Wednesday, June 8, 2011

ನವನಿರ್ಮಾಣದ ಹೊಳಹುಗಳು ಮತ್ತು ಸ್ವಾತಂತ್ರ್ಯೋತ್ತರ ಭಾರತ

ಗುಲಾಮನು ತನಗೆ ತೊಡಿಸಿದ ಬೇಡಿಗಳ ಬಗ್ಗೆ ಅಭಿಮಾನ ಪಟ್ಟುಕೊಂಡು ಅದನ್ನು ಅಪ್ಪಿಕೊಂಡಾಗ ಆತನ ಯಜಮಾನನ ವಿಜಯ ಪೂರ್ಣಗೊಂಡಂತೆ ಎನ್ನುವ ಮಾತೊಂದಿದೆ. ಎಷ್ಟೊಂದು ಅರ್ಥಪೂರ್ಣ. ಕೆಲವೆಡೆ ಅದೆಷ್ಟು ಅನ್ವರ್ಥಕ. ಪಂಜರದೊಳಗಿರುವ ಗಿಳಿಯೇ ಪಂಜರವನ್ನು ಇಷ್ಟಪಟ್ಟರೆ ಬಂಧನವೇ ಪ್ರಿಯವಾಗುವಂತೆ, ಪಂಜರದ ಉದ್ದೇಶ ಈಡೇರಿದಂತೆ ಆ ಮಾತು ಅರ್ಥಪೂರ್ಣ. ಲೋಕವನ್ನೇ ಗಮನಿಸಿ. ಈ ಗುಲಾಮಗಿರಿಯಿಂದ ಏನೇನೆಲ್ಲಾ ಆಗಿ ಹೋಗಿದೆ. ಆಧುನಿಕ ಜಗತ್ತಿನ ನಕಾಶೆಗಳೇ ಬದಲಾದದ್ದಿದೆ. ಬಣ್ಣ - ರೂಪ -ಬುದಿಟಛಿಗಳಲ್ಲಿ ಹಲವರಲ್ಲಿ ಹೋಲಿಕೆ, ಸಾಮ್ಯತೆ ಕಂಡುಬಂದದ್ದಿದೆ. ಗುಲಾಮರೆಲ್ಲಾ ಒಂದೇ ತಾನೇ. ಈ ಗುಲಾಮಗಿರಿ ಒಂದು ದೇಶದ ಮಾನಸಿಕತೆಯನ್ನೇ ಬದಲಿಸಿದ್ದಿದೆ, ರೂಪಿಸಿದ್ದಿದೆ. ಸಿದಾಟಛಿಂತಗಳನ್ನು ಹರಡಿದ್ದಿದೆ. ಪ್ರಜ್ಞೆಯನ್ನು ಮಂಕುಗೊಳಿಸಿದ್ದಿದೆ.ಸಂಪ್ರದಾಯಗಳನ್ನು ಗುಡಿಸಿಹಾಕಿದ್ದಿದೆ. ಈ ಗುಲಾಮಗಿರಿ ಅಹಂ ಅನ್ನು ಸೃಷ್ಟಿಸಿ , ಶೋಕಿಯಾಗಿ ಬದಲಾಗಿ ತನ್ನ ದೇಹದ ಮೂಳೆಯನ್ನೇ ಚಪ್ಪರಿಸಿದ ನಾಯಿಯಂತೆ ವ್ಯಕ್ತಿಯನ್ನು ಬದಲಿಸಿದ್ದಿದೆ. ಈ ಗುಲಾಮಗಿರಿ ವ್ಯಕ್ತಿಯಲ್ಲಿರುವ ಏನೋ ಒಂದನ್ನು ಕಂಡೂ ಕಾಣದಂತಿರುವ ಸಂವೇದನೆಯೊಂದನ್ನು ಮಸುಕು ಮಸುಕು ಮಾಡಿದ್ದಿದೆ. ಒಟ್ಟಾರೆ ಈ ಗುಲಾಮಗಿರಿ ಶಕುಂತಲೆಯ ಉಂಗುರ ಮರೆತು, ಶಕುಂತಲೆಯನ್ನೇ ಮರೆತ ದುಶ್ಯಂತನ ಸ್ಥಿತಿಯಂಥಾದ್ದು. ಮರೆಯುವಿಕೆ ಮತ್ತು ಧಿಕ್ಕರಿಸುವಿಕೆ ಈ ಗುಲಾಮಗಿರಿಯ ಎರಡು ಕೂಸುಗಳು. ಗುಲಾಮಿತನ ಹೆಚ್ಚುತ್ತಾ ಹೋದಂತೆ ಇವೆರಡೂ ಗಾಢವಾಗುತ್ತಾ ಹೋಗುತ್ತವೆ. ಆದ್ದರಿಂದ ಗುಲಾಮಿತನದ ಗಾಢವಾಗುವಿಕೆಯೆಂದರೆ ಯಜಮಾನನ ವಿಜಯವೆಂದೇ ಅರ್ಥ. ತೊಡಿಸಿದ ಬೇಡಿಗಳೇ ಆಭರಣಗಳಂತೆ ಕಂಡಮೇಲೆ ವಿಜಯ ಇನ್ನಾರದಿರಲು ಸಾಧ್ಯ? ಕೆಲವು ಉದಾಹರಣೆಗಳು ನೆನಪಾಗುತ್ತವೆ. ೧೩ನೇ ಶತಮಾನದಲ್ಲಿ ಯುರೋಪಿನಲ್ಲಿ ನಡೆದ ಯುದಟಛಿವೊಂದರಲ್ಲಿ ಫ್ರಾನ್ಸ್‌ನ ?ಲಿಪ್ ಎಂಬ ರಾಜ ಇಂಗ್ಲೆಂಡ್ ಮತ್ತು ಜರ್ಮನಿಯ ಸಂಯುಕ್ತ ಸೇನೆಗಳನ್ನು ಸೋಲಿಸಿದ. ಈ ವಿಜಯದ ಅನಂತರ ಫ್ರೆಂಚ್ ರಾಷ್ಟ್ರಭಾವದ ಉದಯವಾಯಿತು. ಇದು ಐತಿಹಾಸಿಕ ಸತ್ಯ. ಈ ಯುದಟಛಿವಾದ ಒಂದು ಶತಮಾನಗಳ ಅನಂತರ ರಾಬರ್ಟ್ ಬ್ರೂಸ್ ಎಂಬಾತನ ನೇತೃತ್ವದಲ್ಲಿ ಇಂಗ್ಲೆಂಡ್ ವಿರುದಟಛಿ ಯುದಟಛಿ ಸಾರಿದ. ಸ್ಕಾಟ್ಲೆಂಡ್ ವಿಜಯಗಳಿಸಿತು. ಈ ವಿಜಯದಿಂದ ಸ್ಕಾಟ್ಲೆಂಡ್‌ನಲ್ಲಿ ರಾಷ್ಟ್ರಭಾವದ ಉದಯವಾಯಿತು. ಅದೂ ಐತಿಹಾಸಿಕ ಸತ್ಯ. ೧೫ನೇ ಶತಮಾನದಲ್ಲಿ ನಡೆದ ಆಂತರಿಕ ಕ್ರಾಂತಿಯ ತರುವಾಯ ಸ್ಪೇನ್‌ನಲ್ಲಿ ರಾಷ್ಟ್ರಭಾವದ ಉದಯವಾದದ್ದು ಸತ್ಯವೇ. ೧೬ನೇ ಶತಮಾನದಲ್ಲಿ ಪ್ರಭುತ್ವದ ವಿರುದಟಛಿ ಬಂಡೆದ್ದ ಹಾಲೆಂಡ್‌ನಲ್ಲಿ, ೧೯ನೇ ಶತಮಾನದಲ್ಲಿ, ಜರ್ಮನಿ ಮತ್ತು ಇಟಲಿಯಲ್ಲಿ, ಅಮೆರಿಕಾದಲ್ಲಿ ೧೫ನೇ ಶತಮಾನದಲ್ಲಿ ಇಂಗ್ಲೆಂಡಿನಲ್ಲಿ ೯ನೇ ಶತಮಾನದಲ್ಲೇ ರಾಷ್ಟ್ರಭಾವದ ಉದಯವಾಗಿ ಮನುಷ್ಯರು ಎಂದುಕೊಂಡು ಬದುಕುವ ಸ್ಥಿತಿಗೆ ಬಂದಿದ್ದು ಎಲ್ಲವೂ ಐತಿಹಾಸಿಕ ಸತ್ಯಗಳೇ. ಅವೆಲ್ಲವೂ ಆಯಾಯ ದೇಶಗಳ ಹುಟ್ಟು, ಸಂಸ್ಕಾರ ಮತ್ತು ಜನ ಮಾನಸಿಕತೆಯ ಆಧಾರದಲ್ಲಾದ ಘಟನಾವಳಿಗಳಿಗೆ ಸಾಕ್ಷಿಗಳು.
ಆದರೆ ಭಾರತ? ಇಲ್ಲಿ ರಾಷ್ಟ್ರಭಾವದ ಉದಯ ಯಾವಾಗ ಆಯಿತು? ಅಲೆಕ್ಸಾಂಡರ್ ವಿರುದಟಛಿದ ಹೋರಾಟದಲ್ಲೆ? ಪಾಣಿಪತ್ ಕದನಗಳಲ್ಲೆ? ದೆಹಲಿಯೆಂಬ ರಾಜಧಾನಿಯ ನಿರ್ಮಾಣವಾದ ಮೇಲೆಯೆ? ಉಹುಂ. ಹುಡುಕಿದರೂ ಅದರ ಬೇರುಗಳು ಸಿಗಲಾರವು. ಒಂದು ಸಾಂಸ್ಕೃತಿಕ ಚೌಕಟ್ಟಿನ ವಿಶಿಷ್ಟವಾದ ಭೂಭಾಗವಾದ ಭಾರತ ಸೋಜಿಗಗಳ ಗೂಡು. ಅಲ್ಲಿ ಹುಡುಕಿದರೆ ಹಲವು ವಿಸ್ಮಯಗಳು ಕಂಡುಬರಬಹುದು. ನಿರಂತರ ದಾಳಿಗಳ ಕುರುಹುಗಳು ಸಿಗಬಹುದು. ಭೂಭಾಗಗಳು ನಾನಾ ಅರಸರ, ನಾನಾ ಪಾಳೇಪಟ್ಟುಗಳ ಒಡೆತನದಲ್ಲಿದ್ದದ್ದೂ ಕಂಡುಬರಬಹುದು. ಪರಸ್ಪರ ಅವು ಕಚ್ಚಾಡಿಕೊಂಡಿದ್ದ ಸಂಗತಿಗಳೂ ಗೋಚರಿಸಬಹುದು. ಆದರೆ ರಾಷ್ಟ್ರಭಾವದ ಉದಯ ಯಾವಾಗ ಆಯಿತು ಎಂಬುದು ಒಂದು ಅಗೋಚರ ಸಂಗತಿ ಮತ್ತು ಪಾಶ್ಚಾತ್ಯರ ವ್ಯಾಖ್ಯಾನದ ‘ನೇಷನಲಿಸಂ’ಗಿಂತ ಮಹತ್ವದ್ದಾದ ಒಂದು ಅಸ್ಮಿತೆ ಇಲ್ಲಿರುವುದು. ಅದೇ ಭಾರತ ಪಾಶ್ಚಾತ್ಯಕ್ಕಿಂತ ಭಿನ್ನವಾಗಿರುವುದಕ್ಕೆ ಕಾರಣವಾಗಿರುವುದು ಕಂಡುಬರುತ್ತದೆ. ಅದು ಹಿಂದೂ ಎಂಬ ಅಸ್ಮಿತೆ. ಅದೇ ಒಂದು ರಾಷ್ಟ್ರೀಯತೆ. ಅದೇ ಒಂದು ಮೌಲ್ಯ. ಅದು ನಿರ್ಮಾಣವಾದುದಲ್ಲ. ಅದು ರಾಷ್ಟ್ರಕ್ಕೆ ಮಾತ್ರ ಸೀಮಿತವೂ ಅಲ್ಲ. ಅದು ಸಕಲ ರಂಗಗಳಿಗೂ ಜೋಡಿ ಕೊಂಡು ವಿಶಾಲ ಭೂಭಾಗವನ್ನು ಸರಪಳಿಯಂತೆ ಬೆಸೆದಿರುವಾಗ ಪಾಶ್ಚಾತ್ಯ ಶೈಲಿಯಲ್ಲಿ ‘ಭಾರತದ ರಾಷ್ಟ್ರೀಯತೆಯ ಉಗಮ
