ದ್ವಿತೀಯ ವಿಶ್ವಯುದ್ಧ ಆಗಷ್ಟೇ ಮುಗಿದಿತ್ತು. ಮಿತ್ರಕೂಟದ ಪಡೆ ಶತ್ರುಕೂಟವನ್ನು ಮಣಿಸಿದ ಉನ್ಮಾದದಲ್ಲಿತ್ತು.ವಿಶ್ವದ ಭೂಪಟ ಗುರುತು ಹಿಡಿಯಲಾರದಷ್ಟು ಬದಲಾಗಿ ಹೋಗಿತ್ತು. ನಕಾಶೆಯಲ್ಲಿ ಹಲವು ದೇಶಗಳು ಅಳಿಸಿಹೋಗಿದ್ದರೆ, ಇನ್ನು ಕೆಲವು ಉದ್ಭವವಾಗಿದ್ದವು. ಒಂದು ಕಾಲದಲ್ಲಿ ಯಾವ ಜಪಾನ್ ಬೃಹತ್ ದೇಶಗಳನ್ನುಅಂಕೆಯಲ್ಲಿ ಇಟ್ಟುಕೊಂಡಿತ್ತೋ ಅಂಥಾ ಜಪಾನ್ ಸಮಸ್ತ ಯುದ್ಧಕ್ಕೆ ಷರಾ ಎಳೆದಂತೆ ಉರಿದುಹೋಗಿತ್ತು. ಜಪಾನ್‌ನ ದ್ವೀಪಗಳು ಬೂದಿಗಳ ಉಂಡೆಗಳಾಗಿ ಹೋಗಿತ್ತು. ಅಣುಬಾಂಬಿನ ಸ್ಪೋಟಕ್ಕೆ ಹಿರೋಶಿಮಾ ,ನಾಗಸಾಕಿಗಳು ಸುಟ್ಟು ಜಗತ್ತು ಅದನ್ನುಮರೆಯದಂತೆಮಾಡಿಬಿಟ್ಟಿತ್ತು.
ಅಂಥಾ ಜಪಾನ್‌ನ ರಾಜಧಾನಿ ಟೋಕಿಯೋದಲ್ಲಿ ೧೯೪೬ರ ಮೇ ೭ ರಂದು ಉರಿದುಹೋದ ಸರಕಿನ ಮಳಿಗೆಯೊಂದರ ಮೂರನೇ ಮಹಡಿಯಲ್ಲಿ ಸುಮಾರು ೩೦ ಜನರ ಸಭೆಯೊಂದು ಸೇರಿತ್ತು. ಸಭೆಯ ಉದ್ದೇಶ "ಟೋಕಿಯೋ ಟೆಲಿ ಸಂಪರ್ಕ ಇಂಜಿನಿಯರಿಂಗ್ ನಿಗಮ" ಎಂಬ ಕಂಪೆನಿಯೊಂದರ ಸ್ಥಾಪನೆ. ಕೈಯಲ್ಲಿದ್ದುದು ೫೦೦ ಡಾಲರ್ ಗಳ ಬಂಡವಾಳ. ಹೀಗೆ ಅಂದು ಆರಂಭವಾದ ಈ ಕಂಪೆನಿ ಮುಂದೆ ೧೯೫೭ರಲ್ಲಿ ‘ಸೋನಿ ಕಾರ್ಪೋರೇಶನ್’ಎಂದು ಕರೆಸಿಕೊಂಡಿತು. ಹೀಗೆ ಬೂದಿಯ ವಾಸನೆಯಿಂದ ಆರಂಭಗೊಂಡ ಕಂಪೆನಿಯೊಂದು ಮುಂದೆ ಜಗದಗಲ ವ್ಯಾಪಿಸಿದ ಕಥೆ ರೋಮಾಂಚಕ. ಅದೊಂದು ಕೇವಲ ಕಂಪೆನಿಯ ಬೆಳವಣಿಗೆಯ ಕಥೆಯಲ್ಲ. ಒಂದು ದೇಶದ ಕಥೆ. ತನ್ನನ್ನು ಇಡೀ ವಿಶ್ವಕ್ಕೆ ತೋರಿಸಿಕೊಳ್ಳಬೇಕೆಂಬ ಪುಟ್ಟ ದೇಶದ ಗಾಥೆ. ಏಕೆಂದರೆ ಎರಡನೇ ಮಹಾಯುದ್ಧಕ್ಕೆ ಮೊದಲು ಜಪಾನ್ ಹಠಸ್ವಭಾವದ, ವಿಪರೀತ ಅಹಂಕಾರದ, ಸೇನಾ ನಿಯಂತ್ರಣದಲ್ಲಿ ಇದ್ದ ಪ್ರತ್ಯೇಕತೆಯ ಒಂದು ದೇಶವಾಗಿತ್ತು. ಕೊನೆಗೆ ಅದರ ವಿಪರೀತ ಹಠ ಸ್ವಭಾವವೇ ಅದಕ್ಕೆ ಮುಳುವಾಗಿತ್ತು. ಅಷ್ಟರವರೆಗೆ ಕೇವಲ ಯುದ್ಧ ವಿಮಾನಗಳನ್ನಷ್ಟೇ ತಯಾರು ಮಾಡುತ್ತಿದ್ದ ಜಪಾನ್‌ಗೆ ಯುದ್ಧಾ ನಂತರ ಯುದ್ಧ ವಿಮಾನಗಳಿಂದ ಜಪಾನ್ ಕಟ್ಟುವಂತಿರಲಿಲ್ಲ. ಅಷ್ಟೇ ಅಲ್ಲದೆ ಹೇಳಿಕೊಳ್ಳುವಂತಹ ಯಾವ ಜಪಾನೀ ಸರಕೂ ವಿಶ್ವ ಮಾರುಕಟ್ಟೆಯಲ್ಲಿ ಬಿಕರಿಯಾಗಿರಲಿಲ್ಲ. ಯುದ್ಧಕ್ಕೆ ಮೊದಲು ಜಪಾನ್ ನಿಂದ ರಫ್ತಾಗುತ್ತಿದ್ದ ವಸ್ತುಗಳೆಂದರೆ ಕೊಡೆಗಳು ಮತ್ತು ಆಟಿಕೆಗಳು ಮಾತ್ರವಾಗಿತ್ತು. ಇವುಗಳ ಮೇಲೆ ‘ಮೇಡ್ ಇನ್ ಜಪಾನ್’ಎಂಬ ಅತೀ ಸಣ್ಣ ಬರಹಗಳಿರುತ್ತಿದ್ದವು. ಜಪಾನ್‌ನ ಈ ಪರಿಸ್ಥಿತಿಯನ್ನು ಬದಲಾಯಿಸಲು ೩೦ ಜನರ ಆ ತಂಡ ನಿರ್ಧರಿಸಿತ್ತು. ಬಿದ್ದ ಬಾಂಬ್‌ಗಳೊಟ್ಟಿಗೆ ಜಪಾನಿನ ಹೊಸ ಶಕೆಯೊಂದು ಆರಂಭಗೊಂಡಿತು. ಯುದ್ಧಾನಂತರದಲ್ಲಿ ಜಪಾನ್ ವಿಶ್ವಾಸ, ಗುಣಮಟ್ಟ ಹಾಗೂ ವ್ಯಾಪಾರಿ ನೀತಿಗಳಿಗೆ ಒತ್ತುಕೊಟ್ಟು ವಿಶ್ವದ ಪ್ರಮುಖ ಉದ್ಯಮಶೀಲ ರಾಷ್ಟ್ರವಾಯಿತು. ಎರಡು ಶತಮಾನಗಳ ಕಾಲದ ತನ್ನ ಪ್ರತ್ಯೇಕತೆಯನ್ನು ಕೊನೆಗೊಳಿಸಿ ತಂತ್ರಜ್ಞಾನ, ಕೈಗಾರಿಕೆ, ಮತ್ತು ವಾಣಿಜ್ಯಗಳಲ್ಲಿ ಪ್ರಗತಿ
ಸಾಧಿಸಿತು. ತಮ್ಮ ದೇಶ ವಿಶ್ವವಂದ್ಯವಾಗಬೇಕೆಂದು ಪ್ರತೀ ವ್ಯಕ್ತಿಯೂ , ಪ್ರತೀ ಸಂಸ್ಥೆಯೂ ಯೋಚಿಸಿದ ಫಲವಾಗಿ MADE IN JAPAN ಜಗದಗಲ ಪಸರಿಸತೊಡಗಿತು. ಅಂದು ಉರಿದ ಷೆಡ್‌ನಲ್ಲಿ ಆರಂಭವಾದ ‘ಸೋನಿ ಕಾರ್ಪೋರೇಶನ್’ ಇಂದು ವಿಶ್ವವ್ಯಾಪಿಯಾಗಿ ಬೆಳೆದು ನಿಂತ ಕಥೆಯನ್ನು ಆ ಗುಂಪಿನ ಒಬ್ಬರಾಗಿದ್ದ ,ಅನಂತರ ‘ಸೋನಿ’ ಕಂಪೆನಿಯ ಅಧ್ಯಕ್ಷರಾದ ‘ಅಕಿಯೋ ಮೊರಿಟಾ’ MADE IN JAPAN ಗ್ರಂಥದಲ್ಲಿ ವಿವರಿಸುತ್ತಾರೆ.
ಸೋನಿ ಕಾರ್ಪೋರೇಶನ್ನಿನ ಈ ಕಥೆ ಆಧುನಿಕ ಜಪಾನಿನ ಬೆಳವಣಿಗೆಯ ಕಥೆ. “ಹಿರೋಶಿಮಾ ಮೇಲಾದ ದಾಳಿಯ ಮೊದಲ ಸುದ್ದಿಯನ್ನು ಕೇಳಿದಾಗ ಅಮೆರಿಕ ತಂತ್ರಜ್ಞಾನ ಹಾಗೂ ಕೈಗಾರಿಕಾ ಶಕ್ತಿ ನಾವೆಣಿಸಿದ್ದಕ್ಕಿಂತ ಅಗಾಧವಾಗಿದೆ ಎಂದು ನನಗೆ ಅರಿವಾಯಿತು.” ಎನ್ನುವ ಮೊರಿಟಾ ವಾಸ್ತವದ ಮೂಲಕ ದೇಶ ಕಟ್ಟುವ ದೃಷ್ಟಿಯಿಂದಲೂ ತಾಂತ್ರಿಕನ ದೃಷ್ಟಿಯಿಂದಲೂ ದೇಶವನ್ನು ಗಮನಿಸಿದರು. ಆರಂಭದಲ್ಲಿ ಸೋನಿ ಜಪಾನ್ ರಿಸರ್ಚ್ ಇಂಜಿನಿಯರಿಂಗ್ ನಿಂದ ಆರಂಭಿಸಿ ಪಾಶ್ಚಿಮಾತ್ಯ ಸರಕುಗಳನ್ನೇ ಸುಧಾರಣೆಗೊಳಿಸಿ ತಯಾರಿಸಲಾರಂಭಿಸಿತು. ಹಾಗೇ ಅವರ ಕಣ್ಣಿಗೆ ಬಿದ್ದ ಮೊಟ್ಟ ಮೊದಲ ಅಮೆರಿಕನ್ ಟೇಪ್ ರೆಕಾರ್ಡ್‌ನಂತಹ ಯಂತ್ರವನ್ನು ತಮ್ಮ ಕಂಪೆನಿಯೇ ತಯಾರಿಸಬೇಕೆಂದು ತಂಡ ತೀರ್ಮಾನಿಸಿತು. ಮುಂದೆ ಅದ್ಭುತವೇ ಘಟಿಸಿತು. ಉನ್ನತ ತಂತ್ರಜ್ಞಾನದ ಇಲೆಕ್ಟ್ರಾನಿಕ್ ಗ್ರಾಹಕ ಸಾಮಾಗ್ರಿಗಳನ್ನು ಉತ್ಪಾದಿಸುವ ಗುರಿಯನ್ನು ಸೋನಿ ಇರಿಸಿಕೊಂಡಿತು. ಮೀಡಿಯಂವೇವ್ ರೇಡಿಯೋಗಳಿಗೆ ಅಗತ್ಯವಾದ ಶಾರ್ಟ್ ವೇವ್‌ಗಳನ್ನು ಪೂರೈಸುವ ರಂಗಕ್ಕೆ ಧುಮುಕಿತು. ಕ್ರಮೇಣ ಟೇಪ್ ರೆಕಾರ್ಡರ್ ತಯಾರಿಸಲು ಆರಂಭಿಸಿತು. ೧೯೫೦ರಲ್ಲಿ ಸೋನಿ ತಯಾರಿಸಿದ ಮೊದಲ ಟೇಪ್ ರೆಕಾರ್ಡರ್ ೩೫ ಕೆ.ಜಿ ತೂಗುತ್ತಿದ್ದು ೫೦ ಡಾಲರ್ ಬೆಲೆಬಾಳುತ್ತಿತ್ತು. ೧೯೫೫ರ ವೇಳೆಗದು ಟ್ರಾನ್ಸಿಸ್ಟರ್ ರೇಡಿಯೋ ತಯಾರಿಸಿತು. ಎರಡೇ ವರ್ಷಗಳೊಳಗೆ ಪಾಕೆಟ್ ರೇಡಿಯೋ ಉತ್ಪಾದಿಸಿತು. ಅನಂತರ ಅಡಿಯೋ ರೆಕಾರ್ಡರ್ ಬಂತು. ಹೀಗೆ ಕ್ಲಪ್ತ ಸಮಯದಲ್ಲೇ ಅಂದರೆ ೧೯೭೦ರ ವೇಳೆಗೆ ಸೋನಿ ಜಗತ್ತಿನ ಪ್ರಮುಖ ಕೈಗಾರಿಕೆ ಸಂಸ್ಥೆ ಎಂದು ಗುರುತಿಸಿಕೊಂಡಿತ್ತು. ಅದೇ ಸಮಯದಲ್ಲಿ ಬ್ರಿಟನ್ನಿನ ರಾಜಕುಮಾರ ಚಾರ್ಲ್ಸ್ ಅವರು ಬ್ರಿಟನಿನಲ್ಲಿ ಸೋನಿಯ ಘಟಕವನ್ನು ಸ್ಥಾಪಿಸಲು ಆಹ್ವಾನಿಸಿದರು. ೧೯೮೨ರಲ್ಲಿ ತಂತ್ರಜ್ಞಾನ ಮತ್ತು ಕೈಗಾರಿಕಾ ಸಂಶೋಧನೆಯಲ್ಲಿ ಕೈಗೊಂಡ ಶ್ಲಾಘನೀಯ ಸೇವೆಗೆ ನೀಡಲಾಗುವ ಬ್ರಿಟನ್ನಿನ ‘ರಾಯಲ್ ಸೊಸೈಟಿ ಆಫ್ ಆರ್ಟ್ಸ್‌ನ ಆಲ್ಬರ್ಟ್’ ಪ್ರಶಸ್ತಿ ಅಕಿಯೋ ಮೊರಿಟಾ ಅವರಿಗೆ ಸಿಕ್ಕಿತ್ತು. ೧೯೭೩ರಲ್ಲಿ ಸೋನಿಯ ಸಂಶೋಧಕ ಲಿಯೋ ಎಸಾಕಿ ಅವರಿಗೆ ನೋಬೆಲ್ ಕೂಡ ಅರಸಿ ಬಂತು. ಇಂದು ಸೋನಿ ವಿಶ್ವದ ಅತಿ ದೊಡ್ಡ ಎಲೆಕ್ಟ್ರಾನಿಕ್ ಸರಕುಗಳ ಉದ್ಯಮವಾಗಿ ಬೆಳೆದಿದೆ. ಸೋನಿ ಮುಟ್ಟದ ಎಲೆಕ್ಟ್ರಾನಿಕ್ ಸರಕುಗಳೇ ಬಹುಶಃ ಇಂದು ಇಲ್ಲ ಮತ್ತು ಒಂದಲ್ಲಾ ಒಂದು ವಿಧದಲ್ಲಿ ಸೋನಿಯನ್ನು ಬಳಸದ ವ್ಯಕ್ತಿಯೇ ವಿಶ್ವದಲ್ಲಿ ಇಲ್ಲ. ಕಾಲದ ಬದಲಾವಣೆಗೆ ತಕ್ಕಂತೆ ಸೋನಿ ಸರಕುಗಳನ್ನು ಗ್ರಾಹಕರಿಗೆ ಒದಗಿಸುತ್ತಾ ಬರುತ್ತಿದೆ. “ಶ್ರೀಸಾಮಾನ್ಯರಿಗೆ ತಮಗೆ ಏನು ಸಿಗಲು ಸಾಧ್ಯ ಎನ್ನುವ ಕಲ್ಪನೆ ಅಸಾಧ್ಯ. ಆದರೆ ನಾವು ಅದನ್ನು ಊಹಿಸಬಲ್ಲೆವು. ಜನರಲ್ಲಿ ಹೋಗಿ ನಿಮಗೇನು ಬೇಕು ಎಂದು ಕೇಳುವ ಬದಲು ನಾವು ಹೊಸ ಉತ್ಪನ್ನಗಳೊಂದಿಗೆ ಜನರನ್ನು ಮುಂದೊಯ್ಯಲು ಯೋಜಿಸಿದ್ದೇವೆ.” ಎಂದಿದ್ದ ಅಕಿಯೋ ಮೊರಿಟಾನ ಉದ್ದೇಶದ ಮೂಲಕವೇ ಇಂದೂ ಸೋನಿ ಉತ್ಪಾದನೆಯನ್ನು ಆರಂಭಿಸುತ್ತಿದೆ. ಹಾಗಾಗಿ ಅದು ೧೯೮೮ರ ಹೊತ್ತಿಗೇ ವಾಕ್‌ಮನ್‌ಗಳನ್ನು ಉತ್ಪಾದಿಸುತ್ತದೆ. ಟಿವಿಯನ್ನು ಹೀಗೂ ತಯಾರಿಸಬಹುದೆಂದು ಎಲ್. ಸಿ.ಡಿ ಗಳನ್ನು ಬಿಡುಗಡೆ ಮಾಡುತ್ತದೆ. ವೊಬೈಲ್‌ಗಳನ್ನು ಇಷ್ಟೂ ತೆಳ್ಳಗಾಗಿಸಬಹುದು ಎಂದು ತೋರಿಸುತ್ತದೆ. ಇಂದು ಅತ್ಯಂತ ಸೂಕ್ಷ್ಮ ಎಲೆಕ್ಟ್ರಾನಿಕ್ ಸರಕುಗಳನ್ನೂ ಉನ್ನತ ತಂತ್ರಜ್ಞಾನದ ಮೂಲಕ ತಯಾರಿಸುತ್ತದೆ.
