Monday, April 11, 2011

ಚರ್ಚಿನ ನಾಯಿ ಬೊಗಳದಿದ್ದಕ್ಕೂಬಜರಂಗದಳ ಹೊಣೆಯಾಗಬೇಕೇ?

ಹುಶಃ ಟಿಪ್ಪು ಸತ್ತ ಅನಂತರ ಮೈಸೂರು ಆ ಪರಿಯಲ್ಲಿ ಅಬ್ಬರಿಸಿದ್ದು ಕಳೆದಏಪ್ರಿಲ್‌ನಲ್ಲೇ. ಅಷ್ಟರವರೆಗೆ ಎಲ್ಲೋ ಬಾಂಗ್ಲಾದ ಹಳ್ಳಿಗಳಲ್ಲಿ ನಡೆಯುತ್ತವೆಎಂದುಕೊಳ್ಳುತ್ತಿದ್ದ ಘಟನೆಗಳು ಮೈಸೂರಿನ ಕ್ಯಾತಮಾರನಹಳ್ಳಿಯಲ್ಲೇನಡೆದು ಮೊಘಲ್-ಬಹಮನಿ ಮಾನಸಿಕತೆ ಇನ್ನೂ ಸತ್ತಿಲ್ಲ ಎಂಬುದನ್ನು ಸಿದ್ದಮಾಡಿತೋರಿಸಿದ್ದವು. ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎನಿಸಿಕೊಂಡಮೈಸೂರಿನಲ್ಲೇ ಸಂಸ್ಕೃತಿಯ ಮೇಲೆ ಘೋರ ಆಕ್ರಮಣಗಳು ನಡೆದವು.ಅಂದರೆ ಕ್ಯಾತಮಾರನಹಳ್ಳಿಯಲ್ಲೇ ೬ ಹಿಂದೂ ದೇಗುಲಗಳು ಧ್ವಂಸಗೊಂಡವುಮತ್ತು ಅಪವಿತ್ರಗೊಂಡವು. ಕ್ಯಾತಮಾರನಹಳ್ಳಿಯ ಟೆಂಟ್ ಸರ್ಕಲಿನಗಣಪತಿ ದೇವಸ್ಥಾನ ಮತ್ತು ಅದರ ಪಕ್ಕದ ವೀರಭದ್ರ ದೇವಸ್ಥಾನಗಳು ಹಾನಿಗೊಳಗಾದವು. ನವಗ್ರಹ ದೇವಸ್ಥಾನ ಸಂಪೂರ್ಣ ಧ್ವಂಸಗೊಂಡಿತು.ಕಲ್ಯಾಣಗಿರಿಯ ಗಣಪನ ರುಂಡವನ್ನು ಸೊಂಡಿಲಿನ ಸಮೇತ ಬೇರ್ಪಡಿಸಿಎಸೆಯಲಾಯಿತು. ಟೀಚರ್ ಕಾಲೋನಿಯ ಮಾದೇಶ್ವರ ದೇವಸ್ಥಾನದ ಮೇಲೂದಾಳಿಯಾಗಿ ಗರ್ಭಗುಡಿಗೆ ಮತಾಂಧ ಶಕ್ತಿಗಳ ಪ್ರವೇಶವಾಯಿತು. ಎಲ್ಲಾ ದಾಳಿಗಳು ಅಪ್ಪಟ ಮೊಘಲ್ ಶೈಲಿಯಲ್ಲಿ ನಡೆದವು. ಕ್ಯಾತಮಾರನ ಹಳ್ಳಿಯ ಘಟನೆ ಮತ್ತೊಮ್ಮೆ ಘಜನಿ-ಘೋರಿ-ಟಿಪ್ಪುವನ್ನು ನೆನೆಯುವಂತೆಮಾಡಿತ್ತು.ಆದರೆ ಇಷ್ಟೆಲ್ಲಾ ಆದರೂ ಅದು ಹೊರಪ್ರಪಂಚಕ್ಕೆ ಗೊತ್ತಾಗಲಿಲ್ಲ.ಏಕೆಂದರೆ ಮಾಧ್ಯಮಗಳಿಗೆ ಅದು ಯೋಗ. ಸುದ್ದಿ ಆಗಿರಲಿಲ್ಲ. ಕಾರಣಸಿದಟಛಿರಾಮಯ್ಯನವರು ಪತ್ರಿಕಾಗೋಷ್ಟಿ ನಡೆಸಿರಲಿಲ್ಲ. ಎಚ್. ವಿಶ್ವನಾಥರುಘಟನೆಯನ್ನು ಖಂಡಿಸಿರಲಿಲ್ಲ. ಯಾವ ಸಚಿವರೂ ಕೈಕಾಲು ಕತ್ತರಿಸಿ ಎಂದುಕರೆಕೊಟ್ಟಿರಲಿಲ್ಲ. ಯಾವ ರಾಜಕಾರಣಿಯೂ ಸ್ಥಳಕ್ಕೆ ಧಾವಿಸಿ ಮುರಿದದೇಗುಲದೆದುರಲ್ಲಿ ಹೇಳಿಕೆ ನೀಡಿರಲಿಲ್ಲ. ಕ್ಯಾತಮಾರನಹಳ್ಳಿಯ ಧ್ವಂಸಗೊಂಡದೇಗುಲಗಳು ಮಧ್ಯಯುಗದಲ್ಲಿ ಮುರಿದ ಎಷ್ಟೋ ಸಹಸ್ರ ದೇಗುಲಗಳಸಾಲಿಗೆ, ಇಂದೂ ಪಾಕ್-ಬಾಂಗ್ಲಾಗಳಲ್ಲಿ ಮುರಿಯುತ್ತಿರುವ ದೇಗುಲಗಳಸಾಲಿನಲ್ಲಿ ಸೇರಿಹೋದವು. ಇದೆಲ್ಲಾ ಇಂದು ‘ಚರ್ಚ್ ಮೇಲಿನ ದಾಳಿ’ ಎಂದು ಪತ್ರಿಕೆಗಳುಉತ್ಸಾಹದಿಂದ ಬರೆಯುತ್ತಿರುವ ಹೊತ್ತಿನಲ್ಲಿ ನೆನಪಾಗುತ್ತವೆ. ಅಂದು ೬ ದೇವಾಲಯಗಳ ಧ್ವಂಸದ ಬಗ್ಗೆ ಚಕಾರವೆತ್ತದ ಮಾಧ್ಯಮಗಳು ಇಂದುಚರ್ಚಿನ ಗಾಜು ಒಡೆದಿರುವುದನ್ನು ರಾಷ್ಟ್ರೀಯ ಸುದ್ದಿಯಾಗಿ ಬಿತ್ತರಿಸುತ್ತಿರುವಕೃತ್ಯ ಬಿಡಿಸಲಾರದ ಒಗಟಾಗಿ ಕಂಡುಬರುತ್ತದೆ. ಇದೇ ಹೊತ್ತಲ್ಲಿ ಅಂದುದೇಗುಲ ಧ್ವಂಸವಾದಾಗ ಮೌನವಾಗಿದ್ದ ಸಿದ್ರಾಮಯ್ಯನವರಿಗೆ ಚರ್ಚ್‌ವಿಷಯ ಆವೇಶ ಬರಿಸಿರುವುದನ್ನು ನೋಡಿದಾಗ ಮಾಧ್ಯಮಗಳ ವೈಖರಿಗೂಒಂದು ‘ಅರ್ಥವಿದೆ’ ಎಂದೆನಿಸದಿರದು. ಅಲ್ಪಸಂಖ್ಯಾತ ರಕ್ಷಣೆ ಎಂಬ ಹುಯಿಲಿಗೆ, ಕೋಮುವಾದಿ ಎಂಬ ಪದಪ್ರಯೋಗಕ್ಕೆ, ಸಂಘ ಪರಿವಾರಗಳನಿಷೇಧದ ಆಗ್ರಹಕ್ಕೆ ಚರ್ಚ್ ಒಂದರ ಕಿಟಕಿಯ ಗಾಜೂ ಕೂಡ ಸಾಕಾಗಬಲ್ಲದುಎಂಬುದು ಮತ್ತೊಮ್ಮೆ ಸಿದಟಛಿಪಟ್ಟಿತು ಮತ್ತು ಮಾಧ್ಯಮಗಳಿಗೆ ಬೇಕಿರುವುದೇಕಾಂಗ್ರೆಸಿಗೆ ಬೇಕಿದೆ ಎಂಬುದಕ್ಕೂ ಪ್ರಸಕ್ತ ಘಟನೆಗಳು ತೋರಿಸಿಕೊಟ್ಟವು. ಅಂದು೨೦೦೦ನೇ ಎಪ್ರಿಲ್‌ನಲ್ಲಿ ದೀನ್‌ದಾರ್ ಅಂಜುಮಾನ್ ಎಂಬ ಮುಸಲ್ಮಾನ್‌ಸಂಘಟನೆ ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕದ ಹಲವುಚರ್ಚ್‌ಗಳಲ್ಲಿ ಸೋಟಗಳನ್ನು ನಡೆಸಿದಾಗಲೂ ಮಾಧ್ಯಮಗಳು ಸಂಘ ಪರಿವಾರದತ್ತ ಬೊಟ್ಟು ಮಾಡಿ ಅನಂತರ ಮುಜುಗರ ಅನುಭವಿಸಿದ್ದವು.ಆದರೂ ಕೂಡ ಆಗಾಗ ನಡೆಯುವ ಚರ್ಚ್‌ನ ಆಂತರಿಕ ಗಲಭೆಗಳಿಗೂ ಸಂಘಪರಿವಾರವನ್ನು ಆರೋಪಿಸುವ ಬುದಿಟಛಿಯನ್ನು ಇನ್ನೂ ಬಿಟ್ಟಿಲ್ಲ.ಅಷ್ಟಕ್ಕೂ ಇಂದಿನ ಚರ್ಚ್ ಮೇಲಿನ ದಾಳಿ ಎಂಬ ಸಂಗತಿಯೇ ಸಂಶಯಗಳ,ಅಸತ್ಯಗಳ ಸರಮಾಲೆ. ಮಂಡ್ಯ ಜಿಲ್ಲೆಯ ಮಳವಳ್ಳಿ ಮತ್ತು ಮೈಸೂರಿನಿಂದ ಕೇವಲ ೮ ಕಿ.ಮೀ. ದೂರದ ಹಿನಕಲ್ಲಿನ ಚರ್ಚಿನಲ್ಲಿ ನಡೆದ ಘಟನೆಗಳು ಕಳ್ಳತನಕ್ಕೆ ನಡೆದ ಪ್ರಯತ್ನ ಎಂಬುದು ಮೇಲುನೋಟಕ್ಕೇ ಗೋಚರವಾಗುತ್ತವೆ. ಪೊಲೀಸರುಕೂಡ ಕಳ್ಳತನದ ಕೇಸನ್ನೇ ದಾಖಲಿಸಿಕೊಂಡಿದ್ದಾರೆ. ಆದರೆ ಮಾಧ್ಯಮಗಳಿಗೇಕೆ ಅದು ದಾಳಿಯಾಗಿಯೇ ಕಾಣುತ್ತದೆ? ಘಟನೆಗಳ ಪೂರ್ವಾಪರಗಳನ್ನುಯೋಚಿಸದೆಯೇ ಕಮ್ಯುನಿಸ್ಟರು, ಕಾಂಗ್ರೆಸಿಗರು, ಜೆ.ಡಿ.ಎಸ್ಸು, ವೇದಿಕೆಗೆಹಾತೊರೆಯುವ ಸಂಘಟನೆಗಳು ಏಕೆ ರಾತೋರಾತ್ರಿ ಪ್ರತಿಭಟನೆಯಸಿದಟಛಿತೆ ನಡೆಸಿಬಿಡುತ್ತವೆ? ಬೆಳಿಗ್ಗೆ ಬೆಳಿಗ್ಗೆಯೇ ಏಕೆ ಪತ್ರಿಕಾಗೋಷ್ಠಿಗಳುನಡೆದುಬಿಡುತ್ತವೆ? ಮಾಧ್ಯಮಗಳಿಗೆ ಘಟನೆಯ ವಿವರಕ್ಕಿಂತಲೂಸಿದ್ರಾಮಯ್ಯನವರ ಹೇಳಿಕೆಯೇ ಏಕೆ ಮುಖ್ಯವಾಗಿಬಿಡುತ್ತದೆ? ಹೀಗೆ ಚರ್ಚ್‌ನಲ್ಲಿ ನಡೆವ ಘಟನೆಗಳನ್ನು ಅವಲೋಕಿಸುವಾಗ ಉದ್ಭವಿಸುವ ಪ್ರಶ್ನೆಗಳುಎಲ್ಲೋ ಒಂದು ಕಡೆ ರಾಜಕೀಯದಾಟದ ವಾಸನೆಯನ್ನು ಬೀರುತ್ತಿರುವುದುಗೋಚರವಾಗದಿರದು. ಮೈಸೂರಿನ ಹಿನಕಲ್ಲಿನ ಹೋಲಿ ಫ್ಯಾಮಿಲಿ ಚರ್ಚ್‌ನ ಘಟನೆ ಕೂಡತಮಾಷೆಯಾಗಿದೆ. ಏಕೆಂದರೆ ಆ ಚರ್ಚಿನ ಆವರಣದಲ್ಲೊಂದು ಕಾಣಿಕೆ ಹುಂಡಿ. ಆ ಹುಂಡಿಯ ಮೇಲೆಯೇ ಪ್ಲಾಸ್ಟರ್ ಆಫ್ ಪ್ಯಾರೀಸಿನ ಮೇರಿಪ್ರತಿಮೆ. ಅದಕ್ಕೆ ಗಾಜಿನ ಆವರಣ. ಮೊನ್ನೆಯ ಘಟನೆಯಲ್ಲಿ ಹುಂಡಿಯೊಟ್ಟಿಗೆಪ್ರತಿಮೆಯೂ ಒಡೆದಿದೆ. ಅಲ್ಲದೆ ಆ ಚರ್ಚಿನಲ್ಲಿ ರಾತ್ರೆ ಕಾವಲುಗಾರ ಮತ್ತುದೈತ್ಯಗಾತ್ರದ ಲ್ಯಾಬ್ರಡಾರ್ ನಾಯಿಯೊಂದು ಪಹರೆಗಿದೆ. ಆ ನಾಯಿ ಎಷ್ಟುಚುರುಕೆಂದರೆ ಬೆಳಿಗ್ಗೆ ಪಾದ್ರಿ ಕೂಡ ಎಚ್ಚರಿಕೆಯಿಂದ ಬರಬೇಕು. ಆದರೆವಿಚಿತ್ರ ಎಂದರೆ ಆ ದಿನ ಹುಂಡಿ ಒಡೆದು ಗಾಜು-ಪ್ರತಿಮೆ ಮುರಿದಾಗ ಕೂಡನಾಯಿ ಬೊಗಳಲಿಲ್ಲ. ಕಾವಲುಗಾರನಿಗೆ ಎಚ್ಚರವಾಗಲಿಲ್ಲ. ಅಕ್ಕಪಕ್ಕದವರಿಗೂಗೊತ್ತಾಗಲಿಲ್ಲ. ಈಗ ಹೇಳಿ ನಾಯಿ ಬೊಗಳದಿದ್ದದ್ದಕ್ಕೆ ಬಜರಂಗದಳಹೊಣೆಗಾರರಾಗಬೇಕೇ? ಚರ್ಚ್‌ನ ರಕ್ಷಣೆಯ ಹೊಣೆಯನ್ನೇನೂ ಸಂಘಪರಿವಾರ ಹೊತ್ತುಕೊಂಡಿಲ್ಲವಲ್ಲಾ. ಆದರೂ ರಾಜಕಾರಣಿಗಳ ನಿರ್ಲಜ್ಜಹೇಳಿಕೆ ಇನ್ನೂ ನಿಂತಿಲ್ಲ. ಒಂದು ವೇಳೆ ಹಿನಕಲ್ಲಿನ ಹೋಲಿ ಫ್ಯಾಮಿಲಿ ಚರ್ಚಿನ ಮೇಲೆ ಬಜರಂಗದಳ ದಾಳಿ ಮಾಡಲೇಬೇಕೆಂದಿದ್ದರೆ ಮೊನ್ನೆಯವರೆಗೂ ಕಾದುರಾತ್ರೋರಾತ್ರಿ ದಾಳಿ ಮಾಡಬೇಕಾದ ಅವಶ್ಯಕತೆಯೂ ಇರಲಿಲ್ಲವೆನ್ನುವುದುಬೇರೆ ಪ್ರಶ್ನೆ. ಏಕೆಂದರೆ ಆ ಚರ್ಚಿನಲ್ಲಿ ಮತಾಂತರ ಚಟುವಟಿಕೆ ನಡೆಯುತ್ತಿರುವಬಗ್ಗೆ ಆಸುಪಾಸಿನ ಜನರಿಗೆ ಯಾವುದೇ ಸಂದೇಹಗಳಿಲ್ಲ.ಸುಮಾರು ಒಂದೂವರೆ ಎರಡು ದಶಕಗಳ ಹಿಂದೆ ಇದೇ ಹೋಲಿ ಫ್ಯಾಮಿಲಿ ಚರ್ಚ್ ಹಿನಕಲ್ಲಿನಲ್ಲಿ ಕಟ್ಟಲ್ಪಟ್ಟಾಗ ಇಗರ್ಜಿ ಸುತ್ತಲೂ ಹತ್ತು ಮನೆಗಳೂ ಕೂಡಇರಲಿಲ್ಲ. ಅಲ್ಲದೆ ಇಡೀ ಹಿನಕಲ್ಲಿನಲ್ಲೇ ಒಂದೇ ಒಂದು ಕ್ರೈಸ್ತ ಕುಟುಂಬ ಇರಲಿಲ್ಲ. ಅಂಥ ಸ್ಥಳದಲ್ಲಿ ಚರ್ಚ್‌ನ ಅವಶ್ಯಕತೆ ಏನಿತ್ತು? ಆದರೆ ಇಂದು ಹಿನಕಲ್ಲಿನಂಥಾಸಣ್ಣ ಊರಲ್ಲಿ ಸುಮಾರು ೨೦೦ ಕ್ರೈಸ್ತ ಕುಟುಂಬಗಳು, ೪ ಚರ್ಚ್‌ಗಳಿವೆ. ಕ್ಷಿಪ್ರವೇಗದಲ್ಲಿ ಹೋಲಿ ಫ್ಯಾಮಿಲಿ ಚರ್ಚ್ ಹುಲುಸಾದ ಬೆಳೆಯನ್ನು ತೆಗೆಯಿತು. ಒಂದೊಮ್ಮೆ ಇದೇ ಚರ್ಚಿನಲ್ಲಿ ಮತಾಂತರ ಚಟುವಟಿಕೆ ತೀವ್ರವಾಗಿನಡೆಯುತ್ತಿದ್ದಾಗ ಸ್ಥಳೀಯರೇ ಚರ್ಚ್‌ನ ಮುಂದೆ ಪ್ರತಿಭಟನೆಯನ್ನುನಡೆಸಿದ್ದರು. ಪ್ರತಿಭಟನಾ ನಿರತ ಜನರ ಮೇಲೆ ಗೂಂಡಾಗಳನ್ನು ಬಿಟ್ಟು ಒದೆಸಲಾಗಿತ್ತು. ಮತ್ತು ೨೪ ಜನ ಶಾಂತ ಪ್ರತಿಭಟನಾ ನಿರತರ ಮೇಲೆಕೇಸು ಜಡಿಯಲಾಗಿತ್ತು. ಆದರೆ ಅವಾವುವೂ ಅಂದು ಮಾಧ್ಯಮಗಳಲ್ಲಿಸುದ್ದಿಯಾಗಲಿಲ್ಲ. ಏಕೆಂದರೆ ಚರ್ಚ್‌ನ ಗಾಜಿಗೆ ಹಾನಿಯಾಗಿರಲಿಲ್ಲ. ಆದರೆಇಂದು ಅದೇ ಹೋಲಿ ಫ್ಯಾಮಿಲಿ ಚರ್ಚ್‌ಗೆ ಕಳ್ಳರು ನುಗ್ಗಿದರೂ ಸಂಘ ಪರಿವಾರಗಳನ್ನು ವಿನಕಾರಣ ಎಳೆದು ತರಲಾಗುತ್ತದೆ. ಹಾಗಾದರೆ ಮತಾಂತರ- ಮತಾಂಧತೆ-ರಾಜಕಾರಣ-ಗೂಂಡಾಗಿರಿಗಳು ಪರಸ್ಪರ ಕೊಂಡಿಗಳೇ ? ಮತಾಂತರವೆಂದರೆ ಹಾಗೆಯೇ. ಅದು ಬಹುಮುಖಿ ಗುಣವುಳ್ಳದ್ದು. ಅದು ರಾಷ್ಟ್ರಾಂತರವಾಗಬಹುದು. ನಿಷ್ಟೆಯ ಪಲ್ಲಟವಾಗಬಹುದು. ಸೋಗುಹಾಕಬಹುದು. ಸೇವೆ ಎಂದು ಮರುಳು ಮಾಡಬಲ್ಲದು. ಸಮಾಜಕ್ಕೆ oಟಡಿ mಟಜಿoಜಿಟ್ಞ ಆಗಬಹುದು. ರಕ್ತ ಹರಿಸಬಹುದು. ಮೈಸೂರಿನಮಟ್ಟಿಗೆ ಹೇಳುವುದಾದರೂ ಕ್ರೈಸ್ತ ಮತಾಂತರ ತನ್ನ ಎಲ್ಲಾ ಮುಖಗಳನ್ನುಮೈಸೂರಿನಲ್ಲಿ ತೋರಿಸಿದೆ. ಭೈರಪ್ಪನವರ ‘ಧರ್ಮಶ್ರೀ’ ಕಾದಂಬರಿಯಂತೆಮೋಹಜಾಲವನ್ನು ಬೀಸಿದೆ. ಸೇವೆಯ ನೆಪದಲ್ಲಿ ಹಿಂದೂ ದೇವರನ್ನು ತೆಗಳಿದೆ. ಮಾ?ಯಾ ನಡೆಸಿದೆ. ಹಣದ ಹೊಳೆ ಹರಿಸಿದೆ. ಇತ್ತೀಚೆಗಿನ ಕೆಲವರ್ಷಗಳಿಂದ ಮೈಸೂರಿನ ಬಹುತೇಕ ಎಲ್ಲಾ ಚರ್ಚ್‌ಗಳಲ್ಲಿ ಮತಾಂತರ ಚಟವಟಿಕೆಗಳು ತೀವ್ರಗೊಳ್ಳುತ್ತಿವೆ. ಜನರ ‘ಒಡನಾಡಿ’ ಎಂದುಕೊಳ್ಳುವ ಎನ್ ಜಿಓಗಳ ಮೂಲಕ, ಮಸಾಜ್ ಸೆಂಟರ್‌ಗಳ ಮೂಲಕ, ವಿಚಾರ ಸಂಕಿರಣಗಳಮೂಲಕ, ಕೂಲಿಕಾರ್ಮಿಕರ ಮೂಲಕ, ವನವಾಸಿ ಜನರ ಮೂಲಕ ಕ್ರೈಸ್ತನಮಾರಾಟ ನಿರಂತರ ನಡೆಯುತ್ತಿದೆ. ನಗರದ ಶ್ರೀರಾಮಪುರ, ಹೆಚ್.ಡಿ.ಕೋಟೆ ತಾಲೂಕಿನ ಹೌಸಿಂಗ್ ಬೋರ್ಡ್, ಹ್ಯಾಂಡ್‌ಪೋಸ್ಟ್ ಪಕ್ಕದ ಎರಹಳ್ಳಿ,ಮೇಟಿಕುಪ್ಪೆ, ಹೊಸಹಳ್ಳಿ ಪ್ರದೇಶಗಳಲ್ಲಿ ಎಗ್ಗಿಲ್ಲದ ಮತಪ್ರಚಾರ, ಹಿಂದೂದೇವದೇವತೆಯರ ಅವಹೇಳನ, ‘ಸತ್ಯದರ್ಶಿನಿ’ಯಿಂದ ಸಾಹಿತ್ಯದ ಮೂಲಕನಡೆಯುತ್ತಿದೆ. ಎನ್‌ಜಿಓಗಳ ಹೆಸರಲ್ಲಿ ನಡೆಯುವ ಉಚಿತ ಆರೋಗ್ಯ ಶಿಬಿರಗಳು, ವೃದಾಟಛಿಶ್ರಮಗಳು ಪ್ರಚ್ಛನ್ನವಾಗಿ ನಡೆಯುವ ಮತಾಂತರಕೇಂದ್ರಗಳು, ಏಡ್ಸ್ ಜಾಗ್ರತಿ, ಮಾನವ ಕಳ್ಳಸಾಗಣೆಗಳಂಥಾ ವಿಷಯಗಳೂಮೈಸೂರಿನ ಮತಾಂತರ ಕಾರ್ಯಕ್ಕೆ ಅಸ್ತ್ರಗಳು ಎಂದಮೇಲೆ ಅವುಗಳ ವ್ಯವಸ್ಥಿತಕಾರ್ಯವೈಖರಿ ಹೇಗಿರಬಹುದು ಎಂಬುದರ ಅಂದಾಜು ಸಿಗಬಹುದು.ಅಲ್ಲಲ್ಲಿ ಕೆಲವೊಮ್ಮೆ ಸ್ಥಳೀಯರ ವಿರೋಧವಿದ್ದಾಗೂ ಈ ಕಾರ್ಯಗಳುಸುಸೂತ್ರವಾಗಿ ನಡೆಯುತ್ತಲೇ ಇರುತ್ತವೆ. ರಾಜಕೀಯ ಪಿತೂರಿ ಮತ್ತು ವಿದೇಶಿ ಹಣದ ಚಲಾವಣೆ ಮೈಸೂರಿನಲ್ಲಿ ಅಬ್ಬರದಿಂದಲೇ ನಡೆಯುತ್ತದೆ. ಆದರೂ ಮಾಧ್ಯಮಗಳಿಗೆ ಅವು ಜ್ವಲಂತ ಸಮಸ್ಯೆಗಳಲ್ಲ. ಒಂದೆಡೆ ಅಷ್ಟೇ ತೀವ್ರವಾಗಿಹರಡುತ್ತಿರುವ ಮುಸ್ಲಿಂ ಮತಾಂಧತೆ ಇನ್ನೊಂದೆಡೆ ನಿಧಾನ ಹರಡುತ್ತಿರುವಕ್ರೈಸ್ತ ವಿಷಗಳ ನಡುವೆ ಚಾಮುಂಡೇಶ್ವರಿ ಬೆಟ್ಟದ ಮೇಲೆ ಮೌನವಾಗಿರುವಂತೆ ಭಾಸವಾಗುತ್ತದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮೈಸೂರು ಟಿಪ್ಪುವಿನಕಾಲಕ್ಕೆ ಮರಳಲು ಹೆಚ್ಚು ದಿನ ಬೇಕಾಗಲಾರದು.ಇದೀಗ ಎರಡು ವರ್ಷಗಳ ಹಿಂದಿನ ಚರ್ಚ್ ದಾಳಿಯ ವಿಚಾರಣಾಆಯೋಗ ನ್ಯಾ. ಸೋಮಶೇಖರ ಆಯೋಗದ ವರದಿಯ ಹೊತ್ತಲ್ಲಿಚರ್ಚ್‌ಗಳ ಕಳ್ಳತನವೂ ಮಹತ್ವ ಪಡೆದುಕೊಂಡು ಬಿಟ್ಟಿದೆ. ಸೋಮಶೇಖರಆಯೋಗ ಮತಾಂತರ ನಡೆಯುತ್ತಿರುವುದು ನಿಜವೆಂದು ಹೇಳಿದರೂ ಬಜರಂಗದಳದಂತಹ ಸಂಘಟನೆಗಳ ನಿಷೇಧದ ಧ್ವನಿಯನ್ನು ಹೊರಡಿಸಿದೆ. ಪ್ರಾರ್ಥನಾ ಮಂದಿರಗಳ ಧ್ವಂಸ ನೋವಿನ ಸಂಗತಿಯಾಗಿದ್ದರೂ ಮತಾಂತರಕೂಡ ಶ್ರದೆಟಛಿಯನ್ನು ಮುರಿಯುವ ಕೆಲಸವಲ್ಲವೇ? ಸಮಾಜಕ್ಕೆ ಗಾಯವಲ್ಲವೇ?ಗಾಯ ನೋವಲ್ಲವೇ? ಮತಾಂತರ ನಡೆಯುತ್ತಿತ್ತು ಎಂದು ಒಪ್ಪಿಕೊಳ್ಳುವ ಆಯೋಗ ಹಿಂದೂ ಸಂಘಟನೆಗಳ ನಿಷೇಧವನ್ನೇ ಏಕೆ ಸೂಚಿಸುತ್ತದೆ?ಮತಾಂತರ ತಪ್ಪೆಂದಾದರೆ ಅದನ್ನು ತಡೆಯುವುದೂ ಸರಿಯಲ್ಲವೇ? ತಡೆಯುವ ಸಂಘಟನೆಗಳ ಮೇಲೆ ಏಕೀ ಆಕ್ರೋಶ? ಅಷ್ಟಕ್ಕೂ ಹಿಂದಿನ ಚರ್ಚ್‌ದಾಳಿಗಳನ್ನು ನಡೆಸಿದವರು. ಆಕ್ರೋಶಿತ ಹಿಂದುಗಳೇ. ಅವರಲ್ಲಿ ಕಾಂಗ್ರೆಸಿಗೆ ವೋಟು ಹಾಕುವವರೂ ಇದ್ದರು ಎಂಬುದು ಗಮನಿಸಬೇಕಾದ ಅಂಶ.ಮತಾಂತರ ಮೇರೆ ಮೀರಿದಾಗ ಉಂಟಾಗುವ ಸ್ಪಂದನ ದಾಳಿಗಳ ರೂಪದಲ್ಲಿ ಅಂದು ಪ್ರಕಟವಾಗಿತ್ತು ಅಷ್ಟೆ. ಅದಕ್ಕೆ ಬಜರಂಗದಳ, ಸಂಘ ಪರಿವಾರವನ್ನೇ ಟಾರ್ಗೆಟ್ ಮಾಡುವುದು ರಾಜಕೀಯ ಹುನ್ನಾರವಲ್ಲದೆ ಮತ್ತೇನು? ಅಷ್ಟಕ್ಕೂ ಆಯೋಗ ರಾಜಕೀಯ ನೆಲೆಯಿಂದ ದೂರವಿರುವುದೇ ಆದರೆಮತ ಪ್ರಚಾರವನ್ನು ಬೀದಿಗೆ ಬರದಂತೆ ತಡೆಯಬೇಕು. ಮತಾಂತರವನ್ನುತಡೆಯಲಾಗದಿದ್ದರೆ ಬಜರಂಗದಳವನ್ನು ತೆಗಳುವುದನ್ನಾದರೂ ನಿಲ್ಲಿಸಬೇಕು.