ಯಾವಾಗವಾಯಿತು’ ಎನ್ನುವುದರಲ್ಲಿ ಅರ್ಥವೇನಿದೆ? ದಿನಾಂಕಗಳನ್ನು ಸಂವತ್ಸರಗಳ್ನು ಹುಡುಕುವುದಕ್ಕೇನಿದೆ?
ಯಾವುದೋ ರಜಪೂತ ಅರಸನ ಸಾಮ್ರಾಜ್ಯದಲ್ಲಿರುತ್ತಿದ್ದ ಕಾಶಿ, ಮಥುರಾಗಳಿಗೆ ದಕ್ಷಿಣದ ಚೋಳ, ಪಾಂಡ್ಯ ಅರಸರೂ ನಡೆದು
ಕೊಳ್ಳುತ್ತಿದ್ದರೆಂದರೆ ಅದಕ್ಕೆ ಕಾರಣ ಹಿಂದೂ ಅಲ್ಲದೆ ಬೇರೇನಿದ್ದೀತು? ಶಂಕರರ ನಾಲ್ಕು ಪೀಠಗಳು ನಾನಾ ರಾಜ್ಯಗಳಲ್ಲಿದ್ದವು. ನಾನಾ ರಾಜಕೀಯ, ನಾನಾ ಅರಸರ ಕೈಗಳಲ್ಲಿದ್ದವು. ಆದರೂ ಆ ಪೀಠಗಳು ಬೆಸೆದಿರುವ ಭಾವ ಹಿಂದೂ ಅಲ್ಲದೆ ಬೇರೇನು? ಅದು
ರಾಷ್ಟ್ರೀಯತೆ ಅಲ್ಲದೆ ಬೇರೇನು? ಆದರೆ ನಮ್ಮ ಸಮಾಜ ಪುಸ್ತಕಗಳೋ ರಾಷ್ಟ್ರೀಯತೆಯ ಉದಯ ಗಾಂಧಿಗಿಂತ ಕೊಂಚ ಹಿಂದೆ ತಿಲಕರಿಗಿಂತ ಸ್ವಲ್ಪವೇ ಮುಂದೆ ಆರಂಭವಾಯಿತು ಎಂದು ಹೇಳುತ್ತದೆ. ಒಂದು ವೇಳೆ ಟಿಪ್ಪುವೇನಾದರೂ ಬ್ರಿಟಿಷರ ಅವಧಿಯಲ್ಲಿ ಇಲ್ಲದೆ ಹಿಂದೂ ರಾಜರೊಟ್ಟಿಗೆ ಮಾತ್ರ ಕಚ್ಚಾಡುತ್ತಿದ್ದಿದ್ದರೆ ಟಿಪ್ಪುವನ್ನೇ ಭಾರತದ ರಾಷ್ಟ್ರೀಯತೆಯ ವಾರೀಸುದಾರನನ್ನಾಗಿ ನಮ್ಮ ಇತಿಹಾಸ ಪುಸ್ತಕಗಳು ಮಾಡಿಬಿಡುತ್ತಿದ್ದವು. ‘ಭಾರತ ಒಂದು ರಾಷ್ಟ್ರವಲ್ಲ. ನೂರಾರು ಭಾಷೆ, ಸಂಸ್ಕೃತಿ, ಆಹಾರ, ಪರಂಪರೆಗಳಿರುವ ದೇಶ ಇದು’ ಎಂಬ ಬ್ರಿಟಿಷರು ಹೇಳಿಕೊಟ್ಟ ಗಿಳಿಪಾಠವನ್ನು ಉಚ್ಚರಿಸುತ್ತಲೇ ನಮ್ಮ ನಾಯಕರು ಬ್ರಿಟಿಷರ ವಿರುದಟಛಿ ಚಳವಳಿ ಮಾಡಿದರು. ಇದೊಂದು ರಾಷ್ಟ್ರೀಯ ದುರಂತ. ಅದರ ಆಧಾರದಲ್ಲೇ ಇಂದು ಭಾರತೀಯ ರಾಷ್ಟ್ರೀಯತೆಗೆ ದಿನಾಂಕಗಳನ್ನು ಗುರುತಿಸಿರುವುದು ದುರಂತದ ಸರಮಾಲೆಯ ಒಂದು ಕಂತು. ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ಬೀದಿಗಿಳಿದ ಬೊಬ್ಬಿರಿದ ನಾಯಕರೆಲ್ಲರೂ ಹೇಳಿದ್ದು ಕೂಡ ಇದನ್ನೇ. ಬ್ರಿಟಿಷ್ ತಂತ್ರಕ್ಕೆ ಪ್ರತಿತಂತ್ರ ಕೂಡ ಅದೇ ಆಯಿತು. ಬ್ರಿಟಿಷರು ‘ನೀವು ರಾಷ್ಟ್ರವಲ್ಲ’ ಎಂದಾಗ ಭಾರತೀಯರು ‘ನಾವು ನಿರ್ಮಾಣ ಮಾಡುತ್ತೇವೆ’ ಎಂದುಬಿಟ್ಟರೇ ಹೊರತು ನಮ್ಮದು ರಾಷ್ಟ್ರ ಎಂದು ಪ್ರತಿ ಹೋರಾಟ ಮಾಡಲಿಲ್ಲ. ‘Uಛಿ Zಛಿ Z Zಠಿಜಿಟ್ಞ ಜ್ಞಿ ಠಿeಛಿ ಞZhಜ್ಞಿಜ’ ಎಂದರು. ಸ್ವಾತಂತ್ರ್ಯಕ್ಕೆ ಕಾಲ ಕೂಡಿಬಂದಿರಲಿಲ್ಲವೇನೋ ಅನಿಸುತ್ತದೆ. ಬ್ರಿಟಿಷರು ಹಾಕಿದ್ದ ಬೇಡಿಯನ್ನು ಭಾರತೀಯರು ಆಭರಣವೆಂಬಂತೆ ಭಾವಿಸಿದ್ದರು. ಅದನ್ನೇ ಚುಂಬಿಸಿದರು. ಇನ್ನು ಯಜಮಾನನ ವಿಜಯ ಅಂತಿಮವಾಗದೆ ಏನಾದೀತು? ಆದ್ದರಿಂದ ನಮ್ಮ ಸಮಾಜ ಪುಸ್ತಕದ ಪುಟಗಳಲ್ಲಿ ಹಾಗೆಯೇ ಇದೆ. ಇಂಥಿಂಥಾ ದಿನ, ಇಂಥಿಂಥಾ ಹೊತ್ತು ಇಂಥಿಂಥವರಿಗೆ ರಾಷ್ಟ್ರಭಾವದ ಉದಯವಾಯಿತು ಎಂದು ಸಾಕ್ಷಾತ್ ಬುದಟಛಿನಿಗೆ ಬೋಧಿವೃಕ್ಷದ ಕೆಳಗೆ ಆದಂಥ ಧಾಟಿಯಲ್ಲಿ ವರ್ಣನೆಗಳಿವೆ. ಅದರ ಪರಿಣಾಮ ಇಂದಿನ ಪೀಳಿಗೆಗೆ ಭಾರತವಿನ್ನೂ ರಾಷ್ಟ್ರೀಯತ್ವದತ್ತ ಪಕ್ವವಾಗುತ್ತಿರುವ ರಾಷ್ಟ್ರ. ಭಾರತವೆಂದರೆ ತೀರಾ ಎಳಸು. ಅನುಭವವಿಲ್ಲ. ಸಾರವಿಲ್ಲ, ಸತ್ತ್ವವಿಲ್ಲ. ಬಹುತೇಕ
