ವೈದ್ಯಕೀಯದಲ್ಲಿ ಮರೆಗುಳಿತನವೂ ಒಂದು ಕಾಯಿಲೆ. ಆ ಕಾಯಿಲೆಗೆ ಮರೆಯಬಾರದ್ದು ಮತ್ತು ಮರೆಯಬೇಕಾದ್ದು ಎಂಬ ಹಂಗಿಲ್ಲ. ಎಲ್ಲವೂ ಮರೆತುಹೋಗುತ್ತದೆ. ಮಂಕು ಕವಿದಿರುತ್ತದೆ. ಭಾರತೀಯರಿಗೆ ಕವಿದಿದ್ದು ಅಂಥಾ ಒಂದು ಮಂಕು,ಕಾಯಿಲೆ ಎನಿಸುತ್ತದೆ. ಅದು ಕಾಯಿಲೆ ಬಂದಿದೆ ಎಂದೂ ಕೂಡಾ ನಂಬಲಾರದಂತಹಾ ಕಾಯಿಲೆ. ಒಪ್ಪಲಾಗದಂತಹಾ ಕಾಯಿಲೆ. ಹಾಗಾಗಿ ಭಾರತೀಯರು ಎಲ್ಲವನ್ನೂ ಮರೆತುಬಿಡುತ್ತಾರೆ. ಶತಮಾನಗಳ ಹಿಂದೆ ಮುಸಲ್ಮಾನರು ಹಿಡಕೊಂಡು ಒದ್ದಿದ್ದು. ಕತ್ತರಿಸಿದ್ದು, ಮತಾಂತರಿಸಿದ್ದು, ಸುಟ್ಟಿದ್ದು, ಒಡೆದಿದ್ದನ್ನೆಲ್ಲವನ್ನೂ ಅವರು ಮರೆತಿದ್ದಾರೆ. ಪೋರ್ಚುಗೀಸರು, ಡಚ್ಚರು, ಫ್ರಂಚರು, ಬ್ರಿಟೀಷರು ಬಂದ ಕಾರಣಗಳನ್ನು , ದೋಚಿದ್ದನ್ನು, ಹಿಂಸಿಸಿದ್ದನ್ನು ಮರೆತಿದ್ದಾರೆ. ದೇಶ ಒಡೆಯಲು ಏನು ಕಾರಣವಾಗಿತ್ತು ಎಂಬುದನ್ನು ಮರೆತಿದ್ದಾರೆ. ಜನ ಕಾಂಗ್ರೆಸನ್ನು ಒಪ್ಪಿಕೊಂಡ ಕಾರಣವನ್ನು ಅದೇ ಜನ ಕ್ರಮೇಣ ಮರೆತರು. ೬೦ರ ದಶಕದಲ್ಲಿ ನೆಹರೂ ದೇಶಕ್ಕೇನು ಮಾಡಿದರು ಎಂಬುದನ್ನು , ೭೦ರ ದಶಕದಲ್ಲಿ ಇಂದಿರಾ ಏನು ಮಾಡಿದರು ಎಂಬುದನ್ನು, ೮೦ರ ದಶಕದಲ್ಲಿ ರಾಜೀವ್ ದೇಶಕ್ಕೇನು ಮಾಡಿದರು ಎಂಬುದನ್ನು ಜನ ಅದೇ ತೀವ್ರತೆಯಲ್ಲಿ ನೆನಪು ಮಾಡಿಕೊಳ್ಳಲಾರರು. ಅದು ಮರೆಗುಳಿ ಕಾಯಿಲೆಯ ಚಿಹ್ನೆಗಳು. ಅಥವಾ ಕಾಯಿಲೆ ಇಲ್ಲದಿದ್ದರೂ ಕಾಯಿಲೆಗ್ರಸ್ಥರಂತೆ ನಟಿಸುವ ಬುದ್ಧಿಗಳು. ಸಾಮರ್ಥ್ಯವೇ ಇಲ್ಲದಿದ್ದ ಮೇಲೆ ಏನಾದರೂ ಮಾಡಲೇಬೇಕಲ್ಲಾ? ಒಟ್ಟಾರೆ ಅವೆಲ್ಲವೂ ಪ್ರಜ್ನೆಗೆ ಪೊರೆ ಬೆಳೆದ ಮಾನಸಿಕತೆ ಎಂಬುದಂತೂ ಸತ್ಯ.
ಭಾರತೀಯರಲ್ಲಿ ಇನ್ನೂ ಒಂದು ವರ್ಗವಿದೆ. ಅವರು ಮರೆತುಹೋಗುವುದಿಲ್ಲ. ಜಪ್ಪಯ್ಯ ಎಂದರೂ ಮರೆಯುವ ಪ್ರಶ್ನೆಯೇ ಇಲ್ಲ. ಅಂಥವರು ಕೆಲವು ಕಾಲಘಟ್ಟದಲ್ಲಿ ಸಿಕ್ಕಿಹಾಕಿಕೊಂಡಿರುತ್ತಾರೆ. ಕೆಲವರು ಅಶೋಕನು ಸಾಲುಮರಗಳನ್ನು ನೆಟ್ಟನು ಎಂಬುದನ್ನೇ ನೆನಪಿಸಿಕೊಂಡು ಪುಳಕಗೊಳ್ಳುತ್ತಿರುತ್ತಾರೆ. ಇನ್ನು ಕೆಲವರು ನೆಹರೂ ಮಾಡಿದ ಹಾದರವನ್ನು ಇಂದಿಗೂ ಬಯ್ಯುತ್ತಾ ಇರುತ್ತಾರೆ. ಇನ್ನು ಕೆಲವರು ಇಂದಿರಾ ಕಾಲದ ತುರ್ತುಪರಿಸ್ಥಿತಿ ಮತ್ತು ತಮ್ಮ ಯೌವ್ವನ ಕಾಲವನ್ನು ಪ್ರತೀ ಮಾತಿನಲ್ಲಿ ಸಿಡಿಸುತ್ತಾ ಇರುತ್ತಾರೆ. ಆ ತುರ್ತುಪರಿಸ್ಥಿಯ ಗುಂಗಿನಲ್ಲೇ ಇರುವವರಿಗೆ ಹೊಸ ತುರ್ತುಪರಿಸ್ಥಿತಿ ಅನುಭವಕ್ಕೆ ಬರುವುದಿಲ್ಲ. ಅದರ ಗುಂಗಿನಲ್ಲೇ ಇರುವವರಿಗೆ ತುರ್ತುಪರಿಸ್ಥಿಯ ಭಿನ್ನ ದಾರಿಗಳು ಹೊಳೆಯುವುದೇ ಇಲ್ಲ. ಏಕೆಂದರೆ ಅವೆರಡರ ಸ್ವರೂಪವೇ ಬೇರೆ . ಪರಿಣಾಮವೂ ಬೇರೆ, ತೀವ್ರತೆಯೂ ಬೇರೆ. ಆದರೆ ತುರ್ತುಪರಿಸ್ಥಿತಿ ತುರ್ತುಪರಿಸ್ಥಿತಿಯೇ.
ಹಾಗಾಗಿ ಮರೆಗುಳಿತನವೂ ರೋಗವೇ. ಮರೆಯಲಾಗದ್ದೂ ರೋಗವೇ.
