ಕೆಲವರ್ಷಗಳ ಹಿಂದೆ ವಿಶ್ವವಿಖ್ಯಾತ ತಾಜ್‌ಮಹಲ್‌ನ ನಡುಭಾಗದ ಗೋರಿಯ ಮೇಲೆ ನೀರ ಹನಿಗಳು ತೊಟ್ಟಿಕ್ಕಲಾರಂಭಿಸಿದವು. ಮಳೆನಿಂತರೂ ನೀರಿನ ಹನಿಗಳು ಬೀಳುವುದು ನಿಲ್ಲದು. ತಾಜ್‌ನ ಮಾಳಿಗೆಯೇ ಸೋರುವುದೆಂದರೇನು? ಉಸ್ತುವಾರಿ ಹೊತ್ತವರು ಗಡಿಬಿಡಿಗೊಂಡರು.ಗಾರೆಯವರಿಂದ ಮೊದಲುಗೊಂಡು ಇಂಜಿನಿಯರರವರೆಗಿನ ತಂತ್ರಜ್ಞರುದೌಡಾಯಿಸಿ ಬಂದರು. ಕಾರ್ಯತತ್ಪರರಾದರು. ಆದರೆ ಏನುಮಾಡಿದರೂ ಮಾಳಿಗೆ ಸೋರುವುದು ನಿಲ್ಲಲಿಲ್ಲ. ಕೊನೆಗೆ ಎಲ್ಲರೂ ಕೈಚೆಲ್ಲಿ“ಪರಲೋಕದಲ್ಲಿರುವ ಷಹಜಹಾನ್ ಹೆಂಡತಿಯ ಗೋರಿಯ ಮೇಲೆಕಂಬನಿ ಮಿಡಿಯುತ್ತಿದ್ದಾನೆ" ಎಂದು ಸುದ್ದಿ ಹಬ್ಬಿಸಿದರು. ಅಷ್ಟಾದದ್ದೇತಡ, ಕವಿಗಳು ಕವನಗಳನ್ನುಬರೆಯಲಾರಂಭಿಸಿದರು.ಪತ್ರಿಕೆಗಳುಸುದ್ಧಿಬಿತ್ತರಿಸಿದವು.ಇತಿಹಾಸಕಾರರುಮತ್ತೊಂದುಪ್ಯಾರಾವನ್ನುಸೇರಿಸಿತಾಜ್‌ಗೆಮತ್ತೊಂದಿಷ್ಟು ಕೊಡುಗೆಗಳನ್ನು ನೀಡತೊಡಗಿದರು. ಅದರ ಬಿಳುಪಿಗೆ ಇನ್ನಷ್ಟು ಹೊಳಪು ಬಂತು. ಮಧುರ ಪ್ರೇಮ ಯಾವತ್ತೂ ಅಮರ ಎಂದುಯುವಜನ ಪುಳಕಗೊಂಡರು.
ಇದರೊಂದಿಗೆ ಹೊರಬರಬಹುದಾಗಿದ್ದ ಸತ್ಯವೊಂದು ಮುಚ್ಚಿಹೋಯಿತು.ಅಸಲಿಯತ್ತು ಏನಾಗಿತ್ತೆಂದರೆ ಶಿವ ದೇವಾಲಯದ ಲಿಂಗದಮೇಲೆ ಅಭಿಷೇಕಕ್ಕೆಇಟ್ಟಿರುವ ಕುಂಭದಂಥ ತಂತ್ರeನವೊಂದು ತಾಜ್‌ನ ಮಾಳಿಗೆಯಲ್ಲಿಸಹಜವಾಗಿ ನಿರ್ಮಾಣವಾಗಿತ್ತು.ಮಳೆಗೆ ಶೇಖರವಾಗಿದ್ದ ನೀರು ಲಿಂಗದಮೇಲೆ ಬೀಳುವಂತೆ ಗೋರಿಯ ಮೇಲೆ ಬೀಳುತ್ತಿತ್ತು.
ಹಾಗಾದರೆ ತಾಜ್‌ಮಹಲ್ ವಾಸ್ತವವಾಗಿ ಏನು ?
ಹೀಗೆ ಉದ್ಭವಿಸುವ ಪ್ರಶ್ನೆಗಳು ತಾಜ್‌ಮಹಲ್‌ನ ಕಲ್ಲು ಕಲ್ಲುಗಳಲ್ಲೂಇವೆ. ಆದರೆ ಗಾಳಿಸುದ್ದಿಗಳು, ಕಟ್ಟುಕತೆಗಳು, ಅವಾಸ್ತವಗಳು,ಕಲ್ಪನೆಗಳು ಅದರ ವಾಸ್ತವತೆಯನ್ನು ಮರೆಮಾಚಿದೆ.ಸೆಕ್ಯುಲರ್ ಇತಿಹಾಸರಚನೆಯಾದಾಗಿನಿಂದಲೂ ಹೀಗೆಅಸತ್ಯಗಳು ವಿಜೃಂಭಿಸುತ್ತಾ ಬಂದುತಾಜ್‌ಗೊಂದು ಜಾಗತಿಕ ಮನ್ನಣೆಯನ್ನೂ ವಿಶ್ವದ ಅದ್ಭುತಗಳ ಪಟ್ಟಿಯಲ್ಲಿಒಂದುಸ್ಥಾನವನ್ನೂ ಒದಗಿಸಿಕೊಟ್ಟು ಮಿಥ್ಯೆಗಳದ್ದೇ ಒಂದು ಪ್ರಭಾವಳಿನಿರ್ಮಾಣವಾಗಿ ಹೋಗಿದೆ.
ಮಹಾಕಳ್ಳ ಮತ್ತು ಇತಿಹಾಸ ಒಂದೇ ಸ್ವಭಾವದವು ಎಂಬ ವಕ್ರೋಕ್ತಿಯೊಂದಿದೆ. ಏಕೆಂದರೆ ಕಳ್ಳನನ್ನು ಬಡಿದಷ್ಟೂ ಕಳ್ಳತನಗಳು ಬಯಲಾಗುತ್ತಾ ಹೋಗುತ್ತವೆ. ಕದ್ದ ವಸ್ತುಗಳು, ಕಳ್ಳರ ಜಾಲಗಳುಪತ್ತೆಯಾಗುತ್ತಾ ಹೋಗುತ್ತವೆ. ಇತಿಹಾಸ ಎಂದರೂ ಹಾಗೆಯೇ. ಅದನ್ನುವಿಶ್ಲೇಷಿಸಿದಷ್ಟೂ , ಶೋಧಿಸಿದಷ್ಟೂ ಸತ್ಯ ಬಯಲಾಗುತ್ತಾ ಹೋಗುತ್ತದೆ.ಇದೂ ಒಂಥರಾ ಪೊಲೀಸ್ ತನಿಖೆಯ ಹಾಗೆಯೇ.ಭಾರತದಇತಿಹಾಸದಲ್ಲಿ ಭವ್ಯತೆಯಿದೆ. ಅದನ್ನು ಶೋಧಿಸಿದಾಗಲೇ ಅದು ಹೊರಬಂದಉದಾಹರಣೆಗಳು ಕಣ್ಣ ಮುಂದಿವೆ. ಇಂಗಿಹೋದ ಸರಸ್ವತಿ ಕಂಡದ್ದಿದೆ.ಮುಳುಗಿಹೋದ ದ್ವಾರಕೆಗೆ ಪುರಾವೆ ಸಿಕ್ಕಿದ್ದಿದೆ. ತೀವ್ರ ಶೋಧದಿಂದರಾಮ ಭೂಮಿಯ ಕುರುಹು ಪತ್ತೆಯಾದದ್ದಿದೆ. ಪ್ರಬಲ ಶೋಧದಿಂದ ಆರ್ಯ-ದ್ರಾವಿಡ ವಾದ ಕುಸಿದುಹೋದದ್ದಿದೆ. ಆದ್ದರಿಂದ ಭಾರತದ ಮಟ್ಟಿಗೆಇತಿಹಾಸದ ಶೋಧ ಎಂದರೆ ನಿಜವಾಗಿಯೂ ಭಾಗ್ಯದ ಶೋಧವೇ.
ತಾಜ್‌ಮಹಲನ್ನು ಕೂಡ ಅಂಥ ಶೋಧ ಗುಣದಿಂದಲೇ ನೋಡಬೇಕು.ಖಂಡಿತಾ ತಾಜ್‌ನಂಥಾ ಕಟ್ಟಡ ಒಂದು ಅದ್ಭುತ ಎಂಬುದರಲ್ಲಿ ಎರಡುಮಾತಿಲ್ಲ. ಆದರೆ ಅದರ ಅದ್ಭುತಗಳ ವಿಜೃಂಭಣೆಗೆ ಮಿಥ್ಯೆಗಳ ಸಾಕ್ಷಿಗಳನ್ನೇ ಏಕೆ ಪಾಲಿಸಬೇಕು? ಅದರ ಪೂರ್ವೇತಿಹಾಸವನ್ನು ಕೊಂಚವಾದರೂಪ್ರವೇಶಿಸಬಾರದೇಕೆ? ಇತಿಹಾಸವನ್ನು ಕುರುಡಾಗಿ ಏಕೆ ಒಪ್ಪಬೇಕು?ಒಮ್ಮೆಯಾದರೂ ಶೋಧದೃಷ್ಟಿ ಬೀರಲೇನು ಅಡ್ಡಿ ? ಅಂಥ ತಾಜ್‌ನ ಬಗ್ಗೆಇಂಥ ತೀವ್ರವಾದ ಪ್ರಶ್ನೆಗಳನ್ನು ಹಾಕಿ ಸಂಶೋಧನೆಯನ್ನು ಕೈಗೊಂಡ ಓರ್ವ ಇತಿಹಾಸಕಾರ ಪಿ.ಎನ್.ಓಕ್. akbar-the great scoundralಎಂದಂತಹ ಇತಿಹಾಸಕಾರ ಮಾತ್ರ ಹೀಗೆ ಪ್ರಶ್ನೆಮಾಡಬಲ್ಲ ಮತ್ತು ತಾಜ್ ಒಂದು ಹಿಂದೂ ಅರಮನೆ ಮತ್ತು ದೇವಸ್ಥಾನಎಂದು ಖಡಾಖಂಡಿತ ನುಡಿಯಬಲ್ಲ. “ತಾಜ್‌ಮಹಲಿನ ಚರಿತ್ರೆಅರಿಯುವ ಮುಂಚೆ ಅದನ್ನು ಶ್ರೀಸಾಮಾನ್ಯನ ದೃಷ್ಟಿಯಿಂದ ನೋಡಬೇಕೇ ಹೊರತು ಬುದಿಟಛಿ - ಮನಸ್ಸುಗಳನ್ನು ದುಃಖದಲ್ಲಿ ಅದ್ದಿದ ಇತಿಹಾಸಕಾರನ ದೃಷ್ಟಿಯಿಂದಲ್ಲ " ಎನ್ನುವ ಓಕ್ ಸಮಸ್ತ ಇತಿಹಾಸವನ್ನು ದಿಟ್ಟಿಸುವದೃಷ್ಟಿ ಕೊಡುತ್ತಾರೆ. ಆ ದೃಷ್ಟಿ ಸಹಜವಾಗಿ ಚಿಕಿತ್ಸಕವಾಗಿರುತ್ತದೆ. ಅದು ಅಹಮದಾಬಾದ್ ಎಂದಾಗ ಕರ್ಣಾವತಿಯನ್ನು ಹುಡುಕುತ್ತದೆ.ಅಲಹಾಬಾದ್ ಎಂದಾಗ ಪ್ರಯಾಗದಲ್ಲಿ ವಿಹರಿಸುತ್ತದೆ. ಹಾಗೆಯೇ ಓಕ್‌ರ ಚಿಂತನೆ ತಾಜ್‌ನ ಬಗ್ಗೆಯೂ ಒಳನೋಟ ಬೀರುವಂತೆ ಮಾಡುತ್ತದೆ. ೫೦೦೦ಜನಹೆಂಡತಿಯರಿದ್ದರೂ ಷಹಜಹಾನನಿಗೆ ಒಬ್ಬ ಮಮ್ತಾಜ್ ಮಹಲಳಸಾವಿನಿಂದ ಆ ಪರಿಯ ದುಃಖವಾಗಿತ್ತೇ ಎಂಬ ಪ್ರಶ್ನೆಯಿಂದ ಹಿಡಿದು ಸತ್ತಹೆಂಡತಿಯ ನೆನಪಿಗೆ ಷಹಜಹಾನ ನೂರಾರು ಕೋಣೆಗಳಿರುವ, ಅತಿಥಿಗೃಹ, ಕುದುರೆ ಲಾಯಗಳಿರುವಂಥ ವಿಚಿತ್ರ ಗೋರಿಯನ್ನೇಕೆ ಕಟ್ಟಿಸಿದ ಎಂದೂ ಅನಿಸುತ್ತದೆ.
ಓಕ್‌ರಂತೆಯೇ ಮೌಲಿ ಮೋಹಿಯುದ್ದೀನ್ ಎಂಬವರು ಕೂಡ ತಾಜ್‌ನ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ಅವರು ತಮ್ಮ taj and its environmentsಎಂಬ ಸಂಶೋಧನಾ ಗ್ರಂಥದಲ್ಲಿ it is irregularly aligned(ಅಸ್ತವ್ಯಸ್ತವಾಗಿದೆ ) ಎಂದು ಬರೆದಿದ್ದಾರೆ.ಆದರೆ ಅದರ ವಾತಾವರಣವಷ್ಟೇ ಅಲ್ಲದೆ ತಾಜ್‌ನ ಬಗೆಗಿರುವ ಎಲ್ಲಾಕಲ್ಪನೆಗಳೂ ಅಸ್ತವ್ಯಸ್ಥ, ಗೋಜಲು ಎಂಬುದು ಅಧ್ಯಯನದ ಹೊತ್ತಲ್ಲಿ ತೆರೆದುಕೊಳ್ಳುವ ಸತ್ಯ. ಮೊದಲನೆಯದಾಗಿ ತಾಜ್‌ಮಹಲ್ ಎಂಬ ಹೆಸರೇಅವಾಸ್ತವ. ಷಹಜಹಾನ್ ತನ್ನ ಹೆಂಡತಿಯ ಹೆಸರಲ್ಲಿ ಅದನ್ನು ಕಟ್ಟಿದರೆ ಅದು ಮಮ್ತಾಜ್ ಮಹಲ್ ಆಗಿರಬೇಕಿತ್ತಲ್ಲವೇ ? ಹಾಗಾದರೆ ಈ ತಾಜ್ಎಂಬುದು ಎಲ್ಲಿಂದ ಬಂತು ? ಅದಕ್ಕೆ ಇಂದಿನ ಕಾಲವೇ ಸ್ಪಷ್ಟ ಉತ್ತರಗಳನ್ನುಹೇಳುತ್ತವೆ. ಒಂದೊಮ್ಮೆ ಆಗ್ರಾದಲ್ಲಿ ಬಹುಸಂಖ್ಯಾತರಾಗಿದ್ದವರು ಇಂದೂ
ಇರುವ ಜಾಟ್ ಸಮುದಾಯದವರು. ಅವರು ಶಿವನನ್ನು ಇಂದಿಗೂ ತೇಜಾಜಿ ಎಂದೂ, ಶಿವಲಿಂಗವನ್ನು ತೇಜಲಿಂಗವೆಂದೂ ಕರೆಯುತ್ತಾರೆ.ಹಾಗೆ ಅವರಿಗೆ ಶಿವಾಲಯವೆಂದರೆ ತೇಜಮಂದಿರ. ಹಾಗೆ ಇದ್ದ ತೇಜೋಮಹಾಲಯದ ಪರಿವರ್ತಿತ ರೂಪವೇ ಇಂದಿನ ತಾಜ್ ಮಹಲ್ ಎಂಬುದು ಸತ್ಯನಿಷ್ಠ ಇತಿಹಾಸಕಾರರು ಮಂಡಿಸುವ ವಾದ. ಈ ತೇಜೋಮಹಾಲಯದಲ್ಲಿದ್ದ ತೇಜಾಜಿ (ಶಿವ)ಯೇ ಆಗೇಶ್ವರ ಮಹಾರಾಜ ಎಂದೂ,ಆತನಿಂದಾಗಿಯೇ ಆ ಸ್ಥಳ ಆಗ್ರಾ ಎಂದು ಹೆಸರಾಯಿತೆಂಬ ಉಲ್ಲೇಖಗಳು ಜಾಟ್ ಇತಿಹಾಸದಲ್ಲಿರುವುದನ್ನು ಇತಿಹಾಸಕಾರರು ತೋರಿಸುತ್ತಾರೆ. ಮತ್ತುಈ ಕಟ್ಟಡ ರಾಜಾ ಮಾನಸಿಂಹನ ಅರಮನೆ ಮತ್ತು ದೇವಸ್ಥಾನ ಎರಡೂ ಆಗಿತ್ತು ಎಂದು ಓಕರೂ ಸಾಕ್ಷ್ಯಗಳನ್ನು ಒದಗಿಸುತ್ತಾರೆ. ಈ ಹಿನ್ನೆಲೆಯಲ್ಲಿ ಸಂಶೋಧನೆ ಕೈಗೊಳ್ಳುವ ಸಂಶೋಧಕರೆಲ್ಲರೂ ಇಂದಿನ ತಾಜ್‌ನ ಮುಂದೆ ಬಂದಾಗ ಹೌಹಾರಲೇ ಬೇಕು. ಏಕೆಂದರೆ ತಾಜ್‌ಮಹಲ್‌ನಲ್ಲಿರುವಹಲವಾರು ಕೋಣೆಗಳನ್ನು ಇಂದು ಮುಚ್ಚಲಾಗಿದೆ. ಪ್ರೇಮ ಸೌಧದಲ್ಲಿ ಈ ಗೌಪ್ಯತೆಯೇಕೆ? ಮುಸಲ್ಮಾನರಿಗೆ ನಿಷಿದಟಛಿವಾದ ಸಂಗೀತ ಖಾನೆ ಮತ್ತು ಹೊರ ಆವರಣದಲ್ಲಿ ಗೋಶಾಲೆ ಏಕೆ ? ಇವತ್ತಿಗೂ ತಾಜ್ ಆವರಣದಲ್ಲಿ ಪಾರಿಜಾತದ ಗಿಡಗಳು ಇವೆಯಲ್ಲಾ ಏಕೆ ? ಅಲ್ಲದೆ ಉತ್ತರ ಪ್ರದೇಶದ ಬರ್ಹಾಂಪುರ ಎಂಬಲ್ಲಿ ಕೂಡ ಇದೇ ಷಹಜಹಾನ್‌ನ ಇದೇ ಹೆಂಡತಿ ಮಮ್ತಾಜಳದ್ದೇ ಎನ್ನಲಾಗುವ ಗೋರಿ ಇದೆಯಲ್ಲಾ. ಹಾಗಾದರೆ ತಾಜ್‌ನಲ್ಲಿರುವುದೇನು ?ಗೋರಿಯ ಒಳಗೆ ಒಳಮಾರ್ಗಗಳು, ಸುರಂಗಗಳ ಆವಶ್ಯಕತೆ ಏನು ? ಈ ಎಲ್ಲಾ ಪ್ರಶ್ನೆಗಳಿಗೆ ಷಹಜಹಾನ್ ಹೆಂಡತಿಗೆ ಕಟ್ಟಿಸಿದ ಗೋರಿ ಎಂಬ ಉತ್ತರಸಮಾಧಾನ ನೀಡಲಾರದು. ಸಾವಿರಾರು ಜನರು ೨೨ ವರ್ಷ ಕಾಲ ಕೆಲಸ ಮಾಡಿ ತಾಜನ್ನು ನಿರ್ಮಿಸಿದರು ಎಂಬ ಕತೆಯನ್ನು ಸಾಮಾನ್ಯ ಒಬ್ಬ ಮೇಸ್ತ್ರಿಯೂ ಸಂದೇಹಿಸಿ ನೋಡಬಲ್ಲನಾದರೆ ಮಹಾ ಮಹಾ ಇತಿಹಾಸಕಾರರೇಕೆ ಸಂದೇಹಿಸಲು ಅಶಕ್ತರು ? ಒಂದು ಐತಿಹಾಸಿಕ ಕಟ್ಟಡದ ಪೂರ್ವಾಪರವನ್ನು ಸಂಪೂರ್ಣ ಅಧ್ಯಯನ ಮಾಡಿ ಅದರಲ್ಲಿ ಕಿಂಚಿತ್ತು ಸಂಶಯ ಬರದಂತಿದ್ದರೆ ಮಾತ್ರ ಅದರ ನೈಜತೆಯನ್ನು ನಂಬಬೇಕು ಎಂದು ಇತಿಹಾಸ ಸಿದಾಟಛಿಂತಗಳು ಹೇಳುತ್ತದೆ. ಆದರೆ ತಾಜ್‌ನ ಅಡಿಗಡಿಗೆ ಗೊಂದಲಗಳಿದ್ದರೂ ಅದು ಹೇಗೆ ವಿಶ್ವದ ಅದ್ಭುತಗಳಾಗಿ ಕಂಗೊಳಿಸುತ್ತದೆ ? ಒಮ್ಮೆ ತಾಜ್‌ನ ಒಳಾವರಣದಲ್ಲಿ ದೊರೆತ ಮರದ ಹಲಗೆಯೊಂದನ್ನು ಕಾರ್ಬನ್ ಪರೀಕ್ಷೆಗಾಗಿ ಅಮೆರಿಕಾದ ಪ್ರಯೋಗಶಾಲೆಗೆ ಕಳುಹಿಸಲಾಯಿತು. ಸತತ ೧೪ ಪರೀಕ್ಷೆಗಳ ತರುವಾಯವೂ ಅದು ಷಹಜಹಾನನಿಗಿಂತ ೩೦೦ ವರ್ಷಗಳು ಪುರಾತನ ಎಂದು ಸಾಬೀತಾಯಿತು. ಈ ಹಿನ್ನೆಲೆಯಲ್ಲಿ ಸಂಶೋಧನೆ ಕೈಗೊಂಡ ಪಾಶ್ಚಾತ್ಯರಿಬ್ಬರು ತಾಜ್‌ನ ಅಡಿಪಾಯ ಹಿಂದೂ ಶೈಲಿಯದ್ದು ಎಂದು ಹೇಳಿ ತಾಜ್‌ನ ಮೂಲದ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದರು.
ಆದರೂ ತಾಜ್ ಇಂದೂ ಪ್ರೇಮ ಸಂಕೇತವಾಗಿ,ವಿಶ್ವದೆಲ್ಲೆಡೆಯ ಪ್ರವಾಸಿಗರ ನೆಚ್ಚಿನ ತಾಣವಾಗಿ, ದೇಶದ ಹೆಮ್ಮೆಯಾಗಿ ಕಂಗೊಳಿಸುತ್ತಲೇ ಇದೆ.ಒಂದು ವೇಳೆ ತಾಜ್‌ಮಹಲ್ ಷಹಜಹಾನನ ಹೆಂಡತಿಯ ಗೋರಿಯಲ್ಲಎಂದು ಜನಜನಿತವಾಗಿರದಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು ಎಂದು ಒಮ್ಮೆ ಯೋಚಿಸಬೇಕು . ಇತಿಹಾಸದ ಶೋಧ ಪ್ರಸ್ತುತವಾಗುವುದು ಮತ್ತು ಸತ್ಯದ ಅನಾವರಣ ಅಗತ್ಯದ ಕಾರ್ಯವಾಗುವುದು ಇಂಥ ಹೊತ್ತಿನಲ್ಲಿ. ಒಂದು ವೇಳೆ ಹಾಗೇನಾದರೂ ಆಗಿ ಹೋಗಿದ್ದರೆ ಇಂದು ತೇಜೋ ಮಹಾಲಯ ವಿಶ್ವದ ಅದ್ಭುತಗಳ ಪಟ್ಟಿಯಿಂದ ಬಿಡಿ, ಆಗ್ರಾದ ಆಡಳಿತ ಪಾಲಿಕೆಯಿಂದಲೂ ಸಹ ನಿಕೃಷ್ಟವಾಗಿ ಉಳಿದು ಹೋಗುತ್ತಿತ್ತೇನೋ. ಪಾಳು ಬಿದ್ದಿದ್ದ ಸೋಮನಾಥನೇ ಜೀರ್ಣೋದಾಟಛಿರಕ್ಕಾಗಿ ಶತಮಾನಗಳ ಕಾಲ ಕಾಯಬೇಕಾಯಿತು ಎಂಬ ವಾಸ್ತವ ಕಣ್ಣೆದುರು ಇರುವಾಗ ತೇಜೋನಾಥ ಆಗ್ರೇಶ್ವರನಿಗೆ ಯಾವ ಗತಿ ಬರುತ್ತಿತ್ತು ಎಂಬುದರ ಅಂದಾಜು ಆಗುತ್ತದೆ. ಇಂದು ತಾಜ್‌ನ ಮುಂದೆ ವಿದೇಶಿ ಗಣ್ಯರ ಫೋಟೋ ಸೆಷನ್ ನಡೆಯಬಹುದು. ತಾಜ್‌ಗಾಗಿ ಯಮುನೆ ಅಷ್ಟಗಲ ಶುದಟಛಿವಾಗಬಹುದು ಮತ್ತು ತಾಜ್‌ನ ಹೊಳಪಿನ ಮುಂಜಾಗರೂಕತೆಗೆ ಕಾರ್ಖಾನೆಗಳು ಮುಚ್ಚಬಹುದು. ಇದರೊಟ್ಟಿಗೆ ಇತಿಹಾಸದ ಒಂದು ಶಾಶ್ವತ ಸತ್ಯವೂ ಮುಚ್ಚಿಹೋಗಿಲ್ಲವೇ ? ಈ ಮುಚ್ಚಿ ಹೋಗುವಿಕೆ ಒಂದೆಡೆ ಅಸಹಾಯಕ ಇನ್ನೊಂದೆಡೆ ನೀರಸ ಸಮಾಜವೊಂದರ ಸಂಕೇತವಲ್ಲವೇ ? ಭ್ರಮಾಧೀನ ಸಮಾಜ ನಿರ್ಮಾಣದ ಹುನ್ನಾರವಲ್ಲವೇ? ಅಥವಾ ಶತಮಾನಗಳ ಹಿಂದೆ ಘಟಿಸಿಹೋದ ಒಂದು ಘಟನೆಯನ್ನುಮೇಲೆತ್ತದಿರುವುದೇ ಒಳ್ಳೆಯದೇ ?
ಆದರೆ ಶತಮಾನಗಳ ಹಿಂದಿನ ಘಟನೆಯನ್ನು ಮೇಲೆತ್ತದಿರುವುದು ಪುರಾತನ ಕ್ರೌರ್ಯವನ್ನು, ಗುಲಾಮಗಿರಿಯನ್ನು ಒಪ್ಪಿಕೊಂಡಂತೆ ಮತ್ತು ಪ್ರಚ್ಛನ್ನವಾಗಿ ಅದರ ಮುಂದುವರಿಕೆ ಕೂಡ. ಸ್ವಾಭಿಮಾನಹೀನ ಸಮಾಜಕ್ಕೆ ಅಡಿಗಲ್ಲು ಇಟ್ಟಂತೆ. ಆದ್ದರಿಂದ ಇಂದೂ ಮುಂದೂ‘ವಾವ್ ತಾಜ್’ ಎಂದು ಅವಶ್ಯ ಉದ್ಗರಿಸೋಣ, ಆದರೆ ಗೋರಿಯಾಗುವ ಸಾಧ್ಯತೆಗಳನ್ನು ಒಮ್ಮೆಪರಿಶೀಲಿಸೋಣ. ಸೌಂದರ್ಯವನ್ನು ಆಸ್ವಾದಿಸೋಣ ಆದರೆ ಪ್ರೇಮಸೌಧ ಎಂದು ನುಡಿಯದಿರೋಣ. ಏಕೆಂದರೆ ಮಸಣದ ಹೂವು ಮುಡಿಯಲಲ್ಲ.ಅದು ಸಲ್ಲ, ಉದ್ಯಾನದ ಹೂವಿನಂತೆ ಅದರ ಪರಿಮಳವೂ ಸವಿಯಲಲ್ಲ.ಕಾವ್ಯಗಳು ಹುಟ್ಟುವುದು ಮಸಣದ ಹೂವಿನ ಮೇಲೆಯೇ ಹೆಚ್ಚು
ಆಗಿರಬಹುದು. ಆದರೆ ಉದ್ಯಾನದ ಹೂವನ್ನು ಮರೆಯದಿರೋಣ. ಅಂದರೆಗೋರಿಯನ್ನೇ ಸಂಕೇತವಾಗಿಸಿದ ಪ್ರೇಮ ನಮಗೆ ಆದರ್ಶವಾಗದಿರಲಿ . ಶಕುಂತಳೆಯ ಉಂಗುರ ನೀರಲ್ಲಿ ಬಿದ್ದು ಹೋಗಿದ್ದು , ದುಶ್ಯಂತ ಆಕೆಯನ್ನುಮರೆತುಹೋದದ್ದು ಮುಂತಾದ ಕತೆಗಳಲ್ಲಿ ಮೌಲ್ಯಯುತ ಪ್ರೇಮವನ್ನು ಅರಸೋಣ. ಪ್ರೇಮಕ್ಕೊಂದು ಆದರ್ಶವಿದೆ. ವಾಹ್ ತಾಜ್ ಎನ್ನುವ ಮುನ್ನ
ಇವೆಲ್ಲವನ್ನೂ ಯೋಚಿಸೋಣ.

No comments:
Post a Comment