ಜ್ನಾನಪೀಠ ಪ್ರಶಸ್ತಿ ವಿಜೇತ ಕಾದಂಬರಿಗಾರ್ತಿ ಮಹಾಶ್ವೇತಾದೇವಿಯವರ "ಅರಣ್ಯೇರ್ ಅಧಿಕಾರ್" ಎಂಬ ಬಂಗಾಳಿ ಕಾದಂಬರಿ ಪ್ರಸಕ್ತ ಕಾಡಿನ ಪರಿಸ್ಥಿತಿಗಳ ಎಡೆಯಲ್ಲಿ ಮತ್ತೆ ಮತ್ತೆ ನೆನಪಾಗುವಂಥದ್ದು. ಸ್ವಾತಂತ್ರ್ಯಪೂರ್ವದ ಘಟನೆಯನ್ನೆತ್ತಿಕೊಂಡು ಮಹಾಶ್ವೇತಾದೇವಿ ಅರಣ್ಯದ ಬುಡಕಟ್ಟು ಪಂಗಡಗಳ ಜೀವನ ಮತ್ತು ಹೋರಾಟವನ್ನು ಅದರಲ್ಲಿ ಬಿಂಬಿಸಿದ್ದರು. ಮಧ್ಯ ಭಾರತ ಮತ್ತು ಪೂರ್ವಾಂಚಲ ರಾಜ್ಯಗಳ ಕಾಡುಗಳ ವನವಾಸಿಗಳ ಬವಣೆಯನ್ನು ಅವರು ಅರಣ್ಯದ ಅಕಾರ ಉಳಿಸಿಕೊಳ್ಳುವ ಹೋರಾಟವನ್ನಾಗಿ ಚಿತ್ರಿಸಿದ್ದರು. ಕಾಡಿನ ದೇವರನ್ನು ಪೂಜಿಸುವ ಮುಗ್ದ ವನವಾಸಿಗಳು, ಕಾಡಿನೊಳಗೆ ಬಂದ ಶಾಲೆ, ಅಕ್ಷರ ಕಲಿಯಲೆಂಬ ಆಸೆಯಿದ್ದರೂ ಅಲ್ಲಿ ಕಾಡಿನ ದೇವರನ್ನು ಬಿಟ್ಟು ಬೇರೊಂದು ಹೊಸ ದೇವರನ್ನು ಪೂಜಿಸಬೇಕೆಂಬ ಷರತ್ತುಗಳು. ಹೊಸ ದೇವರನ್ನು ಪೂಜಿಸಿದರೂ ಕಾಡಿನ ದೇವರನ್ನು ಪೂಜಿಸಬಾರದೆಂಬ ಕಟ್ಟುನಿಟ್ಟುಗಳ ನಡುವೆಯೇ ಅಕ್ಷರ ಕಲಿಯಬೇಕೆಂದು ಉದ್ಭವಿಸುವ ಹಂಬಲ,ಹೊಸದೇವರನ್ನು ಎದುರುಹಾಕಿಕೊಂಡರೆ ಗುಡಿಸಲೊಳಗೆ ನುಗ್ಗಿ ಧರಧರನೆ ಎಳೆದೊಯ್ಯುವ ಪೊಲೀಸರು, ಇಷ್ಟೆಲ್ಲಾ ಆಗುತ್ತಿರುವಾಗಲೇ ಕೈಬಿಟ್ಟುಹೋದ ಅರಣ್ಯದ ಅಧಿಕಾರ. ನಿಂತುಹೋದ ಕಾಡಿನ ದೇವರ ಉತ್ಸವ,ಬಿಳಿಯಾದ ನಿಲುವಂಗಿ ತೊಟ್ಟವನ ಮುಖದ ಕ್ರೌರ್ಯ, ಶಾಲೆಯಲ್ಲಿ ಶಿಲುಭೆ ತೊಟ್ಟ ಶಿಕ್ಷಕರಿಂದ ಅನಾಗರಿಕರೆಂಬ ಕೀಳು ಮಾತುಗಳು, ಕಾಡಿನಲ್ಲಿ ಆಗಾಗ್ಗೆ ವಕ್ಕರಿಸುವ ಸಾಂಕ್ರಾಮಿಕ ರೋಗಗಳು, ಗೆಡ್ಡೆ ಜ್ವರಗಳು ಕಾಡಿನ ದೇವರನ್ನು ಮೆರೆತಿರುವುದಕ್ಕಾಗಿಯೇ ಬಂದಿದೆಯೆಂಬ ಆತಂಕ. ಈ ರೋಗಗಳ ನಿವಾರಣೆಗಾಗಿ ಹೊಸ ದೇವರ ಮದ್ದು, ಪ್ರಾರ್ಥನೆ. ಹೋರಾಟ-ಬಲಿದಾನ, ಬಿರ್ಸಾ- ಮುಂಡಾ ವೊದಲಾದ ಜನರ ನೋವುಗಳೆಲ್ಲವೂ ಕಾದಂಬರಿಯಲ್ಲಿ ಕೇವಲ ಪಾತ್ರಗಳಂತೆ ಕಾಣುವುದಿಲ್ಲ. ಅವು ಒಂದಾನೊಂದು ಕಾಲದ ಅರಣ್ಯದ ಮೂಕ ಚಿತ್ರಗಳಂತೆ ಕಾಣುತ್ತವೆ. ಮತ್ತು ಆ ಘಟನೆಗಳು ಭಾರತದ ಯಾವುದೋ ಮೂಲೆಯಲ್ಲಿ ನಡೆದವು ಎಂದೂ ಅನಿಸುವುದಿಲ್ಲ. "ಹೊಸದೇವರು" ನುಗ್ಗಿದ ಎಲ್ಲಾ ಕಾಡಿನ ಕಥೆಯಂತೆ ಯೇ ಕಾದಂಬರಿ ಕಾಣುತ್ತದೆ.
ಮಿಷನರಿಗಳು ಯಾವ ಕೆಲಸವನ್ನೂ ಸುಮ್ಮನೆ ಮಾಡುವುದಿಲ್ಲ. ಶಾಲೆಯನ್ನು ಕೇವಲ ಶಿಕ್ಷಣಕ್ಕಾಗಿ ತೆರೆಯುದೇ ಇಲ್ಲ. ಆಸ್ಪತ್ರೆಗಳನ್ನೂ ಸುಮ್ಮನೆ ಕಟ್ಟಿಬಿಡುವುದೂ ಇಲ್ಲ. ಸುಮ್ಮ ಸುಮ್ಮನೆ ಕಸಮುಸುರೆ ತೆಗೆಯುದೂ ಇಲ್ಲ. ಮಿಷನರಿಗಳು ಏನೇ ಮಾಡಿದರೂ ಅಲ್ಲಿ ಶಿಲುಭೆ ಮಾರಾಟದ ಸ್ಟಾಲುಗಳಿರುತ್ತವೆ. ಈಸ್ಟ್ ಇಂಡಿಯಾದ ಕಾಲದಿಂದ ಮಿಷನರಿ ಭಾರತದಲ್ಲಿ ಮಾಡಿದ್ದು ಅದನ್ನೇ. ಮತ್ತು ಇಂದೂ ಮಾಡುತ್ತಿರುವುದೂ ಅದನ್ನೇ. ಅಂದಿನ ಮಿಷನರಿಗಳು ಇಂದು ಎನ್‌ಜಿಒ ಗಳಾಗಿರುವುದನ್ನು ಬಿಟ್ಟರೆ ಅವರ ಪ್ರಾರ್ಥನೆ, ಮೋಡಿ, ನರಿಬುದ್ಧಿಗಳಲ್ಲಿ ಏನೂ ವ್ಯತ್ಯಾಸವಾಗಿಲ್ಲ. ಅವರ ಎಲ್ಲಾ "ಸೇವೆ"ಗಳೂ ಕ್ರೈಸ್ತನ ಮಾರಾಟಕ್ಕೊಂದು ನೆಪಗಳು ಮಾತ್ರ ಎಂಬುದು ಆಗಾಗ್ಗೆ ಬೆಳಕಿಗೆ ಬರುತ್ತಾ ಇರುತ್ತವೆ. ಸ್ವಾತಂತ್ರ್ಯ ಪೂರ್ವದಲ್ಲಂತೂ ಮಿಷನರಿಗಳು ಕಾಡುಗಳಲ್ಲಿ ತೆರೆದ ಶಾಲೆಗಳು ಮತ್ತು ಚರ್ಚುಗಳಿಗೆ ವ್ಯತ್ಯಾಸವೇ ಇರಲಿಲ್ಲ. ಶಾಲೆಗೆ ಬಂದವರು ಚರ್ಚಿಗೆ ಹೋಗಲೇಬೇಕು.ಚರ್ಚಿಗೆ ಬಂದವರು ಕಾಡಿನ ದೇವರನ್ನು ತ್ಯಜಿಸಲೇ ಬೇಕು. ಕಾಡಿನ ದೇವರನ್ನು ಬಿಟ್ಟವರು ಹೊಸದೇವರನ್ನು ಪೂಜಿಸಲೇಬೇಕು.ಇದು ವನವಾಸಿ ಕ್ಷೇತ್ರಗಳಲ್ಲಿ ಮಿಷನರಿಗಳು ನಡೆಸುತ್ತಿದ್ದ "ಸೇವಾ ಚಟುವಟಿಕೆ".
ವನವಾಸಿಗಳಂಥ ಮುಗ್ದರು ಪರಿಸ್ಥಿತಿಯ ಒತ್ತಡದಿಂದ ಹೊಸದೇವರನ್ನು ಪೂಜಿಸಬೇಕಾಯಿತು. ಒಮ್ಮೆ ಅವರು ಹೊಸದೇವರನ್ನು ಪೂಜಿಸಲಾರಂಭಿಸಿದರೋ ಮುಂದೆಂದೂ ಅವರು ಕಾಡಿನ ದೇವರನ್ನು ಕಣೆತ್ತಿಯೂ ನೋಡುವಂತಾಗಲಿಲ್ಲ. ಮಿಷನರಿಗಳ ಕಾರ್ಯ ಅಷ್ಟಕ್ಕೇ ಮುಗಿಯಲೂ ಇಲ್ಲ. ಸಂಪೂರ್ಣ ಅರಣ್ಯದ ಅಧಿಕಾರವಷ್ಟೇ ಅಲ್ಲ ಸಂಪೂರ್ಣ ದೇಶವೇ ತನ್ನ ಹಿಡಿತಕ್ಕೆ ಬರಬೇಕು. ಅದಕ್ಕಾಗಿ ಕಾಡಿನ ಮಕ್ಕಳೇ ಆಗಬೇಕು ಎಂಬ ಆಲೋಚನೆಯೋ ದೂರ್ತ ಪಾದ್ರಿಗಳ ತಲೆಯೊಳಗೆ ಹೊಕ್ಕಿತು.ಹೊಸ ದೇವರನ್ನು ಒಪ್ಪಿಕೊಂಡ ಕಾಡಿನ ಮಕ್ಕಳನ್ನು ದ್ವೇಷ ಕುಡಿಸಿ ಬೆಳೆಸಲಾಯಿತು. ಆ ಮಕ್ಕಳಿಂದ ಕಾಡಿನ ದೇವರ ಮಕ್ಕಳನ್ನು ಬೆದರಿಸಲಾಯಿತು. ಕೆಲವರ ಕೈಗೆ ಶಸ್ತ್ರವನ್ನು ಕೊಡಲಾಯಿತು. ಕೆಲವರ ಕೈಗೆ ಪೆನ್ನನ್ನು ಕೊಡಲಾಯಿತು. ಪೆನ್ನು ಹಿಡಿದವರೂ ಶಸ್ತ್ರವನ್ನು ಬೆಂಬಲಿಸಿದರು. ಏನೇ ಕೊಟ್ಟರೂ ಇನ್ನೊಂದು ಕೈಯಲ್ಲಿ ಬೈಬಲ್ ಇದ್ದೇ ಇತ್ತು.ಮಿಷನರಿಗಳ ಅಂದಿನ ದೂರ್ತ ದೂರಾಲೋಚನೆಯ ಕಾರಣದಿಂದ ಇಂದು ಉತ್ತರ ಭಾರತದ ಮಧ್ಯ ಮತ್ತು ಪೂರ್ವಾಂಚಲದ ರಾಜ್ಯಗಳು ದಿನ ನಿತ್ಯ ಸುದ್ಧಿಗೆ ಗ್ರಾಸವಾಗುತ್ತಿದೆ. ಹಲವು ರಾಜ್ಯಗಳು ಹೆಸರಿಗಷ್ಟೇ ಭಾರತದ ಭೂಪಟದಲ್ಲಿವೆ.
೨೦೦೧ರ ಜನಗಣತಿಯ ಆಧಾರದಲ್ಲಿ ದೇಶದಲ್ಲಿ ಒಟ್ಟು ೮೪ ದಶಲಕ್ಷ ಪರಿಶಿಷ್ಟ ಪಂಗಡದ ಜನಸಂಖ್ಯೆ ಇತ್ತು. ಇದು ಮಧ್ಯ ಭಾರತ ಎಂದು ಕರೆಯಲ್ಪಡುವ ಜಾರ್ಖಂಡ್, ಛತ್ತೀಸ್‌ಗಢ, ಓರಿಸ್ಸಾ ಮತ್ತು ಬಿಹಾರಗಳ, ಮಧ್ಯ ಪ್ರದೇಶ, ಮಹಾರಾಷ್ಟ್ರ ,ಆಂಧ್ರದ ಕೆಲವು ಜಿಲ್ಲೆಗಳನ್ನೊಳಗೊಂಡ ಒಟ್ಟು ಜನಸಂಖ್ಯೆಯ ಮೂರನೇ ಒಂದರಷ್ಟು. ಅಂದರೆ ಈ ಭಾಗ ದೇಶದ ಮೂಲ ಸಂಸ್ಕೃತಿ, ಮೂಲ ಪರಂಪರೆ, ಜನಪದ ಕಲೆ, ಶ್ರೀಮಂತ ಇತಿಹಾಸವನ್ನು ರೂಪಿಸಿದ ಜನಸಮುದಾಯವನ್ನು ಹೊಂದಿರುವ ಪ್ರದೇಶ. ಅದೇ ರೀತಿ ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ಕೇರಳ ಭಾಗಗಳಲ್ಲಿ ಒಟ್ಟು ೮ ದಶಲಕ್ಷ ಪರಿಶಿಷ್ಟ ಪಂಗಡದ ಜನರು ಮತ್ತು ಉತ್ತರದ ಜಮ್ಮು ಮತ್ತು ಕಾಶ್ಮೀರ , ಹಿಮಾಚಲ ಪ್ರದೇಶ, ಉತ್ತರ ಖಂಡ ಪ್ರದೇಶಗಳಲ್ಲಿ ೨ದಶಲಕ್ಷ ಸಂಖ್ಯೆಯಲ್ಲಿ ಪರಿಶಿಷ್ಟ ಪಂಗಡದ ಜನರಿದ್ದಾರೆ. ಪೂರ್ವ ಭಾಗದಲ್ಲಿ ೧೪ ದಶಲಕ್ಷ ಪರಿಶಿಷ್ಟರಿದ್ದಾರೆ. ಅಂದರೆ ದೇಶದ ಬಹುದೊಡ್ಡ ಪ್ರಮಾಣದ ಜನವರ್ಗ ಈ ಪರಿಶಿಷ್ಟ ಪಂಗಡ ಎಂದಾಯಿತು. ಇಂದು ಭಾರತದಲ್ಲಿ ಮೂಲಸಂಸ್ಕೃತಿ ಎಂದು ಯಾವುದನ್ನು ಹೇಳುತ್ತೇವೋ ಅದನ್ನು ಬೆಳೆಸಿ, ಉಳಿಸಿಕೊಂಡು ಬಂದವರು ಈ ಸಮುದಾಯದವರು. ಪ್ರಾಚೀನ ಋಷಿ ಮೂಲವನ್ನು ನೋಡಿದರೂ ಅಲ್ಲಿ ಕಾಣುವುದು ಆಧುನಿಕದಲ್ಲಿ ಪರಿಶಿಷ್ಟ ಪಂಗಡವೆಂದು ಕರೆಸಿಕೊಳ್ಳುವ ವರ್ಗಗಳೇ. ಹಲವೊಮ್ಮೆ ರಾಜರಾಗಿ, ಇನ್ನು ಕೆಲವೊಮ್ಮೆ ರಾಜರ ಬಂಟರಾಗಿ, ವ್ಯಾಪಾರಿಗಳಾಗಿ ಸಮಾಜದ ಅನ್ಯಾನ್ಯ ಜವಾಬ್ದಾರಿಗಳನ್ನು ನಿರ್ವಹಿಸಿದವರು ಇವರು. ಕೆಲವು ಪ್ರದೇಶಗಳಲ್ಲಿ ಇವರು ವನವಾಸಿಗಳು. ಇನ್ನು ಕೆಲವೆಡೆ ಕಾಲದ ಬದಲಾವಣೆಯಲ್ಲಿ ಸಮಾಜ ಸಾಗರದಲ್ಲಿ ಬೆರೆತುಹೋದವರು.ಇವರಲ್ಲಿ ಉತ್ತರ ಭಾರತದ ಪರಿಶಿಷ್ಟ ಪಂಗಡಗಳ ಇತಿಹಾಸವನ್ನು ಗಮನಿಸಿದರೆ ಸತತ ಹೊಡೆತಕ್ಕೊಳಗಾದ ಸಂಗತಿಗಳೇ ಎದ್ದು ಕಾಣುತ್ತದೆ. ಮಹಾಶ್ವೇತಾದೇವಿಯವರ "ಅರಣ್ಯೇರ್ ಅಧಿಕಾರ್" ನ ಪಾತ್ರಗಳು ರೂಪ ತಳೆದಿದ್ದು ಇಂಥದ್ದೇ ವನವಾಸಿ ಕ್ಷೇತ್ರಗಳಲ್ಲಿ.
ಅಂದು ಹೊಸ ದೇವರನ್ನು ತಂದು ಶಾಲೆಯಲ್ಲಿಟ್ಟು ಪಾಠ ಮಾಡಿದ ಪರಿಣಾಮವಾಗಿ ಇಂದು ಮಿಷನರಿಗಳು ಹುಲುಸಾದ ಬೆಳೆ ತೆಗೆದಿವೆ. ದೇಶದ ಒಟ್ಟು ೮೪ ದಶಲಕ್ಷ ಪರಿಶಿಷ್ಟ ಪಂಗಡಗಳಲ್ಲಿ ಇಂದು ೭೮ ದಶಲಕ್ಷ ಜನರು ಮಾತ್ರ ಹಿಂದೂ-ಬೌದ್ಧರು. ೧.೨ ದಶಲಕ್ಷ ಪರಿಶಿಷ್ಟ ಪಂಗಡ ಮುಸ್ಲಿಮರು ಮತ್ತು ೮ ದಶಲಕ್ಷ ಪರಿಶಿಷ್ಟ ಪಂಗಡದ ಜನರು ಕ್ರಿಶ್ಚಿಯನ್ನರು. ಎಲ್ಲವೂ ಸರಿ ಇದ್ದಿದ್ದರೆ ಇದು ಹೇಗೆ ಸಾಧ್ಯವಾಗುತ್ತಿತ್ತು? ಪರಿಶಿಷ್ಟ ಪಂಗಡ ಎಂದರೆ ಕೇವಲ ಕಾಗದ ಪತ್ರಗಳಿಗೆ ಬರುವಂಥ ಅರ್ಹತೆಯಲ್ಲ. ಹೇಗೆ ಜಾತಿ ಎನ್ನುವುದು ಹುಟ್ಟಿನಿಂದ ಬರುವಂಥ ಸಂಗತಿಯಲ್ಲವೋ ಹಾಗೆಯೇ ಕ್ರಿಶ್ಚಿಯನ್ ಪರಿಶಿಷ್ಟ ಪಂಗಡ, ಕ್ರಿಶ್ಚಿಯನ್ ಬುಡಕಟ್ಟು ಜನಾಂಗ ಎನ್ನುವುದೂ ಸಾಧ್ಯವಿಲ್ಲ. ಏಕೆಂದರೆ ಪರಿಶಿಷ್ಟ ಪಂಗಡ ಎನ್ನುವುದು ಒಂದು ವಿಶೇಷತೆ. ಅರ್ಹತೆ ಎಂದರೂ ಸರಿಯೇ.ಎಲ್ಲಿನದೋ ಶಿಲುಭೆಯನ್ನು ಕಾಡಿನ ದೇವರ ಸ್ಥಾನದಲ್ಲಿ ತಂದು ನೆಟ್ಟರೆ ಆ ಬುಡಕಟ್ಟು ಮೂಲಸಂಸ್ಕೃತಿಯನ್ನು ಉಳಿಸಿಕೊಂಡಿರುವುದಿಲ್ಲ. ಆದರೆ ಭಾರತದಲ್ಲಿ ಅಂಕೆಸಂಖ್ಯೆಗಳದ್ದೇ ಆಟ ನಡೆಯುದರಿಂದ ಎಲ್ಲವೂ ಸಂಭವಿಸುತ್ತವೆ. ಕಾಡಿನ ದೇವರ ಜಾಗದಲ್ಲಿ ಹೊಸ ದೇವರು ಬಂದರೂ ದಾಖಲೆಗಳ ಪ್ರಕಾರ ಪರಿಶಿಷ್ಟ ಪಂಗಡದ ಸ್ಥಾನ ಮಾನವನ್ನೇ ಉಳಿಸಿಕೊಳ್ಳುವ ಹುನ್ನಾರವನ್ನು ಮಿಷನರಿಗಳು ಮಾಡಿದ್ದಾರೆ. ಹಾಗಾಗಿ ದೇಶದಲ್ಲಿ ಆಗಬಾರದ್ದು ಆಗುತ್ತಿದೆ.
ಚೆನ್ನೈ ಮೂಲದ centre for policy studies-2011 ನ SCHEDULED TRIBES OF INDIA: RELIGIOUS DEMOGRAPHY AND REPRESENTATION ಎಂಬ ವರದಿಯನ್ನು ನೋಡಿದಾಗ ಇದು ಮಹಾಶ್ವೇತಾದೇವಿಯವರ ಕಾದಂಬರಿಯ ಮುಂದುವರಿದ ಭಾಗವೇನೋ ಎನಿಸುತ್ತದೆ.
ಆ ವರದಿ ಹೀಗೆ ಹೇಳುತ್ತದೆ:
ಅರುಣಾಚಲ ಪ್ರದೇಶದಲ್ಲಿ ೨೦೦೯ರಲ್ಲಿ ಸಿವಿಲ್ ಹುದ್ದೆಗಳಲ್ಲಿ ೧೬ ಜನರು ಆಯ್ಕೆಯಾದರು. ಇವರಲ್ಲಿ ೧೩ ಜನರು ಪರಿಶಿಷ್ಟ ಪಂಗಡ ದವರು.ಈ ೧೩ ಜನರಲ್ಲಿ ೭ ಜನರು ಕ್ರಿಶ್ಚಿಯನ್ನರು.ಇವರಲ್ಲಿ ೬ ಜನರನ್ನು ಕ್ರಿಶ್ಚಿಯನ್ನರು ಎಂಬ ಒಂದೇ ಕಾರಣಕ್ಕಾಗಿ ನೇರವಾಗಿ ನೇಮಕ ಮಾಡಿಕೊಳ್ಳಲಾಗಿತ್ತು. ಅಲ್ಲದೆ ೧೦ ಮಂದಿ ಐಎಸ್ ದರ್ಜೆಯ ಅಕಾರಿಗಳ ನೇಮಕವಾದಾಗಲೂ ಅವರಲ್ಲಿ ೫ ಮಂದಿ ಕ್ರಿಶ್ಚಿಯನ್ನರಿದ್ದರು. ಇವರೆಲ್ಲರ ನೇಮಕದಲ್ಲಿ ಕ್ರಿಶ್ಚಿಯನ್ನರಿಗೆ ಪ್ರಾಧಾನ್ಯವನ್ನು ನೀಡಲಾಗಿತ್ತು.
ನಾಗಾಲ್ಯಾಂಡ್‌ನಲ್ಲಿ ಸಿವಿಲ್ ಅಕಾರಿಗಳ ಹುದ್ದೆಗಳಿಗೆ ನೇಮಕವಾದ ೨೮ ಜನರಲ್ಲಿ ಎಲ್ಲರೂ ಕ್ರಿಶ್ಚಿಯನ್ನರಾಗಿದ್ದರು. ಐಎಸ್ ದರ್ಜೆಯ ೨೨ ಅಧಿಕಾರಿಗಳಲ್ಲಿ ಎಲ್ಲರೂ ಪರಿಶಿಷ್ಟ ಪಂಗಡದ ಕ್ರಿಶ್ಚಿಯನ್ನರೇ. ಮಣಿಪುರದಲ್ಲಿ ಸಿವಿಲ್ ಅಧಿಕಾರಿ ಹುದ್ದೆಗಳಿಗೆ ಆಯ್ಕೆಯಾದ ೪೮ ಜನರಲ್ಲಿ ೨೫ ಮಂದಿ ಪರಿಶಿಷ್ಟ ಪಂಗಡವರು. ವಿಚಿತ್ರವೆಂದರೆ ಅವರೆಲ್ಲರೂ ಕ್ರಿಶ್ಚಿಯನ್ನರು.
ಮಿಜೋರಾಂ ನಲ್ಲಿ ೨೦೦೯ರಲ್ಲಿ ೨೦ ಸಿವಿಲ್ ದರ್ಝೆಯ ಅಧಿಕಾಗಳು ನೇಮಕವಾದರು. ಅವರಲ್ಲಿ ೧೫ ಜನರನ್ನು ನೇರವಾಗಿ ನೇಮಕ ಮಾಡಿಕೊಳ್ಳಲಾಗಿತ್ತು. ಇವರೆಲ್ಲರೂ ಪರಿಶಿಷ್ಟ ಪಂಗಡದ ಕ್ರಿಶ್ಚಿಯನ್ನರು. ಮೇಘಾಲಯದಲ್ಲಿ ೧೮ ಮಂದಿ ಸಿವಿಲ್ ಅಧಿಕಾರಿಗಳಲ್ಲಿ ೧೬ ಜನರು ಕ್ರಿಶ್ಚಿಯನ್ನರು. ತ್ರಿಪುರಾದಲ್ಲಿ ೭ ಜನ ಐಎಸ್ ದರ್ಜೆಯ ಅಕಾರಿಗಳಲ್ಲಿ ಇಬ್ಬರು ಕ್ರಿಶ್ಚಿಯನ್ನರು.ಅಸ್ಸಾಮಿನ ೧೯ ಜನ ಉನ್ನತ ಅಕಾರಿಗಳು ಪರಿಶಿಷ್ಟ ಪಂಗಡದ ಅಧಿಕಾರಿಗಳಾಗಿದ್ದರು. ಅವರಲ್ಲಿ ೯ ಜನಪರಿಶಿಷ್ಟ ಪಂಗಡದ ಕ್ರೈಸ್ತರು. ಹೀಗೆ ಮಿಷನರಿಗಳ ಕಾಡಿನ ಹಾದಿ ಕಾಡಿಗಷ್ಟೇ ಸೀಮಿತವಾಗಿಲ್ಲ. ಅಂದು ಇವರ ಉದ್ದೇಶ ಕೇವಲ ಅರಣ್ಯದ ಅಧಿಕಾರ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಈ ಮಿಷನರಿಗಳ ಅಸಲು ಉದ್ದೇಶ ದೇಶದ ಅಕಾರವೇ ಎನ್ನುವುದು ಈ ವರದಿಯಿಂದ ಸ್ಪಷ್ಟವಾಗುತ್ತದೆ. ಇನ್ನೂ ಒಂದು ಎದೆ ನಡುಗಿಸುವ ಸಂಗತಿಯೆಂದರೆ ಪೂರ್ವಾಂಚಲದ ಏಳು ರಾಜ್ಯಗಳ ಜನಸಂಖ್ಯೆ( ೨೦೦೧ರ ಜನಗಣತಿಯ ಆಧಾರದಲ್ಲಿ) ೩೮೪ ಲಕ್ಷ . ಇದರಲ್ಲಿ ೧೦೫ ಲಕ್ಷ ಪರಿಶಿಷ್ಟ ಪಂಗಡಗಳದ್ದು. ಅಂದರೆ ಒಟ್ಟು ಜನಸಂಖ್ಯೆಯ ಶೇ. ೨೭ರಷ್ಟು ಪರಿಶಿಷ್ಟ ಪಂಗಡಗಳದ್ದು.ಈ ೧೦೫ ಲಕ್ಷ ಪರಿಶಿಷ್ಟ ಪಂಗಡದ ಸಂಖ್ಯೆಯಲ್ಲಿ ೫೫ ಲಕ್ಷ ಕ್ರೈಸ್ತರದ್ದು. ಇದೇ ಅಲ್ಲದೆ ಪರಿಶಿಷ್ಟ ಪಂಗಡ ಅಲ್ಲದ ಜನರೂ ಕ್ರಿಶ್ಚಿಯನ್ನರಾಗಿ ಹಲವು ರಾಜ್ಯಗಳು ಕ್ರೈಸ್ತಬಾಹುಳ್ಯದ ರಾಜ್ಯಗಳಾಗಿವೆ.ಇನ್ನು ಜಾರ್ಖಂಡ್ , ಛತ್ತೀಸ್‌ಗಢಗಳಲ್ಲಿ ಕೂಡ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಎಲ್ಲೆಲ್ಲಿ ಅರಣ್ಯಗಳಿವೆಯೋ, ಎಲ್ಲಲ್ಲಿ ಕಾಡಿನ ದೇವರನ್ನು ಕಿತ್ತುಹಾಕಲಾಗಿವೆಯೋಅಲ್ಲೆಲ್ಲಾ ಇಂದು ಕ್ರೈಸ್ತ ಸಾಮ್ರಾಜ್ಯ ಬೆಳೆದಿವೆ. ಇದನ್ನು ಕ್ರೈಸ್ತ ಸಾಮ್ರಾಜ್ಯವಾದ ಎಂದು ಕರೆಯಬೇಕಲ್ಲದೆ ಬೇರೇನೂ ಹೇಳಬೇಕಾಗಿಲ್ಲ. ಕೇರಳಕ್ಕೆ ಮೆಣಸು ವ್ಯಾಪಾರದ ನೆಪದಲ್ಲಿ ಬಂದವರು ಅನಂತರ "ಸಂತ"ರೆನಿಸಿಕೊಂಡದ್ದು ಕಾಡಿನ ದೇವರನ್ನು ಕಿತ್ತುಹಾಕಿಯೇ. ಭಾರತದದ ಮರ್ಮ ಎಲ್ಲಿದೆಯೆಂದು ಮಿಷನರಿಗಳು ಅಂದೇ ಕಂಡುಹಿಡಿದಿದ್ದರು. ಮರ್ಮಾಘಾತವೇ ಗೆಲುವಿನ ಹಾದಿ ಎಂಬುದನ್ನು ವಿಶ್ವಾದ್ಯಂತ ಪ್ರಯೋಗಿಸಿದ್ದ ಮಿಷನರಿಗಳು ಇಂದಿಗೂ ಭಾರತದಲ್ಲೂ ಹಲವು ವ್ಯಾಟಿಕನ್ನಿನ ನಿರ್ಮಾಣದಲ್ಲಿ ತೊಡಗಿದ್ದಾರೆ.
ಮತಾಂತರ ಪೂಜಾಪದ್ದತಿಯ ಬದಲಾವಣೆಗಷ್ಟೇ ಸೀಮಿತವಾಗುವುದಿಲ್ಲ ಎನ್ನುವುದು ಕಾಲಕಳೆದಂತೆ ಅರಿವಾಗುತ್ತಿರುವ ಸಂಗತಿ. ಇದೀಗ ಮತಾಂತದ ಅಕಾರಿಗಳನ್ನು ಸೃಷ್ಟಿಸುವ ವರೆಗೂ ಬೆಳೆದಿದೆ ಎಂದರೆ ...?
ಅಂದು ಕಾಡಿನ ದೇವರಿಗಾಗಿ ನೂರಾರು ವನವಾಸಿಗಳ ಬಲಿದಾನವಾಯಿತು. ಕಾಡಿನ ಅಕಾರ ಬಿಟ್ಟುಕೊಡೆ ಎಂದ ಲಕ್ಷ್ಮಣಾನಂದರ ಹತ್ಯೆಯಾಯಿತು. ಕಾಡಿನೊಳಗೆ ಪ್ರವೇಶವಿಲ್ಲ ಎಂದ ದಾರಾಸಿಂಗನಿಗೆ ಜೈಲಾಯಿತು. ವನವಾಸಿಗಳನ್ನು ಮರಳುಗೊಳಿಸಿ ಕಾಮಿಸುತ್ತಿದ್ದ ಆಸ್ಟ್ರೇಲಿಯನ್ ಪಾದ್ರಿ ಗ್ರಾಂ ಸ್ಟೈನನಿಗೆ ಮರಣೋತ್ತರ ಪದ್ಮ ಪ್ರಶಸ್ತಿಯಾಯಿತು. ಮರಗಳ ಸಂದಿಯಿಂದ ಶಿಲುಭೆಗಳು ಇಣುಕಿದವು. ಜಿಂಗಲ್‌ಬೆಲ್ ಪ್ರಾರ್ಥನೆಯಾಯಿತು. ಇದೀಗ ಮಿಷನರಿಗಳಿಗೆ ಅಧಿಕಾರಿಗಳನ್ನು ಹುಟ್ಟಿಸುವ ಹುಮ್ಮಸು ಬಂದಿದೆ.ಕಾಡು ನುಂಗಿದ ಮೇಲೆ ಕಾಡಿಂದಲೇ ಹೊರಟಿತು ಮಿಷನರಿ ಬೋನು.
ಕಾಡಿನ ದೇವರಿಗೆ ಬಲಿ ಬೀಳದೆ ಕಾಲವೆಷ್ಟಾಯಿತೋ.

No comments:
Post a Comment