ಸಂದರ್ಭದಲ್ಲಿ ವಿ ಆರ್ ಬ್ಲಡೀ ಇಂಡಿಯನ್ಸ್. ಧೋನಿ ಪಡೆ ಏನಾದರೂ ವಿಶ್ವಕಪ್ ಗೆಲ್ಲದೆ ಇರುತ್ತಿದ್ದರಂತೂ ನಾವು ವಿಶ್ವದಲ್ಲಿ
ತಲೆ ಎತ್ತಿ ನಡೆಯುವಂತೆಯೂ ಇರಲಿಲ್ಲ ಎಂಬಂಥ ಭಾವನೆ. ಬಹುತೇಕರಿಗೆ ಈ ಅಭಿಪ್ರಾಯವಿರುವುದು ಸುಳ್ಳಲ್ಲ. ಯಾಕೆಂದರೆ ಕ್ರಿಕೆಟ್ ಧರ್ಮವಲ್ಲವೇ? ಆಟಗಾರರು ದೇವರಲ್ಲವೇ? ಇದೆಲ್ಲದರ ಹಿಂದೆ ಬ್ರಿಟಿಷರಿಂದ ರಾಷ್ಟ್ರೀಯರಲ್ಲ ಎಂಬ ಹುಸಿ ತರ್ಕದ ತಿರುಳಿದೆ. ಅವರ ಹುನ್ನಾರ ಇಂದೂ ಜಾಗೃತವಾಗಿರುವ ಕುರುಹುಗಳಿಗೆ ಇಂದೇನಾದರೂ ಭಾರತದ ವಿಶಿಷ್ಟ ಆಧ್ಯಾತ್ಮಿಕ ಸಾಂಸ್ಕೃತಿಕ ಬೇರುಗಳೇ ರಾಷ್ಟ್ರೀಯತೆ ಎಂದು ಪ್ರತಿಪಾದಿಸಿದರೆ ಅದು ಕೋಮುವಾದ ಎಂದಲ್ಲದೇ ಬೇರೆ ಪ್ರತಿಕ್ರಿಯೆಗಳು ಹೊರಬರದು. ದೇಶಕ್ಕಿಂದು ಫ್ಯಾಶನೇಟ್ ಆದ ವ್ಯಾಖ್ಯಾನಗಳು ಬೇಕಿವೆ. ಅದು ಬೇಡಿಯನ್ನು ಆಭರಣವೆಂದು ಚುಂಬಿಸಿದ ಫಲ. ಹೀಗೆ ಸ್ವಾತಂತ್ರ್ಯೋತ್ತರ ಭಾರತದಲ್ಲಿ ‘ರಾಷ್ಟ್ರ ನಿರ್ಮಾಣದ’ ಕಾರ್ಯ ಮಾಡುವ ಧಾವಂತದಲ್ಲಿ ಮತ್ತೇನನ್ನೋ ನಿರ್ಮಾಣ ಮಾಡಿಬಿಟ್ಟರು. ಅದರ ಪರಿಣಾಮ ಹೇಗಿತ್ತೆಂದರೆ ವಸಹತುಶಾಹಿತ್ವ ಕೊನೆಗೊಂಡರೂ ವಸಾಹತೀಕರಣದ ಉಳಿಕೆ ಎಲ್ಲರ ಮನಸ್ಸಲ್ಲೂ ಉಳಿದುಹೋಯಿತು. ಆದ್ದರಿಂದ ಭಾರತದ ಸಾಂಸ್ಕೃತಿಕ - ಆರ್ಥಿಕ - ರಾಜಕೀಯ ವ್ಯವಸ್ಥೆಗಳು ಬ್ರಿಟಿಷ್ ಅವಧಿಗಿಂತ ಹದಗೆಟ್ಟವು. ಅದರ ಪರಿಣಾಮ ಇಂದು ಗಾಢವಾಗಿ ಆ ಮೂರು ಕ್ಷೇತ್ರಗಳೂ ವಿಕೃತಿಗೊಂಡಿವೆ. ಪತನದ ಹಾದಿ ಹಿಡಿದಿವೆ. ಅದನ್ನು ಎಳೆಎಳೆಯಾಗಿ ತೆರೆದಿಟ್ಟವರು ಇತ್ತೀಚೆಗೆ ನಿಧನರಾದ ಡಾ. ಉಪೇಂದ್ರ ಶೆಣೈರವರು. ‘ಸ್ವಾತಂತ್ರ್ಯೋತ್ತರ ಭಾರತ. ನವನಿರ್ಮಾಣದ ಹೊಳಹುಗಳು’ ಎಂಬ ಅವರ ಕೃತಿ ಈ ಸಂಗತಿಗಳ ಪಂಚನಾಮೆಯನ್ನು ನಡೆಸುತ್ತದೆ. ನಮಗೆ ಸ್ವಾತಂತ್ರ್ಯ ದೊರಕಿ ಅರ್ಧ ಶತಮಾನವಾದರೂ ನಾವಿನ್ನೂ ದಿಕ್ಕೆಟ್ಟ ಸ್ಥಿತಿಯಲ್ಲೇ ಯಾಕಿದ್ದೇವೆ ಎಂಬ ಪ್ರಶ್ನೆಗಳಿಗೆ ಅಲ್ಲಿ ಉತ್ತರವಿದೆ. ವೈಚಾರಿಕ ಗೊಂದಲ, ವ್ಯಾಪಕ ತಪ್ಪು ಗ್ರಹಿಕೆಗಳಿಗೆ ಕಾರಣ ಮತ್ತು ಸುದೀರ್ಘ ಕಾಲದ ಗುಲಾಮಗಿರಿಯ ಲಕ್ಷಣಗಳ ಕಾರಣಗಳನ್ನು ಅವರು ಬಿಚ್ಚಿಟ್ಟಿದ್ದಾರೆ. ಭಾರತದ ಇಂದಿನ ದೌರ್ಬಲ್ಯದ ಕಾರಣ ಅದರ ವೈಶಿಷ್ಟ್ಯವೇ ಎಂಬಲ್ಲಿಂದ ಹಿಡಿದು ಪತನದ ದಾರಿ, ದಾಸ್ಯದ ದುಷ್ಪರಿಣಾಮಗಳನ್ನು ಹುಡುಕಿದ್ದಾರೆ. ಧರ್ಮ, ಅರ್ಥ, ರಾಷ್ಟ್ರಗಳು ಪದ ವಿಕಾರಗೊಂಡಿರುವ ಕಾರಣ ಪರಿಣಾಮಗಳನ್ನೂ ಚರ್ಚಿಸಿದ್ದಾರೆ. ಡಾ. ಉಪೇಂದ್ರ ಶೆಣೈ ಅವರು. ಮೂರು ದಶಕಗಳಿಗೂ ಹೆಚ್ಚು ಕಾಲದ ಅವರ ಶೋಧ ಅನುಭವಗಳ ಒಟ್ಟು ರೂಪ ಅವರ ಈ ಕೃತಿಯಲ್ಲಿ ಅಡಕವಾಗಿದೆ ಎನ್ನಬಹುದು. ಡಾ. ಉಪೇಂದ್ರ ಶೆಣೈ ಅವರು