ಒಂದು ಕಾಲವಿತ್ತು. ಆಕಾಶವಾಣಿಯೆಂದರೆ ಅದು ಜನರದ್ದೇ ವಾಣಿ ಎಂಬ ಪರಿಸ್ಥಿತಿಯಿತ್ತು.ವಿದ್ಯುತ್ ಇಲ್ಲದ ಕಾಲದಲ್ಲೂ ಹಳ್ಳಿಯಿಂದ ದಿಲ್ಲಿಯವರೆಗಿನ ಜನ ಈ ಅಶರೀರವಾಣಿಯನ್ನು ಎಷ್ಟು ಹಚ್ಚಿಕೊಂಡಿದ್ದರೆಂದರೆ ಅಕಾಶವಾಣಿಯಿಲ್ಲದ ಬದುಕು ಅವರಿಂದ ನಡೆಸಲಾಗುತ್ತಿರಲಿಲ್ಲ. ಅಕ್ಷರಜ್ಞಾನವಿಲ್ಲದ ಜನರು ಪ್ರಪಂಚ ಕಾಣುತ್ತಿದ್ದುದ್ದೇ ಈ ಆಕಾಶವಾಣಿಯಿಂದ. ಒಟ್ಟಾರೆ ಹೇಳಬೇಕೆಂದರೆ ದೇಶವನ್ನು ದೀರ್ಘ ಕಾಲದವರೆಗೆ ರೂಪಿಸಿದ್ದು ,ಅರಳಿಸಿದ್ದು, ಎಜುಕೇಟ್ ಮಾಡಿದ್ದು ಅಕಾಶವಾಣಿಯೇ.ಚೀನಾ ಭಾರತದ ಗಡಿ ನುಸುಳಿದ್ದನ್ನು ,ಗಾಂಧಿ ಗುಂಡಿಗೆ ಬಲಿಯಾಗಿದ್ದನ್ನು, ನೆಹರೂ ಸತ್ತದ್ದನ್ನು ,ಇಂದಿರಾಗಾಂಧಿ ತುರ್ತುಪರಿಸ್ಥಿತಿಯನ್ನು ಹೇರಿದ್ದನ್ನು ,ಕಪಿಲ್-ಗವಾಸ್ಕರರ ಆಟಗಳನ್ನು ,ಗೋರ್ಬಚೇವ್ ಅಧಿಕಾರದಿಂದ ಇಳಿದಿದ್ದನ್ನು ,ಸಿಲೋನಿನ ರಕ್ತಪಾತವನ್ನು ,ಅಮಿತಾಬ್ ಬಚ್ಚನ್ನಿನ ಸ್ವರವನ್ನು , ಡಾಬರ್ ಹಲ್ಲಿನ ಪುಡಿಯನ್ನು ಮನೆಮನೆಗೆ ಪರಿಚಯಿಸಿದ್ದು ಮಾಡಿದ್ದು ಆಕಾಶವಾಣಿಯೇ. ಪಾರ್ಲಿಮೆಂಟಿನ ನಿರ್ಣಯಗಳು, ಕೋರ್ಟುಗಳ ಸದ್ಧುಗಳು,ಚುನಾವಣೆಗಳು, ಫಲಿತಾಂಶಗಳು,ಭಾಷಣಗಳು,ಸ್ವಾತಂತ್ರ್ಯೊತ್ಸವಗಳು, ಗಣತಂತ್ರದ ಆಚರಣೆಗಳು ನಮಗೆಲ್ಲಾ ಗೊತ್ತಾಗಿದ್ದು ಆಕಾಶವಾಣಿಯಿಂದ. ಜನರು ಬ್ರೇಕಿಂಗ್ ನ್ಯೂಸ್ ಚಾನೆಲ್ ಭರಾಟೆಯಿಲ್ಲದ ಕಾಲದಲ್ಲೂ ಜನ ಲೋಕಾರೂಡಿ ಮಾತಾಡುವಂತೆ ಮಾಡಿದ್ದು ಕೂಡ ಇದೇ ಅಕಾಶವಾಣಿ. ಅಷ್ಟರಮಟ್ಟಿಗೆ ಆಕಾಶವಾಣಿ ಭಾರತದಲ್ಲಿ ಪ್ರಬಲ. ವಿಶ್ವದ ಹಲವು ರೇಡಿಯೋ ಸಂಸ್ಥೆಗಳಲ್ಲಿ ಎದ್ದು ಕಾಣುವುದು ಭಾರತದ ಈ ಆಕಾಶವಾಣಿ. ಇಂದಿಗೂ ದೇಶದ ಆಯಕಟ್ಟಿನ ಜಾಗಗಳಲ್ಲಿರುವವರು ದೇಶವನ್ನು ಉದ್ದೇಶಿಸಿ ಮಾತನಾಡಲು ಅಕಾಶವಾಣಿಯೇ ಮಾಧ್ಯಮ. ಏಕೆಂದರೆ ಆಕಾಶವಾಣಿ ಪ್ರಜಾಪ್ರಭುತ್ವದ ಮುಖವಾಣಿ. ಅದು ಎಂದೂ ಸರಕಾರದ ಮುಖವಾಣಿಯಲ್ಲ. ಹೀಗಾಗಿ ಆಕಾಶವಾಣಿಗೆ ದೇಶದಲ್ಲಿ ತನ್ನದೇ ಆದ ಘನತೆಯಿದೆ. ಗೌರವವಿದೆ.