ಒಮ್ಮೆ ಚಿಂತಿಸಿ. ಅಂದು ಇಂದಿರಾ ಹೇರಿದ ತುರ್ತುಪರಿಸ್ಥಿತಿಗೂ ಇಂದು ಸೋನಿಯಾ ಹೇರದೇ ಉಂಟಾದ ತುರ್ತುಪರಿಸ್ಥಿತಿಗೂ ಏನು ವ್ಯತ್ಯಾಸವಿದೆ? ಹೇಳಬೇಕೆಂದರೆ ಅಮದು ಎಲ್ಲವೂ ನೇರಾನೇರಾ ನಡೆದಿತ್ತು. ಇಂದಿರಾ ಕೈಯಲ್ಲಿ ಅಧಿಕಾರವಿತ್ತು. ಅಧಿಕಾರ ಬಲದಿಂದಲೇ ಇಂದಿರಾ ಎಲ್ಲರನ್ನೂ ಬಗ್ಗುಬಡಿದಿದ್ದಳು. ಮತ್ತು ಎಲ್ಲರೂ ಅವರ ಕಾಲ ಕೆಳಗೆ ಅಡ್ಡ ಬಿದ್ದಿದ್ದರು. ಆದರೆ ಇಂದು? ಎಲ್ಲವೂ ವ್ಯತಿರಿಕ್ತವಾಗಿ ನಡೆಯುತ್ತಿದೆ. ಅಧಿಕಾರವಿದ್ದವರು ಕೂಡಾ ಅಧಿಕಾರವಿಲ್ಲದವರ ಕಾಲಿಗೆ ಉಧೋ ಎಂದು ಬೀಳುತ್ತಿದೆ. ಇನ್ನು ಕೆಲವರು ಬಿಕರಿಯಾಗಿದ್ದಾರೆ. ಅಂದಿನಂತೆ ಇಂದೂ ಕೂಡಾ ಮಾಧ್ಯಮಗಳ ಮೇಲೆ ಕಾಕದೃಷ್ಟಿ ಇದೆ. ಅಂದಿನಂತೆಯೇ ಕೆಲವು ಮಾಧ್ಯಮಗಳು ಖರೀದಿಸಲ್ಪಟ್ಟಿವೆ. ಅಂದಿನಂತೆ ಇಂದೂ ಪ್ರಬಲ ಮಾಧ್ಯಮಗಳ ಮೇಲೆ ನಿಷೇಧಗಳು ಬಿದ್ದಿವೆ. ಆಶ್ಚರ್ಯ ಎನಿಸಿದರೂ ಇದು ಸತ್ಯ. ಕಾಂಗ್ರೆಸ್ ಮತ್ತು ಯುಪಿಎಗಳ ಘನಾಂಧಾರಿ ಕೆಲಸಗಳ ಬಗ್ಗೆ ಇಂದು ನವಮಾಧ್ಯಮವೆಂದು ಕರೆಯಲ್ಪಡುವ ಸೋಷಿಯಲ್ ನೆಟ್‌ವರ್ಕ್ ಸೈಟುಗಳಲ್ಲಿ ಚರ್ಚೆ ನಡೆಸುವಂತಿಲ್ಲ. ಹಗರಣಗಳಿಗೆ ಸಂಬಂಧಪಟ್ಟ ವಿಡಿಯೋ ಹಾಕುವಂತಿಲ್ಲ. ಅಂದರೆ ಜನಜಾಗೃತಿ ಆಗಬಾರದು. ಅಂದು ಇಂದಿರಾ ಅಪೇಕ್ಷೆ ಕೂಡಾ ಅದೇ ಆಗಿತ್ತು. ಅಂದು ಮತ್ತು ಇಂದು, ಅಂದಿನ ಪರಂಪರೆಯನ್ನು ಇಂದಿಗೂ ಮುಂದುವರಿಸಿಕೊಂಡು ಬಂದ ಹೆಗ್ಗಳಿಕೆ ಕಾಂಗ್ರೆಸಿನದು. ಎಲ್ಲವನ್ನೂ ಪ್ರಜಾಪ್ರಭುತ್ವದ ಹೆಸರಿನಲ್ಲಿ ಮಾಡಬಹುದು ಎಂದು ತೋರಿಸಿಕೊಟ್ಟವರು ಈ ಕಾಂಗ್ರೆಸಿನವರು ( ಮುಂದುವರಿಸಿದವರು ಹಲವರು). ಇಂಥ ವಿಷೇಧಗಳೆಲ್ಲಾ ಮುಸ್ಲಿಂ ದೇಶಗಳಲ್ಲಿ ಮಾತ್ರ ಇರುತ್ತವೆ. ಅವು ತಮಗೆ ಸಹನೀಯವಲ್ಲದ ವಿಡಿಯೋ, ಲೇಖನ ಮತ್ತು ಸುದ್ಧಿಗಳನ್ನು ನಿಷೇಧಿಸುತ್ತಾರೆ ಎಂದು ತಿಳಿದಿದ್ದವರಿಗೆ ನಾವೂ ಕೂಡಾ ಮುಸ್ಲಿಮ್ ದೇಶಗಳ ಮಾನಸಿಕತೆಯಂತೆಯೇ ಎಂದು ತೋರಿಸಿಕೊಟ್ಟವರು ಕಾಂಗ್ರೆಸಿಗರು.ಹಾಗಾಗಿ ಸೋನಿಯಾ ಗಾಂಧಿಯ ಪೂರ್ವ ಜೀವನದ ಬಗ್ಗೆ ಹೆಚ್ಚಿನ ಮಾಹಿತಿ ನಮಗೆ ಸಿಗುವುದಿಲ್ಲ. ರಾಬರ್ಟ್ ವಾಧ್ರಾನ ಹಗರಣಗಳ ಮುಂದುವರಿದ ಮಾಹಿತಿಯನ್ನು ಮಾಧ್ಯಮಗಳು ಬಿತ್ತರಿಸುವುದಿಲ್ಲ. ಇದು ಇಂದಿರಾ ಕಾಲದ ತುರ್ತುಪರಿಸ್ಥಿತಿಗಿಂತ ಭಿನ್ನವೇ?
ಇಂದಿರಾ ಗಾಂಧಿಯ ಸರ್ವಾಕಾರಿ ಧೋರಣೆಯನ್ನು ಬಿಟ್ಟರೆ ಆಕೆ ಲೆಕ್ಕ ಹಾಕಲು ಬಾರದಷ್ಟು ಸೊನ್ನೆಗಳನ್ನು ಹೊಂದಿರುವ ಹಗರಣಗಳನ್ನೇನು ನಡೆಸಿರಲಿಲ್ಲ. ತನ್ನ ವಿರೋಧಿಗಳೂ ದುರ್ಗೆ ಎಂದು ಹೊಗಳುವಂತೆ ಕೆಲವೆಡೆ ಆಡಳಿತ ನಡೆಸಿದ್ದರು. ಆದರೆ ಸೋನಿಯಾ? ಆಕೆ ಎಲ್ಲವನ್ನೂ ಮಾಡಿದರು. ಕಳೆದ ಎರಡು ದಶಕಗಳಲ್ಲಿ ದೇಶದಲ್ಲಿ ಕಂಡುಬಂದ ದೊಡ್ಡ ದೊಡ್ಡ ಹಗರಣಗಳಲ್ಲೆಲ್ಲಾ ಆಕೆಯ ಹೆಸರು ಕೇಳಿಬಂದಿದೆ. ಒಂದರ ಅನಂತರ ಮತ್ತೊಂದು. ಒಂದು ಮರೆಯುವ ಮೊದಲೇ ಇನ್ನೊಂದು ಹಲವು ಸೊನ್ನೆಗಳ ಹಗರಣಗಳು ನಡೆಯುತ್ತಲೇ ಇವೆ. ೨ ಜಿ ನಡೆದಿದ್ದು ಹಾಗೆಯೇ , ಇಂದು ಜೀಜಾಜಿ ( ಅಳಿಯಂದ್ರು) ಹಗರಣ ಕಾಣುತ್ತಿರುವುದೂ ಹಾಗೆಯೇ.
ಮಿತಿಮೀರಿದ ಸಂಪತ್ತು ಸಂಗ್ರಹ, ಸಂಶಯಾಸ್ಪದವಾಗಿ ಆಸ್ತಿ ಖರೀದಿ, ಬಡ್ಡಿಯೇ ಇಲ್ಲದೆ ಸಾಲ ಪಡೆದಿರುವುದು ಮತ್ತು ಬೃಹತ್ ರಿಯಲ್ ಎಸ್ಟೇಟ್ ಸಂಸ್ಥೆಗಳೊಂದಿಗೆ ನಿಕಟವಾದ, ಸಂದೇಹ ಹುಟ್ಟಿಸುವ ಸಂಬಂಧ. ಇವು ಸಮಸ್ತ ಕಾಂಗ್ರೆಸಿಗರ ನೆಚ್ಚಿನ ಅಳಿಯ ರಾಬರ್ಟ್ ವಾಧ್ರಾನ ಪ್ರೊಫೈಲ್. ಈತ ಏಕಾಏಕಿ ಐಶ್ವರ್ಯ ಬಂದ ಒಂದು ಕಾಲದ ಅಲ್ಪ. ಸೋನಿಯಾ ಅಳಿಯನೆಂಬ ಕಾರಣಕ್ಕೆ ದೇಶದ ಕಾಂಗ್ರೆಸಿಗರೆಲ್ಲರ ಡೊಗ್ಗು ಸಲಾಮು ಇವನಿಗೂ ಬೀಳುವುದು. ಆ ಡೊಗ್ಗು ಸಲಾಮುಗಳಿಂದಲೇ ಈ ರಾಬರ್ಟ್ ಕಾಂಗ್ರೆಸ್ ಆಡಳಿತದ ರಾಜ್ಯಗಳಿಂದ ಏಕರೆಗಟ್ಟಲೆ ಭೂಮಿಯನ್ನು ಖರೀದಿಸಬಲ್ಲ. ಈತ ಅಂದುಕೊಂಡಿದ್ದೆಲ್ಲವನ್ನೂ ಸಾಧಿಸಬಲ್ಲ. ಏಕೆಂದರೆ ಈತ ಸೋನಿಯಾ ಅಳಿಯ. ಪ್ರಿಯಾಂಕಳ ಗಂಡ. ಏನಾದರೂ ಪ್ರಶ್ನೆ ಕೇಳಿದರೆ ಉತ್ತರ ಹೇಳುವ ಬದಲು ಪ್ರಶ್ನೆಗಳೇ ಅರ್ಥವಾಗದ ರಾಹುಲ್ ಗಾಂಧಿ ಮಾಡಬೇಕಾದ ಕೆಲಸವನ್ನು ನೆಹರೂ ಕುಟುಂಬಕ್ಕಾಗಿ ಈ ವಾಧ್ರಾ ಮಾಡುತ್ತಿದ್ದಾನೆ. ಈತ ಅತ್ತೆ ಮನೆಯ ಇಂಗಿತವನ್ನು ತಿಳಿದುಕೊಂಡು ಸಂಪಾದನೆಗೆ ಇಳಿದಿರುವ ಅಳಿಮಯ್ಯ. ಈ ಕಾರಣದಿಂದ ಕಳೆದ ಮೂರು ವರ್ಷಗಳಲ್ಲಿ ರಾಜಾಸ್ಥಾನದ ಬಿಕಾನೇರ್ ಮತ್ತು ಜೈಸೆಲ್ಮೇರ್ ಸುತ್ತಮುತ್ತ ೩೧೧ ಜಮೀನನ್ನು ವಾಧ್ರಾ ಸಂಪಾದಿಸುತ್ತಾನೆ. ಇವು ಒಂದಾನೊಂದು ಕಾಲದಲ್ಲಿ ರಜಪೂತ ರಾಜರ ಆಸ್ತಿಗಳು! ಕೋಟೆ ಕಟ್ಟಿದವರ ಆಸ್ತಿಗಳನ್ನು ಅಳಿದ ಮೇಲೆ ಯಾರ್ಯಾರು ಅನುಭವಿಸಿಬಿಡುತ್ತಾರೆ ನೋಡಿ. ಅಲ್ಲದೆ ಕಳೆದ ೪ ವರ್ಷಗಳಿಂದಲೂ ಈತನ ಆಸ್ತಿ ಏರುತ್ತಲೇ ಇದೆ. ಈ ಅವಧಿಯಲ್ಲಿ ಈತ ೩೧ ಆಸ್ತಿಗಳನ್ನು ದೆಹಲಿ ಮತ್ತು ಹರ್ಯಾಣದ ಸುತ್ತಮುತ್ತ ಖರೀದಿಸುತ್ತಾನೆ. ಕಳೆದ ಮೂರು ವರ್ಷದಲ್ಲಿ ಈತ ತನ್ನ ಬಳಿಯಿದ್ದ ೫೦ ಲಕ್ಷ ರೂಗಳನ್ನು ೩೦೦ ಕೋಟಿ ರೂಗಳನ್ನಾಗಿ ಮಾಡಿಕೊಂಡಿದ್ದನೆಂದರೆ ಇವನು ಅದೆಂಥಾ "ಗಟ್ಟ್ಟಿಗ" ಅಳಿಯನಾಗಿರಬಹುದು?
ಅಳೆದೂ ಅಳೆದೂ ಕೊಡುವ ಸರಕಾರಗಳೇ ಇರುವಾಗ ಈ ಅಳಿಯ ಕೈಚಾಚಿ ತೆಗೊಂಡಿರದೇ ಇದ್ದಾನೆಯೇ? ಸರಕಾರಗಳೇ ಹೀಗಿದ್ದಮೇಲೆ ಇನ್ನು ಕೇಳುವವರಾರು? ಹೋದಲ್ಲಿ ಬಂದಲ್ಲಿ ಅತ್ತೆ, ಭಾವರ ಜೊತೆ ಕಾಣಿಸಿಕೊಳ್ಳುವ, ಗಾಂಧಿ ಸಮಾಧಿಗೆ ಕಾಂಗ್ರೆಸಿಗರೊಂದಿಗೆ ಹೋಗಿ ಕೂತು ಬರುವ ಈತನ ಖದರಿಗೆ ಪುಡಾರಿಗಳು ತಲೆಬಾಗದೇ ಇದ್ದಾರೆಯೇ? ಹಾಗೆ ತಲೆಬಾಗದೆ ಇದ್ದರೆ ಅವರು ಕಾಂಗ್ರೆಸಿಗರು ಹೇಗಾದಾರು?
ಪ್ರಿಯಾಂಕಾ ಗಾಂಧಿಯನ್ನು ಮದುವೆಯಾಗುವವರೆಗೂ ರಾಬರ್ಟ್ ವಾಧ್ರಾ "ದೊರೆ" ಯಾಗಿರಲಿಲ್ಲ. ಇವರಿಬ್ಬರೂ ಮೊದಲು ಅಂತಾರಾಷ್ಟ್ರೀಯ ಕಳ್ಳ ಒಟ್ಟಾವಿಯೋ ಕ್ವಾಟ್ರೋಚ್ಛಿಯ ಮನೆಯಲ್ಲಿ ಭೇಟಿಯಾದರು ಎಂದು ಕೆಲವರು ಹೇಳುತ್ತಾರೆ. ಇದ್ದರೂ ಇರಬಹುದು ಎನಿಸುತ್ತದೆ. ಏಕೆಂದರೆ ಕಳ್ಳರ ಮನೆಯಲ್ಲಿ ಕಳ್ಳರೇ ಇರುತ್ತಾರೆ, ಸೇರುತ್ತಾರೆ ಎಂಬುದು ನಾಣ್ಣುಡಿ. ಅನಂತರ ಈ ರಾಬರ್ಟ್‌ನ ಅದೃಷ್ಟ ಖುಲಾಯಿಸಿತು. ನೆಹರೂ ಕುಟುಂಬದ ಅಳಿಯ ಹೇಗೆಲ್ಲಾ ವರ್ತಿಸಬಹುದೋ ಹಾಗೆಲ್ಲಾ ವರ್ತಿಸಿದ. ತನಗಾಗದವರನ್ನು ವ್ಯವಸ್ಥಿತವಾಗಿ ಮುಗಿಸಿದ. ಇಷ್ಟೆಲ್ಲಾ ಆದರೂ ಭಾರತದಲ್ಲಿ ಆತ ಸಾಮಾನ್ಯ ನಾಗರಿಕ. ಆದರೆ ಅದಕ್ಕೂ ಹೆಚ್ಚಿನದು ಆತನಿಗಿಲ್ಲಿ ಸಲ್ಲುತ್ತದೆ. ಭಾರತ ಸರಕಾರದ special protection group act-1998 ವಾಧ್ರಾನಿಗೆ ಲಾಗೂ ಆಗುವುದಿಲ್ಲ. ಅಥವಾ ಆತ ಅದನ್ನು ಪರಿಗಣಿಸುವುದೂ ಇಲ್ಲ. ವಿಮಾನ ನಿಲ್ದಾಣದಲ್ಲಿ ಆತ ರಾಷ್ಟ್ರಪತಿಗಳಂತೆ, ಪ್ರಧಾನ ಮಂತ್ರಿಗಳಂತೆ , ಉಚ್ಛ ಮತ್ತು ಸರ್ವೋಚ್ಛ ನ್ಯಾಯಾಲಯಗಳ ನ್ಯಾಯಾಶರಂತೆ ತಪಾಸಣೆ ಇಲ್ಲದೆ ಹಾದು ಹೋಗಬಲ್ಲ. ಎಲ್ಲವೂ ಅಳಿಯ ಎಂಬ ಒಂದೇ ಕಾರಣಕ್ಕೆ.
ವಾಧ್ರಾನ ಹಗರಣಗಳನ್ನು ಮಾಧ್ಯಮಗಳು ಬಿತ್ತರಿಸುತ್ತಿದ್ದಂತೆಯೇ ಕಾಂಗ್ರೆಸಿನವರು ತುಂಬಾ ನೊಂದುಕೊಂಡರು. ಸಾಕ್ಷಾತ್ ಕಾಂಗ್ರೆಸಿನ ವಕ್ತಾರರೇ ಕ್ಯಾಮರಾ ಮುಂದೆ ಬಂದು ಸ್ಪಷ್ಟೀಕರಣ ಕೊಟ್ಟರು. ಕೇಂದ್ರದ ಉಚ್ಚ ನಾಯಕರಾದ ಶರತ್ ಪವಾರ್, ಜೈರಾಮ್ ರಮೇಶ್, ಚಿದಂಬರಂ, ದಿಗ್ವಿಜಯ್ ಸಿಂಗ್, ಸಿಬಲ್‌ಗಳು ತುರಾತುರಿಯಲ್ಲಿ ಹೇಳಿಕೆಗಳನ್ನು ನೀಡಿದರು. ಎಲ್ಲರೂ ವಾಧ್ರಾನನ್ನು ಸಮರ್ಥಿಸಿಕೊಂಡರು. ಇತ್ತ ಕರ್ನಾಟಕದಲ್ಲಿ ಕಾವೇರಿ ನೀರಿನ ವಿವಾದ ತೀವ್ರವಾಗುತ್ತಿದ್ದ ಹೊತ್ತಿನಲ್ಲೇ ಅವೆಲ್ಲವನ್ನೂ ಮರೆತು ರಾಜ್ಯಪಾಲರು ವಾಧ್ರಾನ ಪರವಾಗಿ ಮಾತಾಡುತ್ತಾರೆ.
ಇವೆಲ್ಲವೂ ತುರ್ತುಪರಿಸ್ಥಿತಿಯ ಲಕ್ಷಣಗಳಲ್ಲವೇನು? ದೇಶವೇನು ನೆಹರೂ ಕುಟುಂಬದ ಜಹಗೀರೇ? ಒಮ್ಮೆ ನೆನಪು ಮಾಡಿಕೊಳ್ಳಿ, ಟಾಟಾದವರು ಬಿಲಿಯಾಪತಿಗಳಾಗಲು ಬರೋಬ್ಬರಿ ೧೦೦ ವರ್ಷಗಳನ್ನು ತೆಗೆದುಕೊಂಡರು. ಅಂಬಾನಿಯವರ ಶ್ರೀಮಂತಿಕೆ ದೇಶಕ್ಕೆ ಗೊತ್ತಾಗಲು ಅರ್ಧ ಶತಮಾನವೇ ಬೇಕಾಯಿತು. ಆದರೆ ವಾಧ್ರಾ ಮೂರೇ ಮೂರು ವರ್ಷದಲ್ಲಿ ಲಕ್ಷಗಳನ್ನು ನೂರಾರು ಕೋಟಿಗಳನ್ನಾಗಿ ಮಾಡಿಬಿಡುತ್ತಾನೆ. ಅದು ಅಳಿಯನ ಮಹಿಮೆ! ಇಂಥ ಅಳಿಯಂದಿರನ್ನು ಕಣ್ಣ ಮುಂದಿಟ್ಟುಕೊಂಡು ಪ್ರಧಾನ ಮಂತ್ರಿಗಳು " ಹಣ ಮರದಲ್ಲಿ ಬೆಳೆಯುವುದಿಲ್ಲ", "ಮೂವತ್ತೈದು ರೂಪಾಯಿ ಇರುವವರಾರೂ ಬಡವರಲ್ಲ" ಎಂದು ಆಲಾಪಿಸುತ್ತಾರೆ. ಪರಿಸರ ಸಚಿವರು " ದೇಶದಲ್ಲಿ ಶೌಚಾಲಯಗಳಿಗಿಂತ ಹೆಚ್ಚಿಗೆ ದೇವಸ್ಥಾನಗಳಿವೆ" ಎನ್ನುತ್ತಾರೆ. ಚಿದಂಬರಂ " ವಾಧ್ರಾರ ಬಗ್ಗೆ ತನಿಖೆ ಇಲ್ಲ" ಎಂದು ಹೇಳುತ್ತಾರೆ. ಇವೆಲ್ಲವೂ ದೇಶದಲ್ಲಿ ತುರ್ತುಪರಿಸ್ಥಿತಿಯಲ್ಲದೆ ಹಾಲಿನ ಹೊಳೆ ಹರಿಯುವ ಲಕ್ಷಣವೇ? ಎಲ್ಲಾ ಪ್ರಶ್ನೆಗಳ ಹಿಂದೋಡಿದರೆ ಕೊನೆ ಮುಟ್ಟುವುದು ಸೋನಿಯಾರ ಬಳಿಗೆಯೇ. ಇವರನ್ನು ಇಂದಿಗೂ ಕಾಂಗ್ರೆಸಿಗರು ಪ್ರಧಾನ ಮಂತ್ರಿ ಹುದ್ದೆಯನ್ನು ತ್ಯಾಗಮಾಡಿದ ಮಹಾತಾಯಿ ಎಂದೇ ಗೌರವಿಸುತ್ತಾರೆ. ಮನಮೋಹನ ಸಿಂಗರಂಥಾ ಪ್ರಧಾನ ಮಂತ್ರಿ ಇರುವುದಾದರೆ ಸೋನಿಯಾಳ ತ್ಯಾಗವೂ ಲಾಭದಾಯಕವೇ ಆಯಿತಲ್ಲಾ.
ಹಾಗಾಗಿ ಈ ತುರ್ತುಸ್ಥಿಯ ಹಿಂದಿಗಿಂತಲೂ ಭಿನ್ನ. ಭೀಕರ.

No comments:
Post a Comment