ಗಣಿ ವರದಿಯ ಧೂಳುಈ ಪರಿಯಲ್ಲಿ ಹರಡುವುದೆಂದು ದಶಕದ ಹಿಂದೆ ಎಂಥವರೂ ಅಂದಾಜಿಸಿರಲಿಲ್ಲ.ಧೂಳಿನ ಕಣಗಳು ರಾಜಕಾರಣದಲ್ಲಿ ಹರಡಿ,ಕೆಂಪಾಗಿ,ಕಲೆಯಾಗಿ, ಮತದಾರರನ್ನು ಉಸಿರುಗಟ್ಟಿಸುವ ಹಂತಕ್ಕೆ ತಲುಪಿದ್ದು ಸದ್ಯದ ರಾಜಕಾರಣದ ಚಿತ್ರಣ.ಈಗ ಎಲ್ಲರೂ .ವೋಟುಹಾಕಿದವರೂ ಗೆದ್ದವರೂ ಸೋತವರೂ ಎಲ್ಲರಿಗೂ ಈಗ ಕೆಮ್ಮಿನ ಕಾಯಿಲೆ.ಯಡಿಯೂರಪ್ಪವರಿಗೆ ತಲೆಹೋಗುವ ಹೆದರಿಕೆ.ಗಣಿಧೂಳಿನದು ದಶಕಗಳ ಹಿಂದಿನ ಕಥೆ. ಮಣ್ಣು ಮಾರಿದರೆಮದು ತಲೆಕೆಡಿಸಿಕೊಳ್ಳದವರು ಬೆಟ್ಟವನ್ನೇ ಅಗೆಯತೊಡಗಿದಾಗ ,ಮಾಫಿಯಾ ಒಕ್ಕರಿಸಿದಾಗ ,ಗಣಿಯ ಧಣಿಗಳು ಆಳುವ ಹಂತಕ್ಕೂ ಬಂದಾಗಲೇ ಅದರ ತೀವ್ರತೆಯ ಅರಿವಾಗಿದ್ದು.ಅನಂತರದ್ದೆಲ್ಲಾ ಕಿವಿಯಲ್ಲಿ ಇನ್ನೂ ಗುನುಗುನಿಸುತ್ತಿರುವ ಸಂಗತಿಗಳು.ಗಣಿಗಾರಿಕೆ ಉಚಾ್ಛ್ರಯ ಸ್ಥಿತಿಯಲ್ಲಿದಾ್ದಗಲೇ ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಬಿಜೆಪಿ ಪಾಲಿಗೆ ವರವೂ ಹೌದು ಶಾಪವೂ ಹೌದು.ಏಕೆಂದರೆ ತುಕ್ಕು ಹಿಡಿದಿದ್ದ ಹಳೇ ಕಬ್ಬಿಣದಂಥಾ ಕಾಂಗ್ರೆಸನ್ನು ಮಣಿಸಲು ಕೊನೆಗೆ ಗಣಿಯೇ ಬರಬೇಕಾಯಿತು.ಬಳಾ್ಳರಿಯಂಥಾ ಕಾಂಗ್ರೆಸಿನ ಭದ್ರ ಕೋಟೆಯನ್ನು ಕಬ್ಬಿಣದ ಅದಿರುಗಳೇ ಚೂರು ಮಾಡಿದ್ದವು.ಹಲವು ಕಡೆಗಳಲ್ಲಂತೂ ಕಾಂಗ್ರೆಸ್ ಸುಲಭವಾಗಿ ಮೇಲೇಳಲಾಗದಂತೆ ಮಾಡುವಲ್ಲಿ ಗಣಿಯ ಪಾತ್ರ ದೊಡ್ಡದು.ಕೌರವರನ್ನು ಮಣಿಸಲು ಕುರುಕ್ಷೇತ್ರವೇ ನಡೆದಂತೆ.