ಇನ್ನು ಸೋಮಶೇಖರ್ ಆಯೋಗದ ವರದಿಗಳ ಆಧಾರದಲ್ಲಿ ಸಂಘ ಪರಿವಾರವನ್ನು ದೂಷಿಸಲು ವಿರೋಧ ಪಕ್ಷಗಳಿಗೆ ನೈತಿಕ ಹಕ್ಕು ಕೂಡಇಲ್ಲ. ೧೯೯೩ರಲ್ಲಿ ಭಟ್ಕಳದಲ್ಲಿ ಶೇ. ೮೫ರಷ್ಟಿದ್ದ ಮುಸಲ್ಮಾನರು ಶೇ. ೧೫ರಷ್ಟಿದ್ದಹಿಂದೂಗಳನ್ನು ಒಕ್ಕಲೆಬ್ಬಿಸಿ ಭಟ್ಕಳದಲ್ಲಿ ಹಿಡಿತ ಸಾಸಲು ಯತ್ನಿಸಿನಡೆಸಿದ ನರಮೇಧ ನಡೆದದ್ದು ಇದೇ ಕಾಂಗ್ರೆಸಿನ ಮೊಯ್ಲಿ ಅಕಾರಾವ ಯಲ್ಲಿ. ೧೮ ಮಂದಿ ಹಿಂದೂಗಳ ಹತ್ಯಾಕಾಂಡ ನಡೆದದ್ದು ಜಿಹಾದಿ ಪ್ರಚೋದನೆಯಿಂದಲೇ. ಆಗ ರಚನೆಯಾದ ಕೆದಂಬಾಡಿ ಜಗನ್ನಾಥ ಶೆಟ್ಟಿಆಯೋಗದ ಪ್ರಶ್ನೆಯೇನಾಯಿತು. ೧೯೯೬ರಲ್ಲಿ ಶಾಸಕ ಚಿತ್ತರಂಜನ್ ಕೊಲೆಪ್ರಕರಣದಲ್ಲಿ ರಚನೆಯಾದ ರಾಜಶೇಖರಮೂರ್ತಿ ಆಯೋಗದ್ದೂ ಸದ್ದಿಲ್ಲವಲ್ಲಏಕೆ? ಇದೇ ಮಣ್ಣಿನ ಮಗ ದೇವೇಗೌಡರೇ ಅಂದು ಮುಖ್ಯಮಂತ್ರಿಗಳಾಗಿದ್ದರಲ್ಲಾ? ಒಂದು ವೇಳೆ ಇಂದಿನ ಸಿದ್ರಾಮಯ್ಯ, ಡಿಕೆ ಶಿವಕುಮಾರ, ವಿಶ್ವನಾಥ,ಖರ್ಗೆಗಳಂಥವರಿಗೆ ಆಯೋಗಗಳ ಬಗ್ಗೆ ಮಾತಾಡಬೇಕೆಂದರೂ ತಮ್ಮದೇಅಕಾರಾವಯ ಆಯೋಗಗಳ ಬಗ್ಗೆ ಏಕೆ ಚಕಾರವೆತ್ತುತ್ತಿಲ್ಲ? ಇಂದುಹಿಂದೂ ಸಂಘಟನೆಗಳ ನಿಷೇಧದ ಮಾತಾಡುತ್ತಿರುವ ರಾಜಕಾರಣಿಗಳು ಬೇರೆಮತಾಂಧ ಶಕ್ತಿಗಳ ನಿಷೇಧದ ಬಗ್ಗೆ ಮಾತಾಡಲಾಗುತ್ತಿಲ್ಲವೇಕೆ? ಭಾರತದ ಏಕತೆಗೆ, ಸುಭಿಕ್ಷ ಸಮಾಜದ ಬಗ್ಗೆ ಮಾತಾಡಬಲ್ಲ ಯಾವನೇ ಆದರೂ ಭಟ್ಕಳಗಲಭೆಗಳ ಬಗ್ಗೆ ಅದೇ ತೀರ್ಪು ಕೊಡಬೇಕು. ಅಂಥಲ್ಲಿ ಚರ್ಚಿನ ನಾಯಿಬೊಗಳದ್ದಕ್ಕೂ, ಕಳ್ಳರನ್ನು ಹಿಡಿಯಲಾರದ್ದಕ್ಕೂ ಬಜರಂಗದಳವನ್ನು ದೂಷಿಸಿದರೆಹೇಗೆ? ಅವಶ್ಯವಾಗಿ ಸೋಮಶೇಖರ್ ವಿಚಾರಣಾ ಆಯೋಗದಲ್ಲಿದ್ದಂತೆಯೇ ಎಲ್ಲವೂ ನಡೆಯಲಿ. ಜೊತೆಗೆ ರಾಜಶೇಖರ ಆಯೋಗ ಮತ್ತು ಜಗನ್ನಾಥ ಶೆಟ್ಟಿಆಯೋಗಗಳೂ ಮಂಡನೆಯಾಗಿ ಅದೂ ಜಾರಿಯಾಗಲಿ. ?

No comments: