ಮಾದೇಯಂಡ ಎಸ್. ಬೆಳ್ಯಪ್ಪನವರು. ಉತ್ತರ ಕೊಡಗಿನ ಬಲ್ಲಮಾವಟಿ ಗ್ರಾಮದವರು. ಮೇಜರ್ ಜನರಲ್ ಆಗಿ ನಿವೃತ್ತರಾದ ಹಿರಿಯ ಸೇನಾಧಿಕಾರಿಗಳು. ವಿಶಿಷ್ಟ ಮತ್ತು ಅತಿ್ವಿಶಿಷ್ಟ ಸೇವಾ ಪದಕ ಪಡೆದವರು. ೧೯೬೨ ರ ಇಂಡೋ-ಚೀನಾ ಯುದ್ದ, ೧೯೭೧ರ ಇಂಡೋ-ಪಾಕ್ ಯುದ್ದ,೧೯೬೭ರಲ್ಲಿ ಗಾಜಾ ಪಟ್ಟಿಯಲ್ಲಿ ನಡೆದ ವಿಶ್ವವಿಖ್ಯಾತ "ಸಿಕ್ಸ್ ಡೇಸ್ ವಾರ್ " ಮತ್ತು ೧೯೮೭-೮೮ರಲ್ಲಿ ಶ್ರೀಲಂಕಾದಲ್ಲಿ ನಡೆದ ಐಟಿಕೆ ಎಫ್ ಪಡೆಗಳಲ್ಲಿ ಪಾಲ್ಗೊಂಡವರು. ಈಗ ಅವರಿಗೆ ೭೧ ವರ್ಷ. ಬೆಂಗಳೂರಿನ ವಿವೇಕನಗರದ ತಮ್ಮ ಮನೆಯಲ್ಲಿ ಕುಳಿತು ತಮ್ಮ ೨೧ನೇ ವಯಸ್ಸಿನ ಅನುಭವವನ್ನು ಅವರು ಹೇಳುತ್ತಿದ್ದರು.
"ನನಗಾಗ ೨೧ ತುಂಬಿ ೨೨ ನಡೆಯುತ್ತಿತ್ತು. ಸೈನ್ಯಕ್ಕೆ ಸೇರಿ ಇನ್ನೂ ಮೂರು ತಿಂಗಳು ಕೂಡಾ ಆಗಿರಲಿಲ್ಲ. ಪಂಜಾಬಿನ ಒಂದನೇ ಸಿಕ್ಖ್ ಲೈಟ್ ಇನ್ಫೆಂಟ್ರಿಯಲ್ಲಿ ಸೆಕೆಂಡ್ ಲೆಫ್ಟಿನೆಂಟ್ ಆಗಿದ್ದೆ. ಒಂದು ದಿನ ನಮ್ಮ ಕೇಂದ್ರಕ್ಕೆ ಸಂದೇಶವೊಂದು ಬಂತು. ಚೀನಾದ ಪಿಎಲ್ ಎ ಸೇನೆ ಭಾರತಕ್ಕೆ ನುಗ್ಗಿದೆಯೆಂದೂ, ಸಾಕಷ್ಟು ಮುಂದುವರಿದಿದೆಯೆಂದೂ ತಕ್ಷಣ ಕಾರ್ಯಪ್ರವೃತ್ತರಾಗಬೇಕೆಂದೂ ,ಅದಕ್ಕೆ ನಾವೆಲ್ಲರೂ ತುರಾತುರಿಯಲ್ಲಿ ಸಿದ್ಧರಾಗಬೇಕೆಂದೂ ಅದರಲ್ಲಿ ತಿಳಿಸಲಾಗಿತ್ತು. ಮುನ್ನುಗ್ಗುತ್ತಿದ್ದ ಚೀನಾ ಚೀನಾ ಸೇನೆಯನ್ನು ಅವು ಇದ್ದಲ್ಲೇ ತಡೆಯಬೇಕೆಂದು ನಮಗೆ ಆದೇಶ ಬಂತು. ನನಗೋ ಸಣ್ಣ ವಯಸ್ಸು. ಸೇನೆಗೆ ಸೇರಿದ ಕೆಲವೇ ತಿಂಗಳುಗಳಲ್ಲಿ ಯುದ್ದಕ್ಕೆ ಹೋಗುತ್ತಿರುವ ಸಂತೋಷ. ಇದು ದೇವರೇ ನನಗೆ ಕೊಟ್ಟ ಅವಕಾಶ ಎಂದು ಭಾವಿಸಿದ್ದೆ. ಅದೇ ಹೊತ್ತಲ್ಲಿ ಮನೆಯಿಂದ ಕಾಗದ ಬಂತು " ಕಾವೇರಮ್ಮೆ,ಇಗ್ಗುತ್ತಪ್ಪರೇ ನಿನಗೆ ಈ ಅವಕಾಶವನ್ನು ಒದಗಿಸಿದ್ದಾರೆ. ಜಯಶಾಲಿಯಾಗಿ ಬಾ. ಬಲ್ಲಮಾವಟಿಗೆ, ಮಾದೇಯಂಡ ಕುಟುಂಬಕ್ಕೆ ಹೆಸರು ತಾ" ಎಂದು ಅಪ್ಪ-ಅಮ್ಮ ಬರೆದಿದ್ದರು. ಆ ಆಶೀರ್ವಾದ ನನ್ನಲ್ಲಿ ಮತ್ತಷ್ಟು ಹುರುಪು ತಂದಿತ್ತು. ಕೆಲವೇ ದಿನಗಳಲ್ಲಿ ನಮ್ಮ ಪಡೆ ಬೊಂಬ್ಡಿಲಾ ಎಂಬಲ್ಲಿಗೆ ತೆರಳಿತು. ಅದಾಗಲೇ ಚೀನಾ ಸೇನೆ ತವಾಂಗ್ ವರೆಗೂ ಮುಂದುವರಿದಿತ್ತು. ನಾವು ೧೩೦೦೦ ಅಡಿ ಎತ್ತರದಲ್ಲಿ ಸೆಣಸಬೇಕಿತ್ತು. ನಮಗಾದರೋ ಅಂಥ ಪ್ರತಿಕೂಲ ವಾತಾವರಣದಲ್ಲಿ ತರಬೇತಿ ಇರಲಿಲ್ಲ. -೩೦ ಡಿಗ್ರಿಯಷ್ಟು ಶೀತ, ಗಂಟೆಗೆ ೧೦೦ ಕಿ.ಮೀ ವೇಗದಲ್ಲಿ ಬೀಸುತ್ತಿರುವ ಶೀತಗಾಳಿ. ಇಂಥ ಪ್ರದೇಶಗಳಲ್ಲಿ ಯುದ್ಧ ಮಾಡಲು ವಿಶೇಷ ತರಬೇತಿಯನ್ನು ನೀಡಲಾಗಿರುತ್ತದೆ. ಹಲವು ತಿಂಗಳಿಗಳವರೆಗಾದರೂ ನಮ್ಮ ಸೈನಿಕರು ಅಂಥ ಪರಿಸ್ಥಿತಿಯಲ್ಲಿ ದೇಹವನ್ನು ಒಡ್ಡಿಕೊಳ್ಳಬೇಕಿರುತ್ತದೆ. ಆದರೆ ನಾವು ಏಕಾಏಕಿ ಪಂಜಾಬಿನಿಂದ ಹೊರಟುಬಂದವರು. ಚೀನಿ ಸೈನಿಕರಿಗಿಂತ ನಾವು ಅಲ್ಲಿನ ಹವಾಮಾನಕ್ಕೆ ಥರಗುಟ್ಟಿಹೋದೆವು. ನಮ್ಮಲ್ಲಿ ಧೈರ್ಯ-ಆತ್ಮವಿಶ್ವಾಸವನ್ನು ಬಿಟ್ಟರೆ ಬೇರೇನೂ ಇರಲಿಲ್ಲ. ನಮ್ಮಲ್ಲಿ ಇನ್ನೂ ೩೦೭ ರೈಫಲ್‌ಗಳಿತ್ತು. ಆದರೆ ಚೀನಿಯರ ಬಳಿ ಆಗಿನ ಕಾಲದಲ್ಲಿ ಅತ್ಯಾಧುನಿಕವಾದ ಆಟೋಮ್ಯಾಟಿಕ್ ರೈಫಲ್‌ಗಳಿದ್ದವು.ಅವರ ಆರ್ಟಿಲರಿ ಬಲವಾಗಿತ್ತು ಎನ್ನುವುದಕ್ಕಿಂತಲೂ ಅವರು ವಾತಾವರಣವನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿದ್ದರು ಎನ್ನುವುದೇ ಸರಿ. ಏಕೆಂದರೆ ಅವರು ವಾತಾವರಣವನ್ನು ಎದುರಿಸುವ ವಿಶೇಷ ತರಬೇತಿಯನ್ನು ಪಡೆದಿದ್ದರು. ಸದೇಹವನ್ನು ವಾತಾವರಣಕ್ಕೆ ಒಗ್ಗಿಸಿಕೊಳ್ಳುವ ಅಭ್ಯಾಸವನ್ನು ಮಾಡಿಕೊಂಡಿದ್ದರು. ಇತ್ತ ನಮ್ಮಲ್ಲಿ ರೇಡಿಯೋ ವ್ಯವಸ್ಥೆಯೂ ಸರಿ ಇರಲಿಲ್ಲ. ಬೆಟ್ಟಗಳಲ್ಲಿ ಅವು ಕೆಲಸ ಮಾಡುತ್ತಲೇ ಇರಲಿಲ್ಲ. ಹೀಗೆ ಅವರಿಗೂ ನಮಗೂ ಸಾಕಷ್ಟು ಅಂತರವಿತ್ತು. ಈ ಕಾರಣದಿಂದ ನಮ್ಮ ಸೈನಿಕರು ವೀರಾವೇಶದಿಂದ ಹೋರಾಡಿದರೂ ಪರಿಸ್ಥಿತಿಯ ಕೈಗೊಂಬೆಗಳಾಗಿದ್ದರು. ನಮ್ಮ ಕಮಾಂಡರ್ ನಮಗೆ ಹಿಂದಕ್ಕೆ ಬರುವಂತೆ ಆದೇಶಿಸಿದರು. ನಾವು ಹಿಂದೆ ಹಿಂದೆ ಬಂದಂತೆ ಅವರು ಮುಂದುಮುಂದಕ್ಕೆ ಬಂದರು. ನನ್ನಂತೆ ಕನಸು ಕಟ್ಟಿಕೊಂಡ ಹುಡುಗರು ಆ ಶೀತ ಪ್ರದೇಶದಲ್ಲಿ ಕಣ್ಣೀರಿಟ್ಟರು. ನಾವು ಪರಸ್ಪರ ಮಾತಾಡುವುದನ್ನೇ ಬಿಟ್ಟುಬಿಟ್ಟೆವು. ಮನಸ್ಸು ನೊಂದಿತ್ತು. ಎದೆ ಭಾರಭಾರವಾಗಿತ್ತು. ಏಕೆಂದರೆ ನನ್ನ ಅಪ್ಪ-ಅಮ್ಮನ ಆಶೀರ್ವಾದ ಫಲಿಸಲಿಲ್ಲವಲ್ಲಾ ಎಂಬ ದುಖ ಉಮ್ಮಳಿಸಿ ಬರುತ್ತಿತ್ತು. ನನ್ನ ಮೊದಲ ಯುದ್ಧದ ವೀರಾವೇಶದ ಕಥೆಯನ್ನು ನಾನು ಬಲ್ಲಮಾವಟಿಯ ಗೆಳೆಯರಲ್ಲಿ ಹೇಳಬೇಕೆಂದುಕೊಂಡಿದ್ದೆ.ಮನೆಗೆ ಏನೆಂದು ಕಾಗದ ಬರೆಯಲಿ ಎಂದುಕೊಳ್ಳುತ್ತಲೇ ಬೇಸರವಾಗುತ್ತಿತ್ತು. ನನ್ನ ಮಾದೇಯಂಡ ಕುಟುಂಬಸ್ಥರು ಮನೆಗೆ ಬಂದು "ಮೋಂವಂಡ ಕಾಗದ ಬಾತಾ?" (ಮಗನ ಕಾಗದ ಬಂತಾ?) ಎಂದು ಕೇಳಿಯೇ ಕೇಳುತ್ತಿರುತ್ತಾರೆ ಎಂಬುದು ನನಗೆ ಗೊತ್ತಿತ್ತು."
