Tuesday, August 9, 2011

ಗೋಡ್ಸೆ ಸಂಘ ದವನಾದರೆ ಬುಖಾರಿಯೂ ಸಂಘದವನೇ



೧೯೩೪ನೇಇಸವಿಯ ಜೂನ್ ತಿಂಗಳ ೨೫ನೇ ತಾರೀಕು.ಅಂದು ಗಾಂಜಿ ಮಹಾರಾಷ್ಟ್ರದ ಪೂನಾದಲ್ಲಿದ್ದರು.ಅದು ಸ್ವಾತಂತ್ರ್ಯದ ಕಾವು ಏರುತ್ತಿದ್ದ ಸಮಯ.ಗಾಂ ಚಳವಳಿ ತೀವ್ರವಾಗಿದ್ದ ಹೊತ್ತು.ಸ್ವದೇಶಿ,ಅಸಹಕಾರಗಳ ಬಿಸಿ ಏರುತ್ತಿದ್ದ ಕಾಲ.ಆಗ ಗಾಂ ಮಾಡುತ್ತಿದ್ದ ಪ್ರಾರ್ಥನೆ,‘ಷಣಗಳೆಲ್ಲವನ್ನೂ ಜನ ಸ್ವಾತಂತ್ರ್ಯ ಚಳವಳಿಯೆಂದೇ ‘ವಿಸುತ್ತಿದ್ದ ರು.ಅಥವಾ ಅದು ಪ್ರಾರ್ಥನೆಗಳಿಗೂ ಒದಗಿಬಂದ ಜರೂರತ್ತು.ಜೊತೆಗೆ ಆ ಹೊತ್ತು ಪಾಕಿಸ್ಥಾನವೆಂಬ ರಾಷ್ಟ್ರದ ಕೂಗುಗಳೂ ಏರುತ್ತಿದ್ದ ಹೊತ್ತು.ಅಂಥ ದಿನದ ಒಂದು ಸಂಜೆಯ ಹೊತ್ತು ಪೂನಾದ ಮುನ್ಸಿಪಾಲಿಟಿ ‘ವನದಲ್ಲಿ ಗಾಂಜಿಯ ಪ್ರಾರ್ಥನೆ ಮತ್ತು ಪ್ರವಚನವಿತ್ತು.ಗಾಂ ಕಾರಿನಲ್ಲಿ ತೆರಳುತ್ತಿದ್ದರು.ಮುಂಬಾಗದಲ್ಲಿ ಸಹಾಯಕರು.ಹಿಂಬದಿಯಲ್ಲಿ ಗಾಂ ಕೂತಿದ್ದರು. ಕಾರು ಇನ್ನೇನು ‘ವನಕ್ಕೆ ಮುಟ್ಟಬೇಕು ಎನ್ನುವಷ್ಟರಲ್ಲಿ ಸಮೀಪವೇ ಭೀಕರ ಸ್ಪೋಟವಾಯಿತು.ಕಾರಿಗೆ ಯಾರೋ ಬಾಂಬು ಎಸೆದಿದ್ದರು.ಸುದೈವದಿಂದ ಗಾಂಗೆ ಏನೂ ಆಗಲಿಲ್ಲ.ಇಬ್ಬರು ಕಾನಸ್ಟೇಬಲ್‌ಗಳು ತೀವ್ರವಾಗಿ ಗಾಯಗೊಂಡರು.ಜನರಿಗೆ ಆಘಾತವಾಯಿತು.ಗಾಂ ಕೂಡ ಹೆದರಿದರು.ಅನಂತರ ತಮ್ಮ ಎಂದಿನ ಸ್ಥಿತಪ್ರಜ್ಞ್ನತೆಯಿಂದ ಪ್ರವಚನಕ್ಕೆ ಅಣಿಯಾದರು.ಅನಂತರ ಪೊಲೀಸರು ಬಾಂಬು ಎಸೆದವನನ್ನು ಬಂಸಿದರು.ಆತ ಪಾಕಿಸ್ಥಾನ ನಿರ್ಮಾಣವನ್ನು ವಿರೋಸುತ್ತಿದ್ದ ಓರ್ವ ಯುವಕ.ಆರೆಸ್ಸೆಸ್ಸಿಗಾಗಲಿ,ಹಿಂದೂ ಮಹಾಸ‘ಕ್ಕಾಗಲೀ ಸಂಬಂ‘ಪಡದ ವನೆಂದು ತನಿಖೆಯ ಅನಂತರ ತಿಳಿದುಬಂತು.ಆದರೆ ಕಾಂಗ್ರೇಸಿಗರು ಏಕ್‘ಂ ಅದನ್ನು ಆರೆಸ್ಸೆಸ್ಸ್ ಮತ್ತು ಹಿಂದೂ ಮಹಾಸ‘ಗಳ ಕೃತ್ಯ ಎಂದು ಬಣ್ಣಿಸಿದವು.
೧೯೪೪ರ ಇಸವಿಯ ಅಂಥದ್ದೇ ಒಂದು ಸಂಜೆ.ಅಂದೂ ಗಾಂಜಿಯ ಪ್ರಾರ್ಥನೆಯೋ,ಸ‘ಯೋ,ಮೌನವೋ ಏನೋ ಒಂದು ಆಯೋಜನೆಯಾಗಿತ್ತು.ಆ ಸ್ಥಳದಲ್ಲಿ ತಲವಾರು ಇಟ್ಟುಕೊಂಡಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಸಿದರು.ಅನಂತರ ಆತ ಏನಾದ ,ಆತನಾರು ಎಂದು ಯಾರಿಗೂ ತಿಳಿಯಲಿಲ್ಲ.ಆದರೆ ಆದರೆ ಕಾಂಗ್ರೇಸ್ ಮಾತ್ರ ಅದನ್ನು ಹಿಂದೂ ಮಹಾಸ‘ ಮತ್ತು ಆರೆಸ್ಸೆಸ್ಸ್ ಗಳ ಕೃತ್ಯ ಎಂದು ಆರೋಪಿಸಿತು.
೧೯೪೬.ಒಮ್ಮೆ ಗಾಂಜಿ ವಿಶೇಷ ರೈಲಿನಲ್ಲಿ ಮುಂಬೈಯಿಂದ ಪೂನಾಕ್ಕೆ ತೆರಳುತ್ತಿದ್ದರು.ನೆರಲ್ ಮತ್ತು ಕರ್ಜಾಲ್ ಎಂಬ ಸ್ಟೇಷನ್‌ಗಳ ಮ‘ ರೈಲಿಗೆ ಕಲ್ಲುಗಳು ಬೀಳಲಾರಂಭಿಸಿತು.ಹಲವು ಜನರು ಗಾಯಗೊಂಡರು.ಅದು ದೇಶ ತುಂಡಾಗಿಯೇ ಆಗುವುದು ಎಂದು ಗ್ಯಾರಂಟಿಯಾಗಿದ್ದ ಹೊತ್ತು.ಅದಕ್ಕೆ ಜನ ಗಾಂಯೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.ಪೊಲೀಸರು ಈ ಘಟನೆಯನ್ನು ಕೂಡ ‘ಗಾಂ ಹತ್ಯೆಗೆ ಯತ್ನ ’ಎಂದು ವೊಕದ್ದಮೆ ದಾಖಲಿಸಿದ್ದರೇ ಹೊರತು ಅದಕ್ಕೆ ಆರೆಸ್ಸೆಸ್ಸ್ ಮತ್ತು ಹಿಂದೂ ಮಹಾಸ‘ಗಳು ಕಾರಣರು ಎಂದು ಹೇಳಿರಲಿಲ್ಲ. ಆದರೆ ಎಂದಿನಂತೆ ಕಾಂಗ್ರೆಸಿಗೆ ಕಂಡದ್ದು ಪನಃ ಅದೇ ಆರೆಸ್ಸೆಸ್ಸ್ ಮತ್ತು ಹಿಂದೂ ಮಹಾಸ‘ಗಳೇ.ವಿಚಿತ್ರವೆಂದರೆ ಘಟನೆ ನಡೆದ ಮರುದಿನ ಪಟೇಲರಂಥ ಉಕ್ಕಿನ ಮನುಷ್ಯನೇ ಆರೆಸ್ಸೆಸ್ಸ್‌ನತ್ತ
ಬೊಟ್ಟುಮಾಡಿಬಿಟ್ಟಿದ್ದರು.ಕಿಡಿಕಾರಿದ್ದರು.ದೊಡ್ಡವರಿಗೂ ಇರುತ್ತವಲ್ಲಾ ಸಣ್ಣ ಬುದ್ಧಿಗಳು!
೧೯೪೮.ಪುನಃ ಒಂದು ಸೂರ್ಯ ಮುಳುಗುವ ಹೊತ್ತು.ಜನವರಿ ತಿಂಗಳ ೨೦.ವಾ‘ದಲ್ಲಿ ವೊಕ್ಕಾಂ ಹೂಡಿದ್ದ ಗಾಂಜಿಯ ಪ್ರಾರ್ಥನಾಸ‘ ಆಯೋಜನೆಯಾಗಿತ್ತು.ಸ‘ಯ ಮೇಲೆ ಬಾಂಬ್ ಬಿತ್ತು.ಪುಣ್ಯಕ್ಕೆ ಯಾರಿಗೂ ಏನೂ ಆಗಲಿಲ್ಲ.ಆಗಲೂ ಕಾಂಗ್ರೆಸಿನದ್ದು ಅದೇ ಆಲಾಪ.ಅದೇ ಪ್ರಲಾಪ.ಅದೇ ಸಿಡುಕು.ಅದೇ ದಬ್ಬಾಳಿಕೆ.
ನಂತರ ಕೆಲವೇ ದಿನಗಳಲ್ಲಿ ನಡೆದ ಇನ್ನೊಂದು ಘಟನೆಯಲ್ಲಿ ಮಾತ್ರ ಗಾಂ ಉಳಿಯಲಿಲ್ಲ.ಗೋಡ್ಸೆ ಮತ್ತು ಸಹಚರರ ಬಂ‘ನವಾಯಿತು.ಎಲ್ಲವೂ ಸ್ಪಷ್ಟವಾಗಿತ್ತು ಆದರೂ ಕಾಂಗ್ರೆಸ್ ಆರೋಪಿಸಿದ್ದು ಆರೆಸ್ಸೆಸ್ಸನ್ನು,ಹಿಂದೂ ಮಹಾಸ‘ವನ್ನು.ಹೀಗೇಕೆ ಪದೇ ಪದೇ ಗಾಂಗೆ ಸಂಕಟಬಂದಾಗಲೆಲ್ಲಾ ಅದು ಆರೋಪಿಸುತ್ತಾ ಬಂದಿದ್ದು ಆರೆಸ್ಸೆಸ್ಸನ್ನೆ .ಗಾಂ ಸಾಯದಿದ್ದಾಗಲೂ ಸತ್ತಾಗಲೂ ಕಾಂಗ್ರೆಸಿಗರ ಕಣ್ಣು ಸದಾ ಆರೆಸ್ಸಸ್ಸ್ ನ ಮೇಲೆಯೇ.ವಾಸ್ತವವೆಂದರೆ ಗಾಂ ಹತ್ಯೆಯ ಪ್ರಮುಖ ಆರೋಪಿ ನಾಥೂರಾಮ್ ಗೋಡ್ಸೆ ಗೂ ಅದಕ್ಕೂ ಮುನ್ನದ ಹತ್ಯೆ ಯತ್ನಗಳಿಗೂ ಸಂ‘ಂ‘ವಿರಲಿಲ್ಲ. ಮತ್ತು ಈ ಎಲ್ಲಾ ಘಟನೆಗಳಿಗೂ ಆರೆಸ್ಸೆಸ್ಸಿಗೂ ಹಿಂದೂ ಮಹಾಸ‘ಕ್ಕೂ ಸಂಬಂ‘ವಿರಲಿಲ್ಲ.ಇನ್ನೂ ಒಂದು ವಿಶೇಷವೆಂದರೆ ಆರೆಸ್ಸೆಸ್ ಗೂ ಹಿಂದೂ ಮಹಾಸ‘ಕ್ಕೂ ತಾತ್ವಿಕ ಭಿನ್ನಾಭಿಪ್ರಾಯಗಳಿದ್ದವು.ಗಾಂಯನ್ನೂ ದೇಶ ವಿ‘ಜನೆಯನ್ನೂ ತೀವ್ರವಾಗಿ ವಿರೋಸುತ್ತಿದ್ದ ಈ ಎರಡೂ ಸಂಘಟನೆಗಳು ಕೊನೆಗೆ ದೇಶ ವಿ‘ಜನೆ ಆಗಿಯೇ ತೀರುವುದು ಎಂದರಿವಾದಾಗ ಅದನ್ನು ಎದುರಿಸುವ ಸಿದ್ಧತೆಗಳಲ್ಲಿ ತೊಡಗಿದವು.ಹೊರತು ವಿ‘ಜಿಸಿದವನನ್ನೇ ಕೊಲ್ಲಬೇಕು ಎಂಬ ರೌಡಿ ಮಾನಸಿಕತೆಯನ್ನು ಹೊಂದಿರಲಿಲ್ಲ.ಆದರೆ ಅಂಥಾ ಮಾನಸಿಕತೆ ಅಂದು ಹಲವು ಯುವಕರಲ್ಲಿತ್ತು ಎಂಬ ಸಂಗತಿಗಳು ಅಂದಿನ ಇತಿಹಾಸದ ಉಲ್ಲೇಖಗಳಿಂದ ಸಿಗುತ್ತವೆ.ಗೋಡ್ಸೆ ಅಂಥ ಒಬ್ಬ ಯುವಕ.‘ರತದ ಸ್ವಾತಂತ್ರ್ಯದ ಕಾವು ದಿನೇ ದಿನೇ ಏರುತ್ತಿದ್ದಾಗ ಜೊತೆಗೇ ಕಾಂಗ್ರೆಸಿನ ಅವಸರ ಹೆಚ್ಚಾಗುತ್ತತ್ತು.ದೇಶ ತುಂಡಾದರೂ ಸರಿ ‘ರತವನ್ನು ‘ರತೀಯರೇ ಆಳಬೇಕು ಎಂಬ ಕಾಂಗ್ರೇಸಿನ ನೀತಿಗಳು ,ಮತೀಯತೆಯ ಆ‘ರದಲ್ಲಿ ಜನರನ್ನು ಹಂಚಬೇಕು ಎಂಬ ನಿಲುವುಗಳು,ಹಿಂದೂಗಳಿಗೆ ಆಗುತ್ತಿರುವ ಅನ್ಯಾಯಗಳು,ಆ ಅನ್ಯಾಯಗಳನ್ನು ಪರಿಗಣಿಸದೇ ನಡೆಯುತ್ತಿದ್ದ ಗಾಂಜಿಯ ಅಸಹಕಾರಗಳು,ಕ್ರಾಂತಿಕಾರಿಗಳನ್ನು ದಮನಿಸಿಯೇ ಸಿದ್ಧ ಎಂಬ ಅವರ ‘ರಣೆಗಳು ಅಂದು ಹಲವು ರಾಷ್ಟ್ರೀಯವಾದಿಗಳಲ್ಲಿ ಅಸಮಾ‘ನದ ಹೊಗೆಯನ್ನು ಎಬ್ಬಿಸಿದ್ದವು.ಹಿಂದೂ ಮಹಾಸ‘ದ ಸಾವರ್ಕರರಂತೂ ಈ ಅನ್ಯಾಯವನ್ನು ತೀವ್ರವಾಗಿ ಪ್ರತಿ‘ಟಿಸುತ್ತಿದ್ದರು.ಬೆರಳೆಣಕೆಯಷ್ಟು ಮಂದಿ ಮಾತ್ರ ಅಹಿಂಸೆಯನ್ನು ನಂಬಿಕೊಂಡು ಕೂತಿದ್ದರೇ ಹೊರತು ಪ್ರಬಲ ರಾಷ್ಟ್ರವಾದದ ‘ನಿ ಅಂದಿನ ಬಹುಸಂಖ್ಯಾತ ಜನರಲ್ಲಿತ್ತು.ಅವರಲ್ಲಿ ಕೆಲವರು ಉಗ್ರ ಸ್ವರೂಪದವರೂ ಇದ್ದರು. ಅಂಥವರಿಗೆ ಮಾರ್ಗದರ್ಶಕರಿರಲಿಲ್ಲ.ನಾಯಕನೆಂಬುವವನಿರಲಿಲ್ಲ. ನಾಯಕತ್ವದ ಹುಡುಕಾಟಕ್ಕೆ ಅಂಥ ಯುವಕರು ಪ್ರಯತ್ನ ಪಟ್ಟರೂ ಇವರ ಉಗ್ರಸ್ವರೂಪವನ್ನು ಯಾರೂ ಒಪ್ಪಲಿಲ್ಲ.ಗೋಡ್ಸೆ ಅಂಥವರಲ್ಲಿ ಒಬ್ಬ.ಕ್ರಾಂತಿಯ ಹುಮ್ಮಸ್ಸು,ಶೋ‘ ಗುಣವನ್ನು ಮೈಗೂಡಿಸಿಕೊಂಡಿದ್ದ ಪತ್ರಕರ್ತ.ಇತಿಹಾಸದ ಹೊರೆಯನ್ನು ವರ್ತಮಾನದಲ್ಲಿ ಇಳಿಸಲು ಪರಿತಪಿಸುತ್ತದ್ದ ವ್ಯಕ್ತಿ.ಆತ ತನ್ನ ಇಂಗಿತವನ್ನರಸಿಕೊಂಡು ಹಿಂದೂ ಮಹಾಸ‘ದ ಬಾಗಿಲು ಬಡಿದ.ತನ್ನ ವೇಗಕ್ಕೆ ಇದು ಪ್ರಸಸ್ತವಾದ ಜಾಗವಲ್ಲ ಎಂದು ಅರಿತು ಹೊರಬಂದ.ನಂತರ ಆರೆಸ್ಸಸ್‌ನತ್ತ ಮುಖಮಾಡಿದ.ಸಂಘದ ಶಾಖೆ ,ಬೈಠಕ್ಕು,ವ್ಯಕ್ತಿನಿರ್ಮಾಣಗಳೂ ಈತನಿಗೆ ಹಿಡಿಸಲಿಲ್ಲ.ಅಲ್ಲಿಂದಲೂ ಹೊರಬಂದು ಆರೆಸ್ಸೆಸ್ಸನ್ನೇ ಪ್ರಯೋಜನಕ್ಕೆ ಬಾರದವರು ಎಂದು ಜರೆದು ತನ್ನದೇ ದಾರಿ ಹಿಡಿದ.ಅನಂತರದ್ದು ಇತಿಹಾಸ.
ಇಷ್ಟಕ್ಕೆ ಆರೋಪ ಮಾತ್ರ ಆರೆಸ್ಸೆಸ್ ಮೇಲೆ ಅಂಟಿಕೊಂಡಿತು.ಸಾವರ್ಕರರನ್ನೂ ಗುರೂಜಿಯವರನ್ನೂ ಬಂಸಲಾಯಿತು.ಕೋರ್ಟು ಕೂಡ ಆರೆಸ್ಸೆಸ್ಸ್ ಮತ್ತು ಮಹಾಸ‘ಗಳ ಮೇಲಿನ ಆರೋಪಗಳಲ್ಲಿ ಹುರುಳಿಲ್ಲ ಂದು ತೀರ್ಪಿತ್ತು ಬಿಡುಗಡೆಯನ್ನೂ ಮಾಡಿತು.ಆದರೆ ಕಾಂಗ್ರೆಸಿಗೆ ಮಾತ್ರ ಅದನ್ನು ಆರೆಸ್ಸಸ್ ಅನ್ನು ಜರೆಯಲು ,ಹಿಂದುತ್ವವನ್ನು ಮುರಿಯಲು ಇಂದಿಗೂ ಬಳಸುತ್ತಾ ಬರುತ್ತಿದೆ.ಕಾಂಗ್ರೆಸಿಗೆ ಇಂಥ ಒಂದು ಆರೋಪವನ್ನು ಸದಾ ಹಸಿರಾಗಿಡಬೇಕಾದ ಅನಿವಾರ್ಯತೆಯಿದೆ.ಏಕೆಂದರೆ ಇದರಿಂದ ಹಲವು ಹಕ್ಕಿಗಳನ್ನು ಒಂದೇ ಗೋಲಿಯಿಂದ ಹೊಡೆದುರುಳಿಸಬಹುದು.ಆರೆಸ್ಸೆಸ್ಸನ್ನು ದ್ವೇಷಿಸುವ ಅಲ್ಪಸಂಖಯಾತರನ್ನೂ ಓಲೈಸಿಕೊಳ್ಳಬಹುದು,ಹಿಂದೂಗಳ ಒಂದು ವರ್ಗವನ್ನೂ ದಾರಿ ತಪ್ಪಿಸಬಹುದು ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಂತಿ‘ತನೆಂದು ಹೆಸರುವಾಸಿಯಾದ ಗಂಯನ್ನು ಹಿಂದೂ ಬ್ರಾಂಡಿನವರು ಕೊಂದರು ಎಂದು ಪ್ರತಿಪಾದಿಸಬಹುದು. ಹಾಗಾಗಿ ಕೋರ್ಟುಗಳು ಏನೇ ಹೇಳಿರಲಿ ಕಾಂಗ್ರೆಸ್ ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.ಅದು ಕಾಂಗ್ರೆಸಿನ ಪಾಲಿಗೆ ಗೊಬ್ಬರವಿದ್ದಂತೆ .ಗಾಂ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ವರ್ತಿಸಿದ ರೀತಿಯೇ ಇದನ್ನು ದೀರ್ಘ ಕಾಲದವರೆಗೆ ಸದಾ ಹಸಿರಾಗಿಡುವ ಯತ್ನವೆಂಬುದನ್ನು ತೋರಿಸುತ್ತಿದ್ದವು.ಗಾಂ ಹತ್ಯೆಯಾದ ನಂತರ ಅದೇ ದೊಡ್ಡ ಮನುಷ್ಯ ಪಟೇಲ ಶ್ಯಾಮಪ್ರಸಾದ ಮುಖರ್ಜಿಯವರಿಗೆ ಪತ್ರ ಬರೆದು ನೇರವಾಗಿ ಆರೆಸ್ಸೆಸ್ಸನ್ನೇ ಆರೋಪಿದ್ದರು. ಮತ್ತು ಗಾಂ ಸತ್ತ ಸ್ಧು ಕೇಳಿ ಆರೆಸ್ಸೆಸ್ಸಿನ ಸ್ವಯಂಸೇವಕರು ದೇಶಾದ್ಯಂತ ಶಾಖೆಗಳಲ್ಲಿ ಸಿಹಿ ಹಂಚಿ ಆಚರಿಸಿಕೊಂಡಿತು ಎಂದು ಪತ್ರದಲ್ಲಿ ಜರೆದರು.ಇಂದೂ ೧೯೪೮ರ ಸ್ವಯಂಸೇವಕರು ಬದುಕಿದ್ದಾರೆ.ಆದರೆ ಸಿಹಿ ತಿಂದ ಘಟನೆಯನ್ನು ಯಾವ ಸ್ವಯಂಸೇವಕನೂ ಕೇಳಿಲ್ಲ.ಎಂಥಾ ಪಟೇಲರು? ಯಾವ ಪಟೇಲರು ಆರೆಸ್ಸೆಸ್ಸನ್ನು ಫ್ಯಾಸಿಸ್ಟ್ ಎಂದರೋ,ಕೊಲೆಗಡುಕರೆಂದರೋ ಅದೇ ಪಟೇಲರನ್ನು ಹೀರೋನಂತೆ ಬಿಂಬಿಸಲ್ಪಡು ತ್ತಿರುವುದು,ಸೋಮನಾಥನ ನೆಪದಲ್ಲಿ ಅವರ ನೆನಪು ಮಾಡಿಕೊಳ್ಳುತ್ತಿರುವುದು ಆರೆಸ್ಸೆಸ್ಸೇ ಎನ್ನುವುದು ಸತ್ಯಕ್ಕೆ ಸಲ್ಲುವ ಜಯ.
