ಹೀನಾ ರಬ್ಬಾನಿ ಖಾರ್ ಎಂಬ ಪಾಕಿಸ್ಥಾನದ ವಿದೇಶಾಂಗ ಸಚಿವೆ ಭಾರತಕ್ಕೆ ಬಂದಾಗ ಕರ್ನಾಟಕದಲ್ಲಿ ಗಣಿಯ ಧೂಳು ಹರಡಿತ್ತು.ಅದರೆಡೆಯಲ್ಲೂ ಭಾರತದ ಮಾಧ್ಯಮಗಳು ರಬ್ಬಾನಿ ವಿಮಾನ ಇಳಿಯುತ್ತಿರುವುದನ್ನೂ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಎಂ.ಕೃಷ್ಣ ರೊಂದಿಗೆ ಕೈಕುಲುಕುವುದನ್ನೂ ಚಿತ್ರ ಸಮೇತ ಪ್ರಕಟಿಸಿದ್ದವು. ಇಷ್ಟಕ್ಕೆ ಅದು ಮಾಧ್ಯಮಗಳ ಕಾಳಜಿ ಎಂದೋ ಇಂಡೋ-ಪಾಕ್ ವಿಷಯಗಳ ಬಗ್ಗೆಗಿನ ಆಸಕ್ತಿ ಎಂದೋ ಅಂದುಕೊಂಡರೆ ಅದು ತಪ್ಪು.ಅಷ್ಟರವರೆಗೆ ಗಂಟು ಮುಖದ,ಪ್ರಾಯ ಹೆಚ್ಚಾಗಿ ಇನ್ನೆನು ಹೋಗಿಯೇ ಬಿಡುವರೇನೋ ಎಂಬಂಥ ವ್ಯಕ್ತಿತ್ವಗಳ ವಿದೇಶಾಂಗ ಸಚಿವರನ್ನೆ ಕಂಡೂ ಕಂಡೂ ಬೇಸರಿಸಿರುವಾಗ, ಮಾಧ್ಯಮಗಳು ಹೀನಾರಂಥ ಸುಂದರ ಮಹಿಳೆ ಬಂದಾಗ ಯಥೋಚಿತ ಪ್ರಚಾರವನ್ನು ಕೊಡದೇ ಬಿಡುವರೇ?ಹಾಗಾಗಿ ಮಾಧ್ಯಗಳು ಬಾಲಿವುಡ್‌ಗೆ ನೀಡುವಂತಹ ಪ್ರಚಾರವನ್ನೇ ಆಕೆಗೂ ಕೊಟ್ಟು.ಹೀನಾಳ ಬಳಿಯಿರುವ ಬ್ಯಾಗ್‌ಗಳ ಸಂಗ್ರಹಗಳು,ಆಕೆಯ ಸನ್‌ಗ್ಲಾಸ್‌ಗಳು ,ಸೆಲ್ವಾರ್ ಕಮೀಜ್‌ಗಳು,ಆಕೆ ಹಾಕಿದ್ದ ಲಿಪ್‌ಸ್ಟಿಕ್‌ಗಳು ಮೊದಲಾದವುಗಳ ಬಗ್ಗೆ ವಿಶೇಷ ವರದಿಗಳನ್ನು ಮಾಡಿದವು.ಇರಲಿ ಅದು ಆಕೆಯ ಮತ್ತು ಮಾಧ್ಯಮಗಳ ಸಂಗತಿ ಎಂದೇ ಇಟ್ಟುಕೊಳ್ಳೀಣ.ಆದರೆ ಆಕೆ ಬಂದು ಭಾರತ-ಪಾಕ್ ಸಂಬಂಧದಲ್ಲಿ ಕಡಿದು ಕಟ್ಟೆ ಹಾಕಿದ್ದು ಏನನ್ನು?60 ವರ್ಷದ ಕಾಶ್ಮೀರದ ಸಮಸ್ಯೆಯನ್ನು 34 ವರ್ಷದ ಹೀನಾ ಬಗೆಹರಿಸಿಯೇ ಬಿಡುವಳು ಎಂಬಂತೆ ವರ್ತಿಸಿದ ಮಾಧ್ಯಮಗಳ ಬಗ್ಗೆ ಅಸಹ್ಯವಾಗುತ್ತದೆ.