ಹಾಗಾದರೆ ಜನರ ಒಡನಾಡಿ ಎಂದುಕೊಲ್ಳುವ ಎನ್ ಜಿ ಒ. ಗಳ ಅಸಲು ಸ್ವರೂಪವೇನು? ಸಮಾಜ ಸುಧಾರಣೆಯ ಹೆಸರಿನಲ್ಲಿ ಅವು ಮಾಡುತ್ತಿರುವುದೇನು? ಹಾಗಾದರೆ ಮತಾಂತರಕ್ಕಿರುವ ಹಲವು ತಂತ್ರಗಳಲ್ಲಿ ಎನ್ ಜಿ ಒ. ಕೂಡಾ ಒಂದು ತಂತ್ರವೇ? ಮತಾಂತರವಲ್ಲದಿದ್ದರೆ ಹೀಗೆ ಪರಿಸ್ಥಿತಿಯ ಲಾಭವನ್ನು ಪಡೆದುಕೊಳ್ಳುವುದು ಏಕೆ? ಅಲ್ಲಿ ಪಾದ್ರಿ, ನನ್, ನಿಲುವಂಗಿ, ಶಿಲುಭೆಗಳೇಕೆ? ಈ ಪ್ರಿಸನ್ ಮಿನಿಷ್ಟ್ರೀ ಆಫ್ ಇಂಡಿಯಾ ಎಂಬುದು ಇಂಥ ಕ್ರಿಶ್ಚಿಯನ್ ಎನ್ ಜಿ ಒ. ಗಳಿಗೆ ಒಂದು ಉದಾಹರಣೆಯೇ ಹೊರತು ಅಂಥದ್ದೇನೂ ಇಂದು ಅಪರೂಪವಲ್ಲ. ಎಲ್ಲೆಲ್ಲಿ ಮತಾಂತರ ಪ್ರತ್ಯಕ್ಷವಾಗಿ ನಡೆಯಲು ಸಾಧ್ಯವಿಲ್ಲವೋ, ಎಲ್ಲೆಲ್ಲಿ ಮಿಷನರಿಗಳಿಗೆ ನೇರ ಪ್ರವೇಶ ಪಡೆಯಲು ಸಾಧ್ಯವಿಲ್ಲವೋ ಅಲ್ಲೆಲ್ಲಾ ಅವು ಪ್ರವೇಶಿಸುವುದು ಎನ್ ಜಿ ಒ. ಎಂಬ ಮುಖವಾಡವನ್ನು ಹೊತ್ತುಕೊಂಡೇ. ಹೀಗೆ ಸಾವಿರಾರು ಎನ್ ಜಿ ಒ. ಗಳು ಭಾರತದ ದಲಿತ ಕೇರಿಗಳಿಗೆ ನುಗ್ಗಿವೆ. ಹೆಚ್‌ಐವಿ ಎಂದು ಕೂಗಿವೆ. ಲೈಂಗಿಕ ಕಾರ್ಯಕರ್ತೆಯರಿಗೆ ಆಪ್ತವಾಗಿವೆ. ಅಂಗವೈಕಲ್ಯವಿರುವ ಮಕ್ಕಳತ್ತ ಸಾಗಿವೆ. ವಿಚಿತ್ರ ಎಂದರೆ ಮಿಷನರಿ ಅಥವಾ ಮತೀಯ ಮುಖವನ್ನು ಹೊತ್ತಾಗ ನಡೆಯದ ಕೆಲಸ ಎನ್ ಜಿ ಒ. ಗಳಿಂದ ಸಾಧಿತವಾಗುತ್ತಿದೆ. ಎನ್ ಜಿ ಒ. ಗಳದ್ದು ಸಾಮಾಜಿಕ ಸುಧಾರಣೆಯ ಕೆಲಸ. ಆದರೆ ಈ ಎನ್ ಜಿ ಒ. ಗಳದ್ದು ಮಾತ್ರ ಮತಪರಿವರ್ತನೆಯ ಜೊತೆಗೆ ಇನ್ನಿತರ ಉಪವೃತ್ತಿಗಳು. ಭಾರತದಲ್ಲಿ ಅಪಾರವಾದ ಕೀಳರಿಮೆಯಿಂದ ಬಳಲುತ್ತಿರುವ ಮಧ್ಯಮ ವರ್ಗ ಎಂಬ ಭ್ರಹತ್ ಪಂಗಡ ಇಂಥ ಎನ್ ಜಿ ಒ. ಗಳನ್ನು ಸುಲಭವಾಗಿ ನಂಬಿಬಿಡುತ್ತದೆ. ಒಂದು ವೆಬ್ ಸೈಟಲ್ಲಿ ಬರೆದಿರುವುದೇ ಅಂತಿಮವೂ ಪ್ರಶ್ನಾತೀತವೂ ಎಂದುಕೊಳ್ಳುವ ಈ ವರ್ಗ ಯಾವಾಗ ಹೆಚ್ಚಿತೋ ಅಂದಿನಿಂದಲೇ ಇಂಥ ಎನ್ ಜಿ ಒ. ಗಳೂ ಹೆಚ್ಚತೊಡಗಿದವು.
ದೆಹಲಿ ಮೂಲದ India policy foundation ಎಂಬ ಸಂಸ್ಥೆ ಈ ಬಗೆ ಅಧ್ಯಯನವೊಂದನ್ನು ಮಾಡಿದೆ. ೨೦೦ದಿಂದೀಚೆಗೆ ಭಾರತದಲ್ಲಿ ಹೆಚ್ಚುತ್ತಿರುವ ಕ್ರಿಶ್ಚಿಯನ್ ಚಟುವಟಿಕೆಗಳನ್ನು ಅದು ತಿಳಿಸುತ್ತದೆ. ಮತ್ತು ಹಲವು ಗಂಭೀರ ಪ್ರಶ್ನೆಗಳನ್ನೂ ಭವಿಷ್ಯದ ಬಗೆಗಿನ ಚಿಂತೆಯನ್ನೂ ಈ ಅಧ್ಯಯನ ವರದಿ ಉಂಟುಮಾಡುತ್ತದೆ. ವಿವಿಧ ಸರಕಾರಿ ವೆಬ್‌ಸೈಟುಗಳು, ಸರಕಾರದ ಹೇಳಿಕೆ ಮತ್ತು ಸುತ್ತೋಲೆಗಳು, ಕ್ರಿಶ್ಚಿಯನ್ ಸಂಘಟನೆಗಳ ಪ್ರಕಟಣೆ ಮತ್ತು ಅವುಗಳ ಅಧಿಕೃತ ವೆಬ್‌ಸೈಟುಗಳು, ಮಾಧ್ಯಮಗಳ ವರದಿಗಳು, ತಜ್ನರ ಅಧ್ಯಯನ ಮತ್ತು ಸಂಶೋಧನಾ ವರದಿಗಳು , ನ್ಯಾಯಾಲಯದ ತೀರ್ಪುಗಳನ್ನು ಆಧರಿಸಿ ತಯಾರಿಸಿರುವ ಈ ವರದಿ ಭಾರತದಲ್ಲಿ ಚರ್ಚುಗಳ ಕಾರ್ಯವೈಖರಿ ಮತ್ತು ಎನ್ ಜಿ ಒ. ಗಳ ನಡುವಿನ ನಿಗೂಢ ಸಂಬಂಧವನ್ನು ಸವಿವರವಾಗಿ ತಿಳಿಸುತ್ತವೆ.
ಈ ಅಂಕಿ ಅಂಶಗಳನ್ನೇ ಗಮನಿಸಿ.
- ಭಾರತದಲ್ಲಿ ಕ್ಯಾಥೋಲಿಕ್ ಚರ್ಚ್ ಕ್ರಿಶ್ಚಿಯನ್ನರಲ್ಲೇ ಅತ್ಯಂತ ಪ್ರಭಾವಿ ಸಂಘಟನೆ. ಈ ಸಂಘಟನೆ ದೇಶದಲ್ಲಿ ೭೬೫೦ ಪ್ರಾಥಮಿಕ ಶಾಲೆಗಳನ್ನು, ೪೫೬೯ ಪ್ರೌಢ ಶಾಲೆಗಳನ್ನು,೧೪೯೪ ಹೈಯರ್ ಸೆಕೆಂಡರಿ ಶಾಲೆಗಳನ್ನು, ೩೨೧ ಕಾಲೇಜು ಮತ್ತು ೮೬೫ ವಿವಿಧ ವೃತ್ತಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತದೆ.
- The church of south india(CSI) ಕೂಡಾ ೨೦೦೦ ಶಾಲೆಗಳು, ೧೩೦ ಕಾಲೇಜುಗಳು ಮತ್ತು ೧೦೪ ಆಸ್ಪತ್ರೆಗಳು, ೫೦ಕ್ಕೂ ಹೆಚ್ಚಿನ ಗ್ರಾಮೀಣಾಭಿವೃದ್ಧಿ ಯೋಜನಾ ಪ್ರಕಲ್ಪಗಳು , ಅಷ್ಟೇ ಸಂಖ್ಯೆಯ ಯುವ ತರಬೇತಿ ಸಂಸ್ಥೆಗಳು , ೫೦೦ ಹಾಸ್ಟೆಲ್ ಗಳನ್ನು ನಡೆಸುತ್ತಿವೆ.
- The church of north India(CNI) ಮತ್ತೊಂದು ಚರ್ಚ್ ಸಂಘಟನೆ ಅಥವಾ ಒಕ್ಕೂಟ ೯ ನರ್ಸಿಂಗ್ ಶಾಲೆಗಳು, ೨೫೦ಕ್ಕೂ ಅಕ ವಿವಿಧ ಶಾಲೆಗಳು ಮತ್ತು ತರಬೇತಿ ಸಂಸ್ಥೆಗಳನ್ನು , ೬೫ಕ್ಕೂ ಅಕ ಆಸ್ಪತ್ರೆಗಳನ್ನು ನಡೆಸುತ್ತಿದೆ.
- Seventh day Adventist ಎಂಬ ಇನ್ನೊಂದು ಕ್ರೈಸ್ತ ಒಕ್ಕೂಟ ೨೨೬ ಶಾಲೆಗಳು ಮತ್ತು ೫ ಕಾಲೇಜುಗಳನ್ನು ನಡೆಸುತ್ತಿದೆ.
ಈ ಎಲ್ಲ ಅಂಕಿ ಅಂಶಗಳನ್ನು ಗಮನಿಸಿದಾಗ, ನಮ್ಮ ಸುತ್ತಮುತ್ತಲೂ ಅದರ ಮೂರ್ತ ರೂಪ ಕಂಡಾಗ ನಮ್ಮ ಮಧ್ಯಮವರ್ಗದ ಮಾನಸಿಕತೆ " ಏನೇ ಆಗಲಿ ಅವರ ಕಾಳಜಿಯನ್ನು ಕೊಂಡಾಡಲೇಬೇಕು" ಎಂದು ಪುಳಕಗೊಳ್ಳುತ್ತದೆ. "ನಮ್ಮ ಸಂನ್ಯಾಸಿಗಳು! ಅಬ್ಬಾ ಕಳ್ಳರು" ಎಂಬ "ನಾಗರಿಕ ಪ್ರಜ್ನೆ"ಯೂ ಜಾಗೃತವಾಗಿಬಿಡುವುದುಂಟು. ಆದರೆ ಅಸಲು ವಿಷಯದ ಬಗ್ಗೆ ಒಂದಂಗುಲವೂ ಮುಂದಕ್ಕೆ ಆಲೋಚನೆಯನ್ನು ಮಾಡಲಾರರು. ವಿಷಯವೇನೆಂದರೆ ಕ್ಯಾಥೋಲಿಕ್ ಚರ್ಚಿನ ಬಿಷಪರನ್ನು ನೇರವಾಗಿ ವ್ಯಾಟಿಕನ್ನಿನ ಪೋಪರೇ ಆಯ್ಕೆ ಮಾಡುತ್ತಾರೆ. ಇನ್ನುಳಿದ ಒಕ್ಕೂಟಗಳ ಬಿಷಪ್‌ಗಳೂ ಕೂಡಾ ವಿದೇಶಿ ಸಲಹೆಗಳ ಮೇರೆಗೇ ನೇಮಕವಾಗುತ್ತಾರೆ. ಹಾಗಾಗಿ ಬಿಷಪರು ನೇರವಾಗಿ ವಿದೇಶಿ ಪೋಪರಿಗೆ ನಿಷ್ಠರು ಮತ್ತು ಬದ್ದರು. ಈ ಎಲ್ಲಾ ಶಿಕ್ಷಣ ಸಂಸ್ಥೆಗಳ ಮೇಲ್ವಿಚಾರಕರೂ ಕೂಡಾ ಬಿಷಪರೇ . ಹೀಗೆ ವಿದೇಶಿ ಮಂಡೆಯಿಂದ ಸ್ವದೇಶದಲ್ಲಿ ಕೈಗೊಳ್ಳುವ ಕಾರ್ಯವನ್ನು ಸ್ವದೇಶಿ ಕಾರ್ಯ ಎಂದೇ ಕರೆಯಬೇಕೇ ಎನ್ನುವಲ್ಲಿ ಗೊಂದಲಗಳು ಏರ್ಪಡುವುದೇ ಇಲ್ಲ. ಪೋಪ್ ನಿಷ್ಠ ಬಿಷಪರು ಭಾರತ ನಿಷ್ಠ ಕಾರ್ಯವನ್ನು ಮಾಡುವರು ಎಂದು ಹೇಳಲೂ ಆಗಲಾರದು. ಏಕೆಂದರೆ ಅಂದೊಮ್ಮೆ ಇದೇ ಪೋಪರು" ಹುಲುಸಾದ ಕುಯಿಲಿಗೆ ಭಾರತ ಅತ್ಯಂತ ಪ್ರಶಸ್ತ ನೆಲ" ಎಂದವರಲ್ಲವೇ? ಭಾರತದ ಬಿಷಪರೂ ಭಾರತ ನಿಷ್ಠರೇ, ಅವರೂ ಇಲ್ಲಿನ ನೆಲಕ್ಕೆ ನಿಷ್ಠರಾದವರೇ ಎನ್ನುವಂತೆಯೂ ಇಲ್ಲ. ಏಕೆಂದರೆ ಅಂಥ ನಿಷ್ಠತೆ ಪೋಪ್ ವಿರೋಧಿಯಾಗುವ ಸಂಭವವಿದೆ. ಅಲ್ಲದೆ ಬಿಷಪರೂ " ಹುಲುಸಾದ ಕುಯಿಲಿಗೆ" ತೊಡಗಿಕೊಳ್ಳದಿದ್ದರೆ ಪೋಪರ ಶಿಷ್ಯರಾಗಲು ಹೇಗೆ ತಾನೇ ಸಾಧ್ಯ?
ಹೀಗೆ ಭಾರತದಲ್ಲಿ ಕ್ರೈಸ್ತಮತ ಸಂಘಟನೆಗಳು ಸುಲಭವಾಗಿ ಸಮಾಜ ಸುಧಾರಣೆಯ ಪಟ್ಟವನ್ನು ಹೊತ್ತುಕೊಂಡುಬಿಡುತ್ತವೆ. ಒಂದೊಮ್ಮೆ ಯುರೋಪಿನಲ್ಲಿ ರಾಜ್ಯದೊಳಗಿನ ರಾಜ್ಯವಾಗಿದ್ದ ಚರ್ಚು ಭಾರತದಲ್ಲಿ ಕಳೆದ ೧೦ ವರ್ಷಗಳ ಅನಂತರ ತೀವ್ರವಾಗಿ ವಿವಿಧ ರೂಪಗಳಿಂದ ತನ್ನ ಹಿಡಿತವನ್ನು ಸಾಸುತ್ತಿದೆ. ತಮಿಳುನಾಡಿನ ಕೂಡಕುಳಂ ಅಣುವಿದ್ಯುತ್ ಸ್ಥಾವರವನ್ನು ವಿರೋಧಿಸುವವರೆಗೆ ಕ್ರಿಶ್ಚಿಯನ್ ಎನ್ ಜಿ ಒ ಗಳು ಕೋರೆ ಮೂಡಿಸಿಕೊಂಡಿವೆ. ನಾಳೆ ಇವರು ಅಗ್ನಿ ಕ್ಷಿಪಣಿಯನ್ನು, ರಷ್ಯಾ ನಿರ್ಮಿತ ಹಡಗುಗಳನ್ನು, ಹೆಚ್‌ಎಎಲ್ ವಿಮಾನಗಳನ್ನೂ ವಿರೋಧಿಸಲಾರರೆಂದು ಹೇಗೆ ನಂಬಬೇಕು? ಎನ್ ಜಿ ಒ ಗಳಿಗೆ ಹರಿದುಬರುವ ಕೋಟಿಕೋಟಿ ರೂ.ಗಳು ಹಾಗೆ ಮಾಡುತ್ತವೆ. ಅಷ್ಟಕ್ಕೂ ಇವುಗಳಿಗೆ ಎಲ್ಲಿಂದ ಹಣ ಹರಿದುಬರುತ್ತದೆ? ಯಾರು ತರಿಸಿಕೊಳ್ಳುತ್ತಾರೆ ಎಂಬುದರ ಬಗ್ಗೆ ಈ ಅಧ್ಯಯನ ವರದಿಯಲ್ಲಿ ಧಿಗ್ಭ್ರಮೆ ಹುಟ್ಟಿಸುವ ಮಾಹಿತಿಗಳಿವೆ. ಏಕೆಂದರೆ ಒರ್ವ ಬಿಷಪರೇ ಅಮೆರಿಕಾ ಮತ್ತು ಯುರೋಪಿಯನ್ ಯೂನಿಯನ್‌ಗಳಿಗೆ ಬರೆದ ಪತ್ರದ ಸಾಕ್ಷಿಯನ್ನು ಈ ವರದಿ ಲಗತ್ತಿಸಿದೆ. ಹೀಗೆ ಅಮೆರಿಕಾ ಮತ್ತು ಯುರೋಪಿಯನ್ ಯೂನಿಯನ್ ಗಳ ಹಣದಿಂದ ಬದುಕುವ ಈ ಎನ್ ಜಿ ಒ ಗಳು ಭಾರತದ ನೀತಿನಿಯಮಗಳಿಗೆ ಬದ್ದರಾಗಿ ಬದುಕುತ್ತವೆ ಎಂದು ಬಿಳಿಬಿಳಿಯಾದ ಕುರುಚಲು ಗಡ್ಡದ ಕೋಟು, ಸೂಟು ಧರಿಸುವ ಶ್ರೀಮಂತ ಆದರೆ ಇನ್ನೂ ಮಧ್ಯಮವರ್ಗದ ಮಾನಸಿಕತೆ ಇರುವ ಜನ ಹೇಳಬಹುದೇ ಹೊರತು ಸಮಾಜದೊಳಗೆ ಮಗುವಾಗಿ ಬದುಕುವ ನರಮನುಷ್ಯನಿಗೆ ನಂಬಲು ಸಾಧ್ಯವಾಗುವುದಿಲ್ಲ.
Gospel for asia ಎಂಬ ವೆಬ್‌ಸೈಟೊಂದಿದೆ. ಭಾರತದಿಂದ ಈ ಜಾಲತಾಣವನ್ನು ನೋಡಿದರೆ ತಾಯಿಯೊಬ್ಬಳು ಮಗುವನ್ನು ಎತ್ತಿಕೊಂಡ ಚಿತ್ರ ಮತ್ತು ಅದರ ಕೆಳಗೆ ಮಕ್ಕಳ ಪೌಷ್ಠಿಕತೆ, ಭವಿಷ್ಯ, ಶಿಶು ಮರಣ ಮೊದಲಾದ ಸಂಗತಿಗಳ ಬಗ್ಗೆ ಪ್ರಸ್ತಾಪವಿದೆ. ಆದರೆ ಅದೇ ವೆಬ್‌ಸೈಟನ್ನು ವಿದೇಶದಿಂದ ನೋಡಿದರೆ ಅಲ್ಲಿರುವುದೆಲ್ಲವೂ " ಸುವಾರ್ತೆ"ಗಳು! ಏಕೆ ಈ ನಾಟಕ? ವಿದೇಶದಿಂದ ಮತಪ್ರಚಾರಕ್ಕಾಗಿ ಹಣತರುವುದು ಮತ್ತು ಭಾರತದಲ್ಲಿ ಕಾಳಜಿಯ ಮುಖ ಹೊತ್ತು ಅದನ್ನು ಅನುಷ್ಠಾನ ಮಾಡುವುದು. ಏನೇನು ಪವಾಡಗಳು ನಡೆಯುವುದೋ ಗೊತ್ತಿಲ್ಲ. ಆದರೆ ಈ ವೆಬ್‌ಸೈಟಿನಲ್ಲಂತೂ ಪವಾಡವೋ ಪವಾಡ!
ಮತ್ತೊಂದು ಇಂಗ್ಲೆಂಡ್ ಮೂಲದ action aid ಸಂಘಟನೆ ಭಾರತದ ಮಕ್ಕಳಿಗೆ ಶೌಚಾಲಯವಿಲ್ಲ, ಪೌಷ್ಟಿಕ ಆಹಾರವಿಲ್ಲ ಎಂಬ ನೆಪವೊಡ್ಡಿ ಭಾರತದ ಕ್ರಿಶ್ಚಿಯನ್ ಎನ್ ಜಿ ಒ ಗಳಿಗೆ ಹಣ ಸರಬರಾಜು ಮಾಡುತ್ತದೆ. ಮತಪ್ರಚಾರಕ್ಕೆ ಶೌಚಾಲಯವೂ ಪ್ರಮುಖ ಸರಕು ಎನ್ನುವುದು ಹೇಸಿಗೆಯ ಸಂಗತಿಯಾದರೂ ಇದು ಸತ್ಯ.
ಕರ್ನಾಟಕದ ಉದಾಹರಣೆಯನ್ನೇ ನೋಡುವುದಾದರೆ ೨೦೦೬೧೧ ರ ಅವಯಲ್ಲಿ north Karnataka Jesuit educational and charitable socityಎಂಬ ಎನ್ ಜಿ ಒ ರೂ .೨೩೬ ಕೋಟಿ ವಿದೇಶಿ ದೇಣಿಗೆಯನ್ನೂ, children fund inc ಎಂಬ ಎನ್ ಜಿ ಒ ೧೭೪ ಕೋಟಿ ರೂಗಳನ್ನೂ, the church council for child and youth care ಕೂಡಾ ೧೭೪ ಕೋಟಿ ವಿದೇಶಿ ದೇಣಿಗೆಯನ್ನು ಪಡೆದಿದೆ ಎಂದು ಈ ವರದಿ ತಿಳಿಸುತ್ತದೆ.ಈ ಅವಧಿಯಲ್ಲಿ ಕರ್ನಾಟಕದ ಒಟ್ಟು ೧೫೦ ವಿವಿಧಕ್ರಿಶ್ಚಿಯನ್ ಎನ್ ಜಿ ಒ ಗಳು ೨೧೮೫ ಕೋಟಿ ರೂ.ಗಳನ್ನು ಪಡೆದಿವೆ. ಈ ಮೊತ್ತ ಕರ್ನಾಟಕ ರಾಜ್ಯ ಬಜೆಟ್‌ನಲ್ಲಿ ಸಾವಯವ ಕೃಷಿ, ಬಿತ್ತನೆ ಬೀಜ, ರೈತರಿಗೆ ಪರಿಹಾರಗಳಿಗೆ ಮೀಸಲಿರಿಸಿದ ಮೊತ್ತಕ್ಕಿಂತ ಹೆಚ್ಚು!ಇದೇ ಅವಧಿಯಲ್ಲಿ ಬೆಂಗಳೂರಿನ ೧೦೪ ಎನ್ ಜಿ ಒ ಗಳಿಗೆ ೧೬೨೨ ಕೋಟಿ, ಮಂಗಳೂರಿನ ೯ ಎನ್ ಜಿ ಒ ಗಳಿಗೆ ೬೫ ಕೋಟಿ, ಮೈಸೂರಿನ ೧೦ ಎನ್ ಜಿ ಒ ಗಳಿಗೆ ೫೭ ಕೋಟಿ ರೂ ವಿದೇಶಿ ಹಣ ಹರಿದುಬಂದಿದೆ. ಈ ಕೋಟಿ ಹಣದಿಂದ ಯಾರ ಭಾಳು ಬಂಗಾರವಾಗಿದೆ? ಎಷ್ಟು ಜಾತ್ಯತೀತವಾಗಿ ಬಳಕೆಯಾಗಿದೆ ಎಂದು ಕಾಣುವುದೇ ಇಲ್ಲ. ಏಕೆಂದರೆ ಆ ಹಣದಲ್ಲಿ ಪಾರದರ್ಶಕತೆಯಿಲ್ಲ. ಮತಾಂತರಗಳು ಹಾಗೆಲ್ಲಾ ನಡೆಯುದೇ ಇಲ್ಲ. ಇಂಥ ಮೊತ್ತದಿಂದ ಕೆಲವು ಚರ್ಚುಗಳು ಮತ್ತು ಎನ್ ಜಿ ಒ ಗಳು ರಿಯಲ್ ಎಸ್ಟೇಟ್ ದಂಧೆಯನ್ನು ನಡೆಸುತ್ತಿರುವುದೇನೂ ಇಂದು ಅಪರೂಪವಲ್ಲ.
ಈ ಹಣದ ಹಿಂದಿರುವ ಕಪಟ ಉದ್ದೇಶ, ತಣ್ಣಗಿನ ಕ್ರೌರ್ಯ, ಮೆಲ್ಲಮೆಲ್ಲನೆ ತನ್ನ ಬಾಹುಗಳನ್ನು ಚಾಚಿಕೊಳ್ಳುವ ರಕ್ಕಸತನ, ತನ್ನದಲ್ಲದರ ಬಗೆಗಿನ ತೀವ್ರವಾದ ಅಸಹನೆಗಳು ಈ ವಿಷಯವನ್ನು ಏನಾದರೂ ಮಾಡಿಕೊಂಡು ಸಾಯಲಿ ಎಂದುಬಿಡುವ ಹಾಗಿಲ್ಲ. ಇಂದು ಕೋಟಿ ಭಾಳುವ ಎನ್ ಜಿ ಒ ಗಳು ಜೈಲಿಗೆ ನುಗ್ಗಿವೆ. ಈ ಕೋಟಿಯ ಹರಿವು ಮುಂದೆ ಎಲ್ಲೆಲ್ಲಿಗೆ ನುಗ್ಗಿಸುವವೋ? ಹೀಗೆ ಆ ವರದಿಯನ್ನು ನೋಡುತ್ತಾ ಹೋದಂತೆ ಒಂಟಿ ಪಯಣಿಗನನ್ನು ಯಾರೋ ಹಿಂಬಾಲಿಸುತ್ತಿರುವಂತೆ ಭಾಸವಾಗುತ್ತದೆ. ಇದು ಸಮಾಜ ಸುಧಾರಣೆಯೋ? ಸಾಮ್ರಾಜ್ಯ ವಿಸ್ತರಣೆಯೋ? ಎಂಬ ಗೊಂದಲ ಕಾಡುತ್ತದೆ.

No comments:
Post a Comment