
ದೆಹಲಿ ದರ್ಬಾರಿನ ವಿಶೇಷತೆಯೆಂದರೆ ಅದು. ಏಕೆಂದರೆ ದೆಹಲಿಯ ಗಾದಿಯಲ್ಲಿ ಕೂತವರಿಗೆಲ್ಲರಿಗೂ ಕೆಲವು ವಿಷಯದಲ್ಲಿ ಸಾಮ್ಯತೆ ಕಂಡುಬರುತ್ತದೆ. ನಮ್ಮ ಕಣ್ಣಳತೆಗೆ ನಿಲುಕುವ ಇತಿಹಾಸವನ್ನೇ ನೋಡಿದರೂ ಅದರಲ್ಲಿ ಅತಿಶಯೋಕ್ತಿಗಳಿಲ್ಲ. ಅದಕ್ಕೇ ಏನೋ ತುಘಲಕನಂಥ ಹುಚ್ಚು ದೊರೆ ದೇವಗಿರಿಗೆ ಬಂದರೂ ಮತ್ತೆ ಹಳೇ ದಿಲ್ಲಿಯೇ ಆತನಿಗೆ ಕಾಡುತ್ತಿತ್ತು. ಔರಂಗಜೇಬನ ಅಪ್ಪ ಮಗನನ್ನು ಬಿಜಾಪುರ-ಗೋಲ್ಕೊಂಡಾಕ್ಕೆ ಕಳುಹಿಸಿದಾಗಲೂ ಮಗ ದಿಲ್ಲಿಗಾಗೇ ಹವಣಿಸಿದ್ದ. ಸೋದರಹತ್ಯೆಯನ್ನೂ ಮಾಡಿದ್ದ. ಮತ್ತೆ ಅಕ್ಬರ, ಕೊನೆಯ ಮೊಗಲ, ಮುದುಕ ಬಹಾದೂರ್ ಶಾ ಜಾಫರ ಎಲ್ಲರೂ ದಿಲ್ಲಿಗಾಗಿ ಹಾತೊರೆದವರೇ. ದಿಲ್ಲಿಯನ್ನು ಬಿಟ್ಟುಕೊಡದವರೇ. ಮಲ್ಲಿಕಾಫರನಿಂದ ಹಿಡಿದು ಅಂಟೋನಿಯೇ ಮೈನೋ ಸೋನಿಯಾವರೆಗೆ ದಿಲ್ಲಿಯ ಕಥೆ ರೋಚಕವಾಗಿ, ಭೀಕರವಾಗಿ, ಭೀಭತ್ಸವಾಗಿ ಮುಂದುವರಿಯುತ್ತದೆ. ದಿಲ್ಲಿಯ ಪಾಡು ಪರಿಪಾಟಲುಗಳನ್ನು ಬಿಟ್ಟು ಭಾರತವನ್ನು ವಿಮರ್ಶಿಸುವಂತೆಯೇ ಇಲ್ಲವೆನ್ನುವಷ್ಟರ ಮಟ್ಟಿಗೆ ರಾಜಧಾನಿ ಭಾರತದ ಪಾಲಿಗೆ ಅವಿನಾಭಾವಿ.
ಇಲ್ಲಿದಿದ್ದರೇನು? ಹಳೆ ದಿಲ್ಲಿಯಲ್ಲಿ ಕೂತೇ ಸಮಸ್ತ ಹಿಂದುಸ್ಥಾನವನ್ನು ಗುಲಾಮಿಗಳು, ತುಘಲಕರು, ಲೋಧಿಗಳು, ಮೊಗಲರು ಆಳಿದ್ದರು. ಉತ್ತರದ ಆ ತುದಿಯಲ್ಲಿ ಕೂತು ದಕ್ಷಿಣದ ತುತ್ತತುದಿಯಿಂದ ಜಜಿಯಾ ಸಂಗ್ರಹಿಸುತ್ತಾ,ಜನಾನಾವನ್ನು ತುಂಬಿಸಿಕೊಳ್ಳುತ್ತಾ ದೇಶವನ್ನು ಕಪಿಮುಷ್ಟಿಯಲ್ಲಿಟ್ಟುಕೊಂಡ ಮುಸಲ್ಮಾನ ದೊರೆಗಳು ತಮ್ಮ ಕ್ರೌರ್ಯದಿಂದಲೂ ಹುಚ್ಚುತನದಿಂದಲೂ ಭಯೋತ್ಪಾದನೆಯಿಂದಲೂ ಮಣ್ಣಿನ ಮಕ್ಕಳಾದ ಹಿಂದುಗಳನ್ನು ಅಕ್ಷರಶಃ ಕಾಡಿದರು. ಹೆದರಿಸಿದರು. ಅನಂತರ ಪಾಶ್ಚಾತ್ಯರು ಬಂದರು. ಅದರಲ್ಲೂ ಸಾವಿರಾರು ಮೈಲು ದೂರದ ಇಂಗ್ಲಿಷರು ಪುನಃ ಅದೇ ಹಳೆಯ ಮುಸ್ಲಿಂ ಪರಂಪರೆಯನ್ನು ಮುಂದುವರೆಸಿದರು. ಒಡೆದು ಆಳಿದರು. ಒಬ್ಬರಿಗೆ ಬೆಣ್ಣೆ ಕೊಟ್ಟರು. ಮತ್ತೊಬ್ಬರಿಗೆ ಸುಣ್ಣ ಕೊಟ್ಟರು. ಬೆಣ್ಣೆಯ ರುಚಿ ಆಗಲೇ ಮುಸಲ್ಮಾನರಿಗೆ ಹತ್ತಿತು. ಎಲ್ಲವೂ ಅವರ ಆಕಾಂಕ್ಷೆಗಳಿಗೆ ಅನುಗುಣವಾಗಿಯೇ ನಡೆದವು. ಎರಡೆರಡು ಹೊಸ ದೇಶಗಳು, ಕೋಟಿಕೋಟಿ ರೂಪಾಯಿಗಳು ಎಲ್ಲಾ ಸಿಕ್ಕವು. ಎಲ್ಲವನ್ನೂ ಹಿಂದೂವಿನ ಕೈಯಿಂದ ಕಿತ್ತೇ ಕೊಡಲಾಯಿತು. ಮದ್ಯಕಾಲದ ಮುಸಲ್ಮಾನ ಅರಸರು ತಮ್ಮವರಿಗೆ ಒದಗಿಸಿದ್ದನ್ನೆಲ್ಲಾ ಬ್ರಿಟಿಷರೂ ಒದಗಿಸಿದರು. ಕೊನೆಗೆ ಸ್ವಾತಂತ್ರ್ಯ ಬರುವ ಹೊತ್ತಿಗೆ ಹಿಂದು ಮಾತ್ರ ಪಂಜಾಬವೆಲ್ಲಿ? ಬಂಗಾಳವೆಲ್ಲಿ ? ಸಿಂಧ್ ಎಲ್ಲಿ ಎನ್ನುತ್ತಾ ಗೋಳಾಡುತ್ತಿದ್ದ.
ಅನಂತರ ದಿಲ್ಲಿಯ ಗಾದಿಗೆ ಕಾಂಗ್ರೆಸ್ ಬಂತು. ಅದು ಮಾಡಿದ್ದೂ ಅದೇ ಕೆಲಸ. ಮೊಗಲರಂತೆ, ಬ್ರಿಟಿಷರಂತೆ. ಅಂದು ಜಜಿಯಾ ಇದ್ದಂತೆ ಇಂದು ಹಿಂದೂ ದೇವರ ಹುಂಡಿಗೆ ಕೈಹಾಕಿ ಮುಸಲ್ಮಾನರ ತೀರ್ಥಯಾತ್ರೆ ಆಯೋಜಿಸಿತು. ನೆಹರೂನಂಥ ಪ್ರಧಾನಿಯೇ ಬಂದು ಕೂತರು. ಸೈನ್ಯದಲ್ಲಿ ಮುಸ್ಲಿಂ ಪ್ರಾತಿನಿಧ್ಯ ಹೆಚ್ಚಬೇಕೆಂದು ೧೯೫೩ರಲ್ಲಿ ನೆಹರೂ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸುತ್ತೋಲೆಯನ್ನೂ ಕಳುಹಿಸಿದ್ದರು. ಇದು ವೈಸರಾಯ್ ಆಳ್ವಿಕೆಗಿಂತ ಹೇಗೆ ಭಿನ್ನ? ಹೇಗೆ ಮಾಂಟೆಗ್ಯೂ-ಚೆಲ್ಮ್ಸ್ಸಫರ್ಡ್ ಅಲ್ಪಸಂಖ್ಯಾತರನ್ನು ಎತ್ತಿಹಿಡಿದು ಹಿಂದುವನ್ನು ತುಳಿದನೋ ಹಾಗೆಯೇ ಸಾಚಾರ್ ವರದಿಗಳು ಬಂದವು. ಅನಂತರ ಫೀರ್‌ಪುರ ವರದಿ, ಶರೀಫ್ ವರದಿ, ಕಮಟ್‌ಯಾರ್ ಜಂಗ್ ವರದಿ,ಫಜಲ್ ಹಕ್ ವರದಿಗಳು ಬಂದವು. ಎಲ್ಲಾ ಮುಸಲ್ಮಾನರನ್ನು ತೊಟ್ಟಿಲಲ್ಲಿ ಮಲಗಿಸಿ ತೂಗುವ ವರದಿಗಳೇ. ಲಾಲನೆ, ಪಾಲನೆಯ ಸವಿಮಾತುಗಳೇ. ಹೇಗೆ ೧೮೭೧ರಲ್ಲಿ ಹಂಟರನೆಂಬ ಬ್ರಿಟಿಷ “ಮುಸಲ್ಮಾನರ ಹಿಂದುಳಿದಿರುವಿಕೆಗೆ ಹಿಂದುಗಳೇ ಕಾರಣ"ಎಂದು ವರದಿ ಬರೆದನೋ ಹಾಗೆಯೇ ರಾಜೇಂದ್ರ ಸಾಚಾರ್ ಎಂಬ ಭಾರತೀಯ ಕೂಡ “ಭಾರತದಲ್ಲಿ ಶರಿಯತ್ ಜಾರಿಯಾಗಲಿ" ಎಂದು ವರದಿ ಬರೆದು ಒಪ್ಪಿಗೆಗಾಗಿ ಕಾಯುತ್ತಾರೆ. ರಂಗನಾಥ ಮಿಶ್ರಾ ಎಂಬವರೂ ಮುಸ್ಲಿಂ ಮೀಸಲಿಗೆ ಒಪ್ಪಿಗೆ ಕಾಯುತ್ತಾರೆ. ಇದು ಹಿಂದೂಗಳ ಅವಸ್ಥೆ. ಹಾಗಾದರೆ ಮಧ್ಯಯುಗಕ್ಕೂ ಜಾಗತೀಕರಣದ ಈ ಕಾಲಕ್ಕೂ ಹಿಂದುಗಳ ದಮನ ತಂತ್ರಗಳಲ್ಲಿ ವ್ಯತ್ಯಾಸವಾಗಿದೆಯೇ? ದಿಲ್ಲಿಯವರದ್ದು ಯಾವಾಗಲೂ ವಕ್ರದೃಷ್ಟಿಯೇ?