MADE IN JAPAN ನ ವ್ಯಾಪ್ತಿ ದಿನೇ ದಿನೇ ವೃದ್ಧಿಯಾಗುತ್ತಿದೆ. ವಿಶ್ವದ ಪ್ರತಿಷ್ಠಿತ ಬ್ರಾಂಡ್ ಆಗಿ ಸೋನಿ ಜನಪ್ರಿಯತೆ ಗಳಿಸಿದೆ. ಕಂಪೆನಿಯೊಂದು ಈ ಮಟ್ಟಕ್ಕೆ ಮುಟ್ಟುವುದರಲ್ಲೇನೂ ವಿಶೇಷವಿಲ್ಲ. ಆದರೆ ತನ್ನ ಮೂಲಕ ದೇಶದ ಗೌರವ ಹೆಚ್ಚಬೇಕು ಎಂಬ ಛಾತಿ ಸೋನಿಯ ವಿಶೇಷತೆ. ತನ್ನ ಮೂಲಕ MADE IN JAPAN ಘೋಷ ವಿಶ್ವವ್ಯಾಪಿಯಾಗಬೇಕು ಎಂಬ ಹಂಬಲ ದೇಶದ ಬಹುದೊಡ್ಡ ಆಸ್ತಿಯಾಗುತ್ತದೆ ಮತ್ತು ಆ ಹಂಬಲ ತನ್ನ ಮೂಲಕ ಸಮಾಜವನ್ನೂ ಬೆಳೆಸುತ್ತದೆ. ಆ ಹಂಬಲ ರಾಷ್ಟ್ರವನ್ನು ಒಂದು ಶಕ್ತಿಯಾಗಿ ಬೆಳೆಸುತ್ತದೆ. ರಾಷ್ಟ್ರೀಯತೆಯ ಪರಿಕಲ್ಪನೆಯಲ್ಲಿ ದೇಶವೊಂದು ಯಾವ ಹಂತಕ್ಕೆ ಮುಟ್ಟಬಹುದು ಮತ್ತು ಆ ಮೂಲಕ ಕಂಪೆನಿಯೂ ಹೇಗೆ ಪ್ರತಿಷ್ಠಿತನಾಗಬಲ್ಲದು ಎಂಬುದಕ್ಕೆ ಪ್ರಸ್ತುತ ಘಟನೆ ಉದಾಹರಣೆಯಾಗಿ ನಿಲ್ಲುತ್ತದೆ. ಇವಿಷ್ಟನ್ನು ಬಿಟ್ಟರೆ ಸೋನಿಯ ಯಶಸ್ಸಿನ ಹಿಂದೆ ಬೇರೇನೂ ಇಲ್ಲ. ಆರಂಭದಲ್ಲಿ ಪಶ್ಚಿಮದೊಂದಿಗೆ ಕೂಡಿಕೊಳ್ಳಿ ಎಂಬುದು ಅವರ ಘೋಷವಾಕ್ಯವಾಗಿತ್ತು. ಆದರೆ ಸೋನಿ ಬೆಳೆದ ಪರಿ ಎಷ್ಟಿತ್ತೆಂದರೆ ಸ್ವಲ್ಪವೇ ಸಮಯದಲ್ಲಿ ಅದು ಪಶ್ಚಿಮವನ್ನೂ ಹಿಂದಿಕ್ಕಿ ಅಗ್ರಗಣ್ಯವಾಯಿತು. ಸೋನಿಯ ಈ ಸಾಧನೆಯ ಹಿಂದೆ ಯಾವುದೇ ರಹಸ್ಯ ಸೂತ್ರಗಳಿರಲಿಲ್ಲ. ಸ್ವಾರ್ಥದ ಲವಲೇಶವೂ ಇರಲಿಲ್ಲ. ಮತ್ತು ಸರಕಾರಿ ನೀತಿಯೂ ಇರಲಿಲ್ಲ. ಇಂದೇನೂ ಈ ತತ್ವಗಳನ್ನು ವಿಶ್ವ ಒಪ್ಪುತ್ತಿರಬಹುದು. ಆದರೆ ಸೋನಿ ೧೯೪೬ರಲ್ಲೇ ಕೈಗಾರಿಕಾ ತತ್ವವನ್ನು ಒಪ್ಪಿ ನಡೆಯಿತು. ಯಶ ಸಾಸಿತು. ಇಂದು ಸೋನಿ ವಿಶ್ವದ ಬಹುತೇಕ ರಾಷ್ಟ್ರಗಳನ್ನು ಪ್ರವೇಶಿಸಿರಬಹುದು. ಆದರೆ ಇಂದಿಗೂ ಸೋನಿಯ ಆಡಳಿತ ವರ್ಗ ಕೆಲಸಗಾರರಿಗೆ ತಮಗಿಂತ MADE IN JAPAN ಕೇಂದ್ರಿತವಾಗಿ ಕೆಲಸ ಮಾಡಬೇಕೆಂದು ಭೋದಿಸುತ್ತದೆ. ತನ್ನ ಮೂಲಕ ರಾಷ್ಟ್ರದ ಏಳಿಗೆ ಬಯಸುವವರಿಗೆ, ಮಾರ್ಗದರ್ಶನ ಬಯಸುವವರಿಗೆ ಸೋನಿ ಕಥೆ ಪ್ರಚೋದಕ. ಹೀಗೆ ಬೂದಿಯಿಂದ ಎದ್ದುಬಂದ ಫಿನಿಕ್ಸ್‌ನಂತೆ ಮೇಲೇರಿದ ಜಪಾನ್ ಮತ್ತು ಗುಲಾಮಗಿರಿಯಿಂದ ಹೊರಬಂದ ಭಾರತದ ಪರಿಸ್ಥಿತಿಗಳು ತುಲನೆಯಲ್ಲಿ ತೊಡಗಿದಾಗ ಸೋನಿಯಂಥ ಯಾವ ಕಂಪೆನಿಯೂ ಇಲ್ಲಿ ಏಕೆ ಹುಟ್ಟಲಿಲ್ಲ ಎಂದು ಪ್ರಶ್ನೆಗಳೇಳುತ್ತವೆ. ಅಕ್ಷರಶಃ ನೆಲಸಮವಾಗಿದ್ದ ಜಪಾನ್, ಅತಿಸಣ್ಣ ಜಪಾನ್MADE IN JAPAN ಎಂದು ವಿಶ್ವಾದ್ಯಂತ ಕರೆಸಿಕೊಂಡಿರುವಾಗ ವಿಶಾಲ ಭೂಭಾಗದ ಭಾರತವೇಕೆ MADE IN INDIA ಎಂದುಕೊಳ್ಳಲಿಲ್ಲ ಎಂದು ಆಶ್ಚರ್ಯವೂ ಆಗುತ್ತದೆ. ಟಾಟಾ ಬಿರ್ಲಾರು ಕೈಗಾರಿಕೆ ಕಟ್ಟಿದರೇ ಹೊರತು ಸೋನಿಯಂತೇಕೆ ಆಗಲಿಲ್ಲ ಎಂದೂ ಅನಿಸದಿರದು. ಅದಕ್ಕೆ ಯಾರು ಹೊಣೆ ? ಇಂದಿಗೂ ಫೋರ್ಬ್ಸ್ ಪಟ್ಟಿಯಲ್ಲಿ ವಿಶ್ವದ ಬಿಲಿಯಾಪತಿಗಳ ಪಟ್ಟಿಯಲ್ಲಿ ಭಾರತೀಯ ವ್ಯಕ್ತಿಗಳೂ ಕಂಪೆನಿಗಳೂ ಹೆಸರು ಪಡೆದುಕೊಳ್ಳುತ್ತಾರೆ. ಆದರೆ ಅದಕ್ಕೂ ಹೆಚ್ಚಿನದೇನೂ ಅಲ್ಲಿ ಸಂಭವಿಸುವುದಿಲ್ಲ. ನಾರಾಯಣ ಮೂರ್ತಿಗಳು ಇನೋಸಿಸ್ ಅಷ್ಟೇ ಬೆಳೆಸುತ್ತಾರೆ. ಸೋನಿಯಂತೆ ದೇಶವನ್ನೂ ಬೆಳೆಸುವ ಮಟ್ಟಕ್ಕೆ ಬೆಳೆಯುವುದಿಲ್ಲ ಏಕೆ? ಸಣ್ಣ ವಯಸ್ಸಿನ ದಕ್ಷ ಸಿ.ಇ.ಓ ಗಳು, ವೈದ್ಯರು, ವಿದೇಶಗಳಿಗಷ್ಟೇ ಕೆಲಸ ಮಾಡುವುದನ್ನು , ಇಂದಿರಾನೂಯಿ ಫೆಪ್ಸಿಕೋಗೆ ದುಡಿಯುವುದನ್ನೇ ಪುಳಕ ಪಡುವವರೆಗೂ MADE IN INDIA ವಿಶ್ವವ್ಯಾಪಿಯಾಗಲಾರದು ಎಂಬುದು ಸತ್ಯ. ಉರಿದುಹೋದ ಜಪಾನ್‌ಗೆ ಪಶ್ಚಿಮದೊಟ್ಟಿಗೆ ಸೇರಿಕೊಂಡು ಪಶ್ಚಿಮವನ್ನೇ ಮೀರಿಸುವ ಛಲ ಬಂದಿರಬಹುದು . ಆದರೆ ಸ್ವಾತಂತ್ರ್ಯಾನಂತರದ ಭಾರತಕ್ಕೆ ಅದು ಅಷ್ಟು ಸುಲಭವಾಗಿ ಬರುವಂತಿರಲಿಲ್ಲ. ಏಕೆಂದರೆ ಶತಮಾನಗಳಷ್ಟು ಕಾಲದ ಗುಲಾಮಗಿರಿ ಒಂದು ಅಧಿಕಾರ ಹಸ್ತಾಂತರದ ಮೂಲಕ ತೊಲಗಿಹೋಗದು. ಕೊಂಚ ಉಳಿಕೆಯನ್ನು ಹೊತ್ತುಕೊಂಡೇ ಕಾಂಗ್ರೆಸ್ ಅಧಿಕಾರಾರೂಢವಾಯಿತು. ಇನ್ನು ಅಂಥ ಕಾಂಗ್ರೆಸ್‌ನಿಂದ ರಾಷ್ಟ್ರೀಯ ಪರಿಕಲ್ಪನೆಯಡಿಯಲ್ಲಿ ದೇಶದ ಕಂಪೆನಿಗಳು ಮೇಲೆ ಬರಲು ಹೇಗೆ ಸಾಧ್ಯವಾದೀತು ?
ಇದರ ಹೊರತಾಗಿ ಕೆಲವು ಇಚ್ಛಾಶಕ್ತಿಯುಳ್ಳ ವ್ಯಕ್ತಿಗಳು ಅದರತ್ತ ಪ್ರಯತ್ನಿಸಿದರೂ ಕೂಡ ಅಂತಾರಾಷ್ಟ್ರೀಯ ಮಟ್ಟಕ್ಕೆ ಏರುವಲ್ಲಿ ವಿಫಲವಾದವು. ರಾಷ್ಟ್ರೀಯತೆಗೆ ಬೆನ್ನು ಹಾಕಿಯೇ ಅಧಿಕಾರ ಆರಂಭಿಸಿದ ನೆಹರೂ ಪಡೆ ಅಮೆರಿಕ ಕೊಟ್ಟ ಕಳಪೆ ಗೋಧಿಗೆ ಆಸೆಪಟ್ಟು ದೇಶದ ಛಲ, ಇಚ್ಛಾಶಕ್ತಿ, ಗೌರವ, ಮೌಲ್ಯಗಳನ್ನು ಬಲಿಕೊಟ್ಟುಬಿಟ್ಟರು. ದೇಶದ ಮೂವತ್ತೈದು ಕೋಟಿ ಜನರಿಗೆ ಉಣ್ಣಲಿಲ್ಲ ಎಂದು ಸ್ವತಃ ನೆಹರೂವೇ ಬಹಿರಂಗವಾಗಿ ಘೋಷಿಸಿಬಿಟ್ಟರು. ಹೊರತು ಉಣ್ಣುವ ಒಂದು ಬಾಯಿಗೆ ದುಡಿಯುವ ಎರಡು ಕೈಗಳಿವೆ ಎಂಬುದನ್ನೇ ಮರೆತುಬಿಟ್ಟರು ಮತ್ತು ಆ ಎರಡು ಕೈಗಳಿಂದಲೂ ದುಡಿಸಬಹುದು ಎಂದು ಯೋಚಿಸಲೇ ಇಲ್ಲ. ಸ್ವತಂತ್ರಭಾರತದ ಪ್ರಶ್ನಾತೀತ ನಾಯಕರಾದ ನೆಹರೂಗೆ ದೇಶವನ್ನು ಏನೂ ಮಾಡಬಲ್ಲ ಶಕ್ತಿಯಿತ್ತು. ಇಡೀ ದೇಶವನ್ನೇ ಒಂದು ಸೋನಿಯಂತೆ ಮಾಡಬಹುದಿತ್ತು. ಆದರೆ ಅರ್ಥಹೀನ ಪ್ರಲಾಪಗಳತ್ತ ನೆಹರೂ ಧಾವಿಸಿದರು. ಸರಿಯಾದ ನೀತಿಗಳೇ ಕೈಯಲ್ಲಿಲ್ಲದೆ ಕೈಗಾರಿಕೆ ಎಂದರು. ಏನೇನೋ ಬಡಬಡಿಸಿದರು. ಪರಿಣಾಮ ಮುಂದಿನ ದಶಕಗಳಿಗೆ ಸಾಕಾಗುವಷ್ಟು ಅನಾಹುತಗಳು ಗುಡ್ಡೆಯಾಗಿ ಹೋಗಿದ್ದವು. ಜಪಾನ್ ನಲ್ಲಿ ಬಾಂಬಿಟ್ಟ ಅಮೆರಿಕನ್ನರ ತಂತ್ರಜ್ಞಾನಕ್ಕೆ ಅಕಿಯೋ ಮೊರಿಟಾ ಬೆರಗಾಗಿದ್ದರೆ ಇಲ್ಲಿ ನೆಹರೂ ಪಕ್ಕದ ಚೀನಾ ಸಾವಿರಾರು ಕಿ.ಮೀ ಒಳನುಗ್ಗಿದಾಗಲೂ ನಿಶ್ಚಿಂತರಾಗಿ ಇದ್ದರು. ಮೊರಿಟಾ ಪಶ್ಚಿಮದೊಂದಿಗೆ ಜೋಡಿಕೊಳ್ಳೋಣ ಎಂದಿದ್ದರೆ ಇಲ್ಲಿ ನಮ್ಮ ಚಾಚಾ ತಾವೇ ಸ್ವತಃ ಪಶ್ಚಿಮದವರಾಗಿ ಬಿಟ್ಟಿದ್ದರು. ಮತ್ತು ದೇಶವನ್ನು ಉಳಿದ ಪಶ್ಚಿಮದವರಂತೆ ನೋಡತೊಡಗಿದರು. ಜಪಾನ್ ರಾಷ್ಟ್ರಕೇಂದ್ರಿತ ಚಿಂತನೆಯಡಿಯಲ್ಲಿ ಉದ್ಯಮಶೀಲತೆ ಬೆಳೆಸಿಕೊಂಡಿದ್ದರೆ ನೆಹರೂ ಕೇಂದ್ರಿತ ಭಾರತ ಸ್ವಂತಿಕೆಯನ್ನು ಮರೆತು ತಾವೇ ಸ್ವತಃ ಪಶ್ಚಿಮದವರಾಗಲು ಹೊರಟಿತ್ತು. ಇತ್ತ ಭಾರತವಾಗದೆಯೂ ಉಳಿದುಬಿಟ್ಟಿತ್ತು. ನೆಹರೂ ಮಾಡಿದ ಅರ್ಥಹೀನ ಕೆಲಸಗಳು ಎಷ್ಟು ಆಳಕ್ಕೆ ಇಳಿದು ಬಿಟ್ಟಿದ್ದವೆಂದರೆ ಸ್ವಾತಂತ್ರ್ಯಾ ನಂತರದ ೫೦ ವರ್ಷಗಳಾದ ಅನಂತರವೂ ದೇಶ ಆ ಗುಂಗಿನಿಂದ ಹೊರಬರುವಂತಿರಲಿಲ್ಲ. ಏಕೆಂದರೆ ಮುಂದೆ ಹಸಿರುಕ್ರಾಂತಿಯಾದರೂ ಮರುವರ್ಷವೇ ಕೃಷಿಭೂಮಿ ಬರಡು ಬಿದ್ದುಹೋಯಿತು. ಖಾಸಗಿ ಕೈಗಾರಿಕೋದ್ಯಮಗಳಿಗೆ ಪರವಾನಗಿ ಕೊಡುವುದಷ್ಟೇ ನೆಹರೂ ಕೈಗಾರಿಕಾ ಕ್ರಾಂತಿಯಾಯಿತೇ ಹೊರತು ಕೈಗಾರಿಕೋದ್ಯಮಗಳ ಸಹಿತ ದೇಶವಾಸಿಗಳಿಗೆ ರಾಷ್ಟ್ರೀಯ ದೃಷ್ಟಿಕೋನವನ್ನೇ ಅವರು ಕೊಡಲಿಲ್ಲ. ಏಕೆಂದರೆ ಸ್ವತಃ ನೆಹರೂವೇ ಅಂಥ ದೃಷ್ಟಿಕೋನವನ್ನು ಹೊಂದಿರಲಿಲ್ಲ. ಬದಲಿಗೆ ರಾಷ್ಟ್ರೀಯ ವಾದ ಎಂದು ಕಾಣುವ ಎಲ್ಲವನ್ನೂ ದಮನಿಸಲು ಹೊರಟರು. ಶಿಕ್ಷಣ, ಸೇವೆ, ಉದ್ಯೋಗ, ರಕ್ಷಣೆ, ಕೃಷಿ, ಉದ್ಯಮ, ಆಡಳಿತ ಹೀಗೆ ದೇಶದ ಸಕಲ ವ್ಯವಸ್ಥೆಗಳಲ್ಲೂ ಸೆಕ್ಯುಲರ್ ಬೀಜವನ್ನು ಬಿತ್ತಿ ರಾಷ್ಟ್ರೀಯ ಸ್ಪರ್ಶ ಆಗದಂತೆ ಮಾಡಿದರು. ಇನ್ನೆಲ್ಲಿಯ ಸೋನಿಯಂಥ ಸಂಸ್ಥೆ ? ಇನ್ನೆಲ್ಲಿಯ MADE IN JAPAN ಆದ್ದರಿಂದ ಮಾನವ ಶಕ್ತಿಯ ಸಮರ್ಥ ನಿರ್ವಹಣೆಗೆ ಭಾರತಕ್ಕೆ ೬೦ ವರ್ಷಗಳು ಬೇಕಾಯಿತು. ಭಾರತ ಪ್ರಕಾಶಿಸಲು ಆಡಳಿತಕ್ಕೆ, ಉದ್ಯಮಕ್ಕೆ, ಶಿಕ್ಷಣಕ್ಕೆ ರಾಷ್ಟ್ರೀಯ ಸ್ಪರ್ಶನೀಡಲು ವಾಜಪೇಯಿಯೇ ಬರಬೇಕಾಯಿತು. ಇದೀಗ ಭಾರತ ವೈಬ್ರೆಂಟ್ ಆಗುವತ್ತ ಸಾಗುತ್ತಿದೆ. ಮುಂದಿನ ಪಾಳಿ ಭಾರತದ್ದು.

No comments:
Post a Comment