ಅಲ್ಲಿಂದೀಚೆಗೆ ಸುಳ್ಳಿನ ಹಲವು ಸರಮಾಲೆಗಳನ್ನೇ ಪೋಣಿಸಲಾಗಿದೆ.ನೆಹರೂನಿಂದ ತೊಡಗಿ ಇಂದಿನ ಶುದ್ಧ ಅವಿವೇಕಿಗಳ ದಂಡನಾಯಕನಂತಿರುವ ಪುಂಡ ಕಾಂಗ್ರೆಸಿಗನೂ ಸಂಘವನ್ನು ಗಾಂ ಕೊಂದವರು ಎಂದು ಆರೋಪಿಸುತ್ತಾರೆ.ತಮಾಶೆ ಎಂದರೆ ಇಂಥವರಿಗೆ ಗಾಂಯೂ ಗೊತ್ತಿಲ್ಲ,ಆರೆಸ್ಸೆಸ್ಸೂ ಗೊತ್ತಿಲ್ಲ.
ಕೊಲೆಯನ್ನು ಸಂಘದ ಮೆಲೆ ಹೊರಿಸುವುದು ಕಾಂಗ್ರೆಸಿನ ಅನಿವಾರ್ಯತೆಯಿರಬಹುದು.ಆದರೆ ಸತ್ಯದ ಸಮಾಯಾದರೂ ಸರಿ ದ್ವೇಷವೇ ಮೇಲುಗೈಯಾಗಬೇಕೆಂದು ಗಾಂಯ ಹೆಸರಲ್ಲಿ ಹವಣಿಸುವುದು ಸರಿಯೇ?ಒಂದಾನೊಂದು ಕಾಲದಲ್ಲಿ ಶಾಖೆಗೆ ಬಂದವರೆಲ್ಲರೂ ಸಂಘದ ನಿಷ್ಠಾವಂತ ಕಾರ್ಯರೆಂಬುದನ್ನು ಕಾಂಗ್ರೆಸಿನಂಥವರು ಮಾತ್ರ ಹೇಳಬಹುದೇನೋ.ಏಕೆಂದರೆ ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಕೋಳಿ ಕದ್ದವರೂ ,ತೋಟದಿಂದ ಎಳೆನೀರು ಕದ್ದು ಸ್ಟೇಷನ್‌ಗೆ ಹೋದವರೂ ಇಂದು ಖಾದಿ ‘ರಿಸಿ ಕೆಲವರು ಪೆನ್‌ಷನ್ ಪಡೆಯುತ್ತಿದ್ದಾರೆ.ಆರೆಸ್ಸೆಸ್ಸನ್ನೂ ಕೂಡಾ ಕಾಂಗ್ರೆಸ್ ಹಾಗೆಯೇ ‘ವಿಸಿಬಿಟ್ಟಿದೆಯೋ ಏನೋ.ಹಾಗೆ ನೋಡಿದರೆ ಸಂಘದವರು ತುಂಬಾ ಸಿಗುತ್ತಾರೆ .೧೯೭೭ರಲ್ಲಿ ತುರ್ತುಪರಿಸ್ಥಿತಿ ತೆರವಾದ ನಂತರ ,ಸಂಘದ ಶಾಖೆಗೆ ದೆಹಲಿಯ ಶಾಹಿ ಇಮಾಮ್ ಬುಖಾರಿಯೂ ಬಂದು ‘ಗವಾ‘ಜಕ್ಕೆ ಪ್ರಣಾಮ್ ಸಲ್ಲಿಸಿದ್ದ(ಅಂದಿನ ಇಲ್ಲಿಸ್ಟ್ರೇಟೆಡ್ ಕ್ಲಿಯಲ್ಲಿ ಚಿತ್ರಸಮೇತ ಪ್ರಕಟವಾಗಿದೆ).ಆತನೂ ಸಂಘದವನೇ?ಸಂಘದ ಕಾರ್ಯಾಲಯಗಳಿಗೆ ಪುಸ್ತಕ ಖರೀದಿಸಲು ಹೋಗುವವರೂ ಸಂಘದವರೇ?ಸಂಘದ ಪತ್ರಿಕೆಗಳಲ್ಲಿ ಕೆಲಸ ಮಾಡುವ ಪತ್ರಕರ್ತರೂ ಸಂಘದವರೇ?