟ್ಟೆ ಪ್ರದರ್ಶಿಸಿದರು. ಲಾಹೋರಿಗರು ‘ಗಾಂಧಿ ಗೋಬ್ಯಾಕ್’ ಎಂದು ಘೋಷಣೆ ಕೂಗುತ್ತಿದ್ದರು. ‘ಶಾಂತಿಪ್ರಿಯ’ ಕಾಂಗ್ರೇಸಿಗರು ಭಗತ್ ಅಭಿಮಾನಿಗಳ ಮೇಲೆ ಬಿದ್ದರು. ಕೆಲವರಿಗೆ ಪೆಟ್ಟಾಯಿತು. ಆಗ ಗಾಂಧಿ “ದಿಕ್ಕು ತಪ್ಪಿದ ಆತನ ಹಿಂಬಾಲಕರನ್ನು ಕ್ಷಮಿಸಿ” ಎಂದು ಸಮಾರಂಭದಲ್ಲಿ ಕರೆನೀಡಿದರು. ಕಾಂಗ್ರೇಸಿಗರು ‘ಕ್ಷಮಿಸಿ’ದರು. ಆದರೆ ಭಗತ್‌ಸಿಂಗ್‌ರಂತಹ ಕ್ರಾಂತಿಕಾರಿಯ ಮೇಲೆ ಆಪಾದನೆಯೊಂದನ್ನು ಗಾಂಧಿ ಮತ್ತು ಅನುಯಾಯಿಗಳು ಹೊರಿಸಿ ಬಿಟ್ಟಿದ್ದರು.
ಚಂದ್ರಶೇಖರ್ ಅಜಾದ್‌ರ ಬದುಕಿನಲ್ಲೂ ಹಾಗೆ. ಸತತ ಚಳ್ಳೆ ಹಣ್ಣು ತಿನ್ನಿಸುತ್ತಾ ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಳ್ಳುತ್ತಿದ್ದ ಅಜಾದ್ ಜೀವಂತವಾಗಿ ಪೊಲೀಸರಿಗೆ ಬಂಧಿಯಾಗಲಾರೆ ಎಂದು ಪ್ರತಿಜ್ಞೆ ಗೈದಿದ್ದವರು. ಕೊನೆಗೆ ಬ್ರಿಟಿಷರಿಗೆ ಆಜಾದ್ ಶವವಾಗಿ ಸಿಕ್ಕಿದ್ದು ಇತಿಹಾಸ. ಅಜಾದರ ಶವವನ್ನು ಪಡೆದುಕೊಳ್ಳಲು ಸಂಬಂಧಿಕರೋರ್ವರು ಬಂದಿದ್ದರು. ಬಂದಿದ್ದವರ ಮೇಲೆ ಹಿರಿಯ ಪೊಲೀಸ್ ಅಕಾರಿಯೊರ್ವ “ಇಷ್ಟು ವರ್ಷ ಹುಡುಗ ಪೋಲಿ ಅಲೆಯುತ್ತಿದ್ದನಲ್ಲಾ ನಿಮಗೆ ಗೊತ್ತಿರಲಿಲ್ಲವೆ? ಕರೆದು ಬುದ್ಧಿ ಹೇಳಲಾಗುತ್ತಿರಲಿಲ್ಲವೇ?” ಎಂದು ಗದರಿದ್ದ. ಹೆಚ್ಚು ಕಮ್ಮಿ ಅದೇ ಸಮಯದಲ್ಲಿ ನಡೆದ ಕಾಕೋರಿ ರೈಲು ದರೋಡೆಯನ್ನು ಕ್ರಾಂತಿಕಾರಿಗಳು ನಡೆಸಿದಾಗ ಇದೇ ಕಾಂಗ್ರೇಸಿಗರು ದರೋಡೆಕೋರರ ಕೃತ್ಯ ಎಂದು ಅಪ್ಪಟ ಬ್ರಿಟಿಷ್ ಶೈಲಿಯಲ್ಲಿ ಬಣ್ಣಿಸಿದ್ದರು. ಮುಂದೆ ವಿನಾಯಕ ಸಾವರ್ಕರರು ಅಂಡಮಾನಿನಲ್ಲಿ ಕಾಲಾಪಾನಿ ಶಿಕ್ಷೆ ಅನುಭವಿಸುತ್ತಿದ್ದಾಗ ಅವರ ಬಿಡುಗಡೆಗೆ ಭಾರತದಲ್ಲಿ ಚಳುವಳಿಗಳು ನಡೆದಾಗ ಹಂಗಿಸಿದ ಕಾಂಗ್ರೇಸಿಗರೆಷ್ಟೋ ಜನ. ಇವೆಲ್ಲವನ್ನೂ ಇಂದು ಇತಿಹಾಸವೆಂದು ಮರೆತು ಬಿಡುವಂತಿಲ್ಲ. ಮರೆಯಲೂ ಬಾರದು. ಏಕೆಂದರೆ ಆ ಕ್ರಾಂತಿಕಾರಿಗಳಾರೂ ತಮಗಾಗಿ ಏನನ್ನೂ ಮಾಡಿಕೊಂಡವರಲ್ಲ. ತಮ್ಮ ಬದುಕನ್ನು ಕುಟುಂಬಕ್ಕಾಗಿ ಮೀಸಲಿಟ್ಟವರೂ ಅಲ್ಲ. ಆದರೂ ಅವರನ್ನು ಜನ ಹಂಗಿಸಿದರು. ಮೂದಲಿಸಿದರು. ಅವರ ಕಾರ್ಯಕ್ಕೆ ಸ್ವಜನರೇ ಅಡ್ಡಿಯಾಗುತ್ತಲೂ ಇದ್ದರು. ಈ ಉದಾಹರಣೆಗಳನ್ನು ಕೇಳುವಾಗ ವರ್ತಮಾನದ ಹಲವು ಸಂಗತಿಗಳು ಪ್ರಸ್ತುತವಾದಂತೆ ಭಾಸವಾಗುತ್ತದೆ.
ಇಂದೂ ರಾಜ್ಯದ ನಾನಾ ಕಡೆಗಳಲ್ಲಿ ಅಂಥ ಆದರ್ಶಕ್ಕಾಗಿ ಹೋರಾಟ ಮಾಡುತ್ತಿರುವ ಯುವಕರ ಪರಿಸ್ಥಿತಿ ಅದಕ್ಕಿಂತಲೂ ಭಿನ್ನವಾಗಿಯೇನೂ ಇಲ್ಲ. ಕ್ರಾಂತಿಯ ಕಾಲ ಬ್ರಿಟಿಷ್ ಅವಧಿಯಲ್ಲಿ ಒಂದು ರೀತಿಯಲ್ಲಿ ಇದ್ದಿರಬಹುದು. ಆದರೆ ಇಂದು ಇನ್ನೊಂದು ರೀತಿಯಲ್ಲಿ ಅನಿವಾರ್ಯವೆನಿಸಿದೆ. ಅಂದು ಪರಕೀಯರ ವಿರುದ್ಧ ಹೋರಾಟ. ಇಂದು ನಮ್ಮತನದ ರಕ್ಷಣೆಗಾಗಿ ಟೊಂಕ ಕಟ್ಟಿದ ಹಲವು ಘಟನೆಗಳು ನಮ್ಮ ಮುಂದಿವೆ. ಕಳೆದ ತಿಂಗಳು ಮಂಗಳೂರಿನ ಉಳ್ಳಾಲದಲ್ಲಿ ನಡೆದ ರೇವ್ ಪಾರ್ಟಿಯೊಂದು ಇದಕ್ಕೆ ಪುಷ್ಟಿ ನೀಡುತ್ತದೆ. ಕಳೆದ ಒಂದು ವರ್ಷದಿಂದೀಚೆಗೆ ಮಂಗಳೂರು ಮಾದಕ ವಸ್ತುಗಳ ತಾಣವಾಗುತ್ತಿರುವ ಬಗ್ಗೆ ಇಲ್ಲಿನ ಪೊಲೀಸರಿಗೆ, ಮಾಧ್ಯಮಗಳಿಗೆ ಯಾವುದೇ ಸಂದೇಹವಿರಲಿಲ್ಲ. ವಾರಂಪ್ರತಿ ರೇವ್ ಪಾರ್ಟಿಗಳು ನಡೆಯುತ್ತಿದ್ದ ಮಾಹಿತಿಗಳೂ ಗೊತ್ತಿಲ್ಲದೇ ಇರಲಿಲ್ಲ. ಈ ಸಂಬಂಧ ಮಂಗಳೂರು ಭಜರಂಗದಳದ ಕಾರ್ಯಕರ್ತರು ಪ್ರತಿಬಾರಿ ಪೊಲೀಸರ ಗಮನಕ್ಕೆ ತಂದರೂ ರೇವ್ ಪಾರ್ಟಿಗಳಿಗೆ ಯಾವುದೇ ತೊಂದರೆಯಾಗಿರಲಿಲ್ಲ. ಮಾದಕ ವಸ್ತಗಳ ಸರಬರಾಜು, ಡೀಲಿಂಗುಗಳು ಎಗ್ಗಿಲ್ಲದೆ ನಡೆಯುತ್ತಿದ್ದವು. ಪ್ರತೀ ತಿಂಗಳೂ ಕಂಪ್ಲೇಂಟುಗಳೂ ಸಲ್ಲಿಕೆಯಾಗುತ್ತಿದ್ದರೂ ಪರಿಸ್ಥಿತಿ ಬದಲಾಗಿರಲಿಲ್ಲ. ಆದರೆ ಒಂದು ದಿನ ಭಜರಂಗದಳದ ಕಾರ್ಯಕರ್ತರು ರೇವ್ ಪಾರ್ಟಿಗೇ ನೇರ ದಾಳಿ ಮಾಡಿದರು. ಯುವಕ ಯುವತಿಯರು ಸಿಕ್ಕಿ ಬಿದ್ದರು. ಪೊಲೀಸರಿಗೆ ಒಪ್ಪಿಸಿದರು. ಆದರೆ ಭಜರಂಗದಳದ ಕಾರ್ಯಕರ್ತರ ಮೇಲೆಯೇ ದುಂಡಾವರ್ತನೆ, ಅಕ್ರಮ ಪ್ರವೇಶ, ಹಲ್ಲೆ, ಕೊಲೆಗೆ ಯತ್ನ, ಕಳ್ಳತನದ ಕೇಸುಗಳು ಬಿದ್ದವು. ಅಷ್ಟಾಗುವ ಹೊತ್ತಿಗೆ ಬುದ್ದಿಜೀವಿಗಳು ಬಾಯಿ ಸರಿಪಡಿಸಿಕೊಂಡು ಕೂಗಲಾರಂಭಿಸಿದರು. ಮೋರಲ್ ಪೊಲೀಸ್ ಎಂದರು. ಪುಂಡರು, ಪೋಲಿಗಳು ಎಂದು ಜರೆದರು. ತಾಲೀಬಾನೀಕರಣದ ಉಳಿಕೆ ಎಂದರು. ವಿಚಿತ್ರವೆಂದರೆ ಸಮಾಜ ಸ್ವಸ್ಥವಾಗಿರಬೇಕೆಂದು ಶ್ರಮಿಸಿದ ೨೦ ಮಂದಿ ಭಜರಂಗದಳದ ಯುವಕರ ಮೇಲೆ ಕೇಸು ಬಿತ್ತು. ಎಲ್ಲರನ್ನು ಬಂಧಿಸಲಾಯಿತು. ಭಗತ್ ಸಿಂಗರಂತೆ, ಅಜಾದ್‌ರಂತೆ, ಸಾವರ್ಕರರಂತೆ ಇವರಾರೂ ತಮ್ಮ ಮನೆಯ ಒಲೆ ಉರಿಸಲೆಂದು ಹೋದವರಲ್ಲ. ಅಲ್ಲಿ ಮಾದಕ ವಸ್ತುಗಳ ದಾಸರಾಗಿರುವವರು ಯಾರೂ ಇವರ ಸಂಬಂಧಿಕರಾಗಿಯೂ ಇರಲಿಲ್ಲ್ಲ. ಆದರೂ ಅವರು ಬಂಧಿಸಲ್ಪಟ್ಟರು. ಅನುಭವಿಸಿದರು. ಮಂಗಳೂರಿನ ಭಜರಂಗದಳದ ನಾಯಕರೊಬ್ಬರಾದ ಶಿವಾನಂದ ಮೆಂಡನ್‌ರವರು “ಕಳೆದ ಎರಡು ವರ್ಷಗಳಿಂದ ನಮ್ಮ ೭೦ಕ್ಕೂ ಅಧಿಕ ಕಾರ್ಯಕರ್ತರ ಮೇಲೆ ವಿನಾಕಾರಣ ಕೇಸು ಜಡಿಯಲಾಗಿದೆ” ಎನ್ನುತ್ತಾರೆ. ಅವರು ಮಾಡಿದ ಒಂದೇ ಒಂದು ತಪ್ಪೆಂದರೆ ಭಗತ್, ಅಜಾದ್, ಸಾವರ್ಕರ್,ಶಿವಾಜಿಯರನ್ನು ಆದರ್ಶವನ್ನಾಗಿ ಸ್ವೀಕರಿಸಿದ್ದು.
