"ನೆಹರೂ ನಿವೃತ್ತರಾಗುವುದಿಲ್ಲ" ಎಂಬ ಗೋಪಾಲಕೃಷ್ಣ ಅಡಿಗರ ಪ್ರಸಿದ್ಧ ಕವನವೊಂದಿದೆ. ಎಷ್ಟೇ ವರ್ಷ ಪ್ರಧಾನಿಯಾದರೂ ಇನ್ನೂ ಅಧಿಕಾರವನ್ನು ಬಿಟ್ಟುಕೊಡದ ನೆಹರೂ ನಿಲುವನ್ನು ಆ ಕವನದಲ್ಲಿ ವ್ಯಂಗ್ಯ ಮಾಡಲಾಗಿತ್ತ್ತು. ಆ ಪರಿಸ್ಥಿತಿಯೂ ಹಾಗೆಯೇ ಇತ್ತು. ಏಕೆಂದರೆ ಕಾಂಗ್ರೆಸಿನಲ್ಲಿ ಎಲ್ಲರೂ ಸೊಂಟ ಬಿದ್ದುಹೋದವರೂ ಕಣ್ಣು ಮಂಜಾದವರೂ ಕೈ ನಡುಗುವವರೂ ಹೆಚ್ಚಾಗುತ್ತಲೇ ಇದ್ದರು. ಸ್ವಾತಂತ್ರ್ಯ ಹೋರಾಟದ ಪ್ರಭಾವಳಿಯಿಂದ ಯಾರೂ ಕೂಡ ನಿವೃತ್ತರಾಗುವ ಯೋಚನೆಯನ್ನೇ ಬಿಟ್ಟುಬಿಟ್ಟಿದರು. ಪ್ರಮುಖವಾಗಿ ನೆಹರೂಗೇ ಆ ಯೋಚನೆ ಇರಲಿಲ್ಲ.
ಕಾಂಗ್ರೆಸ್ ಎಂದರೆ ಹಾಗೆಯೇ.
ಅಲ್ಲಿ ಇಂದಿಗೂ ಯಾರೂ ಬೇಗನೆ ನಿವೃತ್ತರಾಗುವುದಿಲ್ಲ. ಆದರೆ ಬೇಗನೆ ನಾಯಕರುಗಳು ಹುಟ್ಟಿ ಬಿಡುತ್ತಾರೆ. ರಾತ್ರೋರಾತ್ರಿ ಯುವನಾಯಕರು ಉದಿಸಿಬಂದುಬಿಡುತ್ತಾರೆ. ಕಾಂಗ್ರೆಸಿನ ಮತ್ತೊಂದು ಗುಣವೆಂದರೆ ಅದರ ಕೃಪಾಕಟಾಕ್ಷವಿದ್ದರೆ ಯಾರೂ ಕೂಡ ನಿವೃತ್ತರಾಗುವುದಿಲ್ಲ. ಕಾಂಗ್ರೆಸಿನಲ್ಲಿ ಅವರೆಲ್ಲರಿಗೂ ಒಂದಲ್ಲಾ ಒಂದು ಸ್ಥಾನವಿದೆ. ಮುದುಕ ರಾಜೇಂದ್ರ ಸಾಚಾರ್ ನ್ಯಾಯಮೂರ್ತಿಯಾಗಿ ನಿವೃತ್ತರಾದರೂ ಕಾಂಗ್ರೆಸಿನ ಪ್ರಕಾರ ನಿವೃತ್ತರಾಗಲಿಲ್ಲ, ೮೦ ವರ್ಷದ ಎನ್.ಡಿ.ತಿವಾರಿ ಸಕ್ರೀಯ ರಾಜಕಾರಣದಿಂದ ನಿವೃತ್ತರಾದರೂ ರಾಜಭವನದೊಳಗೆ ಸೇರಿ ಮಾಡಬಾರದ್ದನ್ನು ಮಾಡಿದರು.ಇದೀಗ ಇನ್ನೊಬ್ಬರಿದ್ದಾರೆ. ದಿಲೀಪ್ ಪಡಗಾಂವ್‌ಕರ್. ದೇಶದ ಖ್ಯಾತ ಪತ್ರಕರ್ತರು ಎಂದುಕೊಂಡವರು. ಅವರು ಇಂದು ಪತ್ರಿಕೋದ್ಯಮದಿಂದ ನಿವೃತ್ತರಾಗಿದ್ದಾರೆ. ಆದರೆ ಕಾಂಗ್ರೆಸಿನಿಂದ ನಿವೃತ್ತರಾಗಿಲ್ಲ. ಏಕೆಂದರೆ ಸರಕಾರ ಅವರ ನೇತೃತ್ವದಲ್ಲಿ ತ್ರಿಸದಸ್ಯ ತಂಡವೊಂದನ್ನು ರಚಿಸಿ ಜಮ್ಮು ಮತ್ತು ಕಾಶ್ಮೀರದ ಬಗ್ಗೆ ವರದಿಯೊಂದನ್ನು ಕೇಳಿತ್ತು. ೨೦೧೦ರ ಅಕ್ಟೋಬರ್ ನಲ್ಲಿ ರಚನೆಯಾದ ಈ ಸಂವಾದಕಾರರ ತಂಡದಲ್ಲಿ ದಿಲೀಪ್ ಪಡಗಾಂವ್‌ಕರ್, ರಾಧಾಕುಮಾರ್ ಮತ್ತು ಎಂ.ಎಂ. ಅನ್ಸಾರಿ ಎಂಬ ಮೂವರು ಸದಸ್ಯರಿದ್ದರು. ಈ ತ್ರಿಸದಸ್ಯರ ತಂಡ ತನ್ನ ವರದಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿತ್ತು. ಕೇಂದ್ರ ಸರಕಾರ ಸಂಸತ್ ಅಧಿವೇಶನದ ಅವಧಿಯನ್ನು ತಪ್ಪಿಸಿ ಚರ್ಚೆಯಿಂದ ತಪ್ಪಿಸಿಕೊಂಡಿತು. ಏಕೆಂದರೆ ವರದಿಯಲ್ಲಿ ಉಲ್ಲೇಖಿತ ಅಂಶಗಳು ಮತ್ತು ಬೇಡಿಕೆಗಳು ಯಾವ ಸಾಚಾರ್ ವರದಿಗಿಂತಲೂ, ಯಾವ ಹುರಿಯತ್ ನ ಅಶಯಕ್ಕಿಂತಲೂ ಭಿನ್ನವಾಗಿರಲಿಲ್ಲ. ೧೮೦ ಪುಟಗಳ ಆ ವರದಿಯ ಯಾವ ಭಾಗವನ್ನು ನೋಡಿದರೂ ಅಭಾರತೀಕರಣವೇ ಕಾಣುತ್ತದೆ. ಅಂದರೆ ತ್ರಿಸದಸ್ಯರ ತಂಡಕ್ಕೆ ಕಾಶ್ಮೀರ ಇನ್ನೂ ಅರ್ಥ ಆಗಿಯೇ ಇಲ್ಲ ಎಂಬ ಸಂಗತಿ ಎದ್ದು ಕಾಣುತ್ತದೆ. ಏಕೆಂದರೆ,
ಜಮ್ಮು ಮತ್ತು ಕಾಶ್ಮೀರವನ್ನು ದಕ್ಷಿಣ ಏಷ್ಯಾದ ಹೆಬ್ಬಾಗಿಲು ಎಂಬ ಅರ್ಥದಲ್ಲೇ ಇಡೀ ವರದಿ ಸಾಗುತ್ತದೆ.
ಸಂಪೂರ್ಣ ಜಮ್ಮು ಮತ್ತು ಕಾಶ್ಮೀರ ಭಾರತದಿಂದ ಸಂಪೂರ್ಣ ಹೊರಗಿರುವ ಅಂಗ ಎಂಬ ಭಾವನೆಯಲ್ಲೇ ಎಲ್ಲಾ ಚರ್ಚೆ, ಮಾತುಕತೆ, ಅಧ್ಯಯನ, ಶೋಧ ನಡೆದಿದೆ.
- ಭಯೋತ್ಪಾದಕರ ಕುಟುಂಬಗಳಿಗೆ ಮರುಗಿದಷ್ಟು ಈ ತಂಡ ಕಾಶ್ಮೀರಿ ಪಂಡಿತರ ಬಗ್ಗೆ ಮರುಗಿಲ್ಲ. ಇತರ ಆಯೋಗ , ಸಮಿತಿಗಳು ಹೇಳಿರುವಂತೆ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸುವ ಆಶಯವನ್ನು ಇದು ವ್ಯಕ್ತಪಡಿಸಿದೆ.
- ತ ೧೯೯೪ರ ಭಾರತದ ಪಾರ್ಲಿಮೆಂಟು ಪಾಸು ಮಾಡಿದ ನಿರ್ಣಯವನ್ನು ಈ ವರದಿ ಮರೆತುಹೋಗಿದೆ.
- ಶಿಯಾಗಳ ಸಂಖ್ಯೆ ಹೆಚ್ಚಿರುವ ಕಣಿವೆ ಭಾಗದತ್ತಲೇ ಎಲ್ಲಾ ಅನುಕಂಪಗಳು ಹರಿದು ಬಂದಿವೆ. ಬೌದ್ಧರು ಹೆಚ್ಚಿರುವ ಲೇಹ್ ಮತ್ತ್ತು ಲಡಾಕ್ ಪ್ರದೇಶಗಳ ಮೇಲೆ ಹೆಚ್ಚು ಒತ್ತು ನೀಡಿಲ್ಲ.
- ತಂಡ ಸಮಾಜದ ವಿವಿಧ ಸ್ತರಗಳ ಜನರನ್ನು ಭೇಟಿ ಮಾಡಿರಬಹುದು. ಆದರೆ ಜಮ್ಮು ಮತ್ತು ಕಾಶ್ಮೀರದ ಇತಿಹಾಸವನ್ನೇ ತಿಳಿದಿಲ್ಲ. ಏಕೆಂದರೆ ವರದಿಯಲ್ಲಿ ಒಂದು ಕಡೆ "ನೆಲದ ಮೇಲಿನ ಭಾವುಕತೆ" ಎಂಬ ಪದಪ್ರಯೋಗ ನಡೆದಿವೆ. ಇದು ಇತಿಹಾಸದ ಅರಿವಿಲ್ಲದವರ ಮಾತುಗಳೆಂಬುದು ಸ್ಪಷ್ಟ.
- ಸಂವಿಧಾನದ ೩೭೦ನೇ ವಿಧಿಯಲ್ಲಿರುವ ತಾತ್ಕಾಲಿಕ ಪದವನ್ನು ಕಿತ್ತೊಗೆಯಬೇಕು ಎಂಬ ವಿಚಿತ್ರವಾದ ಸಲಹೆಯನ್ನು ಮಾಡಿದೆ. ಸಂಪೂರ್ಣ ದೇಶವೇ ಸಂವಿಧಾನದಲ್ಲಿ ೩೭೦ ಎಂಬ ವಿಧಿಯೇ ಬೇಡ ಎಂದು ಕಿರುಚುತ್ತಿರುವಾಗ ಈ ಮೂವರು ಮಾತ್ರ ೩೭೦ರ ವಿಧಿಯನ್ನು ಶಾಶ್ವತಗೊಳಿಸಬೇಕು ಎಂದಿದೆ.
- ಜಮ್ಮು ಮತ್ತು ಕಾಶ್ಮೀರದಲ್ಲಿ ಈಗಿರುವ ಮುಖ್ಯಮಂತ್ರಿ ಮತ್ತು ರಾಜ್ಯಪಾಲರ ಹುದ್ದೆಗಳನ್ನು ಬಿಟ್ಟು ಎಲ್ಲಾ ಹುದ್ದೆಗಳನ್ನು ಉರ್ದು ಭಾಷೆಯಲ್ಲಿ ಹೆಸರಿಸಬೇಕು ಎಂದು ವರದಿ ಹೇಳುತ್ತದೆ.
- ಪಾರ್ಲಿಮೆಂಟ್ ಜಮ್ಮು-ಕಾಶ್ಮೀರಕ್ಕೆ ಇನ್ನ್ನೂ ಹೆಚ್ಚಿನ ವಿಶೇಷ ಸ್ಥಾನಮಾನವನ್ನು ನೀಡತಕ್ಕದ್ದು ಎನ್ನುವ ಹಂಬಲ ಈ ವರದಿಯದ್ದು.
- ಸದ್ಯ ಎಲ್ ಓ ಸಿ ಎಂದು ಕರೆಯಲಾಗುವ ರೇಖೆಯಲ್ಲಿ ಮುಕ್ತ ವ್ಯಾಪಾರ, ಮುಕ್ತ ಸಂಚಾರಕ್ಕೆ ಅನುವು ಮಾಡುವುದರ ಮೂಲಕ ಸೌಹಾರ್ದದ ವಾತಾವರಣವನ್ನು ಸೃಷ್ಟಿಸಬಹುದು ಎಂದು ವರದಿ ಹೇಳುತ್ತದೆ ಮತ್ತು ಎಲ್ ಓ ಸಿ ಯ ಬಗೆಗಿನ ವಿವಾದಗಳ ಬಗೆ ಹೇಳಲು ಹೋಗಿಲ್ಲ.
- ಭಾರತದ ನೆಲವೇ ಆಗಿರುವ ಗಿಲ್ಗಿಟ್ ಮತ್ತು ಬಾಲ್ಟಿಸ್ಥಾನ್ ಭಾಗಗಳು ನೆಹರೂ ನೀತಿಯಿಂದ ಮತ್ತು ಪಾಕ್‌ನ ಆಕ್ರಮಣಕಾರಿ ನೀತಿಯಿಂದ "ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ" ಆಗಿರುವುದು ದೊಡ್ಡ ಪ್ರಮಾದ. ಆದರೆ ವರದಿಯಲ್ಲಿ "ಪಾಕ್ ಆಕ್ರಮಿತ" ಎನ್ನುವಲ್ಲೆಲ್ಲಾ "ಪಾಕ್ ಆಡಳಿತದ ಕಾಶ್ಮೀರ" ಎಂದು ಉಲ್ಲೇಖಿಸಿದೆ. ಸಂವಾದಕಾರರ ತಂಡಕ್ಕೆ ಈ ಅಧಿಕಾರ ಕೊಟ್ಟವರಾರು?
- ಜಮ್ಮು ಮತ್ತು ಕಾಶ್ಮೀರ ದಕ್ಷಿಣ ಮತ್ತು ಮಧ್ಯ ಏಷ್ಯಾದ ನಡುವಿನ ಸೇತುವೆ ಎನ್ನುವ ಸಂವಾದಕಾರರ ತಂಡ, ಭಾರತದ ಅವಿಭಾಜ್ಯ ಅಂಗ ಎನ್ನುವುದನ್ನು ಮರೆಯಲು ಕಾರಣವೇನು?
ಹೀಗೆ ಹುಚ್ಚುಚ್ಚಾಗಿ ಸಾಗುವ ವರದಿಯನ್ನು ನೋಡಿದರೆ ಮತ್ತು ಈ ಮೂವರು ಸಂವಾದಕಾರರ ಮುಖವನ್ನು ನೋಡಿದರೆ ಇವರು ಮೂರುನಾಲ್ಕು ವರ್ಷಗಳ ಕಾಲ ಭರ್ಜರಿ ಗಮ್ಮತ್ತಿನ ಜೀವನವನ್ನು ನಡೆಸಿದ್ದರೆಂಬುದು ಸ್ಪಷ್ಟವಾಗುತ್ತದೆ. ಈ ಮೂವರು ಸದಸ್ಯರ ತಂಡ ಒಂದು ಪೀಠವೂ ಅಲ್ಲ, ಆಯೋಗವೂ ಅಲ್ಲ. ಒಂದು ಸಂವಾದಕಾರರ ತಂಡ ಮಾತ್ರ . ಪ್ರವಾಸ ಮಾಡಿ, ಮಾತನಾಡಿ ಕೊಟ್ಟ ವರದಿ. ಅಂದರೆ ಇದು ಸಂವಿಧಾನಾತ್ಮಕ ಚೌಕಟ್ಟಿನಲ್ಲಿ ರಚನೆಯಾದದ್ದಲ್ಲ. ಆದರೆ ಸಂವಿಧಾನದ ಬೇರುಗಳನ್ನೇ ಈ ಮೂವರು ಅಲ್ಲಾಡಿಸಿದ್ದಾರೆ. ಏಕೆಂದರೆ ವರದಿಯ ಪ್ರತೀ ಪದದಲ್ಲೂ ಭಾರತದ ಸಂವಿಧಾನ, ಸಾರ್ವಭೌಮತೆಯನ್ನು , ಘನತೆಯನ್ನು ದಿಕ್ಕರಿಸಿದ ವಾಸನೆಗಳಿವೆ. ಉದಾಹರಣೆಗೆ ಭಾರತದ ಸಂವಿಧಾನ ಯಾವ ರಾಜ್ಯಗಳಿಗೂ ಪರಮಾಧಿಕಾರವನ್ನು ಕೊಟ್ಟಿಲ್ಲ. ಆದರೆ ವರದಿಯ ಸಲಹೆಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಪರಮಾಧಿಕಾರ ಕೊಡುವ ಅರ್ಥದ ಸಲಹೆಗಳಿವೆ. ೧೯೯೪ರ ಫೆಬ್ರವರಿ ೨೨ರಂದು ಭಾರತೀಯ ಸಂಸತ್ತು ಒಕ್ಕೊರಲಿನಿಂದ
- ಸಂಪೂರ್ಣ ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ. ಈ ಭಾಗದ ಮೇಲೆ ನಡೆಯುವ ಯಾವುದೇ ಅತಿಕ್ರಮಣ, ಭಾರತ ವಿರೋಧಿಯಾಗಿದ್ದು, ಭಾರತ ಅದನ್ನು ವಿರೋಧಿಸುತ್ತದೆ.ಭಾರತ ತನ್ನ ಸಾರ್ವಭೌಮತೆ, ಸಮಗ್ರತೆಗಳನ್ನು ರಕ್ಷಿಸಿಕೊಳ್ಳಲು ಎಲ್ಲಾ ಕ್ರಮಗಳನ್ನ್ನು ಕೈಗೊಳ್ಳುತ್ತದೆ.
- ಪಾಕಿಸ್ಥಾನ ತಕ್ಷಣವೇ ಜಮ್ಮು ಮತ್ತು ಕಾಶ್ಮೀರದಲ್ಲಿ ತನ್ನ ಚಟುವಟಿಕೆಗಳನ್ನು ನಿಲ್ಲಿಸುವುದು.
- ತನ್ನ ಆಂತರಿಕ ಆಡಳಿತದ ಮೇಲೆ ಹಸ್ತಕ್ಷೇಪ ಮಾಡುವ ಯಾವುದೇ ಶಕ್ತಿಗಳನ್ನು ಭಾರತ ಸಹಿಸುವುದಿಲ್ಲ.
ಎಂಬ ನಿರ್ಣಯವನ್ನು ಪಾಸು ಮಾಡಿತು. ಭಾರತದ ಇತಿಹಾಸದಲ್ಲಿ ಇದೊಂದು ಮಹತ್ತ್ವದ ಸಂದರ್ಭ. ಈ ನಿರ್ಣಯದ ಮೂಲಕ ಉತ್ತರಭಾಗದ "ಪಾಕ್ ಆಕ್ರಮಿತ ಕಾಶ್ಮೀರ" ಎಂಬುದನ್ನೇ ಭಾರತ ಅಲ್ಲಗಳೆಯಿತು. ಆದರೆ ಈ ಮೂವರು ಅದನ್ನು "ಪಾಕ್ ಆಡಳಿತದ ಕಾಶ್ಮೀರ" ಎಂದರು. ಸಂವಿಧಾನವಿರೋಧಿಯಲ್ಲವೇ? ಅಂಥ ವರದಿಯನ್ನು ಸಂವಾದಕಾರರ ತಂಡ ಕೇಂದ್ರ ಸರ್ಕಾರಕ್ಕೇ ಕೊಡುವ ಧೈರ್ಯ ಹೇಗೆ ಮಾಡಿತು? ಕೊಟ್ಟರೂ ಕೇಂದ್ರ ಸರಕಾರಕ್ಕೇನೂ ಅದರಿಂದ ಆಘಾತವಾಗಿಲ್ಲವೇಕೆ? ನಿವೃತ್ತರಿಗೆ ಕೆಲಸ ವಹಿಸಿದಾಗಲೇ ಕೇಂದ್ರದ ಬಳಿ ವರದಿಯ ಕರಡು ಪ್ರತಿಗಳಿದ್ದವೋ ಏನೋ. ಇನ್ನು ೩೭೦ ನೇ ವಿಧಿಯಲ್ಲಿ "ತಾತ್ಕಾಲಿಕ" ಎಂದು ಇರುವ ಪದವನ್ನು ತೆಗೆಯಬೇಕು ಎನ್ನುವವರನ್ನು ಭಾರತೀಯರು ಎಂದು ಹೇಳಲೇಬೇಕೆನಿಸುವುದಿಲ್ಲ. ಏಕೆಂದರೆ ಅಲ್ಲೆಲ್ಲೋ ಪಾಕಿಸ್ಥಾನದ ಆಡಳಿತಗಾರನೂ ಹೇಳುವುದೂ ಅದನ್ನೇ. ಕಣಿವೆಯಲ್ಲಿ ಕಲ್ಲೆಸೆಯುವವನು ಹೇಳುವುದೂ ಅದನ್ನೇ. ಅದನ್ನೇ ಈ ಮೂವರು ಹೇಳಿದರೆ ಅವರನ್ನು ಭಾರತೀಯರು ಎಂದು ಕರೆಯಬೇಕೆನಿಸುವುದಿಲ್ಲ. ೩೭೦ರ ವಿಚಿತ್ರವಾದ ವಿಧಿಯಿಂದ ಭಾರತ ಅನುಭವಿಸಿದೆಷ್ಟಿದೆ? ಒಮ್ಮೆ ಜಮ್ಮು ಮತ್ತು ಕಾಶ್ಮೀರದ ಅಂದಿನ ಮುಖ್ಯಮಂತ್ರಿ ಭಕ್ಷಿ ಗುಲಾಮ್ ಮಹಮ್ಮದ್ ಅವರು ಪಂಜಾಬಿನ ಅಮೃತಸರದಿಂದ ವಾಲ್ಮೀಕಿ ಸಮುದಾಯದ ೭೫ ಕುಟುಂಬಗಳನ್ನು ಜಮ್ಮುವಿಗೆ ಕರೆಸಿಕೊಂಡರು. ನಗರದ ಸ್ವಚ್ಛತೆಗಾಗಿ ಅವರನ್ನು ನೇಮಿಸಿಕೊಳ್ಳಲಾಗಿತ್ತು. ಇಂದು ಆ ಕುಟುಂಬದ ಮೂರನೇ ಪೀಳಿಗೆ ಕಣ್ಣು ತೆರೆದಿದೆ. ವಿದ್ಯಾವಂತರಾಗಿದ್ದಾರೆ. ಯುವಕರು ವೈದ್ಯಕೀಯ, ಇಂಜಿನಿಯರಿಂಗ್, ಸಿ.ಎ ಮಾಡಿಕೊಂಡಿದ್ದಾರೆ. ಆದರೆ ಅವರಾರಿಗೂ ರಾಜ್ಯದಲ್ಲಿ ಸರಕಾರಿ ಕೆಲಸ ಸಿಗುವಂತಿಲ್ಲ. ಏಕೆಂದರೆ ೩೭೦ರ ವಿಧಿಯ ಪ್ರಕಾರ ಅವರು ಅಲ್ಲಿನ ನಾಗರಿಕರಲ್ಲ. ಅವರು ಭಾರತೀಯರಾದರೂ ಜೆ ಆಂಡ್ ಕೆ ಯವರಲ್ಲ. ೩೭೦ರ ವಿಧಿಯ ಪ್ರಕಾರ ಆ ಯುವಕರು ಸರಕಾರದ ಅಡಿಯಲ್ಲಿ ಕಸಗುಡಿಸಬಹುದಷ್ಟೇ. ಪಡಗಾಂವ್‌ಕರರ ತಂಡಕ್ಕೆ ಇದಾವುದೂ ಗೊತ್ತೇ ಆಗಲಿಲ್ಲ. ಅಲ್ಲದೆ ಕಳೆದ ೨೦೦೨ರಲ್ಲಿ ನಡೆದ ಮತದಾರ ಕ್ಷೇತ್ರಗಳ ವಿಂಗಡಣೆಯಲ್ಲಿ ದೇಶಾದ್ಯಂತ ಬದಲಾವಣೆಯಾದರೂ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಂಗಡಣೆ ನಡೆಯಲಿಲ್ಲ. ಏಕೆಂದರೆ ಆರ್ಟಿಕಲ್ ನಂಬರ್ ೩೭೦! ಚುನಾವಣೆಗಳ ಸಂದರ್ಭದಲ್ಲಿ ಅಭಿಮನ್ಯುವಿನಂತೆ ವರ್ತಿಸುವ ಚುನಾವಣಾ ಆಯೋಗ ಜಮ್ಮು ಮತ್ತು ಕಾಶ್ಮೀರದ ವಿಷಯದಲ್ಲಿ ಮಾತ್ರ ನರಸತ್ತ ವೀರ.
ಜಮ್ಮು ಮತ್ತು ಕಾಶ್ಮೀರದಲ್ಲಿ ಪರಮೋಚ್ಛ ರಾಜ್ಯಪಾಲರನ್ನು ನೇಮಿಸುವ "ವಿಪರೀತ" ದ ಸಲಹೆಯನ್ನೂ ಈ ವರದಿ ಮಾಡಿದೆ. ಹೀಗಿರುವ ಜಮ್ಮು ಮತ್ತು ಕಾಶ್ಮೀರವು single unit ಆಗಿರಬೇಕು ಎಂದು ಪುಕ್ಕಟೆ ಸಲಹೆಯನ್ನು ಅದು ಮಾಡುತ್ತದೆ. ವರದಿಯಲ್ಲಿ ಇರುವುದೆಲ್ಲವೂ ಇಂಥ ಪುಕ್ಕಟೆ ಸಲಹೆಗಳೇ.ಸಂಪೂರ್ಣ ವರದಿ ಸಲಹೆಗಳಿಂದ ತುಂಬಿಹೋಗಿದೆ. ಹೆದರಿಕೆಯಾಗುವುದು ಇಂಥ ಪುಕ್ಕಟೆ ಸಲಹೆಗಳಿಂದಲ್ಲ. ಅದನ್ನು ಚಾಚೂ ತಪ್ಪದೆ ಪಾಲಿಸಿಬಿಡುವ ತುಘಲಕ್ ಮಂಡೆಯ ಸರಕಾರಗಳಿಂದ.
ಸ್ವತಂತ್ರವಾಗಿ ಅಲೋಚನೆ ಮಾಡುವ ಯಾರಿಗೇ ಆದರೂ ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯ ಅರಿವಾಗುತ್ತದೆ. ಸಮಸ್ಯೆ ಯಾರಿಂದ ಮತ್ತು ಎಲ್ಲೆಲ್ಲಿದೆ ಎಂಬುದು ನಿಚ್ಚಳವಾಗುತ್ತವೆ. ಆದರೆ ಸರಕಾರಗಳಿಗೆ ಮಾತ್ರ ಇನ್ನೂ ವರದಿಯನ್ನು ತರಿಸಿ, ಅನುಷ್ಠಾನದ ಹೆಸರಿನಲ್ಲಿ ಕಲ್ಲೆಸೆಯುವವರನ್ನು ಬಾಂಬ್ ಎಸೆಯುವಂತೆ ಮಾಡುವ ಬಯಕೆ. ಜಮ್ಮು ಮತ್ತು ಕಾಶ್ಮೀರವನ್ನು ಮತ್ತಷ್ಟು ದೂರ ಮಾಡುವ ಹುನ್ನಾರ. ಅದಕ್ಕೆ ನಿವೃತ್ತರ ಸಹಾಯ ಬೇರೆ.
ಈ ನಿವೃತ್ತರಾದರೂ ಎಂಥವರು?
ಈ ಪಡಗಾಂವ್‌ಕರ್ ೨೦೦೫ರಲ್ಲಿ ಅಮೆರಿಕಾದಲ್ಲಿ ನಡೆದ ಎರಡು ದಿನಗಳ ಸಮ್ಮೇಳನವೊಂದರಲ್ಲಿ ಭಾಗವಹಿದ್ದವರು. ಆ ಸಮ್ಮೇಳನದ ರೂವಾರಿ ಮೊನ್ನೆ ತಾನೇ ಬಂಧಿತನಾದ ಕಾಶ್ಮೀರಿ ಪ್ರತ್ಯೇಕತಾವಾದಿ ಮತ್ತು ಐ.ಎಸ್.ಐ. ಏಜೆಂಟ್ ಗುಲಾಮ್ ನಬಿ ಫಾಯಿ. ಈ ಫಾಯಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಒಂದು ಗತಿ ಕಾಣಿಸುವ ಅಗತ್ಯವಿದೆ. ಆದರೆ ಪಡಗಾಂವಕರನಿಗೆ? ಸಂವಾದಕ್ಕೆ ಕಳುಹಿಸಿದ ಸರಕಾರಕ್ಕೆ?
ಅಷ್ಟಕ್ಕೂ ಈ ಸಂವಾದಕಾರರೆಂದರೆ ಏನು ಎಂಬುದೇ ಅರ್ಥವಾಗುವುದಿಲ್ಲ. ನಮಗೆಲ್ಲರಿಗೂ ಪೀಠಗಳು, ಆಯೋಗಗಳು ಗೊತ್ತಿವೆ. ಜಮ್ಮು ಮತ್ತು ಕಾಶ್ಮೀರದಂತಹ ಸೂಕ್ಷ್ಮವೂ ಮಹತ್ತ್ವವೂ ಆದ ಸಂಗತಿಗೆ ಸಂವಾದಕಾರರು! ಈ ವರದಿಯನ್ನು ನೋಡಿದರೆ ಇವರು ತಿರುಗಾಡಲು ಹೋದ ಪ್ರವಾಸಿಗರು ಎಂದೇ ಅನಿಸುತ್ತದೆ. ಈ ಮೂವರನ್ನು ನೋಡಿದರೆ ಅವರು ಮೋಜನ್ನೂ ಮಾಡಿದರು ಎಂದೂ ಅನಿಸುತ್ತದೆ.
ಟೂರು ಹೋದವರಿಂದ ಯಾರೂ ವರದಿಯನ್ನು ಬರೆಸಿಬಿಡಬಾರದುರಿ.
ಜಮ್ಮು ಮತ್ತು ಕಾಶ್ಮೀರದಲ್ಲಿ ಪರಮೋಚ್ಛ ರಾಜ್ಯಪಾಲರನ್ನು ನೇಮಿಸುವ "ವಿಪರೀತ" ದ ಸಲಹೆಯನ್ನೂ ಈ ವರದಿ ಮಾಡಿದೆ. ಹೀಗಿರುವ ಜಮ್ಮು ಮತ್ತು ಕಾಶ್ಮೀರವು single unit ಆಗಿರಬೇಕು ಎಂದು ಪುಕ್ಕಟೆ ಸಲಹೆಯನ್ನು ಅದು ಮಾಡುತ್ತದೆ. ವರದಿಯಲ್ಲಿ ಇರುವುದೆಲ್ಲವೂ ಇಂಥ ಪುಕ್ಕಟೆ ಸಲಹೆಗಳೇ.ಸಂಪೂರ್ಣ ವರದಿ ಸಲಹೆಗಳಿಂದ ತುಂಬಿಹೋಗಿದೆ. ಹೆದರಿಕೆಯಾಗುವುದು ಇಂಥ ಪುಕ್ಕಟೆ ಸಲಹೆಗಳಿಂದಲ್ಲ. ಅದನ್ನು ಚಾಚೂ ತಪ್ಪದೆ ಪಾಲಿಸಿಬಿಡುವ ತುಘಲಕ್ ಮಂಡೆಯ ಸರಕಾರಗಳಿಂದ.
ಸ್ವತಂತ್ರವಾಗಿ ಅಲೋಚನೆ ಮಾಡುವ ಯಾರಿಗೇ ಆದರೂ ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯ ಅರಿವಾಗುತ್ತದೆ. ಸಮಸ್ಯೆ ಯಾರಿಂದ ಮತ್ತು ಎಲ್ಲೆಲ್ಲಿದೆ ಎಂಬುದು ನಿಚ್ಚಳವಾಗುತ್ತವೆ. ಆದರೆ ಸರಕಾರಗಳಿಗೆ ಮಾತ್ರ ಇನ್ನೂ ವರದಿಯನ್ನು ತರಿಸಿ, ಅನುಷ್ಠಾನದ ಹೆಸರಿನಲ್ಲಿ ಕಲ್ಲೆಸೆಯುವವರನ್ನು ಬಾಂಬ್ ಎಸೆಯುವಂತೆ ಮಾಡುವ ಬಯಕೆ. ಜಮ್ಮು ಮತ್ತು ಕಾಶ್ಮೀರವನ್ನು ಮತ್ತಷ್ಟು ದೂರ ಮಾಡುವ ಹುನ್ನಾರ. ಅದಕ್ಕೆ ನಿವೃತ್ತರ ಸಹಾಯ ಬೇರೆ.
ಈ ನಿವೃತ್ತರಾದರೂ ಎಂಥವರು?
ಈ ಪಡಗಾಂವ್‌ಕರ್ ೨೦೦೫ರಲ್ಲಿ ಅಮೆರಿಕಾದಲ್ಲಿ ನಡೆದ ಎರಡು ದಿನಗಳ ಸಮ್ಮೇಳನವೊಂದರಲ್ಲಿ ಭಾಗವಹಿದ್ದವರು. ಆ ಸಮ್ಮೇಳನದ ರೂವಾರಿ ಮೊನ್ನೆ ತಾನೇ ಬಂಧಿತನಾದ ಕಾಶ್ಮೀರಿ ಪ್ರತ್ಯೇಕತಾವಾದಿ ಮತ್ತು ಐ.ಎಸ್.ಐ. ಏಜೆಂಟ್ ಗುಲಾಮ್ ನಬಿ ಫಾಯಿ. ಈ ಫಾಯಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಒಂದು ಗತಿ ಕಾಣಿಸುವ ಅಗತ್ಯವಿದೆ. ಆದರೆ ಪಡಗಾಂವಕರನಿಗೆ? ಸಂವಾದಕ್ಕೆ ಕಳುಹಿಸಿದ ಸರಕಾರಕ್ಕೆ?
ಅಷ್ಟಕ್ಕೂ ಈ ಸಂವಾದಕಾರರೆಂದರೆ ಏನು ಎಂಬುದೇ ಅರ್ಥವಾಗುವುದಿಲ್ಲ. ನಮಗೆಲ್ಲರಿಗೂ ಪೀಠಗಳು, ಆಯೋಗಗಳು ಗೊತ್ತಿವೆ. ಜಮ್ಮು ಮತ್ತು ಕಾಶ್ಮೀರದಂತಹ ಸೂಕ್ಷ್ಮವೂ ಮಹತ್ತ್ವವೂ ಆದ ಸಂಗತಿಗೆ ಸಂವಾದಕಾರರು! ಈ ವರದಿಯನ್ನು ನೋಡಿದರೆ ಇವರು ತಿರುಗಾಡಲು ಹೋದ ಪ್ರವಾಸಿಗರು ಎಂದೇ ಅನಿಸುತ್ತದೆ. ಈ ಮೂವರನ್ನು ನೋಡಿದರೆ ಅವರು ಮೋಜನ್ನೂ ಮಾಡಿದರು ಎಂದೂ ಅನಿಸುತ್ತದೆ.
ಟೂರು ಹೋದವರಿಂದ ಯಾರೂ ವರದಿಯನ್ನು ಬರೆಸಿಬಿಡಬಾರದುರಿ.

No comments:
Post a Comment