ಹೀಗೆ ರಾಜಕಾರಣದ ಗೆಲುವು ಸಾಂವಿಧಾನಿಕ ಮತ್ತು ಭೌಗೋಳಿಕ ವಾದ ಸಂಗತಿಗಳನ್ನು ದಮನಿಸಿ ಬಿಜೆಪಿ ಪಾಲಿಗೇನು ಸಮಸ್ತ ರಾಜ್ಯಕ್ಕೇ ಶಾಪವೂ ಆಯಿತು.ರಾಜಕಾರಣ ಯಾವತ್ತಿದ್ದರೂ ಬಂಡವಾಳಶಾಹಿ ಸ್ವರೂಪವನ್ನು ಪಡೆದುಕೊಳ್ಳುವ ಗುಣವುಳ್ಳದ್ದು. ಗಣಿ ಅದಕ್ಕೆ ಇಂಬು ನೀಡಿತು.ಇನ್ನೇಕೆ ತಡ ಎಂಬಂತೆ ರಾಜಕಾರಣ-ವಾ್ಯಪಾರ-ವಹಿವಾಟು-ಅಧಿಕಾರ ಎಲ್ಲವೂ ಸಮ್ಮಿಳಿತವಾಗಿ ಎಲ್ಲವೂ ಕೆಂಪಾದವು.ಬಿಜೆಪಿ ಕರ್ನಾಟಕದಲ್ಲಿ ಇವೆಲ್ಲದರ ನಡುವೆ ಬೆಳೆಯುತಾ್ತ ಬಂತು.ಒಂದನೊ್ನಂದು ವಿಭಜಿಸಲಾಗದಂತೆ ಒಟಾ್ಟಗಿಯೇ ಇರತೊಡಗಿತು.ಪರಿಣಾಮ ಗಣಿಗಾರಿಕೆ ಬಿಜೆಪಿ ಪಾಲಿಗೆ ಬೆದೆಜನಕವಾಯಿತು.ಏಕೆಂದರೆ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರ ವಹಿಸಿಕೊಂಡು ದ.ಭಾರತದ ಹೆಬ್ಬಾಗಿಲನ್ನು ತೆರೆಯಿತು.ಇಪ್ಪತ್ತರ ಆಟದಲ್ಲಿನ ಆಟದಲ್ಲಿನ ಮೋಸ,ಧಗಾಕೋರತನ,ಜನರ ಒತ್ತಾಸೆಯೂ ಬಿ.ಜೆ.ಪಿಯ ಬೆನ್ನ ಹಿಂದಿದ್ದವು.ತನ್ನ ತತ್ವ ಸಿದ್ದಾಂತಗಳನ್ನು ಅನುಷಾ್ಟನಕ್ಕೆ ತರಬಲ್ಲ ಎಲ್ಲಾ ಅವಕಾಶಗಳು ಬಿಜೆಪಿಗೆ ತಾನಾಗಿ ಬಂದಿತ್ತು.ಅಧಿಕಾರ ವಹಿಸಿಕೊಂಡ ಬಿಜೆಪಿ ತನ್ನ ಪಾಡಿಗೆ ತಾನಿದ್ದಿದ್ದರೂ ಜನರ ಶಾಸ್ವತ ಪ್ರೀತಿಗೆ ಅದು ಪಾತ್ರವಾಗುತ್ತಿತ್ತು.ಆದರೆ ಆತುರ ಆತುರವಾಗಿ ಬೇಳೆಯಲು ಗಣಿ ಂಬ ಬೆದೆಜನಕವನ್ನು ಅದು ಸೇವನೆ ಮಾಡಿತ್ತು.ತನ್ನ ಆಡಳಿತದುದ್ದಕ್ಕೂ ಅದು ಗಣಿ ಧೂಳನ್ನು ಬಡಲಾರದೇ ಹೋಯಿತು.ಸರಕಾರವೇ ಗಣಿಮಯವಾಯಿತು. ಅದರ ಪರಿಣಾಮಗಳನ್ನು ಹೆಚ್ಚು ಉಲ್ಲೇಖಿಸುವ ಅಗತ್ಯವಿಲ್ಲ.