ಕಾಲದ ಭರದಲ್ಲಿ ಕೆಲವು ಸಂಗತಿಗಳು ಮಾಯವಾಗುತ್ತ್ತಿವೆ.ಅದು ಅರಿವಿಗೂ ಬರುತ್ತಿವೆ.ಎಂದೋ ಕಂಡ ಪ್ರಾಣಿ-ಪಕ್ಷಿ,ಪುಸ್ತಕದಲ್ಲಿ ಕಂಡ ಜೀವವೈವಿಧ್ಯಗಳು,ಗಿಡಮೂಲಿಕೆಗಳು,ಬಾಲ್ಯದಲ್ಲಿ ಕಂಡ ದಾರಿಯಲ್ಲಿ ಬಿದ್ದಿರುತ್ತಿದ್ದ ವಿಚಿತ್ರ ಹುಳ,ಎಲ್ಲೋ ಹುಟ್ಟಿ,ಚಿಗುರಿ,ಅರಳಿ ತನ್ನ ಪಾಡಿಗೆ ತಾನು ಬಾಡುತ್ತಿದ್ದ ಹೂವುಗಳು ಒಮ್ಮೆಯಾದರೂ ನೆನಪಾಗದಿರದು.ಎಲ್ಲಿ ಹೋದವು ಎಂದು ಕಾಡದಿರದು.ಪ್ರಶ್ನೆಗಳು ಸಿಗದೆ ತೊಳಲಾಡಿರಲೂಬಹುದು.ಏಕೆಂದರೆ ಕಾಣದ ಹಾದಿಗೆ ನೂರೆಂಟು ವ್ಯಾಖ್ಯಾನಗಳು .ಅದಕ್ಕೆ ಸಂಭವನೀಯತೆಯ ಪಟ್ಟಿಗಳು ಹಲವಾರು.
ಹೀಗೆ ಇಲ್ಲದರ ಪಟ್ಟಿ ಮಾಡುತ್ತಾ ಹೋದಾಗ ಪಟ್ಟಿಯೊಳಗೆ ಸೇರಿಕೊಂಡ ಒಂದು ಸಂಗತಿ ಭಯಾನಕ ಎನಿಸಿಬಿಡುತ್ತದೆ.ಏಕೆಂದರೆ ಇಲ್ಲದರ,ಮಾಯವಾಗುತ್ತಿರುವುದರ ಸಂಗತಿಗಳು ಇಂದು ಒಂದು ಪ್ರಾಣಿ,ಪಕ್ಷಿ,ಗಿಡ,ಮರಕ್ಕೆ ಮಾತ್ರ ಸೀಮಿತವಾಗಿಲ್ಲ.ಸಾಕ್ಷಾತ್ ಮಾನವನೂ ಆ ಪಟ್ಟಿಯಲ್ಲಿದ್ದಾನೆ ಎನ್ನುವುದು ಆಘಾತಕಾರಿ ಸಂಗತಿ.ಮಾನವನೂ ಸರದಿಯ ಪ್ರಕಾರ ಕಾಣದ ಲೋಕಕ್ಕೆ ಪ್ರಯಾಣ ಬೆಳೆಸುತ್ತಿದ್ದಾನೆ ಎಂಬುದಕ್ಕೆ ಉದಾಹರಣೆಗಳಿವೆ.ಅದು ಮಾನವ ಕೃತ ಅಪರಾಧವೋ ಅಥವಾ ವಿಯ ಲೀಲೆಯೋ ಎಂಬುದಕ್ಕೆ ಉತ್ತರಗಳಿಲ್ಲ.ಆದರೆ ಕೆಲವೊಂದು ಜನಾಂಗ ಈಗಾಗಲೇ ಬೆರಳೆಣಿಕೆಯಷ್ಟಾಗಿದ್ದು.ಇಂದೋ ನಾಳೆಯೋ ಗುಬ್ಬಿಗಳ ಗುಂಪಿಗೆ ಸೇರುವ ಪಾಳಿಯಲ್ಲಿವೆ.ಅದಕ್ಕೆ ಮಾನವಾಧ್ಯಯನಶಾಸ್ತ್ರ ದಲ್ಲಿ ಪರಿಹಾರವಿಲ್ಲ.ಇದೆಲ್ಲಾ ಎಲ್ಲೊ ಆ?ಕಾದ ಕಾಡುಗಳಲ್ಲಿ,ಅಜ್ಞಾತ ದ್ವೀಪಗಳಲ್ಲಿ ನಡೆಯುವ ಕಥೆಯಲ್ಲ.ನಮ್ಮದೇ ರಾಜ್ಯದಲ್ಲಿ,ಇದೇ ಕರ್ನಾಟಕದಲ್ಲಿ ಅದಕ್ಕೆ ಸಾಕ್ಷಿಗಳಿವೆ.
ಅವರು ಎರವರು. ಕರ್ನಾಟಕದ ಕೊಡಗಿನ ದಕ್ಷಿಣ ಭಾಗ ಮತ್ತು ಕೇರಳ-ಕರ್ನಾಟಕ ಗಡಿಭಾಗದ ವಯನಾಡು ಜಿಲ್ಲೆಗಳಲ್ಲಿ ನೆಲೆಸಿರುವ ಒಂದು ಬುಡಕಟ್ಟು ಪಂಗಡದವರು ಈ ಎರವರು.ಮೂಲತಃ ಎರವರು ಕೇರಳ ಮೂಲದವರು ಎನ್ನುವ ಪ್ರತೀತಿಯಿದೆ.ಕಾಲಚಾತ ಎಂಬ ಮೂಲ ಪುರುಷನ ಸಂತತಿಯ ಎರವರು ವಯನಾಡಿನಿಂದ ಕರ್ನಾಟಕಕ್ಕೆ ಬಂದು ಪಣಿಯರೆಂದೂ, ಕೇರಳದಲ್ಲೇ ಉಳಿದುಕೊಂಡವರು ಪಂಜಿರಿಯರೆಂದೂ ಕರೆಯಲ್ಪಡುತ್ತಾರೆ.ಕಪ್ಪು ಮೈಬಣ್ಣ,ಅಷ್ಟೇನೂ ಬಲಾಡ್ಯರಂತೆ ಕಾಣದ ಮೈಕಟ್ಟು,ಮೊಣಕಾಲವರೆಗೆ ಕಟ್ಟುವ ಪಂಚೆ, ಕೆದರಿದ ಕೂದಲು, ನೋಡಲು ಕಾಡಿನ ಕುರುಬರಂತೆ ಕಂಡರೂ ಸಂಸ್ಕೃತಿ-ಭಾಷೆ-ಪದ್ದತಿಗಳಲ್ಲಿ ವೈವಿಧ್ಯತೆ ಇರುವವರು ಈ ಎರವರು.ಕನ್ನಡ-ಕೊಡವ-ತೆಲುಗು ಮಿಶ್ರಿತ ಎರವ ಭಾಷೆಯ ಸೊಗಡು ಅವರ ಮೂಲವನ್ನು ಇನ್ನಷ್ಟು ಆಳಕ್ಕೆ ತಳ್ಳುತ್ತದೆ. ಒಂದು ಸಮಯದಲ್ಲಿ ದ.ಕೊಡಗಿನಲ್ಲಿ ಶ್ರೀಮಂತ ಸಂಸ್ಕೃತಿಯೊಂದಿಗೆ ವಿಶಾಲವಾಗಿ ವ್ಯಾಪಿಸಿದ್ದ ಎರವರಿಂದು ಕಾಣಲು ಅಪರೂಪದ ಜನಾಂಗ.ಒಂದೊಂದು ಊರಿನಲ್ಲಿ ೫೦೦-೬೦೦ ಗುಂಪುಗಳು.ಒಂದೊಂದು ಗುಂಪಿಗೂ ಒಬ್ಬೊಬ್ಬ ‘ಮೂಪ’(ನಾಯಕ).ಕಿವಿಗೆ ದೊಡ್ಡದಾದ ಬೆಳ್ಳಿಯ ವಾಲೆ,ತಲೆಗೆ ಕೆಂಪು ವಸ್ತ್ರ,ಕೈಯಲ್ಲಿ ಬೆಳ್ಳಿ ಕಟ್ಟಿದ ಬೆತ್ತದ ದಂಡ ಹಿಡಿದು ಬರುವ ಮೂಪ ಇಡೀ ಸಮುದಾಯವನ್ನು ಪ್ರತಿನಿಸುತ್ತಿದ್ದ.ನ್ಯಾಯ ತೀರ್ಮಾನದಲ್ಲಿ ಈತನ ಮಾತೇ ಅಂತಿಮವಾಗಿತ್ತು.ಒಂದು ವೇಳೆ ನ್ಯಾಯಾನ್ಯಾಯದಲ್ಲಿ ಗೊಂದಲಗಳಿದ್ದರೆ,ತೀರ್ಪು ಸರಿಯಾಗಿ ಬಾರದಿದ್ದರೆ ಹಲವಾರು‘ಮೂಪ’ರು ಸೇರಿ ವಾರಗಟ್ಟಲೆ ನ್ಯಾಯತೀರ್ಮಾನ ಮಾಡುತ್ತಿದ್ದ ಪ್ರಸಂಗಗಳೂ ಕೊಡಗಿನ ಇತಿಹಾಸದಲ್ಲಿ ಸಿಗುತ್ತವೆ.ಅಂಥಾ ಎರವರಲ್ಲಿಂದು ಮೂಪರಷ್ಟೇ ಅಲ್ಲ, ಜನರ ಸಂಖ್ಯೆಯೇ ವಿರಳಾತಿವಿರಳ.
ಪ್ರಕೃತಿ ಆರಾಧನೆ,ಅದಮ್ಯ ಭಕ್ತಿ,ನಾಟಿ ಮದ್ದು, ವ್ಯವಸಾಯವೇ ಜೀವಾಳವಾಗಿರುವ ಎರವರು ಭೂಮಾಲಿಕರಲ್ಲ.ಇತರ ಬುಡ ಕಟ್ಟುಗಳಂತೆ ಎರವರು ಪೂರ್ಣಪ್ರಮಾಣದಲ್ಲಿ ವನವಾಸಿಗಳು ಅಲ್ಲ.ನಾಡಿನಲ್ಲೇ ಇವರ ಬದುಕು.ನಾಡಿನ ಜನರ ಭೂಮಿಯ ಉಳುಮೆಯಲ್ಲೇ ತೃಪ್ತಿ ಕಂಡ ನಿಸ್ವಾರ್ಥ ಜನಾಂಗ ಎರವರು.ಎಂಥಾ ಮರವನ್ನಾದರೂ ಸರಾಗವಾಗಿ ಏರಬಲ್ಲ ಕ್ಷಮತೆ,ಜೇನು ತೆಗೆಯುವುದರಲ್ಲಿ ಕುರುಬರಷ್ಟೇ ಕುಶಲತೆ,ಸೋದಾಹರಣ ಭೋಜನ,ಗೆಡ್ಡೆ ಗೆಣಸು,ಮೀನಿನ ಬೇಟೆಗಳಲ್ಲಿ ಕಾಲಕಳೆಯುತ್ತಾ ಯಜಮಾನನ ಮನೆಯನ್ನೇ ತನ್ನದೆಂಬಂತೆ ಪ್ರೀತಿಸುತ್ತಿದ್ದ,ಎರವರು ತಮಗಾಗಿ ಏನನ್ನೂ ಮಾಡಿಕೊಳ್ಳದವರು.ಮತ್ತು ಅದರ ಕಲ್ಪನೆಯನ್ನೂ ಮಾಡದವರು. ಒಂದುವೇಳೆ ದಕ್ಷಿಣ ಕೊಡಗಿನಲ್ಲಿ ಎರವರೆಂಬವರು ಇಲ್ಲದೇ ಇರುತ್ತಿದ್ದರೆ ಕೊಡಗಿನ ಕಾ? ತೋಟಗಳು ತಲೆ ಎತ್ತುತ್ತಿರಲಿಲ್ಲ. ಕೊಡವರು ಮನೆ ಬಿಟ್ಟು ಯೋಧರಾಗುತ್ತಲೂ ಇರಲಿಲ್ಲ. ಅಷ್ಟರಮಟ್ಟಿಗೆ ಒಂದು ಜನಾಂಗದ ಬೆಳವಣಿಗೆಗೆ ಶೂದ್ರರೆಂದು ಕರೆಯಲ್ಪಡುವ ಎರವರ ಕೊಡುಗೆ ಮಹತ್ತ್ವದ್ದು.ವ್ಯವಸಾಯದ ಕಾಲದಲ್ಲಿ ಅವಿರತ ದುಡಿಮೆ,ಉಳಿದ ಸಮಯದಲ್ಲಿ ತಿರುಗಾಟ-ಬೇಟೆ ಇವರ ಜೀವನ ವಿಧಾನ.ಬಾಯಾರಿದೆಡೆಯಲ್ಲಿ ನೀರಿಗಿಂತ ಸೂಕ್ತ ನೆಲವನ್ನು ಹುಡುಕಿ ಅಗೆದು ನೀರು ತೆಗೆಯುವ ವಿದ್ಯೆಯೆ ಇಂದು ಅಜ್ಞಾತ.ಪರಿಸರಕ್ಕೂ ಎರವರಿಗೂ ಅಂಥಾ ಅವಿನಾಭಾವ ಸಂಬಂಧ.ಮದುವೆ,ಮರಣದ ಸಂಸ್ಕಾರಗಳಲ್ಲಿ ಎರವರು ಆಚರಿಸುವ ಪದ್ದತಿಗಳು ಅವರ ವೈಭವದ ಇತಿಹಾಸಕ್ಕೆ ಕೈಗನ್ನಡಿ.ಅರ್ಥಪ್ರಧಾನವಲ್ಲದ ಜನಾಂಗವೊಂದು ಸಂಸ್ಕೃತಿಯನ್ನು ಇಷ್ಟೊಂದು ಶ್ರೀಮಂತವಾಗಿರಿಸಿಕೊಳ್ಳಬಲ್ಲುದೇ ಎಂಬ ಸೋಜಿಗಕ್ಕೂ ಎರವರು ಸಾಕ್ಷಿ.ತಮ್ಮ ದುಡಿ ಮತ್ತು ಚೀನಿ (ಬಿದಿರು ಅಥವಾ ವಾಟೆಯಿಂದ ಮಾಡಿದ ನಾಗಸ್ವರ)ಯ ತಾಳಮೇಳದ ವಾದ್ಯಕ್ಕೆ ತಲೆದೂಗದವರಿಲ್ಲ.ಆದರೆ ಇಂದು ಕೊಡಗಿನಲ್ಲಿ ಚೀನಿ ಮತ್ತು ದುಡಿಯ ನಾದವಿಲ್ಲ. ಏಕೆಂದರೆ ಎರವರಿಲ್ಲ. ಕುಳಿಯ,ಬೊಳುಕ,ಬೊಳ್ಳಿ,ಕರುಕುಗಳೆಂಬ ಮುಗ್ದಮುಖದ ವ್ಯಕ್ತಿತ್ವಗಳಿಂದು ಕಾಣುತ್ತಿಲ್ಲ. ಎಲ್ಲಿ ಹೋದರು ಇವರೆಲ್ಲಾ?
ಈ ಪ್ರಶ್ನೆಯ ಹಿಂದೋಡಿದರೆ ಸಿಗುವ ಉತ್ತರಗಳು ಅತಿ ಭಯಾನಕತೆಯೊಂದಿಗೆ ಎದುರಾಗುತ್ತವೆ.ಸಮಸ್ತ ಮಾನವಕುಲಕ್ಕೆ ಎಚ್ಚರಿಕೆಯ ಗಂಟೆಯಂತೆ ಭಾಸವಾಗುತ್ತದೆ.ಮೋಹ-ಸ್ವಾರ್ಥವಿಲ್ಲದೆಯೂ ನಾಶ ಸಂಭವಿಸುತ್ತದೆ ಎಂಬುದನ್ನು ಎರವರ ಸ್ಥಿತಿ ಜಗಕ್ಕೆ ಹೇಳುವಂತಿದೆ.ಹಣದ ಕಲ್ಪನೆಯೇ ಇಲ್ಲದಿದ್ದರೂ ಸಂಸ್ಕೃತಿಗಳನ್ನು ರಕ್ಷಿಸಿಕೊಳ್ಳಲಾಗುವುದಿಲ್ಲ ಎಂಬ ಪಾಠವೂ ಬೋಧನೆಯಾಗುತ್ತಿದೆಯೋ ಎನಿಸುತ್ತದೆ.ಏಕೆಂದರೆ ಎರವರು ಕುಡಿತಕ್ಕೆ ,ಮೂಡನಂಬಿಕೆಗೆ, ಅತಿಯಾದ ಮುಗ್ದತೆಗೆ ಬಲಿಯಾಗುತ್ತಿದ್ದಾರೆ. ತಮ್ಮನ್ನು ತಾವು ಕಳೆದುಕೊಳ್ಳುತ್ತಿದ್ದಾರೆ. ಏನು ಮಾಯೆಯೋ ಗೊತ್ತಿಲ್ಲ.ಶ್ರಮಿಕ ವರ್ಗವೊಂದು ಶತಮಾನಗಳಿಂದ ದುಡಿದೂ ದುಡಿದೂ ಇಂದು ಗುಲಾಮರಾಗುವತ್ತ ಮುನ್ನಡೆದಿದ್ದಾರೋ ಎನಿಸುತ್ತದೆ.
ಸಾಕ್ಷರತೆಯನ್ನು ಎರವರು ಕಡೆಗಣಿಸಿದ್ದಾರೆ.ಸರಕಾರದಿಂದ ಎರವರು ಕಡೆಗಣಿಸಲ್ಪಟ್ಟಿದ್ದಾರೆ.ಕುಡಿತವೇ ತಮ್ಮ ಸಂಸ್ಕೃತಿ ಎನ್ನುವ ಹಂತಕ್ಕೆ ಮುಟ್ಟಿದ ಎರವ ಪೀಳಿಗೆಯಿಂದು ಭ್ರೂಣದಲ್ಲೇ ಆಲ್ಕೋಹಾಲ್ ‘ಆರೈಕೆ’ಯಲ್ಲಿ ಬೆಳೆಯುತ್ತಿದೆ.ಶಿಶುಹತ್ಯೆ ಪ್ರಮಾಣ ಅಕವಾಗುತ್ತಿದೆ. ಹಣದಾಸೆಗೆ ಬಿದ್ದು ಸಂತಾನಹರಣ ಚಿಕಿತ್ಸೆ ಮಾಡಿಸಿಕೊಳ್ಳುತ್ತಿದ್ದಾರೆ.ಎರವ ಮಕ್ಕಳು ಶಾಲೆಗೆ ಹೋಗುತ್ತಿಲ್ಲ.
ಹೋದರೂ ಓದು ಪೂರ್ತಿಗೊಳಿಸುತ್ತಿಲ್ಲ.ಶ್ರೀಮಂತ ಪ್ಲಾಂಟರ್‌ಗಳ ತೋಟಗಳಲ್ಲಿಂದು ಎರವ ಮಕ್ಕಳು ಜೀತ ಅಥವಾ ಕೂಲಿಗೆ ಹೋಗುತ್ತಿದ್ದಾರೆ. ವೈದ್ಯಕೀಯ ಸೌಲಭ್ಯಗಳಿಂದಲೂ ಎರವರು ದೂರವಾಗುತ್ತಿದ್ದಾರೆ. ಎಂಥದ್ದೇ ಅನಾರೋಗ್ಯಕ್ಕೂ ಬೇರು, ಸೊಪ್ಪು, ಮಾಟ-ಮಂತ್ರಗಳನ್ನೇ ಅವಲಂಬಿಸುತ್ತಿದ್ದಾರೆ.ಪರಿಣಾಮಇಂದು ಎರವರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಒಂದು ಸಂಶೋಧನೆಯ ಪ್ರಕಾರ ಎರವರ ಸರಾಸರಿ ವಯಸ್ಸು ೪೫ ವರ್ಷಗಳು ಮಾತ್ರ. ಯವ್ವನದಲ್ಲೆ ಮುದುಕನಂತೆ ಕಾಣುವ ಎರವ ಯುವಕನಿಂದು ಸೋಮಾರಿಯಾಗಿದ್ದಾನೆ. ಅತ್ತ ಭೂಮಿಯಿಲ್ಲ, ಇತ್ತ ಕೆಲಸವೂ ಇಲ್ಲ. ದುಡಿಯುವ ಕಸುವೂ ಇಲ್ಲ. ಇನ್ನೇನಾದೀತು?
ಮತ್ತೂ ಭಯಾನಕ ಸಂಗತಿಯೇನೆಂದರೆ ಇಂದು ದಕ್ಷಿಣ ಕೊಡಗಿನಲ್ಲಿ ಅಳಿದುಳಿದ ಎರವರು ಪ್ರತಿ ಆದಿತ್ಯವಾರ ಪಕ್ಕದ ಪೇಟೆಯಲ್ಲಿ ಗುಂಪು ಸೇರುತ್ತಾರೆ. ಅಲ್ಲಿಗೆ ಎಲ್ಲಿಂದಲೋ ವಾಹನಗಳು ಬರುತ್ತವೆ. ಅವು ಮೈಸೂರು ಜಿಲ್ಲೆಯ ಹುಣಸೂರಿಗೆ ಸಾಗುತ್ತವೆ. ಆ ವಾಹನ ಹುಣಸೂರಿನ ಚರ್ಚ್ ಒಂದರ ಮುಂದೆ ನಿಲ್ಲುತ್ತದೆ. ಎರವರು ಶಿಲುಬೆಗೆ ಪ್ರಾರ್ಥಿಸುತ್ತಾರೆ. ಇತ್ತ ಪ್ರಕೃತಿ ಆರಾಧನೆಯನ್ನು ಬಿಟ್ಟಿದ್ದಾರೆ. ತಮ್ಮ ಕುಲದೇವಿ ‘ಕರಂಗಾಳಿ’ಯನ್ನು ಅವರು ಅವಾಚ್ಯವಾಗಿ ನಿಂದಿಸುತ್ತಿದ್ದಾರೆ. ಎರವ ಯುವಕರು ವಿನಾ ಕಾರಣ ವ್ಯವಸ್ಥೆಯ ವಿರುದಟಛಿ ಆಕ್ರೋಶಿತರಾಗುತ್ತಿದ್ದಾರೆ.ಇದೆಲ್ಲಾ ಇತ್ತಿಚಿನ ದಿನಗಳ ಬೆಳವಣಿಗೆ.ಅಂದರೆ ಎಲ್ಲಾ ಚರ್ಚ್‌ಗೆ ಹೋಗಲಾರಂಭಿಸಿದಂದಿನಿಂದ ಉಂಟಾದ ಬೆಳವಣಿಗೆಗಳು.ಎರವರು ಮೂಲವನ್ನು ಮರೆಯಲಾರಂಭಿಸಿದ್ದು ಶಿಲುಬೆಗೆ ಪ್ರಾರ್ಥನೆ ಸಲ್ಲಿಸಲು ಆರಂಭಿಸಿದಂದಿನಿಂದ, ಹಬ್ಬಹರಿದಿನಗಳನ್ನು ಬಿಟ್ಟಿದ್ದು ,ಚೀನಿ-ದುಡಿಗಳ ಉಪಯೋಗ ಬಿಟ್ಟಿದ್ದು ಕೂಡ ಶಿಲುಬೆಗೆ ನಮಸ್ಕಾರ ಮಾಡಿದಂದಿನಿಂದ.ಆದರೆ ಚರ್ಚ್‌ಗೆ ಎರವರ ಕುಡಿತವನ್ನು ಬಿಡಿಸಲು ಇನ್ನೂ ಸಾಧ್ಯವಾಗಿಲ್ಲ. ಮಕ್ಕಳನ್ನು ಶಾಲೆಗೆ ಕಳುಹಿಸಲು ಸಾಧ್ಯವಾಗಿಲ್ಲ. ಮಿತಿಮೀರಿದ ಎರವರ ಆತ್ಮಹತ್ಯೆಯನ್ನು ನಿಲ್ಲಿಸಲು ಸಾಧ್ಯವಾಗಿಲ್ಲ.ಇಂದಿಗೂ ದ.ಕೊಡಗಿನ ಪೊಲೀಸ್ ಠಾಣೆಗಳಲ್ಲಿ ವರದಿಯಾಗುವ ಆತ್ಮಹತ್ಯೆ ಪ್ರಕರಣಗಳಲ್ಲಿ ತೊಂಬತ್ತು ಶೇಕಡಾ ಎರವರದ್ದು .ಅಂದರೆ ವಾರಕ್ಕೆರಡು ಆತ್ಮಹತ್ಯೆಗಳು ಎರವರಲ್ಲಿ ನಡೆಯುತ್ತವೆ.ಆದರೆ ಚರ್ಚ್ ಇವೆಲ್ಲದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಕೆಲ ಆಯ್ದ ಯುವಕರನ್ನು ತರಬೇತುಗೊಳಿಸುವುದರಲ್ಲಿ ಅದು ಲೀನ. ಹೇಗೂ ಅದಕ್ಕೆ ಉತ್ತರದಲ್ಲಿ, ಪೂರ್ವದಲ್ಲಿ ,ಈಶಾನ್ಯದಲ್ಲಿ ಎರವರಂಥ ಅದೆಷ್ಟೋ ಬುಡಕಟ್ಟುಗಳನ್ನು ಮತಾಂತರಿಸಿ ಮಾವೋವಾದಿಯಾಗಿ ಪರಿವರ್ತಿಸಿದ ಅನುಭವವಿದೆ.
ಮುಂದೊಂದು ದಿನ ಎರವರೂ ಮಾವೋವಾದಿ ಆಗಬಹುದು.ನಿರಾಕರಿಸಲು ಕಾರಣಗಳು ಸಿಗಲಾರದು.
1 comment:
ಇವರ ಭಾಷೆ ಮಲೆಯಾಳಂನ ಉಪ ಭಾಷೆಯಾಗಿದೆ ಅದನ್ನು ಸರಿ ಮಾಡಿ. ಇವರಲ್ಲಿ ನಾಲ್ಕು ಪಂಗಡಗಳಿವೆ ಅದರಲ್ಲಿ ಪಂಜರಿಗಳು ನಿಜವಾದ ಎರವರು ಉಳಿದವರು ಬೇರೆ ಪಂಗಡ
Post a Comment