ಅಧ್ಯಯನವಿಲ್ಲದೆ ಒಂದಕ್ಷರವನ್ನೂ ಬರೆಯಲಾರರು. ಅಂಥ ಪರಿಶ್ರಮಕ್ಕೆ ಸಾಕ್ಷಿಯಾಗಿ ಈ ಕೃತಿ ಇತ್ತೀಚೆಗೆ ಬಿಡುಗಡೆಯಾಗಿದೆ. ಪತ್ರಿಕೆಯೊಂದರ ಪುಟ್ಟ ತುಣುಕನ್ನೂ ಬಿಡದೆ ಅಧ್ಯಯನ ಮಾಡಿ ಸಂಗ್ರಹಿಸುವ ಅವರ ಶೈಲಿ ಈ ಕೃತಿಯಲ್ಲಿ ಮಹತ್‌ರೂಪ ಪಡೆದಿದೆ. ಸ್ವಾತಂತ್ರ್ಯಾನಂತರದ ಘಟನಾವಳಿಗಳ ಸೂಕ್ಷ್ಮ ವಿವರವನ್ನೂ ಬಿಡದೆ ಶೋಧಿಸಿರುವ ಶೆಣೈ ಅವರು ಇಂದಿಲ್ಲ. ಆದರೆ ಅವರ ಅಗಾಧ ಪರಿಶ್ರಮ ಮತ್ತು ಸಂಗ್ರಹಿಸಿದ ಪತ್ರಿಕೆ, ಪುಸ್ತಕಗಳು ಇತಿಹಾಸಕ್ಕೆ ಸಾಕ್ಷಿಯಾಗಿ ಉಳಿದಿವೆ. ಒಂದರ್ಥದಲ್ಲಿ ಇವರೊಂದು ಪೇಪರ್ ಗೂಗಲ್ ಎಂದರೂ ಸರಿ ಮತ್ತು ಅದಕ್ಕಿಂತಲೂ ಹೆಚ್ಚೆ. ಏಕೆಂದರೆ ಮಾಹಿತಿಗಳ ಶೇಖರಣೆಯಷ್ಟೇ ಇಲ್ಲಿ ಗುರಿಯಲ್ಲ. ರಾಷ್ಟ್ರದ ವಿಚಾರದ ಚಿಂತನೆಗೆ ದಾರಿಯಾದ ಒಂದು ಮಾರ್ಗ ಅದಷ್ಟೇ. ಅಂದು ‘ಚಿಂತನಾಗಂಗಾ’ ಎಂಬ ಗುಚ್ಛದಲ್ಲಿ ಶ್ರೀ ಗುರೂಜಿ ಗೋಳವಲಕರರು ಯಾವುದನ್ನು ಅಪಾಯವೆಂದೂ, ಯಾವುದು ಆಗಬಾರದಿತ್ತೆಂದೂ, ಯಾವುದು ಸಹ್ಯವೆಂದೂ, ಯಾವುದು ಅಸಹ್ಯವೆಂದೂ, ಹೇಳಿದ್ದರೋ ಅದರ ಪರಿಣಾಮಗಳನ್ನು ಡಾ. ಉಪೇಂದ್ರ ಶೆಣೈ ‘ಸ್ವಾತಂತ್ರ್ಯೋತ್ತರ ಭಾರತ : ನವನಿರ್ಮಾಣದ ಹೊಳಹುಗಳು’ನಲ್ಲಿ ಚರ್ಚಿಸಿದ್ದಾರೆ. ಗುರೂಜಿಯವರ ಚಿಂತನೆಗಂಗೆಯೇ ಸರಿ ಎಂದು ಶೆಣೈ ಅವರ ಗ್ರಂಥವನ್ನು ನೋಡಿದರೆ ಅರಿವಾಗದಿರದು.

No comments: