" ಯತ್ರ ನಾರ್ಯಸ್ತು ಪೂಜ್ಯತೇ ತತ್ರ ದೇವತಾ" ಎಂದು ಭಾರತೀಯ ವೇದ ಪುರಾಣಗಳು ಹೇಳಿವೆ. ಅಂದರೆ ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರೆ. " ಯತ್ರ ನಾರ್ಯಸ್ತು .." ಅನ್ನೇ ವಿಶ್ಲೇಷಿಸುತ್ತಾ ಸಮಸ್ತ ಸ್ತ್ರೀಸಂಕುಲವನ್ನೇ ವಿಶ್ಲೇಷಿಸಬಹುದು. ಅದು ಹಿಂದೂ ಚಿಂತನೆ ಸ್ತ್ರೀಯರಿಗೆ ಕೊಟ್ಟ ಸ್ಥಾನ. ಅಂದರೆ ಸ್ತ್ರೀ ನಿಸಂಶಯವಾಗಿ ಪೂಜಾರ್ಹಳು. ಸೃಷ್ಟಿಯ ಹುಟ್ಟೇ ಸ್ತ್ರೀ ಎಂಬ ಶಕ್ತಿಯಿಂದಾಯಿತು ಎಂಬ ನಂಬಿಕೆ ಹಿಂದುಗಳದ್ದು. ಹಾಗಾಗಿ ವೊನ್ನೆ ಮಂಗಳೂರಿನ ಪಡೀಲಿನಲ್ಲಿ ಹೊಡೆದಿದ್ದು ಸಮ್ಮತವಲ್ಲ ಎಂದೇ ಎಂಥವರಿಗೂ ಅನಿಸುತ್ತದೆ.
ಯತ್ರ ನಾರ್ಯಸ್ತು ನೆಲೆಯಲ್ಲೇ ಗಮನಿಸಿದರೆ ಅಲ್ಲಿ ಸ್ತ್ರೀಯರಿಗೆ ಹೊಡೆಯಲಿಲ್ಲ , ಪೂಜಿಸಲಾಗಿತ್ತು ಎಂದೇ ಇಟ್ಟುಕೊಳ್ಳೋಣ. ಅಂಥ ಜಾಗದಲ್ಲಿ ದೇವರು ನೆಲೆಸುತ್ತಿದ್ದನೇ? ಪೂಜಾರ್ಹವಲ್ಲದ ಜಾಗದಲ್ಲಿದ್ದ ಸ್ತ್ರೀಯರನ್ನು ಪೂಜಿಸಬೇಕೇ? ನೋಡಿದವರಿಗೆ ಭೋಗಾರ್ಹ ಎಂದು ಕಂಡುಬಂದ ಸ್ತ್ರೀಯನ್ನೂ ಪೂಜಿಸಬೇಕೇ? ಎಂಬ ಪ್ರಶ್ನೆಗಳು ತತ್ತ್ವ ಜಿಜ್ನಾಸೆಗೆ ಸಂಬಂಧಿಸಿದವುಗಳು. ಹಾಗಾಗಿ ಸುಲಭವಾಗಿ ಅವು ಅರ್ಥವಾಗವು. ಉತ್ತರವೂ ಹೊಳೆಯಲಾರದು. ಆದ್ದರಿಂದ ಅಂಥ ಸ್ಥಿತಿಯಲ್ಲಿ ತತ್ ಕ್ಷಣದ ಸ್ಪಂದನವೇ ಪ್ರಧಾನವಾಗಿಬಿಡುತ್ತವೆ. ಮೊನ್ನೆ ನಡೆಯಬಾರದ್ದು ನಡೆದಿದ್ದು ಹಾಗೆಯೇ. ಎಲ್ಲರೂ ಹೊಡೆದಿದ್ದು ತಪ್ಪು ಎಂದಿದ್ದಾರೆ. ಹಾಗಾದರೆ ಈ ಸ್ಥಿತಿಯಲ್ಲಿ ಮತ್ತೇನು ಮಾಡಬಹುದಿತ್ತು ಎನ್ನುವುದರಲ್ಲೇ ಸಮಸ್ಯೆಯ ಎಲ್ಲಾ ಬೇರುಗಳು ನಿಂತಿವೆ. ಪುರುಷನ ತಪ್ಪನ್ನು ನೇರಾನೇರ ಖಂಡಿಸಬಹುದು. ದಂಡಿಸಲೂ ಬಹುದು. ಆದರೆ ಪುರುಷ ಸಮಾನ ಸ್ತ್ರೀಯು ತಪ್ಪನ್ನೇ ಮಾಡಲಾರಳು . ಮಾಡಿದರೂ ಆಕೆ ದಂಡನೆಯಿಂದ ಹೊರತಾದವಳು ಎನ್ನುವುದಾದರೆ ಮಾತ್ರ ಹೋಮ್ ಸ್ಟೇ ಪ್ರಕರಣವನ್ನು ಮಾಧ್ಯಮಗಳ ದಿಕ್ಕಿನಲ್ಲಿ ವಿಶ್ಲೇಷಿಸಬಹುದು.
ಆದರೆ ಸತ್ಯಕ್ಕೆ ಮಾಧ್ಯಮಗಳೇ ಅಂತಿಮ ಪ್ರಮಾಣಗಳಲ್ಲವಲ್ಲ.
ಕೆಲವು ಘಟನೆಗಳನ್ನು ಸಮಾಜ ನೋಡುವ ದೃಷ್ಟಿಯೇ ವಿಚಿತ್ರ. ಅಥವಾ ಸಮಾಜ ಆ ಮಾನಸಿಕತೆಗೆ ಒಗ್ಗಿಕೊಂಡಿರುವುದೇ ಹಾಗೆಯೋ ಗೊತ್ತಿಲ್ಲ. ಅದೇ ಪಕ್ಕದ ಮನೆಯಲ್ಲಿ ಶಿವಾಜಿ ಹುಟ್ಟಬೇಕೆಂಬ ಮಾನಸಿಕತೆ. ಹೋಮ್ ಸ್ಟೇಯಲ್ಲಿ ವಿಚಿತ್ರ ಉಡುಪಿನಲ್ಲಿದ್ದ ಹೆಣ್ಣುಮಕ್ಕಳು ನಮ್ಮ ಮನೆಯವರಲ್ಲವಲ್ಲ ಎಂಬ ಮಾನಸಿಕತೆ. ಯಾವ ಅಣ್ಣ ತಮ್ಮಂದಿರು, ಅಪ್ಪ ಅಮ್ಮಂದಿರು, ಗಂಡಂದಿರು ಹೋಮ್ ಸ್ಟೇ ಎಂಬ ಮಲಗುವ ಮನೆಯಲ್ಲಿ ತಮ್ಮ ಮನೆಯ ಹೆಣ್ಣುಗಳನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಎಲ್ಲರೂ ತಮ್ಮ ಮನೆಯ ಹೆಣ್ಣುಗಳು ಆ ಸ್ಥಿತಿಯಲ್ಲಿದ್ದಿದ್ದರೆ ಎರಡು ಭಾರಿಸುವವರೇ. ಅಲ್ಲಿ ನೈತಿಕತೆ, ಮೌಲ್ಯಗಳು ಲೆಕ್ಕಕ್ಕೆ ಬರಲಾರವು. ಆದರೆ ಅದೇ ಘಟನೆಗೆ , ಅದೇ ಕಾರಣಕ್ಕೆ ಮತ್ತೊಬ್ಬರು ಭಾರಿಸುವುದನ್ನು ಒಪ್ಪಲಾರರು. ಮೌಲ್ಯಗಳು ಯಾವತ್ತೂ ಕವಲು ದಾರಿಯಲ್ಲಿ ಸಾಗುತ್ತವೆ ಎನ್ನುವುದು ಇದಕ್ಕೇ ಏನೋ.
ಹಿಂದಿನ ಪಬ್ ದಾಳಿಯ ಘಟನೆಯಿರಬಹುದು, ಇಂದಿನ ಹೋಮ್ ಸ್ಟೇ ಘಟನೆಯಿರಬಹುದು. ಮಂಗಳೂರಿನಂತಹ ಬುದ್ಧಿವಂತರ ನೆಲದಲ್ಲಿ ಒಂದು ಪ್ರಶ್ನೆ ಸದಾ ಕಾಡುತ್ತದೆ. ನಿರಂತರ ರಾಜಕೀಯ ಮೇಲಾಟಗಳು, ಚಳವಳಿಗಳನ್ನು ಹುಟ್ಟುಹಾಕಿದ ಈ ನೆಲದಲ್ಲಿ ಭಾಷಣಕ್ಕೆ ಬಂದು ಹೋಗುವವರಿಗೇನೂ ಕಡಿಮೆಯಿಲ್ಲ. ಮಾನವ ಹಕ್ಕುಗಳು, ಮತೀಯ ನಾಯಕರು, ವಿದೇಶಿ ಪ್ರತಿನಿಧಿಗಳು, ಸಮಾಜದ ನೀತಿ ನಿರೂಪಣೆಯ ಗುತ್ತಿಗೆಯನ್ನು ತಾವೇ ಸ್ವತಃ ಹಿಡಿದಿದ್ದೇವೆ ಎಂಬವರೆಲ್ಲರೂ ಇಲ್ಲಿಗೆ ಬಂದು ತೀವ್ರವಾಗಿ ಮಾತನಾಡಿ ಕರೆನೀಡಿ, ಖಂಡನೆ ಮಾಡಿ ಹೋಗುತ್ತಾರೆ. ಆ ಕರೆ , ಖಂಡನೆ ಗಳಲ್ಲಿ " ಜಾಗೃತ ಸಮಾಜ ನಿರ್ಮಾಣವಾಗಬೇಕು" ಎಂದೂ , "ಮೌಲ್ಯಯುತ ಸಮಾಜ ಕಟ್ಟಬೇಕು"ಎಂದೂ " ಗಾಂಧಿ ಕಂಡ ಕನಸ್ಸುಗಳು ಇಲ್ಲಿ ಸಾಕಾರವಾಗಬೇಕು" ಎಂದೂ ಭರಪೂರ ಉಲ್ಲೇಖಗಳಿರುತ್ತವೆ. ಆದರೆ ಮೊನ್ನೆಯ ಘಟನೆಯ ತರುವಾಯ " ಜಾಗೃತ ಸಮಾಜ ಎಂದರೇನು ?" ಎಂಬ ಬಗ್ಗೆಯೇ ಸಂಶಯವನ್ನು ಹುಟ್ಟಿಸುತ್ತದೆ. ಸಮಾಜದಲ್ಲಿ ಅನೈತಿಕತೆ, ಅನಾಚಾರಗಳು ನಡೆಯಬಾರದು, ನಡೆದರೆ ಅಂಥದ್ದನ್ನು ತಡೆಯಬೇಕು ಎಂದಾದರೆ ಹೋಮ್ ಸ್ಟೇಯಲ್ಲಿ ನಡೆದಿದ್ದನ್ನು ನಡೆದರೆ ತಪ್ಪೇನು? ಕುಸಿಯುತ್ತಿರುವ ಮೌಲ್ಯಗಳು ಕಣ್ಣಮುಂದಿರುವಾಗ ಕೈಕಟ್ಟಿ ಕುಳಿತಿರುವುದು ಜಾಗೃತ ಸಮಾಜದ ಲಕ್ಷಣವೇ? ಹಿಂದೂ ಸಂಸ್ಕಾರ ಹೊಂದಿರುವವರಿಗಂತೂ ನಾಟಕೀಯ ಬದುಕಿನಲ್ಲಿ ತರಬೆತಿಯಿರುವುದಿಲ್ಲ. ಕೆಟ್ಟದ್ದು ಎಲ್ಲಿದ್ದರೂ , ಎಲ್ಲಿ ನಡೆದರೂ ಅದನ್ನು ತಡೆಯಬೇಕು. ಒಳ್ಳೆಯದು ಎಲ್ಲೆಲ್ಲಿಂದಲಾದರೂ ಇಲ್ಲಿಗೆ ಬರಬೇಕು ಎನ್ನುವ ಹಿಂದೂ ಸಂಸ್ಕೃತಿ ಕೆಟ್ಟದ್ದನ್ನು ತಡೆಯದಿರಲು ಸಾಧ್ಯವೇ ಇಲ್ಲ.
ಹದಿಹರೆಯದವರ ಪಾನಗೋಷ್ಠಿ, ಅರೆಬೆತ್ತಲೆ ವಸ್ತ್ರ ಧರಿಸಿ ಸ್ತ್ರೀಪುರುಷರು ಸಾಮಿಪ್ಯದಿಂದಿರುವುದು ರೇವ್ ಪಾರ್ಟಿಯೇ ಆಗಲಿ, ಬರ್ತ್ ಡೇ ಪಾರ್ಟಿಯೇ ಆಗಲಿ ಒಂದು ಹೊತ್ತು ದೀಪ ಹಚ್ಚುವ ಯಾವ ಮನೆಯವನಿಗೇ ಆಗಲಿ ಸರಿ ಎಂದು ಕಾಣಲಾರದು. ದೈವ-ಭೂತದೆದುರು ಭಯ ಭಕ್ತಿಯಿಂದ ಕೈಮುಗಿದು ನಿಲ್ಲವ ಸಂಸ್ಕೃತಿಯ ಕರಾವಳಿಗನಿಗಂತೂ ಅದು ಸರಿ ಎಂದು ಕಾಣುವುದೇ ಇಲ್ಲ.
ಅಂಥ ಮಂಗಳೂರು ಇಂದು ತನ್ನ ಸಂಸ್ಕೃತಿಯನ್ನು ಬಲಿಕೊಡಲಾರೆ ಎಂದಾಗ, ತನ್ನ ನೆಲವನ್ನು ಅಪವಿತ್ರಗೊಳಿಸಲಾರೆ ಎಂದಾಗ, ಸೊಗಡನ್ನು ಕಳೆದುಕೊಳ್ಳಲಾರೆ ಎಂದಾಗ ರಾಷ್ಟ್ರ ಮಟ್ಟದಲ್ಲಿ ಸುದ್ಧಿಯಾಗಿತ್ತದೆ. ಮಂಗಳೂರಿನಲ್ಲಿ ಎಲ್ಲಾ ಅನಿಷ್ಠಗಳು ಕಂಡುಬರಲಾರಂಭಿಸಿದ್ದು ಈಗ್ಗೆ ಒಂದೆರಡು ದಶಕಗಳ ಅನಂತರ. ಖ್ಯಾತ ಶೈಕ್ಷಣಿಕ ಕೇಂದ್ರವಾಗಿ ಬೆಳೆದುನಿಂತ ಮಂಗಳೂರಿಗೆ ವಿದೇಶ ಮತ್ತು ಹೊರ ರಾಜ್ಯಗಳಿಂದ ಶ್ರೀಮಂತ ವಿದ್ಯಾರ್ಥಿಗಳು ಬರಲಾರಂಭಿಸಿದರು. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಶ್ರೀಮಂತರ ಮಕ್ಕಳು ದಾಖಲಾದರು. ಶ್ರೀಮಂತಿಕೆಯ ಶೋಕಿಗೆ ತಕ್ಕಂತೆ ನಗರ ಬೆಳೆಯಲಾರಂಭಿಸಿತು. ಜೊತೆಗೆ ಮಾಧಕ ವಸ್ತುಗಳ ಜಾಲವೂ ಪಬ್ ಸಂಸ್ಕೃತಿಯೂ ಬೆಳೆಯುತ್ತಾ ಬಂತು. ಹೀಗೆ ಅನೈತಿಕ ಚಟುವಟಿಕೆಗಳು ಒಂದೊಂದಾಗಿ ಕಾಣಿಸಿಕೊಳ್ಳಲಾರಂಭಿಸಿದವು. ಒಂದೆಡೆ ಇಷ್ಟೆಲ್ಲಾ ನಡೆಯುತ್ತಿರುವಾಗಲೇ ಜಾಗೃತ ಸಮಾಜವೊಂದು ಸಮುದ್ರ ಪಾಲಾಗಿರಲಿಲ್ಲ. ಹಾಗಾಗಿ ದೇವ- ದಾನವ ಸಂಘರ್ಷದಂತೆ ಹಲವು ಹೋರಾಟಗಳು ಆಗಾಗ್ಗೆ ನಡೆದವು. ಅಂಥ ಹೋರಾಟಗಳಿಗೆ ಅನೈತಿಕತೆಯ ಸಮರ್ಥಕರು "ತಾಲೀಬಾನೀಕರಣ"ಎಂಬ ಹೆಸರನ್ನಿಟ್ಟರು. ನಿಜದ ತಾಲೀಬಾನಿಗಳ ಉಪಟಳವನ್ನು ಮರೆಮಾಚಲು ಇವರಿಗೆ ಹಿಂದುಗಳನ್ನು ತಾಲೀಬಾನಿಗಳೆಂದು ಕರೆಯಬೇಕಾಗಿದ್ದ ಅನಿವಾರ್ಯತೆಯೂ ಇತ್ತು. ಹೋಮ್ ಸ್ಟೇಯ ಘಟನೆ ಅದಕ್ಕೊಂದು ಉದಾಹರಣೆಯೇ ಹೊರತು ಅದೇನೂ ಮೊದಲಲ್ಲ.
ಕಥೆ ಇಷ್ಟೆಲ್ಲಾ ಇರುವಾದ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಬೇಕೆಂಬ ವ್ಯವಧಾನ, ಮೂಲ ಪ್ರಜ್ನೆ ಮಾಧ್ಯಮಗಳಿಗೆ ಮತ್ತು ಬುದ್ಧಿಜೀವಿ ವರ್ಗಕ್ಕೆ ಬರದೇ ಹೋದುದು ವಿಪರ್ಯಾಸ. ಗೆಳೆಯರೆಲ್ಲರೂ ಕೂಡಿ ಪ್ರವಾಸ ಹೋಗುವುದಕ್ಕೂ ಕೋಣೆಯೊಳಗೆ ಕೂತು ಕುಡಿಯುವುದಕ್ಕೂ ವ್ಯತ್ಯಾಸವಿಲ್ಲವೇನು? ಎಲ್ಲವೂ ಬಹಿರಂಗವಾಗುವಂತಹ ಬಟ್ಟೆಯನ್ನು ತೊಟ್ಟು " ನಮ್ಮಲ್ಲಿ ಅಶ್ಲೀಲತೆಯ ಭಾವನೆಗಳಿಲ್ಲ" ಎನ್ನುವುದೂ ಒಂದೇ ಈಚಲು ಮರದಡಿಯಲ್ಲಿ ಕೂತು " ಮಜ್ಜಿಗೆ ಮಾತ್ರ ಕುಡಿದೆ" ಎನ್ನುವುದೂ ಒಂದೇ ಅಲ್ಲವೇ? ದಾಳಿ ಮಾಡಲು ಇವರೆಲ್ಲಾ ಯಾರು ಎಂಬ ಪ್ರಶ್ನೆ ಬಾಣದಂತೆ ತೂರಿ ಬರುತ್ತಿದೆ. ಜಾಗೃತ ಸಮಾಜ ದಾಳಿ ಮಾಡದೆ ಇನ್ನೇನು ಮಾಡಬೇಕು? ದಾಳಿ ಮಾಡುವ ಜನರು ನಿದ್ರಿಸುತ್ತಿದ್ದರೆ ಮತ್ತೇನು ಮಾಡಬೇಕು? ಅಸಲು ಈ ಹೋಮ್ ಸ್ಟೇ ಅನಧಿಕೃತ ಎಂದು ತಿಳಿದುಬಂದಿದೆ. ರಾಜ್ಯಾದ್ಯಂತ ಹೋಮ್ ಸ್ಟೇ ಗಳಿಗೆಂದೇ ರಾಜ್ಯ ಪ್ರವಾಸೋದ್ಯಮ ಇಲಾಖೆ ಕೆಲವು ನೀತಿ ನಿರೂಪಣೆಗಳನ್ನು ಮಾಡಿದೆ. ಈ ಹೋಮ್ ಸ್ಟೇ ಆ ನೀತಿನಿರೂಪಣೆಗಳಿಂದ ನುಣುಚಿಕೊಂಡುದುದಾಗಿದೆ. ಕಾನೂನು ಪ್ರಕಾರ ಅಂಥ ಅನಧಿಕೃತ ಹೋಮ್ ಸ್ಟೇಗಳಲ್ಲಿ ನಡೆಯುವ ಚಟುವಟಿಕೆಗಳು ಅನೈತಿಕ ಎನಿಸಿಕೊಳ್ಳುತ್ತವೆ. ಅಲ್ಲದೆ ದಂಪತಿಗಳಲ್ಲದ ಹದಿಹರೆಯದವರು ರೂಮು ಹಿಡಿಯುವುದು ಕೂಡಾ ಅನೈತಿಕ. ಕಳೆದ ಎಷ್ಟೋ ತಿಂಗಳಿಂದ ಇಂಥ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದರೂ ದಾಳಿ ಮಾಡುವವರು ಮಾಡಲಿಲ್ಲವೇಕೆ? ಹಾಗಾದರೆ ಅವರೂ ಅನೈತಿಕವನ್ನು ಪೋಷಿಸಿದರು ಎಂದು ಅರ್ಥವಲ್ಲವೇ? ಮಂಗಳೂರಿನಲ್ಲಿ ಇನ್ನೂ ಅರುವತ್ತಕ್ಕೂ ಹೆಚ್ಚಿನ ಹೋಮ್ ಸ್ಟೇಗಳಿವೆ. ಅವುಗಳಲ್ಲಿ ಬಹುತೇಕ ನೊಂದಾಯಿತವಲ್ಲದವೇ. ಈ ಮಾಫಿಯಾ ಎಷ್ಟೊಂದು ವ್ಯಾಪಕವಾಗಿದೆಯೆಂದರೆ ರಾಜ್ಯದ ಸಾವಿರಾರು ನೊಂದಾಯಿತ ಹೋಮ್ ಸ್ಟೇಗಳಲ್ಲಿ ಅಕ್ರಮ ಮದ್ಯ, ವೈಶ್ಯಾವಾಟಿಕೆಗಳು ಭರದಿಂದ ನಡೆಯುತ್ತಿರುವ ಸುದ್ಧಿಗಳು ಕೇಳಿಬರುತ್ತವೆ. ಕೊಡಗು ಜಿಲ್ಲೆಯೊಂದರಲ್ಲೇ ಸುಮಾರು ಎರಡು ಸಾವಿರ ಅನಧಿಕೃತ ಹೋಮ್ ಸ್ಟೇ ಗಳಿವೆ. ಆದರೆ ಕಾನೂನು ಬದ್ದವಾಗಿ ಇರುವವು ಕೇವಲ ೧೬೧. ಅದರ ಬಗೆ ಯಾಕೆ ಖಾಕಿಯ ಖದರಿಲ್ಲ? ಹಾಗಾದರೆ ಪರಿಸ್ಥಿತಿಯ ಭೀಕರತೆ ಎಷ್ಟಿರಬಹುದು? ಕಾನೂನಿನ ಚೌಕಟ್ಟಿನಿಂದ ನುಸುಳುವ ಎಲ್ಲಾ ಕಾರ್ಯಗಳು ಅಕ್ರಮ ಎಂದಾಗುವಾಗ ಅಂಥ ಹೋಮ್ ಸ್ಟೇ ನಲ್ಲಿ ನಡೆಯುವುದು ಸಕ್ರಮ ಹೇಗಾಗುತ್ತದೆ?