ಮಿಲಿಟರಿಯವರು ಭಾವುಕರಾಗುವುದು ಅಪರೂಪ. ಆದರೂ ೧೯೬೨ರ ಸ್ಥಿತಿಯನ್ನು ವಿವರಿಸುತ್ತಾ ಹಲವು ನಿವೃತ್ತ ಯೋಧರು ಭಾವುಕರಾಗುತ್ತಾರೆ. ೫೦ ವರ್ಷದ ಹಿಂದಿನ ಘಟನೆಯನ್ನು ನೆನಪಿಕೊಳ್ಳುತ್ತಾ ಬೆಳ್ಯಪ್ಪನವರು " ನಿಜ ಅದು ಆಗಬಾರದಾಗಿತ್ತು. ಅದನ್ನು ನಾನು ಸೋಲು ಎನ್ನುವುದಿಲ್ಲ. ನಮ್ಮ ಕೊರತೆಯನ್ನು ಅವರು ಸಮರ್ಥವಾಗಿ ಬಳಸಿಕೊಂಡರು ಅಷ್ಟೆ. ಆದರೆ ೬೨ ಅನಂತರ ಒಂದು ಉಪಕಾರವಾಯಿತು. ನಮ್ಮ ಸರಕಾರಕ್ಕೆ ಬುದ್ಧಿ ಬಂತು. ಆರ್ಮಿ ಎಚ್ಚೆತ್ತುಕೊಂಡಿತು. ನಮ್ಮ ದೇಶ ಯುದ್ದವೇ ಮಾಡುವುದಿಲ್ಲ. ನಮ್ಮನ್ನಾರೂ ಆಕ್ರಮಿಸುವುದೇ ಇಲ್ಲ, ನಮಗೆ ಸೈನ್ಯವೇ ಬೇಡ ಂದುಕೊಂಡವರಿಗೆ ಸತ್ಯದ ಅರಿವಾಯಿತು. ೬೨ರ ಅನಂತರ ಸೈನ್ಯಕ್ಕೆ ಅತ್ಯಾಧುನಿಕವಾದ ಶಸ್ತ್ರಾಸ್ತ್ರಗಳು,ಸಲಕರಣೆಗಳು ಬಂದವು. ಪರ್ವತ ಪ್ರದೇಶಗಳಲ್ಲಿ, ಎಲ್ಲಾ ಹವಾಮಾನಗಳಲ್ಲಿ ಬಳಸಬಹುದಾದ ರಸ್ತೆಗಳು ಸಿದ್ಧವಾದವು. ಮೌಂಟನ್ ವಾರ್ ಫೇರ್ ಗೆ ಹೆಚ್ಚಿನ ಒತ್ತು ನೀಡಲಾಯಿತು. ಕೆಲವೇ ವರ್ಷಗಳ ಅನಂತರ ಅದರ ಲಾಭವನ್ನು ನಾವು ಪಡೆದೆವು.ಸ್ವತಃ ನಾನೇ ೬೫ರ ಪಾಕಿಸ್ಥಾನ ಯುದ್ಧದಲ್ಲಿ , ೭೧ರ ಬಾಂಗ್ಲಾ ವಿಮೋಚನೆಯಲ್ಲಿ ಭಾಗವಹಿಸಿ ಅದರ ಅನುಭವವನ್ನು ತಿಳಿದಿದ್ದೇನೆ. ೬೨ರ ಘಟನೆಯ ಅನಂತರ ಸುಧಾರಿಸಿಕೊಂಡ ನೀತಿಗಳಿಂದ ನಮ್ಮ ಆರ್ಮಿಗೆ ವಿಶ್ವಾದ್ಯಂತ ಹೆಸರು ಬಂತು. ಅಮೆರಿಕಾದಂಥ ದೇಶವೂ ನಮ್ಮ ಮೌಂಟನ್ ವಾರ್ ಫೇರ್ ನ ಬಗ್ಗೆ ಚಕಿತರಾದರು. ೬೨ರ ಪಾಠದಿಂದ ನಾವು ಇಂದು ಸಿಯಾಚಿನ್ ನಂಥ ಜಾಗದಲ್ಲಿ ಬೇಸ್ ಅನ್ನು ಹೊಂದಿದ್ದೇವೆ"
ಹಾಗಾದರೆ ಈ ಸೌಲಭ್ಯಗಳು ೬೨ರಲ್ಲೇ ಇದ್ದಿದ್ದರೆ ಏನಾಗುತ್ತಿತ್ತು ಎಂದು ಕೇಳಿದಾಗ ಬೆಳ್ಯಪ್ಪನವರು "ಇತಿಹಾಸವೇ ಬದಲಾಗುತ್ತಿತ್ತು. ಕೇವಲ ಧೈರ್ಯ-ಆತ್ಮ ವಿಶ್ವಾಸಗಳಿಂದ ಯುದ್ಧ ಗೆಲ್ಲಲಾಗದು ಎಂಬುದನ್ನು ನಾವು ಕಲಿತೆವು. ಇಂದೂ ಆಷ್ಟೇ ಚೀನಾದ ಬಳಿ ಭಾರತಕ್ಕಿಂತ ಪ್ರಬಲ ಸೈನ್ಯ ಮತ್ತು ಸಲಕರಣೆಗಳಿವೆ ಎಂಬ ಆತ್ಮವಿಶ್ವಾಸ ಮತ್ತು ಧೈರ್ಯವಿದೆ. ಅದೇ ವಿಶ್ವಾಸದಿಂದ,೬೨ರ ಗುಂಗಿನಿಂದ ಭಾರತವನ್ನು ಮುಟ್ಟಿದರೆ ಚೀನಾ ಕೈಸುಟ್ಟುಕೊಳ್ಳುವುದು ಖಂಡಿತಾ" ಎನ್ನುವರು.
೬೨ರಲ್ಲಿ ಏಕೆ ಹೀಗಾಯಿತು? ಅದಕ್ಕೆ ಕಾರಣರಾದವರು ಯಾರು ಎಂಬುದನ್ನು ಬೆಳ್ಯಪ್ಪನವರು ಹೇಳಿದರು.
" ಜನರಲ್ ತಿಮ್ಮಯ್ಯ ಮತ್ತು ಕಾರ್ಯಪ್ಪಜ್ಜನವರ ಮಾತು ಕೇಳಿದ್ದರೆ ಹೀಗಾಗುತ್ತಿರಲಿಲ್ಲ. ಇಬ್ಬರೂ ಆಗ ನಿವೃತ್ತರಾಗಿದ್ದರು. ಆದರೆ ತಾವು ಕಟ್ಟಿದ ಸೇನೆಯ ಮೇಲಿನ ಪ್ರೀತಿಯಿಂದ ನಿವೃತ್ತರಾಗಿರಲಿಲ್ಲ. ಸಾಕಷ್ಟು ಮೊದಲೇ ಕಾರ್ಯಪ್ಪಜ್ಜ ನೆಹರೂರವರನ್ನು ಭೇಟಿ ಮಾಡಿ ಗಡಿಗಳನ್ನು ಬಲಪಡಿಸುವ ಬಗ್ಗೆ ಮಾತಾಡಿದ್ದರು. ನಾವು ಸಾಕಷ್ಟು ಹಿಂದೆ ಇದ್ದೇವೆ ಎಂದು ಅಜ್ಜ ಹೇಳಿದರೂ ಸರಕಾರ ಅದನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳಲೇ ಇಲ್ಲ. ಸಿನ್ನು ತಿಮ್ಮಯ್ಯನವರು ಸೇನೆಯ ನವೀಕರಣಕ್ಕೆ ಪಟ್ಟ ಪ್ರಯತ್ನಗಳು ಇಡೀ ದೇಶಕ್ಕೇ ತಿಳಿದಿದೆ. ತಿಮ್ಮಯ್ಯನವರು ಕೇಳಿದ್ದು ಸೈನ್ಯದ ಮೂಲಭೂತ ಆವಶ್ಯಕತೆಗಳನ್ನು. ಬೆಟ್ಟಕ್ಕೆ ರಸ್ತೆ, ಬೆಟ್ಟ ಹತ್ತುವ ವಾಹನ, ಸೈನಿಕರಿಗೆ ಸಲಕರಣೆಗಳನ್ನು ಮಾತ್ರ. ಸರಕಾರ ಅದನ್ನೂ ಪೂರೈಸಲಿಲ್ಲ. ನೆಹರೂ ಮತ್ತು ಕೃಷ್ಣ ಮೆನನ್‌ರ ಸಮ್ಮುಖದಲ್ಲಿ ತಿಮ್ಮಯ್ಯನವರು ತಮ್ಮ ಅಭಿಪ್ರಾಯಗಳನ್ನು, ಬೇಡಿಕೆಗಳನ್ನು ಮಂಡಿಸುತ್ತಿದ್ದಾಗ ಕೃಷ್ಣ ಮೆನನ್ ಅದನ್ನು ಕೇಳಿ ನಕ್ಕರಂತೆ. ಱಬೆಟ್ಟದಲ್ಲಿ ಯುದ್ಧವೇ ನಡೆಯುವುದಿಲ್ಲ. ಈ ತಿಮ್ಮಯ್ಯನವರಿಗೆ ವಿನಾ ಕಾರಣ ಸಂಶಯ" ಎಂದಿದ್ದರು. ಇದು ಆಗ ಸುದ್ಧಿಯಾಗಿತ್ತು. ನೆಹರೂರವರಿಗೂ ಕೂಡಾ ಕೃಷ್ಣ ಮೆನನ್‌ರವರ ಮಾತುಗಳೇ ಸರಿ ಎಂದು ಎನಿಸಿತ್ತು. ತಿಮ್ಮಯ್ಯನವರು ವ್ಯಸನ ಪಟ್ಟುಕೊಂಡರು. ಕೊನೆಗೆ ತಿಮ್ಮಯ್ಯನವರು ನೇಫಾ, ಲಢಾಕ್ ಭಾಗದಲ್ಲಾದರೂ ಮೌಂಟನ್ ವಾರ್ ಫೇರ್ ಬಗ್ಗೆ ಗಮನ ಹರಿಸೋಣ ಎಂದರು. ಆಗ ನೆಹರೂ "ನಮ್ಮ ಶತ್ರು ಪಾಕಿಸ್ಥಾನ, ಚೀಚಾವಲ್ಲ" ಎಂದಿದ್ದರು. ಪಂಚಶೀಲ ತತ್ತ್ವ ಎಂಬ ಪಾಠವೇ ನಮಗೆ ಶಾಲೆಯಲ್ಲಿತ್ತು. ನೆಹರೂ ಹಿಂದೂ ಚೀನಿ ಬಾಯ್‌ಬಾಯ್ ಎಂದರು ಎಂದು ರೇಡಿಯೋ, ಮೇಷ್ಟುಗಳೆಲ್ಲಾ ಹೇಳುತ್ತಿದ್ದರು. ಅವೆಲ್ಲಾ ನನ್ನ ೨೧ ವಯಸ್ಸಿಗೇ ಪ್ರತ್ಯಕ್ಷ ಅನುಭವಕ್ಕೆ ಬಂದಿತ್ತು. ಜನರಲ್ ತಿಮ್ಮಯ್ಯ, ಕಾರ್ಯಪ್ಪಜ್ಜರ ಮಾತನ್ನು ಕೇಳಿದ್ದಿದ್ದರೆ ನಮ್ಮ ಸೇನೆ ೬೨ರಲ್ಲೇ ವಿಶ್ವವಿಖ್ಯಾತವಾಗುತ್ತಿತ್ತು. ನಾವು ಸೋಲುತ್ತಿರಲಿಲ್ಲ. ನಮ್ಮ ನೆಲ ಕಳೆದುಹೋಗುತ್ತಿರಲಿಲ್ಲ. "
ಹಾಗಾದರೆ ೬೨ರ ಸೋಲಿಗೆ ನೇರವಾಗಿ ನೆಹರೂರನ್ನೇ ಹೊಣೆ ಮಾಡಿದರೆ ತಪ್ಪೇನು ಎಂದು ಆ ಮಹಾಯೋಧರನ್ನು ಪ್ರಶ್ನಿಸಿದರೆ ಅವರು ಯೋಧರಂತೆಯೇ ಉತ್ತರಿಸಿದರು. " ಪ್ರತೀಯೊಂದು ದೇಶಕ್ಕೂ ತನ್ನದೇ ಆದ ವಾರ್ ಫೇರ್ ಎಂಬುದಿರುತ್ತದೆ.ಹಾಗೆ ನಮ್ಮ ದೇಶದ ರಾಷ್ಟ್ರೀಯ ಗುರಿ, ಅಭಿವೃದ್ಧಿಯ ಕಲ್ಪನೆಯ ಬಗ್ಗೆ ನೆಹರೂಗೆ ತನ್ನದೇ ಆದ ಕಲ್ಪನೆಗಳಿದ್ದವು. ನಿಜ ನಾವು ಆಕ್ರಮಣ ಮಾಡುವವರಲ್ಲ. ನಮ್ಮ ಹಿಂದೂ ರಾಷ್ಟ್ರ ಶಾಂತಿಯ ನಾಡು. ಅಷ್ಟಕ್ಕೆ ಸೈನ್ಯದ ಆವಶ್ಯಕತೆಯೇ ಇಲ್ಲವೆಂದಲ್ಲ. ಸೈನ್ಯ ಕೂಡ ಆಕ್ರಮಣ ಶೀಲ ತುಕಡಿಯಲ್ಲ. ಇಂದಿಗೂ ಸೈನ್ಯದ ಬಗ್ಗೆ ಅಂಥ ತಪ್ಪು ಕಲ್ಪನೆಗಳು ಹಲವರಲ್ಲಿದೆ. ಹೇಗೆ ಕೃಷಿ ಮತ್ತು ಕೈಗಾರಿಕೆಗಳು ದೇಶದ ಅಭಿವೃದ್ಧಿಯ ಪ್ರತೀಕಗಳೋ ಹಾಗೆಯೇ ಸೇನೆ ಕೂಡಾ ದೇಶದ ಅಭಿವೃದ್ಧಿಯ ಪ್ರತೀಕಗಳು.ಒಂದು ದೇಶದ ಬಲಿಷ್ಠ ಸೈನ್ಯ ಆ ದೇಶದ ಗೌರವದ ಚಿಹ್ನೆ. ಪಂಚಶೀಲ ತತ್ತ್ವ ಕೂಡಾ ಮಹಾನ್ ಚಿಂತನೆ."
ಯೋಧ ಯೋಧನಿಗೆ ತಕ್ಕಂತೆ ಮಾತಾಡುತ್ತಾನೆ. ಅದರ ಅರಿವಿಲ್ಲದ ರಾಜಕಾರಣಿ ಅವನ ಯೋಗ್ಯತೆಗೆ ತಕ್ಕಂತೆ ಮಾತಾಡುತ್ತನೆ. ಹೀಗೆ ರಾಜಕಾರಣದಿಂದ ಉಂಟಾದ ಎಡವಟ್ಟನ್ನು ಇಂದಿಗೂ ಸರಿಪಡಿಸಲು ಸಾಧ್ಯವಾಗಿಲ್ಲ. ಬೆಳ್ಯಪ್ಪನವರೇನೋ ಸಾಮರಿಕ ದೃಷ್ಟಿಯಿಂದ ೬೨ ಅನ್ನು ವಿವರಿಸಿದರು. ಆದರೆ ಆತ್ಮ ಗೌರವದ ದೃಷ್ಟಿಯೇನಾಯಿತು? ಬಲಿದಾನಿಯಾದ ೧೩೮೨ ಜನ ಯೋಧರ ಜೀವದ ಬೆಲೆಯೇನು? ಅಂಗವಿಕಲರಾದ ಸಾವಿರಾರು ಯೋಧರ ಕುಟುಂಬಗಳ ನೋವಿಗೆ ಹೊಣೆ ಯಾರು? ಕಳೆದುಕೊಂಡ ೯೦೦೦೦ ಚ.ಕಿ.ಮೀ ನೆಲ, ದೇಶದ ಜನರು ಅನುಭವಿಸಿದ ನೋವು, ಹತಾಶೆ, ಮಾನಸಿಕ ಕಿರಿಕಿರಿಗಳಿಗೆ ಕಾರಣರಾದವರು ಯಾರು? ಬಲ್ಲಮಾವಟಿಯ ಮಾದೇಯಂಡ ಕುಟುಂಬದ ಯೋಧನ ಹೆತ್ತವರ ಆಶೀರ್ವಾದವನ್ನು ವಿಫಲಗೊಳಿಸಿದವರಾರು?
ಇವೆಲ್ಲವೂ ನಡೆದು ಇದೀಗ ಅರ್ಧ ಶತಮಾನವೇ ಕಳೆದುಹೋಗಿದೆ. ಅಕ್ಟೋಬರ್ ೨೦ ಬಂದರೆ ಚೀನಾದವರ ಮೊದಲ ಗುಂಡು ನಮ್ಮತ್ತ ಹಾರಿ ೫೦ ವರ್ಷಗಳಾಗುತ್ತವೆ. ಬಮ್ಲಾ, ತಾಂಗ್ಲಾ, ಚಿಪ್‌ಚಾಪ್ ಕಣಿವೆ, ಗಲ್ವಾನ್ ಕಣಿವೆ, ಪಾಂಗೊಂಗ್‌ತ್ಸೋ ಮತ್ತು ಚುಸೂನ್ ಕಣಿವೆಗಳು ಈ ೫೦ ವರ್ಷದಲ್ಲಿ ಮತ್ತೊಂದು ಕಥೆಯನ್ನು ಹೇಳುತ್ತಿವೆ. ಭಾರತದ್ದೇ ನೆಲ ಗಿಲ್ಗಿಟ್, ಬಾಲ್ಟಿಸ್ಥಾನ್‌ಗಳಲ್ಲಿ ರಸ್ತೆ ನಿರ್ಮಿಸುತ್ತಿರುವ ಚೀನಾ ೫೦ ವರ್ಷಗಳ ಹಿಂದಿನ ಘಟನೆಯನ್ನು ನೆನಪಿಸುತ್ತಿದೆ. ಅರುಣಾಚಲ, ಹಿಮಾಚಲಗಳಲ್ಲಿ ಕೃತಕ ನೆರ ಹುಟ್ಟಿಸುವ , ಬ್ರಹ್ಮಪುತ್ರಾವನ್ನೇ ಬತ್ತಿಸುವ ಚೀನಾ ಇನ್ನೂ ಕದನ ವಿರಾಮವನ್ನು ಘೋಷಿಸಿಲ್ಲವೇ ಎಂದುಕೊಳ್ಳುತ್ತಿರುವಾಗಲೇ ಎತ್ತಲೆತ್ತಲೂ ಚೀನಾ ಸರಕುಗಳು ಬಂದು ಬೀಳುತ್ತಿವೆ. ಮೆ.ಜ. ಹೇಳದೇ ಇರುವುದು ಮತ್ತಷ್ಟು ಇದೆ ಎನಿಸುತ್ತದೆ. ಅದೇ ಗಡಿ, ಅದೇ ಚೀನಾ, ಬೀಜಿಂಗ್‌ನಲ್ಲಿ ಅದೇ ಸಣ್ಣ ಕಣ್ಣಿನ ಕುಳ್ಳಪಿ ಎಲ್ ಎ, ದೆಹಲಿಯಲ್ಲಿ ಅದೇ ನೆಹರೂ ಕುಟುಂಬ ಎಲ್ಲರೂ ೫೦ ವರ್ಷಗಳ ತರುವಾಯವೂ ಹಾಗೆಯೇ ಇದ್ದಾರೆ. ಅದಕ್ಕೇ ಹೆದರಿಕೆಯಾಗುತ್ತದೆ. ತಿಮ್ಮಯ್ಯನವರು ಸ್ವರ್ಗಸ್ಥರಾದರಲ್ಲಾ ಎಂದು ಬೇಸರವಾಗುತ್ತದೆ. ಕಾರ್ಯಪ್ಪಜ್ಜ ಇರಬೇಕಿತ್ತು ಎನಿಸುತ್ತದೆ.

No comments:
Post a Comment