ಆರು ತಿಂಗಳ ಹಿಂದಿನ ಒಂದು ದಿನ ಗುಜರಾತಿನ ಗಾಂಧೀನಗರದ ಮೋದಿ ಮನೆಯಲ್ಲಿದ್ದೆವು. ಮೋದಿ ಮನೆ ಹೇಗಿರಬೇಕಿತ್ತೋ ಹಾಗೆಯೇ ಆ ಮನೆ ಇತ್ತು. ಉದ್ಯಾನದಲ್ಲಿ ನವಿಲುಗಳು ಕುಣಿಯುತ್ತಿದ್ದವು. ಮರ್ಕಟಗಳು ಮನೆಯನ್ನು ಹತ್ತಿ ನಮ್ಮದೇ ಸಾಮ್ರಾಜ್ಯ ಎಂಬಂತೆ ಆಡುತ್ತಿದ್ದವು. ಸಂಪೂರ್ಣ ವಠಾರವೇ ಹಕ್ಕಿಗಳ ಚಿಲಿಪಿಲಿಯಿಂದ ತುಂಬಿತ್ತು. ಬಣ್ಣ ಬಣ್ಣದ ಹೂವುಗಳು, ಹುಲ್ಲಿನ ಪ್ರಾಂಗಣಗಳು. ಹಸನ್ಮುಖಿ ಸೇವಕರು. ಸದ್ದುಗದ್ದಲವಿಲ್ಲ. ಗೌಜು ದೌಲತ್ತುಗಳಿಲ್ಲ. ಬಂದವರಿಗೆ ವಿನಮ್ರ ಉಪಚಾರ. ಒಟ್ಟಾರೆ ಅದು ಪ್ರಾಚೀನ ಋಷ್ಯಾಶ್ರಮಗಳು ಹೀಗಿದ್ದಿರಬಹುದಲ್ಲವೇ ಎಂದೆಲ್ಲಾ ಯೋಚನೆ ಬರುವ ಹೊತ್ತು. ನಾವಿದ್ದವರು ನಾಲ್ಕು ಜನ. ಕೊನೆಗೂ ಭೇಟಿಯ ಕ್ಷಣ ಬಂದೇ ಬಂತು. ಕೋಣೆಯ ಬಾಗಿಲು ತಳ್ಳಿ ನುಗ್ಗಿದವರೇ ಎಲ್ಲರೂ ಅವಕ್ಕಾಗಿಹೋದೆವು. ಮೋದಿ ತಮ್ಮ ಕುರ್ಚಿಯಿಂದ ಎದ್ದು ಬರಮಾಡಿಕೊಳ್ಳಲು ನಿಂತಿದ್ದರು. " ನಾವು ಕರ್ನಾಟಕದಿಂದ..." ಎನ್ನುವಷ್ಟರಲ್ಲಿ " ಬನ್ನಿ ಬನ್ನಿ ಕುಳಿತುಕೊಳ್ಳಿ .ಕುಳಿತು ಮಾತಾಡೋಣ" ಎಂದರು. ಹೋದವರು ಕೂರುವವರೆಗೂ ಮೋದಿ ಕೂರಲಿಲ್ಲ. ಮನೆಗೆ ಬಂದ ನೆಂಟರನ್ನು ಮಾತಾಡಿಸುವಂತೆ ಮಾತಾಡಿಸಿದರು. ಮೋದಿ ಮೇಜಿನ ಮೇಲೆ ಎದ್ದು ಕಾಣುವಂತೆ " ಬಿಸ್ಮಾರ್ಕ್" ಎಂಬ ದೊಡ್ಡ ಪುಸ್ತಕವೊಂದಿತ್ತು. ಜನಪ್ರೀಯ ಮುಖ್ಯಮಂತ್ರಿಗಳು ಯಕಶ್ಚಿತ್ ಎಲ್ಲಿಂದಲೋ ಹೋದವರನ್ನು ಹಾಗೆ ಮಾತಾಡಿಸುವರೇ ಎಂಬ ಅಚ್ಚರಿಯಿಂದ ಹೊರಗೆ ಬರುವ ಮೊದಲೇ ಮೋದಿಯವರು "ಬಿಸ್ಮಾರ್ಕ್" ಅನ್ನೂ ಓದುತ್ತಾರೆಯೇ ಎಂಬ ಮತ್ತೊಂದು ಅಚ್ಚರಿ ಹುಟ್ಟಿಕೊಂಡಿತ್ತು. ಮಾತುಕತೆಗಳಾದವು. ಜೊತೆಗಿದ್ದ ಯುವಕನ ಹೆಗಲನ್ನು ತಟ್ಟಿ ದರು. ಆರೆಸ್ಸೆಸ್‌ನ ಪ್ರಚಾರಕರೇ ಪ್ರೀತಿಯಿಂದ ತಟ್ಟುವಂತೆ. "ಆಪ್ ಕಾ ಶುಭ್ ನಾಮ್?" ಅಂದರು. "ಗುಜರಾತ್ ಪೂರಾ ದೇಖಾ?" ಎಂದು ಪ್ರಶ್ನಿಸಿದರು. ಇವರು ಪ್ರಚಾರಕರ ಹಾಗೆಯೇ ಎನಿಸುತ್ತಿತ್ತು.