ಆಧುನಿಕತೆಯ , ವೇಗದ ಈ ಯುಗದಲ್ಲಿ ಮಾಧ್ಯಮಲೋಕದ ಅಬ್ಬರ ಹೆಚ್ಚಿರಬಹುದು. ನೂರಾರು ನ್ಯೂಸ್ ಚಾನೆಲ್‌ಗಳು ಗಳಿಗೆ ಗಳಿಗೆಗೂ ಸುದ್ಧಿ ಬಿತ್ತರಿಸುತ್ತಿರಬಹುದು. ಮತ್ತು ಇಂದು ರೇಡಿಯೋ ಎಂದಾಗ ಎಫ್.ಎಂ.ಗಳೂ ನೆನಪಿಗೆ ಬರಬಹುದು. ಆದರೆ ಆಕಾಶವಾಣಿ ಅವೆಲ್ಲಕ್ಕಿಂತಲೂ ಒಂದು ಕೈ ಮುಂದಿರುವಂಥದ್ದು. ಇಂದಿಗೂ ರಾಷ್ಟ್ರಪತಿಯವರ ಸಾರ್ವಜನಿಕ ಕಾರ್ಯಕ್ರಮಗಳ ಅಧಿಕೃತ ದಾಖಲೆಯನ್ನು ರಾಷ್ಟ್ರಪತಿಭವನಕ್ಕೆ ತಲುಪಿಸುವ ಗುರುತರವಾದ ಜವಾಬ್ದಾರಿ ಆಕಾಶವಾಣಿಗಿದೆ. ದೇಶದಲ್ಲಿ ಎಲ್ಲೇ ಪ್ರಾಕೃತಿಕ ವಿಕೋಪಗಳಾಗಲೀ,ಅನಾಹುತಗಳಾಗಲೀ ಸಾವು ನೋವುಗಳು ಸಂಭವಿಸಿದಾಗ ಅದರ ಅಧಿಕೃತ ಅಂಕೆಸಂಖ್ಯೆಗಳಿಗಾಗಿ ಸರಕಾರಗಳು ಗಮನಿಸುವುದು ಆಕಾಶವಾಣಿಯನ್ನೇ. ಆಕಾಶವಾಣಿಯೆಂದರೆ ಅಷ್ಟೊಂದು ನಂಬಿಕೆ.ಅಷ್ಟೊಂದು ಗೌರವ.ಅಷ್ಟೊಂದು ಪ್ರೀತಿ. ಅಂಥ ಪ್ರೀತಿ ಗೌರವಗಳು ಜನರಲ್ಲಿ ಇದ್ದುದರಿಂದಲೇ ಮೊದಲೆಲ್ಲಾ ಯೋಧರು ತರುತ್ತಿದ್ದ ಟ್ರಾನ್ಸಿಸ್ಟರ್‌ಗಳನ್ನು ನೋಡಲು ಊರಿಗೆ ಊರೇ ಯೋಧನ ಮನೆಗೆ ಧಾವಿಸುತ್ತಿತ್ತು ಎನ್ನುವ ಕಥೆಗಳು ಹಲವು ಊರುಗಳಲ್ಲಿ ಇಂದಿಗೂ ಪ್ರಚಲಿತವಿದೆ.
ಹೊಸ ಸಹಸ್ರಮಾನದಿಂದೀಚೆಗೆ ಪತ್ರಿಕೆಗಳು ಮತ್ತು ವಿದ್ಯುನ್ಮಾನ ಮಾಧ್ಯಮಗಳು ತಮ್ಮ ವ್ಯಾಪ್ತಿಯನ್ನು ದಿಡೀರನೆ ಹೆಚ್ಚಿಸಿಕೊಂಡವು. ಅಹೋರಾತ್ರಿ ಕಾರ್ಯಕ್ರಮಗಳನ್ನು ಬಿತ್ತರಿಸುವ ಜಾಲಗಳೂ ಬಂದವು. ಬ್ರೇಕಿಂಗ್ ನ್ಯೂಸ್‌ಗಳು, ಶೀಘ್ರ ಸುದ್ಧಿ ಕೊಡಬೇಕಾದ ಧಾವಂತಗಳು ಮಾಧ್ಯಮಗಳಲ್ಲಿ ಏಕಾಏಕಿ ಕಂಡುಬಂತು. ಇವುಗಳೆಲ್ಲದರ ನಡುವೆ ಆಕಾಶವಾಣಿ ಸಂಪ್ರದಾಯಬದ್ದವಾಗಿ ನಿಧಾನವಾದರೂ ನಿಖರತೆಗೆ ಪ್ರಧಾನವಾದ ,ಧಾವಂತವಿಲ್ಲದ ,ಸ್ವಪ್ರತಿಷ್ಠತೆಯಿಲ್ಲದೆ ತನ್ನ ಪಾಡಿಗೆ ತಾನು ನಡೆಯುತ್ತಿತ್ತು. ದೇಶದ ಧ್ವನಿಯೇ ತಾನಾಗಿದ್ದ ಆಕಾಶವಾಣಿ ತನ್ನ ಕೇಳುಗರ ಸಂಖ್ಯೆಯನ್ನು ಕಡಿಮೆ ಮಾಡಿಕೊಂಡಿದ್ದರೂ ಸ್ವತಃ ಮಂಕಾಗಿರಲಿಲ್ಲ. ಏಕೆಂದರೆ ಆಕಾಶವಾಣಿಯ ಕಾರ್ಯವಿಧಾನಕ್ಕೆ ಯಾರೂ ಪೈಪೋಟಿಗೆ ಇಳಿದಿರಲಿಲ್ಲ. ಮನರಂಜನೆಯೊಟ್ಟಿಗೆ ಮನೋವಿಕಾಸ, ಜ್ಞಾನ ಮತ್ತು ಪ್ರಚಾರ ಈ ಮೂರನ್ನೂ ದೇಶಕ್ಕೆ ನೀಡಬಲ್ಲ ಅರ್ಹತೆ ಇದ್ದಿದ್ದು ಕೇವಲ ಆಕಾಶವಾಣಿಗೆ ಮಾತ್ರ. ಆದರೂ ದಿನಗಳೆದಂತೆ ಆಕಾಶವಾಣಿ ಮಂಕು ಮಂಕಾಗಿ ಕಾಣಿಸತೊಡಗಿತು. ಅನಾಥಭಾವವನ್ನು ಆಕಾಶವಾಣಿಯೂ ಅನುಭವಿಸುತ್ತಿದೆಯೇ ಎನಿಸತೊಡಗಿತು. ಆಕಾಶವಾಣಿಯ ನೌಕರವೃಂದ ತಾವು ಮುಖ್ಯವಾಹಿನಿಯ ಮಾಧ್ಯಮರಂಗದಿಂದ ದೂರವಾಗಿರುವ ಕೀಳರಿಮೆಯಿಂದಲೂ , ಕೇಂದ್ರ ಸರಕಾರಿ ನೌಕರರೆಂಬ ದುರಹಂಕಾರದಿಂದಲೂ ವರ್ತಿಸುತ್ತಿದ್ದಾರೇನೋ ಎಂಬಂತೆ ಕಾಣಿಸಿಕೊಂಡರು. ಹೀಗೆ ಕಾಣಲು ದಿವ್ಯ ದೃಷ್ಟಿಯೇನೂ ಬೇಕಾಗಿರಲಿಲ್ಲ.ಏಕೆಂದರೆ ದುರದೃಷ್ಟವಶಾತ್ ಆಯಕಟ್ಟಿನ ಜಾಗಗಳಲ್ಲಿ ಅಂಥವರೇ ವಕ್ಕರಿಸಿಕೊಂಡರು. ಯಾವುದೇ ಕ್ಷೇತ್ರವಿರಲಿ ಅಹಂಕಾರ ಮತ್ತು ಕೀಳರಿಮೆಗಳು ಕಾಣಿಸಿಕೊಂಡರೆ ಅಲ್ಲಿ ಇನ್ನುಳಿದ ಅನಿಷ್ಠಗಳು ಒಳನುಗ್ಗಲು ಕಷ್ಟವೇನಾಗುವುದಿಲ್ಲ. ಜೊತೆಗೆ ದೇಶದ ಜನರಿಗೆ ಆಕಾಶವಾಣಿ ಇನ್ನು ನಮಗೆ ಅನಿವಾರ್ಯವೇನಲ್ಲ ಎನಿಸಿದಾಗ ನಿಲಯದಲ್ಲಿ ಆಲಸ್ಯ ,ಭ್ರಷ್ಟತೆ ,ಒಳಜಗಳ,ರಾಜಕೀಯಗಳು ಸುಲಭವಾಗಿ ನುಸುಳಿಕೊಂಡಿತು. ಹೀಗೆ ಬದಲಾದ ವಿಶ್ವದಲ್ಲಿ ತಾನು ಮಾತ್ರ ಬದಲಾಗಲಾರದ ಅನಿವಾರ್ಯತೆಗಳೆಡೆಯಲ್ಲಿ ಆಕಾಶವಾಣಿಯ ನಡೆ ಮಾತ್ರ ವಿಷಾಧಪೂರ್ಣವಾದುದು. ಇಂದಿನ ಆಕಾಶವಾಣಿಯ ಪರಿಸ್ಥಿತಿ ಹೇಗಿದೆಯೆಂದರೆ ಜನರು ಯಾರನ್ನಾದರೂ ನಂಬಬಹುದು ಮಾರಾಯರೇ ಆದರೆ ಈ ಆಕಾಶವಾಣಿಯನ್ನು ಮಾತ್ರ ನಂಬಲಾಗುವುದಿಲ್ಲ. ಅದರ ಸಹವಾಸವೇ ಬೇಡ ಎನ್ನುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇಕೆ ಹೀಗೆ? ಏನು ನಡೆಯುತ್ತಿದೆ ಅಲ್ಲಿ? ಎಂಬಿತ್ಯಾದಿ ಪ್ರಶ್ನೆಗಳೊಂದಿಗೆ ಮುಂದುವರಿದಾಗ ಎದುರು ನಿಂತ ಆಕಾಶವಾಣಿ ತನ್ನ ಭೀಕರತೆಯನ್ನು ತೋರಿಸುತ್ತಿತ್ತು. ಏಕೆಂದರೆ ಆಕಾಶವಾಣಿಯಲ್ಲಿ ಎಲ್ಲವೂ ಇದೆ. ರಾಜಕಾರಣವಿದೆ. ಜಾತಿವಾದವಿದೆ. ಅನೈತಿಕತೆಯಿದೆ. ಮೇಯುವವರಿಗೆ ಅದು ಇಂದಿಗೂ ಸಮೃದ್ಧ ಗೋಮಾಳವೇ ಸರಿ. ಪ್ರಸ್ತುತ ಚರ್ಚೆಯಾಗುತ್ತಿರುವ ಮಾಧ್ಯಮಗಳ ಭ್ರಷ್ಟಾಚಾರವನ್ನು ಎಲ್ಲಾ ಪೂರ್ವಗ್ರಹವನ್ನು ತ್ಯಜಿಸಿ ವಿಚಾರಮಂಥನ ಮಾಡಿದರೆ ನಮಗೆ ಕಾಣುವುದು ಚಿಲ್ಲರೆ ಬುದ್ಧಿಯ ಹಫ್ತಾಗಳು, ಬ್ಲ್ಯಾಕ್ ಮೈಲ್‌ಗಳು. ಇನ್ನೂ ಮುಂದುವರಿದರೆ ಒಂದಿಷ್ಟು ಪೇಯ್ಡ್ ನ್ಯೂಸುಗಳು ಇತ್ಯಾದಿಗಳು.