ಆ ಪಾರ್ಟಿಯಲ್ಲಿ ಕೇವಲ ಬೀರುಗಳು ಮಾತ್ರ ಸಿಕ್ಕವಂತೆ. ಬೀರು ಅಮಲು ಪದಾರ್ಥವಲ್ಲದ ಕಾರಣ ಪಾರ್ಟಿಯಿಂದ ತೊಂದರೆ ಏನಿಲ್ಲವಂತೆ. ಆದರೆ ಬೀರಿನಲ್ಲಿರುವ ಆಲ್ಕೋಹಾಲಿಕ್ ಅಂಶಗಳ ಪ್ರಮಾಣ ೪ ರಿಂದ ೮ ಶೇಕಡಾ! ಇಷ್ಟು ಅಮಲು ಮತ್ತೇನೋ ಒಂದರ ಘಮಲು ಉಂಟುಮಾಡುವುದಕ್ಕೆ ಸಾಕಾಗಬಲ್ಲದು ಎಂದು ವೈದ್ಯಕೀಯ ಹೇಳುತ್ತದೆ. " ಅಲ್ಲಿ ಕಾಂಡೋಂ ಸಿಗಲಿಲ್ಲವಲ್ಲ " ಎನ್ನುವುದು ಮತ್ತೊಂದು ಹೆಗಲು ಮುಟ್ಟಿ ನೋಡಿಕೊಳ್ಳುವ ರೀತಿಯೇ ಸರಿ. ಏಕೆಂದರೆ ದಾಳಿ ನಡೆಸಿದವರಾರೂ ಅಲ್ಲಿ ಕಾಂಡೋಂ ನ ಸಂಗತಿಯನ್ನು ಪ್ರಸ್ಥಾಪಿಸಿರಲಿಲ್ಲ. ಆದರೂ ಟಿ.ವಿ ಗಳಲ್ಲಿ ಕಾಂಡೋಂ ವಿಷಯ ಚರ್ಚೆಯಾಗುತ್ತಿತ್ತು. ಸ್ತ್ರೀವಾದದ ಮುಖವಾಡ ಹೊತ್ತವರು ಇಂಥ ಅನಗತ್ಯ ಸಂಗತಿಗಳನ್ನು ಉಲ್ಲೇಖಿಸುವ ಉಲ್ಲೇಖವೇನು? ಒಂದು ವೇಳೆ ಕಾಂಡೋಂ ಅಲ್ಲಿ ಸಿಕ್ಕಿದ್ದರೂ ಕೂಡಾ ಅದು ಅನೈತಿಕ ಲೈಂಗಿಕತೆಯನ್ನು ನೈತಿಕ ಮಾಡುವ ಶಕ್ತಿಯನ್ನೇನೂ ಹೊದಿರುತ್ತಿರಲಿಲ್ಲ.
ಆದರೂ ಟಿವಿಯಲ್ಲಿ ಎಲ್ಲರೂ ಸರದಿಯಂತೆ ಬಂದುಹೋದರು. ಮಹಿಳಾವಾದಿಗಳು ಮದ್ದೂರು ಘಟನೆಯನ್ನು ಮರೆತು ಮೇಕಪ್ ಮಾಡಿಕೊಂಡು ಬಯ್ಯಲು ಬಂದರು. ತಾವೇ ತೀರ್ಪು ಕೊಟ್ಟರು. ಕಾಂಗ್ರೆಸಿನವರಂತೂ ಬಿಜೆಪಿಯ ಮೇಲಿನ ದ್ವೇಷಕ್ಕೆ ಸಮಸ್ತ ಹಿಂದೂ ಸಂಘಟನೆಗಳನ್ನೆಲ್ಲಾ ಜರೆದರು. ಬಬ್ಲಿ ಬಬ್ಲಿಯಾಗಿ ಮಾತಾಡಲು ಹೆಣಗಿ ತಮ್ಮ ಸ್ವಂತಿಕೆಯನ್ನೇ ಮರೆತುಹೋದಂತಿರುವ ಅನೇಕ ಆಂಕರ್‌ಗಳು ಮಹಾ ವ್ಯಕ್ತಿಗಳೆಂಬಂತೆ ಮುಖಭಾವ ಸೃಷ್ಟಿಸಿಕೊಂಡರು. ಘಟನೆಗೆ ಮತ್ತೊಂದು ಮುಖವೂ ಇದೆಯೆಂಬುದೇ ಇವರಿಗೆ ಗೊತ್ತಾಗಲಿಲ್ಲ. ಇವರಲ್ಲಿ ಬಹುತೇಕರಿಗೆ ಕಾಶ್ಮೀರ, ಅಸ್ಸಾಂಗಳು ಎಲ್ಲಿವೆಯೆಂಬುದೇ ಗೊತ್ತಿರಲಿಕ್ಕಿಲ್ಲ. ಇನ್ನು ಎಷ್ಟೋ ಸಾವಿರ ವರ್ಷಗಳ ಹಿಂದೂ ಸಂಸ್ಕೃತಿ ಹೇಗೆ ತಾನೇ ಗೊತ್ತಿರಲು ಸಾಧ್ಯ?
ದಾಳಿ ಮಾಡಿದವರು ಯಾರೇ ಇರಲಿ ಅದಕ್ಕೆ ಅವರು ಮಾತ್ರ ಕಾರಣರಲ್ಲ ಎಂಬುದು ಸುಸ್ಪಷ್ಟ. ಈ ನೆಪದಲ್ಲಿ ಹಿಂದೂ ಸಂಘಟನೆಗಳನ್ನು ತೆಗಳುವುದೇ ಘಟನೆಗೆ ಖಂಡನೆಯ ಮಾರ್ಗವಲ್ಲ. ಹಿಂದೂ ಜಾಗರಣ ವೇದಿಕೆಯಾಗಲೀ, ಭಜರಂಗದಳವಾಗಲೀ , ಇತರ ಯಾವುದೇ ಹಿಂದೂ ಸಂಘಟನೆಯಾಗಲೀ ಭ್ರೂಣ ಹತ್ಯೆ, ಹೆಣ್ಣು ಶಿಶು ಹತ್ಯೆ, ಹೆಮ್ಮಕ್ಕಳ ಮೇಲಿನ ಅತ್ಯಾಚಾರಗಳನ್ನೆಲ್ಲಾ ವಿರೋಧಿಸುತ್ತಾ, ಅದರ ವಿರುದ್ಧ ಟೊಂಕ ಕಟ್ಟಿ ನಿಂತಿರುವ ಸಂಘಟನೆ. ಅದು ಜಗತ್ತಿಗೆ ಹೆಚ್ಚು ಗೊತ್ತಿಲ್ಲದಿರುವುದು ಈ ಸಂಘಟನೆಗಳ ತಪ್ಪಲ್ಲ. ಅದನ್ನು ತಿಳಿದುಕೊಳ್ಳದಿರುವುದು ಬುದ್ಧಿಜೀವಿಗಳ ಸಮಸ್ಯೆ.
ಮಗಳಿಗೆ ಅರೆಬಟ್ಟೆ ತೊಡಲು ಹೇಳಿ, ಹುಡುಗರೊಂದಿಗೆ ಕುಡಿದು ಅಪರಾತ್ರಿಯಲ್ಲಿ ಮನೆಗೆ ಬಾರಮ್ಮಾ ಎನ್ನುವ ಅಪ್ಪ ಅಮ್ಮಂದಿರು ಯಾರಾದರೂ ಭಾರತದಲ್ಲಿರುವರೇ ಎಂಬುದೇ ಸದ್ಯ ಕಾಡುವ ಪ್ರಶ್ನೆಯಾಗಿದೆ.

No comments:
Post a Comment