ಗುಜರಾತಿನ ರಸ್ತೆಗಳು, ಸಾರಿಗೆ, ಸೋಲಾರು, ಸಾಲ, ಕರೆಂಟು ಮೊದಲಾದ ಪ್ರತ್ಯಕ್ಷ ಕಾಣುವ ಸಂಗತಿಗಳಿಗಿಂತಲೂ ಮೋದಿ ಮೊದಲು ಯೋಗ್ಯ ಮಾನವ ಎಂಬ ಕಾರಣಕ್ಕೆ ಇಷ್ಟವಾಗುತ್ತಾರೆ. ಕರ್ನಾಟಕದವರಿಗೆ ಅದು ಅಚ್ಚರಿ ಕೂಡಾ. ಏಕೆಂದರೆ ಇಲ್ಲಿ ಸಚಿವರು, ಶಾಸಕರು ಬಿಡಿ ಅವರನ್ನು ಪರಿಚಯವಿದೆ ಎಂದುಕೊಳ್ಳುವವರನ್ನೂ ಮಾತಾಡಿಸಲೂ ಕಷ್ಟ. ಮಾತಾಡಿಸಲು ಹೋಗುವುದೂ ಹೆದರಿಕೆಯೇ. ಇನ್ನು ನಮ್ಮ ಹಲವು ರಾಜಕಾರಣಿಗಳಿಗಂತೂ ಬಿಸ್ಮಾರ್ಕ್ ಎಂದರೆ "ಅದೇನು ಬಿಸ್ಕೇಟೇ?" ಎಂದೇ ಕೇಳಿಬಿಡುವರು. ದೇಶದ ಎಲ್ಲೆಲ್ಲೂ ಇಂಥಾ ರಾಜಕಾರಣಿಗಳೇ ಕಾಣುವಾಗ ಅಪರೂಪವಾಗಿ ಮೋದಿಯಂಥವರು ಕಾಣುತ್ತಾರೆ. ಹಾಗಾಗಿ ಅವರು ಇಷ್ಟವಾಗುತ್ತಾರೆ. ಮೋದಿಯನ್ನು ಇಷ್ಟಪಡದಿರಲು ಕಾರಣಗಳೇ ಇಲ್ಲ ಎನಿಸುತ್ತದೆ. ಅವರ ಅಭಿವೃದ್ಧಿಗಿಂತಲೂ ಮೊದಲೇ ಅವರ ವ್ಯಕ್ತಿತ್ವ ಸೆಳೆಯುತ್ತದೆ.
ಕೆಲ ವಾರಗಳ ಹಿಂದೆ ಗುಜರಾತಿನ ಪತ್ರಕರ್ತರೊಬ್ಬರು ಕಾಂಗ್ರಸಿನ ಹಿರಿಯ ನಾಯಕರನ್ನು ಸಂದರ್ಶಿಸಿದ್ದರು.ರಾಜ್ಯ ರಾಜಕೀಯದ ಮಾತುಕತೆಗಳಾದವು. ಸಂದರ್ಶನದ ಕೊನೆಯಲ್ಲಿ ಆ ಪತ್ರಕರ್ತರು " ಮೋದಿ ಕವನ ಬರೆಯುತ್ತಾರೆ. ಫೋಟೋಗ್ರಾಫಿಯ ಹವ್ಯಾಸವೂ ಇದೆ. ನಿಮಗೆ ಅಂಥ ಹವ್ಯಾಸಗಳೇನಾದರೂ ಇದೆಯೇ?" ಎಂದು ಕೇಳಿದರು. ಆ ಕಾಂಗ್ರೆಸಿಗರು "ಮೊದಲೆಲ್ಲಾ ಇತ್ತು . ಈಗ ರಾಜಕೀಯಕ್ಕೆ ಬಂದ ಮೇಲೆ ಎಲ್ಲಾ ಬಿಟ್ಟುಹೋಯಿತು." ಎಂದು ಉತ್ತರಿಸಿದರು. ಇದು ಕಾಂಗ್ರೆಸ್ ನಾಯಕನೊಬ್ಬನ ಮಾತಲ್ಲ. ಅದು ಬ್ರಾಂಡ್ ನದ್ದೇ ಸಮಸ್ಯೆ. ರಾಜಕಾರಣದಲ್ಲಿ ಹವ್ಯಾಸಗಳಿಗೆ ಸ್ಥಾನವಿಲ್ಲ. ಇದ್ದರೆ ಕೇವಲ ಚಟಗಳು ಮಾತ್ರ ಎಂಬ ಪರಿಸ್ಥಿತಿಯೇ ಎಲ್ಲೆಡೆ ಇರುವಾಗ ಮೋದಿ ಅಚ್ಚರಿ ಹುಟ್ಟಿಸದೇ ಹೇಗೆ ಇದ್ದಾರು? ಆಪ್ತವಾಗದೇ ಹೇಗೆ ಇದ್ದಾರು? ಕೆಲವರ್ಷಗಳ ಹಿಂದೆ ಅಹಮದಾಬಾದಿನಲ್ಲಿ ಮೋದಿಯವರು ತಾವು ೧೯೯೦ಕ್ಕೂ ಮೊದಲು ತೆಗೆದ ಛಾಯಾಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಿದ್ದರು.ಕೊನೆಯ ಒಂದು ದಿನ ಅಹಮದಾಬಾದ್ ಫೋಟೋಗ್ರಾಫರ್ಸ್ ಅಸೋಶಿಯೇಶನ್ನಿನವರು ಮುಖ್ಯಮಂತ್ರಿಗಳನ್ನೇ ಕರೆಸಿ ಸಂವಾದವನ್ನೇ ಏರ್ಪಡಿಸಿದ್ದರು. ಪ್ರಜಾಪ್ರಭುತ್ವದ ಸಾಕಾರ ರೂಪ ಇದಲ್ಲದೆ ಬೇರೇನು? ಮೋದಿ ಅಚ್ಚರಿಯಲ್ಲದೆ ಇನ್ನೇನು? ಹವ್ಯಾಸಗಳಿದ್ದವನು ರಾಜಕಾರಣಿಯಾಗಲಾರ ಮತ್ತು ಚಟಗಳಿದ್ದವನಷ್ಟೇ ರಾಜಕಾರಣಿ ಎಂಬ ನಂಬಿಕೆಗಳು ಮೋದಿಯಿಂದ ಹುಸಿಯಾಗುತ್ತವೆ.
ಸಿದ್ಧಾಂತಗಳು ಪುಸ್ತಕಗಳ ಬದನೇಕಾಯಿಗಳು ಎಂಬ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸುತ್ತಾರೆ. ಆದರೆ ಮೋದಿ ರಾಜ್ಯದಲ್ಲಿ ಸಿದ್ಧಾಂತಗಳು ಮೋದಿಯ ದೂರದೃಷ್ಟಿಯಿಂದ ರಸ್ತೆಗಿಳಿದಿವೆ. ಕೇಳುವ ಸಿದ್ಧಾಂತಗಳನ್ನು ಗುಜರಾತಿನಲ್ಲಿ ನೋಡಲು ಸಿಗುತ್ತವೆ.
ಮೋದಿ ಯಾವತ್ತೂ ಒಂದು ಕೆಲಸವನ್ನು ಒಂದೇ ಉದ್ದೇಶದಿಂದ ಮಾಡುವುದಿಲ್ಲ. ಅಲ್ಲಿ ಮತ್ತೇನೋ ಒಂದರ ಆಲೋಚನೆಯಿರುತ್ತದೆ. ಊರಿಗೆ ಊರೇ ಗಾಳಿಪಟ ಹಾರಿಸುವ ಹೊತ್ತಲ್ಲಿ ಮೋದಿ ಕೂಡಾ ಅಪ್ಪಟ ಗುಜರಾತಿಯಂತೆ ಗಾಳಿಪಟ ಹಾರಿಸುತ್ತಾರೆ. ಗಾಳಿಪಟ ಹಾರಿಸುತ್ತಲೇ ಅನಿವಾಸಿಗಳನ್ನು ಆಹ್ವಾನಿಸುತ್ತಾರೆ. ಬಂಡವಾಳ ತೊಡಗಿಸುತ್ತಾರೆ. ನೀರಿನ ಕಾಲುವೆಗಳಿಗೆ ಸೋಲಾರ್ ಪ್ಲೇಟ್‌ಗಳಿಂದ ಮುಚ್ಚಳ ಹಾಕಿಸುತ್ತಾರೆ. ಮೋದಿಯವರ ಎಲ್ಲಾ ಯೋಜನೆಗಳು ಅಂಥವೇ.