ಸಂಘದವರ ನೆಂಟರೂ ಸಂಘದವರೇ?ಸಂಘದ ಪಥಸಂಚಲನ ಹೋಗುವ ಬೀದಿಗಳವರೂ ಸಂಘದವರೇ?‘ರತ್ ಮಾತಾ ಕಿ ಜೈ ಎನ್ನುವವರೆಲ್ಲರೂ ಸಂಘದವರೇ? ಹೀಗನ್ನುವವರನ್ನು ಮನುಷ್ಯರೆನ್ನುವಂತಿಲ್ಲ.ಕಾಂಗ್ರೆಸ್ ಎನ್ನಬಹುದು,ಅಥವಾ ಕಮ್ಯನಿಷ್ಟ್ ಎನ್ನಬಹುದು.ಗಾಂ ಸತ್ತು ಆರು ದಶಕಗಳು ಕಳೆದವು.ತನಿಖೆ ನಡೆಸಿದ ಜಸ್ಟೀಸ್ ಆತ್ಮ ಚರಣ ಗೆ ಕಾಣದ ಆರೆಸ್ಸೆಸ್ ,ಜಸ್ಟೀಸ್ ಕೋಸ್ಲೆಗೆ ಕಾಣದ ಆರೆಸ್ಸೆಸ್,ಜಸ್ಟೀಸ್ ಜೆ.ಎಲ್.ಕಪೂರರಿಗೆ ಕಾಣದ ಆರೆಸ್ಸೆಸ್ ಕಾಂಗ್ರೆಸಿಗೆ ಕಾಣುವುದು ಹೇಗೆ?ಕಾರ್ಯಾಂಗದ ಹಿರಿಯರಾದ ,ಸ್ವತಃ ಕ್ರಿಶ್ಚಿಯನ್ನರೂ ಆದ ಕೆ.ಟಿ.ಥಾಮಸ್ ರಿಗೆ ಗಾಂ ಹತ್ಯೆಯಲ್ಲಿ ಕಾಣದ ಆರೆಸ್ಸೆಸ್,ಗಾಂ ಕುಟುಂಬಕ್ಕೂ ಕಾಣದ ಆರೆಸ್ಸೆಸ್ ಕಾಂಗ್ರೆಸ್ ಪುಡಾರಿಗಳಿಗೆ ಕಾಣುತ್ತದೆ.ಇದು ಹೇಗೆ?ಏನಾದರೂ ವಿಶೇಷ ದೃಷ್ಟಿಯೋ? ಸ್ವತಃ ಗೋಡ್ಸೆಯೇ ತಾನು ಆರೆಸ್ಸಸ್ ಅಲ್ಲ ಹಿಂದೂ ಮಹಾಸ‘ವೂ ಅಲ್ಲ ಎಂದು ಹೇಳಿರುವಾಗಲೂ ಈ ಕಾಂಗ್ರೆಸಿಗರಿಗೇನು ಅವು ಅರ್ಥವಾಗಲಿಲ್ಲವೇ?
ಸಂಘ ದೇಶದಲ್ಲಿ ಹರಡಿರುವ ವ್ಯಾಪ್ತಿಗಳು ವಿಶಾಲವಾದವುಗಳು .ಅಂದೂ ಕೂಡಾ ಹಾಗೇ ಹರಡಿತ್ತು.ಒಂದು ವೇಳೆ ಅದು ಕಡಿ ಬಡಿ ಸಂಸ್ಕೃತಿಯನ್ನು ಬೆಳೆಸಿಕೊಂಡಿದ್ದಿದ್ದರೆ ಅದಕ್ಕೆ ಡಾಕ್ಟರುಗಳು ,ಇಂಜಿನಿಯರರು,ವಿಜ್ಞಾನಿಗಳು ವೊದಲಾದವರು ಪೂರ್ಣಾವ ಕಾರ್ಯಕರ್ತರಾಗಿ ಬರುತ್ತಲೇ ಇರಲಿಲ್ಲ. ಕೊಲ್ಲುವ ಪ್ರಣಾಳಿಕೆ ಅದಕ್ಕೆ ಇದ್ದಿದ್ದರೆ ದೇಶ ವಿ‘ಜನೆಯೇ ಆಗುತ್ತಿರಲಿಲ್ಲ.ಇಂದಿಗೂ ಕಾಂಗ್ರೆಸಿಗರ,ಕಮ್ಯುನಿಷ್ಟರ ಹೆಣ ಬೀಳುತ್ತಲೇ ಇರುತ್ತಿತ್ತು.

No comments: