Thursday, April 7, 2011

ದುರ್ಯೋಧನ ನೀರೊಳಿದ್ದೂ ಬೆವರಿದನಂತೆ


ಪುರಾಣಲೋಕ ಕಂಡ ಅತಿ ದೊಡ್ಡ ಮತ್ತು ಮಹಾಪ್ರಬಲ ಖಳ ಪಾತ್ರದುರ್ಯೋಧನನದ್ದು. ಹಲಬಾರಿ ಆತ ಸುಯೋಧನನೇ ಆದರೂ ದುರ್ಗುಣಗಳ ಆವರಣಗಳೇ ಆವರಿಸಿ ಆತ ದುರ್ಯೋಧನನೇ ಆಗಿಶಾಶ್ವತವಾಗಿಹೋದ. ಇಂಥಾ ದುರ್ಯೋಧನನಿಗೆ ಸಂಧಾನಕಾರ ಕೃಷ್ಣ ಒಮ್ಮೆನೀತಿ ಬೋಧೆಯನ್ನು ಹೇಳಲಾರಂಭಿಸುತ್ತಾನೆ. ಕೇಳುವ ದುರ್ಯೋಧನನಿಗೂಅದು ಸರಿ ಎಂದೇ ಅನಿಸತೊಡಗುತ್ತದೆ. ಆದರೆ ಕೊನೆಗೆ ಆತ ಕೃಷ್ಣನನ್ನುದ್ದೇಶಿಸಿ“ನನಗೂ ಸರಿ ತಪ್ಪುಗಳು ಗೊತ್ತಿವೆ. ದೌರ್ಬಲ್ಯಗಳ ಅರಿವಿದೆ. ಪಾಪದಪ್ರಜ್ಞೆಯಿದೆ. ಕೆಡುಕಿನ ಭಯವಿದೆ. ಆದರೇನು ಮಾಡಲಿ? ಸತ್ಯವನ್ನುಆಚರಿಸಲಾಗುತ್ತಿಲ್ಲ. ಮಿಥ್ಯೆಯನ್ನು ಬಿಡಲಾಗುತ್ತಿಲ್ಲ" ಎನ್ನುತ್ತಾನೆ.ಪರಿಣಾಮ ಕ್ರಮೇಣ ದುರ್ಯೋಧನನ ಅಂತ್ಯವಾಗುತ್ತದೆ. ಕೃಷ್ಣನಿಂದಲೂದುರ್ಯೋಧನನ್ನು ತಿದ್ದಲು ಅಸಾಧ್ಯವಾಗುತ್ತದೆ. ಏಕೆಂದರೆ ದುರ್ಯೋಧನನಪಾಲಿಗೆ ನೀತಿಯುಕ್ತವಾಗಿ ನಡೆಯುವ ಕಾಲ ಅದಾಗಲೇ ದಾಟಿ ಹೋಗಿತ್ತು.ಅದೇಕೋ ಡೆನ್ಮಾರ್ಕಿನ ಕೊಪನ್‌ಹೇಗನ್‌ನಲ್ಲಿ ನಡೆಯುತ್ತಿರುವ ಭೂ ಶೃಂಗಸಭೆಯನ್ನು ನೆನೆಯುವಾಗಲೆಲ್ಲಾ ದುರ್ಯೋಧನನ -ತಪ್ಪು - ಸರಿ- ದೌರ್ಬಲ್ಯಗಳು ಬಿಸಿಗಾಳಿಯಂತೆ ಹಾದುಹೋಗುತ್ತವೆ. ಏಕೆಂದರೆ ಶೀತದೇಶದ ಕೊಪನ್‌ಹೇಗನ್‌ನಲ್ಲಿ ಇಂದು ಆಗಿಹೋದ ಅಚಾತುರ್ಯದಬಗ್ಗೆ ವಾರಗಟ್ಟಲೆ ಚರ್ಚೆ ಬಿಸಿಬಿಸಿಯಾಗಿ ನಡೆಯುತ್ತಿದೆ. ವಿಜ್ಞಾನಿಗಳ ವಾದ -ಸಿದಾಟಛಿಂತ - ಮಂಡನೆಗಳು, ರಾಜಕಾರಣಿಗಳ ನಿಲುವುಗಳು, ಚಿಂತಕರ ಕಾಳಜಿ- ಅಭಿಪ್ರಾಯಗಳು, ಅಳಿದುಳಿದವರ ಆರೋಪ - ಪ್ರತ್ಯಾರೋಪಗಳೆಲ್ಲವೂಸಮಾರೋಪದ ದಿನದಂದು ಹಾಳೆಗಳಲ್ಲಿಳಿದು ಸಹಿಗಳ ಮುದ್ರೆಗಳು ಬಿದ್ದು ಚಾರಿತ್ರಿಕ ಅವೇಶನ ಕೊನೆಗೊಳ್ಳುತ್ತದೆ. ಮತ್ತೆ ಯಥಾಪ್ರಕಾರ ಡೆನ್ಮಾರ್ಕಿನಲ್ಲೂಜನ ಮುಖ ಒರೆಸಿಕೊಳ್ಳುತ್ತಾರೆ. ಕೈಗಾರಿಕಾ ಪ್ರಧಾನ ಶ್ರೀಮಂತ ದೇಶಗಳಮಾಲಿನ್ಯದ ಕೊಡುಗೆ ಎಂದಿನಂತೇ ಮುಂದುವರಿಯುತ್ತಿರುತ್ತವೆ. ಇದಕ್ಕೆಹೊರತಾದ ಯಾವ ನಿರೀಕ್ಷೆಯನ್ನೂ ಕೊಪನ್‌ಹೇಗನ್ ಅವೇಶನದಿಂದ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಇಂಥ ಅವೇಶನ ಇದೇನೂ ಮೊದಲಲ್ಲ ಮತ್ತುಇದಕ್ಕೂ ಮೊದಲಿನ ಶೃಂಗಗಳಿಂದ ಭೂಮಿಗೆ ಆದ ಪ್ರಯೋಜನಗಳೂ ಕೂಡ ಏನಿರಲಿಲ್ಲ. ಹಾಗಿರುವಾಗ ಕೊಪನ್‌ಹೇಗನ್ ಕೂಡ ಕಡಿದುಕಟ್ಟೆ ಹಾಕುವಂಥದ್ದೇನೂ ಇಲ್ಲ. ಅಂಗೀಕರಿಸಲ್ಪಟ್ಟ ತೀರ್ಮಾನಗಳು ಜಾರಿಯಾಗದಿದ್ದರೆಎವರೆಸ್ಟ್‌ನಲ್ಲಿ ಕ್ಯಾಬಿನೆಟ್ ಮಾಡಿದರೆಷ್ಟು?ಸಾಗರದಾಳದಲ್ಲಿ ಸಭೆ ಸೇರಿದರೆಷ್ಟು? ಅಂದು ೧೯೯೨ರಲ್ಲಿ ರಿಯೋಡಿಜನೈರೋದಲ್ಲಿ ಕೂಡ ಹೀಗೆಯೇ ಆಗಿತ್ತು.ಭೂತಾಪದ ಬಿಸಿ ಮುಟ್ಟಿ, ತಪ್ಪಿನ ಅರಿವಾಗಿ ಯುರೋಪಿನ ಕೆಲ ದೇಶಗಳು‘ಅರ್ಥ್ ಸಮ್ಮಿಟ್’ ಎಂಬ ಕಾರ್ಯಾಗಾರದಲ್ಲಿ ಬಂದು ಸೇರಿದ್ದರು. ಸಭೆಮುಗಿಯುವ ಹೊತ್ತಿಗೆ ಆ ದೇಶಗಳು ಸ್ವಯಪ್ರೇರಣೆಯಿಂದ ಕೈಗಾರಿಕೆಗಳಿಂದ ಉಗುಳುವ ವಿಷಾನಿಲಗಳ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಲು ಮತ್ತುಅಣುತ್ಯಾಜ್ಯದಿಂದ ಉಂಟಾಗುವ ವಿಕಿರಣದ ಹರಡುವಿಕೆಯ ತಡೆಗೆ ಕ್ರಮಕೈಗೊಳ್ಳಲು ತೀರ್ಮಾನಿಸಿಕೊಂಡವು. ಆದರೆ ಅನಂತರ ಅದೇ ದೇಶಗಳುತಮ್ಮ ಅಣುತ್ಯಾಜ್ಯವನ್ನು ಮಣ್ಣಿನಡಿ ಹೂತು do not dig ಎಂದು ಫಲಕ ಹಾಕಿದ್ದೊಂದನ್ನು ಬಿಟ್ಟರೆ ಮತ್ತೇನೂ ಮಾಡಲಿಲ್ಲ. ಮತ್ತು ಮುಂದೆ ೧೯೯೭ರಲ್ಲಿ ಮತ್ತೊಂದು ಸಭೆ ಸೇರಿದಾಗ ಕೈಗಾರಿಕೆಗಳ ವಿಷಾನಿಲಗಳ ಉಗುಳುವಿಕೆಯಲ್ಲಿತಮ್ಮ ದೇಶಗಳ ಪಾಲು ಬೃಹತ್ ಪ್ರಮಾಣದಲ್ಲಿ ಹೆಚ್ಚಿರುವುದು ಕಂಡುಬಂದಿತ್ತು. ಅನಂತರ ೧೯೯೭ರಲ್ಲಿ ವಿಶ್ವಸಂಸ್ಥೆ ಆಯೋಜಿಸಿದ್ದ ಭೂಶೃಂಗ ಸಭೆ ಜಪಾನ್‌ನ ಕ್ಯೋಟೋದಲ್ಲಿ ನಡೆಯಿತು. ವಿಶ್ವದ ೧೬೫ದೇಶಗಳು clean develop mechanism ಅನ್ನು ಅಂಗೀಕರಿಸಿದವು ಮತ್ತು ವಿಶ್ವದ ಮುಂದುವರಿದ ದೇಶಗಳು ಸೇರಿಕೊಂಡು ಗ್ರೀನ್ ಹೌಸ್ ಅನಿಲಗಳ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಲು ತೀರ್ಮಾನಿಸಿಕೊಂಡವು. ಆದರೆ ಕ್ಯೋಟೋ ಕೂಡ ಬಿಸಿಯನ್ನು ತಣಿಸಲಿಲ್ಲ. ಬದಲಿಗೆ ಮತ್ತಷ್ಟುಎಡವಟ್ಟನ್ನೇ ಅದು ಮಾಡಿಕೊಂಡಿತು. ಏಕೆಂದರೆ ಅಂದು ಯಾವ ದೇಶಗಳುಗ್ರೀನ್ ಹೌಸ್ ಅನಿಲ ಪ್ರಮಾಣವನ್ನು ಕಡಿಮೆಮಾಡಿಕೊಳ್ಳಬೇಕೆಂದುತೀರ್ಮಾನಿಸಿಕೊಂಡಿದ್ದವೋ ಅವುಗಳೇ ಇಂದು ಬಿಸಿಗೆ ಹೆಚ್ಚು ಕೊಡುಗೆಯನ್ನುನೀಡುತ್ತಿರುವ ದೇಶಗಳಾಗಿವೆ. ಯಾವ ದೇಶಗಳನ್ನು ನಾವು ಇಂದು ಮುಂದುವರಿದವು ಎಂದುಹೇಳುತ್ತಿದ್ದೇವೋ ಅದೇ ದೇಶಗಳು ಇಂದು ಭೂಮಿಗೆ ಮಾರಕವಾಗಿವೆ. ವಿಚಿತ್ರ ಎಂದರೆ ಅಂಥ ದೇಶಗಳೇ ಇಂದು ಭೂತಾಪ ಶಮನಕ್ಕೆ ಸಹಿ ಹಾಕುತ್ತಿವೆ.ಜೊತೆ ಜೊತೆಗೇ ನಿಯಮಗಳನ್ನೂ ಮುರಿಯುತ್ತಿವೆ. ಹೀಗೆ ಅರಿವಿದ್ದೂಮಾಡುತ್ತಿರುವ ತಪ್ಪಿನ ಪ್ರಸಂಗದಲ್ಲಿ ದುರ್ಯೋಧನ ಅನ್ವರ್ಥವೆಂಬಂತೆಯೇ ನೆನಪಾಗುತ್ತಾನೆ. ಸತ್ಯ ಗೊತ್ತಿದ್ದರೂ ತಿದ್ದಿಕೊಳ್ಳಲಾರದ ಅಂಥ ದೇಶಗಳು , ನಾಯಕಗಣ, ರಾಜಕಾರಣ, ಆರ್ಥಿಕತೆ ಎಲ್ಲವೂ ತೊಡೆ ಮುರಿದುಅನಾಥನಂತೆ ಸತ್ತುಬಿದ್ದ ದುರ್ಯೋಧನನಂತೆಯೇ ಆಗಿಹೋಗುವವೇನೋಎಂದೆನಿಸದಿರಲಾರದು. ಏಕೆಂದರೆ ಇಲ್ಲಿ ಮುನಿದಿರುವುದು ಭೂಮಿ. ಅದರ ಒಂದು ಸಣ್ಣ ಕದಲುವಿಕೆಯನ್ನೇ ತಾಳಿಕೊಳ್ಳಲಾರದ ಮಾನವ ಇನ್ನುಭೂಮಿಯೇ ಪುಟಿಯುವಾಗ ಹೇಗೆ ತಾನೇ ತಾಳಿಕೊಳ್ಳಬಲ್ಲ? ಊಹಿಸಿ. ಸದ್ಯದಪರಿಸ್ಥಿತಿಯನ್ನೇ ಅವಲೋಕಿಸಿದರೂ ಕೂಡ ಮುಂದಿನ ದಿನಗಳಲ್ಲಿ ಭೂಮಿಯತಾಪ ಇನ್ನಷ್ಟು ಹೆಚ್ಚುವುದಲ್ಲದೆ ಕಡಿಮೆಯಾಗುತ್ತದೆ ಎನ್ನಲು ಯಾವಆಧಾರಗಳೂ ಇಲ್ಲ. ಈಗಾಗಲೇ ತೂತು ಬಿದ್ದಿರುವ ಓಜೋನ್‌ನ ರಂಧ್ರವನ್ನು ಮುಚ್ಚಲು ಮಾನವನಲ್ಲಿ ಯಾವ ತಂತ್ರಜ್ಞಾನವೂ ಇಲ್ಲ . ಅಷ್ಟೇ ಅಲ್ಲದೆ‘ನಾಗರಿಕತೆ’ಯಿಂದ ಬಂಯಾಗಿರುವ ಮಾನವನಿಗೆ ಇನ್ನಾದರೂ ಪರಿಸರಕ್ಕೆಪೂರಕವಾಗಿ ಬದುಕಲು ಎಳ್ಳಷ್ಟೂ ಸಾಧ್ಯವಿಲ್ಲ. ಇಂದಿನ ಜಗತ್ತಿನ ಸಕಲರ ಮನಸ್ಥಿತಿ ಕೂಡ ಹಾಗೆಯೇ. ಅವು ಗ್ಲೋಬಲ್ ವಾರ್ಮಿಂಗ್‌ಗೆ ಹೆದರಿ ಸಭೆಸಮಾರಂಭಗಳನ್ನು ಮಾಡಬಹುದೇ ಹೊರತು ಪರಿಸರ ಸ್ನೇಹಿ ಕಾರ್ಯಗಳನ್ನುಕೈಗೊಂಡಿದ್ದರೆ ಸಭೆ- ಶೃಂಗಗಳು ಇಷ್ಟೊಂದು ಅಬ್ಬರದ ಪ್ರಚಾರದಿಂದ ನಡೆಯುತ್ತಿರಲಿಲ್ಲವೆನ್ನುವುದೂ ಕೂಡ ಭೂಮಿಯಷ್ಟೇ ಸತ್ಯ. ಏಕೆಂದರೆಭೂಸ್ನೇಹಿ ಕಾರ್ಯಗಳ ಅನುಷ್ಠಾನವಾದರೂ ಕೂಡ ವಿಶ್ವದ ದೇಶಗಳ ಪರಿಸ್ಥಿತಿಮತ್ತೊಂದು ವಿಧದಲ್ಲಿ ಬದಲಾವಣೆಗೆ ಒಳಗಾಗಿ ಹೋಗುತ್ತವೆ. ಅಂದರೆ ಇಂದು ಯಾವುದೇ ಒಂದು ದೇಶ ಶೇ. ೧ರಷ್ಟು ಪ್ರಮಾಣದ ಕೈಗಾರಿಕಾ ಅನಿಲವನ್ನುಕಡಿತಗೊಳಿಸಿಕೊಳ್ಳುವುದು ಎಂದರೆ ಎಷ್ಟೋ ಮಿಲಿಯನ್ ಡಾಲರ್‌ಗಳನ್ನು ಕಳೆದುಕೊಂಡಂತೆ. ಅದಕ್ಕಾಗಿ ಅದು ವಿಷವನ್ನಾದರೂ ಸೇವಿಸಬಲ್ಲದು. ಆದರೆ ಡಾಲರ್‌ಗಳನ್ನು ಬಿಡಲೊಲ್ಲದು. ಭೂಮಿ ಇನ್ನೆಲ್ಲಿ ತಣಿದೀತು? ಶೃಂಗಸಭೆಗಳು ಇನ್ನೆಲ್ಲಿ ಸಫಲವಾದಾವು? ಎಲ್ಲರಿಗಿರುವುದೂ ಒಂದೇ ಭೂಮಿ. ಆದ್ದರಿಂದ ಯಾವನೋ ಒಬ್ಬನ ತಪ್ಪನ್ನುಇಲ್ಲಿ ಎಲ್ಲರೂ ಅನುಭವಿಸಲೇಬೇಕು. ರಷ್ಯಾದ ಅಣುವಿಕಿರಣಕ್ಕೆ ಕರ್ನಾಟಕದವಾತಾವರಣವೂ ಏರುಪೇರಾಗುತ್ತದೆ. ಇನ್ನೆಲ್ಲಿಯದೋ ಕೈಗಾರಿಕೆಗಳ ಪ್ರಭಾವಕ್ಕೆಬರದ ನಾಡಲ್ಲಿ ನೆರೆ ಸೃಷ್ಟಿಯಾಗುತ್ತದೆ. ಆದ್ದರಿಂದ ಗ್ಲೋಬಲ್ ವಾರ್ಮಿಂಗ್ ಎನ್ನುವುದು ಪ್ರತಿಯೊಬ್ಬರ ಉಳಿವಿನ ಪ್ರಶ್ನೆ. ಆದರೆ ಶೃಂಗ ಸಮ್ಮೇಳನಗಳ ಅಬ್ಬರದಲ್ಲಿ ಭೂಬಿಸಿಯ ತೀವ್ರತೆ ಸಾಧಾರಣ ಮನುಷ್ಯನಿಗೆ ಮುಟ್ಟಲಾರದೆಹೋಗುತ್ತಿದೆ. ಸಾಮಾನ್ಯ ವ್ಯಕ್ತಿಯೊಬ್ಬ ಜಾಗೃತನಾದರೆ ಪರಿಸರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಬಲ್ಲನಾದರೂ ಆತನಿಗೆ ತನ್ನಬುಡಕ್ಕೆ ಬಂದಅಪಾಯದ ಅರಿವಿಲ್ಲ. ಬೆಟ್ಟದ ಮೇಲೆ , ಸಾಗರದ ಕೆಳಗೆ ಸಭೆ ಸೇರುವುದು.ಗುಂಪುಗುಂಪಾಗಿ ಬೆತ್ತಲೆ ನಿಂತು ಫೋಟೋ ತೆಗೆಸಿಕೊಳ್ಳುವುದೆಂಥದ್ದೋ ಭೂ ಬಿಸಿ ಎಂಬ ಕಲ್ಪನೆ ಸಾಮಾನ್ಯರಲ್ಲಿದೆಯಲ್ಲದೆ ಅದು ನಮ್ಮ ಅಳಿವಿನ ಗಂಟೆ ಎಂಬುದು ಅರಿವಾಗುತ್ತಿಲ್ಲ. ೨೦೦೭ರಲ್ಲೇ ಸುಮಾರು ೧೩೦ ದೇಶಗಳಿಂದಆಯ್ಕೆ ಮಾಡಿದ ೩೦೦೦ ಜನ ವಿಜ್ಞಾನಿಗಳ ತಂಡ(intergovernment panel on climate change-IPCC) ಫ್ರಾನ್ಸಿನಲ್ಲಿ ವರದಿಯೊಂದನ್ನು ಬಿಡುಗಡೆ ಮಾಡಿ ಭವಿಷ್ಯದ ಭಯಾನಕ ಸಂಗತಿಗಳನ್ನು ಬಯಲಿಗೆಳೆದಿತ್ತು ಮತ್ತು ಭಾರತದ ಬಗ್ಗೆ ಕೂಡ ಅಪಾಯಕಾರಿ ಎನ್ನುವಂಥ ಸಂಗತಿಯನ್ನು ವರದಿ ಮಾಡಿತ್ತು. ಆದರೂ ಕೂಡ ಭಾರತದ ಸಾಮಾನ್ಯನಿಗೆ ಅದರ ಸುದ್ದಿಮುಟ್ಟದೇ ಹೋಯಿತು. ಸದ್ಯದ ಸ್ಥಿತಿಯಲ್ಲಿ ಅದು ಮುಟ್ಟದಿರಬಹುದು. ಆದರೆಅವಶ್ಯವಾಗಿ ಮುಂದೊಂದು ದಿನ ಮುಟ್ಟಿಯೇ ಮುಟ್ಟುತ್ತದೆ. ಆಗ ಮನುಷ್ಯ ಅಸಹಾಯಕನಾಗಿ ಸೃಷ್ಟಿನಿಯಮಕ್ಕೆ ಕಡ್ಡಾಯವಾಗಿ ಒಳಗಾಗಲೇಬೇಕಾಗುತ್ತದೆ.ಏಕೆಂದರೆ ಆ ಹೊತ್ತಿಗೆ ಅಂದರೆ ೨೦೫೦ರ ಹೊತ್ತಿಗೆ ೪೦೦ ಮಿಲಿಯ ಟನ್ನುಗಳಷ್ಟುಆಹಾರದ ಕೊರತೆ ಪ್ರಪಂಚದಲ್ಲಿ ಕಂಡುಬರಲಿದೆ. ಹೆಚ್ಚು ಕಡಿಮೆ ಅಷ್ಟೇ ಸಂಖ್ಯೆಯ ಜನರು ಹಸಿವಿನಿಂದ ತತ್ತರಿಸಲಿದ್ದಾರೆ. ಮೂರು ಬಿಲಿಯ ಜನರು ಅತಿವೃಷ್ಟಿ, ಅನಾವೃಷ್ಟಿಗಳಿಂದ ನಿರ್ವಸಿತರಾಗುತ್ತಾರೆ. ಪ್ರಪಂಚದ ಅರ್ಧದಷ್ಟುಕರಾವಳಿ ಪ್ರದೇಶಗಳು ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳಲಿದೆ. ಮತ್ತುಎಲ್ಲಾ ಕರಾವಳಿಗಳು ಈಗಿರುವ ಜಾಗದಿಂದ ೨೦ ಮೀಟರ್‌ನಷ್ಟು ಒಳ ನುಗ್ಗಲಿದೆ. ಸಮುದ್ರ ಮಟ್ಟದಿಂದ ೧೦ ಮೀಟರ್‌ಗಿಂತ ಕಡಿಮೆ ಎತ್ತರದಲ್ಲಿರುವಮಾಲ್ದೀವ್ಸ್‌ನಂಥ ದ್ವೀಪ ದೇಶಗಳ ಮುಳುಗಡೆಯಾಗಲಿದೆ. ಉತ್ತರಹಾಗೂ ದಕ್ಷಿಣ ಧ್ರುವಗಳ ಹಿಮರಾಶಿ ಕರಗಿ ಸಮುದ್ರದ ಮಟ್ಟ ೪೦ ಸೆ.ಮೀ.ಏರುತ್ತದೆ. ತೀರ ಪ್ರದೇಶಗಳಿಗೆ ನೀರು ನುಗ್ಗಿ ಕೋಟ್ಯಂತರ ಜನರು ವಲಸೆ ಹೋಗಬೇಕಾಗುತ್ತದೆ. ಚಂಡಮಾರುತ, ಸುಂಟರಗಾಳಿಗಳು ಭಯಾನಕ ರೂಪಧರಿಸಲಿವೆ. ಹಿಮಾಲಯವೂ ಕೂಡ ಕರಗಿ ಹೋಗುವುದರಿಂದ ಭಾರತದಸಿಂಧೂ, ಗಂಗಾ, ಯಮುನಾ, ಬ್ರಹ್ಮಪುತ್ರಾ ನದಿಗಳ ಮೂಲಗಳೇ ಸೊರಗುತ್ತವೆ.ಆಘಾತ ಎಂದರೆ ಅದು ೨೦೩೫ರ ಹೊತ್ತಿಗೇ ಘಟಿಸಿ ಹೋಗುತ್ತದೆ. ಅಂದರೆಹಿಮಾಲಯದಲ್ಲಿ ಕ್ಯಾಬಿನೆಟ್ ನಡೆಸಿ ಜಾಗೃತಿ ಉಂಟು ಮಾಡಬೇಕೆಂದಿದ್ದರೆಅದು ನೇಪಾಳಕ್ಕಿಂತ ಮೊದಲು ಭಾರತವೆ. ಹೀಗೆ ೨೦೫೦ರ ಹೊತ್ತಿನ ವಿಶ್ವವನ್ನುವಿಜ್ಞಾನಿಗಳು ಹಾಲಿವುಡ್ ನಿರ್ದೇಶಕರಿಗಿಂತ ಗಾಢವಾಗಿ ಚಿತ್ರಿಸಿದ್ದಾರೆ.ಭೂಮಿಯನ್ನು ತಂಪಾಗಿಟ್ಟುಕೊಳ್ಳಲಾರದ ಮಾನವ ತಾನಂತೂ ತಂಪಾಗಿ ಬದುಕಲಾರ ಎಂದು ಅಂತಿಮ ವಾಕ್ಯ ಸೇರಿಸಿದ್ದಾರೆ. ಅಂದರೆ ಮನುಷ್ಯಬೆಂಕಿಯನ್ನರಸಿ ಹೋಗುತ್ತಿರುವ ಪತಂಗವೇ?ಹಾಲಿವುಡ್ ನಿರ್ದೇಶಕ ರೊನಾಲ್ಡ್ ಎಮರಿಕ್ ತನ್ನ the day after tommorrow ಸಿನಿಮಾದಲ್ಲಿ ಈ ವರದಿ ಆಧಾರದಲ್ಲಿ ಇಂದೋ ಮರುದಿನವೋ ಬಂದೆರಗುವ ಅಪಾಯವನ್ನು ಮುಟ್ಟುವಂತೆ ವಿವರಿಸಿದ್ದಾರೆ.ವಿಜ್ಞಾನಿಗಳ ಎಚ್ಚರಿಕೆ, ಅದಕ್ಕೆ ಸೊಪ್ಪು ಹಾಕದ ರಾಜಕೀಯ ನಾಯಕರುಕೊನೆಗೆ ಸೃಷ್ಟಿಯಾಗುವ ಹತಾಶೆಯ ಭಾವಗಳು, ಭೂತಾಪ ಶೃಂಗದಹೊರಗೆ ಅಣಕಿಸುತ್ತಿರುವ ಪೃಥ್ವಿಯ ರುದ್ರನರ್ತನ, ಮನುಷ್ಯನಿರ್ಮಿತರಾಜಬೀದಿಗಳು ಪ್ರಕೃತಿಯ ಭೀಷಣತೆಗೆ ಬಲಿಯಾಗುವುದು. ತಾನು ಸೃಷ್ಟಿಸಿದಭೋಗಗಳಾವುವೂ ತನ್ನನ್ನು ರಕ್ಷಿಸದಿರುವುದು. ಸಮಸ್ತರೂ ಒಂದೇ ರೀತಿಯಲ್ಲಿಸಾಯುವುದು ಕೇವಲ ಸಿನಿಮಾದ ಕಥೆಯಲ್ಲ. ಮುಂದೊಂದು ದಿನ ಭೂಮಿಅನುಭವಿಸಲೇಬೇಕಾದ ಘಟನೆಯ ದಾಖಲೀಕರಣ.ಮಾನವ - ಮಾನವ ಕೈಗೊಳ್ಳುವ ಮಹಾಯುದಟಛಿ ಇನ್ನು ನಡೆಯಲಾರದು.ಅದಿನ್ನು ಪರಿಸರ-ಮಾನವರ ನಡುವೆ ಸಂಭವಿಸಬಹುದು. ಮನುಷ್ಯ ಕೃತ ಪಾಪದ ಫಲವನ್ನು ಸ್ವತಃ ಪರಿಸರವೇ ಕ್ಷಮಿಸದಿದ್ದಾಗ ಏನಾಗುವುದೋಅದು ಕೆಲವೇ ವರ್ಷಗಳಲ್ಲಿ ಆಗಬಹುದು. ನಿಸ್ಸಂಶಯವಾಗಿ ಇನ್ನು ಕೆಲವೇ ವರ್ಷಗಳಲ್ಲಿ ಪ್ರಕೃತಿಯ ಸಹಜ ಕ್ರಿಯೆಗಳೆಲ್ಲಾ ಸಂಪೂರ್ಣ ಮರೆಗೆಸರಿಯುತ್ತವೆ. ಅದರ ಕುರುಹುಗಳು ಈಗಾಗಲೇ ಕಂಡುಬರುತ್ತಿವೆ. ಹೊಸಋತುಮಾನಗಳಿಗೆ ಭೂಮಿ ಈಗಾಗಲೇ ಅಣಿಯಾಗುತ್ತಿವೆ. ಆಗಾಗ ಕಣ್ಣೀರುಹಾಕಿಸುವ ನದಿಗಳು, ಆಗಿಂದಾಗೆ ಜಾಗೃತವಾಗುವ ಶಿಲಾ ಸೋಟಗಳುಚುಮುಚುಮು ಚಳಿಯ ಚಳಿಗಾಲ, ಮಾನ್ಸೂನ್ ಎಂಬ ಮುಂಗೋಪಿ,ಬೈಸಾಕಿ ಎಂಬ ತುಂಟ ಇವರೆಲ್ಲಾ ಇನ್ನು ನೆಲೆಕಳೆದುಕೊಳ್ಳುತ್ತಾರೆ.ಬೇಕಾದರೆ ಇದನ್ನೇ ಪ್ರಳಯ ಎಂದುಕೊಳ್ಳಬಹುದು. ಅಂತ್ಯಕಾಲಕ್ಕೆ ಯಾವಹೆಸರಾದರೇನು? ಬಿಳಿ ಚರ್ಮಕ್ಕೆ ಈಗಾಗಲೇ ತಾಪದ ಬಿಸಿ ತಟ್ಟಿದೆ. ನೀರೊಳಿದ್ದರೂ ಅವರಿಗೆ ಬೆವರಿದಂತೆನಿಸುತ್ತಿದೆ. ವೈಶಂಪಾಯನದೊಳಗಿದ್ದ ದುರ್ಯೋಧನನಂತೆ. ?

No comments: