
ಒಂದು ಕಾಲವಿತ್ತು. ಉರಿಯ ನಾಲಿಗೆಯ ಸುಬ್ಬಯ್ಯ ಮಾತನಾಡಿದರೆಂದರೆಇಡೀ ಕರ್ನಾಟಕ ಅದನ್ನು ಆಲಿಸುತ್ತಿತ್ತು. ವಿಧಾನಸೌಧದಲ್ಲಿ ಸಂಚಲನ ಮೂಡುತ್ತಿತ್ತು. ಸರಕಾರ ಸುಬ್ಬಯ್ಯರ ಬಾಯಿಗೆ ಆದಷ್ಟೂ ಬೀಳದಿರುವಂತೆಎಚ್ಚರವಹಿಸುತ್ತಿತ್ತು. ಪ್ರಖಂಡ ತರ್ಕ. ಪ್ರಚಂಡ ಭಾಷೆ, ಹರಿತ ನಾಲಿಗೆ.ಹೇಳಬೇಕಾದುದನ್ನು ಹೇಳಿಯೇ ತೀರುವ ಹಠ. ಅಪ್ರತಿಮ ಧೈರ್ಯದಸುಬ್ಬಯ್ಯ ಏರಿದ ವೇದಿಕೆ ವಿಫಲವಾದ ಉದಾಹರಣೆಗಳೇ ಅಂದು ಇರಲಿಲ್ಲ. ಏಕೆಂದರೆ ರಾಜಕಾರಣದ ನಿರ್ಣಯಗಳನ್ನು ಮತ್ತು ಸರಕಾರದಧೋರಣೆಗಳನ್ನು ಸುಬ್ಬಯ್ಯನವರಂತೆ ಯಾರಿಗೂ ಟೀಕಿಸಲಾಗುತ್ತಿರಲಿಲ್ಲ ಮತ್ತುಟೀಕಿಸಲೂ ಇಲ್ಲ.ಒಮ್ಮೆ ಕೊಡಗಿನ ಗೋಣಿಕೊಪ್ಪದಲ್ಲಿ ಯಾವುದೋ ಒಂದು ವೇದಿಕೆಯಲ್ಲಿದ್ದಪ್ರಭಾವಿ ರಾಜಕಾರಣಿ ಮತ್ತು ಮಾಜಿ ಕೇಂದ್ರ ಸಚಿವರಾದ ಸಿ.ಎಂ. ಪೂಣಚ್ಚನವರನ್ನು ಸುಬ್ಬಯ್ಯ ಟೀಕಿಸಿದ ರೀತಿಯನ್ನು ಇಂದಿಗೂ ಜನ ನೆನಪು ಮಾಡಿಕೊಳ್ಳುತ್ತಾರೆ. ಕೊಡಗನ್ನು ಮೈಸೂರು ಸಂಸ್ಥಾನಕ್ಕೆ ವಿಲೀನಗೊಳಿಸಿದಪೂಣಚ್ಚನವರ ಕ್ರಮದಬಗ್ಗೆ ಪ್ರಶ್ನೆ ಮಾಡುವವರೇ ಕೊಡಗಲ್ಲಿ ಇಲ್ಲದ ಸಮಯದಲ್ಲಿ ಸುಬ್ಬಯ್ಯ ಪೂಣಚ್ಚನವರತ್ತ ಬೊಟ್ಟು ಮಾಡಿ“ಪೂಣಚ್ಚನವರು ಬೈನೇ ಮರವನ್ನುಗುತ್ತಿಗೆ ಕೊಟ್ಟ ಹಾಗೆ ಕೊಡಗನ್ನು ಮೈಸೂರಿಗೆ ಗುತ್ತಿಗೆ ಕೊಟ್ಟಿದ್ದಾರೆ" ಎಂದುಗುಡುಗಿದ್ದರು.ಅಷ್ಟರವರೆಗೆ ವಿಷಯ ಹೀಗೂ ಉಂಟೇ ಎಂದು ಯಾರಿಗೂಗೊತ್ತಿರಲಿಲ್ಲ. ಹಾಗೆಯೇ ೧೯೬೯ರಲ್ಲಿ ಸುಳ್ಯದಲ್ಲಿ ‘ಭಾರತೀಯ ಜನಸಂಘ’ದವೇದಿಕೆಯಲ್ಲಿ ‘ಅಕ್ಕಿ ಸಮ್ಮೇಳನ’ವನ್ನುದ್ದೇಶಿಸಿ ಮಾತಾಡಿದ ಸುಬ್ಬಯ್ಯನವರಮಾತನ್ನು ಜನ ಇನ್ನೂ ಮರೆತಿಲ್ಲ. ಹೀಗೆ ಹತ್ತು ಹಲವು ಚಳವಳಿಗಳಲ್ಲಿ ಪಾಲ್ಗೊಂಡ ಸುಬ್ಬಯ್ಯನವರನ್ನು ತುರ್ತು ಪರಿಸ್ಥಿತಿಯ ಸಮಯದಲ್ಲಿ ಸರಕಾರ ಮೀಸಾ ಕಾಯಿದೆಯಡಿ ಬಂಸಿ ಜೈಲಿಗೆ ಕಳುಹಿಸಿತ್ತು.ಸುಬ್ಬಯ್ಯನವರನ್ನು ದಮನಿಸುವ ಯಾವ ಅವಕಾಶವನ್ನೂ ಅಂದಿನಆಡಳಿತ ಕಳೆದುಕೊಳ್ಳುತ್ತಿರಲಿಲ್ಲ. ಅಂಥ ಸುಬ್ಬಯ್ಯನವರು ಜೈಲಿನಿಂದಲೇಚಳವಳಿ ಸಂಘಟಿಸತೊಡಗಿದರು. ಪರಿಣಾಮ ಜೈಲಿನಿಂದ ಹೊರಬಂದಾಗ ಸುಬ್ಬಯ್ಯನವರು ಹೇಗಿದ್ದರೆಂದರೆ ಐರನ್‌ಲೇಡಿ ಇಂದಿರಾಗಾಂಯ ವಿರುದಟಛಿ ಕರ್ನಾಟಕದಲ್ಲಿ ಚುನಾವಣೆಯಲ್ಲಿ ನಿಲ್ಲಬಲ್ಲ ಏಕೈಕ ಸಮರ್ಥ ನಾಯಕರೆಂದರೆಸುಬ್ಬಯ್ಯ ಮಾತ್ರ ಎಂಬಷ್ಟು ಬೆಳೆದುಬಿಟ್ಟಿದ್ದರು. ರಾಜಕಾರಣಿಯೊಬ್ಬನಲ್ಲಿರಬೇಕಾದ ಪ್ರಾಮಾಣಿಕತೆ, ಕಾಳಜಿಗಳಿಗೆ ಪ್ರತಿರೂಪದಂತೆ, ಸೋದಾಹರಣಉದಾಹರಣೆಯಂತೆ ಹೊರಹೊಮ್ಮಿದ್ದರು. ಸಿದಾಟಛಿಂತ ನಿಷ್ಠ ವ್ಯಕ್ತಿಯೊಬ್ಬ ಯಾವ ರೀತಿಯಲ್ಲಿ ಬೆಳೆಯಬಹುದು ಎಂಬುದಕ್ಕೂ ಸುಬ್ಬಯ್ಯ ಸಾಕ್ಷಿಯಾಗಿದ್ದರು ಅಥವಾ ಒಂದು ತತ್ತ್ವ, ಸಿದ್ದಾಂತ ಸುಬ್ಬಯ್ಯನವರನ್ನು ಹಾಗೆ ಬೆಳೆಸಿತ್ತು. ಆಸಿದಾಟಛಿಂತ ಸುಬ್ಬಯ್ಯನವರ ಪ್ರತಿಭೆಗೆ ಮತ್ತಷ್ಟು ಶಕ್ತಿ ತುಂಬಿತ್ತು. ಆ ಸಿದಾಟಛಿಂತ ಸುಬ್ಬಯ್ಯನಂಥಾ ವ್ಯಕ್ತಿತ್ವಕ್ಕೆ ಹೊಂದಿಕೆಯಾಗುವಂಥದ್ದೂ ಆಗಿತ್ತು. ಹಾಗಾಗಿಸುಬ್ಬಯ್ಯ ದಿನೇ ದಿನೇ ಬೆಳೆದು ಬಂದರು. ಕಾಂಗ್ರೆಸಿನ ಸೋಗಲಾಡಿತನವನ್ನುತೀಕ್ಷ್ಣವಾಗಿ ಟೀಕಿಸಿದರು. ಓರ್ವ ರಾಜಕಾರಣಿಯಾಗಿದ್ದರೂ ಕೂಡ ವೀರಾಜಪೇಟೆಯ ಬಹಿರಂಗ ವೇದಿಕೆಯಲ್ಲಿ ನಿಂತು “ಮಾಪಳೆ ಕುಟ್ಟಿಗಳು ಕೊಡಗನ್ನು ಬಿಟ್ಟು ತೊಲಗಿ" ಎಂದು ಅಬ್ಬರಿಸಿದ್ದರು. ಬಹುಶಃ ಹೀಗೆ ಗುಡುಗಿದ ಏಕೈಕ ಮತ್ತು ಕೊನೆಯ ರಾಜಕಾರಣಿ ಸುಬ್ಬಯ್ಯನಿರಬೇಕು. ಹೀಗೆಹೇಳಬೇಕಾದುದನ್ನು ಹೇಳಲು ಅಂಜಿಕೆ ಇಲ್ಲದ ಸುಬ್ಬಯ್ಯ ಅನಂತರ ಭಾರತೀಯಜನತಾಪಕ್ಷದ ಪ್ರಥಮ ರಾಜ್ಯಾಧ್ಯಕ್ಷರಾದುದರಲ್ಲಿ ಆಶ್ಚರ್ಯವಿರಲಿಲ್ಲ. ಮುಂದೆವಿಧಾನಪರಿಷತ್ತಿನ ನಾಯಕರೂ ಆದರು.ಅಕಾರವೆಂಬುದು ತತ್ವ-ಸಿದಾಟಛಿಂತಗಳೊಟ್ಟಿಗೆ ಮಾಡಿಕೊಳ್ಳುವ ಹೊಂದಾಣಿಕೆ ಅಥವಾ ರಾಜೀಪಂಚಾಯತಿ ಎಂಬುದು ಕ್ರಮೇಣ ಸುಬ್ಬಯ್ಯನವರರಾಜಕಾರಣದಲ್ಲೂ ಕಂಡುಬರಲಾರಂಭಿಸಿತು. ಅಕಾರ ರಾಜಕಾರಣವೆಂಬಬಚ್ಚಲು ಮನೆಯನ್ನು ಶುದಟಛಿ ಮಾಡಲು ಹೋದ ಸುಬ್ಬಯ್ಯ ತಾವೇ ಕಾಲುಜಾರಿ ಬಿದ್ದರು. ಮತ್ತೆಂದೂ ಏಳಲಾರದಷ್ಟು ದೊಪ್ಪನೇ ಬಿದ್ದರು. ಎಷ್ಟೆಂದರೆತತ್ತ್ವ-ಸಿದಾಟಛಿಂತಗಳು ಅಕಾರಕ್ಕೆ ಬರುವವರೆಗೆ ಮಾತ್ರವೇ ಎಂಬಷ್ಟು ಜನ ಅಚ್ಚರಿಯಿಂದ ನೋಡುವಷ್ಟು . ನಾವು ಆರಾಸುತ್ತಿದ್ದ, ನಾವುಮುತ್ತಿಕೊಳ್ಳುತ್ತಿದ್ದ, ಬೆಂಕಿ ಉಂಡೆ ಉಗುಳುತ್ತಿದ್ದ, ನಮ್ಮ ಪ್ರೀತಿಯ ನಾಯಕಇದೇ ಸುಬ್ಬಯ್ಯನಾ? ಎಂದು ವಿಶಾಲ ಕರ್ನಾಟಕ ಸಂದೇಹಪಡುವ ಮಟ್ಟಕ್ಕೆಸುಬ್ಬಯ್ಯ ಇಳಿದುಹೋದರು. ಸಿದಾಟಛಿಂತಗಳನ್ನು ಬಲಿಕೊಟ್ಟ ಸುಬ್ಬಯ್ಯನವರಕಾರ್ಯವೈಖರಿಯಲ್ಲಿ ವಿಪರ್ಯಾಸಗಳು ಕಂಡು ಬರತೊಡಗಿದವು. ಅಂದು ಸರ್ವಾಕಾರದ ವಿರುದಟಛಿ ಎದ್ದು ನಿಂತಿದ್ದ ಸುಬ್ಬಯ್ಯ ಕ್ರಮೇಣ ಬಿಜೆಪಿಯಅಕಾರವನ್ನೂ ಕೇಂದ್ರೀಕರಿಸಿಕೊಳ್ಳಲು ತೊಡಗಿದರು. ಎರಡನೇ ಬಾರಿಗೂರಾಜ್ಯಾಧ್ಯಕ್ಷರಾದರು. ಕೈಯನ್ನೂ ಹೊಲಸು ಮಾಡಿಕೊಂಡರು. ಭಾರತೀಯಜನತಾಪಕ್ಷದ ಹಿರಿಯ ಮತ್ತು ನಿಷ್ಠಾವಂತ ನಾಯಕರಾದ ಕಾಶೀರಾವ್ ಮತ್ತುಬಾವೂರಾವ್ ದೇಶಪಾಂಡೆಯಂಥವರ ವಿರುದಟಛಿವೂ ಸುಬ್ಬಯ್ಯ ಬಹಿರಂಗ ಹೇಳಿಕೆ ನೀಡಲಾರಂಭಿಸಿದರು. ಪಕ್ಷವನ್ನು ಸುಬ್ಬಯ್ಯ ಯಾವ ಸ್ಥಿತಿಗೆ ತಂದು ಮುಟ್ಟಿಸಿದರೆಂದರೆ ಅಂದಿನ ಪತ್ರಿಕೆಗಳು “ಬಿಜೆಪಿಯಲ್ಲಿ ಚಾಕೂ ಚೂರಿ ಸಂಸ್ಕೃತಿಆರಂಭವಾಗಿದೆ" ಎಂದು ಬರೆದವು. ಸುಬ್ಬಯ್ಯ ತಾವೇ ಒಳಜಗಳವನ್ನುಸೃಷ್ಟಿಸಿದರು. ಅರ್ಥಾತ್ ತಾವೇರಿದ ಜನಸಂಘದ ಏಣಿಯನ್ನೇ ತುಳಿಯಲುಯತ್ನಿಸಿದರು. ಅಷ್ಟಾದರೂ ಕೇಂದ್ರ ನಾಯಕರಾದ ಆಡ್ವಾಣಿ ಮತ್ತುವಾಜಪೇಯಿಯವರು ಸುಬ್ಬಯ್ಯನವರನ್ನು ಉಳಿಸಿಕೊಳ್ಳಲು ಯತ್ನಿಸಿದ್ದರು.ಆದರೆ ದಿನೇ ದಿನೇ ಸುಬ್ಬಯ್ಯರ ಆಟಾಟೋಪ ಅತಿಯಾಗುತ್ತಿದ್ದಂತೆ ಒಂದುದಿನ ಸುಬ್ಬಯ್ಯ ಪಕ್ಷದಿಂದ ಉಚ್ಚಾಟನೆಗೊಂಡರು.ಪ್ರಬಲ ಸಿದಾಟಛಿಂತವೊಂದು ವ್ಯಕ್ತಿಯನ್ನು ಬೆಳೆಸಲೂ ಬಹುದು ಮತ್ತುಸಿದಾಟಛಿಂತ ಮರೆತವನನ್ನು ಸಿದಾಟಛಿಂತ ಪಾತಾಳಕ್ಕೂ ತಳ್ಳಬಹುದೆಂದು ಅನಂತರ ಸಿದಟಛಿಗೊಂಡಿತು. ಸುಬ್ಬಯ್ಯರ ವಿಷಯದಲ್ಲಿ ಅದು ಅಕ್ಷರಶಃ ಸಂಭವಿಸಿತು. ಸಿದಾಟಛಿಂತನಿಷ್ಠರು ರಾಜಕಾರಣವೆಂಬುದು ಬಚ್ಚಲು ಮನೆಯೇ ಸರಿ ಎಂಬ ತೀರ್ಮಾನಕ್ಕೆ ಬಂದರು. ಮುಂದೆ ಸುಬ್ಬಯ್ಯ ‘ಕನ್ನಡನಾಡು’ ಕಟ್ಟಿದರು. ಡಾ. ರಾಜ್‌ರಿಗೆ “ನೀವುಸಾರಥಿಯಾಗಿ, ನಾನು ಕುದುರೆಯಾಗುವೆ" ಎಂದು ಬಡಬಡಿಸಿದರು.ಎನ್.ಟಿ. ರಾಮರಾವ್‌ನ ತೆಲುಗುದೇಶಂನ ಕಾಪಿ ಮಾಡಲು ಹೋದರು. ಕೈಹತ್ತದೆ ಕುಳಿತರು. ಅನಂತರ ಕಾಂಗ್ರೆಸ್ ಸೇರಿದರು. ಮುಂದೆ ದಳ ಎಂದರು.ರೈತ ಸಂಘಕ್ಕೆ ಬಂದರು. ಮರಳಿ ಕಾಂಗ್ರೆಸ್‌ಗೂಡು ಸೇರಿದರು. ಎಲ್ಲೂನೆಲೆಯಿಲ್ಲದೆ ‘ರಾಜಕೀಯದ ಅತೃಪ್ತ್ತ ಆತ್ಮ’ ಎನಿಸಿಕೊಂಡರು. ಮುಂದೆ ಯಾವಪಕ್ಷವೂ ಸುಬ್ಬಯ್ಯರಿಗೆ ಮಣೆ ಹಾಕಲಿಲ್ಲ. ಕಿಟಕಿ ತೆರೆಯಿತಷ್ಟೇ ಹೊರತುಬಾಗಿಲು ತೆರೆಯಲಿಲ್ಲ. ಕಾರಣ, ಬಿಜೆಪಿಯಂಥಾ ಪಕ್ಷದ ಸಿದಾಟಛಿಂತವನ್ನು ಒದ್ದುಬಂದವರನ್ನು ನಂಬುವುದಾದರೂ ಹೇಗೆಂಬ ಹೆದರಿಕೆ. ಪರಿಣಾಮ ಸುಬ್ಬಯ್ಯ ಏಕಾಂಗಿಯಾದರು. ಎಲ್ಲವೂ ಇದ್ದೂ ಏನೂ ಇಲ್ಲದಂತಾದರು.ಒಂದೊಮ್ಮೆ ಮದುವೆಗಳಲ್ಲಿ, ಊರ ಜಾತ್ರೆಗಳಲ್ಲಿ ಸುಬ್ಬಯ್ಯರ ಸುತ್ತಲೂ ಜನಮುತ್ತಿಕೊಳ್ಳುತ್ತಿದ್ದರೆ ಇಂದು ಸುಬ್ಬಯ್ಯ ಎಂದಾಗ ಜನ ಉಗಿಯುವಷ್ಟಕ್ಕೆ ತಮ್ಮನ್ನು ತಾವು ಇಳಿಸಿಕೊಂಡರು. ವೇದಿಕೆಗಳಲ್ಲಿ ಗುಡುಗುತ್ತಿದ್ದವರುವೇದಿಕೆಗಾಗಿ ಹಂಬಲಿಸುವಂತಾದರು. ಸಮುದ್ರದಂಥ ರಾಜಕಾರಣದಲ್ಲೂಸುಬ್ಬಯ್ಯ ಬಟಾಬಯಲಿನಲ್ಲಿ ನಿಂತಂತೆ ಭಾಸವಾದರು. ಕೊನೆಗೆ ದುರಂತನಾಯಕ ಎಂಬ ಅನುಕಂಪದಿಂದಲೂ ವಂಚಿತರಾದರು. ಸುಬ್ಬಯ್ಯಧರ್ಮನಿಂದನೆಯಂಥಾ ಕೆಲಸಕ್ಕೂ ತನ್ನನ್ನು ತೊಡಗಿಸಿಕೊಂಡರು. ಅಕ್ಷಮ್ಯವಾದಂತಹ ಚಟುವಟಿಕೆಗಳಲ್ಲಿ ನಿರತನಾದರು. ಅಂದು ತೊಲಗಿಎಂದವರ ಮನೆಯಂಗಳದಲ್ಲೇ ಕಾಣಿಸಿಕೊಂಡರು. ಅಕಾರ, ವೇದಿಕೆಗಾಗಿತಾನು ಏನನ್ನಾದರೂ ಮಾಡಬಲ್ಲೆ ಎಂಬಂತೆ ಸುಬ್ಬಯ್ಯ ನಡಕೊಂಡರು.ಅಂದು ಐರನ್ ಲೇಡಿಯ ಎದುರು ಚುನಾವಣೆ ರ್ಸ್ಪಸಬಲ್ಲ ಸುಬ್ಬಯ್ಯ ಎಂಥಾಪ್ರಪಾತಕ್ಕೆ ಬಿದ್ದರೆಂದರೆ ತನ್ನ ಊರು ಹುದಿಕೇರಿಯ ಗ್ರಾಮ ಪಂಚಾಯತಿಗೆರ್ಸ್ಪಸಿದರೂ ಠೇವಣಿ ಕಳೆದುಕೊಳ್ಳುವ ಗ್ಯಾರಂಟಿಯನ್ನು ತನ್ನೂರಿನ ಓರ್ವಸಾಮಾನ್ಯ ಮತದಾರನೂ ಕೊಡಬಲ್ಲವನಂತಾಗಿಹೋದರು. ಸುಬ್ಬಯ್ಯ ಮಾಡಿದ ಕಿತಾಪತಿಗೆ ಜನ ಅಷ್ಟಕ್ಕೆ ಬಿಟ್ಟಿದ್ದೇ ದೊಡ್ಡದು. ಅದು ಸಭ್ಯಸಮಾಜವೊಂದರ ಲಕ್ಷಣ. ಏಕೆಂದರೆ ಸುಬ್ಬಯ್ಯರನ್ನು ಮುಟ್ಟಿ ಕೈ ಕೆಸರು ಮಾಡಿಕೊಳ್ಳಲು ಜನ ಇಷ್ಟಪಡುತ್ತಿಲ್ಲವೆಂಬಷ್ಟಕ್ಕೂ ಮುಟ್ಟಿದರು. ಪುಟ್ಟ ಜಿಲ್ಲೆ ಕೊಡಗಿನಲ್ಲಿ ಕೋಮುವಾದದ ವಿಷಬೀಜವನ್ನು ಬಿತ್ತಿದರು. ಶಾಂತಿ ಕದಡಲು ಏನೇನುಮಾಡಬೇಕೋ ಅವೆಲ್ಲವನ್ನೂ ಮಾಡಿದರು. ಎಲ್ಲವನ್ನೂ ಬಹಿರಂಗವಾಗಿಯೇಮಾಡಿದರು. ಅಂದು “ಕೆಸರಿನಲ್ಲಿ ಹುಟ್ಟಿದ ಕಮಲ" ಎಂದು ಕಾವ್ಯಾತ್ಮಕವಾಗಿಬಿಜೆಪಿಯನ್ನು ಹೊಗಳುತ್ತಿದ್ದ ಸುಬ್ಬಯ್ಯ, ಮಾಪಿಳ್ಳೆಗಳನ್ನು ಹಿಗ್ಗಾಮುಗ್ಗಾ ತೆಗಳುತ್ತಿದ್ದ ಸುಬ್ಬಯ್ಯ ೧೯೯೨ರಲ್ಲಿ ಸೋಮವಾರಪೇಟೆಯ ಕಲ್ಕಂದೂರು ಮಸೀದಿಯಲ್ಲಿ ಪಾಕಿಸ್ಥಾನ ಧ್ವಜ ಹಾರಾಡಿದ್ದನ್ನು ತಿರುಚಿ ಹೇಳಿಕೆ ನೀಡಿದರು. ಪ್ರತಿಭಟಿಸಿದವರನ್ನೇ ಕೋಮುವಾದಿಗಳೆಂದು ಜರೆದರು. ಮಸೀದಿಯಲ್ಲಿಪಾಕ್ ಧ್ವಜ ಹಾರಾಡಿದರೂ, ಆರೋಪಿಗಳನ್ನು ಬಂಸಿದರೂ ಅವರನ್ನುಸಮರ್ಥಿಸಿದರು. ಆರೋಪಿಗಳ ಪರ ವಾದಿಸಲು ಕೊಡಗಿನ ವಕೀಲರೆಲ್ಲರೂನಿರಾಕರಿಸಿದಾಗ ಕರಿಕೋಟು ಧರಿಸಿ ಸುಬ್ಬಯ್ಯ ಕೋರ್ಟ್ ಅಂಗಳದಲ್ಲಿಹಾಜರಾದರು ಮತ್ತು ಆರೋಪಿಗಳನ್ನು ಜಯಗೊಳಿಸಿದರು.ಮುಂದೆ ಸುಬ್ಬಯ್ಯ ಹಿಂತಿರುಗಿ ನೋಡಲಿಲ್ಲ. ಹಿಂದೂ ವಿರೋ ವೇದಿಕೆಗಳಲ್ಲೆಲ್ಲಾ ಕಾಣಿಸಿಕೊಳ್ಳತೊಡಗಿದರು. ಅಯೋಧ್ಯೆಯ ವಿವಾದಾತ್ಮಕ ಹಳೆ ಕಟ್ಟಡ ಧ್ವಂಸಗೊಂಡಾಗ ಮುಸ್ಲಿಮರ ಪರವಾಗಿ ಪ್ರತಿಭಟನೆಯ ಮುಂಚೂಣಿ ವಹಿಸಿದರು. “ಹಿಂದೂಗಳೆಂಬ ಹಂದಿಗಳ ಕರುಳನ್ನು ಬಗೆದು ಮುಸ್ಲಿಮರ ಕೊರಳಿಗೆ ಹಾರ ಹಾಕುವೆ" ಎಂದಬ್ಬರಿಸಿದರು. ೨೦೦೨ರಲ್ಲಿ ಪಾಲೂರು ಹರಿಶ್ಚಂದ್ರ ದೇಗುಲ ಮತಾಂಧರ ದಾಳಿಗೆ ತುತ್ತಾದಾಗ ‘ಹಿಂದೂಗಳದ್ದೇ ಕೈವಾಡ’ ಎಂದು ಹೇಳಿಕೆ ಕೊಟ್ಟು ಜಾತ್ಯತೀತ ಸಮಾವೇಶವನ್ನು ಮಡಿಕೇರಿಯಗಾಂ ಪ್ರತಿಮೆಯಡಿಯಲ್ಲೇ ನಡೆಸಿದ್ದರು. ಸತ್ಯದ ಪ್ರತಿಪಾದಕನೆದುರೇ ಸತ್ಯ ಮಕಾಡೆ ಮಲಗುವಂತೆ ಮಾಡಿದ್ದರು. ಇದೇ ಸುಬ್ಬಯ್ಯ ಕೆಲ ವರ್ಷಗಳಹಿಂದೆ ಸೋಮವಾರಪೇಟೆ ತಾಲೂಕಿನ ಹೊಸತೋಟದಲ್ಲಿ ಕಟ್ಟೆಯೊಂದರಲ್ಲಿಪ್ರತಿಷ್ಠಾಪಿಸಿದ ಭಗವಾಧ್ವಜವನ್ನು ಮುಸಲ್ಮಾನರು ಕಿತ್ತು ಹಾಕಿದಾಗಹಿಂದುಗಳನ್ನೇ ನಿಂದಿಸಿದ್ದರು ಮತ್ತು ಅನಂತರ ಇದೇ ಹೊಸತೋಟದಲ್ಲಿಭಯೋತ್ಪಾದಕ ನಜೀರನ ಹೆಜ್ಜೆ ಗುರುತುಗಳು ಕಂಡುಬಂದಾಗ ಬೆಂಗಳೂರಿನಯಾವುದೋ ಕಂಪೆನಿಯಲ್ಲಿ ಕುಳಿತು ತನಗೂ ಘಟನೆಗೂ ಸಂಬಂಧವಿಲ್ಲವೆಂದುlegal adviseನೀಡುತ್ತಿದ್ದರು. ಆಗಲೇ ಜನ ಎ.ಕೆ. ಸುಬ್ಬಯ್ಯ ಎಂದರೆಅಲ್‌ಖೈದಾ ಸುಬ್ಬಯ್ಯ ಎಂದು ಮಾತಾಡಿಕೊಂಡಿದ್ದರು.ಅಂದು ಕೊಡಗಿನಲ್ಲಿ ಟಿಪ್ಪುವಿನಿಂದ ಮಾಡಲಾಗದ ಕಾರ್ಯವನ್ನು ಸುಬ್ಬಯ್ಯಇಂದು ಮಾಡುತ್ತಿದ್ದಾರೆ. ಇಲ್ಲಿ ನಾಲಿಗೆಯೇ ಖಡ್ಗವಾಗಿದೆಯೆಂಬುದನ್ನುಬಿಟ್ಟರೆ ಹಿಂದೂ ವಿರೋಧದಲ್ಲಿ ಟಿಪ್ಪು ಮತ್ತು ಸುಬ್ಬಯ್ಯರಿಗೆ ವ್ಯತ್ಯಾಸಗಳು ಕಾಣಿಸುತ್ತಿಲ್ಲ. ಟಿಪ್ಪು ಕೊಡವರನ್ನು ಮುಸಲ್ಮಾನರನ್ನಾಗಿ ಮಾಡಿದರು. ಆದರೆಸುಬ್ಬಯ್ಯ ಮುಂದುವರಿದು ಅದೇ ಮುಸಲ್ಮಾನರನ್ನು ಹಿಂದುವಿರೋಗಳನ್ನಾಗಿ ಮಾಡಿದರು. ಹೀಗೆ ತನ್ನನ್ನು ಬೆಳೆಸಿದ ಅಥವಾ ತನಗೊಂದು ಐbಛ್ಞಿಠಿಜಿಠಿqsಯನ್ನು ಕೊಟ್ಟ ತತ್ವದ ವಿರುದಟಛಿ ನಡೆದ ಸುಬ್ಬಯ್ಯ ಆಗಾಗ್ಗೆ ಹುಚ್ಚುಹುಚ್ಚಾಗಿ ವರ್ತಿಸತೊಡಗಿದರು. ರಾಜಕೀಯ ನೆಲೆಯಿಲ್ಲದಾಗನಾಸ್ತಿಕನಾದರು. ತನ್ನೊಟ್ಟಿಗೆ ಜನರಿಲ್ಲದಾದಾಗ ವಿರೋಗಳ ಪಾಳಿ ಸೇರಿಕೊಂಡರು. ಜನ ಛೀ ಎಂದಾಗ ತನ್ನಂಥಾ ಇತರರ ಹೆಗಲಿಗೆ ಕೈಕೊಟ್ಟರು.ನಾಡಿನ ಜನರ ಆರಾಧ್ಯ ದೇವತೆ ಕಾವೇರಿ ನಿಂದೆಗೂ ಸುಬ್ಬಯ್ಯ ತೊಡಗಿದರು.ತಲಕಾವೇರಿ ತೀರ್ಥೋದ್ಭವ ಕಟ್ಟುಕಥೆ ಎಂದರು. ಅಷ್ಟಾಗುವ ಹೊತ್ತಿಗೆಸುಬ್ಬಯ್ಯನ ಜಾತಿ ಸಮುದಾಯದವರೇ ಕೊಡವನಾಗಿ ಸುಬ್ಬಯ್ಯನೊಬ್ಬಹುಟ್ಟಬಾರದಿತ್ತು ಎಂದುಕೊಂಡರು.ಅಕಾರದ ಮದ ಬುದಿಟಛಿವಂತರಿಗೆ ಹೆಚ್ಚು ಬಾಸುತ್ತದೆಯಂತೆ. ಅದರಿಂದಅವರ ಪ್ರಜ್ಞೆಯೇ ಮಂಕಾಗುತ್ತದೆಯಂತೆ. ಅಂಥವರ ಬಗ್ಗೆ ವಿಷಾದ ವ್ಯಕ್ತಪಡಿಸಬಹುದು. ದುರಂತ ನಾಯಕ ಎಂದೂ ಬಣ್ಣಿಸಬಹುದು. ಆದರೆ ಸುಬ್ಬಯ್ಯರ ವಿಷಯದಲ್ಲಿ ಹಾಗೆನ್ನುವ ಹಾಗಿಲ್ಲ. ಅವರ ತರ್ಕಕ್ಕೆ ಇಂದು ವಾದಗಳ ಹಂಗಿಲ್ಲ. ಆ ತರ್ಕಗಳಲ್ಲಿ ವಾದಗಳಾಗಿ ರೂಪುಗೊಳ್ಳುವ ಗಟ್ಟಿತನವೂ ಇಲ್ಲ. ಒಂದು ಬದಟಛಿತೆಯಿಲ್ಲ. ಹಾಗಾಗಿ ಅಕೃತತೆಯಿಲ್ಲ. ಹಾಗಾಗಿ ಇಂದಿನ ಸುಬ್ಬಯ್ಯರ ಮಾತೆಂದರೆ ಒಂದು ಅತೃಪ್ತ ಆಲಾಪವಷ್ಟೆ. ಇಂದುಕಾಂಗ್ರೆಸ್ಸಿನಲ್ಲಿದ್ದರೂ ತೃತೀಯ ರಂಗದ ಬಗ್ಗೆ ಮಾತಾಡುವಾಗ ಸುಬ್ಬಯ್ಯರಸಾಚಾತನ, ಅವಲಂಬನ, ಆಲಾಪನೆಗಳ ಬಗ್ಗೆ ಬೇರೆ ಸಾಕ್ಷಿ ಬೇಕೆ?ಮೊನ್ನೆ ಬೆಂಗಳೂರಿನಲ್ಲಿ ಸಮತಾ ಸೈನಿಕದಳ ಎಂಬ ಯಾವುದೋ ಒಂದುಸಂಘಟನೆಯೊಟ್ಟಿಗೆ ಗೋಹತ್ಯೆ ನಿಷೇಧ ಕಾನೂನನ್ನು ವಿರೋಸಲು ಸುಬ್ಬಯ್ಯಗೋಮಾಂಸದ ಪಫ್ಸ್ ತಿನ್ನುವಾಗ ಯಾಕೋ ಸುಬ್ಬಯ್ಯರ ಜಾತಕವೆಲ್ಲಾನೆನಪಾಯಿತು. ಹೇಗಿದ್ದವರು ಹೇಗಾದರು? ನಿಮಗೆ ಕೊಡವರಾಗಿ ಹುಟ್ಟಿಹಿಂದೂ ಎಂದುಕೊಳ್ಳಲು ನಾಚಿಕೆಯಾಗುತ್ತಿದೆಯಲ್ಲವೇ ಸುಬ್ಬಯ್ಯಾ? ನಮಗೂನಿಮ್ಮನ್ನು ನೋಡಿ ನಾಚಿಕೆಯಾಗುತ್ತಿದೆ. ಎಂಥೆಂಥವರೋ ಹುಟ್ಟಿದ ನೆಲದಲ್ಲಿ ನೀವೂ ಹುಟ್ಟಿದ್ದಕ್ಕೆ. ಟಿಪ್ಪುವಿನ ಉತ್ತರಾಕಾರಿಯಾಗಿದ್ದಕ್ಕೆ. ?
No comments:
Post a Comment