ಅವೆಲ್ಲವೂ ಕುಸಿದಿರುವ ಮೌಲ್ಯಗಳ ಸಂಕೇತಗಳೇ ಹೌದಾದರೂ ಅದಕ್ಕೆ "ಉದ್ಯಮ" ಎಂಬ ಪಟ್ಟವನ್ನು ಮಾಧ್ಯಮಗಳೇ ಕೊಟ್ಟುಕೊಂಡಿವೆ ಮತ್ತು ಸತಾಯಗತಾಯ ತನ್ನನ್ನು ಸಮರ್ಥಿಸಿಕೊಳ್ಳುತ್ತವೆ. ಆದರೆ ಸರಕಾರಿ ಸ್ವಾಮ್ಯದ ಆಕಾಶವಾಣಿಯ ಹಲವು ಸಿಬ್ಬಂದಿಗಳು ಸಮರ್ಥನೆಗೂ ಅವಕಾಶವಿಲ್ಲದೆ "ಉದ್ಯಮ" ಗಳನ್ನು ನಡೆಸುತ್ತಿರುವುದು ಇಂದು ಗುಟ್ಟಾಗಿ ಉಳಿದಿಲ್ಲ. ಮುಖ್ಯವಾಹಿನಿಯ ಮಾಧ್ಯಮಗಳು ನೊಣ ತಿಂದು ಕುಲ ಕೆಡಿಸಿಕೊಂಡರೆ , ಆಕಾಶವಾಣಿಯವರು ಆನೆ ತಿಂದರೂ ಕುಲ ಕೆಡಿಸಿಕೊಳ್ಳದೆ "ಪ್ರತಿಷ್ಠಿತ"ರಾಗುತ್ತಿದ್ದಾರೆ. ಇತ್ತೀಚೆಗೆ ಕರ್ನಾಟಕದ ಆಕಾಶವಾಣಿಯ ಎಫ್.ಎಂ ಕೇಂದ್ರವೊಂದಕ್ಕೆ ತನಿಖಾತಂಡವೊಂದು ಧಾಳಿ ನಡೆಸಿತು ಎನ್ನುವಾಗ ಅಲ್ಲಿ ಅದ್ಯಾವ ಪರಿಯ ತಿನ್ನುವಿಕೆ ನಡೆಯುತ್ತಿದ್ದಿರಬಹುದು ಎಂದು ಊಹಿಸಬಹುದು.ಹುಡುಕುತ್ತಾ ಹೊರಟರೆ ದೇಶದುದ್ದಕ್ಕೂ ಆಕಾಶವಾಣಿ ನಿಲಯಗಳಲ್ಲಿ ಕಂಡುಬರುವುದು ಚಿತ್ರವಿಚಿತ್ರವಾದ ಘಟನೆಗಳು ಕಂಡುಬರುತ್ತವೆ. ಅಗರ್ತಲಾದಿಂದ ಮಡಿಕೇರಿಯವರೆಗೂ ರಾಜಕಾರಣಗಳು ನಡೆಯದ ಆಕಾಶವಾಣಿಗಳು ದೇಶದಲ್ಲೇ ಇಲ್ಲ. ಎಲ್ಲೆಲ್ಲೂ ಅಸಹ್ಯಕರ ವಾತಾವರಣದ ಜಾಡುಗಳು. ಇನ್ನು ದೇಶದ ವಾಣಿ ಆಕಾಶವಾಣಿ ಮಂಕಾಗದಿರಲು ಹೇಗೆ ತಾನೆ ಸಾಧ್ಯ?
ಒಂದು ವ್ಯವಸ್ಥೆ ಯ ಸಾಧಕ ಭಾದಕಗಳು ಅದನ್ನು ರೂಪಿಸುವವರನ್ನು ಅವಲಂಬಿಸುತ್ತವೆ. ಇಲ್ಲಿ ಆಕಾಶವಾಣಿಯನ್ನು ಮಂಕಾಗಿಸುವಲ್ಲಿ ಬದಲಾದ ಕಾಲ ಒಂದು ಸಂಗತಿಯಾದರೆ ಅದಕ್ಕೂ ಹೊರತಾದ ಮತ್ತೊಂದು ಸಂಗತಿಯೆಂದರೆ ಆಕಾಶವಾಣಿಯ ನೌಕರವೃಂದವೇ. ಕರ್ನಾಟಕದ ಉದಾಹರಣೆಯನ್ನೇ ತೆಗೆದುಕೊಂಡರೆ ಅದರ ಅಂದಾಜಾಗುತ್ತದೆ.ರಾಜ್ಯದ ಕೆಲವು ನಿಲಯಗಳ ವ್ಯಾಪ್ತಿಯಲ್ಲಿ ಪ್ರಾದೇಶಿಕ ಭಾಷೆಗಳ ಪ್ರಾಬಲ್ಯವಿದೆ. ಕೊಂಕಣಿ, ತುಳು ಮತ್ತು ಕೊಡವ ಭಾಷಾ ಪ್ರದೇಶದಲ್ಲಿ ಅಕಾಶವಾಣಿ ಕಾರ್ಯಕ್ರಮಗಳ ನೆಪದಲ್ಲಿ ರಾಜಕಾರಣ ಮಾಡುವುದು, ಗುಂಪುಗಾರಿಕೆ ನಡೆಸುವುದು ಸರ್ವೆಸಾಮಾನ್ಯ. ಕೊಡಗಿನಂತಾ ಊರುಗಳಲ್ಲಿ ನಿಧನದ ಸುದ್ಧಿಗಳಿಗೆ ಬೇರೆಡೆಗಿಂತಲೂ ಹೆಚ್ಚಿನ ಮಹತ್ತ್ವವಿದೆ. ಇಂದಿಗೂ ಅಲ್ಲಿ ನಿಧನದ ಸುದ್ಧಿಗಳನ್ನು ತಿಳಿಯಲು ಜನರು ರೇಡಿಯೋದ ಮೊರೆ ಹೋಗುತ್ತಾರೆ. ಆದರೆ ಆಕಾಶವಾಣಿ ಮರಣದ ಸುದ್ಧಿಯಲ್ಲೂ ಕಮಾಯಿ ಮಾಡಲಾರಂಭಿಸಿತು. ಒಂದು ಮರಣದ ಸುದ್ದಿಗೆ ಇಂತಿಷ್ಟು ಎಂದು ದರ ನಿಗದಿಮಾಡಿದರೂ ಸುದ್ಧಿ ಕೊಟ್ಟ ಯಾರಿಗೂ ರಸೀದಿ ಕೊಟ್ಟ ಉದಾಹರಣೆಗಳಿರಲಿಲ್ಲ. ಈ ಮೂಲಕ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಗುಲ್ಲು ಕೇಳಿಬಂದಾಗ ಆಕಾಶವಾಣಿ ಈ ನಿಧನ ವಾರ್ತೆಯನ್ನು "ಸೇವಾ ಮಾಹಿತಿ"ಎಂದು ಬದಲಾಯಿಸಿತ್ತು. ಬೇಲಿಯೇ ಹೊಲ ಮೇಯ್ದರೆ ಉಳಿಗಾಲವಿದೆಯೇ?
ನಿಲಯದ ನೌಕರರನ್ನು ನೋಡಿದರೇ ಆಕಾಶವಾಣಿಯ ಜಾತಕವನ್ನು ಓದಿಬಿಡಬಹುದು. ಬಹುತೇಕ ಆಕಾಶವಾಣಿಯ ಉದ್ಯೋಗಸ್ಥರ ಮುಖದಲ್ಲಿ ಕೆಲಸವಿಲ್ಲದೆ ಅಲೆದ ದಣಿವೇ ಕಾಣಸಿಗುತ್ತದೆ. ಸರಕಾರಕ್ಕೆ ಮೋಸಮಾಡಿ ಕೆಲಸ ತಪ್ಪಿಸಿಕೊಂಡ ಲಕ್ಷಣಗಳು ನಿಚ್ಚಳವಾಗಿ ಗೋಚರಿಸುತ್ತದೆ. ವಿಶೇಷವೆಂದರೆ ಇವರೆಲ್ಲರೂ ೪೦ ರಿಂದ ೭೫ ಸಾವಿರ ರೂಪಾಯಿ ಸಂಬಳ ಪಡೆಯುವವರು. ಆಕಾಶವಾಣಿಯಲ್ಲಿ ಹೆಚ್ಚಿನ ಸಂಬಳ ಪಡೆಯುವವರೆಂದರೆ ಉತ್ಸವ ಮೂರ್ತಿಗಳೆಂದೇ ಅರ್ಥ. ಆದರೆ ಉದ್ಘೂಷಕರು ಮತ್ತು ಡಿ.ಗುಂಪಿನ ನೌಕರರು ನಿವೃತ್ತರಾಗುವವರೆಗೂ ತಿಂಗಳ ಕೊನೆಯಲ್ಲಿ ಸಾಲಮಾಡದೆ ಬದುಕಲಾರದಷ್ಟು ವೇತನ ತಾರತಮ್ಯವಿದೆ. ಇಂದು ನಿಲಯದಲ್ಲಿ ಕಾರ್ಯಕ್ರಮಗಳ ಜಾಡನ್ನು ಹಿಡಿದು ಹೋಗುವವರಿಲ್ಲ. ರಿಸರ್ಚ್ ಮತ್ತು ಡೆವಲಪ್ ಮೆಂಟ್ ಎನ್ನುವುದು ಕಡ್ಡಾಯವಾದರೂ ಕೊಲೆಸ್ಟ್ರಾಲ್ ಹೆಚ್ಚುವಷ್ಟು ಸಂಬಳ ಬರುವುದರಿಂದ ಮತ್ತು ಕೇಳುವ ದೊಣ್ಣೆನಾಯಕರಾರೂ ಇಲ್ಲದಿರುವುದರಿಂದ ಹೆಚ್ಚಿನ ನಿಲಯದ ಸಿಬ್ಬಂದಿಗಳು ಹುಡುಕಾಟಕ್ಕಿಳಿಯುವುದಿಲ್ಲ. ಎಲ್ಲವೂ ಕಣ್ಣಳತೆಯ ,ಕೂಗಳತೆಯ ದೂರದಲ್ಲಿ ಸಿಗಬೇಕು. ಅಧಿಕಾರಿಗಳ ಗೆಳೆಯರಿಗೋ ನಂಟರಿಗೋ ಹಾಡುಗಳು ಗೊತ್ತಿದ್ದರೂ ಸಾಕು ಅವರು ಆಸ್ಥಾನ ಕಲಾವಿದರಾಗುವರು. ಇನ್ನು ಆಕಾಶವಾಣಿಯಲ್ಲಿ ವಾರ್ತೆಗಳನ್ನು ಓದುತ್ತಿರುವವರು ಮನುಷ್ಯರಾಗಿದ್ದರೆ ಅಷ್ಟೆ ಸಾಕು. ಭಾಷೆಯ ಮನೆ ಹಾಳಾದರೂ ಚಿಂತೆ ಇಲ್ಲ. ಇಂದು ಆಕಾಶವಾಣಿಯಿಂದ ಯಾರೂ ಬ್ರೇಕಿಂಗ್ ನ್ಯೂಸ್‌ಗಳನ್ನು ನಿರೀಕ್ಷಿಸುವುದಿಲ್ಲ. ಆದರೆ ಸುದ್ಧಿಗಳಾದರೂ ಅಪರೂಪವೂ ಮೌಲಿಕವೂ ಆಗಿರಬೇಡವೇ? ವ್ಯಕ್ತಿ ಬದಲಾಗದೆ ವ್ಯವಸ್ಥೆ ಬದಲಾಗದು ಎಂಬ ಮಾತಿದೆ. ಅದು ಆಕಾಶವಾಣಿಗೆ ಚೆನ್ನಾಗಿ ಅನ್ವಯವಾಗುತ್ತದೆ. ವರ್ಗವಾಗುವ ಅಧಿಕಾರಿ ನಿಲಯದಿಂದ ಹಳೆಯ ರೆಕಾರ್ಡುಗಳನ್ನು ಕದ್ದೊಯ್ದು ಇನ್ನೊಂದು ನಿಲಯದಿಂದ ತನ್ನದೇ ಕಾರ್ಯಕ್ರಮ ಎಂದು ಪ್ರಸಾರ ಮಾಡುವುದು, ಖ್ಯಾತನಾಮರ ಭಾಷಣಗಳನ್ನೇ ಕದ್ದೊಯ್ಯುವುದು ಆಕಾಶವಾಣಿಯಲ್ಲಿ ನಡೆಯುತ್ತಲೆ ಇರುತ್ತದೆ ಎಂಬ ಸುದ್ಧಿಯಿದೆ. ಇವೆಲ್ಲವೂ ದೇಶದ ಆಸ್ತಿಗಳು ಎಂಬುದು ಗಮನಾರ್ಹ. ಹಾಗಾದರೆ ನಿಲಯದಲ್ಲಿ ಶಿಸ್ತು , ನಿಯಮಗಳು ಎಷ್ಟರಮಟ್ಟಿಗೆ ಪಾಲನೆಯಾಗುತ್ತಿರಬಹುದು?