ಉದಯ್‌ಕುಮಾರ್ ದೇವಾಡಿಗ ೩೫ವರ್ಷದ ಧರ್ಮಸ್ಥಳದ ಯುವಕ. ಎಸ್. ಎಸ್. ಎಲ್. ಸಿ ಮುಗಿಸಿ ಮುಂಬೈಗೆ ಹೋದರು. ಯೋಗ್ಯ ಉದ್ಯೋದಲ್ಲಿದ್ದುಕೊಂಡು ಹಿಂದೂ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದರು. ವೈಯಕ್ತಿಕ ಕಾರಣಗಳಿಂದ ಊರಿಗೆ ಮರಳಬೇಕಾದ ಸಂದರ್ಭ ಬಂತು. ಊರಿಗೆ ಬಂದಾಗ ಏನೋ ಒಂದು ನಡೆಯುತ್ತಿದ್ದಂತೆ ಸಂಶಯವೂ ಬಂತು. ಊರವರೇ ಕೆಲವು ಮುಸಲ್ಮಾನರೊಟ್ಟಿಗೆ ಸೇರಿ ಗೋ ಸಾಗಾಣಿಕೆ ದಂಧೆಯಲ್ಲಿ ತೊಡಗಿದ್ದರು. ಒಂದು ದಿನ ಗೋವಾಹನವನ್ನು ತಡೆದಿದ್ದೇ ಇವರಿಗೆ ಮುಳುವಾಯಿತು. ಹಿಂದುಗಳೇ ಹಿಡಿದು ಬಡಿದರು. ಊರಲ್ಲಿ ರೌಡಿ ಎಂಬ ಪಟ್ಟವನ್ನೂ ಅವರೇ ಕಟ್ಟಿದರು. ನಂತರ ಉದಯ ಮಂಗಳೂರಿನಲ್ಲಿ ಉದ್ಯೋಗ ಕಂಡುಕೊಂಡರು. ಮಹಾಪುರುಷರ ಆದರ್ಶಗಳನ್ನು ಮೈತುಂಬಿಕೊಂಡರು. ಮಹಾಪುರುಷರ ಆದರ್ಶಗಳನ್ನು ಮೈತುಂಬಿಕೊಂಡ ಬಿಸಿರಕ್ತದ ಯುವಕ ಉದಯ ಸಿಟಿ ಬಸ್ಸಿನಲ್ಲಿ ಕೆಲಸಕ್ಕೆ ಬಂದುಹೋಗುತ್ತಿದ್ದರು. ದಿನಂಪ್ರತಿ ಬರುವ ಬಸ್ಸಿನಲ್ಲಿ ಹಿಂದೂ ಹುಡುಗಿಯರಿಗೆ ನೆಮ್ಮದಿಯಿಲ್ಲ ಎಂಬುದನ್ನು ಕಂಡರು. ಮುಸಲ್ಮಾನ ಹುಡುಗರ ಕೀಟಲೆಗಳು ಶಿವಾಜಿ ಕಥೆ ಓದಿದವರಿಗೆ ಸಹಿಸಲು ಎಂದಾದರೂ ಸಾಧ್ಯವೇ? ಒಂದು ದಿನ ಹುಡುಗರಿಗೆ ಎಚ್ಚರಿಕೆ ನೀಡಿದರು. ಮರುದಿನ ತಂಡವೊಂದು ಇವರ ಮೇಲೆ ಹಲ್ಲೆ ನಡೆಸಿತು. ವಿಚಿತ್ರವೆಂದರೆ ಉದಯರನ್ನೇ ಶಾಂತಿಭಂಗದ ಆರೋಪ ಹೊರಿಸಿ ಬಂಧಿಸಲಾಯಿತು. ೧೪ದಿನ ಲಾಕಪ್ಪಿನಲ್ಲಿ ಉದಯರನ್ನು ಕ್ರಿಮಿನಲ್ ಥರ ನಡೆಸಿಕೊಳ್ಳಲಾಯಿತು. ಊರಲ್ಲಿ ಪೋಲಿ ಪಟ್ಟ. ಧರ್ಮದ ಸೆಳೆತ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು?
ಬೆಳ್ತಂಗಡಿಯ ಜಯರಾಮ ಶೆಟ್ಟರು ಸಂಘ ಪರಿವಾರದ ಸಕ್ರಿಯ ಸದಸ್ಯರು ೨೦೦೭ರಲ್ಲಿ ಜಿಲ್ಲಾದ್ಯಂತ ಬಂದ್ ನಡೆದಾಗ ಶಾಂತಿಯುತವಾಗಿ ಯುವಕರನ್ನು ನಿಭಾಯಿಸಿದ ಸಂಸಾರಸ್ಥರು. ಊರೆಲ್ಲಾ ಬಂದ್ ಆಗಿದ್ದಾಗ ಪುಂಜಾಲಕಟ್ಟೆ ಎಂಬಲ್ಲಿ ಒಂದು ಮುಸಲ್ಮಾನ ಅಂಗಡಿ ಮಾತ್ರ ತೆರೆದಿತ್ತು. ಶಾಂತಿಯಿಂದಲೇ ಬಂದ್‌ನ ಹಿನ್ನಲೆಯನ್ನು ಇವರು ವಿವರಿಸಬಾರದಿತ್ತು ಎಂಬಂತೆ ಇವರ ಮೇಲೆ ಕಲ್ಲುಗಳು ಬಿದ್ದವು. ನಿಭಾಯಿಸಿಕೊಳ್ಳುವಷ್ಟರಲ್ಲಿ ಪೊಲೀಸರು ಬಂದು ಹಿಡಿದುಕೊಂಡು ಹೋದರು. ೧೨ ಜನರ ಮೇಲೆ ಬೆಳ್ತಂಗಡಿ ನ್ಯಾಯಾಲಯದಲ್ಲಿ ಕೇಸು ದಾಖಲಾದವು. ಪುನಃ ಒಂದು ವಾರದಲ್ಲಿ ಬಂಟವಾಳದಲ್ಲೂ ಇದೇ ೧೨ ಜನರ ಮೇಲೆ ಮತ್ತೆ ಕೇಸುಗಳಾದವು. ಇಂದಿಗೂ ಇವರು ನ್ಯಾಯಾಲಯಕ್ಕೆ ಅಲೆದಾಡುವುದು ತಪ್ಪಿಲ್ಲ. ಇವರೆಲ್ಲರಿಗೂ ಹೆಂಡತಿಯರಿದ್ದಾರೆ. ಮಕ್ಕಳು, ತಂದೆ ತಾಯಿಗಳು ಎಲ್ಲರೂ ಇದ್ದಾರೆ. ಧರ್ಮಕ್ಕಾಗಿ, ದೇಶಕ್ಕಾಗಿ, ಅಳಿಲು ಸೇವೆಗೆ ಇಳಿದವರ ಸ್ಥಿತಿ ಇದು. ಇಂಥ ಪರಿಸ್ಥಿತಿ ಕೇವಲ ದಕ್ಷಿಣ ಕನ್ನಡದಲ್ಲಿ ಮಾತ್ರವಲ್ಲ. ಇಡೀ ರಾಜ್ಯದಲ್ಲಿ ಇಂಥ ಉದಾಹರಣೆಗಳು ಸಾಕಷ್ಟು ಸಿಗುತ್ತದೆ. ಭಜರಂಗದಳದ ಸಮೀಕ್ಷೆಯ ಪ್ರಕಾರ ಕರ್ನಾಟಕದ ದಕ್ಷಿಣ ಭಾಗದ ೧೪ ಜಿಲ್ಲೆಗಳಲ್ಲಿ ೪೦೦ರಷ್ಟು ಅಮಾಯಕ ಧರ್ಮ ಕಾರ್ಯಕ್ಕಾಗಿ ಇಳಿದ ಯುವಕರ ಮೇಲೆ ಕೇಸುಗಳಿವೆ. ಅಂದು ಹೇಗೆ ಭಗತ್ ಸಿಂಗ್‌ರನ್ನು, ಅಜಾದರನ್ನು, ಸಾವರ್ಕರರನ್ನು ‘ದಾರಿತಪ್ಪಿದವರು’ ಎನ್ನುತ್ತಿದ್ದಾರೋ ಹಾಗೆಯೇ ಇವರನ್ನೂ ದಾರಿತಪ್ಪಿದವರು ಎನ್ನುತ್ತಿದ್ದಾರೆ. ನಮ್ಮ ತಂಗಿಯರು, ನಮ್ಮ ಮಡದಿಯರು, ನಮ್ಮ ಊರು, ನಮ್ಮ ಧರ್ಮದ ಉಸಿರು ಇಂದು ಉಳಿದಿರುವುದು ಇಂಥ ಆದರ್ಶಗಳಿಂದಲೇ ಎನ್ನುವುದು ಸಮಾಜದ ಅರಿವಿಗೆ ಬಾರದೇ ಹೋಗುತ್ತಿದೆ. ಒಮ್ಮೆ ಅಜಾದ್‌ರಿಗೆ ಛಡೀ ಏಟಿನ ಶಿಕ್ಷೆ ವಿಸಲಾಗಿತ್ತು. ೧೭ ಛಡೀ ಏಟುಗಳು. ಒಂದೊಂದು ಏಟಿಗೂ ಬಾಲಕ ವಂದೇ ಮಾತರಂ ಎಂದು ಘೋಷಿಸುತ್ತಿದ್ದ. ವೊನ್ನೆ ೧೪ ದಿನ ಲಾಕಪ್ಪಿನಲ್ಲಿದ್ದ ಉದಯ ದೇವಾಡಿಗರನ್ನು ಲಾಕಪ್ಪಿನಲ್ಲಿ ಬೆತ್ತಲೆಗೊಳಿಸಿ ಹೊಡೆಯುತ್ತಿದ್ದಾಗ ಆತ ಕೂಡ ‘ಜೈಶ್ರೀರಾಮ್’ ಎಂದು ಘೋಷಿಸುತ್ತಿದ್ದ(ಮತ್ತೊಂದು ಕೇಸಿಗೆ ಠಾಣೆಗೆ ಹೋದವರೊಬ್ಬರ ಪ್ರತ್ಯಕ್ಷ ಅನುಭವಾಧಾರಿತ ಮಾಹಿತಿ. ಜುಲೈ ೧೯, ಮಂಗಳವಾರ). ಉದಯ ದೇವಾಡಿಗ ಹೆಚ್ಚು ವಿದ್ಯಾವಂತನಲ್ಲದಿರಬಹುದು. ಅಜಾದರ ಘಟನೆಯೂ ತಿಳಿದಿಲ್ಲದಿರಬಹುದು. ಏಟು ಬೀಳುವಾಗ ಹೃದಯದಿಂದ ಬಂದ ‘ಜೈಶ್ರೀರಾಮ್’ ಘೋಷಕ್ಕೆ ಏನು ಬೆಲೆ ಕಟ್ಟೋಣ?ಕ್ರಾಂತಿಕಾರಿಗಳ ಘಟನೆಗಳಿಗೆ ಪುಳಕಗೊಂಡರೆ ಅಷ್ಟೇ ಸಾಕೆ? ಭಗತ್‌ಸಿಂಗ್ ಅಜಾದರ ಬಗ್ಗೆ ನಮ್ಮ ಮಕ್ಕಳು ಭಾಷಣ ಮಾಡಬೇಕು. ಪ್ರಬಂಧ ಬರೆಯಬೇಕು. ಆದರೆ ಅವರಂತಾಗುವುದು ಬೇಡವೆಂದರೆ? ಸಾವರ್ಕರೆಂದ ಸದ್ಗುಣ ವಿಕೃತಿ ಇದೇ ತಾನೇ?
ಈ ಯುವಕರಲ್ಲಿ ಬಹುತೇಕರಿಗೆ ಪ್ರವಚನ ಶೈಲಿಯ ಸೇಫರ್ ಜೋನಿನಲ್ಲಿ ಹೋರಾಟ ಮಾಡಬಹುದಾದ ಎಲ್ಲಾ ಅವಕಾಶಗಳು. ಅರ್ಹತೆಗಳೂ ಇದ್ದವು. ಆದರೆ ಅವರೆಲ್ಲರೂ ಕ್ರಾಂತಿಕಾರಿಗಳನ್ನು ನಂಬಿದರು. ಶಿವಾಜಿ, ಪ್ರತಾಪರನ್ನು ಅರ್ಚಿಸಿದರು. ಜಾರುವ ಕಾನೂನಿನ ಜಾಡು ಹಿಡಿದರು. ದುಷ್ಟರ ಮೇಲೊಂದು ನಿಗಾ ಇಟ್ಟರು. ಕೇಸು ಜಡಿಸಿಕೊಂಡರು. ಲೈಪು ಸೆಟ್ಲ್ ಮಾಡುವ ಭರದಲ್ಲಿ ಇಂಥವರು ಎಲ್ಲಿ ಸಿಗುತ್ತಾರೆ ಸ್ವಾಮಿ?
No comments:
Post a Comment