ಸದ್ಯದ ಸ್ಥಿತಿ ಅದರ ಮುಖ್ಯವಾದ ಒಂದು ಘಟ್ಟ ಎಂಬುದಂತೂ ಸತ್ಯ.ಬಿಜೆಪಿ ಸರಾಕಾರವನ್ನು ಬೆಂಬಲಿಸಿದ್ದ ಜನರಿಗೆ ಯಡಿಯೂರಪ್ಪ ಗಣ ಅವ್ಯವಹಾರದಲ್ಲಿ ಪಾಲೊ್ಗಂಡಿದ್ದರೋ ಇಲ್ಲವೋ ಎಂಬುದು ಖಂಡಿತವಾಗಿಯೂ ನಿಚ್ಚಳವಾಗಿರಲಿಲ್ಲ.ಅದು ಅರಿವಾಗಲು ಆಸ್ಪದವೂ ಇರಲಿಲ್ಲ. ಆದರೆ ಎಲ್ಲರೂ ಅವರನ್ನು ಸಂಶಯದಿಂದ ಕಾಣಲಾರಂಭಿಸಿದರು.ಏಕೆಂದರೆ ಸರಕಾರದಲ್ಲಿ ಜಿಡ್ಡು ಎಂದು ಗುರುತಿಸಬಹುದಾದ ಧೂಳಂತೂ ಇದ್ದೇ ಇತ್ತು.ಅತ್ತ ಜನರು ತತ್ವವೆಲ್ಲಿ ಸಿದ್ದಾಂತವೆಲ್ಲಿ ಎಂದು ಹುಡುಕಾಡಿದರು.ಇತ್ತ ವಿರೋಧ ಪಕ್ಷಗಳ ಅಬ್ಬರವೂ ತಾರಕಕ್ಕೇರಿತು.ರಾಜ್ಯಪಾಲರಂತಹ ಟ್ರೋಜನ್ ಕುದುರೆಯನ್ನೂ ರಾಜಕಾರಣಕ್ಕೆ ತರಲಾಯಿತು.ಒಟಾ್ಟರೆ ಗೊಂದಲ,ಗೋಜಲು ಗೋಜಲಾದ ರಾಜಕಾರಣಕ್ಕೆ ಗಣಿ ಕಾರಣವಾಯಿತು. ದಿನೇ ದಿನೇ ಬಿಜೆಪಿಯನ್ನು ಬೈಯುವ ವರ್ಗ ಹೆಚಾ್ಚಗತೊಡಗಿತು.ಶಿಸ್ತಿನ ಪಕ್ಷ್ಷದ ಶಿಸ್ತೆಲ್ಲಿ ಎಂದು ಜನ ಆಡಿಯೂಕೊಂಡರು.ಇದೀಗ ಯಡಿಯೂರಪ್ಪನವರ ರಾಜೀನಾಮೆಯನ್ನು ಕಾರ್ಯಕಾರಿಣಿ ಮಂಡಳಿ ಕೇಳಿದೆ.ಶಿಸ್ತಿನ ಪಕ್ಷ ಎಂಬ ಹೆಸರನ್ನು ಉಳಿಸಿಕೊಂಡಿದೆ.ಬಿಜೆಪಿ ಡಿಫರೆಂಟ್ ಅನಿಸಿಕೊಳ್ಳುವುದು ಅದಕ್ಕೆ .ಇದು ಯಾವದೋ ವ್ಯಕ್ತಿಯಿಂದಲ್ಲ,ಯಾವನೋ ವ್ಯಕ್ತಿಗೆ ಸೀಮಿತವೂ ಅಲ್ಲ.ಸಂಖಾ್ಯಬಲದ ಹಿಂದೋಡುವ ಜಾಯಮಾನದ ತತವವೂ ಇಲ್ಲಿಲ್ಲ.ಆದರೆ ವಿಪರ್ಯಾಸದಿಂದ ಇಲ್ಲಿ ಎಲ್ಲವೂ ನಡೆದವು.ಎಲ್ಲವೂ ಗಣಿಬಲದಿಂದಲೇ ನಡೆದವು.
1980ರ ದಶಕ.ಕೇಂ್ದರದಲ್ಲಿದ್ದವರು ಎರಡೇ ಎರಡು ಸಂಸತ್ ಸದಸ್ಯರು ಉಳಿದವೆಲಾ್ಲ ಕಾಂಗ್ರೆಸಿನಂತಹ ಒರಟು ಮತ್ತು ಕಮುನಿಷ್ಟನಂತಹ ಜಿಗುಟು,ಅಂಥವುಗಳ ಬಾಲಗಳು ...ಅಂಥ ಕಾಲದಲ್ಲೆ ಇಡೀ ಸಂಸತ್ತನ್ನೇ ನಡುಗಿಸಬಲ್ಲ ಶಕ್ತಿ ಆ ಇಬ್ಬರು ಸಂಸದರಿಗಿತ್ತು.ಅಥವಾ ಬಿಜೆಪಿಗಿತ್ತು. ಅಂಥಾ ಶಿಸ್ತಿನ ಪಕ್ಷ ಗಣಿ ಧೂಳಿನಲ್ಲಿ ಮುಚ್ಚಿಯೇ ಹೋಯಿತು ಎಂದೇ ಅಂದುಕೊಂಡಾಗ "ಹೈಕಮಾಂಡ್್" ನಿಂದ ಮುಖ್ಯಮಂತ್ರಿಗಳ ರಾಜಿನಾಮೆ ಕೇಳಿದ್ದು ಕೇವಲ ಬಿಜೇಪಿಯ ತತ್ವಸಿದ್ದಾಂತಕಷ್ಟೇ ಅಲ್ಲದೆ ಭಾರತೀಯ ರಾಜಕಾರಣದಲ್ಲೇ ಒಂದು ಸಂತಸದ ಗಳಿಗೆ. ಅಂದು ದೆಹಲಿಯಲ್ಲಿ ಮದನ್ ಲಾಲ್ ಖುರಾನಾರ ರಾಜಿನಾಮೆಯನ್ನು ಕೇಂದ್ರ ಬಿಜೆಪಿ ಕೇಳಿದಾಗ,ಛತ್ತಿಸ್ಗಢದಲ್ಲಿ ಮುಖ್ಯಮಂತ್ರಿಗಳ ರಾಜಿನಾಮೆಯನ್ನು ಕೇಳಿದಾಗ,ಉಮಾಭಾರತಿಯವರ ರಾಜಿನಾಮೆಯನ್ನು ಕೇಂದ್ರ ಕೇಳಿರುವಾಗ ಯಡಿಯೂರಪ್ಪನವರ ರಾಜಿನಾಮೆಯನ್ನು ಕೇಳಿದ್ದು ಬಿಜೆಪಿಯ ಸಿದಾ್ಧಂತನಿಷ್ಟೆಯ ಪ್ರತೀಕ.ಅಷ್ಟಕ್ಕೂ ಯಡಿಯೂರಪ್ಪನವರು ಇನ್ನೂ ತಪ್ಪಿತಸ್ಥರೆಂದು ಸಾಭೀತೂ ಆಗಿಲ್ಲ.ಒಂದು ವರದಿಯನ್ವಯ ಈ ಕ್ರಮ ಕೈಗೊಳ್ಳಲಾಗಿದೆ.ಭಾರತದಲ್ಲಿ ವರದಿಗಳಿಗೇನೂ ಕೊರತೆಯಿಲ್ಲ.ಒಂದು ವೇಳೆ ಗಣಿ ವರದಿಯಲ್ಲಿ ಯಡಿಯೂರಪ್ಪನವರೇ ಖಳನಾಯಕರು ಎಂದಂತೂ ಇರಲು ಸಾಧ್ಯವಿಲ್ಲ.ಗಣಿಗಾರಿಕೆಯ ಉತ್ತುಂಗದ ಕಾಲದಲ್ಲಿ ಅಧಿಕಾರ ವಹಿಸಿಕೊಂಡಿದ್ದೇ ಅವರಿಗೆ ಮುಳುವಾಗಿದೆ .
ಇದರ ನಡುವೆ ಕಾಂಗ್ರೆಸ್ ನೆನಪಾಗುತ್ತದೆ.ಏನೆಲಾ್ಲ ಮಾಡಿದ್ದರು.ಹೇಗೆಲಾ್ಲ ವರ್ತಿಸಿದ್ದರು.ಇವತ್ತಿಗೂ ಕೂಡಾ ಅವರ ಗಮನ ಸಮಸ್ತ ಬಿಜೆಪಿಯ ಮೇಲಿರುವುದು ಸಂಶಯಕ್ಕೆ ಕಾರಣವಾಗುತ್ತದೆ.ನಿಜವಾದ ಕಾಳಜಿ ಇದ್ದಿದ್ದರೆ ಕಾಂಗ್ರೆಸ್ ಕೇಂದ್ರ ಬಿಜೆಪಿಯ ನಿರ್ಧಾರವನ್ನು ಸಾ್ವಗತಿಸುತ್ತಿತ್ತು.ಆದರೆ ಅದು ಸರಕಾರದ ಪತನದ ಮೇಲೆ ಕಣ್ಣಿಟ್ಟಿದೆ.ಇದರರ್ಥವೇನು?ಒಂದಂತೂ ಸತ್ಯ ಬಹುಸಮಯದ ನಂತರ ಬಿಜೆಪಿ ತನ್ನ ತನವನ್ನು ತೋರಿಸಿದೆ.ಅಂಥಾ ಅಧ್ವಾನಿಯನ್ನೇ .ಜಸ್ವಂತ್ ಸಿಂಗರನ್ನೇ ತತ್ವಸಿದ್ದಾಂತಗಳಾಚೆ ಇಡದ ಬಿಜೆಪಿ ಗಣಿಧೂಳಿಗೆ ಇಷ್ಟೊಂದು ಮರುಳಾಗಿಬಿಡುವುದೇ ಎಂದು ಅಂದುಕೊಂಡವರಿಗೆ ಬಹುಸಮಯದ ನಂತರ ಉತ್ತರವೊಂದು ಸಿಕ್ಕಿದೆ.
ಬೆದೆಜನಕದಿಂದ ದಷ್ಟಪುಷ್ಟವಾಗಿಯೇನೋ ಬೆಳೆಯಬಹುದು.ಆದರೆ ಅದು ಸಹಜವಲ್ಲ.ಸಹಜ ಬೆಳವಣಿಗೆಯಂತೆ ಆರೋಗ್ಯಕರವೂ ಅಲ್ಲ.ಅಲ್ಪಾಯುಷಿಯಾದರೂ ಸತ್ಪ್ರಜೆಯಾದ ಮಗನೇ ಹುಟ್ಟಬೇಕು ಅಲ್ಲವೇ?
1 comment:
ಬಿಜೆಪಿ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಸಾಕಷ್ಟು ಅಭಿವೃದ್ಧಿ ನಡೆದಿದೆ.ಅಷ್ಟೇ ಪ್ರಮಾಣದಲ್ಲಿ ಭ್ರಷ್ಟಾಚಾರ ಕೂಡ ನಡೆದಿದೆ. ಕೇಂದ್ರದಲ್ಲಿ 2ಜಿ ಸ್ಪೆಕ್ಟ್ರಂ,ಕಾಮನ್ ವೆಲ್ತ್, ಆದರ್ಶ ಅಪಾರ್ಟ್ ಮೆಂಟ್ ಹಗರಣ ಸೇರಿದಂತೆ ಸಾಕಷ್ಟು ಅವ್ಯವಹಾ ರಗಳು ನಡೆದಿದೆ. ಅದರ ಬೆನ್ನಲ್ಲೇ ಸಾಕಷ್ಟು ಜನರ ತಲೆದಂಡ ವಾಗಿದೆ. ಜತೆಗೆ ಕೆಲವರು ಜೈಲು ಕೂಡ ಸೇರಿದ್ದಾರೆ. ಯಡಿಯೂರಪ್ಪ ಅವರ ಮೇಲೆ ಸಾಕಷ್ಟು ಆರೋಪಗಳು ಕೇಳಿ ಬಂದರೂ ಅವರನ್ನು ಅಧಿಕಾರದಿಂದ ಕಿತ್ತೊಗೆಯಲು ಪಕ್ಷದ ಹೈ ಕಮಾಂಡ್ ಮೊದಲಿನಿಂದಲೂ ಹಿಂದೇಟು ಹಾಕಿಕೊಂಡು ಬಂದಿರುವುದು ಸುಳ್ಳಲ್ಲ. ಲೋಕಾಯುಕ್ತ ವರದಿ ಇದೀಗ ಕುತ್ತಿಗೆಗೆ ಬಂದ ಸಂದರ್ಭದಲ್ಲಿ ಹೊಸ ನಾಯಕನನ್ನು ಹುಡುಕುವ ಕಾರ್ಯಕ್ಕೆ ಬಿಜೆಪಿ ಮುಂದಾಗಿದೆ. ಕೇಂದ್ರ ಸರಕಾರ ನಡೆಸಿದ ಭ್ರಷ್ಟಾಚಾರ ಕುರಿತು ದೊಡ್ಡ ಮಟ್ಟದ ಹೋರಾ ನಡೆಸುತ್ತಿರುವ ಹಾಗೂ ತತ್ವ ಸಿದ್ಧಾಂತಗಳ ಕುರಿತು ಹೆಚ್ಚು ಮಾತನಾಡುವ ಬಿಜೆಪಿಗೆ ಇಂಥ ದುರ್ಗತಿ ಬರಬಾರದಿತ್ತು.ಇನ್ನಾದರೂ ರಾಜ್ಯದ ಚುಕ್ಕಾಣಿ ಉತ್ತಮ ನಾಯಕರ ಕೈಗೆ ನೀಡಲು ಬಿಜೆಪಿ ಹೈ ಕಮಾಂಡ್ ದಿಟ್ಟ ಕ್ರಮ ಕೈಗೊಳ್ಳಬೇಕಾಗಿದೆ.
Post a Comment