ಹೀಗೆ ಯೋಚಿಸುತ್ತಿರುವಾಗಲೇ ಅದೇ ದಿಲ್ಲಿಯಿಂದ ಮತ್ತೊಂದು ತಂತ್ರ ಸಿದ್ಧವಾಗುತ್ತಿದೆ. ಮತ್ತದೇ ಹಿಂದುಗಳನ್ನು ಮಣಿಸಲು ತಂತ್ರ. ಇದುವರೆಗೆ ಹಿಂಬಾಗಿಲು. ಇದೀಗ ಮುಂಬಾಗಿಲಲ್ಲೇ ಆಕ್ರಮಣ. ಅದು Pಜಿqಛ್ಞಿಠಿಜಿಟ್ಞ ಟ್ಛ ಟಞಞ್ಠ್ಞZ Zb ಠಿZಜಛಿಠಿಛಿb qಜಿಟ್ಝಛ್ಞ್ಚಿಛಿ (ಅಛಿoo ಠಿಟ oಠಿಜ್ಚಿಛಿ Zb ಛಿmZZಠಿಜಿಟ್ಞ)ಚಿಜ್ಝ್ಝಿ೨೦೧೧. ಅಂದರೆ ಕೋಮುಗಲಭೆ ನಿಯಂತ್ರಣ ಕಾಯ್ದೆ.ಹೆಸರೇನೋ ಚೆನ್ನಾಗಿದೆ. ಆದರೆ ರ್‍ಯಾಪರ್‌ನೊಳಗೆ ಚಾಕಲೇಟಿಲ್ಲ. ಚಾಕಲೇಟ್ ರ್‍ಯಾಪರಿನೊಳಗೆ ಸಯನೈಡ್ ಸುತ್ತಿ ಕೊಟ್ಟಂಥ ಕಾಯ್ದೆ ಈ ಕೋಮುಗಲಭೆ ನಿಷೇಧ ಕಾಯ್ದೆ. ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಇದು ಮಂಡನೆಯಾಗಲಿದೆ. ಯುಪಿಎ ಈ ಕಾಯ್ದೆಯ ಮೂಲಕ ಚಳಿ ಕಾಯಿಸಿಕೊಳ್ಳುತ್ತದೆ. ಬ್ರಿಟಿಷ್ ಕಾಲದ ಪುನರಾವರ್ತನೆ, ನೆನಕೆ ಮಾಡುವ ಈ ಕಾನೂನು ಮೊಗಲ್ ಆಳ್ವಿಕೆಗಿಂತ ಭಿನ್ನವಾಗಿಲ್ಲ ಎಂಬುದು ಕಾಯ್ದೆಯ ವಿಶೇಷತೆ. ಬರೋಬ್ಬರಿ ೯ ಅಧ್ಯಾಯಗಳು, ೧೩೮ ವಿಧಿಗಳು ಎಲ್ಲವೂ ಹಿಂದೂವಿನತ್ತಲೇ ಬೊಟ್ಟು ಮಾಡುತ್ತದೆ. ಹಿಂದುವೊಬ್ಬ ಮುಸಲ್ಮಾನೊಡನೆ ತಗ್ಗಿ ಬಗ್ಗಿ ನಡೆಯಬೇಕು. ಬಗ್ಗಬೇಕು. ಗುದ್ದಿದರೆ ಗುದ್ದಿಸಿಕೊಳ್ಳಬೇಕು. ಸಾಧ್ಯವಾದರೆ ತೆವಳಬೇಕು. ಹೊರಳಾಡಬೇಕು ಎಂಬ ಚಿಂತನೆಯ ಈ ಕಾಯ್ದೆ ಜಾರಿಗೆ ಬಂದದ್ದೇ ಆದಲ್ಲಿ ಇನ್ನು ಹಿಂದೂ ದಮನದ ಪ್ರಶ್ನೆಯೇ ಉದ್ಭವಿಸದು. ಏಕೆಂದರೆ ಕಾಯ್ದೆ ಹಿಂದುವನ್ನು ನಿರ್ವೀರ್‍ಯವನ್ನಾಗಿ ಮಾಡಿಬಿಟ್ಟಿರುತ್ತದೆ. ಕೋಮುಗಲಭೆಗೆ ಹಿಂದುವೇ ಮೂಲ ಕಾರಣ ಎಂಬ ತಳಹದಿಯಲ್ಲಿ ರಚನೆಯಾಗಿರುವ ಈ ಕಾನೂನು ಅದರ ಮುನ್ಸೂಚನೆಯನ್ನು ಹೀಗೆ ಮಾಡುತ್ತದೆ.
ಹಿಂದು ತನ್ನ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸುವಂತಿಲ್ಲ. ಅಖಂಡ ಭಾರತ ಎನ್ನುವಂತಿಲ್ಲ. ಎಂದರೆ ಅದು ಕೋಮುಸಾಮರಸ್ಯಕ್ಕೆ ದಾರಿ ಎಂದು ಕಾನೂನು ಹೇಳುತ್ತದೆ. ಗೋಹತ್ಯೆ ನಿಷೇಧದ ಸಭೆ ನಡೆಯುವುದಿಲ್ಲ್ಲ. ನಡೆದರೆ ಅದು ಮುಸಲ್ಮಾನರ ಆಹಾರದ ಹಕ್ಕನ್ನು ಕಿತ್ತುಕೊಂಡಂತೆ ಎಂಬ ಆರೋಪ. ಅಯೋಧ್ಯೆ ವಿಷಯದಲ್ಲಿ ಮಾತಾಡುವಂತಿಲ್ಲ. ಆಡಿದರೆ ದೇಶದ ಸಾರ್ವಭೌಮತೆಗೂ ಮುಸಲ್ಮಾನರ ಧಾರ್ಮಿಕ ನಂಬಿಕೆಗೂ ಅವಹೇಳನ ಮಾಡಿದಂತೆ ಎನ್ನುವ ಕಾನೂನು ಹಿಂದುವಿಗೆ ಶಿಕ್ಷೆ ವಿಧಿಸುತ್ತದೆ. ಅಲ್ಲದೆ ಜಾಮೀನುರಹಿತ ವಾರಂಟು ಹೊರಡಿಸುತ್ತದೆ. ನೀವು ಬಸ್ಸಲ್ಲಿ ಪ್ರಯಾಣಿಸುತ್ತಿದ್ದೀರಿ ಎಂದಿಟ್ಟುಕೊಳ್ಳಿ. ಜಂಗುಳಿಯ ನಡುವೆ ಒಬ್ಬನ ಕಾಲನ್ನು ತುಳಿಯುತ್ತೀರಿ ಎಂದಿಟ್ಟುಕೊಳ್ಳಿ. ಆತ ಮೊಕದ್ದಮೆ ದಾಖಲಿಸಿದರೆ ನೀವು ಅಪರಾಧಿಗಳಾಗುತ್ತೀರಿ. ಆದರೆ ನೀವು ಹಿಂದುವಾಗಿರಬೇಕು. ಆತ ಮುಸಲ್ಮಾನನಾಗಿರಬೇಕು. ನಿಮ್ಮ ಮನೆಯ ಗೋವು ಕಳವಾಯಿತು. ಕಳ್ಳನನ್ನು ಹಿಡಿದಿರುತ್ತೀರಿ. ಗದರಿಸಿಯೂ ಇರುತ್ತೀರಿ ಎಂದಿಟ್ಟುಕೊಳ್ಳಿ, ನಿಮಗೆ ಜಾಮೀನುರಹಿತ ವಾರಂಟು ಬೀಳಲು ಅಷ್ಟೇ ಸಾಕು. ಮನೆ ಮಗಳನ್ನು ಪೋಲಿ ಮುಸಲ್ಮಾನನೊಬ್ಬ ಚುಡಾಯಿಸಿರುತ್ತಾನೆ. ಆದರೆ ಏನೂ ಮಾಡುವಂತಿಲ್ಲ. ಏಕೆಂದರೆ ಕೇಂದ್ರ ಸರಕಾರದ ಕಾಯ್ದೆಯ ಬಲ ಆತನಿಗಿದೆ. ಊರ ದೇವಸ್ಥಾನದ ಬ್ರಹ್ಮಕಲಶವೋ ಮರವಣಿಗೆಯೋ ಜಾತ್ರೆಯೋ ರಥೋತ್ಸವವೋ ಭಂಡಾರ ಹೊರಡುವುದೋ ಆದರೆ ಅದು ಮುಸಲ್ಮಾನ ವಸತಿ ಪ್ರದೇಶದಲ್ಲಿ, ಮಸೀದಿ, ಮದರಸಗಳ ಪ್ರದೇಶದಲ್ಲಿ ಹೊರಡುವುದನ್ನೂ ಮುಸಲ್ಮಾನರು ಇನ್ನು ಕೇಸು ದಾಖಲಿಸಿ ಶಾಂತಿ ಭಂಗ ಎನ್ನಬಹುದು. ಏಕೆಂದರೆ ಕಾಯ್ದೆಯ ಬಲ. ಹೆದ್ದಾರಿಯಲ್ಲಿ ಗೋ ಕಳ್ಳಸಾಗಾಣಿಕೆಯಾಗುತ್ತಿದ್ದರೆ ತಡೆಯುವಂತಿಲ್ಲ. ಏಕೆಂದರೆ ಗೋಹತ್ಯಾ ನಿಷೇಧ ಕಾನೂನಿಲ್ಲ. ಗೋಪ್ರೇಮಿಗಳು ತಡೆದರೂ ಹೆಚ್ಚು ವಿಚಾರಿಸುವಂತಿಲ್ಲ. ಕಳ್ಳರೂ ಕೇಸು ದಾಖಲಸಿ ವ್ಯಾಪಾರಕ್ಕೆ ಅಡ್ಡಿ ಎಂದು ಮೊಕದ್ದಮೆ ಹೂಡಬಹುದು. ದುಷ್ಟ ಮನಸಿನ ವ್ಯಕ್ತಿಗಳು ವಿನಾಕಾರಣ ಕೆಣಕಿ ಆತನೇ ಕೇಸು ಹೂಡಬಹುದು. ಏಕೆಂದರೆ ಕಾಯಿದೆ ಆತನ ಪರ. ಒಟ್ಟಾರೆ ಹಿಂದುಗಳು ಮುಸಲ್ಮಾನರ ಮುಂದೆ ಮೈಬಗ್ಗಿಸಿ,ತಲೆತಗ್ಗಿಸಿ ನಡೆಯಬೇಕು. ಹಾಗೇ ಬದುಕಬೇಕು. ಮಾತಿನ ಧ್ವನಿ ಮೆದುವಾಗಿರಬೇಕು.
ಎಲ್ಲವೂ ಅಂದುಕೊಂಡಂತೆ ನಡೆದರೆ ಇವೆಲ್ಲಾ ಮುಂಬರುವ ಚಳಿಗಾಲದ ಅಧಿವೇಶನದ ನಂತರ ಜಾರಿಗೆ ಬರಲಿದೆ. ಎಂಥಾ ತಂತ್ರ ಹೆಣೆದಿದೆ ನೋಡಿ ಯುಪಿಎ!
ಏಳೆಂಟು ವರ್ಷಗಳ ಹಿಂದಿನ ಮಾತು. ಎನ್‌ಡಿಎ ಅಧಿಕಾರ ಕಳೆದುಕೊಂಡಿತ್ತು. ಯುಪಿಎ ಬಂದಿತ್ತು. ಅದುವರೆಗೆ ಅಬ್ಬರಿಸುತ್ತಿದ್ದವರೆಲ್ಲಾ ದಿಲ್ಲಿಯಲ್ಲಿ ಕೂತಿದ್ದರು. ಹಿಂದು ಎಂದರೆ ಅಕಟಕಟಾ ಎನ್ನುವವರು ಬಂದಾಗಲೇ ಜನ ಸೋನಿಯಾ ಗಾಂಧಿ ಹಿಂದು ಸಂಘಟನೆಗಳನ್ನು ಹಣಿಯದಿರಲಾರರು ಎಂದು ಆಡಿಕೊಂಡಿದ್ದರು. ಮುಖ್ಯವಾಗಿ ಸಂಘ ಪರಿವಾರದ ನಿಷೇಧಕ್ಕೆ ತಕ್ಕ ಗಳಿಗೆ, ತಕ್ಕ ಸಂದರ್ಭ ಕಾಯುತ್ತಿದ್ದಾರೆ ಎಂದು ಎಲ್ಲೆಡೆ ಮಾತು ಕೇಳಿಬರುತ್ತಿತ್ತು. ಆದರೆ ವರ್ಷಗಳು ಉರುಳುತ್ತಿದ್ದಂತೆ ನಿಷೇಧದ ಮಾತು ಸೋನಿಯಾಳಿಂದ ಬರಲೇ ಇಲ್ಲ. ಯಾವ ಕಾಂಗ್ರೆಸಿಗನ, ಕಮ್ಯೂನಿಸ್ಟನ, ಮುಸ್ಲಿಮನ, ಬುದ್ಧಿಜೀವಿಯ ಬಾಯಿಂದ ಕೂಡ ಆ ಮಾತು ಬರಲೇ ಇಲ್ಲ. ದಿಗ್ವಿಜಯ ಸಿಂಗನಂಥವನೂ ಕೂಡ ಕೇಸರಿ ಭಯೋತ್ಪಾದನೆ, ಹಿಂದೂ ಉಗ್ರವಾದ ಎಂದು ಬಾಯಿ ಬಡಕೊಂಡನೇ ಹೊರತು ಸಂಘ ಪರಿವಾರ ನಿಷೇಧವಾಗಬೇಕೆಂದು ಹೇಳಿಕೆ ನೀಡಿರಲಿಲ್ಲ. ದುಷ್ಟಕೂಟಗಳು ಒಗ್ಗೂಡಿದರೂ ಅದೊಂದು ಮಾತು ಯಾಕೆ ಕೇಳಿಬರಲಿಲ್ಲ ಎಂದು ಆಶ್ಚರ್ಯಪಟ್ಟವರು ತುಂಬಾ ಜನರಿದ್ದರು.ಹಾಗೆ ತಾನೇ ಹೇಳಿಯಾನು? ಕೊಲೆ ಮಾಡಿ ಪಾಪಿ ಎನಿಸಿಕೊಳ್ಳುವುದಕ್ಕಿಂತ ಸಂತಾನಹರಣ ಮಾಡಿಬಿಡುವುದೇ ಉತ್ತಮ ಎಂಬ ತಂತ್ರ ಹೊಳೆದಿರುವಾಗ ನಿಷೇಧದ ಮಾತು ಬರಲಾದರೂ ಹೇಗೆ ಸಾಧ್ಯ? ಏಕೆಂದರೆ ಕಾಯ್ದೆಯ ಎಲ್ಲಾ ಅಂಶಗಳು ಹಿಂದೂ ಸಂಘಟನೆಗಳನ್ನು ಹಣಿಯಲೆಂದೇ ಸೃಷ್ಟಿಯಾಗಿವೆ. ಅದರ ಎಲ್ಲಾ ಹಗ್ಗಗಳು ಹಿಂದೂ ಸಂಘಟನೆಯ ಕುತ್ತಿಗೆಗೆ ಸರಿಯಾಗಿಯೇ ನಿರ್ಮಾಣಗೊಂಡಿವೆ. ಏಕೆಂದರೆ ಸಂಘ ಪರಿವಾರದ ಜಾಗರಣ ಕಾರ್ಯಗಳೆಲ್ಲವೂ ತಳಮಟ್ಟದಲ್ಲಿ ಹಿಂದುವನ್ನು ಎಚ್ಚರಿಸುವ ಕೆಲಸ ಮಾಡುತ್ತವೆ ಎಂಬುದನ್ನು ಸರಕಾರ ತಿಳಿದುಕೊಂಡಿದೆ. ಅದಕ್ಕಾಗಿ ತಳಮಟ್ಟದಲ್ಲೇ ಹಿಂದುವನ್ನು ಕೆಡವಲು ತಂತ್ರ ಹೂಡಿದ್ದಾರೆ. ಈ ಕಾಯ್ದೆಯೇನಾದರೂ ಬಂದರೆ ಇನ್ನು ಮುಂದೆ ಸಂಘ ಪರಿವಾರ ಮಾಡುವ ಬೌದ್ಧಿಕ್‌ಗಳ ಮೇಲೂ ಕಾಯ್ದೆ ಕಣ್ಣಿಡಲಿದೆ. ‘ಹಿಂದೂ ರಾಷ್ಟ್ರ’, ‘ಅಖಂಡ ಭಾರತ’ ಎಂದೇನಾದರೂ ಬೌದ್ಧಿಕ್ ಮಾಡಿದರೋ ಬೌದ್ಧಿಕ್ ಮಾಡಿದಾತನ ಮೇಲೆ ವಾತಾವರಣವನ್ನು ಕಲುಷಿತಗೊಳಿಸುವ ಆಪಾದನೆಯ ಮೇಲೆ ಬಂಧಿಸಲಾಗುತ್ತದೆ. ಯುಗಾದಿ, ವಿಜಯದಶಮಿ , ಸಂಕ್ರಾಂತಿ ಹಬ್ಬಗಳನ್ನು ಆಚರಿಸುವ ಸಂಘ ಪರಿವಾರದಲ್ಲಿ ‘ರಾಷ್ಟ್ರಕ್ಕಾಗಿ ಸಂಕಲ್ಪಗೈಯೋಣ’ ಎಂದೇನಾದರೂ ಹೇಳಿದರೆ, ಮುಸಲ್ಮಾನನೊಬ್ಬ ಕೇಸು ದಾಖಲಿಸಿದರೆ, ಕಾಯ್ದೆ ಆ “ಸಂಕಲ್ಪವೇನು?" ಎಂದು ವಿವರಣೆ ಕೇಳಲಿದೆ. ಸಮಾಜೋತ್ಸವಗಳಂತೂ ಕನಸಿನ ಮಾತಾಗಲಿವೆ. ಸಂಘ, ನಡೆಸುವ ಪಥಸಂಚಲನ ಕೋಮುಭಾವನೆ ಬಿತ್ತುವ, ಸಮಾಜವನ್ನು ಕೆರಳಿಸುವ ಸಂಗತಿಗಳಾಗಲಿವೆ. ವಿಚಿತ್ರ ಎಂದರೆ ಅಲ್ಪಸಂಖ್ಯಾತರೆಂಬ ಮುಸಲ್ಮಾನರಿಗೆ ಇದು ಅನ್ವಯಿಸುವುದಿಲ್ಲ. ಅಲ್ಪಸಂಖ್ಯಾತರೇ ಬಹುಸಂಖ್ಯಾತರಾಗಿರುವ ಊರುಗಳಲ್ಲೂ ಇದು ಮುಸಲ್ಮಾನರಿಗೆ ಅನ್ವಯಿಸುವುದಿಲ್ಲ. ಹಿಂದುಗಳಾದವರು ಇನ್ನು ‘ಭಯೋತ್ಪಾದನೆ ಊರೂರಲ್ಲೂ ಬೆಳೆಯುತ್ತಿದೆ’ ಎಂದು ಬರೆಯಬಾರದು. ‘ಜಿಹಾದ್ ಮಾನಸಿಕತೆ’ ಎಂದು ತಪ್ಪಿಯೂ ಬಳಸಲಾರರು. ‘ಮಕ್ಕಳನ್ನು ಅಡವಿಟ್ಟವನು ಅರಸನೆ?’ ಎಂದು ಕೇಳಬಾರದು, ‘ಲವ್ ಜಿಹಾದ್’ ಎನ್ನಲೇಬಾರದು ಇನ್ನೇನಿದ್ದರೂ ‘ಲವ್’ ಮಾತ್ರ. ಹಿಂದೂ ಹುಡುಗಿ ಗರ್ಭಧರಿಸಿ, ಕೆರೆಗೆ ಬಿದ್ದು ಸಾಯಲಿ ಅದು ಮತಾಂಧ ಮಾನಸಿಕತೆ ಎನ್ನಲಂತೂ ಬಾರದು. ಕಾಶೀ ವಿಶ್ವನಾಥ, ದತ್ತಪೀಠಗಳೆಲ್ಲಾ ಇನ್ನು ಶೋಕಿಯ ಸೆಕ್ಯುಲರಿಸಮ್ಮಿಗೆ ಸಂಕೇತಗಳು. ಡೊಗ್ಗು ಸಲಾಮು, ಹಲ್ಲುಗಿಂಜಿ ಅಣ್ಣಾ ತಮ್ಮ ಸಂಬೋಧನೆಗಳ ನೆಂಟಸ್ತನ, ಸ್ವಾಭಿಮಾನದ ಕ್ಷಯ, ಭಂಡತನದ ಬದುಕಿನ ಆರಂಭ. ಒಂದು ವೇಳೆ ಹಿಂದೂ ಎನ್ನುವುದರ ವ್ಯಾಖ್ಯಾನ ಮಾಡಲಾರಂಭಿಸಬೇಕು ಎಂದರೆ ಜೈಲಿಗೆ ಹೋಗಲು ಸಿದ್ಧವಾಗಿರಬೇಕು. ಇಷ್ಟೆಲ್ಲಾ ತಂತ್ರ ಹೆಣೆದಿರುವಾಗ ಯಾರಾದರೂ ನಿಷೇಧದ ಮಾತು ಆಡುತ್ತಾರೆಯೇ?
ಅಷ್ಟಕ್ಕೂ ದೇಶದ ಎಲ್ಲಾ ಗಲಭೆಗಳಿಗೆ ಹಿಂದುವೇ ಕಾರಣ ಎಂಬುದೇನಾದರೂ ಇದ್ದಿದ್ದರೆ ಈ ಕಾಯ್ದೆಗೊಂದು ಅರ್ಥ ವಿರುತ್ತಿತ್ತು. ಇಷ್ಟರವರೆಗೂ ಹಿಂದುವಿನಿಂದ ಒಂದೇ ಒಂದು ಕೋಮುಗಲಭೆ ಉಂಟಾದ ಉದಾಹರಣೆ ದೇಶದ ಚರಿತ್ರೆಯಲ್ಲೇ ಇಲ್ಲ. ಹಿಂದು ಗೋಹತ್ಯೆ ಬೇಡ ಎಂದಾಗ, ಮತಾಂತರ ನಡೆಸದಿರಿ ಎಂದಾಗ ಕೆಣಕಿದವರು ಯಾರು? ಹಿಂದು ದೇವರ ಉತ್ಸವಕ್ಕೆ, ಸಮಾಜೋತ್ಸವಗಳಿಗೆ ಕಲ್ಲು ಹೊಡೆದವರು ಯಾರು? ಕರ್ನಾಟಕದ ಉದಾಹರಣೆಯನ್ನೇ ತೆಗೆದುಕೊಂಡರೆ ಅಲ್ಲಿ ಕಾಣುವುದೇನು? ಜನಾನುರಾಗಿ ಭಟ್ಕಳದ ಡಾ. ಚಿತ್ತರಂಜನ್‌ರನ್ನು ವಿನಾಕಾರಣ ಕೊಂದು ಗಲಭೆ ಎಬ್ಬಿಸಿದ್ದು, ೧೯೮೩ರಲ್ಲಿ ಬೆಳ್ತಂಗಡಿಯಲ್ಲಿ ಆನಂದ ಮತ್ತು ನೋಣಯ್ಯ ಎಂಬ ಇಬ್ಬರನ್ನು ಮತಾಂತರಿಸಿದಾಗ ಪ್ರಶ್ನೆ ಮಾಡಿದ ಹಿಂದುಗಳಿಗೆ ಹೊಡೆದು ಗಲಭೆ ಎಬ್ಬಿಸಿದ್ದು, ೨೦೦೯-೧೦ರಲ್ಲಿ ಕ್ಯಾತಮಾರನಹಳ್ಳಿಯ ಹಿಂದು ಮನೆಗಳಿಗೆ ಕಾರಣವಿಲ್ಲದೇ ನುಗ್ಗಿ ಹೊಡೆದಿದ್ದು, ೨೦೦೨ರಲ್ಲಿ ಕೊಡಗಿನ ಹರಿಶ್ಚಂದ್ರ ದೇವಾಲಯವನ್ನು ಒಡೆದು ಗಲಭೆ ಎಬ್ಬಿಸಿದ್ದು, ೨೦೦೮ರಲ್ಲಿ ಗೋಕಳ್ಳರು ಹಿಂದೂ ಹುಡುಗರನ್ನು ಹೊಡೆದು ಮೂರು ವಾಹನಗಳನ್ನು ಜಖಂಗೊಳಿಸುತ್ತಾ ಸಾಗಿದ್ದು, ೧೯೯೫ರಲ್ಲಿ ದ.ಕನ್ನಡದ ಖ್ಯಾತ ದೇಗುಲ ಪೊಳಲಿಗೆ ‘ಪಟ್ಟೆಸೀರೆ’ ಮೆರವಣಿಗೆ ಸಂದರ್ಭ ದಾಳಿ ಮಾಡಿದ್ದು, ಕಲ್ಲಡ್ಕದಲ್ಲಿ ವಿನಾಕಾರಣ ಹಿಂದೂ ಹಬ್ಬಗಳ ಮೇಲೆ ನಿರಂತರ ದಾಳಿಯಾಗಿದ್ದು, ಡೆನ್ಮಾರ್ಕ್ ಪತ್ರಿಕೆಯಲ್ಲಿ ಬಂದ ಒಂದು ಚಿತ್ರಕ್ಕೆ ಕರ್ನಾಟಕದಲ್ಲಿ ಬೆಂಕಿ ಎದ್ದಿದ್ದು, ಸದ್ದಾಂನ ಸಾವಿಗೆ ಬಿ.ಎಂ. ಟಿ.ಸಿ. ಬಸ್ಸುಗಳು ಬೆಂಕಿಗಾಹುತಿಯಾಗಿದ್ದು, ೨೦೧೦ರಲ್ಲಿ ಶಿವಮೊಗ್ಗದ ಸಂಘ ಕಾರ್ಯಾಲಯಕ್ಕೆ ದಾಳಿ ಮಾಡಿ ಗಲಭೆ ಎಬ್ಬಿಸಿದ್ದು - ಇವರೆಲ್ಲಾ ಯಾರು? ಇದನ್ನೆಲ್ಲಾ ಕೇವಲ ಕೋಮು ಗಲಭೆ ಎನ್ನಬೇಕೋ ಅಥವಾ ಭಯೋತ್ಪಾದನಾ ಕೃತ್ಯವೆನ್ನಬೇಕೋ? ಇಂಥವರನ್ನು ಬೆಂಬಲಿಸುವ ಕಾನೂನು ತಾಲೀಬಾನಿಕರಣಕ್ಕೆ ಆಸ್ಪದ ಕೊಡುತ್ತಿಲ್ಲವೇ? ಅದನ್ನು ಸರಕಾರೀ ತಾಲೀಬಾನೀಕರಣ ಎಂದೇ ಹೇಳಬೇಕಲ್ಲದೆ ಬೇರೆ ಪದಗಳು ಸಾಲವು. ಪೋಟಾ ಕಾಯ್ದೆ ಕಿತ್ತು ಹಾಕಿದವರು ಈಗ ಜಾರಿಗೊಳಿಸಲು ಹೊರಟಿರುವುದು ಇಂಥ ಕಾಯ್ದೆ. ಇದನ್ನು ಷಂಡತನವೆನ್ನಬೇಕೋ ಭಂಡತನವೆನ್ನಬೇಕೋ ಗೊಂದಲವಾಗುತ್ತದೆ.
ದಿಲ್ಲಿಯರಸರನ್ನು ಏನಾದರೂ ಒಂದು ಹೆಸರಿನಲ್ಲಿ ಕರೆಯಬೇಕಲ್ಲ?
No comments:
Post a Comment