ಮೋದಿಯವರ ಇಂಥ ಯೋಜನೆಗಳು ಐದು ಶತಮಾನಗಳ ಹಿಂದಿನ ಕೃಷ್ಣ ದೇವರಾಯರನ್ನು ನೆನಪಿಗೆ ತರುತ್ತದೆಯೇ ಹೊರತು "ಜಿಮ್" ಸಮಾವೇಶವನ್ನಂತೂ ನೆನಪಿಗೆ ತರಲಾರದು.
ಒಮ್ಮೆ ಕೃಷ್ಣದೇವರಾಯರು ಬಿದರೆಯನ್ನು ಮುತ್ತಲು ಸೇನೆಯೊಡನೆ ಹೊರಟಿದ್ದರು. ದಾರಿಯಲ್ಲಿ ತುಂಬಿ ಹರಿಯುತ್ತಿದ್ದ ಕೃಷ್ಣೆ ಅಡ್ಡ ನಿಂತಿದ್ದಳು. ಪ್ರವಾಹ ಇಳಿಯಲೆಂದು ರಾಯರು ಮೂರು ವಾರಗಳ ಕಾಲ ಕಾದರು. ಕೃಷ್ಣೆ ದಾರಿಬಿಡುವ ಲಕ್ಷಣಗಳು ಕಾಣಿಸಲಿಲ್ಲ. ಪ್ರವಾಹ ಇಳಿಯದೆ ಬಿದರೆಯನ್ನು ಮುತ್ತುವಂತಿರಲಿಲ್ಲ. ಏಕಾಏಕಿ ರಾಯರು ಸೈನ್ಯಕ್ಕೆ ಕೃಷ್ಣೆಗೆ ಕಾಲುವೆ ತೋಡಿ ಎಂದು ಆಜ್ಞಾಪಿಸಿದರು. ಕಾಲುವೆ ಸಿದ್ಧವಾಯಿತು. ಪ್ರವಾಹ ಇಳಿಯಿತು. ತೋಡಿದ ಕಾಲುವೆಯಿಂದ ನೀರು ವಿಜಯನಗರಕ್ಕೆ ಹರಿಯಿತು. ಅತ್ತ ಜಯವೂ ದಕ್ಕಿತು. ಇತ್ತ ಕೃಷಿಯೂ ಆಯಿತು. ಅದು ರಾಯರ ವೈಶಿಷ್ಟ್ಯ. ಅಂಥ ವೈಶಿಷ್ಟ್ಯ ರಾಯರ ಕಾಲದಲ್ಲೇ ಕೊನೆಯಾಯಿತೋ ಎಂದುಕೊಳ್ಳುತ್ತಿರುವಾಗ ಗುಜರಾತಿನಲ್ಲಿ ಮೋದಿ ಸಾಕ್ಷಾತ್ ರಾಯರಂತೆ ಕಂಡುಬರುತ್ತಾರೆ. ಕವಿಮನಸ್ಸಿನ ಆಡಳಿತಗಾರನೊಬ್ಬ ಮತ್ತೆ ಹುಟ್ಟಿಬರುತ್ತಾನೆ. ತಮ್ಮ ಆಡಳಿತಾವಧಿಯಲ್ಲಿ ಮೋದಿ ಕೈಗೊಂಡ ಇಂಥ ಯೋಜನೆಗಳು ಎಷ್ಟೋ ಇವೆ. ಜತೆಗೆ ರಾಯರಂತೆ ಮೋದಿ ಕೂಡಾ ಅಸಾಮಾನ್ಯವೆನಿಸುವ ರಿಸ್ಕ್‌ಗಳನ್ನು ತೆಗೆದುಕೊಳ್ಳುವ ಸಾಹಸಿ. ಮೋದಿ ತನ್ನ ರಾಜ್ಯದಲ್ಲಿ ಮಹಿಳಾ ಸಬಲೀಕರಣ ಮತ್ತು ಲಿಂಗ ಅನುಪಾತದ ವೈಪರೀತ್ಯವನ್ನು ಸುಧಾರಿಸಲು ಒಂದು ಕ್ರಮವನ್ನು ಕೈಗೊಂಡರು. ಆಸ್ತಿ ರಿಜಿಸ್ಟ್ರೇಶನ್‌ನಲ್ಲಿ ಮಹಿಳೆಯರಿಗೆ ಸ್ಟ್ಯಾಂಪ್ ಡ್ಯೂಟಿಯಲ್ಲಿ ಸಂಪೂರ್ಣ ವಿನಾಯಿತಿಯನ್ನು ಅವರು ಘೋಷಿಸಿದರು. ಅಂದರೆ ಮಹಿಳೆಯೊಬ್ಬಳು ತನ್ನ ಹೆಸರಿನಲ್ಲಿ ಆಸ್ತಿಯನ್ನು ನೊಂದಾವಣಿ ಮಾಡಿಕೊಳ್ಳಲು ಸ್ಟ್ಯಾಂಪ್ ಡ್ಯೂಟಿಯನ್ನು ಭರಿಸಬೇಕಿಲ್ಲ. ಅಂಥ ಕ್ರಮವನ್ನು ಬಹುಶಃ ಯಾರೂ ಊಹಿಸುವ ಗೊಡವೆಗೇ ಹೋಗಲಿಕ್ಕಿಲ್ಲ. ಆ ಕಾರಣಕ್ಕೆ ಗುಜರಾತಿನಲ್ಲಿ ಜನ ತಮ್ಮ ಆಸ್ತಿಯನ್ನು ಹೆಂಗಸರ ಹೆಸರಿನಲ್ಲಿ ನೊಂದಾವಣಿ ಮಾಡಲಾರಂಭಿಸಿದರು. ಇದರಿಂದ ಬೊಕ್ಕಸಕ್ಕೆ ಲಕ್ಷಾಂತರ ಕೋಟಿ ಕೊರತೆಯುಂಟಾಯಿತು. ಆದರೆ ಮೋದಿ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಏಕೆಂದರೆ ಇದರಿಂದ ಮಹಿಳೆ ಸಬಲಳಾದಳು. ಆಸ್ತಿವಂತಳಾದಳು. ಈ ನಿರ್ಧಾರವನ್ನು ಯಾರು ತಾನೇ ವಿರೋಧಿಸಬಹುದು? ಹೇಗೆ ತಾನೇ ವಿರೋಧಿಸಬಲ್ಲರು? ಹೇಗೆ ತಾನೇ ಮೋದಿಯನ್ನು ಪೂಜಿಸದೇ ಇದ್ದಾರು?
ದೂರದೃಷ್ಟಿಯ ಜೊತೆಗೆ ಬಹುಮುಖಿ ವ್ಯಕ್ತಿತ್ವ ಮೋದಿಯವರ ವಿಶೇಷತೆ. ಅವರು ವ್ಯಕ್ತಿಯೊಬ್ಬ. ಆಲೋಚನೆಗಳು ಹಲವು ಇರುವಂಥ ಮನುಷ್ಯ. ಇಂದು ಗುಜರಾತಿನ ಮಹಾನಗರಗಳಿಗೆ ಹೋದರೆ ರಸ್ತೆಬದಿಯ ಗೋಡೆಗಳಲ್ಲಿ ಬಣ್ಣಬಣ್ಣದ ಚಿತ್ತಾರಗಳನ್ನು ಕಾಣಬಹುದು. ಅವಾವುವೂ ಖ್ಯಾತ ಕಲಾವಿದರು ಬಿಡಿಸಿದ ಚಿತ್ರಗಳಲ್ಲ. ಚಿತ್ರ ಬಿಡಿಸಲೆಂದೇ ಸರಕಾರ ಟೆಂಡರ್ ಕರೆಯಲಿಲ್ಲ. ನಮ್ಮ ಬೆಂಗಳೂರಿನ ಗೋಡೆಗಳ ಚಿತ್ರಗಳಂತೆ ಅವು ಮಾಸಿಲ್ಲ. ಇಲ್ಲಿನ ಮಹಿಷಾಸುರನ ಚಿತ್ರಕ್ಕೆ ಮೂತ್ರ ಮಾಡುವಂತೆ ಅಲ್ಲಿ ಯಾರೂ ಮೂತ್ರ ಮಾಡುವುದಿಲ್ಲ. ಏಕೆಂದರೆ ಅವು ಜನರೇ ಬಿಡಿಸಿದ ಚಿತ್ರಗಳು. ಮುಖ್ಯವಾಗಿ ಹೈಸ್ಕೂಲು ಮಕ್ಕಳು ಬಿಡಿಸಿದ ಚಿತ್ರಗಳು. ಮಕ್ಕಳು ನಗರದ ಗೋಡೆಗಳಲ್ಲಿ ತಮಗಿಷ್ಟವಾದ ಚಿತ್ರಗಳನ್ನು ಅಲ್ಲಿ ಬಿಡಿಸಬಹುದು. ಹೆಸರು-ವಿಳಾಸ ಬರೆದುಕೊಳ್ಳಬಹುದು. ಪ್ರತಿಯಾಗಿ ಸ್ಥಳಿಯಾಡಳಿತ ಚಿತ್ರವೊಂದಕ್ಕೆ ೬೦೦ ರೂಗಳನ್ನು ಮಕ್ಕಳಿಗೆ ಕೊಡುತ್ತದೆ. ಮಕ್ಕಳು ಬಿಡಿಸಿದ ಚಿತ್ರಗಳನ್ನು ಪೋಷಕರು ಹೆಮ್ಮೆಯಿಂದ ಆಲ್ಬಮ್ ಮಾಡಿಟ್ಟುಕೊಳ್ಳುತ್ತಾರೆ. ಬಾವನಗರ, ಜಾಮ್‌ನಗರದಿಂದ ಬಂದ ನೆಂಟರಿಗೆ ಮಕ್ಕಳು ಬಿಡಿಸಿದ ಚಿತ್ರಗಳನ್ನು ತೋರಿಸಲು ಕರೆದೊಯ್ಯುತ್ತಾರೆ. ಆ ಚಿತ್ರಕ್ಕೆ ಅಪಚಾರವಾಗದಂತೆ ನಿಗಾ ವಹಿಸುತ್ತಾರೆ. ನಗರಕ್ಕೆ ನಗರವೂ ಸುಂದರವಾಯಿತು, ಮಕ್ಕಳಿಗೂ ಖುಷಿಯಾಯಿತು, ನಾಗರಿಕ ಪ್ರಜ್ನೆಯೂ ಜಾಗೃತವಾಯಿತು. ಇದಕ್ಕೆ ವಿಶೇಷ ತಲೆಯೇನೂ ಬೇಕಾಗಿರಲಿಲ್ಲ. ಪಾಲಿಸಿ ಮಟ್ಟದಲ್ಲೂ ಚರ್ಚೆ ನಡೆಯಬೇಕಾಗಿರಲಿಲ್ಲ. ನಾಯಕನೊಬ್ಬನ ಸ್ವಚ್ಛ ನಿರ್ಧಾರ ಇಡೀ ಸಮಾಜವನ್ನೇ ಸ್ವಚ್ಛಗೊಳಿಸಿತು. ಇಂಥ ನಾಯಕನಿಂದ ಸಂಪೂರ್ಣ ಗುಜರಾತ್ ಇತರ ರಾಜ್ಯಗಳಿಗಿಂತ ವಿಭಿನ್ನವಾಗಿ ನಿಲ್ಲುತ್ತದೆ. ಇಡೀ ದೇಶವೇ ಮತ್ತೊಂದು ಗುಜರಾತ್ ಆಗಬಾರದೇ ಎನಿಸುತ್ತದೆ.
ಗುಜರಾತಿನ ಜನಕ್ಕೆ ಮೋದಿ ರಾಜ್ಯದ ಅಭಿವೃದ್ಧಿಯ ತರುವಾಯವೂ ಇಷ್ಟವಾಗುತ್ತಾರೆ. ಏಕೆಂದರೆ ಮೋದಿ ಮಧ್ಯಮ ವರ್ಗದ ನಾಡಿಮಿಡಿತವನ್ನು ಬಲ್ಲವರು. ಮೇಲಾಗಿ ಮೋದಿ ಕೂಡಾ ಗ್ರಾಮೀಣ ಹಿನ್ನಲೆಯವರು. ಗ್ರಾಮೀಣ ವಿದ್ಯಾಭ್ಯಾಸ ಹೊಂದಿದವರು. ಎಲ್ಲಕ್ಕೂ ಹೆಚ್ಚಾಗಿ ಅವರು ಪ್ರಾಮಾಣಿಕರು. ರಾಜ್ಯದ ಬಗ್ಗೆ ಕನಸುಳ್ಳವರು. ಹಾಗಾಗಿ ಮೋದಿ ಗಾಲ್ ಸ್ಟಿಕ್ ಹಿಡಿದಾಗಲೂ ಎಡೆಬಿಡಂಗಿಯಂತೆ ಕಾಣುವುದಿಲ್ಲ. ಬಡ ಮತ್ತು ಮದ್ಯಮವರ್ಗದ ಜನರತ್ತ ಹೋದರೂ ಮುಖ್ಯಮಂತ್ರಿ ಜನರಿಗೆ ಅನ್ಯಗ್ರಹ ಜೀವಿಯಂತೆ ಕಾಣುವುದಿಲ್ಲ. ಜನರು ಅಲ್ಲಿ ಅಹವಾಲನ್ನು ಅರ್ಪಿಸಲು ಪ್ರಾಯಾಸ ಪಡಬೇಕಿಲ್ಲ. ಏಕೆಂದರೆ ಮೋದಿಯಲ್ಲಿ ಮಾನವೀಯತೆಯಿದೆ. ಕಷ್ಟಕ್ಕೆ ಕರಗುವ ಹೃದಯವಿದೆ.
ಒಮ್ಮೆ ಹೀಗಾಯಿತು.
ಅನಿಕೇತನೆಂಬ ೧೦ ವರ್ಷದ ದಲಿತ ಬಾಲಕ ಕ್ಯಾನ್ಸರಿನಿಂದ ಬಳಲುತಿದ್ದ. ಕಳೆದ ಎರಡು ವರ್ಷಗಳಿಂದ ಕರ್ಣಾವತಿಯ(ಅಹಮದಾಬಾದ್) ಸಿವಿಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ. ತನ್ನ ಜರ್ಜರಿತ ದೇಹದ ಕಾರಣ ಅನಿಕೇತ ಶಾಲೆಗೆ ಹೋಗುವ ಭಾಗ್ಯವನ್ನೇ ಕಳೆದುಕೊಂಡಿದ್ದ. ಆದರೆ ಈತನಲ್ಲಿ ಕನಸುಗಳು ಇಂಗಿಹೋಗಿರಲಿಲ್ಲ. ತಾನೊಬ್ಬ ಪೊಲೀಸ್ ಅಧಿಕಾರಿಯಾಗಬೇಕೆಂಬ ಆಸೆಯನ್ನು ಈ ಪುಟ್ಟ ಬಾಲಕ ಕಾಯಿಲೆಯ ಜೊತೆಗೇ ಇಟ್ಟುಕೊಂಡಿದ್ದ. ಒಂದು ದಿನ ಅನಿಕೇತ ಆಸ್ಪತ್ರೆಗೆ ಬರುತ್ತಿದ್ದ ಸಂಘಟನೆಯ ಕಾರ್ಯಕರ್ತರಿಗೆ ತನ್ನ ಅಭಿಲಾಷೆಯನ್ನು ತಿಳಿಸಿದ. ಆ ಸಂಘಟನೆಯವರು ಅನಿಕೇತನ ಬಯಕೆಯನ್ನು ಮುಖ್ಯಮಂತ್ರಿ ಮೋದಿಯವರಿಗೆ ಮುಟ್ಟಿಸಿದರು. ಅನಿಕೇತನ ಪೂರ್ವಪರಗಳನ್ನು ತಿಳಿದ ಮೋದಿಯವರು ತತ್ ಕ್ಷಣವೇ ಅನಿಕೇತನನ್ನು ಒಂದು ದಿನದ ಮಟ್ಟಿಗೆ ನಗರದ ಪೊಲೀಸ್ ಕಮಿಷನರ್ ಆಗಿ ನೇಮಕ ಮಾಡಿದರು. ಆ ಒಂದು ದಿನ ಅನಿಕೇತ ಇಡೀ ನಗರ ಪ್ರದಕ್ಷಿಣೆ ಮಾಡಿದ. ಕೆಲವು ಕೇಸುಗಳನ್ನು ಆಲಿಸಿದ. ನಗರದ ನಾಲ್ಕು ಠಾಣೆಗಳಿಗೆ ಭೇಟಿ ಕೋಟ್ಟ. ಬಾಲಭಾಷೆಯಲ್ಲಿ ಪೊಲೀಸರೊಂದಿಗೆ ಮಾತಾಡಿದ.
ಇನ್ನೊಮ್ಮೆ ಕಾಮನ್‌ವೆಲ್ತ್ ಪಂದ್ಯಾವಳಿಯಲ್ಲಿ ಪದಕ ವಿಜೇತೆ ಲಜ್ಜಾ ಗೋಸ್ವಾಮಿ ಎಂಬ ಬಾಲಕಿಯ ಮನೆಗೆ ಸಾಕ್ಷಾತ್ ಮುಖ್ಯಮಂತ್ರಿಯೇ ಹೋಗಿಬಿಟ್ಟಿದ್ದರು. ಅದೂ ಆನಂದ ಜಿಲ್ಲೆಯ ಗ್ರಾಮೀಣ ಭಾಗದ ಜಿತೋಡಿಯಾ ಎಂಬ ಕುಗ್ರಾಮಕ್ಕೆ. ಹೇಳದೇ ಬಂದ ಮುಖ್ಯಮಂತ್ರಿಯನ್ನು ನೋಡಿ ಗ್ರಾಮಸ್ಥರು ಪುಳಕಗೊಂಡರು. ಮೋದಿ ಲಜ್ಜಾಳಿಗೆ ನಿನಗೇನು ಬೇಕು ಎಂದು ಕೇಳಿದರು. ಮುಖ್ಯಮಂತ್ರಿಗಳು ಮನೆಗೆ ಬಂದ ಆಘಾತದಿಂದ ಆಕೆ ಹೊರಬಂದಿರಲಿಲ್ಲ. ಆಕೆ ಏನನ್ನೂ ಕೇಳಲಿಲ್ಲ. ಕೊನೆಗೆ ಮೋದಿ ಮನೆಯಲ್ಲೇ ಐದು ಲಕ್ಷ ರೂಗಳನ್ನು ಕೊಟ್ಟು ರೈಫಲ್ ತೆಕೋ ಎಂದಿದ್ದರು.
ಇತ್ತೀಚೆಗೆ ಬೈಠಕ್‌ವೊಂದರಲ್ಲಿ ಭಾಗವಹಿಸಿದ ಮುಖ್ಯಮಂತ್ರಿಗಳು ಜನರ ನಡುವೆ ಜಮಖಾನಾದಲ್ಲೇ ಕೂತಿದ್ದರು. ಶಿಕ್ಷಣ ಮಂತ್ರಿಗಳು ಅವರನ್ನು ಮುಂದಿನ ಸಾಲಿಗೆ ಕರೆತಂದರು ಎಂಬ ಸಚಿತ್ರ ವರದಿಗಳು ಪತ್ರಿಕೆಗಳಲ್ಲಿ ಬಂದವು. ಒಬ್ಬ ರಾಜಕಾರಣಿ ಇಷ್ಟವಾಗಲು ಇಷ್ಟು ಸಾಕಾಗುತ್ತವೆ. ನಮ್ಮ ಸುತ್ತಲೂ ಗಂಟು ಮೋರೆ ಹಾಕಿರುವ, ವೇದಿಕೆಯಲ್ಲಿ ನಿದ್ರೆ ಮಾಡುವ , ಅಬ್ಬರಿಸುವ ರಾಜಕಾರಣಿಗಳೇ ತುಂಬಿರುವಾಗ ಮೋದಿ ಹೇಗೆ ತಾನೇ ಇಷ್ಟವಾಗದೆ ಇದ್ದಾರು? ಮುಳ್ಳಿನ ಚಮಚದಲ್ಲಿ ಬುದ್ದಿಮಾಂದ್ಯ ಮಕ್ಕಳಿಗೆ ಕೇಕು ತಿನ್ನಿಸುವವರೂ ಇರುವಾಗ ಬುದ್ದಿಮಾಂದ್ಯ ಮಕ್ಕಳನ್ನು ತನ್ಮಯತೆಯಿಂದ ಅಪ್ಪಿಕೊಳ್ಳುವ ಮೋದಿ ಇಷ್ಟವಾಗದೇ ಹೇಗಿದ್ದಾರು? ಇಲ್ಲಿ ಪಾದ ಪೂಜೆ ಅಪೇಕ್ಷಿಸುವ ಮಂತ್ರಿಗಳು, ಅಂಥವರಿಂದ ಫಲ ಪಡೆಯಲೆಂದೇ ಹುಟ್ಟಿರುವ ವಿವಿಧ ವೇಷಧಾರಿಗಳನ್ನು ನೋಡುತ್ತಿರುವಾಗ ವಂದಿಮಾಗದರಿಲ್ಲದ, ಸದಾ ಎಚ್ಚರದ, ಬಿಸ್ಮಾರ್ಕನನ್ನೋದುವ ಮೋದಿ ಕಾಡುತ್ತಾರೆ. ಮೋದಿಯನ್ನು ಇಷ್ಟಪಡಲಾರದವರು ಇನ್ನಾರನ್ನೂ ಇಷ್ಟಪಡಲಾರರು ಎನಿಸುತ್ತದೆ.

No comments:
Post a Comment