ಇಪ್ಪತ್ತೈದು ದಿನಗಳ ಹಿಂದೆ ಕೊಡಗಿನ ಮಡಿಕೇರಿಯಿಂದ ೫೦ ಕಿ.ಮೀ.ದಕ್ಷಿಣದ ಪುಟ್ಟ ಪಟ್ಟಣ ಪೊನ್ನಂಪೇಟೆಯಲ್ಲಿ ಹಾಕಿ ಪಂದ್ಯಾಟವೊಂದುಉದ್ಘಾಟನೆಗೊಳ್ಳುವ ಸಮಯದಲ್ಲಿ ದೇಶಕ್ಕೆ ದೇಶವೇ ಐಪಿಎಲ್ ಬಗ್ಗೆಮಾತಾಡುತ್ತಿತ್ತು. ಲಲಿತ್ ಮೋದಿಯ ಮೊಂಡುತನಗಳು, ಶಶಿ ತರೂರನ ತರಲೆಗಳು, ಕುಣಿಯುವ ಹುಡುಗಿಯರ ಲಂಗಗಳು, ಹರಿದಿದ್ದ ಹಣ,ನಡೆದಿದ್ದ ಅಕ್ರಮ, ಅಲ್ಲಿ ಅಪ್ಪಿಕೊಂಡವರಾರು, ಇಲ್ಲಿ ಪಂದ್ಯ ನೋಡಿದವರಾರುಎಂಬವುಗಳ ಎಡೆಯಲ್ಲಿ ಉಳಿದಿದ್ದ ಕ್ರಿಕೆಟು, ಉರುಳಿದ್ದ ವಿಕೇಟು,ವಿದೇಶಿಯರು ಹೊಡೆದಿದ್ದ ರನ್ನುಗಳ ಲೆಕ್ಕಾಚಾರ ಗಂಭೀರವಾಗಿ ಚರ್ಚೆಯಾಗುತ್ತಿತ್ತು.ಅಬ್ಬರದ ಪಂದ್ಯಾಟವೊಂದು ಉಳಿಸಿಟ್ಟುಹೋಗುವ ಎಲ್ಲವೂ ಐಪಿಎಲ್‌ಮುಗಿದಾಗ ಉಚ್ಚಿಷ್ಠದಂತೆ ಉಳಿದಿತ್ತು.ಇವೆಲ್ಲದರ ನಡುವೆ ಪೊನ್ನಂಪೇಟೆಯಂಥ ಮೂಲೆಯ ಊರಿಗೆ ಭಾರತ ಸರಕಾರದ ಕ್ರೀಡಾ ಸಚಿವ ಗಿಲ್ ಬಂದುಹೋಗಿದ್ದರು. ಅದ್ಭುತ ಎಂದೂ ಹೇಳಿದ್ದರು. ಭಾರತೀಯ ಹಾಕಿ ತಂಡ ತನ್ನ ಎಂದಿನ ಪ್ರತಿಷ್ಠೆ - ಅಹಂಗಳನ್ನುಬದಿಗಿಟ್ಟು ಪೊನ್ನಂಪೇಟೆಯ ಮಣ್ಣಿನ ಮೈದಾನದಲ್ಲಿ ಪ್ರದರ್ಶನ ಪಂದ್ಯಆಡಿಹೋಗಿತ್ತು. ಐಪಿಎಲ್‌ನಲ್ಲಿ ಇದ್ದ ಅಬ್ಬರ ಪೊನ್ನಂಪೇಟೆಯಲ್ಲಿಲ್ಲದಿದ್ದರೂಬರೋಬ್ಬರಿ ೨೦ ದಿನಗಳ ಕಾಲ ಜಿಲ್ಲೆಯಾದ್ಯಂತ ಹಾಕಿ ಆಳ್ವಿಕೆ ನಡೆಸಿತ್ತು. ೨೧೪ತಂಡಗಳು, ಸುಮಾರು ಮೂರೂವರೆ ಸಾವಿರ ಆಟಗಾರರು, ಅರವತ್ತಕ್ಕೂಹೆಚ್ಚಿನ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾನ್ಯತೆಯ ತೀರ್ಪುಗಾರರು,ಎರಡು ಸುಸಜ್ಜಿತ ಗುಣಮಟ್ಟದ ಮೈದಾನಗಳು, ೫೦ ಸಾವಿರ ಸಾಮರ್ಥ್ಯದಪ್ರೇಕ್ಷಕರ ಗ್ಯಾಲರಿ ಇವಿಷ್ಟರಿಂದಲೇ ಪೊನ್ನಂಪೇಟೆಯಲ್ಲಿ ಉತ್ಸವವೊಂದು ಜರುಗಿತು. ಉತ್ಸಾಹವೊಂದನ್ನು ಸೃಷ್ಟಿಸಿತ್ತು. ಹಾಗಾಗಿ ‘ಹಾಕಿ ಹಬ್ಬ’ಮುಗಿದಾಗ ಐಪಿಎಲ್ ಮುಗಿದಾಗ ಉಂಟಾದಂತೆ ಬೇಸರ, ಆಕ್ರೋಶಗಳುಕಂಡುಬರಲಿಲ್ಲ. ಕಾತರ, ಕುತೂಹಲಗಳು ಹಬ್ಬ ಮುಗಿದ ಮರುದಿನದಿಂದಲೇಆರಂಭಗೊಂಡವು. ಹಬ್ಬ ಮುಗಿದ ಮರುದಿನ ಕಂಡುಬರುವ ಖಾಲಿತನವನ್ನು ಹಾಕಿ ಹಬ್ಬ ಮುಗಿದಾಗಲೂ ಜನ ಅನುಭವಿಸಿದ್ದರು. ಮುಂದಿನ ಹಬ್ಬದ ನಿರೀಕ್ಷೆಮತ್ತು ಸಿದಟಛಿತೆಗಳ ಬಗ್ಗೆ ಮಾತಾಡುತ್ತಿದ್ದರು.ಪಂದ್ಯಾವಳಿಯೊಂದು ಉತ್ಸವವಾದಾಗ, ಉತ್ಸಾಹವೊಂದು ತನ್ನಿಂದತಾನೆಉತ್ಪತ್ತಿಯಾಗುತ್ತದೆಂಬುದಕ್ಕೆ ಕೊಡವ ಕುಟುಂಬಗಳ ನಡುವೆ ನಡೆವ ಹಾಕಿಪಂದ್ಯಾಟವೇ ಒಂದು ಉದಾಹರಣೆ. ಏಕೆಂದರೆ ಹಾಕಿ ಪಂದ್ಯಾಟ ಇಲ್ಲಿನಿಜವಾದ ಹಬ್ಬವೇ ಆಗಿತ್ತು. ಚದುರಿಹೋಗಿದ್ದ ಕುಟುಂಬಗಳು ಇಲ್ಲಿ ಹಾಕಿಯಕಾರಣಕ್ಕೆ ಒಂದಾಗಿವೆ. ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿವೆ. ಪಂದ್ಯಾವಳಿಗಳಿಂದವೈವಾಹಿಕ ಸಂಬಂಧಗಳೇರ್ಪಡುತ್ತಿವೆ. ಸ್ಥಳೀಯ ಪ್ರತಿಭೆಗಳಿಗೆ ಉದ್ಯೋಗಾವಕಾಶವಾಗಿವೆ. ಮುಖ್ಯವಾಗಿ ಸ್ವಂತಿಕೆ ಉಳಿದಿದೆ. ಜಾಗತೀಕರಣಕ್ಕೆಉತ್ತರವಾಗಿ ನಿಂತಿದೆ. ಸಂಸ್ಕೃತಿಗೆ ಉಸಿರು ನೀಡಿದೆ. ಸ್ವಂತಿಕೆಯನ್ನು ಕ್ರೀಡೆಯೂನಿರ್ಧರಿಸುತ್ತದೆ ಮತ್ತು ಪರಕೀಯತೆ ಕ್ರೀಡೆಯ ಮೂಲಕವೂ ಅಪ್ಪಿಕೊಳ್ಳಬಹುದುಎಂಬ ವಾಸ್ತವವನ್ನು ಹಾಕಿ ಹಬ್ಬ ಪ್ರಮಾಣೀಕರಿಸಿದೆ. ಸಮಾಜವನ್ನುವಿಸ್ಮೃತಿಯಿಂದ ಮುಕ್ತವಾಗಿರಿಸಿದೆ. ಐಪಿಎಲ್ ಅಬ್ಬರದೆಡೆಯಲ್ಲೂ dream hockey ಭಾವ ಕೊಡಗಿನಾದ್ಯಂತ ಉಂಟಾಗಿದೆ. ಕ್ರೀಡೆಯೊಂದು ಯಾವ ರೀತಿಯಲ್ಲಿ ಸಮಾಜಮುಖಿಯಾಗಬಹುದು ಎಂಬುದಕ್ಕೆ ‘ಕೊಡವ ಹಾಕಿಉತ್ಸವ’ ಸಾಕ್ಷಿಯಾಗಿ ನಿಂತಿದೆ.ಹಾಕಿ ಉತ್ಸವದ ಮಹತ್ತ್ವವನ್ನು ತಿಳಿಯಬೇಕೆಂದರೆ ಹಲವು ದಶಕಗಳಹಿಂದೋಡಬೇಕು.ಕೊಡಗಿನ ವಿಶಿಷ್ಟ ಸಂಸ್ಕೃತಿಯಲ್ಲಿ ಹಾಕಿಯ ಪಾತ್ರವೂ ಹಿರಿದು. ಉತ್ತಮ ದೇಹದಾರ್ಢ್ಯತೆ, ಚಾಕಚಕ್ಯತೆಯ ಆಟಕ್ಕೆ ಕೊಡವರು ಹೇಳಿ ಮಾಡಿಸಿದಂತಿದ್ದರು. ಭಾರತೀಯ ಸೈನ್ಯಕ್ಕೆ ತನ್ನ ಅಮೂಲ್ಯ ಕೊಡುಗೆಯನ್ನುನೀಡಿದ ಕೊಡಗು ಆ ಮೂಲಕ ಭಾರತೀಯ ಹಾಕಿಗೂ ತನ್ನ ಕೊಡುಗೆಯನ್ನು ನೀಡಿತ್ತು. ಆ ಸಮಯದಲ್ಲಿ ಕೊಡಗಿನಲ್ಲಿ ಹಾಕಿಯ ಕ್ರೇಜ್ ಯಾವರೀತಿ ಉಂಟಾಯಿತೆಂದರೆ ಕೊಡವರು ಅದನ್ನು ತಮ್ಮ ಸಂಸ್ಕೃತಿಯ ಒಂದು ಅಂಗವೇ ಎನ್ನುವಂತೆ ಸ್ವೀಕರಿಸಿಬಿಟ್ಟಿದ್ದರು ಮತ್ತು ಆರಾಸಹತ್ತಿದರು. ಪರಿಣಾಮ ಅಸಂಖ್ಯಾತ ಪ್ರತಿಭೆಗಳು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದವು. ಮನೆಮನೆಗಳಲ್ಲೂ ಹಾಕಿಪಟುಗಳು ತಯಾರಾದರು. ದನಗಾಹಿಬಾಲಕರು ಹಾಕಿಪಟುಗಳಾದರು. ಇವೆಲ್ಲವೂಸ್ವಾತಂತ್ರ್ಯಾನಂತರದ ಮೂರು-ಮೂರುವರೆ ದಶಕಗಳ ಮಾತು. ಅನಂತರದ ಕಾಲಘಟ್ಟದಲ್ಲಿ ಪರಕೀಯಸೆಳೆತಕ್ಕೆ ಸಿಕ್ಕಿ ಎಲ್ಲಾ ರಂಗಗಳು ತಮ್ಮನ್ನುಒಪ್ಪಿಸಿಕೊಳ್ಳುವ ಭರಾಟೆಯಲ್ಲಿ ಭಾರತೀಯಹಾಕಿಯೂ ತನ್ನ ಸ್ಥಾನವನ್ನು ಕ್ರಿಕೆಟಿಗೆ ಬಿಟ್ಟುಕೊಟ್ಟಿತು. ಅಥವಾ ಕ್ರಿಕೆಟೇ ಭಾರತೀಯಹಾಕಿಯನ್ನು ಕಬಳಿಸಿತು. ಒಂದು ಕಾಲದಲ್ಲಿಜಗತ್ತಿನ ಅದ್ವಿತೀಯ ತಂಡವಾಗಿ ಮರೆದಿದ್ದಭಾರತೀಯ ಹಾಕಿ ನಿರಂತರ ಸೋಲಿನ ಸುಳಿಗೆಸಿಕ್ಕಿ ಇದ್ದ ಉತ್ಸಾಹವನ್ನೆಲ್ಲಾ ಕಳೆದುಕೊಂಡಿತು.ಇತ್ತ ಕೊಡಗಿನಲ್ಲೂ ಹಾಕಿಗೆ ಮಂಕು ಬಡಿದಿತ್ತು. ಆ ಮೂಲಕ ಸಂಸ್ಕೃತಿಗಳೂ ಸೊರಗತೊಡಗಿವೆಯೇನೋ ಅನಿಸುತ್ತಿತ್ತು.ಅಂದು ಹಾಕಿಪಟುಗಳನ್ನು ತಯಾರಿಸುತ್ತಿದ್ದಪರಂಬು (ಮೈದಾನ)ಗಳಲ್ಲಿ ವಿಕೆಟುಗಳು ನೆಟ್ಟವು. ದೇಶದ ಗಲ್ಲಿಗಲ್ಲಿಗಳಲ್ಲಿಕ್ರಿಕೆಟ್ ವ್ಯಾಪಿಸುತ್ತಿದ್ದಂತೆಯೇ ಇತ್ತ ಕೊಡಗಿನಲ್ಲೂ ಹಾಕಿ ಸ್ಟಿಕ್‌ಗಳಿಗೆಗೆದ್ದಲು ಹಿಡಿದವು. ೮೦ರ ದಶಕದ ಅನಂತರದ ಪೀಳಿಗೆಗೆ ಹಾಕಿ ಎಂಬುದೇಮರೆಯುವಂತಾಯಿತು.ಹಾಗೆcoorg-the nursery of indian hocket ಎಂಬ ಮಾತು ಕೊನೆಯಾಯಿತೋ ಎಂಬ ಹಂತದಲ್ಲಿ ಹಾಕಿಯ, ಆ ಮೂಲಕ ಸಂಸ್ಕೃತಿಯಕಾಯಕಲ್ಪಕ್ಕೆ ಶ್ರಮಿಸಿದವರಿದ್ದರು. ಹಾಗೆ ಹಾಕಿಗೆ ಜೀವ ತುಂಬಿದವರುನಿವೃತ್ತ ಬ್ಯಾಂಕ್ ಅಕಾರಿ ಪಾಂಡಂಡ ಕುಟ್ಟಪ್ಪನವರು. ಹೀಗೆ ‘ಕೊಡವ ಹಾಕಿಅಕಾಡೆಮಿ’ ಅಸ್ತಿತ್ವಕ್ಕೆ ಬಂತು. ಸೋದರ ಸಂಬಂಧದ ಕೊಡವ ಕುಟುಂಬಗಳ ನಡುವೆ ಪ್ರಥಮ ಬಾರಿಗೆ ೧೯೯೭ರಲ್ಲಿ ಹಾಕಿ ಪಂದ್ಯಾಟ ನಡೆದಾಗ ಇದ್ದದು ಕೇವಲ ೫೯ ತಂಡಗಳು. ಆದರೆ ಕಾಲದಿಂದ ಕಾಲಕ್ಕೆ ತಂಡಗಳ ಸಂಖ್ಯೆ ಹೆಚ್ಚಾಗಿ ೨೮೫ ತಂಡಗಳವರೆಗೂ ಮುಟ್ಟಿತು ಮತ್ತು ‘ಲಿಮ್ಕಾ ಬುಕ್ ಆಫ್ ರೆಕಾರ್ಡ್’ನಲ್ಲಿದಾಖಲಾಯಿತು. ಪ್ರತೀ ವರ್ಷ ಒಂದೊಂದು ಕುಟುಂಬಸ್ಥರು ಅತಿಥ್ಯಕ್ಕೆ ಮುಗಿಬೀಳತೊಡಗಿದರು. ಪಂದ್ಯಾವಳಿಗಳಿಗೆ ಉತ್ಸವದ ಕಳೆ ತರಲೂ ಅಕಾಡೆಮಿ ನಿರ್ಧರಿಸಿತು. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಟವಾಡಿದವರೂ ತಮ್ಮಕುಟುಂಬವನ್ನು ಪ್ರತಿನಿಸಿ ಕ್ರೀಡಾಕೂಟವನ್ನು ರಂಗೇರಿಸಿದರು. ಹೀಗೆನೋಡನೋಡುತ್ತಲೇ ಹಾಕಿ ಮತ್ತೆ ಏಳತೊಡಗಿತು. ಇದೀಗ ೧೪ ವರ್ಷಕ್ಕೇಕೊಡಗಿನಲ್ಲಿ ಅದರ ಪ್ರಭೆ ಗೋಚರಿಸುತ್ತಿದೆ. ಪ್ರತೀ ವರ್ಷ ಎಪ್ರಿಲ್ - ಮೇನಲ್ಲಿನಡೆಯುವ ಹಾಕಿ ಹಬ್ಬಕ್ಕೆ ಜನ ಕಾತರದಿಂದ ಕಾಯುತ್ತಾರೆ. ಹಾಕಿ ಪಂದ್ಯದಲ್ಲಿವಿಜೇತರಾಗುವುದೆಂದರೆ ಇಂದು ಪ್ರತಿಷ್ಠೆಯ ಸಂಗತಿ. ಜೊತೆಗೆ ಸೈನ್ಯಕ್ಕೆ ಸೇರಲು ಪ್ರೋತ್ಸಾಹವನ್ನೂ ಹಾಕಿ ಪಂದ್ಯ ಮಾಡುತ್ತಿದೆ. ದೇಶದ ಪ್ರತಿಷ್ಠಿತಹಾಕಿ ತಂಡಗಳು ಹಾಕಿ ಹಬ್ಬದತ್ತ ಮುಗಿಬೀಳುತ್ತವೆ. ನೇಮಕಾತಿ ಮೈದಾನದಲ್ಲೇನಡೆಯುತ್ತದೆ. ಬದಲಾಗುವ ನಿಯಮಗಳು, ಶಿಸ್ತುಗಳು ಮಾಧ್ಯಮಗಳಹೊರತಾಗಿಯೂ ಆಟಗಾರನ ಅರಿವಿಗೆ ಬರುತ್ತಿವೆ. ಕ್ರೀಡೆಯೊಂದು ಏನೆಲ್ಲಾಬದಲಾವಣೆ ಮಾಡಬಹುದು ಎಂಬುದಕ್ಕೆ ಕೊಡವ ಹಾಕಿ ಉತ್ಸವದಷ್ಟುಯೋಗ್ಯ ಉದಾಹರಣೆ ಬಹುಶಃ ವಿಶ್ವದಲ್ಲಿ ಬೇರೆ ಇರಲಿಕ್ಕಿಲ್ಲ. ಅದುಅತಿಶಯೋಕ್ತಿಯೂ ಅಲ್ಲ. ಏಕೆಂದರೆ ಒಂದೊಮ್ಮೆ ಕಾಲಗರ್ಭಕ್ಕೆ ಸೇರಿಹೋಗಲಿದ್ದ ಕೊಡಗಿನ ಹಾಕಿಯ ಬಗ್ಗೆ ಇಂದು stick for life ಎನ್ನುವಷ್ಟು ಮೇನಿಯಾ ಆವರಿಸಿಕೊಂಡಿದೆ. ಪುಟ್ಟ ಮಕ್ಕಳು, ಮಹಿಳೆಯರು, ವೃದಟಛಿರಕೈಗಳಲ್ಲೂ ಹಾಕಿ ಸ್ಟಿಕ್‌ಗಳು ಕಂಡು ಬರುವಾಗ ಆ ಮಾತು ಸತ್ಯವೆನಿಸುತ್ತದೆ. ೮೦ವರ್ಷದ ಅಜ್ಜನೂ ೧೦ ವರ್ಷದ ಮೊಮ್ಮಗನೂ ಗಂಡನೊಟ್ಟಿಗೆ ಹೆಂಡತಿಯೂ,ಅಣ್ಣನೊಟ್ಟಿಗೆ ತಂಗಿಯೂ ಒಂದೇ ತಂಡದಲ್ಲಿ ಆಡುವ ಅಪರೂಪದ ಕ್ಷಣಕ್ಕೆಹಾಕಿ ಉತ್ಸವ ವೇದಿಕೆಯಾಗಿದೆ.ವಾಸ್ತವವಾಗಿ ಕ್ರೀಡೆ ಎಂದರೆ ಹೀಗೆಯೇ ಇರಬೇಕಲ್ಲವೇ? ಚಪ್ಪರಿಸಿಅನುಭವಿಸಬೇಕಾದ ಸರಕನ್ನು ಕ್ರೀಡೆಸೃಷ್ಟಿಸಿಕೊಳ್ಳಬೇಕಲ್ಲವೇ? ಹೀಗೆ ಮುಂದುವರಿಯುತ್ತಿರುವ ಹಾಕಿ ಉತ್ಸವವರ್ಷದಿಂದ ವರ್ಷಕ್ಕೆ ಸೃಜನಶೀಲವಾಗುತ್ತಾ ಸಾಗುತ್ತಿದೆ. ಮೊನ್ನೆ ತಾನೇಮುಗಿದ ‘ಮನೆಯಪಂಡ ಟ್ವೆಂಟಿ-೧೦’ಪಂದ್ಯಾವಳಿಯನ್ನು ಸಂಪೂರ್ಣಪ್ಲಾಸ್ಟಿಕ್ ಮುಕ್ತವನ್ನು ಮಾಡಿದೆ ಮತ್ತುಈ ಉತ್ಸವದ ನೆನಪಿಗಾಗಿ ಸಂಪೂರ್ಣಕೊಡಗನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸಲುಯೋಜನೆ ನಡೆಸುತ್ತಿದೆ. ಹೀಗೆ ಹಾಕಿಉತ್ಸವ ಜನಪ್ರಿಯವಾಗುತ್ತಿರುವುದುಹಾಕಿಗೆ ಹೊರತಾಗಿಯೂ ಹೌದು ಎನ್ನುವುದು ಸ್ವತಃ ಹಾಕಿಯಮಹಿಮೆಯೂ ಹೌದು ಎನಿಸುತ್ತದೆ. ಕ್ರೀಡೆ ಎಂದರೆ ಹಾಗೆಯೇ ಇರಬೇಕು.ಅಂದರೆ ಸಹಜಾತಿ ಸಹಜವಾಗಿರಬೇಕು. ಅದು ಆಡಲ್ಪಡಬೇಕೇ ಹೊರತುಕುಣಿಸಲ್ಪಡಬಾರದು. ಅದು ಅನುಭವಿಸುವಂತಿರಬೇಕು. ಬದುಕು ಹೊಸೆಯುವಂತಿರಬೇಕು. ಅಲ್ಲಿ ಪ್ರದರ್ಶನಕ್ಕಿಂತಲೂ ಅನ್ವೇಷಣೆಯ,ಕ್ರೀಡೆಗಿಂತಲೂ ಹೊರತಾದ ಚಿಂತನೆಯಿರಬೇಕು. ಹಾಕಿ ಉತ್ಸವದ ಯಶಸ್ಸಿನಗುಟ್ಟೇ ಅದು. ಹಾಗಾಗಿ ಅಲ್ಲಿ ಕೇವಲ ಸ್ಪರ್ಧಾಗುಣವಿಲ್ಲ. ಆದ್ದರಿಂದವ್ಯವಹಾರಕ್ಕಿಳಿಯುವ ಅವಕಾಶವೇ ಇಲ್ಲ. ಇಲ್ಲಿ ಆಟಗಾರರು ತಾವು ಹರಾಜಾಗಿ ಹೋಗುವುದಿಲ್ಲ. ಇಲ್ಲಿ ಒಲಂಪಿಕ್ಸ್ ನಲ್ಲಿ ಆಡಿದವರೂ, ವಿದೇಶಗಳಲ್ಲಿನೆಲೆಸಿರುವವರೂ ಸ್ವಂತ ಖರ್ಚಿನಿಂದ ಬಂದು ತಮ್ಮ ಕುಟುಂಬಕ್ಕಾಗಿ ಆಡುತ್ತಾರೆ.ಆದರೂ ಇಲ್ಲಿ ವೃತ್ತಿಪರತೆಗೆ, ರಂಜನೆ, ಲವಲವಿಕೆಗಳಿಗೆ ಕೊರತೆ ಇಲ್ಲ. ಇನ್ನು ಅಬ್ದುಲ್ ಕಲಾಂರಂತಹವರು, ಗಿಲ್‌ರಂಥವರು ಬೆರಗಾಗದೆ ಹೇಗಿದ್ದಾರು?ಕ್ರೀಡೆ ದ್ಯೂತವಾಗಬಹುದು. ಮನರಂಜನೆಯ ಬೆಂಬತ್ತಿದರೆ ಅದುಮದಿರೆಯಾಗಬಹುದು. ಲಗಾಮಿಲ್ಲದ ಕುದುರೆಯಾಗಬಹುದು.ಅದು ಇದ್ದಬದ್ದದ್ದನ್ನೆಲ್ಲಾ ಸೂರೆಗೈಯಬಹುದು. ಅಮಲೇರಿದರೆಕಂಟಕವಾಗಬಹುದು. ಅದಕ್ಕೆ ಕ್ರೀಡೆಯನ್ನು ಉತ್ಸವವಾಗಿಸಬೇಕು. ಉತ್ಸಾಹಉಳಿಯಬೇಕಾದರೆ ಉತ್ಸವ ಅಳಿಯಬಾರದು. ಹಣದಿಂದ, ಕ್ಯಾಬರೆಗಳಿಂದಕ್ರೀಡೆ ಅಬ್ಬರಿಸಬಹುದೇ ಹೊರತು ಶಾಶ್ವತ ಅಸ್ತಿತ್ವ ಉಳಿಸಿಕೊಳ್ಳಲಾರದುಎಂಬುದಕ್ಕೆ ಸಾಕ್ಷಾತ್ ಐಪಿಎಲ್ಲೇ ಜ್ವಲಂತ ಉದಾಹರಣೆಯಾದರೆ ಕ್ರೀಡೆಉತ್ಸವವಾದರೆ ಸಂಸ್ಕೃತಿಯೂ ಉಳಿಯುತ್ತದೆಂಬುದಕ್ಕೆ ಕೊಡವ ಹಾಕಿಉತ್ಸವವೇ ನಿದರ್ಶನ.
No comments:
Post a Comment