ಸಾಮ್ರಾಜ್ಯಶಾಹಿ ಧೋರಣೆಯ ಇನ್ನೊಂದು ಮುಖವೇ ಕುಟಿಲತೆ, ರಕ್ತಪಾತಗಳು. ಅಲ್ಲಿ ಎದುರಾಳಿಗಳನ್ನು ಶತಾಯಗತಾಯ ಸೋಲಿಸಲೇ ಬೇಕೆಂದ ಧಾವಂತ,ತನಗೊಬ್ಬನಿಗೇ ಬದುಕುವ ಹಕ್ಕು ಎಂಬ ವಿಪರೀತವಾದಗಳ ಸಂತೆ ನೆರೆದಿರುತ್ತದೆ. ಈ ಸಾಮ್ರಾಜ್ಯಶಾಹಿ ಗುಣಗಳು ಸಾಮ್ರಾಜ್ಯವನ್ನು ವಿಸ್ತರಿಸಬೇಕೆಂಬ ಮನೋಭಾವದೊಟ್ಟಿಗೆ ಕ್ರೌರ್ಯ, ರಕ್ತಪಾತದ ಚರಿತ್ರೆಯನ್ನೂ ವಾದ ವಿಸ್ತರಣೆಯ ಹಂಬಲವನ್ನೂ ಹೊದ್ದುಕೊಂಡಿರುತ್ತವೆ.
ಪುರಾತನದಿಂದಲೂ ಈ ಸಾಮ್ರಾಜ್ಯಶಾಹಿ ಮನೋಭಾವ ಹಲವು ಮಜಲುಗಳಿಂದ ಮುನ್ನಡೆದು ಬಂದಿರುವುದು ವಿಶ್ವ ಇತಿಹಾಸದ ಒಂದು ಅವಿಭಾಜ್ಯ ಅಂಗವಾಗಿದೆ. ಪ್ರಾಚೀನ ಯುರೋಪಿನಲ್ಲಿ ಅದು ಮತೀಯವಾದದೊಂದಿಗೇ ಆರಂಭವಾಗಿತ್ತು ಎಂಬ ಸಂಗತಿ ಇಂದು ಎಲ್ಲೂ ಕೇಳದ ಸಂಗತಿಯೇನಲ್ಲ. ಅಲ್ಲಿ ಚರ್ಚು ಬೇರೆ ಅಲ್ಲ. ಪ್ರಭುತ್ವ ಬೇರೆ ಅಲ್ಲ ಎಂಬುದು ಜಗತ್ತು ಕಂಡು ಕೇಳರಿಯದ ಅಜಾಗರೂಕತೆಗೆ ಕಾರಣವಾಗಿತ್ತು. ಏಕದೇವೋಪಾಸನೆಯ, ಸಂದೇಶವನ್ನು ಹೊತ್ತು ತಂದ ಪ್ರವಾದಿಯ ಪೀಳಿಗೆಯ ಸೆಮೆಟಿಕ್ ಮತಗಳು ನಡೆಸಿದ ದೌರ್ಜನ್ಯ ಇದೇ ಸಾಮ್ರಾಜ್ಯಶಾಹಿಯ ಮನೋಭಾವವನ್ನು ಹೊಂದಿದ್ದವುಗಳೇ. ಹೀಗೆ ಸಾಮ್ರಾಜ್ಯಶಾಹಿ ಧೋರಣೆಗಳು ಒಬ್ಬ ಅರಸ ಮತ್ತು ಒಂದು ಪ್ರದೇಶಕ್ಕೆ ಸೀಮಿತವೆಂದುಕೊಂಡವರಿಗೆ ಕ್ರಿಶ್ಚಿಯನ್ ಮತ್ತು ಇಸ್ಲಾಂ ಮತಗಳು ದಿಗ್ಭ್ರಮೆ ಹುಟ್ಟಿಸಿದವು. ತನ್ನದಲ್ಲದರ ಬಗ್ಗೆ ಅಸಹನೆ ಮತ್ತು ವಿನಾಕಾರಣ ದ್ವೇಷವನ್ನು ಹೊಂದಿದ ಅವು ಮುಂದೆ ಉಗ್ರ ಸ್ವರೂಪದಿಂದ, ನಾನಾ ಮುಖಗಳನ್ನು ಹೊತ್ತು ಜಗತ್ತಿನಾದ್ಯಂತ ನುಗ್ಗಲು ಅಣಿಯಾಗುತ್ತಿತ್ತು. ಭಾರತಕ್ಕೆ ಮಧ್ಯ ಏಷಿಯಾದ ದರೋಡೆಕೋರರಿಂದ ನುಗ್ಗಿದ ಇಸ್ಲಾಂ ಖಡ್ಗದ ಬಲದಿಂದಲೇ ನೆಲೆಯೂರಲು ಪ್ರಯತ್ನ ಪಟ್ಟಿತಾದರೂ ಇಲ್ಲಿನ ನಿರಂತರ ಪ್ರತಿಕ್ರಿಯೆಗಳಿಂದ ಅವು ಸಾಧ್ಯವಾಗಲಿಲ್ಲ. ಆದರೆ ಕ್ಷಣಿಕ ವಿಜಯದಿಂದ ಇಸ್ಲಾಂ ತನ್ನ ಉದ್ದೇಶವನ್ನು ಸಫಲಗೊಳಿಸುವ ಮಾರ್ಗವನ್ನು ಕಂಡುಕೊಂಡಿತು. ಹೀಗೆ ಘಜನಿ, ಘೋರಿಗಳು ಸೋತು ಪಲಾಯನ ಮಾಡಿದರೂ ಅವರ ಗುಲಾಮರಾಗಿದ್ದವರು, ಕೆಲಸದಾಳುಗಳು, ಕತ್ತಿಯ ಭಯಕ್ಕೆ ಮತಾಂತರಗೊಂಡವರು ಅರಬ್ ದೇಶದ ಪ್ರವಾದಿಯ ಸಂದೇಶವನ್ನು ನಂಬಿ ನಡೆಯಲಾರಂಭಿಸಿದರು. ಅನಂತರ ಕೂಡ ಇಸ್ಲಾಮಿನಿಂದ ರಕ್ತಪಾತದ ಚರಿತ್ರೆ ನಿರ್ಮಾಣವಾಯಿತು.
ಇನ್ನು ಶಾಂತಿಯ ಹೆಸರಲ್ಲಿ ಕ್ರಿಸ್ತನ ಸಂದೇಶವನ್ನು ಹೊತ್ತವರು ಬೇರೊಂದು ರೀತಿಯಲ್ಲಿ ಅನ್ಯಾನ್ಯ ದೇಶಗಳಿಗೆ ನುಗ್ಗಿ ಸಾಮ್ರಾಜ್ಯಶಾಹಿಯ ವಿಭಿನ್ನ ಆಯಾಮವೊಂದನ್ನು ಪರಿಚಯಿಸಿದರು. ಕೆಲವು ದೇಶಗಳಿಗೆ ಬರೆ ಬೈಬಲ್ ಕೊಂಡೊಯ್ದರು. ಮೂಲನಿವಾಸಿಗಳು ಬೈಬಲ್ ಓದುವ ಹೊತ್ತಿಗೆ ಅವರ ನೆಲ ದೂರ್ತ ಪಾದ್ರಿಗಳ ಸ್ವತ್ತಾಗಿತ್ತು. ಹೀಗೆ ಭಾರತದ ಕೇರಳದ ಕರಾವಳಿಗೆ ಥಾಮಸ್ ಎಂಬ ಮೆಣಸು ವ್ಯಾಪಾರಿ ಬಿಳಿಯಾದ ನಿಲುವಂಗಿ ತೊಟ್ಟು ಬಂದ. ಕೇರಳದಲ್ಲಿ ಹುಲುಸಾದ ಬೆಳೆ ತೆಗೆದು ಕ್ರಿಸ್ತನ ಮಾರಾಟ ನಡೆಯಿತು. ಮುಂದೆ ಆತನನ್ನು ಸಂತನಂತೆ ಬಿಂಬಿಸಲಾಯಿತು. ಏಸುವಿನ ನೇರ ಶಿಷ್ಯ ಎನ್ನಲಾಯಿತು. ಮೆಣಸು ವ್ಯಾಪಾರಿಯನ್ನೂ ಸಂತನನ್ನಾಗಿ ಕರೆಯುವ ಆವಶ್ಯಕತೆ ಈ ಮತಕ್ಕಿದೆ. ಸೇವೆಯ ನೆಪದಲ್ಲಿ ಹಲವಾರು ದೂರ್ತರನ್ನು ಸಂತರಂತೆ ಬಿಂಬಿಸಿದ ಜನರ ಪಟ್ಟಿಯೇ ಈ ಕ್ರಿಶ್ಚಿಯನ್ ಮತದಲ್ಲಿದೆ.
ಉತ್ತರದ ವನವಾಸಿ ಕ್ಷೇತ್ರಗಳಲ್ಲಿ ,ಪಟ್ಟಣದ ಕೊಳೆಗೇರಿಗಳಲ್ಲಿ, ಕೂಲಿಯಾಳುಗಳ ಕಾಲೋನಿಗಳಲ್ಲಿ ಎಲ್ಲೇಲ್ಲೂ ಸೇವೆಯ ಹೆಸರಲ್ಲಿ ಕ್ರಿಸ್ತನ ಮಾರಾಟ, ಹುಲುಸಾದ ಶಿಲುಬೆಯ ಬೆಳೆಯನ್ನು ಕ್ರೈಸ್ತರು ಬೆಳೆದರು. ಅದರೂ ಕ್ರೈಸ್ತ ಸಾಮ್ರಾಜ್ಯವಾದದ ಬಯಕೆ ಪೂರ್ಣವಾಗಲೇ ಇಲ್ಲ . ಏಕೆಂದರೆ ಹಿಂದು ಎಂಬ ಅಕ್ಷಯ ಪಾತ್ರೆ ಎಲ್ಲಾ ಮತೀಯ ಸಾಮ್ರಾಜ್ಯವಾದಕ್ಕೆ ಮೊದಲ ಅಡ್ಡಿಯಾಗಿದೆ. ಹಾಗಾಗಿ ಕ್ರಿಶ್ಚಿಯನ್ನರದು ಯಾವಾಗಲೂ ವಿಭಿನ್ನ ತಂತ್ರ, ನವ ನವೀನ ಮಾದರಿಯ ಕ್ರಿಸ್ತನ ಮಾರಾಟ. ಈ ಮಾರಾಟಕ್ಕೆ ಮೆಗಾ ಅಫರ್ ಗಳು. ಈ ಮೆಗಾ ಆಫರ್ ಮೂಲಕ ಕ್ರಿಸ್ತನ ಮಾರಾಟಗಾರರು ಇತ್ತೀಚೆಗೆ ಕಟ್ಟಿಕೊಂಡಿದ್ದೇ ಪ್ರಿಸನ್ ಮಿನಿಸ್ಟ್ರೀ ಇಂಡಿಯಾ ಎಂಬ ಎನ್.ಜಿ.ಓ ಒಂದನ್ನು.
ಕಾನ್ವೆಂಟ್‌ಗಳಾದವು, ಅಸ್ಪತ್ರೆಗಳಾದವು, ಕಾಡಾಯಿತು, ಸ್ಲಮ್ಮುಗಳಾಯಿತು, ಪ್ಲೇಗು- ಕುಷ್ಠ ರೋಗಗಳಾದವು. ಏಡ್ಸ್, ಕ್ಯಾನ್ಸರಿನ ಹೆಸರಲ್ಲೂ ಮಿಷನರಿಗಳು ಜನರನ್ನು ವಂಚಿಸಿದವು. ರೋಗಕ್ಕೆ ಪ್ರಾರ್ಥಿಸಲು ಹೇಳಿ ಕೊರಳಿಗೆ ಶಿಲುಭೆಯನ್ನು ನೇತು ಹಾಕಿಯೇಬಿಟ್ಟರು. ಮೂಲ ಧರ್ಮವನ್ನು ತೆಗಳುತ್ತಲೇ ಹಿಂದೂವಿನ ಶತ್ರುವನ್ನು ಹೆಚ್ಚಿಸಲಾರಂಭಿಸಿದರು. ಇದೀಗ ಕ್ರಿಸ್ತನ ಮಾರಾಟಕ್ಕೆ ಜೈಲನ್ನು ಆರಿಸಿಕೊಂಡಿದ್ದಾರೆ. ಹೀಗೆ ಜೈಲು ಹಕ್ಕಿಗಳನ್ನು ಮತಾಂತರ ಮಾಡಲೆಂದೇ ಇರುವ ಸಂಘಟನೆ ಈ ಪ್ರಿಸನ್ ಮಿನಿಸ್ಟ್ರಿಇಂಡಿಯಾ. ಹೆಸರು ಕೇಳಿದರೆ ಕೇಂದ್ರ ಸರಕಾರದ ಒಂದು ಇಲಾಖೆಯೆಂದೋ, ಸೋನಿಯಾ ಗಾಂಧಿಯೋ ಅಂಬಿಕಾ ಸೋನಿಯೋ, ಕಪಿಲ್ ಸಿಬಲನೋ ಉಸ್ತುವಾರಿ ವಹಿಸಿಕೊಂಡ ಕೇಂದ್ರ ಸಚಿವಾಲಯವೋ ಎನಿಸುವ ಈ ಅಪ್ಪಟ ಕ್ರೈಸ್ತ ಸಂಘಟನೆ. ಇದು ದೇಶದ ಬಹುದೊಡ್ಡ ಎನ್.ಜಿ.ಓ ಗಳಲ್ಲಿ ಒಂದು. ಕ್ರಿಸ್ತನ ಮಾರಾಟಕ್ಕೆ ಜೈಲಿನಷ್ಟು ಪ್ರಶಸ್ತವಾದ ಜಾಗ ಮತ್ತೊಂದಿಲ್ಲ ಎಂದು ಕಂಡುಕೊಂಡ ಸಂಘಟನೆ. ಭಾರತದ ಜೈಲುಗಳಾದ್ಯಂತ ಇದರ ಕಾರ್ಯ ಚಟುವಟಿಕೆ ವ್ಯಾಪಿಸಿದೆ. ಪ್ರತೀ ಜಿಲ್ಲಾ ಕಾರಾಗೃಹಗಳಲ್ಲಿ ಪ್ರಿಸನ್ ಮಿನಿಸ್ಟ್ರೀ ಇಂಡಿಯಾದ ಸಂನ್ಯಾಸಿನಿಯರು. ಪ್ರಾದಿಗಳು ಪ್ರವೇಶಿಸಿದ್ದಾರೆ. ಅವರ ಕುಟಿಲತೆಗೆ ಜೈಲಿನಷ್ಟು ಸುರಕ್ಷಿತ ಜಾಗ ಮತ್ತೊಂದಿಲ್ಲ. ಏಕೆಂದರೆ ಇವರ ಯಾವ ದೂರ್ತತೆಗಳೂ ಗೋಡೆಯಾಚೆಗೆ ಸುದ್ಧಿಯಾಗುವುದಿಲ್ಲ. ಜೈಲು ಅಧಿಕಾರಿಗಳನ್ನು ಮರುಳುಗೊಳಿಸಿದರೆ ಇನ್ನುಳಿದ ಕಾರ್ಯವೆಲ್ಲಾ ಸರಳ ಮತ್ತು ಸಲೀಸು. ಕೈದಿಗಳ ಮನಸ್ಸನ್ನು ದುರ್ಬಳಕೆ ಮಾಡಿಕೊಳ್ಳುವುದು, ಆಗಿಹೋದ ಅಪರಾಧದ ಬಗ್ಗೆ ತಿಳಿವಳಿಕೆ ನೀಡುವುದು, ತಪ್ಪು ಮತ್ತು ಪ್ರಾಯಶ್ಚಿತದ ಬಗ್ಗೆ ತಿಳಿಹೇಳುವುದು, ಉದ್ಯೋಗದ ಮಾರ್ಗದರ್ಶನ ಮಾಡುವುದು, ಹವ್ಯಾಸಗಳನ್ನು ಬೆಳೆಸುವುದರ ಮೂಲಕ ಜೈಲು ಹಕ್ಕಿಗಳಿಗೆ ಸ್ಥೈರ್ಯವನ್ನು ಬೆಳೆಸುವುದು ತಮ್ಮ ಕಾರ್ಯವೆಂದು ಪ್ರಿಸನ್ ಮಿನಿಸ್ಟ್ರಿ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಳ್ಳುತ್ತದೆ. ಕ್ರೈಸ್ತ ಸಂಘಟನೆಗಳೆಲ್ಲದರ ಪ್ರಣಾಳಿಕೆಗಳೆಲ್ಲವೂ ಭರ್ಜರಿಯಾಗಿಯೇ ಇರುತ್ತದೆ. ಆದರೆ ಮತಾಂತರದ ಕುಯಿಲು ಮತ್ತು ಹಿಂದೂ ವಿರೋಧದ ಕುಟಿಲತೆಯಲ್ಲಿ ಯಾವ ರಾಜಿಯನ್ನೂ ಅವು ಮಾಡಿಕೊಳ್ಳುವುದಿಲ್ಲ. ಲೋಕದಿಂದ ತಿರಸ್ಕೃತರಾಗಿ ಜೈಲುಪಾಲಾದವರಿಗೆ ಪ್ರೀತಿ ತೋರಿಸಿದರೆ ಕೈದಿಗಳು ಮರುಳಾಗುವರು ಎಂಬ ತಂತ್ರವನ್ನು ಅರಿಯದಷ್ಟು ಮುಠ್ಠಾಳರಲ್ಲ್ಲ ಈ ಪಿಸನ್ ಮಿನಿಸ್ಟ್ರಿ ಇಂಡಿಯಾದವರು. ಜೈಲಿನಲ್ಲಿ ಕೈದಿಗಳಿಗೆ ವಿದ್ಯಾಭ್ಯಾಸಕ್ಕೆ ಪ್ರೋತ್ರಾಹಿಸುವುದು, ಕ್ರೈಸ್ತ ಸಾಹಿತ್ಯವನ್ನು ಒದಗಿಸುವುದು ಇವರ ಕಾರ್ಯದ ಮೊದಲ ಹಂತ. ಕ್ರೈಸ್ತನ ಪ್ರಾರ್ಥನೆಯನ್ನು ಹೇಳಿಕೊಡುವುದು ಎರಡನೆಯ ಹಂತ. ಪಾಪಾಪದ ಲೋಕ ದಿಂದ ಮುಕ್ತಿಯನ್ನು ನೀಡುವುದು ಕೋನೆಯ ಹಂತ.
ಕಳೆದವಾರ ಈ ಪ್ರಿಸನ್ ಮಿನಿಸ್ಟ್ರಿ ಇಂಡಿಯಾದವರು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮಹಿಳಾ ದಿನಾಚರಣೆಯನ್ನು ಆಯೋಜಿಸಿದ್ದರು. ಸುಮಾರು ಹದಿನೈದಿಪ್ಪತ್ತು ಕ್ರೈಸ್ತ ಸಂನ್ಯಾಸಿನಿಯರು ಮತ್ತು ಇಬ್ಬರು ಪಾದ್ರಿಗಳು ಭಾಗವಹಿಸಿದ್ದರು . ಕೈದಿಗಳು ಕೈಗೆ ಕ್ಯಾಂಡಲನ್ನು ಕೋಟ್ಟು ಉರಿಸಿದ್ದರು, ಕ್ರೈಸ್ತ ಗೀತೆಗಳನ್ನು ಹಾಡಿಸಿದರು. ಜೈಲಿನಲ್ಲಿ ಅಧಿಕಾರಿಗಳ ಸಮ್ಮುಖದಲ್ಲೇ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದುದ್ದಕ್ಕೂ ಇಡೀ ಜೈಲೇ ಕ್ರೈಸ್ತರ ಕೊಡುಗೆಯೇನೋ ಎಂಬಂತೆ ಇಡೀ ಸಂಘಟನೆಯವರು ವರ್ತಿಸಿದರು. ಜೈಲು ಅಧಿಕಾರಿಗಳೇ ಹೊರಗಿನಿಂದ ಬಂದ ಅತಿಥಿಗಳಂತೆ ಕಂಡರು. ಮಹಿಳಾ ಕೈದಿಗಳಿಗೆ ಕ್ರಿಶ್ಚಿಯನ್ನರು ಕಲಿಸಿದ ನೃತ್ಯ, ಹಾಡು, ನಾಟಕಗಳು ಪ್ರದರ್ಶಿತವಾದವು. ಗೆದ್ದವರಿಗೆ ಪ್ರಿಸನ್ ಮಿನಿಸ್ಟ್ರೀ ಇಂಡಿಯಾ ಬಹುಮಾನವನ್ನೂ ಕೊಟ್ಟರು. ಕ್ರೈಸ್ತರೇ ಕರೆಸಿದ ಮೂವರು ಮಹಿಳಾ ಅತಿಥಿಗಳು ಉಡುಗೋರೆಗಳನ್ನು ನೀಡಿದರು. ಒಬ್ಬರಿಂದ ಮಹಿಳಾ ಕೈದಿಗಳಿಗೆ ಬಟ್ಟೆಯನ್ನು ದೇಣಿಗೆ ಪಡೆದಿದ್ದರು. ವಿಚಿತ್ರವೆಂದರೆ ಅವರೆಲ್ಲರೂ ಹಿಂದೂಗಳೇ ಆಗಿದ್ದರು. ಕಾರ್ಯಕ್ರಮದ ಅಂತ್ಯದಲ್ಲಿ ಕ್ರೈಸ್ತ ಸಂನ್ಯಾಸಿನಿಯರು ಕೈದಿಗಳನ್ನು ಅಪ್ಪಿಕೊಂಡರು, ಮುತ್ತಿಕ್ಕಿದರು, ದೇವರು ಒಳ್ಳೆಯದು ಮಾಡುತ್ತಾನೆ ಎಂದರು. ಏಕಾಂತದಿಂದ ಬಳಲುತಿದ್ದ ಮಹಿಳಾ ಕೈದಿಗಳನೇಕರು ಭಾವುಕರಾಗಿ ಸಿಸ್ಟರ್ ಸಿಸ್ಟರ್ ಎನ್ನುತ್ತಾ ಸಂನ್ಯಾಸಿನಿಯರೊಂದಿಗೆ ಬಿಕ್ಕಿದರು. ಹೀಗೆ ಬಿಕ್ಕುತ್ತಾ , ತಬ್ಬುತ್ತಾ ಇರುವ ಹೊತ್ತಿನಲ್ಲೇ ಏಸು ಕ್ರೈಸ್ತ ಮಾರಾಟವಾಗಿ ಹೋಗಿದ್ದ.
ಅನಂತರ ಕಂಡು ಬಂದ ಮತ್ತೊಂದು ಸಂಗತಿಯೆಂದರೆ ಜೈಲಿನಿಂದ ಶಿಕ್ಷೆ ಮುಗಿಸಿ ಹೊರಹೋಗುವ ಕೈದಿಗಳಿಗಾಗಿ ಈ ಸಂಘಟನೆ ಜೀವೋದಯ ಆಶ್ರಮ ಎಂಬ ಅಶ್ರಮವನ್ನು ಕೂಡ ಸ್ಥಾಪಿಸಿದೆ. ಈಗಾಗಲೇ ಆ ಆಶ್ರಮದಲ್ಲಿ ೫೧೧ ಮಹಿಳೆಯರನ್ನು ಸೇರಿಸಿಕೊಳ್ಳಲಾಗಿದೆ. ಅವರ ಪುನರ್ವಸತಿ, ಮದುವೆ ಮೊದಲಾದವನ್ನು ಆಶ್ರಮವೇ ನೋಡಿಕೊಳ್ಳುತ್ತದಂತೆ. ಮಾನವ ದೌರ್ಬಲ್ಯವನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳುವ ಚಾಳಿಯನ್ನು ಕ್ರೈಸ್ತರು ಸತತವಾಗಿ ಅನುಸರಿಸುತ್ತಾ ಬರುತ್ತಿರುವುದು ಗೊತ್ತಿರುವ ಸಂಗತಿಯೇ. ಶತಮಾನದಿಂದ ಅವರ ಸೇವೆಯ ನೆಪದಲ್ಲಿ ಮತಾಂತರ, ತಣ್ಣಗಿನ ಕ್ರೌರ್ಯಗಳಿಗೆ ಅವರು ಜೈಲಿನಲ್ಲೇ ಇರಬೇಕಾದುದು ಧರ್ಮ. ಆದರೆ ಜೈಲೊಳಗೆ ನುಗ್ಗಿ ಬೆಳೆ ತೆಗೆಯುವ ಚಾಣಾಕ್ಷರಾಗಿದ್ದಾರೆ.
ಸಾಮ್ರಾಜ್ಯಶಾಹಿಯ ಅದಮ್ಯ ಹಂಬಲ ಶಾಲೆ, ಆಸ್ಪತ್ರೆ, ಕಾನ್ವೆಂಟ್ ಗಳಿಗಷ್ಟೇ ಮುಗಿಯುವುದಿಲ್ಲ. ಜೈಲೊಳಗೂ ವ್ಯಾಪಿಸುತ್ತದೆ. ಮುಂದೆ ಇನ್ನೆಲ್ಲಿಗೋ...

No comments:
Post a Comment