ಬಗೆಹರಿಸುವಳೆಂದೇ ಇಟ್ಟುಕೊಳ್ಳೋಣ.ಆಕೆ ಯ ಭೇಟಿಯಲ್ಲಿ ಅದರ ಕುರುಹುಗಳೇನಾದರೂ ಕಂಡುಬಂದಿದೆಯೇ?ಆಕೆ ಇಂಥಿಂಥ ದಿನ ಭಾರತಕ್ಕೆ ಆಗಮಿಸುತ್ತಾಳೆ ಎಂದು ತಿಳಿದಾಗ ರಾಜತಾಂತ್ರಿಕರು ಕಾದಿದ್ದೇ ಬಂತು.ಆದರೆ ಆಕೆ ಮೊದಲು ಮಾಡಿದ ಕೆಲಸವೆಂದರೆ ನೇರವಾಗಿ ಕಾಶ್ಮೀರಕ್ಕೆ ತೆರಳಿದ್ದು ಮತ್ತು ಪ್ರತ್ಯೇಕತಾವಾದಿ ಹುರಿಯತ್ ನವರೊಡನೆ ಮಾತುಕತೆಗೆ ಕೂತಿದ್ದು.ಏನು ಅಗತ್ಯವಿತ್ತು?ಆರಂಭದಿಂದಲೂ ಭಾರತವನ್ನು ಹುರಿದು ತಿನ್ನಲು ಹಾತೊರೆಯುತ್ತಿರುವ ಹುರಿಯತ್‌ನೊಂದಿಗೆ,ಕಾಶ್ಮೀರದ ಪ್ರತ್ಯೇಕತೆಗೆ ಹಾತೊರೆಯುತ್ತಿರುವ ವರೊಂದಿಗೆ,ಭಯೋತ್ಪಾದನೆಗೆ ಪ್ರತ್ಯಕ್ಷವಾಗಿ ಬೆಂಬಲಿಸುತ್ತಿರುವವರೊಂದಿಗೆ,ತುಂಡರಿಸಲು ಸ್ವಾತಂತ್ರ್ಯ ಎಂಬ ಪದ ಸೃಷ್ಟಿಮಾಡುವವರೊಂದಿಗೆ,ಭಾರತದ ಧ್ವಜ ಸುಡುವವರೊಂದಿಗೆ ಹೀನಾ ರಬ್ಬಾನಿ ಭೇಟಿ ಕೊಟ್ಟಿದ್ದು ಏಕೆ?ಕಾಶ್ಮೀರದಲ್ಲಿ ಆಶಾಂತಿ ಹರಡುತ್ತಾ,ಪೊಲೀಸರಿಗೆ -ಸೈನ್ಯಕ್ಕೆ ಕಲ್ಲು ಹೊಡೆಯುತಾ್ತ ,ಶಾಲಾ-ಕಾಲೇಜುಗಳನ್ನು ಬಂದ್ ಮಾಡಿಸುತಾ್ತ ,ಕಾಶ್ಮೀರಕ್ಕೆ ಸ್ವಾತಂತ್ರ್ಯ ಕೊಡಿ ಎಂದು ಹಿಂದಿನಿಂದಲೂ ಬೊಬ್ಬಿರಿಯುತ್ತಾ ಬರುತ್ತಿರುವ ಹುರಿಯತ್‌ನೊಟ್ಟಿಗೆ ಪಾಕ್‌ನ ವಿದೇಶಾಂಗ ಸಚಿವೆ ಮಾತುಕತೆಗೆ ಹೋಗುವುದೆಂದರೇನು?ಅದೂ ಭಾರತ ಭೇಟಿಗೆ ಬಂದ ಸಂದರ್ಭದಲ್ಲೇ ! ಹೀಗಿರುವಾಗ ಸಣ್ಣ ವಯಸ್ಸಿನ ಈ ಹೀರಾ ರಬ್ಬಾನಿ ಖಾರ್ ಳನ್ನು ಅನನುಭವಿ ಎಂದುಕೊಂಡರೆ ನಮ್ಮದೇ ತಪ್ಪು.ಮಳ್ಳಿ ಮಳ್ಳಿ ಮಂಚಕ್ಕೆ ಕಾಲೆಷ್ಟು ಎಂದರೆ ಮೂರು ಮತ್ತೊಂದು ಎಂದಳಂತೆ ಒಬ್ಬಳು ಮಳ್ಳಮ್ಮ.ಈ ಸಾಹೇಬಿಣಿ ಖಾರ್ ಕೂಡ ಅಂಥ ಮಳ್ಳಮ್ಮ.ಬೇರಾವ ದೇಶದಲ್ಲಿ ಹೀಗೆ ನಡೆಯಲು ಸಾಧ್ಯವಿತ್ತು?ಇಸ್ರೇಲಿಗೆ ಹೋದ ಯಾವುದೋ ದೇಶದ ವಿದೇಶಾಂಗ ಮಂತ್ರಿಗಳು ಪ್ಯಾಲೆಸ್ಟೈನಿನೊಡನೆಯೋ ಹಮಾಸ್ ಉಗ್ರರೊಡನೆಯೋ ಮಾತುಕತೆಗೆ ತೆರಳುವ ಧೈರ್ಯ ಮಾಡಬಲ್ಲರೇ?ಚೀನಾಕ್ಕೆ ಹೋಗಿ ಮಾವೋ ವಿರೋಧಿ ಸಂಘಟನೆಗಳೊಡನೆ ಮಾತುಕತೆಗೆ ಹೋಗುವ ಕಲ್ಪನೆ ಮಾಡಬಹುದೇ? ಇಂಗ್ಲೆಂಡಿಗೋ ಅಮೆರಿಕಾಕ್ಕೊ ತೆರಳಿ ಮುಜಾಹಿದ್ದೀನ್‌ಗಳ ಪರವಾಗಿ ಮಾತಾಡುವವರನ್ನು ಮಾತಾಡಲು ಸಾಧ್ಯವೇ? ಹಾಗೇನಾದರೂ ಆದರೆ ಅಂಥವರನ್ನೇ ಹಿಡಿದು ಒಳಗೆ ಹಾಕಿಯಾರು?ಇರಲಿ.ಪಾಕ್‌ನಲ್ಲಾದರೂ ಹಾಗೆ ಸಾಧ್ಯವೋ.ಅಲ್ಲಿ ಭಾರತದವರಿಗೆ ಭೇಟಿ ಮಾಡಲು ಯಾರೂ ಇಲ್ಲ ಬಿಡಿ.ಪಾಕ್‌ನ ಹಿಂದೂಗಳ ಪರಿಸ್ಥಿತಿಯನ್ನು ಯಾರಾದರೂ ಪಾಕ್‌ನ ನೆಲದಲ್ಲಿ ಮಾತಾಡಲು ಸಾಧ್ಯವೇ?ಜಗತ್ತಿನ ಬೇರಾವ ದೇಶದಲ್ಲೂ ನಡೆಯದ್ದು ಇಲ್ಲಿ ನಡೆಯುತ್ತವೆ.ಆದರೂ ಎಸ್.ಎಂ.ಕೃಷ್ಣರು ಅದಕ್ಕೆಲ್ಲಾ ಏನೂ ಅಂದುಕೊಳ್ಳದೆ "ಬಾ ಹೀನಾ,ಕಾಶ್ಮೀರ ಸಂಗತಿಗಳ ಬಗ್ಗೆ ಮಾತಾಡೋಣ " ಎಂದು ಕರೆದು ದ್ವಿಪಕ್ಷೀಯ ಮಾತುಕತೆಗಳಾಗುತ್ತವೆ.ಒಳಗೆ ಏನೇನು ಮಾತುಕತೆಗಳಾದವೋ ಗೊತ್ತಿಲ್ಲ.ಆದರೆ ಮಾತುಕತೆ ಮುಗಿಸಿ ಬಂದು ಮಾಧ್ಯಮಗಳ ಮುಂದೆ ನಿಂತ ಕೃಷ್ಣ,"ಜಮ್ಮು ಮತ್ತು ಕಾಶ್ಮೀರದ ವಿಷಯವನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುತ್ತೇವೆ" ಎಂಬ ಅದೇ ಅರವತ್ತು ವರ್ಷ ಪುರಾತನವಾದ ಮಾತನ್ನೇ ಹೇಳಿದರು.ಆದರೆ ಪಕ್ಕದಲ್ಲೇ ಇದ್ದ ಹೀನಾ ರಬ್ಬಾನಿ ತನ್ನ ಲಿಪ್‌ಸ್ಟಿಕ್ ತುಟಿಯನ್ನು ತೆರೆಯಲೇ ಇಲ್ಲ.ಆದರೂ ಮಾರನೆಯ ದಿನ ಕೆಲವು ಮಾಧ್ಯಮಗಳು ಇಂಡೋ-ಪಾಕ್ ಸಂಬಂಧದ new era ಎಂದು ಸುದ್ದಿ ಬಿತ್ತರಿಸಿ ಪುಳಕಗೊಂಡವು . ಎರಡು ದಿನದ ಆಕೆಯ ಭೇಟಿಯಿಂದ ಏನೂ ಆಗದೇ ಇದ್ದರೂ ಮಾಧ್ಯಮಗಳು ಮತ್ತು ಕಾಶ್ಮೀರ ಸಂಗತಿಯ ಬಗ್ಗೆ ವಿಚಿತ್ರವಾಗಿ ಹೇಳಿಕೆ ನೀಡುವವರೆಲ್ಲರೂ ರೋಮಾಂಚಿತರಂತೂ ಆದರು.
ಭಾರತದ ಖ್ಯಾತ ಸೂಫಿ ಸಂತರ ದರ್ಗಾಗಳಿಗೆ ಭೇಟಿಕೊಡಲು ಆಕೆಯೇ ಬರಬೇಕಾಗಿರಲಿಲ್ಲ.ಸುಂದರಿಯಾದ ಮಾತ್ರಕ್ಕೆ ಎಡಬಿಡಂಗಿತನವೆಲ್ಲವೂ ಮಕ್ಕಳಾಟವೇನೂ ಆಗಿಹೋಗುವುದಿಲ್ಲವಲ್ಲ. ಇಲ್ಲಿ ಮುಠ್ಠಾಳರಾಗಿರುವವರು ಯಾರು?ಇನ್ನು ಆಕೆ ಬಾಯಿತೆರೆದು ಮಾತಾಡಿದ್ದು ಕ್ರಿಕೇಟ್ ಬಗ್ಗೆ.ಭಾರತ -ಪಾಕ್ ಕ್ರಿಕೆಟ್ ಪಂದ್ಯಾವಳಿ ಎರಡೂ ದೇಶಗಳ ಸಂಬಂಧ ವೃದ್ಧಿಗೆ ಕಾರಣವಾಗಲಿದೆ ಎಂದು ಉಲಿದರು.ಕ್ರಿಕೆಟ್ ಸಂಬಂಧ ವೃದ್ಧಿಸುವುದಾದರೆ ಈಕೆ ಭಾರತಕ್ಕೆ ಊಟಮಾಡಲಿಕ್ಕೆಂದು ಬಂದವಳೇ? ವಿಪರ್ಯಾಸವೆಂದರೆ ಹೀರಾ ಹಿಗೆಲ್ಲಾ ಮಾತಾಡುತ್ತಿದ್ದಾಗ ಪಕ್ಕದಲ್ಲಿದ್ದ ಎಸ್.ಎಂ.ಕೃಷ್ಣ,ಉನ್ನತ ಅಧಿಕಾರಿಗಳು,ಹಿರಿಯ ರಾಜತಾಂತ್ರಿಕ ಅಧಿಕಾರಿಗಳೆಲ್ಲರೂ ಘನ ಗಂಭೀರತೆಯಿಂದ ಆಕೆಯ ಮಾತಿಗೆ ತಲೆದೂಗುತ್ತಿದ್ದರು.
ಯಕಶ್ಚಿತ್ ಒಂದು ಕ್ರಿಕೆಟಿನಿಂದ ಭಾರತ -ಪಾಕ್ ರಾಜತಾಂತ್ರಿಕ ಸಂಬಂಧಗಳು ಸುಧಾರಣೆಯಾಗುವಂತಿದ್ದರೆ ಜಾವೆದ್ ಮಿಯಾಂದಾದ್ ಕೊನೇ ಬಾಲಿಗೆ ಸಿಕ್ಸರ್ ಹೊಡೆದು ಬೀಗಿದಂದೇ ಕಾಶ್ಮೀರ ಸಮಸ್ಯೆ ಮುಗಿದುಹೋಗಿರುತ್ತಿತ್ತು.ಕ್ರಿಕೆಟ್ ಆಟಗಾರರು ಇಂದೂ ಮೈದಾನದಲ್ಲಿ ವ್ಯಗ್ರಮುಖವನ್ನು ಹೊತ್ತುಕೊಂಡೇ ವಿಕೇಟು,ಬಾಲು ಹಿಡಿಯಬೇಕಾಗಿರಲಿಲ್ಲ.ಬೋರ್ಡು ಇಲ್ಲದ ಬಸ್ಸು ಹತ್ತಿ ವಾಜಪೇಯಿ ಲಾಹೋರಿಗೆ ಹೋದರೂ ಸಂಬಂಧ ಕುದುರಲಿಲ್ಲ.ಮುಷರಪ್ಪನಂತಹವರು ಭಾರತಕ್ಕೆ ಬಂದು ತಾಜಮಹಲಿನ ಕಲ್ಲು ಬೆಂಚಿನಲ್ಲಿ ಹೆಂಡತಿಯನ್ನು ಕೂರಿಸಿಕೊಂಡು ಫೋಟೋ ತೆಗೆದರೂ ಕಾಶ್ಮೀರ ಉರಿಯುವುದು ನಿಂತಿಲ್ಲ.ಇನ್ನು ಕ್ರಿಕೆಟು!
ಹೀನಾ ಬೇಟಾ ,ಭಾರತದ ಸಮಸ್ಯೆ ಹೀಗೀಗೆ ಕಣೇ ಅಂಥಾ ಹೇಳುವವರೂ ಪಾಕಿನಲ್ಲಿಲ್ಲ . ಹೇಳಿದರೂ ಅವಳಿಗದು ಅರ್ಥವೂ ಆಗುವುದಿಲ್ಲ.ಇನ್ನು ಭಾರತದ ನಾಯಕರಿಗಂತೂ ಹೀನಾಳಂತವರು ಬಂದು ಕ್ರಿಕೆಟಿನ ಬಗ್ಗೆ ಯೇನು?ಕ್ಯಾಬರೆಯ ಬಗ್ಗೆ ಮಾತಾಡಿದರೂ ತಲೆದೂಗುತಾ ಆಲಿಪರು. ಕೃಷ್ಣ ಕೃಷ್ಣಾ...!
No comments:
Post a Comment