ಅದೊಂದು ಐತಿಹಾಸಿಕ ಕಥೆಯನ್ನು ಕೊಡವರು ಇಂದಿಗೂ ಗುನುಗುನಿಸುತ್ತಿರುತ್ತಾರೆ.
ಅದು ನಾಗರಿಕತೆ ಎನ್ನುವುದು ಮೂಲೆ ಮೂಲೆಗೆ ಇನ್ನೂ ಮುಟ್ಟದ ಕಾಲ. ಗುಡ್ಡಗಾಡಿನ ಪ್ರದೇಶದಲ್ಲಿನ್ನೂ ಪ್ರಭುತ್ವದ ಕಲ್ಪನೆ ಬರದಿದ್ದ ಕಾಲ. ಅಂಥ ಒಂದು ಕಾಲದಲ್ಲಿ ಕೊಡಗಿನ ನಾಲ್ಕುನಾಡು ಎಂಬ ಪ್ರದೇಶದ ನೆಲಜಿ ಗ್ರಾಮಕ್ಕೆ ಜಂಗಮನೊಬ್ಬನು ಬರುತ್ತಾನೆ. ಜಂಗಮನ ಹಾವಭಾವ, ವೇಷ ಭೂಷಣ, ವಿಭೂತಿಗಳನ್ನು ಕಂಡ ಜನರು ಆದರದಿಂದ ಆತನನ್ನು ಬರಮಾಡಿಕೊಂಡರು. ಕುಶಲೋಪರಿಗಳು ಸಾಂಗವಾಗಿ ನಡೆದ ಅನಂತರ ಜಂಗಮ ಊರವರನ್ನು ಉದ್ದೇಶಿಸಿ ಮಾತಾಡಲಾರಂಭಿಸಿದ. ತಾನು ಹಾಸನ ಸೀಮೆಯ ಇಕ್ಕೇರಿ ಸಂಸ್ಥಾನದಿಂದ ಬಂದವನೆಂದೂ ಅಲ್ಲಿ ರಾಜಪ್ರಭುತ್ವವಿದೆಯೆಂದೂ ರಾಜನ ಅಧೀನದಲ್ಲಿ ಜನ-ಜಾನುವಾರುಗಳು ಸುಖದಿಂದ ಬಾಳುತ್ತಿರುವರೆಂದೂ ಕೇಡುಬಯಸದವರಿಗೆ ಅಲ್ಲಿ ಸ್ಥಾನವಿಲ್ಲವೆಂದೂ ರಾಜನ ಗುಣಗಾನ ಮಾಡತೊಡಗಿದ. ಹೀಗೆಯೇ ದೇಶದಲ್ಲಿ ಹಲವಾರು ಸಂಸ್ಥಾನಗಳು ಅಸ್ತಿತ್ವದಲ್ಲಿರುವುದೆಂದೂ ಜಂಗಮ ರೋಚಕವಾಗಿ ವಿವರಿಸತೊಡಗಿದ. ಬ್ರಹ್ಮಗಿರಿ, ಪುಷ್ಪಗಿರಿ ಬೆಟ್ಟಸಾಲುಗಳಲ್ಲಿ ಹೊದ್ದುಕೊಂಡಂತಿರುವ ಕೊಡಗಿನ ಮೂಲನಿವಾಸಿಗಳಿಗೆ ಇವುಗಳ ಪರಿಕಲ್ಪನೆ ಹೊಸದು. ಆಳುವುದು ಮತ್ತು ಆಳಿಸಿಕೊಳ್ಳುವ ಕಥೆಗಳನ್ನು ಕಾವಿಧಾರಿ ಜಂಗಮನಿಂದ ಪೂರ್ತಿಯಾಗಿ ಕೇಳಿಸಿಕೊಂಡರೂ ಕೊಡವರು ಮೌನವಾಗಿ ಕುಳಿತೇ ಇದ್ದರು. ಏನೇನೂ ಪ್ರತಿಕ್ರಿಯೆ ಇರಲಿಲ್ಲ. ಆಗ ಸಂನ್ಯಾಸಿಯೇ " ಕೊಡಗಲ್ಲೂ ಪ್ರಭುತ್ವವಿಬೇಕು. ಪ್ರಭುತ್ವವಿಲ್ಲದ ನಾಡು ಪರಿಪೂರ್ಣವೇ ಅಲ್ಲ" ಎಂದನಂತೆ. ಆಗಲೂ ಜನ ಸುಮ್ಮನೇ ಇದ್ದರು. ಕೊನೆಗೆ ಜಂಗಮನೇ ನೆಲಜಿ ಗ್ರಾಮದಲ್ಲಿ ಕುಳಿತಿದ್ದ ಜನರತ್ತ ದಿಟ್ಟಿಸಿ, ಆಯಕಟ್ಟಿನ ಅಜಾನುಭಾಹು ಶರೀರದ "ಮಂಡೀರ " ಕುಟುಂಬದ ಯುವಕನೊಬ್ಬನತ್ತ ಬೊಟ್ಟುಮಾಡಿ "ನೀನು ರಾಜನಾಗು. ನಿನಗೆ ರಾಜಕಳೆಯಿದೆ" ಎಂದನಂತೆ. ಆಗ ಕುಳಿತಿದ್ದವರೆಲ್ಲಾ ದಢಕ್ಕನೆ ಎದ್ದು ನಿಂತವರೇ "ಭೂಪುತ್ರರು ನಾವು ಕೊಡವರು. ಭೂಪತಿಗಳಾಗೆವು ಎಂದೂ, ನೀವೇ ಅರಸರಾಗಿ . ನಿಮ್ಮ ಬೆನ್ನ ಹಿಂದೆ ನಾವಿರುವೆವು " ಎಂದು ಪ್ರತಿಜ್ಞೆ ಯನ್ನು ಮಾಡಿದರಂತೆ. ಹಾಗೆ ಸರ್ವಸಂಗ ಪರಿತ್ಯಾಗಿ ಜಂಗಮನೇ ಸ್ಥಾಯಿಯಾದನಂತೆ. ಕಾವಿ ತ್ಯಜಿಸಿದ ಆ ಸಂನ್ಯಾಸಿ ಸಾಮ್ರಾಜ್ಯದ ಮೊದಲ ಅರಸನಾದನಂತೆ. ಮುಂದಿನ ಹಲವು ಶತಮಾನಗಳ ಕಾಲ ಕೊಡಗನ್ನು ಆ ಜಂಗಮನ ಸಂತಾನದವರೇ ಆಳಿದರು. ಆ ಎಲ್ಲಾ ಅರಸರಿಗೂ ಬೆಂಗಾವಲಾಗಿ ಕೊಡವರೇ ಇದ್ದರು ಎಂಬ ಚರಿತ್ರೆ ಇತಿಹಾಸದ ಒಂದು ರೋಚಕ ಪ್ರಸಂಗ. ಕೊಟ್ಟ ಮಾತಿಗೆ ತಪ್ಪದೇ ನಡೆದಿದ್ದು, ಜಂಗಮ ರೂಪವನ್ನು ಸ್ಥಾಯಿಗೊಳಿಸಿದ್ದು, ಮಾತಿಗೆ ಕಟ್ಟುಬೀಳದೆ ಮುಗ್ದವಾಗಿ ಪಾಲಿಸುವ ಮನೋಭಾವದ ಕೊಡವರು ಹೀಗೆ ಕೊನೆಯವರೆಗೂ ತಮ್ಮನ್ನು ತಾವು ಆಳಿಕೊಳ್ಳಲಿಲ್ಲ. ಪರರಿಂದಲೇ ಆಳಿಸಿಕೊಂಡರು. ಹೀಗೆ ಸ್ಥಾಪನೆಯಾದ ಹಾಲೇರಿ ರಾಜ ಮನೆತನದುದ್ದಕ್ಕೂ ರಾಜರಿಗಿಂತ ಎತ್ತರದಲ್ಲಿ ಕಾಣುವವರು ಆಳಿಸಿಕೊಂಡ ಕೊಡವರೇ. ಲಿಂಗಾಯತ ಅರಸರ ದಿವಾನರಾಗಿ, ಮಂತ್ರಿಗಳಾಗಿ, ಸೇನಾಧಿಕಾರಿಗಳಾಗಿ, ಪಾರುಪತ್ಯೆಗಾರರಾಗಿ , ಯೋಧರಾಗಿ ಕೊನೆಯವರೆಗೂ ತಮ್ಮ ಮಾತನ್ನುಳಿಸಿಕೊಂಡರು. ಒಂದು ಯೋಧ ಸಂತತಿಯ ಮತ್ತು ಆಳುವ ಪ್ರಭುತ್ವದ ಅವಿನಾಭಾವ ಸಂಬಂಧಕ್ಕೆ ಯೋಗ್ಯ ಉದಾಹರಣೆಯಾಗಿ ಸಲ್ಲುವ ಅಪರೂಪದ ಉದಾಹರಣೆಯೆಂದರೆ ಕೊಡವರು.
ವೀರ ಪರಂಪರೆ
ಮುಂದೆ ಇತಿಹಾಸದಲ್ಲಿ ಹಲವು ಸ್ಥಿತ್ಯಂತರಗಳಾದವು. ಆಗಲೂ ಕೊಡವರು ಭೂಪತಿಗಳಾಗದೆ ಭೂಪುತ್ರರಾಗಿಯೇ ಉಳಿದರು. ದುಷ್ಟ, ಪೀಡಕ ಅರಸರನ್ನೂ ಮಾತಿಗೆ ತಪ್ಪಬಾರದೆಂಬ ಮುಗ್ಧತೆಯಿಂದ ಕೊಡವರು ಸಹಿಸಿಕೊಂಡರು. ಕೊನೆಗೆ ಸಹಿಸಲಸಾಧ್ಯವೆಂಬ ಸನ್ನಿವೇಶದಲ್ಲಿ ಬ್ರಿಟಿಷರ ಮೊರೆಹೋದರು. ಕ್ಷಿಪ್ರ ಕ್ರಾಂತಿಯ ಸಂದರ್ಭ ತಮಗೆ ಒದಗಿಬಂದರೂ ತಾವೇ ಆಳಲಾರದಷ್ಟು ಬದ್ದತೆ ಕೊಡವರಿಗಿತ್ತು ಎನ್ನುವುದು ಇತಿಹಾಸದ ಸೋಜಿಗ ಮತ್ತು ಜನಾಂಗವೊಂದರ ಶ್ರೇಷ್ಠತೆಗೆ ಸಾಕ್ಷಿಗಳು.
ಕೊಡವರು ಹುಟ್ಟುಯೋಧರು. ಬೆಟ್ಟಗುಡ್ಡ ಕಾಡುಗಳಲ್ಲೇ ಬದುಕು ಕಂಡುಕೊಂಡವರು. ವ್ಯತಿರಿಕ್ತವಾದ ಹವಾಗುಣಗಳಲ್ಲಿ ಹೋರಾಟ ಮಾಡಿಯೇ ಬದುಕಬೇಕಾದ ಅನಿವಾರ್ಯತೆಗಳು ಕೊಡವರನ್ನು ರೂಪಿಸಿದವು ಎಂದು ಕೊಡಗಿನ ಇತಿಹಾಸ ಹೇಳುತ್ತವೆ. ಅಲ್ಲದೆ ಕೊಡವರದ್ದು ಕೃಷಿ ಪ್ರಧಾನವಾದ ಸಂಸ್ಕೃತಿ. ಕೃಷಿಯ ರಕ್ಷಣೆಗಾಗಿ ಅವರು ಆಯುಧಧಾರಿಗಳಾಗಿರಬಹುದು ಎಂದೂ ವಿದ್ವಾಂಸರು ಹೇಳುತ್ತಾರೆ. ಅವರ ಸಂಸ್ಕೃತಿಯಲ್ಲಿ ಯೋಧತನವೆಷ್ಟು ಹಾಸುಹೊಕ್ಕಾಗಿದೆಯೆಂದರೆ ಕೊಡವರಲ್ಲಿ ಇಂದಿಗೂ ಗಂಡು ಮಗು ಹುಟ್ಟಿದರೆ ಕುಶಾಲತೋಪು ಸಿಡಿಸಿ ಊರಿಗೆಲ್ಲಾ ಸುದ್ಧಿ ಹಬ್ಬಿಸುವ ಪರಂಪರೆ ಇದೆ. ಮತ್ತು ಇಂದಿಗೂ ಕೊಡವರಲ್ಲಿ ಗಂಡು ಯುದ್ಧದಲ್ಲಿ ಮಡಿಯಬೇಕು, ಹೆಣ್ಣು ಹೆತ್ತು ಮಡಿಯಬೇಕು ಎಂಬ ನಾನ್ಣುಡಿಯೇ ಇದೆ. ಆಳರಸರ ಕಾವಲು ಪಡೆಯಲ್ಲಿ ನಿರಂತರ ನಡೆಯುತ್ತಿದ್ದ ಯುದ್ಧಗಳಲ್ಲಿ ಭಾಗವಹಿಸಿದ ಕೊಡವರು ತಾವು ಸೈನಿಕರಾಗಲೆಂದೇ ಹುಟ್ಟಿದವರೆಂದು ತಿಳಿಯುತ್ತಿದ್ದರು. ಇಂದು ಕರ್ನಾಟಕದಲ್ಲಿ ಹಾಲೇರಿ ರಾಜರ ಹೆಸರು ಕೇಳಿಬರುತ್ತಿದೆ ಎಂದಾದರೆ ಅದಕ್ಕೆ ಏಕೈಕ ಕಾರಣ ಕೊಡವರ ಯೋಧತನ ಎಂಬುದು ನಿರ್ವಿವಾದ ಸಂಗತಿ. ಹಾಲೇರಿ ಸಂಸ್ಥಾನದ ಆಧಾರಸ್ತಂಭಗಳಾದ ಅಪ್ಪಾರಂಡ ಬೋಪಣ್ಣ ದಿವಾನ, ಚೌರೀರ ಅಪ್ಪಣ್ಣ ದಿವಾನ, ಚೆಪ್ಪುಡೀರ ಪೊನ್ನಪ್ಪ ದಿವಾನ, ಬಿದ್ದಂಡ ಬೋಪಣ್ಣ ದಿವಾನ ,ಕಾರ್ಯಕಾರ ಬಿದ್ದಂಡ ಸೋಮಯ್ಯ, ದೇಶತಕ್ಕ ಮಾತಂಡ ಕಾರ್ಯಪ್ಪನವರು ಹಲವು ಕ್ಷಿಷ್ಟಕರ ಸಂದರ್ಭಗಳಲ್ಲಿ ಆಳರಸರನ್ನು ರಕ್ಷಿಸಿ ಕೊಟ್ಟ ಮಾತನ್ನು ಉಳಿಸಿಕೊಂಡರು.
ವಿಶ್ವ ಸಮರದ ಬಳಿಕ
ಅನಂತರ ಬ್ರಿಟಿಷ್ ಆಡಳಿತದಲ್ಲಿ ಕೊಡವರ ವೀರತನ ಇನ್ನಷ್ಟು ಬೆಳಕಿಗೆ ಬಂತು. ಕೊಡಗಿನ ಅರಸರ ಸರ್ವಾಧಿಕಾರ ಧೋರಣೆ ವಿಪರೀತವಾಗುತ್ತಾ , ಅಪತ್ತು ಬಂದರೆ ತಾನೆ ಏನು? ಕೊಡವರಿದ್ದಾರಲ್ಲಾ ಎಂಬ ಉದಾಸೀನತೆ ಅರಸರಿಗೆ ಬಂದಾಗ , ಮತಾಂಧರ ಧಾಳಿಗೂ ಅರಸರು ತಕ್ಕ ಪ್ರತಿರೋಧ ತೋರದೆ ಇದ್ದಾಗ ಕೊಡವ ಯೋಧರು ನಾಡಿನ ರಕ್ಷಣೆಗೆ ಬ್ರಿಟಿಷರ ಮೊರೆ ಹೋದರು. ಆಳುವ ಮನಸ್ಸಿಲ್ಲದ, ಮೌಲ್ಯದ ಮೇರುತನಕ್ಕೆ ಕೊಡಗು ಮತ್ತೊಮ್ಮೆ ಪರಕೀಯರ ವಶವಾಯಿತು. ಕೊಡವರ ಯೋಧತನವನ್ನು ಬ್ರಿಟಿಷರು ಸಮರ್ಥವಾಗಿಯೇ ಬಳಸಿಕೊಂಡರು ಎನ್ನಬೇಕು. ಹೇಳಬೇಕೆಂದರೆ ಕೊಡಗಿಗೆ ,ಕೊಡವರಿಗೆ ಯೋಧರು, ಯೋಧರ ನಾಡು ಎಂಬ ಬಿರುದು ಪ್ರಾಪ್ತವಾಗಿದ್ದು ಈ ಸಮಯದಲ್ಲಿಯೇ. ಬ್ರಿಟೀಷ್ ಅವಧಿಯಲ್ಲಿ ಸುಭೇದಾರರನ್ನಾಗಿ ಹೆಚ್ಚಾಗಿ ಕೊಡವರನ್ನೇ ಆರಿಸಲಾಗುತ್ತಿತ್ತು. ಮುಂದೆ ಮೊದಲ ಮಹಾಯುದ್ಧದ ಕಾಲದಲ್ಲಿ ಕೊಡವರ ಮಾರ್ಷಲ್ ಗುಣವನ್ನು ಮನಗಂಡ ಬ್ರಿಟೀಷರು ಕೂರ್ಗ್ ರೆಜಿಮೆಂಟನ್ನು ಕೂಡ ಸ್ಥಾಪಿಸಿದರು. ಮೊದಲ ವಿಶ್ವಯುದ್ದದ ಬಳಿಕ ಈ ರೆಜಿಮೆಂಟನ್ನು ವಿಸರ್ಜಿಸಲಾಯಿತು. ಏಕೆಂದರೆ ವಿದೇಶದಲ್ಲಿ ಹೋರಾಡುತ್ತಾ ಕೊಡವ ಯೋಧರ ಬಲಿದಾನ ವ್ಯರ್ಥವಾಗಬಾರದೆಂಬ ಕಾಳಜಿ ಬ್ರಿಟೀಷ್ ಆಡಳಿತಕ್ಕಿತ್ತು. ತಮ್ಮ ನಂಬಿಗಸ್ಥ ಬಂಟ ಕೊಡವರು ತಮಗಾಗಿ ಮೀಸಲಿರಬೇಕೆಂಬ ಸ್ವಾರ್ಥವೂ ಇತ್ತು. ಆದರೆ ಎರಡನೆಯ ಮಹಾಯುದ್ಧದ ಹೊತ್ತಿಗೆ ಪುನಃ ಕೂರ್ಗ್ ರೆಜಿಮೆಂಟನ್ನು ಸ್ಥಾಪಿಸಲಾಯಿತು. ೧೯೧೭ ರ ಹೊತ್ತಲ್ಲಿ ಇದೇ ಕೊಡವ ಜನಾಂಗ ಕೇವಲ ೪೦ ಸಾವಿರ ಸಂಖ್ಯೆಯಲ್ಲಿದ್ದಾಗ ಡೆಹರಾಡೂನಿನ ಇಂಡಿಯನ್ ಆಫಿಸರ್ಸ್ ಕೆಡೆಟ್ ನಲ್ಲಿ ಆಯ್ಕೆಯಾದ ಇಬ್ಬರು ಭಾರತೀಯರಲ್ಲಿ ಇಬ್ಬರೂ ಕೊಡವರು (ಕೆ. ಎಂ.ಕಾರ್ಯಪ್ಪ ಮತ್ತು ಕೆ.ಎಸ್ ತಿಮ್ಮಯ್ಯ) ಎನ್ನುವುದು ಕೊಡವರ ಯೋಧತನಕ್ಕೆ ಒಂದು ಪುರಾವೆ. ಆ ಸಮಯದಲ್ಲಿ ಮನೆಮನೆಯಿಂದಲೂ ಯೋಧರು ರಾಷ್ಟ್ರರಕ್ಷಣೆಗೆ ತೆರಳುತ್ತಿದ್ದ ಕಥೆಗಳನ್ನು ಇಂದಿಗೂ ಹೇಳುವವರು ಸಿಗುತ್ತಾರೆ. ಸ್ವಾತಂತ್ರ್ಯಾನಂತರ ಕೂಡ ಈ ಪರಂಪರೆ ಮುಂದುವರೆಯಿತು. ಭಾರತೀಯ ಸೇನೆಯ ಪ್ರಥಮ ಮತ್ತು ಏಕೈಕ ಕಮಾಂಡರ್-ಇನ್- ಚೀಫ್ ಕೊಡಗಿನ ಕಾರ್ಯಪ್ಪಜ್ಜರೆನ್ನುವುದು , ಭಾರತೀಯ ಭೂಸೇನಾ ನಾಯಕರಾಗಿ ಜಗದ್ವಿಖ್ಯಾತರಾಗಿ , ರಾಷ್ಟ್ರದ ಬಗ್ಗೆ ಅಗಾಧ ಕನಸುಗಳನ್ನು ಕಂಡ, ಅನಂತರ ರಾಯಭಾರಿಗಳಾಗಿಯೂ ಮಾನವೀಯ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ತಿಮ್ಮಯ್ಯನವರು ಕೊಡವರೆನ್ನುವುದು ಕರ್ನಾಟಕದ್ದೇ ಹೆಮ್ಮೆ . ಕೊಡವ ಸೈನಿಕರ ಸಾಹಸಗಳು ಭಾರತೀಯ ಸೈನ್ಯದಲ್ಲಿ ಅವೆಷ್ಟೋ ಇವೆ. ಭಾರತೀಯ ರಕ್ಷಣಾಪಡೆಯ ಅತ್ಯಂತ ಕಠಿಣ ಸಂದಭಗಳಲ್ಲೆಲ್ಲಾ ಇಂದಿಗೂ ಮೊದಲು ಕೇಳಿಬರುವ ಹೆಸರೆಂದರೆ ಕರ್ನಾಟಕದ ಕೊಡವರು. ಅಸ್ಸಾಂ, ನಾಗಾಲ್ಯಾಂಡ್, ಗೋರ್ಖಾ, ಲೇಹ್, ಲಡಾಕ್, ಪಂಜಾಬ್‌ಗಳಲ್ಲಿ ಕೊಡಂದೇರ ತಿಮ್ಮಯ್ಯನವರನ್ನು ಆರಾಧಿಸುವ ಜನರನ್ನು ಇಂದಿಗೂ ಕಾಣಬಹುದು. "ನಮ್ಮನ್ನು ತಿಮ್ಮಯ್ಯನವರು ಆಳಿದರೆ ನಮ್ಮ ಪ್ರದೇಶವನ್ನು ಭಾರತಕ್ಕೆ ಸೇರಿಸಲು ಒಪ್ಪುವೆವು " ಎಂದು ಪಾಕ್ ಆಕ್ರಮಿತ ಕಾಶ್ಮೀರದ ಜನತೆಯೇ ಹೇಳಿರುವುದು ಕೊಡವನೊಬ್ಬನ ಯೋಧಗುಣದ ಪ್ರತೀಕಗಳು. ಕಾಶ್ಮೀರದ ಕಣಿವೆಗಳಲ್ಲಿ ಶತ್ರುಬಂಕರ್‌ಗಳ ನಡುವೆಯೇ ಟ್ರಕ್ ಚಲಾಯಿಸುತ್ತಾ, ಬಂಕರುಗಳನ್ನು ನಾಶಮಾಡುತ್ತಾ ಸರಕು ಸರಂಜಾಮುಗಳನ್ನು ರಣರಂಗಕ್ಕೆ ಮುಟ್ಟಿಸಿದ ಸುಭೇದಾರ್ ನಡಿಕೇರಿಯಂಡ ಭೀಮಯ್ಯ, ತನ್ನ ಪ್ರಾಣವನ್ನು ಲೆಕ್ಕಿಸದೆ ಪಾಕಿಸ್ಥಾನದ ಸರಗೋದ ವಾಯುನೆಲೆಯನ್ನು ಧ್ವಂಸಮಾಡಿ ಮತ್ತಷ್ಟು ಮುಂದುವರಿದು ವಿಮಾನದಲ್ಲೇ ಉರಿಯುತ್ತಾ ಶತ್ರುಗಳನ್ನು ಉರಿಸಿದ ಸ್ಕ್ವಾ. ಲೀ. ಅಜ್ಜಾಮಾಡ ಬಿ. ದೇವಯ್ಯ , ಕಣಿವೆಯ ವಶದಲ್ಲಿ ಎದೆಯೊಡ್ಡಿನಿಂತು ಅಮರರಾದ ಮೇಜರ್ ಮಂಗೇರಿರ ಮುತ್ತಣ್ಣ, ಆಪರೇಷನ್ ಬ್ಲೂಸ್ಟಾರ್ ಕಾರ್ಯಾಚರಣೆಯ ನೀಲನಕ್ಷೆಯನ್ನು ಸಿದ್ಧಪಡಿಸಿದ ಲೆ.ಜ. ಕೋದಂಡ ಎನ್. ಸೋಮಣ್ಣನವರಂಥಾ ಮಹಾ ಯೋಧರನ್ನು ಕೊಟ್ಟ ಪುಟ್ಟ ಜನಾಂಗ ಕೊಡವರು. ಅದಕ್ಕೇ ಇಂದಿಗೂ ಭಾರತೀಯ ಸೇನೆಯಲ್ಲಿ ಕೊಡವರು ಎಂದರೆ ಒಂದು ವಿಶ್ವಾಸ. ಒಂದು ಪ್ರೀತಿ. ಇಂದಿಗೂ ಸೈನ್ಯದ ಅತ್ಯಂತ ಕಠಿಣ ಸಂದರ್ಭಗಳಲ್ಲಿ ಭಾರತೀಯ ಸೇನೆ ಕೊಡವ ಯೋಧರನ್ನು ಹುಡುಕುತ್ತದೆ. ಏಕೆಂದರೆ ಕೊಡವರು ಎಂದರೆ ಕೇವಲ ಒಂದು ಜಾತಿಯಲ್ಲ. ಅದೊಂದು ಮೈಕಟ್ಟು. ಒಂದು ವ್ಯವಸ್ಥೆ. ಒಂದು ಯೋಧ ಸಂತತಿ. ಅವರು ಕೇವಲ ತರಬೇತಾದ ಸೈನಿಕರಲ್ಲ. ಅವರು ಹುಟ್ಟು ಬಲಾಡ್ಯರು. ದೈಹಿಕ ಮತ್ತು ಮಾನಸಿಕ ಸಧೃಡರು. ಇಂಥ ಕೊಡವ ಯೋಧರ ಬಗ್ಗೆ ವಿದೇಶಗಳ ಸೇನಾಧಿಕಾರಿಗಳೂ ಸಮರನೀತಿ ವಿದ್ವಾಂಸರೂ ೫ ಅಂಶಗಳಿಂದ ಅವರ ಯೋಧತನವನ್ನು ವಿವರಿಸಿದ್ದಾರೆ. ೧. ಅವರ ನೈಸರ್ಗಿಕ ನಾಯಕತ್ವ ೨. ಸೈನಿಕರು ಎಂಬ ಅತಿಯಾದ ಹೆಮ್ಮೆ ೩. ಪ್ರಾಮಾಣಿಕ ಮತ್ತು ಮುಕ್ತ ವ್ಯಕ್ತಿತ್ವ ೪. ಶಿಸ್ತಿನ ಸಿಪಾಯಿತನ ೫. ಸಮರ ಸಂದರ್ಭಗಳಲ್ಲಿ ಸರಿ-ತಪ್ಪುಗಳ ಬಗ್ಗೆ ಯೋಗ್ಯ ನಿರ್ಣಯ ತೆಗೆದುಕೊಳ್ಳುವ ಸಾಮರ್ಥ್ಯ. ಈ ಐದು ಅಂಶಗಳು ಕೊಡವ ಯೋಧರಲ್ಲಿ ಮೇಳೈಸಿರುತ್ತವೆ ಎಂದು ಪಾಶ್ಚಾತ್ಯ ಸೇನಾಧಿಕಾರಿಗಳು ಹೇಳುತ್ತಾರೆ. ಸ್ವಾತಂತ್ರ್ಯಾನಂತರ ಸಣ್ಣದಾದ ಜನಾಂಗವೊಂದು ಇದುವರೆಗೆ ೫ ಜನ ಲೆಪ್ಟಿನೆಂಟ್ ಜನರಲ್‌ಗಳನ್ನು, ೧೫ ಮಂದಿ ಮೇಜರ್ ಜನರಲ್‌ಗಳನ್ನು, ೪ ಮಂದಿ ಏರ್‌ಮಾರ್ಷಲ್‌ಗಳನ್ನು , ನೌಕಾಪಡೆಯ ಕಮಾಂಡರ್‌ಗಳನ್ನು, ನೂರಾರು ಬಲಿದಾನಿಗಳನ್ನು ದೇಶಕ್ಕೆ ಕೊಟ್ಟಿದೆ ಎನ್ನುವುದು ಮರೆತುಹೋಗುವ ಸಂಗತಿಗಳಲ್ಲ. ಊರಿಗೊಂದರಂತೆ ಮೇಜರ್‌ಗಳು, ಬ್ರಿಗೇಡಿಯರ್‌ಗಳು, ಲೆಪ್ಟಿನೆಂಟ್‌ಗಳು, ಮನೆಗೊಂದರಂತೆ ಸಿಪಾಯಿಗಳು ನಿವೃತ್ತ ಜೀವನವನ್ನು ನಡೆಸುತ್ತಿರುವವರ ಮಹತ್ತ್ವವನ್ನು ಇಂದಿನ ಪೀಳಿಗೆ ತಿಳಿದುಕೊಂಡಿದ್ದು ಕಡಿಮೆಯೆಂದೇ ಹೇಳಬೇಕು.
ವೈಭವ ಮರೆಯಾಯಿತೇ?
ಆದರೆ ವೈಭವಗಳು ಹೆಚ್ಚುದಿನ ಉಳಿಯುವುದಿಲ್ಲ ಎಂಬ ಮಾತು ಇತಿಹಾಸದ ಅಧ್ಯಯನದಲ್ಲಿ ಕಾಣಸಿಗುತ್ತದೆ. ವೀರರ ಜಿಲ್ಲೆ , ಯೋಧರ ನಾಡು ಎಂದು ಕರೆಸಿಕೊಂಡ ಕೊಡಗಿನಲ್ಲಿ ಇಂದು ಸೈನ್ಯಕ್ಕೆ ಸೇರುವವರ ಪ್ರಮಾಣ ತೀರಾ ಇಳಿಮುಖವಾಗಿದೆ. ಇಂದು ಊರೂರಲ್ಲೂ ಶೌರ್ಯದ ಕಥೆಗಳು ಕೇಳಿಬರುತ್ತಿರಬಹುದು. ಆದರೆ ಮುಂದಿನ ವರ್ಷಗಳಲ್ಲಿ ಆ ಕಥೆಗಳು ಸಂಪೂರ್ಣ ಮಾಯವಾಗಲಿವೆ. ಅಬ್ಬರದ ಯುಗದಲ್ಲಿ ವೀರತೆಗೆ ಜಾಗವಿಲ್ಲ ಎಂಬಂತಾಗಿದೆ. ಇದೇಕೆ ಹೀಗೆ ಎಂದು ಹುಡುಕುತ್ತಾ ಹೊರಟರೆ ಆಧುನಿಕ ಶಿಕ್ಷಣ ಪರಿಣಾಮಗಳು ಗೋಚರಿಸುತ್ತವೆ. ನಿಜ, ಆಧುನಿಕ ಶಿಕ್ಷಣ ಪಡೆದ ಪೀಳಿಗೆ ಸೇನೆಗೆ ಸೇರಲು ಇಷ್ಟಪಡುತ್ತಿಲ್ಲ. ಐಟಿ ಬಿಟಿ ಯುಗದಲ್ಲಿ ಮಹಾನಗರಗಳು ಯುವಕರನ್ನು ಕೈಬೀಸಿ ಕರೆಯುತ್ತಿವೆ. ಮೊದಮೊದಲು ಮನೆಯೊಂದರಲ್ಲಿ ಐದಾರು ಮಕ್ಕಳಿದ್ದರೆ ಅವರಲ್ಲಿ ಒಬ್ಬ ಮನೆ ನೋಡಿಕೊಳ್ಳುತ್ತಾ ಇರುತ್ತಿದ್ದ. ಉಳಿದವರು ಸೈನ್ಯಕ್ಕೆ ಸೇರುತ್ತಿದ್ದರು. ಇಂದು ಮನೆಯಲ್ಲಿರುವವನು ಒಬ್ಬನೇ ಮಗ. ಆತನೂ ಸೈನ್ಯಕ್ಕೆ ಸೇರಲು ಇಷ್ಟಪಡುತ್ತಿಲ್ಲ. ಇಷ್ಟ ಪಟ್ಟರೂ ಪೋಷಕರು ಬಿಡುತ್ತಿಲ್ಲ. ದೂರದ ಗಡಿಯಲ್ಲಿ ಮಗ ಮಳೆ, ಚಳಿಗಳಲ್ಲಿ ಕಷ್ಟಪಡುವ ಬದಲು ಬೆಂಗಳೂರಿನಲ್ಲೋ ಮುಂಬೈನಲ್ಲೋ ಕೆಲಸದಲ್ಲಿರಲಿ ಎಂಬ ಮಾನಸಿಕತೆ ಮನೆಮಾಡಿದೆ. ಇನ್ನೊಂದು ಸಂಗತಿಯೆಂದರೆ ಇಂದಿನ ಕೊಡವ ಯುವಕರಿಗೆ ಮೊದಲಿನ ಕೊಡವ ಯೋಧರಂತೆ ಮೈಕಟ್ಟೂ ಇರುವುದಿಲ್ಲ. ಇಂದು ಅಲ್ಲಲ್ಲಿ ಲೆಫ್ಟಿನೆಂಟ್‌ಗಳಾಗಿಯೋ, ಕರ್ನಲ್‌ಗಳಾಗಿಯೋ ನೇಮಕವಾಗುವ ಕೊಡವ ಯುವಕರ ಹೆಸರುಗಳು ಕೇಳಿಬರುತ್ತಿದ್ದರೂ ಅವರಾರೂ ಕೊಡವ ಯೋಧತನದ ಅರ್ಹತೆಯಿಂದ ನೇಮಕವಾದವರಲ್ಲ. ಅವರೆಲ್ಲರೂ ಕಮಿಷನ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪದವಿಗೇರಿರುವವರು. ಜವಾನನಾಗಿ ಸೇರ್ಪಡೆಯಾಗುವುದು ಘನತೆಗೆ ತಕ್ಕುದಲ್ಲ ಎಂಬ ಅಪಾಯಕಾರಿ ಮನೋಭಾವವೂ ಬೆಳೆದಿರುವ ಕಾರಣವನ್ನೂ ಅಲ್ಲಗೆಳೆಯಲು ಸಾಧ್ಯವಿಲ್ಲ. ಇದಕ್ಕೆಲ್ಲಾ ಕೊಡಗಿನ ಚಿಂತಕರು ಒಂದು ಕಾರಣವನ್ನು ಹುಡುಕುತ್ತಾರೆ. ಅದೆಂದರೆ ಇಂಗ್ಲಿಷ್ ಶಿಕ್ಷಣದ ಕಾರಣ. ಸುದೀರ್ಘ ವರ್ಷಗಳ ಕಾಲ ಕೊಡಗು ನೇರವಾಗಿ ಬ್ರಿಟಿಷ್ ಆಡಳಿತಕ್ಕೆ ಒಳಪಟ್ಟಿದ್ದ ಪ್ರದೇಶ. ಹಾಗಾಗಿ ಕೊಡಗಿನಲ್ಲಿ ಬ್ರಿಟಿಷ್ ಲಕ್ಷಣಗಳು ಗಾಢವಾಗಿ ಗೋಚರಿಸುತ್ತವೆ. ಬ್ರಿಟೀಷ್ ಅವಧಿಯಲ್ಲಿ ಅದು ಶಿಸ್ತಿಗೆ ಸೀಮಿತವಾಗಿದ್ದರೆ ಅನಂತರ ಅದು ಶೋಕಿಗೆ ಬದಲಾಯಿತು. ಮಿಲಿಟರಿಗೆ ಹೋಗುವುದಕ್ಕಿಂತ ಬೇರೆ ಉದ್ಯೋಗವೇ ಲೇಸು ಎಂಬ ಭಾವನೆಗಳು ಮೂಡಲಾರಂಭಿಸಿತು. ಜಾಗತೀಕರಣದ ಪ್ರಭಾವವೂ ಆ ಭಾವನೆಗೆ ಮತ್ತಷ್ಟು ಇಂಬು ಕೊಟ್ಟಿತು. ಆಧುನಿಕತೆ ತೀವ್ರವಾದಷ್ಟೂ ಕೊಡಗಿನ ಪರಿಸ್ಥಿತಿ ಸಂದಿಗ್ದವಾಗುತ್ತಾ ಬರತೊಡಗಿತು. ಆಡಳಿತದಲ್ಲಿ ನಿರ್ಲಕ್ಷ. ಹಳೆಯ ಪರಂಪರೆಯೊಡನೆ ಬದುಕುತ್ತಾ , ಅದಕ್ಕೆ ಹೊರತಾದ ಪರಿಸ್ಥಿತಿಯನ್ನು ಕನಸು ಮನಸಿನಲ್ಲೂ ಚಿಂತಿಸದ ಜನಾಂಗಕ್ಕೆ ಮಾರ್ಗದರ್ಶಕರಿಲ್ಲದೆ ಗೊಂದಲಗಳು ಮತ್ತಷ್ಟು ಹೆಚ್ಚಾದವು. ಈ ಸಂದರ್ಭದಲ್ಲಿ ಪ್ರಾದೇಶಿಕ ರಾಷ್ಟ್ರವಾದದ ಬೇರುಗಳೂ ನೆಲೆವೂರಿದವು. ದೇಶ ರಕ್ಷಣೆಗಿಂತ ಜನಾಂಗದ ರಕ್ಷಣೆಯೇ ಶ್ರೇಷ್ಠ ಎನ್ನುವ ಭಾವನೆಯನ್ನು ಬಿತ್ತುವ ಹುನ್ನಾರದಲ್ಲೂ ಕೆಲವರು ತೊಡಗಿದರು. ಈ ಎಲ್ಲಾ ಕಾರಣಗಳಿಂದ ಇಂದು ಶ್ರೇಷ್ಠ ಪರಂಪರೆಯ ಜನಾಂಗವೊಂದು ಯೋಧತನದ ಸಂಸ್ಕೃತಿಯಿಂದ ದೂರವಾಗುತ್ತಿದೆ. ಆಡಳಿತವೂ ಕೊಡವರ ಯೋಧತನವನ್ನು ಸಮರ್ಥವಾಗಿ ಬಳಸಿಕೊಳ್ಳುವ ಮನಸ್ಸನ್ನು ಮಾಡುತ್ತಿಲ್ಲ. ಮತೀಯವಾದದ ಮನಸು ಸೇನೆಯಲ್ಲೂ ಮೀಸಲು ಕಲ್ಪಿಸಬೇಕೆಂದು ಪ್ರಯತ್ನಿಸುತ್ತಿದೆ. ವಿಪರ್ಯಾಸವೆಂದರೆ ಕೊಡವರಂಥಾ ಯೋಧರು ಅವರಾರಿಗೂ ನೆನಪಾಗುತ್ತಿಲ್ಲ. ಕಾರ್ಯಪ್ಪ, ತಿಮ್ಮಯ್ಯರಂಥಾ ಅಮರ ಸೇನಾನಿಗಳನ್ನು ಕನ್ನಡದ ಹೋರಾಟಗಾರರು "ಇವರು ತಮ್ಮರಲ್ಲ " ಎಂದುಕೋಡಿರುವುದು ಇವುಗಳ ನಡುವಿನ ವಿಷಾದದ ಸಂಗತಿ.
ಇತಿಹಾಸದಲ್ಲಿ ಹಲವಾರು ಕೊಡವ ಯೋಧರು ಮೇರು ಸ್ಥಾನದಲ್ಲಿ ನಿಂತಿರುವುದರ ಕುರುಹುಗಳಿವೆ. ಕನ್ನಂಡ ದೊಡ್ಡಯ್ಯ ಎಂಬ ಮಹಾನ್ ಯೋಧರೊಬ್ಬರು ೩೦೦೦ ಯೋಧರ ಪಡೆಗೆ ಮುಖ್ಯಸ್ಥರಾಗಿದ್ದರು. ಕೊಡಗಿನತ್ತ ಕಾಕ ದೃಷ್ಟಿ ಬೀರಿದ್ದ ಹೈದರ್ ಆಲಿಯನ್ನು ಸಮರ್ಥವಾಗಿ ಎದುರಿಸಿದವನು ಕನ್ನಂಡ ದೊಡ್ಡಯ್ಯ. ಸತತವಾಗಿ ಮೂರು ಭಾರಿ ಹೈದರ್ ಆಲಿ ಕನ್ನಂಡ ದೊಡ್ಡಯ್ಯನಿಂದ ಸೋತು ಸುಣ್ಣವಾಗಿ ಹಿಂತಿರುಗಿದ್ದ. ಕೊನೆಗೆ ಹೈದರನ ಮಗ ಟಿಪ್ಪು ಮೋಸದಿಂದ ಕೊಡಗಿಗೆ ಅಡಿಯಿಟ್ಟ. ಈಗಿನ ಸೋಮವಾರಪೇಟೆ ಬಳಿಯಲ್ಲಿ ನಡೆದ ಕಾಜೂರು ಯುದ್ಧದಲ್ಲಿ ದೊಡ್ಡಯ್ಯ ಹೋರಾಡುತ್ತಾ ವೀರಮರಣವನ್ನಪ್ಪಿದ್ದ.ರಾಕ್ಷಸೀತನದಿಂದ ಧಾಂಗುಡಿಯಿಟ್ಟ ಮುಸಲ್ಮಾನ ಸೇನೆ ದೊಡ್ಡಯ್ಯನವರ ಕನ್ನಂಡ ಮನೆಗೆ ಬೆಂಕಿಯಿಕ್ಕಿ ೧೩ ಜನರನ್ನು ನೇಣಿಗೆ ಹಾಕಿತು. ಕೊಡಗಿನ ಮೇಲೆ ದಾಳಿ ಮಾಡಿದ ಟಿಪ್ಪು ಕೊಡಗಿನ ಅರಸ ಎರಡನೇ ದೊಡ್ಡರರಾಜನನ್ನೇ ಸೆರೆಹಿಡಿದು ಪಿರಿಯಾಪಟ್ಟಣದಲ್ಲಿಟ್ಟಿತು. ರಾಜನ ಉಸ್ತುವಾರಿಗೆ ಟಿಪ್ಪು ನಾಗಪ್ಪಯ್ಯನೆಂಬ ಸಮರ್ಥ ಅಧಿಕಾರಿಯನ್ನೇ ನೇಮಿಸಿದ್ದ. ರಾಜನನ್ನು ಬಿಡಿಸಿಕೊಂಡು ಬರಲು ಕೊಡಗಿನಿಂದ ೧೨ ಜನ ಯೋಧರು ಪಿರಿಯಾಪಟ್ಟಣಕ್ಕೆ ಹೊರಟರು. ಈ ತಂಡದ ಮುಂದಾಳುಗಳಾಗಿ ಅಪ್ಪನೆರವಂಡ ಅಚ್ಚಯ್ಯ ಎಂಬ ಯೋಧರಿದ್ದರು . ಕೇವಲ ಹನ್ನೆರಡೇ ಜನ ರಾಜನನ್ನು ಬಿಡಿಸಿಕೊಂಡು ಸುರಕ್ಷಿತವಾಗಿ ಮಡಿಕೇರಿಗೆ ಮುಟ್ಟಿದರು ಮತ್ತು ರಾಜನನ್ನು ಪುನಃ ಸಿಂಹಾಸನದಲ್ಲಿ ಕೂರಿಸಿದರು. ಕುಲ್ಲೇಟಿರ ಪೊನ್ನಣ್ಣ ಎಂಬ ಮತ್ತೊಬ್ಬ ಧೈರ್ಯಶಾಲಿ ಯೋಧನಿದ್ದ. ಇವರ ಬಗೆಗಿನ ಕಥೆಗಳು ಇಂದಿಗೂ ಕೊಡಗಿನಲ್ಲಿ ಜನಜನಿತ. ಈ ಪೊನ್ನಣ್ಣನೆಂಬವನು ಹೈದರ್ ಆಲಿಯ ನೆಚ್ಚಿನ ಕಮಾಂಡರ್ ಗುಲಾಂ ಆಲಿಯನ್ನು ವೀರಾಜಪೇಟೆಯ ಪೆಗ್ಗಳ ಎಂಬಲ್ಲಿ ಸೋಲಿಸಿ ಮತ್ತ್ತೆಂದೂ ಆತ ಕೊಡಗಿಗೆ ಬರದ ಹಾಗೆ ಮಾಡಿದ್ದ. ಮತ್ತೊಮ್ಮೆ ಕೇವಲ ೪೦ ಜನ ಯೋಧರನ್ನು ಹೊರಡಿಸಿಕೊಂಡು ಕೇರಳದ ಚರಕ್ಕಲ್ ರಾಜನನ್ನೇ ಸೆರೆಹಿಡಿದು ತಂದುಬಿಟ್ಟಿದ್ದರು. ಕೊಡಗಿನ ರಾಜನ ಅಣತಿಯ ಮೇರೆಗೆ ಕುಶಾಲನಗರಕ್ಕೆ ತೆರಳಿದ ಪೊನ್ನಣ್ಣ ಟಿಪ್ಪುವಿನ ಕೈಸೇರಿದ್ದ ಕೋಟೆಗೆ ದಾಳಿಯಿಟ್ಟು ಮರುವಶಪಡಿಸಿಕೊಂಡನು.
ಲೆಫ್ಟಿನೆಂಟ್ ಜನರಲ್ ಗಳು
ಅಪ್ಪಾರಂಡ ಸಿ. ಆಯ್ಯಪ್ಪ , pvsm
ಕೋದಂಡ ನಂಜಪ್ಪ ಸೋಮಣ್ಣ , pvsm, deputy chief of army staff, chief architect in operation blue star.
ಬಿದ್ದಂಡ ನಂಜಪ್ಪ ನಂದಾ ,pvsm,avsm
ಬುಟ್ಟಿಯಂಡ ಕೆ. ಬೋಪಣ್ಣ, pvsm. The directer general ncc
ಮೇಜರ್ ಜನರಲ್‌ಗಳು
ಕೊಂಗೇಟಿರ ಎಂ. ಚೆಂಗಪ್ಪ. pvsm,avsm
ಕೋದಂಡ ಎ. ಕರುಂಬಯ್ಯ, ಸೋಮೆಯಂಡ ಕೆ. ಕಾರ್ಯಪ್ಪ, ಬಾಚಮಂಡ ಎ. ಕಾರ್ಯಪ್ಪ, ಮಾದೇಯಂಡ ಎ. ಬೆಳ್ಯಪ್ಪ., ಚೆಪ್ಪುಡೀರ ಜಲ್ ಅಪ್ಪಚ್ಚು pvsm, ಮೂವೇರ ಸಿ. ನಂಜಪ್ಪ pvsm, ಕುಪ್ಪಂಡ .ಸಿ. ನಂಜಪ್ಪ pvsm
ಏರ್ ಮಾರ್ಷಲ್‌ಗಳು
ಚೆಪ್ಪುಡೀರ ಎಂ. ಸುಬ್ಬಯ್ಯ avsm,vc
ಮಚ್ಚಿಯಂಡ ಸಿ. ಉತ್ತಯ್ಯ pvsm,avsm
ಕೊಡಂದೇರ ಸಿ. ಕಾರ್ಯಪ್ಪ pvsm,vm
ಬಲ್ಟಿಕಾಳಂಡ ವಿ. ಚೆಂಗಪ್ಪ
ಏರ್ ಕಮಾಂಡರ್ ಗಳು
ಕಂಬೀರಂಡ ಪೊನ್ನಪ್ಪ
ಬುಟ್ಟಿಯಂಡ ಬಿದ್ದಪ್ಪ ಅಪ್ಪಚ್ಚು
ಅಪ್ಪಾರಂಡ ಎಂ. ಗಣಪತಿ
ಕಂಬೀರಂಡ ಪೂವಯ್ಯ ದೇವಯ್ಯ
ಚೆಕ್ಕೇರ ಎಂ. ಬೆಳ್ಯಪ್ಪ
ಪಟ್ಟಡ ಅರುಣ್ ಮುತ್ತಣ್ಣ
ನೌಕಾ ಕಮಾಂಡರ್ ಗಳು
ಚೆಕ್ಕೇರ ಎಂ. ಬೆಳ್ಯಪ್ಪ
ಪಟ್ಟಾಮಾಡ ಎ. ಪೊನ್ನಪ್ಪ.
ಮೂಡೇರ ತಮ್ಮಯ್ಯ
ಮಂಡೇಪಂಡ ಪಿ. ಬೋಪಯ್ಯ
ಕ್ಯಾ.ಬೊವ್ವೇರಿಯಂಡ ಮುದ್ದಯ್ಯ

1 comment:
The whole write up on kodagu is so informative, being a kodavati I got to learn something new about the valor and sacrifices our brave kodavas have done and feel more proud of my community. Long live Kodavas. Santhosh Thammaiah, long way to go.
Post a Comment