ಸುಮಾರು ಇಪ್ಪತ್ತು ವರ್ಷಕ್ಕೆ ಹಿಂದೊಮ್ಮೆ ಆಕಾಶವಾಣಿಯ ಉದ್ಘೋಷಕಿಯೊಬ್ಬರು ರಜಾದಿನದಲ್ಲಿ ಸಾರ್ವಜನಿಕರಿಗೆ ಹರಿಕಥೆ ನಡೆಸಿಕೊಟ್ಟರು ಎಂದು ಅವರಿಗೆ ನೋಟಿಸ್ ಕಳುಹಿಸಲಾಗಿತ್ತಂತೆ .ಆದರೆ ಇಂದು ಒಬ್ಬ ನಿಲಯದ ಮನುಷ್ಯ ವೆಬ್‌ಸೈಟೊಂದನ್ನು ನಡೆಸುತ್ತಾ ಪತ್ರಿಕೆಗಳಿಗೆ ಅಂಕಣವನ್ನೂ ಬರೆಯುತ್ತಾ ಲೋಕಕ್ಕೆ ದೊಡ್ಡವರಂತೆ ಪೋಸು ಕೊಡುತ್ತಿದ್ದರೂ ಆಕಾಶವಾಣಿಗೆ ಅದರ ಪರಿವೆಯಿಲ್ಲ. ವಿಶ್ವವಿದ್ಯಾನಿಲಯಗಳಲ್ಲಿ ನಡೆಯುವಂತೆ ಜಾತಿನಿಂದನೆಯ ಕೇಸುಗಳು, ಸ್ಥಳಿಯ ಸೊಗಡಿನ ಬಗ್ಗೆ ಅರಿವು ಮತ್ತು ಆಸಕ್ತಿ ಇಲ್ಲದಿರುವುದು, ವೃತ್ತಿ ಮತ್ಸರ ,ದೇಶಾದ್ಯಂತದ ನಿಲಯಗಳಲ್ಲಿ ಕಂಡುಬರುತ್ತಿರುವ ಕ್ರಿಶ್ಚಿಯನ್ ಲಾಭಿ, ತಮ್ಮ ಅಂಕಣಕ್ಕಾಗಿ ಆಕಾಶವಾಣಿಯ ಸಮಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವವರೇ ತುಂಬಿರುವಾಗ ಯಾವ ಬಾಯಿ ಯಿಂದ ಆಕಾಶವಾಣಿ ದೇಶದ ವಾಣಿ ಎಂದು ಕರೆಯೋಣ.
ಎಲ್ಲೇ ಅನಾಚಾರಗಳು ನಡೆದರೂ ಒಂದು ಹದ್ದಿನ ಕಣ್ಣಿಡುವ ಶ್ರೀನಿವಾಸ ಕುಂಡಂತಾಯರು ಒಂದು ಕಥೆಯನ್ನು ಹೇಳುತ್ತಿರುತ್ತಾರೆ.
ಮಂಗಳೂರಿನ ಹೊರವಲಯದಲ್ಲಿ ಒಂದು ದೊಡ್ಡ ಹುಲ್ಲುಗಾವಲಂತೆ. ಅಣ್ಣಪ್ಪನ ಅಗರು ಎಂಬ ಹೆಸರಂತೆ. ಸುತ್ತಲ ಊರವರಿಗೆ ದನ ಮೇಯಿಸಲು, ಹುಲ್ಲು ಕತ್ತರಿಸಲು ಅದು ಪ್ರಶಸ್ತ ಜಾಗವಂತೆ. ಗೋವಿಗೆ ಎಲ್ಲೇ ಹುಲ್ಲಿಗೆ ಕೊರತೆಯಿದ್ದರೂ ಅಣ್ಣಪ್ಪನ ಅಗರಿನಲ್ಲಿ ಕೊರತೆಯಿರದಂತೆ.ಹಾಗಾಗಿ ಮೇಯಲು ಎಲ್ಲೆಲ್ಲಿಂದಲೋ ಗೋವುಗಳು ಬರುವುದಂತೆ. ಮೈದಾನದ ತುಂಬಾ ಗೋವುಗಳೋ ಗೋವುಗಳು ತುಂಬಿರುತ್ತಿದ್ದುವಂತೆ. ಕುಂಡಂತಾಯರಿಗೆ ದೇಶದೆಲ್ಲೆಡೆಯ ಆಕಾಶವಾಣಿ ನಿಲಯಗಳನ್ನು ನೋಡುವಾಗಲೆಲ್ಲಾ ಅದೇ ಅಣ್ಣಪ್ಪನ ಅಗರು ನೆನಪಾಗುವುದಂತೆ.

No comments:
Post a Comment