ಮೊದಲೆಲ್ಲಾ ಭಾರತೀಯ ಕೃಷಿಯನ್ನು ಮುಂಗಾರಿನೊಡನೆ ಆಡುವ ಜೂಜಾಟ ಎಂದು ಕರೆಯಲಾಗುತ್ತಿತ್ತು. ಇದೀಗ ಜಾಗತೀಕರಣದ ಹೊತ್ತಲ್ಲಿ ಆ ವ್ಯಾಖ್ಯಾನ ಬದಲಾಗಿದೆ. ಏಕೆಂದರೆ ಕೃಷಿಯಲ್ಲಿಂದು ಮುಂಗಾರು ನಿರ್ಣಾಯಕವಲ್ಲ. ಜೊತೆಗೆಮಾನ್ಸೂನ್ ಕೂಡ ಅಪಾಯದ ಅಂಚಿನಲ್ಲಿದೆ.ಆದ್ದರಿಂದ ಅದಕ್ಕೂ ಮಿಗಿಲಾದ, ಕೃಷಿಯನ್ನು ನಿರ್ಧರಿಸಬಲ್ಲ ಹಲವು ಸಂಗತಿಗಳು ಇಂದು ಕೃಷಿಯೊಟ್ಟಿಗೆ ತಳಕು ಹಾಕಿಕೊಂಡಿವೆ. ಆದ್ದರಿಂದ ಕೃಷಿಯನ್ನು ಇಂದು ಬಹುರಾಷ್ಟ್ರೀಯ ಕಂಪೆನಿಗಳ ಕೈಗೊಂಬೆ ಎಂದೂ, ಸರಕಾರದ ನೀತಿ ನಿಯಮಗಳ ನಡುವೆ ಒದ್ದಾಡುವ ವೃತ್ತಿಯೆಂದೂ, ಪರ್ಯಾಯವಿಲ್ಲದೆಅನುಭವಿಸಲೇಬೇಕಾದ ಪ್ರಾಯಶ್ಚಿತವೆಂದೂ ಕರೆಯಬಹುದು ಮತ್ತು ವ್ಯಾಖ್ಯಾನಿಸಬಹುದು. ಹೀಗೆ ಜಾಗತೀಕರಣ ಬದಲಿಸಿದ ಅದೆಷ್ಟೋ ವ್ಯಾಖ್ಯಾನಗಳಲ್ಲಿ ಕೃಷಿಯ ವ್ಯಾಖ್ಯಾನ ಮುಖ್ಯ ಸಾಲಲ್ಲಿ ನಿಲ್ಲುತ್ತದೆ.
ಜಾಗತೀಕರಣ ಮತ್ತು ಪರಂಪರೆ ಒಂದಲ್ಲಾ ಒಂದು ಸಂದರ್ಭದಲ್ಲಿ ಮುಖಾಮುಖಿಯಾಗಲೇಬೇಕು. ಏಕೆಂದರೆ ಜಾಗತೀಕರಣ ಸರ್ವಸ್ಪರ್ಶಿ ಯಾದದ್ದು ಮತ್ತು ಸರ್ವವನ್ನೂ ಬದಲು ಮಾಡುವ ಗುಣವುಳ್ಳದ್ದು. ಎಂಥೆಂಥದ್ದನ್ನೂ ಅದು ಕೊಚ್ಚಿ ಕೊಂಡೊಯ್ಯಬಲ್ಲದು. ತನ್ನಲ್ಲೊಂದು ಮಾಡಬಹುದು ಅಥವಾ ಇಲ್ಲದಂತೇ ಮಾಡಬಹುದು. ಪರಂಪರೆಯೂಅದಕ್ಕೆ ಹೊರತಲ್ಲ. ಇವೆಲ್ಲದರ ಕಾರಣಕ್ಕಾಗಿಯೇ ಬದನೆಕಾಯಿಯೂ ರಾಷ್ಟ್ರೀಯ ಸುದ್ದಿಯಾಗುತ್ತದೆ. ದೇಶವ್ಯಾಪಿ ಕೂಗೇಳುತ್ತದೆ. ಸಂಬಂಧಿತ - ಅಸಂಬಂಧಿತ ಚರ್ಚೆಗಳು, ಅವಕಾಶವಾದ, ಲಾಭಿ ಇನ್ನೂ ಏನೇನೋ ಕಾಣುವ- ಕಾಣದ ಅಂಶಗಳು, ಅಸ್ಪಷ್ಟ ಕುರುಹುಗಳು, ಸ್ಪಷ್ಟ ಸಾಕ್ಷಿಗಳು, ಕಠೋರ ಪ್ರಶ್ನೆಗಳು ಉದ್ಭವಿಸಿಬಿಡುತ್ತವೆ. ಪ್ರಸ್ತುತ ಬದನೆಕಾಯಿ ಅದನ್ನೆಲ್ಲಾ ಉಂಟುಮಾಡಿದೆ. ಸಮಸ್ತ ಕೃಷಿಗೆ ಬದನೆ ನಿಮಿತ್ತವಾಗಿ, ಕೃಷಿಯ ಸಮಸ್ಯೆಗೆ ತಾನು ಉದಾಹರಣೆಯಾಗಿ, ಹಲವು ಸವಾಲುಗಳಿಗೆ ತಾನೇ ಕಾರಣವಾಗಿ, ತನ್ಮೂಲಕ ಕೃಷಿಗೆ ಉತ್ತರವಾಗಿ ಬದನೆ ಹಲವು ಪಾತ್ರ ವಹಿಸಿತು. ಜಾಗತೀಕರಣದ ಉತ್ಪನ್ನಗಳು ಹೀಗೆಲ್ಲಾ ಇರುತ್ತವೆ ಎಂಬ ವೈಚಿತ್ರ್ಯಕ್ಕೆ ಕೂಡ ಸಾಕ್ಷಿಯಾಯಿತು.
ಹೀಗೆ ತರಕಾರಿಗಳಲ್ಲಿ ಅಷ್ಟು ಪ್ರಾಧಾನ್ಯವಲ್ಲದ, ಬೇರೆ ತರಕಾರಿಗಳಿಗೆ ಹೋಲಿಸಿದರೆ ಕೊಂಚ ಸೆಕೆಂಡರಿ ಅನ್ನಿಸುವಂಥ ಬದನೆಕಾಯಿ ಜನರ ತಲೆ ತಿಂದಿರುವುದು ಮತ್ತು ರೈತನಿಗೂ ಅರ್ಥವಾಗದ ಜೀವಶಾಸ್ತ್ರದ ಘಟಕವೊಂದು ನಿರ್ಮಿಸಿದ ಬೆಸುಗೆಗೆ ಬದನೆ ಕಾರಣವಾಯಿತಲ್ಲಾ ಎಂಬ ಅಚ್ಚರಿಯ ಹೊತ್ತಲ್ಲಿ ಜಾಗತೀಕರಣದ ಯುಗದಲ್ಲಿ ರೈತ ಗೆಲ್ಲಲಾರ ಎಂಬ ಕಠೋರ ಸತ್ಯವನ್ನೂ ಮರೆಯಬಾರದು. ಏಕೆಂದರೆ ಜಾಗತೀಕರಣ ರೈತನಿಗೆ ಅನುಗುಣವಾಗಿರು ವಂಥದ್ದಲ್ಲ. ರೈತ ಅದಕ್ಕೆ ಬಲಿಪಶು ಆಗಲೇಬೇಕು. ಬದನೆ ವಿಚಾರದಲ್ಲಿ ಅದುಸಿದ್ದಪಟ್ಟಿತು. ಏಕೆಂದರೆ ಬಿಟಿ ನಿಷೇಧವಾಗಲಿಲ್ಲ. ಅನುಷ್ಠಾನ ಇಂದಾಗಲಿಲ್ಲ ಎಂದಾಯಿತಲ್ಲದೆ ನಾಳೆ ನಾಗುವುದೋ ಗೊತ್ತಿಲ್ಲ. ಆದರೂ ಜಾಗತೀಕರಣದ ಜಾಗೃತಿಗೆ ಬದನೆಯೂ ಸಾಕಾಗಬಲ್ಲದು ಎಂಬುದು ಸಿದ್ದಪಟ್ಟಿತು.
ಇವುಗಳಲ್ಲದೆ ಬಿಟಿ ವಿಷಯದಲ್ಲಿ ಬದನೆ ತಿನ್ನದವರು, ತಿನ್ನುವವರು ಎಲ್ಲರೂ ರೈತನಿಗೆ ಬೆಂಬಲ ವ್ಯಕ್ತಪಡಿಸಿದರು. ಬಿಟಿಯ ಬೇರು ಬಹು ಆಳದಲ್ಲಿರುವುದನ್ನು ಜನ ಕಂಡುಕೊಂಡರು. ಸಾಮಾನ್ಯ ಒಬ್ಬ ರೈತನಿಗೆ ಒಂದು ಅಸಹಜ ಹುಟ್ಟಿನಬಗ್ಗೆ ತಾತ್ಸಾರ ವ್ಯಕ್ತವಾಯಿತು. ಬಿಟಿ ಬದನೆ ಅನುಷ್ಠಾನವಾಗುವ ಮೊದಲೇ ಪ್ರಖರ ವಿರೋಧಕ್ಕೆ ಈಡಾಯಿತು. ವಿಜ್ಞಾನದ ಮಟ್ಟಿಗೆ ಹೇಳುವುದಾದರೆ ಅದು ವಿಜ್ಞಾನದ ಹಿನ್ನಡೆಯೇ. ಅಷ್ಟಕ್ಕೂ ಬಿಟಿ ಅಂದರೇನೇ ಒಂದು ಅಸಹಜ ಪ್ರಕ್ರಿಯೆ. ಒಂದು ಜೀವಿ ಒಂದು ಕೋಶ ಅಥವಾ ಕೋಶದ ಒಳಗಿರುವ ಒಂದು ವಂಶವಾಹಿ (ಜೀನ್ಸ್) ಈ ಮೂರರಲ್ಲಿ ಯಾವುದಾದರೂ ಒಂದನ್ನು ಬಳಸಿ ಉತ್ಪನ್ನವನ್ನು ಸೃಷ್ಟಿಸುವುದು ಈ ಬಿಟಿ (bacillus thurinjennsis) ತಂತ್ರಜ್ಞಾನದ ಕಾರ್ಯ. ಹೀಗೆ ಸೃಷ್ಟಿಯಾದ ಉತ್ಪನ್ನ ಸಹಜವಾಗಿ ಹೊಸದಾಗಿರುತ್ತದೆ. ಈ ಕಾರ್ಯವನ್ನು ವಿಜ್ಞಾನ ತನ್ನ ಅತಿದೊಡ್ಡ ಸಾಧನೆಯೆಂದುಹೇಳಿಕೊಳ್ಳುತ್ತದೆ. ಇಂಥ ಟ್ರಾನ್ಸ್‌ಜೆನಿಕ್ ತಂತ್ರಜ್ಞಾನದ ಮೂಲಕ ಅದು ಹೊಸ ತಳಿಯ ಉತ್ಪನ್ನಗಳನ್ನು ಸೃಷ್ಟಿ ಮಾಡುತ್ತದೆ. ಮುಖ್ಯವಾಗಿ ಕೃಷಿ ಮತ್ತು ಅದರ ಸಂಬಂಧಿತ ವಿಷಯಗಳಲ್ಲಿ ಇಂಥ ಹುಟ್ಟನ್ನು ಉಂಟು ಮಾಡುವ ವಿಜ್ಞಾನ ಜಗತ್ತು ವಿಶ್ವದ ಪ್ರಮುಖ ಹಸಿರು, ಕ್ಷೀರ ಕ್ರಾಂತಿಗಳ ನೇತಾರನೇ ತಾನು
ಎಂದು ಹೇಳಿಕೊಳ್ಳುತ್ತದೆ. ಪ್ರಸ್ತುತ ಬಿಟಿ ಬದನೆ ಸೃಷ್ಟಿಯಾಗಿರುವುದು ಕೂಡಇದೇ ಉದ್ದೇಶದಿಂದ ಎಂದು ವಿಜ್ಞಾನ ಮತ್ತು ಸರಕಾರ ಹೇಳುತ್ತದೆ. ಅಂದರೆ ಬದನೆ ಸದಾ ಕೀಟ ಬಾಧೆಯಿಂದ ಬಳಲುವ ಬೆಳೆ. ಕಟಾವಿನ ಸಮಯದಲ್ಲಿ ಶೇ. ೬೦ರಷ್ಟು ಬದನೆ ಕೀಟಯುಕ್ತವಾಗಿಯೇ ಇರುತ್ತದೆ. ಇದನ್ನು ಹೋಗಲಾಡಿಸಲು ಮತ್ತು ಹೊಸ ತಳಿಯೊಂದರ ಅನ್ವೇಷಣೆಯಲ್ಲಿ ಉದಿಸಿಬಂದದ್ದೇ ಈ ಬಿಟಿ ಬದನೆ. ಬದನೆಗೆ ಬಾಧಿಸುವ ಲಾರ್ವ (ಔಅಅ) ಎಂಬ ಕೀಟದಿಂದ ಮುಕ್ತಿಗೆ ವಿಜ್ಞಾನಿಗಳು ಕಂಡುಕೊಂಡ ಉತ್ತರ ಎಂದರೆ ಬದನೆಯ ಸೆಲ್ ಮತ್ತು ಲಾರ್ವವನ್ನು ಕೊಲ್ಲುವ ಬ್ಯಾಕ್ಟೀರಿಯಾಗಳನ್ನು ಬೆರೆಸಿ ಹೊಸದೊಂದು ಬದನೆಯ ಸೃಷ್ಟಿ. ಪರಿಣಾಮವಾಗಿ ಬದನೆ ಒಡಲಲ್ಲೇ ರಾಸಾಯನಿಕಗಳನ್ನು ಹೊತ್ತು ಹುಟ್ಟುತ್ತದೆ. ಲಾರ್ವ ಸಾಯುತ್ತದೆ. ಬದನೆ ರೋಗಮುಕ್ತವಾಗುತ್ತದೆ. ಇದೊಂಥರಾ ಜರ್ಸಿ ದನದ ಹಾಗೆ. ಯಥೇಚ್ಛ ಹಾಲು ಕೊಡುತ್ತದೆ. ಆದರೆ ಅದು ಹಾಲಲ್ಲ ಎಂಬಂತೆ! ಬಿಟಿ ಎಂದರೆ ಹೀಗೆ. ಅದು ವಿಜ್ಞಾನದ ಅಂತರಂಗದ ಸಂಗತಿ ಮತ್ತು ಆಲೋಚನಾ ಲಹರಿಯ ಮಟ್ಟಕ್ಕೆ ಹಿಡಿದ ಕನ್ನಡಿ. ಆದರೆ ಇಂಥ ಕೃತಕ ಸೃಷ್ಟಿ ಅಸಹಜ ಎನಿಸುವುದಿಲ್ಲವೇ? ಅಸಹಜ ಕ್ರಿಯೆಯ ಹುಟ್ಟು ಪ್ರೀತಿ ಮೂಡಿಸಬಲ್ಲದೇ? ಇಂದು ಬದನೆಯ ಕುಲಾಂತರಿ ಮಾಡುವ ವಿಜ್ಞಾನಿಗಳು ನಾಳೆ ಮನುಷ್ಯನನ್ನೂ ಸೃಷ್ಟಿ ಮಾಡಲಾರರೇ? ಮಾತ್ರೆ ತಿಂದೇ ಹೆರುವ ತಾಯಂದಿರನ್ನು, ಟೈಲರ್ ಅಂಗಡಿಯಲ್ಲಿ ಅಂಗಿ ಹೊಲಿಸಿದಂತೆ ಆರ್ಡರ್ ಕೊಟ್ಟು ಹುಟ್ಟುವ ಮೊದಲೇ ಮಗುವಿನ ಚಹರೆ ರೂಪಿಸುವ ದಿನ ಬರಲಾರದೆಂದು ಹೇಗೆ ನಂಬುವುದು? ಅಂಥ ದಿನ ಬಂದರೆ ಅದು ಸೃಷ್ಟಿ ನಿಯಮಕ್ಕೆ ವಿರುದಟಛಿ ಎಂದು ಹೇಳಬಾರದೇ? ಹಾಗಾದರೆ ಬಿಟಿ ಕೂಡ ಸೃಷ್ಟಿನಿಯಮಕ್ಕೆ ವಿರುದ್ದವಲ್ಲವೇನು? ಇವಿಷ್ಟೇ ಅಲ್ಲದೆ ಬದನೆ ಹಾಕುವ ಪ್ರಶ್ನೆಗಳೇ ಹಲವಿದೆ. ಲಾರ್ವಾವನ್ನು ಕೊಲ್ಲುವ ಬ್ಯಾಕ್ಟೀರಿಯಾ ಮತ್ತು
ರಾಸಾಯನಿಕ ಬಿಟಿ ಬದನೆಯಲ್ಲೇ ಇರುವುದಾದರೆ ಮನುಷ್ಯನ ಪಾಡೇನು? ಕೀಟ ಕೊಲ್ಲುವ ವಿಷ ಮನುಷ್ಯನನ್ನು ಕೊಲ್ಲಲಾರದೆಂದು ಏನು ಗ್ಯಾರಂಟಿ?ವಿಜ್ಞಾನಿಗಳೇನೋ ಇದು ಮಾನವ ಆರೋಗ್ಯಕ್ಕೆ ಅಪಾಯಕಾರಿಯಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಅವರು ಯಾವ ಆಧಾರದಲ್ಲಿ ಹೇಳುತ್ತಿದ್ದಾರೆಂದು ಇನ್ನೂ ನಿಗೂಢವಾಗಿದೆ. ಇಂದೇನೋ ತಿಂದವನು ಸಾಯದಿರಬಹುದು. ಆದರೆ ಕ್ರಮೇಣ ಮಾನವ ಕೋಶದ ಮೇಲೆ ‘ಬದನೆಯ ನಂಜು’ ಪರಿಣಾಮ ಬೀರಲಾರದು ಎಂದು ಹೇಳಲು ವಿಜ್ಞಾನಕ್ಕೆ ಸಾಧ್ಯವಾಗಿಲ್ಲ. ಇಂದಿನ ಊಟದ ಪರಿಣಾಮವನ್ನು ಮುಂದಿನ ಪೀಳಿಗೆ ಅನುಭವಿಸಬಲ್ಲ ಸಾಧ್ಯತೆಯೂ ಇರುವಾಗ ಬಿಟಿ ಬದನೆಯ ಅಗತ್ಯವೇನಿತ್ತು? ಮನುಷ್ಯನ ಆರೋಗ್ಯದ ಮೇಲೆ ಗ್ಯಾರಂಟಿ ಕೊಡದ ಬದನೆಯನ್ನು ಸಮರ್ಥ ಆಹಾರ ಎಂದು ಒಪ್ಪಿಕೊಳ್ಳುವುದಾದರೂ ಹೇಗೆ? ಹೀಗೆ ಅಡಿಗಡಿಗೆ ಅಪಾಯಕಾರಿ ಗುಣಗಳಿರುವ ಬಿಟಿ ಬದನೆ ಯಾವ ದೇಶದಲ್ಲೂ ಅನುಷ್ಠಾನವಾಗಲಿಲ್ಲ. ಆದರೆ ಏಕಾಏಕಿ ಭಾರತದಲ್ಲೇ ಏಕೆ
ಅನುಷ್ಠಾನಕ್ಕೆ ಪ್ರಯತ್ನಿಸಿತು ಎಂಬುದೂ ಒಂದು ಗೂಢ ನಡೆ. ಎಲ್ಲಾ ವೈಜ್ಞಾನಿಕ ಸಂಶೋಧನೆಯನ್ನು ಯುರೋಪ್, ಅಮೆರಿಕಾ ದೇಶಗಳಲ್ಲಿ ಅನುಷ್ಠಾನ ಮಾಡಿ ಹೆಸರು ಮಾಡುವ ಬಹುರಾಷ್ಟ್ರೀಯ ಕಂಪೆನಿಗಳು ಮತ್ತು ವಿಜ್ಞಾನಿಗಳು ಬಿಟಿ ಬದನೆಯಂಥ ಸಂಗತಿಯನ್ನು ಭಾರತಕ್ಕೆ ತಂದಿರುವುದರ ಉದ್ದೇಶವಾದರೂ ಏನು? ಯಾರದೋ ಸಂಶೋಧನೆಗೆ ಭಾರತ ಪ್ರಯೋಗ ಪಶುವಾಗಬೇಕೇ? ಬಿಟಿ ಹತ್ತಿ ಉಂಟು ಮಾಡಿದ ಅನರ್ಥ ಇನ್ನೂ ಕಣ್ಣಮುಂದಿರುವಾಗ ಬದನೆಕಾಯಿಯತ್ತಲೂ ವಕ್ರಚಿತ್ತ ಏಕೆ? ಅಲ್ಲದೆ ರೋಗಗಳ ಕಾರಣಕ್ಕೇ ಏಕೆ ಬಿಟಿ ಬರಬೇಕು? ಅದನ್ನು monsanto ಕಂಪೆನಿಯೇ ಏಕೆ ಅನುಷ್ಠಾನ ಮಾಡಬೇಕು ಎಂಬುದೂ ಯೋಚಿಸತಕ್ಕ ವಿಷಯವೆ.
ಬದನೆ ಬಿಟಿಯಾಗುವ ಪ್ರಕ್ರಿಯೆಯಲ್ಲಿ ಕಾಣದ ಅಂಶಗಳೆಷ್ಟೋ ಇದೆ. ಜಾಗತೀಕರಣದ ಭರದಲ್ಲಿ ಜಗತ್ತನ್ನು ಒಂದೇ ಆಗಿಸಲು ಬಹುರಾಷ್ಟ್ರೀಯ ಕಂಪೆನಿಗಳ ಹುನ್ನಾರಕ್ಕೆ ಬಿಟಿ ಒಂದು ಅಸ್ತ್ರದಂತೆ ಕಾರ್ಯನಿರ್ವಹಿಸುತ್ತಿದೆ. ಮತ್ತು
ಜಾಗತೀಕರಣದ ಅನುಷ್ಠಾನಕ್ಕೆ ಅವರಿಗೆ ಭಾರತದ ರಾಜಕಾರಣ ಒಂದು ದಾಳ ಕೂಡ. ಇಲ್ಲದಿದ್ದ? ಎಲ್ಲೂ ಅನುಷ್ಠಾನವಾಗದ ಬಿಟಿ ಬದನೆಯನ್ನು ಭಾರತದಲ್ಲೇ ಏಕೆ ಅನುಷ್ಠಾನ ಮಾಡಲು ಭಾರತ ಸರಕಾರ ಕೂಡ ಯೋಚಿಸುತ್ತದೆ?ಜಗತ್ತಿನ ಸಕಲ ಚರಾಚರ ವಸ್ತುಗಳೂ ತನ್ನ ಅಧೀನಕ್ಕೆ ಒಳಪಡಬೇಕೆಂಬ ಹುನ್ನಾರವೂ ಇದರ ಹಿಂದೆ ಇಲ್ಲದಿಲ್ಲ. ಹೀಗೆ ಬದನೆಯನ್ನೂ ಪಾಶ್ಚಾತ್ಯರೇನಿರ್ಧರಿಸಲಾರಂಭಿಸುವಾಗ ಉಳಿಯುವುದೇನು? ಅಳಿದುಳಿದ ಉಚ್ಛಿಷ್ಠವನ್ನೂ ಉಳಿಸದ ದೈತ್ಯ ಕಂಪೆನಿಗಳ ಹುನ್ನಾರಕ್ಕೆ ಸರಕಾರ ಮರುಳಾಗುವುದೆಂದರೆ ಅದೆಂಥ ಗುಲಾಮಿತನವಿರಬಹುದು. ಬದನೆಯಂಥಾ ಸಾಮಾನ್ಯ ತರಕಾರಿಯ
ಮೇಲೆ ಪಾಶ್ಚಾತ್ಯ ಮಾನ್ಸಾಂಟೊ ಕಂಪೆನಿಗೇಕೆ ಅಷ್ಟೊಂದು ಅಭಿಮಾನ? ಜೊತೆಗೆ ಸಕಲವೂ ಬಿಟಿಮಯವಾದರೆ ದೇಸೀ ತಳಿಗಳ ಪರಿಸ್ಥಿತಿಯೇನು ಎಂಬ ಪ್ರಶ್ನೆಗೆ ಜೈರಾಮ್ ರಮೇಶರಲ್ಲಿ ಉತ್ತರವಿಲ್ಲ. ಈ ಬಿಟಿ ಪ್ರಕ್ರಿಯೆಯಲ್ಲಿ ಬದನೆ ಆರಂಭವಷ್ಟೇ ಬದನೆಕಾಯಿಯ ಹಿಂದೆ ೫೬ ತರಕಾರಿಗಳು ಕಾಯುತ್ತಿದೆ ಎಂಬ ಸುದ್ದಿಯೂ ಇದೆ. ಅಲ್ಲದೆ ಭಾರತದಲ್ಲೇ ಬಳಕೆಯಲ್ಲಿರುವ ೭೦ಕ್ಕೂ ದೇಸೀ
ಬದನೆ ತಳಿಗಳು ಬಿಟಿ ಬಂದಾಗ ಉಳಕೊಳ್ಳುವುದೇ? ದೇಸೀ ತಳಿಗಳು ನಶಿಸಿದರೆ ಅದರೊಟ್ಟಿಗೆ ಬೆಸೆದುಕೊಂಡ ಸ್ವದೇಶಿ ವಾಸನೆಯಾದರೂ ಉಳಕೊಳ್ಳುವುದೇ? ಈ ಹೊತ್ತಲ್ಲಿ ಉಡುಪಿಯ ‘ಮಟ್ಟಿಗುಳ್ಳ’ ನೆನಪಾಗುತ್ತದೆ. ಅತ್ಯಂತ ರುಚಿಕಟ್ಟಾದ, ಅಪ್ಪಟ ದೇಸೀ ಮಟ್ಟಿಗುಳ್ಳವನ್ನು ವಾದಿರಾಜರಂತಹ ಸಂತರು ಪರಿಚಯಸಿದರು ಎಂಬ ಕತೆ ಇಂದೂ ಪ್ರಚಲಿತದಲ್ಲಿದೆ. ನಿರುದ್ಯೋಗಕ್ಕೆ
ಉತ್ತರವಾಗಿ ಕೃಷಿ ಮಾಡಲು, ಬಹಿಷ್ಕೃತ ಸಮಾಜವೊಂದರ ಉದಾಟಛಿರಕ್ಕಾಗಿ ಬದನೆ ಬೆಳೆಯಲು ಸೂಚಿಸಿದ ವಾದೀರಾಜರು ಬದನೆಯನ್ನು ದೇವರ ನೈವೇದ್ಯಕ್ಕೂ ಅರ್ಪಿಸುವ ಪರಂಪರೆಗೆ ನಾಂದಿ ಹಾಡಿದರು. ವಿಷಹರಗುಣದ ಈ ಮಟ್ಟಿಗುಳ್ಳ ಇಂದೂ ಉಡುಪಿಯ ಹಯಗ್ರೀವ ದೇವರ ನೈವೇದ್ಯಕ್ಕೆ ಕಡ್ಡಾಯ ಪದಾರ್ಥ. ಸಂತರೊಬ್ಬರ ಸಾಮಾಜಿಕ ಕಳಕಳಿಯ ಫಲವಾಗಿ ಬದನೆ ದೇವರಿಗೆರ್ಪಿತವಾದ ಉದಾಹರಣೆ ಅತ್ಯಂತ ಬೋಧಪ್ರಧ. ಆದರೆ ಜೈರಾಮ್ ರಮೇಶ್ ಪರಿಚಯಿಸುವ ಬದನೆಯೋ ಕಾರ್ಕೋಟಕನಂಥಾ ಗುಣವುಳ್ಳದ್ದು . ಅಂದು ವಿಷಹರ ಬದನೆ ಇಂದು ಅಪ್ಪಟ ವಿಷವೇ ಆದಂತಹ ಬದನೆ! ಕಾಲದ ಜರುಗುವಿಕೆಯಲ್ಲಿ ವಿಪರ್ಯಾಸಗಳಿಗೆ ಸಾಕ್ಷಿಯಾದಂತೆ ಭಾಸವಾಗುತ್ತದೆ. ಹಾಗಾದರೆ ಇಂದು ಬೆಳೆಸಬೇಕಾಗಿರುವುದು ವಿಷಯುಕ್ತ ಬದನೆಯನ್ನೋ
ಅಥವಾ ವಿಷಹರ ಬದನೆಯನ್ನೋ? ಸರಕಾರವೇ ಹೀಗೆ ವಿಷ ಉಣಿಸುವ ಕಾಯಕಕ್ಕೆ ತೊಡಗಿರುವಾಗ ಇದು ಕೇವಲ ತಂತ್ರಜ್ಞಾನದ ಸಂಗತಿಯಲ್ಲಎನಿಸುವುದಿಲ್ಲವೇ?
ಯಾವ ನೆಲೆಯಿಂದ ನೋಡಿದರೂ ಬಿಟಿ ಬದನೆಯನ್ನು ವಿರೋಧಿಸದೇಇರಲು ಕಾರಣಗಳು ಸಿಗದಿರುವುದಿಲ್ಲ. ಆದರೂ ಬಿಟಿ ನಿಷೇಧವಾಗಲಿಲ್ಲ. ಸರಕಾರಕ್ಕೆ ರೈತರನ್ನು, ಕೃಷಿಯನ್ನು ಉದಟಛಿರಿಸಲು ಮನಸ್ಸು ಇರುವುದೇ ಆಗಿದ್ದಲ್ಲಿನಿಷೇಧಕ್ಕೂ ಮುಹೂರ್ತ ನಿಗದಿಮಾಡುವ ಗೋಜಿಗೆ ಹೋಗುತ್ತಿರಲಿಲ್ಲ.ಬಟಿ ಉದ್ಗಾರ ಕೇಳುವ ಹೊತ್ತಿಗಾಗಲೇ ಅದು ಮಟ್ಟಿಗುಳ್ಳದಂತಹ ಸ್ವದೇಶಿ
ತರಕಾರಿಗಳ ಬೆಂಬಲಕ್ಕೆ ಇಳಿಯುತ್ತಿತ್ತು. ಮಟ್ಟಿಗುಳ್ಳದ ಪೇಟೆಂಟಿಗೆ ಪ್ರಯತ್ನಿಸುತ್ತಿತ್ತು. ಗುಳ್ಳಕ್ಕೆ ಸಬ್ಸಿಡಿ ನೀಡುತ್ತಿತ್ತು. ಆದರೆ ಕೆಲವೇ ಕೆಲವು ಜನರ ಹಿತಾಸಕ್ತಿಗಾಗಿ ಸರಕಾರ ದೇಶವಾಸಿಗಳಿಗೆ ವಿಷಪ್ರಾಶನದ ಕ್ರಮಕ್ಕೆ ಮುಂದಾಗಿಬಿಟ್ಟಿದೆ. ನರಿ ಬುದ್ದಿಯವರೂ, ಮಾಫಿಯಾದವರೂ ಕೂಡ ರೈತರಕಾಳಜಿಯ ಬಗ್ಗೆ ಮಾತಾಡಲು ಅವಕಾಶವನ್ನು ಸ್ವತಃ ಸರಕಾರವೇ ಮಾಡಿಕೊಟ್ಟು
ಬಿಟ್ಟಿತು. ಬದನೆಯಿಂದ ಒಂದಿಷ್ಟು ಜನ ವೇದಿಕೆ ಹತ್ತಿಕೊಂಡರು. ಎನ್‌ಜಿಓಗಳುಕಾಸು ಮಾಡಿಕೊಂಡರು. ರಾಜಕಾರಣಿಗಳು ಮಣ್ಣಿನ ಮಕ್ಕಳಾದರು.ಸಂವಾದ ಸಂಕಿರಣಗಳಿಗೆ ಒಂದಿಷ್ಟು ಜನ ಮೆರುಗು ತುಂಬಿದರು. ಆದರೆಅವೆಲ್ಲಕ್ಕಿಂತಲೂ ಮೊದಲು ಕಳಕೊಳ್ಳುವ ರೈತನ ದೃಷ್ಟಿಯಿಂದಲೇ ಬಿಟಿಯನ್ನು ನೋಡಬೇಕಲ್ಲವೇ? ಓಡಿಸಬೇಕಲ್ಲವೇ?ಇಷ್ಟಕ್ಕೂ ಬಿಟಿ ಬದನೆಯ ಪ್ರತಿಪಾದಕ ಗುಂಪುಗಳು ಇದರ ಸಾಧಕ-ಬಾಧಕ ಕುರಿತಂತೆ ಇನ್ನೂ ಕರಾರುವಾಕ್ಕಾದ ಅಧ್ಯಯನ ನಡೆಸಿಯೇ ಇಲ್ಲ ಎಂಬ ಅಂಶವೀಗ ಬಯಲಿಗೆ ಬಂದಿದೆ. ಅಂದರೆ ರೈತರ ಭವಿಷ್ಯದ ಮೇಲೆ ದೂರಗಾಮಿ ಪರಿಣಾಮ ಬೀರಬಲ್ಲ ಹುನ್ನಾರವೊಂದಕ್ಕೆ ಇಷ್ಟು ಸುಲಭವಾಗಿ ಅವಕಾಶ
ಸಿಗುವುದೆಂದರೆ ಅದು ಚೋದ್ಯವಲ್ಲವೇ?
No comments:
Post a Comment