ಮನುಷ್ಯನೊಬ್ಬನ ಹುಟ್ಟಿನಲ್ಲಿ ವಿಶೇಷವೇನೂ ಇರುವುದಿಲ್ಲ. ಹುಟ್ಟುತ್ತಲೇ ವ್ಯಕ್ತಿ ವಿಚಿತ್ರವಾದುದೇನನ್ನೋ ಹೊತ್ತು ತರುವುದೂ ಇಲ್ಲ. ಯಾರೋ ಹೇಳಿದಂತೆ ಹುಟ್ಟು ಒಂದು ಆಕಸ್ಮಿಕ. ಸಾವೂ ಕೂಡ ಆಕಸ್ಮಿಕವೇ. ಹುಟ್ಟಿನಿಂದ ಖುಷಿ, ಸಾವಿನಿಂದ ದುಖ. ಇಷ್ಟರ ಹೊರತಾಗಿ ಜನನ ಮರಣಗಳಲ್ಲಿ ಮಹಾ ಎನ್ನುವಂಥದ್ದೇನೂ ಇರುವುದಿಲ್ಲ. ಆದರೆ ಜನನ ಮರಣಗಳ ನಡುವಿನ ಗ್ಯಾಪ್‌ನಿಂದ ಮನುಷ್ಯನನ್ನು ಅಳೆಯುವುದು ಸಮಾಜದ ಸ್ವಭಾವ. ಆ ಅಳೆಯುವಿಕೆಯಿಂದ ಜನನಕ್ಕೂ ಮರಣಕ್ಕೂ ಅಚಾನಕ್ಕಾಗಿ ಮಹತ್ತ್ವವೂ ಬಂದು ಬಿಟ್ಟಿರುತ್ತದೆ. ಜನನವಾಗಿಯೂ ನಿಧನವಾಗಿಯೂ ಅದೆಷ್ಟೋ ವರ್ಷಗಳಾಗಿದ್ದರೂ ಕೆಲವರ ನೆನಪು, ಮೆಲುಕು ಪ್ರಸ್ತುತದೊಟ್ಟಿಗೆ ಥಳುಕು ಹಾಕಿಕೊಳ್ಳುತ್ತದೆ. ಅವರು ಇಂದಿಗೂ ಬೇಕು ಎನ್ನುವುದೇ ಅದರ ತಿರುಳು. ಹಾಗಾಗಿ ಈಗೊಂದು ವರ್ಷದಿಂದ ಹಲವು ಮಹಾಪುರುಷರ ೧೫೦ನೇ ಜನ್ಮವರ್ಷವನ್ನು ಕೂಡ ದೇಶ ಆಚರಿಸಿತು. ಗುರುದೇವ ರವೀಂದ್ರನಾಥ ಠಾಕೂರ್, ವಿಜ್ಞಾನಿ ಪೂರ್ಣಚಂದ್ರ ರಾಯ್‌ರವರ ಸಾಧನೆ, ಪ್ರೇರಣೆಗಳನ್ನು ದೇಶ ನೆನಪು ಮಾಡಿಕೊಂಡಿತು. ಇದೀಗ ಮತ್ತೋರ್ವ ಮಹಾ ವ್ಯಕ್ತಿಯ ೧೫೦ನೇ ವರ್ಷವನ್ನು ಸಂಭ್ರಮ, ಸಡಗರದಿಂದ ದೇಶ ಆಚರಿಸಿಕೊಳ್ಳುತ್ತಿದೆ ಮತ್ತು ಈ ಆಚರಣೆ ವಿಶೇಷವೂ ಅನಿವಾರ್ಯವೂ ಆಗಿದೆ. ಏಕೆಂದರೆ ಅವರು ಸ್ವಾಮಿ ವಿವೇಕಾನಂದರು. ಒರ್ವ ಕಾವಿ ಧರಿಸಿದ ಸಂತ. ಸಂತರೊಬ್ಬರು ಹೀಗೂ ಇರಬಹುದು ಎನಿಸಿದ ಮಹಾತ್ಮ. ಭಾರತೀಯ ಪುರಾತನ ಋಷಿ ಪರಂಪರೆಯ ಆಧುನಿಕ ಅವತಾರಪುರುಷ. ಅಗಸ್ತ್ಯ, ಕಂಭ, ಕೌಂಡಿನ್ಯರಂತೆ ಸಾಗರದಾಚೆಗೆ ಸಾಗಿದವರು. ಶಂಕರಾಚಾರ್ಯರಂತೆ ದೇಶವಿಡೀ ಸಂಚಾರ ಮಾಡಿದವರು. ಕಲ್ಲುಮುಳ್ಳಿನಲ್ಲೇ ನಡೆದರೂ ಅವರು ಸಾಗಿದ ಮಾರ್ಗವೆಲ್ಲಾ ಹೂವಿನ ದಾರಿಯೇ ಆಯಿತು. ಅಧ್ಯಾತ್ಮವನ್ನು ವೈಚಾರಿಕವಾಗಿ, ಅಧುನಿಕವಾಗಿ ಪ್ರಚುರಪಡಿಸಿದ ವಿವೇಕಾನಂದರ ಮಾತುಗಳಿಂದಲೇ ಬಂಗಾಳಿಗಳು ಬಲಿದಾನಕ್ಕೆ ಹೊರಟುಬಿಡುತ್ತಿದ್ದರೆಂದರೆ ಇದೇನಿದು ಮೋಡಿ?
ಪಾಶ್ಚಾತ್ಯ ಮೋಜಿನ ವ್ಯಕ್ತಿಗಳೂ ವಿವೇಕ ಪ್ರಭೆಗೆ ಒಳಗಾಗಿ ಸೇವೆಯೇ ಪರಮಧರ್ಮ ಎನ್ನುತ್ತಿದ್ದುದೇಕೆ? ಅಧ್ಯಾತ್ಮದಲ್ಲೇ ಭಾರತದ ಭವಿಷ್ಯವಿದೆ ಎಂದು ಅಂದೇ ಹೇಳಿದ್ದ ವಿವೇಕಾನಂದರಿಗೆ ಮುಂದಿನ ಭಾರತದ ಬಗ್ಗೆ ಸ್ಪಷ್ಟ ಚಿತ್ರಣವಿರಲಿಲ್ಲವೆ?
ಹೀಗೆ ಸಮಾಜದ ಹಲವು ಮುಖಗಳನ್ನು, ಭಾರತದ ಬಲಾಬಲಗಳನ್ನು ವಿಶ್ಲೇಷಿಸಿದ ಸ್ವಾಮಿ ವಿವೇಕಾನಂದರ ೧೫೦ನೇ ಜನ್ಮ ವರ್ಷಾಚರಣೆಯನ್ನು ಆಚರಿಸುತ್ತಿರುವ ಹೊತ್ತಲ್ಲಿ ಹಲವು ಸಂಗತಿಗಳು ಕಾಡುತ್ತವೆ. ಇಂದಿಗೂ ಸಮಾಜವನ್ನು ಕೊರೆಯುತ್ತಿರುವ ಸಂಗತಿಗಳು ಮತ್ತು ಅದರ ಬಗ್ಗೆ ಅಂದೇ ವಿವೇಕಾನಂದರು ಹೇಳಿದ್ದ ಪರಿಹಾರಗಳು ನೆನಪಾಗುತ್ತವೆ.
ಕಾವಿ ಧರಿಸಿಯೂ ಕ್ಷಾತ್ರ ತೇಜಸ್ಸನ್ನು ಹೊಂದಿದ ಸನ್ಯಾಸಿಯೊಬ್ಬ ಏನನ್ನು ಬೋಧಿಸಬಹುದು? ಒಂದಿಷ್ಟು ಅಲೌಕಿಕ, ಆಧ್ಯಾತ್ಮಿಕ, ಪಾಮರರಿಗೆ ಅನಗತ್ಯವಾದ, ಆಚರಿಸಲಸಾಧ್ಯವಾದ ವಿಚಾರಗಳನ್ನಷ್ಟೇ ಎಂಬುದನ್ನು ಸುಳ್ಳು ಮಾಡಿದ ವಿವೇಕಾನಂದರು ಭಾರತೀಯ ಕೃಷಿಯ ಬಗೆಗೂ ಚಿಂತನೆ ನಡೆಸಿದ್ದರು. ಭಾರತೀಯರು ವ್ಯವಸಾಯವನ್ನು ಒಂದು ಉದ್ಯೋಗವಾಗಿ ರೂಪಿಸಿಕೊಳ್ಳಬಹುದು ಎಂದು ಅವರು ಕರೆಯನ್ನು ನೀಡಿದ್ದರು. “ಭಾರತೀಯ ಪ್ರಾಚೀನ ಋಷಿಗಳು ಕೃಷಿಕರಾಗಿದ್ದರು. ಆದ್ದರಿಂದ ಕೃಷಿಯ ಬಗ್ಗೆ ಏಕೆ ಕೀಳರಿಮೆ? ಭಾರತದ ಕೃಷಿ ವಿಜ್ಞಾನವನ್ನೂ ಅಮೂಲಾಗ್ರವಾಗಿ ಅಧ್ಯಯನ ಮಾಡಿ ವ್ಯವಸಾಯದಲ್ಲಿ ಅಳವಡಿಸಬೇಕು. ಅವೈಜ್ಞಾನಿಕ ಪದ್ಧತಿಗಳಿಂದ ಕೃಷಿ ಉತ್ಪತ್ತಿ ಕ್ಷೀಣಿಸುತ್ತಿದೆ. ನಗರದ ಭೋಗ ಜೀವನಕ್ಕೆ ಹಾತೊರೆಯುತ್ತಿರುವ ಹಳ್ಳಿಗರು ನಗರದ ರೋಗರುಜಿನಗಳಿಗೆ ಸಿಕ್ಕಿ ಸಾವನ್ನಪ್ಪುತ್ತಿದ್ದಾರೆ. ಗ್ರಾಮೀಣ ಜನತೆ ಹಳ್ಳಿಗಾಡಿನ ಉತ್ತಮ ಪರಿಸರದಲ್ಲಿ ವ್ಯವಸಾಯ ಪದ್ಧತಿಯನ್ನು ವೃದ್ಧಿಸಿಕೊಂಡು ಆರೋಗ್ಯದಿಂದ, ನೆಮ್ಮದಿಯಿಂದ ಬದುಕಲು ಸಾಧ್ಯ ಎಂದಿದ್ದರು. ಶತಮಾನಗಳ ಹಿಂದೆ ಇಂಥ ಮಾತನಾಡಲು ಅದಮ್ಯ ಚೈತನ್ಯವೇ ಬೇಕಿತ್ತು. ಏಕೆಂದರೆ ಕಾವಿ ಹಾಕಿದವರಿಗೆ ಜನ ಅಪಾರ ಗೌರವವನ್ನು ನೀಡುವುದರೊಂದಿಗೆ ಚೌಕಟ್ಟನ್ನೂ ವಿಪರೀತವಾಗಿ ಇಟ್ಟುಬಿಡುತ್ತಿದ್ದರು. ಒರ್ವ ಕೃಷಿ ಪಂಡಿತನಂತೆ ಮಾತನಾಡುವುದು, ಕರೆ ನೀಡುವುದನ್ನು ಜನರು ಹಂಗಿಸುತ್ತಿದ್ದರು. ಆದರೆ ವಿವೇಕಾನಂದರ ವಿಚಾರಧಾರೆಯಲ್ಲಿ ಇಂಥ ಹಲವು ಸಂಗತಿಗಳು ಸಿಗುತ್ತವೆ. ಭಾರತಕ್ಕೆಂದು ಅವರು ಆಡದ ಮಾತಿಲ್ಲ. ಚಿಂತಿಸದ ವಿಚಾರವೇ ಇರಲಿಲ್ಲ. “ನನ್ನನ್ನು ಅರಿಯಬೇಕೆಂದರೆ ಭಾರತವನ್ನು ಅರಿಯಿರಿ” ಎಂದ ವಿವೇಕಾನಂದರು ಕೃಷಿಯನ್ನು ಅರಿಯದೇ ಇದ್ದವರಲ್ಲ ಎಂಬುದು ಅವರ ಮಾತಿನ ತಾತ್ಪರ್ಯ. ಹಾಗಾಗಿ ಕೃಷಿಯ ಬಗ್ಗೆ ಅವರಿಗೆ ದೊಡ್ಡ ಕನಸಿತ್ತು. ಕೃಷಿಯೇ ಸಕಲ ರಂಗಗಳ ಮೂಲ ಎಂಬುದನ್ನು ಅವರು ತಿಳಿದಿದ್ದರು. ಅವರು ಹಸಿವಿನ ಬಗ್ಗೆ ನಿರಂತರ ಮಾತನಾಡುತ್ತಿದ್ದರು. “ಎಲ್ಲಿಯವರೆಗೆ ಒಂದು ನಾಯಿಯು ಹಸಿವಿನಿಂದಿರುತ್ತದೋ ಅಲ್ಲಿಯವರೆಗೂ ನಾನು ನೂರಾರು ನರಕಗಳನ್ನು ಸುತ್ತಬಲ್ಲೆ. ಇದೇ ನನ್ನ ಧರ್ಮ” ಎಂದೊಮ್ಮೆ ವಿವೇಕಾನಂದರು ಹೇಳಿದ್ದರು. ಈ ಹಸಿವು, ಅದರ ಮೂಲ, ಪರಿಹಾರ, ಧರ್ಮಗಳ ಚಕ್ರಗಳನ್ನು ಸರಳವಾಗಿ ಹೇಳಿದ್ದರು. ವಿಚಿತ್ರವೆಂದರೆ ಅವರ ೧೫೦ನೇ ವರ್ಷಾಚರಣೆಯ ಸಂದರ್ಭದಲ್ಲಿ ಆ ಸಂತನ ಶ್ರೇಷ್ಠ ಚಿಂತನೆ ವಿಪರ್ಯಾಸದ ಮುಖ ಹೊತ್ತು ನಿಂತಿದೆಯೇ ಎನಿಸುತ್ತದೆ. ಏಕೆಂದರೆ ಕೃಷಿಯ ಬಗೆಗಿನ ಆಸಕ್ತಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಕಾವಿಧಾರಿ ಸಂನ್ಯಾಸಿಯ ಮಾತುಗಳನ್ನು ಮರೆತು ಇಂದು ಉದ್ದುದ್ದದ ಭಾಷಣ ಮಾಡುವವರು ವಿವೇಕಾನಂದರನ್ನು ಸ್ತುತಿಸುತ್ತಿದ್ದಾರೆ. ಇಂದು ಹಲವಾರು ಜೆಸಿಬಿ ಇಟ್ಟುಕೊಂಡವರೂ ವಿವೇಕಾನಂದರನ್ನು ಹೊಗಳುವವರೇ. ಕೃಷಿಯನ್ನು ದಮನಿಸುತ್ತಾ ವಿವೇಕಾನಂದರನ್ನು ಸ್ತುತಿಸುವುದು, ಅಭಿವೃದ್ಧಿಯ ಪರಿಕಲ್ಪನೆಯೇ ಇಲ್ಲದೆ ಹಸಿವನ್ನು ವ್ಯಾಖ್ಯಾನಿಸುವುದು ಎರಡೂ ಎಡಬಿಡಂಗಿತನವೇ. ಅವರಿಗೆ ವಿವೇಕಾನಂದರು ಅರ್ಥವಾಗಿಲ್ಲ ಎಂದೇ ಅರ್ಥ. “ಲಕ್ಷಾಂತರ ಜನರು ಹಸಿವು, ಅಜ್ಞಾನಗಳಲ್ಲಿ ಉಳಿದಿರುವವರೆಗೂ ಅವರ ವೆಚ್ಚದಲ್ಲಿ ವಿದ್ಯಾವಂತರಾಗಿಯೂ ಅವರೆಡೆಗೆ ಸ್ವಲ್ಪವೂ ಗಮನ ಕೊಡದಿರುವ ಪ್ರತಿಯೊಬ್ಬನನ್ನೂ ನಾನು ದ್ರೋಹಿ ಎಂದು ಭಾವಿಸುತ್ತೇನೆ” ಎಂದ ವಿವೇಕಾನಂದರ ಮಾತುಗಳನ್ನು ಕೇಳುವಾಗ ಎಲ್ಲರ ಹೆಗಲುಗಳಲ್ಲೂ ಸ್ವತ ನಮ್ಮ ಹೆಗಲುಗಳಲ್ಲೂ ಬೂದಿ ಅಂಟಿಕೊಂಡಿರುವುದು ಭಾಸವಾಗುತ್ತದೆ. ಹೀಗೆ ವಿವೇಕಾನಂದರ ಚಿಂತನೆ ಇಂದಿಗೂ ನಾಟಿ ನಿಲ್ಲುತ್ತದೆ. ಹೀಗೆ ನಾಟಿ ನಿಲ್ಲುವುದರಿಂದ ಅದು ಇಂದೂ ಪ್ರಸ್ತುತ, ಅನಿವಾರ್ಯವಾಗಿ ಕಾಡುತ್ತದೆ. ಇಂದು ಸಮಾಜದಲ್ಲಿ ನೆಲೆಗೊಂಡಿರುವ ಹಲವು ಅನಿಷ್ಟಗಳಿಗೆ ವಿವೇಕಾನಂದರ ಚಿಂತನೆಯಲ್ಲಿ ಪರಿಹಾರವಿದೆ. ಯುವ ಜನರತ್ತ ಕೇಂದ್ರವಾಗಿಸಿದ ಅವರ ಚಿಂತನೆ ಎಲ್ಲಾ ಕಾಲಕ್ಕೂ ಹೊಂದಿಕೆಯಾಗುತ್ತದೆ. ಜಾಗತೀಕರಣದ ಈ ಸಂದರ್ಭದಲ್ಲಿ ಅದು ಮತ್ತಷ್ಟು ಸಂಜೀವಿನಿಯಂತೆ ಕಾಣುತ್ತಿದೆ. ಎಡಬಿಡಂಗಿಗಳಂತಾಗಿರುವ ಯುವ ಜನರು ಸ್ಪಷ್ಟ ಗುರಿಯಿಲ್ಲದೆ, ಗುರುವಿಲ್ಲದೆ ಸಾಗುತ್ತಿರುವ ಕುರಿ ಮಂದೆಯಂತೆ ಇರುವಲ್ಲಿ ವಿವೇಕಾನಂದರೇ ಮಾರ್ಗದರ್ಶಕರಲ್ಲದೆ ಬೇರೆ ಪರಿಹಾರಗಳು ಕಾಣುತ್ತಿಲ್ಲ. ಕೆಲ ತಿಂಗಳುಗಳ ಹಿಂದೆ ಅಣ್ಣಾ ಹಜಾರೆಯವರಿಗೆ ಬೆಂಬಲ ನೀಡಿದ ಯುವ ಸಮುದಾಯವನ್ನು ಹೊಗಳಿ ಹೊಗಳಿ ಅಟ್ಟಕ್ಕೇರಿಸಲಾಯಿತು. ಆಧುನಿಕ ಪೀಳಿಗೆಯಲ್ಲಿ ಚೈತನ್ಯವಿದೆ ಎಂದು ಸ್ತುತಿಸಲಾಯಿತು. ಆದರೆ ಶಿಕ್ಷಣದ ಬಲವಿಲ್ಲದೆ, ಒಣ ಅಧ್ಯಾತ್ಮದ ಪೊರೆ ಕಳಚದ ಯುವ ಪೀಳಿಗೆಯಿಂದ ದೇಶಕ್ಕೆ ಕೊಡುಗೆಯೆಲ್ಲಿರುತ್ತದೆ? ಸಿನಿಮಾ ಪ್ರೇರಣೆಯಿಂದಲೋ, ರಜಾದಿನಗಳಲ್ಲೋ ಧರಣಿಗೆ ಬಂದವರು ಯುವಶಕ್ತಿ ಎನ್ನಲು ಹೇಗೆ ಸಾಧ್ಯ? ಒಮ್ಮೆ ಜಲ್ ಭರೋ ಎಂದಾಗ ಅಣ್ಣಾನ ಹಿಂದೆ ಎಷ್ಟು ಯುವಕರಿದ್ದರು?ಆದರೆ ವಿವೇಕಾನಂದರಿಗೆ ಯುವಕರ ಶಕ್ತಿ ಸಂಚಯದಲ್ಲಿ ಸ್ಪಷ್ಟ ಉದ್ದೇಶಗಳು ಮತ್ತು ತಯಾರಿಯ ರೂಪುರೇಷೆಗಳಿದ್ದವು. “ಅಧ್ಯಾತ್ಮವೇ ವ್ಯಕ್ತಿ ನಿರ್ಮಾಣದ ಮೊದಲ ಹಂತ” ಎಂದಿದ್ದರು. ಅಧ್ಯಾತ್ಮದ ಬಲವಿದ್ದರೆ ಜೊಳ್ಳುಗಳು ಹಾರಿಹೋಗುತ್ತವೆ ಎಂಬುದು ಅವರ ಇಂಗಿತವಾಗಿತ್ತು. ಇಂದಿನ ಶಿಕ್ಷಣ ಪೀಳಿಗೆಯನ್ನು ಬೆಳೆಸುವುದಿಲ್ಲ ಎಂಬುದನ್ನು ಅವರು ಕಂಡುಕೊಂಡಿದ್ದರು. ಕೇವಲ ಮಾಹಿತಿಯನ್ನು ತುಂಬಿಸುವುದು ಇಚ್ಛಾಶಕ್ತಿಯನ್ನು ಬೆಳೆಸುವುದಿಲ್ಲ. ಮಗುವಿನ ಒಳಗಿರುವ ಅನಂತಶಕ್ತಿ, ಅನಂತಜ್ಞಾನ ವ್ಯಕ್ತವಾಗುವುದು ಮತ್ತು ಅದರೊಳಗಿನ ಸ್ವಂತಿಕೆ ಹೊರಬರುವುದಕ್ಕೆ ಪ್ರಯತ್ನಿಸುವುದೇ ಶಿಕ್ಷಣ ಎಂದು ಅವರು ವ್ಯಾಖ್ಯಾನಿಸಿದ್ದರು.
ಅವರ ೧೫೦ನೇ ವರ್ಷಾಚರಣೆಯ ಸಂದರ್ಭದಲ್ಲಿ ವಿವೇಕಾನಂದರ ಮೂಲಭೂತ ಸಂದೇಶಗಳನ್ನಾದರೂ ಸಮಾಜ ಅರಿತರೆ ಭಾರತ ಉಳಿದುಕೊಂಡೀತು ಎಂದು ಹೇಳಬಹುದು. ಏಕೆಂದರೆ ಇಂದು ಸಂತ-ಸಂನ್ಯಾಸಿ ಎಂದರೆ ಭಾಷೆ, ಪ್ರಾದೇಶಿಕತೆ, ಜಾತೀಯತೆಗೆ ಸೀಮಿತವಾದವರು ಎಂಬ ಅಭಿಪ್ರಾಯ ನೆಲೆಗೊಂಡಿರುವ ಕಾಲ. ಇಂದಿನ ಬಹುತೇಕ ಸಂನ್ಯಾಸಿಗಳು ಶಿಕ್ಷಣದ ಬಗ್ಗೆ ಮಾತನಾಡುವುದಿಲ್ಲ. ಕಾಲೇಜುಗಳನ್ನು ತೆರೆಯುತ್ತಾರೆ. ಡೊನೇಷನ್‌ಗಳನ್ನು ಪಡೆಯುತ್ತಾರೆ. ಪತ್ರಿಕಾಗೋಷ್ಠಿಗಳಿಂದಲೇ ಬದುಕುವ ಹಲವು ಸ್ವಾಮೀಜಿಗಳು ಇಂದು ಇದ್ದಾರೆ. ತಿಳಿಯದ ಶ್ಲೋಕ, ಬಾರದ ಸಂಸ್ಕೃತಗಳನ್ನು ಉರು ಹೊಡೆದರೂ ಸೈ ಕೃಷಿ, ಹಸಿವಿನ ಬಗ್ಗೆ ಸೊಲ್ಲೆತ್ತದವರೂ ಇದ್ದಾರೆ. ಅಂಥವರಿಗೆ ವಿವೇಕಾನಂದರು ಅನುಕರಣಯೋಗ್ಯ ಸಂತರು. ವಿವೇಕಾನಂದರು ‘ಹಿಂದೂ’ ಎಂದರು. ಅದಕ್ಕಾಗಿ ೧೫೦ ವರ್ಷಗಳ ತರುವಾಯವೂ ಪೂಜಾರ್ಹರು. ಆದರೆ ‘ಜಾತಿ’ ಎಂದವರು ನಾಳೆಗೆ ಮರೆತು ಹೋಗುವರು. ಛತ್ರ-ಚಾಮರಗಳ ಹಿಂಡಿನೊಂದಿಗೆ ಬರುವವರನ್ನು ಯಾವ ಸಮಾಜವೂ ೧೫೦ ವರ್ಷಗಳ ಅನಂತರ ನೆನಪು ಮಾಡಿಕೊಳ್ಳುವುದಿಲ್ಲ. ಬೀದಿಗಿಳಿದು ಸೇವೆಯೇ ಧರ್ಮ ಎಂದ ವಿವೇಕಾನಂದರಂಥವರು ಮಾತ್ರ ಸದಾ ಸಮಾಜದಲ್ಲಿ ಜೀವಂತವಿರುತ್ತಾರೆ. ಸನ್ಯಾಸಿಗಳೆಂದರೆ ಮೆಲುಮಾತಿನ, ಲಹರಿಯುಕ್ತ, ಪ್ರಾಸಬದ್ಧ ಮಾತನಾಡುವವರು ಎಂದೇ ಇಂದಿನ ಪೀಳಿಗೆ ಅಂದುಕೊಂಡಿರಬಹುದು. ಆದರೆ ವಿವೇಕಾನಂದರು ಅಂದೇ ಸಮಾಜದ ತಳವನ್ನು ಭಾಷೆಯ ಹಂಗಿಲ್ಲದೆ ಜಗತ್ತಿಗೆ ಹೇಳಿದ್ದರು. ಸಂನ್ಯಾಸ ಎಂದರೆ ಅಪರಿಗ್ರಹ, ಪರಿವ್ರಾಜಕತ್ವ ಎಂಬ ಕಠೋರತೆಗಳಲ್ಲ. ಸಹಜವಾಗಿ ಸಮಾಜಕ್ಕೆ ಅರ್ಪಿಸುವುದು, ಶೀಲವಂತ ಚಾರಿತ್ರ್ಯದ ನಿರ್ಮಾಣ ಮಾಡುವುದು ಎಂಬುದನ್ನು ಬದುಕಿನಲ್ಲಿ ತೋರಿಸಿದವರು ವಿವೇಕಾನಂದರು. “ಯಾರು ಇತರರಿಗಾಗಿ ಬದುಕುತ್ತಾರೋ ಅವರದ್ದೇ ಜೀವನ. ಉಳಿದವರು ಬದುಕಿಯೂ ಸತ್ತಂತೆ” ಎಂಬ ತತ್ತ್ವವಲ್ಲದೆ ಬೇರಾವ ತತ್ತ್ವ ಇಂದಿಗೆ ಪ್ರೇರಣಾಯುಕ್ತ?
೧೫೦ನೇ ವರ್ಷಾಚರಣೆಯ ಪ್ರಯುಕ್ತ ಭಾಷಣ, ಲೇಖನಗಳ ಮಹಾಪೂರ ಹರಿಯುತ್ತಿದೆ. ಸಮಾಜದ ತಳಮಟ್ಟದ ಸುಧಾರಣೆಗೆ ವಿವೇಕಾನಂದರೇ ಪ್ರೇರಣೆ, ಸೂರ್ತಿ ಎನ್ನುತ್ತಿದ್ದಾರೆ. ಆದರೆ ಅತ್ಯಂತ ತಳಮಟ್ಟಕ್ಕಿಂತಲೂ ಸಮಾಜದ ಉಸ್ತುವಾರಿ ಹೊತ್ತಿರುವ ಮಠಮಾನ್ಯಗಳಿಗೆ, ರಾಜಕಾರಣದ ಮೌಲ್ಯೋದ್ಧಾರಕ್ಕೆ ವಿವೇಕಾನಂದರ ಚಿಂತನೆಗಳು ಮೊದಲು ಅನ್ವಯವಾಗಬೇಕು ಎನಿಸುತ್ತದೆ. ಇಂದು ತಳಮಟ್ಟದ ಕಾಳಜಿಯಿದ್ದರೂ ಶಕ್ತಿಯ ಕೊರತೆಯಿಂದ ತಳ ತಳವಾಗಿಯೇ ಉಳಿಯುತ್ತಿದೆ. ಆದ್ದರಿಂದ ವಿವೇಕಾನಂದರ ಆದರ್ಶಗಳನ್ನು ಮಠಮಾನ್ಯಗಳು ಮೊದಲು ಪಾಲಿಸಬೇಕಾಗಿದೆ. ಅವರೊಮ್ಮೆ “ಬಡವರಿಗೆ ಬೆಳಕನ್ನು ಕೊಡಿ, ಶ್ರೀಮಂತರಿಗೆ ಹೆಚ್ಚಿನ ಬೆಳಕನ್ನು ಕೊಡಿ. ಅವಿದ್ಯಾವಂತರಿಗೆ ಬೆಳಕನ್ನು ಕೊಡಿ, ವಿದ್ಯಾವಂತರಿಗೆ ಹೆಚ್ಚಿನ ಬೆಳಕನ್ನು ಕೊಡಿ” ಎಂದಿದ್ದರು. ಇಂದು ವಿದ್ಯಾವಂತರಿಗೇ ಬೆಳಕನ್ನು ಕೊಡಬೇಕಾಗಿದೆ.

No comments:
Post a Comment